ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

7.2.17

ದಡಾರ, ರೆಬೆಲ್ಲೋ

💐💐 *ದಡಾರ, ರೆಬೆಲ್ಲೋ ಎಂದರೇನು?  ಅದಕ್ಕಿರುವ ಪರಿಹಾರವೇನು?  MR ಲಸಿಕೆ ಎಂದರೇನು? ಸಂಪೂರ್ಣ ಮಾಹಿತಿ*💐💐


💐 *ದಡಾರ ಎಂದರೇನು?*💐

► *ದಡಾರ ಒಂದು ಸಾಂಕ್ರಾಮಿಕ ರೋಗವಾಗಿದ್ದು ಪ್ಯಾರೊಮಿಕ್ಸ್ ಎಂಬ ವೈರಸ್ ಈ ರೋಗಕ್ಕೆ ಕಾರಣವಾಗಿದೆ. ಪಾರಾ ಮಿಕ್ಸೋ ಗುಂಪಿಗೆ ಸೇರಿದ " ಮೋರ್ಬಿಲಿ " ಎನ್ನುವ ವೈರಸ್ ಗಳಿಂದ ಉದ್ಭವಿಸುವ ದಡಾರವನ್ನು ವೈದ್ಯಕೀಯ ಪರಿಭಾಷೆಯಲ್ಲಿ ಮೀಸಲ್ಸ್ ಎಂದು ಕರೆಯುತ್ತಾರೆ.*
► *ಈ ಕಾಯಿಲೆ ಹೆಚ್ಚಾಗಿ ಮಕ್ಕಳನ್ನು ಕಾಡುತ್ತದೆ. ಅತ್ಯಂತ ಕ್ಷಿಪ್ರಗತಿಯಲ್ಲಿ ಸಾಂಕ್ರಾಮಿಕವಾಗಿ ಹರಡಿ ತೀವ್ರ ರೂಪವನ್ನು ತಾಳುವ ಈ ವ್ಯಾಧಿಯು, ಆರು ತಿಂಗಳ ಒಳಗಿನ ಹಸುಗೂಸುಗಳನ್ನು ಬಾಧಿಸದು. ಆದರೆ ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಪೀಡಿಸುವ ಈ ವ್ಯಾಧಿಯು ಬೇಸಗೆಯ ದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.*

💐 *ದಡಾರದ ಲಕ್ಷಣಗಳೇನು?*💐

► *ತೀವ್ರವಾದ ಶ್ವಾಸಕೋಶದ ಸೋಂಕು*
► *ಜ್ವರ, ಕೆಮ್ಮು, ನೀರಿನಿಂದ ಕೂಡಿದ ಕಣ್ಣು ಮತ್ತು ಸಿಂಬಳ ಸುರಿಯುವುದು*
► *ಬಾಯಿಯಲ್ಲಿ ಕೆಂಪಾದ ತಿಳಿನೀಲಿ ತುದಿಯ ಗುಳ್ಳೆಗಳಾಗುತ್ತವೆ*
► *ದೇಹದ ಪೂರ್ತಿ ಚರ್ಮದ ಮೇಲೆ ಚಿಕ್ಕಚಿಕ್ಕ ಗುಳ್ಳೆಗಳು*
► *ಪ್ರಾಥಮಿಕ ಹಂತದಲ್ಲಿ ಜ್ವರ, ಮೈ ಕೈ ನೋವು*
► *ಮೂಗಿನಿಂದ ನೀರಿಳಿಯುವುದು,*
► *ಕರ್ಕಶವಾದ ಸದ್ದಿನೊಂದಿಗೆ ಕೆಮ್ಮು*
► *ಕಣ್ಣಾಲಿಗಳ ಉರಿಯೂತ ಹಾಗೂ ಬೆಳಕನ್ನು ನೋಡಲಾಗದಂತಹ ತೊಂದರೆಗಳು ಕಾಣಿಸಿಕೊಳ್ಳುತ್ತವೆ.*
► *ಕೆಲ ಮಕ್ಕಳಲ್ಲಿ ಜ್ವರ ಮತ್ತು ಕೆಮ್ಮುಗಳು ಕ್ಷಿಪ್ರಗತಿಯಲ್ಲಿ ಉಲ್ಬಣಿಸುವುದುಂಟು. ಮುಂದಿನ ಒಂದೆರಡು ದಿನಗಳಲ್ಲೇ ಮಗುವಿನ ಬಾಯಿಯ ಒಳಭಾಗದಲ್ಲಿ "ಕಾಪ್ಲಿಕ್ಸ್ ಸ್ಪಾಟ್" ಎಂದು ಕರೆಯಲ್ಪಡುವ, ಮಧ್ಯದಲ್ಲಿ ಬಿಳಿಯ ಚುಕ್ಕೆಯಿರುವ ಕೆಂಪು ಗುಳ್ಳೆಗಳು ಗುಂಪು ಗುಂಪಾಗಿ ಕಾಣಿಸಿಕೊಳ್ಳುತ್ತವೆ.*

► *ಮುಂದಿನ 3 ರಿಂದ 5 ದಿನಗಳ ಬಳಿಕ ಮಗುವಿನ ಮುಖ- ಕುತ್ತಿಗೆಗಳ ಮೇಲೆ ಪ್ರತ್ಯಕ್ಷವಾಗುವ "ಬೆವರುಸಾಲೆ"ಯಂತಹ ಅಸಂಖ್ಯ ಗುಳ್ಳೆಗಳು ಕ್ರಮೇಣ ಕೈ, ಎದೆ, ಹೊಟ್ಟೆ,ತೊಡೆ ಮತ್ತು ಕಾಲುಗಳ ಮೇಲೆ ಹರಡುತ್ತವೆ. ಈ ಹಂತದಲ್ಲಿ ಕಾಪ್ಲಿಕ್ಸ್ ಸ್ಪಾಟ್ ಗಳು ಮಾಯವಾಗುತ್ತವೆ. ಶರೀರದಾದ್ಯಂತ ಮೂಡಿರುವ ಗುಳ್ಳೆಗಳ ಸಂಖ್ಯೆ ಅತಿಯಾಗಿದ್ದಲ್ಲಿ ವ್ಯಾಧಿಯ ತೀವ್ರತೆಯೂ ಅತಿಯಾಗಿರುತ್ತದೆ. ಸಾಮಾನ್ಯವಾಗಿ ಈ ಗುಳ್ಳೆಗಳು ಮುಂದಿನ ಕೆಲವೇ ದಿನಗಳಲ್ಲಿ ಮಾಯವಾಗಲು ಆರಂಭಿಸುತ್ತವೆ.*

💐 *ದಡಾರ ಸಾಮಾನ್ಯವಾಗಿ ಯಾವ ವಯೋಮಿತಿಯಲ್ಲಿ ಕಂಡುಬರುತ್ತದೆ?*💐


► *ಐದರಿಂದ ಎಂಟು ವರ್ಷ ವಯಸ್ಸಿನ ಮಕ್ಕಳನ್ನು ಹೆಚ್ಚಾಗಿ ಕಂಡುಬರುತ್ತದೆ.*
*ಕೆಲವೊಂದು ಉದಾಹರಣೆಗಳಲ್ಲಿ ವಯಸ್ಕರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಆದರೆ ಇದು ಹೆಚ್ಚಾಗಿ ಮಕ್ಕಳಲ್ಲಿ* *ಕಂಡುಬರುತ್ತದೆ.ದಡಾರ ಸಾಮಾನ್ಯವಾಗಿ 15 ವರ್ಷದೊಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ.*

💐 *ನಿಮಗೆ ತಿಳಿದಿರಲಿ*💐

► *ದಡಾರ ರೋಗಪೀಡಿತ ಮಕ್ಕಳ ಜೊಲ್ಲಿನ ಕಣಗಳಿಂದ ಹಾಗೂ ರೋಗಿಯೊಂದಿಗೆ ನೇರ ಸಂಪರ್ಕವಿರುವ ವ್ಯಕ್ತಿಗಳಿಂದ ಈ ವೈರಸ್ ಇತರರಿಗೆ ಹರಡಬಲ್ಲದು. ಆರೋಗ್ಯವಂತರ ಶರೀರದಲ್ಲಿ ಪ್ರವೇಶ ಗಳಿಸಿದ ಈ  ವೈರಸ್, 7 ರಿಂದ 14ದಿನಗಳಲ್ಲಿ ದಡಾರದ ಲಕ್ಷಣಗಳನ್ನು ತೋರುವುದು.*

► *ಶರೀರದಾದ್ಯಂತ ಉದ್ಭವಿಸಿದ ಗುಳ್ಳೆಗಳು ಸ್ಪಷ್ಟವಾಗಿ ಗೋಚರಿಸುವ ಸಂದರ್ಭದಲ್ಲಿ, ಮಕ್ಕಳಲ್ಲಿ ತೀವ್ರ ಜ್ವರ ಹಾಗೂ ಕೆಮ್ಮಿನೊಂದಿಗೆ ದೇಹದ ಎಲ್ಲಾ ಭಾಗಗಳಲ್ಲೂ ಅಸಹನೀಯ ತುರಿಕೆ ಬಾಧಿಸುತ್ತದೆ. ಅಂತಿಮ ಹಂತದಲ್ಲಿ ಜ್ವರ ಹಾಗೂ ಕೆಮ್ಮುಗಳು ಕಡಿಮೆಯಾಗುತ್ತಾ ಬಂದಂತೆಯೇ, ಶರೀರದ ಮೇಲೆ ಮೂಡಿದ ಗುಳ್ಳೆಗಳು ಬಾಡುತ್ತಾ ಬಂದು ಕೊನೆಗೆ ಈ ಭಾಗದ ಚರ್ಮದ ಮೇಲ್ಪದರವು ನಿಧಾನವಾಗಿ ಎದ್ದುಬರುತ್ತದೆ.

► *ದಡಾರ ಪೀಡಿತ ಮಕ್ಕಳಲ್ಲಿ ಮೀಸಲ್ಸ್ ವೈರಸ್ ಗಳ ದುಷ್ಪರಿಣಾಮಗಳಿಂದ ಹಾಗೂ ಕೆಲವಿಧದ ಬ್ಯಾಕ್ಟೀರಿಯಾಗಳ ಸೋಂಕಿನಿಂದ ಅನೇಕ ಸಮಸ್ಯೆಗಳು ಉದ್ಭವಿಸಿವ ಸಾಧ್ಯತೆಗಳಿವೆ. ಇವುಗಳಲ್ಲಿ ಸ್ಟ್ರೆಪ್ಟೋಕಾಕಸ್, ಸ್ಟೆಫೈಲೊಕಾಕಸ್, ನ್ಯೂಮೊಕಾಕಸ್ ಮತ್ತು ಇನ್ಫ್ಲುಯೆಂಜೆ ರೋಗಾಣುಗಳು ಪ್ರಮುಖವಾಗಿವೆ.*

► *ದಡಾರ ಉಳ್ಬನಿಸಿದಲ್ಲಿ ಉರಿಯೂತಕ್ಕೊಳಗಾದ ಕಣ್ಣಾಲಿಗಳಿಗೆ ಹಾಗೂ ಕಿವಿಗಳಿಗೆ ತಗಲಬಹುದಾದ ಇತರ ಸೋಂಕುಗಳು, ಗಂಭೀರ ತೊಂದರೆಗಳಿಗೂ ಕಾರಣವೆನಿಸಬಹುದು. ಅದೇ ರೀತಿಯಲ್ಲಿ ನಿಗದಿತ ಅವಧಿಯ ಬಳಿಕವೂ ಕಾಡುವ ಜ್ವರವನ್ನು ಸೂಕ್ತ ಚಿಕಿತ್ಸೆಯಿಂದ ನಿವಾರಿಸಿಕೊಳ್ಳಬಹುದು. ಇದಲ್ಲದೇ ಚಿಕ್ಕಮಕ್ಕಳಲ್ಲಿ ಬ್ರೊಂಕೋ ನ್ಯುಮೋನಿಯಾ ಹಾಗೂ ತುಸು ದೊಡ್ಡ ಮಕ್ಕಳಲ್ಲಿ ಲೋಬಾರ್ ನ್ಯುಮೋನಿಯಾದಂತಹ ಸಮಸ್ಯೆಗಳು ಕಂಡುಬರಬಹುದು.*

► *ಮೀಸಲ್ಸ್ ವ್ಯಾಧಿಪೀಡಿತ ಶೇ. 50 ರಷ್ಟು ಮಕ್ಕಳಿಗೆ ಬ್ರಾಂಕೈಟಿಸ್ ಅಥವಾತೀವ್ರ ರೂಪದ ಲಾರಿಂಗೊ ಟ್ರೇಕಿಯೋ ಬ್ರಾಂಕೈಟಿಸ್ ನಂತಹ ಸಮಸ್ಯೆಗಳು ಬಾಧಿಸುತ್ತವೆ. ಜೊತೆಗೆ ಈ ಸಂದರ್ಭದಲ್ಲಿ ಉದ್ಭವಿಸಬಲ್ಲ "ವೈರಲ್ ನ್ಯುಮೋನಿಯ' ಉಲ್ಬಣಿಸಿದಲ್ಲಿ, ರೋಗಿಯ ಮರಣಕ್ಕೂ ಕಾರಣವೆನಿಸುವ ಸಾಧ್ಯತೆಗಳಿವೆ.*

► *ಕೆಲ ಮಕ್ಕಳಲ್ಲಿ ಅತಿಯಾದ ಬಾಯಿಹುಣ್ಣುಗಳು ಹಾಗೂ ರಕ್ತ ಮಿಶ್ರಿರ ಮಲವಿಸರ್ಜನೆಗಳಂತಹ ತೊಂದರೆಗಳು ಬಾಧಿಸಬಹುದು. ಕ್ಷಯ ರೋಗ ಪೀಡಿತ ಮಗುವಿಗೆ ದಡಾರ ಬಾಧಿಸಿದ ಸಂದರ್ಭದಲ್ಲಿ ಗಂಭೀರ ಸಮಸ್ಯೆಗಳು ಉದ್ಭವಿಸುವುದರಿಂದ, ಚಿಕಿತ್ಸೆ ನೀಡುವ ವೈದ್ಯರು ಮತ್ತು ಕಂದನ ಆರೈಕೆ ಮಾಡುವ ಮಾತಾಪಿತರು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕಾಗುವುದು.*

► *ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ "ಎನ್ಸೆಫಲೈಟಿಸ್" ಹಾಗೂ" ಹೆಮೊರೇಜಿಕ್ ಮೀಸಲ್ಸ್ " ಎನ್ನುವ ರಕ್ತಸ್ರಾವಕ್ಕೆ ಕಾರಣವೆನಿಸಬಲ್ಲ ವಿಶಿಷ್ಟ ಸಮಸ್ಯೆಗಳು ಪ್ರಾಣಾಪಾಯಕ್ಕೂ ಕಾರಣವೇನಿಸಬಲ್ಲವು.*

💐 *ಯಾವಾಗ? ಎಷ್ಟೆಷ್ಟು?*💐

► *ರಾಜ್ಯದಲ್ಲಿ 2014ರಲ್ಲಿ 903 ಮಕ್ಕಳಲ್ಲಿ ದಡಾರ ಕಾಣಿಸಿಕೊಂಡಿತ್ತು.  2015ರಲ್ಲಿ 285 ಹಾಗೂ 2016ರ ಜನವರಿಯಿಂದ ಈವರೆಗೆ (ಕೇವಲ 6 ತಿಂಗಳಲ್ಲಿ) 265 ಮಕ್ಕಳಲ್ಲಿ ದಡಾರ ಕಾಣಿಸಿಕೊಂಡು ಆತಂಕ ತಂದೊಡ್ಡಿದೆ.*

💐 *ಮುನ್ನೆಚ್ಚರಿಕೆ ಏನು?*💐

► *ದಡಾರ ರೋಗಿಯ ಬಾಯಲ್ಲಿ, ಮೂಗಿನಲ್ಲಿ ಮತ್ತು ಗಂಟಲ ಸ್ರವಿಕೆಯಲ್ಲಿ ವೈರಸ್ಗಳಿರುತ್ತವೆ. ರೋಗಿ ಸೀನಿದಾಗ, ಕೆಮ್ಮಿದಾಗ ಹೊರಗಿನ ಪರಿಸರಕ್ಕೆ ವೈರಸ್ಗಳು ಸೇರುತ್ತವೆ. ಉಸಿರಾಟದ ಮೂಲಕ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಪ್ರವೇಶಿಸಿ, ರೋಗ ಲಕ್ಷಣಗಳನ್ನು ಹೊರಹೊಮ್ಮಿಸುತ್ತವೆ. ಆರೋಗ್ಯವಂತ ಮಗುವಿಗೆ ಸೋಂಕಿನ ಮೂಲಕ ದಡಾರ ಹರಡುತ್ತದೆ.*
*ದಡಾರ ರೋಗಿ ಉಪಯೋಗಿಸಿದ ಸೋಂಕಿನಿಂದ ಕೂಡಿದ ವಸ್ತುಗಳಿಂದಲೂ ಸೋಂಕು ಹರಡಬಹುದು. ರೋಗ ಕಾಣಿಸಿಕೊಂಡ ಪ್ರಾರಂಭದ ಐದು ದಿನಗಳವರೆಗೆ ಸೋಂಕು* *ತೀವ್ರವಾಗಿರುವುದರಿಂದ ಬೇರೆ ಮಕ್ಕಳಿಂದ ಮಗುವನ್ನು ಪ್ರತ್ಯೇಕವಾಗಿರಿಸುವುದು* *ಅಗತ್ಯ. ದಡಾರ ತಡೆಗಟ್ಟುವ ಚುಚ್ಚುಮದ್ದನ್ನು ಕೊಡಿಸದಿದ್ದರೆ ಮಗುವಿಗೆ ದಡಾರ ರೋಗ ಬರುವ ಸಾಧ್ಯತೆ ಹೆಚ್ಚು. ಎಳೆಯ ಮಕ್ಕಳಲ್ಲಿ ಮತ್ತು ಅಪೌಷ್ಠಿಕತೆ ಹೊಂದಿರುವ ಮಕ್ಕಳಲ್ಲಿ ದಡಾರ ಬಹಳ ತೀವ್ರ ತೊಡಕನ್ನುಂಟು* *ಮಾಡುತ್ತದೆ. ದಡಾರ ಪ್ರಾಣಕ್ಕೆ ಹಾನಿಕಾರಕ ಅಲ್ಲವಾದರೂ, ಮಕ್ಕಳಿಗೆ ಸ್ವಲ್ಪಮಟ್ಟಿಗೆ ತೊಂದರೆಯನ್ನುಂಟು ಮಾಡುತ್ತದೆ. ಇದರಿಂದಾಗಿ ಮಕ್ಕಳು ಕಿರಿಕಿರಿ ಮಾಡುತ್ತವೆ.*

 ► *ದಡಾರ ಇರುವ ಮಗುವನ್ನು ಶಾಲೆಗೆ ಕಳುಹಿಸಿದಲ್ಲಿ ಇತರ ಮಗುವಿಗೂ ರೋಗ ಅಂಟುವ ಸಾಧ್ಯತೆ ಹೆಚ್ಚು. ಈ ರೋಗ ಕಾಣಿಸಿಕೊಳ್ಳುವ ಮೊದಲನೇ ದಿನ ಜ್ವರ ಬರುತ್ತದೆ. ಆರಂಭದಲ್ಲಿ ಮುಖದ ಮೇಲಷ್ಟೇ ಕಾಣಿಸಿಕೊಳ್ಳುವ ನೀರಗುಳ್ಳೆಗಳು ದಿನಗಳೆದಂತೆ ಹೊಟ್ಟೆ ಹಾಗೂ ದೇಹದ ಇತರ ಭಾಗಕ್ಕೂ ವಿಸ್ತರಿಸುತ್ತವೆ. ನೀರ ಗುಳ್ಳೆಗಳಿಂದ ಪ್ರಾರಂಭದಲ್ಲಿ ಸ್ವಲ್ಪ ನವೆ ಇರುತ್ತದೆ. ಮೊದಲು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ದಡಾರ ಇತ್ತೀಚಿನ ವರ್ಷಗಳಲ್ಲಿ 18 ರಿಂದ 40 ವರ್ಷ ವಯೋವಾನದವರಲ್ಲೂ ಕಂಡುಬರುತ್ತಿದೆ. ಮಕ್ಕಳಲ್ಲಿ ದಡಾರ ಕಾಣಿಸಿಕೊಂಡರೆ ಅಮ್ಮ ಅಥವಾ ದೇವಿಯ ಕಾಟವೆಂಬ ಮೂಢನಂಬಿಕೆಯಿಂದ ಕೆಲವರು ದೇವಸ್ಥಾನಗಳಿಗೆ ತೆರಳಿ, ಎಣ್ಣೆ ಹಾಕಿ ಬರುತ್ತಾರೆ. ಇದರ ಬದಲು ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡಿದಲ್ಲಿ ಮಗು ಬೇಗ ಗುಣಮುಖವಾಗುತ್ತದೆ.*

💐 *ಚಿಕಿತ್ಸೆ*💐
► *ದಡಾರಕ್ಕೆ ಯಾವುದೇ ರೀತಿಯ ಔಷಧಗಳಿಲ್ಲ ಆದರೆ ಈ ಸಾಂಕ್ರಾಮಿಕ ರೋಗಕ್ಕೆ     ನೀಡುವ ಚುಚ್ಚು ಮದ್ದನ್ನು  ನೀಡಿದಾಗ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.*
*ಮಗು ಹುಟ್ಟಿದ 9 ತಿಂಗಳಿಗೆ ಹಾಗೂ 16ರಿಂದ 24 ತಿಂಗಳಿಗೆ ಒಂದರಂತೆ 2 ಬಾರಿ ದಡಾರದ ಚುಚ್ಚುಮದ್ದನ್ನು ಸರ್ಕಾರ ಉಚಿತವಾಗಿ ನೀಡುತ್ತಿದೆ*

💐 *ರೆಬೆಲ್ಲೋ  ಎಂದರೇನು?*💐

 ► *ಇದನ್ನು ಜರ್ಮನ್ ದಡಾರ ಎಂದು ಕರೆಯುತ್ತಾರೆ. ರುಬೆಲ್ಲಾ' ಕೂಡ ವೈರಾಣುವಿನಿಂದ ಆಗುವ ಸೋಂಕಾಗಿದ್ದು, ಮಕ್ಕಳು ಹಾಗೂ ಪ್ರಾಯದವರಲ್ಲಿ (ದೊಡ್ಡವರಲ್ಲಿ) ಕಂಡುಬರುತ್ತದೆ*

💐 *ಲಕ್ಷಣಗಳು*💐
► *ಮುಖದಲ್ಲಿ ಮೊದಲು ಕೆಂಪು ಕಲೆ ಕಂಡು ಬರುತ್ತದೆ.*
► *ಗಂಟಲಲ್ಲಿ ಊತ ಕಾಣಿಸಿಕೊಳ್ಳುವುದು*
► *ಜ್ವರ, ವಾಂತಿ, ಗಂಟು ನೋವು*
► *ದೊಡ್ಡವರಲ್ಲಿ ಸಂದಿ ವಾತ, ದುಗ್ದರಸ ಗ್ರಂಥಗಳ ಊತ*

► *ಗರ್ಭಾವಸ್ಥೆಯಲ್ಲಿ ಈ ರೋಗ ತಾಯಿಯಲ್ಲಿ ಕಾಣ ಬಂದರೆ, ಮಗುವಿನ ಜೀವಕ್ಕೆ ಹಾನಿಯಾಗಬಹುದು, ಅಥವಾ ಅವಧಿ ಪೂರ್ವ ಜನನವಾದಲ್ಲಿ ಮಕ್ಕಳಲ್ಲಿ ವಿಕಲಾಂಗತೆ ಕಾಣಬಹುದು ► ಹುಟ್ಟಿದ ಮಗುವಿನಲ್ಲಿ ತೀವ್ರವಾದ ಜನ್ಮಜಾತ ತೊಂದರೆಗಳು - ಕಣ್ಣಿನ ಪೊರೆ, ಗ್ಲಕೋಮಾ, ಕಿವುಡುತನ, ಹೃದಯದ ತೊಂದರೆಗಳು, ಯಕೃತ್-ಗುಲ್ಮದ ತೊಂದರೆಗಳು, ತಲೆ ಕಿರಿದಾಗಿರುವುದು. ಮಂದಬುದ್ಧಿ, ರಕ್ತದ ತೊಂದರೆ ಇರಬಹುದು. ಈ ತೊಂದರೆಗೆ ಯಾವುದೇ ರೀತಿಯ ನಿರ್ದಿಷ್ಟ ಚಿಕಿತ್ಸೆ ಇರುವುದಿಲ್ಲ.*

💐 *ಇತರ ಮಾಹಿತಿ*💐

► *"ದಡಾರದಿಂದ ಪ್ರತೀ ವರ್ಷ 1 ಲಕ್ಷದಷ್ಟು ಮಕ್ಕಳು ಸಾವನ್ನಪ್ಪುತ್ತಾರೆ. ಇದರಲ್ಲಿ ಮೂರನೇ ಒಂದು ಭಾಗದಷ್ಟು ಮಕ್ಕಳು ಭಾರತದಲ್ಲಿ ಸಾವಿಗೀಡಾಗುತ್ತಾರೆ. ಆದ್ದರಿಂದ Congenital Rubella Syndrome ಅನ್ನು 2020ರ ಒಳಗೆ ಹೋಗಲಾಡಿಸುವ ಗುರಿ ಹೊಂದಿದೆ.*

► *MR ಲಸಿಕೆ ಅಭಿಯಾನದ ತಾರೀಕು ಹಾಗೂ ಜಾಗ ಎಲ್ಲಾ ಅರ್ಹ ಮಕ್ಕಳಿಗೆ ಶಾಲೆ, ಗ್ರಾಮೀಣ/ನಗರ ಪ್ರದೇಶದಲ್ಲಿರುವ ಆರೋಗ್ಯ ಉಪಕೇಂದ್ರ, ಅಂಗನವಾಡಿ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯದ ಆರೋಗ್ಯ ಕೇಂದ್ರ ಹಾಗೂ ಇತರ ಸರಕಾರಿ ಆಸ್ಪತ್ರೆಗಳಲ್ಲಿ MR ಲಸಿಕೆಯನ್ನು ನೀಡಲಾಗುವುದು. ಆರೋಗ್ಯ ಕಾರ್ಯಕರ್ತರಾದ ಹಾಗೂ ಇತರ ಕಾರ್ಯಕರ್ತೆಯರಾದ ಆಶಾ/ಅಂಗನವಾಡಿ ಕಾರ್ಯಕರ್ತರು, MR ಲಸಿಕೆಯ ಬಗ್ಗೆ ಕುಟುಂಬ/ತಾಯಂದಿರು/ಪೋಷಕರಿಗೆ ತಿಳಿಸುತ್ತಾರೆ. ಅವರು MR ಲಸಿಕೆ ನೀಡುವ ತಾರೀಕು ಹಾಗೂ ಜಾಗದ ಮಾಹಿತಿ ಇರುವ ಆಮಂತ್ರಣ ಪತ್ರವನ್ನು ಅರ್ಹ ಮಕ್ಕಳ ಪೋಷಕರಿಗೆ ಹಂಚುತ್ತಾರೆ. ಅಭಿಯಾನದಲ್ಲಿ MR ಲಸಿಕೆಯನ್ನು ತರಬೇತಿ ಹೊಂದಿದ MNM/ ದಾದಿಯರ ಮೂಲಕ ನೀಡಲಾಗುವುದು. ಲಸಿಕೆ ಅಭಿಯಾನದ ಮೊದಲು ಶಿಕ್ಷಕ-ರಕ್ಷಕರ ಸಭೆಯನ್ನು ನಡೆಸಿ, ಅವರಿಗೆ ಸೂಕ್ತ ಮಾಹಿತಿಯನ್ನು ನೀಡಲಾಗುವುದು.*

💐 *MR ಲಸಿಕೆಯ ವ್ಯತಿರಿಕ್ತ ಪರಿಣಾಮಗಳು?*💐
► *MR ಲಸಿಕೆಯು ಒಂದು ಸುರಕ್ಷಿತ ಲಸಿಕೆಯಾಗಿದ್ದು, ವಿಶ್ವದಾದ್ಯಂತ ಅನೇಕ ರಾಷ್ಟ್ರಗಳಲ್ಲಿ, ಅವರ ರಾಷ್ಟ್ರೀಯ ಲಸಿಕೆ ಕಾರ್ಯಕ್ರಮಗಳಲ್ಲಿ/ಲಸಿಕಾ ಅಭಿಯಾನಗಳಲ್ಲಿ ಉಪಯೋಗಿಸುತ್ತಿದ್ದಾರೆ. ಲಕ್ಷಾಂತರ ಮಕ್ಕಳು. MR ಲಸಿಕೆಯನ್ನು ಪಡೆದು ಸುರಕ್ಷಿತರಾಗಿದ್ದಾರೆ.*

💐 *ದಡಾರ ಮತ್ತು ರುಬೆಲ್ಲ ಲಸಿಕೆ ಅಭಿಯಾನ - 2017*💐



► *ಭಾರತ ಸರಕಾರವು ಮೊದಲನೇ ಹಂತದ ದಡಾರ ಮತ್ತು ರುಬೆಲ್ಲ ಲಸಿಕೆ ಅಭಿಯಾನವನ್ನು ಈ ಕೆಳಗಿನ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹಮ್ಮಿಕೊಂಡಿದೆ. ಕರ್ನಾಟಕ, ತಮಿಳುನಾಡು, ಪಾಂಡಿಚೇರಿ, ಗೋವಾ ಹಾಗೂ ಲಕ್ಷದ್ವೀಪ, ಈ ಅಭಿಯಾನವು ನಮ್ಮ ರಾಜ್ಯದಲ್ಲಿ ಫೆ.7ರಿಂದ 28ನೇ ಫೆಬ್ರವರಿ ತನಕ ಜರಗಲಿದೆ.*

► *ಕರ್ನಾಟಕದಲ್ಲಿ ಒಂಬತ್ತು ತಿಂಗಳಿನಿಂದ - 15 ವರ್ಷದವರೆಗಿನ 1.6 ಕೋಟಿ ಮಕ್ಕಳಿದ್ದು, MR ಲಸಿಕೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.*

► *MR ಲಸಿಕೆಯನ್ನು ಶಾಲೆ, ಸರಕಾರಿ ಆಸ್ಪತ್ರೆ, ಅಂಗನವಾಡಿ ಹಾಗೂ ಮೊಬೈಲ್ ತಂಡದ ಮೂಲಕ ಮೂರು ವಾರಗಳ ಅವಧಿಯಲ್ಲಿ ನೀಡಲಾಗುವುದು.*

► *ಈ ಅಭಿಯಾನವು ನಮ್ಮ ರಾಜ್ಯದಲ್ಲಿ ಫೆಬ್ರವರಿ 7ರಿಂದ 28ನೇ ಫೆಬ್ರವರಿ ತನಕ ಜರಗಲಿದೆ.*

► *ಈ ಅಭಿಯಾನದ ಅನಂತರ, ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ದಡಾರದ ಬದಲು MR ಲಸಿಕೆಯನ್ನು 9-12 ತಿಂಗಳು ಹಾಗೂ 16-24 ತಿಂಗಳಲ್ಲಿ ನೀಡಲಾಗುವುದು.*

💐 *MR ಲಸಿಕಾ ಅಭಿಯಾನದಲ್ಲಿ ಯಾರಿಗೆ ಲಸಿಕೆ ನೀಡಬೇಕು?*💐


► *9 ತಿಂಗಳು ಪೂರ್ಣಗೊಂಡ ಹಾಗೂ 15 ವರ್ಷದ ಕೆಳಗಿನ ಮಕ್ಕಳು.*

► *ಅವರು ಹಿಂದೆ MMR ಅಥವಾ ದಢಾರದ ಲಸಿಕೆಯನ್ನು ಪಡೆದಿದ್ದರೂ, ಎಲ್ಲ ಮಕ್ಕಳು MR ಲಸಿಕೆಯನ್ನು ಪಡೆಯಬೇಕು.*

► *ಈ ಹಿಂದೆ ದಢಾರ ಅಥವಾ ರುಬೆಲ್ಲ ಕಾಯಿಲೆಯಿಂದ ಬಳಲಿದ್ದರೂ ಈ ಪ್ರಾಯದ ಎಲ್ಲ ಮಕ್ಕಳಿಗೂ MR ಲಸಿಕೆಯನ್ನು ಅಭಿಯಾನದಡಿಯಲ್ಲಿ ನೀಡಬೇಕು.*

► *ಅಪೌಷ್ಟಿಕತೆ ಇರುವ ಮಕ್ಕಳಿಗೆ ಈ ಕಾಯಿಲೆಗಳಿಂದ ತೊಂದರೆ/ಸಾವು, ಬರುವ ಸಾಧ್ಯತೆ ಇರುವುದರಿಂದ MR ಲಸಿಕೆಯನ್ನು ಅಗತ್ಯವಾಗಿ ನೀಡಬೇಕು.*

► *ಸಣ್ಣ ಪ್ರಮಾಣದ ಜ್ವರ, ಶೀತ, ಭೇದಿ. ಇದ್ದಲೂ ಕೂಡ MR ಲಸಿಕೆಯನ್ನು ಅಭಿಯಾನದ ಮೂಲಕ ಮಕ್ಕಳಿಗೆ ಹಾಕಿಸಬೇಕು.*

*MR ಲಸಿಕೆ ಹಾಗೂ ಲಸಿಕೆ ಅಭಿಯಾನದ ಬಗ್ಗೆ ಕೆಲವು ಸತ್ಯಗಳು*

► *MR ಲಸಿಕೆ ಪಡೆಯುವುದರಿಂದ ದಡಾರ ಹಾಗೂ ರುಬೆಲ್ಲ ವಿರುದ್ಧ ಜೀವನ ಪರ್ಯಂತ ಸುರಕ್ಷೆ ದೊರೆಯುತ್ತದೆ. ಏಕೆಂದರೆ ಇದೊಂದು ಬಹಳ ಪರಿಣಾಮಕಾರಿ ಲಸಿಕೆ ಆಗಿರುತ್ತದೆ.*

► *MR ಲಸಿಕೆಯಲ್ಲಿ ದಡಾರ ಹಾಗೂ ರುಬೆಲ್ಲಾ ಜತೆಗಿದ್ದರೂ, ಒಂದು ಇನ್ನೊಂದರ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುವುದಿಲ್ಲ.*

► *9 ತಿಂಗಳಿಂದ 15 ವರ್ಷದ ಎಲ್ಲ ಮಕ್ಕಳು ಈ ಅಭಿಯಾನದಲ್ಲಿ ಪಡೆದ ಲಸಿಕೆಯನ್ನು ಹೆಚ್ಚುವರಿ ಪೂರಕ ಡೋಸ್ ಎಂದು ಪರಿಗಣಿಸಬೇಕು. ಈ ಹಿಂದೆ ಲಸಿಕೆ ಅಭಿಯಾನ ಅಥವಾ ಸಾಮಾನ್ಯ ಕಾರ್ಯಕ್ರಮದಲ್ಲಿ ಲಸಿಕೆ ಪಡೆದರೂ ಆ ಡೋಸನ್ನು ಪರಿಗಣಿಸದೆ, ಈ ಅಭಿಯಾನದಲ್ಲಿ ಲಸಿಕೆಯನ್ನು ನೀಡಲಾಗುವುದು.

► *ವಿಶ್ವ ಆರೋಗ್ಯ ಸಂಸ್ಥೆ ನೀಡಿದ ಗುಣಮಟ್ಟಕ್ಕೆ ಅನುಗುಣವಾಗಿ ಈ ಲಸಿಕೆಯನ್ನು ತಯಾರಿಸಲಾಗಿದೆ. ಈ ಲಸಿಕೆಯ ಮೇಲೆ VVM (ವಾಕ್ಸಿನ್ ವಯಲ್ ಮೊನಿಟರ್) ಇದ್ದು ಇದರ ಗುಣಮಟ್ಟವನ್ನು ತಿಳಿಸುತ್ತದೆ.*

💐 *MR ಲಸಿಕೆಯನ್ನು,ಅಭಿಯಾನದಲ್ಲಿ*
*ಯಾರಿಗೆ ನೀಡಬಾರದು?*

► *ಅತಿಯಾದ ಜ್ವರ ಅಥವಾ ಗಂಭೀರ ಕಾಯಿಲೆ, ಪ್ರಜ್ಞೆ ಇಲ್ಲದಿರುವ, ಅಪಸ್ಮಾರ (ಫಿಟ್ಸ್ ಕಾಯಿಲೆ)*

► *ಆಸ್ಪತ್ರೆಗೆ ಸೇರಿಸಿದ ಮಕ್ಕಳು*

► *MR ಲಸಿಕೆ ಹಿಂದೆ ಪಡೆದು ತೀವ್ರ ಅಲರ್ಜಿ ಆಗಿರುವುದು.*

►  *MR ಲಸಿಕೆಯಿಂದ ಆಗುವ ವ್ಯತಿರಿಕ್ತ ಪರಿಣಾಮಗಳು ತಾತ್ಕಾಲಿಕ ಹಾಗೂ ಬಹಳ ಕಡಿಮೆ ಪ್ರಮಾಣದಲ್ಲಿ ಕಾಣಬರುತ್ತವೆ. ಈ ಲಸಿಕೆಯ ಲಾಭಗಳು ಅನೇಕವಿರುವುದರಿಂದ ಈ ಲಸಿಕೆಯನ್ನು ಪಡೆಯಲು ಯಾವುದೇ ರೀತಿಯ ಅನುಮಾನಗಳಿರಬಾರದು. ಈ ಲಸಿಕೆ ಅಭಿಯಾನದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಲಸಿಕೆಯನ್ನು ನೀಡಲಾಗುವುದು.

(ಸಂಗ್ರಹ ಮಾಹಿತಿ)

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು