ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

26.10.16

Gk - ಇತಿಹಾಸ - 1

೧) ಕ್ರಿ ,ಶ ೭ನೇ ಶತಮಾನದಲ್ಲಿ ಕಪ್ಪೆ ಅರಭಟ್ಟನ
ಸಾಹಸ ಚಿತ್ರಿಸಿರುವ ಶಾಸನ

ಎ) ಹಲ್ಮಡಿ ಶಾಸನ
ಬಿ) ಐಹೊಳೆ ಶಾಸನ
ಸಿ) ಲಕ್ಕುಂಡಿ ಶಾಸನ
ಡಿ) ಬಾದಾಮಿ ಶಾಸನ *

೨)ತಮ್ಮಟಕಲ್ಲು ಶಾಸನದ ಕಾಲ

ಎ) ಕ್ರಿ.ಶ ಸು ೪೫೦
ಬಿ) ಕ್ರಿ.ಶ ಸು ೫೦೦ *
ಸಿ) ಕ್ರಿ.ಶ ಸು ೮೦೦
ಡಿ) ಕ್ರಿ.ಶ ಸು ೬೦೦

೩) ಇದು ನಂದಿಸೇನ ಪ್ರವರ ಮುನಿಯ
ವೈರಾಗ್ಯಗೀತೆಯ ಶಾಸನ

ಎ) ಐಹೊಳೆ ಶಾಸನ
ಬಿ) ಶ್ರವಣ ಬೆಳಗೊಳ ಶಾಸನ *
ಸಿ) ಬ್ರಹ್ಮಗಿರಿ ಶಾಸನ
ಡಿ) ಹಲ್ಮಿಡಿ ಶಾಸನ

೪) ಕುರಿತೋದದೆಯುಂ ಕಾವ್ಯ ಪ್ರಯೋಗ
ಪರಿಣಿತ ಮತಿಗಳ್ ವಾಕ್ಯ ವಿರುವ ಕೃತಿ
ಎ)ಪಂಪ ಭಾರತ
ಬಿ) ರನ್ನನ ಗದಾಯುದ್ಧ
ಸಿ) ಕವಿರಾಜ ಮಾರ್ಗ*
ಡಿ) ಶಾಂತಿಪುರಾಣ

೫) ಕ್ರಿ ಶ ಸು ೪೫೦ ರಲ್ಲಿ ರಚಿತವಾದ ಶಾಸನ
ಎ) ಶ್ರವಣ ಬೆಳಗೊಳ ಶಾಸನ
ಬಿ) ಬಾದಾಮಿ ಶಾಸನ
ಸಿ)ದೇಕಬ್ಬೆಯಶಾಸನ
ಡಿ) ಹಲ್ಮಿಡಿ ಶಾಸನ *

೬) ವಡ್ಡಾರಾಧನೆ ಇದು ಒಂದು
ಎ) ಚಂಪೂಕೃತಿ
ಬಿ) ವಚನ
ಸಿ) ಗದ್ಯಕಾವ್ಯ*
ಡಿ) ನಾಟಕ ಕೃತಿ

೭) ಬಾದಾಮಿ ಶಾಸನವು
ಎ) ವೀರ ಗೀತೆ *
ಬಿ) ದಾನ ಶಾಸನ
ಸಿ) ವೈರಾಗ್ಯ ಶಾಸನ
ಡಿ) ಮಾಸ್ತಿಕಲ್ಲು

೮) ಜೈನಯುಗ ವೀರಶೈವಯುಗ
ಬ್ರಾಹ್ಮಣಯುಗ ವಿಭಾಗ ಕ್ರಮ ಪ್ರತಿಪಾದಕರು
ಎ) ಆರ್ ನರಸಿಂಹಾಚಾರ್ *
ಬಿ) ಬಿ ಎಂ ಶ್ರೀ
ಸಿ) ರಂ ಶ್ರೀ ಮುಗಳಿ
ಡಿ) ಕೆ ವೆಂಕಟರಾಮಪ್ಪ

೯) ತಮ್ಮಟಕಲ್ಲು ಶಾಸನವು
ಎ) ವೀರಗಲ್ಲು *
ಬಿ) ಮಾಸ್ತಿ ಕಲ್ಲು
ಸಿ) ದಾನ ಶಾಸನ
ಡಿ) ನಿಶಿಧಿ ಕಲ್ಲು

೧೦) ಕನ್ನಡ ಸಾಹಿತ್ಯ ವಿಭಾಗ ಕ್ರಮದಲ್ಲಿ
ಹರಿಹರಯುಗ ದ ಪ್ರತಿಪಾದಕರು
ಎ) ಆರ್ ನರಸಿಂಹಾಚಾರ್
ಬಿ) ತ ಸು ಶಾಮರಾಯ *
ಸಿ) ರಂ ಶ್ರೀ ಮುಗಳಿ
ಡಿ) ಎಫ್ ಕಿಟಲ್

11)ಕವಿರಾಜಮಾರ್ಗಕ್ಕೆ ಆಕರ ಗ್ರಂಥ
ಎ) ಕಾವ್ಯಾದರ್ಶ *
ಬ) ಕಾವ್ಯಾಲಂಕಾರ
ಸಿ) ಛಂದೋಬುದಿ
ಡ) ನಾಟ್ಯಶಾಸ್ತ್ರ

1೨)ಹಲ್ಮಿಡಿ ಶಾಸನದ ವಸ್ತು
ಎ) ಕಾಕುಸ್ಥವರ್ಮನ ಪರಾಕ್ರಮ ಕುರಿತ ಶಾಸನ
ಬಿ) ನರಿದಾವಿಳೆ ನಾಡಿನ ವರ್ಣನೆ
ಸಿ) ವಿಜ ಅರಸನಿಗೆ ಬಾಳ್ಗಿಚ್ಚಾಗಿ ಪಲ್ಮಡಿ ಮತ್ತು
ಮೂಳವಳ್ಳಿಗಳನ್ನು ನೀಡಿದ್ದುದು *
ಡಿ) ಪ್ರಕೃತಿ ವರ್ಣನೆ

1೩) ತಿರುಳ್ಗನ್ನಡದ ಎಲ್ಲೆಗಳನ್ನು ಮೊದಲು
ಹೇಳಿದವನು
ಏ) ಪಂಪ
ಬಿ) ಶಿವಕೋಟ್ಯಚಾರ್ಯ
ಸಿ) ಶ್ರೀವಿಜಯ *
ಡಿ) ನಾಗವರ್ಮ

1೪) ಉಪಸರ್ಗ ಕೇವಲಿಗಳ ಕಥೆ ಎಂಬ ಮತ್ತೊಂದು
ಹೆಸರಿರುವ ಕೃತಿ
ಎ) ವಡ್ಡಾರಾಧನೆ *
ಬಿ) ಆದಿಪುರಣ
ಸಿ) ಚಾವುಂಡರಾಯ ಪುರಾಣ
ಡಿ) ಶಾಂತಿಪುರಾಣ

1೫) ಹಲ್ಮಿಡಿ ಶಾಸದ ಭಾಷಾ ಸ್ವರೂಪ
ಎ) ಹಳೆಗನ್ನಡ
ಬಿ) ನಡುಗನ್ನಡ
ಸಿ) ಪೂರ್ವದ ಹಳೆಗನ್ನಡ *
ಡಿ) ಹೊಸಗನ್ನಡ

1೬) ಪಳಗನ್ನಡಮಂ ಪೊಲಗೆಡಸಿ ನುಡಿವರ್ ಎಂಬ
ಉಕ್ತಿಯು ಈ ಕೃತಿಯಲ್ಲಿದೆ
ಎ) ವಡ್ಡಾರಾದನೆ
ಬಿ) ಪಂಪಭಾರತ
ಸಿ) ಶಬ್ದ ಸ್ಮೃತಿ
ಡಿ) ಕವಿರಾಜಮಾರ್ಗ *

1೭) ಕನ್ನಡ ಕಾವ್ಯ ಗಂಗೆಯ ಗಂಗೋತ್ರಿ ಎಂದು
ಹೆಸರು ಪಡೆದ ಛಂದಸ್ಸು
ಎ) ಏಳೆ
ಬಿ) ಸಾಂಗತ್ಯ
ಸಿ) ತ್ರಿಪದಿ *
ಡಿ) ಮೂಲ ಷಟ್ಪದಿ

1೮) ಕಾವೇರಿಯಿಂದ ಗೋದಾವರಿ
ವರಮಿರ್ದನಾಡದಾ ಕನ್ನಡದೊಳ್.........
ಎ) ಭಾವಿಸಿದ ಜನಪದಂ *
ಬಿ) ಭಾವಿಸಿದ ಜನವಿಶೇಷಂ
ಸಿ) ಭಾವಿಸಿದ ಸವಿಗನ್ನಡಂ
ಡಿ) ಭಾವಿಸಿದ ತಿರುಳ್ಗನ್ನಡಂ

1೯) ಸಾಹಿತ್ಯ ಚರಿತ್ರೆಯ ವಿಭಜನೆಯ
ಸಿದ್ಧಾಂತವಾಗಿ ಈ ಕೆಳಗಿನದರಲ್ಲಿ ಯಾವ
ಒಂದು ಬಳಕೆಯಾಗಿಲ್ಲ
ಎ) ಧರ್ಮ
ಬಿ) ಕವಿ
ಸಿ) ಭಾಷೆ
ಡಿ) ಕಾವ್ಯವಸ್ತು *
2೦) ಲಬ್ಯ ಕನ್ನಡ ಶಾಸನಗಳಲ್ಲಿ ಅತಿ
ಪ್ರಾಚೀನವೆನಿಸಿದ ಹಲ್ಮಿಡಿ ಶಾಸನವು
ದೊರೆತುದು ಈ ಜಿಲ್ಲೆಯಲ್ಲಿ
ಎ) ಮೈಸೂರು
ಬಿ) ಮಂಡ್ಯ
ಸಿ) ಚಾಮರಾಜನಗರ
ಡಿ) ಹಾಸನ *
2೧) ಹತ್ತನೆಯ ಶತಮಾನದಲ್ಲಿ ಪ್ರಸಿದ್ಧವಾದ
ಸಾಹಿತ್ಯ ಪ್ರಕಾರ
ಎ) ವಚನ
ಬಿ) ಚಂಪೂ
ಸಿ) ರಗಳೆ
ಡಿ) ಷಟ್ಪದಿ *
2೨) ಛಂದೋಂಬುಧಿ ಯನ್ನು ಬರೆದವರು
ಎ) ನಾಗಚಂದ್ರ
ಬಿ) ಕೀರ್ತಿವರ್ಮ
ಸಿ) ನಾಗವರ್ಮ -೧ *
ಡಿ) ಮಯೂರವರ್ಮ
2೩) ಯಾವುದು ೨ನೆಯ ನಾಗವರ್ಮನ ಕೃತಿ
ಎ) ಕಾದಂಬರಿ
ಬಿ) ಕಾವ್ಯಾವಲೋಕನ *
ಸಿ) ಛಂದೋಂಬುಧಿ
ಡಿ) ಶಬ್ದಮಣಿದರ್ಪಣ
2೪) ನಯಸೇನನ ಧರ್ಮಾಮೃತ ಕೃತಿಯ ಸಾಹಿತ್ಯ
ರೂಪ
ಎ) ಚಂಪೂ *
ಬಿ) ಗದ್ಯ
ಸಿ) ನಾಟಕ
ಡಿ) ಸಾಂಗತ್ಯ
2೫) ಬೆಳಗುವೆನಿಲ್ಲಿ ಲೌಕಿಕಮನಲ್ಲಿಜಿನಾಗಮಮಂ ಉಕ್ತಿ
ಈ ಕೃತಿಯಲ್ಲಿದೆ
ಎ) ಕರ್ನಾಟಕ ಕಾದಂಬರಿ
ಬಿ) ಅಜಿತ ಪುರಾಣ
ಸಿ) ಆದಿಪುರಾಣ
ಡಿ) ಪಂಪಭಾರತ *
2೬)ವಾಗ್ದೇವಿಯ ಭಂಡಾರದ
ಮುದ್ರೆಯನ್ನೊಡದೆ ನೆಂದು ಹೇಳಿಕೊಂಡ ಕವಿ
ಎ) ಪಂಪ
* ಬಿ) ರಾಘವಾಂಕ
ಸಿ) ಲಕ್ಷ್ಮೀಶ
ಡಿ) ರನ್ನ *
2೭) ಬೆಳಗುವೆನಿಲ್ಲಿ ಲೌಕಿಕಮನಲ್ಲಿಜಿನಾಗಮಮಂ
ಎಂದ ಕವಿ
ಎ) ರನ್ನ
ಬಿ) ಪೊನ್ನ
ಸಿ) ಪಂಪ *
ಡಿ) ಚಾವುಂಡರಾಯ
2೮) ಗದಾಯುದ್ದಕ್ಕೆ ಮತ್ತೊಂದು ಹೆಸರು
ಎ) ಸಾಹಸ ವಿಜಯ
ಬಿ) ವಿಕ್ರಮಾರ್ಜುನ ವಿಜಯ
ಸಿ) ಸಾಹಸ ಭೀಮ ವಿಜಯ *
ಡಿ) ಭೀಮ ಚರಿತೆ
2೯)ರನ್ನ ವರಕವಿ ಚಿರಕವಿ ಮತ್ತು ಮಹಾಕವಿ ಎಂದು
ಅಭಿಪ್ರಾಯಿಸಿದವರು
ಎ) ರಂ ಶ್ರೀ ಮುಗಳಿ
ಬಿ) ಡಿ ಎಲ್ ನರಸಿಂಹಾಚಾರ್
ಸಿ) ದೇ಼ಜಗೌ
ಡಿ) ಕೆ ವಿ ಪುಟ್ಟಪ್ಪ *
3೦)ರನ್ನ ಬರೆದ ಧಾರ್ಮಿಕ ಕಾವ್ಯ
ಎ) ಆದಿನಾಥಪುರಾಣ
ಬಿ) ಅಜಿತನಾಥಪುರಾಣ *
ಸಿ) ಅನಂತನಾಥ ಪುರಾಣ
ಡಿ) ನೇಮಿನಾಥ ಪುರಾಣ
3೧) ರಾವಣನು ಉದಾತ್ತ ಮತ್ತು ಸದ್ಗುಣಿಯಾದ
ವ್ಯಕ್ತಿ ಯಾವ ಕಾವ್ಯದಲ್ಲಿ
ಎ) ತೊರವೆರಾಮಾಯಣ
ಬಿ) ರಾಮಚಂದ್ರ ಚರಿತ ಪುರಾಣಂ *
ಸಿ) ಮೈರಾವಣನ ಕಾಳಗ
ಡಿ) ಅದ್ಬುತ ರಾಮಾಯಣ
3೨) ವಿಕ್ರಮಾರ್ಜುನ ವಿಜಯ ಕಾವ್ಯದಲ್ಲಿ
ಪಂಪನು ಅನುಸರಿಸಿದ ಪ್ರಕಾರವು
ಎ)ಲೌಕಿಕ *
ಬಿ) ವಸ್ತುಕ
ಸಿ) ಮಾರ್ಗ
ಡಿ) ಆಗಮಿಕ
3೩)ಆದಿಪುರಾಣ ಕಾವ್ಯದಲ್ಲಿ ಪಂಪನು
ಅನುಸರಿಸಿದ ಪ್ರಕಾರವು
ಎ) ಲೌಕಿಕ
ಬಿ) ವಸ್ತುಕ
ಸಿ) ಮಾರ್ಗ
ಡಿ) ಆಗಮಿಕ *
3೪) ಕಾವ್ಯವಲೋಕನ ಕರ್ನಾಟಕ ಭಾಷಾಭೂಷಣ
ವಸ್ತುಕೋಶ ಶಬ್ದಸ್ಮೃತಿ ಕೃತಿಗಳ ಕರ್ತೃ
ಎ) ೧ನೇ ನಾಗವರ್ಮ
ಬಿ) ೨ನೇ ನಾಗವರ್ಮ *
ಸಿ) ಕೀರ್ತಿವರ್ಮ
ಡಿ) ರಾಜದಿತ್ಯ
3೫)ಮಲ್ಲಿನಾಥ ಪುರಾಣ ರಾಮಚಂದ್ರ ಚರಿತೆ
ಪುರಾಣ ಕಾವ್ಯಗಳನ್ನು ಬರೆದಕವಿ
ಎ) ಪೊನ್ನ
ಬಿ) ನಾಗಚಂದ್ರ *
ಸಿ) ರನ್ನ
ಡ)ಜನ್ನ
3೬)ನಯಸೇನನ ಧರ್ಮಾಮೃತದಲ್ಲಿ ಈ ಕೆಳಕಂಡ
ಯಾವ ಲಕ್ಷಣವಿಲ್ಲ
ಎ) ಜಾನಪದ ಕಥೆಗಾರನ ಕಥನ ಕೌಶಲ
ಬಿ) ವಿಡಂಬಕ ಹಾಸ್ಯ
ಸಿ) ಜನಜೀವನ ಪ್ರಜ್ಞೆ
ಡಿ) ಅನುಭವ ವಚನಗಳು *
3೭) ಇದು ಕನ್ನಡದ ಮೊದಲ ಶತಕ
ಎ) ಚಂದ್ರಪುರಾಣ
ಬಿ) ಸೋಮೇಶ್ವರ ಶತಕ
ಸಿ) ಚೂಡಾಮಣಿ ಪುರಾಣ
ಡಿ) ಚಂದ್ರಚೂಡಾಮಣಿ ಶತಕ *
3೮)ನೀಳಾಂಜನೆಯ ನೃತ್ಯದ ಸನ್ನಿವೇಶ ಇರುವ
ಕಾವ್ಯ
ಎ) ಪಂಪಭಾರತ
ಬಿ) ಆದಿಪುರಾಣ *
ಸಿ) ಅಜಿತಪುರಾಣ
ಡಿ) ಅನಂತನಾಥಪುರಾಣ
3೯) ಜೈನರಾಮಾಯಣ ಪರಂಪರೆಯಲ್ಲಿ ಬಂದ
ಕನ್ನಡ ಕಾವ್ಯ
ಎ) ಪಂಪರಾಮಾಯಣ *
ಬಿ) ಕುಮಾರರಾಮ ಸಾಂಗತ್ಯ
ಸಿ) ಕುಮುದೇಂದು ರಾಮಾಯಣ
ಡಿ) ಶ್ರೀರಾಮಾಯಣ ದರ್ಶನಂ
4೦) ಕನ್ನಡ ಕವಿತೆಯೊಳ್ ಅಸಗಂಗಂ ನೂರ್ಮಡಿ
ಎಂದು ಆತ್ಮ ಪ್ರಶಂಸೆ ಮಾಡಿಕೊಂಡ ಕವಿ
ಎ) ಪಂಪ
ಬಿ) ರನ್ನ
ಸಿ) ಪೊನ್ನ
ಡಿ) ಜನ್ನ *
4೧) ಪಂಪನು ಅರಿಕೇಸರಿಯ ಆಸ್ಥಾನ ಕವಿಯಾದರೆ
ಪೊನ್ನನು ಈತನ ಆಸ್ಥಾನ ಕವಿ
ಎ) ಸತ್ಯಾಶ್ರಯ
ಬಿ) ೩ನೇ ಕೃಷ್ಣ *
ಸಿ) ಇಮ್ಮಡಿ ಪುಲಿಕೇಶಿ
ಡಿ) ಅಮೋಘವರ್ಷ
4೨) ಪಂಪನದು ವಿಕ್ರಮಾರ್ಜುನ ವಿಜಯವಾದರೆ
ರನ್ನನದು
ಎ) ಧರ್ಮ ವಿಜಯ
ಬಿ) ಅರ್ಜುನ ವಿಜಯ
ಸಿ) ಕರ್ಣವಿಜಯ
ಡಿ) ಸಾಹಸ ಭೀಮ ವಿಜಯ *
4೩) ಶಾಂತಿ ಪುರಾಣ ಭುವನೈಕ
ರಾಮಾಭ್ಯುದಯ ಕೃತಿಗಳ ಕರ್ತೃ
ಎ) ಪೊನ್ನ *
ಬಿ) ರನ್ನ
ಸಿ) ಪಂಪ
ಡಿ) ನಾಗಚಂದ್ರ
4೪) ಇವನು ಕವಿ ಚಕ್ರವರ್ತಿ
ಎ) ಜನ್ನ *
ಬಿ) ಪಂಪ
ಸಿ) ಅಸಗ
ಡಿ) ಹರಿಹರ
4೫) ವಿಡಂಬನಾ ಕವಿ ಎಂದು
ಪ್ರಖ್ಯಾತವಾಗಿರುವವನು
ಎ) ಬ್ರಹ್ಮಶಿವ *
ಬಿ) ಚಂದ್ರಕವಿ
ಸಿ) ಭೀಮಕವಿ
ಡಿ) ನಯಸೇನ
4೬) ಪಸರಿಪ ಕನ್ನಡಕ್ಕೊಡೆಯನೋರ್ವನೆ ಸತ್ಕವಿ
ಪಂಪನಾವಗಂ ಎಂದಕವಿ
ಎ) ನಾಗಚಂದ್ರ
ಬಿ) ನಯಸೇನ
ಸಿ) ನಾಗವರ್ಮ
ಡಿ) ನಾಗರಾಜ *
4೭) ಪಂಪನ ಆದಿಪುರಾಣವು ಈ ತೀರ್ಥಂಕರರ
ಕಥೆಯನ್ನು ವಸ್ತುವಾಗಿ ಹೊಂದಿದೆ
ಎ) ನೇಮಿನಾಥ
ಬಿ) ಪಾರ್ಶ್ವನಾಥ
ಸಿ) ವೃಷಭನಾಥ *
ಡಿ) ಅಜಿತನಾಥ
4೮) ಇವರನ್ನು ರತ್ನತ್ರಯರು ಎಂದು
ಪರಿಗಣಿಸಲಾಗಿದೆ
ಎ) ಪಂಪ-ರನ್ನ -ಜನ್ನ
ಬಿ) ಪಂಪ -ಪೊನ್ನ-ರನ್ನ *
ಸಿ) ಪಂಪ-ಜನ್ನ-ಪೊನ್ನ
ಸಿ) ರನ್ನ-ಜನ್ನ-ಪೊನ್ನ
4೯) ಇವರನ್ನು ಕವಿಚಕ್ರವರ್ತಿಗಳು ಎಂದು
ಕರೆಯಲಾಗಿದೆ
ಎ)ಪ್ಂಪ-ರನ್ನ -ಜನ್ನ
ಬಿ) ಪಂಪ-ರನ್ನ-ಪೊನ್ನ
ಸಿ) ಪಂಪ-ಜನ್ನ-ಪೊನ್ನ
ಸಿ) ರನ್ನ-ಜನ್ನ-ಪೊನ್ನ *
5೦)ಕವಿತಾ ಗುಣಾರ್ಣವ ಎಂಬುದು ಈತನ
ಬಿರುದು
ಎ) ಪಂಪ *
ಬಿ) ರನ್ನ
ಸಿ) ಜನ್ನ
ಡಿ) ಪೊನ್ನ
5೧) ಅಲ್ಲಮನ ವಚನಗಳ ಅಂಕಿತ
ಎ) ಚನ್ನಮಲ್ಲಿಕರ್ಜುನ
ಬಿ) ಕೂಡಲ ಸಂಗಮ
ಸಿ) ರಾಮನಾಥ
ಡಿ) ಗುಹೇ಼ಶ್ವರ *
5೨)ಇವರು ಸರ್ವಜ್ಞನ ವಚನಗಳನ್ನು ಮೊದಲಿಗೆ
ಸಂಪಾದನೆ ಮಾಡಿದವರು
ಎ) ಡೆಪ್ಯೂಟಿ ಚನ್ನಬಸಪ್ಪ
ಬಿ) ಉತ್ತಂಗೀ ಚನ್ನಪ್ಪ *
ಸಿ) ಗೊರೂರು ಚನ್ನಬಸಪ್ಪ
ಡಿ) ಕೊ ಚನ್ನಬಸಪ್ಪ
5೩) ಕಪಿಲಸಿದ್ದ ಮಲ್ಲಿಕಾರ್ಜುನ ಈ ಮುದ್ರಿಕೆಯ
ವಚನಕಾರ
ಎ) ಮಲ್ಲಿಕಾರ್ಜುನ
ಬಿ) ಅಲ್ಲಮಪ್ರಭು
ಸಿ) ಅಕ್ಕಮಾಹಾದೇವಿ
ಡಿ) ಸಿದ್ಧರಾಮ *
5೪) ಬರಸಟಗನ ಭಕ್ತಿ ದಿಟವೆಂದು ನಂಬಲು ಬೇಡ
ಈ ವಚನ ಈತನದು
ಎ) ಮೋಳಿಗೆ ಮಾರಯ್ಯ
ಬಿ) ಅಂಬಿಗರ ಚೌಡಯ್ಯ
ಸಿ) ಡೋಹರ ಕಕ್ಕಯ್ಯ
ಡಿ) ಜೇಡರ ದಾಸಿಮಯ್ಯ *
5೫) ಮಾತೆಂಬುದು ಜೋತಿರ್ಲಿಂಗ
ಸ್ವರವೆಂಬುದು ಪರತತ್ವ ಈ ವಚನ ಈತನದು
ಎ) ಬಸವಣ್ಣ
ಬಿ) ಚೆನ್ನಬಸವಣ್ಣ
ಸಿ) ಅಲ್ಲ್ಮಪ್ರಭು *
ಡಿ) ಸಿದ್ಧರಾಮ
5೬) ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದು;ಖ
ನೋಡಾ ಈ ವಚನದ ಕರ್ತೃ
ಎ) ಚೆನ್ನಬಸವಣ್ಣ
ಬಿ) ಅಕ್ಕಮಾಹಾದೇವಿ
ಸಿ) ನೀಲಾಂಭಿಕೆ
ಡಿ) ಅಲ್ಲಮಪ್ರಭು *
5೭) ರಾಮನಾಥ ಎಂಬ ಅಂಕಿತ ಈ ವಚನಕಾರದ್ದು
ಎ) ಸಿದ್ಧರಾಮ
ಬಿ) ಅಲ್ಲಮಪ್ರಭು
ಸಿ) ಅಂಬಿಗರ ಚೌಡಯ್ಯ
ಡಿ) ಜೇಡರ ದಾಸಿಮಯ್ಯ *
5೮) ಮೋಳಿಗೆ ಮಾರಯ್ಯನ ವಚನಗಳ ಅಂಕಿತ
ಎ) ನಿಷ್ಕಳಂಕ ಮಲ್ಲಿಕಾರ್ಜುನ *
ಬಿ) ಅಕಳಂಕ ಮಲ್ಲಿಕಾರ್ಜುನ
ಸಿ) ಚೆನ್ನಮಲ್ಲಿಕಾರ್ಜುನ
ಡಿ) ಶ್ರೀಶೈಲ ಮಲ್ಲಿಕಾರ್ಜುನ
5೯) ಅಂಬಿಗರ ಚೌಡಯ್ಯನ ವಚನಗಳ ಅಂಕಿತ
ಎ) ಗುಹೇಶ್ವರ
ಬಿ) ಗೊಗ್ಗೇಶ್ವರ
ಸಿ) ಅಂಬಿಗರ ಚೌಡಯ್ಯ *
ಡಿ) ಬಹುರೂಪಿ ಚೌಡಯ್ಯ
6೦) ನಿಜಾತ್ಮರಾಮ ರಾಮ ಎನ್ನುವ
ಅಂಕಿತವುಳ್ಳ ವಚನಕಾರ
ಎ) ಮಾದರ ಚೆನ್ನಯ್ಯ *
ಬಿ) ಮಾದರ ಹರಳಯ್ಯ
ಸಿ) ಢಕ್ಕೆಯ ಬೊಮ್ಮಣ್ಣ
ಡಿ) ಡೊಹರ ಕಕ್ಕಯ್ಯ
6೧) ಹದಿಮೂರನೆಯ ಶತಮಾನದಲ್ಲಿ ರಚಿತವಾದ
ಪ್ರಸಿದ್ಧ ವ್ಯಾಕರಣ ಗ್ರಂಥ
ಎ) ಕರ್ನಾಟಕ ಶಬ್ದಾನುಶಾಸನ
ಬಿ) ಕವಿರಾಜ ಮಾರ್ಗ
ಸಿ) ಶಬ್ದಮಣಿದರ್ಪಣ *
ಡಿ) ಭಾಷಾಭೂಷಣ
6೨) ವೃದ್ಧ ಮಹೇಶ್ವರ ಪ್ರಸಂಗವು ಹರಿಹರನ ಈ
ರಗಳೆಯಲ್ಲಿದೆ
ಎ) ಬಸವರಾಜದೇವರ ರಗಳೆ
ಬಿ) ಮಹಾದೇವಿ ಅಕ್ಕನ ರಗಳೆ
ಸಿ) ನಂಬಿಯಣ್ಣನ ರಗಳೆ
ಡಿ) ಕುಂಬಾರ ಗುಂಡಯ್ಯನ ರಗಳೆ *
6೩) ನಡೆವರೆಡವದೆ ಕುಳಿತವರೆಡವುವರೇ ಈ ಮಾತು
ಈ ಕವಿಯ ಕಾವ್ಯದಲ್ಲಿದೆ
ಎ) ಕುಮಾರವ್ಯಾಸ
ಬಿ) ರಾಘವಾಂಕ *
ಸಿ) ಕುಮಾರ ವಾಲ್ಮೀಕಿ
ಡಿ) ಚಾಮರಸ
6೪) ಹರಿಹರನ ಗಿರಿಜಾ ಕಲ್ಯಾಣವು ಈ ಸಾಹಿತ್ಯ
ಪ್ರಕಾರದ ಕೃತಿ
ಎ) ಚಂಪೂ *
ಬಿ) ಸಾಂಗತ್ಯ
ಸಿ) ರಗಳೆ
ಡಿ) ಷಟ್ಪದಿ
6೫) ಕಿಟ್ಟಲ್ ಸಂಪಾದಿಸಿದುದು
ಎ) ಬಸವಣ್ಣನವರ ವಚನಗಳು
ಬಿ) ಜೈಮಿನಿ ಭಾರತ
ಸಿ) ಶಬ್ದಮಣಿ ದರ್ಪಣ *
ಡಿ) ಧರ್ಮಾಮೃತಂ
6೬) ಕಾಳಿದಾಸನ ಕುಮಾರಸಂಭವದ
ಪ್ರಭಾವವಿರುವ ಕೃತಿ
ಎ) ಗಿರಿಜಾ ಕಲ್ಯಾಣ *
ಬಿ) ಕಾದಂಬರಿ
ಸಿ) ಜಗನ್ನಾಥ ವಿಜಯ
ಡಿ) ಗದುಗಿನ ಭಾರತ
67) ಯಶೋಧರ ಚರಿತೆ ಅನಂತನಾಥ ಪುರಾಣ
ಕೃತಿಗಳನ್ನು ಬರೆದ ಕವಿ
ಎ) ನಾಗಚಂದ್ರ
ಬಿ) ಜನ್ನ *
ಸಿ) ರನ್ನ
ಡಿ) ಪೊನ್ನ
68) ಪೊಲ್ಲಮೆಯೇ ಲೇಸು ನಲ್ಲರ ಮೆಯ್ಯೊಳ್
ಉಲೇಖವಿರುವ ಕೃತಿ
ಎ) ಲೀಲಾವತೀ ಪ್ರಬಂಧಂ
ಬಿ) ಸಮ್ಯಕ್ವಕೌಮುದಿ
ಸಿ) ಯಶೋಧರ ಚರಿತೆ *
ಡಿ) ಸಮಯ ಪರೀಕ್ಷೆ
69) ಕನ್ನಡಮೆನಿಪ್ಪ ನಾಡು ಚೆಲ್ವಾಯ್ತು ಎಂಬ
ಉಲ್ಲೇ಼ಖವಿರುವ ಕೃತಿ
ಎ) ಕವಿರಾಜಮಾರ್ಗ
ಬಿ) ಆದಿಪುರಾಣ
ಸಿ) ಸಾಹಸ ಭೀಮ ವಿಜಯ
ಡಿ) ಕಬ್ಬಿಗರ ಕಾವ *
70) ಇದು ಹರಿಹರನು ರಚಿಸಿದ ಶತಕ ಕೃತಿ
ಎ) ಚಂದ್ರಚೂಡಾಮಣಿ ಶತಕ
ಬಿ) ಶಂಕರ ಶತಕ
ಸಿ) ರಕ್ಷಾಶತಕ *
ಡಿ) ಸೋಮೆಶ್ವರ ಶತಕ
71) ಶಬ್ದಮಣಿದರ್ಪಣವನ್ನು ಮೊಟ್ಟಮೊದಲಿಗೆ
ಸಂಪಾದಿಸಿ ಪ್ರಕಟಿಸಿದ ಆಂಗ್ಲ ಪಂಡಿತ
ಎ) ಎಫ್ ಕಿಟ್ಟಲ್
ಬಿ) ಜೆ ಗ್ಯಾರೆಟ್ *
ಸಿ) ಕ್ಯಾಂಬೆಲ್
ಡಿ) ರೀವ್
72) ಕಟ್ಟಿಯುಮೇನೊ? ಮಾಲೆಗಾರನ
ಪೊಸಬಾಸಿಗಂ ಮುಡಿವ ಭೋಗಿಗಳಲ್ಲದೆ
ಬಾಡಿ ಪೋಗದೇ! ಈ ಉಕ್ತಿ ಇರುವ ಕೃತಿ
ಎ) ಪಂಪ ಭಾರತ
ಬಿ) ಲೀಲಾವತಿ ಪ್ರಬಂಧ
ಸಿ) ಅನಂತನಾಥ ಪುರಾಣ*
ಡಿ) ಅಜಿತತೀರ್ಥಂಕರ ಪುರಾಣ
73) ಭಾಮಿನಿ ಷಟ್ಪದಿಯ ಮೊದಲ ಕನ್ನಡ ಗ್ರಂಥ
ಎ) ಬಸವಪುರಾಣ *
ಬಿ) ಸಿಂಗರಾಜ ಪುರಾಣ
ಸಿ) ಸಿದ್ಧರಾಮ ಪುರಾಣ
ಡಿ) ಪದ್ಮಪುರಾಣ
74) ಶೃಂಗಾರ ರಸವೊಂದನ್ನೇ ನಿರೊಪಿಸುವ
ಕನ್ನಡ ಕಾವ್ಯ
ಎ) ಆಂಡಯ್ಯನ ಕಬ್ಬಿಗರ ಕಾವ
ಬಿ) ನೇಮಿಚಂದ್ರನ ಲೀಲಾವತಿ ಪ್ರಬಂದ *
ಸಿ) ಚಂದ್ರರಾಜನ ಮದನ ತಿಲಕ
ಡಿ) ಅಪ್ಪಯ್ಯ ದೀಕ್ಷಿತರ ಕಾವಲಯಾನಂದ
75) ಸ್ತ್ರೀರೂಪಮೆ ರೂಪಂ ಶೃಂಗಾರಮೆ ರಸಂ
ಎಂಬುದು ಇವರ ಅಭಿಪ್ರಾಯ
ಎ) ಹರಿಹರ
ಬಿ) ರಾಘವಾಂಕ
ಸಿ) ಭೀಮಕವಿ
ಡಿ) ನೇಮಿಚಂದ್ರ *
76) ಕನ್ನಡದ ಮೊದಲ ಸಂಕಲನ ಗ್ರಂಥ ಸೂಕ್ತಿ
ಸುಧಾರ್ಣವದ ಕರ್ತೃ
ಎ) ವೃತ್ತವಿಲಾಸ
ಬಿ) ಕಮಲಭವ
ಸಿ) ಮಲ್ಲಿಕಾರ್ಜುನ *
ಡಿ) ಆಂಡಯ್ಯ
77) ನಿಂದರೆದಂಡಾಧೀಶಂ ಕುಳ್ಳಿರೆಮಂತ್ರಿ
ತೊಡಂಕೆಕವಿ ಈತ
ಎ) ಬಂಧುವರ್ಮ
ಬಿ) ಚಾವುಂಡರಾಯ
ಸಿ) ಜನ್ನ *
ಡಿ) ಪಾರ್ಶ್ವ ಪಂಡಿತ
78)ಭೀಮಕವಿಯ ಬಸವ ಪುರಾಣವು
ಎ) ಚರಿತ್ರ ಕಾವ್ಯ
ಬಿ) ಸಾಮಾಜಿಕ ಕಾವ್ಯ
ಸಿ) ಪುರಾಣಕಾವ್ಯ
ಡಿ) ಇತಿಹಾಸ ಕಾವ್ಯ *
79) ಕನಕದಾಸರ ರಚಿಸಿದ ಕೃತಿ
ಎ) ಹರಿಭಕ್ತಿ ಸಾರ *
ಬಿ) ಜೈಮಿನಿ ಭಾರತ
ಸಿ) ತೊರವೆ ರಾಮಾಯಣ
ಡಿ) ಜಗನ್ನಾಥ ವಿಜಯ
80) ಪದ್ಯಂ ವಧ್ಯಂ ಗದ್ಯಂ ಹೃದ್ಯಂ ಈ
ಮಾತು ಇರುವ ಕೃತಿ
ಎ) ರಾಮಾಶ್ವಮೇಧ *
ಬಿ) ಅದ್ಭುತ ರಾಮಾಯಣ
ಸಿ) ಚಾವುಂಡರಾಯ ಪುರಾಣ
ಡಿ) ಮುದ್ರಾಮಂಜೂಷ
81) ಮುಂಡಿಗೆಗಳು ಎಂಬ ವಿಶಿಷ್ಟ ಪ್ರಕಾರದಲ್ಲಿ
ಬರೆದ ಕವಿ ಮತ್ತು ಕೀರ್ತನೆಕಾರ
ಎ) ಪುರಂದರದಾಸರು
ಬಿ) ಕನಕದಾಸರು *
ಸಿ) ತ್ಯಾಗರಾಜರು
ಡಿ) ಜಗನ್ನಾಥದಾಸರು
82) ಉಪಮಾಲೋಲ ಎಂದು ಪ್ರಸಿದ್ಧನಾದ ಕವಿ
ಎ) ಕುಮಾರವ್ಯಾಸ
ಬಿ) ಲಕ್ಷ್ಮೀಶ *
ಸಿ) ರಾಘವಾಂಕ
ಡಿ) ಹರಿಹರ
83) ಜೈಮಿನಿ ಭಾರತದ ಕರ್ತೃ
ಎ) ಭರತೇಶ
ಬಿ) ಲಕ್ಷ್ಮೀಶ *
ಸಿ) ತಿರುಮಲಾರ್ಯ
ಡಿ) ಷಡಕ್ಷರ ದೇವ
84) ಅದ್ಭುತ ರಾಮಾಯಣ ಇದು ಮುದ್ದಣ ಕವಿಯ
ಎ) ಷಟ್ಪದಿ ಕಾವ್ಯ
ಬಿ) ಗದ್ಯಗ್ರಂಥ *
ಸಿ) ಯಕ್ಷಗಾನ
ಡಿ) ಚಂಪೂಗ್ರಂಥ
85) ಸೊಬಗಿನ ಸೋನೆ ಈ ಸಾಹಿತ್ಯರೂಪದಲ್ಲಿದೆ
ಎ) ಕಿರ್ತನೆ
ಬಿ) ಶತಕ
ಸಿ) ಷಟ್ಪದಿ
ಡಿ) ಸಾಂಗತ್ಯ *
೮6) ಕನ್ನಡದ ಮೊತ್ತಮೊದಲ ಸಾಂಗತ್ಯ ಕೃತಿ
ಎ) ಸೊಬಗಿನ ಸೋನೆ *
ಬಿ) ಭರತೇಶ ವೈಭವ
ಸಿ) ಕುಮಾರರಾಮ ಸಾಂಗತ್ಯ
ಡಿ) ನೇಮಿಜಿನೇಶ ಸಂಗತಿ
87) ಕನ್ನಡಂ ಕತ್ತುರಿಯಲ್ತೆ ಎಂದು ಹೇಳಿದವರು
ಎ) ಬಿ ಎಂ ಶ್ರೀ
ಬಿ) ಜಿ ಪಿ ರಾಜರತ್ನಂ
ಸಿ) ಮುದ್ದಣ *
ಡಿ) ಆಲೂರು ವೆಂಕಟರಾಯ
88) ಉಡುಪಿಯನ್ನು ಕಾರ್ಯಕ್ಷೇತ್ರವನ್ನಾಗಿ
ಮಾಡಿಕೊಂಡ ದಾಸರು
ಎ) ಶ್ರೀಪಾದರಾಯರು
ಬಿ) ವಾದಿರಾಜ
ಸಿ) ಪುರಂದರದಾಸರು *
ಡಿ) ಜಗನ್ನಾಥದಾಸರು
89) ಚಾಮರಸ ಕವಿಯ ಪ್ರಭುಲಿಂಗಲೀಲೆ ಯು ಈ
ಷಟ್ಪದಿಯಲ್ಲಿ ರಚಿತವಾಗಿದೆ
ಎ) ಭಾಮಿನಿ *
ಬಿ) ಪರಿವರ್ಧಿನಿ
ಸಿ) ವಾರ್ಧಕ
ಡಿ) ಭೋಗ
90) ಲವಕುಶರ ಕಾಳಗದ ಕತೆಯು ಈ ಕಾವ್ಯದಲ್ಲಿ
ಬರುತ್ತದೆ
ಎ) ಜೈಮಿನಿ ಭಾರತ *
ಬಿ) ಕುಮಾರವ್ಯಾಸ ಭಾರತ
ಸಿ) ಪಂಪಭಾರತ
ಡಿ) ರಾಮಚರಿತ ಪುರಾಣ
91) ಸರಸ ಸಾಹಿತ್ಯದ ವರದೇವತೆ ಈ ಬಿರುದಿನ
ಕವಿಯಿತ್ರಿ ಯಾರು ?
ಎ) ಕಂತಿ
ಬಿ) ಅಕ್ಕಮಹಾದೇವಿ
ಸಿ) ಸಂಚಿಯ ಹೊನ್ನಮ್ಮ *
ಡಿ) ಹೆಳವನಕಟ್ಟೆ ಗಿರಿಯಮ್ಮ
92) ಈ ಕೆಳಗಿನವುಗಳಲ್ಲಿ ಯಾವುದು ಮುದ್ದಣ್ಣನ
ಕೃತಿಯಲ್ಲ
ಎ) ರಾಮಕಥಾವತಾರ *
ಬಿ) ರಾಮಪಟ್ಟಾಭಿಷೇಕ
ಸಿ) ರಾಮಾಶ್ವಮೇಧ
ಡಿ) ಅದ್ಭುತ ರಾಮಾಯಣ
93) ಹಯವದನ ಅಂಕಿತನಾಮದಿಂದ
ಕೀರ್ತನೆಗಳನ್ನು ರಚಿಸಿದವರು
ಎ) ವ್ಯಾಸರಾಯ
ಬಿ) ಶ್ರೀಪಾದರಾಜ
ಸಿ) ವಾದಿರಾಜ *
ಡಿ) ನರಹರಿತೀರ್ಥ
94) ಅಂಬಿಗ ನಾ ನಿನ್ನ ನಂಬಿದೆ,ಅನುಗಾಲವು
ಚಿಂತೆ ಜೀವಕೆ, ಅಪರಾಧಿನಾನಲ್ಲ
ಅಪರಾಧವೆನಗಿಲ್ಲ ಈ ಕೀರ್ತನೆಗಳ ಕರ್ತೃ
ಎ) ಜಗನ್ನಾಥ ದಾಸ
ಬಿ) ಪುರಂದರದಾಸ *
ಸಿ) ವಾದಿರಾಜ
ಡಿ) ಕನಕದಾಸ
95) ಮೊಟ್ಟಮೊದಲ ಹರಿದಾಸ ಕೀರ್ತನೆ
ಎನ್ನಲಾದ ಎಂತು ಮರುಳಾದೆ ನಾ ನೆಂತು
ಮರುಳಾದೆ ರಚನೆಯ ಕರ್ತೃ
ಎ) ಶ್ರೀಪಾದರಾಜ
ಬಿ) ನರಹರಿತೀರ್ಥ *
ಸಿ) ಕನಕದಾಸ
ಡಿ) ಪುರಂದರದಾಸ
96) ಕುಮಾರವ್ಯಾಸ ಭಾರತದ ನಿಜವಾದ ಹೆಸರು
ಎ) ಮಹಾಭಾರತ
ಬಿ) ಸ್ಂಪೂರ್ಣಭಾರತ
ಸಿ) ದಶಪರ್ವಭಾರತ
ಡಿ)ಕರ್ನಾಟಕ ಭಾರತ ಕಥಾಮಂಜರಿ *
97) ಇದು ರತ್ನಾಕರವರ್ಣಿಯ ರಚನೆಯಲ್ಲ
ಎ) ತ್ರಿಲೋಕ ಶತಕ
ಬಿ) ಅಪರಾಜಿತೇಶ್ವರ ಶತಕ
ಸಿ) ಶತಕತ್ರಯ *
ಡಿ) ರತ್ನಾಕರಧೀಶ್ವರ ಶತಕ
98) ಮುದ್ದಣ -ಮನೋರಮೆ ದಂಪತಿಗಳ ಸರಸ
ಸಂಭಾಷಣೆಯು
ಚಿತ್ರಿತವಾಗಿರುವುದು ಈ ಕೃತಿಯಲ್ಲಿ
ಎ) ಅದ್ಭುತ ರಾಮಾಯಣ
ಬಿ) ರಾಮಪಟ್ಟಾಭಿಷೇಕ
ಸಿ) ರಾಮಾಶ್ವಮೇಧ *
ಡಿ) ಗೋದಾವರಿ
99) ದಾಸ ಸಾಹಿತ್ಯದ ಪಿತಾಮಹ
ಎ) ಪುರಂದರದಾಸ
ಬಿ) ಕನಕದಾಸ
ಸಿ) ನರಹರಿತೀರ್ಥ *
ಡಿ) ವ್ಯಾಸರಾಯ
100) ಭಾಮಿನಿ ಷಟ್ಪದಿಗೆ ಕುಮಾರವ್ಯಾಸ ರಗಳೆಗೆ
ಹರಿಹರನಾದರೆ ಸಾಂಗತ್ಯಕ್ಕೆ
ಎ) ಚಾಮರಸ
ಬಿ) ಲಕ್ಷೀಶ
ಸಿ) ರತ್ನಾಕರವರ್ಣಿ *
ಡಿ) ನಿಜಗುಣ ಶಿವಯೋಗ

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು