29.10.16

ಕರ್ನಾಟಕದ ಬಗ್ಗೆ ಸಂಕ್ಷಿಪ್ತ ಮಾಹಿತಿ* :

*ಕರ್ನಾಟಕದ  ಬಗ್ಗೆ ಸಂಕ್ಷಿಪ್ತ  ಮಾಹಿತಿ* :


*ಕರ್ನಾಟಕದ ರಾಜಧಾನಿ? ?
*ಬೆಂಗಳೂರು*

#ಬೆಂಗಳೂರಿನ ಹಳೆಯ ಹೆಸರು?
*ಬೆಂದಕಾಳೂರು*


ಕರ್ನಾಟಕದ ಒಟ್ಟು ವಿಸ್ತೀರ್ಣ?
*1,91,791* ಚ.ಕಿ.ಮೀ

#ಕರ್ನಾಟಕದ ಒಟ್ಟು ಜನಸಂಖ್ಯೆ?
*6,11,30,704*
(2011 ಜನಗಣತಿ )

#ಕರ್ನಾಟಕದ ಒಟ್ಟು ಜಿಲ್ಲೆಗಳು?
*30*


#ಕರ್ನಾಟಕದ ಒಟ್ಟು ವಿಧಾನಸಭಾ ಸ್ಥಾನಗಳು ?
*224* + 1ಆಂಗ್ಲೊ ಇಂಡಿಯನ್

#ಕರ್ನಾಟಕದ ಒಟ್ಟು ವಿಧಾನಪರಿಷತ್ತು ಸ್ಥಾನಗಳು- *75*


#ಕರ್ನಾಟಕದ ಲೋಕಸಭಾಸ್ಥಾನಗಳು -
*28*

#ರಾಜ್ಯಸಭಾ ಸ್ಥಾನಗಳು
12🌹🌹🌹

ಹೆಚ್ಚು ವಿಸ್ತೀರ್ಣ ಹೊಂದಿದ ಜಿಲ್ಲೆ?
*ಬೆಳಗಾವಿ*

(ಹೆಚ್ಚು ವಿಸ್ತೀರ್ಣ ಹೊಂದಿದ ಭಾರತದ ರಾಜ್ಯ ಮಹಾರಾಷ್ಟ್ರ)

#ಕರ್ನಾಟಕದ ಕಡಿಮೆ ವಿಸ್ತೀರ್ಣ ಜಿಲ್ಲೆ?
*ಬೆಂಗಳೂರು ನಗರ*


#ಕರ್ನಾಟಕದ ಜನಸಾಂದ್ರತೆ
*319*
(ಭಾರತ 382)

*ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದದ್ದು ಯಾವಾಗ? ?
*1956 November 1*

#ಏಕೀಕೃತ ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ?
*ಎಸ್.ನಿಜಲಿಂಗಪ್ಪ.

#ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ್ದು ಯಾವಾಗ ಮತ್ತು ಆಗ ಇದ್ದ ಮುಖ್ಯಮಂತ್ರಿ?
*1973 November 1 ಡಿ.ದೇವರಾಜು ಅರಸು*

₹# ಪ್ರಸ್ತುತ ಕರ್ನಾಟಕದ ಮುಖ್ಯಮಂತ್ರಿ : *ಸಿದ್ದರಾಮಯ್ಯ*
@📚📚📚☘🌹

#ಕರ್ನಾಟಕದ ಉತ್ತರದ ತುದಿ?
*ಬೀದರ್*

#ಕರ್ನಾಟಕದ ದಕ್ಷಿಣ ತುದಿ?
*ಚಾಮರಾಜನಗರ*

#ಪಶ್ಚಿಮದ ತುದಿ? ?
*ಕಾರವಾರ (ಉ.ಕ*)

🌹🌹
# ಕರ್ನಾಟಕದ ಪೂರ್ವದ ತುದಿ?
*ಕೋಲಾರ ಮುಳಬಾಗಿಲು*

#ಕರ್ನಾಟಕವು
ಉತ್ತರಕ್ಕೆ - ಮಹಾರಾಷ್ಟ್ರ
ಪೂರ್ವಕ್ಕೆ- ಆಂಧ್ರಪ್ರದೇಶ
ನೈರುತ್ಯಕ್ಜೆ- ಕೇರಳ
ವಾಯುಕ್ಜ್ - ಗೋವಾ
ದಕ್ಷಿಣ&ಆಗ್ನೇಯಕ್ಕೆ - ತ.ನಾಡಿನೊಂದಿಗೆ ಗಡಿ ರೇಖೆ ಹಂಚಿಕೊಂಡಿದೆ.

#ಅತಿ ಹೆಚ್ಚು ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆ?
*ಬೆಂಗಳೂರ ನಗರ*
(ರಾಜ್ಯ ಬಿಹಾರ)

#ಅತಿ ಕಡಿಮೆ ಜನಸಾಂದ್ರತೆ ಹೊಂದಿದ ಕರ್ನಾಟಕದ ಜಿಲ್ಲೆಯ?
*ಕೊಡಗು*
(ಭಾರತ ರಾಜ್ಯ- ಅರುಣಾಚಲಪ್ರದೇಶ).

#ರಾಜ್ಯದ ಅತಿ ಹೆಚ್ಚು ಸಾಕ್ಷರತೆ ಜಿಲ್ಲೆ?
*ದ.ಕನ್ನಡ* ✏✏📚📚


#ಕರ್ನಾಟಕದ ಮೊದಲ ಪತ್ರಿಕೆ?
*ಮಂಗಳೂರು ಸಮಾಚಾರ*

#ಕರ್ನಾಟಕದಲ್ಲಿ ಕರಾವಳಿಯನ್ನು - ಕೆನರಾ ಎಂದು ಕರೆಯುತ್ತಾರೆ

#ಕರ್ನಾಟಕದ ಅತಿ ದೊಡ್ಡ ಬಂದರು?
*ನವಮಂಗಳೂರ ಬಂದರು*
ನವಮಂಗಳೂರ ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎನ್ನುವರು.

✏✏✏✏
#ಕರ್ನಾಟಕದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.

#ಚಿಕ್ಕ ಮಗಳೂರನ್ನು ಕಾಫಿಯನಾಡು ಎಂದು ಕರೆಯುತ್ತಾರೆ.

💚
#ಕೊಡಗನ್ನು ಕಿತ್ತಳೆ ನಾಡು ಎಂದು ಕರೆಯುತ್ತಾರೆ.


#ತುಮಕೂರು ಜಿಲ್ಲೆ ಮಧುಗಿರಿ ಬೆಟ್ಟ ಏಷ್ಯಾ ಖಂಡದಲ್ಲೇ ಅತಿ ಎತ್ತರವಾದ ಏಕಶಿಲಾ ಬೆಟ್ಟವಾಗಿದೆ.


# ಕರ್ನಾಟಕದ ಗೋಕಾಕ  ಜಲಪಾತವನ್ನು ಭಾರತದ ನಯಾಗರ ಎಂದು ಕರೆಯುತ್ತಾರೆ.

# ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ಪ್ರದೇಶ?
*ಹುಲಿಕಲ್ಲು*
ಮೊದಲು ಆಗುಂಬೆ ಇತ್ತು
(ದಕ್ಷಿಣದ ಚಿರಾಪುಂಜಿ ಎನ್ನುತ್ತಿದ್ದರು)
🌺🌷🌹☘

#ಅತಿ ಕಡಿಮೆ ಮಳೆ ಪಡೆಯುವ ಕರ್ನಾಟಕದ ಪ್ರದೇಶ?
*ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ*

#ಕರ್ನಾಟಕದ ಕಾಶ್ಮೀರ ಎಂದು ಕೊಡಗು ಜಿಲ್ಲೆ ಕರೆಯುತ್ತಾರೆ.

# ಕರ್ನಾಟಕದ ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಜಿಲ್ಲೆ?
*ಉತ್ತರ ಕನ್ನಡ*

* ಕಡಿಮೆ ಅರಣ್ಯ ಪ್ರದೇಶ ಹೊಂದಿದ ಕರ್ನಾಟಕದ ಜಿಲ್ಲೆ - *ವಿಜಯಪುರ*

# ಬೆಂಗಳೂರು ಸಮೀಪ ರಾಮೋಹಳ್ಳಿಯಲ್ಲಿ ಅತಿದೊಡ್ಡ ಆಲದ ಮರವಿದೆ.

#ಅತಿದೊಡ್ಡ ಬೇವಿನ ಮರ - ಶಿಡ್ಲಘಟ್ಟದ ಟಿ.ವೆಂಕಟಾಪುರದ ಬಳಿ ಇದೆ.

#ಸವಣೂರನಲ್ಲಿ ಅತಿ ದೊಡ್ಡ ಹುಣಸೆ ಮರವಿದೆ.



#ಕೃಷ್ಣನದಿಯು ಕರ್ನಾಟಕದಲ್ಲಿ ಹರಿಯುವ ಅತಿ ಉದ್ದವಾದ ನದಿಯಾಗಿದೆ.


#ಕರ್ನಾಟಕದ ಮೊಟ್ಟ-ಮೊದಲ ಜಲಾಶಯ - ವಾಣಿವಿಲಾಸ ಸಾಗರ.


#ಕಾವೇರಿ ನದಿಯ ಉಗಮಸ್ಥಾನ - ತಲಕಾವೇರಿ/ ತಲಕಾಡು.

#ಭಾರತದ ಎತ್ತರವಾದ ಜಲಪಾತ - ಕರ್ನಾಟಕದ ಜೋಗ ಜಲಪಾತ
(ಶರಾವತಿ ನದಿಗೆ ನಿರ್ಮಿಸಲಾಗಿದೆ)⛴

#ಕರ್ನಾಟಕದಲ್ಲಿ ಅತಿ ಹೆಚ್ಚು ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ.

#ಕರ್ನಾಟಕದಲ್ಲಿ ಕಡಿಮೆ ನೀರಾವರಿ ಹೊಂದಿರುವ ಜಿಲ್ಲೆ?
ಕೊಡಗು.

ಕರ್ನಾಟಕದಲ್ಲಿ

🏟🏟
ಅತಿ ಹೆಚ್ಚು ಕಾಲುವೆ ನೀರಾವರಿ ಹೊಂದಿರುವ ಜಿಲ್ಲೆ?
ಶಿವಮೊಗ್ಗ.

* ಅತಿ ಹೆಚ್ಚು ಬಾವಿ ನೀರಾವರಿ ಹೊಂದಿರುವ ಜಿಲ್ಲೆ?
ಬೆಳಗಾವಿ.

#ಕರ್ನಾಟಕದಲ್ಲಿ ಅತಿ ಹೆಚ್ಚು ಸಾಗುವಳಿ ಭೂಮಿಯನ್ನು ಹೊಂದಿದ ಜಿಲ್ಲೆ ಕಲಬುರ್ಗಿ, ಕಲಬುರ್ಗಿನ್ನು - ತೊಗರಿಯ ಕಣಜ ಎಂದು ಕರೆಯುವರು.

*********

* ಸಕ್ಕರೆ ಜಿಲ್ಲೆ ಎಂದು ಬೆಳಗಾವಿಯನ್ನು ಕರೆಯುತ್ತಾರೆ.

* ಸಕ್ಕರೆ ನಗರವೆಂದು ಮಂಡ್ಯವನ್ನು ಕರೆಯುತ್ತಾರೆ.


#ಕರ್ನಾಟಕದ ಮ್ಯಾಂಚೆಸ್ಟರ್ ಎಂದು ದಾವಣಗೆರೆಗೆ ಕರೆಯುತ್ತಾರೆ.

* ಕರ್ನಾಟಕದಲ್ಲಿ ಅತಿ ಹೆಚ್ಚು ಕಬ್ಬಿಣದ ನಿಕ್ಷೇಪ ಹೊಂದಿರುವ ಜಿಲ್ಲೆ?
ಬಳ್ಳಾರಿ ಮತ್ತು ಚಿಕ್ಕಮಗಳೂರು.


* ಅತ್ಯಂತ ಆಳವಾದ ಚಿನ್ನದ ಗಣಿ - ಕರ್ನಾಟಕದ ಚಾಂಪಿಯನ್ ರಿಫೆ.

* ಪ್ರಸ್ತುತ ಭಾರತದ ಅತಿದೊಡ್ಡ ಚಿನ್ನದ ಗಣಿ -🏟 ಹಟ್ಟಿ (ಲಿಂಗಸೂಗೂರು ತಾಲ್ಲೂಕು)
( ರಾಯಚೂರು ಜಿಲ್ಲೆ).

* ರಾಷ್ಟ್ರೀಯ ಹೆದ್ದಾರಿ ಹೊಂದದ ಕರ್ನಾಟಕದ ಜಿಲ್ಲೆಗಳು
ರಾಯಚೂರು ಮತ್ತು ಕೊಡಗು.

@₹#ಕರ್ನಾಟಕದಲ್ಲಿ ಹಾಯ್ದು ಹೋಗುವ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ?
🚎🚌
*NH-13*
ಇದು ಮಂಗಳೂರು ಇಂದ ಮೂಡಬಿದರಿ, ಕೊಪ್ಪಳ ,ಶಿವಮೊಗ್ಗ,  ಚಿತ್ರದುರ್ಗ, ಹೊಸಪೇಟೆ, ಇಳಕಲ್,ಬಿಜಾಪುರ ಮಾರ್ಗವಾಗಿ ಸೋಲ್ಲಾಪುರ ಕ್ಕೆ ಸೇರುತ್ತದೆ.

🚊🚉
* ಕರ್ನಾಟಕದಲ್ಲಿ ಮೊದಲು ರೈಲು ಆರಂಭ :
1864

* ಕೊಡಗು ಕರ್ನಾಟಕದ ರೈಲು ಮಾರ್ಗ ಇಲ್ಲದ ಜಿಲ್ಲೆ 🚊🚉


# ನಮ್ಮ ಮೆಟ್ರೊ ಕಾರ್ಯರಂಭ ಮಾಡಿದ್ದು?
*2011 Oct 20* ಬೈಯಪ್ಪನಹಳ್ಳಿ - ಎಮ್.ಜಿ.ರೊಡ್.


#ಕಾರವಾರ ಬಂದರನ್ನು ಅತಿ ಸುಂದರ ಬಂದರು ಎಂದು ಕರೆಯುತ್ತಾರೆ.


#ಅರಮನೆಗಳ ನಗರ ಎಂದು ಮೈಸೂರುನ್ನು ಕರೆಯುತ್ತಾರೆ.

* ಕರ್ನಾಟಕ ರಾಷ್ಟ್ರೀಯ ಉದ್ಯಾನವನಗಳು :-

1) ರಾಜೀವಗಾಂಧಿ ರಾ.ಉ- ಕೊಡಗು.
2) ಬಂಡಿಪುರ ರಾ.ಉ--- ಚಾಮರಾಜನಗರ.
3) ಬನ್ನೇರುಘಟ್ಟ ರಾ.ಉ- ಬೆಂಗಳೂರು.
4) ಕುದುರೆಮುಖ ರಾ.ಉ-- ಚಿಕ್ಕಮಗಳೂರು.
5) ಅಂಶಿ/ಅಣಸಿ ರಾ.ಉ-- ಉತ್ತರ ಕನ್ನಡ.

✏ ಭಾರತದ ಸಿಲಿಕಾನ್ ಸಿಟಿ- ಬೆಂಗಳೂರು.

26.10.16

Gk - ಭಾರತದ ಪ್ರಮುಖ ಆಣೆಕಟ್ಟುಗಳು


ಪ್ರಮುಖ ಅಣೆಕಟ್ಟುಗಳು


1)ಭಾಕ್ರನOಗಲ್ ಅಣೆಕಟ್ಟು
.ಸ್ಥಳ -ಬಿಲಸಪೂರ(ಹಿಮಾಚಲ ಪ್ರದೇಶ )
.ನದಿ -ಸಟ್ಲೇಜ
.ಜಲಶಯನ ಹೆಸರು -ಗೋವಿಂದ ಸಾಗರ ಜಲಶಯ

2)ಹಿರಾಕುಡ್ ಅಣೆಕಟ್ಟು
.ಸ್ಥಳ -ಸಂಬಲಪುರ (ಒಡಿಶಾ )
.ನದಿ -ಮಹಾನದಿ

3)ಮೇಟ್ಟುರು ಅಣೆಕಟ್ಟು
.ಸ್ಥಳ -ಮೇಟ್ಟುರು (ಸೇಲಮ ) ತಮಿಳುನಾಡು
.ನದಿ -ಕಾವೇರಿ
.ಜಲಶಯದ ಹೆಸರು -ಸ್ಟೇನ್ಲಿ ಜಲಶಯ

4)ನಾಗಾರ್ಜುನ ಅಣೆಕಟ್ಟು
.ಸ್ಥಳ -ನೇಲಗೋಂಡ ಜಿಲ್ಲೆ(ಆOದ್ರಪ್ರದೇಶ )
.ನದಿ -ಕೃಷ್ಣ


5)ಇಡುಕ್ಕಿ ಆಣೇಕಟ್ಟು
.ಸ್ಥಳ -ಇಡುಕ್ಕಿ (ಕೇರಳ )
.ನದಿ -ಪೆರಿಯಾರ್

6)ರಾಮ ಗಂಗಾ ಅಣೆಕಟ್ಟು
.ಸ್ಥಳ -ಕಲಾಗಡ (ಉತ್ತರಾಖಂಡ )
.ನದಿ -ರಾಮಗOಗಾ

7)ಪೋಡOಪಾಡು ಅಣೆಕಟ್ಟು
.ಸ್ಥಳ -ನೀಜಮಾಬಾದ (ತೆಲಂಗಾಣ )
.ನದಿ -ಗೋದಾವರಿ

8)ಊಕ್ಕೈ ಅಣೆಕಟ್ಟು
ಸ್ತ್ಥಳ -ಊಕ್ಕೈ (ಗುಜರಾತ್ )
.ಜಲಶಯದ ಹೆಸರು -ವಲ್ಲಭ ಸಾಗರ್
ನದಿ -ತಪತಿ

9)ಪೋಂಗ ಅಣೆಕಟ್ಟು
.ಸ್ಥಳ -ತಲವಾರ ( ಹಿಮಾಚಲ ಪ್ರದೇಶ )
.ನದಿ -ಬಿಯಾಸ್

10) ಗಾಂಧಿ ಸಾಗರ್ ಅಣೆಕಟ್ಟು
.ಸ್ಥಳ -ಮ್ಯಂಡ್ ಸಾರ್
ನದಿ - ಚೇಂಬಲ ಯಮೂನ ನದಿ

11)ಕೋಯನ್ನ ಅಣೆಕಟ್ಟು
.ಸ್ಥಳ -ಕೊಯ್ನ (ಮಹರಾಷ್ಟ)
.ನದಿ -ಕೋಯನ್
.ಜಲಶಯದ ಹೆಸರು - ಶಿವಾಜಿ ಸಾಗರ್ ಸರೋವರ

12)ಅಲಮಟ್ಟಿ ಅಣೆಕಟ್ಟು
.ಸ್ಥಳ -ಅಲಮಟ್ಟಿ ( ಕರ್ನಾಟಕ )
.ನದಿ -ಕೃಷ್ಣ
.ಜಲಶಯದ ಹೆಸರು -ಲಾಲ್ ಬಹುದೂರ ಶಾಸ್ತ್ರಿ

13)ತವಾ ಅಣೆಕಟ್ಟು
.ಸ್ಥಳ -ಹೊಸಂಗಾಬಾದ
( ಮಧ್ಯ ಪ್ರದೇಶ )
.ನದಿ -ತವಾ

14)ಜಯಕವಡಿ ಅಣೆಕಟ್ಟು
.ಸ್ಥಳ -ಜಯಕವಡಿ (ಮಹರಸ್ಟ್ರ )
.ನದಿ -ಗೋದವರೀ
.ಜಲಶಯದ ಹೆಸರು -ನಾಥಸಾಗರ್ ಜಲಶಯ

15)ರಿಹಂದ ಅಣೆಕಟ್ಟು
.ಸ್ಥಳ -ಸೂನಭದ್ರ
( ಉತ್ತರ ಪ್ರದೇಶ )
.ನದಿ -ರಿಹಂದ

16)ಸರ್ದರ ಸರೋವರ ಅಣೆಕಟ್ಟು
.ಸ್ಥಳ -ನವಗO (ಗುಜರಾತ್)
.ನದಿ - ನರ್ಮದಾ

17)ರಾಣಾ ಪ್ರತಾಪ್ ಸಾಗರ್ ಅಣೆಕಟ್ಟು
=> ಸ್ಥಳ -ರವಬತ (ರಾಜಸ್ತಾನ್ )
=> ನದಿ -ಚೇಂಬಲ
@@@@@@@@@@@@@@@@

Gk - ಇತಿಹಾಸ - 1

೧) ಕ್ರಿ ,ಶ ೭ನೇ ಶತಮಾನದಲ್ಲಿ ಕಪ್ಪೆ ಅರಭಟ್ಟನ
ಸಾಹಸ ಚಿತ್ರಿಸಿರುವ ಶಾಸನ

ಎ) ಹಲ್ಮಡಿ ಶಾಸನ
ಬಿ) ಐಹೊಳೆ ಶಾಸನ
ಸಿ) ಲಕ್ಕುಂಡಿ ಶಾಸನ
ಡಿ) ಬಾದಾಮಿ ಶಾಸನ *

೨)ತಮ್ಮಟಕಲ್ಲು ಶಾಸನದ ಕಾಲ

ಎ) ಕ್ರಿ.ಶ ಸು ೪೫೦
ಬಿ) ಕ್ರಿ.ಶ ಸು ೫೦೦ *
ಸಿ) ಕ್ರಿ.ಶ ಸು ೮೦೦
ಡಿ) ಕ್ರಿ.ಶ ಸು ೬೦೦

೩) ಇದು ನಂದಿಸೇನ ಪ್ರವರ ಮುನಿಯ
ವೈರಾಗ್ಯಗೀತೆಯ ಶಾಸನ

ಎ) ಐಹೊಳೆ ಶಾಸನ
ಬಿ) ಶ್ರವಣ ಬೆಳಗೊಳ ಶಾಸನ *
ಸಿ) ಬ್ರಹ್ಮಗಿರಿ ಶಾಸನ
ಡಿ) ಹಲ್ಮಿಡಿ ಶಾಸನ

೪) ಕುರಿತೋದದೆಯುಂ ಕಾವ್ಯ ಪ್ರಯೋಗ
ಪರಿಣಿತ ಮತಿಗಳ್ ವಾಕ್ಯ ವಿರುವ ಕೃತಿ
ಎ)ಪಂಪ ಭಾರತ
ಬಿ) ರನ್ನನ ಗದಾಯುದ್ಧ
ಸಿ) ಕವಿರಾಜ ಮಾರ್ಗ*
ಡಿ) ಶಾಂತಿಪುರಾಣ

೫) ಕ್ರಿ ಶ ಸು ೪೫೦ ರಲ್ಲಿ ರಚಿತವಾದ ಶಾಸನ
ಎ) ಶ್ರವಣ ಬೆಳಗೊಳ ಶಾಸನ
ಬಿ) ಬಾದಾಮಿ ಶಾಸನ
ಸಿ)ದೇಕಬ್ಬೆಯಶಾಸನ
ಡಿ) ಹಲ್ಮಿಡಿ ಶಾಸನ *

೬) ವಡ್ಡಾರಾಧನೆ ಇದು ಒಂದು
ಎ) ಚಂಪೂಕೃತಿ
ಬಿ) ವಚನ
ಸಿ) ಗದ್ಯಕಾವ್ಯ*
ಡಿ) ನಾಟಕ ಕೃತಿ

೭) ಬಾದಾಮಿ ಶಾಸನವು
ಎ) ವೀರ ಗೀತೆ *
ಬಿ) ದಾನ ಶಾಸನ
ಸಿ) ವೈರಾಗ್ಯ ಶಾಸನ
ಡಿ) ಮಾಸ್ತಿಕಲ್ಲು

೮) ಜೈನಯುಗ ವೀರಶೈವಯುಗ
ಬ್ರಾಹ್ಮಣಯುಗ ವಿಭಾಗ ಕ್ರಮ ಪ್ರತಿಪಾದಕರು
ಎ) ಆರ್ ನರಸಿಂಹಾಚಾರ್ *
ಬಿ) ಬಿ ಎಂ ಶ್ರೀ
ಸಿ) ರಂ ಶ್ರೀ ಮುಗಳಿ
ಡಿ) ಕೆ ವೆಂಕಟರಾಮಪ್ಪ

೯) ತಮ್ಮಟಕಲ್ಲು ಶಾಸನವು
ಎ) ವೀರಗಲ್ಲು *
ಬಿ) ಮಾಸ್ತಿ ಕಲ್ಲು
ಸಿ) ದಾನ ಶಾಸನ
ಡಿ) ನಿಶಿಧಿ ಕಲ್ಲು

೧೦) ಕನ್ನಡ ಸಾಹಿತ್ಯ ವಿಭಾಗ ಕ್ರಮದಲ್ಲಿ
ಹರಿಹರಯುಗ ದ ಪ್ರತಿಪಾದಕರು
ಎ) ಆರ್ ನರಸಿಂಹಾಚಾರ್
ಬಿ) ತ ಸು ಶಾಮರಾಯ *
ಸಿ) ರಂ ಶ್ರೀ ಮುಗಳಿ
ಡಿ) ಎಫ್ ಕಿಟಲ್

11)ಕವಿರಾಜಮಾರ್ಗಕ್ಕೆ ಆಕರ ಗ್ರಂಥ
ಎ) ಕಾವ್ಯಾದರ್ಶ *
ಬ) ಕಾವ್ಯಾಲಂಕಾರ
ಸಿ) ಛಂದೋಬುದಿ
ಡ) ನಾಟ್ಯಶಾಸ್ತ್ರ

1೨)ಹಲ್ಮಿಡಿ ಶಾಸನದ ವಸ್ತು
ಎ) ಕಾಕುಸ್ಥವರ್ಮನ ಪರಾಕ್ರಮ ಕುರಿತ ಶಾಸನ
ಬಿ) ನರಿದಾವಿಳೆ ನಾಡಿನ ವರ್ಣನೆ
ಸಿ) ವಿಜ ಅರಸನಿಗೆ ಬಾಳ್ಗಿಚ್ಚಾಗಿ ಪಲ್ಮಡಿ ಮತ್ತು
ಮೂಳವಳ್ಳಿಗಳನ್ನು ನೀಡಿದ್ದುದು *
ಡಿ) ಪ್ರಕೃತಿ ವರ್ಣನೆ

1೩) ತಿರುಳ್ಗನ್ನಡದ ಎಲ್ಲೆಗಳನ್ನು ಮೊದಲು
ಹೇಳಿದವನು
ಏ) ಪಂಪ
ಬಿ) ಶಿವಕೋಟ್ಯಚಾರ್ಯ
ಸಿ) ಶ್ರೀವಿಜಯ *
ಡಿ) ನಾಗವರ್ಮ

1೪) ಉಪಸರ್ಗ ಕೇವಲಿಗಳ ಕಥೆ ಎಂಬ ಮತ್ತೊಂದು
ಹೆಸರಿರುವ ಕೃತಿ
ಎ) ವಡ್ಡಾರಾಧನೆ *
ಬಿ) ಆದಿಪುರಣ
ಸಿ) ಚಾವುಂಡರಾಯ ಪುರಾಣ
ಡಿ) ಶಾಂತಿಪುರಾಣ

1೫) ಹಲ್ಮಿಡಿ ಶಾಸದ ಭಾಷಾ ಸ್ವರೂಪ
ಎ) ಹಳೆಗನ್ನಡ
ಬಿ) ನಡುಗನ್ನಡ
ಸಿ) ಪೂರ್ವದ ಹಳೆಗನ್ನಡ *
ಡಿ) ಹೊಸಗನ್ನಡ

1೬) ಪಳಗನ್ನಡಮಂ ಪೊಲಗೆಡಸಿ ನುಡಿವರ್ ಎಂಬ
ಉಕ್ತಿಯು ಈ ಕೃತಿಯಲ್ಲಿದೆ
ಎ) ವಡ್ಡಾರಾದನೆ
ಬಿ) ಪಂಪಭಾರತ
ಸಿ) ಶಬ್ದ ಸ್ಮೃತಿ
ಡಿ) ಕವಿರಾಜಮಾರ್ಗ *

1೭) ಕನ್ನಡ ಕಾವ್ಯ ಗಂಗೆಯ ಗಂಗೋತ್ರಿ ಎಂದು
ಹೆಸರು ಪಡೆದ ಛಂದಸ್ಸು
ಎ) ಏಳೆ
ಬಿ) ಸಾಂಗತ್ಯ
ಸಿ) ತ್ರಿಪದಿ *
ಡಿ) ಮೂಲ ಷಟ್ಪದಿ

1೮) ಕಾವೇರಿಯಿಂದ ಗೋದಾವರಿ
ವರಮಿರ್ದನಾಡದಾ ಕನ್ನಡದೊಳ್.........
ಎ) ಭಾವಿಸಿದ ಜನಪದಂ *
ಬಿ) ಭಾವಿಸಿದ ಜನವಿಶೇಷಂ
ಸಿ) ಭಾವಿಸಿದ ಸವಿಗನ್ನಡಂ
ಡಿ) ಭಾವಿಸಿದ ತಿರುಳ್ಗನ್ನಡಂ

1೯) ಸಾಹಿತ್ಯ ಚರಿತ್ರೆಯ ವಿಭಜನೆಯ
ಸಿದ್ಧಾಂತವಾಗಿ ಈ ಕೆಳಗಿನದರಲ್ಲಿ ಯಾವ
ಒಂದು ಬಳಕೆಯಾಗಿಲ್ಲ
ಎ) ಧರ್ಮ
ಬಿ) ಕವಿ
ಸಿ) ಭಾಷೆ
ಡಿ) ಕಾವ್ಯವಸ್ತು *
2೦) ಲಬ್ಯ ಕನ್ನಡ ಶಾಸನಗಳಲ್ಲಿ ಅತಿ
ಪ್ರಾಚೀನವೆನಿಸಿದ ಹಲ್ಮಿಡಿ ಶಾಸನವು
ದೊರೆತುದು ಈ ಜಿಲ್ಲೆಯಲ್ಲಿ
ಎ) ಮೈಸೂರು
ಬಿ) ಮಂಡ್ಯ
ಸಿ) ಚಾಮರಾಜನಗರ
ಡಿ) ಹಾಸನ *
2೧) ಹತ್ತನೆಯ ಶತಮಾನದಲ್ಲಿ ಪ್ರಸಿದ್ಧವಾದ
ಸಾಹಿತ್ಯ ಪ್ರಕಾರ
ಎ) ವಚನ
ಬಿ) ಚಂಪೂ
ಸಿ) ರಗಳೆ
ಡಿ) ಷಟ್ಪದಿ *
2೨) ಛಂದೋಂಬುಧಿ ಯನ್ನು ಬರೆದವರು
ಎ) ನಾಗಚಂದ್ರ
ಬಿ) ಕೀರ್ತಿವರ್ಮ
ಸಿ) ನಾಗವರ್ಮ -೧ *
ಡಿ) ಮಯೂರವರ್ಮ
2೩) ಯಾವುದು ೨ನೆಯ ನಾಗವರ್ಮನ ಕೃತಿ
ಎ) ಕಾದಂಬರಿ
ಬಿ) ಕಾವ್ಯಾವಲೋಕನ *
ಸಿ) ಛಂದೋಂಬುಧಿ
ಡಿ) ಶಬ್ದಮಣಿದರ್ಪಣ
2೪) ನಯಸೇನನ ಧರ್ಮಾಮೃತ ಕೃತಿಯ ಸಾಹಿತ್ಯ
ರೂಪ
ಎ) ಚಂಪೂ *
ಬಿ) ಗದ್ಯ
ಸಿ) ನಾಟಕ
ಡಿ) ಸಾಂಗತ್ಯ
2೫) ಬೆಳಗುವೆನಿಲ್ಲಿ ಲೌಕಿಕಮನಲ್ಲಿಜಿನಾಗಮಮಂ ಉಕ್ತಿ
ಈ ಕೃತಿಯಲ್ಲಿದೆ
ಎ) ಕರ್ನಾಟಕ ಕಾದಂಬರಿ
ಬಿ) ಅಜಿತ ಪುರಾಣ
ಸಿ) ಆದಿಪುರಾಣ
ಡಿ) ಪಂಪಭಾರತ *
2೬)ವಾಗ್ದೇವಿಯ ಭಂಡಾರದ
ಮುದ್ರೆಯನ್ನೊಡದೆ ನೆಂದು ಹೇಳಿಕೊಂಡ ಕವಿ
ಎ) ಪಂಪ
* ಬಿ) ರಾಘವಾಂಕ
ಸಿ) ಲಕ್ಷ್ಮೀಶ
ಡಿ) ರನ್ನ *
2೭) ಬೆಳಗುವೆನಿಲ್ಲಿ ಲೌಕಿಕಮನಲ್ಲಿಜಿನಾಗಮಮಂ
ಎಂದ ಕವಿ
ಎ) ರನ್ನ
ಬಿ) ಪೊನ್ನ
ಸಿ) ಪಂಪ *
ಡಿ) ಚಾವುಂಡರಾಯ
2೮) ಗದಾಯುದ್ದಕ್ಕೆ ಮತ್ತೊಂದು ಹೆಸರು
ಎ) ಸಾಹಸ ವಿಜಯ
ಬಿ) ವಿಕ್ರಮಾರ್ಜುನ ವಿಜಯ
ಸಿ) ಸಾಹಸ ಭೀಮ ವಿಜಯ *
ಡಿ) ಭೀಮ ಚರಿತೆ
2೯)ರನ್ನ ವರಕವಿ ಚಿರಕವಿ ಮತ್ತು ಮಹಾಕವಿ ಎಂದು
ಅಭಿಪ್ರಾಯಿಸಿದವರು
ಎ) ರಂ ಶ್ರೀ ಮುಗಳಿ
ಬಿ) ಡಿ ಎಲ್ ನರಸಿಂಹಾಚಾರ್
ಸಿ) ದೇ಼ಜಗೌ
ಡಿ) ಕೆ ವಿ ಪುಟ್ಟಪ್ಪ *
3೦)ರನ್ನ ಬರೆದ ಧಾರ್ಮಿಕ ಕಾವ್ಯ
ಎ) ಆದಿನಾಥಪುರಾಣ
ಬಿ) ಅಜಿತನಾಥಪುರಾಣ *
ಸಿ) ಅನಂತನಾಥ ಪುರಾಣ
ಡಿ) ನೇಮಿನಾಥ ಪುರಾಣ
3೧) ರಾವಣನು ಉದಾತ್ತ ಮತ್ತು ಸದ್ಗುಣಿಯಾದ
ವ್ಯಕ್ತಿ ಯಾವ ಕಾವ್ಯದಲ್ಲಿ
ಎ) ತೊರವೆರಾಮಾಯಣ
ಬಿ) ರಾಮಚಂದ್ರ ಚರಿತ ಪುರಾಣಂ *
ಸಿ) ಮೈರಾವಣನ ಕಾಳಗ
ಡಿ) ಅದ್ಬುತ ರಾಮಾಯಣ
3೨) ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ
ಪಂಪನು ಅನುಸರಿಸಿದ ಪ್ರಕಾರವು
ಎ)ಲೌಕಿಕ *
ಬಿ) ವಸ್ತುಕ
ಸಿ) ಮಾರ್ಗ
ಡಿ) ಆಗಮಿಕ
3೩)ಆದಿಪುರಾಣ ಕಾವ್ಯದಲ್ಲಿ ಪಂಪನು
ಅನುಸರಿಸಿದ ಪ್ರಕಾರವು
ಎ) ಲೌಕಿಕ
ಬಿ) ವಸ್ತುಕ
ಸಿ) ಮಾರ್ಗ
ಡಿ) ಆಗಮಿಕ *
3೪) ಕಾವ್ಯವಲೋಕನ ಕರ್ನಾಟಕ ಭಾಷಾಭೂಷಣ
ವಸ್ತುಕೋಶ ಶಬ್ದಸ್ಮೃತಿ ಕೃತಿಗಳ ಕರ್ತೃ
ಎ) ೧ನೇ ನಾಗವರ್ಮ
ಬಿ) ೨ನೇ ನಾಗವರ್ಮ *
ಸಿ) ಕೀರ್ತಿವರ್ಮ
ಡಿ) ರಾಜದಿತ್ಯ
3೫)ಮಲ್ಲಿನಾಥ ಪುರಾಣ ರಾಮಚಂದ್ರ ಚರಿತೆ
ಪುರಾಣ ಕಾವ್ಯಗಳನ್ನು ಬರೆದಕವಿ
ಎ) ಪೊನ್ನ
ಬಿ) ನಾಗಚಂದ್ರ *
ಸಿ) ರನ್ನ
ಡ)ಜನ್ನ
3೬)ನಯಸೇನನ ಧರ್ಮಾಮೃತದಲ್ಲಿ ಈ ಕೆಳಕಂಡ
ಯಾವ ಲಕ್ಷಣವಿಲ್ಲ
ಎ) ಜಾನಪದ ಕಥೆಗಾರನ ಕಥನ ಕೌಶಲ
ಬಿ) ವಿಡಂಬಕ ಹಾಸ್ಯ
ಸಿ) ಜನಜೀವನ ಪ್ರಜ್ಞೆ
ಡಿ) ಅನುಭವ ವಚನಗಳು *
3೭) ಇದು ಕನ್ನಡದ ಮೊದಲ ಶತಕ
ಎ) ಚಂದ್ರಪುರಾಣ
ಬಿ) ಸೋಮೇಶ್ವರ ಶತಕ
ಸಿ) ಚೂಡಾಮಣಿ ಪುರಾಣ
ಡಿ) ಚಂದ್ರಚೂಡಾಮಣಿ ಶತಕ *
3೮)ನೀಳಾಂಜನೆಯ ನೃತ್ಯದ ಸನ್ನಿವೇಶ ಇರುವ
ಕಾವ್ಯ
ಎ) ಪಂಪಭಾರತ
ಬಿ) ಆದಿಪುರಾಣ *
ಸಿ) ಅಜಿತಪುರಾಣ
ಡಿ) ಅನಂತನಾಥಪುರಾಣ
3೯) ಜೈನರಾಮಾಯಣ ಪರಂಪರೆಯಲ್ಲಿ ಬಂದ
ಕನ್ನಡ ಕಾವ್ಯ
ಎ) ಪಂಪರಾಮಾಯಣ *
ಬಿ) ಕುಮಾರರಾಮ ಸಾಂಗತ್ಯ
ಸಿ) ಕುಮುದೇಂದು ರಾಮಾಯಣ
ಡಿ) ಶ್ರೀರಾಮಾಯಣ ದರ್ಶನಂ
4೦) ಕನ್ನಡ ಕವಿತೆಯೊಳ್ ಅಸಗಂಗಂ ನೂರ್ಮಡಿ
ಎಂದು ಆತ್ಮ ಪ್ರಶಂಸೆ ಮಾಡಿಕೊಂಡ ಕವಿ
ಎ) ಪಂಪ
ಬಿ) ರನ್ನ
ಸಿ) ಪೊನ್ನ
ಡಿ) ಜನ್ನ *
4೧) ಪಂಪನು ಅರಿಕೇಸರಿಯ ಆಸ್ಥಾನ ಕವಿಯಾದರೆ
ಪೊನ್ನನು ಈತನ ಆಸ್ಥಾನ ಕವಿ
ಎ) ಸತ್ಯಾಶ್ರಯ
ಬಿ) ೩ನೇ ಕೃಷ್ಣ *
ಸಿ) ಇಮ್ಮಡಿ ಪುಲಿಕೇಶಿ
ಡಿ) ಅಮೋಘವರ್ಷ
4೨) ಪಂಪನದು ವಿಕ್ರಮಾರ್ಜುನ ವಿಜಯವಾದರೆ
ರನ್ನನದು
ಎ) ಧರ್ಮ ವಿಜಯ
ಬಿ) ಅರ್ಜುನ ವಿಜಯ
ಸಿ) ಕರ್ಣವಿಜಯ
ಡಿ) ಸಾಹಸ ಭೀಮ ವಿಜಯ *
4೩) ಶಾಂತಿ ಪುರಾಣ ಭುವನೈಕ
ರಾಮಾಭ್ಯುದಯ ಕೃತಿಗಳ ಕರ್ತೃ
ಎ) ಪೊನ್ನ *
ಬಿ) ರನ್ನ
ಸಿ) ಪಂಪ
ಡಿ) ನಾಗಚಂದ್ರ
4೪) ಇವನು ಕವಿ ಚಕ್ರವರ್ತಿ
ಎ) ಜನ್ನ *
ಬಿ) ಪಂಪ
ಸಿ) ಅಸಗ
ಡಿ) ಹರಿಹರ
4೫) ವಿಡಂಬನಾ ಕವಿ ಎಂದು
ಪ್ರಖ್ಯಾತವಾಗಿರುವವನು
ಎ) ಬ್ರಹ್ಮಶಿವ *
ಬಿ) ಚಂದ್ರಕವಿ
ಸಿ) ಭೀಮಕವಿ
ಡಿ) ನಯಸೇನ
4೬) ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ
ಪಂಪನಾವಗಂ ಎಂದಕವಿ
ಎ) ನಾಗಚಂದ್ರ
ಬಿ) ನಯಸೇನ
ಸಿ) ನಾಗವರ್ಮ
ಡಿ) ನಾಗರಾಜ *
4೭) ಪಂಪನ ಆದಿಪುರಾಣವು ಈ ತೀರ್ಥಂಕರರ
ಕಥೆಯನ್ನು ವಸ್ತುವಾಗಿ ಹೊಂದಿದೆ
ಎ) ನೇಮಿನಾಥ
ಬಿ) ಪಾರ್ಶ್ವನಾಥ
ಸಿ) ವೃಷಭನಾಥ *
ಡಿ) ಅಜಿತನಾಥ
4೮) ಇವರನ್ನು ರತ್ನತ್ರಯರು ಎಂದು
ಪರಿಗಣಿಸಲಾಗಿದೆ
ಎ) ಪಂಪ-ರನ್ನ -ಜನ್ನ
ಬಿ) ಪಂಪ -ಪೊನ್ನ-ರನ್ನ *
ಸಿ) ಪಂಪ-ಜನ್ನ-ಪೊನ್ನ
ಸಿ) ರನ್ನ-ಜನ್ನ-ಪೊನ್ನ
4೯) ಇವರನ್ನು ಕವಿಚಕ್ರವರ್ತಿಗಳು ಎಂದು
ಕರೆಯಲಾಗಿದೆ
ಎ)ಪ್ಂಪ-ರನ್ನ -ಜನ್ನ
ಬಿ) ಪಂಪ-ರನ್ನ-ಪೊನ್ನ
ಸಿ) ಪಂಪ-ಜನ್ನ-ಪೊನ್ನ
ಸಿ) ರನ್ನ-ಜನ್ನ-ಪೊನ್ನ *
5೦)ಕವಿತಾ ಗುಣಾರ್ಣವ ಎಂಬುದು ಈತನ
ಬಿರುದು
ಎ) ಪಂಪ *
ಬಿ) ರನ್ನ
ಸಿ) ಜನ್ನ
ಡಿ) ಪೊನ್ನ
5೧) ಅಲ್ಲಮನ ವಚನಗಳ ಅಂಕಿತ
ಎ) ಚನ್ನಮಲ್ಲಿಕರ್ಜುನ
ಬಿ) ಕೂಡಲ ಸಂಗಮ
ಸಿ) ರಾಮನಾಥ
ಡಿ) ಗುಹೇ಼ಶ್ವರ *
5೨)ಇವರು ಸರ್ವಜ್ಞನ ವಚನಗಳನ್ನು ಮೊದಲಿಗೆ
ಸಂಪಾದನೆ ಮಾಡಿದವರು
ಎ) ಡೆಪ್ಯೂಟಿ ಚನ್ನಬಸಪ್ಪ
ಬಿ) ಉತ್ತಂಗೀ ಚನ್ನಪ್ಪ *
ಸಿ) ಗೊರೂರು ಚನ್ನಬಸಪ್ಪ
ಡಿ) ಕೊ ಚನ್ನಬಸಪ್ಪ
5೩) ಕಪಿಲಸಿದ್ದ ಮಲ್ಲಿಕಾರ್ಜುನ ಈ ಮುದ್ರಿಕೆಯ
ವಚನಕಾರ
ಎ) ಮಲ್ಲಿಕಾರ್ಜುನ
ಬಿ) ಅಲ್ಲಮಪ್ರಭು
ಸಿ) ಅಕ್ಕಮಾಹಾದೇವಿ
ಡಿ) ಸಿದ್ಧರಾಮ *
5೪) ಬರಸಟಗನ ಭಕ್ತಿ ದಿಟವೆಂದು ನಂಬಲು ಬೇಡ
ಈ ವಚನ ಈತನದು
ಎ) ಮೋಳಿಗೆ ಮಾರಯ್ಯ
ಬಿ) ಅಂಬಿಗರ ಚೌಡಯ್ಯ
ಸಿ) ಡೋಹರ ಕಕ್ಕಯ್ಯ
ಡಿ) ಜೇಡರ ದಾಸಿಮಯ್ಯ *
5೫) ಮಾತೆಂಬುದು ಜೋತಿರ್ಲಿಂಗ
ಸ್ವರವೆಂಬುದು ಪರತತ್ವ ಈ ವಚನ ಈತನದು
ಎ) ಬಸವಣ್ಣ
ಬಿ) ಚೆನ್ನಬಸವಣ್ಣ
ಸಿ) ಅಲ್ಲ್ಮಪ್ರಭು *
ಡಿ) ಸಿದ್ಧರಾಮ
5೬) ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು;ಖ
ನೋಡಾ ಈ ವಚನದ ಕರ್ತೃ
ಎ) ಚೆನ್ನಬಸವಣ್ಣ
ಬಿ) ಅಕ್ಕಮಾಹಾದೇವಿ
ಸಿ) ನೀಲಾಂಭಿಕೆ
ಡಿ) ಅಲ್ಲಮಪ್ರಭು *
5೭) ರಾಮನಾಥ ಎಂಬ ಅಂಕಿತ ಈ ವಚನಕಾರದ್ದು
ಎ) ಸಿದ್ಧರಾಮ
ಬಿ) ಅಲ್ಲಮಪ್ರಭು
ಸಿ) ಅಂಬಿಗರ ಚೌಡಯ್ಯ
ಡಿ) ಜೇಡರ ದಾಸಿಮಯ್ಯ *
5೮) ಮೋಳಿಗೆ ಮಾರಯ್ಯನ ವಚನಗಳ ಅಂಕಿತ
ಎ) ನಿಷ್ಕಳಂಕ ಮಲ್ಲಿಕಾರ್ಜುನ *
ಬಿ) ಅಕಳಂಕ ಮಲ್ಲಿಕಾರ್ಜುನ
ಸಿ) ಚೆನ್ನಮಲ್ಲಿಕಾರ್ಜುನ
ಡಿ) ಶ್ರೀಶೈಲ ಮಲ್ಲಿಕಾರ್ಜುನ
5೯) ಅಂಬಿಗರ ಚೌಡಯ್ಯನ ವಚನಗಳ ಅಂಕಿತ
ಎ) ಗುಹೇಶ್ವರ
ಬಿ) ಗೊಗ್ಗೇಶ್ವರ
ಸಿ) ಅಂಬಿಗರ ಚೌಡಯ್ಯ *
ಡಿ) ಬಹುರೂಪಿ ಚೌಡಯ್ಯ
6೦) ನಿಜಾತ್ಮರಾಮ ರಾಮ ಎನ್ನುವ
ಅಂಕಿತವುಳ್ಳ ವಚನಕಾರ
ಎ) ಮಾದರ ಚೆನ್ನಯ್ಯ *
ಬಿ) ಮಾದರ ಹರಳಯ್ಯ
ಸಿ) ಢಕ್ಕೆಯ ಬೊಮ್ಮಣ್ಣ
ಡಿ) ಡೊಹರ ಕಕ್ಕಯ್ಯ
6೧) ಹದಿಮೂರನೆಯ ಶತಮಾನದಲ್ಲಿ ರಚಿತವಾದ
ಪ್ರಸಿದ್ಧ ವ್ಯಾಕರಣ ಗ್ರಂಥ
ಎ) ಕರ್ನಾಟಕ ಶಬ್ದಾನುಶಾಸನ
ಬಿ) ಕವಿರಾಜ ಮಾರ್ಗ
ಸಿ) ಶಬ್ದಮಣಿದರ್ಪಣ *
ಡಿ) ಭಾಷಾಭೂಷಣ
6೨) ವೃದ್ಧ ಮಹೇಶ್ವರ ಪ್ರಸಂಗವು ಹರಿಹರನ ಈ
ರಗಳೆಯಲ್ಲಿದೆ
ಎ) ಬಸವರಾಜದೇವರ ರಗಳೆ
ಬಿ) ಮಹಾದೇವಿ ಅಕ್ಕನ ರಗಳೆ
ಸಿ) ನಂಬಿಯಣ್ಣನ ರಗಳೆ
ಡಿ) ಕುಂಬಾರ ಗುಂಡಯ್ಯನ ರಗಳೆ *
6೩) ನಡೆವರೆಡವದೆ ಕುಳಿತವರೆಡವುವರೇ ಈ ಮಾತು
ಈ ಕವಿಯ ಕಾವ್ಯದಲ್ಲಿದೆ
ಎ) ಕುಮಾರವ್ಯಾಸ
ಬಿ) ರಾಘವಾಂಕ *
ಸಿ) ಕುಮಾರ ವಾಲ್ಮೀಕಿ
ಡಿ) ಚಾಮರಸ
6೪) ಹರಿಹರನ ಗಿರಿಜಾ ಕಲ್ಯಾಣವು ಈ ಸಾಹಿತ್ಯ
ಪ್ರಕಾರದ ಕೃತಿ
ಎ) ಚಂಪೂ *
ಬಿ) ಸಾಂಗತ್ಯ
ಸಿ) ರಗಳೆ
ಡಿ) ಷಟ್ಪದಿ
6೫) ಕಿಟ್ಟಲ್ ಸಂಪಾದಿಸಿದುದು
ಎ) ಬಸವಣ್ಣನವರ ವಚನಗಳು
ಬಿ) ಜೈಮಿನಿ ಭಾರತ
ಸಿ) ಶಬ್ದಮಣಿ ದರ್ಪಣ *
ಡಿ) ಧರ್ಮಾಮೃತಂ
6೬) ಕಾಳಿದಾಸನ ಕುಮಾರಸಂಭವದ
ಪ್ರಭಾವವಿರುವ ಕೃತಿ
ಎ) ಗಿರಿಜಾ ಕಲ್ಯಾಣ *
ಬಿ) ಕಾದಂಬರಿ
ಸಿ) ಜಗನ್ನಾಥ ವಿಜಯ
ಡಿ) ಗದುಗಿನ ಭಾರತ
67) ಯಶೋಧರ ಚರಿತೆ ಅನಂತನಾಥ ಪುರಾಣ
ಕೃತಿಗಳನ್ನು ಬರೆದ ಕವಿ
ಎ) ನಾಗಚಂದ್ರ
ಬಿ) ಜನ್ನ *
ಸಿ) ರನ್ನ
ಡಿ) ಪೊನ್ನ
68) ಪೊಲ್ಲಮೆಯೇ ಲೇಸು ನಲ್ಲರ ಮೆಯ್ಯೊಳ್
ಉಲೇಖವಿರುವ ಕೃತಿ
ಎ) ಲೀಲಾವತೀ ಪ್ರಬಂಧಂ
ಬಿ) ಸಮ್ಯಕ್ವಕೌಮುದಿ
ಸಿ) ಯಶೋಧರ ಚರಿತೆ *
ಡಿ) ಸಮಯ ಪರೀಕ್ಷೆ
69) ಕನ್ನಡಮೆನಿಪ್ಪ ನಾಡು ಚೆಲ್ವಾಯ್ತು ಎಂಬ
ಉಲ್ಲೇ಼ಖವಿರುವ ಕೃತಿ
ಎ) ಕವಿರಾಜಮಾರ್ಗ
ಬಿ) ಆದಿಪುರಾಣ
ಸಿ) ಸಾಹಸ ಭೀಮ ವಿಜಯ
ಡಿ) ಕಬ್ಬಿಗರ ಕಾವ *
70) ಇದು ಹರಿಹರನು ರಚಿಸಿದ ಶತಕ ಕೃತಿ
ಎ) ಚಂದ್ರಚೂಡಾಮಣಿ ಶತಕ
ಬಿ) ಶಂಕರ ಶತಕ
ಸಿ) ರಕ್ಷಾಶತಕ *
ಡಿ) ಸೋಮೆಶ್ವರ ಶತಕ
71) ಶಬ್ದಮಣಿದರ್ಪಣವನ್ನು ಮೊಟ್ಟಮೊದಲಿಗೆ
ಸಂಪಾದಿಸಿ ಪ್ರಕಟಿಸಿದ ಆಂಗ್ಲ ಪಂಡಿತ
ಎ) ಎಫ್ ಕಿಟ್ಟಲ್
ಬಿ) ಜೆ ಗ್ಯಾರೆಟ್ *
ಸಿ) ಕ್ಯಾಂಬೆಲ್
ಡಿ) ರೀವ್
72) ಕಟ್ಟಿಯುಮೇನೊ? ಮಾಲೆಗಾರನ
ಪೊಸಬಾಸಿಗಂ ಮುಡಿವ ಭೋಗಿಗಳಲ್ಲದೆ
ಬಾಡಿ ಪೋಗದೇ! ಈ ಉಕ್ತಿ ಇರುವ ಕೃತಿ
ಎ) ಪಂಪ ಭಾರತ
ಬಿ) ಲೀಲಾವತಿ ಪ್ರಬಂಧ
ಸಿ) ಅನಂತನಾಥ ಪುರಾಣ*
ಡಿ) ಅಜಿತತೀರ್ಥಂಕರ ಪುರಾಣ
73) ಭಾಮಿನಿ ಷಟ್ಪದಿಯ ಮೊದಲ ಕನ್ನಡ ಗ್ರಂಥ
ಎ) ಬಸವಪುರಾಣ *
ಬಿ) ಸಿಂಗರಾಜ ಪುರಾಣ
ಸಿ) ಸಿದ್ಧರಾಮ ಪುರಾಣ
ಡಿ) ಪದ್ಮಪುರಾಣ
74) ಶೃಂಗಾರ ರಸವೊಂದನ್ನೇ ನಿರೊಪಿಸುವ
ಕನ್ನಡ ಕಾವ್ಯ
ಎ) ಆಂಡಯ್ಯನ ಕಬ್ಬಿಗರ ಕಾವ
ಬಿ) ನೇಮಿಚಂದ್ರನ ಲೀಲಾವತಿ ಪ್ರಬಂದ *
ಸಿ) ಚಂದ್ರರಾಜನ ಮದನ ತಿಲಕ
ಡಿ) ಅಪ್ಪಯ್ಯ ದೀಕ್ಷಿತರ ಕಾವಲಯಾನಂದ
75) ಸ್ತ್ರೀರೂಪಮೆ ರೂಪಂ ಶೃಂಗಾರಮೆ ರಸಂ
ಎಂಬುದು ಇವರ ಅಭಿಪ್ರಾಯ
ಎ) ಹರಿಹರ
ಬಿ) ರಾಘವಾಂಕ
ಸಿ) ಭೀಮಕವಿ
ಡಿ) ನೇಮಿಚಂದ್ರ *
76) ಕನ್ನಡದ ಮೊದಲ ಸಂಕಲನ ಗ್ರಂಥ ಸೂಕ್ತಿ
ಸುಧಾರ್ಣವದ ಕರ್ತೃ
ಎ) ವೃತ್ತವಿಲಾಸ
ಬಿ) ಕಮಲಭವ
ಸಿ) ಮಲ್ಲಿಕಾರ್ಜುನ *
ಡಿ) ಆಂಡಯ್ಯ
77) ನಿಂದರೆದಂಡಾಧೀಶಂ ಕುಳ್ಳಿರೆಮಂತ್ರಿ
ತೊಡಂಕೆಕವಿ ಈತ
ಎ) ಬಂಧುವರ್ಮ
ಬಿ) ಚಾವುಂಡರಾಯ
ಸಿ) ಜನ್ನ *
ಡಿ) ಪಾರ್ಶ್ವ ಪಂಡಿತ
78)ಭೀಮಕವಿಯ ಬಸವ ಪುರಾಣವು
ಎ) ಚರಿತ್ರ ಕಾವ್ಯ
ಬಿ) ಸಾಮಾಜಿಕ ಕಾವ್ಯ
ಸಿ) ಪುರಾಣಕಾವ್ಯ
ಡಿ) ಇತಿಹಾಸ ಕಾವ್ಯ *
79) ಕನಕದಾಸರ ರಚಿಸಿದ ಕೃತಿ
ಎ) ಹರಿಭಕ್ತಿ ಸಾರ *
ಬಿ) ಜೈಮಿನಿ ಭಾರತ
ಸಿ) ತೊರವೆ ರಾಮಾಯಣ
ಡಿ) ಜಗನ್ನಾಥ ವಿಜಯ
80) ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಈ
ಮಾತು ಇರುವ ಕೃತಿ
ಎ) ರಾಮಾಶ್ವಮೇಧ *
ಬಿ) ಅದ್ಭುತ ರಾಮಾಯಣ
ಸಿ) ಚಾವುಂಡರಾಯ ಪುರಾಣ
ಡಿ) ಮುದ್ರಾಮಂಜೂಷ
81) ಮುಂಡಿಗೆಗಳು ಎಂಬ ವಿಶಿಷ್ಟ ಪ್ರಕಾರದಲ್ಲಿ
ಬರೆದ ಕವಿ ಮತ್ತು ಕೀರ್ತನೆಕಾರ
ಎ) ಪುರಂದರದಾಸರು
ಬಿ) ಕನಕದಾಸರು *
ಸಿ) ತ್ಯಾಗರಾಜರು
ಡಿ) ಜಗನ್ನಾಥದಾಸರು
82) ಉಪಮಾಲೋಲ ಎಂದು ಪ್ರಸಿದ್ಧನಾದ ಕವಿ
ಎ) ಕುಮಾರವ್ಯಾಸ
ಬಿ) ಲಕ್ಷ್ಮೀಶ *
ಸಿ) ರಾಘವಾಂಕ
ಡಿ) ಹರಿಹರ
83) ಜೈಮಿನಿ ಭಾರತದ ಕರ್ತೃ
ಎ) ಭರತೇಶ
ಬಿ) ಲಕ್ಷ್ಮೀಶ *
ಸಿ) ತಿರುಮಲಾರ್ಯ
ಡಿ) ಷಡಕ್ಷರ ದೇವ
84) ಅದ್ಭುತ ರಾಮಾಯಣ ಇದು ಮುದ್ದಣ ಕವಿಯ
ಎ) ಷಟ್ಪದಿ ಕಾವ್ಯ
ಬಿ) ಗದ್ಯಗ್ರಂಥ *
ಸಿ) ಯಕ್ಷಗಾನ
ಡಿ) ಚಂಪೂಗ್ರಂಥ
85) ಸೊಬಗಿನ ಸೋನೆ ಈ ಸಾಹಿತ್ಯರೂಪದಲ್ಲಿದೆ
ಎ) ಕಿರ್ತನೆ
ಬಿ) ಶತಕ
ಸಿ) ಷಟ್ಪದಿ
ಡಿ) ಸಾಂಗತ್ಯ *
೮6) ಕನ್ನಡದ ಮೊತ್ತಮೊದಲ ಸಾಂಗತ್ಯ ಕೃತಿ
ಎ) ಸೊಬಗಿನ ಸೋನೆ *
ಬಿ) ಭರತೇಶ ವೈಭವ
ಸಿ) ಕುಮಾರರಾಮ ಸಾಂಗತ್ಯ
ಡಿ) ನೇಮಿಜಿನೇಶ ಸಂಗತಿ
87) ಕನ್ನಡಂ ಕತ್ತುರಿಯಲ್ತೆ ಎಂದು ಹೇಳಿದವರು
ಎ) ಬಿ ಎಂ ಶ್ರೀ
ಬಿ) ಜಿ ಪಿ ರಾಜರತ್ನಂ
ಸಿ) ಮುದ್ದಣ *
ಡಿ) ಆಲೂರು ವೆಂಕಟರಾಯ
88) ಉಡುಪಿಯನ್ನು ಕಾರ್ಯಕ್ಷೇತ್ರವನ್ನಾಗಿ
ಮಾಡಿಕೊಂಡ ದಾಸರು
ಎ) ಶ್ರೀಪಾದರಾಯರು
ಬಿ) ವಾದಿರಾಜ
ಸಿ) ಪುರಂದರದಾಸರು *
ಡಿ) ಜಗನ್ನಾಥದಾಸರು
89) ಚಾಮರಸ ಕವಿಯ ಪ್ರಭುಲಿಂಗಲೀಲೆ ಯು ಈ
ಷಟ್ಪದಿಯಲ್ಲಿ ರಚಿತವಾಗಿದೆ
ಎ) ಭಾಮಿನಿ *
ಬಿ) ಪರಿವರ್ಧಿನಿ
ಸಿ) ವಾರ್ಧಕ
ಡಿ) ಭೋಗ
90) ಲವಕುಶರ ಕಾಳಗದ ಕತೆಯು ಈ ಕಾವ್ಯದಲ್ಲಿ
ಬರುತ್ತದೆ
ಎ) ಜೈಮಿನಿ ಭಾರತ *
ಬಿ) ಕುಮಾರವ್ಯಾಸ ಭಾರತ
ಸಿ) ಪಂಪಭಾರತ
ಡಿ) ರಾಮಚರಿತ ಪುರಾಣ
91) ಸರಸ ಸಾಹಿತ್ಯದ ವರದೇವತೆ ಈ ಬಿರುದಿನ
ಕವಿಯಿತ್ರಿ ಯಾರು ?
ಎ) ಕಂತಿ
ಬಿ) ಅಕ್ಕಮಹಾದೇವಿ
ಸಿ) ಸಂಚಿಯ ಹೊನ್ನಮ್ಮ *
ಡಿ) ಹೆಳವನಕಟ್ಟೆ ಗಿರಿಯಮ್ಮ
92) ಈ ಕೆಳಗಿನವುಗಳಲ್ಲಿ ಯಾವುದು ಮುದ್ದಣ್ಣನ
ಕೃತಿಯಲ್ಲ
ಎ) ರಾಮಕಥಾವತಾರ *
ಬಿ) ರಾಮಪಟ್ಟಾಭಿಷೇಕ
ಸಿ) ರಾಮಾಶ್ವಮೇಧ
ಡಿ) ಅದ್ಭುತ ರಾಮಾಯಣ
93) ಹಯವದನ ಅಂಕಿತನಾಮದಿಂದ
ಕೀರ್ತನೆಗಳನ್ನು ರಚಿಸಿದವರು
ಎ) ವ್ಯಾಸರಾಯ
ಬಿ) ಶ್ರೀಪಾದರಾಜ
ಸಿ) ವಾದಿರಾಜ *
ಡಿ) ನರಹರಿತೀರ್ಥ
94) ಅಂಬಿಗ ನಾ ನಿನ್ನ ನಂಬಿದೆ,ಅನುಗಾಲವು
ಚಿಂತೆ ಜೀವಕೆ, ಅಪರಾಧಿನಾನಲ್ಲ
ಅಪರಾಧವೆನಗಿಲ್ಲ ಈ ಕೀರ್ತನೆಗಳ ಕರ್ತೃ
ಎ) ಜಗನ್ನಾಥ ದಾಸ
ಬಿ) ಪುರಂದರದಾಸ *
ಸಿ) ವಾದಿರಾಜ
ಡಿ) ಕನಕದಾಸ
95) ಮೊಟ್ಟಮೊದಲ ಹರಿದಾಸ ಕೀರ್ತನೆ
ಎನ್ನಲಾದ ಎಂತು ಮರುಳಾದೆ ನಾ ನೆಂತು
ಮರುಳಾದೆ ರಚನೆಯ ಕರ್ತೃ
ಎ) ಶ್ರೀಪಾದರಾಜ
ಬಿ) ನರಹರಿತೀರ್ಥ *
ಸಿ) ಕನಕದಾಸ
ಡಿ) ಪುರಂದರದಾಸ
96) ಕುಮಾರವ್ಯಾಸ ಭಾರತದ ನಿಜವಾದ ಹೆಸರು
ಎ) ಮಹಾಭಾರತ
ಬಿ) ಸ್ಂಪೂರ್ಣಭಾರತ
ಸಿ) ದಶಪರ್ವಭಾರತ
ಡಿ)ಕರ್ನಾಟಕ ಭಾರತ ಕಥಾಮಂಜರಿ *
97) ಇದು ರತ್ನಾಕರವರ್ಣಿಯ ರಚನೆಯಲ್ಲ
ಎ) ತ್ರಿಲೋಕ ಶತಕ
ಬಿ) ಅಪರಾಜಿತೇಶ್ವರ ಶತಕ
ಸಿ) ಶತಕತ್ರಯ *
ಡಿ) ರತ್ನಾಕರಧೀಶ್ವರ ಶತಕ
98) ಮುದ್ದಣ -ಮನೋರಮೆ ದಂಪತಿಗಳ ಸರಸ
ಸಂಭಾಷಣೆಯು
ಚಿತ್ರಿತವಾಗಿರುವುದು ಈ ಕೃತಿಯಲ್ಲಿ
ಎ) ಅದ್ಭುತ ರಾಮಾಯಣ
ಬಿ) ರಾಮಪಟ್ಟಾಭಿಷೇಕ
ಸಿ) ರಾಮಾಶ್ವಮೇಧ *
ಡಿ) ಗೋದಾವರಿ
99) ದಾಸ ಸಾಹಿತ್ಯದ ಪಿತಾಮಹ
ಎ) ಪುರಂದರದಾಸ
ಬಿ) ಕನಕದಾಸ
ಸಿ) ನರಹರಿತೀರ್ಥ *
ಡಿ) ವ್ಯಾಸರಾಯ
100) ಭಾಮಿನಿ ಷಟ್ಪದಿಗೆ ಕುಮಾರವ್ಯಾಸ ರಗಳೆಗೆ
ಹರಿಹರನಾದರೆ ಸಾಂಗತ್ಯಕ್ಕೆ
ಎ) ಚಾಮರಸ
ಬಿ) ಲಕ್ಷೀಶ
ಸಿ) ರತ್ನಾಕರವರ್ಣಿ *
ಡಿ) ನಿಜಗುಣ ಶಿವಯೋಗ

25.10.16

Gk - 024- ಪ್ರಮುಖ100 ಪಿತಾಮಹರುಗಳು

✌ಪ್ರಮುಖ100 ಪಿತಾಮಹರುಗಳು✌

 1)ವಿಜ್ಞಾನದ ಪಿತಾಮಹ👉ರೋಜರ್ ಬೇಕನ್
2)ಜೀವ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
 3)ಸೈಟಾಲಾಜಿಯ ಪಿತಾಮಹ👉ರಾಬರ್ಟ್ ಹುಕ್
4)ರಸಾಯನಿಕ ಶಾಸ್ತ್ರದ ಪಿತಾಮಹ👉ಆಂಟೋನಿ ಲೇವಸಿಯರ್
5)ಸಸ್ಯ ಶಾಸ್ತ್ರದ ಪಿತಾಮಹ👉ಜಗದೀಶ್ ಚಂದ್ರಬೋಸ್
 6)ಭೂಗೋಳ ಶಾಸ್ತ್ರದ ಪಿತಾಮಹ👉ಎರಟೋಸ್ತನೀಸ್
7)ಪಕ್ಷಿ ಶಾಸ್ತ್ರದ ಪಿತಾಮಹ👉ಸಲೀಂ ಆಲಿ
8)ಓಲಂಪಿಕ್ ಪದ್ಯಗಳ ಪಿತಾಮಹ👉ಪಿಯರನ್ ದಿ ಕೊಬರ್ಲೆನ್
9)ಅಂಗ ರಚನಾ ಶಾಸ್ತ್ರದ ಪಿತಾಮಹ👉ಸುಶ್ರುತ
 10)ಬೀಜಗಣಿತದ ಪಿತಾಮಹ👉ರಾಮಾನುಜಂ
11)ಜನಸಂಖ್ಯಾ ಶಾಸ್ತ್ರದ ಪಿತಾಮಹ👉ಟಿ.ಆರ್.ಮಾಲ್ಥಸ್
12)ಭಾರತೀಯ ಸೈನ್ಯದ ಪೂಜ್ಯ ಪಿತಾಮಹ 👉ಸ್ಟ್ರೇಂಜರ್ ಲಾರೇನ್ಸ್
13)ಜೈವಿಕ ಸಿದ್ಧಾಂತದ ಪಿತಾಮಹ👉ಚಾರ್ಲ್ಸ್ ಡಾರ್ಮಿನ್
14)ಭಾರತದ ಪತ್ರಿಕೋದ್ಯಮದ ರಂಗದ ಪಿತಾಮಹ 👉ಆಗಸ್ಟ್ ಹಿಕ್ಕಿಸ್
15)ಆಧುನಿಕ ವರ್ಗೀಕರಣ ಶಾಸ್ತ್ರದ ಪಿತಾಮಹ👉ಕರೋಲಸ್ ಲಿನಿಯಸ್
16)ಭಾರತೀಯ ಸಾರ್ವಜನಿಕ ಸೇವೆಯ ಪಿತಾಮಹ👉ಕಾರ್ನ್ ವಾಲೀಸ್
17)ಮನೋವಿಶ್ಲೇಷಣಾ ಪಂಥ ಪಿತಾಮಹ👉ಸಿಗ್ಮಂಡ್ ಫ್ರಾಯ್ಢ್
18)ಮೋಬೆಲ್ ಫೋನ್ ನ ಪಿತಾಮಹ 👉ಮಾರ್ಟಿನ್ ಕೂಪರ್
19)ಹೋಮಿಯೋಪತಿಯ ಪಿತಾಮಹ👉ಸ್ಯಾಮ್ಸುಯಲ್ ಹಾನಿಯನ್
20)ಭಾರತೀಯ ವೈದ್ಯಶಾಸ್ತ್ರದ ಪಿತಾಮಹ👉ಧನ್ವಂತರಿ
 21)ಕರ್ನಾಟಕದ ಪತ್ರಿಕೋದ್ಯಮದ ಪಿತಾಮಹ👉 ಮೊಗ್ಲಿಂಗ್
22)ಇ ಮೇಲ್ ನ ಪಿತಾಮಹ👉ಸಭಿರಾ ಭಟಿಯಾ
23)ಆಧುನಿಕ ಬುದ್ಧಿಶಕ್ತಿ ಪರಿಕ್ಪೆಯ ಪಿತಾಮಹ👉ಅಲ್ ಫ್ರೆಡ್ ಬೀಲೆ
24)ಆಧುನಿಕ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ👉ಟಿಪ್ಪು ಸುಲ್ತಾನ್
25)ವೈದ್ಯಕೀಯ ಕ್ಷೇತ್ರದ ಪಿತಾಮಹ👉ಸುಶ್ರುತ
26)ಭಾರತೀಯ ಹಸಿರು ಕ್ರಾಂತಿಯ ಪಿತಾಮಹ👉ಎಂ.ಎಸ್.ಸ್ವಾಮಿನಾಥನ್
27)ಭಾರತೀಯ ಕೈಗಾರಿಕಾ ರಂಗದ ಪಿತಾಮಹ👉ಜೆಮ್ ಷೆಡ್ ಜಿ ಟಾಟಾ
28)ಭಾರತದ ಅಣು ವಿಜ್ಞಾದ ಪಿತಾಮಹ👉ಹೋಮಿ ಜಾಹಂಗೀರ್ ಬಾಬಾ
29)ರೈಲ್ವೆಯ ಪಿತಾಮಹ👉ಸ್ಟಿಫನ್ ಥಾಮಸ್
30)ಭಾರತೀಯ ಶ್ವೇತಾ ಕ್ರಾಂತಿಯ ಪಿತಾಮಹ👉ವರ್ಗೀಸ್ ಕುರಿನ್
31)ವಂಶವಾಹಿನಿ ಶಾಸ್ತ್ರದ ಪಿತಾಮಹ👉
ಗ್ರೆಗರ್ ಮೆಂಡಲ್
32)ಏಷಿಯನ್ ಕ್ರೀಡೆಯ ಪಿತಾಮಹ👉ಜೆ.ಡಿ.ಸೊಂಧಿ
33)ರೇಖಾಗಣಿತದ ಪಿತಾಮಹ👉ಯೂಕ್ಲಿಡ್
34)ವೈಜ್ಞಾನಿಕ ಸಮಾತಾವಾದದ ಪಿತಾಮಹ👉ಕಾರ್ಲ್ ಮಾರ್ಕ್ಸ್
35)ಭಾರತೀಯ ಆರ್ಥಿಕ ಯೋಜನೆಯ ಪಿತಾಮಹ👉ಪಿ.ವಿ.ನರಸಿಂಹರಾವ್
36)ಭಾರತೀಯ ಚಲನಚಿತ್ರ ರಂಗದ ಪಿತಾಮಹ👉ದಾದಾ ಸಾಹೇಬ್ ಫಾಲ್ಕೆ
37)ಭಾರತೀಯ ಸಮಾಜಶಾಸ್ತ್ರದ ಪಿತಾಮಹ👉ಜಿ.ಎಸ್.ಘುರೆ
38)ಕರ್ನಾಟಕ ಸುಗಮ ಸಂಗೀತದ ಪಿತಾಮಹ👉ಶಿಶುನಾಳ ಷರೀಪ
39)ಭಾರತೀಯ ಜ್ಯೋತಿಷ್ಯ ಶಾಸ್ತ್ರದ ಪಿತಾಮಹ👉ವರಹಮೀರ
40)ಆರ್ಥಿಕ ಭೂಗೋಳ ಶಾಸ್ತ್ರದ ಪಿತಾಮಹ👉ರಾಟ್ಜಲ್
 41)ಭಾರತೀಯ ರೈಲ್ವೆಯ ಪಿತಾಮಹ👉ಲಾರ್ಡ್ ಡಾಲ್ ಹೌಸಿ
42)ಆರ್ಯುವೇದದ ಪಿತಾಮಹ👉ಚರಕ
43)ಯೋಗಾಸನದ ಪಿತಾಮಹ👉ಪತಂಜಲಿ ಮಹರ್ಷಿ
44)ಭಾರತದ ವಿದೇಶಾಂಗ ನೀತಿಯ ಶಿಲ್ಪಿ👉ಜವಾಹರಲಾಲ್ ನೆಹರೂ
45)ಭಾರತದ ನವ ಜಾಗ್ರತಿಯ ಜನಕ👉ರಾಜರಾಮ್ ಮೋಹನ್ ರಾವ್
46)ಹಸಿರು ಕ್ರಾಂತಿಯ ಪಿತಾಮಹ👉ನಾರ್ಮನ್ ಬೋರ್ಲಾನ್
47)ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ👉ಪುರಂದರದಾಸರು
48)ಆಧುನಿಕ ಕರ್ನಾಟಕದ ಶಿಲ್ಪಿ👉ಸರ್.ಎಂ.ವಿಶ್ವೇಶ್ವರಯ್ಯ
49)ಭಾರತದ ಶಾಸನದ ಪಿತಾಮಹ👉ಅಶೋಕ
50)ಕರ್ನಾಟಕದ ಶಾಸನದ ಪಿತಾಮಹ👉ಬಿ.ಎಲ್.ರೈಸ್
51)ಪ್ರತಿ ಸುಧಾರಣ ಚಳುವಳಿಯ ಪಿತಾಮಹ👉ಇಗ್ನೇಷಿಯಸ್ ಲಯೋಲ
52)ಸಮಾಜಶಾಸ್ತ್ರದ ಪಿತಾಮಹ👉ಆಗಸ್ಟ್ ಕಾಂಟೆ
53)ಪ್ರಾಚೀನ ಅರ್ಥ ಶಾಸ್ತ್ರದ ಪಿತಾಮಹ👉ವಿಷ್ಣುಶರ್ಮ
54)ಆಧುನಿಕ ಭಾರತದ ಜನಕ👉ರಾಜರಾಮ್ ಮೋಹನ್ ರಾವ್
55)ಸಾಂಸ್ಕೃತಿಕ ಭೂಗೋಳ ಶಾಸ್ತ್ರದ ಪಿತಾಮಹ👉ಲಾಟಿನ್ ಸಾಚ್
56)ಕಂಪ್ಯೂಟರ್ ನ ಪಿತಾಮಹ 👉ಚಾಲ್ಸ್ ಬ್ಯಾಬೇಜ್
57)ಗದ್ಯಶಾಸ್ತ್ರದ ಪಿತಾಮಹ👉ಡಾಂಟೆ
58)ಪದ್ಯಶಾಸ್ತ್ರದ ಪಿತಾಮಹ👉ಪೆಟ್ರಾರ್ಕ್
 59)ಭಾರತದ ನ್ಯೂಕ್ಲಿಯರ್ ಕಾರ್ಯಕ್ರಮದ ಪಿತಾಮಹ👉ಹೋಮಿ ಜಹಾಂಗೀರ್ ಬಾಬಾ
60)ಉರ್ದು ಭಾಷೆಯ ಪಿತಾಮಹ👉ಅಮೀರ್ ಖುಸ್ರೋ
61)ಭಾರತದ ಇತಿಹಾಸದ ಪಿತಾಮಹ👉ಕಲ್ಹಣ
62)ಭಾರತದ ರಸಾಯನಿಕ ಪಿತಾಮಹ👉2ನೇ ನಾಗರ್ಜುನ
63)ಭಾರತೀಯ ಸಾಮಾಜಿಕ ಕ್ರಾಂತಿಯ ಪಿತಾಮಹ👉ಜ್ಯೋತಿರಾವ್ ಪುಲೆ
64)ಭೂವಿಜ್ಞಾನದ ಪಿತಾಮಹ👉ಎ.ಜೇಮ್ಸ್ ಹಟನ್
65)ಪುನರುಜ್ಜಿವನದ ಪಿತಾಮಹ👉ಪೆಟ್ರಾರ್ಕ್
66)ಭಾರತೀಯ ಪುನರುಜ್ಜಿವನದ ಪಿತಾಮಹ👉ರಾಜರಾಮ್ ಮೋಹನ್ ರಾವ್
67)ಕರ್ನಾಟಕದ ಸಮಾಜ ಶಾಸ್ತ್ರದ ಪಿತಾಮಹ👉ಎಂ.ಎನ್.ಶ್ರೀನಿವಾಸ್
68)ಭಾರತದ ಕ್ಷಿಪಣಿಗಳ ಪಿತಾಮಹ👉ಎ.ಪಿ.ಜೆ.ಅಬ್ದುಲ್ ಕಲಾಂ
69)ನೀಲಿ ಕ್ರಾಂತಿಯ ಪಿತಾಮಹ👉ಹರಿಲಾಲ್ ಚೌಧರಿ
70)ಹಳದಿ ಕ್ರಾಂತಿಯ ಪಿತಾಮಹ👉ಶ್ಯಾಮ್ ಪಿತ್ರೋಡಾ
71)ಇತಿಹಾಸದ ಪಿತಾಮಹ👉ಹೆರೋಡಾಟಸ್
72)ಆರ್ಥಶಾಸ್ತ್ರದ ಪಿತಾಮಹ👉ಆಡಂ ಸ್ಮಿತ್
73)ರಾಜ್ಯ ಶಾಸ್ತ್ರದ ಪಿತಾಮಹ👉ಅರಿಸ್ಟಾಟಲ್
74)ಭಾರತದ ಪೂಜ್ಯ ಪಿತಾಮಹ👉ದಾದಾಬಾಯಿ ನೌರೋಜಿ
75)ಭಾರತದ ಹೈನುಗಾರಿಕೆಯ ಪಿತಾಮಹ👉ಜಾರ್ಜ ಕುರಿಯನ್
76)ಭಾರತದ ಅರಣ್ಯ ಶಾಸ್ತ್ರದ ಪಿತಾಮಹ👉ಬ್ರಾಂಡೀಸ್
77)ಹರಿದಾಸ ಪಿತಾಮಹ👉ಶ್ರೀಪಾದರಾಯರು
78)ಕನ್ನಡದ ಕಾವ್ಯ ಪಿತಾಮಹ👉ಪಂಪ
79)ಕನ್ನಡ ಚಳುವಳಿಯ ಪಿತಾಮಹ👉ಅ.ನ.ಕೃಷ್ಣರಾಯ
80)ಸಹಕಾರಿ ಚಳುವಳಿಯ ಪಿತಾಮಹ👉ದಿ.ಮೊಳಹಳ್ಳಿ ಶಿವರಾಯರು
81)ವಚನ ಸಂಪಾದನೆಯ ಪಿತಾಮಹ👉ಫ.ಗು.ಹಳಕಟ್ಟಿ
82)ಕರ್ನಾಟಕದ ಪ್ರಹಸನದ ಪಿತಾಮಹ👉ಟಿ.ಪಿ.ಕೈಲಾಸಂ
83)ಕಾದಂಬರಿಯ ಪಿತಾಮಹ👉ಗಳಗನಾಥ
84)ಹೋಸಗನ್ನಡ ಸಾಹಿತ್ಯದ ಪಿತಾಮಹ👉ಬಿ.ಎಮ್.ಶ್ರೀಕಂಠಯ್ಯ
85)ಕರ್ನಾಟಕದ ಜಾನಪದ ಸಾಹಿತ್ಯದ ಪಿತಾಮಹ👉ಜಿ.ಎಂ.ಪರಮಶಿವಯ್ಯ
86)ಆಧುನಿಕ ಕನ್ನಡ ನಿಘಂಟಿನ ಪಿತಾಮಹ👉ಜಿ.ವೆಂಕಟಸುಬ್ಬಯ್ಯ
87)ಕನ್ನಡ ಸಾಹಿತ್ಯದ ನವ್ಯ ನಾಟಕದಪಿತಾಮಹ👉ಟಿ.ಪಿಕೈಲಾಸಂ
88)ಭಾರತದ ಮೆಟ್ರೋ ರೈಲಿನ ಪಿತಾಮಹ👉ಇ.ಶ್ರೀಧರನ್
89)ಭಾರತದ ಬಾಹ್ಯಕಾಶ ಯೋಜನೆಯ ಪಿತಾಮಹ👉ವಿಕ್ರಂ ಸಾರಾಭಾಯಿ
90)ಭಾರತದ ವೃದ್ಧರ ಪಿತಾಮಹ👉ದಾದಾಬಾಯಿ ನವರೋಜಿ
91)ಹಿಂದಿಳಿದ ವರ್ಗಗಳ ಪಿತಾಮಹ👉ದೇವರಾಜ ಅರಸ್
91)ಫೇಸ್ ಬುಕ್ ನ ಪಿತಾಮಹ👉ಮಾರ್ಕ್ ಜುಗರ್ ಬರ್ಗ್
92)ಇಂಗ್ಲಿಷ್ ಕಾವ್ಯದ ಪಿತಾಮಹ👉ಜಿಯಾಪ್ರೆರಿ ಚೌಸೆರ್
93)ಭಾರತದ ಯೋಜನೆಯ ಪಿತಾಮಹ👉ಸರ್.ಎಂ.ವೀಶ್ವೇಶ್ವರಯ್ಯ
94)ವಿಕಾಸವಾದದ ಪಿತಾಮಹ👉ಚಾರ್ಲ್ಸ್ ಡಾರ್ವಿನ್
95)ಪಾಶ್ಚಿಮಾತ್ಯ ವೈದ್ಯ ಶಾಸ್ತ್ರದ ಪಿತಾಮಹ👉ಹಿಪ್ಪೋಕ್ರೇಟ್ಸ್
96)ಆಧುನಿಕ ಯೋಗದ ಪಿತಾಮಹ👉ಬೆಳ್ಳೂರು ಕೃಷ್ಣಮಾಚಾರ ಸುಂದರ್ ರಾಜ ಅಯ್ಯಂಗಾರ್
97)ಆಧುನಿಕ ಶೈಕ್ಷಣಿಕ ಮನೋ ವಿಜ್ಞಾನದ ಪಿತಾಮಹ👉ಥಾರ್ನ್ ಡೈಕ್
98)ಕನ್ನಡದ ಸಣ್ಣ ಕಥೆಗಳ ಪಿತಾಮಹ👉ಪಂಜೆ ಮಂಗೇಶರಾಯರು
99)ರಾಷ್ಟ್ರ ಪಿತಾಮಹ👉ದಾದಾಬಾಯಿ ನವರೋಜಿ
100)ಭಾರತದ ಸಂವಿಧಾನದ ಶಿಲ್ಪಿ👉 ಬಿ.ಆರ್.ಅಂಬೇಡ್ಕರ್

24.10.16

TET - ಟಿಇಟಿಗೆ ಇಂದೇ ಸಿದ್ಧತೆ ಆರಂಭಿಸಿ




ಟಿಇಟಿಗೆ ಇಂದೇ ಸಿದ್ಧತೆ ಆರಂಭಿಸಿ


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮತ್ತು ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ಮಾಹಿತಿ ಇಲ್ಲಿದೆ. 

ಯಾವ ಯಾವ ಪರೀಕ್ಷೆಯ ಪಠ್ಯವಿಷಯ ಏನಾಗಿರುತ್ತದೆ, ಯಾವ ವಿಷಯಕ್ಕೆ ಎಷ್ಟು ಅಂಕ ನಿಗದಿಯಾಗಿದೆ ಎಂಬುದನ್ನು ನೋಡಿಕೊಳ್ಳಿ. ಇದಕ್ಕೆ ಸರಿಯಾಗಿ ವೇಳಾಪಟ್ಟಿ ಸಿದ್ಧಪಡಿಸಿ ಅಭ್ಯಾಸ ಆರಂಭಿಸಿ. ಈ ಪರೀಕ್ಷೆಯು ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

 ಹೀಗಾಗಿ ಪ್ರಶ್ನೆಗಳಿಗೆ ಉತ್ತರಿಸಲು ಸ್ಪಷ್ಟ ಗ್ರಹಿಕೆ ಹೊಂದುವುದು ಅಗತ್ಯ. ಆದ್ದರಿಂದ ಯಾವುದೇ ಗೊಂದಲವಾಗದಂತೆ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ, ಭಿನ್ನ ರೀತಿಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುವ ಸಾಮರ್ಥ್ಯ‌ವನ್ನು ಬೆಳೆಸಿಕೊಂಡಿರಬೇಕು. ಅಭ್ಯಸಿಸುವಾಗ ಮುಖ್ಯವಾಗಿ ಈ ಎರಡು ಪಾಯಿಂಟ್‌ನತ್ತ ಹೆಚ್ಚು ಗಮನ ನೀಡಿ. ಮೊದಲಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕಗಳನ್ನು ಸಮಗ್ರವಾಗಿ ಅಭ್ಯಾಸ ಮಾಡಿ.

ಇಲ್ಲಿರುವ ಪ್ರಮುಖ ವಿಷಯಗಳ (ಉದಾ: ಸ್ವಾತಂತ್ರ್ಯ ಹೋರಾಟ) ಬಗ್ಗೆ ಹೆಚ್ಚಿನ ಓದಿಗೆ ಸೂಕ್ತ ಪುಸ್ತಕ ಆಯ್ದುಕೊಳ್ಳಿ. ಬಹುತೇಕವಾಗಿ ಸಿಟಿಇಟಿ ಮಾದರಿಯಲ್ಲಿಯೇ (ಶೇ.80ರಷ್ಟು) ಈ ಪರೀಕ್ಷೆ ನಡೆಯಲಿರುವುದರಿಂದ ಸಿಟಿಇಟಿಯ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಮಾದರಿಯಾಗಿಟ್ಟುಕೊಂಡು ಅಭ್ಯಾಸ ನಡೆಸಬಹುದು.

ಈ ಪರೀಕ್ಷೆಗೆ ಸಂಬಂಧಿಸಿದ ನಿಮ್ಮ ಗೊಂದಲ ದೂರ ಮಾಡುವ ಒಂದಿಷ್ಟು ಪ್ರಶ್ನೋತ್ತರ ಇಲ್ಲಿದೆ; 

*ಯಾರು ಈ ಪರೀಕ್ಷೆ ಬರೆಯಬಹುದು? ಟಿಇಟಿ ಪರೀಕ್ಷೆಯು ರಾಜ್ಯಮಟ್ಟದ್ದಾಗಿದ್ದು ರಾಜ್ಯದ ಪಠ್ಯಕ್ರಮದಲ್ಲಿ ಎನ್‌ಸಿಟಿಇ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಇತರ ರಾಜ್ಯದ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಬಹುದಾಗಿದೆ. ಸಿ.ಪಿ.ಇ.ಡಿ, ಬಿ.ಪಿ.ಇ.ಡಿ ಅಥವಾ ದೈಹಿಕ ಶಿಕ್ಷಕರಾಗಲು ಅರ್ಹತೆ ಹೊಂದಿದ ಅಭ್ಯರ್ಥಿಗಳು ಟಿ.ಇ.ಟಿ ಪರೀಕ್ಷೆ ಬರೆಯುವುದು ಕಡ್ಡಾಯವಿಲ್ಲ.

 ಡಿ.ಇಡಿಯನ್ನು ಹೊಂದಿರುವ ಪದವೀಧರರು ಮತ್ತು ಪದವಿ ಮತ್ತು ಬಿ.ಇಡಿ ಹೊಂದಿರುವ ಅಭ್ಯರ್ಥಿಗಳಿಗೆ ಪಿಯುಸಿಯಲ್ಲಿ ಶೇ. 50 ಕಡ್ಡಾಯವಿಲ್ಲ, ಆದರೆ ಪದವಿ ಮತ್ತು ಬಿ.ಇಡಿ ಹೊಂದಿರುವವರು ಪದವಿಯಲ್ಲಿ ಶೇ. 50 ಅಂಕಗಳಿಸುವುದು ಕಡ್ಡಾಯ. ಎನ್‌ಸಿಟಿಯು ನಿಗದಿಪಡಿಸಿರುವ ವಿವಿಧ ಹಂತದ ಶಿಕ್ಷಕರಾಗಲು ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯಲ್ಲಿ 1ರಿಂದ 5ನೇ ತರಗತಿಗೆ ಶಿಕ್ಷಕರಾಗಲು, ಪಿಯುಸಿ-ಡಿ.ಇಡಿ, 6ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಪದವಿ ಮತ್ತು ಡಿ.ಇಡಿ- ಪದವಿ ಮತ್ತು ಬಿ.ಇಡಿ ಮತ್ತು 9,10,11,12ನೇ ತರಗತಿಗೆ ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಎಂದು ನಿಗದಿಪಡಿಸಿದೆ. ಆದ್ದರಿಂದ ವಿದ್ಯಾರ್ಹತೆ ಹೊಂದಿರುವ ಯಾರೂ ನೇಮಕಾತಿಗೆ ವಂಚಿತರಾಗುವುದಿಲ್ಲ.

ಹಿಂದಿ ಮಾಧ್ಯಮದಲ್ಲಿ ಬಿ.ಇಡಿ ಹೊಂದಿರುವವರೂ ಸಹ 6-8ನೇ ತರಗತಿಯವರೆಗೆ ಶಿಕ್ಷಕರಾಗಲು ಟಿಇಟಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. *

ಟಿಇಟಿ ಬರೆಯಲು ಗರಿಷ್ಠ ವಯೋಮಿತಿ ಎಷ್ಟು?

 ವಯೋಮಿತಿ ಇರುವುದಿಲ್ಲ. ಶೈಕ್ಷಣಿಕ ಅರ್ಹತೆ ಹೊಂದಿರುವ ಯಾವುದೇ ವಯಸ್ಸಿನವರು ಈ ಪರೀಕ್ಷೆ ತೆಗೆದುಕೊಳ್ಳಬಹುದು.

 * ಎಷ್ಟು ಬಾರಿ ಟಿಇಟಿ ಬರೆಯಬಹುದು?

ಒಬ್ಬರು ಎಷ್ಟು ಬಾರಿ ಬೇಕಾದರೂ ಈ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಬಹುದು. *

ಟಿಇಟಿಯಲ್ಲಿ ತೇರ್ಗಡೆಯಾದರೆ ನೌಕರಿ ಸಿಗುತ್ತದೆಯೇ?

ಇದು ಶಿಕ್ಷಕರ ಅರ್ಹತಾ ಪರೀಕ್ಷೆಯೇ ಹೊರತು ನೇಮಕಾತಿ ಪರೀಕ್ಷೆಯಾಗಿರುವುದಿಲ್ಲ. ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಂಡ ಮಾತ್ರಕ್ಕೆ ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿಗಾಗಿ ಯಾವುದೇ ರೀತಿಯ ಹಕ್ಕನ್ನು ಚಲಾಯಿಸುವಂತಿಲ್ಲ. *

ಎಷ್ಟು ವರ್ಷಗಳಿಗೊಮ್ಮೆ ಟಿಇಟಿ ನಡೆಯುತ್ತದೆ?

ಪ್ರತಿ ವರ್ಷ ರಾಜ್ಯದಲ್ಲಿ ಕೆಎಆರ್‌ ಟಿಇಟಿ ನಡೆಯಲಿದೆ. *

 ಟಿಇಟಿಯ ಪ್ರಮಾಣ ಪತ್ರವನ್ನು ಎಷ್ಟು ವರ್ಷ ಬಳಸಬಹುದು?

 ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನೀಡಲಾಗುವ ಪ್ರಮಾಣ ಪತ್ರಕ್ಕೆ ಜೀವಿತಾವಧಿ ವರ್ಷಗಳ ಕಾಲ ಮಾನ್ಯತೆ ಇರಲಿದೆ.

 ಈ ಅವಧಿಯಲ್ಲಿ ನಡೆಯುವ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಈ ಪ್ರಮಾಣ ಪತ್ರಹೊಂದಿದವರು ಅರ್ಹರಾಗಿರುತ್ತಾರೆ.

 ಹೈದರಾಬಾದ್‌-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಲ್ಲಿ ರಿಯಾಯಿತಿ ಏನಾದರೂ ಇರುತ್ತದೆಯೇ?

 ಖಂಡಿತವಾಗಿಯೂ ಇಲ್ಲ. ರಾಜ್ಯದ ಎಲ್ಲ ಭಾಗದ ಅಭ್ಯರ್ಥಿಗಳಿಗೂ ಒಂದೇ ಮಾನದಂಡವನ್ನು ಅನುಸರಿಸಲಾಗುತ್ತದೆ. 

* ಈ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಬರೆಯಬಹುದೇ? ಇಲ್ಲ, ಸದ್ಯಕ್ಕೆ ಈ ಅವಕಾಶ ನೀಡಲಾಗಿಲ್ಲ. ಪರೀಕ್ಷೆಯಲ್ಲಿ ಒಎಂಆರ್‌ ಶೀಟ್‌ನಲ್ಲಿ ಸರಿಯುತ್ತರವನ್ನು ಗುರುತಿಸಬೇಕು.ಅದನ್ನು ಸ್ಕ್ಯಾ‌ನ್‌ ಮಾಡಿ, ಪಡೆದಿರುವ ಅಂಕವನ್ನು ನಿರ್ಧರಿಸಲಾಗುತ್ತದೆ.

 * ಈ ಪರೀಕ್ಷೆ ನಡೆಸುವವರು ಯಾರು? 

ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿಗಳು ಈ ಪರೀಕ್ಷೆ ನಡೆಸಲಿದ್ದಾರೆ.

ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

 * ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದೇ?
 ಇಲ್ಲ, ಇದಕ್ಕೆ ಅವಕಾಶ ನೀಡಲಾಗಿಲ್ಲ. ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಪರೀಕ್ಷಾ ಶುಲ್ಕವನ್ನು ಬ್ಯಾಂಕ್‌ ಮೂಲಕವೇ ಪಾವತಿಸಬೇಕು. ಇತ್ತ ಗಮನಿಸಿ * ಈಗಾಗಲೇ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವವರೂ ಟಿಇಟಿ ಪರೀಕ್ಷೆ ತೆಗೆದುಕೊಂಡಿರಬಹುದು.

 ಅವರು ಗಮನಿಸಬೇಕಾದ ವಿಷಯವೆಂದರೆ, ತಮಗಿರುವ ಅನುಭವದಿಂದಲೇ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೇವೆ ಎಂಬ ವಿಶ್ವಾಸ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಈ ಪರೀಕ್ಷೆಯಲ್ಲಿ ಅನುಭವಕ್ಕಿಂತ ವಿಷಯ ಜ್ಞಾನ ಮುಖ್ಯ. * ಅಭ್ಯಾಸ ನಡೆಸುವಾಗಲೇ ಟೈಮ್‌ ಮ್ಯಾನೇಜ್‌ ಮಾಡುವುದನ್ನೂ ಕಲಿತುಕೊಳ್ಳಿ. ಏಕೆಂದರೆ ಐದು ವಿಷಯಗಳಿಗೆ ಸಂಬಂಧಿಸಿದ 150 ಪ್ರಶ್ನೆಗಳಿಗೆ ಕೇವಲ 90 ನಿಮಿಷಷಲ್ಲಿ ನೀವು ಉತ್ತರ ಗುರುತಿಸಬೇಕಾಗಿರುತ್ತದೆ. ಒಂದು ವಿಷಯಕ್ಕೆ ಸಿಗುವ ಸಮಯ ಕೇವಲ 18 ನಿಮಿಷ.


(ಸಂಗ್ರಹಿಸಲಾದ ಮಾಹಿತಿ)

19.10.16

ಪಿಡಿಓ ಪರೀಕ್ಷೆ ವಿಶೇಷಾಂಕ - ಗ್ರಾಮ ವಿಕಾಸ ಯೋಜನೆ

☀.ಪಿಡಿಓ ಪರೀಕ್ಷೆ ವಿಶೇಷಾಂಕ - ಗ್ರಾಮ ವಿಕಾಸ ಯೋಜನೆ
(Gram Vikas Yojana / Rural Development Scheme )
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
(Rural Development & Panchayat Raj)


ಗ್ರಾಮಗಳ ಅಭಿವೃದ್ಧಿಗೆ ಮಾತ್ರ ಸೀಮಿತವಾಗಿದ್ದ ಸುವರ್ಣ ಗ್ರಾಮೋದಯ ಯೋಜನೆಗೆ ಕೊಕ್ ನೀಡಿರುವ ರಾಜ್ಯ ಸರ್ಕಾರ, ಪರ್ಯಾಯವಾಗಿ ಸಮಗ್ರ ಗ್ರಾಮಾಭಿವೃದ್ಧಿಯ ಜತೆಗೆ ಗ್ರಾಮದ ಯುವಜನತೆಗೆ ಕೌಶಲ ತರಬೇತಿಯ ಮೂಲಕ ಅವರ ಜೀವನಮಟ್ಟ ಸುಧಾರಿಸುವ ಹೊಸ ‘ಗ್ರಾಮ ವಿಕಾಸ’ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ.


ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಜಾರಿಗೊಳಿಸಲಿರುವ ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ 3 ವರ್ಷಗಳ ಕಾಲಮಿತಿ ಹಾಕಿಕೊಂಡಿದೆ.

ಪ್ರತಿ ವಿಧಾನಸಭಾ ಕ್ಷೇತ್ರದಿಂದ 5 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು.

ಪ್ರತಿ ಗ್ರಾಮಕ್ಕೆ 75 ಲಕ್ಷ ರೂ.ನಂತೆ ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಟ್ಟು75 ಕೋಟಿ ರೂ.ಗಳನ್ನು ಯೋಜನೆಯಡಿ ವೆಚ್ಚ ಮಾಡಲಾಗುತ್ತದೆ.

ಅನುದಾನವನ್ನು ಬಳಕೆ ಮಾಡಿಕೊಳ್ಳುವ ಅಧಿಕಾರವನ್ನು ಗ್ರಾಪಂಗಳಿಗೆ ನೀಡಲಾಗಿದೆ. ಯಾವ ಯೋಜನೆಗಳಿಗೆ ಈ ಹಣ ಖರ್ಚು ಮಾಡಬೇಕು ಮತ್ತು ಯಾವುದಕ್ಕೆ ಖರ್ಚು ಮಾಡಬಾರದು ಎಂಬುದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ನಿಯಮಾವಳಿ ರೂಪಿಸಲಾಗಿದೆ.

ಪ್ರತಿ 3 ತಿಂಗಳಿಗೊಮ್ಮೆ ಅನುದಾನವನ್ನು ಜಿಪಂಗಳ ಮೂಲಕ ಗ್ರಾಪಂಗಳ ಖಾತೆಗೆ ನೇರವಾಗಿ ಸಂದಾಯ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

ಪ್ರಗತಿಯನ್ನು ಪ್ರತಿ 2 ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಪರಿಶೀಲಿಸಬೇಕೆಂದು ಸೂಚಿಸಲಾಗಿದೆ.


★ ನಿರುದ್ಯೋಗಳಿಗಾಗಿ ತರಬೇತಿ:

ಗ್ರಾಮೀಣ ಭಾಗದ ಜನ ಕೃಷಿಯನ್ನಷ್ಟೇ ನೆಚ್ಚಿಕೊಳ್ಳಬಾರದೆಂಬ ಕಾರಣಕ್ಕೆ ಗ್ರಾಮ ವಿಕಾಸ ಯೋಜನೆಯಲ್ಲಿ ಯುವಕ-ಯುವತಿಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲಾಗುವುದು.

ತರಬೇತಿ ನಂತರ ಸ್ವಯಂ ಉದ್ಯೋಗ ಕೈಗೊಳ್ಳಲು ನೆರವು, ಸ್ವಸಹಾಯ ಗುಂಪುಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಸಂಘಗಳ ಒಕ್ಕೂಟ ಸ್ಥಾಪಿಸುವ ಅವಕಾಶ ಕಲ್ಪಿಸಲಾಗಿದೆ.

★ ಸುವರ್ಣ ಗ್ರಾಮೋದಯ ಸಮಾಪ್ತಿ ಏಕೆ?

ಬಿಜೆಪಿ-ಜೆಡಿಎಸ್ ಸಮಿಶ್ರ ಸರ್ಕಾರ ಸುವರ್ಣ ಗ್ರಾಮೋ�


(PART-VII) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)


1).ಜನವಸತಿ ಸಭಾದ ಅಧ್ಯಕ್ಷರು ಯಾರಾಗಿರುತ್ತಾರೆ?

A). ಊರಿನ ಹಿರಿಯ ವ್ಯಕ್ತಿ
B). ವಾರ್ಡಿನ ಚುನಾಯಿತನಾದ ಸದಸ್ಯ
C). ಗ್ರಾಮ ಪಂಚಾಯಿತಿಯ ಅಧ್ಯಕ್ಷ
D). ಗ್ರಾಮ ಸಭೆಯ ಅಧ್ಯಕ್ಷ

Correct Ans: (B)

Description:
ಉ: ವಾರ್ಡಿನ ಚುನಾಯಿತನಾದ ಸದಸ್ಯ
# ಆಯಾ ಜನವಸತಿ ಪ್ರದೇಶವನ್ನು ಪ್ರತಿನಿಧಿಸುವ ವಾರ್ಡಿನ ಚುನಾಯಿತನಾದ ಸದಸ್ಯನು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು.
# ವಾರ್ಡನ್ನು ಪ್ರತಿನಿಧಿಸುವ ಚುನಾಯಿತ ಸದಸ್ಯರ ಸಂಖ್ಯೆಯು ಒಂದಕ್ಕಿಂತ ಹೆಚ್ಚಾಗಿರುವ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಪೈಕಿಯೇ ಚುನಾಯಿತನಾದ ಸದಸ್ಯನೊಬ್ಬನು ಸಭೆಯನ್ನು ಕರೆದು ಅಧ್ಯಕ್ಷತೆಯನ್ನು ವಹಿಸತಕ್ಕದ್ದು.



2.)ವಾರ್ಡಿನ ಚುನಾಯಿತನಾದ ಸದಸ್ಯನ ಅನುಪಸ್ಥಿತಿಯಲ್ಲಿ ಯಾರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ?

A). ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು
B). ಗ್ರಾಮ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಅಧ್ಯಕ್ಷ
C). ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ
D). ಮೇಲಿನ ಯಾವುದೂ ಅಲ್ಲ

Correct Ans: (A)

Description:
ಉ: ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು
ವಾರ್ಡಿನ ಚುನಾಯಿತನಾದ ಸದಸ್ಯನು ಸಭೆಯ ಅಧ್ಯಕ್ಷತೆ ವಹಿಸತಕ್ಕದ್ದು ಮತ್ತು ಆತನ / ಆಕೆಯ ಅನುಪಸ್ಥಿತಿಯಲ್ಲಿ ಸದರಿ ಜನವಸತಿ ಸಭಾದಿಂದ ಚುನಾಯಿತನಾದ ಗ್ರಾಮ ಪಂಚಾಯಿತಿಯ ಯಾವೊಬ್ಬ ಇತರೆ ಮತದಾರನು ಅಧ್ಯಕ್ಷತೆ ವಹಿಸತಕ್ಕದ್ದು.



3.)ಜನವಸತಿ ಸಭೆಯ ಅಧ್ಯಕ್ಷರು ಅವಶ್ಯಕವಾದ ಸಮಯದಲ್ಲಿ ಸಭೆ ಕರೆಯುವುದು ತಪ್ಪಿದರೆ ಯಾರು ಸಭೆಯನ್ನು ಕರೆಯುತ್ತಾರೆ?

A). ಜಿಲ್ಲಾ ಪಂಚಾಯತ್ ಅಧಿಕಾರಿಗಳು
B). ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
C). ಗ್ರಾಮ ಸಭೆಯ ಅಧ್ಯಕ್ಷ
D). ಗ್ರಾಮ ಪಂಚಾಯತ್‌ನ ಅಧ್ಯಕ್ಷ

Correct Ans: (B)

Description:
ಉ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು
# ವಾರ್ಡ್‌ಗೆ ಚುನಾಯಿತನಾದ, ಜನವಸತಿ ಪ್ರದೇಶದಲ್ಲಿರುವ ಸದಸ್ಯನು ಜನವಸತಿ ಪ್ರದೇಶ ಸಭಾದ ಸಭೆಯನ್ನು ಯಾವಾಗ ಕರೆಯಬೇಕಾಗಿತ್ತೋ ಅಥವಾ ಕರೆಯ��


☀.ಪಿಡಿಓ ಪರೀಕ್ಷೆ ವಿಶೇಷಾಂಕ - 14ನೇ ಹಣಕಾಸು ಆಯೋಗದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಅನುದಾನ:
(Grant Allotment for Local Governance in 14th Financial Commission)
•─━━━━━═══════════━━━━━─••─━━━━━═══════════━━━━━─•

★ ಪಿಡಿಓ ಪರೀಕ್ಷಾ ಅಧ್ಯಯನ ವಿಶೇಷಾಂಕ
(PDO Exam Study Notes)

★ 14ನೇ ಹಣಕಾಸು ಆಯೋಗ
(14th Financial Commission)



ಕೇಂದ್ರ ಸರ್ಕಾರ ನೇಮಿಸಿದ್ದ ವೈ. ವಿ. ರೆಡ್ಡಿ ಅಧ್ಯಕ್ಷತೆಯ 14 ನೇ ಹಣಕಾಸು ಆಯೋಗದ ಶಿಫಾರಸುಗಳನ್ವಯ 2015-16 ರಿಂದ 2019-20 ರವರೆಗೆ ಐದು ವರ್ಷಗಳ ಅವಧಿಗೆ ಕೇಂದ್ರ ಸರ್ಕಾರವು ಸ್ಥಳೀಯ ಸಂಸ್ಥೆಗಳಿಗೆ ಅನುದಾನವನ್ನು ನೀಡುತ್ತದೆ.

ಅನುದಾನವನ್ನು ನಿಗದಿಪಡಿಸುವಾಗ ಶೇ 90 ರಷ್ಟನ್ನು 2011ರ ಜನಸಂಖ್ಯೆ ಆಧರಿಸಿ ಮತ್ತು ಶೇ 10 ರಷ್ಟನ್ನು ಪ್ರದೇಶವನ್ನು ಆಧರಿಸಿ ನಿಗದಿಪಡಿಸಲಾಗುತ್ತದೆ.

ಈ ಅನುದಾನವನ್ನು " ಮೂಲ ಅನುದಾನ " ಮತ್ತು ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣೆ ಆಧರಿಸಿ " ಕಾರ್ಯ ನಿರ್ವಹಣಾ ಅನುದಾನ " ಎಂಬ ಎರಡು ವಿಧಗಳಲ್ಲಿ ನೀಡಲಾಗುತ್ತದೆ.

13 ನೇ ಹಣಕಾಸು ಆಯೋಗದ ಅವಧಿಯಲ್ಲಿ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತಿತ್ತು.

ಪ್ರಸ್ತುತ 14 ನೇ ಹಣಕಾಸು ಆಯೋಗವು ಜನರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಸ್ಥಳೀಯ ಸರ್ಕಾರವಾಗಿರುವ ಗ್ರಾಮ ಪಂಚಾಯತಿಗಳಿಗೆ ಮಾತ್ರ 14 ನೇ ಹಣಕಾಸು ಆಯೋಗದ ಅನುದಾನವನ್ನು ನೀಡಲಾಗುತ್ತಿದೆ.

 ಗ್ರಾಮ ಪಂಚಾಯತಿಗಳಿಗೆ ನೀಡಲಾಗುವ ಅನುದಾನದಲ್ಲಿ ಶೇ 90 ರಷ್ಟು ಮೂಲ ಅನುದಾನವಾಗಿದ್ದರೆ, ಉಳಿದ ಶೇ 10ರಷ್ಟು ಕಾರ್ಯನಿರ್ವಹಣಾ ಅನುದಾನವಾಗಿರುತ್ತದೆ.

14 ಹಣಕಾಸು ಆಯೋಗದ ಅನುದಾನವನ್ನು ಗ್ರಾಮ ಪಂಚಾಯತಿಗಳು ಕಡ್ಡಾಯವಾಗಿ ಶೇ 90 ರಷ್ಟು ಅನುದಾನವನ್ನು ಆಸ್ತಿಗಳನ್ನು ಸೃಜಿಸುವ ಕಾಮಗಾರಿಗಳಿಗೆ ಬಳಸಬೇಕು ಮತ್ತು ಉಳಿದ ಶೇ 10 ರಷ್ಟು ಅನುದಾನವನ್ನು ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಬಳಸಬಹುದು. ಒಟ್ಟು ಅನುದಾನದಲ್ಲಿ ಶೇ 25 ರಷ್ಟನ್ನು ಕಡ್ಡಾಯವಾಗಿ SC/ST ವರ್ಗಗಳಿಗೆ ಖರ್ಚು ಮಾಡಲೇಬೇಕು.


●.ಅನುದಾನವನ್ನು ಈ ಕೆಳಕಂಡ ಕಾಮಗಾರಿಗಳಿಗೆ ಬಳಸಬಹುದು.

೧. ಕುಡಿಯುವ ನೀರು ಸರಬರಾಜು - ಕನಿಷ್ಠ ಶೇ 20

೨. ನೈರ್ಮಲ್ಯ ಕಾಮಗಾರಿಗಳು, ಘನ/ದ್ರವ ತ್ಯಾಜ್ಯ ನಿರ್ವಹಣೆ - ಕನಿಷ್ಠ ಶೇ 10

೩. ಸಮುದಾಯ ಆಸ್ತಿಗಳ ನಿರ್ವಹಣೆ - ಗರಿಷ್ಠ ಶೇ 15

೪. ಗ್ರಾಪಂ ರಸ್ತೆಗಳ, ಪಾದಚಾರಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ -


(PART-VI) ಪಿ.ಡಿ.ಓ ನೇಮಕಾತಿ ಪರೀಕ್ಷೆ -2016ರ ಬಹು ಆಯ್ಕೆಯ ಮಾದರಿ  ಪ್ರಶ್ನೋತ್ತರಗಳು :
(PDO Examination Multiple Choice Model Question and Answers)
•─━━━━━═══════════━━━━━─••─━━━━━═══════════━━━━━─•

★ ಬಹು ಆಯ್ಕೆಯ ಪ್ರಶ್ನೋತ್ತರಗಳು
(Multiple Choice Question and Answers)


1) ನಮೂನೆ ನಂ 20 ಪುಸ್ತಕ ಯಾವುದು?
ಎ. ಸಾಮಾನ್ಯ ಪಾವತಿ ಪುಸ್ತಕ
ಬಿ. ತೆರಿಗೆ ಪುಸ್ತಕ  
ಸಿ. ವೇತನ ಪುಸ್ತಕ  
ಡಿ. ಯಾವೂದು ಅಲ್ಲ

ಉ: ಎ


2) 1927ರ ಹೊತ್ತಿಗೆ ಹಿಂದಿನ ಮೈಸೂರು ಸಂಸ್ಥಾನದ ಎಷ್ಟು ಜಿಲ್ಲೆಗಳಲ್ಲಿ ಸರಕಾರೇತರ ಚುನಾಯಿತ ವ್ಯಕ್ತಿಗಳು ಜಿಲ್ಲಾ ಮಂಡಳಿಗಳ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು?

ಎ. 19
ಬಿ. 13
ಸಿ. 08
ಡಿ. 09

ಉ:ಸಿ


3)  ಸಂವಿಧಾನದ 73ನೇ ತಿದ್ದುಪಡಿಯ 243 1ನೇ ಅನುಚ್ಛೇದ ಯಾವುದಕ್ಕೆ ಸಂಬಂಧಿಸಿದೆ?

ಎ. ಜಿಲ್ಲಾ ಯೋಜನಾ ಸಮಿತಿ ರಚೆನೆಗೆ
ಬಿ. ಹಣಕಾಸು ಆಯೋಗ ರಚೆನೆಗೆ
ಸಿ. ಚುನಾವಣಾ ಆಯೋಗ ರಚೆನೆಗೆ
ಡಿ. ಯಾವೂದು ಅಲ್ಲ

ಉ: ಬಿ


4) ಪ್ರಸ್ತುತವಾಗಿ ಶಾಸಕರ/ವಿಧಾನ ಪರಿಷತ್ತ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುಧಾನವನ್ನು ____ ಯೋಜನೆಯೊಂದಿಗೆ ವಿಲಿನಗೊಳಿಸಲಾಗಿದೆ

ಎ. ಗ್ರಾಮ.ವಿಕಾಸ
ಬಿ. MGNREGA
ಸಿ. ಆದರ್ಶ ಗ್ರಾಮ
ಡಿ.ಜಲ ನಿರ್ಮಲ

ಉ: ಬಿ


5) ಜಲ ನಿರ್ಮಲ ಯೋಜನೆಗೆ ನೆರವು ನೀಡುವವರು ಯಾರು?

ಎ. ವಿಶ್ವ ಬ್ಯಾಕ
ಬಿ. ಕೇಂದ್ರ ಸರಕಾರ
ಸಿ. ರಾಜ್ಯ ಸರಕಾರ
ಡಿ. ಬಿ&ಸಿ

ಉ: ಎ


6) ಮಾಹಿತಿ ಹಕ್ಕು ಅಧಿನಿಯ 2005ರಡಿ ಗ್ರಾಮ ಪಂಚಾಯತಿ ಮೊದಲನೇ ಮೇಲ್ಮನವಿ ಪ್ರಾಧಿಕಾರಿ ಯಾರು?

ಎ. ಪಿ.ಡಿ.ಓ
ಬಿ. ಕಾರ್ಯದರ್ಶಿ
ಸಿ. ಕಾರ್ಯನಿರ್ವಾಹಕ ಅಧಿಕಾರಿ
ಡಿ. ಅಧ್ಯಕ್ಷರು

ಉ: ಎ


7) ಮಾಹಿತಿ ಹಕ್ಕು ಅಧಿನಿಯ 2005ರಡಿ ಫ್ಲಾಪಿ/ಡಿಸ್ಕೆಟ್ ನಲ್ಲಿ ಮಾಹಿತಿ ಪಡೆಯಲು ರೂ____ ಹಣ ಸಂಧಾಯ ಮಾಡಬೇಕಾಗುತ್ತದೆ.

ಎ. 100 ರೂ
ಬಿ. 50 ರೂ
ಸಿ. 30 ರೂ
ಡಿ. 20 ರೂ

ಉ: ಬಿ


8) ಕರ್ನಾಟಕದಲ್ಲಿ ಮೈಸೂರ ಗ್ರಾಮ ಪಂಚಾಯತಿ & ಜಿಲ್ಲಾ ಮಂಡಳಿಗಳ ಅಧಿನಿಯಮ ಯಾವಾಗ ಜಾರಿಗೆ ಬಂದಿತು?

ಎ. 195
ಬಿ. 1962
ಸಿ. 1956
ಡಿ. 1887

ಉ: ಎ


9) 1959ರ ಕಾಯ್ದೆಯ ಜಿಲ್ಲೆಯಲ್ಲಿ ರಚನೆಯಾದ ಸಮಿತಿ ಯಾವುದು?

ಎ. ಜಿಲ್ಲಾ ಪಂಚಾಯತಿ
ಬಿ. ಜಿಲ್ಲಾ ಅಭಿವೃದ್ಧಿ ಸಮಿತಿ
ಸಿ. ಜಿಲ್ಲಾ ಸಮಿತಿ
ಡಿ. ಜಿಲ್ಲಾ ಸ್ಥಾಯಿ ಸಮಿತಿ

ಉ: ಎ


10) ಭೂಮಿ,ಬಾಲಾಶ್ರಮ & ಮುಖ್ಯ ವಾಹಿನಿ ಇವುಗಳೆಲ್ಲಾ……….

ಎ. ಕರ್ನಾಟಕ ಗ್ರಾಮೀಣಾಭೀವೃದ್ಧಿ ಯೋಜನೆಗಳು
ಬಿ. ಇ-ಕಾರುಬಾರು ಯೋಜನೆಗಳು(ಕರ್ನಾಟಕ)
ಸಿ. ವಿಶ್ವ ಬ್ಯಾಂಕಿನಿಂದ ಹಣಕಾಸು ಪಡೆದ ಯೋಜನೆಗಳು            
ಡಿ. ಮಕ್ಕಳ ಸಹಾಯವಾಣಿ        

ಉ: ಬಿ

16.10.16

TET - syllabus

 

ಪ್ರಾಥಮಿಕ ಶಾಲಾ ಶಿಕ್ಷಕರಾಗಲು
ಬಯಸುವವರು ಇನ್ನು ಮುಂದೆ ‘ಶಿಕ್ಷಕರ ಅರ್ಹತಾ
ಪರೀಕ್ಷೆ’ (ಟಿಇಟಿ) ಬರೆದು ನಿಗದಿತ ಅಂಕಗಳೊಡನೆ
ತೇರ್ಗಡೆಯಾಗುವುದು ಕಡ್ಡಾಯವಾಗಿದೆ. ರಾಷ್ಟ್ರೀಯ
ಶಿಕ್ಷಕರ ಶಿಕ್ಷಣ ಮಂಡಳಿ ಆದೇಶದಂತೆ ರಾಜ್ಯದಲ್ಲಿ ಟಿಇಟಿ
ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಪಾಸಾದವರು ಮಾತ್ರ
ಶಿಕ್ಷಕರಾಗಲು ಅರ್ಹತೆ ಪಡೆಯುತ್ತಾರೆ. ಶಿಕ್ಷಣದ ಗುಣಮಟ್ಟ
ಸುಧಾರಣೆಗೆ ಒತ್ತು ನೀಡುವುದು ಇದರ ಉದ್ದೇಶ.
ಕೇಂದ್ರೀಕೃತ ದಾಖಲಾತಿ ಘಟಕ ಈ ಟಿಇಟಿ ಪರೀಕ್ಷೆ
ನಡೆಸುತ್ತದೆ.

ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.:

ಒಟ್ಟು 150 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದರಲ್ಲಿ ಕನ್ನಡ
ಮತ್ತು ಆಂಗ್ಲ ಭಾಷೆ, ಶಿಶು ಮನೋವಿಜ್ಞಾನ ಮತ್ತು ವಿಕಸನ,
ಗಣಿತ ಮತ್ತು ಪರಿಸರ ಅಧ್ಯಯನ ಹೀಗೆ 5 ಭಾಗಗಳು ಇರುತ್ತವೆ.
ಪ್ರಶ್ನೆ ಪತ್ರಿಕೆಯ ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರತಿ
ಪ್ರಶ್ನೆಗೆ ಒಂದು ಅಂಕ ನಿಗದಿ ಮಾಡಲಾಗಿದೆ.
ಅರ್ಹತಾ ಪರೀಕ್ಷೆಯು ಭಾಗ 1ರಲ್ಲಿ (ಪ್ರಾಥಮಿಕ ಶಾಲೆ) ಒಟ್ಟು
ಐದು ವಿಷಯಗಳನ್ನೊಳಗೊಂಡ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ.
1. ಶಿಶು ಮನೋವಿಜ್ಞಾನ ಮತ್ತು ವಿಕಸನ
2. ಭಾಷೆ: ಕನ್ನಡ / ಉರ್ದು/ಮರಾಠಿ / ತಮಿಳು / ತೆಲಗು /
ಮಲಯಾಳಂ
3. ಆಂಗ್ಲ ಭಾಷೆ
4. ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ)
5.
ಗಣಿತ ಪ್ರತಿ ವಿಷಯದಲ್ಲ್ಲೂ ಒಂದು ಅಂಕದ 30 ಪ್ರಶ್ನೆಗಳಿದ್ದು,
ಐದು ವಿಷಯಗಳಿಗೆ ಒಟ್ಟು 150 ಅಂಕಗಳನ್ನು ನಿಗದಿಪಡಿಸಲಾಗಿದೆ.
ಅರ್ಹತಾ ಪರೀಕ್ಷೆಯುಭಾಗ 2ರಲ್ಲಿ (ಉನ್ನತೀಕರಿಸಿದ ಪ್ರಾಥಮಿಕ
ಶಾಲೆ) ನಾಲ್ಕು ವಿಭಾಗಗಳಿರುತ್ತವೆ.
1. ಶಿಶು ಮನೋವಿಜ್ಞಾನ ಮತ್ತು ವಿಕಸನ.
2. ಭಾಷೆ: ಕನ್ನಡ / ಉರ್ದು/ಮರಾಠಿ / ತಮಿಳು / ತೆಲಗು /
ಮಲಯಾಳಂ.
3. ಆಂಗ್ಲ ಭಾಷೆ.
4. ವಿಜ್ಞಾನ ಶಿಕ್ಷಕರಿಗೆ (ಗಣಿತ ಮತ್ತು ವಿಜ್ಞಾನ), ಕಲಾ ಶಿಕ್ಷಕರಿಗೆ
ಸಮಾಜ ವಿಜ್ಞಾನದ 60 ಪ್ರಶ್ನೆಗಳಿರುತ್ತವೆ.
ಒಟ್ಟು 150 ಅಂಕಗಳು.


🌹ವಿಷಯಗಳು ಹಾಗೂ ಅಂಕಗಳು 🌹

1) ಶಿಶು ವಿಕಾಸ ಮತ್ತು ಶಿಶು ಶಿಕ್ಷಣ ಶಾಸ್ತ್ರ - 30
2 ) ಭಾಷೆ- I ಕನ್ನಡ/ 30
3 ) LANGUAGE – II ENGLISH 30
4 ) ಗಣಿತ 30
5 ) ಪರಿಸರ ಅಧ್ಯಯನ 30

ಒಟ್ಟು 150

ಸಂಕ್ಷಿಪ್ತ ಪರೀಕ್ಷಾ ಪಠ್ಯಕ್ರಮ
ಶಿಶು ವಿಕಾಸ ಮತ್ತು ಶಿಶು ಶಿಕ್ಷಣ ಶಾಸ್ತ್ರ :
ಮಗುವಿನ ಬೆಳವಣಿಗೆ: ವಿಕಾಸ, ಬೆಳವಣಿಗೆ ಮತ್ತು ಪಕ್ವತೆ, ವಿಕಾಸದ
ಸಾರ್ವತ್ರಿಕ ತತ್ವಗಳು, ವಿಕಾಸದ ಮೇಲೆ ಪ್ರಭಾವಿಸುವ
ಅಂಶಗಳು, ವಿಕಾಸದ ಆಯಾಮಗಳು, ವಿಕಾಸದ ಸಿದ್ಧಾಂತಗಳು
(ಪಿಯಾಜೆ ಮತ್ತು ಬ್ರೂನರ್), ವೈಯಕ್ತಿಕ ಭಿನ್ನತೆ, ವ್ಯಕ್ತಿತ್ವದ
ಬೆಳವಣಿಗೆ, ವಿಕಾಸಾತ್ಮಕ ಕಾರ್ಯಗಳು ಮತ್ತು ತೊಂದರೆಗಳು
ಇತರೆ
ಕಲಿಕೆ: ಕಲಿಕೆಯ ಅರ್ಥ ಮತ್ತು ಸ್ವರೂಪ, ಕಲಿಕೆಯ ಅಂಶಗಳು, ಕಲಿಕೆ
ಮತ್ತು ವ್ಯಕ್ತಿತ್ವದ ಮೇಲೆ ಅನುವಂಶಿಕತೆ ಹಾಗೂ ಪರಿಸರದ
ಪ್ರಭಾವ, ಕಲಿಕೆಯ ಆಯಾಮಗಳು, ಅಭಿಪ್ರೇರಣೆ ಮತ್ತು ಅವಧಾನ,
ಸ್ಮೃತಿ ಮತ್ತು ವಿಸ್ಮೃತಿ
ಕಲಿಕೆ, ಕಲಿವವರ ಮತ್ತು ಬೋಧನೆ ನಡುವಿನ ಸಂಬಂಧ, ವೈಯಕ್ತಿಕ
ಭಿನ್ನತೆಯಲ್ಲಿ ವಿವಿಧ ಕ್ಷೇತ್ರಗಳು, ವಿಶೇಷ ಅ.ಗತ್ಯಯುಳ್ಳ
ಮಕ್ಕಳ ಕಲಿಕಾ ಸನ್ನಿವೇಷ, ವೈಯಕ್ತಿಕ ಮತ್ತು ಸಾಮೂಹಿಕ ಕಲಿಕೆ,
ಬೋಧನೆಯು ಒಂದು ಯೋಜಿತ ಕಾರ್ಯ, ಬೋಧನೆಯ
ಹಂತಗಳು, -ಸಾಮಾನ್ಯ ಮತ್ತು ವಿಷಯಾಧಾರಿತ ಕೌಶಲಗಳು,
ತರಗತಿ ನಿರ್ವಹಣೆ, -ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ,
ಬೋಧನೆ ಮತ್ತು ಕಲಿಕೆ ಹಾಗು ಇತರೆ.
ಶಿಶು ಶಿಕ್ಷಣ ಪದ್ಧತಿ:
ಭಾಷೆಯ ವ್ಯಾಖ್ಯೆ, ಹುಟ್ಟು ಮತ್ತು ಪೂರ್ವೇತಿಹಾಸ,
ಸ್ವರೂಪ ಸ್ವಭಾವಗಳು, ಉದ್ದೇಶಗಳು, ಪ್ರಯೋಜನಗಳು,
ಧ್ವನಿಯ ಉತ್ಪತ್ತಿ, ಧ್ವನಿ ಉಚ್ಛಾರಣ ದೋಷಗಳು-ಕಾರಣಗಳು-,
ನಿವಾರಣೆ. ಮಾತೃ ಭಾಷೆ, ವ್ಯಾಖ್ಯೆ ಉದ್ದೇಶಗಳು,
ಮಹತ್ವಗಳು, ಉದ್ದೇಶಗಳು, ಪ್ರಯೋಜನಗಳು. ಭಾಷಾ
ಸೂತ್ರ, ಬೋಧನಾ ಭಾಷೆಯಾಗಿ ಮಾತೃಭಾಷೆಯ ಅಳವಡಿಕೆ-
ಸಮಸ್ಯೆಗಳ ನಿವಾರಣೆ. ಮಾತೃಭಾಷಾ ಅಧ್ಯಾಪಕನ
ಲಕ್ಷಣಗಳು.ಮಾತೃಭಾಷಾ ಬೋಧನಾ ಗುರಿಗಳು, ಜ್ಞಾನ,
ಭಾವಾವೇಷ, ಮಾನಸಿಕ ರಂಗಗಳು, ಕನಿಷ್ಠ ಸಾಮರ್ಥ್ಯಗಳು-
ಪ್ರಥಮ ಭಾಷೆ ಕನ್ನಡ ಬೋಧನೆಯ ಉದ್ದೇಶಗಳು-ಗುರಿಗಳು,
ಸ್ಪಷ್ಟಿಕರಣ. ಬೋಧನಾ ನೈಪುಣ್ಯಗಳು -ಶ್ರವಣ, ಭಾಷಣ,
ಪಠನೆ, ಬರೆಯುವಿಕೆ. ಬೋಧನಾ ವಿಧಾನಗಳು: ಕ್ರೀಡೆ,
ಮಾಂಟೆಸೊರಿ, ಕಿಂಡರ್ ಗಾರ್ಡನ್, ಡಾಲ್ಟನ್, ಚರ್ಚಾಪದ್ಧತಿ,
ಪ್ರಯೋಗಾತ್ಮಕ ಪದ್ಧತಿ, ಪರಿವೇಕ್ಷಿತ ಅಧ್ಯಯನ,
ನಾಟಕೀಕರಣ ಪದ್ದತಿಗಳು. ಭಾಷಾ ಬೋಧನಾ ಪದ್ಧತಿಗಳು:
ಪದ್ಯ, ಗದ್ಯ, ಪಠ್ಯಪುಸ್ತಕ, ಉಪ ಪಠ್ಯಪುಸ್ತಕ, ಪತ್ರ ರಚನೆ,
ಮೌಲ್ಯ ಶಿಕ್ಷಣ. ಬೋಧನೋಪಕರಣಗಳು, ವ್ಯಾಖ್ಯೆ,
ಅವಶ್ಯಕತೆ-, ಪ್ರಯೋಜನೆಗಳು, ಶ್ರವ್ಯ-ದೃಶ್ಯ ಉಪಕರಣಗಳು,
ಬೋಧನೋಪಕರಣಗಳ ಉಪಯೋಗಿಸುವಿಕೆಯಲ್ಲಿ
ತೆಗೆದುಕೊಳ್ಳಬೇಕಾದ ಜಾಗ್ರತೆಗಳು. ಯೋಜನೆಗಳ ರಚನೆ-
ಅವಶ್ಯಕತೆ, ಪ್ರಯೋಜನಗಳು, ವಾರ್ಷಿಕ ಯೋಜನೆ, ಘಟಕ
ಯೋಜನೆ, ಪಠ್ಯ ಯೋಜನೆ. ಲಿಪಿ ಹುಟ್ಟು ಪೂರ್ವೇತಿಹಾಸ-
ಕನ್ನಡ ಸಾಹಿತ್ಯ ಚರಿತ್ರೆ-ಪ್ರಾಚೀನ ಯುಗದಿಂದ ಆಧುನಿಕ
ಯುಗದವರೆಗೆ. ಮೌಲ್ಯಮಾಪನ:- ಪರಿಚಯ, ನಿರಂತರ
ಮೌಲ್ಯಮಾಪನ, ಸಾಮರ್ಥ್ಯಾಧಾರಿತ ಮೌಲ್ಯಮಾಪನ,
ಮೌಲ್ಯಮಾಪನ ಸಾಧನಗಳು, ಮನೋವೈಜ್ಞಾನಿಕ
ಪರೀಕ್ಷೆಗಳು, ಪ್ರಶ್ನೆಗಳ ಪ್ರಕಾರಗಳು, ಪ್ರಶ್ನೆಗಳ ನಿರ್ಮಾಣ,


ಘಟಕ ಪರೀಕ್ಷೆಯ ತಯಾರಿಗಳು.

ಭಾಷೆ- I ಕನ್ನಡ :

 ಅಪರಿಚಿತ ಗದ್ಯ, ಪರಿಚಿತ ಗದ್ಯ , ಕವಿಗಳು, ಕಾವ್ಯಗಳು,
ಕೃತಿಗಳು. ಅಕರ್ಮಕ, ಸಕರ್ಮಕ ಕ್ರಿಯಾ ಪದಗಳು, ವಾಕ್ಯಗಳು,
ವಾಕ್ಯಪ್ರಕಾರಗಳು, ಕರ್ತರಿ, ಕರ್ಮಣಿ ವಾಕ್ಯಗಳು, ಪ್ರತ್ಯಕ್ಷ-
ಪರೋಕ್ಷ ವಾಕ್ಯಗಳು, ವಾಕ್ಯರಚನೆ. ವರ್ಣಮಾಲೆ,
ಪ್ರತ್ಯೆಯಗಳು, ವಚನಗಳು, ಲಿಂಗಗಳು, ವಿಭಕ್ತಿ
ಪ್ರತ್ಯೇಯಗಳು, ಕಾಲಗಳು, ವಿರಾಮ ಚಿಹ್ನೆಗಳು, ಸಂಧಿಗಳು,
ಸಮಾಸಗಳು, ಅಲಂಕಾರಗಳು, ತತ್ಸಮಗಳು, ವಿರುದ್ಧ ಪದಗಳು,
ಪಯಾಯ ಪದಗಳು, ನಾನಾರ್ಥಗಳು, ಗಾದೆಗಳು,
ಲೋಕೋಕ್ತಿಗಳು, ನುಡಿಮುತ್ತುಗಳು, ಸ್ವಂತವಾಕ್ಯಗಳು,
ಒಗಟುಗಳು.

III. LANGUAGE – II ENGLISH:

Parts of Speech, Tenses, Types of Sentences, Prepositions
& Articles, Degrees of Comparison, Direct and Indirect
Speech, Questions and question tags, Active & Passive
voice, Use of Phrases, Comprehension, Composition,
Vocabulary.PEDAGOGY Aspects of English, Objectives of
teaching English, Phonetics, Development of Language
skills, Approaches, Methods, Techniques of teaching
English. (a) Introduction, Definition and Types of
approaches methods and techniques of teaching English (b)
Remedial teaching, Teaching of structures and vocabulary
items, Teaching learning materials in English, Lesson
Planning, Curriculum & Textbooks, Evaluation in English
language.

ಗಣಿತ

ಸಂಖ್ಯೆಗಳು ಮತ್ತು ಮೂಲಕ್ರಿಯೆಗಳು, ಭಿನ್ನರಾಶಿ, ವಾಣಿಜ್ಯ
ಗಣಿತ, ರೇಖಾಗಣಿತ,ಅಳತೆಗಳು, ಸಂಖ್ಯಾಶಾಸ್ತ್ರ, ಅಂಕಿ
ಅಂಶಗಳು.ಶಿಶು ಶಿಕ್ಷಣ ಪದ್ಧತಿ, ಗಣಿತದ ಸ್ವರೂಪ ಮತ್ತು
ವ್ಯಾಖ್ಯೆಗಳು, ಗಣಿತ ಬೋಧನೆಯ ಗುರಿ, ಉದ್ದೇಶಗಳು
ಮತ್ತು ಮೌಲ್ಯಗಳು, ಗಣಿತ ಬೋಧನಾ ಪದ್ಧತಿಗಳು, ಗಣಿತ
ಬೋಧನೆಯಲ್ಲಿ ಪಾಠೋಪಕರಣಗಳು, ಬೋಧನೆಯ
ಯೋಜನೆಗಳು, ಗಣಿತ ಶಿಕ್ಷಕ, ಸಂಪನ್ಮೂಲಗಳ ಸದ್ಭಳಕೆ,
ಪಠ್ಯಕ್ರಮ ಮತ್ತು ಪಠ್ಯ ಪುಸ್ತಕ, ಸಮಸ್ಯೆ ಗುರುತಿಸುವಿಕೆ
ಮತ್ತು ಪರಿಹಾರ ಬೋಧನೆ.

ಪರಿಸರ ಅಧ್ಯಯನ :

ನಮ್ಮದೇಹ-ಆರೋಗ್ಯ- ಸ್ವಚ್ಛತೆ, ನನ್ನ ಕುಟುಂಬ, ಕೆಲಸ
ಮತ್ತು ಕ್ರೀಡೆ, ಕೀಟಗಳು ಮತ್ತು ಪ್ರಾಣಿಗಳು, ನಮ್ಮ ಆಹಾರ,
ವಾಸಸ್ಥಳಗಳು, ಗಾಳಿ, ನೀರು, ಭೂಮಿ ಮತ್ತು ಆಕಾಶ, ನಮ್ಮ
ದೇಶ, ನಮ್ಮ ರಾಜ್ಯ, ಭಾರತದ ಇತಿಹಾಸ ಮತ್ತು ಸಂಸ್ಕೃತಿ,
ಭಾರತದ ಸಂವಿಧಾನ, ವಿಶ್ವಸಂಸ್ಥೆ. ಶಿಶು ಶಿಕ್ಷಣ ಪದ್ಧತಿ ಪರಿಸರ
ಅಧ್ಯಯನದ ಅರ್ಥ ಮತ್ತು ವ್ಯಾಪ್ತಿ, ಪರಿಸರ ಅಧ್ಯಯನ
ಬೋಧನೆಯ ಗುರಿ–ಉದ್ದೇಶಗಳು, ವಿಜ್ಞಾನ ಮತ್ತು ಸಮಾಜ
ವಿಜ್ಞಾನದ ಸಂಬಂಧ, ಪಠ್ಯಕ್ರಮ, ನಿರ್ವಹಣೆ, ನಿರಂತರ ಮತ್ತು
ವ್ಯಾಪಕ ಮೌಲ್ಯಮಾಪನ, ಕಲಿಕಾ ಪರಿಸರ.

ಅಳತೆಯ ಸಾಧನಗಳು

👉🏿 ಅಳತೆಯ ಸಾಧನಗಳು 👈🏿


೧. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.

೨. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.


೩. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.


೪. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.


೫. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.


೬. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.


೭. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.

೮. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.


೯. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.


೧೦. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.


೧೧. ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.


೧೨. ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.


೧೩. ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ


೧೪. ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.


೧೫. ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.


೧೬. ಎಲೆಕ್ಟ್ರೋಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.


೧೭. ಪ್ಯಾದೋಮೀಟರ್
ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.


೧೮. ಗ್ಯಾಲ್ವನೋಮೀಟರ್
ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.


೧೯. ಮೈಕ್ರೋ ಆ್ಯಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.


೨೦. ವೋಲ್ಟ್ ಮೀಟರ್
ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.


೨೧. ಥಮೋ೯ ಸ್ಟ್ಯಾಟ್
ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು


೨೨:- ಮ್ಯಾನೋಮೀಟರ್
ಉಪಯೋಗ:- ಅನಿಲ ಒತ್ತಡ ಅಳೆಯಲು


೨೩. ರಿಫ್ರ್ಯಾಕ್ಟೋಮೀಟರ್
ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು


೨೪. ಸಿಸ್ಮೋಗ್ರಾಫ್
ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು


೨೫. ಫೋಟೋಮೀಟರ್
ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು


೨೬. ಪೈರೋಮೀಟರ್
ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು


೨೭. ರೈನಗೆಜ್
ಉಪಯೋಗ:- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .


೨೮. ಸ್ಪೀಡೋಮೀಟರ್
ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು


೨೯. ಇಲೆಕ್ಟ್ರೋಎನಸೆಫಲೋಗ್ರಾಫಿ
ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.


೩೦. ಸ್ಪಿಗ್ಮೋಮ್ಯಾನೋಮೀಟರ್
ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.


೩೧. ಸ್ಪೆಕ್ಟ್ರೋಮೀಟರ್
ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.


೩೨. ಅಮ್ಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.


೩೩. ಆಡಿಯೋಮೀಟರ್
ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.


೩೪. ಅನಿಯೋಮೀಟರ್
ಉಪಯೋಗ:- ಗಾಳಿಯ ವೇಗವನ್ನು ಅಳೆಯಲು


೩೫. ಸ್ಪೇಥೋಸ್ಕೋಪ್
ಉಪಯೋಗ:- ಹೃದಯ ಬಡಿತ ಆಲಿಸಲು


೩೬. ಬ್ಯಾರೋಮೀಟರ್
ಉಪಯೋಗ:- ವಾತಾವರಣದ ಒತ್ತಡ ಅಳೆಯಲು


೩೭. ಡೈನಮೋ
ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.


೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ
ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು


೩೯. ಬೈನಾಕ್ಯೂಲರ್
ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.


೪೦. ಕಲರಿ ಮೀಟರ್
ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.


೪೧. ಸಿನೆಮ್ಯಾಟೋಗ್ರಾಫ್
ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .


೪೨. ಕಾಡಿ೯ಯೋಗ್ರಫಿ
ಉಪಯೋಗ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು


೪೩. ಕ್ರೋನೋಮೀಟರ್
ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು


೪೪. ಕ್ಯಾಲಿಪರ್
ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು


೪೫. ಸೋನರ್
ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು


೪೬. ಉಷ್ಣಯಂತ್ರ
ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು


೪೭. ರೋಹಿತದಶ೯ಕ
ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ


೪೮. ಲೇಸರ್
ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ


೪೯. ದ್ಯುತಿಕೋಶ
ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ


೫೦. ಸೌರಕೋಶ
ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ



೫೧. ಶುಷ್ಕಕೋಶ
ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ


೫೨. ಸೆಂಟ್ರಿಪ್ಯೂಜ್
ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ


೫೩. ಅಸಿಲೇಟರ್
ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ


೫೪. ಎ.ಸಿ.ಡೈನಮೋ
ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ


೫೫. ಡಿ.ಸಿ. ಡೈನಮೋ
ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ



೫೬. ಪೆರಿಸ್ಕೋಪ್
ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು



೫೭. ಸೈಟೋಮೀಟರ್
ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.



೫೮. ಸ್ಪೈರೋಮೀಟರ್
ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು  ಅಳೆಯಲು ಬಳಸುತ್ತಾರೆ.


೫೯. ಎಂಡೋಸ್ಕೋಪ್
ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿಶೀಲನೆ ಮಾಡಲು  ಬಳಸುತ್ತಾರೆ  


೬೦. ಕ್ಯಾಥಟರ್
ಉಪಯೋಗ:- ದೇಹದ ನಾಳಗಳನ್ನು ಹಿಗ್ಗಿಸಲು ಬಳಸುತ್ತಾರೆ.




Psychology - ಮನಸ್ ಶಾಸ್ತ್ರ

ಮನಸ್ ಶಾಸ್ತ್ರ

>>ಮನುಷ್ಯರ ಮನಸಿನ ಬಗ್ಗೆ ಇರುವ ಹಳೆಯ ಮತ್ತು ಹೊಸ
ವಿವರಣೆಗಳು; ಮನುಷ್ಯರ ನಡೆನುಡಿ, ಪ್ರಾಣಿ ವರ್ತನೆಗಳನ್ನು
ವಿವರಿಸುವ ಮತ್ತು ಅಭ್ಯಾಸ ಮಾಡುವ ರೀತಿ. ಮನಸ್ಸನ್ನು
ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ತಿಳಿಯುವ
ಪದ್ಧತಿಗಳು. ಮನೋವಿಜ್ಞಾನದ ವಿವಿಧ ಅಧ್ಯಯನದ
ಕ್ಷೇತ್ರಗಳು ಮತ್ತು ಅವುಗಳ ಕೊಡುಗೆ.

>>>ಮನೋವಿಜ್ಞಾನದ
ತತ್ವಗಳ ವಿಸ್ತರಣೆಯಿಂದ ಹೊಸ ಆನ್ವಯಿಕ ಶಾಖೆಗಳ
ಉದಯವಾಗುತ್ತದೆ ಎನ್ನುವುದು.
ಮನಸ್ಸಿನ ಅಧ್ಯಯನದಲ್ಲಿ ಆಸಕ್ತಿ ಹುಟ್ಟಿದ್ದು ಯಾವಾಗ ಎಂದು
ಹೇಳುವುದು ಕಷ್ಟ. ಆದರೆ, ಮನುಷ್ಯನಿಗೆ ವಿವೇಚನೆ ಮಾಡುವ
ಸಾಮಥ್ರ್ಯ ಬಂದಾಗಿನಿಂದಲೂ ಮನಸ್ಸಿನ ಬಗ್ಗೆ
ತಿಳಿದುಕೊಳ್ಳುವ ಆಸಕ್ತಿ ಇತ್ತು ಎನ್ನುವುದನ್ನು ನಾಗರೀಕ
ಇತಿಹಾಸವನ್ನು ಅವಲೋಕಿಸಿದಾಗ ತಿಳಿದುಬರುತ್ತದೆ. ಅನಾದಿ
ಕಾಲದಿಂದಲೂ ಮನುಷ್ಯ ತನ್ನೊಳಗಿರುವ ಮನವನ್ನು
ತಿಳಿದುಕೊಳ್ಳುವ ಸಾಹಸವನ್ನು ಮಾಡಿಕೊಂಡೇ
ಬಂದಿದ್ದಾನೆ. ಹುಟ್ಟು, ಸಾವುಗಳ ಬಗ್ಗೆ ಇದ್ದಂತಹ ಭಯ,
ಆತಂಕ, ಕುತೂಹಲಗಳಿಂದಲೇ ತನ್ನ ಬಗ್ಗೆ, ತನ್ನ ಮನಸ್ಸಿನ ಬಗ್ಗೆ
ತಿಳಿವಳಿಕೆ ಪಡೆಯಲು ಪ್ರಯತ್ನಗಳನ್ನು ಮಾಡುತ್ತಲೇ
ಬಂದಿರುತ್ತಾನೆ. ನಾನೇಕೆ ನಗುತ್ತೀನಿ? ಅಳಿಸುತ್ತೀನಿ,
ಮಲಗುತ್ತೀನಿ, ಹೇದರುತ್ತೀನಿ ಎನ್ನುವಂತಹ ನೂರಾರು
ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಆಸಕ್ತಿಯೇ ಮನುಷ್ಯ
ಮನಸ್ಸಿನ ಕುತೂಹಲ ಹೆಚ್ಚಿಸಿರುವುದು. ಇಂತಹ ಕುತೂಹಲದ
ಪ್ರಶ್ನೆಗಳೇ ಮನದ ಶಾಸ್ತ್ರಕ್ಕೆ ಅಡಿಪಾಯ ಎನ್ನಬಹುದು. ನಮ್ಮ
ಪೂರ್ವಜರು ಪುಣ್ಯಕತೆ, ಪುರಾಣಗಳ ಮೂಲಕ ಮನುಷ್ಯ
ಅನುಭವಿಸುವ ನೋವು, ನಲಿವುಗಳನ್ನು ವಿವರಿಸುತ್ತಿದ್ದರು.
ಇಂದಿಗೂ ಹಾಗೆಯೇ ಅನುಸರಿಸುತ್ತಿರುವವರು ಇದ್ದಾರೆ.
ಮನುಷ್ಯರ ಮನಸ್ಸು ಎಲ್ಲರಲ್ಲಿಯೂ ಒಂದು ರೀತಿಯಲ್ಲಿ
ಇರುವುದಿಲ್ಲ ಏಕೆ? ಒಳ್ಳೆಯ ಮನಸ್ಸು, ಕೆಟ್ಟ ಮನಸ್ಸು
ಹುಟ್ಟುವುದು ಹೇಗೆ ಎನ್ನುವಂತಹ ಪ್ರಶ್ನೆಗಳೇ ಮನದ
ಶಾಸ್ತ್ರದ ಬೆಳೆವಣಿಗೆಗೆ ಕಾರಣ. ಧರ್ಮದಲ್ಲಿ ನಂಬಿಕೆ ಇರುವವರು,
ದೈವತ್ವದಲ್ಲಿ ನಂಬಿಕೆ ಇರುವವರ ಅಭಿಪ್ರಾಯಗಳು ಚರ್ಚೆ,
ವಿವಾದಗಳಿಗೆ ಅವಕಾಶ ಕಲ್ಪಿಸುವುದರೊಂದಿಗೆ ಹೊಸ ಚಿಂತನೆಗಳ
ಉದಯಿಸುವುದಕ್ಕೆ ಕಾರಣವಾಯಿತು. ತತ್ವಜ್ಞಾನ ಮತ್ತು
ಆಧ್ಯಾತ್ಮದ ಮೂಲಕ ಈ ಚಿಂತನೆಗಳು, ಅಭಿಪ್ರಾಯಗಳು
ಗಟ್ಟಿಯಾಗುವುದಕ್ಕೆ ಸಾಧ್ಯವಾಯಿತು. ಹೊಸ
ವ್ಯಾಖ್ಯಾನಗಳು ಮೂಡಿಬರುವುದಕ್ಕೂ ಈ ವಾದ
ವಿವಾದಗಳೇ ಕಾರಣ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ
ಸ್ಪಷ್ಟವಾಗಿ ತಿಳಿಯುವುದೇನೆಂದರೆ ಮನುಷ್ಯನಲ್ಲಿರುವ
ವಿವೇಚನೆ ಮತ್ತು ಭಾಷಾ ಸಾಮಥ್ರ್ಯಗಳಿಂದಲೇ ಅನೇಕ
ಶಾಸ್ತ್ರಗಳು ಜನಿಸಿತು. ಇಂತಹವುಗಳಲ್ಲಿ ಮನಸ್ಸಿನ ಶಾಸ್ತ್ರವೂ
ಒಂದು ಎನ್ನಬಹುದು.
ವಿಶ್ವದ ಅನೇಕ ಆದಿ ಸಂಸ್ಕøತಿಗಳಲ್ಲಿ, ಪುರಾತನ ವೇದಾಂತ
ಶಾಸ್ತ್ರಗಳಲ್ಲಿ ಮನಸ್ಸಿನ ಬಗ್ಗೆ ವ್ಯಾಖ್ಯಾನಗಳಿವೆ. ಭಗವಂತನ
ಶಕ್ತಿಯನ್ನೇ ಜೀವ ರಾಶಿ ಅವಲಂಬಿಸಿರುತ್ತದೆ. ಜೀವಿಯ
ಸೃಷ್ಟಿಯೂ ಸಹ ಭಗವಂತನಿಂದಲೇ ಆದದ್ದು ಎನ್ನುವಂತಹ
ವಿಚಾರಗಳು ಗಾಢವಾಗಿಯೇ ಜನಪ್ರಜ್ಞೆಯಲ್ಲಿ ಬೇರೂರಿದೆ.
ಮನುಷ್ಯ ಮನಸ್ಸಿನ ಲಕ್ಷಣಗಳು ದೇಹದ ಹೊರಗಿನ ಪ್ರಬಲ
ಶಕ್ತಿಯಿಂದಲೇ ಆದದ್ದು ಎನ್ನುವಂತಹ ನಂಬಿಕೆಗಳನ್ನು ವಿಶ್ವದ
ಅನೇಕ ಹಳೆಯ ನಾಗರೀಕತೆಗಳಲ್ಲಿ ಕಾಣಬಹುದು. ದೇಹ
ನಶಿಸಿದರೂ ಅದರೊಳಗಿರುವ ಶಕ್ತಿಯೊಂದು ನಶಿಸುವುದಿಲ್ಲ
ಎನ್ನುವ ನಂಬಿಕೆ ಪ್ರಾಚೀನ ಈಜಿಪ್ಟಿನ ನಾಗರೀಕತೆಯಲ್ಲಿ
ಕಾಣಬಹುದು. ಈ ಶಕ್ತಿಯನ್ನು ಆತ್ಮ ಎನ್ನುವುದಾಗಿಯೇ
ಗುರುತಿಸಿದ್ದರು. ಪ್ರತಿಯೊಬ್ಬರಲ್ಲೂ ಮೂರು ಆತ್ಮಗಳು
ಇರುತ್ತವೆ ಎನ್ನುವುದೇ ಅವರ ಕಲ್ಪನೆ. ಸತ್ತವರ ಆತ್ಮಕ್ಕೆ ರಕ್ಷಣೆ
ಸಿಗಲಿ ಎನ್ನುವ ಕಾರಣದಿಂದಲೇ ಪ್ರಾಚೀನ ಈಜಿಪ್ಟರು ಮೃತ
ದೇಹವನ್ನು ನೂರಾರು ವರ್ಷಗಳ ಕಾಲ ಹಾಳಾಗದಂತೆ
ಸಂರಕ್ಷಿಸುತ್ತಿದ್ದರು.
ಚೀನಾ ದೇಶದ ತತ್ವಜ್ಞಾನಿಗಳು ಮನಸ್ಸು ಮತ್ತು
ಬುದ್ಧಿಶಕ್ತಿಗಳ ಪ್ರಭಾವಗಳನ್ನು ಬಹಳ ಹಿಂದೆಯೇ
ಪ್ರಸ್ತಾಪಿಸಿರುತ್ತಾರೆ. 2000 ವರ್ಷಗಳ ಹಿಂದೆಯೇ ಮನಸ್ಸಿನ
ಕಾರ್ಯಾಚರಣೆಗಳ ಬಗ್ಗೆ ವಿವರಣೆಗಳನ್ನು ನೀಡಿದ್ದರು.
ಮನುಷ್ಯನಲ್ಲಿರುವ ದುಷ್ಟ ಗುಣಗಳು ಮತ್ತು ಒಳ್ಳೆಯ
ಗುಣಗಳ ಬಗ್ಗೆ ಚರ್ಚೆಗಳು ಹೇರಳವಾಗಿದ್ದವು. ಕಾನ್ಫುಶಿಯಸ್
(551-479 ಕ್ರಿ.ಪೂ)ನ ಪ್ರಕಾರ ಮನುಷ್ಯನೇ ಜಗತ್ತಿನ ಕೇಂದ್ರ
ಬಿಂದು. ವಾಸ್ತವ ಜಗತ್ತಿಗೆ ಆದ್ಯತೆ ನೀಡುವುದರ ಮೂಲಕ
ಮನುಷ್ಯ ಗುಣಗಳಿಗೇ ಹೆಚ್ಚು
ಪ್ರಾಶಸ್ತ್ಯವಿರಬೇಕೆಂದಿದ್ದರು. ಮನುಷ್ಯ ಸ್ವಭಾವಗಳು
ಹುಟ್ಟಿ ಗಟ್ಟಿಯಾಗುವುದು ಪರಿಸರದ ಪ್ರಭಾವದಿಂದಲೇ
ಎನ್ನುವ ವಾದ ಅವರದ್ದು. ಆದುದರಿಂದ ಆತ್ಮ, ಭಗವಂತ
ಮುಂತಾದ ನಂಬಿಕೆಗಳಿಗೆ ಮಹತ್ವ ಕೊಡಲಿಲ್ಲ.
ಭಾರತೀಯ ಸಂಸ್ಕøತಿ ಮತ್ತು ಆಚಾರ ವಿಚಾರಗಳಲ್ಲೂ ಮನಸ್ಸಿನ
ಸ್ಥಿತಿಗತಿಗಳ ಬಗ್ಗೆ ವಿಭಿನ್ನ ರೀತಿಯ ವ್ಯಾಖ್ಯಾನಗಳಿವೆ.
ಪ್ರಾಚೀನ ಉಪನಿಷತ್ಗಳಲ್ಲಿ ಮಾನಸಿಕ ಸ್ಥಿತಿಗಳ ಬಗ್ಗೆ
ಉಲ್ಲೇಖಗಳು ಹೇರಳವಾಗಿ ಕಂಡುಬರುತ್ತವೆ. ಅನುಭವಕ್ಕೂ
ಮನಸ್ಸಿಗೂ ಇರುವಂತಹ ಸಂಬಂಧ; ಅಸಾಧಾರಣವಾದ ಮಾನಸಿಕ
ಸ್ಥಿತಿ, ಅಂದರೆ ಸಾವಿನ ನಂತರ ವ್ಯಕ್ತಿಯ ಆತ್ಮಕ್ಕೆ ಏನಾಗುತ್ತದೆ
ಎನ್ನುವುದರ ಬಗ್ಗೆ ವಿವರಣೆಗಳನ್ನು ಮೈತ್ರಾಯಣೀ
ಉಪನಿಷತ್ತಿನಲ್ಲಿ ಉಲ್ಲೇಖಿಸಲಾಗಿದೆ. ಚೇತನಾಬಿಂಬಗಳಿಗೆ
ಮನವೇ ಮೂಲ ಕಾರಣವೆನ್ನುವ ಅಭಿಪ್ರಾಯವನ್ನು ಇಲ್ಲಿ
ಕಾಣಬಹುದು. ಇದರಂತೆ, ಮನುಷ್ಯ ನೋಡುವುದು,
ಕೇಳುವುದು, ಇಚ್ಛೆ, ಸಂಕಲ್ಪ ನಾಚಿಕೆ, ಬುದ್ಧಿ ಮುಂತಾದ
ಅನೇಕ ಲಕ್ಷಣಗಳು ಮನಸ್ಸೇ ಆಗಿರುತ್ತದೆ. ಇದೇ ರೀತಿಯಲ್ಲಿ
ಬುದ್ಧಿಗೆ ನಾನಾ ಹೆಸರುಗಳು ಇರುವುದನ್ನು
ಐತರೇಯೋಪನಿಷತ್ತಿನಲ್ಲಿ ಕಾಣಬಹುದು. ಸಂಜ್ಞಾನ,
ವಿಜ್ಞಾನ, ಪ್ರಜ್ಞಾನ ಕಲ್ಪಿಸುವುದು, ತಿಳಿಯುವುದು, ಧೈರ್ಯ,
ಅಭಿಪ್ರಾಯ ಪಡುವುದು, ಇತ್ಯಾದಿ ಮಾನಸಿಕ ಸ್ಥಿತಿಗಳನ್ನು
ಪರಿಪೂರ್ಣವಾಗಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆದರೆ,
ಇವುಗಳು ಆಧುನಿಕ ಮನೋವಿಜ್ಞಾನದ ಇತಿಹಾಸಕಾರರ ಕಣ್ಣಿಗೆ
ಬಿದ್ದಿಲ್ಲದಿರುವುದು ದುರದೃಷ್ಟ. ಆದುದರಿಂದ ಪ್ರಾಚೀನ
ಭಾರತೀಯ ಸಂಸ್ಕøತಿಯ ವಿಚಾರಧಾರೆಗಳತ್ತ ಮನೋವಿಜ್ಞಾನ
ಹೆಚ್ಚಾಗಿ ಕಣ್ಣು ಹಾಯಿಸಲಿಲ್ಲ. ಹೀಗಿದ್ದರೂ ಆಧುನಿಕ
ಮನೋವಿಜ್ಞಾನವು ಪರಿಶೀಲಿಸುತ್ತಿರುವ ಅನೇಕ ವಿಷಯಗಳ
ಬಗ್ಗೆ ಪ್ರಾಚೀನ ಭಾರತೀಯರ ಚಿಂತನೆಗಳು ಹೊಸ ಬೆಳಕನ್ನು
ಚೆಲ್ಲಬಲ್ಲದ್ದಾಗಿದೆ.
ಮನಸ್ಸಿನ ಬಗ್ಗೆ ಪ್ರಶ್ನೆ ಕೇಳುವುದರೊಂದಿಗೆ ಜಗತ್ತಿನ ಸೃಷ್ಟಿಯ
ಬಗ್ಗೆಯೂ ಗ್ರೀಕ್ ತತ್ವಶಾಸ್ತ್ರಜ್ಞರು ಚಿಂತನೆ ನಡೆಸಿದ್ದರು.
ವ್ಯಕ್ತಿಯೊಳಗೆ ಮನಸ್ಸು ಇದೆ, ಇದರ ಮೇಲೆ ಒಳಗಿನ ಮತ್ತು
ಹೊರಗಿನ ಶಕ್ತಿಗಳು ಪ್ರಭಾವ ಬೀರಬಲ್ಲದು ಎನ್ನುವುದನ್ನು
ವಿವರಿಸುವ ಪ್ರಯತ್ನಗಳನ್ನು ಅನಾದಿಯಿಂದಲೂ ನಡೆಸುತ್ತಲೇ
ಬಂದಿರುತ್ತಾರೆ.
ಗ್ರೀಕ್ ಚಿಂತಕರಲ್ಲಿ ಒಬ್ಬರಾದ ಅರಿಸ್ಟಾಟಲ್ (384-322) ಆಧುನಿಕ
ಮನೋವಿಜ್ಞಾನಕ್ಕೆ ತಳಹದಿ ಹಾಕಿದವರಲ್ಲಿ ಪ್ರಮುಖರು ಎಂದು
ಗುರುತಿಸಲಾಗುತ್ತದೆ. ಏಕೆಂದರೆ, ಮನುಷ್ಯನ ಹೃದಯಕ್ಕೂ
ಮನಸ್ಸಿಗೆ ಸಂಬಂಧವಿದೆ ಎನ್ನುವ ಅವರ ವಿವರಣೆಯೂ ಮನಸ್ಸಿನ
ಬಗ್ಗೆ ಆಸಕ್ತಿ ಮತ್ತು ಕುತೂಹಲಗಳು ಹೆಚ್ಚುವಂತೆ ಮಾಡಿತ್ತು.
ಇದರಿಂದಾಗಿ ಹೊಸ ಚಿಂತನೆಗಳು ಚಿಗುರುವುದೊಂದಿಗೆ
ಮನಸ್ಸಿನ ಅಧ್ಯಯನದ ಬೇರುಗಳು ಗಟ್ಟಿಯಾಗಿ ವ್ಯಾಪಿಸಿತು.
ಗ್ರೀಕ್ ಭಾಷೆಗೆ ಸೇರಿದ ‘ಸೈಕಿ’ ಮತ್ತು ‘ಲೊಗಸ್’ ಪದಗಳ
ಚೋಡಣೆಯೇ ಸೈಕಾಲಜಿ. ‘ಸೈಕಿ’ ಮತ್ತು ‘ಲಾಗೊ’ ಎಂದರೆ
ಆತ್ಮದ ಅಧ್ಯಯನ ಎಂದು ಹೇಳುವುದು ವಾಡಿಕೆ. ಇದೇ
ಅರ್ಥವನ್ನು ಇಂದಿಗೂ ಬಳಸಲಾಗುತ್ತಿದೆ. ಆದರೆ, ಕೆಲವು
ವಿದ್ವಾಂಸರುಗಳ ಪ್ರಕಾರ ಗ್ರೀಕ್ ಭಾಷೆಯಲ್ಲಿ ‘ಸೈಕಿ’ ಪದಕ್ಕೆ
ಹಲವಾರು ಅರ್ಥಗಳಿದ್ದು, ಅವುಗಳಲ್ಲಿ ಜೀವ ಎಂಬ ಅರ್ಥವು
‘ಸೈಕಿ’ಗೆ ಹತ್ತಿರವಾಗಿರುತ್ತದೆ. ಜೀವ ಇದ್ದಾಗ
ಜೀವಿಯಾಗುವುದು. ಆದುದರಿಂದ ‘ಸೈಕಿ’ ಪದವನ್ನು ಆತ್ಮಕ್ಕೆ
ಸರಿಹೊಂದಿಸುವುದು ಸೂಕ್ತವಲ್ಲ ಎನ್ನುವ ವಾದವು
ಬಲವಾಗಿತ್ತು. ಗ್ರೀಕ್ ಚಿಂತಕ ಪ್ಲೆಟೋ(ಅಂದಾಜು ಕ್ರಿ ಪೂ
428-348) ಪ್ರಕಾರ ಆತ್ಮವು ಕಾಣಿಸದಂತಹ ಒಂದು ದಿವ್ಯಶಕ್ತಿ.
ಇದು ಇತರ ಶಕ್ತಿಗಳಾದ ಗಾಳಿ, ಬೆಂಕಿಗಳಿಗಿಂತ ಭಿನ್ನವಾದದ್ದು
ಎಂದು ಪ್ರತಿಪಾದಿಸಿದ್ದರು. ಆದುದರಿಂದ ‘ಸೈಕಾಲಜಿ’ ಎನ್ನುವ
ಪದವು, ಸಾಮಾನ್ಯರಿಗೂ ತಿಳಿದಿರುವಂತೆ, ಮನಸ್ಸಿಗೆ
ಸಂಬಂಧಿಸಿದ್ದೇ ಹೊರತು ಆತ್ಮಕ್ಕಲ್ಲ ಎನ್ನುವ ವಾದವನ್ನು
ಅನೇಕ ತತ್ವಜ್ಞಾನಿಗಳು ಒಪ್ಪಿದ್ದರು. ಪ್ಲೆಟೊವಿನ ಶಿಷ್ಯ
ಅರಿಸ್ಟಾಟಲ್ ಕೂಡ ಇದನ್ನು ಸಮರ್ಥಿಸಿದ್ದರು. ‘ಸೈಕಿ’ ಯು ಸಹಜ
ರೀತಿಯ ಜೀವಶಕ್ತಿಯಾಗಿದ್ದು, ಜೀವಿಯ ಅಂಗಾಂಗಳ
ಕಾರ್ಯಾಚರಣೆಯನ್ನು ನೆರವೇರಿಸುವಂತಹದ್ದು. ಜೀವಿ ವೃದ್ಧಿ,
ವಿಕಾಸ, ಚಲನವಲನಗಳು, ವಿವೇಚನೆಯಂತಹವುಗಳು ‘ಸೈಕಿ’ಯ
ಗುಣಗಳಾಗಿರುತ್ತವೆ. ಅಂದರೆ, ಜೀವದೊಂದಿಗೆ
ದೇಹವಿರುವುದಲ್ಲದೇ ದೇಹವು ತನ್ನಷ್ಟಕ್ಕೇ ತಾನೇ
ಬದುಕಿ ಉಳಿಯುವ ಲಕ್ಷಣಗಳನ್ನು ಹೊಂದಿರುವುದು
ಎನ್ನುವುದಾಗಿ ಅವರು ವಿವರಿಸಿದ್ದರು. ದೇಹವೇ ಬೇರೆ,
ಮನಸ್ಸೇ ಬೇರೆಯಾಗಿದ್ದು ಇವೆರಡರ ಪ್ರಭಾವವು ವ್ಯಕ್ತಿ
ಕ್ರಿಯೆಗಳಿಗೆ ಕಾರಣವೆನ್ನುವ ವಾದವು ಮನುಷ್ಯ ಮನಸ್ಸಿನ
ಅಧ್ಯಯನಕ್ಕೆ ಹಾದಿಯನ್ನು ತೋರಿಸಿತು.
ಇದಾದ ಕೆಲವು ಶತಮಾನಗಳ ನಂತರವೇ ಮನೋವಿಜ್ಞಾನವೆಂಬ
ಪದದ ಬಳಕೆ ಜಾರಿಗೆ ಬಂದದ್ದು. ಜರ್ಮನಿಯ ತತ್ವಜ್ಞಾನಿ
ರೊಡಾಲ್ಫ್ ಗೊಕೆಲ್ 1590 ರ ಸಮಯದಲ್ಲಿ ಮೊದಲ ಬಾರಿಗೆ
ತಮ್ಮ ಲೇಖನ ಒಂದರಲ್ಲಿ ‘ಸೈಕಾಲಜಿ’ ಪದದ ಮೂಲಕ ಮನಸ್ಸಿಗೆ
ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದ್ದರು. ನಂತರದ
ಶತಮಾನಗಳಲ್ಲಿ ಜರ್ಮನಿಯ ಮತ್ತೊಬ್ಬ ತತ್ವಜ್ಞಾನಿ ಕ್ರಿಶ್ಚಿಯನ್
ವೊಲ್ಪ್(1679-1754), ಫ್ರಾನ್ಸ್ನ ದಾರ್ಶನಿಕ ಮೇನ್ ಡಿ ಬಿರನ್
(1766-1824) ಹಾಗೂ ಇಂಗ್ಲೆಂಡ್ನ ಚಿಂತಕ ವಿಲಿಯಂ
ಹ್ಯಮಿಲ್ಟನ್(1788-1856) ‘ಸೈಕಾಲಜಿ’ ಪದವನ್ನು ವಿದ್ವತ್ ಸಭೆಗಳ
ಮೂಲಕ ಪ್ರಚಾರಕ್ಕೆ ತಂದರು.
ಆಧುನಿಕ ಮನೋವಿಜ್ಞಾನದ ತಾತ್ವಿಕ ಹಿನ್ನೆಲೆಯನ್ನು ಫ್ರಾನ್ಸ್
ದೇಶದ ತತ್ವಜ್ಞಾನಿ, ಗಣಿತಶಾಸ್ತ್ರಜ್ಞ ಮತ್ತು ಆಧುನಿಕ
ವಿಜ್ಞಾನದ ಪ್ರವರ್ತಕರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ರೆನೆ
ದೆಕಾರ್ಟ್(1596-1650) ಸೃಷ್ಟಿಸಿದರು ಎನ್ನಲಾಗುತ್ತದೆ. ಇವರ
ಪ್ರಖ್ಯಾತ ಹೇಳಿಕೆ “ನಾನು ಅಲೋಚಿಸಬಲ್ಲೆ, ಆದುದರಿಂದಲೇ
ನಾನಿದ್ದೇನೆ” ಇಂಗ್ಲಿಷಿನಲ್ಲಿ “ಐ ಥಿಂಕ್ ದೇರ್ಫೊರ್ ಐ ಯಾಮ್”
ಎನ್ನುವುದನ್ನು ನಾನಾ ರೀತಿಯಲ್ಲಿ ಅರ್ಥೈಸಲ್ಪಡಲಾಗಿದೆ.
ಮನದ ಶಕ್ತಿಗಳು ಮತ್ತು ವ್ಯಕ್ತಿಯ ಇರುವಿಕೆಯ ಬಗ್ಗೆ ವಿಭಿನ್ನ
ವ್ಯಾಖ್ಯಾನಗಳಿಗೆ ಅವಕಾಶ ಕಲ್ಪಿಸುವುದರೊಂದಿಗೆ ಹೊಸ
ಅಧ್ಯಯನದ ಕ್ಷೇತ್ರಗಳು ಜನಿಸುವುದಕ್ಕೆ ಇದು
ಪ್ರೇರಕವಾಯಿತು. ವೈಜ್ಞಾನಿಕ ಮನೋವಿಜ್ಞಾನದ ಪರಂಪರೆ
ಆರಂಭವಾದದ್ದು 19 ನೇ ಶತಮಾನದಲ್ಲಿ. ಮಾನಸಿಕ
ಲಕ್ಷಣಗಳನ್ನು ಪ್ರಯೋಗದ ಮೂಲಕ ತಿಳಿದುಕೊಳ್ಳುವ
ಪ್ರಯತ್ನವನ್ನು ಜರ್ಮನಿ ಹಾಗೂ ಅಮೆರಿಕ ದೇಶಗಳಲ್ಲಿ
ಮಾಡಲಾಯಿತು. ಜರ್ಮನಿಯಲ್ಲಿ ವಿಲ್ಹೆಲಂ ಊಂಟ್(1832-1930)
ಅವರು ಮನೋಗುಣಗಳಾದ ಸಂವೇದನೆ ಮತ್ತು
ಸಂವೇಗಗಳನ್ನು ಪ್ರಯೋಗಗಳ ಮೂಲಕ ವಿವರಿಸುವ ಪ್ರಯತ್ನ
ಮಾಡಿದರು. ಇದಕ್ಕಾಗಿ ಜರ್ಮನಿಯ ಲೆಪಿಝಿಕ್ನಲ್ಲಿ 1879
ಮನೋವಿಜ್ಞಾನದ ಮೊಟ್ಟ ಮೊದಲ ಪ್ರಯೋಗಾಲಯ
ಆರಂಭಿಸಿದರು. ಅಮೆರಿಕದಲ್ಲಿಯೂ ಸಹ ಮಾನಸಿಕ ಕ್ರಿಯೆಗಳನ್ನು
ತಿಳಿಯುವುದಕ್ಕಾಗಿ ಕೆಲವು ಪ್ರಯೋಗಗಳನ್ನು
ದೇಹಶಾಸ್ತ್ರಜ್ಞ, ಮನೋವಿಜ್ಞಾನಿ, ಮತ್ತು ತತ್ವಶಾಸ್ತ್ರಗಳಲ್ಲಿ
ಪ್ರವೀಣರಾಗಿದ್ದ ವಿಲಿಯಂ ಜೇಮ್ಸ್(1842-1910) ಅವರು
ಮಾಡಿದ್ದರು.
ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ
ಬಳಸಲಾಗುತ್ತಿರುವ ಮನೋವಿಜ್ಞಾನ ಅಥವಾ
ಮನಶಾಸ್ತ್ರವೆಂಬ ಪದವು ಗ್ರೀಕ್ ಮತ್ತು ಇಂಗ್ಲಿಷ್ ಭಾಷೆಯ
‘ಸೈಕಾಲಜಿ’ ಯ ಸಮಾನಾರ್ಥ ಎನ್ನುವ ರೀತಿಯಲ್ಲಿ
ಬಳಸಲಾಗುತ್ತದೆ. ಮನಸ್ಸಿನ ವ್ಯವಹಾರಗಳಲ್ಲಿ ಆಲೋಚನೆ,
ನೆನಪು, ಮರೆವು, ಕಲಿಯುವಿಕೆ, ಸಂವೇದನೆಗಳು ಮತ್ತು
ಸಂವೇಗಗಳು ಸೇರಿರುತ್ತವೆ. ಇವುಗಳ ಚಟುವಟಿಕೆಗಳಿಂದಲೇ
ವ್ಯಕ್ತಿಯು ವರ್ತಿಸಲು ಸಾಧ್ಯ. ಈ ಚಟುವಟಿಕೆ ಅಥವಾ
ಕ್ರಿಯೆಗಳಿಗೆ ಸಾಮಾಜಿಕ ಸ್ವರೂಪವೂ ಇರುತ್ತದೆ. ಆಧುನಿಕ
ಮನೋವಿಜ್ಞಾನದ ನೆಲೆಗಳು ಸಾವಿರಾರು ವರ್ಷಗಳ ಹಿಂದಿಯೇ
ಗ್ರೀಕ್ ಮತ್ತು ಇತರ ಸಂಸ್ಕøತಿಯ ತತ್ವಜ್ಞಾನಿಗಳ ವಿವರಣೆಗಳಿಗೆ
ಹತ್ತಿರವಾಗಿಯೇ ಇರುವುದರಿಂದ ಅವುಗಳ ಬಗ್ಗೆಯೂ ತಿಳಿವಳಿಕೆ
ಅಗತ್ಯ.
ಆಧುನಿಕ ಮನೋವಿಜ್ಞಾನದ ಪರಂಪರೆಯ ತಳಹದಿಯು ಗ್ರೀಕ್
ತತ್ವಜ್ಞಾನಿಗಳ ಕೊಡುಗೆಗಳಿಂದಲೇ ಆದದ್ದು. ಹಾಗೆ ನೋಡಿದರೆ
ವಿಜ್ಞಾನದ ನೆಲೆಗಳಿಗೂ ಸಹ ಗ್ರೀಕ್ ಚಿಂತನೆಗಳೇ ಪ್ರೇರಣೆ. ಈ
ಪ್ರೇರಣೆಗಳು ನಿಂತ ನೀರಾಗಿರದೆÉ, ಯಾವುದೇ ಒಂದು
ಭಾಷೆ, ತತ್ವ ಅಥವಾ ದೈವೀಶಕ್ತಿಗೆ ಸೀಮಿತಗೊಳ್ಳದೇ
ಬದಲಾಗುತ್ತಲೇ ಮುಂದುವರೆಯಿತು. ಇದರ ಪರಿಣಾಮವೇ
ನಾವು ಅನುಭವಿಸುತ್ತಿರುವ ಇಂದಿನ ವಿಜ್ಞಾನ, ತಂತ್ರಜ್ಞಾನದ
ಆವಿಷ್ಕಾರಗಳು. ಮನೋವಿಜ್ಞಾನದ ಏಳಿಗೆಯನ್ನು ವಿಜ್ಞಾನದ
ಬೆಳವಣಿಗೆಯೊಂದಿಗೆ ಹೋಲಿಸಿ ನೋಡಿದಾಗ
ಅಪಾರವೆನ್ನುವಂತಹ ಬೆಳವಣಿಗೆಗಳು ಕಂಡುಬಂದದ್ದು 20ನೇ
ಶತಮಾನದ ಆರಂಭದಿಂದಲೇ ಎನ್ನಬಹುದು. ಜರ್ಮನಿ,
ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕ ಸಂಯುಕ್ತ
ಸಂಸ್ಥಾನಗಳಲ್ಲಿ ಮನಸ್ಸಿನ ಬಗ್ಗೆ ತಿಳಿಯುವ ಕುತೂಹಲ,
ಆಸಕ್ತಿಗಳು ವೈಜ್ಞಾನಿಕ ಮಾದರಿಗಳನ್ನು
ಅಳವಡಿಸಿಕೊಳ್ಳುವುದಕ್ಕೂ ಈ ಕಾಲಮಾನ ಪ್ರಶಸ್ತವಾಗಿತ್ತು.
ಆದುದರಿಂದ ಮನೋವಿಜ್ಞಾನದ ಹೊಸ ಚಿಂತನೆಗಳು
ಹೊರಬಂದದ್ದು ಕೇವಲ ಆಕಸ್ಮಿಕವಲ್ಲ, ಅದೊಂದು ತಾರ್ಕಿಕ
ಬೆಳವಣಿಗೆ ಎಂದೇ ಹೇಳಲಾಗುತ್ತದೆÀ.
ಆಧುನಿಕ ಮನೋವಿಜ್ಞಾನಕ್ಕೂ ಪುರಾತನ ಮನಶಾಸ್ತ್ರಕ್ಕೂ
ಅನೇಕಾನೇಕ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು
ವಿಷಯದ ನಿರೂಪಣೆಗಳ ಮೂಲಕ ಸುಲಭವಾಗಿ
ಗುರುತಿಸಬಹುದಾಗಿದೆ. ಜ್ಞಾನದ ಚೌಕಟ್ಟುಗಳು
ವಿಸ್ತಾರಗೊಂಡಿದ್ದರ ಫಲವಾಗಿ ಹೊಸ ವಿವರಣೆಗಳು,
ಅಧ್ಯಯನದ ಕ್ರಮಗಳು ಜನಿಸಿದವು. ಪ್ರತಿಯೊಂದು ಅಧ್ಯಯನ
ಕ್ಷೇತ್ರದಲ್ಲೂ ಕ್ರಮೇಣ ಬೆಳವಣಿಗೆ ಮತ್ತು ಬದಲಾವಣೆಗಳು
ಮುಂದುವರೆಯಿತು. ಮನುಷ್ಯ ದೇಹದ ಬಗ್ಗೆ ಹೊಸ ಹೊಸ
ವಿಷಯಗಳನ್ನು ವೈಜ್ಞಾನಿಕ ಅಧ್ಯಯನಗಳು ಹೊರತಂದವು.
ಇವುಗಳ ಪರಿಣಾಮವು ಮನಸ್ಸಿನ ಅಧ್ಯಯನದ ಮೇಲೂ
ಉಂಟಾಗುತ್ತಿತ್ತು. ಮನೋವಿಜ್ಞಾನದ ಬಗ್ಗೆ ಇರುವಂತಹ
ನಿರೂಪಣೆಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗಿ ತಿಳಿಯುತ್ತದೆ.
ಮನೋವಿಜ್ಞಾನವು ವ್ಯಕ್ತಿ ಮನಸ್ಸಿನ ಅಧ್ಯಯನವೇ
ಆಗಿರುವುದರಿಂದ ವ್ಯಕ್ತಿ ವರ್ತನೆಗಳ ರೀತಿ, ವಿಧಿ ಮತ್ತು
ಗುರಿಗಳನ್ನು ವಿವರಿಸುವ ಪ್ರಯತ್ನವನ್ನು ಬಹಳ ಹಿಂದಿನಿಂದಲೂ
ಮಾಡಲಾಗಿದೆ. ಮನಸ್ಸಿನ ವ್ಯವಹಾರಗಳು ನೇರವಾಗಿ ಕಣ್ಣಿಗೆ
ಕಾಣಿಸದಿದ್ದರೂ ಅವುಗಳ ಪ್ರಭಾವ ಮತ್ತು ಪರಿಣಾಮಗಳು
ಗಮನಕ್ಕೆ ಬಂದೇ ಬರುತ್ತವೆ. ಕಣ್ಣಿಗೆ ಕಾಣಿಸದಂತಹ
ವ್ಯವಹಾರಗಳನ್ನು ನಿಯಂತ್ರಿಸುವರು ಯಾರು ಎನ್ನುವ
ಮೂಲ ಪ್ರಶ್ನೆಯು ಮನಶಾಸ್ತ್ರದ ನಿರೂಪಣೆಯನ್ನು ಪದೇಪದೇ
ಬದಲಾಯಿಸುವಂತೆ ಮಾಡಿದೆ.
ಮನಸ್ಸು, ಆತ್ಮ ಎನ್ನುವ ಪದಗಳ ಅರ್ಥವು ಮಾನಸಿಕ
ವ್ಯವಹಾರಗಳನ್ನು ವಿವರಿಸಬಲ್ಲದು ಎನ್ನುವ ಅಭಿಪ್ರಾಯ
ಹೊಂದಿದ್ದ ಗ್ರೀಕ್ ತತ್ವಜ್ಞಾನಿಗಳು ಮನದ ಶಾಸ್ತ್ರವನ್ನು
“ಆತ್ಮ ಅಥವಾ ಮನಸ್ಸಿನ ಅಧ್ಯಯನ” ಎಂಬುದಾಗಿ
ವಿವರಿಸಿದ್ದರು. ಈ ಮಾದರಿಯ ವಿವರಣೆಯಲ್ಲಿ ಲ್ಯಾಟಿನ್ ಮತ್ತು
ಗ್ರೀಕ್ ಭಾಷೆಗಳಲ್ಲಿರುವ ‘ಸೈಕಿ’ ಮತ್ತು ‘ಲಾಗೊಸ್’ ಪದಗಳ
ಮೂಲಾರ್ಥವೇ ಮನದ ಶಾಸ್ತ್ರದ ವಿವರಣೆಗಳಿಗೆ ಆಧಾರ.
ಆದುದರಿಂದಲೇ ಮನಃಶಾಸ್ತ್ರದ ನಿರೂಪಣೆಯನ್ನು
ಅರ್ಥಮಾಡಿಕೊಳ್ಳಲು ಗ್ರೀಕ್ ಚಿಂತಕರು ‘ಸೈಕಿ’ ಪದವನ್ನು
ಹೇಗೆ ಬಳಸಿದ್ದರು ಎನ್ನುವುದನ್ನು
ತಿಳಿದುಕೊಳ್ಳಬೇಕಾಗುತ್ತದೆ. ‘ಸೈಕಿ’ ಪದಕ್ಕೆ ಎರಡು ರೀತಿಯ
ಅರ್ಥವಿದೆ. ಒಂದು ಆತ್ಮ ,ಇನ್ನೊಂದು ಮನಸ್ಸು. ಆತ್ಮವು
ಚಿರಂತರವಾಗಿರುವ ಕೆಲವು ಮಾನವಿಕ ಗುಣಗಳನ್ನು ಹಾಗೂ
ಮಾನಸಿಕ ಕ್ರಿಯೆಗಳಾದ ಭಾವ, ಅಭಿಲಾಷೆ,
ವ್ಯಾಮೋಹಗಳೊಂದಿಗೆ ಜೀವಶಕ್ತಿಯನ್ನು ಸಂಕೇತಿಸುತ್ತದೆ
. ಜೀವಶಕ್ತಿಯ ಇರುವಿಕೆಯು ದೈಹಿಕ ಕ್ರಿಯೆಗಳ ಮೂಲಕ
ವ್ಯಕ್ತವಾಗುತ್ತದೆ. ದೇಹ ನಶಿಸಿದರು ಆತ್ಮವು ದೇಹದೊಂದಿಗೆ
ನಶಿಸುವುದಿಲ್ಲವೆಂಬ ನಂಬಿಕೆಯು ಗ್ರೀಕ್ ಚಿಂತಕರಲ್ಲಿ
ಇದ್ದಂತೆಯೇ ಮತ್ತಿತರ ಸಂಸ್ಕøತಿಯ ಚಿಂತಕರಲ್ಲೂ ಇತ್ತು,
ಇಂದಿಗೂ ಇದೆ. ವ್ಯಕ್ತಿಯ ಆಗುಹೋಗುಗಳಿಗೆ ಆತ್ಮವೇ
ಕಾರಣವೆನ್ನುವುದು ಅಂದಿದ್ದ ಅಭಿಪ್ರಾಯ. ಆದರೆ, ವ್ಯಕ್ತಿಯ
ಎಲ್ಲಾ ವರ್ತನೆಗಳಿಗೂ ಆತ್ಮವೇ ಕಾರಣವಲ್ಲ ಎಂದು ವಾದಿಸಿದ
ಚಿಂತಕರು ಮನಸ್ಸಿನ ಆಳವನ್ನು ಅಧ್ಯಯನ ಮಾಡಲು ಆತ್ಮದ
ಕ್ರಿಯೆಗಳ ಅಗತ್ಯವಿಲ್ಲವೆಂದು ವಾದಿಸಿದ್ದರು. ಹಾಗೆÀಯೇ
ಮನುಷ್ಯ ಲಕ್ಷಣಗಳನೇಕವು ವ್ಯಕ್ತಿಗತವಾದದ್ದೇ
ಆದುದರಿಂದ ಆತ್ಮದ ಪ್ರೇರಣೆಯ ಮೂಲಕ ತಿಳಿಯುವ
ಅಗತ್ಯವಿಲ್ಲ ಎನ್ನುವ ಅಭಿಪ್ರಾಯವು ಮನಸ್ಸಿನ ಅಧ್ಯಯನಕ್ಕೆ
ಹೆಚ್ಚು ಉತ್ತೇಜನ ನೀಡಿತ್ತು. ಮನಸ್ಸಿನ ಚಟುವಟಿಕೆಗಳು
ಅಥವಾ ಕ್ರಿಯೆಗಳನ್ನು ನಿಖರವಾಗಿ ಆತ್ಮದ ವಿವರಣೆಗಳು
ನೀಡದಿದ್ದ ಕಾರಣ ಅವುಗಳನ್ನು ಅಧ್ಯಯನ ವಸ್ತುವನ್ನಾಗಿ
ಪರಿಗಣಿಸಲು ಸಾಧ್ಯವಿಲ್ಲ. ಆದುದರಿಂದ ‘ಸೈಕಾಲಜಿ’ ಪದದ
ಅರ್ಥವನ್ನು ಆತ್ಮದ ಅಧ್ಯಯನ ಎನ್ನುವುದರ ಬದಲಿಗೆ ಮನಸ್ಸಿನ
ಅಧ್ಯಯನ ಎಂಬುದಾಗಿಯೂ ನೋಡಬಹುದು ಎನ್ನುವ
ಚಿಂತನೆಗೆ ಮನ್ನಣೆ ದೊರಕಿತು.
ನಮ್ಮ ದಿನನಿತ್ಯದ ಭಾಷೆಯಲ್ಲಿ ‘ನನಗೆ ತರಗತಿ ಬರೋಕೆ ಮನಸೇ
ಇಲ್ಲ’, ‘ಈಗ ನನ್ನ ಮನಸ್ಸು ಕೆಟ್ಟೋಗಿದೆ’ ‘ಅವನÀ ಮೇಲೆ
ಮನಸಾಗಿದೆ’, “ಮನಸ್ಸಿದ್ದರೇ ಮಾರ್ಗ” ಮುಂತಾದ ವಾಕ್ಯಗಳು
ವ್ಯಕ್ತಿಯ ಮನಸ್ಸಿನಲ್ಲಿ ಆಗುತ್ತಿರುವ ಕ್ರಿಯೆಗಳನ್ನು
ಸೂಚಿಸುತ್ತವೆ. ಆದರೆ ಇವುಗಳೇ ಮನಸ್ಸು ಅಲ್ಲ ಎನ್ನುತ್ತಾರೆ
ಮನೋವಿಜ್ಞಾನಿಗಳು. ಮನಸ್ಸು ಎನ್ನುವ ಪದವನ್ನು
ಆಲೋಚನೆ, ಅಭಿಲಾಷೆ, ಸಾಧನೆಗಳಂತಹ ಚಟುವಟಿಕೆಗಳನ್ನು
ಸೂಚಿಸಲು ಬಳಸುವುದು ಸಾಮಾನ್ಯ. ಇದೊಂದು ರೀತಿಯ
ಸಂಪರ್ಕ ವಿಧಾನವೆನ್ನಲೂಬಹುದು. ಏಕೆಂದರೆ, ನಮ್ಮ
ಮನಸ್ಸಿನಲ್ಲಿರುವುದನ್ನು ಇತರರಿಗೆ ತಿಳಿಪಡಿಸಬೇಕಾದರೆ ಈ
ಮಾದರಿಯ ನುಡಿಗಳು ಬೇಕಾಗುತ್ತದೆ. ಆದರೆ,
ತತ್ವಶಾಸ್ತ್ರಜ್ಞರು ಮತ್ತು ಮನೋವಿಜ್ಞಾನಿಗಳು ಈ
ರೀತಿಯಿಂದ ಮನಸ್ಸನ್ನು ನೋಡುವುದಿಲ್ಲ. ಮನಸ್ಸಿನ ಮೂಲ
ಮತ್ತು ಅವುಗಳ ಗುರಿ ಏನೆಂಬುದನ್ನು ತಿಳಿಯುವ ಉದ್ದೇಶ
ಅವರದ್ದಾಗಿರುತ್ತದೆ.
ಮನಸ್ಸಿನ ಬಗ್ಗೆ ವಿವರಣೆಗಳನ್ನು ನೀಡಿದವರಲ್ಲಿ ತತ್ವಶಾಸ್ತ್ರಜ್ಞರು
ಮೊದಲಿಗರು ಎನ್ನಬಹುದು. ಮನಸ್ಸು ವ್ಯಕ್ತಿಯಲ್ಲಿರುವ
ಒಂದು ಸಶಕ್ತ ಸ್ಥಿತಿಯೆಂದು ಗ್ರೀಕ್ ಮತ್ತು ಇತರ ಪುರಾತನ
ತತ್ವಶಾಸ್ತ್ರದ ಪ್ರಕಾರಗಳು ಹೇಳುತ್ತವೆÉ. ಮನಸ್ಸು ಚೇತನ,
ಅಚೇತನ ಸ್ಥಿತಿಗಳನ್ನೊಳಗೊಂಡಿರುತ್ತದೆ. ಮನಸ್ಸಿನ
ಕಾರ್ಯಾಚರಣೆ ಎಂಬುದಾಗಿ ಇವುಗಳನ್ನು ಪÀರಿಗಣಿಸಬೇಕು
ಎನ್ನುವುದೇ ತತ್ವವಾದಿಗಳ ವಾದ. ಚೇತನವೂ ಮನಸ್ಸಿನ
ಒಂದು ಸ್ಥಿತಿಯಾಗಿರುತ್ತದೆ. ಇದಕ್ಕೆ ವಿಶಿಷ್ಟವಾದ ಅನೇಕ
ಲಕ್ಷಣಗಳು ಇರುತ್ತವೆ. ಚೇತನವನ್ನು ಪ್ರಜ್ಞೆ ಎಂದೂ ಸಹ
ಕರೆಯುತ್ತಾರೆ. ವ್ಯಕ್ತಿಯ ಆಲೋಚನೆ, ಗೋಚರಾನುಭವ
ಅಥವಾ ಪ್ರತ್ಯಕ್ಷಾನುಭವ, ಸ್ಮøತಿ ಅಥವಾ ನೆನಪು ಮತ್ತು
ಮರೆವು, ಸಂವೇಗಗಳು, ಕಲ್ಪನೆ ಮತ್ತು ಸಂಕಲ್ಪಗಳೆಲ್ಲವು
ಚೇತನ ಕ್ರಿಯೆಯ ರೂಪಗಳು. ತಮ್ಮದೇ ಆದ ವಿಭಿನ್ನ ಲಕ್ಷಣಗಳ
ಮೂಲಕ ಅವು ವ್ಯಕ್ತಗೊಳ್ಳುತ್ತವೆ .
ಸಾಮಾನ್ಯವಾಗಿ, ಮನಸ್ಸು ಎಂದರೆ ಆಲೋಚನೆ ಮತ್ತು
ವಿವೇಚನಾ ಕ್ರಿಯೆಗಳೆಂದೇ ಅರ್ಥೈಸಲಾದರೂ ಮನಸ್ಸು
ಒಂದು ಆಗೋಚರ ಶಕ್ತಿ ಎನ್ನುವುದನ್ನು ತತ್ವಶಾಸ್ತ್ರಜ್ಞರು
ಮತ್ತು ಮನೋವಿಜ್ಞಾನಿಗಳು ಒಪ್ಪುತ್ತಾರೆ. ಈ ಶಕ್ತಿಯು
ವ್ಯಕ್ತಿಯ ಕ್ರಿಯೆಗಳನ್ನು ನಿರ್ವಹಿಸುವ ಬಲವನ್ನು ಪಡೆದಿರುತ್ತದೆ.
ಹಿಂದೂ, ಗ್ರೀಕ್ ತತ್ವಶಾಸ್ತ್ರಗಳು ಮನಸ್ಸನ್ನು
ವಿವರಿಸುವಂತೆಯೇ ಬುದ್ಧ, ಪ್ಲೆಟೋ, ಅರಿಸ್ಟಾಟಲ್, ಮತ್ತು
ಇಸ್ಲಾಂ ಧರ್ಮಶಾಸ್ತ್ರಜ್ಞರು ದೈವವಾದದ ನೆಲೆಗಳಿಂದಲೇ
ಮನಸ್ಸÀನ್ನು ವಿವರಿಸಿರುತ್ತಾರೆ. ಈ ವಾದಗಳಲ್ಲಿ ಪ್ರಮುಖವಾದ
ವಿಷಯವೆಂದರೆ ಮನಸ್ಸು ಮತ್ತು ಆತ್ಮದ ನಡುವೆ ಇರುವ
ಸಂಬಂಧ. ಮನುಷ್ಯ ಮನಸ್ಸನ್ನು ಆಧ್ಯಾತ್ಮ, ದೈವ ಶಕ್ತಿ
ಮತ್ತು ಭಕ್ತಿಯ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳÀಬೇಕು ಮತ್ತು
, ಮನಸ್ಸು ಉತ್ತಮ ಬೌದ್ಧಿಕ ಕ್ರಿಯೆಗಳಾದ ಆಲೋಚನೆ ಮತ್ತು
ಸ್ಮøತಿಗೆ ಮಾತ್ರ ಅನ್ವಯಿಸುತ್ತದೆ. ನೋವು, ನಲಿವು, ಪ್ರೀತಿ,
ವ್ಯಾಮೋಹಗಳೆಲ್ಲವು ಉತ್ತಮವಲ್ಲವಾದದರಿಂದ ಅವುಗಳು
ಮನಸ್ಸಿಗೆ ಸಂಬಂಧಿಸಿದ ಕ್ರಿಯೆಗಳೆಂದು ಹೇಳಲಾಗದೆಂದು ಈ
ಶಾಸ್ತ್ರಗಳು ಪ್ರತಿಪಾದಿಸುತ್ತವೆ. ಮನಸ್ಸಿನ ಚೌಕಟ್ಟಿನಲ್ಲಿ ಈ ಎರಡು
ಕ್ರಿಯೆಗಳು ಇರುವುದರಿಂದ ಅವುಗಳು ಸಹ ಮನಸ್ಸಿನ ಅವಿಭಾಜ್ಯ
ಗುಣವೆಂದು ಹೇಳುವುದರ ಮೂಲಕ ಮನಸ್ಸು ಕೇವಲ ಉತ್ತಮ
ಅಥವಾ ಬೌದ್ಧಿಕ ಕ್ರಿಯೆಗಳಿಗೆ ಮಾತ್ರ
ಸೀಮಿತವಾಗಿರುವುದಿಲ್ಲವೆಂದು ಅನೇಕ ತತ್ವಜ್ಞಾನಿಗಳು ಈ
ವಾದವನ್ನು ವಿರೋಧಿಸಿದ್ದರು.
ಮನಶಾಸ್ತ್ರದ ನಿರೂಪಣೆಗಳು ಮನಸ್ಸಿನ ವಿದ್ಯಮಾನಗಳೇ
ಆಗಿರುವುದರಿಂದ ‘ಆತ್ಮ’, ‘ಮನಸ್ಸು’ ಗಳ ಮೂಲಕ ಸಮರ್ಪಕವಾಗಿ
ಮನಸ್ಸಿನ ಸ್ಥಿತಿಗತಿಗಳನ್ನು ವಿವರಿಸಲು ಸಾಧ್ಯವಾಗಿಲ್ಲ. ಇದರ
ಬದಲಿಗೆ ಚೇತನ ಅಥವಾ ಪ್ರಜ್ಞೆಯ ಮೂಲಕ ಮಾನಸಿಕ
ಕ್ರಿಯೆಗಳನ್ನು ಸಂಪೂರ್ಣವಾಗಿ ವಿವರಿಸಬಹದು ಎನ್ನುವ
ವಾದವು ಮನಶಾಸ್ತ್ರದ ಹೊಸದೊಂದು ನಿರೂಪಣೆಗೆ ಅವಕಾಶ
ಕಲ್ಪಿಸಿತು. 19ನೇಯ ಶತಮಾನದ ಅನೇಕ ಮನಶಾಸ್ತ್ರಜ್ಞರು
ಚೇತನದ ಸ್ಥಿತಿಗಳ ಮೂಲಕ ಮನಸ್ಸನ್ನು ತಿಳಿಯಬಹುದು
ಎನ್ನುವುದಾಗಿ ಪ್ರತಿಪಾದಿಸಿದ್ದರು.
ಮನೋವಿಜ್ಞಾನಿಗಳ ಭಾಷೆಯಲ್ಲಿ ಚೇತನವನ್ನು ಒಂದು ವಿಶಿಷ್ಟ
ರೀತಿಯ ಅರಿವು ಎಂದು ಹೇಳಲಾಗುತ್ತದೆ. ವ್ಯಕ್ತಿಯು
ಎದುರಿಸುವ ಅಥವಾ ಅನುಭವಿಸುವ ಪ್ರತಿಯೊಂದು ಮಾನಸಿಕ
ಸ್ಥಿತಿಯನ್ನು ಪ್ರಜ್ಞೆ ಎಂದು ಗುರುತಿಸಲಾಗುತ್ತದೆ.
ಉದಾಹರಣೆಗೆ ಹೇಳುವುದಾದರೆ, ಬಿಸಿಯ ಅನುಭವವು ತಣ್ಣನೆಯ
ಅನುಭವಕ್ಕಿಂತ ಬೇರೆ ಎನ್ನುವುದು ಗೊತ್ತಾಗಬೇಕಾದರೆ
ಪ್ರಜ್ಞೆಯ ಕಾರ್ಯಾಚರಣೆ ನೆರವೇರಲೇ ಬೇಕು. ಈ
ಕಾರ್ಯಚರಣೆಯು ಸಪ್ಟವಾಗಿ ಗೊತ್ತಾದಾಗ ಅರಿವು
ಉಂಟಾಗಿದೆ ಎನ್ನಬಹುದು.

ಚೇತನವು ವ್ಯಕ್ತಿಗತ ಸ್ಥಿತಿಯಾಗಿದ್ದು ಸದಾ
ಜಾಗೃತವಾಗಿರುವಂತಹದ್ದು. ಈ ಸ್ಥಿತಿಯು ನಿದ್ರೆಯಲ್ಲಿದ್ದಾಗು
ಚುರುಕಾಗಿರದು; ನಿದ್ರಾ ಸ್ಥಿತಿಗಳೆಲ್ಲವು ಅಚೇತನ
ಸ್ಥಿತಿಗಳಾಗಿರುತ್ತವೆ. ಕೆಲವು ಆಧುನಿಕ ನರ ಮತ್ತು ಮಿದುಳಿನ
ತಜ್ಞರು ಚೇತನ ಅಥವಾ ಪ್ರಜ್ಞೆಯ ಸ್ಥಿತಿಯನ್ನು ಜೈವಿಕ ಕ್ರಿಯೆ
ಎಂದೇ ಅಭಿಪ್ರಾಯ ಪಡುತ್ತಾರೆ. ಅಂದರೆ, ನರ ಮತ್ತು ಮಿದುಳಿನ
ಚಟುವಟಿಕೆಗಳ ಮೂಲಕ ಮಾತ್ರ ಚೇತನದ ಸ್ಥಿತಿಗಳು
ಉಂಟಾಗುವುದು ಎನ್ನುವುದು. ವ್ಯಕ್ತಿಯ ಮಾನಸಿಕ
ಕ್ರಿಯೆಗಳು ಚೇತನಾ ಸ್ಥಿತಿಯಲ್ಲಿ ಉಂಟಾಗುವ ಅನುಭವಗಳೇ
ಆಗುವುದರಿಂದ ಪ್ರಜ್ಞೆಯ ಅಧ್ಯಯನವೇ ಮನದ ಶಾಸ್ತ್ರ
ಎನ್ನವುದು ಕೆಲ ಮನೋವಿಜ್ಞಾನಿಗಳ ವಾದ.

15.10.16

Pdo - ಸಾಮಾನ್ಯ ಜ್ಞಾನ

PDO ಅಧ್ಯಯನ ಸಾಮಗ್ರಿ 11
1) ಎಲ್ಲ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು
ಗುರುತಿಸುವ ಅಧಿಕಾರ ಯಾರದು?
a) ಗ್ರಾಮ ಪಂಚಾಯಿತಿಯದು
b) ವಾರ್ಡ ಸಭೆಯದು
c) ಗ್ರಾಮ ಸಭೆಯದು
d)  ಜಿಲ್ಲಾಧಿಕಾರಿಯದು
C ✔✔
2) 2003 ರ ತಿದ್ದುಪಡಿ ಪ್ರಕಾರ್ ಗ್ರಾಮ ಪಂಚಾಯಿತಿ ಸಭೆಗಳ
ಅವಧಿ ?
a) ತಿಂಗಳಿಗೆ ಎರಡು ಭಾರಿ
b) ತಿಂಗಳಿಗೊಮ್ಮೆ
c)  ಎರಡು ತಿಂಗಳಿಗೊಮ್ಮೆ
d) ವಾರಕ್ಕೊಮ್ಮೆ
B ✔✔
3) ಗ್ರಾಮ ಸಭೆಗಳು ಮತ್ತು ವಾರ್ಡ ಸಭೆಗಳ ಒಂದು ವರ್ಷದಲ್ಲಿ
ಕನಿಷ್ಠ ಎಷ್ಟು ಭಾರಿ ಸಭೆ ಸೇರಬೇಕು?
a) ಒಮ್ಮೆ
b) ಎರಡು
c) ಮೂರು
d) ನಾಲ್ಕು
B ✔✔
4) 2003 ರ ತಿದ್ದುಪಡಿ ಪ್ರಕಾರ ಪ್ರತಿ ಗ್ರಾಮ ಪಂಚಾಯತಿಗೆ
ನಿಗಿದಿಯಾದ ಶಾಸನಬದ್ದ ಅನುದಾನದ ಮೊತ್ತ ಎಷ್ಟು?
a) ಒಂದು ಲಕ್ಷ ರೂ
b) ಎರಡು ಲಕ್ಷ ರೂ
c) ನಾಲ್ಕು ಲಕ್ಷ ರೂ
d) ಐದು ಲಕ್ಷ ರೂ
D ✔✔
5 )ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ 1993 ಕ್ಕೆ
ಮಾಡಲಾದ 47 ತಿದ್ದುಪಡಿಗಳು ಜಾರಿಯಾದ ವರ್ಷ?
a) 1995
b) 1997
c) 1999
d) 2003
D ✔✔
6) ಪಂಚಾಯಿತರಾಜ್ ಸಂಸ್ಥೆಗಳ ಚುನಾವಣೆಯನ್ನು ಯಾರು
ನಡೆಸುತ್ತಾರೆ?
a) ಮುಖ್ಯರ ಚುನಾವಣಾ ಆಯುಕ್ತರು
b) ಕೇಂದ್ರ ಚುನಾವಣಾ ಆಯುಕ್ತರು
c) ರಾಜ್ಯಪಾಲರು
d) ರಾಜ್ಯ ಚುನಾವಣಾ ಆಯುಕ್ತರು
D ✔️✔️
7) ಜಿಲ್ಲಾ ಯೋಜನೆ ಸಮಿತಿಗೆ ಯಾರು
ಉಪಾಧ್ಯಕ್ಷರಾಗಿರುತ್ತಾರೆ?
a) ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು
b) ಸದಸ್ಯರಲ್ಲಿ ಆಯ್ಕೆ ಮಾಡಿದ ಒಬ್ಬರು
c) ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ನಗರ ಸ್ಥಳೀಯ
ಸಂಸ್ಥೆಯ ಅಧ್ಯಕ್ಷರು
d) ಉಪಾಧ್ಯಕ್ಷರು
C ✔✔
8) ಎಲ್ಲಿ ಎರಡು ಶ್ರೇಣಿ ಪಂಚಾಯತ್ ರಾಜ ವ್ಯವಸ್ಥೆ
ಇರುತ್ತದೆ?
a) ಕೇಂದ್ರಾಡಳಿತ ಪ್ರದೇಶಗಳಲ್ಲಿ
b) ದೆಹಲಿಯಲ್ಲಿ
c) 20 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಇರುವೆಡೆಯಲ್ಲಿ
d) 10 ಲಕ್ಷ ಜನಸಂಖ್ಯೆ ಇರುವಕಡೆ
C ✔✔
9) ಹಿತಾಸಕ್ತಿಯನ್ನು ಹೊಂದಿದ್ದ ಸದಸ್ಯನು ಮತ
ಚಲಾಯಿಸಿದರೆ ಯಾವ ದಂಡನೆ ವಿಧಿಸಬಹುದು?
a) ರೂ.500 ಗಳವರೆಗೆ ವಿಸ್ತರಿಸಬಹುದಾದಂತಹ ಜುಲ್ಮಾನೆ
b) ಮೂರು ತಿಂಗಳು ಸಾದಾ ಸೆರವಾಸ್
c) ರೂ. 1000 ಗಳವರೆಗೆ ವಿಸ್ತರಿಸಬಹುದಾದಂತಹ ಜುಲ್ಮಾನೆ
d) ಒಂದು ತಿಂಗಳು ಸಾದಾ ಸೆರವಾಸ್
D ✔✔
10) ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಚುನಾಯಿತ
ಸದಸ್ಯನಾಗಿರಲು?
a) ಒಬ್ಬ ವ್ಯಕ್ತಿಯ ಕಡ್ಡಾಯವಾಗಿ ತನ್ನ ಕುಟುಂಬದ
ಸದಸ್ಯರುಗಳು ಉಪಯೋಗಕ್ಕಾಗಿ ಶೌಚಗೃಹವನ್ನು
ಹೊಂದಿರಬೇಕು
b) ಒಬ್ಬ ವ್ಯಕ್ತಿಯ ತನ್ನ ಕುಟುಂಬದ ಸದಸ್ಯರುಗಳ
ಉಪಯೋಗಕ್ಕಾಗಿ ಶೌಚಗೃಹವನ್ನು ಹೊಂದಿರುವ ಅವಶ್ಯಕತೆ
ಇರುವುದಿಲ್ಲ
c) ಒಬ್ಬ ವ್ಯಕ್ತಿಯ ಕಡ್ಡಾಯವಾಗಿ ಶೌಚಗೃಹವನ್ನು
ಉಪಯೋಗಿಸುತ್ತಿರಬೇಕು
d) ಒಬ್ಬ ವ್ಯಕ್ತಿಯ ಶೌಚಗೃಹವನ್ನು ಉಪಯೋಗಿಸುತ್ತಿರ
ಬಾರದು
A ✔✔
11) ಗ್ರಾಮ ಪಂಚಾಯಿತಯ ಕರ್ತವ್ಯಗಳನ್ನು ನೆರವೇರಿಸಲು
ನಿಗದಿಪಡಿಸುವ ಅಧಿಕಾರ ಯಾರಿಗಿರುತ್ತದೆ?
a) ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಗಳು
b) ತಾಲ್ಲೂಕು ಪಂಚಾಯಿತಿ
c) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ
ಅಧಿಕಾರಿಗಳು
d) ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರು
A ✔✔
12) ಗ್ರಾಮ ಪಂಚಾಯಿತಿ ಸದಸ್ಯರ ಹುದ್ದೆಯ ಅವಧಿಯ ಈ ಯಾವ
ದಿನಾಂಕದಿಂದ ಆರಂಭವಾಗುತ್ತದೆ?
a) ಚುನಾಯಿತರಾದ ದಿನಾಂಕದಿಂದ
b) ಕಛೇರಿಗೆ ಹಾಜರಾದ ದಿನಾಂಕದಿಂದ
c) ಪ್ರಮಾಣ ಕೈಗೊಂಡ ದಿನಾಕದಿಂದ
d) ಗ್ರಾಮ ಪಂಚಾಯಿತಿಯ ಪ್ರಥಮ ಸಭೆಗೆ ಗೊತ್ತುಪಡಿಸಿದ
ದಿನಾಂಕದಿಂದ
D ✔✔
13) ಗ್ರಾಮ ಪಂಚಾಯಿತಿಗೆ ಆಡಳಿತಾಧಿಕಾರಿ ಅಥವಾ ಆಡಳಿತ
ಸಮಿತಿಯನ್ನು ಯಾರು ನೇಮಿಸುತ್ತಾರೆ?
a) ಉಪವಿಭಾಗಾಧಿಕಾರಿಗಳು
b) ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಕ
ಅಧಿಕಾರಿಗಳು
c) ತಹಶೀಲ್ದಾರ್
d) ಜಿಲ್ಲಾಧಿಕಾರಿಗಳು
A ✔✔
14) ಗ್ರಾಮ ಸಭೆಯನ್ನು ಒಂದು ವರ್ಷದಲ್ಲಿ ಕನಿಷ್ಠ ಎಷ್ಟು ಭಾರಿ
ಕರೆಯಬೇಕು?
a) ನಾಲ್ಕು
b) ಮೂರು
c) ಎರಡು
d) ಒಂದು
C ✔✔
15 ) ಗ್ರಾಮ ಪಂಚಾಯತಿಯ ಕಾನೂನುಬಾಹಿರ ಆದೇಶ ಅಥವಾ
ನಿರ್ಣಯದ ಜಾರಿಯನ್ನು ಅಮಾನತ್ತುಗೊಳಿಸಲು ಯಾರು
ಅಧಿಕಾರ ಹೊಂದಿರುತ್ತಾರೆ?
a) ಜಿಲ್ಲಾ ಪಂಚಾಯತಿ
b) ತಾಲ್ಲೂಕು ಪಂಚಾಯತಿ
c) ಗ್ರಾಮ ಪಂಚಾಯತಿ
d) ಮೇಲಿನ ಎಲ್ಲಾ ಮೂವರು
C ✔✔
Share 6
Shashikumar Shash at 14:47:00 4 comments
PDO ಅಧ್ಯಯನ ಸಾಮಗ್ರಿ 10
🌹🌹 ಜ್ಞಾನಸೌರಭ ಗ್ರೂಪ್ 🌹 🌹
💐 ಪಂಚಾಯತ ರಾಜ್ ಕ್ವಿಜ್ 💐
ಕ್ವಿಜ್ ಸಂಯೋಜಕರು ➡️ ದಿವ್ಯಾಶ್ರೀ ವಿ.ಪಾಟೀಲ್ ಮತ್ತು
ಮಂಜುಳಾ
1)  ರಾಜೀವ್ ಆವಾಸ್ ಯೋಜನೆಯ ಎಷ್ಟು ಲಕ್ಷಕ್ಕಿಂತ ಕಡಿಮೆ
ಜನಸಂಖ್ಯೆ ಇರುವ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ
ಅನ್ವಯವಾಗುತ್ತದೆ?
ಎ) ಐದು ಲಕ್ಷ
ಬಿ) ಏಂಟು ಲಕ್ಷ
ಸಿ) ಹತ್ತು ಲಕ್ಷ
ಡಿ) ಮೂರು ಲಕ್ಷ
ಉತ್ತರ : ಎ ) ಐದು ಲಕ್ಷ ✔✔
2) ANSSIRD ಇರುವ ಸ್ಥಳ
ಎ) ಮೈಸೂರು
ಬಿ) ಬೆಂಗಳೂರು
ಸಿ) ಕಲಬುರಗಿ
ಡಿ) ಗದಗ
ಉತ್ತರ : ಎ ) ಮೈಸೂರು ✔✔
3) ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷರ ಅಧಿಕಾರವಧಿ
ಎ) 60 ತಿಂಗಳು
ಬಿ) 20 ತಿಂಗಳು
ಸಿ) 30 ತಿಂಗಳು
ಡಿ) 40 ತಿಂಗಳು
ಉತ್ತರ : ಎ ) 60 ತಿಂಗಳು ✔✔
4) ಗ್ರಾಮ ಪಂಚಾಯಿತಿ ಚರಾಸ್ತಿಯ ವಾರ್ಷಿಕ ಸವಕಳಿ
ಮೌಲ್ಯವನ್ನು ನಿರ್ಧರಿಸುವ ಮತ್ತು ನಿರ್ವಹಿಸುವ ವಹಿ
ಎ) ಆಸ್ತಿ ವಹಿ
ಬಿ) ದಾಸ್ತಾನು ವಹಿ
ಸಿ) ಖರೀದಿ ಪುಸ್ತಕ
ಡಿ) ಆರ್ಥಿಕ ಸ್ಥಿತಿ ವಿವರ ಪಟ್ಟಿ
ಉತ್ತರ : ಬಿ ) ದಾಸ್ತಾನು ವಹಿ✔✔
5) 'ಆಶ್ರಯ ಗೃಹ ಯೋಜನೆ 'ಯನ್ನು ಪ್ರಾಯೋಜಿಸಿದವರು
ಎ) ರಾಜ್ಯ ಸರ್ಕಾರ
ಬಿ) ಕೇಂದ್ರ ಸರ್ಕಾರ
ಸಿ) ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ : ಎ ) ರಾಜ್ಯ ಸರ್ಕಾರ ✔✔
6) ತಾಲ್ಲೂಕು ಪಂಚಾಯಿತಿಯನ್ನು ವಿಸರ್ಜಿಸಲು ಯಾರು
ಅಧಿಕಾರ ಹೊಂದಿರುತ್ತಾರೆ?
ಎ) ಜಿಲ್ಲೆಯ ಉಸ್ತುವಾರಿ ಸಚಿವರು
ಬಿ) ಜಿಲ್ಲಾ ಪಂಚಾಯತಿ
ಸಿ) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ
ಡಿ) ಸರ್ಕಾರ
ಉತ್ತರ : ಸಿ ) ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಾಹಕ
ಅಧಿಕಾರಿ ✔✔
7) ಸಾಮಾನ್ಯ ಸಭೆಯ ಎಷ್ಟು ದಿನಗಳ ಮುಂಚೆ ನೋಟಿಸನ್ನು
ನೀಡಬೇಕು?
ಎ) ಏಳು
ಬಿ) ಐದು
ಸಿ) ಮೂರು
ಡಿ) ಹತ್ತು
ಉತ್ತರ : ಎ ) ಏಳು ✔✔
8) ಒಮ್ಮೆ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳನ್ನು
ಅಂಗೀಕರಿಸಿದ ನಂತರ ಅದನ್ನು ಎಷ್ಟು ತಿಂಗಳೊಳಗೆ
ಬದಲಾಯಿಸಲು ಅಥವಾ ರದ್ದುಪಡಿಸಲು ಅವಕಾಶವಿದೆ?
ಎ) ಮೂರು ತಿಂಗಳು
ಬಿ) ಆರು ತಿಂಗಳು
ಸಿ) ಹನ್ನೆರಡು ತಿಂಗಳು
ಡಿ) ಯಾವುದೇ ರೀತಿಯ ತಿಂಗಳು ಇರುವುದಿಲ್ಲ
ಉತ್ತರ : ಬಿ ) ಆರು ತಿಂಗಳು ✔✔
9) ಸದಸ್ಯರು ಯಾವುದಾದರೂ ನಿರ್ದಿಷ್ಟ ಬೇಡಿಕೆ ಹಾಗೂ
ಅವಶ್ಯಕತೆಗಳನ್ನು ಸಭೆಯಲ್ಲಿ ಮಂಡಿಸಬೇಕಾದಲ್ಲಿ ಎಷ್ಟು
ದಿನಗಳ ಮುಂಚೆ ಅಧ್ಯಕ್ಷರ ಗಮನಕ್ಕೆ ವಿಷಯವನ್ನು
ಸಲ್ಲಿಸಬೇಕು?
ಎ) ಮೂರು ದಿನ
ಬಿ) ಐದು ದಿನ
ಸಿ) ಆರು ದಿನ
ಡಿ) ಏಳು ದಿನ
ಉತ್ತರ : ಬಿ ) ಐದು ದಿನ ✔✔
10) ವಿಶೇಷ ಸಭೆಗೆ ಎಷ್ಟು ಪೂರ್ಣ ದಿನಗಳ ನೋಟಿಸನ್ನು
ಕಾರ್ಯದರ್ಶಿ ನೀಡಬೇಕಾಗುತ್ತದೆ?
ಎ) ಮೂರು ದಿನ
ಬಿ) ಐದು ದಿನ
ಸಿ) ಆರು ದಿನ
ಡಿ) ಏಳು ದಿನ
ಉತ್ತರ : ಎ ) ಮೂರು ದಿನ ✔✔
11) ನಡವಳಿ ಪುಸ್ತಕವು ಯಾರ ಸುಪರ್ದಿನಲ್ಲಿರಬೇಕು?
ಎ) ಪಿಡಿಓ ಮತ್ತು ಕಾರ್ಯದರ್ಶಿ
ಬಿ) ಪಿಡಿಓ ಮತ್ತು ಅಧ್ಯಕ್ಷ
ಸಿ) ಪಿಡಿಓ ಮತ್ತು ಕಾರ್ಯನಿರ್ವಾಹಕ ಅಧಿಕಾರಿ
ಡಿ) ಪಂಚಾಯತ ಅಭಿವೃದ್ಧಿ ಅಧಿಕಾರಿ
ಉತ್ತರ : ಎ ) ಪಿಡಿಓ ಮತ್ತು ಕಾರ್ಯದರ್ಶಿ ✔✔
12) ಸಭಾ ನಡುವಳಿಯ ಒಂದು ಪ್ರತಿಯನ್ನು ಸಭೆ ನಡೆದ ಎಷ್ಟು
ದಿನಗಳೊಳಗೆ ಕಾರ್ಯನಿರ್ವಾಹಕ ಅಧಿಕಾರಿ ಗೆ ಕಳುಹಿಸಬೇಕು?
ಎ) ಏಳು ದಿನ
ಬಿ) ಹತ್ತು ದಿನ
ಸಿ) ಹದಿನೈದು ದಿನ
ಡಿ) ಮೂವತ್ತು ದಿನ
ಉತ್ತರ : ಬಿ ) ಹತ್ತು ದಿನ ✔✔
13) ಗ್ರಾಮ ಪಂಚಾಯಿತಿ ಕಾರ್ಯನಿರ್ವಾಹಕ ಮುಖ್ಯಸ್ಥರು
ಯಾರು?
ಎ) ಅಧ್ಯಕ್ಷರು
ಬಿ) ಪಿಡಿಓ
ಸಿ) ಕಾರ್ಯನಿರ್ವಾಹಕ ಅಧಿಕಾರಿ
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಎ ) ಅಧ್ಯಕ್ಷರು ✔️ ✔️
14) ಗ್ರಾಮ ಪಂಚಾಯತ ಅಧ್ಯಕ್ಷನ ವೇತನ ಎಷ್ಟು?
ಎ) 1000
ಬಿ) 1200
ಸಿ) 1500
ಡಿ) 1800
15) ಒಂದು ಬಾರಿ ಅವಿಶ್ವಾಸ ಗೊತ್ತುವಳಿ ವಿಫಲವಾದಲ್ಲಿ ಆ
ದಿನಾಂಕದಿಂದ ---------------------------- ಮರು ಅವಿಶ್ವಾಸ
ಮಂಡಿಸುವ ಹಾಗಿಲ್ಲ.
ಎ) ಆರು ತಿಂಗಳು
ಬಿ) ಒಂದು ವರ್ಷ
ಸಿ) ಎರಡು ವರ್ಷ
ಡಿ) ಮೂರು ವರ್ಷ
ಉತ್ತರ : ಬಿ ) ಒಂದು ವರ್ಷ✔✔
16) ವಜಾಗೊಂಡ ನೌಕರ ಇವರಿಗೆ ಮೇಲ್ಮನವಿ ಮಾಡಿಕೊಳ್ಳಲ್ಲು
ಅವಕಾಶವಿದೆ?
ಎ) C.E.O.
ಬಿ) E.O.
ಸಿ) A.C.
ಡಿ) D.C.
ಉತ್ತರ : ಎ ) C.E.O. ✔✔
17) ಜನನ ಮತ್ತು ಮರಣಗಳ ನೋಂದಣಿ ಪುಸ್ತಕ ಯಾರ
ಜವಾಬ್ದಾರಿ ಯಾಗಿದೆ?
ಎ) ಕಾರ್ಯದರ್ಶಿ
ಬಿ) ಪಿಡಿಓ
ಸಿ) ಗ್ರಾಮ ಲೆಕ್ಕಿಗರು
ಡಿ) ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಸಿ ) ಗ್ರಾಮ ಲೆಕ್ಕಿಗರು ✔✔
18) ಗ್ರಾಮ ಪಂಚಾಯತಗಳು ಎಷ್ಟು ವರ್ಷಕ್ಕೊಮ್ಮೆ
ತೆರಿಗಯನ್ನು ಪರಿಷ್ಕರಿಸಬೇಕು?
ಎ) ಮೂರು ವರ್ಷ
ಬಿ) ನಾಲ್ಕು ವರ್ಷ
ಸಿ) ಎರಡು ವರ್ಷ
ಡಿ) ಐದು ವರ್ಷ
ಉತ್ತರ : ಬಿ ) ನಾಲ್ಕು ವರ್ಷ ✔✔
19) ತೆರಿಗೆ ಪರಿಷ್ಕರಣೆ ಕುರಿತು ಗ್ರಾಮ ಪಂಚಾಯಿತಿ ಯಾವ
ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕು?
ಎ) ವಿಶೇಷ ಸಭೆ
ಬಿ) ಸಾಮಾನ್ಯ ಸಭೆ
ಸಿ) ಗ್ರಾಮ ಸಭೆ
ಡಿ) ಯಾವುದೇ ರೀತಿಯ ಸಭೆಗಳಿಲ್ಲ
ಉತ್ತರ : ಬಿ ) ಸಾಮಾನ್ಯ ಸಭೆ ✔✔
20) 209 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
ಎ) ಗ್ರಾಮ ಪಂಚಾಯಿತಿ ಸ್ವತ್ತುಗಳನ್ನು ಅರ್ಜಿಸುವುದು,
ಧಾರಣೆ ವಿಲೇ ಮಾಡುವುದು
ಬಿ) ಗ್ರಾಮ ಪಂಚಾಯಿತಿ ಯಲ್ಲಿ ಸ್ವತ್ತನ್ನು
ನಿಹಿತಗೊಳಿಸುವುದು.
ಸಿ) ಗ್ರಾಮ ಪಂಚಾಯತ ಸಾಲ ಎತ್ತುವುದು
ಡಿ) ಸ್ಥಿರ ಸೊತ್ತುಗಳ ವರ್ಗಾವಣೆಯ ಮೇಲೆ ಶುಲ್ಕ
ಉತ್ತರ : ಎ ) ಗ್ರಾಮ ಪಂಚಾಯಿತಿ ಸ್ವತ್ತುಗಳನ್ನು
ಅರ್ಜಿಸುವುದು, ಧಾರಣೆ ವಿಲೇ ಮಾಡುವುದು ✔✔
Share 3
Shashikumar Shash at 14:40:00 2 comments
PDO ಅಧ್ಯಯನ ಸಾಮಗ್ರಿ 9
1) ಕೇರಳ ರಾಜ್ಯದಲ್ಲಿ ಯಾರ ಜನ್ಮದಿನವನ್ನು "ರಾಜ್ಯ
ಪಂಚಾಯತ್ ದಿನ" ಎಂದು ಆಚರಿಸಲಾಗುತ್ತಿದೆ?
1)ಅಶೋಕ ಮೆಹ್ತಾ
2)ಬಲವಂತರಾವ್ ಮೆಹ್ತಾ
3)ಎಲ್.ಎಂ.ಸಿಂಘ್ವಿ
4)ಜಿವಿಕೆ.ರಾವ್
✅👌
2) ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹಣಕಾಸನ್ನು
ವಿಕೇಂದ್ರಿಕರಿಸಲು ರೂಪಿಸಿದ ಸಮಿತಿ ಯಾವುದು?
1)ಪಿ.ಕೆ.ತುಂಗನ ಸಮಿತಿ
2)ಕೆ.ಸಂತಾನಮ್ ಸಮಿತಿ
3)ಗಾಡ್ಗಿಲ್ ಸಮಿತಿ
4)ಜಿವಿಕೆ ರಾವ್ ಸಮಿತಿ
B✅👌
3) ಅಶೋಕ ಮೆಹ್ತಾ ಸಮಿತಿಯು ಎಷ್ಪು ಶಿಫಾರಸ್ಸುಗಳನ್ನು
ಸೂಚಿಸಿತು?
1)123
2)132
3)143
4)156
B✅👌
4) ಅಶೋಕ ಮೆಹ್ತಾ ಸಮಿತಿಯು ಮಂಡಲ ಪಂಚಾಯತ್ ರಚನೆಗೆ
ಎಷ್ಟು ಜನಸಂಖ್ಯೆ ಸಮೂಹವನ್ನು ಸೂಚಿಸಿತು?
1)15-20ಸಾವಿರ
2)20-25ಸಾವಿರ
3)10-12ಸಾವಿರ
4) 15-25ಸಾವಿರ
A✅👌
5) ಗ್ರಾಮೀಣ ಅಭಿವೃದ್ಧಿಯ ಆಡಳಿತಾತ್ಮಕ ಅಂಶಗಳ ಬಗ್ಗೆ ವರದಿ
ನೀಡಿದ ಸಮೀತಿ ಯಾವುದು?
1)ಜಿವಿಕೆ ರಾವ್ ಸಮೀತಿ
2)ಗಾಡ್ಗಿಲ್ ಸಮೀತಿ
3)ಸಿಂಘ್ವೀ ಸಮೀತಿ
4)ಸಂತಾನಮ್ ಸಮೀತಿ
A✅👌
6) ಮೊದಲು ಪಂಚಾಯತ್ ಚುನಾವಣೆಯನ್ನು ಪಕ್ಷ
ಆಧಾರಿತವಾಗಿ ನಡಸಲಾದ ರಾಜ್ಯ ಯಾವುದು?
1)ಗುಜರಾತ್
2)ರಾಜಸ್ತಾನ
3)ಪ.ಬಂಗಾಳ
4)ಆಂಧ್ರಪ್ರದೇಶ
C✅👌
7) ಅಶೋಕ ಮೆಹ್ತಾ ಸಮಿತಿಯು ತನ್ನ ವರದಿಯನ್ನು ಒಪ್ಪಿಸಿದ
ವರ್ಷ?
1)1978 Aug 21
2)1978 jun 26
3)1978 july 28
4)1978 jan 22
A✅👌
8) 73&74 ರ ತಿದ್ದುಪಡಿ ಮಸೂದೆಗಳನ್ನು ಲೋಕಸಭೆಯಲ್ಲಿ
ಅಂಗಿಕರಿಸಲಾದ ವರ್ಷ?
1)1992 Dec 22
2)1992 jan 23
3)1992 Feb 26
4)1992 Aug 25
A✅👌
9) ರಾಜ್ಯ ಮಟ್ಟದ ಅನುದಾನವನ್ನು ಪಂಚಾಯತ್ ಸಂಸ್ಥೆಗಳಿಗೆ
ವರ್ಗಾಯಿಸಬೇಕು ಎಂದು ಶಿಫಾರಸ್ಸು ಮಾಡಿದ ಸಮೀತಿ
ಯಾವುದು?
1)ಬಲವಂತ ರಾವ್ ಮೆಹ್ತಾ
2)ಅಶೋಕ ಮೆಹ್ತಾ
3)ಎಲ್.ಎಂ.ಸಿಂಘ್ವೀ
4)ಕೆ.ಸಂತಾನಮ್ ಸಮೀತಿ
D✅👌
10) 64ನೇ ತಿದ್ಧುಪಡಿ ಮಸೂದೆಯು ಯಾವ ವರ್ಷ ಲೋಕಸಭೆ
ವಿಸರ್ಜನೆಯಿಂದ ಮಸೂದೆಯು ಬಿದ್ದು ಹೊಯಿತು?
1)1990
2)1993
3)1983
4)1995
A✅👌
11) ಅನುಸೂಚಿತ ಪ್ರದೇಶಗಳಿಗೆ ಪಂಚಾಯತಿಯನ್ನು
ಅಳವಡಿಸಲು ಯಾವ ಕಾಯ್ದೆಯನ್ನು ಜಾರಿಗೆ ತರಲಾಯಿತು?
1)1993
2)1983
3)1996
4)1995
C✅👌
12) ಯಾವ ವಿಧಿಯ ಅನ್ವಯ ಅರುಣಚಲ ಪ್ರದೇಶದ ಪರಿಶಿಷ್ಟ
ಜಾತಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆಯು ಜಾರಿಗೆ
ಬಂದಿತು?
1)244A
2)243K
3)243M
4)245F
C👌✅
13) 73ನೇ ಸಂವಿಧಾನ ತಿದ್ದುಪಡಿ ತಂದ ವರ್ಷ?
1)1992
2)1993
3)1995
4)1986
A✅👌
14) 73ನೇ ಸಂವಿಧಾನ ತಿದ್ದುಪಡಿ ಜಾರಿಗೆ ಬಂದ ದಿನ ಯಾವಾಗ?
1)April 22-1993
2)Aug 251983
3)April 24-1993
4)May 24-1993
C✅👌
15) ಪಂಚಾಯತ್ ಅಧಿಕಾರವಧಿಯನ್ನು ತಿಳಿಸುವ ವಿಧಿ ಯಾವುದು?
1)243B
2)243E
3)243F
4)243H
B✅👌
16) ರಾಜ್ಯ ಚುನಾವಣಾ ಆಯೋಗಕ್ಕೆ ವಹಿಸಿದ ಕಾರ್ಯಗಳನ್ನು
ನಿರ್ವಹಿಸಲು ಅವಶ್ಯವಾದ ಸಿಬ್ಬಂಧಿಯನ್ನು ಒದಗಿಸುವಂತೆ
ರಾಜ್ಯ ಚುನಾವಣಾ ಆಯೋಗ ಕೋರಿದಾಗ ಯಾರಿಗೆ
ಒದಗಿಸುವ ಆಧಿಕಾರವಿದೆ?
1)ಜಿಲ್ಲಾಧಿಕಾರಿ
2)ಮುಖ್ಯಮಂತ್ರಿ
3)ರಾಜ್ಯಪಾಲ
4)ತಹಸಿಲ್ದಾರ್
C✅👌
17) "ರಾಷ್ಟ್ರೀಯ ಪಂಚಾಯತ್ ದಿವಸ" ವನ್ನು ಆಚರಿಸುವದು?
1)ಏಪ್ರಿಲ್ 24
2)ಮೇ 24
3)ಮಾರ್ಚ 24
4)ಜನವರಿ 24
A✅👌
18) ಕರ್ನಾಟಕ ಪಂಚಾಯತ್ ರಾಜ್  1983 ರ ಕಾಯ್ದೆ
ರಾಷ್ಟ್ರಪತಿಗಳ ಅಂಕಿತ ಪಡೆದ ವರ್ಷ?
1)may 11-1985
2)Feb 15-1985
3)July 10-1985
4)Marc 16-1985
C✅👌
19) ವಾರ್ಡ ಸಭೆಗೆ ಹಾಜರಾಗುವ ಮತದಾರರಲ್ಲಿ ಎಷ್ಟು
ಕಡಿಮೆಯಿಲ್ಲದಷ್ಟು ಮಹಿಳೆಯರು ಇರಬೇಕು?
1)ಶೇ25
2)ಶೇ15
3)ಶೇ30
4)ಶೇ12
C✅👌
20) ಪಂಚಾಯತ್ ಪ್ರದೇಶದ ಪ್ರತಿಯೊಂದು ವಾರ್ಡ ಸಭೆಯಿಂದ
ಕನಿಷ್ಠ ಎಷ್ಟು ಜನ ಸದಸ್ಯರು ಸಭೆಗೆ ಹಾಜರಾಗಬೇಕು?
1)18
2)20
3)10
4)5
C✅👌
Thank you parasuram sir🙏🙏🙏🙏💐💐💐
💐💐👌👌🌺🌺🌺🌺🌺🌺
Share 1
Shashikumar Shash at 14:38:00 0 comments
PDO ಅಧ್ಯಯನ ಸಾಮಗ್ರಿ 8
💐 💐 ಪಂಚಾಯತ ರಾಜ್ ಕ್ವಿಜ್ 💐 💐
1) 73 ನೇ ಸಂವಿಧಾನ ತಿದ್ದುಪಡಿ ರಾಷ್ಟ್ರಪತಿ ಅವರಿಂದ
ಯಾವಾಗ ಅನುಮೋದನೆ ಪಡೆಯಿತು?
ಎ) ಡಿಸೆಂಬರ್ 22, 1992
ಬಿ) ಡಿಸೆಂಬರ್ 23, 1992
ಸಿ) ಏಪ್ರಿಲ್      20, 1993
ಡಿ) ಏಪ್ರಿಲ್      24, 1993
ಉತ್ತರ : ಸಿ ) ಏಪ್ರಿಲ್ 20, 1993 ✔️✔️
2) ಪಂಚಾಯತ ಶೀರ್ಷಿಕೆಯನ್ನು ಯಾವ ಭಾಗದಲ್ಲಿ
ಸೇರಿಸಲಾಗಿದೆ?
ಎ) ಒಂಬತ್ತನೇ ಭಾಗ
ಬಿ) ಹತ್ತನೇ ಭಾಗ
ಸಿ) ಹನ್ನೊಂದನೇ ಭಾಗ
ಡಿ) ಹನ್ನೆರಡನೇ ಭಾಗ
ಉತ್ತರ : ಎ ) ಒಂಬತ್ತನೇ ಭಾಗ ✔️✔️
3) ಮೆಹ್ತಾ ಹುಟ್ಟಿದ ದಿನಾಂಕ ಫೆಬ್ರುವರಿ 19 ರಂದು ಯಾವ
ರಾಜ್ಯದಲ್ಲಿ ಪಂಚಾಯತ್ ರಾಜ್ ದಿನ ಎಂದು ಆಚರಿಸಲಾಗುತ್ತದೆ?
ಎ) ರಾಜಸ್ತಾನ
ಬಿ) ಆಂಧ್ರಪ್ರದೇಶ
ಸಿ) ಕರ್ನಾಟಕ
ಡಿ) ಕೇರಳ
ಉತ್ತರ : ಡಿ) ಕೇರಳ ✔️✔️
4) ಒಂದು ವಿಶೇಷ ಸಭೆಗೂ ಮತ್ತೊಂದು ವಿಶೇಷ ಸಭೆಗೂ
ಕನಿಷ್ಠ ಎಷ್ಟು ತಿಂಗಳ ಅಂತರವಿರಬೇಕು?
ಎ) ಒಂದು ತಿಂಗಳು
ಬಿ) ಎರಡು ತಿಂಗಳು
ಸಿ) ಮೂರು ತಿಂಗಳು
ಡಿ) ಆರು ತಿಂಗಳು
ಉತ್ತರ : ಸಿ ) ಮೂರು ತಿಂಗಳು ✔️✔️
5) ಯಾವುದೇ ಪಂಚಾಯತ ಪ್ರದೇಶ ಕಾರ್ಯಸ್ಥಾನವನ್ನು
ಬದಲಾಯಿಸುವ ಅಧಿಕಾರ ಯಾರು ಹೊಂದಿರುತ್ತಾರೆ?
ಎ) ಜಿಲ್ಲಾಧಿಕಾರಿಗಳು
ಬಿ) ಉಪವಿಭಾಗಾಧಿಕಾರಿಗಳು
ಸಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಡಿ) ರಾಜ್ಯ ಚುನಾವಣಾ ಆಯುಕ್ತರು
ಉತ್ತರ : ಎ ) ಜಿಲ್ಲಾಧಿಕಾರಿಗಳು ✔️✔️
6) ಮತದಾರರ ಪಟ್ಟಿ ಸಿದ್ಧಪಡಿಸುವವರು ಯಾರು?
ಎ) ಜಿಲ್ಲಾಧಿಕಾರಿಗಳು
ಬಿ) ತಹಶೀಲ್ದಾರರು
ಸಿ) ಉಪವಿಭಾಗಾಧಿಕಾರಿಗಳು
ಡಿ) ರಾಜ್ಯ ಚುನಾವಣಾ ಆಯುಕ್ತರು
ಉತ್ತರ : ಬಿ ) ತಹಶೀಲ್ದಾರರು ✔️✔️
7) ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದದ್ದು?
ಎ) 1998
ಬಿ) 1999
ಸಿ) 2000
ಡಿ) 2001
ಉತ್ತರ : ಸಿ ) 2000✔️✔️
8) "ಜನಶ್ರೀ ಭೀಮಾ ಯೋಜನೆ "ಯ ಕಾರ್ಯಕ್ರಮ ದನ್ವಯ
ಸ್ವಾಭಾವಿಕ ಸಾವು ಸಂಭವಿಸಿದಾಗ ಪರಿಹಾರ ವಿಮಾ ಮೊತ್ತ
ಎಷ್ಟು ಕೊಡಲಾಗುತ್ತದೆ ?
ಎ) 30000
ಬಿ) 37500
ಸಿ) 45000
ಡಿ) 75000
ಉತ್ತರ : ಎ ) 30000 ✔️✔️
9) ಚುನಾವಣಾ ತಕರಾರು ಅರ್ಜಿಗಳ ವಿಚಾರಣೆಯ ಕಡತಗಳಿಗಾಗಿ
ಮುಂಗಡವಾಗಿ ಎಷ್ಟು ರೂಪಾಯಿ ಶುಲ್ಕ ಭರಿಸಬೇಕಾಗುತ್ತದೆ?
ಎ) 250
ಬಿ) 400
ಸಿ) 500
ಡಿ) 1000
ಉತ್ತರ : ಸಿ ) 500✔️✔️
10) ಚುನಾವಣಾ ತಕರಾರು ಅರ್ಜಿಯನ್ನು ಸಿವಿಲ್
ನ್ಯಾಯಾಧೀಶರಿಗೆ ಸಲ್ಲಿಸಿದ ದಿನಾಂಕದಿಂದ ಎಷ್ಟು
ತಿಂಗಳೊಳಗೆ ವಿಚಾರಣೆ ಮುಕ್ತಾಯಗೊಳಿಸತಕ್ಕದ್ದು?
ಎ) ಎರಡು ತಿಂಗಳು
ಬಿ) ಮೂರು ತಿಂಗಳು
ಸಿ) ಆರು ತಿಂಗಳು
ಡಿ) ಮೇಲಿನ ಯಾವುದೂ ಅಲ್ಲ
ಉತ್ತರ : ಸಿ) ಆರು ತಿಂಗಳು ✔️✔️
11) ಸಿವಿಲ್ ನ್ಯಾಯಾಧೀಶರು 18 ಮತ್ತು 19 ನೇ ಪ್ರಕರಣದ
ಅಡಿಯಲ್ಲಿ ಮಾಡಿದ ಆದೇಶಗಳನ್ನು ಪ್ರಕಟಿಸಿದ ತರುವಾಯ ಅದರ
ಒಂದು ಪ್ರತಿಯನ್ನು ಯಾರಿಗೆ ಕಳುಹಿಸಬೇಕು?
ಎ) ತಹಶೀಲ್ದಾರರು
ಬಿ) ಉಪವಿಭಾಗಾಧಿಕಾರಿಗಳು
ಸಿ) ಡೆಪ್ಯುಟಿ ಕಮಿಷನರ್
ಡಿ) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಉತ್ತರ : ಸಿ ) ಡೆಪ್ಯುಟಿ ಕಮಿಷನರ್ ✔️✔️
12) ಮತದಾನದ ರಹಸ್ಯವನ್ನು ಉಲ್ಲಂಘಿಸಿದ ವ್ಯಕ್ತಿಗೆ
ನೀಡಬಹುದಾದ ಶಿಕ್ಷೆ ಯಾವುದು?
ಎ) ಎರಡು ತಿಂಗಳು ಜೈಲು ಅಥವಾ ದಂಡ
ಬಿ) ಮೂರು ತಿಂಗಳು ಜೈಲು ಅಥವಾ ದಂಡ
ಸಿ) ಆರು ತಿಂಗಳು ಜೈಲು ಅಥವಾ ದಂಡ
ಡಿ) ಹನ್ನೆರಡು ತಿಂಗಳು ಜೈಲು ಅಥವಾ ದಂಡ
ಉತ್ತರ : ಬಿ ) ಮೂರು ತಿಂಗಳು ಜೈಲು ಅಥವಾ ದಂಡ ✔️✔️
13) ಚುನಾವಣಾ ಕೆಲಸಕ್ಕೆ ನಿಯೋಜಿತನಾಗಿದ್ದ ಅಧಿಕಾರಿ ಗೈರು
ಹಾಜರಾದರೆ ಯಾವ ರೀತಿ ದಂಡ ವಿಧಿಸಬಹುದು?
ಎ) 250 ರೂ
ಬಿ) 300 ರೂ
ಸಿ) 500 ರೂ
ಡಿ) 1000 ರೂ
ಉತ್ತರ : ಸಿ ) 500 ✔️✔️
14) 206 ನೇ ಪ್ರಕರಣ ಯಾವುದಕ್ಕೆ ಸಂಬಂಧಿಸಿದೆ?
ಎ) ತೆರಿಗೆಗಳು ಮತ್ತು ಬಾಕಿ ವಸೂಲಿ
ಬಿ) ಗ್ರಾಮ ಪಂಚಾಯಿತಗಳಿಗೆ ಅನುದಾನ
ಸಿ) ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸಿಬ್ಬಂದಿ
ಅನುದಾನ
ಡಿ) ಗ್ರಾಮ ಪಂಚಾಯಿತಿ ಸಾಲಗಳನ್ನು ಮರು ಪಾವತಿ ಮಾಡಲು
ಅವಕಾಶ
ಉತ್ತರ : ಬಿ) ಗ್ರಾಮ ಪಂಚಾಯಿತಗಳಿಗೆ ಅನುದಾನ ✔️✔️
15) ನೀರಿನ ದರ ಬೇಡಿಕೆ ಮತ್ತು ವಸೂಲಾತಿ ರಿಜಿಸ್ಟರ್ ಬಗ್ಗೆ
ತಿಳಿಸುವ ನಮೂನೆ ಯಾವುದು?
ಎ) ನಮೂನೆ 11
ಬಿ) ನಮೂನೆ 12
ಸಿ) ನಮೂನೆ 13
ಡಿ) ನಮೂನೆ 14
ಉತ್ತರ : ಡಿ) ನಮೂನೆ 14 ✔️✔️
16) ವೇತನ ಬಟವಾಡೆಯ ಮೂಲ ಪುಟ ದ ಬಗ್ಗೆ ತಿಳಿಸುವ ನಮೂನೆ
ಯಾವುದು?
ಎ) ನಮೂನೆ 21
ಬಿ) ನಮೂನೆ 22
ಸಿ) ನಮೂನೆ 23
ಡಿ) ನಮೂನೆ 24
ಉತ್ತರ : ಡಿ ) ನಮೂನೆ 24 ✔️✔️
17) ಗ್ರಾಮ ಪಂಚಾಯಿತಿಯ ಮಾಸಿಕ ಲೆಕ್ಕ ಪತ್ರಗಳನ್ನು
ಮುಂಬರುವ ತಿಂಗಳ -------------------------- ದಿನಾಂಕದ ಒಳಗೆ
ಗ್ರಾಮ ಪಂಚಾಯತಿಗೆ ಸಲ್ಲಿಸಬೇಕು?
ಎ) ಹತ್ತನೇ ದಿನಾಂಕ
ಬಿ) ಹದಿನೈದನೇ ದಿನಾಂಕ
ಸಿ) ಮೂವತ್ತನೇ ದಿನಾಂಕ
ಡಿ) ಮೂವತ್ತೋಂದನೇಯ ದಿನಾಂಕ
ಉತ್ತರ : ಎ ) ಹತ್ತನೇ ದಿನಾಂಕ ✔️✔️
18) ತಾಲೂಕಿನ ಜನಸಂಖ್ಯೆ 1 ಲಕ್ಷಕ್ಕಿಂತ ಒಳಗೆ ಇರುವಾಗ ಕನಿಷ್ಠ
ಎಷ್ಟು ಸದಸ್ಯರನ್ನು ಹೊಂದಿರತಕ್ಕದ್ದು?
ಎ) 10 ಸದಸ್ಯರು
ಬಿ) 11 ಸದಸ್ಯರು
ಸಿ) 12 ಸದಸ್ಯರು
ಡಿ) 13 ಸದಸ್ಯರು
ಉತ್ತರ : ಬಿ ) 11 ಸದಸ್ಯರು ✔️✔️
19) ಪಿ.ಕೆ.ತುಂಗನ ಸಮಿತಿ ನೇಮಕವಾದ್ದದು?
ಎ) 1985
ಬಿ) 1986
ಸಿ) 1988
ಡಿ) 1989
ಉತ್ತರ : ಸಿ ) 1988 ✔️✔️
20) 1978 ಜನತಾ ಸರ್ಕಾರ ಅಶೋಕ ಮೆಹ್ತಾ ಶಿಫಾರಸ್ಸಿನ ಅನ್ವಯ
ಮಂಡಲ ಪಂಚಾಯಿತಿಯನ್ನು ಸ್ಥಾಪನೆ ಮಾಡಿದ ಮೊದಲ
ರಾಜ್ಯ ಯಾವುದು?
ಎ) ಕೇರಳ
ಬಿ) ಆಂಧ್ರಪ್ರದೇಶ
ಸಿ) ಕರ್ನಾಟಕ
ಡಿ) ರಾಜಸ್ಥಾನ
ಉತ್ತರ : ಸಿ ) ಕರ್ನಾಟಕ ✔️✔️
Thanks to ಗುರುರಾಜ್ ಡಿ ಪಾಟೀಲ್
Share 0
Shashikumar Shash at 10:19:00 6 comments
PDO ನೂತನ ಪಠ್ಯಕ್ರಮ
🔺ಪಂಚಾಯತ್ ಅಭಿವೃದ್ಧಿ ಅಧಿಕಾರಿ🔺(PDO)
ನೂತನ ಪಠ್ಯಕ್ರಮ ಈ ಕೆಳಗಿನಂತೆ ಇದೆ.
🌻ಪತ್ರಿಕೆ_1🌻
ಸಾಮಾನ್ಯ ತಿಳುವಳಿಕೆ, ಹಾಲಿ ಘಟನಾವಳಿಯ ಮಾಹಿತಿ, ಸಮಾಜ
ವಿಜ್ಞಾನ, ಭಾರತೀಯ ಇತಿಹಾಸ, ಭಾರತೀಯ ಭೌಗೋಳಿಕ,
ಸಾಮಾನ್ಯ ವಿಜ್ಞಾನ, ದಿನನಿತ್ಯದ ಆಗುಹೋಗುಗಳ
ವಿಚಾರಧಾರೆ, ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು
ಸಾಮಾನ್ಯ ಮನೋಸಾಮಥ್ಯ೯
🌻ಪತ್ರಿಕೆ-2🌻
ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಬಗ್ಗೆ ನಿದಿ೯ಷ್ಟ ಪತ್ರಿಕೆ
ಕನಾ೯ಟಕ, ಭಾರತದ ಗ್ರಾಮಗಳ ಜನರ ಸ್ಥಿತಿಗತಿಗಳು, ಕರ್ನಾಟಕ
ಪಂಚಾಯತ್ ರಾಜ್ ಕಾಯ್ದೆ ಮತ್ತು ವ್ಯವಸ್ಥೆ,
ಗ್ರಾಮೀಣಾಭಿವೃದ್ಧಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ
ಕಾಯ೯ಕ್ರಮಗಳು,ಕುಡಿಯುವ ನೀರು ಮತ್ತು ನೈರ್ಮಲ್ಯ
ಮತ್ತು ಪಂಚಾಯತ್ ರಾಜ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ
ಮತ್ತು ಗ್ರಾಮ ಪಂಚಾಯಿತಿ
"ವಿಶೇಷ ಸೂಚನೆ...
ಯಾವುದೇ ಸಂದಶ೯ನವಿರುವುದಿಲ್ಲ"
Share 6
Shashikumar Shash at 09:56:00 3 comments
SUPER 40 Questions
!!! SUPER 40 Questions !!!
1) ಕರ್ನಾಟಕ ರಾಜ್ಯದ ವೃಕ್ಷ
ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.
2) ಭಾರತದಲ್ಲಿ ಅತ್ಯಂತ ಒಣಭೂಮಿ
ಇರುವ ಸ್ಥಳ:
* ಜೈಸಲ್ಮೇರ್
3) "Kurukshetra to Kargil
" ಎಂಬ ಇತ್ತೀಚಿನ ಕೃತಿ
ಬರೆದವರು :
* ಕುಲ್ ದೀಪ್ ಸಿಂಗ್.
4) ವಿಶ್ವ ವ್ಯಾಪಾರ ಸಂಸ್ಥೆಯ
(WTO) 156ನೇಯ
ಸದಸ್ಯತ್ವ ವನ್ನು ಪಡೆದ ದೇಶ;
* ರಷ್ಯಾ.
5) ಚೀನಾ ದೇಶವನ್ನು ಆಳಿದ
ಕೊನೆಯ ರಾಜವಂಶ:
* ಮಂಚು.
6) ಮೌಂಟ್ ಏವ್ಹರೇಸ್ಟ್ ಶಿಖರವನ್ನು
ಏರಿದ ಪ್ರಥಮ ವಿಕಲಚೇತನ ಮಹಿಳೆ:
* ಅರುನಿಮಾ ಸಿನ್ಹಾ.
7) ಸಿಸ್ಟೈಟಿಸ್ ಎಂಬ ಸೊಂಕು ಯಾವ
ಅಂಗಾಂಗಕ್ಕೆ ಸಂಬಂಧಿಸಿದೆ ?
* ಮೂತ್ರ ಕೋಶ.
8) UHF ಪಟ್ಟಿಯ ಆವರ್ತಾಂಕ
ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.
9) ಜೀವಂತ ದೇಹದಲ್ಲಿನ ಅತೀ
ಕಡಿಮೆ ಇರುವ ಧಾತು:
* ಮ್ಯಾಂಗನೀಸ್.
10)ಪರ್ಯಾಯ ನೋಬೆಲ್ ಎಂದು
ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.
11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.
12) 'ಸಂಯುಕ್ತ ಪಾಣಿಗ್ರಹ' ಯಾವ
ನೃತ್ಯ ಪದ್ಧತಿಗೆ ಪ್ರಸಿದ್ಧವಾಗಿದೆ?
★ ಮಣಿಪುರಿ.
13) ಅತೀ ಉದ್ದವಾದ ನರತಂತು
ಎಷ್ಟು ಸೆಂ.ಮೀ. ಉದ್ದವಿರುತ್ತದೆ.?
★ 100 cm.
14) ನೀರು ಗಡುಸಾಗಲು ಮುಖ್ಯ
ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.
15) " ದಿವಾನ್ -ಈ -ಬಂದಗನ್ "
ಅಥವಾ ಗುಲಾಮರ ಆಡಳಿತ
ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.
16) 'ದಾಮ್' ಎಂಬ ಹೊಸ
ನಾಣ್ಯವನ್ನು ಚಲಾವಣೆಗೆ
ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.
17) ದೆಹಲಿಯ ಸುಲ್ತಾನ ರಜಿಯಾ
ಬೇಗಮ್ ಹತ್ಯೆಗೈಯಲ್ಪಟ್ಟ ಸ್ಥಳ?
★ ಕೈತಾಲ್.
18) 'ನಡೆದಾಡುವ ಕೋಶ' ಎಂದು
ಖ್ಯಾತರಾದವರು?
★ ಶಿವರಾಮ ಕಾರಂತ.
19) ಕರ್ನಾಟಕದ ಉಚ್ಚ ನ್ಯಾಯಾಲಯ
ದ ಸಂಚಾರಿ ಪೀಠ ಎಲ್ಲಿದೆ?
★ ಧಾರವಾಡ.
20) ಮಾನವನ ಕಣ್ಣಿನಲ್ಲಿರುವ
ಮಸೂರ ಯಾವ ಬಗೆಯದು?
★ ದ್ವಿ-ಪೀನ.
21) ಮಾನವನ ದೇಹಕ್ಕೆ ರೋಗದ
ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.
22) ಮಾನವನ ದೇಹದ ಉಸಿರಾಟ
ನಿಯಂತ್ರಣ ಕೇಂದ್ರ ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ
ಸಿರ ).
23) T-20 ಪಂದ್ಯಗಳಲ್ಲಿ 5548
ರನ್ ಗಳಿಸಿ ಅತೀ ಹೆಚ್ಚು ರನ್ ಗಳಿಸಿದ
ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.
24) 2013 ರ ಮೇ
ತಿಂಗಳಾಂತ್ಯದಲ್ಲಿ ಹೊಸ
ಸಂವಿಧಾನ ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.
25) ಅಗಸ್ಟ್ 9,1942 ರಂದು
Quit India Movement ಗೆ
ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.
26) 'New India and
Common Wheel' ಎಂಬ
ಪತ್ರಿಕೆಗಳನ್ನು ಹೊರಡಿಸಿದವರು?
★ ಅನಿಬೆಸಂಟ್.
27) ' ಇಂಡಿಯಾ ಡಿವೈಡೆಡ್ '
ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.
28) 'ಗದ್ದರ ಪಕ್ಷ' ಎಂಬ
ಕ್ರಾಂತಿಕಾರಿ ರಾಷ್ಟೀಯ
ಸಂಘಟನೆಯ ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.
29) ದಕ್ಷಿಣ ಆಫ್ರಿಕಾದಲ್ಲಿ
ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.
30) ಅರಬಿಂದೊ ಆಶ್ರಮ ಇರುವ
ಸ್ಥಳ?
★ ಪಾಂಡಿಚೇರಿ.
31) ಭಾರತ ಸಂವಿಧಾನದ ಯಾವ
ವಿಧಿಯನ್ನು 'ಸಂವಿಧಾನದ ಆತ್ಮ
ಮತ್ತೂ ಹೃದಯ' ಎಂದು
ಕರೆಯುತ್ತಾರೆ? .
★ 32ನೇ ವಿಧಿ.
32) ಯಾವ ತಿದ್ದುಪಡಿಯನ್ನು
'ಪುಟ್ಟ ಸಂವಿಧಾನ ' ಎಂದು
ಕರೆಯಲಾಗುತ್ತದೆ? .
★ 42ನೇ ವಿಧಿ.
33) ಮತದಾನದ ವಯಸ್ಸನ್ನು
21ರಿಂದ 18ವರ್ಷ ಕ್ಕೆ ಇಳಿಸಿದ
ತಿದ್ದುಪಡಿ? .
★ 61ನೇ ತಿದ್ದುಪಡಿ.
34) ಶೈಕ್ಷಣಿಕ ಸೇವೆಗೆಂದು
ಉಡಾವಣೆಯಾಗಿರುವ ಭಾರತದ ಪ್ರಥಮ
ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .
35) ರಾಜ್ಯಪಾಲರ ಆಜ್ಞೆಯ
ಪರಮಾವಧಿ?
★ 6 ತಿಂಗಳು.
36) ರಕ್ಷಣಾ ನಿರ್ವಹಣಾ ಶಿಕ್ಷಣ
ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.
37) ಸಮುದ್ರ ನೀರಿನಿಂದ ಸ್ವಚ್ಛ
ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.
38) ಬ್ರಿಟನ್ ಆಡಳಿತದ ಭಾರತದಲ್ಲಿ
ಆಂಗ್ಲ ಭಾಷೆಯ ಅಳವಡಿಕೆಗೆ
ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.
39) ಬ್ಯಾಕ್ಟೀರಿಯಗಳಲ್ಲಿರುವ
ಕ್ರೋಮೋಸೋಮ್ ಗಳ ಸಂಖ್ಯೆ?
★ 1.
40) ಬ್ಯಾಟರಿಗಳಲ್ಲಿ ಬಳಸಲಾಗುವ
ಆಸಿಡ್?
★ ಸಲ್ಪೂರಿಕ್ ಆಸಿಡ್.
ಕೃಪೆ:- ASHOK.SIR
Share 3
Shashikumar Shash at 09:55:00 0 comments
ಇತಿಹಾಸ ಪಾಠ :- ದೆಹಲಿ ಸುಲ್ತಾನರು
*ದೆಹಲಿ ಸುಲ್ತಾನರ ಬಗ್ಗೆ ಕೆಲವು ಪ್ರಶ್ನೆಗಳು*
1) ಹೆಚ್ಚು ಕಾಲ ದೆಹಲಿಯನ್ನು ಆಳಿದ ವಂಶ ಯಾವುದು?
*ತುಘಲಕ್ ಸಂತತಿ*✅
2) ಕಡಿಮೆ ಅವಧಿಗೆ ದೆಹಲಿಯಲ್ಲಿ ಆಳ್ವಿಕೆ ನಡೆಸಿದ ವಂಶ?
*ಖಿಲ್ಜಿ ಸಂತತಿ*✅
3) ಕುತ್ಬುದ್ದೀನ್ ಐಬಕ್ ಯಾವ ಆಟ ಆಡುವಾಗ ಮರಣ
ಹೊಂದಿದನು?
*ಪೋಲೋ*✅
4) ಕುತುಬ್ ಮಿನಾರ್ ವಿಶ್ವ ಪರಂಪರೆ ಪಟ್ಟಿಗೆ ಸೇರಿದ ವರ್ಷ?
*1993*✅
5) ಮಂಗೋಲರ ಚಂಗಿಸ್ಖಾನ್ನ ದಾಳಿ ಎದುರಿಸಿದ ಮೊದಲ
ಮುಸ್ಲಿಂ ದೊರೆ?
*ಇಲ್ತಮಷ್*✅
6) ಆಸ್ಥಾನದಲ್ಲಿ ನಗುವುದನ್ನು ಮತ್ತು ಅಳುವುದನ್ನು
ಬಹಿಷ್ಕರಿಸಿದ ಮೊದಲ ರಾಜ ಯಾರು?
*ಘಿಯಾಸುದ್ದೀನ್ ಬಲ್ಬನ್*✅
7) ಕೈಕುಬ್ಜ ಯಾವ ಸಂತತಿಯ ಕೊನೆಯ ದೊರೆ?
*ಗುಲಾಮಿ ಸಂತತಿ*✅
8) ರಜಿಯಾ ಸುಲ್ತಾನಳ ಸಹೋದರ ಯಾರು?
*ಬರಮ್ ಷಾ*✅
9) ಹಿಂದೂಗಳಿಗೆ ಏಳು ಸ್ವರ್ಗಗಳಿಗಿಂತ ಮಿಗಿಲಾದ ಸ್ವರ್ಗ ಎಂದು
ಯಾವ ಕೋಟೆಯನ್ನು ಅಮೀರ್ ಖುಸ್ರೋ ಕರೆದಿರುವನು?
*ಚಿತ್ತೂರ ಕೋಟೆ*✅
10) ಸಾಮೂಹಿಕವಾಗಿ ಅಗ್ನಿಗೆ ಆಹುತಿಯಾಗಿ ಸಾಯುವ ಪದ್ಧತಿ
ಯಾವುದು?
*ಜೋಹರ್ ಪದ್ಧತಿ*✅
11) ಹಜಾರ್ - ದಿನಾರ್ ಎಂಬುದು ಯಾರ ಬಿರುದು?
*ಮಲ್ಲಿಕಾಫರ್*✅
12) ಅಮೀರ್ ಖುಸ್ರೋ ಪರಿಚಯಿಸಿದ ಎರಡು ವಾದ್ಯಗಳು
ಯಾವುವು?
*ತಬಲಾ ಮತ್ತು ಸಿತಾರ್*✅
13) ಮಹಮದ್ -ಬೀನ್-ತುಘಲಕ್ನು ರೈತರಿಗೆ ಬಾವಿ ತೆಗೆಯಲು
ನೀಡಿದ ಸಾಲ ಯಾವುದು?
*ತಕ್ಕಾವಿ ಸಾಲ*✅
14) ಸಿಡಿಲು ಬಡಿದು ನಾಶವಾಗಿದ್ದ ಕುತುಬ್ಮಿನಾರ್ನ್ನು
ಅಭಿವೃದ್ಧಿಪಡಿಸಿದ ರಾಜ ಯಾರು?
*ಫಿರೋಜ್-ಶಾ-ತುಘಲಕ್*✅
15) ಲೂದಿ/ಲೋದಿ ಸಂತತಿಯ ಸ್ಥಾಪಕ ಯಾರು?
*ಬಹಲೂಲ*✅
16) ಅಲ್ಲಾವುದ್ದೀನ್ ಖಿಲ್ಜಿಯು ಮಲ್ಲಿಕಾಫರ್ನನ್ನು ............
ಎಂಬಲ್ಲಿ ಖರೀದಿಸಿದನು.
*ಗುಜರಾತಿನ ಕ್ಯಾಂಬೆ*✅
17) ಅಲ್ಲಾವುದ್ದೀನ್ ಖಿಲ್ಜಿಯ ಮೊದಲ ಹೆಸರು ಏನು?
*ಗುರುಶಪ*✅
18) ಆಗ್ರಾ ನಗರದ ನಿರ್ಮಾತೃ ಯಾರು?
*ಸಿಕಂದರ್ ಲೂದಿ*✅
19) ತುಘಲಕ್ನಾಮ ಎಂಬ ಗ್ರಂಥವನ್ನು ರಚಿಸಿದವರು ಯಾರು?
*ಅಮೀರ್ ಖುಸ್ರೋ*✅
20) ಖಿಲ್ಜಿ ಸಂತತಿಯ ಕೊನೆಯ ದೊರೆ ಯಾರು?
*ಕೈ ಖುಸ್ರೋ*✅
ಕೃಪೆ: 🆕ಮಾದೇಶ🆒 Santosh Chakote
Share 1
Friday, 22 July 2016
Shashikumar Shash at 22:11:00 1 comment
PDO ಅಧ್ಯಯನ ಸಾಮಗ್ರಿ 7 :ಪಂಚಾಯತ್
ರಾಜ್ 73 ನೇ ತಿದ್ದು ಪಡಿ
ಪಂಚಾಯತ್ ರಾಜ್ 73 ನೇ ತಿದ್ದು ಪಡಿ
******************************************
1. ಪಂಚಾಯಿತಿ ರಾಜ್ಯಗಳು ಅಥವಾ ಅವುಗಳ ಪರಿಕಲ್ಪನೆಗಳು
ಭಾರತಕ್ಕೆ ಹೊಸದೇನಲ್ಲ . ಸಂವಿಧಾನದ 40 ನೇ
ಪರಿಚ್ಛೇದದಲ್ಲಿ ರಾಜ್ಯ ನೀತಿಯ ನಿರ್ದೇಶಕ ತತ್ವಗಳು
ಭಾಗದಲ್ಲಿ ಅದರ ಬಗ್ಗೆ ಮೊದಲೇ ವಿವರಣೆಯನ್ನು ನೀಡಲಾಗಿದೆ.
2. 40 ನೇ ಪರಿಚ್ಛೇದದಲ್ಲಿ ಹೀಗೆ ಹೇಳಲಾಗಿದೆ ರಾಜ್ಯವು
ಗ್ರಾಮಗಳಲ್ಲಿ ಪಂಚಾಯಿತಿ ಗಳನ್ನು ರಚಿಸುವತ್ತ ಹಾಗೂ
ಅವುಗಳಿಗೆ ವಿಶೇಷ ಅಧಿಕಾರಗಳನ್ನು ನೀಡುವತ್ತ ಗಮನ ಹರಿಸಿ
ಅವು ಸ್ವಾಯತ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುವಂತೆ
ನಿಯಮಗಳನ್ನು ರಚಿಸಬೇಕು .
3. 73 ನೇ ತಿದ್ದುಪಡಿ ಮೂಲಕ ಸಂವಿಧಾನಕ್ಕೆ ಭಾಗ 9 ನ್ನು
ಸೇರಿಸಲಾಯಿತು. 243 ನೇ ಪರಿಚ್ಛೇದದ ಮೂಲಕ
ಪಂಚಾಯಿತಿಗೆ ಸಂಬಂಧಿಸಿದ ಶಬ್ಧಗಳಾದ ಜಿಲ್ಲೆ, ಗ್ರಾಮಸಭೆ ,
ಮಧ್ಯಂತರ ಹಂತ , ಪಂಚಾಯಿತಿ , ಪಂಚಾಯಿತಿ ಪ್ರದೇಶ ,
ಜನಸಂಖ್ಯೆ ಮುಂತಾದ ಶಬ್ದಗಳ ವಿವರಣೆಯನ್ನು
ನೀಡಲಾಯಿತು.
4. 243 ಎ ಇದು ಗ್ರಾಮ ಸಭೆಗಳ ಅಧಿಕಾರಗಳ ಬಗ್ಗೆ ವಿವರಿಸುತ್ತದೆ.
5. 243 ಬಿ ಇದು ಪ್ರತಿ ರಾಜ್ಯವೂ ಪಂಚಾಯಿತಿಗಳನ್ನು
ಹೊಂದಿರಲೇಬೇಕು ಎಂಬುದರ ಬಗ್ಗೆ ಹೇಳುತ್ತದೆ.
6. 243 ಸಿ ಇದು ಪಂಚಾಯಿತಿ ಹೊಂದಬಹುದಾದ ಸದಸ್ಯರ
ಸಂಖ್ಯೆಯ ಬಗ್ಗೆ ಹೇಳುತ್ತದೆ.
7. 243 ಡಿ ಇದು ಪ್ರತಿಯೊಂದು ಪಂಚಾಯಿತಿಗಳಲ್ಲೂ ಅದು
ಹೊಂದಿರಬೇಕಾದ ಪ.ಜಾತಿ , ಪ.ಪಂಗಡಗಳ ಮೀಸಲಾತಿಯ ಬಗ್ಗೆ
ಹೇಳುತ್ತದೆ. ಅಲ್ಲದೇ 1/3 ರಷ್ಟು ಸ್ಥಾನಗಳು ಮಹಿಳೆಯರಿಗೆ
ಮೀಸಲಾತಿ ದೊರಯಬೇಕು ಎಂದು ಹೇಳುತ್ತದೆ.
8. 243 ಇ ಪಂಚಾಯಿತಿಗಳ ಕಾಲಾವಧಿಯನ್ನು ವಿವರಿಸುತ್ತದೆ.
ಅದನ್ನು 5 ವರ್ಷಗಳಿಗೆ ನಿಗದಿ ಪಡಿಸುತ್ತದೆ.
9. 243 ಎಫ್ ಇದು ಸದಸ್ಯರುಗಳು ಅನರ್ಹಗೊಳ್ಳುವ ಬಗ್ಗೆ
ವಿವರಣೆ ನೀಡುತ್ತದೆ.
10. 243 ಜಿ ಪಂಚಾಯಿತಿಗಳ ಅಧಿಕಾರ ಹಾಗೂ ಜವಾಬ್ದಾರಿಗಳು
ಈ ಅಧಿಕಾರಗಳು ಪ್ರತಿಯೊಂದು ಪಂಚಾಯಿತಿಯಲ್ಲೂ ರಾಜ್ಯ
ಸರ್ಕರಗಳ ಮೇಲ್ವಿಚಾರಣೆಯಲ್ಲಿ ತಮ್ಮ ಕ್ಷೇತ್ರಗಳ
ಅಭಿವೃದ್ಧಿಗಾಗಿ ಕೆಲಸಗಳನ್ನ ಕೈಗೊಂಡು ಅವುಗಳನ್ನು
ಪೂರ್ಣಗೊಳಿಸಲು ಬೇಕಾದ ಧಿಕಾರಗಳನ್ನು
ಒಳಗೊಂಡಿರುತ್ತದೆ.
11. 243 ಹೆಚ್ ತೆರಿಗೆಗಳನ್ನು ವಿಧಿಸುವ ಅಧಿಕಾರವನ್ನು
ವಿವರಿಸುತ್ತದೆ.
12. 243 ಐ ಆರ್ಥಿಕ ಸ್ಥಿತಿಗಳನ್ನು ಅವಲೋಕಿಸಲು ಹಣಕಾಸು
ಆಯೋಗಗಳ ರಚನೆಯನ್ನು ವಿವರಿಸುತ್ತದೆ.
13. 243 ಜೆ ಲೆಕ್ಕ ಪ್ತರ ವೀಕ್ಷಣೆಯನ್ನು ವಿವರಿಸುತ್ತದೆ.
14. 243 ಕೆ ಇದು ಪಂಚಾಯಿತಿಯ ಚುನಾವಣೆಯ ಬಗ್ಗೆ
ಹೇಳುತ್ತದೆ. ಮತದಾರ ಪಟ್ಟಿ ತಯಾರಿಕೆಯಿಂದ ಹಿಡಿದು
ಶಿಸ್ತುಬದ್ಧ ಪಂಚಾಯಿತಿ ರಚನೆಯವರೆಗಿನ ಪ್ರಕ್ರಿಯೆ ಒಳಗೊಂಡಿದೆ.
15. 243 ಎಲ್ ರಾಜ್ಯ ಕ್ಷೇತ್ರಗಳಿಗೆ ಈ ಕಾಯ್ದೆಯು
ಅನ್ವಯವಾಗುವ ಬಗ್ಗೆ ವಿವರಣೆ ನೀಡುತ್ತದೆ.
16. 243 ಎಂ ಇದು ಸಂವಿಧಾನದ 244 ನೇ ಪರಿಚ್ಛೇದಗಳಲ್ಲಿ
ವಿವರಿಸಿರುವ ಪ್ರಾಂತ್ಯಗಳಿಗೆ 73 ನೇ ತಿದ್ದುಪಡಿ ಕಾಯ್ದೆ
ಅನ್ವಯಿಸುವುದಿಲ್ಲ ಎಂಬುದನ್ನು ಹೇಳುತ್ತದೆ.
17. 243 ಎನ್ 73 ನೇ ತಿದ್ದುಪಡಿಯ ಜೊತೆಗೆ ಅದಕ್ಕೆ ಪೂರ್ವದಲ್ಲಿ
ಪಂಚಾಯಿತಿಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ
ಕಾಯ್ದೆಗಳು ಮುಂದುವರಿಯುವ ಬಗ್ಗೆ ಹೇಳುತ್ತದೆ.
18. 243 ಒ ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ
ನ್ಯಾಯಾಲಯಗಳ ಮಧ್ಯಪ್ರವೇಶವನ್ನು ನಿಷೇಧಿಸುತ್ತದೆ.
19. 74 ನೇ ತಿದ್ದು ಪಡಿಯಲ್ಲಿ 9 ಎ ಎಂಬ ಭಾಗವು
ಸೇರಿಸಲಾಯಿತು. 243 ನೇ ಪರಿಚ್ಛೇದಕ್ಕೆ
ಅನುಚ್ಛೇದಗಳನ್ನು ಸೇರಿಸಲಾಯಿತು. 243 ಪಿ ಯಿಂದ 243
ಝಡ್ ಜಿ ಯ ವರೆಗೆ
20. 74 ನೇ ತಿದ್ದು ಪಡಿಯಲ್ಲಿ 243 ಪಿ ಇದು ಕಮಿಟಿ , ಜಿಲ್ಲೆ
ಮಹಾನಗರ ಪ್ರದೇಶ ಮುನಿಸಿಪಲ್ ಪ್ರದೇಶ , ನಗರಸಭೆ ,
ಪಂಚಾಯತ್ , ಜನಸಂಖ್ಯೆ ಮುಂತಾದ ಶಬ್ದಗಳಿಗೆ ವಿವರಣೆ
ನೀಡುತ್ತದೆ.
21. 74 ನೇ ತಿದ್ದು ಪಡಿಯಲ್ಲಿ 243 ಕ್ಯೂ ಇದು ಮುನಿಸಿಪಲಿಟಿಗಳ
ರಚನೆಯ ಬಗ್ಗೆ ಹೇಳುತ್ತದೆ.
22. 74 ನೇ ತಿದ್ದು ಪಡಿಯಲ್ಲಿ 243 ಆರ್ ನಗರ ಸಭೆಗಳ ರಚನೆ ಬಗ್ಗೆ
ವಿವರಿಸುತ್ತದೆ.
23. 74 ನೇ ತಿದ್ದು ಪಡಿಯಲ್ಲಿ 243 ಎಸ್ ವಾರ್ಡ್ ಕಮಿಟಿಗಳ ರಚನೆ
24. 74 ನೇ ತಿದ್ದು ಪಡಿಯಲ್ಲಿ 243 ಟಿ ಸ್ಥಾನಗಳ ಮೀಸಲಾತಿ
ಅಂದರೇ ದುರ್ಬಲ ವರ್ಗ ಹಾಗೂ ಮಹಿಳೆಯರಿಗೆ ಸ್ಥಾನಗಳಲ್ಲಿ
ಮೀಸಲಾತಿ ಬಗ್ಗೆ ಹೇಳುತ್ತದೆ.
25. 74 ನೇ ತಿದ್ದು ಪಡಿಯಲ್ಲಿ 243 ಯು ನಗರ ಸಭೆಗಳ ಅವಧಿಯ
ಬಗ್ಗೆ ಹೇಳುತ್ತದೆ.5 ವರ್ಷಗಳ ಅವಧಿಯನ್ನು ನಿಗದಿಪಡಿಸಿದೆ.
26. 74 ನೇ ತಿದ್ದು ಪಡಿಯಲ್ಲಿ 243 ವಿ ಸದಸ್ಯರುಗಳು
ಅನರ್ಹಗೊಳ್ಳುವ ಬಗ್ಗೆ ವಿವರಿಸುತ್ತದೆ. ಇದು ಪಂಚಾಯಿತಿಗಳಿಗೆ
ಇದ್ದಂತೆಯೇ ಇದೆ.
27. 74 ನೇ ತಿದ್ದು ಪಡಿಯಲ್ಲಿ 243 ಡಬ್ಲ್ಯೂ ಅಧಿಕಾರ ಹಾಗೂ
ಜವಾಬ್ದಾರಿಗಳಉ ಇದೂ ಕೂಡ ನಗರಸಭೆ ಹಾಗೂ ಪಾಲಿಕೆಗಳು
28. 74 ನೇ ತಿದ್ದು ಪಡಿಯಲ್ಲಿ 243 ಎಕ್ಸ್ ತೆರಿಗೆ ವಿಧಿಸುವ ಅಧಿಕಾರದ
ಬಗ್ಗೆ ಹೇಳುತ್ತದೆ. ಅಲ್ಲದೆ ರಾಜ್ಯ ಸರ್ಕಾರದೊಂದಿಗೆ ತೆರಿಗೆ
ಹಂಚಿಕೆಯ ಬಗ್ಗೆಯೂ ಹೇಳುತ್ತದೆ.
29. 74 ನೇ ತಿದ್ದು ಪಡಿಯಲ್ಲಿ 243 ವೈ ಇದು ಹಣಕಾಸು
ಆಯೋಗದ ಬಗ್ಗೆ ಹೇಳುತ್ತದೆ.
30. 74 ನೇ ತಿದ್ದು ಪಡಿಯಲ್ಲಿ 243 ಝಡ್ ಲೆಕ್ಕ ಪತ್ರವನ್ನು
ನಗರಸಭೆಗಳು ಇಡುವ ಬಗ್ಗೆ ಹೇಳುತ್ತದೆ.
31. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎ ನಗರಸಭೆಯ
ಚುನಾವಣೆಗಳ ಬಗ್ಗೆ ಹೇಳುತ್ತದೆ.
32. 74 ನೇ ತಿದ್ದು ಪಡಿಯಲ್ಲಿ 243 ಝಡ್ ಬಿ ರಾಜ್ಯ ಕ್ಷೇತ್ರಗಳಿಗೆ
ಇದು ಅನ್ವಯವಾಗುವ ಬಗ್ಗೆ ವಿವರಿಸುತ್ತದೆ.
33. 74 ನೇ ತಿದ್ದು ಪಡಿಯಲ್ಲಿ 243 ಝಡ್ ಸಿ ಪಂಚಾಯಿತಿಗಳಲ್ಲಿ
ವಿವರಿಸಿದಂತೆ ಕೆಲವು ಪ್ರದೇಶಗಳಿಗೆ ಇದು ಅನ್ವಯವಾಗುವುದಿಲ್ಲ
.
34. 74 ನೇ ತಿದ್ದು ಪಡಿಯಲ್ಲಿ 243 ಝಡ್ ಡಿ ಜಿಲ್ಲಾ ಯೋಜನಾ
ಕಮಿಟಿ ಬಗ್ಗೆ ತಿಳಿಸುತ್ತದೆ.
35. 74 ನೇ ತಿದ್ದು ಪಡಿಯಲ್ಲಿ 243 ಝಡ್ ಇ ಮಹಾನಗರ ಪಾಲಿಕೆ
ಯೋಜನೆ ಕಮಿಟಿ ಬಗ್ಗೆ ತಿಳಿಸುತ್ತದೆ.
36. 74 ನೇ ತಿದ್ದು ಪಡಿಯಲ್ಲಿ 243 ಝಡ್ ಎಫ್ ನಗರಸಭೆಯ ಹಳೆಯ
ಕಾಯ್ದೆಗಳ ಮುಂದುವರಿಯುವಿಕೆ ಬಗ್ಗೆ ತಿಳಿಸುತ್ತದೆ.
37. 74 ನೇ ತಿದ್ದು ಪಡಿಯಲ್ಲಿ 243 ಝಡ್ ಜಿ
ನ್ಯಾಯಾಲಯಗಳನ್ನು ಚುನಾವಣೆ ವಿಷಯದಲ್ಲಿ
ದೂರವಿಡುತ್ತದೆ.
38. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷ ಮತ್ತು
ಉಪಾಧ್ಯಕ್ಷ ಇರುತ್ತಾನೆ.
39. ಗ್ರಾಮ ಪಂಚಾಯಿತಿ ಅಧ್ಯಕ್ಷನಿಗೆ ಅಧಿಕಾರಿಗಳ ಮತ್ತು ನೌಕರರ
ಕಾರ್ಯಗಳ ಮೇಲೆ ನಿಯಂತ್ರಣಾಧಿಕಾರಿವಿದೆ.
40. ಪ್ರತಿಯೊಂದು ಗ್ರಾಮ ಪಂಚಾಯಿತಿಗೆ ಒಬ್ಬ ಪೂರ್ಣಕಾಲಿಕ
ಕಾರ್ಯದರ್ಶಿ ಇದ್ದು ಅವರು ಸರ್ಕಾರಿ ಅಧಿಕಾರಿಯಾಗಿರುತ್ತಾರೆ.
41. ಕಾರ್ಯದರ್ಶಿಗಳು ಜಿಲ್ಲಾ ಪಂಚಾಯಿತಿ ನಿಧಿಯಿಂದ ತಮ್ಮ
ಸಂಬಳ ಭತ್ಯೆಗಳನ್ನು ಪಡೆಯುತ್ತಾರೆ.
42. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವಿರಕ್ಕಿಂತ
ಹೆಚ್ಚು ಇಲ್ಲದ ಜನಸಂಖ್ಯೆಯುಳ್ಳ ಗ್ರಾಮ ಅಥವಾ ಗ್ರಾಮಗಳ
ಗುಂಪುಗಳನ್ನು ಒಂದು ಪಂಚಾಯಿತಿ ಎಂದು
ಪರಿಗಣಿಸಬಹುದು.
43. ಕೆಲವೊಂದು ಜಿಲ್ಲೆಗಳಲ್ಲಿ 2500 ಕ್ಕಿಂತ ಕಡಿಮೆಯಿಲ್ಲದ
ಪ್ರದೇಶವನ್ನು ಕೆಲವು ಜಿಲ್ಲೆಗಳಲ್ಲಿ 5 ಕಿ.ಮೀ.
ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಗ್ರಾಮ ಪಂಚಾಯಿತಿ
ಕೇಂದ್ರಗಳಾಗಿ ಸರ್ಕಾರವು ನಿರ್ಧರಿಸಬಹುದು .
44. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ
1985 ರಲ್ಲಿ ಪಂಚಾಯಿತಿ ರಾಜ್ ಕಾಯಿದೆಯಲ್ಲಿ ಮಹಿಳೆಯರಿಗೆ
ಶೇ.25 ರಷ್ಟು ಸ್ಥಾನಗಳ ಮೀಸಲಾತಿಯನ್ನು ಪಂಚಾಯತ್
ರಾಜ್ ಸಂಸ್ಥೆಗಳಲ್ಲಿ ನೀಡಲಾಯಿತು.
45. ಸಂವಿಧಾನದ 73 ಮತ್ತು 74 ನೇ ತಿದ್ದು ಪಡಿಗಳ ಮೂಲಕ
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿನ ಒಟ್ಟು ಸ್ಥಾನಗಳಲ್ಲಿ
( ಸದಸ್ಯರ ಸ್ಥಾನಗಳಿಂದ ಅಧ್ಯಕ್ಷ , ಉಪಾಧ್ಯಕ್ಷ ಸ್ಥಾನಗಳಿಗೆ
ಸೇರಿ ) ಕನಿಷ್ಠ 1/3 ರಷ್ಟು ಸ್ಥಾನಗಳನ್ನು ಮಹಿಳೆಯರಿಗೆ
ಮೀಸಲಿಡಲಾಗಿದೆ.
46. 1913 ರಲ್ಲಿ ಮೈಸೂರು ಸಂಸ್ಥಾನವು ಗ್ರಾಮಗಳಲ್ಲಿ
ಗ್ರಾಮಾಭಿವೃದ್ಧಿ ಸಂಸ್ಥೆಗಳನ್ನು ರಚಿಸುವ ವಿಷಯ
ಕೈಗೆತ್ತಿಕೊಂಡಿತು.
47. 1957 ರಲ್ಲಿ ಬಲವಂತರಾಯ್ ಮೆಹತ್ ಸಮಿತಿ ವರದಿ
ಪ್ರಜಾಸತ್ತಾತ್ಮಕ ವಿಕೇಂದ್ರಿಕರಣ ಸಿದ್ಧಾಂತವನ್ನು
ಪ್ರತಿಪಾದಿಸಿ ಪ್ರಖ್ಯಾತವಾಯಿತು.
48. 73 ನೇ ತಿದ್ದು ಪಡಿಯಲ್ಲಿ ಮೂರು ಹಂತದ ಪಂಚಾಯಿತಿಗಳ
ರಚನೆ ಬಗ್ಗೆ ಗ್ರಾಮ , ಮಧ್ಯಂತರ ಮತ್ತು ಜಿಲ್ಲಾ ಮಟ್ಟದಲ್ಲಿ .
49. 73 ನೇ ತಿದ್ದು ಪಡಿಯಲ್ಲಿ ಪಂಚಾಯಿತಿಯಲ್ಲಿ ಒಟ್ಟು
ಸ್ಥಾನಗಳ 1/3 ಭಾಗಕ್ಕೆ ಕಡಿಮೆ ಇಲ್ಲದಂತೆ ಮಹಿಳೆಯರಿಗೆ
ಮೀಸಲಿಡಬೇಕು.
50. 73 ನೇ ತಿದ್ದು ಪಡಿಯಲ್ಲಿ ಪ್ರತಿ ರಾಜ್ಯ ಸರ್ಕಾರವೂ
ಪಂಚಾಯಿತಿಗಳ ಹಣಕಾಸು ಪರಿಸ್ಥಿತಿ ವಿಮರ್ಶೆ ಮಾಡಿ ಅವುಗಳಿಗೆ
ಸರ್ಕಾರ ನೀಡಬೇಕಾದ ಹಣದ ಬಗ್ಗೆ ನಿರ್ಧರಿಸಲು ಹಣಕಾಸು
ಆಯೋಗ ಒಂದನ್ನು ಪ್ರತಿ 5 ವರ್ಷಕ್ಕೊಮ್ಮೆ ರಚಿಸಬೇಕು.
51. ಮೂರು ಹಂತದ ಪಂಚಾಯಿತಿಗಳಿಗೆ ಸಕಾಲದಲ್ಲಿ ಚುನಾವಣೆ
ನಡೆಸಲು ಅನುಕೂಲವಾಗುವಂತೆ ರಾಜ್ಯ ಚುನಾವಣಾ
ಆಯೋಗ ರಚಿಸಲು ಕಲಂ 308 ರಲ್ಲಿ ಅವಕಾಶ ಕಲ್ಪಿಸಲಾಗಿದೆ.
52. 73 ನೇ ತಿದ್ದುಪಡಿಗೆ ಅನುಗುಣವಾಗಿ ಕರ್ನಾಟಕ ಪಂಚಾಯತ್
ರಾಜ್ 1993 ಅಧಿನಿಯವನ್ನು ಜಾರಿಗೆ ತರಲಾಯಿತು.
53. ಸರ್ಕಾರವು 5 ಸಾವಿರಕ್ಕಿಂತ ಕಡಿಮೆ ಇಲ್ಲದ 7 ಸಾವರಕ್ಕಿಂತ
ಹೆಚ್ಚು ಇಲ್ಲದ ಜನಸಂಖ್ಯೆಯನ್ನುಳ್ಳ ಗ್ರಾಮ ಅಥವಾ
ಗ್ರಾಮಗಳ ಗುಂಪನ್ನು ಒಂದು ಪಂಚಾಯಿತಿ ಎಂದು
ಪರಿಗಣಿಸಿದೆ.
54. ಗ್ರಾಮ ಪಂಚಾಯಿತಿಗೆ ಚುನಾಯಿತ ಅಧ್ಯಕ್ಷನೂ ಮತ್ತು
ಉಪಾಧ್ಯಕ್ಷನು ಇರುತ್ತಾರೆ . ಅಧ್ಯಕ್ಷನಿಗೆ ಗ್ರಾಮ
ಪಂಚಾಯಿತಿಯ ಅಧಿಕಾರಿಗಳ ಮತ್ತು ನೌಕರರ ಕಾರ್ಯಗಳ ಮೇಲೆ
ಮೇಲ್ವಿಚಾರಣೆ ಮತ್ತು ನಿಯಂತ್ರಣದ ಅಧಿಕಾರವಿದೆ.
55. ಪಂಚಾಯಿತಿ ಸಮಿತಿ ಆಡಳಿತವು ಚುನಾಯಿತ ಅಧ್ಯಕ್ಷ ಮತ್ತು
ಸರ್ಕಾರದಿಂದ ನೇಮಿಸಲ್ಪಟ್ಟ ಕಾರ್ಯನಿರ್ವಾಹಣಾಧಿಕಾರಿಯಿಂದ
ನಡೆಸಲ್ಪಡುತ್ತದೆ.
56. ಕಾರ್ಯನಿರ್ವಹಣಾಧಿಕಾರಿಯು ರಾಜ್ಯ ಸರ್ಕಾರದ ಎ ದರ್ಜೆ
ಅಧಿಕಾರಿ ಅಥವಾ ಅಸಿಸ್ಟೆಂಟ್ ಕಮಿಷನರ್ ರವರಿಗೆ ಸಮನಾ
ಹುದ್ದೆಯವರಾಗಿದ್ದು , ಅಧ್ಯಕ್ಷರ ಮೇಲ್ವಿಚಾರಣೆಗೆ ಒಳಪಟ್ಟು
ಪಂಚಾಯಿತಿ ಸಮಿತಿಯ ಎಲ್ಲ ಅಧಿಕಾರಗಳು ಹಾಗೂ ನೌಕರರ ಮೇಲೆ
ಹತೋಟಿ ಹೊಂದಿದ್ದು ಕೆಲಸಗಳನ್ನು ನಿರ್ವಹಿಸುತ್ತಾರೆ.
57. ಜಿಲ್ಲಾ ಪಂಚಾಯತ್ ಪ್ರತಿ ನಲ್ವತ್ತು ಸಾವಿರ ಜನಸಂಖ್ಯೆಗೆ
ಒಬ್ಬರಂತೆ ಹಾಗೂ ಚಿಕ್ಕಮಗಳೂರು , ಉತ್ತರ ಕನ್ನಡ ಜಿಲ್ಲೆಯಲ್ಲಿ
ಪ್ರತಿ ಮೂವತ್ತು ಸಾವಿರ ಜನಸಂಖ್ಯೆಗೆ ಹಾಗೂ ಕೊಡಗು
ಜಿಲ್ಲೆಯಲ್ಲಿ ಹದಿನೆಂಟು ಸಾವರ ಜನಸಂಖ್ಯೆಗೆ ಒಬ್ಬರಂತೆ ಆರಿಸಿ
ಬರುವ ಚುನಾಯಿತ ಸದಸ್ಯರಿರುತ್ತಾರೆ.
58. ತಾಲ್ಲೂಕ್ ಪಂಚಾಯಿತಿ ಪ್ರತಿ ಹತ್ತು ಸಾವಿರ ಜನಸಂಖ್ಯೆಗೆ
ಒಬ್ಬರಂತೆ ಸದಸ್ಯರು ಚುನಾಯಿತರಾಗಿ ಬರುವರು .
59. ಜಿಲ್ಲಾಪಂಚಾಯತ್ ನಲ್ಲಿ ಜಿಲ್ಲೆಯ ವಿಧಾನಭಾ , ಲೋಕಸಭಾ
, ತಾಲ್ಲೂಕ್ ಪಂಚಾಯಿತಿಯ ಅಧ್ಯಕ್ಷರುಗಳು ರಾಜ್ಯ ಸಭಾ
ಮತ್ತು ವಿಧಾನಪರಿಷತ್ತಿನ ಸದಸ್ಯರುಗಳು ಜಿಲ್ಲಾ ಪಂಚಾಯಿತಿಯ
ಸದಸ್ಯರುಗಳಾಗಿರುತ್ತಾರೆ.
60. ಬಹಳ ಹಿಂದೆ “ ಪಂಚರು ” ಪಂಚಾಯಿತಿಗಳ
ಮುಖ್ಯಸ್ಥರಾಗಿರುತ್ತಿದ್ದರು.
61. ಸಾಮಾಜಿಕವಾಗಿ , ಆರ್ಥಿಕವಾಗಿ ಪ್ರಬಲರಾಗಿದ್ದವರು ಮಾತ್ರ
ವಂಶಪಾರಂಪರ್ಯವಾಗಿ “ ಪಂಚ” ರಾಗಿ ಅಧಿಕಾರಿ ನಡೆಸಲು
ಅವಕಾಶವಿತ್ತು.
62. 1884 ರಲ್ಲಿ ಬ್ರಿಟಿಷರು ಸ್ಥಳೀಯ ಸರ್ಕಾರಕ್ಕೆ ಆಡಳಿತಾತ್ಮಕ
ರೂಪ ಕೊಡುವ ಪ್ರಯತ್ನ ಮಾಡಿದರು. ಒಂದು ಜಿಲ್ಲೆಯನ್ನು
ಆಡಳಿತ ಘಟಕವಾಗಿ ರೂಪಿಸಿದರು. ಈ ವ್ಯವಸ್ಥೆಗೆ “ ಲೋಕಲ್ ಫಂಡ್
ಸಮಿತಿ ” ಎಂದು ಕರೆಯಲಾಯಿತು.
63. “ ಲೋಕಲ್ ಫಂಡ್ ಸಮಿತಿ ”ಯಲ್ಲಿ ಜಿಲ್ಲಾ ಕಮಿಷನರ್
ಅಧ್ಯಕ್ಷರಾಗಿದ್ದು ಇನಾಂದಾರರು ಮತ್ತು ಭೂಮಾಲಿಕರು
ಸದಸ್ಯರಾಗಿದ್ದರು.
64. ಕರ್ನಾಟಕದಲ್ಲಿ 1903 ರಲ್ಲಿ “ ದಿ ಮೈಸೂರು ಲೋಕಲ್
ಬೋರ್ಡ್ ರೆಗ್ಯುಲೇಷನ್ ” ಕಾಯಿದೆಯನ್ನು ಜಾರಿಗೆ
ತರಲಾಯಿತು.
65. “ ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್ ” ಈ
ಕಾಯಿದೆಯ ಪ್ರಕಾರ ಜಿಲ್ಲಾ ಮಂಡಳಿ , ತಾಲ್ಲೂಕು ಬೋರ್ಡ್ ,
ಪಂಚಾಯಿತಿ ಸಂಘಟನೆ ಎಂಬ ಮೂರು ಹಂತದಲ್ಲಿ
ಜಾರಿಯಾಯಿತು.
66. 1919 ರಲ್ಲಿ ಅಂದಿನ ಮೈಸೂರು ಸರ್ಕಾರ “ ದಿ ಮೈಸೂರು
ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯತ್ ಕಾಯಿದೆ “
ಯನ್ನು ಜಾರಿಗೆ ತಂದಿತು.
67. 1926 ರಲ್ಲಿ “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು
ವಿಲೇಜ್ ಪಂಚಾಯತ್ ಕಾಯಿದೆ “ ಯಲ್ಲಿ ಗ್ರಾಮ ಪಂಚಾಯಿತಿಗಳ
ಚುನಾವಣೆಗೆ ಒತ್ತು ನೀಡಲಾಯಿತು. ಆದರೆ 21 ವರ್ಷ ದಾಟಿದ
ಪುರಷರಿಗೆ ಮಾತ್ರ ಮತದಾನದ ಅವಕಾಶ ಕಲ್ಪಿಸಲಾಗಿತ್ತು.
68. “ ದಿ ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್
ಪಂಚಾಯತ್ ಕಾಯಿದೆ “ ಯಲ್ಲಿ ಇತಿಹಾಸದಲ್ಲಿ ಮೊದಲ ಬಾರಿಗೆ
ಗ್ರಾಮ ಪಂಚಾಯಿತಿಗಳ ಕಾರ್ಯದರ್ಶಿಗಳ ನೇಮಕಕ್ಕೆ ಅವಕಾಶ
ಮಾಡಿಕೊಡಲಾಯಿತು. ಚುನಾಯಿತ ಸದಸ್ಯರೊಬ್ಬರನ್ನ
ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುತ್ತಿತ್ತು.
69. 1949 ಸೆಪ್ಟೆಂಬರ್ ತಿಂಗಳಲ್ಲಿ ಮೈಸೂರು ರಾಜ್ಯದ
ಸ್ಥಳೀಯಾಡಳಿತ ವ್ಯವಸ್ಥೆಯಲ್ಲಿನ ಕೊರತೆಗಳ ಅಧ್ಯಯನ
ನಡೆಸಲು ವೆಂಕಟ
ಪ್ಪ ನೇತೃತ್ವದ ಸಮಿತಿಯನ್ನು ರಚಿಸಲಾಯಿತು.
70. ವೆಂಕಟಪ್ಪ ಸಮಿತಿಯು 1950 ಜೂನ್ ತಿಂಗಳಲ್ಲಿ ಸಮಿತಿಯು
ವರದಿಯನ್ನು ಒಪ್ಪಿಸಿತು.
71. ವೆಂಕಟಪ್ಪ ಸಮಿತಿಯು ಗ್ರಾಮ ಮಟ್ಟದಲ್ಲಿ ಗ್ರೂಪ್
ಪಂಚಾಯಿತಿ , ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಂಡಳಿ ಇರುವ ಎರಡು
ಹಂತಗಳ ಸ್ಥಳೀಯಾಡಳಿತ ವ್ಯವಸ್ಥೆ ಮಾಡಬೇಕು .
72. 1959 ರಿಂದ ಎಲ್ಲಾ ರಾಜ್ಯಗಳಲ್ಲೂ ಪಂಚಾಯಿತಿ ರಾಜ್
ಅಧಿನಿಯಮವನ್ನು ಜಾರಿಗೆ ತಂದು ಗ್ರಾಮ ಪಂಚಾಯಿತಿ. ಬ್ಲಾಕ್
ಪಂಚಾಯಿತಿ ಸಮಿತಿ ( ತಾಲ್ಲೂಕು ಬೋರ್ಡ್ ) , ಜಿಲ್ಲಾ ಪರಿಷತ್
ಎಂಬ ಮೂರು ಹಂತಗಳ ಪಂಚಾಯಿತಿ ವ್ಯವಸ್ಥೆಯನ್ನು ಜಾರಿಗೆ
ತಂದಿತು.
73. ಅಶೋಕ್ ಮೆಹ್ತಾ ಸಮಿತಿಯು ಎರಡು ಹಂತದ
ಪಂಚಾಯಿತಿಗಳಿಗೆ ಶಿಫಾರಸ್ಸು ಮಾಡಿತು. ( ಮಂಡಲ ಪಂಚಾಯಿತಿ
, ಜಿಲ್ಲಾ ಪರಿಷತ್ ) .
74. ಪಶ್ಚಿಮ ಬಂಗಾಳ ಮತ್ತು ಕರ್ನಾಟಕ ಸರ್ಕಾರಗಳು ಅಶೋಕ್
ಮೆಹ್ತಾ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಪಂಚಾಯಿತಿ ರಾಜ್
ವ್ಯವಸ್ಥೆಯನ್ನು ಹುಟ್ಟು ಹಾಕಿದವು.
75. ಪಂಚಾಯಿತಿ ರಾಜ್ ಸಚಿವ ಅಬ್ದುಲ್ ನಜೀರ್ ಸಾಬ್ ರವರ
ಪ್ರಯತ್ನದಿಂದ 1987 – 1992 ರ ಅವಧಿಯಲ್ಲಿ 2 ಹಂತಗಳ
ವ್ಯವಸ್ಥೆ ಜಾರಿಗೆ ಬಂದಿತು.
76. ಅಶೋಕ್ ಮೆಹ್ತಾ ಸಮಿತಿಯು ಮಹಿಳೆಯರಿಗೆ ಶೇ.25 ರಷ್ಟು
ಪರಿಶಿಷ್ಟರಿಗೆ ಶೇ.15 ರಷ್ಟು ರಾಜಕೀಯ ಮೀಸಲಾತಿಯನ್ನು
ಒದಗಿಸಿದ ಹೆಗ್ಗಳಿಕೆ ಕೂಡ ನಜೀರ್ ಸಾಬ್ ಅವರಿಗೆ ಸಲ್ಲಬೇಕು.
77. ಕರ್ನಾಟಕ ಮತ್ತು ಪಶ್ಚಿಮ ಬಂಗಾಳದಲ್ಲಿನ ವ್ಯವಸ್ಥೆಯನ್ನು
ಕಂಡು ಪ್ರೇರಿತರಾದ ಅಂದಿನ ಪ್ರಧಾನಿ ರಾಜೀವ್
ಗಾಂಧಿಯವರು ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ
ಸಮಿತಿಯನ್ನು ರಚಿಸಿದರು.
78. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯು ಇಡೀ
ದೇಶಕ್ಕೆ ಏಕರೂಪದ ಪಂಚಾಯಿತಿ ರಾಜ್ ವ್ಯವಸ್ಥೆಯ
ಮಾದರಿಯನ್ನು ಈ ಸಮಿತಿ ಶಿಫಾರಸ್ಸು ಮಾಡಿತು.
79. ಡಾ.ಎಲ್.ಎಂ.ಸಿಂಘ್ವಿ ನೇತೃತ್ವದ ಸಮಿತಿಯ ಫಲವಾಗಿಯೇ
ಸಂವಿಧಾನದ 73 ನೇ ತಿದ್ದುಪಡಿಯನ್ನು ತರಲಾಗಿದೆ. 1993 ರ
ಏಪ್ರಿಲ್ 24 ರಿಂದ ಸಂವಿಧಾನದ 73 ನೇ ತಿದ್ದುಪಡಿಯ ಆಧಾರದಲ್ಲಿ
ಮೂರು ಹಂತಗಳ ಪಂಚಾಯಿತಿ ರಾಜ್ ವ್ಯವಸ್ಥೆಯನ್ನು ಜಾರಿಗೆ
ತರಲಾಗಿದೆ.
80. 73 ನೇ ತಿದ್ದುಪಡಿಯಲ್ಲಿ ಮಹಿಳೆಯರಿಗೆ 1/3 ಭಾಗ ಮೀಸಲಾತಿ
( ಮುಂದಿನ ಚುನಾವಣೆಯಿಂದ ಮಹಳಿಯೆರಿಗೆ ಶೇ.50 ರಷ್ಟು
ಮೀಸಲಾತಿ ).
81. 73 ನೇ ತಿದ್ದುಪಡಿಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ ಮೂರು
ಹಂತದ ಪಂಚಾಯಿತಿಗಳಿಗೆ ಚುನಾವಣೆ ನಡೆಸುವುದು.
82. 73 ನೇ ತಿದ್ದುಪಡಿಯನ್ವಯ ಕರ್ನಾಟಕದಲ್ಲಿ ಹಿಂದುಳಿದ
ವರ್ಗಗಳಿಗೆ ವಿಶೇಷವಾಗಿ ಶೇ.33 ರಷ್ಟು ರಾಜಕೀಯ
ಮೀಸಲಾತಿಯನ್ನು ಒದಗಿಸಲಾಗಿದೆ. ಇದರಲ್ಲಿ ಅತ್ಯಂತ
ಹಿಂದುಳಿದ ವರ್ಗಕ್ಕೆ ಶೇ.80 ಹಾಗೂ ಹಿಂದುಳಿದ ವರ್ಗಕ್ಕೆ ಶೇ.20
ರಷ್ಟು ಮೀಸಲಾತಿಯನ್ನು ಕಲ್ಪಿಸಿದೆ.
83. ಕರ್ನಾಟಕ ಪಂಚಾಯಿತಿ ರಾಜ್ ಕಾಯಿದೆಗೆ 2002 ರಲ್ಲಿ
ತಿದ್ದುಪಡಿಯನ್ನು ತರುವ ಮೂಲಕ ವಾರ್ಡ್ ಸಭೆಗಳನ್ನು
ಅಸ್ತಿತ್ವಕ್ಕೆ ತರಲಾಗಿದೆ.
84. ಕರ್ನಾಟಕದಲ್ಲಿ ರಾಜ್ಯ ಮಟ್ಟದಲ್ಲಿ ಪಂಚಾಯಿತಿ ರಾಜ್
ಸಂಸ್ಥೆಗಳ ಅಭಿವೃದ್ದಿ ಕುರಿತು ಚರ್ಚಿಸಿ ಸಲಹೆ ನೀಡಲು
ಪೂರಕವಾಗಿ ರಾಜ್ಯ ಪಂಚಾಯಿತಿ ಕೌನ್ಸಿಲ್ ರಚನೆಗೆ ಅವಕಾಶ
ಕಲ್ಪಿಸಿದೆ.
85. ಸಂವಿಧಾನದ 73 ನೇ ತಿದ್ದುಪಡಿ ಗ್ರಾಮ ಸಭೆಗಳನ್ನು
ಅಸ್ತಿತ್ವಕ್ಕೆ ತಂದಿತು. ಇದರಲ್ಲಿ ಕರ್ನಾಟಕವು ಇನ್ನು ಒಂದು
ಹೆಜ್ಜೆ ಮುಂದೆ ಹೋಗಿ ತಳಮಟ್ಟದಲ್ಲಿ ವಾರ್ಡ್ ಸಭೆಗಳನ್ನು
ಹುಟ್ಟು ಹಾಕಿದೆ.
86. 6 ತಿಂಗಳಿಗೊಮ್ಮೆ ವಾರ್ಡ್ ಸಭೆ ನಡೆಸುವುದು
87. ವರ್ಷಕ್ಕೆ ಎರಡು ಬಾರಿ ವಾರ್ಡ್ ಸಭೆ ನಡೆಸುವುದು.
88. ವಾರ್ಡಿನ ಮತದಾರರ ಶೇ.10 ರಷ್ಟು ಅಥವಾ 20 ಸದಸ್ಯರು
ಇವುಗಳಲ್ಲಿ ಯಾವುದು ಕಡಿಮೆಯೋ ಅದು ವಾರ್ಡ್ ಸಭೆಯ
ಕೋರಂ .
89. ವಾರ್ಡ್ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33
ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು . ಪರಿಶಿಷ್ಠ ಜಾತಿ /
ಪಂಗಡಗಳ ಜನರ ಹಾಜಾರಾತಿ ಪ್ರಮಾಣ ಅವರ ಒಟ್ಟು
ಜನಸಂಖ್ಯೆಗೆ ಅನುಗುಣವಾಗಿರಬೇಕು .
90. ವಾರ್ಡ್ ಸಭೆಯ ಅಧ್ಯಶ್ರತೆಯನ್ನು ಆ ವಾರ್ಡಿನ ಸದಸ್ಯರೇ
ವಹಿಸಬೇಕು . ಒಂದು ವಾರ್ಡಿನಲ್ಲಿ ಒಂದಕ್ಕಿಂತ ಹೆಚ್ಚು
ಸದಸ್ಯರು ಇರುವ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ನಾಮ
ನಿರ್ದೇಶ ಮಾಡಿದ ಅದೇ ವಾರ್ಡಿನ ಇತರ ಸದಸ್ಯ ಅಧ್ಯಕ್ಷತೆ
ವಹಿಸಬೇಕು.
91. ವಾರ್ಡ್ ಸಭೆಯ ಕಾರ್ಯಸೂಚಿಯನ್ನು ಗ್ರಾಮ
ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ
ಅಂಗೀಕರಿಸಬೇಕು
92. ಕನಿಷ್ಠ ಒಂದು ವಾರಕ್ಕೆ ಮುಂಚಿತವಾಗಿ ವಾರ್ಡ್ ಸಭೆಗೆ
ಸಾಕಷ್ಟು ಪ್ರಚಾರ ನೀಡಬೇಕು.
93. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್
ಸಭೆಗಳನ್ನು ಮೊದಲು ನಡೆಸಬೇಕು . ನಂತರ ಒಟ್ಟು ಗ್ರಾಮ
ಪಂಚಾಯಿತಿ ವ್ಯಾಪ್ತಿಗೆ ಒಂದು ಗ್ರಾಮ ಸಭೆಯನ್ನು
ನಡೆಸಬೇಕು.
94. ಗ್ರಾಮ ಸಭೆಯನ್ನು ಕನಿಷ್ಠ 6 ತಿಂಗಳಿಗೊಮ್ಮೆ ನಡೆಸಬೇಕು.
95. ಗ್ರಾಮ ಸಭೆಯ ಶೇ.10 ಕ್ಕಿಂತ ಕಡಿಮೆಯಿಲ್ಲದ ಸದಸ್ಯರ
ಕೋರಿಕೆಯ ಮೇರೆಗೆ ವಿಶೇಷ ಗ್ರಾಮಸಭೆಯನ್ನು ಕರೆಯಲು
ಕಾಯಿದೆಯಲ್ಲಿ ಅವಕಾಶ ಕಲ್ಪಿಸಿದೆ. ಇಂತಹ ಸಂದರ್ಭಗಳಲ್ಲಿ ಗ್ರಾಮ
ಸಭೆಗಳನ್ನು ಕರೆಯುವುದು ಕಡ್ಡಾಯವಾಗಿದೆ. ಆದರೆ ವಿಶೇಷ
ಗ್ರಾಮ ಸಭೆಗಳ ನಡುವೆ ಕನಿಷ್ಟ ಮೂರು ತಿಂಗಳ
ಅಂತರವಿರಬೇಕು.
96. ಗ್ರಾಮ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ
ಅಧ್ಯಕ್ಷರೇ ವಹಿಸಬೇಕು. ಅವರ ಅನುಪಸ್ಥಿತಿಯಲ್ಲಿ
ಉಪಾಧ್ಯಕ್ಷರು ಅಥವಾ ಗ್ರಾಮ ಪಂಚಾಯಿತಿ ನಾಮ
ನಿರ್ದೇಶನ ಮಾಡಿದ ಸದಸ್ಯರು ವಹಿಸಬೇಕು.
97. ಗ್ರಾಮ ಸಭೆ ಸದಸ್ಯರ ಒಟ್ಟು ಸಂಖ್ಯೆಯ 1/10 ಕ್ಕೆ
ಕಡಿಮೆಯಿಲ್ಲದಷ್ಟು ಅಥವಾ 100 ಸದಸ್ಯರು ಇವುಗಳಲ್ಲಿ
ಯಾವುದು ಕಡಿಮೇಯೋ ಅದು ಗ್ರಾಮ ಸಭೆಯ ಕೋರಂ .
98. ಗ್ರಾಮ ಸಭೆಗೆ ಪ್ರತಿ ವಾರ್ಡಿನಿಂದ ಕನಿಷ್ಟ 10 ಜನರು ಗ್ರಾಮ
ಸಭೆಯಲ್ಲಿ ಪಾಲ್ಗೋಳ್ಳುವಂತೆ ನೋಡಿಕೊಳ್ಳಬೇಕು.
99. ಗ್ರಾಮ ಸಭೆಯ ಹಾಜರಾತಿಯಲ್ಲಿ ಮಹಿಳೆಯರ ಸಂಖ್ಯೆ ಶೇ.33
ಕ್ಕೆ ಕಡಿಮೆ ಇಲ್ಲದಂತೆ ನೋಡಿಕೊಳ್ಳಬೇಕು. ಪರಿಶಿಷ್ಟ ಜಾತಿ /
ಪಂಗಡ ಜನರ ಹಾಜರಾತಿ ಪ್ರಮಾಣ ಅವರ ಜನಸಂಖ್ಯೆಗೆ
ಅನುಗುಣವಾಗಿರಬೇಕು.
100. ಪ್ರಕರಣ 4 ರಲ್ಲಿಲ ಗ್ರಾಮ ಪಂಚಾಯಿತಿ ರಚನೆ ಕುರಿತು
ಸ್ಪಷ್ಟಪಡಿಸಲಾಗಿದ

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ