24.7.16

ಅಕ್ಷರ ದಾಸೋಹ

💐💐ಅಕ್ಷರ ದಾಸೋಹ 💐💐💐★ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕೆ ಈ ಕೆಳ ಕಾಣಿಸಿದ ಅಂಶಗಳನ್ನುಅಳವಡಿಸಿಕೊಳ್ಳುವುದು.
*************************************************

★ಮುಖ್ಯ ಶಿಕ್ಷಕರು ಸರಕಾರಿ ರಜೆ ಹೊರತುಪಡಿಸಿ ಯಾವುದೇ ಕಾರಣಕ್ಕೂ ಅಕ್ಷರದಾಸೋಹ ಕಾರ್ಯಕ್ರಮ ನಿಲ್ಲದಂತೆ ಮುಂಜಾಗ್ರತೆವಹುಸಬೇಕು.

★ಮುಖ್ಯ ಶಿಕ್ಷಕರು ಪ್ರತಿ ತಿಂಗಳು ಅಗತ್ಯವಿರುವ ಆಹಾರ ಮತ್ತು ಸಾದಿಲ್ವಾರು ಬೇಡಿಕೆಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಹಿಂದಿನ ತಿಂಗಳ ಉಪಯೋಗತಾ ಪ್ರಮಾಣಪತ್ರದೊಂದಿಗೆ ಪ್ರತಿ ತಿಂಗಳು 25 ನೇ ತಾರೀಖಿನೊಳಗಾಗಿ ತಾಲೂಕು ಕಛೇರಿಗೆ ತಲುಪಿಸಬೇಕು.

★ನಿಗದಿತ ಅವಧಿಯಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗದಿದ್ದಲ್ಲಿ,ಸ್ಥಳಿಯವಾಗಿ ಲಭ್ಯವಾಗುವ ಆಹಾರ ಸಾಮಗ್ರಿಗಳನ್ನು ಬಳಸಿಕೊಂಡು ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.ಯಾವುದೇ ಕಾರಣಕ್ಕೂ ಮಕ್ಕಳು ಹಸಿವಿನಿಂದ ಉಳಿಯಬಾರದು.

★ಕಳಪೆ ಮಟ್ಟದ ಆಹಾರ ಸಾಮಗ್ರಿಗಳನ್ನು ಸ್ವೀಕರಿಸಬಾರದು.ಹಾಗೂ ಒಂದು ವೇಳೆ ಕಳಪೆ ಮಟ್ಟದ ಆಹಾರ ಸಾಮಗ್ರಿ ಬಳಸಿ ಬಿಸಿಊಟ ತಯಾರಿಸಬಾರದು.

★ಪ್ರತಿ ತಿಂಗಳು ಪಡೆದ ಆಹಾರ ಧಾನ್ಯಗಳು ಕೆಡದಂತೆ ಶೇಕರಿಸಿಟ್ಟುಕೊಳ್ಳಬೇಕು.

★ನಮೂನೆ-2 ರಲ್ಲಿದ್ದ ಆಹಾರ ದಾಸ್ತಾನಿಗೂ ಹಾಗೂ ಭೌತಿಕ ದಾಸ್ತಾನಿಗೂ ತಾಳೆಯಾಗಬೇಕು.ವ್ಯತ್ಯಾಸ ಕಂಡುಬಂದಲ್ಲಿ ಮುಖ್ಯಶಿಕ್ಷಕರೇ ಜವಾಬ್ದಾರರಾಗಿರುತ್ತಾರೆ.

★ಅಕ್ಷರ ದಾಸೋಹಕ್ಕೆ ಸಂಬಂಧಿಸಿದಂತೆ,ಎಲ್ಲಾ ಮಾಹಿತಿಗಳನ್ನು/ವಹಿಗಳನ್ನು ಪ್ರತಿನಿತ್ಯ ನಿರ್ವಹಿಸಬೇಕು.

★ಪ್ರತಿದಿನ ಮಕ್ಕಳಿಗೆ ಆಹಾರ ವಿತರಿಸುವ ಮುಂಚೆ ಇಬ್ಬರು ಶಿಕ್ಷಕರು ಆಹಾರ ಸೇವಿಸಿ ಉತ್ತಮ ಗುಣಮಟ್ಟದ ಆಹಾರವೆಂದು ದೃಢೀಕರಿಸಿದ ನಂತರ ವಹಿಯಲ್ಲಿ ದಾಖಲಿಸಿ ಮಕ್ಕಳಿಗೆ ವಿತರಿಸಬೇಕು.

★ಅನಿಲ ಸಿಲಿಂಡರನ್ನು ಮಿತವಾಗಿ ಬಳಸಬೇಕು.ಸಿಲಿಂಡರ್ ಸ್ವೀಕರಿಸುವಾಗ ರಿಜಿಸ್ಟರ್ ನಂಬರ್ ಬರೆದುಕೊಳ್ಳಬೇಕು.
ಕಳ್ಳತನವಾಗದಂತೆ ನೋಡಿಕೊಳ್ಳಬೇಕು.

★ಮಾತ್ರೆಗಳನ್ನು ನಿಗದಿತ ಅವಧಿಯಲ್ಲಿ ಮಕ್ಕಳಿಗೆ ನೀಡಬೇಕು.ಹಾಗೂ ವರ್ಗವಾರು ನೀಡಿದ ಮಾತ್ರೆಗಳ ದಾಖಲೆಗಳನ್ನಿಡಬೇಕು.

★ತಾಯಂದಿರ ಸಮೀತಿಯನ್ನು ರಚಿಸಿ ವಾರ್ಷಿಕ ವೇಳಾಪಟ್ಟುಯಂತೆ ಕನಿಷ್ಟ 4 ಜನ ತಾಯಂದಿರು ಸರದಿಯ ಮೇಲೆ ಅಕ್ಷರ ದಾಸೋಹ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮಾಡುವುದು.

★ಮಕ್ಕಳಿಗೆ ಬಿಸಿಯೂಟ ವಿತರಿಸುವಾಗ ಎಲ್ಲ ಶಿಕ್ಷಕರು ತಪ್ಪದೇ ಹಾಜರಿದ್ದು,ಶಿಸ್ತಿನಿಂದ ವ್ಯವಸ್ಥಿತವಾಗಿ ಮಕ್ಕಳಿಗೆ ಆಹಾರ ವಿತರಣೆ ಮಾಡಬೇಕು.

★ಅಡುಗೆ ಕೋಣೆಯನ್ನು ಪಾತ್ರೆಪರೀಕರಗಳನ್ನು ಅಡುಗೆ ಪ್ರಾರಂಭದ ಮುನ್ನ ಮತ್ತು ಮುಗಿದ ನಂತರ ಸ್ವಚ್ಚಗೊಳುಸಬೇಕು.

★ಪ್ರತಿ ಶಾಲೆಯಲ್ಲಿ ಶಾಲಾ ಕೈತೋಟ ನಿರ್ವಹಿಸಬೇಕು.
ಹಾಗೂ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು ಬಿಸಿಯೂಟಕ್ಕೆ ಬಳಸಿಕೊಳ್ಳಬೇಕು.

★ಅಕ್ಷರದಾಸೋಹ ಕಾರ್ಯಕ್ರಮದಡಿ ಖರ್ಚುಮಾಡಿದ ಪ್ರತಿಯೊಂದು ಅನುದಾನಕ್ಕೆ ಓಚರ್ಗಳನ್ನು ನಿಯಮಾನುಸಾರ ನಿರ್ವಹಿಸಿ ನಗದು ಪುಸ್ತಕವನ್ನು ಪ್ರತಿನಿತ್ಯ ನಿರ್ವಹಿಸಬೇಕು.

★ಪ್ರತಿವರ್ಷದ ಕೊನೆಗೆ ಅಕ್ಷರ ದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.

★ರಜಾ ದಿನಗಳಲ್ಲಿ ಸಿಲಿಂಡರಗಳು ಹಾಗೂ ಆಹಾರ ಧಾನ್ಯಗಳು ಕಳ್ಳತನವಾಗದಂತೆ ಮುಂಜಾಗ್ರತೆವಹಿಸಬೇಕು.

★ಅರ್ಧವಾರ್ಷಿಕ ಹಾಗೂ ವಾರ್ಷಿಕ ರಜೆಗಳಲ್ಲಿ ಆಹಾರ ಧಾನ್ಯಗಳ ದಾಸ್ತಾನು ಉಳಿಯದಂತೆ ಬೇಡಿಕೆಯನ್ನು ಸಲ್ಲಿಸಬೇಕು.ಬೇಡಿಕೆಯಿಲ್ಲದಿದ್ದರೂ ಶೂನ್ಯವರದಿಯನ್ನು ಸಲ್ಲಿಸಬೇಕು.

★ದಾನಿಗಳ ಮನವೊಲಿಸಿ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಬೇಕಾಗುವ ಕುಕ್ಕರ್,ತಟ್ಟೆ,ಲೋಟ,ಬಕೀಟ
ಇತ್ಯಾದಿಗಳನ್ನು ಪಡೆಯಲು ಶ್ರಮಿಸಬೇಕು.

★ಬಿಸಿಯೂಟ ಪಡೆಯುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಆಹಾರಧಾನ್ಯಗಳನ್ನು ಸಾದಿಲ್ವಾರುಗಳನ್ನು ಬಳಸಬೇಕು.

★ಆಹಾರ ಧಾನ್ಯಗಳನ್ನು ಲಾರಿಗಳಿಂದ ಪಡೆಯುವಾಗ ತೂಕ ಸರಿ ಇದ್ದ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

★ಖಾಲಿ ಚೀಲಗಳ ಬಗ್ಗೆ ಲೆಕ್ಕ-ಪತ್ರ ಇಟ್ಟು ನಿಯಮಾನಯಸಾರ ಕ್ರಮ ಕೈಗೊಳ್ಳಬೇಕು. ಖಾಲಿ ಚೀಲ ಮಾರಾಟದ ಹಣವನ್ನು ಕಡ್ಡಾಯವಾಗಿ ಅಕ್ಷರದಾಸೋಹ ಖಾತೆಗೆ ಜಮಾ ಮಾಡಬೇಕು.

★ಮುಖ್ಯಶಿಕ್ಷಕರು ಕಡ್ಡಾಯವಾಗಿ ಅಡುಗೆ ಸಿಬ್ಬಂದಿಗಳ ವೇತನವನ್ನು ಚೆಕ್ ಮೂಲಕ ಪಾವತಿಸತಕ್ಕದ್ದು.

*************************************************

★ಬಿಸಿಯೂಟಕ್ಕೆ ಸಂಬಂದಿಸಿದ ಪ್ರಮುಖ ದಾಖಲೆಗಳು
*************************************************

1★ದೈನಂದಿನ ಹಾಜರಾತಿ ಮತ್ತು ಫಲಾನುಭವಿಗಳ ಮಾಹಿತಿ
2★ಅಕ್ಕಿ/ಗೋಧಿ/ಬೇಳೆ/ಎಣ್ಣೆ/ಸಾಂಬಾರ ಪದಾರ್ಥಗಳ ದಾಸ್ತಾನು ವಹಿ
3★ಸಾದಿಲ್ವಾರು ಪುಸ್ತಕ-ಕ್ಯಾಶ್ ಬುಕ್
4★ಅಡುಗೆ ಸಿಬ್ಬಂದಿಯ ದೈನಂದಿನ ಹಾಜರಾತಿ ಮತ್ತು ವೇತನ ಬಟವಾಡೆ ವಹಿ
5★ದಿನನಿತ್ಯ ತರಕಾರಿ ಖರ್ಚಿನ ವಿವರ
6★ಆಹಾರ ದಾನ್ಯಗಳ ಸರಬರಾಜಿನ ರಶಿದೀಗಳ ವಹಿ
7★ಆಹಾರ ಸರಬರಾಜು ವಹಿ
8★ಬೇಡಿಕೆ ಮತ್ತು ಉಪಯೋಗತಾ ಪ್ರಮಾಣ ಪತ್ರಗಳ ಕ್ರೋಢೀಕರಣ ವಹಿ
9★ಪ್ರತಿನಿತ್ಯ ಇಬ್ಬರು ಶಿಕ್ಷಕರು ಊಟಮಾಡಿದ ವಹಿ
10★ಶಿಲಿಂಡರ್ ಸ್ವೀಕರಿಸಿದ ಹಾಗೂ ಬಳಸಿದ ವಹಿ
11★ಮಾತ್ರೆಗಳನ್ನು ನೀಡಿದ ದಾಖಲೆ
12★ತಾಯಂದಿರ ಸಮೀತಿ ರಚಿಸಿದ ವಹಿ/ಹಾಗೂ ಪ್ರತಿ ದಿನ 4 ತಾಯಂದಿರು ಅಕ್ಷರದಾಸೋಹದಲ್ಲಿ ಭಾಗವಹಿಸಬೇಕು.
13★ಪಾತ್ರೆಗಳ ದಾಸ್ತಾನು ವಹಿ
14★ಖಾಲಿ ಚೀಲಗಳ ಲೆಕ್ಕಪತ್ರಗಳನ್ನಿಡಬೇಕು.
15★ಪ್ರತಿ ತಿಂಗಳು ಅಡುಗೆಯವರ ವೇತನ ಬಿಡಿಸಿಕೊಟ್ಟ ಬಗ್ಗೆ ಒಂದು ರಿಜಿಸ್ಟರ್ ನಲ್ಲಿ ಅವರವರ ಸಹಿ ತೆಗೆದುಕೊಂಡ ವಹಿ
16★ವೈಧ್ಯಕೀಯ ತಪಾಸನಾ ಪ್ರತಿ ಇಡುವುದು
17★ಅಗ್ನಿ ನಂದಕ ಅಳವಡಿಸಬೇಕು.
18★ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನೀಡುವುದು.
19★ತುರ್ತು ವೈಧ್ಯಕೀಯ ಯೋಜನೆ ತಯಾರಿಸಬೇಕು.
20★ ಮಧ್ಯಾಹ್ನ ಬಿಸಿಯೂಟ ಯೋಜನೆಯ ಲಾಂಚನ ಬರೆಸುವುದು.
21★ಪ್ರತಿ ವರ್ಷದ ಕೊನೆಗೆ ಅಕ್ಷರದಾಸೋಹ ದಾಖಲೆಗಳನ್ನು ಓಚರ್ ಸಹಿತ ಕಾಟನ್ ಬಟ್ಟೆಯಲ್ಲಿ ಬಂಡಲ್ ಮಾಡಿ ಇಡಬೇಕು.
22★ಅಕ್ಷರ ದಾಸೋಹದ ಸಾಮಾನ್ಯ ಮಾಹಿತಿಯನ್ನು ಅಡುಗೆ ಕೋಣೆಯ ಹೊರಗೋಡೆಯ ಮೇಲೆ ದಪ್ಪ ಅಕ್ಷರಗಳಲ್ಲಿ ಬರೆಸುವುದು.
*************************************************

ಶಾಲಾ ಹಂತದಲ್ಲಿ ನಿರ್ವಹಿಸುವ ಸಾಮಾನ್ಯ ದಾಖಲೆಗಳು

1 ರಿಂದ 5 ನೇ ತರಗತಿಯವರೆಗೆ
***************************
★ಅಕ್ಕಿ/ಗೋಧಿ-100 ಗ್ರಾಂ
★ತೊಗರಿ ಬೇಳೆ 20 ಗ್ರಾಂ
★ತಾಳೆ ಎಣ್ಣೆ-05 ಗ್ರಾಂ
★ಉಪ್ಪು-02 ಗ್ರಾಂ
★ತರಕಾರಿ-50 ಗ್ರಾಂ
★ತರಕಾರಿ-1 ರೂ
★ಹಾಲಿನ ಪುಡಿ-18 ಗ್ರಾಂ-150 ಮಿ.ಲೀ.ಹಾಲು
★ಸಕ್ಕರೆ 10 ಗ್ರಾಂ
★ಕ್ಷೀರ—50 ಪೈಸೆ(ಸಕ್ಕರೆ-ಗೊಡಂಬಿ)
★ಬೇಯಿಸಿದ ಆಹಾರ-450 ಗ್ರಾಂ
★ವರ್ಷಕ್ಕೆರಡು ಮಾತ್ರೆ-400mg-Allbendojole
★ವಾರಕ್ಕೆ 3 ಮಾತ್ರೆ-20mg-36 ವಾರ ನೀಡಬೇಕು.
(Iren and polic acid)
***************************

6 ರಿಂದ 10 ನೇ ತರಗತಿಯವರೆಗೆ
*****************************

★ಅಕ್ಕಿ/ಗೋಧಿ—150 ಗ್ರಾಂ
★ತೊಗರಿ ಬೇಳೆ—30 ಗ್ರಾಂ
★ತಾಳೆ ಎಣ್ಣೆ—7.5 ಗ್ರಾಂ
★ಉಪ್ಪು—4 ಗ್ರಾಂ
★ತರಕಾರಿ—75 ಗ್ರಾಂ
★ತರಕಾರಿ—
★ಬೇಯಿಸಿದ ಆಹಾರ—650 ಗ್ರಾಂ
★ವರ್ಷಕ್ಕೆರಡು ಮಾತ್ರೆ—2 Vitamin A(20mg)
★ವರ್ಷಕ್ಕೆರೆಉ ಮಾತ್ರೆ-2-Allbendojole
★ವಾರಕ್ಕೆ 1 ಮಾತ್ರೆ—Iren and polic acide
**************************************

★ಶಾಲಾ ಮಕ್ಕಳಿಗೆ ವೈಧ್ಯಕೀಯ ತಪಾಸನೆ ಮಾಡಿಸಬೇಕು.
★ಮುಖ್ಯ ಅಡುಗೆಯವರ ಸಂಬಳ—1600+100=1700
★ಸಹಾಯಕ ಅಡುಗೆಯವರಿಗೆ—1500+100=1600
★ಸೋಮವಾರ-ಗುರುವಾರ—ಅನ್ನಸಾಂಬಾರು
★ಶುಕ್ರವಾರ-ಚಿತ್ರನ್ನ/ಶನಿವಾರ-ಉಪ್ಪಿಟ್ಟು
★ಹಾಲು-ಸೋಮ-ಬುಧ-ಶನಿ-3 days in 1 week
★ಅಡುಗೆ ಸಿಬ್ಬಂದಿ ಎಪ್ರಾನ ಧರಿಸುವುದು ಕಡ್ಡಾಯ.
★ಅಡುಗೆಯವರು ಆರೋಗ್ಯವಂತರಾಗಿರುವ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ವೈಧ್ಯಕೀಯ ಪ್ರಮಾಣಪತ್ರ ಪಡೆಯುವುದು.
★ಮುಖ್ಯ ಅಡಯಗೆಯವರು ಬರೆದ ಲೆಕ್ಕಪತ್ರಗಳನ್ನು ಪರಿಶಿಲಿಸಿ ಮು.ಗು.ಸಹಿ ಮಾಡುವುದು.
★ಮುಖ್ಯಗುರುಗಳು ಅಕ್ಷರದಾಸೋಹಕ್ಕೆ ಹಾಗೂ ಕ್ಷೀರಭಾಗ್ಯಯೋಜನೆಗೆ ಮಾರ್ಗದರ್ಶಕರಾಗಿರುತ್ತಾರೆ.
★ಅಗ್ ಮಾರ್ಕ ಬಗ್ಗೆ ಗಮನವಿರಬೇಕು.
★ಖಾಲಿ ಗೋಣಿ ಚೀಲಗಳನ್ನು ಹರಾಜು ಮಾಡಿ ಆ ದುಡ್ಡನ್ನು ಅಕ್ಷರದಾಸೋಹ ಖಾತೆಗೆ ಜಮಾ ಮಾಡಿ ಮಕ್ಕಳಿಗೆ ಬೇಕಾದ ಸಾಮಾನುಗಳನ್ನು ಖರೀದಿಸಬೇಕು.
★ಆಹಾರ ದಾಸ್ತಾನು ತೂಕ ಮಾಡಿದ ನಂತರ ಆಹಾರ ತಯಾರಿಸಬೇಕು.
★ತರಕಾರಿಯನ್ನು ಕೊಂಡು ತರುವುದು ಮುಖ್ಯ ಅಡುಗೆಯವರ ಕರ್ತವ್ಯವಾಗಿರುತ್ತದೆ.
★ತರಕಾರಿ ತಂದಿರುವ ಬಗ್ಗೆ ಮುಖ್ಯ ಶಿಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕು.
*************************************************

ಅಡುಗೆ ಸಿಬ್ಬಂದಿ ದಿನಚರಿ

★9:30 ಕ್ಕೆ ಶಾಲೆಗೆ ಹಾಜರಾಗುವುದು.
★10:30 ಕ್ಕೆ ಪಾತ್ರೆ ಪರಿಕರಗಳ ಸ್ವಚ್ಚತೆ ಮಾಡುವುದು.

★ಬೆಳಿಗ್ಗೆ 10:30 ರಿಂದ 11:00—ಮುಖ್ಯ ಅಡುಗೆಯವರು ತರಗತಿವಾರು ಹಾಜರಾತಿ ಮತ್ತು ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಯನ್ನು ನಮೂದಿಸಿ ತರಗತಿ ಶಿಕ್ಷಕರಿಂದ ಸಹಿ ತೆಗೆದುಕೊಳ್ಳುವುದು.
★11:00 ರಿಂದ 11:15 —ಬಿಸಿಯೂಟ ಮಾಡುವ ಮಕ್ಕಳ ಸಂಖ್ಯೆಗನುಗುಣವಾಗಿ ಆಹಾರ ಧಾನ್ಯಗಳನ್ನು ಅಳತೆಮಾಡಿ ತೆಗೆದುಕೊಳ್ಳುವುದು.
★11:15 ರಿಂದ 1:15—ಅಡುಗೆ ತಯಾರಿಸುವುದು.ಪ್ರತಿ ದಿನದ ಖರ್ಚು ವೆಚ್ಚಗಳನ್ನು ಬರೆಯುವುದು.
★1:15 ರಿಂದ 1:55—ಮಕ್ಕಳನ್ನು ಸಾಲಾಗಿ ಕೂರಿಸಿ ಊಟ ಬಡಿಸುವುದು.
★1:55-ಅನಿಲ ಸ್ವಿಚ್ಚ್ ಆಫ್ ಮಾಡಿ,ಪಾತ್ರೆ ಪರಿಕರಗಳನ್ನು ತೊಳೆಯುವುದು.
*************************************************

ಮುಖ್ಯ ಹಾಗೂ ಸಹಾಯಕ ಅಡುಗೆಯವರ ಕರ್ತವ್ಯಗಳು.

★ಅಡುಗೆ ಕೇಂದ್ರದ ಉತ್ತಮ ನಿರ್ವಹಣೆಯು /ಸ್ವಚ್ಚತೆ ಮುಖ್ಯ ಅಡುಗೆಯವರ ಜವಾಬ್ದಾರಿಯಾಗಿರುತ್ತದೆ.
★ಶಾಲಾ ಸಮಯಕ್ಕೆ ಸರಿಯಾಗಿ ಶಾಲೆಗೆ ಹಾಜರಾಗಬೇಕು.
★ಸಿಲಿಂಡರ್ ದುರಸ್ತಿ ಬಗ್ಗೆ ಮುಖ್ಯಗುರುಗಳ ಜವಾಬ್ದಾರಿ
★sdmc ಸಮ್ಮುಖದಲ್ಲಿ ಆಹಾರ ಪದಾರ್ಥ ಪಡೆದು,ಗುಣಮಟ್ಟ ಪರಿಕ್ಷಿಸಿ,ಅಡುಗೆ ತಯಾರಿಸುವದು.
★೧೫/ಒಂದು ತಿಂಗಳಿಗೆ ಸಾಕಾಗುವಷ್ಟು ಸಾಂಬಾರು ಪದಾರ್ಥ ಖರೀದಿ ಮಾಡಿ ವೋಚರ ಇಡುವುದು.
★ಹಾಲಿನ ಪುಡಿ ದಾಸ್ತಾನು ಸುರಕ್ಷಿತವಾಗಿಡಬೇಕು.
★ಶುಚಿಯಾದ ಹಾಲನ್ನು ತಯಾರಿಸಿ ಬಡಿಸುವುದು.
★ದಿನಾಲು/ವಾರಕ್ಕೊಂದು ಸಾರಿ ತರಕಾರಿ ಖರೀದಿಸಿ ವೋಚರ್ ಗಳನ್ನಿಡುವುದು.
★ಅನಿಲ ವಿತರಕರಿಂದ ಗ್ಯಾಸ ಪಡೆಯುವುದು.ತೂಕ 14.2kg ಇರುವುದನ್ನು ಖಾತ್ರಿ ಪಡಿಸಿಕೊಳ್ಳುವುದು.ಸಿಲಿಂಡರಿ
ನ ತಳಭಾಗದಲ್ಲುರುವ ನಂ.ಅನ್ನು ದಾಸ್ತಾನು ಪುಸ್ತಕದಲ್ಲಿ ನಮೂದಿಸುವುದು.
★ಸಾಂಬಾರು ಪದಾರ್ಥಗಳನ್ನು ಒಂದು ವಾರಕ್ಕೆ ಸಾಕಾಗುವಷ್ಟು “ಸಾಂಬಾರು ಪುಡಿ” ತಯಾರಿಸಿಕೊಳ್ಳುವುದು.
★ಹಾಜರಾತಿ ಮತ್ತು ಫಲಾನುಭವಿಗಳ ಸಂಖ್ಯೆ ಪಡೆದು ಮುಖ್ಯಗುರುಗಳಿಂದ ದೃಢೀರಿಸಿಕೊಳ್ಳಬೇಕು.
★ಕುಡಿಯುವ ನೀರು ಶುದ್ದವಾಗಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
★ಆಹಾರ ತಯಾರಿಸಿದ ನಂತರ ಅದರ ಗುಣಮಟ್ಟವನ್ನು ಪರೀಕ್ಷೆ ಮಾಡುವುದು.
★ಅಡುಗೆ ಅನಿಲವನ್ನು ಸುರಕ್ಷಿತವಾಗಿ/ ಮಿತವಾಗಿ ಬಳಕೆ
★ಅಡುಗೆ ಮನೆಯೊಳಗೆ ಅಪರಿಚಿತರು ಬರದಂತೆ ಮುಂಜಾಗ್ರತೆವಹಿಸಬೇಕು.
★ಪ್ರತಿ ತಿಂಗಳು ಬಳಕೆ ಮ/ಉಳಿಕೆ/ಬೇಡಿಕೆ ಪಟ್ಟಿಯನ್ನು ತಯಾರಿಸಿ ಅಧ್ಯಕ್ಷರು,ಮುಖ್ಯ ಶಿಕ್ಷಕರಿಂದ ದೃಢೀಕರಣ ಮಾಡಿಕೊಂಡು crp ಮೂಲಕ ಅಕ್ಷರದಾಸೋಹ ಅಧಿಕಾರಿಗಳಿಗೆ ಮುಟ್ಟಿಸುವುದು.
★ಮೇಲಾಧಿಕಾರಿಗಳು ತಪಾಸಣೆಗೆ ಬಂದಾಗ ಅಗತ್ಯ ಮಾಹಿತಿಗಳನ್ನು ಒಪ್ಪಿಸುವುದು.
★ಮುಖ್ಯ ಅಡುಗೆಯವರು ರಜೆ ಹೋಗುವ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರ ಅನುಮತಿ ಪಡೆಯುವುದು.

ಮುಖ್ಯ ಶಿಕ್ಷಕರ ಜವಾಬ್ದಾರಿಗಳು

★ಆಹಾರ ಧಾನ್ಯಗಳ ಬಳಕೆ ಪ್ರಮಾಣ ಪತ್ರ/ಬೇಡಿಕೆ ಪ್ರಮಾಣ ಪತ್ರ ಅಕ್ಷರದಾಸೋಹ ಅಧಿಕಾರಿಗಳಿಗೆ ಸಲ್ಲಿಕೆ
★ಆಹಾರ ಧಾನ್ಯಗಳನ್ನು ವಿಲೇವಾರಿ ಮಾಡುವಾಗ ತೂಕ/ಗುಣಮಟ್ಟವನ್ನು ಪರಿಶಿಲುಸಬೇಕು.
★ಅಡುಗೆ ಗೆ ಸಂಬಂದಿಸಿದಂತೆ ಎಲ್ಲ ವಿಷಯಗಳಲ್ಲಿಯೂ ಮುಖ್ಯ ಅಡುಗೆಯವರು ಗಮನ ಹರಿಸುತ್ತಿರಬೇಕು.
★ತಾಯಂದಿರ ಸಮೀತಿ ರಚಿಸಬೇಕು.
★ಪ್ರತಿ ದಿನ ರುಚಿ ನೋಡಲು ಶಿಕ್ಷಕರನ್ನು ನೇಮಿಸಿ ವಹಿಯಲ್ಲಿ ದಾಖಲಿಸುವುದು.
★ಮಕ್ಕಳನ್ನು ಬಿಸಿಯೂಟ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳಬೇಕು.
★ಶಾಲಾ ಶಿಕ್ಷಕರ ಮೇಲುಸ್ತುವಾರಿಯಲ್ಲಿ ಸುರಕ್ಷಿತವಾಗಿ ಅಡುಗೆ ಬಡಿಸುವುದನ್ನು ವ್ಯವಸ್ಥೆ ಮಾಡಿಕೊಳ್ಳುವುದು.
★ಅಪರಿಚಿತರು ಪ್ರವೇಶಿಸದಂತೆ ನೋಡಿಕೊಳ್ಳುವುದು.
★ಅನಾಹುತ ಅಸಕಸ್ಮಿಕ ಘಟನೆಗಳು ನಡೆಯದಂತೆ ನೋಡಿಕೊಳ್ಳುವುದು.
★ಅಗ್ನಿ ನಂದಕವನ್ನು ಅಡುಗೆ ಕೋಣೆಯಲ್ಲಿ ಅಳವಡಿಸಬೇಕು.ಸಮಯಕ್ಕೆ ಸರಿಯಾಗಿ ರೀಫಿಲ್ಲಿಂಗ ಮಾಡಿಸಿ ಚಾಲನೆಯಲ್ಲಿಟ್ಟಿರಬೇಕು.
★ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮದಡಿ ಮಕ್ಕಳ ಆರೋಗ್ಯ ತಪಾಸಣೆ ಮಾಡಿಸಿ health card ನಿರ್ವಹಿಸುವುದು.
★ದಾಖಲೆಗಳನ್ನು ನಿರ್ವಹಿಸುವುದು,ಪರಿಶಿಲಿಸುವುದು.
★ಒಟ್ಟಾರೆ ಅಕ್ಷರದಾಸೋಹ ಯಶಸ್ವಿಗೊಳಿಸಲು ಮುಖ್ಯಗುರುಗಳು ಸಹ ಕೈ

1 ಕಾಮೆಂಟ್‌:

Unknown ಹೇಳಿದರು...

ತುಂಬ ಸಹಾಯಕಾರಿ ಆಗುತ್ತಿದೆ