ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

24.10.16

TET - ಟಿಇಟಿಗೆ ಇಂದೇ ಸಿದ್ಧತೆ ಆರಂಭಿಸಿ




ಟಿಇಟಿಗೆ ಇಂದೇ ಸಿದ್ಧತೆ ಆರಂಭಿಸಿ


ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಮತ್ತು ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆ ಕುರಿತು ಮಾಹಿತಿ ಇಲ್ಲಿದೆ. 

ಯಾವ ಯಾವ ಪರೀಕ್ಷೆಯ ಪಠ್ಯವಿಷಯ ಏನಾಗಿರುತ್ತದೆ, ಯಾವ ವಿಷಯಕ್ಕೆ ಎಷ್ಟು ಅಂಕ ನಿಗದಿಯಾಗಿದೆ ಎಂಬುದನ್ನು ನೋಡಿಕೊಳ್ಳಿ. ಇದಕ್ಕೆ ಸರಿಯಾಗಿ ವೇಳಾಪಟ್ಟಿ ಸಿದ್ಧಪಡಿಸಿ ಅಭ್ಯಾಸ ಆರಂಭಿಸಿ. ಈ ಪರೀಕ್ಷೆಯು ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.

 ಹೀಗಾಗಿ ಪ್ರಶ್ನೆಗಳಿಗೆ ಉತ್ತರಿಸಲು ಸ್ಪಷ್ಟ ಗ್ರಹಿಕೆ ಹೊಂದುವುದು ಅಗತ್ಯ. ಆದ್ದರಿಂದ ಯಾವುದೇ ಗೊಂದಲವಾಗದಂತೆ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಬೇಕು. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ, ಭಿನ್ನ ರೀತಿಯಲ್ಲಿ ಪ್ರಶ್ನೆ ಕೇಳಿದರೂ ಉತ್ತರಿಸುವ ಸಾಮರ್ಥ್ಯ‌ವನ್ನು ಬೆಳೆಸಿಕೊಂಡಿರಬೇಕು. ಅಭ್ಯಸಿಸುವಾಗ ಮುಖ್ಯವಾಗಿ ಈ ಎರಡು ಪಾಯಿಂಟ್‌ನತ್ತ ಹೆಚ್ಚು ಗಮನ ನೀಡಿ. ಮೊದಲಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲಾ ಪಠ್ಯಪುಸ್ತಕಗಳನ್ನು ಸಮಗ್ರವಾಗಿ ಅಭ್ಯಾಸ ಮಾಡಿ.

ಇಲ್ಲಿರುವ ಪ್ರಮುಖ ವಿಷಯಗಳ (ಉದಾ: ಸ್ವಾತಂತ್ರ್ಯ ಹೋರಾಟ) ಬಗ್ಗೆ ಹೆಚ್ಚಿನ ಓದಿಗೆ ಸೂಕ್ತ ಪುಸ್ತಕ ಆಯ್ದುಕೊಳ್ಳಿ. ಬಹುತೇಕವಾಗಿ ಸಿಟಿಇಟಿ ಮಾದರಿಯಲ್ಲಿಯೇ (ಶೇ.80ರಷ್ಟು) ಈ ಪರೀಕ್ಷೆ ನಡೆಯಲಿರುವುದರಿಂದ ಸಿಟಿಇಟಿಯ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಮಾದರಿಯಾಗಿಟ್ಟುಕೊಂಡು ಅಭ್ಯಾಸ ನಡೆಸಬಹುದು.

ಈ ಪರೀಕ್ಷೆಗೆ ಸಂಬಂಧಿಸಿದ ನಿಮ್ಮ ಗೊಂದಲ ದೂರ ಮಾಡುವ ಒಂದಿಷ್ಟು ಪ್ರಶ್ನೋತ್ತರ ಇಲ್ಲಿದೆ; 

*ಯಾರು ಈ ಪರೀಕ್ಷೆ ಬರೆಯಬಹುದು? ಟಿಇಟಿ ಪರೀಕ್ಷೆಯು ರಾಜ್ಯಮಟ್ಟದ್ದಾಗಿದ್ದು ರಾಜ್ಯದ ಪಠ್ಯಕ್ರಮದಲ್ಲಿ ಎನ್‌ಸಿಟಿಇ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಹೀಗಾಗಿ ಇತರ ರಾಜ್ಯದ ವಿದ್ಯಾರ್ಥಿಗಳು ಸಹ ಪರೀಕ್ಷೆ ಬರೆಯಬಹುದಾಗಿದೆ. ಸಿ.ಪಿ.ಇ.ಡಿ, ಬಿ.ಪಿ.ಇ.ಡಿ ಅಥವಾ ದೈಹಿಕ ಶಿಕ್ಷಕರಾಗಲು ಅರ್ಹತೆ ಹೊಂದಿದ ಅಭ್ಯರ್ಥಿಗಳು ಟಿ.ಇ.ಟಿ ಪರೀಕ್ಷೆ ಬರೆಯುವುದು ಕಡ್ಡಾಯವಿಲ್ಲ.

 ಡಿ.ಇಡಿಯನ್ನು ಹೊಂದಿರುವ ಪದವೀಧರರು ಮತ್ತು ಪದವಿ ಮತ್ತು ಬಿ.ಇಡಿ ಹೊಂದಿರುವ ಅಭ್ಯರ್ಥಿಗಳಿಗೆ ಪಿಯುಸಿಯಲ್ಲಿ ಶೇ. 50 ಕಡ್ಡಾಯವಿಲ್ಲ, ಆದರೆ ಪದವಿ ಮತ್ತು ಬಿ.ಇಡಿ ಹೊಂದಿರುವವರು ಪದವಿಯಲ್ಲಿ ಶೇ. 50 ಅಂಕಗಳಿಸುವುದು ಕಡ್ಡಾಯ. ಎನ್‌ಸಿಟಿಯು ನಿಗದಿಪಡಿಸಿರುವ ವಿವಿಧ ಹಂತದ ಶಿಕ್ಷಕರಾಗಲು ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯಲ್ಲಿ 1ರಿಂದ 5ನೇ ತರಗತಿಗೆ ಶಿಕ್ಷಕರಾಗಲು, ಪಿಯುಸಿ-ಡಿ.ಇಡಿ, 6ರಿಂದ 8ನೇ ತರಗತಿಗೆ ಶಿಕ್ಷಕರಾಗಲು ಪದವಿ ಮತ್ತು ಡಿ.ಇಡಿ- ಪದವಿ ಮತ್ತು ಬಿ.ಇಡಿ ಮತ್ತು 9,10,11,12ನೇ ತರಗತಿಗೆ ಸ್ನಾತಕೋತ್ತರ ಪದವಿ ಮತ್ತು ಬಿ.ಇಡಿ ಎಂದು ನಿಗದಿಪಡಿಸಿದೆ. ಆದ್ದರಿಂದ ವಿದ್ಯಾರ್ಹತೆ ಹೊಂದಿರುವ ಯಾರೂ ನೇಮಕಾತಿಗೆ ವಂಚಿತರಾಗುವುದಿಲ್ಲ.

ಹಿಂದಿ ಮಾಧ್ಯಮದಲ್ಲಿ ಬಿ.ಇಡಿ ಹೊಂದಿರುವವರೂ ಸಹ 6-8ನೇ ತರಗತಿಯವರೆಗೆ ಶಿಕ್ಷಕರಾಗಲು ಟಿಇಟಿ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. *

ಟಿಇಟಿ ಬರೆಯಲು ಗರಿಷ್ಠ ವಯೋಮಿತಿ ಎಷ್ಟು?

 ವಯೋಮಿತಿ ಇರುವುದಿಲ್ಲ. ಶೈಕ್ಷಣಿಕ ಅರ್ಹತೆ ಹೊಂದಿರುವ ಯಾವುದೇ ವಯಸ್ಸಿನವರು ಈ ಪರೀಕ್ಷೆ ತೆಗೆದುಕೊಳ್ಳಬಹುದು.

 * ಎಷ್ಟು ಬಾರಿ ಟಿಇಟಿ ಬರೆಯಬಹುದು?

ಒಬ್ಬರು ಎಷ್ಟು ಬಾರಿ ಬೇಕಾದರೂ ಈ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಬಹುದು. *

ಟಿಇಟಿಯಲ್ಲಿ ತೇರ್ಗಡೆಯಾದರೆ ನೌಕರಿ ಸಿಗುತ್ತದೆಯೇ?

ಇದು ಶಿಕ್ಷಕರ ಅರ್ಹತಾ ಪರೀಕ್ಷೆಯೇ ಹೊರತು ನೇಮಕಾತಿ ಪರೀಕ್ಷೆಯಾಗಿರುವುದಿಲ್ಲ. ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ತೆಗೆದುಕೊಂಡ ಮಾತ್ರಕ್ಕೆ ಅಭ್ಯರ್ಥಿಗಳು ಶಿಕ್ಷಕರ ನೇಮಕಾತಿಗಾಗಿ ಯಾವುದೇ ರೀತಿಯ ಹಕ್ಕನ್ನು ಚಲಾಯಿಸುವಂತಿಲ್ಲ. *

ಎಷ್ಟು ವರ್ಷಗಳಿಗೊಮ್ಮೆ ಟಿಇಟಿ ನಡೆಯುತ್ತದೆ?

ಪ್ರತಿ ವರ್ಷ ರಾಜ್ಯದಲ್ಲಿ ಕೆಎಆರ್‌ ಟಿಇಟಿ ನಡೆಯಲಿದೆ. *

 ಟಿಇಟಿಯ ಪ್ರಮಾಣ ಪತ್ರವನ್ನು ಎಷ್ಟು ವರ್ಷ ಬಳಸಬಹುದು?

 ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ನೀಡಲಾಗುವ ಪ್ರಮಾಣ ಪತ್ರಕ್ಕೆ ಜೀವಿತಾವಧಿ ವರ್ಷಗಳ ಕಾಲ ಮಾನ್ಯತೆ ಇರಲಿದೆ.

 ಈ ಅವಧಿಯಲ್ಲಿ ನಡೆಯುವ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಈ ಪ್ರಮಾಣ ಪತ್ರಹೊಂದಿದವರು ಅರ್ಹರಾಗಿರುತ್ತಾರೆ.

 ಹೈದರಾಬಾದ್‌-ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಈ ಪರೀಕ್ಷೆಯಲ್ಲಿ ರಿಯಾಯಿತಿ ಏನಾದರೂ ಇರುತ್ತದೆಯೇ?

 ಖಂಡಿತವಾಗಿಯೂ ಇಲ್ಲ. ರಾಜ್ಯದ ಎಲ್ಲ ಭಾಗದ ಅಭ್ಯರ್ಥಿಗಳಿಗೂ ಒಂದೇ ಮಾನದಂಡವನ್ನು ಅನುಸರಿಸಲಾಗುತ್ತದೆ. 

* ಈ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಆನ್‌ಲೈನ್‌ನಲ್ಲಿ ಬರೆಯಬಹುದೇ? ಇಲ್ಲ, ಸದ್ಯಕ್ಕೆ ಈ ಅವಕಾಶ ನೀಡಲಾಗಿಲ್ಲ. ಪರೀಕ್ಷೆಯಲ್ಲಿ ಒಎಂಆರ್‌ ಶೀಟ್‌ನಲ್ಲಿ ಸರಿಯುತ್ತರವನ್ನು ಗುರುತಿಸಬೇಕು.ಅದನ್ನು ಸ್ಕ್ಯಾ‌ನ್‌ ಮಾಡಿ, ಪಡೆದಿರುವ ಅಂಕವನ್ನು ನಿರ್ಧರಿಸಲಾಗುತ್ತದೆ.

 * ಈ ಪರೀಕ್ಷೆ ನಡೆಸುವವರು ಯಾರು? 

ಸಾರ್ವಜನಿಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕದ ವಿಶೇಷಾಧಿಕಾರಿಗಳು ಈ ಪರೀಕ್ಷೆ ನಡೆಸಲಿದ್ದಾರೆ.

ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

 * ಆಫ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದೇ?
 ಇಲ್ಲ, ಇದಕ್ಕೆ ಅವಕಾಶ ನೀಡಲಾಗಿಲ್ಲ. ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಬೇಕು. ಪರೀಕ್ಷಾ ಶುಲ್ಕವನ್ನು ಬ್ಯಾಂಕ್‌ ಮೂಲಕವೇ ಪಾವತಿಸಬೇಕು. ಇತ್ತ ಗಮನಿಸಿ * ಈಗಾಗಲೇ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವವರೂ ಟಿಇಟಿ ಪರೀಕ್ಷೆ ತೆಗೆದುಕೊಂಡಿರಬಹುದು.

 ಅವರು ಗಮನಿಸಬೇಕಾದ ವಿಷಯವೆಂದರೆ, ತಮಗಿರುವ ಅನುಭವದಿಂದಲೇ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೇವೆ ಎಂಬ ವಿಶ್ವಾಸ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಈ ಪರೀಕ್ಷೆಯಲ್ಲಿ ಅನುಭವಕ್ಕಿಂತ ವಿಷಯ ಜ್ಞಾನ ಮುಖ್ಯ. * ಅಭ್ಯಾಸ ನಡೆಸುವಾಗಲೇ ಟೈಮ್‌ ಮ್ಯಾನೇಜ್‌ ಮಾಡುವುದನ್ನೂ ಕಲಿತುಕೊಳ್ಳಿ. ಏಕೆಂದರೆ ಐದು ವಿಷಯಗಳಿಗೆ ಸಂಬಂಧಿಸಿದ 150 ಪ್ರಶ್ನೆಗಳಿಗೆ ಕೇವಲ 90 ನಿಮಿಷಷಲ್ಲಿ ನೀವು ಉತ್ತರ ಗುರುತಿಸಬೇಕಾಗಿರುತ್ತದೆ. ಒಂದು ವಿಷಯಕ್ಕೆ ಸಿಗುವ ಸಮಯ ಕೇವಲ 18 ನಿಮಿಷ.


(ಸಂಗ್ರಹಿಸಲಾದ ಮಾಹಿತಿ)

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು