ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

12.7.16

*ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳಿನ್ನು ನಿರಾತಂಕ*

*ಕರ್ನಾಟಕ ರಾಜ್ಯ ಮುಕ್ತ ವಿವಿ ವಿದ್ಯಾರ್ಥಿಗಳಿನ್ನು ನಿರಾತಂಕ*
12 Jul 2016

ಉನ್ನತ ವ್ಯಾಸಂಗ, ಬಡ್ತಿಗೆ ಪರಿಗಣಿಸುವಂತೆ ಆದೇಶ

2012-13ರವರೆಗಿನ ಪದವಿಗೆ ಮಾನ್ಯತೆ

ವಿಜಯವಾಣಿ ಫೋನ್‌ಇನ್ ಕಾರ್ಯಕ್ರಮದ ಸಮಗ್ರ ವರದಿ ಬುಧವಾರ ಪ್ರಕಟಗೊಳ್ಳಲಿದೆ.

ಮೈಸೂರು: ಕೇಂದ್ರ ಧನಸಹಾಯ ಆಯೋಗ(ಯುಜಿಸಿ)ದಿಂದ ಮಾನ್ಯತೆ ರದ್ದಾಗಿರುವ ಸಮಸ್ಯೆ ಎದುರಿಸುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಲ್ಲಿಸಿರುವ ಮನವಿಯನ್ನು ಪುರಸ್ಕರಿಸಿರುವ ರಾಜ್ಯ ಹೈಕೋರ್ಟ್ 2012-13 ಹಾಗೂ ಅದಕ್ಕಿಂತ ಹಿಂದೆ ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳ ಪದವಿ ಮಾನ್ಯ ಮಾಡುವಂತೆ ಆದೇಶ ಹೊರಡಿಸಿದೆ. ಈ ಅವಧಿಯಲ್ಲಿ ಪ್ರವೇಶ ಪಡೆದು ಯಾವಾಗ ಉತ್ತೀರ್ಣರಾಗಿದ್ದರೂ ಅಂತಹ ವಿದ್ಯಾರ್ಥಿಗಳ ಪದವಿ ನೇಮಕ, ಉನ್ನತ ವ್ಯಾಸಂಗ, ಬಡ್ತಿ ಸಮಯದಲ್ಲಿ ಮಾನ್ಯ ಮಾಡಬೇಕು ಎಂದು ಮಹತ್ವದ ತೀರ್ಪು ನೀಡಿದೆ.
  ಕನ್ನಡದ ನಂಬರ್ ಒನ್ ದಿನಪತ್ರಿಕೆ ‘ವಿಜಯವಾಣಿ’ ಸೋಮವಾರ ಆಯೋಜಿಸಿದ್ದ ನೇರ ಫೋನ್‌ಇನ್ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಶಿವಲಿಂಗಯ್ಯ ಅವರು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಉತ್ತರಿಸಿ ಆತ್ಮಸ್ಥೈರ್ಯ ತುಂಬಿದರು.

ಕರ್ನಾಟಕ ಲೋಕಸೇವಾ ಆಯೋಗ ಎಸ್‌ಡಿಸಿ, ಎಫ್‌ಡಿಸಿ ಪರೀಕ್ಷೆಗೆ ಮುಕ್ತ ವಿವಿ ವಿದ್ಯಾರ್ಥಿಗಳು ಅರ್ಹರಲ್ಲ ಎಂದು ಅರ್ಜಿಗಳನ್ನು ತಿರಸ್ಕರಿಸಿತ್ತು. ಆದರೆ ಇದರ ವಿರುದ್ಧ ಕೆಲವರು ಕೋರ್ಟ್ ಮೊರೆ ಹೋಗಿದ್ದರಿಂದ ವಿಶ್ವವಿದ್ಯಾಲಯವೂ ಅವರ ಬೆಂಬಲಕ್ಕೆ ನಿಂತು, 2012-13ನೇ ಸಾಲಿನವರೆಗೂ ಯುಜಿಸಿ ಮಾನ್ಯತೆ ನೀಡಿರುವುದರಿಂದ ವಿದ್ಯಾರ್ಥಿಗಳ ಪದವಿಯನ್ನು ಮಾನ್ಯ ಮಾಡುವಂತೆ ಕೋರಿತ್ತು. ನಮ್ಮ ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿ ತೀರ್ಪು ನೀಡಿದೆ ಎಂದು ಡಾ.ಡಿ.ಶಿವಲಿಂಗಯ್ಯ ತಿಳಿಸಿದರು. ಈ ಅವಧಿಯಲ್ಲಿ ಪದವಿಗೆ ದಾಖಲಾದ ವಿದ್ಯಾರ್ಥಿಗಳನ್ನು ಸರ್ಕಾರದ ಹುದ್ದೆಗಳಿಗೆ ನೇಮಕ, ಉನ್ನತ ವ್ಯಾಸಂಗ, ಪಿಎಚ್.ಡಿ ಪದವಿ ದಾಖಲಾತಿಗೆ ಪರಿಗಣಿಸಬಹುದಾಗಿದ್ದು, ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ ಈ ಆದೇಶದ ಮೇರೆಗೆ ರಾಜ್ಯದ 17 ವಿಶ್ವವಿದ್ಯಾಲಯಗಳ ಕುಲಪತಿ, ಕುಲಸಚಿವರು, ಕರ್ನಾಟಕ ಲೋಕಸೇವಾ ಆಯೋಗ, ನೇಮಕಾತಿ, ಪರೀಕ್ಷಾ ಪ್ರಾಧಿಕಾರಗಳು, ಶಿಕ್ಷಣ ಮಂಡಳಿಗಳಿಗೆ ಪತ್ರ ಬರೆದು ಮುಕ್ತ ವಿವಿ ವಿದ್ಯಾರ್ಥಿಗಳ ಪ್ರಮಾಣ ಪತ್ರವನ್ನು ಪರಿಗಣಿಸುವಂತೆ ಕೋರಲಾಗಿದೆ ಎಂದರು.

*ಸಮಸ್ಯೆ ಆಲಿಸಲು ಸ೦ಪಕಾ೯ಧಿಕಾರಿಗಳು*
ಮುಕ್ತ ವಿವಿಗೆ ರಾಜ್ಯಾದ್ಯ೦ತ ಲಕ್ಷಾ೦ತರ ವಿದ್ಯಾಥಿ೯ಗಳಿರುವುದರಿ೦ದ ಅವರ ಸಮಸ್ಯೆ ಆಲಿಸಲು ಮೂವರು ಸ೦ಪಕಾ೯ಧಿಕಾರಿಗಳನ್ನು ನೇಮಿಸಲಾಗಿದೆ ಎ೦ದು ಕುಲಪತಿ ಪ್ರೊ.ಡಿ.ಶಿವಲಿ೦ಗಯ್ಯ ತಿಳಿಸಿದರು. ಡಾ.ಚ೦ದ್ರಶೇಖರ್(8197242133), ಡಾ.ಮಹೇಶ್ (9901249102) ಹಾಗೂ ಡಾ.ವಿಜಯಕುಮರ್(9845363573)ಅವರನ್ನು ಸ೦ಪಕಿ೯ಸಿ ವಿದ್ಯಾಥಿ೯ಗಳು ಸಮಸ್ಯೆ ತಿಳಿಸಬಹುದು. ಸ೦ಪಕಾ೯ಧಿಕಾರಿಗಳು 10ರಿ೦ದ 15 ದಿನಗಳ ಒಳಗೆ ಪರಿಹಾರ ಸೂಚಿಸಲಿದ್ದಾರೆ ಎ೦ದು ಅವರು ಹೇಳಿದರು.

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು