ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

4.2.17

ಭಾರತ-ವಿಶೇಷ

ಭಾರತ ದೇಶವೆಂದಾಕ್ಷಣ ಸಂಸ್ಕೃತಿ,ಸಂಪ್ರದಾಯ,ಪುರಾಣ,ಇತಿಹಾಸ, ವೇದಗಳು ,ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ವೀರರು,ಅನುರಾಗ,ಆತ್ಮೀಯತೆ, ಕುಲ ಮತಗಳ ಬೇಧವಿಲ್ಲದ ಸೋದರತ್ವ,ಇವೆಲ್ಲವೂ ನಮ್ಮ ಕಣ್ಣುಮುಂದೆ ಬರುತ್ತವೆ. ಇಂದು ನಮ್ಮ ದೇಶವನ್ನು ನೋಡಿ ಇತರೆ ದೇಶಗಳು ಎಷ್ಟೋ ವಿಷಯಗಳನ್ನು ಕಲಿತುಕೊಳ್ಳುತ್ತಿವೆ. ಪ್ರಸ್ತುತ  ವಿದೇಶಗಳಲ್ಲಿ   ಉಪಯೋಗಿಸುತ್ತಿರುವ ಅನೇಕ ವಸ್ತುಗಳು ನಮ್ಮ ಬಾರತೀಯರು ಪರಿಚಯಿಸಿದುವುಗಳೇ ಆಗಿವೆ. ಅವುಗಳನ್ನು ಕುರಿತು ತಿಳಿದುಕೊಳ್ಳೋಣ.

1.ಮೊತ್ತ ಮೊದಲ ವಿಶ್ವ ವಿದ್ಯಾಲಯ :
ಪ್ರಪಂಚದ ಮೊತ್ತಮೊದಲ ವಿಶ್ವ ವಿದ್ಯಾಲಯವನ್ನು ಕ್ರಿ.ಪೂ.700 ರಲ್ಲಿ ತಕ್ಷಶಿಲೆಯಲ್ಲಿ ನಿರ್ಮಿಸಿದ್ದಾರೆ.ಇಲ್ಲಿ 300 ಭೋದನಾ ಕೊಠಡಿಗಳು,ಪ್ರಯೋಗ ಶಾಲೆಗಳು,ವಾಚನಾಲಯಗಳು, ಖಗೋಳ ಪರಿಶೋಧನೆಗೆ ಸಂಬಂಧಿಸಿದವು ಇವೆ. ಸುಮಾರು 10000 ವಿದ್ಯಾರ್ಥಿಗಳು ಪ್ರಪಂಚದ ಮೂಲೆ ಮೂಲೆಗಳಿಂದ ಬಂದು ವಿದ್ಯಾಭ್ಯಾಸ ನಡೆಸಿದ್ದಾರೆಂದು, 200 ಪ್ರೊಫೆಸರ್ ಗಳು ವಿದ್ಯೆಯನ್ನು ಬೋಧಿಸಿದ್ದಾರೆಂದು ಚೀನಾ ದೇಶದ ‘ಹುಯನ್ಸಾಂಗ್’ ತನ್ನ ದಿನಚರಿ ಪುಸ್ತಕದಲ್ಲಿ ಬರೆದಿಟ್ಟಿದ್ದಾನೆ.



2.ಪ್ರಪಂಚಕ್ಕೆ ‘ಸೊನ್ನೆ'(0) ಯನ್ನು ಪರಿಚಯಿಸಿದವರು ನಮ್ಮ ದೇಶದ ‘ಆರ್ಯಭಟ್ಟ’. ಸೊನ್ನೆಯಿಲ್ಲದ ಲೆಕ್ಕವನ್ನು ಊಹಿಸಲೂ ಅಸಾಧ್ಯ.



3.6 ನೇ ಶತಮಾನದಲ್ಲಿ ‘ಚೆಸ್'(ಚದುರಂಗ) ನ್ನು ಗುಪ್ತರು ಪ್ರಪಂಚಕ್ಕೆ ಪರಿಚಯಿಸಿದರು. ಇವರ ಕಾಲದಲ್ಲಿ ಕಂಡುಹಿಡಿದ ಈ ಆಟವನ್ನು ಅಂದು ‘ಚತುರಂಗ’ಎಂದು ಕರೆಯುತ್ತಿದ್ದರಂತೆ.



4. ಪ್ರಪಂಚದಲ್ಲಿ ಮೊತ್ತಮೊದಲಿಗೆ ಅಲಂಕಾರಿಕ ಗುಂಡಿಗಳನ್ನು ಕಂಡು ಹಿಡಿದವರು ನಮ್ಮವರೇ. ಸಮುದ್ರದಲ್ಲಿ ದೊರೆಯುತ್ತಿದ್ದ ಚಿಪ್ಪುಗಳನ್ನು ಅಂಗಿಗಳಿಗೆ ‘ಗುಂಡಿ’ಗಳನ್ನಾಗಿ ಉಪಯೊಗಿಸುತ್ತಿದ್ದರು. ಇವು ರೇಖಾ ಗಣಿತದ ಆಕಾರದಲ್ಲಿ ಇರುತ್ತಿದ್ದವು. ಅವುಗಳಿಗೆ ನಡುವೆ ರಂದ್ರಗಳನ್ನು ಮಾಡಿ ಗುಂಡಿಗಳಾಗಿ ಉಪಯೋಗಿಸುತ್ತಿದ್ದರು.



5. ಈಗ ನಾವು ಶಾಂಪೂ ಎಂದು ಕರೆಯುತ್ತಿರುವುದರ ಹೆಸರು ಹಿಂದಿ ಭಾಷೆಯ ‘ಚಾಂಪು’ ಪದದಿಂದ 1762 ರಲ್ಲಿ ಬೆಳಕಿಗೆ ಬಂದಿತಂತೆ. ಪೂರ್ವ ಬಾರತ ದೇಶದ ಮೊಘಲ್ ಸಾಮ್ರಾಜ್ಯದಲ್ಲಿ ಕ್ಷಾರವನ್ನು ಎಣ್ಣೆಯಲ್ಲಿ ಬೆರೆಸಿ ತಲೆಯನ್ನು ಮರ್ಧಿಸುತ್ತಿದ್ದರಂತೆ. ಬಂಗಾಳದ ವ್ಯಾಪಾರಿ ‘ಶೇಖ್ಧೀನ್ ಮೊಹಮ್ಮದ್’ ಮೊದಲಬಾರಿಗೆ ಬ್ರಿಟನ್ ದೇಶದಲ್ಲಿ ಪರಿಚಯಿಸಿದನಂತೆ.



6.ಕುಷ್ಠರೋಗ ನಿವಾರಣೆ 6 ನೇ ಶತಮಾನದಲ್ಲಿ ಭಾರತೀಯ ವೈದ್ಯರು ಕುಷ್ಠರೋಗ ನಿವಾರಣೆಗೆ ಔಷದವನ್ನು ಕಂಡುಹಿಡಿದರು. ಇದನ್ನು ಕುರಿತು ಶುಶೃತ ಸಂಹಿತೆ ಹಾಗೂ ಅಥರ್ವಣ ವೇದದಲ್ಲಿ ಉಲ್ಲೇಖಿಸಲಾಗಿದೆ.


7.ವೈಕುಂಟಪಾಳಿ ಎಂದು ಕರೆಯಲ್ಪಡುವ ಹಾವು ಏಣಿ ಆಟವನ್ನು ಭಾರತೀಯರು ಕಂಡುಹಿಡಿದಿದ್ದಾರೆ. ಇದರ ನಿಜವಾದ ಹೆಸರು’ ಮೋಕ್ಷಪತ್’. ಬಾರತನ್ನು ಬ್ರಿಟಿಷರು ಆಳುತ್ತಿದ್ದ ಸಮಯದಲ್ಲಿ ಇಂಗ್ಲೆಂಡ್ಹಾಗೂ ಅಮೆರಿಕ ದೇಶಕ್ಕೆ ಮಾರ್ಗವನ್ನು ಕಂಡುಹಿಡಿಯುವ ರೀತಿಯಲ್ಲಿ ಈ ಆಟವನ್ನು 1943 ರಲ್ಲಿ ರೂಪಿಸಿದರು.



8. ಎಂತಹ ರೋಗವನ್ನಾದರೂ ಗುಣಪಡಿಸುವ ಮೂಲಿಕೆಗಳು,ಓಷಧಿಗಳು,ಸುಗಂಧ ದ್ರವ್ಯಗಳನ್ನು ಕ್ರಿಸ್ತ ಪೂರ್ವದಲ್ಲೇ ಆಯುರ್ವೇದದಲ್ಲಿ ಬೆಳಕು ಚೆಲ್ಲಿದರು. ಎಷ್ಟೇ ಆಧುನಿಕ ವೈದ್ಯ ಪದ್ಧತಿಗಳು ಬಂದರೂ ಆಯುರ್ವೇದದ ಬಗ್ಗೆ ಹೆಚ್ಚಿನವರ ಒಲವಿದೆ.



9.7 ನೇ ಶತಮಾನದಲ್ಲಿ ಬ್ರಹ್ಮಪುತ್ರ ಅಭಿವೃದ್ಧಿಪಡಿಸಿದ ಖಗೋಳಶಾಸ್ತ್ರದ ಪ್ರಕಾರ ಭೂಮಿಗೂ ಸೂರ್ಯನಿಗೂ ಮಧ್ಯೆ ಇರುವ ದೂರ, ಸೂರ್ಯನ ಕಕ್ಷೆಯಲ್ಲಿ ಭೂಮಿ ತೆಗೆದುಕೊಳ್ಳುವ ಅವಧಿ,ನಕ್ಷತ್ರ ಮಂಡಲದ ದೂರ ಇವೆಲ್ಲವನ್ನೂ ಭಾಸ್ಕರಾಚಾರ್ಯ ನಿಖರವಾಗಿ ಹೇಳಿದ್ದಾರೆ.



10.ಬೌದ್ಧಮತ,ಜೈನಮತಗಳು ಭಾರತದಲ್ಲಿ ಜನ್ಮತಳೆದಿವೆ. ಏಷಿಯಾ ಖಂಡದವರೆಗೂ ಬೌದ್ಧಮತದ ಹಿರಿಮೆ ಗೊತ್ತಿದ್ದರೂ,ಜೈನ ಮತವು ಕೇವಲ ಭಾರತದೇಶದಲ್ಲಿ ಮಾತ್ರ ಅಭಿವೃದ್ಧಿಗೆ ಬಂದಿದೆ. ಚರಿತ್ರೆಯ ಕಾಲದಲ್ಲಿ ಈ ಎರಡೂ ಮತಗಳು ಜನ್ಮತಳೆದಿವೆ.



11. ದಶಮಾನ ಪದ್ಧತಿಯನ್ನು ಕಂಡುಹಿಡಿದವರು ನಮ್ಮ ಭಾರತೀಯರೇ.



12. ಕಣ್ಣಿಯ ಪೊರೆಯ ಚಿಕಿತ್ಸೆಯನ್ನು ಕಂಡುಹಿಡಿದವರು ನಮ್ಮ ಭಾರತೀಯರೇ. ಈ ಶಸ್ತ್ರಚಿಕಿತ್ಸೆಯಿಂದ ಕಣ್ಣಿನ ದೃಷ್ಟಿಸರಿಯಾಗಿ,ಪೊರೆಯ ಸಮಸ್ಯೆ ನಿವಾರಣೆಯಾಗುತ್ತದೆ. ನಂತರದ ಕಾಲದಲ್ಲಿ ಪ್ರಪಂಚದೆಲ್ಲೆಡೆ ಈ ಶಸ್ತ್ರ ಚಿಕಿತ್ಸಾ ಪದ್ಧತಿಗೆ ಬೆಳಕಿಗೆ ಬಂದಿತು.



13. ಗಿಡಗಳ ಬೆಳವಣಿಗೆಯನ್ನು ಅಳೆಯುವ ಸಾಧನವನ್ನು 20 ನೇ ಶತಮಾನದಲ್ಲಿ ‘ಸರ್.ಜಗಧೀಶ್ ಚಂದ್ರ ಭೋಸ್’ ಕಂಡುಹಿಡಿದರು.


14. 13 ನೇ ಶತಮಾನದಲ್ಲಿ ಕಾಶ್ಮೀರವನ್ನು ಆಳಿದ ಜೈನ್-ಉಲ್-ಅಬೀದಿ’ ಮೊದಲು ಕಾಶ್ಮಿರದ ಉಣ್ಣೆಯನ್ನು ಆವಿಸ್ಕರಿಸಿದರು.



15.ಯು.ಎಸ್.ಬಿ, ಅತಿವೇಗದ ಗ್ರಾಫಿಕ್ ಪೋರ್ಟ್,ಪವರ್ ಮೇನೇಜ್ ಮೆಂಟ್.ಪಿಸಿ ಐ ಆಕ್ಸೆಸ್ ಚಿಪ್ಸ್ ಗಳನ್ನು ಅಭಿವೃದ್ಧಿಪಡಿಸಿದ್ದು ಭಾರತದೇಶದ ಇಂಡೋ ಅಮೆರಿಕನ್ ಆರ್ಕಿಟೆಕ್ಟ್ ಅಜಯ್.ವಿ.ಭಟ್.



16 ‘ಪ್ಲೇಯಿಂಗ್ ಕಾರ್ಡ್ಸ್’ ಗಳನ್ನಾಗಿ ಉಯೋಗಿಸುತ್ತಿರುವ ಕಾರ್ಡ್ ಗಳನ್ನು ಹಿಂದೆ ನಮ್ಮ ದೇಶದಲ್ಲಿ ‘ಕೃದಪತ್ರಂ’ ಎಂಬ ಚಿತ್ರಗಳುಳ್ಳ ಕಾರ್ಡ್ ಗಳನ್ನು ನಮ್ಮ ದೇಶದಲ್ಲಿ ಉಪಯೋಗಿಸುತ್ತಿದ್ದರಂತೆ. ಅವುಗಳ ಪ್ರೇರಣೆಯಿಂದಲೇ ಇಂದಿನ ‘ಪ್ಲೇಯಿಂಗ್ ಕಾರ್ಡ್ಸ್’ ತಯಾರಾದುವಂತೆ.



17. ಸೆಣಬು ನಾರಿನಿಂದ ಹಗ್ಗ ಹೊಸೆಯುವುದು : ಹಗ್ಗದ ಉಪಯೋಗ ನಮ್ಮ ಪೂರ್ವಜರಿಂದಲೆ ಪ್ರಪಂಚಕ್ಕೆ ತಿಳಿಯಿತು.



18. 5 ನೇ ಶತಮಾನದಲ್ಲಿ ಆರ್ಯ ಭಟ್ಟ ‘ಸೊನ್ನೆ'(0) ಯನ್ನು ಕಂಡುಹಿಡಿದ,4 ನೇ ಶತಮನದಲ್ಲಿ ಖಗೋಳ ಶಾಸ್ತ್ರಕ್ಕೆ ಸಂಬಂಧಿಸಿದ ಇನ್ನೂ ಕೆಲವು ವಿಷಯಗಳನ್ನು ನಮ್ಮ ಖಗೋಳ ಶಾಸ್ತ್ರಜ್ಞರು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. 6 ನೇ ಶತಮಾನದಲ್ಲಿ ತ್ರಿಕೋಣ ಮಿತಿ ಗೆ ಸಂಬಂಧಿಸಿದ ಕೆಲವು ನಿಯಮಗಳನ್ನು,ಮೂಲ ಸೂತ್ರಗಳನ್ನು ‘ವರಾಹ ಮಿಹಿರ’ ಎಂಬ ಖಗೋಳ ಶಾಸ್ತ್ರಜ್ಞ ಕಂಡುಹಿಡಿದರು sin^2(x)+cos^2(x)=1ಇದರಲ್ಲೊಂದು.



19. ಪ್ರಪಂಚದಲ್ಲೆಡೆ ಉಪಯೋಗಿಸುತ್ತಿರುವ ‘ಪೆಂಟಿಯಂ ಚಿಪ್ಸ್’ ಅನ್ನು ಭಾರತೀಯರಾದ ‘ವಿನೋದ್ ಧಾಮ್’ ಕಂಡುಹಿಡಿದರು. ಇವರನ್ನು ‘ಪೆಂಟಿಯಂ ಚಿಪ್ಸ್’ ಜನಕ ಎಂದು ಕರೆಯುತ್ತಾರೆ. ಇವುಗಳನ್ನು ಅಭಿವೃದ್ಧಿಪಡಿಸಿ ‘ಇಂಟೆಲ್ ಪ್ರೊಸೆಸ್ಸರ್’ನ ಏಳಿಗೆಗೆ ಕಾರಣರಾದರು.


20. ಸಕ್ಕರೆಯಿಂದ ಕಲ್ಲು ಸಕ್ಕರೆಯನ್ನು ತಯಾರಿಸುವುದನ್ನು ಗುಪ್ತರ ಕಾಲದಲ್ಲೇ ಕಂಡುಹಿಡಿದಿದ್ದರು. ಈ ವಿಧಾನವನ್ನು ಚೀನೀಯರು ತಮ್ಮ ದೇಶದಲ್ಲಿ ಅಳವಡಿಸಿಕೊಂಡರು ಹೀಗೆ ಪ್ರಪಂಚದೆಲ್ಲಡೆ ಈ ವಿಧಾನವನ್ನೇ ಅನುಸರಿಸುತ್ತಿದ್ದಾರೆ.

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು