28.2.17

ರಾಷ್ಟ್ರೀಯ ವಿಜ್ಞಾನ ದಿನ

🇮🇳🌈🌞💥🔴💥🌞🌈🇮🇳
ರಾಷ್ಟ್ರೀಯ ವಿಜ್ಞಾನ ದಿನ: ಫೆಬ್ರವರಿ ೨೮

       ೧೯೨೮ ಫೆಬ್ರವರಿ ೨೮, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ ವಿ ರಾಮನ್ ಅವರು ‘ರಾಮನ್ ಪರಿಣಾಮ’ ಎಂದೇ ಪ್ರಸಿದ್ಧವಾದ ತಮ್ಮ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ತಿಳಿಸಿದ ದಿನ.

        ಕೋಲ್ಕತಾದ ಇಂಡಿಯನ್ ಅಸೋಸಿಯೇಷನ್ ಫಾರ್ ಕಲ್ಟಿವೇಷನ್ ಆಫ್ ಸೈನ್ಸ್‌ನಲ್ಲಿ ರಾಮನ್ ಅವರು ತಮ್ಮ ಸಹೋದ್ಯೋಗಿಗಳೊಡನೆ ನಡೆಸಿದ ಸಂಶೋಧನೆಗಳ ಪರಿಣಾಮವೇ ಈ ಅಪೂರ್ವ ಸಂಶೋಧನೆ.

         ಇದೇ ಸಂಶೋಧನೆಗಾಗಿ ಅವರಿಗೆ ೧೯೩೦ನೇ ಇಸವಿಯಲ್ಲಿ ನೋಬೆಲ್ ಪುರಸ್ಕಾರ ನೀಡಿ ಗೌರವಿಸಲಾಯಿತು. ಇದು ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ದೊರೆತ ಮೊತ್ತಮೊದಲ ನೋಬೆಲ್ ಪುರಸ್ಕಾರವೂ ಹೌದು.

         ಒಮ್ಮೆ ಹಡಗಿನಲ್ಲಿ ಪ್ರಯಾಣಿಸುವಾಗ ರಾಮನ್ ಅವರಿಗೆ ಸಮುದ್ರ ಏಕೆ ಯಾವಾಗಲೂ ನೀಲಿಯಾಗಿಯೇ ಕಾಣುತ್ತದೆ ಎಂಬ ಪ್ರಶ್ನೆ ಎದುರಾಯಿತಂತೆ. ಅದು ಆಕಾಶದ ಬಣ್ಣದ ಪ್ರತಿಫಲನವೋ ಅಥವಾ ಈ ನೀಲಿ ಬಣ್ಣದ ಹಿಂದೆ ಬೇರೇನಾದರೂ ಗುಟ್ಟು ಅಡಗಿದೆಯೋ ಎಂದು ಪತ್ತೆಮಾಡಲು ಹೊರಟ ರಾಮನ್ ಸೂರ್ಯನ ಬೆಳಕು ನೀರಿನಲ್ಲಿ ಹರಡಿಹೋಗುವುದೇ ಸಮುದ್ರದ ನೀರು ನೀಲಿಯಾಗಿ ಕಾಣಲು ಕಾರಣ ಎಂಬ ವಿಷಯವನ್ನು ಕಂಡುಹಿಡಿದರು. ಇದೇ ಅಂಶ ಮುಂದೆ ‘ರಾಮನ್ ಪರಿಣಾಮ’ದ ಸಂಶೋಧನೆಗೆ ಪ್ರೇರಣೆಯಾಯಿತು.

        ‘ರಾಮನ್ ಪರಿಣಾಮ’ ಸಂಶೋಧನೆಯ ವಿವರಗಳು ಪ್ರಕಟವಾದ ಆ ಚಾರಿತ್ರಿಕ ದಿನದ ನೆನಪಿನಲ್ಲಿ ಪ್ರತಿ ವರ್ಷ ಫೆಬ್ರವರಿ ೨೮ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ.

         ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶಗಳಲ್ಲೊಂದು.
ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ವಿಜ್ಞಾನ, ಜೈವಿಕ ತಂತ್ರಜ್ಞಾನ, ವೈದ್ಯವಿಜ್ಞಾನ – ಹೀಗೆ ಅನೇಕ ಕ್ಷೇತ್ರಗಳಲ್ಲಿ ಇಂದು ಭಾರತೀಯ ವೈಜ್ಞಾನಿಕರು ಅಪಾರ ಪ್ರಮಾಣದ ಸಾಧನೆ ಮಾಡಿದ್ದಾರೆ. ವಿಜ್ಞಾನದ ಬೆಳೆವಣಿಗೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದ ಸ್ವಾತಂತ್ರ್ಯಪೂರ್ವದ ದಿನಗಳಿಂದ ಪ್ರಾರಂಭಿಸಿ ಇಂದಿನವರೆಗೆ ನಮ್ಮ ದೇಶ ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿಯ ಪರಿಚಯವನ್ನು ಎಲ್ಲರಿಗೂ ಮಾಡಿಕೊಡುವುದು ಈ ಆಚರಣೆಯ ಇನ್ನೊಂದು ಆಶಯ.

          ಪ್ರತೀ ವರ್ಷ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಚಟುವಟಿಕೆಗಳನ್ನು ಒಂದು ನಿರ್ದಿಷ್ಟ ವಿಷಯದ ಸುತ್ತ ಆಯೋಜಿಸಲಾಗುತ್ತದೆ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ – ಹೀಗೆ ಈ ವಿಷಯಕ್ಕೆ ಸಂಬಂಧಪಟ್ಟ ಅನೇಕ ಚಟುವಟಿಕೆಗಳನ್ನು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಂದರ್ಭದಲ್ಲಿ ದೇಶದ ವಿವಿಧೆಡೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಎನ್‌ಸಿಎಸ್‌ಟಿಸಿಯ ನೇತೃತ್ವದಲ್ಲಿ ನಡೆಯುವ ಈ ದಿನದ ಆಚರಣೆಯ ಹೊಣೆಯನ್ನು ನಮ್ಮ ರಾಜ್ಯದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನಿರ್ವಹಿಸುತ್ತಿದೆ.

🙏📚 💥📚🙏

25.2.17

ವಿಶ್ವಕರ್ಮ ಜಯಂತಿ

'ವಿಶ್ವ'ದ ವಾಸ್ತುಶಿಲ್ಪಿ 'ವಿಶ್ವ'ಕಮ೯:~


ವಿಶ್ವಕರ್ಮ ಜಯಂತಿ.


"ಆಡು ಮುಟ್ಟದ ಸೊಪ್ಪಿಲ್ಲ,
ವಿಶ್ವಕರ್ಮರು ಆವರಿಸದ ಕ್ಷೇತ್ರವಿಲ್ಲ,
ಅವರ ಪಾತ್ರವಿಲ್ಲದ ಕ್ಷೇತ್ರಗಳಿಲ್ಲ, ಜಾತ್ರೆಗಳಿಲ್ಲ."

ಸೃಷ್ಟಿಕತ೯ ಬ್ರಹ್ಮನಾದರೆ,
ಅವನ ವಂಶಸ್ಥನಾದ ವಿಶ್ವಕರ್ಮನು
ಇಡೀ ಸೃಷ್ಟಿಯ
ಕರಡು ಪ್ರತಿಯ ಪಿತಾಮಹ,
ಸೃಷ್ಟಿಯ ನೀಲನಕ್ಷೆ ತಯಾರಕ.
(Draftsman of the whole Universe).

ಇಂದು ನಾವೆಲ್ಲರೂ ಒಂದು ಅತ್ಯದ್ಭುತವಾದ ಸುಂದರ ಜಗತ್ತನ್ನು ನೋಡಲು ಸಾಧ್ಯವಾಗಿದೆ ಎಂದಾದರೆ ಅದು ವಿಶ್ವಕರ್ಮರ ಕಾಯ೯ತತ್ಪರತೆಯ ಫಲಿತಾಂಶದ ಪರಿಣಾಮವೇ ಹೊರತು ಬೇರೆ ಇನ್ನೇನಿಲ್ಲ.

ವಿಶ್ವಕಮ೯ ಎಂದರೆ ಸ್ವಗ೯ದ ಶಿಲ್ಪಿ. ಸಮುದ್ರಮಥನ ಕಾಲದಲ್ಲಿ ಹುಟ್ಟಿದ ಕಾಮಧೇನು, ಕಲ್ಪವೃಕ್ಷಗಳ ಹಾಗೆ 14 ಅತ್ಯಮೂಲ್ಯ ರತ್ನಗಳಲ್ಲಿ ವಿಶ್ವಕಮ೯ರೂ
ಒಬ್ಬರು.

"ವಿಶ್ವಕರ್ಮ ಎಂಬುವರು ವ್ಯಕ್ತಿಯಲ್ಲ ಅದೊಂದು ಅದ್ಭುತ, ಅದ್ವಿತೀಯ ದೈವ ಶಕ್ತಿ." ಎಂಬುದನ್ನು ಮರೆಯಬಾರದು

*ಋಗ್ವೇದದ ಪ್ರಕಾರ:

"ವಿಶ್ವಕರ್ಮರು ಇಡೀ ವಿಶ್ವದ ವಾಸ್ತುಶಿಲ್ಪಿ"
(Principal architecture of the universe,  Devine engineer of the world.)

*ಮಹಾಭಾರತದ ಪ್ರಕಾರ:

"ಸಕಲ ಕಲೆಗಳನ್ನು ಕರಗತ ಮಾಡಿಕೊಂಡ ಕಲಾದೇವತೆಯೇ ವಿಶ್ವಕಮ೯"
(The Lord of the arts,executor of a thousand handicrafts, the carpenter of the God's, the most eminent of artisans, the fashioner of all ornaments and a great & immortal god.)

ವಿಶ್ವಕಮ೯ರ ಕಾಯಕಯೋಗ:

*ದೇವಾನುದೇವತೆಗಳಿಗೆ ಸುಂದರ ಅರಮನೆಗಳನ್ನು ನಿಮಿ೯ಸಿಕೊಟ್ಟ ಕೀತಿ೯.

*ಪಂಚಮವೇದ ಎಂದೇ ಕರೆಯಲ್ಪಡುವ
'ಸ್ಥಪತ್ಯವೇದ'ವನ್ನು ನೀಡಿದ ಮಹಾ ಮೇಧಾವಿ.
ಸ್ಥಪತ್ಯವೇದವು ಯಂತ್ರಶಾಸ್ತ್ರ ಹಾಗೂ ಶಿಲ್ಪಶಾಸ್ತ್ರದ ವಿಜ್ಞಾನವಾಗಿದೆ.
(The science of mechanics and architecture)

*ದೇವಾನುದೇವತೆಗಳ ಹಾರುವ ರಥಗಳ ವಿನ್ಯಾಸಕಾರ.

*ದೇವಾನುದೇವತೆಗಳಿಗೆ ಹಲವು ಯುಗಗಳಲ್ಲಿ ಹಲವಾರು ಸುಂದರ ನಗರ & ಪಟ್ಟಣಗಳನ್ನು ನಿಮಿ೯ಸಿದ ಕೀತಿ೯ ಇವರಿಗಿದೆ.
ಸತ್ಯಯುಗದಲ್ಲಿ-ಸ್ವಗ೯ದ ನಿಮಾ೯ಣ
ತ್ರೇತಾಯುಗದಲ್ಲಿ-ಲಂಕಾ ಪಟ್ಟಣ
ದ್ವಾಪರಯುಗದಲ್ಲಿ-ಶ್ರೀಕೃಷ್ಣನ ರಾಜಧಾನಿಯಾದ ದ್ವಾರಕಾ ಪಟ್ಟಣ ನಿಮಾ೯ಣ ಮಾಡಿದರು.

ಕೌರವರಿಗೆ ಹಸ್ತಿನಾಪುರ & ಪಾಂಡವರಿಗೆ ಇಂದ್ರಪ್ರಸ್ಥ ಎಂಬ ಸುಂದರ ನಗರಗಳ ನಿಮಾ೯ಣದ ಕೀತಿ೯ಯು ಇವರಿಗೆ ಸಲ್ಲುತ್ತದೆ.

ದೃಷ್ಟಾಂತ:

ವಿಶ್ವಕಮ೯ರ ಕಾಯ೯ದ ನೈಪುಣ್ಯತೆ ಹಾಗೂ ಕೌಶಲದ ಚಾಕಚಕ್ಯತೆ ಹೇಗಿದೆ ಎಂಬುದನ್ನು ಈ ದೃಷ್ಟಾಂತದ ಮೂಲಕ ತಿಳಿಯಬಹುದು.

ರಾಮಾಯಣದ ಪ್ರಕಾರ ಹೇಳುವಂತೆ
ತ್ರೇತಾಯುಗದಲ್ಲಿ ಶಿವನು ಪಾವ೯ತಿಯನ್ನು ಮದುವೆಯಾದ ಸಂದಭ೯ದಲ್ಲಿ, ಶಿವನು ತನ್ನ ಮಡದಿಯಾದ ಪಾವ೯ತಿಗಾಗಿ ಬಂಗಾರದ ಅರಮನೆಯನ್ನು ಉಡುಗೊರೆಯಾಗಿ ನೀಡಬೇಕೆಂದು ನಿಧ೯ರಿಸಿ,
ಬಂಗಾರದ ಅರಮನೆಯನ್ನು ನಿಮಿ೯ಸಿಕೊಡಬೇಕೆಂದು ವಿಶ್ವಕರ್ಮರಲ್ಲಿ ವಿನಂತಿಸಿದಾಗ ವಿಶ್ವಕರ್ಮರು ಅತ್ಯಂತ  ವಿಧೇಯರಾಗಿ ಒಪ್ಪುತ್ತಾರೆ.

ಶಿವನು ಬಂಗಾರದ ಅರಮನೆಯ ನಿಮಾ೯ಣಕ್ಕೆ ಅಗತ್ಯವಾದ ಎಲ್ಲ ಸಾಮಗ್ರಿಗಳನ್ನು ನೀಡುತ್ತಾನೆ.

ಕೆಲವು ದಿನಗಳ ನಂತರ ವಿಶ್ವಕರ್ಮರು ಅತ್ಯಂತ ಸುಂದರ & ಭವ್ಯವಾದ ಸುವಣ೯ಸೌಧ (ಬಂಗಾರದ ಅರಮನೆ)ವನ್ನು ನಿಮಿ೯ಸುತ್ತಾರೆ.

ಈ ಭವ್ಯ ಅರಮನೆಯ ಗೃಹಪ್ರವೇಶಕ್ಕೆ
(House opening ceremony) ಶಿವನು ತನ್ನ ಗುರುಗಳಾದ
'ಪುಲಸ್ಯ ಮಹಷಿ೯'ಗಳನ್ನು ಆಹ್ವಾನಿಸುತ್ತಾನೆ
(ಪುಲಸ್ಯ ಮಹಷಿ೯ಗಳು ಕುಬೇರ & ರಾವಣರ ಅಜ್ಜ).

ಪುಲಸ್ಯ ಮಹಷಿ೯ಗಳು ಗೃಹಪ್ರವೇಶ ಕಾಯ೯(ಕ್ರಮ)ವನ್ನು ಪೂತಿ೯ಗೊಳಿಸಿದ ನಂತರ ಶಿವನು,
ತನ್ನ ಗುರುಗಳು ಗುರುಕಾಣಿಕೆಯಾಗಿ ಏನನ್ನಾದರೂ ಸ್ವೀಕರಿಸಬೇಕೆಂದು ಕೇಳಿಕೊಂಡಾಗ, ಗುರುಗಳಾದ ಪುಲಸ್ಯ ಮಹಷಿ೯ಗಳು ಆಗಲೇ ಆ ಅರಮನೆಯ ಸೌಂದರ್ಯಕ್ಕೆ, ಕಲಾಕೃತಿಗಳ ಸೂಕ್ಷ್ಮ ಕೆತ್ತನೆಗೆ ಮನಸೋತಿದ್ದರು. ಆ ಬಂಗಾರದ ಅರಮನೆಯು ಮಹಷಿ೯ಗಳ ಮೇಲೆ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ,
ಗುರುಗಳು ಯಾವ ಅರಮನೆಯ ಗೃಹಪ್ರವೇಶವನ್ನು ಮಾಡಿದ್ದರೋ ಅದೇ ಅರಮನೆಯನ್ನು ಗುರುಕಾಣಿಕೆಯಾಗಿ ಕೇಳುತ್ತಾರೆ!!.

ಆಗ ಶಿವನಿಗೆ ಆಶ್ಚರ್ಯದ ಜೊತೆಗೆ ವಿಶ್ವಕಮ೯ರ ಕಾಯ೯ಕೌಶಲ್ಯದ ಬಗ್ಗೆ ಹೆಮ್ಮೆ ಎನಿಸಿತು.

ಶಿವನು ತನ್ನ ಗುರುಗಳಿಗೆ ಅತ್ಯಂತ ವಿಧೇಯನಾಗಿ ಆ ಭವ್ಯ ಬಂಗಾರದ ಅರಮನೆಯನ್ನು ಗುರುಕಾಣಿಕೆಯಾಗಿ ನೀಡುತ್ತಾನೆ.

ಪುಲಸ್ಯ ಮಹಷಿ೯ಗಳು ಈ ಅರಮನೆಯನ್ನು ತನ್ನ ಪ್ರೀತಿಯ ಮೊಮ್ಮಗನಾದ ಕುಬೇರನಿಗೆ ಉಡುಗೊರೆಯಾಗಿ ನೀಡುತ್ತಾರೆ.

ಕಾಲಕ್ರಮೇಣ ರಾವಣನು ಕುಬೇರನನ್ನು ಸೋಲಿಸಿದಾಗ ಈ ಅರಮನೆಯು ರಾವಣನ ಕೈವಶವಾಗುತ್ತದೆ.
ಸುವಣ೯ಲಂಕೆಯು ಕಾಲಾನಂತರದಲ್ಲಿ ಶ್ರೀಲಂಕೆ ಎಂದಾಯಿತು.

ವಿಶ್ವಕರ್ಮರ 5 ಜನ ಮಕ್ಕಳು ಒಂದೊಂದು ವೃತ್ತಿಯನ್ನು ಆಯ್ದುಕೊಂಡು ಜೀವನ ನಡೆಸುತ್ತಿದ್ದರು. ಆ ಪಂಚಕಮ೯ರು ಯಾರೆಂದರೆ:

1.ಮನು - ಕಮ್ಮಾರ(Blacksmith)

2.ಮಾಯಾ - ಬಡಿಗ(Carpenter)

3.ತ್ವಸ್ತರ - ಕಂಚಗಾರ(Bellmetal worker)

4.ಶಿಲ್ಪಿ - ಶಿಲ್ಪಕಾರ(Stone Masons)

5.ವಿಶ್ವಜ್ಞ- ಅಕ್ಕಸಾಲಿಗ/ಪತ್ತಾರ(Goldsmith).

ಪಂಚಕಮ೯ರನ್ನು ಪಂಚ್ಯಾಳರು ಎಂದು, ಇವರನ್ನು ವಿಶ್ವಕರ್ಮದವರೆಂದು ಹಾಗೂ ವಿಶ್ವಬ್ರಾಹ್ಮಣರೆಂದೂ ಕರೆಯಲಾಯಿತು.

ಇಂದು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದ ಸ್ಥಳಗಳು ಸೇರಿದಂತೆ ಭಾರತದ ಅಜಂತಾ,ಎಲ್ಲೋರಾ,ಖಜುರಾಹೋ,ಲಂಕಾ, ದ್ವಾರಕಾ, ನಳಂದಾ, ದೆಹಲಿಯ ಕುತುಬ್ ಮಿನಾರ, ಕೋನಾಕ೯ನ ಸೂಯ೯ದೇವಾಲಯ,
ಕನಾ೯ಟಕದ ಐಹೊಳೆ, ಹಂಪಿ, ಬದಾಮಿ, ಪಟ್ಟದಕಲ್ಲುಗಳಲ್ಲಿರುವ ಪ್ರವಾಸಿ ತಾಣಗಳು ವಿಶ್ವಕರ್ಮರ ಬೃಹತ್ ಕೊಡುಗೆಗಳಾಗಿವೆ.

ಇಂದು ಪ್ರತಿ ಗ್ರಾಮದ ಪ್ರತಿಯೊಂದು ಕಾಯ೯ಕ್ಕೂ ವಿಶ್ವಕಮ೯ರ ಅಗತ್ಯವಿದೆ.
ಆದ್ದರಿಂದ ಜಾತಿ, ಧಮ೯, ಪಂಗಡಗಳಿಗೆ ಅವರನ್ನು ಸೀಮಿತಗೊಳಿಸದೇ
ಸವ೯ರೂ ಅವರನ್ನು ಗೌರವಿಸೋಣ

24.2.17

KANAKADASARU - KEERTHANEGALU -ಕನಕದಾಸರ ಕೀರ್ತನೆಗಳು

***ಕನಕದಾಸರ ಕೀರ್ತನೆಗಳು***



1. ನಮ್ಮಮ್ಮ ಶಾರದೆ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಿವನಾರಮ್ಮಾ
ಕಮ್ಮಗೋಲನ ವೈರಿಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೆ


ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ
ಕೋರೆದಾಡೆಯನಿವನಾರಮ್ಮ
ಮೂರು ಕಣ್ಣಿನ ಸುತ ಮುರಿದಿಟ್ಟ ಚಂದ್ರನ
ಧೀರ ತಾ ಗಣನಾಥನೆ


ಉಟ್ಟ ಪಟ್ಟೆಯ ಬಿಗಿದುಟ್ಟ ಚಲ್ಲಣದ
ದಿಟ್ಟ ತಾನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು
ಹೊಟ್ಟೆಯ ಗಣನಾಥನೆ

ರಾಶಿ ವಿದ್ಯೆಯ ಬಲ ರಮಣೀ ಹಂಬಲನೊಲ್ಲ
ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆಯಾದಿ
ಕೇಶವದಾಸ ಕಾಣೆ


ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ


2. ಹಣ್ಣು ಕೊಂಬುವ ಬನ್ನಿರಿ

ಹಣ್ಣು ಕೊಂಬುವ ಬನ್ನಿರಿ ಹರಿದಾಸರು
ಹಣ್ಣು ಕೊಂಬುವ ಬನ್ನಿರಿ
ಚೆನ್ನಬಾಲಕೃಷ್ಣನೆಂಬ
ಕೆನ್ನೆಗೊನೆ ಬಾಳೆಹಣ್ಣು

ಸುತ್ತೇಳು ಲೋಕದಿ ಸುರರು ಬಿತ್ತಿದ ಹಣ್ಣು
ಭಕ್ತರ ಬಾಯೊಳು ನೆನೆವ ಹಣ್ಣು
ಅರ್ತಿಯುಳ್ಳವರೆಲ್ಲ ಕೊಳ್ಳಿ ಬೇಕಾದರೆ
ನಿತ್ಯ ಮಾಧವನೆಂಬ ಅಚ್ಚ ಮಾವಿನಹಣ್ಣು

ಅಜನ ಪಡೆದ ಹಣ್ಣು ಗಜವ ಕಾಯ್ದ ಹಣ್ಣು
ನಿಜಮುನಿಗಳಿಗೆ ತೋರಿಸಿದ ಹಣ್ಣು
ತ್ರಿಜಗವಂದಿತ ಪಾಲ್ಗಡಲೊಡೆಯನ ಹಣ್ಣು
ಸುಜನಭಕ್ತರೆಲ್ಲ ಕೊಳ್ಳಬನ್ನಿರಿ ಹಣ್ಣು

ತುರುವ ಕಾಯ್ದ ಹಣ್ಣು ಉರಗನ ತುಳಿದಾ ಹಣ್ಣು
ಕರೆದರೆ ಕಂಬದೊಳು ಓ ಎಂಬ ಹಣ್ಣು
ಮರುಗುವ ಧ್ರುವನಿಗೆ ಪಟ್ಟಗಟ್ಟಿದ ಹಣ್ಣು
ಕರುಣಾಳು ಕಾಗಿನೆಲೆಯಾದಿ ಕೇಶವ ಹಣ್ಣು

ಹಣ್ಣು ಕೊಂಬುವ ಬನ್ನಿರಿ ಹರಿದಾಸರು

3. ಭಕ್ತಿಯಿಲ್ಲದೆ ನರಗೆ
ಬಾಯಿ ನಾರಿದ ಮೇಲೆ ಏಕಾಂತವೇ?
ತಾಯಿ ತೀರಿದ ಮೇಲೆ ತವರಾಸೆಯೇ?

ಕಣ್ಣು ಕೆಟ್ಟ ಮೇಲೆ ಕಡುರೂಪ ಚೆಲ್ವಿಕೆಯೆ
ಬಣ್ಣ ಗುಂದಿದ ಮೇಲೆ ಬಹುಮಾನವೆ
ಪುಣ್ಯತೀರದ ಮೇಲೆ ಪರಲೋಕಸಾಧನವೆ
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ
ಚಳಿಯುರಿಗೆ ಚಂದನದ ಲೇಪ ಹಿತವೆ
ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ
ಬೆಲೆಬಿದ್ದ ಸರಕಿನೊಳು ಲಾಭವುಂಟೇ

ಪಥ್ಯ ಸೇರದ ಮೇಲೆ ನಿತ್ಯ ಸುಖವೆನಬಹುದೆ
ಸತ್ವ ತಗ್ಗಿದ ಮೇಲೆ ಸಾಮರ್ಥ್ಯವೆ
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ
ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ

4. ಕುಲ ಕುಲ ಕುಲವೆಂದು
ಕುಲ ಕುಲ ಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?

ಹುಟ್ಟಿದಾ ಯೋನಿಗಳಿಲ್ಲ ಮೆಟ್ಟದಾ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲವೋ
ಗುಟ್ಟು ಕಾಣಿಸಿಬಂತು ಹಿರಿದೇನು? ಕಿರಿದೇನು?
ನೆಟ್ಟನೆ ಸರ್ವಜ್ಞನೆನೆ ಕಾಣೊ ಮನುಜ

ಜಲವೆ ಸಕಲ ಕುಲಕೆ ತಾಯಿಯಲ್ಲವೆ
ಆ ಜಲದ ಕುಲವನೇನಾದರು ಬಲ್ಲಿರಾ?
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲ ಈ ದೇಹ
ನೆಲೆಯನರಿತು ನೀ ಹರಿಯ ನೆನೆ ಮನುಜ

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವನು ಕೀರ್ತಿಸುವನೆ ಕುಲಜ

ಕುಲ ಕುಲ ಕುಲವೆಂದು ಹೊಡೆದಾಡದಿರಿ

5. ಒಲ್ಲೆನೆಂದರಾಗುವುದೆ
ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನು
ಎಲ್ಲವನುಂಡು ತೀರಿಸಬೇಕು ಮನವೆ

ತಂದೆ ತಾಯ ಬಸುರಿನಲಿ ಬಂದೆನಂದಿಗಿಂದಿಗೂ
ಒಂದಿಷ್ಟು ಸುಖವ ನಾ ಕಾಣೆ ಜೀವನವೆ
ಬಂದುದನೆಲ್ಲವನುಂಡು ತೀರಿಸಬೇಕು
ಭ್ರಮೆಯಿಂದ ಮನವೆನಿನಗೆ ಬಯಲಾಸೆಯೇಕೋ?

ಎಮ್ಮ ಅರ್ಥ ಎಮ್ಮ ಮನೆಯು ಎಮ್ಮ ಮಕ್ಕಳೆಂಬುವ
ಹಮ್ಮು ನಿನಗೆ ಏಕೋ ಹಗೆಯ ಜೀವನವೆ
ಬೊಮ್ಮ ಪಣೆಯಲಿ ಬರೆದ ಬರಹ ತಪ್ಪುವುದುಂಟೆ
ಸುಮ್ಮನೆ ಬಯಲಾಸೆ ವ್ಯರ್ಥಜೀವನವೆ

ಅಂತರಂಗದಲೊಂದು ಅರ್ಧ ದೇಹದಲೊಂದು
ಚಿಂತೆಯನುಗೊಳಲೇಕೊ ಪಂಚರಿವರಿರಲು
ಕಂತುಪಿತ ಕಾಗಿನೆಲೆಯಾದಿಕೇಶವ
ಲಕ್ಷ್ಮೀಕಾಂತ ತನ್ನಲ್ಲಿಗೆ ಕರೆಕಳುಹುವತನಕ

ಒಲ್ಲೆನೆಂದರಾಗುವುದೆ ಅಲ್ಲಿ ಪಡೆದು ಬಂದುದನು

6. ಆರು ಬಲ್ಲರು ಹರಿ-ಹರರ ಮಹಿಮೆಯನ್ನು
ಆರು ಬಲ್ಲರು ಹರಿ-ಹರರ ಮಹಿಮೆಯನ್ನು
ವಾರಿಜೋದ್ಭವ ಸುರೇಂದ್ರಾದಿಗಳವಲ್ಲ

ಪೌರತ್ರಯವ ಗೆಲುವ ಸಮಯದಲಿ ತಪಮಾಡಿ
ನಾರಾಯಣಾಸ್ತ್ರವನು ಪಡೆದನೀಶ
ಗೌರಿಮನೋಹರನ ಘನತರಾರ್ಚನೆಗೈದು
ಚಾರುತರ ಚಕ್ರವನು ಪಡೆದನಾ ಶೌರಿ

ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ
ಬಾಗಿಲ ಕಾಯ್ದನಚ್ಯುತನು ಅನುಗಾಲದಿ
ಬಲುಭುಜನ ಬಾಣಾಸುರನ ಗೃಹದ್ವಾರವನು
ಬಳಸಿ ಕಾಯ್ದನು ಹರನು ವರವ ತಾನಿತ್ತು

ಭೋಗಿಶಯನನು ಆಗಿ ಭೋಗಿಭೂಷಣನಾಗಿ
ವಾಗೀಶನಾಗಿ ಸ್ಥಿತಿಲಯಗಳಿಗೆ
ಆಗು ಕಾರಣಕರ್ತ ಕರ್ಮಾದಿ ರೂಪಕ್ಕೆ
ಕಾಗಿನೆಲೆಯಾದಿಕೇಶವನ ಮಹಿಮೆಯನು

ಆರು ಬಲ್ಲರು ಹರಿ-ಹರರ ಮಹಿಮೆಯನ್ನು

7. ಮರೆಯದಿರು ಮರೆಯದಿರು
ಮರೆಯದಿರು ಮರೆಯದಿರು ಮರುಳು ಮನುಜ
ನಾರಾಯಣನ ಸ್ಮರಣೆಯ ಮಾಡು ಮನುಜ

ರಂಗನಾಥನು ಇರಲಿಕ್ಕೆ ಜಂಗುಳಿ ದೈವಗಳೇಕೆ
ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆಯೇಕೆ
ಅಂಗನೆ ಸತಿ ಇರಲಿಕ್ಕೆ ಬಣಗು ಹೆಣ್ಣುಗಳೇಕೆ
ಮಂಗಳಾತ್ಮನಿರಲಿಕ್ಕೆ ಪರದೈವವೇಕೆ

ಹಾಲು ಹಳ್ಳವಿರಲಿಕ್ಕೆ  ವಾಳಿಯವ ತರಲೇಕೆ
ಮೇಲುನಾಮವಿರಲಿಕ್ಕೆ ಕಟುಕು ಇನ್ನೇಕೆ
ಬಾಲ ಹನುಮನಿರಲಿಕ್ಕೆ ಹುಲುಕಪಿಗಳೇಕೆ
ಒಳ್ಳೆ ತುಳಸಿಯಿರೆ ಕಗ್ಗೊರಲೆಯೇಕೆ

ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆ
ರನ್ನ ಮಾಣಿಕ್ಯವಿರಲಿಕ್ಕೆ ಕಾಜಿನ ಹರಳೇಕೆ
ಅನ್ನ ತುಪ್ಪವಿರಲಿಕ್ಕೆ ಮದ್ಯಪಾನಗಳೇಕೆ
ಚೆನ್ನಾದಿಕೇಶವನಿರೆ ಬಿನುಗು ದೈವಗಳೇಕೆ

ಮರೆಯದಿರು ಮರೆಯದಿರು ಮರುಳು ಮನುಜ

8. ಬಾಗಿಲನು ತೆರೆದು ಸೇವೆಯನು
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ
ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ

ಪರಮಪದದೊಳಗೆ ವಿಷಧರನ ತಲ್ಪದಲಿ
ನೀ ಸಿರಿಸಹಿತ ಕ್ಷೀರವಾರಿಧಿಯೊಳಿರಲು
ಕರಿರಾಜ ಕಷ್ಟದಲಿ ಆದಿಮೂಲಾ ಎಂದು
ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೇ

ಕಡುಕೋಪದಿಂ ಖಳನು ಖಡುಗವನು ಪಿಡಿದು
ನಿನ್ನೊಡೆಯನೆಲ್ಲಿಹನೆಂದು ನುಡೀಯೆ
ಧೃಢಭಕುತಿಯಲಿ ಶಿಶುವು ಬಿಡದೆ ನಿನ್ನನು ಭಜಿಸೆ
ಸಡಗರದಿ ಕಂಬದಿಂದೊಡೆದೆ ನರಹರಿಯೆ

ಯಮಸುತನ ರಾಣಿಗಕ್ಷಯವಸವನಿತ್ತೆ
ಸಮಯದಲಿ ಅಜಮಿಳನ ಪೊರೆದೆ
ಸಮಯಾಸಮಯವುಂಟೆ ಭಕ್ತವತ್ಸಲ ನಿನಗೆ
ಕಮಲಾಕ್ಷ ಕಾಗಿನೆಲೆಯಾದಿಕೇಶವನೆ

ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ

9. ಗೋವಿಂದ ಹರಿ ಗೋವಿಂದ
ಗೋವಿಂದ ಹರಿ ಗೋವಿಂದ
ಗೋವಿಂದ ಕೇಶವ ಕೃಷ್ಣ ಜನಾರ್ಧನ

ಮತ್ಸ್ಯಾವತಾರದೊಳಾಡಿದನೆ
ಮಂದರಾಚಲ ಬೆನ್ನೊಳು ತಾಳಿದನೆ
ಅಚ್ಚಸೂಕರನಾಗಿ ಬಾಳಿದನೆ
ಮದಹಚ್ಚೆ ಹಿರಣ್ಯನ ಸೀಳಿದನೆ

ಕುಂಭಿನಿ ದಾನವ ಬೇಡಿದನೆ
ಕ್ಷಾತ್ರರೆಂಬವರನು ಹತಮಾಡಿದನೆ
ಅಂಬುಧಿಗೆ ಶರ ಹೂಡಿದನೆ
ಕಮಲಾಂಬಕ ಗೊಲ್ಲರೊಳಾಡಿದನೆ

ವಸುದೇವನುದರದಿ ಪುಟ್ಟಿದನೆ
ಪಲ್ ಮಸೆವ ದನುಜರೊಡೆಗುಟ್ಟಿದನೆ
ಎಸೆವ ಕಾಳಿಂಗನ ಮೆಟ್ಟಿದನೆ
ಬಾಧಿಸುವರ ಯಮಪುರಕಟ್ಟಿದನೆ

ಪೂತನಿಯ ಮೈಯ ಸೋಕಿದನೆ
ಮಹಾಘಾತದ ಮೊಲೆಯುಂಡು ತೇಗಿದನೆ
ಘಾತಕಿಯನತ್ತ ನೂಕಿದನೆ
ಗೋಪವ್ರಾತಗೋಗಳನೆಲ್ಲ ಸಾಕಿದನೆ

ಸಾಧಿಸಿ ತ್ರಿಪುರರ ಗೆಲಿದವನೆ
ಮ್ಲೇಚ್ಚರ  ಛೇಧಿಸಿ ಹಯವೇರಿ ಮೆರೆದವನೆ
ಸಾಧಿಸಿ ಸಕಲವ ತಿಳಿದವನೆ
ಬಾಡದಾದಿಕೇಶವ ಭಕ್ತಿಗೊಲಿದವನೆ

ಗೋವಿಂದ ಹರಿ ಗೋವಿಂದ

10. ಭಜಿಸಿ ಬದುಕೆಲೊ ಮನುಜ
ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀ ಹರಿಯ
ಅಜಸುರೇಂದ್ರಾದಿಗಳು ಆದಿವಂದಿತಪಾದ

ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ
ಕಾಕುಶಕಟನ ತುಳಿದು ಕೊಂದ ಪಾದ
ಲೋಕೇಶನಿಗೆ ಒಲಿದು ಪೂಜೆಗೊಂಬುವ ಪಾದ
ಲೋಕಪಾವನೆ ಗಂಗೆ ಜನಿಸಿದಾ ಪಾದ

ಶಿಲೆಯ ಸತಿಯಳನು ಸೌಂದರ್ಯಗೊಳಿಸಿದ ಆದ
ಒಲಿದು ಪಾರ್ಥಗೆ ಧರೆಯನೊತ್ತಿದ ಪಾದ
ಕೊಲಿಸಿ ಕೌರವರ ಕಾಳಗದಿ ಕೆಡಹಿದ ಪಾದ
ಬಲಿದ ಕಾಳಿಂಗನನು ತುಳಿದ ಪಾದ

ಗರುಡ ಶೇಷಾದಿಗಳು ಪೊತ್ತು ಕೊಂಡಾಡಿಹ ಪಾದ
ಧರೆಯ ಈರಡಿ ಮಾಡಿ ಅಳೆದ ಪಾದ
ಸಿರಿ ತನ್ನ ತೊಡೆಯಮೇಲಿರಿಸಿ ಸೇವಿಪ ಪಾದ
ವರ ಕಾಗಿನೆಲೆಯಾದಿ ಕೇಶವನ ಪಾದ

ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀ ಹರಿಯ

11. ತನು ನಿನ್ನದು
ತನು ನಿನ್ನದು ಜೀವನ ನಿನ್ನದು ರಂಗ
ಅನುದಿನದಿಬಾಹ ಸುಖ ದು:ಖ ನಿನ್ನದಯ್ಯ

ಸವಿನುಡಿ ವೇದ ಪುರಾಣ ಶಾಸ್ತ್ರಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವಮೋಹನಾಂಗಿಯರ ರೂಪವ ಕಣ್ಣಿಂದ
ಎವೆಯಿಕ್ಕದೆಲೆ ನೋಡುವ ನೋಟ ನಿನ್ನದಯ್ಯ

ಒಡಗೂಡಿ ಗಂಧ ಕಸ್ತೂರಿ ಪರಿಮಳಗಳ
ಬಿಡದೆ ಲೇಪಿಸಿಕೊಂಬುದು ನಿನ್ನದು
ಪಡುರಸದನ್ನಕೆ ನಲಿದಾಡುವ ಚಿಹ್ನೆ
ಕಡುರುಚಿಗೊಂಡರಾರುಚಿ ನಿನ್ನದಯ್ಯ

ಮಾಯಪಾಶದ ಬಲೆಯೊಳಗೆ ಸಿಲುಕಿರುವಂಥ
ಕಾಯಪಂಚೇಂದ್ರಿಯಗಳು ನನ್ನವು
ನ್ಯಾಯದಿ ಕನಕನೊಡೆಯ ಆದಿಕೇಶವರಾಯ
ನೀನಲ್ಲದೆ ನರರು ಸ್ವತಂತರೆ

ತನು ನಿನ್ನದು ಜೀವನ ನಿನ್ನದು ರಂಗ

12. ಈತನೀಗ ವಾಸುದೇವನು
ಈತನೀಗ ವಾಸುದೇವನು
ಈತನೀಗ ವಾಸುದೇವ
ಈ ಸಮಸ್ತ ಭುವನದೊಡೆಯ
ದೂತಗೊಲಿದು ತೇರನೇರಿ
ಹಿತದಿ ತೇಜಿ ನಡೆಸಿದಾತ

ದನುಜೆಯಾಳ್ದನಣ್ಣನಣ್ಣನ
ಪಿತನ ಮುತ್ತಿ ಕೌರವೇಶನ
ಅನುಜೆಯನಾಳಿದನ ಶಿರವನ್ನು ಛೇಧಿಸಿ
ತನ್ನ ಅನುಜೆಯಾಳಿದನ ಬೆಂಕಿ ತಿನ್ನದಂತೆ ಕಾಯ್ದ
ರುಕ್ಮನನುಜೆಯಾಳಿದವನ ಮೂರ್ತಿಯನ್ನು ನೋಡಿರೊ

ವ್ಯೋಮಕೇಶನಿಪ್ಪ ದೆಸೆಯ
ನಾಲ್ಕು ಜಗಕೆ ತೋರುತಿಪ್ಪ
ಸಾಮಜವನ್ನೇರಿ ಬಪ್ಪನನ್ನು ಕಾಣುತ
ಪ್ರೇಮದಿಂದ ಉರದೊಳಾಂತು ಡಿಂಗರಿಂಗನನ್ನು ಕಾಯ್ದ
ಸೋಮಕುಲದ ಭಾರವನ್ನು ಪೊತ್ತ ದೇವನು

ಕ್ರೂರವಾದ ಫಣಿಪಬಾಣ
ಭೋರ್ಗುಡಿಸುತಿರಲು ಜಗಕೆ
ವೀರನನ್ನು ಮುಸುಕಿ ಬಪ್ಪುದನ್ನು ಕಾಣುತ
ಭೂರಮಣಿಯನೊತ್ತಿ ಅಡಿಗೆ ಬೀಗನ ಶಿರವನ್ನು ಕಾಯ್ದ
ಶ್ರೀರಮಣ ಆದಿಕೇಶವನನ್ನು ನೋಡಿರೋ

ಈತನೀಗ ವಾಸುದೇವನು

13. ಆರು ಹಿತವರು ಎಂದು
ಆರು ಹಿತವರು ಎಂದು ನಂಬಬೇಡ
ಆರಿಗಾರಿಲ್ಲ ಆಪತ್ತು ಬಂದೊದಗಿದೆಡೆ

ಜನಕ ಹಿತದವನೆಂದು ನಂಬಬಹುದೆ
ಹಿಂದೆ ತನಯ ಪ್ರಹ್ಲಾದನಿಗೆ ಪಿತ ಮುನಿದನು
ಜನನಿ ರಕ್ಷಿಸುವಳೆಂತೆಂಬೆನೇ ಆಕುಂತಿ
ತನಯ ರಾಧೇಯನಿಗೆ ಎರಡನೆಣಿಸಿದ ಮೇಲೆ

ಮಗನು ತೆತ್ತಿಗನೆನೆಲೆ ಕಂಸ ತನ್ನಯ ಪಿತನ
ನಿಗಳಬಂಧನದಿಂದ ಬಂಧಿಸಿದನು
ಜಗವರಿಯೆ ಸೋದರನು ಮಮತೆಯುಳ್ಳವನೆನಲೆ
ಹಗೆವರಿಸಿ ವಾಲಿಯನು ಅನುಜ ಕೊಲಿಸಿದ ಮೇಲೆ

ತನಗೆ ದೇಹಾನುಬಂಧಿಗಳೆ ಬಂಧುಗಳೆಂದು
ಮನದಿ ನಿಚ್ಚಳವಾಗಿ ನಂಬಬೇಡ
ಘನಕೃಪಾನಿಧಿ ಕಾಗಿನೆಲೆಯಾದೆಇ ಕೇಶವನ
ಅನುದಿನದಿ ನಂಬಿದವಗಿಹಪರದ ಸುಖವು

ಆರು ಹಿತವರು ಎಂದು ನಂಬಬೇಡ

14. ಹೇಗಿದ್ದು ಹೇಗಾದೆಯೊ ಆತ್ಮ
ಹೇಗಿದ್ದು ಹೇಗಾದೆಯೊ ಆತ್ಮ
ಯೋಗೀಶಾನಂದ ಪುರದಲಿರುವುದ ಬಿಟ್ಟು

ಬಸಿರಹಳ್ಳಿಗೆ ಬಂದು ಮಾಸನೂರಲಿ ನಿಂದು
ಗುಸುಗಾಡಿ ನುಡಿದು ನೆಲಬಟ್ಟೆ ಪಿಡಿದು
ಕಿಸುಕದರಿವೆಯ ಪೊದ್ದು ಮಲಮೂತ್ರದಲಿ ಬಿದ್ದು
ವಸುಧೆಯಲಿ ದಿನಗಳೆದೆಯೊ ಆತ್ಮ

ಎಳವರೆಯಲಾಡಿ ಯೌವ್ವನದ ಊರಿಗೆ ಬಂದು
ಧಳಧಳಿಪ ಹಸ್ತಾದ್ರಿ ನೆಳಲ ಸೇರಿ
ಅಳಲು ಸುತ ಬೆಳೆದು ದಾರಿದ್ರ್ಯ ಪೇಟೆಗೆ ಬಂದು
ಹಳೆಯ ಬೀಡಿಗೆ ಪಯಣವೊ ಆತ್ಮ

ಗನ್ನಗತಕದ ಮಾತು ಇನ್ನು ನಿನಗೇತಕೊ
ಮುನ್ನ ಮಾಡಿದ ಕರ್ಮಭರದೊಡಲಿದೆ
ಉನ್ನತದ ಕಾಗಿನೆಲೆಯಾದಿ ಕೇಶವನ
ಸುಪ್ರಸನ್ನ ಮೂರುತಿಯನ್ನು ಭಜಿಸೆಲೊ ಆತ್ಮ

ಹೇಗಿದ್ದು ಹೇಗಾದೆಯೊ ಆತ್ಮ

15. ನಾರಾಯಣ ನಿನ್ನ
ನಾರಾಯಣ ನಿನ್ನ ನಾಮವೊಂದಿರುತಿರೆ
ಬೇರೊಂದು ನಾಮವಿನ್ನೇತಕಯ್ಯಾ

ನೆಟ್ಟನ ದಾರಿಯ ಬಟ್ಟೆಯೊಳಿರುತಿರೆ
ಬೆಟ್ಟವ ಬಳಸಲಿನ್ನೇತಕಯ್ಯ
ಅಷ್ಟೈಶ್ವರ್ಯದ ಮೃಷ್ಟಾನ್ನವಿರುತಿರೆ
ಬಿಟ್ಟಿಕೂಳನು ತಿನ್ನಲೇತಕಯ್ಯ

ಪರಶುನೇವಾಳಂಗಳಿರುತಿರೆ ಬೀದಿಯ
ಬರಿಗಲ್ಲ ತೊಳೆಯಲಿನ್ನೇತಕಯ್ಯ
ಹರಿವಾಣದೊಳಗಮೃತಾನ್ನವು ಇರುತಿರೆ
ತಿರಿದ ಕೂಳನು ತಿನ್ನಲೇತಕಯ್ಯ

ಬೆಲ್ಲವು ಕರದೊಳಗಿರುತಿರೆ
ಕಾಡಿನ ಕಲ್ಲನು ಕಡಿಯಲಿನ್ನೇತಕಯ್ಯ
ಬಲ್ಲಿದ ಕಾಗಿನೆಲೆಯಾದಿಕೇಶವನಿರೆ
ಚಿಲ್ಲರೆ ದೈವದ ಹಂಬಲೇತಕಯ್ಯಾ

ನಾರಾಯಣ ನಿನ್ನ ನಾಮವೊಂದಿರುತಿರೆ

16. ಆರಿಗೆ ಆರಿಲ್ಲವಯ್ಯ
ಆರಿಗೆ ಆರಿಲ್ಲವಯ್ಯ ಆಪತ್ತು ಕಾಲಕೆ
ವಾರಿಜನಾಭನ ನೆನೆ ಮನವೆ

ಹಸಿದು ಬಳಲಿದಾಗ ಹಗೆಯ ಕೈಗೆ ಸಿಕ್ಕಾಗ
ದೆಸೆಗೆಟ್ಟು ಓಡುವಾಗ ವ್ಯಾಧಿಯೊಳಿದ್ದಾಗ
ಅಸಮಾನ ಬಂದಾಗ ಅತಿ ಭೀತಿಗೊಂಡಾಗ
ಬಿಸಜಾಕ್ಷನ ನಾಮವ ನೆನೆ ಮನವೆ

ಸಾಲದವರೊತ್ತಿದಾಗ ಚಾಡಿಮಾತಿಗೆ ಮೋಹಿಸಿ
ಗೋಳುಗೊಳಿಸುತ ಕೋಪದಲಿ ಇರುವಾಗ
ಮೇಲ ತಾನರಿಯದೆ ನಿಂದೆ ಹೊಂದಿರುವಾಗ
ನೀಲಮೇಘಶ್ಯಾಮನ ನಾಮವ ನೆನೆ ಮನವೆ

ಪಂಥಗಳನಾಡಿ ಕಳಬಂಟರಡ್ಡ ಕಟ್ಟಿದಾಗ
ದಂತಿ ಮದವೇರಿ ಬೆನ್ನಟ್ಟಿದಾಗ
ಚಿಂತೆಯೇತಕೆ ಕಾಗಿನೆಲೆಯಾದಿ ಕೇಶವನ
ನಿಶ್ಚಿಂತೆಯಲಿ ನೆನೆದು ಸುಖಿಯಾಗೊ ಮನವೆ

ಆರಿಗೆ ಆರಿಲ್ಲವಯ್ಯ ಆಪತ್ತು ಕಾಲಕೆ

17. ಆರು ಬಾಳಿದರೇನು
ಆರು ಬಾಳಿದರೇನು ಆರು ಬದುಕಿದರೇನು
ನಾರಾಯಣನ ಸ್ಮರಣೆ ನಮಗಿಲ್ಲದತನಕ

ಉಣ್ಣಬರದವರಲ್ಲಿ ಊರೂಟವಾದರೆ ಏನು
ಹಣ್ಣು ಬಿಡದ ಮರಗಳು ಹಾಳಾದರೇನು
ಕಣ್ಣೀಲ್ಲದವಗಿನ್ನು ಕನ್ನಡಿಯಿದ್ದು ಫಲವೇನು
ಪುಣ್ಯವಿಲ್ಲದವನ ಪ್ರೌಢಿಮೆ ಮೆರೆದರೇನು

ಅಕ್ಕರಿಲ್ಲದವಗೆ ಮಕ್ಕಳಿದ್ದು ಫಲವೇನು
ಹೊಕ್ಕು ನಡೆಯದ ನಂಟತನದೊಳೇನು
ರೊಕ್ಕವಿಲ್ಲದವಗೆ ಬಂಧುಗಳು ಇದ್ದರೇನು
ಮರ್ಕಟನ ಕೈಯೊಳಗೆ ಮಾಣಿಕ್ಯವಿದ್ದರೇನು

ಅಲ್ಪ ದೊರೆಗಳ ಜೀತ ಎಷ್ಟು ಮಾಡಿದರೇನು
ಬಲ್ಪಂಥವಿಲ್ಲದವನ ಬಾಳ್ವೆಯೇನು
ಕಲ್ಪಕಲ್ಪಿತ ಕಾಗಿನೆಲೆಯಾದಿಕೇಶವನ
ಅಲ್ಪವೂ ನೆನೆಯದ ನರನಿದ್ದರೇನು

ಆರು ಬಾಳಿದರೇನು ಆರು ಬದುಕಿದರೇನು

18. ಹೂವ ತರುವರ ಮನೆಗೆ
ಹೂವ ತರುವರ ಮನೆಗೆ ಹುಲ್ಲ ತರುವ
ಆವ ಬಗೆಯಲಿ ಸಲಹೊ ದೇವ ಚಿನ್ಮಯನೆ

ರಂಗನಾಥ ನಿನ್ನಂಘ್ರಿಗೆರಗುವೆನೊ
ಅಂಗವನು ನಿನಗೆ ನಾ ಸಲಿಸುವೆನು
ರಂಗರೂಪವ ತೋರಿ ಭವಭಂಗಗಳನಳಿದು
ಡಂಗುರವ ಹೊಯ್ಯೊ ನಿನ್ನ ಡಿಂಗರಿಗನೆಂದು

ಈರೇಳು ಜನ್ಮದಿ ನಿನ್ನಾಧೀನನಾಗಿಪ್ಪೆ
ನಾನಾರ ಸೇರುವೆನೊ ನಾನೇನ ಮಾಡುವೆನೊ
ಘೋರ ಪಾತಕಿ ಅಜಮಿಳನ ಸಲಹಿದ ರಂಗ
ನಾರಸಿಂಹನೆಂದರೆ ಧ್ವನಿದೋರೋ ಕೃಷ್ಣ

ಇಷ್ಟು ಮಾಡಿದ ಬಂಟ ನಾ ನಿನ್ನ ವೈಷ್ಣವರ
ಪುಟ್ಟ ದಾಸಿಯಮಗನೊ ಪರದೇಸಿಯೊ
ಗಟ್ಟಿಯಾಗಿ ಕಾಗಿನೆಲೆಯಾದಿಕೇಶವ ರಂಗ
ಬಿಟ್ಟು ಹೋದರೆ ನಿನಗೆ ಹರಿದಾಸರಾಣೆ

ಹೂವ ತರುವರ ಮನೆಗೆ ಹುಲ್ಲ ತರುವ

19. ಬಲ್ಲವರು ಪೇಳಿರೈ
ಬಲ್ಲವರು ಪೇಳಿರೈ ಬಹುವಿಧದ ಚತುರತೆಯ
ಎಲ್ಲರಿಗು ಸಮ್ಮತವು ಏಕಾಂತವಲ್ಲ

ಕಂಕಣಕೆ ಮೊದಲೇನು ಕಾರ್ಮುಗಿಲ ಕಡೆಯೇನು
ಶಂಕರನ ಮೊಮ್ಮಗನ ಮುಖದ ಸಿರಿಯೇನು
ಪಂಕಜಕೆ ಕುರುಹೇನು ಪಾರ್ಥಿಯಳ ತಪವೇನು
ಅಂಕಿತಕೆ ಗುರುತೇನು ಅಜನ ಗುಣವೇನು

ಕಲಿಗಳಿಗೆ ಕಣ್ಣೇನು ಕಾವನಿರುಹಗಳೇನು
ಲಲನೆಯರ ಒಲಿಸುವ ಇದೇನು
ನೆಲಗಳಿಗೆ ಸಾಕ್ಷಿಯೇನು ನಾಯದ ಪರಿಯೇನು
ಬಲವ ನಿಲಿಸುವುದೇನು ಭಾಗ್ಯವು ಇದುಯೇನು

ಸತ್ಯಕ್ಕೆ ಕುರುಹೇನು ಪೃಥಿವಿಗೆ ಕಡೆಯೇನು
ಚಿತ್ತವನು ಸೆಳೆದೊಯ್ವ ಕಪಟವು ಇದೇನು
ಮರ್ತ್ಯದೊಳು ಕಾಗಿನೆಲೆಯದಿ ಕೇಶವನಂಘ್ರಿ
ಅರ್ತಿಯಿಂದಲಿ ಕೂಡಿದುದಕೆ ಫಲವೇನು

ಬಲ್ಲವರು ಪೇಳಿರೈ ಬಹುವಿಧದ ಚತುರತೆಯ

20. ನಾನು ನೀನೆನ್ನದಿರೋ
ನಾನು ನೀನು ಎನ್ನದಿರೊ ಹೀನ ಮಾನವ
ಜ್ಞಾನದಿಂದ ನಿನ್ನ ನೀನೇ ತಿಳಿದುನೋಡೆಲೊ ಪ್ರಾಣಿ

ಹೆಣ್ಣು ಹೊನ್ನು ಮಣ್ಣು ಮೂರ್ ನಿನ್ನವೇನೆಲೊ
ಅನ್ನದಿಂದ ಬಂದ ಕಾಮ ನಿನ್ನದೇನೆಲೊ
ಕರ್ಣದಿಂದ ಬರುವ ಘೋಷ ನಿನ್ನದೇನೆಲೊ
ನಿನ್ನ ಬಿಟ್ಟು ಹೋಹ ಜೀವ ನಿನ್ನದೇನೆಲೊ

ಹಲವು ಜನ್ಮದಿಂದ ಬಂದಿರುವನು ನೀನೆಲೊ
ಮಲದ ಗರ್ಭದಲಿ ನಿಂದಿರುವನು ನೀನೆಲೊ
ಜಲದ ದಾರಿಯಲಿ ಬಂದಿರುವನು ನೀನೆಲೊ
ಕುಲವು ಜಾತಿ ಗೋತ್ರಗಳುಳ್ಳವನು ನೀನೆಲೊ

ಕಾಲ ಕರ್ಮ ಶೀಲ ನೇಮ ನಿನ್ನದೇನೆಲೊ
ಜಾಲವಿದ್ಯೆ ಬಯಲುಮಾಯೆ ನಿನ್ನದೇನೆಲೊ
ಕೀಲು ಜಡಿದ ಮರದ ಬೊಂಬೆ ನಿನ್ನದೇನೆಲೊ
ಲೋಲ ಆದಿಕೇಶವನ ಭಕ್ತನಾಗೆಲೊ

ನಾನು ನೀನು ಎನ್ನದಿರೊ ಹೀನ ಮಾನವ

21. ಸತ್ಯವಂತರ ಸಂಗವಿರಲು
ಸತ್ಯವಂತರ ಸಂಗವಿರಲು ತೀರ್ಥವೇತಕೆ
ನಿತ್ಯ ಜ್ಞಾನಿಯಾದ ಮೇಲೆ ಚಿಂತೆ ಯಾತಕೆ

ತಾನು ಉಣ್ಣದ ಪರರಿಗಿಕ್ಕದ ಧನವಿದ್ದೇತಕೆ
ಮಾನ ಹೀನನಾಗಿ ಬಾಳ್ವ ಮನುಜನೇತಕೆ
ಜ್ಞಾನವಿಲ್ಲದೇ ನೂರು ಕಾಲ ಬದುಕಲೇತಕೆ
ಮಾನಿನಿಯ ತೊರೆದವಗೆ ಭೋಗವೇತಕೆ

ಮಾತು ಕೇಳದೆ ಮಲತು ನಡೆವ ಮಕ್ಕಳೇತಕೆ
ಪ್ರೀತಿ ಇಲ್ಲದೆ ಎಡೆಯನಿಕ್ಕಿದ ಅನ್ನವೇತಕೆ
ನೀತಿಯರಿತು ನಡೆಯದಿರುವ ಬಂಟನೇತಕೆ
ಸೋತು ಹೆಣ್ಣಿಗೆ ಹೆದರಿ ನಡೆವ ಪುರುಷನೇತಕೆ

ಸಂಜ್ಞೆಯರಿತು ನಡೆಯದಿರುವ ಸತಿ ಇದ್ದೇತಕೆ
ಮುನ್ನ ಕೊಟ್ಟು ಪಡೆಯದನ್ನು ಬಯಸಲೇತಕೆ
ಮನ್ನಣೆಯ ನಡೆಸದಿರುವ ದೊರೆಯು ಏತಕೆ
ಚೆನ್ನ ಆದಿ ಕೇಶವನಲ್ಲದ ದೈವವೇತಕೆ

22. ದಾಸದಾಸರ ಮನೆಯ ದಾಸಾನುದಾಸ ನಾನು
ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ

ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು

ಪಂಕಜನಾಭನ ಮನೆಯ ಮುಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ

ದಾಸದಾಸರ ಮನೆಯ ದಾಸಾನುದಾಸ ನಾನು

23. ವರವ ಕೊಡು ಎನಗೆ ವಾಗ್ದೇವಿ
ವರವ ಕೊಡು ಎನಗೆ ವಾಗ್ದೇವಿ ನಿನ್ನ
ಚರಣ ಕಮಲಂಗಳ ದಯಮಾಡು ದೇವಿ

ಶಶಿ ಮುಖದ ನಸು ನಗೆಯ ಬಾಲೆ
ಎಸೆವ ಕರ್ಣದ ಮುತ್ತಿನ ಓಲೆ
ನಸುವ ಸುಪಲ್ಲ ಗುಣಶೀಲ ದೇವಿ
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು

ಇಂಪು ಸೊಂಪಿನ ಚಂದ್ರ ಬಿಂಬೆ
ಕೆಂಪು ತುಟಿ ನಾಸಿಕದ ರಂಭೆ
ಜೋಂಪು ಮದನನ ಪೂರ್ಣ ಶಕ್ತಿ ಗೊಂಬೆ
ಸಂಪಿಗೆಯ ಮುಡಿದಿಟ್ಟ ವಿದ್ಯಾ

ರವಿ ಕೋಟಿ ತೇಜ ಪ್ರಕಾಶೇ ಮಹಾ
ಕವಿಜನ ಹೃತ್ಕಮಲ ವಾಸೇ
ಅವಿರಳ ಪುರಿ ಕಾಗಿನೆಲೆಯಾದಿ
ಕೇಶವನ ಸುತನಿಗೆ ಸನ್ನುತ ರಾಣಿವಾಸೆ

24. ನಮ್ಮಮ್ಮ ಶಾರದೆ ಉಮಾಮಹೇಶ್ವರಿ
ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ
ನಿಮ್ಮೊಳಗಿಹನಾರಮ್ಮಾ
ಕಮ್ಮಗೋಲನ ವೈರಿ ಸುತನಾದ ಸೊಂಡಿಲ
ಹೆಮ್ಮೆಯ ಗಣನಾಥನೇ

ಮೋರೆ ಕಪ್ಪಿನ ಭಾವ ಮೊರದಗಲದ ಕಿವಿ ಕೋರೆದಾಡೆಯನಾರಮ್ಮಾ
ಮೂರುಕಣ್ಣನ ಸುತ ಮುರಿದಿಟ್ಟ ಚಂದ್ರನ ಧೀರ ತಾ ಗಣನಾಥನೇ

ಉಟ್ಟದಟ್ಟಿಯು ಬಿಗಿದುಟ್ಟ ಚೆಲ್ಲಣದ ದಿಟ್ಟ ತಾ ನಿವನಾರಮ್ಮ
ಪಟ್ಟದ ರಾಣಿ ಪಾರ್ವತಿಯ ಕುಮಾರನು ಹೊಟ್ಟೆಯ ಗಣನಾಥನೇ

ರಾಶಿ ವಿದ್ಯೆಯ ಬಲ್ಲ ರಮಣಿ ಹಂಬಲನೊಲ್ಲ ಭಾಷಿಗನಿವನಾರಮ್ಮ
ಲೇಸಾಗಿ ಜನರ ಸಲಹುವ ಕಾಗಿನೆಲೆ ಆದಿಕೇಶವ ದಾಸ ಕಣೇ

ನಮ್ಮಮ್ಮ ಶಾರದೆ ಉಮಾ ಮಹೇಶ್ವರಿ

25. ಯಾದವರಾಯ ಬೃಂದಾವನದೊಳು
ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇಅನುಪಲ್ಲವಿ

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ

ಕರುಗಳ ಸಹಿತಲೇ ಗೋಕುಲವೆಲ್ಲಸಿರಿ
ಕಾಗಿನೆಲೆಯಾದಿ ಕೇಶವ ರಾಯ
ತರುಗಳ ಸಹಿತಲೇ ವರಗೋಪಾಲಚರಣ

ಯಾದವರಾಯ ಬೃಂದಾವನದೊಳು





ಕೃಪೆ : ವಾಟ್ಸ್ ಆಪ್

GK - ಇತಿಹಾಸ

*ಚೀನಿ ಪ್ರವಾಸಿಗರ ಬರವಣಿಗೆಗಳು*


1. ಬೌದ್ದ ಧರ್ಮ ಹಾಗೂ ಸಾಹಿತ್ಯವನ್ನು ಅಧ್ಯಯನ ಮಾಡಲು ಬಂದವರಲ್ಲಿ ಮೊದಲಿಗ ನಾದವನು- ಫಾಹಿಯಾನ್.
2. ಫಾಹಿಯಾನ್ ಭಾರತಕ್ಕೆ ಬಂದಾಗ ಆಳುತ್ತಿದ್ದ ರಾಜ ಮನೆತನ - ಗುಪ್ತರು
3. ಫಾಹಿಯಾನ್ ಕೃತಿ- ಘೋಕೋಕಿ
4. ಹ್ಯೂಯೆನ್ ತ್ಸಾಂಗನು ಭಾರತಕ್ಕೆ ಬಂದಿದ್ದು - ಕ್ರಿ.ಶ 7 ನೇ ಶತಮಾನದ ಪೂರ್ವದಲ್ಲಿ.
5. ಸಿಯುಕಿ ಗ್ರಂಥದ ಕರ್ತು - ಹ್ಯೂಯೆನ್ ತ್ಸಾಂಗ್
6. ಸಿ.ಯುಕಿ ಗ್ರಂಥ - ಮಹಾಯಾನ ಪಂಥದ ಬೆಳವಣಿಗೆಯ ಬಗೆಗೆ ತಿಳಿಸುತ್ತದೆ.
7. ಹ್ಯೂಯೆನ್ ತ್ಸಾಂಗನು ಕಲಿತ ವಿ ವಿ ನಿಲಯ - ನಲಂದಾ.
8. ಇತ್ಸಿಂಗ್ ನು ಭಾರತಕ್ಕೆ ಬಂದಿದ್ದು- ಏಳನೇ ಶತಮಾನದಲ್ಲಿ
9. ಬುದ್ದ ಚರಿತ ಕೃತಿಯ ಕರ್ತು-ಅಶ್ವಘೋಷ
10. ಕುಮಾರಪಾಲ ಚರಿತ ಕೃತಿಯ ಕರ್ತು-ಹೇಮಚಂದ್ರ
11. ಪೃಥ್ವಿರಾಜ ರಾಸೋ - ಚಾಂದ್ ಬರ್ದಾಯಿ
12. ರಘು ವಂಶ ನಾಟಕದ ಕರ್ತು- ಕಾಳಿದಾಸ.


ಸಾಹಿತ್ಯ ಆಧಾರಗಳು
1. ಆರ್ಯರ ಜೀವನ ಹಾಗೂ ಸಂಸ್ಕೃತಿಯ ಬಗೆಗೆ ಬೆಳಕು ಚೆಲ್ಲುವ ಗ್ರಂಥ- ವೇದಗಳು.
2. ಭಾರತದ ಎರಡು ಮಹಾಕಾವ್ಯಗಳು - ರಾಮಾಯಣ ಮತ್ತು ಮಹಾಭಾರತ
3. ಬೌದ್ದರ ಪ್ರಮುಖ ಕಾವ್ಯಗಳು - ದೀಪ ವಂಶ ಹಾಗೂ ಮಹಾವಂಶ.
4. ಆರ್ಯರ ಆಡಳಿತ ಕುರಿತು ಬೆಳಕು ಚೆಲ್ಲುವ ಕೃತಿ- ಅರ್ಥಶಾಸ್ತ್ರ.
5. ಅರ್ಥಶಾಸ್ತ್ರ ಕೃತಿಯ ಕರ್ತು- ಕೌಟಿಲ್ಯ
6. ನಂದರ ಪತನದ ಬಗೆಗೆ ತಿಳಿಸುವ ಕೃತಿ - ಮುದ್ರಾರಾಕ್ಷಸ
7. ಮುದ್ರಾರಾಕ್ಷಸದ ಕರ್ತು- ವಿಶಾಖದತ್ತ.
8. ಹರ್ಷವರ್ಧನನ ಕುರಿತು ತಿಳಿಸುವ ಕೃತಿ-ಹರ್ಷ ಚರಿತೆ
9. ಹರ್ಷಚರಿತೆಯ ಕರ್ತು - ಬಾಣಕವಿ
10. ಅಷ್ಟಾಧ್ಯಾಯಿ ಕೃತಿಯ ಕರ್ತು- - ಪಾಣಿನಿ
11. ಮಹಾಬಾಷ್ಯಾ ವನ್ನು ಬರೆದವರು - ಪತಂಜಲಿ
12. ಅಭಿಜ್ಞಾನ ಶಾಕುಂತಳದ ಕರ್ತು-ಕಾಳಿದಾಸ
13. ಕಾಶ್ಮೀರದ ದೊರೆಗಳ ಐಹಿತ್ಯ ತಿಳಿಸುವ ಕೃತಿ- ರಾಜತರಂಗಿಣಿ.
14. ರಾಜ ತರಂಗಿಣಿಯ ಕರ್ತು- ಕಲ್ಹಣ
15. ವಿಕ್ರಮಾಂತ ದೇವ ಚರಿತ ಕೃತಿಯ ಕರ್ತು-ಬಿಲ್ಹಣ
16. ಗೌಡಮಹೋ ಕೃತಿಯ ಕರ್ತು - ವಾಕ್ವತಿ
17. ರಾಮಪಾಲ ಚರಿತ ಕೃತಿಯ ಕರ್ತು- ಸಂಧ್ಯಾಕರನಂದಿ
18. ಚರತ ಸಂಹಿತೆಯ ಕರ್ತು- ಚರಕ


ವಿದೇಶಿ ಬರವಣಿಗೆಗಳು.
1. 1 ವಾಯುವ್ಯ ಭಾರತವನ್ನು ಪರ್ಶಿಯನ್ನರು ಗೆದ್ದ ಪ್ರಸಂಗವನ್ನು ತಿಳಿಸುವ ಗ್ರಂಥ - ಹೆರಡೊಟಸ್ ನ Historia.
2. ಅಲೆಗ್ಸಾಂಡರನ ದಂಡಯಾತ್ರೆಯನ್ನು ವರ್ಣಿಸಿದವರು -ಏರಿಯಾನ್ .
3. ತಾರೀಕ್-ಇ- ಹಿಂದ್ ಅಥವಾ ತೆಂತಕಿಕ್ - ಇ- ಯಾನ್- ಕೃರ್ತು-ಅಲ್ಪೆರೋನಿ.
4. ಪ್ರಾಚೀನ ಭಾರತದ ಇತಿಹಾಸಕ್ಕೆ ಒಳ್ಳೆಯ ಆಧಾರಗಳು - ಶಾಸನಗಳು.
5. ಇಂಡೋಗ್ರೀಕರ ಇತಿಹಾಸ ತಿಳಿಯಲು ಇರುವ ಏಕಮಾತ್ರ ಮೂಲ ಆಧಾರಗಳು- ನಾಣ್ಯಗಳು.
6. ನಾಣ್ಯಗಳ ಅಧ್ಯಯನವನ್ನು ಈ ಹೆಸರಿನಿಂದ ಕರೆಯವರು-ನ್ಯೂಮಿನ್ ಮ್ಯಾಟಿಕ್ಸ್.
7. ಶಿಲಪ್ಪಾವಿಗಾರಂ ಕರ್ತು- ಇಳಂಗೋ ಅಡಿಗಲ್
8. ಮಣಿ ಮೇಖಲೈ- ಸಾತ್ತನಾರ್.
9. ಯಾತ್ರಿಕ ಪ್ರಭು ಎಂದು ಕರೆಯಲ್ಪಟ್ಟವನ್ನು-ಹ್ಯೂಯೆನ್ ತ್ಸಾಂಗ್ .
10. ಶಿಲಾಶಾಸನದ ಪಿತಾಮಹಾ-ಅಶೋಕ.


ಪ್ರಕ್ತಾನ ಆಧಾರಗಳು.
1. ಪ್ರಕ್ತಾನ ಶಾಸ್ತ್ರ ಎಂದರೆ - ಶಾಸನಗಳು ಹಾಗೂ ಸ್ಮಾರಕಗಳಿಗೆ ಸಂಬಂಧಿಸಿದ ಮೂಲಾಧಾರಗಳು.
2. ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಲು ಇರುವ ಸೂಕ್ತ ಮೂಲಾಧಾರಗಳು -ಶಾಸನಗಳು.
3. ಹಾತಿಗುಂಪ ಶಾಸನದ ಕರ್ತು-ಖಾರವೇಲ.
4. ತಾಳಗುಂದ ಶಾಸನದ ಕರ್ತು-ಶಾಕುಸ್ಥವರ್ಮ.
5. ಶಾಸನಗಳ ಅಧ್ಯಯನವನ್ನು -ಎಫಿಗ್ರಫಿ ಎಂದು ಕರೆಯುವರು.
6. ನಾಣ್ಯಗಳ ಅಧ್ಯಯನಕ್ಕೆ ಈ ಹೆಸರಿದೆ- ನಾಣ್ಯಶಾಸ್ತ್ರ.
7. ಸಮುದ್ರ ಗುಪ್ತನ ಆಡಳಿತದ ಬಗೆಗೆ ಬೆಕು ಚೆಲುವ ಶಾಸನದ ಹೆಸರು-ಅಲಹಾಬಾದ್ ಸ್ತಂಭ ಶಾಸನ.
8. ಚೀನೀ ಪ್ರವಾಸಿಗರು ಭಾರತಕ್ಕೆ ಬಂದ ಉದ್ದೇಶ - ಬೌದ್ದ ಧರ್ಮದ ಪವಿತ್ರ ಗ್ರಂಥಗಳನ್ನು ಸಂಗ್ರಹಿಸಲು .
9. ಪುರಾಣಗಳು ಇತಿಹಾಸಕಾರನಿಗೆ ಸಹಾ.ಕವಾಗಿರುವುದು ಈ ವಿಷಯಕ್ಕೆ - ರಾಜಕೀಯ ಇತಿಹಾಸ ತಿಳಿಯಲು.
10. ಜಾತಕಗಳು ಇದಕ್ಕೆ ಸಂಬಂಧಿಸಿದೆ - ಬುದ್ದನ ಹಿಂದಿನ ಜನ್ಮ ತಿಳಿಯಲು
11. ಕುಮಾರ ಸಂಭವದ ಕವಿ-ಕಾಳಿದಾಸ.
12. ನೀತಿಸಾರದ ಲೇಖಕರು - ಕಾಮುಂದಕ
13. ಶಕಯುಗ ಪ್ರಾರಂಭಗೊಂಡ ವರ್ಷ-ಕ್ರಿ.ಶ.78.
14. ಸಂಧಿ ವಿಗ್ರಹ ಮಹಾದಂಡನಾಯಕ ಕುಮಾರಮಾತ್ಯ ಎಂಬ ಬಿರುದುಗಳ ಅರಸ- ಹರಿಷೇಣ.
15. ಆರ್ಯಭಟನಿಗೆ ಆಶ್ರಯ ನೀಡಿದವರು- ಗುಪ್ತರು.
16. ಭಾರತಕ್ಕೆ ಬಂದ ಮೊದಲ ಮುಸ್ಲಿಂ ಆಕ್ರಮಣಕಾರರು-ತುರ್ಕರು.
17. ತಾರಿಕ್ - ಇ-ಅಲಯ್ ಕೃತಿಯ ಕರ್ತು-ಅಮೀರ್ ಖುಸ್ರು.
18. ಪುರಾಣಗಳು ಎಷ್ಟಿವೆ-ಹದಿನೆಂಟು.
19. ಮೊಟ್ಟಮೊದಲು ಶಾಸನಗಳನ್ನು ಬರೆಯಿಸಿದ ಅರಸ - ಅಶೋಕ.
20. ವಿಕ್ರಮಾಂಕ ದೇವ ಚರಿತೆಯು- 6 ನೇ ವಿಕ್ರಮಾದಿತ್ಯನ ಜೀವನ ಚರಿತ್ರೆ.
21. ಮುದ್ರಾರಾಕ್ಷಸ- ಚಂದ್ರಗುಪ್ತ ಮೌರ್ಯನ ಇತಿಹಾಸಕ್ಕೆ ಸಂಬಂಧಿಸಿದೆ.
22. ಪೃಥ್ವಿರಾಜ ರಾಸೋ ಕೃತಿಯನ್ನು ಬರೆದವರು-ಝೀಯಾ ವುದ್ದೀನ್ ಬರಣಿ.
23. ಕಾಳಿದಾಸನಿಗೆ ಆಶ್ರಯ ಕೊಟ್ಟ ಮನೆತನ - ಗುಪ್ತರು.
24. ಗಾಥಶಪ್ತಪತಿ- ಪ್ರಾಕೃತ ಭಾಷೆಯಲ್ಲಿದೆ.

ಭಾರತದ ಭೌಗೋಳಿಕ ಲಕ್ಷಣಗಳು.
1. ಒಂದು ದೇಶದ ಇತಿಹಾಸ ಅಧ್ಯಯನಕ್ಕೆ ಅವಶ್ಯವಾದ ಅಂಶ- ಭೌಗೋಳಿಕ ರಚನೆ ಹಾಗೂ ಕಾಲಗಣನೆ .
2. ಕನೈರಿಯಾ ಗುಹಾಲಯದಿಂದ ಪ್ರಭಾವಿತವಾದ ಗುಹಾಲಯ -ಬಾದಾಮಿಯ ಗುಹಾಲಯ.
3. ಸಮುದ್ರ ಗುಪ್ತನ ದಂಡೆಯಾತ್ರೆಯಿಂದ ದುರ್ಬಲವಾದ ರಾಜವಂಶ-ಕಂಚಿಯ ಪಲ್ಲವರು.
4. ಗ್ರೀಕರ ಧಾಳಿಯಿಂದ ಭಾರತದಲ್ಲಿ ಬೆಳೆದ ಶಿಲ್ಪಕಲೆ -ಗಾಂಧಾರ ಶಿಲ್ಪ.
5. ಪ್ರಪಂಚದ ಏಳನೆಯ ದೊಡ್ಡ ರಾಷ್ಟ್ರ - ಭಾರತ .
6. ಭಾರತದ ಒಟ್ಟು ವಿಸ್ತೀರ್ಣ-32.87.563 ಚದರ ಕಿ.ಮೀ.ಗಳು.
7. ಉತ್ತರದಿಂದ ದಕ್ಷಿಣಕ್ಕೆ ಭಾರತದ ಉದ್ದ-3200 ಕಿ.ಮೀ.ಗಳು.
8. ಪೂರ್ವದಿಂದ ಪಶ್ಚಿಮಕ್ಕೆ ಭಾರತದ ಉದ್ದ-2980 ಕಿ.ಮೀ ಗಳು.
9. ಭಾರತದ ಸಮುದ್ರ ತೀರದ ಉದ್ದ - 7516 ಕಿ.ಮೀ.
10. ಭಾರತದ ಹಿಮಾಲಯದ ಅಂಚಿನಲ್ಲಿರುವ ಪರ್ವತ- ಹಿಮಾಲಯ ಪರ್ವತ.
11. ಅರಬ್ಬೀ ಸಮುದ್ರ ಇರುವುದು.- ಪಶ್ಚಿಮದಲ್ಲಿ.
12. ಬಂಗಾಳಕೊಲ್ಲಿ ಇರುವುದು- ಪೂರ್ವದಲ್ಲಿ.
13. ಹಿಂದೂ ಮಹಾಸಾಗರ ಇರುವುದು- ದಕ್ಷಿಣದಲ್ಲಿ.
14. ಹಿಮಾಲಯ ಪರ್ವತ ಶ್ರೇಣಿಯ ಉದ್ದ-4200 ಕಿ.ಮೀ ಗಳು.
15. ಉತ್ತರ ಭಾರತದ ಅತ್ಯಂತ ಉದ್ದವಾದ ನದಿಗಳು- ಸಿಂಧೂ ,ಗಂಗಾ, ಬ್ರಹ್ಮಪುತ್ರ.

19.2.17

Class / ಸಾಮಾನ್ಯ ಜ್ಞಾನ / ಕರ್ನಾಟಕದ ಬಗ್ಗೆ ಸಂಕ್ಷಿಪ್ತ ಮಾಹಿತಿ*

*ಕರ್ನಾಟಕದ  ಬಗ್ಗೆ ಸಂಕ್ಷಿಪ್ತ  ಮಾಹಿತಿ* :
🔻🔻🔻🔻🔻🔻🔻🔻🔻🔻

*ಕರ್ನಾಟಕದ ರಾಜಧಾನಿ? ?
*ಬೆಂಗಳೂರು*

#ಬೆಂಗಳೂರಿನ ಹಳೆಯ ಹೆಸರು?
*ಬೆಂದಕಾಳೂರು*

ಕರ್ನಾಟಕದ ಒಟ್ಟು ವಿಸ್ತೀರ್ಣ?
*1,91,791* ಚ.ಕಿ.ಮೀ

#ಕರ್ನಾಟಕದ ಒಟ್ಟು ಜನಸಂಖ್ಯೆ?
*6,11,30,704*
(2011 ಜನಗಣತಿ )

#ಕರ್ನಾಟಕದ ಒಟ್ಟು ಜಿಲ್ಲೆಗಳು?
*31*

#ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?
*224* + 1ಆಂಗ್ಲೊ ಇಂಡಿಯನ್

#ಕರ್ನಾಟಕದ ಒಟ್ಟು ವಿಧಾನಪರಿಷತ್ತು ಸ್ಥಾನಗಳು- *75*

#ಕರ್ನಾಟಕದ ಲೋಕಸಭಾಸ್ಥಾನಗಳು -
*28*

#ರಾಜ್ಯಸಭಾ ಸ್ಥಾನಗಳು
12🌹🌹🌹

ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
*ಬೆಳಗಾವಿ*

(ಹೆಚ್ಚು ವಿಸ್ತೀರ್ಣ ಹೊಂದಿದ ಭಾರತದ ರಾಜ್ಯ ಮಹಾರಾಷ್ಟ್ರ)

#ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?
*ಬೆಂಗಳೂರು ನಗರ*

#ಕರ್ನಾಟಕದ ಜನಸಾಂದ್ರತೆ
*319*
(ಭಾರತ 382)

*ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
*1956 November 1*

#ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್ಪ.

#ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?
*1973 November 1 ಡಿ.ದೇವರಾಜು ಅರಸು*

₹# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : *ಸಿದ್ದರಾಮಯ್ಯ*
@📚📚📚☘🌹

#ಕರ್ನಾಟಕದ ಉತ್ತರದ ತುದಿ?
*ಬೀದರ್*

#ಕರ್ನಾಟಕದ ದಕ್ಷಿಣ ತುದಿ?
*ಚಾಮರಾಜನಗರ*

#ಪಶ್ಚಿಮದ ತುದಿ? ?
*ಕಾರವಾರ (ಉ.ಕ*)

🌹🌹
# ಕರ್ನಾಟಕದ ಪೂರ್ವದ ತುದಿ?
*ಕೋಲಾರ ಮುಳಬಾಗಿಲು*

#ಕರ್ನಾಟಕವು
ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ
ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.

#ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ?
*ಬೆಂಗಳೂರ ನಗರ*
(ರಾಜ್ಯ ಬಿಹಾರ)

#ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ?
*ಕೊಡಗು*
(ಭಾರತ ರಾಜ್ಯ- ಅರುಣಾಚಲಪ್ರದೇಶ).

#ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
*ದ.ಕನ್ನಡ* ✏✏📚ಸ್ಪರ್ಧಾಲೋಕ

#ಕರ್ನಾಟಕದ ಮೊದಲ ಪತ್ರಿಕೆ?
*ಮಂಗಳೂರು ಸಮಾಚಾರ*

#ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ

#ಕರ್ನಾಟಕದ ಅತಿ ದೊಡ್ಡ ಬಂದರು?
*ನವಮಂಗಳೂರ ಬಂದರು*
ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.
amasiddatakali@Gmail.com
✏✏✏✏
#ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.

#ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.

💚
#ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ.

#ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ.

# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.

# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ?
*ಹುಲಿಕಲ್ಲು*
ಮೊದಲು ಆಗುಂಬೆ ಇತ್ತು
(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)
🌺🌷🌹☘

#ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ?
*ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ*

#ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆ ಕರೆಯುತ್ತಾರೆ.

# ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?
*ಉತ್ತರ ಕನ್ನಡ*

* ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ ಜಿಲ್ಲೆ - *ವಿಜಯಪುರ*

# ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.

#ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ ಟಿ.ವೆಂಕಟಾಪುರದ ಬಳಿ ಇದೆ.

#ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ.

#ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿಯಾಗಿದೆ.

#ಕರ್ನಾಟಕದ ಮೊಟ್ಟ-ಮೊದಲ ಜಲಾಶಯ - ವಾಣಿವಿಲಾಸ ಸಾಗರ.

#ಕಾವೇರಿ ನದಿಯ ಉಗಮಸ್ಥಾನ - ತಲಕಾವೇರಿ/ ತಲಕಾಡು.

#ಭಾರತದ ಎತ್ತರವಾದ ಜಲಪಾತ - ಕರ್ನಾಟಕದ ಜೋಗ ಜಲಪಾತ

#ಕರ್ನಾಟಕದಲ್ಲಿ ಅತಿ ಹೆಚ್ಚು ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ.

#ಕರ್ನಾಟಕದಲ್ಲಿ ಕಡಿಮೆ ನೀರಾವರಿ ಹೊಂದಿರುವ ಜಿಲ್ಲೆ?
ಕೊಡಗು.

ಕರ್ನಾಟಕದಲ್ಲಿ

🏟🏟
ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ?
ಶಿವಮೊಗ್ಗ.

* ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ.

#ಕರ್ನಾಟಕದಲ್ಲಿ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದ ಜಿಲ್ಲೆ ಕಲಬುರ್ಗಿ, ಕಲಬುರ್ಗಿನ್ನು - ತೊಗರಿಯ ಕಣಜ ಎಂದು ಕರೆಯುವರು.

*********

* ಸಕ್ಕರೆ ಜಿಲ್ಲೆ ಎಂದು ಬೆಳಗಾವಿಯನ್ನು ಕರೆಯುತ್ತಾರೆ.

* ಸಕ್ಕರೆ ನಗರವೆಂದು ಮಂಡ್ಯವನ್ನು ಕರೆಯುತ್ತಾರೆ.

#ಕರ್ನಾಟಕದ ಮ್ಯಾಂಚೆಸ್ಟರ್ ಎಂದು ದಾವಣಗೆರೆಗೆ ಕರೆಯುತ್ತಾರೆ.

* ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ?
ಬಳ್ಳಾರಿ ಮತ್ತು ಚಿಕ್ಕಮಗಳೂರು.

* ಅತ್ಯಂತ ಆಳವಾದ ಚಿನ್ನದ ಗಣಿ - ಕರ್ನಾಟಕದ ಚಾಂಪಿಯನ್ ರಿಫೆ.

* ಪ್ರಸ್ತುತ ಭಾರತದ ಅತಿದೊಡ್ಡ ಚಿನ್ನದ ಗಣಿ -🏟 ಹಟ್ಟಿ (ಲಿಂಗಸೂಗೂರು ತಾಲ್ಲೂಕು)
( ರಾಯಚೂರು ಜಿಲ್ಲೆ).

* ರಾಷ್ಟ್ರೀಯ ಹೆದ್ದಾರಿ ಹೊಂದದ ಕರ್ನಾಟಕದ ಜಿಲ್ಲೆಗಳು
ರಾಯಚೂರು ಮತ್ತು ಕೊಡಗು.

@₹#ಕರ್ನಾಟಕದಲ್ಲಿ ಹಾಯ್ದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ?
🚎🚌
*NH-13*
ಇದು ಮಂಗಳೂರು ಇಂದ ಮೂಡಬಿದರಿ, ಕೊಪ್ಪಳ ,ಶಿವಮೊಗ್ಗ,  ಚಿತ್ರದುರ್ಗ, ಹೊಸಪೇಟೆ, ಇಳಕಲ್,ಬಿಜಾಪುರ ಮಾರ್ಗವಾಗಿ ಸೋಲ್ಲಾಪುರ ಕ್ಕೆ ಸೇರುತ್ತದೆ.

🚊🚉
* ಕರ್ನಾಟಕದಲ್ಲಿ ಮೊದಲು ರೈಲು ಆರಂಭ :
1864

* ಕೊಡಗು ಕರ್ನಾಟಕದ ರೈಲು ಮಾರ್ಗ ಇಲ್ಲದ ಜಿಲ್ಲೆ 🚊🚉

amasiddatakali✏
# ನಮ್ಮ ಮೆಟ್ರೊ ಕಾರ್ಯರಂಭ ಮಾಡಿದ್ದು?
*2011 Oct 20* ಬೈಯಪ್ಪನಹಳ್ಳಿ - ಎಮ್.ಜಿ.ರೊಡ್.

#ಕಾರವಾರ ಬಂದರನ್ನು ಅತಿ ಸುಂದರ ಬಂದರು ಎಂದು ಕರೆಯುತ್ತಾರೆ.

#ಅರಮನೆಗಳ ನಗರ ಎಂದು ಮೈಸೂರುನ್ನು ಕರೆಯುತ್ತಾರೆ.

* ಕರ್ನಾಟಕ ರಾಷ್ಟ್ರೀಯ ಉದ್ಯಾನವನಗಳು :-

1) ರಾಜೀವಗಾಂಧಿ ರಾ.ಉ- ಕೊಡಗು.
2) ಬಂಡಿಪುರ ರಾ.ಉ--- ಚಾಮರಾಜನಗರ.
3) ಬನ್ನೇರುಘಟ್ಟ ರಾ.ಉ- ಬೆಂಗಳೂರು.
4) ಕುದುರೆಮುಖ ರಾ.ಉ-- ಚಿಕ್ಕಮಗಳೂರು.
5) ಅಂಶಿ/ಅಣಸಿ ರಾ.ಉ-- ಉತ್ತರ ಕನ್ನಡ.

✏ ಭಾರತದ ಸಿಲಿಕಾನ್ ಸಿಟಿ- ಬೆಂಗಳೂರು.

9.2.17

ಗಣಿತ

*ವಿಷಯ:- "ಗಣಿತ"*


🔸 *೧) 40  ಜನರು ಒ೦ದು ಕೆಲಸವನ್ನು 56 ದಿನಗಳಲ್ಲಿ ಮಾಡಬಲ್ಲರು.ಹಾಗಾದರೆ   8 ಜನರು ಅದೇ ಕೆಲಸವನ್ನು ಎಷ್ಟು ದಿನಗಳಲ್ಲಿ ಮಾಡಬಲ್ಲರು?....*
A)180
B)230
C)280
D)310
ಬಿಡಿಸುವ ವಿಧಾನ:

Simple method.
ಜನ            ದಿನ
40              56
8                  ?
         40×56
         -----------=280
             8

*೨) 20  ಜನರು ಒಂದು ಕೆಲಸವನ್ನು      28  ದಿನಗಳಲ್ಲಿ ಮಾಡಬಲ್ಲರು, ಒಂದು ವೇಳೆ ಅದೇ ಕೆಲಸವನ್ನು  7 ದಿನಗಳಲ್ಲಿ ಮಾಡಬೇಕಾದರೆ ಎಷ್ಟು ಜನರ ಅವಶ್ಯಕತೆ ಇದೆ?*
 A)40
B)60
C)80
D)95

ಬಿಡಿಸುವ ವಿಧಾನ:

Simple method.
ಜನ            ದಿನ
20              28
?(x)             7
             20×28
    X=     -----------=280
               7


*೩)  A ಒಂದು ಕೆಲಸವನ್ನು 2 ದಿನಗಳಲ್ಲಿ Bಅದೇ ಕೆಲಸವನ್ನು  3 ದಿನಗಳಲ್ಲಿ ಹಾಗೂ C  ಅದೇ ಕೆಲಸವನ್ನು 6 ದಿನಗಳಲ್ಲಿ ಮಾಡಬಲ್ಲರು ಹಾಗಾದರೆ A,B&C ಒಟ್ಟಗೆ ಸೇರಿ ಎಷ್ಟು ದಿನಗಳಲ್ಲಿ ಮಾಡಬಲ್ಲರು?*
A)1 ದಿನ
B)10 ದಿನ
C)13 ದಿನ
D)8 ದಿನ

ಬಿಡಿಸುವ ವಿಧಾನ:

Simple method.

  A--------2 ದಿನ ----------  T1
  B--------3 ದಿನ-------------T2
  C--------6  ದಿನ -----------T3
   A+B+C=     T1×T2×T3
                     -------------------------
                  T1T2+T2T3+T3T1
              =          2×3×6
                ---------------------------
                (2×3)+(3×6)+(6×3)
             =  2×3×6
                ----------------
                 6+18+12
A+B+C=1 ದಿನ


*೪)20 ಜನರು 40 ಮನೆಗಳನ್ನು  60 ದಿನಗಳಲ್ಲಿ ಕಟ್ಟಬಲ್ಲರು ಹಾಗಾದರೆ 10 ಜನರು  20 ಮನೆಗಳನ್ನು  ಎಷ್ಟು ದಿನಗಳಲ್ಲಿ ಕಟ್ಟಬಲ್ಲರು?*
A)20
B)40
C)60
D)80

ಬಿಡಿಸುವ ವಿಧಾನ:

Simple method:
       ಜನ           ಕೆಲಸ      ‌‌‌‌   ದಿನ
         20            (40).         60
                    💉          🔪
         (10).           20          ?(x)
X= 20×20×60
      -------------------=60ದಿನ
       10×40

*೫)10 ಜನರು 20 ಬುಟ್ಟಿಗಳನ್ನು   30 ದಿನಗಳಲ್ಲಿ  ತಯಾರಿಸಬಲ್ಲರು ಹಾಗಾದರೆ  5 ಜನರು  10 ಬುಟ್ಟಿಗಳನ್ನು ಎಷ್ಟು ದಿನಗಳಲ್ಲಿ ತಯಾರಿಸಬಲ್ಲರು?*
A) 30
B)40
C)50
D)60

ಬಿಡಿಸುವ ವಿಧಾನ:

Simple method:
       ಜನ           ಕೆಲಸ      ‌‌‌‌   ದಿನ
         10            (20).         30
                    💉          🔪
         (5).           10          ?(x)
X= 10×10×30
      -------------------=30ದಿನ
       5×20


*೬) 20  ವರ್ಷಗಳ ಹಿ೦ದೆ ಒಬ್ಬ ತಂದೆಯ ವಯಸ್ಸು ಈಗಿನ ವಯಸ್ಸಿನ 1/3 ಭಾಗವಾಗಿತ್ತು. ಹಾಗಾದರೆ ತಂದೆಯ ಈಗಿನ ವಯಸ್ಸು ಎಷ್ಟು?*
A)15
B)30
C)42
D)55


ಬಿಡಿಸುವ ವಿಧಾನ:

  ಈಗಿನ ವಯಸ್ಸು x ಆಗಿರಲಿ.
  20 ವರ್ಷಗಳ ಹಿಂದೆ=x-20
  ಈಗಿನ ವಯಸ್ಸಿನ=1/3x
Therefore.
          X-20=    1x
                    ----------
                         3
       3x-60=1x
      3x-1x=60
       2x=60
      X=30
ತ೦ದೆಯ ಈಗಿನ ವಯಸ್ಸು 30 ವರ್ಷ.


*೭)20 ವರ್ಷ ಗಳ ನಂತರ ರವಿಯ ವಯಸ್ಸು ಈಗಿನ ವಯಸ್ಸಿನ 5/3 ಭಾಗವಾಗುತ್ತದೆ.ಹಾಗಾದರೆ ರವಿಯ ಈಗಿನ ವಯಸ್ಸು ಎಷ್ಟು?*
A)25
B)30
C)35
D)40

ಬಿಡಿಸುವ ವಿಧಾನ:

 ರವಿಯ ಈಗಿನ ವಯಸ್ಸು x ಆಗಿರಲಿ.
  20 ವರ್ಷಗಳ ನಂತರ=x+20
  ಈಗಿನ ವಯಸ್ಸಿನ=5/3x
Therefore.
          X+20=    5x
                    ----------
                         3
       3x+60=5x
      3x-5x=-60
       -2x=-60
      X=30
ರವಿಯ ಈಗಿನ ವಯಸ್ಸು 30 ವರ್ಷ.


*೮)30 ರಿಂದ 50 ರ ನಡುವಿನ ಎಲ್ಲಾ ಅವಿಭಾಜ್ಯ ಸಂಖ್ಯೆಗಳ ಸರಾಸರಿ ಎಷ್ಟು?*
A)28.6
B)34.5
C)39.8
D)43.9

ಬಿಡಿಸುವ ವಿಧಾನ:

 30 ರಿಂದ 50 ರ ನಡುವಿನ ಅವಿಭಾಜ್ಯ ಸಂಖ್ಯೆಗಳು=31,37,41,43,47
ಸರಾಸರಿ=ಮೊತ್ತ
               ----------
                ಸಂಖ್ಯೆ
    =31+37+41+43+47
       -----------------------------
                 5
      =199/5
       =39.8


*೯)10,20,30,40&X ಈ ಎಲ್ಲಾ ಸಂಖ್ಯೆ ಗಳ ಸರಾಸರಿಯು 60 ಆದರೆ X ನ ಬೆಲೆ ಎಷ್ಟು?*
A)200
B)250
C)300
D)350

ಬಿಡಿಸುವ ವಿಧಾನ:
   ಸರಾಸರಿ=60 ಆದರೆ

  10.    20.    30.   40.      X
  ⬇.   ⬇.    ⬇.  ⬇.   ⬇
   50.    40.     30.   20.    60
X=50+40+30+20+60
X=200


*೧೦)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಕಳೆದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)15
B)20
C)25
D)30

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100-----------➡25-5
       -----------➡20


*೧೧)100 ಸಂಖ್ಯೆ ಗಳ ಸರಾಸರಯುಿ 25.ಪ್ರತಿಯೊಂದು ಸಂಖ್ಯೆಯಿಂದ 5 ನ್ನು ಗುಣಸಿದರೆ ಸಿಗುವ ಹೊಸ ಸರಾಸರಿ ಸಂಖ್ಯೆ ಯಾವದು?*
A)120
B)125
C)130
D)225

ಬಿಡಿಸುವ ವಿಧಾನ:
ಸರಾಸರಿ  ಸಂಖ್ಯೆ=25
100-----------➡25×5
       -----------➡125

7.2.17

ದಡಾರ, ರೆಬೆಲ್ಲೋ

💐💐 *ದಡಾರ, ರೆಬೆಲ್ಲೋ ಎಂದರೇನು?  ಅದಕ್ಕಿರುವ ಪರಿಹಾರವೇನು?  MR ಲಸಿಕೆ ಎಂದರೇನು? ಸಂಪೂರ್ಣ ಮಾಹಿತಿ*💐💐


💐 *ದಡಾರ ಎಂದರೇನು?*💐

► *ದಡಾರ ಒಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಯಾರೊಮಿಕ್ಸ್ ಎಂಬ ವೈರಸ್ ಈ ರೋಗಕ್ಕೆ ಕಾರಣವಾಗಿದೆ. ಪಾರಾ ಮಿಕ್ಸೋ ಗುಂಪಿಗೆ ಸೇರಿದ " ಮೋರ್ಬಿಲಿ " ಎನ್ನುವ ವೈರಸ್ ಗಳಿಂದ ಉದ್ಭವಿಸುವ ದಡಾರವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಎಂದು ಕರೆಯುತ್ತಾರೆ.*
► *ಈ ಕಾಯಿಲೆ ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಂಕ್ರಾಮಿಕವಾಗಿ ಹರಡಿ ತೀವ್ರ ರೂಪವನ್ನು ತಾಳುವ ಈ ವ್ಯಾಧಿಯು, ಆರು ತಿಂಗಳ ಒಳಗಿನ ಹಸುಗೂಸುಗಳನ್ನು ಬಾಧಿಸದು. ಆದರೆ ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಪೀಡಿಸುವ ಈ ವ್ಯಾಧಿಯು ಬೇಸಗೆಯ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.*

💐 *ದಡಾರದ ಲಕ್ಷಣಗಳೇನು?*💐

► *ತೀವ್ರವಾದ ಶ್ವಾಸಕೋಶದ ಸೋಂಕು*
► *ಜ್ವರ, ಕೆಮ್ಮು, ನೀರಿನಿಂದ ಕೂಡಿದ ಕಣ್ಣು ಮತ್ತು ಸಿಂಬಳ ಸುರಿಯುವುದು*
► *ಬಾಯಿಯಲ್ಲಿ ಕೆಂಪಾದ ತಿಳಿನೀಲಿ ತುದಿಯ ಗುಳ್ಳೆಗಳಾಗುತ್ತವೆ*
► *ದೇಹದ ಪೂರ್ತಿ ಚರ್ಮದ ಮೇಲೆ ಚಿಕ್ಕಚಿಕ್ಕ ಗುಳ್ಳೆಗಳು*
► *ಪ್ರಾಥಮಿಕ ಹಂತದಲ್ಲಿ ಜ್ವರ, ಮೈ ಕೈ ನೋವು*
► *ಮೂಗಿನಿಂದ ನೀರಿಳಿಯುವುದು,*
► *ಕರ್ಕಶವಾದ ಸದ್ದಿನೊಂದಿಗೆ ಕೆಮ್ಮು*
► *ಕಣ್ಣಾಲಿಗಳ ಉರಿಯೂತ ಹಾಗೂ ಬೆಳಕನ್ನು ನೋಡಲಾಗದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ.*
► *ಕೆಲ ಮಕ್ಕಳಲ್ಲಿ ಜ್ವರ ಮತ್ತು ಕೆಮ್ಮುಗಳು ಕ್ಷಿಪ್ರಗತಿಯಲ್ಲಿ ಉಲ್ಬಣಿಸುವುದುಂಟು. ಮುಂದಿನ ಒಂದೆರಡು ದಿನಗಳಲ್ಲೇ ಮಗುವಿನ ಬಾಯಿಯ ಒಳಭಾಗದಲ್ಲಿ "ಕಾಪ್ಲಿಕ್ಸ್ ಸ್ಪಾಟ್" ಎಂದು ಕರೆಯಲ್ಪಡುವ, ಮಧ್ಯದಲ್ಲಿ ಬಿಳಿಯ ಚುಕ್ಕೆಯಿರುವ ಕೆಂಪು ಗುಳ್ಳೆಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ.*

► *ಮುಂದಿನ 3 ರಿಂದ 5 ದಿನಗಳ ಬಳಿಕ ಮಗುವಿನ ಮುಖ- ಕುತ್ತಿಗೆಗಳ ಮೇಲೆ ಪ್ರತ್ಯಕ್ಷವಾಗುವ "ಬೆವರುಸಾಲೆ"ಯಂತಹ ಅಸಂಖ್ಯ ಗುಳ್ಳೆಗಳು ಕ್ರಮೇಣ ಕೈ, ಎದೆ, ಹೊಟ್ಟೆ,ತೊಡೆ ಮತ್ತು ಕಾಲುಗಳ ಮೇಲೆ ಹರಡುತ್ತವೆ. ಈ ಹಂತದಲ್ಲಿ ಕಾಪ್ಲಿಕ್ಸ್ ಸ್ಪಾಟ್ ಗಳು ಮಾಯವಾಗುತ್ತವೆ. ಶರೀರದಾದ್ಯಂತ ಮೂಡಿರುವ ಗುಳ್ಳೆಗಳ ಸಂಖ್ಯೆ ಅತಿಯಾಗಿದ್ದಲ್ಲಿ ವ್ಯಾಧಿಯ ತೀವ್ರತೆಯೂ ಅತಿಯಾಗಿರುತ್ತದೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಯವಾಗಲು ಆರಂಭಿಸುತ್ತವೆ.*

💐 *ದಡಾರ ಸಾಮಾನ್ಯವಾಗಿ ಯಾವ ವಯೋಮಿತಿಯಲ್ಲಿ ಕಂಡುಬರುತ್ತದೆ?*💐


► *ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಕಂಡುಬರುತ್ತದೆ.*
*ಕೆಲವೊಂದು ಉದಾಹರಣೆಗಳಲ್ಲಿ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಆದರೆ ಇದು ಹೆಚ್ಚಾಗಿ ಮಕ್ಕಳಲ್ಲಿ* *ಕಂಡುಬರುತ್ತದೆ.ದಡಾರ ಸಾಮಾನ್ಯವಾಗಿ 15 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ.*

💐 *ನಿಮಗೆ ತಿಳಿದಿರಲಿ*💐

► *ದಡಾರ ರೋಗಪೀಡಿತ ಮಕ್ಕಳ ಜೊಲ್ಲಿನ ಕಣಗಳಿಂದ ಹಾಗೂ ರೋಗಿಯೊಂದಿಗೆ ನೇರ ಸಂಪರ್ಕವಿರುವ ವ್ಯಕ್ತಿಗಳಿಂದ ಈ ವೈರಸ್ ಇತರರಿಗೆ ಹರಡಬಲ್ಲದು. ಆರೋಗ್ಯವಂತರ ಶರೀರದಲ್ಲಿ ಪ್ರವೇಶ ಗಳಿಸಿದ ಈ  ವೈರಸ್, 7 ರಿಂದ 14ದಿನಗಳಲ್ಲಿ ದಡಾರದ ಲಕ್ಷಣಗಳನ್ನು ತೋರುವುದು.*

► *ಶರೀರದಾದ್ಯಂತ ಉದ್ಭವಿಸಿದ ಗುಳ್ಳೆಗಳು ಸ್ಪಷ್ಟವಾಗಿ ಗೋಚರಿಸುವ ಸಂದರ್ಭದಲ್ಲಿ, ಮಕ್ಕಳಲ್ಲಿ ತೀವ್ರ ಜ್ವರ ಹಾಗೂ ಕೆಮ್ಮಿನೊಂದಿಗೆ ದೇಹದ ಎಲ್ಲಾ ಭಾಗಗಳಲ್ಲೂ ಅಸಹನೀಯ ತುರಿಕೆ ಬಾಧಿಸುತ್ತದೆ. ಅಂತಿಮ ಹಂತದಲ್ಲಿ ಜ್ವರ ಹಾಗೂ ಕೆಮ್ಮುಗಳು ಕಡಿಮೆಯಾಗುತ್ತಾ ಬಂದಂತೆಯೇ, ಶರೀರದ ಮೇಲೆ ಮೂಡಿದ ಗುಳ್ಳೆಗಳು ಬಾಡುತ್ತಾ ಬಂದು ಕೊನೆಗೆ ಈ ಭಾಗದ ಚರ್ಮದ ಮೇಲ್ಪದರವು ನಿಧಾನವಾಗಿ ಎದ್ದುಬರುತ್ತದೆ.

► *ದಡಾರ ಪೀಡಿತ ಮಕ್ಕಳಲ್ಲಿ ಮೀಸಲ್ಸ್ ವೈರಸ್ ಗಳ ದುಷ್ಪರಿಣಾಮಗಳಿಂದ ಹಾಗೂ ಕೆಲವಿಧದ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಅನೇಕ ಸಮಸ್ಯೆಗಳು ಉದ್ಭವಿಸಿವ ಸಾಧ್ಯತೆಗಳಿವೆ. ಇವುಗಳಲ್ಲಿ ಸ್ಟ್ರೆಪ್ಟೋಕಾಕಸ್, ಸ್ಟೆಫೈಲೊಕಾಕಸ್, ನ್ಯೂಮೊಕಾಕಸ್ ಮತ್ತು ಇನ್ಫ್ಲುಯೆಂಜೆ ರೋಗಾಣುಗಳು ಪ್ರಮುಖವಾಗಿವೆ.*

► *ದಡಾರ ಉಳ್ಬನಿಸಿದಲ್ಲಿ ಉರಿಯೂತಕ್ಕೊಳಗಾದ ಕಣ್ಣಾಲಿಗಳಿಗೆ ಹಾಗೂ ಕಿವಿಗಳಿಗೆ ತಗಲಬಹುದಾದ ಇತರ ಸೋಂಕುಗಳು, ಗಂಭೀರ ತೊಂದರೆಗಳಿಗೂ ಕಾರಣವೆನಿಸಬಹುದು. ಅದೇ ರೀತಿಯಲ್ಲಿ ನಿಗದಿತ ಅವಧಿಯ ಬಳಿಕವೂ ಕಾಡುವ ಜ್ವರವನ್ನು ಸೂಕ್ತ ಚಿಕಿತ್ಸೆಯಿಂದ ನಿವಾರಿಸಿಕೊಳ್ಳಬಹುದು. ಇದಲ್ಲದೇ ಚಿಕ್ಕಮಕ್ಕಳಲ್ಲಿ ಬ್ರೊಂಕೋ ನ್ಯುಮೋನಿಯಾ ಹಾಗೂ ತುಸು ದೊಡ್ಡ ಮಕ್ಕಳಲ್ಲಿ ಲೋಬಾರ್ ನ್ಯುಮೋನಿಯಾದಂತಹ ಸಮಸ್ಯೆಗಳು ಕಂಡುಬರಬಹುದು.*

► *ಮೀಸಲ್ಸ್ ವ್ಯಾಧಿಪೀಡಿತ ಶೇ. 50 ರಷ್ಟು ಮಕ್ಕಳಿಗೆ ಬ್ರಾಂಕೈಟಿಸ್ ಅಥವಾತೀವ್ರ ರೂಪದ ಲಾರಿಂಗೊ ಟ್ರೇಕಿಯೋ ಬ್ರಾಂಕೈಟಿಸ್ ನಂತಹ ಸಮಸ್ಯೆಗಳು ಬಾಧಿಸುತ್ತವೆ. ಜೊತೆಗೆ ಈ ಸಂದರ್ಭದಲ್ಲಿ ಉದ್ಭವಿಸಬಲ್ಲ "ವೈರಲ್ ನ್ಯುಮೋನಿಯ' ಉಲ್ಬಣಿಸಿದಲ್ಲಿ, ರೋಗಿಯ ಮರಣಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ.*

► *ಕೆಲ ಮಕ್ಕಳಲ್ಲಿ ಅತಿಯಾದ ಬಾಯಿಹುಣ್ಣುಗಳು ಹಾಗೂ ರಕ್ತ ಮಿಶ್ರಿರ ಮಲವಿಸರ್ಜನೆಗಳಂತಹ ತೊಂದರೆಗಳು ಬಾಧಿಸಬಹುದು. ಕ್ಷಯ ರೋಗ ಪೀಡಿತ ಮಗುವಿಗೆ ದಡಾರ ಬಾಧಿಸಿದ ಸಂದರ್ಭದಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವುದರಿಂದ, ಚಿಕಿತ್ಸೆ ನೀಡುವ ವೈದ್ಯರು ಮತ್ತು ಕಂದನ ಆರೈಕೆ ಮಾಡುವ ಮಾತಾಪಿತರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುವುದು.*

► *ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ "ಎನ್ಸೆಫಲೈಟಿಸ್" ಹಾಗೂ" ಹೆಮೊರೇಜಿಕ್ ಮೀಸಲ್ಸ್ " ಎನ್ನುವ ರಕ್ತಸ್ರಾವಕ್ಕೆ ಕಾರಣವೆನಿಸಬಲ್ಲ ವಿಶಿಷ್ಟ ಸಮಸ್ಯೆಗಳು ಪ್ರಾಣಾಪಾಯಕ್ಕೂ ಕಾರಣವೇನಿಸಬಲ್ಲವು.*

💐 *ಯಾವಾಗ? ಎಷ್ಟೆಷ್ಟು?*💐

► *ರಾಜ್ಯದಲ್ಲಿ 2014ರಲ್ಲಿ 903 ಮಕ್ಕಳಲ್ಲಿ ದಡಾರ ಕಾಣಿಸಿಕೊಂಡಿತ್ತು.  2015ರಲ್ಲಿ 285 ಹಾಗೂ 2016ರ ಜನವರಿಯಿಂದ ಈವರೆಗೆ (ಕೇವಲ 6 ತಿಂಗಳಲ್ಲಿ) 265 ಮಕ್ಕಳಲ್ಲಿ ದಡಾರ ಕಾಣಿಸಿಕೊಂಡು ಆತಂಕ ತಂದೊಡ್ಡಿದೆ.*

💐 *ಮುನ್ನೆಚ್ಚರಿಕೆ ಏನು?*💐

► *ದಡಾರ ರೋಗಿಯ ಬಾಯಲ್ಲಿ, ಮೂಗಿನಲ್ಲಿ ಮತ್ತು ಗಂಟಲ ಸ್ರವಿಕೆಯಲ್ಲಿ ವೈರಸ್ಗಳಿರುತ್ತವೆ. ರೋಗಿ ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ವೈರಸ್ಗಳು ಸೇರುತ್ತವೆ. ಉಸಿರಾಟದ ಮೂಲಕ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಪ್ರವೇಶಿಸಿ, ರೋಗ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ಆರೋಗ್ಯವಂತ ಮಗುವಿಗೆ ಸೋಂಕಿನ ಮೂಲಕ ದಡಾರ ಹರಡುತ್ತದೆ.*
*ದಡಾರ ರೋಗಿ ಉಪಯೋಗಿಸಿದ ಸೋಂಕಿನಿಂದ ಕೂಡಿದ ವಸ್ತುಗಳಿಂದಲೂ ಸೋಂಕು ಹರಡಬಹುದು. ರೋಗ ಕಾಣಿಸಿಕೊಂಡ ಪ್ರಾರಂಭದ ಐದು ದಿನಗಳವರೆಗೆ ಸೋಂಕು* *ತೀವ್ರವಾಗಿರುವುದರಿಂದ ಬೇರೆ ಮಕ್ಕಳಿಂದ ಮಗುವನ್ನು ಪ್ರತ್ಯೇಕವಾಗಿರಿಸುವುದು* *ಅಗತ್ಯ. ದಡಾರ ತಡೆಗಟ್ಟುವ ಚುಚ್ಚುಮದ್ದನ್ನು ಕೊಡಿಸದಿದ್ದರೆ ಮಗುವಿಗೆ ದಡಾರ ರೋಗ ಬರುವ ಸಾಧ್ಯತೆ ಹೆಚ್ಚು. ಎಳೆಯ ಮಕ್ಕಳಲ್ಲಿ ಮತ್ತು ಅಪೌಷ್ಠಿಕತೆ ಹೊಂದಿರುವ ಮಕ್ಕಳಲ್ಲಿ ದಡಾರ ಬಹಳ ತೀವ್ರ ತೊಡಕನ್ನುಂಟು* *ಮಾಡುತ್ತದೆ. ದಡಾರ ಪ್ರಾಣಕ್ಕೆ ಹಾನಿಕಾರಕ ಅಲ್ಲವಾದರೂ, ಮಕ್ಕಳಿಗೆ ಸ್ವಲ್ಪಮಟ್ಟಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದಾಗಿ ಮಕ್ಕಳು ಕಿರಿಕಿರಿ ಮಾಡುತ್ತವೆ.*

 ► *ದಡಾರ ಇರುವ ಮಗುವನ್ನು ಶಾಲೆಗೆ ಕಳುಹಿಸಿದಲ್ಲಿ ಇತರ ಮಗುವಿಗೂ ರೋಗ ಅಂಟುವ ಸಾಧ್ಯತೆ ಹೆಚ್ಚು. ಈ ರೋಗ ಕಾಣಿಸಿಕೊಳ್ಳುವ ಮೊದಲನೇ ದಿನ ಜ್ವರ ಬರುತ್ತದೆ. ಆರಂಭದಲ್ಲಿ ಮುಖದ ಮೇಲಷ್ಟೇ ಕಾಣಿಸಿಕೊಳ್ಳುವ ನೀರಗುಳ್ಳೆಗಳು ದಿನಗಳೆದಂತೆ ಹೊಟ್ಟೆ ಹಾಗೂ ದೇಹದ ಇತರ ಭಾಗಕ್ಕೂ ವಿಸ್ತರಿಸುತ್ತವೆ. ನೀರ ಗುಳ್ಳೆಗಳಿಂದ ಪ್ರಾರಂಭದಲ್ಲಿ ಸ್ವಲ್ಪ ನವೆ ಇರುತ್ತದೆ. ಮೊದಲು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ದಡಾರ ಇತ್ತೀಚಿನ ವರ್ಷಗಳಲ್ಲಿ 18 ರಿಂದ 40 ವರ್ಷ ವಯೋವಾನದವರಲ್ಲೂ ಕಂಡುಬರುತ್ತಿದೆ. ಮಕ್ಕಳಲ್ಲಿ ದಡಾರ ಕಾಣಿಸಿಕೊಂಡರೆ ಅಮ್ಮ ಅಥವಾ ದೇವಿಯ ಕಾಟವೆಂಬ ಮೂಢನಂಬಿಕೆಯಿಂದ ಕೆಲವರು ದೇವಸ್ಥಾನಗಳಿಗೆ ತೆರಳಿ, ಎಣ್ಣೆ ಹಾಕಿ ಬರುತ್ತಾರೆ. ಇದರ ಬದಲು ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದಲ್ಲಿ ಮಗು ಬೇಗ ಗುಣಮುಖವಾಗುತ್ತದೆ.*

💐 *ಚಿಕಿತ್ಸೆ*💐
► *ದಡಾರಕ್ಕೆ ಯಾವುದೇ ರೀತಿಯ ಔಷಧಗಳಿಲ್ಲ ಆದರೆ ಈ ಸಾಂಕ್ರಾಮಿಕ ರೋಗಕ್ಕೆ     ನೀಡುವ ಚುಚ್ಚು ಮದ್ದನ್ನು  ನೀಡಿದಾಗ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.*
*ಮಗು ಹುಟ್ಟಿದ 9 ತಿಂಗಳಿಗೆ ಹಾಗೂ 16ರಿಂದ 24 ತಿಂಗಳಿಗೆ ಒಂದರಂತೆ 2 ಬಾರಿ ದಡಾರದ ಚುಚ್ಚುಮದ್ದನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ*

💐 *ರೆಬೆಲ್ಲೋ  ಎಂದರೇನು?*💐

 ► *ಇದನ್ನು ಜರ್ಮನ್ ದಡಾರ ಎಂದು ಕರೆಯುತ್ತಾರೆ. ರುಬೆಲ್ಲಾ' ಕೂಡ ವೈರಾಣುವಿನಿಂದ ಆಗುವ ಸೋಂಕಾಗಿದ್ದು, ಮಕ್ಕಳು ಹಾಗೂ ಪ್ರಾಯದವರಲ್ಲಿ (ದೊಡ್ಡವರಲ್ಲಿ) ಕಂಡುಬರುತ್ತದೆ*

💐 *ಲಕ್ಷಣಗಳು*💐
► *ಮುಖದಲ್ಲಿ ಮೊದಲು ಕೆಂಪು ಕಲೆ ಕಂಡು ಬರುತ್ತದೆ.*
► *ಗಂಟಲಲ್ಲಿ ಊತ ಕಾಣಿಸಿಕೊಳ್ಳುವುದು*
► *ಜ್ವರ, ವಾಂತಿ, ಗಂಟು ನೋವು*
► *ದೊಡ್ಡವರಲ್ಲಿ ಸಂದಿ ವಾತ, ದುಗ್ದರಸ ಗ್ರಂಥಗಳ ಊತ*

► *ಗರ್ಭಾವಸ್ಥೆಯಲ್ಲಿ ಈ ರೋಗ ತಾಯಿಯಲ್ಲಿ ಕಾಣ ಬಂದರೆ, ಮಗುವಿನ ಜೀವಕ್ಕೆ ಹಾನಿಯಾಗಬಹುದು, ಅಥವಾ ಅವಧಿ ಪೂರ್ವ ಜನನವಾದಲ್ಲಿ ಮಕ್ಕಳಲ್ಲಿ ವಿಕಲಾಂಗತೆ ಕಾಣಬಹುದು ► ಹುಟ್ಟಿದ ಮಗುವಿನಲ್ಲಿ ತೀವ್ರವಾದ ಜನ್ಮಜಾತ ತೊಂದರೆಗಳು - ಕಣ್ಣಿನ ಪೊರೆ, ಗ್ಲಕೋಮಾ, ಕಿವುಡುತನ, ಹೃದಯದ ತೊಂದರೆಗಳು, ಯಕೃತ್-ಗುಲ್ಮದ ತೊಂದರೆಗಳು, ತಲೆ ಕಿರಿದಾಗಿರುವುದು. ಮಂದಬುದ್ಧಿ, ರಕ್ತದ ತೊಂದರೆ ಇರಬಹುದು. ಈ ತೊಂದರೆಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ.*

💐 *ಇತರ ಮಾಹಿತಿ*💐

► *"ದಡಾರದಿಂದ ಪ್ರತೀ ವರ್ಷ 1 ಲಕ್ಷದಷ್ಟು ಮಕ್ಕಳು ಸಾವನ್ನಪ್ಪುತ್ತಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತದಲ್ಲಿ ಸಾವಿಗೀಡಾಗುತ್ತಾರೆ. ಆದ್ದರಿಂದ Congenital Rubella Syndrome ಅನ್ನು 2020ರ ಒಳಗೆ ಹೋಗಲಾಡಿಸುವ ಗುರಿ ಹೊಂದಿದೆ.*

► *MR ಲಸಿಕೆ ಅಭಿಯಾನದ ತಾರೀಕು ಹಾಗೂ ಜಾಗ ಎಲ್ಲಾ ಅರ್ಹ ಮಕ್ಕಳಿಗೆ ಶಾಲೆ, ಗ್ರಾಮೀಣ/ನಗರ ಪ್ರದೇಶದಲ್ಲಿರುವ ಆರೋಗ್ಯ ಉಪಕೇಂದ್ರ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯದ ಆರೋಗ್ಯ ಕೇಂದ್ರ ಹಾಗೂ ಇತರ ಸರಕಾರಿ ಆಸ್ಪತ್ರೆಗಳಲ್ಲಿ MR ಲಸಿಕೆಯನ್ನು ನೀಡಲಾಗುವುದು. ಆರೋಗ್ಯ ಕಾರ್ಯಕರ್ತರಾದ ಹಾಗೂ ಇತರ ಕಾರ್ಯಕರ್ತೆಯರಾದ ಆಶಾ/ಅಂಗನವಾಡಿ ಕಾರ್ಯಕರ್ತರು, MR ಲಸಿಕೆಯ ಬಗ್ಗೆ ಕುಟುಂಬ/ತಾಯಂದಿರು/ಪೋಷಕರಿಗೆ ತಿಳಿಸುತ್ತಾರೆ. ಅವರು MR ಲಸಿಕೆ ನೀಡುವ ತಾರೀಕು ಹಾಗೂ ಜಾಗದ ಮಾಹಿತಿ ಇರುವ ಆಮಂತ್ರಣ ಪತ್ರವನ್ನು ಅರ್ಹ ಮಕ್ಕಳ ಪೋಷಕರಿಗೆ ಹಂಚುತ್ತಾರೆ. ಅಭಿಯಾನದಲ್ಲಿ MR ಲಸಿಕೆಯನ್ನು ತರಬೇತಿ ಹೊಂದಿದ MNM/ ದಾದಿಯರ ಮೂಲಕ ನೀಡಲಾಗುವುದು. ಲಸಿಕೆ ಅಭಿಯಾನದ ಮೊದಲು ಶಿಕ್ಷಕ-ರಕ್ಷಕರ ಸಭೆಯನ್ನು ನಡೆಸಿ, ಅವರಿಗೆ ಸೂಕ್ತ ಮಾಹಿತಿಯನ್ನು ನೀಡಲಾಗುವುದು.*

💐 *MR ಲಸಿಕೆಯ ವ್ಯತಿರಿಕ್ತ ಪರಿಣಾಮಗಳು?*💐
► *MR ಲಸಿಕೆಯು ಒಂದು ಸುರಕ್ಷಿತ ಲಸಿಕೆಯಾಗಿದ್ದು, ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ, ಅವರ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮಗಳಲ್ಲಿ/ಲಸಿಕಾ ಅಭಿಯಾನಗಳಲ್ಲಿ ಉಪಯೋಗಿಸುತ್ತಿದ್ದಾರೆ. ಲಕ್ಷಾಂತರ ಮಕ್ಕಳು. MR ಲಸಿಕೆಯನ್ನು ಪಡೆದು ಸುರಕ್ಷಿತರಾಗಿದ್ದಾರೆ.*

💐 *ದಡಾರ ಮತ್ತು ರುಬೆಲ್ಲ ಲಸಿಕೆ ಅಭಿಯಾನ - 2017*💐



► *ಭಾರತ ಸರಕಾರವು ಮೊದಲನೇ ಹಂತದ ದಡಾರ ಮತ್ತು ರುಬೆಲ್ಲ ಲಸಿಕೆ ಅಭಿಯಾನವನ್ನು ಈ ಕೆಳಗಿನ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಮ್ಮಿಕೊಂಡಿದೆ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ಲಕ್ಷದ್ವೀಪ, ಈ ಅಭಿಯಾನವು ನಮ್ಮ ರಾಜ್ಯದಲ್ಲಿ ಫೆ.7ರಿಂದ 28ನೇ ಫೆಬ್ರವರಿ ತನಕ ಜರಗಲಿದೆ.*

► *ಕರ್ನಾಟಕದಲ್ಲಿ ಒಂಬತ್ತು ತಿಂಗಳಿನಿಂದ - 15 ವರ್ಷದವರೆಗಿನ 1.6 ಕೋಟಿ ಮಕ್ಕಳಿದ್ದು, MR ಲಸಿಕೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.*

► *MR ಲಸಿಕೆಯನ್ನು ಶಾಲೆ, ಸರಕಾರಿ ಆಸ್ಪತ್ರೆ, ಅಂಗನವಾಡಿ ಹಾಗೂ ಮೊಬೈಲ್ ತಂಡದ ಮೂಲಕ ಮೂರು ವಾರಗಳ ಅವಧಿಯಲ್ಲಿ ನೀಡಲಾಗುವುದು.*

► *ಈ ಅಭಿಯಾನವು ನಮ್ಮ ರಾಜ್ಯದಲ್ಲಿ ಫೆಬ್ರವರಿ 7ರಿಂದ 28ನೇ ಫೆಬ್ರವರಿ ತನಕ ಜರಗಲಿದೆ.*

► *ಈ ಅಭಿಯಾನದ ಅನಂತರ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ದಡಾರದ ಬದಲು MR ಲಸಿಕೆಯನ್ನು 9-12 ತಿಂಗಳು ಹಾಗೂ 16-24 ತಿಂಗಳಲ್ಲಿ ನೀಡಲಾಗುವುದು.*

💐 *MR ಲಸಿಕಾ ಅಭಿಯಾನದಲ್ಲಿ ಯಾರಿಗೆ ಲಸಿಕೆ ನೀಡಬೇಕು?*💐


► *9 ತಿಂಗಳು ಪೂರ್ಣಗೊಂಡ ಹಾಗೂ 15 ವರ್ಷದ ಕೆಳಗಿನ ಮಕ್ಕಳು.*

► *ಅವರು ಹಿಂದೆ MMR ಅಥವಾ ದಢಾರದ ಲಸಿಕೆಯನ್ನು ಪಡೆದಿದ್ದರೂ, ಎಲ್ಲ ಮಕ್ಕಳು MR ಲಸಿಕೆಯನ್ನು ಪಡೆಯಬೇಕು.*

► *ಈ ಹಿಂದೆ ದಢಾರ ಅಥವಾ ರುಬೆಲ್ಲ ಕಾಯಿಲೆಯಿಂದ ಬಳಲಿದ್ದರೂ ಈ ಪ್ರಾಯದ ಎಲ್ಲ ಮಕ್ಕಳಿಗೂ MR ಲಸಿಕೆಯನ್ನು ಅಭಿಯಾನದಡಿಯಲ್ಲಿ ನೀಡಬೇಕು.*

► *ಅಪೌಷ್ಟಿಕತೆ ಇರುವ ಮಕ್ಕಳಿಗೆ ಈ ಕಾಯಿಲೆಗಳಿಂದ ತೊಂದರೆ/ಸಾವು, ಬರುವ ಸಾಧ್ಯತೆ ಇರುವುದರಿಂದ MR ಲಸಿಕೆಯನ್ನು ಅಗತ್ಯವಾಗಿ ನೀಡಬೇಕು.*

► *ಸಣ್ಣ ಪ್ರಮಾಣದ ಜ್ವರ, ಶೀತ, ಭೇದಿ. ಇದ್ದಲೂ ಕೂಡ MR ಲಸಿಕೆಯನ್ನು ಅಭಿಯಾನದ ಮೂಲಕ ಮಕ್ಕಳಿಗೆ ಹಾಕಿಸಬೇಕು.*

*MR ಲಸಿಕೆ ಹಾಗೂ ಲಸಿಕೆ ಅಭಿಯಾನದ ಬಗ್ಗೆ ಕೆಲವು ಸತ್ಯಗಳು*

► *MR ಲಸಿಕೆ ಪಡೆಯುವುದರಿಂದ ದಡಾರ ಹಾಗೂ ರುಬೆಲ್ಲ ವಿರುದ್ಧ ಜೀವನ ಪರ್ಯಂತ ಸುರಕ್ಷೆ ದೊರೆಯುತ್ತದೆ. ಏಕೆಂದರೆ ಇದೊಂದು ಬಹಳ ಪರಿಣಾಮಕಾರಿ ಲಸಿಕೆ ಆಗಿರುತ್ತದೆ.*

► *MR ಲಸಿಕೆಯಲ್ಲಿ ದಡಾರ ಹಾಗೂ ರುಬೆಲ್ಲಾ ಜತೆಗಿದ್ದರೂ, ಒಂದು ಇನ್ನೊಂದರ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುವುದಿಲ್ಲ.*

► *9 ತಿಂಗಳಿಂದ 15 ವರ್ಷದ ಎಲ್ಲ ಮಕ್ಕಳು ಈ ಅಭಿಯಾನದಲ್ಲಿ ಪಡೆದ ಲಸಿಕೆಯನ್ನು ಹೆಚ್ಚುವರಿ ಪೂರಕ ಡೋಸ್ ಎಂದು ಪರಿಗಣಿಸಬೇಕು. ಈ ಹಿಂದೆ ಲಸಿಕೆ ಅಭಿಯಾನ ಅಥವಾ ಸಾಮಾನ್ಯ ಕಾರ್ಯಕ್ರಮದಲ್ಲಿ ಲಸಿಕೆ ಪಡೆದರೂ ಆ ಡೋಸನ್ನು ಪರಿಗಣಿಸದೆ, ಈ ಅಭಿಯಾನದಲ್ಲಿ ಲಸಿಕೆಯನ್ನು ನೀಡಲಾಗುವುದು.

► *ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಗುಣಮಟ್ಟಕ್ಕೆ ಅನುಗುಣವಾಗಿ ಈ ಲಸಿಕೆಯನ್ನು ತಯಾರಿಸಲಾಗಿದೆ. ಈ ಲಸಿಕೆಯ ಮೇಲೆ VVM (ವಾಕ್ಸಿನ್ ವಯಲ್ ಮೊನಿಟರ್) ಇದ್ದು ಇದರ ಗುಣಮಟ್ಟವನ್ನು ತಿಳಿಸುತ್ತದೆ.*

💐 *MR ಲಸಿಕೆಯನ್ನು,ಅಭಿಯಾನದಲ್ಲಿ*
*ಯಾರಿಗೆ ನೀಡಬಾರದು?*

► *ಅತಿಯಾದ ಜ್ವರ ಅಥವಾ ಗಂಭೀರ ಕಾಯಿಲೆ, ಪ್ರಜ್ಞೆ ಇಲ್ಲದಿರುವ, ಅಪಸ್ಮಾರ (ಫಿಟ್ಸ್ ಕಾಯಿಲೆ)*

► *ಆಸ್ಪತ್ರೆಗೆ ಸೇರಿಸಿದ ಮಕ್ಕಳು*

► *MR ಲಸಿಕೆ ಹಿಂದೆ ಪಡೆದು ತೀವ್ರ ಅಲರ್ಜಿ ಆಗಿರುವುದು.*

►  *MR ಲಸಿಕೆಯಿಂದ ಆಗುವ ವ್ಯತಿರಿಕ್ತ ಪರಿಣಾಮಗಳು ತಾತ್ಕಾಲಿಕ ಹಾಗೂ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಬರುತ್ತವೆ. ಈ ಲಸಿಕೆಯ ಲಾಭಗಳು ಅನೇಕವಿರುವುದರಿಂದ ಈ ಲಸಿಕೆಯನ್ನು ಪಡೆಯಲು ಯಾವುದೇ ರೀತಿಯ ಅನುಮಾನಗಳಿರಬಾರದು. ಈ ಲಸಿಕೆ ಅಭಿಯಾನದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಲಸಿಕೆಯನ್ನು ನೀಡಲಾಗುವುದು.

(ಸಂಗ್ರಹ ಮಾಹಿತಿ)

4.2.17

ಸಂವಿಧಾನ

ಬೇರೆ ಬೇರೆ ದೇಶಗಳ ಸಂವಿಧಾನದಿಂದ ಎರವಲು ಪಡೆದ ಪ್ರಮುಖ ಅಂಶಗಳು



🐧 1. ಅಮೇರಿಕಾ.

    a. ಮೂಲಭೂತ ಹಕ್ಕುಗಳು.
    b. ಉಪರಾಷ್ಟ್ರಪತಿ.
    c. ನ್ಯಾಯಾಂಗ ವ್ಯವಸ್ಥೆ.


🐧2. ರಷ್ಯಾ.

    a. ಮೂಲಭೂತ ಕರ್ತವ್ಯಗಳು.


🐧3. ಬ್ರಿಟನ್.

    a. ಏಕ ನಾಗರಿಕತ್ವ.
    b. ಸಂಸದೀಯ ಸರ್ಕಾರ.


🐧4. ಐರ್ಲೆಂಡ್(ಐರಿಷ್).

    a. ರಾಜ್ಯ ನಿರ್ದೇಶಕ ತತ್ವಗಳು.


🐧5. ಜರ್ಮನಿ.

    a. ತುರ್ತು ಪರಿಸ್ಥಿತಿಗಳು.


🐧6. ಕೆನಡಾ.

    a. ಒಕ್ಕೂಟ ಸರ್ಕಾರ.
    b. ಸಂಯುಕ್ತ ಸರ್ಕಾರ.


🐧7. ಆಸ್ಟ್ರೇಲಿಯಾ.

    a. ಸಮವರ್ತಿ ಪಟ್ಟಿಗಳು.


🐧8. ದಕ್ಷಿಣ ಆಫ್ರಿಕಾ.

    a. ಸಂವಿಧಾನದ ತಿದ್ದುಪಡಿಗಳು.
     ತತ್ವಗಳು.


🐧5. ಜರ್ಮನಿ.

    a. ತುರ್ತು ಪರಿಸ್ಥಿತಿಗಳು.


🐧6. ಕೆನಡಾ.

    a. ಒಕ್ಕೂಟ ಸರ್ಕಾರ.
    b. ಸಂಯುಕ್ತ ಸರ್ಕಾರ.


🐧7. ಆಸ್ಟ್ರೇಲಿಯಾ.

    a. ಸಮವರ್ತಿ ಪಟ್ಟಿಗಳು.


🐧8. ದಕ್ಷಿಣ ಆಫ್ರಿಕಾ.

    a. ಸಂವಿಧಾನದ ತಿದ್ದುಪಡಿಗಳು.

ಭಾರತ-ವಿಶೇಷ

ಭಾರತ ದೇಶವೆಂದಾಕ್ಷಣ ಸಂಸ್ಕೃತಿ,ಸಂಪ್ರದಾಯ,ಪುರಾಣ,ಇತಿಹಾಸ, ವೇದಗಳು ,ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರು,ಅನುರಾಗ,ಆತ್ಮೀಯತೆ, ಕುಲ ಮತಗಳ ಬೇಧವಿಲ್ಲದ ಸೋದರತ್ವ,ಇವೆಲ್ಲವೂ ನಮ್ಮ ಕಣ್ಣುಮುಂದೆ ಬರುತ್ತವೆ. ಇಂದು ನಮ್ಮ ದೇಶವನ್ನು ನೋಡಿ ಇತರೆ ದೇಶಗಳು ಎಷ್ಟೋ ವಿಷಯಗಳನ್ನು ಕಲಿತುಕೊಳ್ಳುತ್ತಿವೆ. ಪ್ರಸ್ತುತ  ವಿದೇಶಗಳಲ್ಲಿ   ಉಪಯೋಗಿಸುತ್ತಿರುವ ಅನೇಕ ವಸ್ತುಗಳು ನಮ್ಮ ಬಾರತೀಯರು ಪರಿಚಯಿಸಿದುವುಗಳೇ ಆಗಿವೆ. ಅವುಗಳನ್ನು ಕುರಿತು ತಿಳಿದುಕೊಳ್ಳೋಣ.

1.ಮೊತ್ತ ಮೊದಲ ವಿಶ್ವ ವಿದ್ಯಾಲಯ :
ಪ್ರಪಂಚದ ಮೊತ್ತಮೊದಲ ವಿಶ್ವ ವಿದ್ಯಾಲಯವನ್ನು ಕ್ರಿ.ಪೂ.700 ರಲ್ಲಿ ತಕ್ಷಶಿಲೆಯಲ್ಲಿ ನಿರ್ಮಿಸಿದ್ದಾರೆ.ಇಲ್ಲಿ 300 ಭೋದನಾ ಕೊಠಡಿಗಳು,ಪ್ರಯೋಗ ಶಾಲೆಗಳು,ವಾಚನಾಲಯಗಳು, ಖಗೋಳ ಪರಿಶೋಧನೆಗೆ ಸಂಬಂಧಿಸಿದವು ಇವೆ. ಸುಮಾರು 10000 ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ವಿದ್ಯಾಭ್ಯಾಸ ನಡೆಸಿದ್ದಾರೆಂದು, 200 ಪ್ರೊಫೆಸರ್ ಗಳು ವಿದ್ಯೆಯನ್ನು ಬೋಧಿಸಿದ್ದಾರೆಂದು ಚೀನಾ ದೇಶದ ‘ಹುಯನ್ಸಾಂಗ್’ ತನ್ನ ದಿನಚರಿ ಪುಸ್ತಕದಲ್ಲಿ ಬರೆದಿಟ್ಟಿದ್ದಾನೆ.



2.ಪ್ರಪಂಚಕ್ಕೆ ‘ಸೊನ್ನೆ'(0) ಯನ್ನು ಪರಿಚಯಿಸಿದವರು ನಮ್ಮ ದೇಶದ ‘ಆರ್ಯಭಟ್ಟ’. ಸೊನ್ನೆಯಿಲ್ಲದ ಲೆಕ್ಕವನ್ನು ಊಹಿಸಲೂ ಅಸಾಧ್ಯ.



3.6 ನೇ ಶತಮಾನದಲ್ಲಿ ‘ಚೆಸ್'(ಚದುರಂಗ) ನ್ನು ಗುಪ್ತರು ಪ್ರಪಂಚಕ್ಕೆ ಪರಿಚಯಿಸಿದರು. ಇವರ ಕಾಲದಲ್ಲಿ ಕಂಡುಹಿಡಿದ ಈ ಆಟವನ್ನು ಅಂದು ‘ಚತುರಂಗ’ಎಂದು ಕರೆಯುತ್ತಿದ್ದರಂತೆ.



4. ಪ್ರಪಂಚದಲ್ಲಿ ಮೊತ್ತಮೊದಲಿಗೆ ಅಲಂಕಾರಿಕ ಗುಂಡಿಗಳನ್ನು ಕಂಡು ಹಿಡಿದವರು ನಮ್ಮವರೇ. ಸಮುದ್ರದಲ್ಲಿ ದೊರೆಯುತ್ತಿದ್ದ ಚಿಪ್ಪುಗಳನ್ನು ಅಂಗಿಗಳಿಗೆ ‘ಗುಂಡಿ’ಗಳನ್ನಾಗಿ ಉಪಯೊಗಿಸುತ್ತಿದ್ದರು. ಇವು ರೇಖಾ ಗಣಿತದ ಆಕಾರದಲ್ಲಿ ಇರುತ್ತಿದ್ದವು. ಅವುಗಳಿಗೆ ನಡುವೆ ರಂದ್ರಗಳನ್ನು ಮಾಡಿ ಗುಂಡಿಗಳಾಗಿ ಉಪಯೋಗಿಸುತ್ತಿದ್ದರು.



5. ಈಗ ನಾವು ಶಾಂಪೂ ಎಂದು ಕರೆಯುತ್ತಿರುವುದರ ಹೆಸರು ಹಿಂದಿ ಭಾಷೆಯ ‘ಚಾಂಪು’ ಪದದಿಂದ 1762 ರಲ್ಲಿ ಬೆಳಕಿಗೆ ಬಂದಿತಂತೆ. ಪೂರ್ವ ಬಾರತ ದೇಶದ ಮೊಘಲ್ ಸಾಮ್ರಾಜ್ಯದಲ್ಲಿ ಕ್ಷಾರವನ್ನು ಎಣ್ಣೆಯಲ್ಲಿ ಬೆರೆಸಿ ತಲೆಯನ್ನು ಮರ್ಧಿಸುತ್ತಿದ್ದರಂತೆ. ಬಂಗಾಳದ ವ್ಯಾಪಾರಿ ‘ಶೇಖ್ಧೀನ್ ಮೊಹಮ್ಮದ್’ ಮೊದಲಬಾರಿಗೆ ಬ್ರಿಟನ್ ದೇಶದಲ್ಲಿ ಪರಿಚಯಿಸಿದನಂತೆ.



6.ಕುಷ್ಠರೋಗ ನಿವಾರಣೆ 6 ನೇ ಶತಮಾನದಲ್ಲಿ ಭಾರತೀಯ ವೈದ್ಯರು ಕುಷ್ಠರೋಗ ನಿವಾರಣೆಗೆ ಔಷದವನ್ನು ಕಂಡುಹಿಡಿದರು. ಇದನ್ನು ಕುರಿತು ಶುಶೃತ ಸಂಹಿತೆ ಹಾಗೂ ಅಥರ್ವಣ ವೇದದಲ್ಲಿ ಉಲ್ಲೇಖಿಸಲಾಗಿದೆ.


7.ವೈಕುಂಟಪಾಳಿ ಎಂದು ಕರೆಯಲ್ಪಡುವ ಹಾವು ಏಣಿ ಆಟವನ್ನು ಭಾರತೀಯರು ಕಂಡುಹಿಡಿದಿದ್ದಾರೆ. ಇದರ ನಿಜವಾದ ಹೆಸರು’ ಮೋಕ್ಷಪತ್’. ಬಾರತನ್ನು ಬ್ರಿಟಿಷರು ಆಳುತ್ತಿದ್ದ ಸಮಯದಲ್ಲಿ ಇಂಗ್ಲೆಂಡ್ಹಾಗೂ ಅಮೆರಿಕ ದೇಶಕ್ಕೆ ಮಾರ್ಗವನ್ನು ಕಂಡುಹಿಡಿಯುವ ರೀತಿಯಲ್ಲಿ ಈ ಆಟವನ್ನು 1943 ರಲ್ಲಿ ರೂಪಿಸಿದರು.



8. ಎಂತಹ ರೋಗವನ್ನಾದರೂ ಗುಣಪಡಿಸುವ ಮೂಲಿಕೆಗಳು,ಓಷಧಿಗಳು,ಸುಗಂಧ ದ್ರವ್ಯಗಳನ್ನು ಕ್ರಿಸ್ತ ಪೂರ್ವದಲ್ಲೇ ಆಯುರ್ವೇದದಲ್ಲಿ ಬೆಳಕು ಚೆಲ್ಲಿದರು. ಎಷ್ಟೇ ಆಧುನಿಕ ವೈದ್ಯ ಪದ್ಧತಿಗಳು ಬಂದರೂ ಆಯುರ್ವೇದದ ಬಗ್ಗೆ ಹೆಚ್ಚಿನವರ ಒಲವಿದೆ.



9.7 ನೇ ಶತಮಾನದಲ್ಲಿ ಬ್ರಹ್ಮಪುತ್ರ ಅಭಿವೃದ್ಧಿಪಡಿಸಿದ ಖಗೋಳಶಾಸ್ತ್ರದ ಪ್ರಕಾರ ಭೂಮಿಗೂ ಸೂರ್ಯನಿಗೂ ಮಧ್ಯೆ ಇರುವ ದೂರ, ಸೂರ್ಯನ ಕಕ್ಷೆಯಲ್ಲಿ ಭೂಮಿ ತೆಗೆದುಕೊಳ್ಳುವ ಅವಧಿ,ನಕ್ಷತ್ರ ಮಂಡಲದ ದೂರ ಇವೆಲ್ಲವನ್ನೂ ಭಾಸ್ಕರಾಚಾರ್ಯ ನಿಖರವಾಗಿ ಹೇಳಿದ್ದಾರೆ.



10.ಬೌದ್ಧಮತ,ಜೈನಮತಗಳು ಭಾರತದಲ್ಲಿ ಜನ್ಮತಳೆದಿವೆ. ಏಷಿಯಾ ಖಂಡದವರೆಗೂ ಬೌದ್ಧಮತದ ಹಿರಿಮೆ ಗೊತ್ತಿದ್ದರೂ,ಜೈನ ಮತವು ಕೇವಲ ಭಾರತದೇಶದಲ್ಲಿ ಮಾತ್ರ ಅಭಿವೃದ್ಧಿಗೆ ಬಂದಿದೆ. ಚರಿತ್ರೆಯ ಕಾಲದಲ್ಲಿ ಈ ಎರಡೂ ಮತಗಳು ಜನ್ಮತಳೆದಿವೆ.



11. ದಶಮಾನ ಪದ್ಧತಿಯನ್ನು ಕಂಡುಹಿಡಿದವರು ನಮ್ಮ ಭಾರತೀಯರೇ.



12. ಕಣ್ಣಿಯ ಪೊರೆಯ ಚಿಕಿತ್ಸೆಯನ್ನು ಕಂಡುಹಿಡಿದವರು ನಮ್ಮ ಭಾರತೀಯರೇ. ಈ ಶಸ್ತ್ರಚಿಕಿತ್ಸೆಯಿಂದ ಕಣ್ಣಿನ ದೃಷ್ಟಿಸರಿಯಾಗಿ,ಪೊರೆಯ ಸಮಸ್ಯೆ ನಿವಾರಣೆಯಾಗುತ್ತದೆ. ನಂತರದ ಕಾಲದಲ್ಲಿ ಪ್ರಪಂಚದೆಲ್ಲೆಡೆ ಈ ಶಸ್ತ್ರ ಚಿಕಿತ್ಸಾ ಪದ್ಧತಿಗೆ ಬೆಳಕಿಗೆ ಬಂದಿತು.



13. ಗಿಡಗಳ ಬೆಳವಣಿಗೆಯನ್ನು ಅಳೆಯುವ ಸಾಧನವನ್ನು 20 ನೇ ಶತಮಾನದಲ್ಲಿ ‘ಸರ್.ಜಗಧೀಶ್ ಚಂದ್ರ ಭೋಸ್’ ಕಂಡುಹಿಡಿದರು.


14. 13 ನೇ ಶತಮಾನದಲ್ಲಿ ಕಾಶ್ಮೀರವನ್ನು ಆಳಿದ ಜೈನ್-ಉಲ್-ಅಬೀದಿ’ ಮೊದಲು ಕಾಶ್ಮಿರದ ಉಣ್ಣೆಯನ್ನು ಆವಿಸ್ಕರಿಸಿದರು.



15.ಯು.ಎಸ್.ಬಿ, ಅತಿವೇಗದ ಗ್ರಾಫಿಕ್ ಪೋರ್ಟ್,ಪವರ್ ಮೇನೇಜ್ ಮೆಂಟ್.ಪಿಸಿ ಐ ಆಕ್ಸೆಸ್ ಚಿಪ್ಸ್ ಗಳನ್ನು ಅಭಿವೃದ್ಧಿಪಡಿಸಿದ್ದು ಭಾರತದೇಶದ ಇಂಡೋ ಅಮೆರಿಕನ್ ಆರ್ಕಿಟೆಕ್ಟ್ ಅಜಯ್.ವಿ.ಭಟ್.



16 ‘ಪ್ಲೇಯಿಂಗ್ ಕಾರ್ಡ್ಸ್’ ಗಳನ್ನಾಗಿ ಉಯೋಗಿಸುತ್ತಿರುವ ಕಾರ್ಡ್ ಗಳನ್ನು ಹಿಂದೆ ನಮ್ಮ ದೇಶದಲ್ಲಿ ‘ಕೃದಪತ್ರಂ’ ಎಂಬ ಚಿತ್ರಗಳುಳ್ಳ ಕಾರ್ಡ್ ಗಳನ್ನು ನಮ್ಮ ದೇಶದಲ್ಲಿ ಉಪಯೋಗಿಸುತ್ತಿದ್ದರಂತೆ. ಅವುಗಳ ಪ್ರೇರಣೆಯಿಂದಲೇ ಇಂದಿನ ‘ಪ್ಲೇಯಿಂಗ್ ಕಾರ್ಡ್ಸ್’ ತಯಾರಾದುವಂತೆ.



17. ಸೆಣಬು ನಾರಿನಿಂದ ಹಗ್ಗ ಹೊಸೆಯುವುದು : ಹಗ್ಗದ ಉಪಯೋಗ ನಮ್ಮ ಪೂರ್ವಜರಿಂದಲೆ ಪ್ರಪಂಚಕ್ಕೆ ತಿಳಿಯಿತು.



18. 5 ನೇ ಶತಮಾನದಲ್ಲಿ ಆರ್ಯ ಭಟ್ಟ ‘ಸೊನ್ನೆ'(0) ಯನ್ನು ಕಂಡುಹಿಡಿದ,4 ನೇ ಶತಮನದಲ್ಲಿ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳನ್ನು ನಮ್ಮ ಖಗೋಳ ಶಾಸ್ತ್ರಜ್ಞರು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. 6 ನೇ ಶತಮಾನದಲ್ಲಿ ತ್ರಿಕೋಣ ಮಿತಿ ಗೆ ಸಂಬಂಧಿಸಿದ ಕೆಲವು ನಿಯಮಗಳನ್ನು,ಮೂಲ ಸೂತ್ರಗಳನ್ನು ‘ವರಾಹ ಮಿಹಿರ’ ಎಂಬ ಖಗೋಳ ಶಾಸ್ತ್ರಜ್ಞ ಕಂಡುಹಿಡಿದರು sin^2(x)+cos^2(x)=1ಇದರಲ್ಲೊಂದು.



19. ಪ್ರಪಂಚದಲ್ಲೆಡೆ ಉಪಯೋಗಿಸುತ್ತಿರುವ ‘ಪೆಂಟಿಯಂ ಚಿಪ್ಸ್’ ಅನ್ನು ಭಾರತೀಯರಾದ ‘ವಿನೋದ್ ಧಾಮ್’ ಕಂಡುಹಿಡಿದರು. ಇವರನ್ನು ‘ಪೆಂಟಿಯಂ ಚಿಪ್ಸ್’ ಜನಕ ಎಂದು ಕರೆಯುತ್ತಾರೆ. ಇವುಗಳನ್ನು ಅಭಿವೃದ್ಧಿಪಡಿಸಿ ‘ಇಂಟೆಲ್ ಪ್ರೊಸೆಸ್ಸರ್’ನ ಏಳಿಗೆಗೆ ಕಾರಣರಾದರು.


20. ಸಕ್ಕರೆಯಿಂದ ಕಲ್ಲು ಸಕ್ಕರೆಯನ್ನು ತಯಾರಿಸುವುದನ್ನು ಗುಪ್ತರ ಕಾಲದಲ್ಲೇ ಕಂಡುಹಿಡಿದಿದ್ದರು. ಈ ವಿಧಾನವನ್ನು ಚೀನೀಯರು ತಮ್ಮ ದೇಶದಲ್ಲಿ ಅಳವಡಿಸಿಕೊಂಡರು ಹೀಗೆ ಪ್ರಪಂಚದೆಲ್ಲಡೆ ಈ ವಿಧಾನವನ್ನೇ ಅನುಸರಿಸುತ್ತಿದ್ದಾರೆ.

Class / ಸಾಮಾನ್ಯ ಜ್ಞಾನ / ಕರ್ನಾಟಕದ ಮೊದಲಿಗರು

ಕನ್ನಡದ / ಕರ್ನಾಟಕದ ಮೊದಲಿಗರು


ದೊರೆ - ಮಯೂರವರ್ಮ

ಗಣಿತ ಶಾಸ್ತ್ರಜ್ಞ - ಮಹಾವೀರಾಚಾರ್ಯ

ವಚನಗಾರ - ದೇವರದಾಸಿಮಯ್ಯ


ಕನ್ನಡ ಅಕ್ಷರ ಅಚ್ಚಿನಮೊಳೆ ವಿನ್ಯಾಸ - ಅತ್ತಾವರ ಅನಂತಾಚಾರಿ

ಕನ್ನಡ ಬೆರಳಚ್ಚು ಯಂತ್ರ / ಕೀಲಿಮಣೆ -  ಅನಂತ ಸುಬ್ಬರಾವ್

ಕನ್ನಡ ಲಿಪಿಯನ್ನ ಕಂಪ್ಯೂಟರ್ ಗಳವಡಿಸಿ ಸರಳ FONT ರಚನೆ - ಕೆ.ಪಿ.ರಾವ್

ಕನ್ನಡ ಶೀಘ್ರಲಿಪಿ - ರೆವರೆಂಡ್ ಬಿ.ಲೂಥಿ

ಪ್ರಾಧ್ಯಾಪಕ - ಟಿ.ಎಸ್.ವೆಂಕಣ್ಣಯ್ಯ

ರಾಜಕೀಯ / ಅತ್ಯುನ್ನತ ಹುದ್ದೆ



ಸೇನಾ ದಂಡನಾಯಕ - ಕೆ.ಎಂ.ಕಾರ್ಯಪ್ಪ

ಪ್ರಧಾನಮಂತ್ರಿ - ಹೆಚ್.ಡಿ.ದೇವೇಗೌಡ

ರಾಜ್ಯಪಾಲ - ಜಯಚಾಮರಾಜೇಂದ್ರ ಒಡೆಯರ್

ಮುಖ್ಯಮಂತ್ರಿ - ಕೆ.ಸಿ.ರೆಡ್ಡಿ

ಏಕೀಕೃತ ಕರ್ನಾಟಕದ ಮೊದಲ ಮುಖ್ಯಮಂತ್ರಿ - ಎಸ್.ನಿಜಲಿಂಗಪ್ಪ



ಪ್ರಶಸ್ತಿ ವಿಜೇತರು

ಭಾರತರತ್ನ ಪ್ರಶಸ್ತಿ ವಿಜೇತರು - ಸರ್ ಎಂ.ವಿಶ್ವೇಶ್ವರಯ್ಯ

ಮ್ಯಾಗ್ಸೆಸೇ ಪ್ರಶಸ್ತಿ ವಿಜೇತರು - ಕೆ.ವಿ.ಸುಬ್ಬಣ್ಣ

ಜ್ಞಾನಪೀಠ ಪ್ರಶಸ್ತಿ ವಿಜೇತರು - ಕುವೆಂಪು

ಪಂಪ ಪ್ರಶಸ್ತಿ ವಿಜೇತರು - ಕುವೆಂಪು

ರಾಷ್ಟ್ರಕವಿ - ಗೋವಿಂದ ಪೈ

ಕಾಳಿದಾಸ್ ಸಮ್ಮಾನ್ ವಿಜೇತರು - ಮಲ್ಲಿಕಾರ್ಜುನ ಮನ್ಸೂರ್

ಕಬೀರ್ ಸಮ್ಮಾನ್ ವಿಜೇತರು - ಗೋಪಾಲಕೃಷ್ಣ ಅಡಿಗ

ಜಮನ್ ಲಾಲ್ ಪ್ರಶಸ್ತಿ ವಿಜೇತರು - ತಗಡೂರು ರಾಮಚಂದ್ರರಾವ್

ಗೋಯೆಂಕಾ ಪ್ರಶಸ್ತಿ ವಿಜೇತರು - ಪಾ.ವೆಂ.ಆಚಾರ್ಯ

ರಾಷ್ಟ್ರ ಪ್ರಶಸ್ತಿ ಪಡೆದ ಯಕ್ಷಗಾನ ಕಲಾವಿದ - ಹಾರಾಡಿ ರಾಮಗಾಣಿಗ

ಕನ್ನಡ ಕೆಲಸಕ್ಕೆ ಡಾಕ್ಟರೇಟ್ - ಫರ್ಡಿನೆಂಡ್ ಕಿಟ್ಟೆಲ್

ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ

ಪುಸ್ತಕ ಪ್ರಕಾಶನಕ್ಕೆ ಪದ್ಮಶ್ರೀ - ಜಿ.ಬಿ.ಜೋಷಿ

ಸೋವಿಯತ್ ಲ್ಯಾಂಡ್ ಪ್ರಶಸ್ತಿ - ಬಸವರಾಜ್ ಕಟ್ಟಿಮನಿ


ಮೊದಲಿಗ ಮಹಿಳೆಯರು


ವಚನಗಾರ್ತಿ - ಅಕ್ಕಮಹಾದೇವಿ

ಪತ್ರಕರ್ತೆ / ಪ್ರಕಾಶಕಿ - ನಂಜನಗೂಡು ತಿರುಮಲಾಂಬಾ

ನಾಟಕ ರಂಗದ ಮೇಲೆ ಮೊದಲ ಸ್ತ್ರೀ - ಗಂಗೂಬಾಯಿ ಗುಳೇದಗುಡ್ಡ

ಮಹಿಳಾ ಮಂತ್ರಿ - ಗ್ರೇಸ್ ಠಕ್ಕರ್

ಸಾಹಿತ್ಯ ಸಮ್ಮೇಳನದ ಮಹಿಳಾ ಅಧ್ಯಕ್ಷರು - ಜಯದೇವಿ ತಾಯಿ ಲಿಗಾಡೆ

ಸೋವಿಯತ್ ಲ್ಯಾಂಡ್ ಪ್ರಶಸ್ತಿ ಪಡೆದ ಕನ್ನಡಿತಿ - ಅನುಪಮಾ ನಿರಂಜನ

ನವೋದಯ ಕವಯಿತ್ರಿ - ಬೆಳಗೆರೆ ಜಾನಕಮ್ಮ




ಪತ್ರಿಕಾ ಲೋಕ



ಪತ್ರಿಕೆ - ಮಂಗಳೂರು ಸಮಾಚಾರ (೧೮೪೮)

ದಿನಪತ್ರಿಕೆ - ಸೂರ್ಯೋದಯ ಪ್ರಕಾಶಿಕ (೧೮೭೦)

ಕನ್ನಡ e-ಪತ್ರಿಕೆ - ವಿಶ್ವಕನ್ನಡ

ವಾರ ಪತ್ರಿಕೆ - ಸುಬುದ್ಧಿ ಪ್ರಕಾಶ (೧೮೫೦)


ವಿಜ್ಞಾನ ಪತ್ರಿಕೆ - ವಿಜ್ಞಾನ

ವಿಡಿಯೋ ಪತ್ರಿಕೆ - ಬೆಳ್ಳಿಚುಕ್ಕಿ

ಮಕ್ಕಳ ಪತ್ರಿಕೆ - ಮಕ್ಕಳ ಪುಸ್ತಕ

ಮಹಿಳಾ ಪತ್ರಿಕೆ - ಕರ್ನಾಟಕ ನಂದಿನಿ (೧೯೧೩)

ಸಾಹಿತ್ಯಿಕ ವೈಜ್ಞಾನಿಕ ಪತ್ರಿಕೆ - ಕರ್ನಾಟಕ ಜ್ಞಾನ ಮಂಜರಿ (೧೮೭೮)

ಶಿಕ್ಷಣ ಪತ್ರಿಕೆ - ಕನ್ನಡ ಜ್ಞಾನ ಬೋಧಿನಿ (೧೮೬೨)

ಜಿಲ್ಲಾ ಪತ್ರಿಕೆ - ಜ್ಞಾನೋದಯ (ಶಿವಮೊಗ್ಗ)

ಕಾಮಶಾಸ್ತ್ರ ಪತ್ರಿಕೆ - ಪ್ರೇಮ


ಕಾನೂನು ಪತ್ರಿಕೆ - ನ್ಯಾಯ ಸಂಗ್ರಹ

ಚಲನಚಿತ್ರ ಪತ್ರಿಕೆ - ಸಿನಿಮಾ

ಹಾಸ್ಯ ಪತ್ರಿಕೆ - ವಿಕಟ ಪ್ರತಾಪ

ಅತಿ ಹೆಚ್ಚು ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಪತ್ರಿಕೆ - ಉದಯವಾಣಿ


ಸಾಹಿತ್ಯ ಲೋಕ



ಕೃತಿ - ಕವಿರಾಜಮಾರ್ಗ

ಕಾವ್ಯ - ಆದಿಪುರಾಣ

ಗದ್ಯ - ವಡ್ಡಾರಾಧನೆ

ನಾಟಕ - ಮಿತ್ರಾವಿಂದಾ ಗೋವಿಂದಾ

ಗೀತ ನಾಟಕ - ಮುಕ್ತದ್ವಾರ

ಜ್ಯೋತಿಷ್ಯ ಗ್ರಂಥ - ಜಾತಕ ತಿಲಕ ( ಶ್ರೀಧರಾಚಾರ್ಯ )

ಸ್ವತಂತ್ರ ಪೌರಾಣಿಕ ನಾಟಕ - ಪೃಥು ವಿಜಯ

ಗಾದೆಗಳ ಸಂಕಲನ - ಕನ್ನಡ ಗಾದೆಗಳು

ಒಗಟುಗಳ ಸಂಗ್ರಹ - ಮಕ್ಕಳ ಒಡಪುಗಳು

ಪ್ರಬಂಧ ಸಂಕಲನ - ಲೋಕರಹಸ್ಯ

ಛಂದಶಾಸ್ತ್ರ ಗ್ರಂಥ - ಛಂದೋಂಬುಧಿ

ವೈದ್ಯ ಗ್ರಂಥ - ಗೋವೈದ್ಯ ( ಕೀರ್ತಿವರ್ಮ )

ವಿಷಯ ವಿಶ್ವಕೋಶ - ವಿವೇಕ ಚಿಂತಾಮಣಿ

ವಿಶ್ವಕೋಶ - ಲೋಕೋಪಕಾರ

ಮಕ್ಕಳ ವಿಶ್ವಕೋಶ - ಬಾಲ ಪ್ರಪಂಚ

ನವ್ಯತೆಯನ್ನೊಳಗೊಂಡ ಕಾದಂಬರಿ - ವಿಶ್ವಾಮಿತ್ರನ ಸೃಷ್ಟಿ (ಶ್ರೀರಂಗ)

ಮನೋವೈಜ್ಞಾನಿಕ ಕಾದಂಬರಿ - ಅಂತರಂಗ ( ದೇವುಡು )

ವ್ಯಾಕರಣ ಗ್ರಂಥ - ಶಬ್ದಮಣಿ ದರ್ಪಣ

ಲಾಕ್ಷಣಿಕ ಗ್ರಂಥ - ಕವಿರಾಜ ಮಾರ್ಗ

ಬೈಬಲ್ ಕನ್ನಡೀಕರಣ - ಜಾನ್ ಹ್ಯಾಂಡ್ಸ್

ಐತಿಹಾಸಿಕ ನಾಟಕಕಾರ - ಸಂಸ

ಪ್ರವಾಸ ಕಥನ - ದಕ್ಷಿಣ ಭಾರತ ಯಾತ್ರೆ

ಪತ್ತೇದಾರಿ ಕಾದಂಬರಿ - ಚೋರಗ್ರಹಣ ತಂತ್ರ

ಆಯುರ್ವೇದ ಗ್ರಂಥ - ಕರ್ಣಾಟಕ ಕಲ್ಯಾಣಕಾರಕ


ಸ್ವತಂತ್ರ ಸಾಮಾಜಿಕ ಕಾದಂಬರಿ - ಇಂದಿರಾಬಾಯಿ

ಐತಿಹಾಸಿಕ ಕಾದಂಬರಿ - ಮುದ್ರಾಮಂಜೂಷ

ಜೀವನಚರಿತ್ರೆ - ಕುಣಿಗಲ್ ರಾಮಾಶಾಸ್ತ್ರಿಗಳ ಜೀವನ ಚರಿತ್ರೆ

ಅಭಿನಂದನಾ ಗ್ರಂಥ - ಸಂಭಾವನೆ ( ಬಿ.ಎಂ.ಶ್ರೀ.ಯವರಿಗೆ )


ಇಂಗ್ಲೀಷ್ - ಕನ್ನಡ ನಿಘಂಟುಕಾರ - ವಿಲಿಯಮ್ ರೀವ್ಸ್

ತಾಂತ್ರಿಕ ಪದಕೋಶ - ಔದ್ಯಮಿಕ ನಿಘಂಟು


ಕಾವ್ಯ ನಿಘಂಟು - ರನ್ನಕಂದ

ಗದ್ಯ ನಿಘಂಟು - ಕರ್ಣಾಟಕ ಶಬ್ದಸಾರ

ವೈದ್ಯಕೀಯ ನಿಘಂಟು - ವೈದ್ಯ ಪದಕೋಶ



ಬಣ್ಣದ ಲೋಕ


ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ - ಬೇಡರ ಕಣ್ಣಪ್ಪ

ಐತಿಹಾಸಿಕ ಚಿತ್ರ - ರಣಧೀರ ಕಂಠೀರವ

ಮೂಕಿ ಚಿತ್ರ - ಮೃಚ್ಛಕಟಿಕ

ವರ್ಣ ಚಲನಚಿತ್ರ - ಅಮರಶಿಲ್ಪಿ ಜಕಣಾಚಾರಿ

ಚಿತ್ರಮಂದಿರ - ಪ್ಯಾರಾಮೌಂಟ್ ( ೧೯೦೫ )

ಕಾದಂಬರಿ ಆಧಾರಿತ ಚಲನಚಿತ್ರ - ಕರುಣೆಯೇ ಕುಟುಂಬದ ಕಣ್ಣು

ರಿಯಾಯಿತಿ (ಸಬ್ಸಿಡಿ ) ಪಡೆದ ಚಿತ್ರ - ನಕ್ಕರೆ ಅದೇ ಸ್ವರ್ಗ

ಸಾಮಾಜಿಕ ಚಲನಚಿತ್ರ - ಸಂಸಾರ ನೌಕೆ (೧೯೩೬)


ಚಲನಚಿತ್ರ ಹಿನ್ನೆಲೆ ಗಾಯನಕ್ಕೆ ರಾಷ್ಟ್ರ ಪ್ರಶಸ್ತಿ - ಶಿವಮೊಗ್ಗ ಸುಬ್ಬಣ್ಣ

ಚಿತ್ರ ಸಂಗೀತಕ್ಕೆ ೨ ಬಾರಿ ರಾಷ್ಟ್ರ ಪ್ರಶಸ್ತಿ - ಬಿ.ವಿ.ಕಾರಂತ್

ಭಾವಗೀತೆ ಧ್ವನಿಸುರುಳಿ - ನಿತ್ಯೋತ್ಸವ

ವೃತ್ತಿನಾಟಕ ಕಂಪೆನಿ - ಶ್ರೀ ವೀರನಾರಾಯಣ ಪ್ರಾಸಾದಿತ ಕೃತಪುರ ನಾಟಕ ಮಂಡಳಿ

ಬೀದಿ ನಾಟಕ ಪ್ರಯೋಗ -  ಕಟ್ಟು

ಹವ್ಯಾಸಿ ನಾಟಕ ತಂಡ - ಭಾರತ ಕಲೋತ್ತೇಜಕ ಸಂಗೀತ ಸಮಾಜ

ರೇಡಿಯೋ ನಾಟಕ - ನೀರಗಂಟಿ ಮಾರ ( ವಿ.ಕೆ.ಶ್ರೀನಿವಾಸನ್ )

ಪ್ರದರ್ಶನಗೊಂಡ ಅಸಂಗತ ನಾಟಕ - ಬೊಕ್ಕತಲೆಯ ನರ್ತಕಿ ( ಸುಮತೀಂದ್ರ ನಾಡಿಗ್ )

ಮೊದಲುಗಳು


ರಾಜವಂಶ - ಕದಂಬ

ಕೆರೆ - ಚಂದ್ರವಳ್ಳಿ

ಶಿಲ್ಪ - ನಾಗಶಿಲ್ಪ

ಶಾಸನ - ಹಲ್ಮಿಡಿ

ಕೋಟೆ - ಬಾದಾಮಿ ಕೋಟೆ

ಜೈನ ದೇವಾಲಯ - ಪ್ರಣವೇಶ್ವರ ದೇವಾಲಯ, ತಾಳಗುಂದ

ಬೌದ್ಧ ವಿಹಾರ - ಬನವಾಸಿ

ಅತಿ ಪ್ರಾಚೀನ ಕಲ್ಲಿನ ನಿರ್ಮಿತ ಕಟ್ಟಡ - ಹಲಸಿಯ ಜೈನ ಬಸದಿ

ವಿಶ್ವವಿದ್ಯಾಲಯ - ಮೈಸೂರು ವಿ.ವಿ.

ಕಾಲೇಜು - ಸೆಂಟ್ರಲ್ ಕಾಲೇಜು, ಬೆಂಗಳೂರು

ವೈದ್ಯಕೀಯ ಕಾಲೇಜು - ಮೈಸೂರು

ಪಾಲಿಟೆಕ್ನಿಕ್ ಕಾಲೇಜು - ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜು, ಬೆಂಗಳೂರು

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ