7.9.17

ಶಿಕ್ಷಕರ ವರ್ಗಾವಣೆ - 2017 updates


ಶಿಕ್ಷಕರ ವರ್ಗಾವಣೆ 2017 ರ ಮಾಹಿತಿಗಳು :-

== > ವರ್ಗಾವಣೆ ಮಾಹಿತಿ ಕನ್ನಡದಲ್ಲಿ  ⇚

==>ಶಿಕ್ಷಕರ ವರ್ಗಾವಣೆ 2017 ರ ಡ್ರಾಫ್ಟ್ ರೂಲ್ಸ್ ⇚

==>ಪರಸ್ಪರ ವರ್ಗಾವಣೆಗೆ ಹೆಸರು ನೊಂದಾಯಿಸಿ <=

 *ಒಂದೇ ಜಾಗದಲ್ಲಿ 10 ವರ್ಷ ‍ಪೂರೈಸಿದ ಶಿಕ್ಷಕರ ವರ್ಗಾವಣೆ ಇಲ್ಲ!*

8 Sep, 2017
ಪ್ರಜಾವಾಣಿ ವಾರ್ತೆ


*ಬೆಂಗಳೂರು: ಒಂದೇ ಜಾಗದಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚು ಸಮಯದಿಂದ ಕೆಲಸ ಮಾಡುತ್ತಿರುವ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡುವ ಕಡ್ಡಾಯವಾಗಿ ವರ್ಗಾವಣೆ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ.*

*ವಿರೋಧ ಪಕ್ಷಗಳು ಹಾಗೂ ಶಿಕ್ಷಕರ ಸಂಘಟನೆಗಳ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಸರ್ಕಾರ ಈ ಮಹತ್ವದ ತೀರ್ಮಾನವನ್ನು ಕೈಬಿಟ್ಟಿದೆ. ಆದರೆ, ಹತ್ತು ವರ್ಷ ಪೂರೈಸಿದ ಶಿಕ್ಷಕರ ವರ್ಗಾವಣೆ ಪ್ರಮಾಣದ ಮಿತಿಯನ್ನು ಶೇ 5ಕ್ಕೆ ನಿಗದಿಪಡಿಸಿದೆ.*

*ಕರ್ನಾಟಕ ರಾಜ್ಯ ಸಿವಿಲ್‌ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) (ತಿದ್ದುಪಡಿ) ಮಸೂದೆಗೆ ಏಪ್ರಿಲ್‌ ಮೊದಲ ವಾರ ವಿಧಾನ ಮಂಡಲದ ಉಭಯ ಸದನಗಳು ಒಪ್ಪಿಗೆ ನೀಡಿತ್ತು. ಇದರಲ್ಲಿ ಹತ್ತು ವರ್ಷ ಪೂರೈಸಿದ ಶಿಕ್ಷಕರ ವರ್ಗಾವಣೆಗೆ ಅವಕಾಶ ನೀಡುವ ಉಪಬಂಧ ಸೇರಿಸಲಾಗಿತ್ತು. ಏಪ್ರಿಲ್ 18ರಿಂದ ಇದು ಕಾಯ್ದೆಯಾಗಿ ಜಾರಿಯಾಗಿದೆ.*

*ಆದರೆ, ಶಿಕ್ಷಕರ ವರ್ಗಾವಣೆಗೆ ನಿಯಮಾವಳಿ ರೂಪಿಸಿ, ರಾಜ್ಯ ಸರ್ಕಾರ ಗುರುವಾರ ರಾಜ್ಯಪತ್ರ ಹೊರಡಿಸಿದೆ. ಆಕ್ಷೇಪಣೆಗಳಿದ್ದಲ್ಲಿ 15 ದಿನದೊಳಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.‌*

*ಪ್ರತಿ ಎರಡು ವರ್ಷಗಳಿಗೊಮ್ಮೆ ಹೆಚ್ಚುವರಿ ಶಿಕ್ಷಕರ ಪಟ್ಟಿ ಸಿದ್ಧಪಡಿಸಿ, ವರ್ಗಾವಣೆ ಮಿತಿಯಲ್ಲಿ ಶೇ 5ರಷ್ಟು ಶಿಕ್ಷಕರನ್ನು ವರ್ಗಾವಣೆ ಮಾಡಲಾಗುತ್ತದೆ. ಶೇ 5ರಷ್ಟು ಐಚ್ಛಿಕ ವರ್ಗಾವಣೆ ಮಿತಿ ಇದೆ. ಘಟಕದ (ಜಿಲ್ಲೆ) ಹೊರಗಿನ ವರ್ಗಾವಣೆ ಮಿತಿಯನ್ನು ಶೇ 3ಕ್ಕೆ ನಿಗದಿ ಮಾಡಲಾಗಿದೆ. ದೂರು ಸಂಬಂಧಿತ ವರ್ಗಾವಣೆಗೆ ಯಾವುದೇ ಮಿತಿ ಇಲ್ಲ.*


*ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರ ವರ್ಗಾವಣೆಗೆ ತಾಲ್ಲೂಕು ಬದಲು ಜಿಲ್ಲೆಯನ್ನು ಘಟಕವನ್ನಾಗಿ ಮಾಡಲಾಗಿದೆ. ಪ್ರೌಢಶಾಲಾ ಶಿಕ್ಷಕರನ್ನು ಈ ಹಿಂದಿನಂತೆ ವಿಭಾಗ ಮಟ್ಟದಲ್ಲಿ ಮತ್ತು ಪಿಯು ಉಪನ್ಯಾಸಕರನ್ನು ಇಲಾಖೆ ನಿರ್ದೇಶಕರ ಮಟ್ಟದಲ್ಲಿ ವರ್ಗಾವಣೆ ಮಾಡಲಾಗುತ್ತದೆ.*

*ಪತಿ–ಪತ್ನಿ ಸರ್ಕಾರಿ ನೌಕರರಾಗಿದ್ದರೆ, ಪತಿ–ಪತ್ನಿ ಅಥವಾ ಮಗು ತೀವ್ರ ತರಹದ ಅನಾರೋಗ್ಯದಿಂದ ಬಳಲುತ್ತಿದ್ದರೆ, ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ, ಶೇ 40ಕ್ಕಿಂತ ಹೆಚ್ಚಿನ ಅಂಗವಿಕಲರಿದ್ದರೆ ಇಂತಹ ಪ್ರಕರಣವನ್ನು ವರ್ಗಾವಣೆ ವೇಳೆ ಪ್ರಮುಖ ಆದ್ಯತೆಯಾಗಿ ಪರಿಗಣಿಸಲಾಗುತ್ತದೆ.*

✍🏻🌹 *ವರ್ಗಾವಣೆಯ ಪ್ರಮುಖಾಂಶಗಳು:*

*ವರ್ಗಾವಣೆ ಮಿತಿ ಶೇ 8ರಿಂದ ಶೇ 15ಕ್ಕೆ ಏರಿಕೆ*

*ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದವರು ವರ್ಗಾವಣೆ ಬಯಸಬಹುದು*

*ಪರಸ್ಪರ ಒಪ್ಪಿತ ವರ್ಗಾವಣೆಗೆ ಮೂರು ವರ್ಷಕ್ಕಿಂತ ಹೆಚ್ಚಿನ ಸೇವಾವಧಿ ಇರಬೇಕು*

*ಆನ್‌ಲೈನ್ ಮೂಲಕ ಮಾತ್ರ ವರ್ಗಾವಣೆ*

@@@@@@@@@@@@@@@@@@@@

*ಶಿಕ್ಷಕರ ವರ್ಗಾವಣೆ ನೀತಿ ಪ್ರಕಟ; ನೂತನ ನೀತಿಯಲ್ಲಿ ವರ್ಗಾವಣೆ ಪ್ರಮಾಣ ಶೇ.15ಕ್ಕೆ ಏರಿಕೆ*


ಬೆಂಗಳೂರು (ಸೆ.07): ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಶಾಸಕರ ಪ್ರತಿಭಟನೆಗೆ ಮಣಿದ ರಾಜ್ಯ ಶಿಕ್ಷಣ ಇಲಾಖೆ ಕಡೆಗೂ ವರ್ಗಾವಣೆ ನೀತಿ ಪ್ರಕಟಿಸಿದೆ. ನೂತನ ವರ್ಗಾವಣೆ ನೀತಿಯಲ್ಲಿ ವರ್ಗಾವಣೆ ಪ್ರಮಾಣವನ್ನು ಶೇಕಡಾ 15ಕ್ಕೆ ಏರಿಕೆ ಮಾಡಲಾಗಿದೆ.

ಪ್ರಮುಖವಾಗಿ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕರಿಗೆ ಕಡ್ಡಾಯ ವರ್ಗಾವಣೆ ನಿಗದಿ ಮಾಡಲಾಗಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 10 ವರ್ಷಗಳಿಂದ ಬೀಡು ಬಿಟ್ಟಿದ್ದವರಿಗೆ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ವರ್ಗಾವಣೆ ಮಾಡಲು, ಹಾಗೂ ನಗರಸಭೆ,ಪುರಸಭೆ ವ್ಯಾಪ್ತಿಯಲ್ಲಿ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ನೆಲೆಯೂರಿದ್ದವರಿಗೆ ಗ್ರಾಮಾಂತರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಹಾಗೂ ಗ್ರಾಮಾಂತರದಲ್ಲಿ 10 ವರ್ಷಗಳಿಂದ ಬೀಡು ಬಿಟ್ಟಿದ್ದವರಿಗೆ ನಗರಕ್ಕೆ ವರ್ಗಾವಣೆ ಮಾಡುವ ನಿಯಮ ಮಾಡಲಾಗಿದೆ.


ಗಂಡ-ಹೆಂಡತಿ, ಆನಾರೋಗ್ಯಪೀಡಿತರು, ವಿಧವೆಯರು, ಅಂಗವಿಕಲರು ಹಾಗೂ ಮಾಜಿ ಸೈನಿಕರಿಗೆ ಆದ್ಯತೆಯ ಮೇಲೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಇನ್ನು ತಾಲೂಕು ವ್ಯಾಪ್ತಿಯೊಳಗಷ್ಟೇ ಇದ್ದ ವರ್ಗಾವಣೆ ಇನ್ನು ಮುಂದೆ ಜಿಲ್ಲಾವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿದ್ದು, ಜಿಲ್ಲಾವ್ಯಾಪ್ತಿಯೊಳಗೇ ನಡೆಯುತ್ತಿದ್ದ ವರ್ಗಾವಣೆ ಇನ್ನು ವಲಯ ವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿದೆ. ಹಾಗೆಯೇ ವಲಯ ವ್ಯಾಪ್ತಿಯೊಳಗಿನ ವರ್ಗಾವಣೆ ಇನ್ನು ಮುಂದೆ ರಾಜ್ಯ ವ್ಯಾಪ್ತಿಗೆ ವಿಸ್ತರಣೆ ಮಾಡಿ ವರ್ಗಾವಣೆ ನೀತಿ ಪ್ರಕಟಿಸಲಾಗಿದೆ.

ಕಾಮೆಂಟ್‌ಗಳಿಲ್ಲ: