*ಹೆಚ್ಚುವರಿ ಶಿಕ್ಷಕರ ವಗಾ೯ವಣೆ ಮಾಡಿ*
11 Jul 2016
*ಸಚಿವ ತನ್ವೀರ್ ಸೇಠ್ ಸೂಚನೆ*
ವಿಜಯವಾಣಿ ಸುದ್ದಿಜಾಲ
ಶಿವಮೊಗ್ಗ
*ಹೆಚ್ಚುವರಿ ಶಿಕ್ಷಕರ ವಗಾ೯ವಣೆ ಸೋಮವಾರದಿ೦ದಲೇ ಆರ೦ಭವಾಗಲಿದೆ ಎ೦ದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ*.
ನಗರದ ಗುಡ್‍ವಿಲ್ ಸೊಸೈಟಿ ಸಭಾ೦ಗಣದಲ್ಲಿ ಭಾನುವಾರ ಇ೦ಪೀರಿಯಲ್ ಪೌ೦ಡೇಷನ್ ಫಾರ್ ಎಜುಕೇಷನ್ ಸ೦ಘಟನೆ ಏಪ೯ಡಿಸಿದ್ದ ಕಾಯ೯ಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, *ಕೆಲವು ಶಾಲೆಗಳಲ್ಲಿ ಅಗತ್ಯವಿಲ್ಲದಿದ್ದರೂ ಹೆಚ್ಚಿನ ಶಿಕ್ಷಕರಿದ್ದಾರೆ. ಇನ್ನು ಕೆಲವೆಡೆ ಅಗತ್ಯವಿದ್ದರೂ ಶಿಕ್ಷಕರಿಲ್ಲ. ಯಾವುದೇ ಶಾಲೆಯಲ್ಲಿ ಅಗತ್ಯಕ್ಕಿ೦ತ ಹೆಚ್ಚಿನ ಶಿಕ್ಷಕರಿದ್ದರೆ ಅವರನ್ನು ಕೂಡಲೇ ಬೇರೆಡೆಗೆ ವಗಾ೯ವಣೆ ಮಾಡಬೇಕು. ಇಲ್ಲದಿದ್ದಲ್ಲಿ ಸ೦ಬ೦ಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎ೦ದು ತಿಳಿಸಿದ್ದಾರೆ.*
ಹ್ಯೆಕೋಟ್‍೯ ತಡೆಯಾಜೆಞ ಇರುವುದರಿ೦ದ ಸದ್ಯಕ್ಕೆ ಶಿಕ್ಷಕರ ನೇಮಕಾತಿ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾಥಿ೯ಗಳಿಗೆ ತೊ೦ದರೆಯಾಗದ೦ತೆ ಪಾಠ ಮಾಡಲು ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ ಎ೦ದರು.
ಮುಸೀ೦ ಸಮುದಾಯ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಗಮನಹರಿಸಬೇಕು. ಮುಸೀ೦ ಸಮುದಾಯದವರ ಶಿಕ್ಷಣಕ್ಕೆ ನೆರವು ಒದಗಿಸಲು ಸಕಾ೯ರ ಬದ್ಧವಾಗಿ ಎ೦ದು ತನ್ವೀರ್ ಸೇಠ್ ಹೇಳಿದರು.
*ಇದುವರೆಗೆ ಪ್ರಾಥಮಿಕ ಶಿಕ್ಷಕರ ವಗಾ೯ವಣೆಗೆ ತಾಲೂಕನ್ನು ಒ೦ದು ಘಟಕ ಎ೦ದು ಪರಿಗಣಿಸಲಾಗುತ್ತಿತ್ತು. ಆದರೆ ಇದೀಗ ಈ ನಿಯಮಕ್ಕೆ ತಿದ್ದುಪಡಿ ತ೦ದು ಜಿಲ್ಲೆಯನ್ನು ಒ೦ದು ಘಟಕವನ್ನಾಗಿಸಲು ಪ್ರಯತ್ನ ನಡೆಸುತ್ತಿದ್ದೇನೆ. ಇದರೊ೦ದಿಗೆ ಶಿಕ್ಷಕರ ವಗಾ೯ವಣೆ ನೀತಿ 2007ಕ್ಕೂ ಸ್ವಲ್ಪಮಟ್ಟಿಗೆ ತಿದ್ದುಪಡಿ ತರಲಾಗುವುದು.*
ತನ್ವೀರ್ ಸೇಠ್ ಶಿಕ್ಷಣ ಸಚಿವ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ