9.7.16

ಆರೋಗ್ಯ - 1



ಈಗಿನ್ ಕಾಲದಲ್ಲಿ ಹೊಟ್ಟೆ ಚೆನ್ನಾಗಿರಬೇಕಾದ್ರೆ ನಿಮಗೆ ಈ 11 ಒಳ್ಳೇ ಅಭ್ಯಾಸಗಳು ಇರಬೇಕು



ನಿಮ್ಮ ಹೊಟ್ಟೆ ಚೆನ್ನಾಗಿರಬೇಕಾದರೆ ಕೆಳಗಿನ 11 ವೈಜ್ಞಾನಿಕ ಅಭ್ಯಾಸಗಳ್ನ ಮಾಡ್ಕೊಳಿ:



1. ಹೊತ್ತೊತ್ತಿಗೆ ಸರಿಯಾಗಿ ತಿನ್ನಿ
ಹೊತ್ತೊತ್ತಿಗೆ ಸರಿಯಾಗಿ ಆಹಾರ ಬರತ್ತೆ ಅಂತ ನಮ್ಮ ದೇಹಕ್ಕೂ ಅರ್ಥ ಆಗಿರತ್ತೆ. ಅದು ಮುಕ್ಕಾಲಂಶ ಶಕ್ತೀನ ಆ ಹೊತ್ತಿಗೆ ಖರ್ಚು ಮಾಡಿರತ್ತೆ. ನಾವು ಸರಿಯಾದ ಹೊತ್ತಿಗೆ ತಿಂದೇ ಹೋದ್ರೆ, ಅದು ಬೇಗ ಊಟ ಬರತ್ತೆ ಅಂತ ಇರೋ ಶಕ್ತೀನೆಲ್ಲ ಖರ್ಚು ಮಾಡಿ ಆಗಿರತ್ತೆ; ಆದ್ರೆ ನಾವು ತಿಂದೇ ಇರೋದ್ರಿಂದ ಅದ್ರ ಪ್ರೋಗ್ರಾಂ ಎಲ್ಲಾ ಏರುಪೇರು ಆಗೋಗತ್ತೆ. ಅದಕ್ಕೆ 3-4 ಗಂಟೇಗೊಂದ್ಸಲ ಏನಾದ್ರೂ ತಿನ್ಲೇಬೇಕು ಅನ್ನೋದು.





2. ಚೆನ್ನಾಗಿ ನೀರು ಕುಡೀರಿ
ಚೆನ್ನಾಗಿ ನೀರು ಕುಡಿದ್ರೆ, ಚೆನ್ನಾಗಿ ಜೀರ್ಣ ಆಗತ್ತೆ. ದೇಹಕ್ಕೆ ನೀರು ಕಡ್ಮೆ ಆದ್ರೆ, ಕಡಿಮೆ ಕ್ಯಾಲೊರಿ ಖರ್ಚಾಗತ್ತೆ. ಮತ್ತೆ ಲಿವರ್ ಹಾಳಾಗತ್ತೆ. ಜಾಸ್ತಿ ನೀರು ಕುಡ್ಯಕ್ಕೆ ಆಗ್ಲಿಲ್ಲಾಂದ್ರೆ ಟೀ ಕುಡೀರಿ. ಗ್ರೀನ್ ಟೀ ತುಂಬಾ ಒಳ್ಳೇದು.



 
3. ಹಾಲು-ಮೊಸರು ಜಾಸ್ತಿ ತೊಗೋಳಿ
ಹಾಲು-ಮೊಸರು ಜಾಸ್ತಿ ತೊಗೊಂಡಷ್ಟೂ ಒಳ್ಳೇದು. ಇದ್ರಲ್ಲಿ ತುಂಬಾ ಪೌಷ್ಠಿಕಾಂಶ ಇರತ್ತೆ. ಇದು ಕೊಬ್ಬು ಕರಗಿಸಕ್ಕೆ ಮತ್ತು ಮಾಂಸಖಂಡಗಳನ್ನು ಗಟ್ಟಿ ಮಾಡಕ್ಕೆ ಸಹಕಾರ ನೀಡತ್ತೆ. ಹಾಲು-ಮೊಸರಲ್ಲಿರೋ ಕ್ಯಾಲ್ಷಿಯಂ ಜೀರ್ಣಶಕ್ತಿಗೆ ತುಂಬಾ ಒಳ್ಳೇದು. ಹೆಚ್ಚು ಕ್ಯಾಲ್ಷಿಯಂ ತಿಂದಷ್ಟೂ ಕೊಬ್ಬು ಕಡ್ಮೆ ಆಗತ್ತೆ.



 
4. ಚೆನ್ನಾಗಿ ವ್ಯಾಯಾಮ ಮಾಡಿ
ಜಾಗಿಂಗ್, ವಾಕಿಂಗ್, ನೃತ್ಯ, ಅಥವಾ ಜಿಂನಲ್ಲಿ ವ್ಯಾಯಾಮ ಮಾಡೋದ್ರಿಂದ ತಿಂದಿದ್ದು ಚೆನ್ನಾಗಿ ಜೀರ್ಣ ಆಗತ್ತೆ. ಶಕ್ತಿ ಬಿಟ್ಟು ವ್ಯಾಯಾಮ ಮಾಡಿದಷ್ಟೂ ಮಾಂಸಖಂಡಗಳಿಗೆ ಒಳ್ಳೇದು. ನಾವು ರೆಸ್ಟ್ ತೊಗೋತಾ ಇರೋವಾಗ್ಲೂ ನಮ್ಮ ಸ್ನಾಯುಗಳಿಗೆ ಶಕ್ತಿ ಬೇಕೇ ಬೇಕು. ಅದಿಕ್ಕೆ ನಮ್ಮ ಜೀರ್ಣಶಕ್ತಿ ಚೆನ್ನಾಗಿ ಆಗ್ಬೇಕೂಂದ್ರೆ ಚೆನ್ನಾಗಿ ವ್ಯಾಯಾಮ ಮಾಡ್ಲೇಬೇಕು.



 
5. ಬೆಳಿಗ್ಗೆ ಬೇಗ ಎದ್ದೇಳಿ
ಸೂರ್ಯನ ಬೆಳಕೂ ಸಹ ನಿಮ್ಮ ಜೀರ್ಣಶಕ್ತಿ ಮೇಲೆ ಪ್ರಭಾವ ಬೀರತ್ತೆ. ಬೆಳಗಿನ ಜಾವದ ಸೂರ್ಯನ ಬೆಳಕು ಮೈಗೆ ತುಂಬಾ ಒಳ್ಳೇದು. ಇದು ನೀವು ಖರ್ಚು ಮಾಡೋ ಶಕ್ತಿ ಮೇಲೂ ಪ್ರಭಾವ ಬೀರತ್ತೆ.




 
6. ಪೌಷ್ಠಿಕ ಆಹಾರ ಸೇವಿಸಿ; ಕಾರ್ಬೊಹೈಡ್ರೇಟ್ ಗಳನ್ನು ಕಡಿಮೆ ಮಾಡಬೇಡಿ
ಹೆಚ್ಚು ಪೌಷ್ಠಿಕಾಂಶ ಇರೋ ಆಹಾರ ತಿಂದಷ್ಟೂ ಜೀರ್ಣಶಕ್ತಿ ಚೆನ್ನಾಗಾಗತ್ತೆ. ಕಾರ್ಬೋಹೈಡ್ರೇಟ್ ಗಳು ಜೀರ್ಣಶಕ್ತಿಗೆ ತುಂಬಾ ಒಳ್ಳೇದು. ಇವು ಇಲ್ದೇ ಇದ್ರೆ, ಮಿದುಳು ಸರಿಯಾಗಿ ಕೆಲಸ ಮಾಡಲ್ಲ ಮತ್ತೆ ದೇಹದಲ್ಲಿ ಏರುಪೇರಾಗತ್ತೆ. ಕಾರ್ಬೊಹೈಡ್ರೇಟ್ ಇಲ್ದೆ ತೂಕಾ ಏನೋ ಕಮ್ಮಿ ಆಗತ್ತೆ, ಆದ್ರೆ ದೇಹದಲ್ಲಿ ನೀರೂ ಕಮ್ಮಿ ಆಗಿ ಹುಷಾರು ತಪ್ತೀರಿ.




 
7. ಕುರುಕಲು ತಿಂಡಿ ತಿನ್ನಬೇಡಿ
ಚಿಪ್ಸ್, ಸಾಂಡ್ ವಿಚ್, ಸಿಹಿ ತಿಂಡಿ ಹೀಗೆ ಕುರುಕ್ತಾ ಇರೋದು ದೇಹಕ್ಕೆ ಒಳ್ಳೇದಲ್ಲ. ನಾವು ಆಹಾರದಿಂದ ಪಡ್ಕೊಳ್ಳೋ ಶಕ್ತಿ ಸಾಮಾನ್ಯವಾಗಿ 3 ರಿಂದ 4 ಗಂಟೆಗಳ ಕಾಲ ಇರತ್ತೆ. ಆಮೇಲೆ ನಿಮ್ಮ ದೇಹ ಅದ್ರದ್ದೇ ಕೊಬ್ಬಿನಂಶ ಕರಗಿಸಿ ಶಕ್ತಿ ಪಡ್ಕೊಳತ್ತೆ. ಆಗ್ಗಾಗ್ಗಾ ಕುರುಕ್ತಾ ಇದ್ರೆ, ದೇಹ ತನ್ನ ಕೊಬ್ಬು ಕರಗ್ಸೋಕೆ ಅವಕಾಶ ಇರಲ್ಲ. ಅದಿಕ್ಕೆ ತೂಕ ಹೆಚ್ಚಾಗೋದು.



 
8. ಅಯೋಡಿನ್ ಇರೋ ಉಪ್ಪನ್ನೇ ಬಳಸಿ
ಸಮುದ್ರದ ಉಪ್ಪಿಗಿಂತ ಐಯೋಡಿನ್ ಇರೋ ಉಪ್ಪು ದೇಹಕ್ಕೆ ತುಂಬಾ ಒಳ್ಳೇದು. ಐಯೋಡಿನ್ ಕಮ್ಮಿ ಆದ್ರೆ ಥೈರಾಯ್ಡ್ ತೊಂದ್ರೆ ಬರತ್ತೆ, ಇದ್ರಿಂದ ಜೀರ್ಣಶಕ್ತೀಗೆ ಹಾನಿ ಆಗತ್ತೆ.



 
9. ಆದಷ್ಟು ಸಾವಯವ ಆಹಾರ ತಿನ್ನಿ
ಇವು ಜೀರ್ಣಶಕ್ತೀಗೆ ಒಳ್ಳೇದು. ಯಾಕೆ ಅಂದ್ರೆ ಇವುಗಳಲ್ಲಿ ಬೇಡ್ದೇ ಇರೋ ರಾಸಾಯನಿಕಗಳು, ಪೆಸ್ಟಿಸೈಡ್ ಗಳು, ಎಲ್ಲಾ ಇರಲ್ಲ. ಹೋಟೆಲ್ ಗೀಟೆಲ್ನೋರೆಲ್ಲ ಆಹಾರಗಳಲ್ಲಿ ಏನೇನೋ ಹಾಕಿ ರುಚಿ ಹೆಚ್ಚಿಸಿರ್ತಾರೆ, ನಿಜ… ಆದ್ರೆ ಇವುಗಳನ್ನ ತಿಂದ್ರೆ ಜೀರ್ಣಶಕ್ತಿ ಗೋವಿಂದ!! ಯೋಚ್ನೆ ಮಾಡಿ ತಿನ್ನಿ!!



 
10. ಕಬ್ಬಿಣದ ಅಂಶ ಹೆಚ್ಚಿಸಿಕೊಳ್ಳಿ
ದೇಹದಲ್ಲಿ ಕಬ್ಬಿಣ ಕಡ್ಮೆ ಆದ್ರೆ ಆಮ್ಲಜನಕಾನೂ ಕಮ್ಮಿ ಆಗಿ ಆರೋಗ್ಯಕ್ಕೆ ಹಾನಿ ಆಗತ್ತೆ. ಕಬ್ಬಿಣ ಕಡ್ಮೆ ಆಗಿದ್ರೆ, ಮೀನು, ಮಾಂಸ ಮತ್ತು ಸೇಬು ಜಾಸ್ತಿ ತಿನ್ನಿ.




 
11. ಒತ್ತಡ ಕಡಿಮೆ ಮಾಡ್ಕೊಳ್ಳಿ
ನಮ್ಮ ಒತ್ತಡಗಳು ಜೀರ್ಣ ಕ್ರಿಯೆ ಮೇಲೆ ಕೆಟ್ಟ ಪರಿಣಾಮ ಬೀರತ್ವೆ. ನಮ್ಮಲ್ಲಿ ಒತ್ತಡ ಜಾಸ್ತಿ ಆದಷ್ಟೂ ನಮ್ಮ ಜೀರ್ಣಪ್ರಕ್ರಿಯೆ, ದೇಹದ ಎಲ್ಲಾ ಕೆಲ್ಸಗಳೂ ಹೆಚ್ಚುಕಮ್ಮಿ ಆಗತ್ತೆ. ಥೈರಾಯ್ಡ್ ಜಾಸ್ತಿ ಆಗಿ ತೂಕ ಹೆಚ್ಚಾಗತ್ತೆ.

ಕಾಮೆಂಟ್‌ಗಳಿಲ್ಲ: