26.1.17

CET syllabus

CET_SYLLABUS
ಶಿಕ್ಷಕರ_ನೇಮಕಾತಿ_ಪಠ್ಯಕ್ರಮ

.
👉1 ರಿಂದ 5 ನೇ ತರಗತಿಗಳಿಗೆ ಶಿಕ್ಷಕರಾಗಬಯಸುವ ಅಭ್ಯರ್ಥಿಗಳು TET ಪತ್ರಿಕೆ 1 ನ್ನು ತೇರ್ಗಡೆಯಾಗಿರಬೇಕು ಅಲ್ಲದೇ ಪಿಯೂಸಿ ಜೊತೆಗ D.ed ವಿದ್ಯಾರ್ಹತೆಯನ್ನು ಹೊಂದಿರಬೇಕು. PUC - 35%, D. ED - 15%, TET- 15% CET-35% ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.

***SYLLABUS***

1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯ ಮಾನಗಳು) = 15 ಪ್ರಶ್ನೆಗಳು = 15 ಅಂಕಗಳು
2] ಶಿಶು ಮನೋವಿಜ್ಞಾನ ಮತ್ತು ವಿಕಸನ, ಬೋಧನಾ ಸಾಮರ್ಥ್ಯ = 25 ಪ್ರಶ್ನೆಗಳು = 25 ಅಂಕ*
*3] ಭಾಷೆ-1 (ಕನ್ನಡ, ಉರ್ದು, ಮರಾಠಿ ಇತ್ಯಾದಿ = 20 ಪ್ರಶ್ನೆ = 20 ಅಂಕ*
*4] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ*
*5] ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) = 20 ಪ್ರಶ್ನೆ = 20 ಅಂಕ*
*6] ಗಣಿತ = 20 ಪ್ರಶ್ನೆ = 20 ಅಂಕ*
*7] ಕಂಪ್ಯೂಟರ್ ಸಾಕ್ಷರತೆ = 25* *ಪ್ರಶ್ನೆ = 25 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*.
.
👉6 TO 8TH CET SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ
.
🌺6 ರಿಂದ 8 ನೇ ತರಗತಿಗಳಿಗೆ ಶಿಕ್ಷಕರಾಗಬಯಸುವ ಅಭ್ಯರ್ಥಿಗಳು TET ಪತ್ರಿಕೆ 2 ನ್ನು ತೇರ್ಗಡೆಯಾಗಿರಬೇಕು. ಅಲ್ಲದೇ BA-B.Ed, B. Sc- B. Ed or D. Ed with BA ವಿದ್ಯಾರ್ಹತೆಯನ್ನು ಹೊಂದಿರಬೇಕು. BA - 35%, CET- 35%, TET- 15%, (B. Ed with BA-15% ಇದು ಬಿ.ಇಡಿ ಹಾಗೂ ಬಿಎ ಪದವಿ ಹೊಂದಿದವರಿಗೆ ಮಾತ್ರ ) ಅನುಪಾತದ ಅಂಕಗಳ ಆಧಾರದ ಮೇಲೆ ಆಯ್ಕೆ ಪಟ್ಟಿ ತಯಾರಿಸಲಾಗುತ್ತದೆ.

🌺6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 1 ನೇ ಪತ್ರಿಕೆ ಸಾಮಾನ್ಯ ಪತ್ರಿಕೆ ಕಡ್ಡಾಯವಾಗಿರುತ್ತದೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು.

PAPER-1 ಸಾಮಾನ್ಯ ಜ್ಞಾನ 
SYLLABUS :

1] ಸಾಮಾನ್ಯ ಜ್ಞಾನ (ಪ್ರಚಲಿತ ವಿದ್ಯಮಾನಗಳು) = 30 ಪ್ರಶ್ನೆಗಳು = 30 ಅಂಕಗಳು*
*2] ಶಿಶು ಮನೋವಿಜ್ಞಾನ ಮತ್ತು ವಿಕಸನ = 40 ಪ್ರಶ್ನೆಗಳು = 40 ಅಂಕ*
*3] ಸಾಮಾನ್ಯ ಇಂಗ್ಲೀಷ್ = 25 ಪ್ರಶ್ನೆ = 25 ಅಂಕ*
*4] ಮೌಲ್ಯ ಶಿಕ್ಷಣ ಮತ್ತು ಆರೋಗ್ಯ ಶಿಕ್ಷಣ = 30 ಪ್ರಶ್ನೆ = 30 ಅಂಕ*
*5] ಕಂಪ್ಯೂಟರ್ ಸಾಕ್ಷರತೆ = 25 ಪ್ರಶ್ನೆ = 25 ಅಂಕ*
*ಒಟ್ಟು = 150 ಪ್ರಶ್ನೆಗಳು = 150 ಅಂಕಗಳು*

6 TO 8TH CET PAPER-2, 

OPTIONAL PAPER-2 

ENGLISH SYLLABUS :

 ಶಿಕ್ಷಕರ ನೇಮಕಾತಿ ಪಠ್ಯಕ್ರಮ

👉6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ.

🌹PAPER-2
🌹Optional Paper-2

ENGLISH SYLLABUS :-

👉1] English Grammar = 75 ಪ್ರಶ್ನೆಗಳು = 75 ಅಂಕಗಳು

👉2] English language Terms and Literature = 75 ಪ್ರಶ್ನೆಗಳು = 75 ಅಂಕ

👉ಒಟ್ಟು = 150 ಪ್ರಶ್ನೆಗಳು = 150 ಅಂಕಗಳು

.
6 TO 8TH CET 

SYLLABUS : ಶಿಕ್ಷಕರ ನೇಮಕಾತಿ ಪಠ್ಯಕ್ರಮ :: PAPER-2

OPTIONAL-PAPER-1

👉6 ರಿಂದ 8 ನೇ ತರಗತಿ ಶಿಕ್ಷಕರ ನೇಮಕಾತಿಗೆ CET ಬರೆಯುವ ಅಭ್ಯರ್ಥಿಗಳಿಗೆ ಎರಡು ಪತ್ರಿಕಗಳಿರುತ್ತವೆ. 2 ನೇ ಪತ್ರಿಕೆಯು ನಿರ್ದಿಷ್ಟ ಪತ್ರಿಕೆಯಾಗಿದ್ದು ಇದರಲ್ಲಿ ಎರಡು ಪತ್ರಿಕೆಗಳಿರುತ್ತವೆ. ಯಾವುದಾದರೊಂದು ಪತ್ರಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಅಥವಾ ಎರಡಕ್ಕೂ ಅರ್ಹತೆ ಇದ್ದರೆ ಎರಡನ್ನು ಬರೆಯಬಹುದು.

PAPER-2

OPTIONAL PAPER-I

ಕನ್ನಡ ಮತ್ತು ಸಮಾಜ ವಿಜ್ಞಾನ SYLLABUS :

👉1] ಕನ್ನಡ ಸಾಹಿತ್ಯ ಚರಿತ್ರೆ ಮತ್ತು ವ್ಯಾಕರಣ ಹಾಗೂ ಭಾಷಾ ಬೋಧನಾ ತತ್ವಗಳು = 75 ಪ್ರಶ್ನೆಗಳು = 75 ಅಂಕಗಳು
👉2] ಸಮಾಜವಿಜ್ಞಾನ -ಇತಿಹಾಸ, ಪೌರನೀತಿ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ = 75 ಪ್ರಶ್ನೆಗಳು = 75 ಅಂಕ
👉ಒಟ್ಟು = 150 ಪ್ರಶ್ನೆಗಳು = 150 ಅಂಕಗಳು

21.1.17

ಹಿಂದಿ ಭಾಷಣಗಳು

स्वतंत्रता दिवस पर भाषण – 15 August Independence Day speech

मेरे सभी आदरणीय आदरणीय अध्यापकगण, अभिभावको और प्यारे मित्रों को सुबह का प्रणाम (नमस्कार)। इस महान राष्ट्रीय अवसर को मनाने के लिये आज हम लोग यहाँ इकठ्ठा हुए है। मैं आप सभी को स्वतंत्रता दिवस की हार्दिक बधाई देता हूँ।

जैसा कि हम जानते है कि स्वतंत्रता दिवस हम सभी के लिये एक मंगल अवसर है। हम सब इस दिन को इसलिए मनाते है क्योकि 15 अगस्त 1947 को ही हमारा देश आज़ाद हुआ था, और ब्रिटिश राज से हमें मुक्ति मीली थी। आज हम यहाँ 70 वा स्वतंत्रता दिवस मनाने इकठ्ठा हुए है।

आज का दिन सभी भारतीय नागरिकों के लिये बहुत महत्वपूर्ण दिन है। और यह इतिहास में सदा के लिये उल्लिखित हो चुका है।

Loading...
नई दिल्ली में स्वतंत्रता दिवस के अवसर पर पंडित जवाहरलाल नेहरु ने भाषण दिया था। जब पूरी दुनिया के लोग सो रहे थे, ब्रिटीश शासन से जीवन और आजादी पाने के लिये भारत में लोग संघर्ष कर रहे थे। अब, आज़ादी के बाद, दुनिया में भारत सबसे बड़ा लोकतांत्रिक देश है। हमारा देश विविधता में एकता के लिये प्रसिद्ध है। भारतीय लोग हमेशा अपनी एकता से जवाब देने के लिये तैयार रहते है।

बड़ी ख़ुशी से हमारे पुरे देश में स्वतंत्रता दिवस मनाया जाता है। यह सभी भारतीयों के लिये बेहद महत्वपूर्ण दिन है क्योंकि यह दिन हमें मौका देता है उन महान स्वतंत्रता सेनानीयों को याद करने का जिन्होंने हमें एक शांतिपूर्ण और खूबसूरत जीवन देने के लिये अपने प्राणों की आहुति दे दी। आजादी से पहले, लोगों को पढ़ने-लिखने की, अच्छा खाने की और हमारी तरह सामान्य जीवन जीने की आज्ञा (Permission) नही थी। अपने अर्थहीन आदेशों की पूर्ति के लिये अंग्रेजों द्वारा भारतीयों के साथ गुलामों से भी ज्यादा बुरा बर्ताव किया जाता था।

भारत की आजादी के पहले दिन को याद करने के लिये हम हर साल 15 अगस्त को स्वतंत्रता दिवस मनाते है साथ ही साथ उन सभी महान लोगों याद करते है। जिनके कठिन संघर्षों की वजह से हम अपनी आजादी का उपभोग करने लायक बने है और अपनी इच्छा से खुली हवा में साँस से सकते है।

अंग्रेजों से आजादी पाना हमारे पूर्वजो के लिये बेहद असंभव कार्य था लेकिन हमारे पूर्वजो ने लगातार प्रयास करके इसे प्राप्त कर लिया। हम उनके किये कार्य को कभी भूल नहीं सकते और हमेशा उन्हें याद करते रहेंगे। केवल एक दिन में सभी स्वतंत्रता सेनानीयों के कामों को हम याद नहीं कर सकते लेकिन दिल से उन्हें सलामी जरुर दे सकते है। वो हमेशा हमारी यादों में रहेंगे और पूरे जीवन के लिये प्रेरणा का कार्य करेंगे।

आज सभी भारतीयों के लिये बहुत महत्वपूर्ण दिन है जिसको हम महान भारतीय नेताओं के बलिदानों को याद करने के लिये मनाते है, जिन्होंने देश की आजादी और समृद्धि के लिये अपना जीवन दे दिया। भारत की आजादी मुमकिन हो सकी क्योंकि सहयोग, बलिदान और सभी भारतीयों की सहभागिता थी। हमें महत्व और सलामी देनी चाहिये उन सभी भारतीय नागिरकों को क्योंकि वो असली राष्ट्रीय हीरो थे।

भारत के कुछ महान स्वतंत्रता सेनानीयो में बाल गंगाधर तिलक, महात्मा गांधी जी, नेताजी सुभाष चन्द्र बोस, जवाहरलाल नेहरु, खुदीराम बोस, चन्द्रशेखर आजाद, भगत सिंह, लाला लाजपत राय इत्यादि। ये सभी प्रसिद्ध देशभक्त थे जिन्होंने अपने जीवन के अंत तक भारत की आजादी के लिये कड़ा संघर्ष किया। हम लोग हमारे पूर्वजों द्वारा किये गए संघर्ष के उन डरावने पलों की कल्पना भी नहीं कर सकते। आजादी के इतने वर्षों बाद भी आज हमारा देश विकास के सही राह पर है। आज हमारा देश पूरी दुनिया में लोकतांत्रिक देश के रुप में अच्छे से स्थापित है।

गांधीजी एक महान नेता थे जिन्होंने अहिंसा और सत्याग्रह जैसे आजादी के असरदार तरीकों के बारे में हमें बताया। अहिंसा और शांति के साथ स्वतंत्र भारत के सपने को गाँधीजी ने ही देखा था।

भारत ही हमारी मातृभूमि है और हम आज़ाद भारत के आज़ाद नागरिक है। हमें हमेशा बुरे लोगो से अपने देश की रक्षा करते रहनी चाहिये। ये हमारी जिम्मेदारी है कि हम अपने देश को आगे की ओर ले जाये और इसे दुनिया का सबसे अच्छा देश बनाये।

आप सभी को स्वतंत्रता दिवस की ढेर सारी शुभकामनाये, आशा करते है की हमारा देश हर साल हर क्षेत्र में विकास करता रहे ताकि पूरी दुनियाँ को हमपर एक दिन गर्व हो।

20.1.17

ಅಂಬಿಗರ ಚೌಡಯ್ಯ

💐👏 *ನಿಜ ಶರಣ ಅಂಬಿಗರ ಚೌಡಯ್ಯ ನವರ ಬಗ್ಗೆ ಮಾಹಿತಿ*💐👏


*ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ
ಇಲ್ಲಿ ಮೂಡಿರುವ ಪದಗಳಿಗೆ ಯಾವುದೋ ದಿವ್ಯ ನಿರೀಕ್ಷೆಯ ಹಂಗಿಲ್ಲ. ಏನಾದರೂ ಬದಲಾದೀತೆಂಬ ಭ್ರಮೆಯೂ ಇಲ್ಲ. ಆದರೆ ಒಡಲಾಳದಲ್ಲೆಲ್ಲೋ ಸದಾಶಯವೊಂದರ ವ್ಯರ್ಥ ಆಧಾರ ಇದೆ ಎನ್ನುವುದನ್ನು ನಿರಾಕರಿಸುವುದಕ್ಕೆ ಸ್ವಲ್ಪ ಕಷ್ಟ ಅನಿಸುತ್ತದೆ.

ಹನ್ನೆರಡನೇ ಶತಮಾನ ಎನ್ನುವುದು ಈಗಲೂ ನಮ್ಮನ್ನು ಭಾವನಾತ್ಮಕವಾಗಿಯೇ ಆಳುತ್ತಿದೆ. ಆಚರಣೆಗಳ ಭಾರಕ್ಕೆ ಬಗ್ಗಿ ಹೋಗಿದ್ದ ಸನಾತನ ಸಂಸ್ಕøತಿಯಲ್ಲಿ ಬೆಳೆದಿದ್ದ ವರ್ಣಕಳೆಯನ್ನು ಅಂದು ವಚನ ಸಂಸ್ಕøತಿಯೆಂಬ ಧಾರ್ಮಿಕ ಕ್ರಾಂತಿಯು ಆವರಿಸಿಕೊಂಡಿತ್ತು. ತನ್ನ ಸರಳವಾದ ಭಾಷೆಯ ಮೂಲಕ ಜನರ ನಾಡಿ ಮಿಡಿತದೊಳಗೆ ಮಿಳಿತವಾಗಿ ಎಲ್ಲ ವರ್ಗಗಳ ವಿವೇಕ ಜಾಗೃತಿಯ ಕೆಲಸವನ್ನು ಅದು ಪರಿಣಾಮಕಾರಿಯಾಗಿ ಮಾಡಿತ್ತು. ಆ ಧಾರ್ಮಿಕ ಕ್ರಾಂತಿಗೆ ಶೋಷಿತ ವರ್ಗಕ್ಕೆ ಬೆನ್ನೆಲುಬಾಗುವ ಆಶಯವಷ್ಟೇ ಇರಲಿಲ್ಲ. ಎಲ್ಲೆಡೆಯೂ ಸಮಾನತೆಯ ತತ್ವವನ್ನು, ಜಾತಿ ರಹಿತ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ನಿಷ್ಕಳಂಕ ಕಾಳಜಿಯೂ ಅದಕ್ಕಿತ್ತು. ಬಸವಣ್ಣ, ಅಲ್ಲಮ ಪ್ರಭು, ಅಕ್ಕಮಹಾದೇವಿ, ಮಾದಾರ ಚೆನ್ನಯ್ಯ, ಹಡಪದ ಅಪ್ಪಣ್ಣ, ಒಬ್ಬರೇ ಇಬ್ಬರೇ! ಹತ್ತಾರು ಶಿವಶರಣರು ವರ್ಣತಂತುಗಳನ್ನು ಕಿತ್ತೊಗೆಯಲು ಪಣತೊಟ್ಟು ಸಮಾಜದ ಅಂತ:ಸತ್ವವನ್ನು ಬಡಿದೆಬ್ಬಿಸಿದ್ದರು. ವಚನ ಸಂಸ್ಕøತಿಯು ಸಮಾಜಕ್ಕೆ ನೀಡಿದ ಕ್ರಿಯಾತ್ಮಕ ಬೆರಗು, ಒದಗಿಸಿದ ಆರೋಗ್ಯಕರ ಸಂದೇಹ ಮತ್ತು ಹರವಿಟ್ಟ ಅವಿಚ್ಛಿನ್ನ ದೃಢತೆಯ ಅಭಿವ್ಯಕ್ತಿ ಇಂದಿಗೂ ಆದರ್ಶಯುತವೇ ಆಗಿ ಉಳಿದಿದೆಯೆಂದರೆ ಅದು ನಮ್ಮ ಭಾಷೆಯ, ಸಂಸ್ಕøತಿಯ ಉತ್ಕøಷ್ಟತೆಯನ್ನು ಆ ದಿನಗಳಲ್ಲಿಯೇ ಸ್ಪರ್ಶಿಸಿದ್ದಲ್ಲಿ ಯಾವುದೇ ಸಂದೇಹ ಇಲ್ಲ.
*ಇಂತಹ ಶರಣ ಸಂಸ್ಕøತಿಯಲ್ಲಿ ಸಾಗಿಹೋದ ಮಹಾಚೇತನಗಳ ಕುರಿತು ಸ್ವಲ್ಪ ಸಂಯಮದೊಂದಿಗೆ ಅವಲೋಕಿಸಿದಾಗ ಒಬ್ಬ ವ್ಯಕ್ತಿ ನಮ್ಮನ್ನು ಬಿಟ್ಟೂಬಿಡದ ರೀತಿಯಲ್ಲಿ ಆವರಿಸಿಕೊಂಡು ಅಂತರಂಗವನ್ನು ತಟ್ಟುತ್ತಾನೆ. ರಭಸ ನೀರಿನ ವಿರುದ್ಧ ಈಜುವ ಹಾಯಿದೋಣಿ, ತೆಪ್ಪದಲ್ಲಿ ಕುಳಿತ ಅಮಾಯಕ ಜನ, ಧೀರನಂತೆ ನಿಂತ ಹರಿಗೋಲು ಕೈಯಲ್ಲಿ ಹಿಡಿದ ಆ ಅಂಬಿಗ- ಹೀಗೆಯೇ ಆತನನ್ನು ನಾವು ಕಲ್ಪಿಸಿಕೊಳ್ಳಬೇಕು. ಆ ಅಂಬಿಗನ ಕೈಯಲ್ಲಿದ್ದದ್ದು ಅಂತಿಂತಹ ಹರಿಗೋಲಲ್ಲ. ಅದು ತನ್ನ ಜೊತೆಗಿದ್ದವರನ್ನು ಮನೋಸ್ವಾತಂತ್ರ್ಯದ ನೆಲೆಗೆ ಕರೆದೊಯ್ಯುವ ಭರವಸೆಯ, ಬಂಡಾಯದ ಹರಿಗೋಲು ಎನ್ನುವುದನ್ನೂ ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

ಅಂಬಿಗರ ಚೌಡಯ್ಯ ವಚನಕಾರರರೆಲ್ಲರಲ್ಲಿ ಇದ್ದ ಸುಶಿಕ್ಷವಾದ ಅಭಿವ್ಯಕ್ತಿ ಮಾರ್ಗವನ್ನು ತುಳಿಯಲಿಲ್ಲ. ತನ್ನ ಹತಾಶೆ, ನೋವು, ಬೇಗುದಿ ಎಲ್ಲವನ್ನೂ ಆತ ತನ್ನದೇ ತೀಕ್ಷ್ಣಪದಗಳ ಆಡುನುಡಿಯ ಮೂಲಕ ನಿರ್ಭಿಡೆಯಿಂದ ಬೆತ್ತಲಾಗಿಸುತ್ತಾ ಹೋದ. ಅಲ್ಲದೇ ಎಲ್ಲಾ ವಚನಕಾರರ ಹಾದಿಯಲ್ಲಿ  ತಾನು ನಡೆಯದೇ ಇಷ್ಟ ದೈವದ ಬದಲಿಗೆ ತನ್ನದೇ ಹೆಸರನ್ನು ತನ್ನ ವಚನಗಳ ಅಂಕಿತವಾಗಿ ಬಳಸಿಕೊಂಡು ಸಮಾಜದ ಓರೆಕೋರೆಗಳನ್ನು ತಿದ್ದುವ ಯತ್ನ ಮಾಡಿದ. ಅಂಬಿಗರ ಚೌಡಯ್ಯ ನಿಜಾರ್ಥದಲ್ಲಿ ಬಂಡಾಯ ವಚನ ಸಂಸ್ಕøತಿಯ ಹರಿಕಾರ. ವಚನ ಸಂಸ್ಕೃತಿಯ ಆ ತರ್ಕದ ಲೆಕ್ಕಾಚಾರಗಳಿಂದ ದೂರವುಳಿದು ಗಟ್ಟಿ ಮೌಲ್ಯಗಳ, ನಿರ್ಭಿಡೆಯ ನುಡಿಗಟ್ಟುಗಳ ಮೂಲಕ ಸಮಾಜದ ಓರೆಕೋರೆಗಳನ್ನು ಬೆತ್ತಲೆಯಾಗಿಸಿದ ಚೌಡಯ್ಯನ ಆಕ್ರೋಶದ ಅಭಿವ್ಯಕ್ತಿಯ ಹಾದಿ ಇಂದಿಗೂ ನಮ್ಮನ್ನು ಬೆಚ್ಚಿಸಿ ವಿಸ್ಮಯಗೊಳಿಸುತ್ತದೆ. ಆತ, ಮುನ್ನೂರರ ಆಸುಪಾಸಿನ ಸಂಖ್ಯೆಯ ವಚನಗಳನ್ನು ಬರೆದಿದ್ದಾನೆ. ಒಂದೆರಡನ್ನು ಓದಿಕೊಳ್ಳಿ. ಆತನ ಆಶಯ, ಧಾಟಿ ನಿಮಗೆ ಅರ್ಥವಾದೀತು.*

*“ಉಚ್ಚೆಯ ಬಚ್ಚಲಲ್ಲಿ ಹುಟ್ಟಿ, ನಾ ಹೆಚ್ಚು
ನೀ ಹೆಚ್ಚು ಎಂಬುವವರನ್ನು ಮಚ್ಚಿಲೇ ಹೊಡೆಯೆಂದಾನಂಬಿಗರ ಚೌಡಯ್ಯ”*
*ಕಂತೆ ತೊಟ್ಟವ ಗುರುವಲ*ಲ
*ಕಾವಿ ಹೊತ್ತವ ಜಂಗಮನಲ್ಲ*
*ಶೀಲ ಕಟ್ಟಿದವ ಶಿವಭಕ್ತನಲ್*ಲ
*ನೀರು ತೀರ್ಥವಲ್ಲ, ಕೂಳು ಪ್ರಸಾದವಲ್ಲ*
*ಹೌದೆಂಬವನ ಬಾಯಿ ಮೇಲೆ*
*ಅರ್ಧ ಮಣೆಯ ಪಾದರಕ್ಷೆಯ ತೆಗೆದುಕೊಂಡು*
*ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟಕನೆ*
*ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ”*
*ನನ್ನ ಕುಲ ಹೆಚ್ಚು, ನಿನ್ನ ಕುಲ ಕಡಿಮೆ*
*ಎಂದು ಹೊಡೆದಾಡುವಂತಹ ಅಣ್ಣಗಳನ್ನು*
*ಹಿಡಿತಂದು ಮೂಗನೆ ಸವರಿ ಮೆಣಸಿನ ಹಿಟ್ಟು*
*ತುಪ್ಪವ ತುಂಬಿ ನಮ್ಮ ಪಡಿಹಾರಿ ಉತ್ತಣ್ಣನ*
*ವಾಮ ಪಾದುಕೆಯಿಂದ ಫಡಫಡನೆ ಹೊಡೆಯಬೇಕೆಂದ*
*ನಮ್ಮ ಅಂಬಿಗರ ಚೌಡಯ್ಯ*
*“ಮೊಲೆ ಮೂಡಿ ಬಂದರೆ ಆ ಪಿಂಡವನು ಹೆಣ್ಣೆಂಬರು*
*ಗಡ್ಡ ಮೀಸೆಗಳು ಬಂದರೆ ಆ ಪಿಂಡವನು ಗಂಡೆಂಬರು*
*ಆ ಇಬ್ಬರ ನಡುವೆ ಸುಳಿವ ಆತ್ಮ ಹೆಣ್ಣೂ ಅಲ್ಲ ಗಂಡೂ ಅಲ್*ಲ
*ನೋಡಿರೆಂದನಮ್ಮಂಬಿಗರ ಚೌಡಯ್ಯ*
*ಈಶ್ವರನನ್ನು ಕಾಂಬುದೊಂದಾಶೆಯುಳ್ಳೊಡೆ*
*ಪರದೇಶಕ್ಕೆ ಹೋಗಿ ಬಳಲದಿರು*
*ಕಾಶಿಯಲ್ಲಿ ಕಾಯುವ ವಿನಾಶ ಮಾಡಬೇಡ*
*ನಿನ್ನಲ್ಲಿ ನೀ ತಿಳಿದು ನೋಡಾ, ಜಗವು ನಿನ್ನೊಳಗೆಂತಾದ ಅಂಬಿಗರ ಚೌಡಯ್ಯ*

*ಅಂತರಂಗದ ಬೇಗುದಿಯನ್ನು, ಕಳಕಳಿಯನ್ನು  ನಿರ್ಭಿಡೆಯಿಂದ ಪ್ರಕಟಿಸಿದ ಅಂಬಿಗರ ಚೌಡಯ್ಯನ ಧಾಟಿ ಓದುಗನಿಗೆ  ತೀವ್ರ ಒರಟೆನಿಸುವುದು ಸಹಜ. ಆದರೆ ಪ್ರಮುಖವಾಗಿ ನಾವು ಗಮನಿಸಬೇಕಾದ್ದು ಆ ಸಂವೇದನಾಶೀಲ ವಿಡಂಬನೆಯ ವಿಚಾರ ಸಿರಿವಂತಿಕೆ ಶತಮಾನಗಳು ಕಳೆದರೂ ಪ್ರಸ್ತುತವೇ ಆಗಿ ಉಳಿಯಬೇಕಿರುವ ಅವಶ್ಯಕತೆ.*

*ಒಂದು ಕ್ಷಣ ನಿಲ್ಲಿ! ಇಲ್ಲಿ ನಾನು ವಿವರಿಸಹೊರಟಿರುವುದು ಅಂಬಿಗರ  ಚೌಡಯ್ಯನ ಬಂಡಾಯ ಮನೋಧರ್ಮದ ಕ್ರಾಂತಿ ಹಾದಿಯ ವೈಭವವನ್ನಲ್ಲ. ದುಷ್ಟ ಸಮಾಜದೆಡೆಗಿನ ಆತನ ತಾರ್ಕಿಕ  ವಿಚಾರಣೆಯ ದಿಟ್ಟ ಧಾಟಿಯೂ ಅಲ್ಲ. ಮನೋದಾಸ್ಯದ ವಿರುದ್ಧ, ಜಾತಿ  ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಸ್ವಾರ್ಥ ರೀತಿಯಲ್ಲಿ ಹೋರಾಡಿ  ವಿಶ್ವಮಾನವ ಸಂದೇಶವನ್ನು ಬಿತ್ತಿ ಹೋದ ಛಡಿ ಏಟಿನ ಚೌಡಯ್ಯ  ಇಂದಿನ ವ್ಯವಸ್ಥೆಗೆ ಅಪ್ರಸ್ತುತನಾಗುತ್ತಿದ್ದಾನೆಯೇ? ಇಂದಿನ ಅಂಬಿಗರ ಚೌಡಯ್ಯ,  ಕಾಲಘಟ್ಟವೊಂದರ ಸಮಾಜವನ್ನು ಹೊಸಸ್ತರಕ್ಕೆ ಕರೆದೊಯ್ದಿದ್ದ ವಚನ ಸಂಸ್ಕøತಿಯ ವೈಫಲ್ಯದ ಒಂದು ಪಾಶ್ರ್ವವನ್ನು  ಬಿಂಬಿಸುತ್ತಿದ್ದಾನೆಯೇ? ಜಗತ್ತಿನ ಮುನ್ನಡೆಯೂ ಕಾಲದ ದೃಷ್ಟಿಯಿಂದ ಹಿನ್ನೆಡೆಯನ್ನು ಕಾಣುತ್ತದೆಯೇ? ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಕಾಲ ಇದು ಎನ್ನಿಸುತ್ತದೆ.*

*ಅಂಬಿಗರ ಚೌಡಯ್ಯನಂಥಹ ನಿಜಶರಣನ ಆ ಅಪೂರ್ವ ಸಂದೇಶಗಳು ಶತಮಾನಗಳು ಕಳೆಯುತ್ತಾ ಹೋದಂತೆ ಸಾಮಾಜಿಕ ವ್ಯವಸ್ಥೆಯಲ್ಲಿ ಗಟ್ಟಿಯಾಗುತ್ತಾ ಸಾಗಬೇಕಿತ್ತು.  ಶೋಷಣೆಗೆ ಒಳಗಾದ ಸಮಾಜ ವರ್ಗದ ಅಂತ:ಶಕ್ತಿ ಸ್ವಾವಲಂಬನೆಯಿಂದ* *ಸುಭದ್ರವಾಗಬೇಕಿತ್ತು. ವ್ಯವಸ್ಥೆಯಲ್ಲಿ  ರೂಪಿತವಾದ ಜನಪರ ಕಲ್ಯಾಣ ಕಾರ್ಯಕ್ರಮಗಳು ಆ ವರ್ಗಗಳ  ಅಂತರಂಗದಲ್ಲಿದ್ದ ಬೇಗುದಿಯನ್ನು ಭಸ್ಮ ಮಾಡಬೇಕಿತ್ತು ಮತ್ತು ಇಡೀ ಸಮಾಜ, ಜಾತಿ-ವರ್ಗಗಳನ್ನು ಮೀರಿ ವಿಶ್ವಮಾನವ ಪ್ರಜ್ಞೆಯ ಉದಾರತೆಯನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರಬೇಕಿತ್ತು. ಆದರೆ, ಇಂದಿನ ಪರಿಸ್ಥಿತಿ ನೋಡಿದಾಗ ಇಡೀ ವಚನ ಸಂಸ್ಕøತಿಯ ಪರಿಣಾಮಗಳ ಬಗ್ಗೆ ವಿಷಾದವೆನಿಸುವ ಸಿನಿಕತೆ ಮೂಡುತ್ತದೆ.*

*ಚೌಡಯ್ಯ ಈಗ ಒಂದು ಜಾತಿಯ ಸ್ವತ್ತಾಗಿ ಸೊರಗಿದ್ದಾನೆ ಮತ್ತು ಆತನಷ್ಟೇ ಅಲ್ಲ, ಎಲ್ಲಾ ಶರಣರೂ ಒಂದೊಂದು ಜಾತಿಗೆ ಸೀಮಿತವಾಗಿಬಿಟ್ಟಿದ್ದಾರೆ. ಆಯಾ ಜಾತಿಯ ಇಂದಿನ ಜನಸಂಖ್ಯೆಯ ಪ್ರಾಬಲ್ಯದ ಮೇಲೆ ಆಯಾ ಶರಣರ ಸಂದೇಶಗಳು ಪ್ರಸ್ತುತತೆಯ ಕೀರ್ತಿಯನ್ನು ಗಳಿಸಿಕೊಳ್ಳುತ್ತಿರುವುದೂ ವಿಷಾದದ ಸತ್ಯ. ಅಂಬಿಗರ ಚೌಡಯ್ಯನ ವಿಷಯದಲ್ಲಿಯಂತೂ, ಶರಣನಾಗಲು ಆತ ದೀಕ್ಷೆ ನೀಡಿದ ಒಂದು ಜಾತಿ ಅವನನ್ನು ಒಂದೆಡೆಗೆ ಎಳೆಯುತ್ತಿದ್ದರೆ ಅವನು ಜನಿಸಿದ ಮೂಲಜಾತಿಯ ಮತಸ್ಥರು ಆತನನ್ನು ತಮ್ಮ ಸಾಮಾಜಿಕ ಅಸ್ತಿತ್ವದ ಕುರುಹಾಗಿ ಸ್ವೀಕರಿಸಿ ತಮ್ಮೆಡೆಗೆ ಸೆಳೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆತ, ಇಂದು ರಾಜಕಾರಣಿಗಳಿಗೆ ಮತಬ್ಯಾಂಕನ್ನು ಸೃಷ್ಟಿಸುವ ಮೋಡಿಗಾರ. ಇಂದು ಆತನ ಹೆಸರಿನಲ್ಲಿ ಎರಡು ವಿಶ್ವ ವಿದ್ಯಾಲಯಗಳಲ್ಲಿ ‘ಪೀಠ’ ಎನ್ನುವ ಗದ್ದುಗೆಗಳನ್ನು ಸ್ಥಾಪಿಸಲಾಗಿದೆ. ರಾಜಕೀಯ ಪ್ರಾಬಲ್ಯದ ಕಾರಣ ಆತನ ಜಯಂತಿಯ ಆಚರಣೆಗೆ ಸರ್ಕಾರದ ಅಧಿಕೃತ ಮುದ್ರೆಯೂ ಬಿದ್ದಿದೆ. ಆತನ ವಚನಗಳಲ್ಲಿದ್ದ ಧರ್ಮ ನಿರ್ಭಿಡತೆಯ, ಜೀವನ ಪ್ರೀತಿಯ ಆಶಯ ಅವನತಿಯೆಡೆಗೆ ಮುಖ ಮಾಡಿ ನಿಲ್ಲುತ್ತಿದೆ. ಜಾತಿಯೆಂಬ ವಿಹೀನ ಆಚರಣೆ ಸಂಸ್ಕøತಿಯೆಂಬ ಜೀವನತತ್ವವನ್ನೇ ಬುಡಮೇಲು ಮಾಡಲು *ನಿಂತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಇನ್ನು, ಆಡಳಿತ ಚುಕ್ಕಾಣಿ ಹಿಡಿದ ಸರ್ಕಾರಗಳು ಆತನ ತಾತ್ವಿಕ ಸಂದೇಶಗಳನ್ನು, ಜಾತಿ-ಧರ್ಮಗಳ ಸಂಕೋಲೆಗಳಿಂದ ಮುಕ್ತಗೊಳಿಸಿ ಇಡೀ ಸಾಮಾಜಿಕ ವ್ಯವಸ್ಥೆಯೊಳಗೆ ಹರಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿವೆಯೇ? ಈ ಜಾಡಿನಲ್ಲಿ ಸಿಗುವ ಕೆಲವು ಸತ್ಯಗಳು ಇಂದಿನ ಮಟ್ಟಿಗಂತೂ ನಿರಾಶೆಯನ್ನೇ ಮೂಡಿಸುತ್ತವೆ.*

*1.ರಾಣಿಬೆನ್ನೂರು ತಾಲ್ಲೂಕಿನ ಚೌಡಯ್ಯದಾನಪುರದ ಗ್ರಾಮದ ಪಕ್ಕದಲ್ಲಿಯೇ ವಿಶಾಲವಾಗಿ ಹರಿಯುವ ತುಂಗಭದ್ರೆಯ ತಟದಲ್ಲಿ ಚೌಡಯ್ಯ ಲಿಂಗೈಕ್ಯನಾದ ಸ್ಥಳ ಇದೆ. ಪ್ರತಿ ಮಳೆಗಾಲದಲ್ಲಿನ ನೆರೆಗೆ ಅದಕ್ಕೆ ಮುಳುಗುವ ಭಾಗ್ಯವೂ, ದೌರ್ಭಾಗ್ಯವೂ ಇದೆ. ಅಂಬಿಗನ ಆತ್ಮವಾದ ಕಾರಣ, ಮುಳುಗದೇ ಉಳಿದೆನೆನ್ನುವ ಹಾಗೆ ದರ್ಶನ ನೀಡುವ ಸೌಭಾಗ್ಯವೂ ಅದಕ್ಕಿದೆ. ಈ ಚೌಡಯ್ಯದಾನಪುರದ ಜಾಗವನ್ನು ಅಂಬಿಗರ ಚೌಡಯ್ಯ ತನ್ನ ಗುರುವಾದ* *ಶಿವದೇವಮುನಿಗಳಿಗೆ ದಾನವಾಗಿ ಕೊಟ್ಟಿರುವ ಬಗ್ಗೆ ಶಿಶುನಾಳ ಷರೀಫರು ರಚಿಸಿದ ‘ಶಿವದೇವ ವಿಜಯಂ’ ಎಂಬ ಪುಸ್ತಕದಲ್ಲಿ ಉಲ್ಲೇಖವಿದೆ. ಹಾಗಾಗಿಯೇ ಊರಿಗೆ ಆ ಹೆಸರು ರೂಢಿಗೆ ಬಂದಿತೆಂದೂ ಅದರಲ್ಲಿ ವಿವರಿಸಲಾಗಿದೆ.*
*ವೀರಶೈವ ಸಮುದಾಯದ ಶಿವದೇವಮುನಿಗಳು ಆತನಿಗೆ ಲಿಂಗದೀಕ್ಷೆ ನೀಡಿದರೆಂಬ ಕಾರಣಕ್ಕೆ, ಅನುಜನೆಂಬ ಮಮತೆಗೆ ಶ್ರೀ ಶಿವದೇವ ಒಡೆಯರ ಎಂಬ ವಕೀಲರು ಚೌಡಯ್ಯ ಲಿಂಗೈಕ್ಯನಾದ ಸ್ಥಳದಲ್ಲಿ ಗದ್ದುಗೆಯ ಜೀರ್ಣೋದ್ಧಾರ ಮಾಡಿ 1968ರಷ್ಟು ಹಿಂದೆಯೇ* *ಪುಟ್ಟದಾದ ಐಕ್ಯ ಮಂಟಪವನ್ನು ನಿರ್ಮಿಸಿದ್ದಾರೆ. ಕಾಲಾನುಕ್ರಮದಲ್ಲಿ ಸಾಮಾಜಿಕ ಪರಿಸ್ಥಿತಿಗಳ ಮನ್ವಂತರದ ಹಿನ್ನೆಲೆಯಲ್ಲಿ ರಾಜಕೀಯ ಪ್ರಾಬಲ್ಯಗಳು ಹೆಚ್ಚಿದಂತೆಲ್ಲಾ ಅಂಬಿಗರ ಚೌಡಯ್ಯನ  ಮೂಲ ಸಮಾಜಸ್ಥರು ‘ಸಬಲತೆ’ಯನ್ನು ಗಳಿಸಿಕೊಂಡಿದ್ದಾರೆ. ಅದು ಸಹಜವೂ ಹೌದು. ಈ ಕಾರಣಕ್ಕೆ ಅಂಬಿಗರ ಚೌಡಯ್ಯ ತಮ್ಮವನೆಂದು* *ಹೇಳಿಕೊಳ್ಳುವ ಕಸುವು ಅವರಲ್ಲಿ ವೃದ್ಧಿಯಾಗಿ ಎರಡೂ ವರ್ಗಗಳಲ್ಲಿ ಹಬ್ಬಿದ ವಿಚಾರಬೇಧಗಳು ಚೌಡಯ್ಯನ  ಆತ್ಮವನ್ನು ಅನಾಥನನ್ನಾಗಿ ಮಾಡಿವೆ! ಇಂದು ಅಂಬಿಗರ ಚೌಡಯ್ಯನ ಐಕ್ಯಮಂಟಪದ ಸುತ್ತಲೂ, ಒಳಗೂ ಕಸ, ಕಡ್ಡಿ, ಕೊಳಚೆಗಳು ನಾರುತ್ತಿವೆ. ಪಕ್ಕದಲ್ಲಿಯೇ ಮರಳು ಸಾಗಾಣಿಕೆ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೆ ಸುತ್ತಮುತ್ತಲಿನ ಜಾಗ ಗ್ರಾಮಸ್ಥರ ಬಹಿರ್ದೆಸೆಯ ನಿರಾಳತೆಗೂ ಸಾಕ್ಷಿಯಾಗಿ ನಿಂತಿದೆ. ಪಕ್ಕದಲ್ಲಿಯೇ, ಮೇಲ್ಮಟ್ಟದಲ್ಲಿ ಇದ್ದುದರಲ್ಲಿ ಸುರಕ್ಷಿತವಾಗಿರುವ ಚಾಲುಕ್ಯರ ಕಾಲದ ಮುಕ್ತೇಶ್ವರ ದೇವಸ್ಥಾನ ಪಾರಂಪರಿಕ ಪಟ್ಟ ಗಿಟ್ಟಿಸಿಕೊಂಡು ಅದನ್ನು ಅಣಕಿಸುವಂತೆ ತೋರುತ್ತದೆ.*
*ಒಡೆಯರ ಮತದ ಇಂದಿನ ಮಠಾಧೀಶರು ಅಂಬಿಗರ ಚೌಡಯ್ಯನನ್ನು ಆತನ ಮೂಲ ಸಮುದಾಯ ರಾಜಕೀಯವಾಗಿ* *ಅಪಹರಿಸಿಕೊಂಡಿರುವ ವಿಷಯದ ಬಗ್ಗೆ ಖಿನ್ನತೆಯ ಉಪೇಕ್ಷೆಯನ್ನು ತೋರಿದಂತೆ ಕಂಡರೆ, ಚೌಡಯ್ಯನ ಮೂಲ ಮತಸ್ಥರು ರಾಜಕೀಯ ನಾಯಕರ ಸಹಕಾರದೊಂದಿಗೆ ಹೊಸದಾಗಿ ಬೇರೊಂದು ಸ್ಥಳದಲ್ಲಿ ‘ಅಂಬಿಗರ ಚೌಡಯ್ಯನ ಪೀಠ’ವನ್ನು ನಿರ್ಮಿಸುವ ಬೃಹತ್ ಕಾರ್ಯದಲ್ಲಿ ತೊಡಗಿದ್ದಾರೆ. ಐಕ್ಯ ಮಂಟಪ ಅನಾಥವಾಗಿದೆ. ತುಂಗಭದ್ರೆಯೂಸಹನೆಯಿಂದ ಸೊರಗಿದಾಳೆ.*

19.1.17

2016ರಲ್ಲಿ ಸದ್ದು ಮಾಡಿದ ಸುದ್ದಿಗಳ ಪಟ್ಟಿ


*ಜನವರಿ*
* ಜನವರಿ 2 - ಪಠಾಣ್ ಕೋಟ್ ವಾಯು ನೆಲೆ ಮೇಲೆ ಉಗ್ರರ ದಾಳಿ
* ಇಸ್ರೋ ದಿಂದ ಐಆರ್ಎನ್ಎಸ್ಎಸ್-1ಇ ಉಪಗ್ರಹ ಯಶಸ್ವಿ ಉಡಾವಣೆ
* ಅಂತರ ಶಾಲಾ ಕ್ರಿಕೆಟ್ ಟೂರ್ನಿಯಲ್ಲಿ 1000 ರನ್ ಗಳಿಸಿ ಪ್ರಣವ್ ಧನಾವಡೆ ವಿಶ್ವ ದಾಖಲೆ

*ಫೆಬ್ರವರಿ*
* ನಿಜವಾಯಿತು ಐನ್ಸ್ಟೀನ್ ಭವಿಷ್ಯ ನುಡಿ; ಪತ್ತೆಯಾಯಿತು ಗುರುತ್ವಾಕರ್ಷಣ ಅಲೆ
* ರಸೂಲ್ ಪೂಕುಟ್ಟಿಗೆ ಗೋಲ್ಡನ್ ರೀಲ್ ಪ್ರಶಸ್ತಿ
* ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಹುತಾತ್ಮರಾದ ಯೋಧ ಹನುಮಂತಪ್ಪ ಕೊಪ್ಪದ್

*ಮಾರ್ಚ್*
* ಉದ್ದೀಪನ ಮದ್ದು ಸೇವನೆ ಆರೋಪದಲ್ಲಿ ಟೆನ್ನಿಸ್ ತಾರೆ ಮರಿಯಾ ಶರಪೋವಾಗೆ ನಿಷೇಧ
* ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ಬಾಹುಬಲಿ ಅತ್ಯುತ್ತಮ ಚಿತ್ರ
* ಮಲಯಾಳಂ ನಟ ಕಲಾಭವನ ಮಣಿ ನಿಧನ

*ಏಪ್ರಿಲ್*
* ದೇಶದ ಅತಿ ವೇಗದ ರೈಲು ''ಗತಿಮಾನ್ ಎಕ್ಸ್ಪ್ರೆಸ್'ಗೆ ಚಾಲನೆ
* ಮಹಿಳೆಯರಿಂದ ಶನಿ ಶಿಂಗ್ಣಾಪುರ ದೇಗುಲ ಪ್ರವೇಶ
ಇಕ್ವಿಡಾರ್ನಲ್ಲಿ ಭೂಕಂಪ: 500ಕ್ಕೂ ಹೆಚ್ಚು ಮಂದಿ ಸಾವು

*ಮೇ*
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ -7 ಆಯಪಲ್ ಕಂಪನಿಯ ಇಂಡಿಯಾ ಸಿಇಒ ಸಂಜಯ್ ಕೌಲ್ ನೇಮಕ
* ಮೇ 10 - ಉತ್ತರಾಖಂಡ್ ನಲ್ಲಿ ಹರೀಶ್ ರಾವುತರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ
* ಮೇ 16- ಕೇರಳದಲ್ಲಿ ಎಲ್ ಡಿ ಎಫ್ ಸರ್ಕಾರ ಅಧಿಕಾರಕ್ಕೆ
* ಮೇ 23 ಶ್ರೀಹರಿಕೋಟಾದಲ್ಲಿ ಆರ್ ಎಲ್ ವಿ ( ರೀಯೂಸೆಬಲ್ ಲಾಂಚ್ ವೆಹಿಕಲ್ )ಟೆಕ್ನಾಲಜಿ ಡೆಮಾನ್ ಸ್ಟ್ರೇಟರ್ ಯಶಸ್ವೀ ಪರೀಕ್ಷೆ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ
* ಹೈದರಾಬಾದ್ನ ಹುಸೇನ್ ಸಾಗರ್ ಸರೋವರ ಬಳಿ ದೇಶದ ಅತಿದೊಡ್ಡ ತ್ರಿವರ್ಣ ಧ್ವಜಾರೋಹಣ
* ಮೇ 29- ಅತೀ ವೇಗದ ರೈಲು ಟಾಲ್ಗೋ ಯಶಸ್ವಿ ಪರೀಕ್ಷೆ

*ಜೂನ್*
* ಜೂನ್ 5- ಫ್ರೆಂಚ್ ಓಪನ್ ಟೆನಿಸ್ ಕಿರೀಟ ಗೆದ್ದ ನೋವಾಕ್ ಜೊಕೊವಿಕ್
* ಸೈನಾ ನೆಹ್ವಾಲ್ ಮುಡಿಗೆ ಆಸ್ಟ್ರೇಲಿಯನ್ ಬ್ಯಾಡ್ಮಿಂಟನ್ ಕಿರೀಟ
* ಮೈಕ್ರೋಸಾಫ್ಟ್ ನಿಂದ ಲಿಂಕ್ಡ್ ಇನ್ ಖರೀದಿ- ₹1,75000 ಕೋಟಿಗೆ ಖರೀದಿ
* ಮೋಹನ ಸಿಂಗ್, ಅವನಿ ಚೌಧರಿ, ಭಾವನಾ ಕಾಂತ್ - ಯುದ್ಧ ವಿಮಾನ ಪೈಲೆಟ್ ಗಳಾದ ಮಹಿಳೆಯರು
* ಜೂನ್ 22 ಏಕಕಾಲಕ್ಕೆ 20 ಉಪಗ್ರಹಗಳ ಉಡ್ಡಯನ
* ಬ್ರೆಕ್ಸಿಟ್ -ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರಕ್ಕೆ
* ಭಾರತಕ್ಕೆ ದಕ್ಕದ ಎನ್ಎಸ್ಜಿ ಸದಸ್ಯತ್ವ
* ಕೋಪಾ ಅಮೆರಿಕಾ ಫುಟ್ಬಾಲ್ ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಗೆದ್ದ ಚಿಲಿ
* ಮಿಸೈಲ್ ಟೆಕ್ನಾಲಜಿ ಕಂಟ್ರೋಲ್ ರೆಜಿಮ್ (ಎಂಟಿಸಿಆರ್ ) ನಲ್ಲಿ ಸದಸ್ಯತ್ವ ಪಡೆದ ಭಾರತ
* ಜೂನ್ 29 -ನೌಕಾ ಸೇನೆಗೆ ವರುಣಾಸ್ತ್ರ ಸೇರ್ಪಡೆ
* ಜೂನ್ 30 - ಸಲಿಂಗಕಾಮಿಗಳು ಟ್ರಾನ್ಸ್ ಜೆಂಡರ್ ಗಳೆಂದು ಪರಿಗಣಿಸಲ್ಪಡುವುದಿಲ್ಲ - ಸುಪ್ರೀಂ ಕೋರ್ಟ್
* ಜೂನ್ 4- ಬಾಕ್ಸಿಂಗ್ ದಂತ ಕತೆ ಮುಹಮ್ಮದ್ ಅಲಿ ನಿಧನ

*ಜುಲೈ*
* ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ವಾಯುಪಡೆದೆ ಸೇರ್ಪಡೆ
* ಗುರು ಗ್ರಹದ ಕಕ್ಷೆಗೆ ಸೇರಿದ ಜೂನೋ ಗಗನ ನೌಕೆ
* ಜುಲೈ 8- ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿ ಹತ್ಯೆ
* ಜುಲೈ 10 - ಫ್ರಾನ್ಸ್ ಪರಾಭವಗೊಳಿಸಿದ ಪೋರ್ಚುಗಲ್ಗೆ ಯೂರೋ ಕಪ್
* ಏಷ್ಯಾ ಫೆಸಿಪಿಕ್ ಸೂಪರ್ ಮಿಡಲ್​ವೇಟ್ ಪ್ರಶಸ್ತಿ ಗೆದ್ದ ಬಾಕ್ಸರ್ ವಿಜೇಂದರ್ ಸಿಂಗ್
* ತೆರೆಸಾ ಮೇ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ
* ಟರ್ಕಿ ಸೇನಾ ದಂಗೆ: 200ಕ್ಕಿಂತಲೂ ಹೆಚ್ಚು ಸಾವು- ಸೇನೆ ಕೈಯಿಂದ ಅಧಿಕಾರ ಮರಳಿ ಪಡೆದು ದೇಶದ ಆಡಳಿತದ ಮೇಲೆ ಮತ್ತೆ ನಿಯಂತ್ರಣ
* ಸೇನಾಪಡೆ ಅಧಿಕಾರಿಗಳು ಸೇರಿದಂತೆ 29 ಮಂದಿ ಪ್ರಯಾಣಿಸುತ್ತಿದ್ದ ವಾಯುಸೇನೆಯ ವಿಮಾನ ನಾಪತ್ತೆ
* ಕರ್ನಾಟಕದ ಮಾನವ ಹಕ್ಕು ಹೋರಾಟಗಾರ ಬೆಜವಾಡ ವಿಲ್ಸನ್, ದಕ್ಷಿಣ ಭಾರತೀಯ ಶಾಸ್ತ್ರೀಯ ಸಂಗೀತ ವಿದ್ವಾಂಸ ಚೆನ್ನೈನ ಟಿ.ಎಂ ಕೃಷ್ಣ ಅವರಿಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ

*ಅಗಸ್ಟ್*
* ಗುಜರಾತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಆನಂದಿ ಬೆನ್
* ನೇಪಾಳದ ನೂತನ ಪ್ರಧಾನಿಯಾಗಿ ಪುಷ್ಪಕಮಲ್ ದಹಲ್ (ಪ್ರಚಂಡ) ಆಯ್ಕೆ
* ಅಗಸ್ಟ್ 7- ವಿಜಯ್ ರೂಪಾಣಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ
* 16 ವರ್ಷಗಳ ದೀರ್ಘ ಉಪವಾಸ ಅಂತ್ಯಗೊಳಿಸಿದ ಇರೋಮ್ ಚಾನು ಶರ್ಮಿಳಾ
* ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಸೂದೆ ಪಾಸ್
* ಹವಿಲ್ದಾರ್ ಹಂಗ್ಪನ್ ದಾದಾಗೆ ಅಶೋಕ ಚಕ್ರ
* ಲೆ.ಕರ್ನಲ್ ಇ.ಕೆ.
ನಿರಂಜನ್ ಅವರಿಗೆ ಶೌರ್ಯ ಚಕ್ರ
* ಚೀನಾದಲ್ಲಿ ಅತೀ ದೊಡ್ಡ ಗಾಜಿನ ಸೇತುವೆ ಅನಾವರಣ
* ರಿಯೊ ಒಲಿಂಪಿಕ್ಸ್ : ಬ್ಯಾಡ್ಮಿಂಟನ್ (ಮಹಿಳಾ ವಿಭಾಗ)ದಲ್ಲಿ ಪಿವಿ ಸಿಂಧುವಿಗೆ ಬೆಳ್ಳಿ ಪದಕ
* ಮಹಿಳಾ ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ಗೆ ಕಂಚಿನ ಪದಕ
* ಮಹಿಳಾ ಜಿಮ್ನಾಸ್ಟಿಕ್ಸ್ನಲ್ಲಿ ದೀಪಾ ಕರ್ಮಾಕರ್ಗೆ ನಾಲ್ಕನೇ ಸ್ಥಾನ
* ಅಗಸ್ಟ್ 24 -ಇಟೆಲಿಯಲ್ಲಿ ಭೂಕಂಪ ; 250ಕ್ಕಿಂತಲೂ ಹೆಚ್ಚು ಸಾವು
* ಅಗಸ್ಟ್ 28 - ಶೀಲಂಕಾ ಕ್ರಿಕೆಟಿಗ ತಿಲಕೇರತ್ನ ದಿಲ್ಶಾನ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ

*ಸಪ್ಟೆಂಬರ್*
* ಮದರ್ ತೆರೆಸಾಗೆ ಸಂತ ಪದವಿ
* ಶೂಟರ್ ಅಭಿನವ್ ಬಿಂದ್ರಾ ವಿದಾಯ
* ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅಧಿಕಾರವಾಧಿ ಅಂತ್ಯ
* ಸೆಪ್ಟೆಂಬರ್ 5- ಭಾರತೀಯ ರಿಸರ್ವ್ ಬ್ಯಾಂಕ್ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ
* ಕಕ್ಷೆ ಸೇರಿದ ಇನ್ಸ್ಯಾಟ್ 3 ಡಿ ಆರ್
* ಮಸ್ವಿಜರ್ಲೆಂಡ್ನ ಸ್ಟಾನಿಸ್ಲಾಸ್ ವಾವರಿಂಕಾ ಮುಡಿಗೆ ಯುಎಸ್ ಓಪನ್ ಕಿರೀಟ
* ಯುಎಸ್ ಓಪನ್ ಮಹಿಳಾ ಟೆನಿಸ್ ಕಿರೀಟ ಗೆದ್ದ ಜರ್ಮನಿಯ ಆಯಂಜಲಿಕ್ ಕೆರ್ಬರ್
* ಗ್ರ್ಯಾಂಡ್ ಸ್ಲಾಮ್ ಇತಿಹಾಸದಲ್ಲಿ ಅತೀ ಹೆಚ್ಚು ಪಂದ್ಯ (308) ಗೆದ್ದ ದಾಖಲೆ ತನ್ನದಾಗಿಸಿಕೊಂಡ ಸೆರೀನಾ ವಿಲಿಯಮ್ಸ್
* ರಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಮರಿಯಪ್ಪನ್ ತಂಗವೇಲು (ಹೈಜಂಪ್), ವರುಣ್ ಸಿಂಗ್ ಭಾಟಿಗೆ ಕಂಚು
* ಜ್ಯಾವೆಲಿನ್ ಥ್ರೋ ವಿಭಾಗದಲ್ಲಿ ದೇವೇಂದ್ರ ಜಜಾರಿಯಾಗೆ ಚಿನ್ನ
* ಶಾಟ್ಪುಟ್ ಮಹಿಳಾ ವಿಭಾಗದಲ್ಲಿ ದೀಪಾ ಮಲಿಕ್ಗೆ ಬೆಳ್ಳಿ
* ಸಪ್ಟೆಂಬರ್ 18- ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ: 19 ಸೈನಿಕರು ಹುತಾತ್ಮ
* ನವದೆಹಲಿಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸವಿರುವ ರೇಸ್ ಕೋರ್ಸ್ ರಸ್ತೆಯ ಹೆಸರು ಕಲ್ಯಾಣ್ ಮಾರ್ಗ್ ಎಂದು ಬದಲಾವಣೆ
* ಅನ್ಯಗ್ರಹ ಜೀವಿಗಳನ್ನು ಪತ್ತೆ ಹಚ್ಚಲಿರುವ ಅತೀ ದೊಡ್ಡ ದೂರದರ್ಶಕ ಚೀನಾದಲ್ಲಿ ಕಾರ್ಯಾರಂಭ
* ಸೆಪ್ಟೆಂಬರ್ 23ರಿಂದ 27ರವರೆಗೆ ನಡೆದ ಭಾರತದ 500ನೇ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತಕ್ಕೆ ಐತಿಹಾಸಿಕ ಗೆಲವು
* ಸಪ್ಟೆಂಬರ್ 29 - ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತದ ಸೇನೆಯಿಂದ ನಿರ್ದಿಷ್ಟ ದಾಳಿ

*ಅಕ್ಟೋಬರ್*
* ಪ್ಯಾರಿಸ್ ಹವಾಮಾನ ಒಪ್ಪಂದ ಸೇರಿದ ಭಾರತ
* ಅಮೆರಿಕದ ಹೈಟಿ ರಾಜ್ಯಕ್ಕೆ ಅಪ್ಪಳಿಸಿದ ಮ್ಯಾಥ್ಯೂ ಚಂಡಮಾರುತ
* ಕಕ್ಷೆ ಸೇರಿದ ಜಿಸ್ಯಾಟ್ 18
* ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಸಾರ್ಕ್ ಶೃಂಗಸಭೆ ರದ್ದು
*ಭಾರತದ ಶೂಟರ್ ಜಿತು ರಾಯ್ ಚಾಂಪಿಯನ್ಸ್ ಆಫ್ ಚಾಂಪಿಯನ್ಸ್ ಪಟ್ಟ
* ಅಕ್ಟೋಬರ್ 15, 16ರಂದು 8ನೇ ಬ್ರಿಕ್ಸ್ ಶೃಂಗಸಭೆ ಗೋವಾದಲ್ಲಿ ನಡೆಯಿತು
*ಕೊಲಂಬಿಯಾದ ಅಧ್ಯಕ್ಷ ಜಾನ್ ಮ್ಯಾನುವೆಲ್ ಸ್ಯಾಂಟೋಸ್ ಅವರು 2016ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ
*ಅಮೆರಿಕದ ಲೇಖಕ, ಹಾಡುಗಾರ, ಗೀತ ರಚನೆಕಾರ ಬಾಬ್ ಡೈಲನ್ 2016ನೇ ಸಾಲಿನ ಸಾಹಿತ್ಯ ನೊಬೆಲ್
*ಡೇವಿಡ್ ಜೆ. ಥೌಲೆಸ್, ಎಫ್.ಡಂಕನ್ ಎಂ.ಹಲ್ಡೇನ್, ಜೆ.ಮೈಕೆಲ್ ಕೋಸ್ಟೆರ್ಲಿಟ್ಸ್ - 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್
*ಜಪಾನಿನ ಯೋಶಿನೋರಿ ಒಸೂಮಿ - ವೈದ್ಯಕೀಯ ವಿಭಾಗದ ನೊಬೆಲ್ ಪ್ರಶಸ್ತಿ
*ಫ್ರಾನ್ಸ್ ನ ಜೀನ್ ಪಿಯರ್ ಸಾವೇಜ್, ಅಮೆರಿಕದ ಫ್ರೇಸರ್ ಸ್ಟೋಡರ್ಟ್, ನೆದರ್ ಲ್ಯಾಂಡ್ನ ಬರ್ನಾರ್ಡ್ ಫೆರಿಂಗ - ರಸಾಯನ ಶಾಸ್ತ್ರದ ನೊಬೆಲ್
*ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್ ಹಾರ್ಟ್ ಮತ್ತು ಫಿನ್ಲೆಂಡ್ನ ಬೆಂಗ್ಟ್ ಹೋಲ್ಮಸ್ಟ್ರಾಮ್ - ಅರ್ಥಶಾಸ್ತ್ರ ನೊಬೆಲ್
* ಅಕ್ಟೋಬರ್ 17- ನೌಕಾಪಡೆಗೆ 'ಅರಿಹಂತ್' ಸೇರ್ಪಡೆ
* 'ಪ್ರಜಾ'ಎಂಬ ಹೊಸ ಪಕ್ಷ ಹುಟ್ಟುಹಾಕಿದ ಮಣಿಪುರದ ಐರನ್ ಲೇಡಿ ಇರೋಮ್ ಶರ್ಮಿಳಾ
* ಐಎನ್ಎಸ್ ತಿಹಾಯು ನೌಕಾಪಡೆಗೆ ಸೇರ್ಪಡೆ
* ಕಬಡ್ಡಿ ವಿಶ್ವಕಪ್ನಲ್ಲಿ ಭಾರತಕ್ಕೆ ಹ್ಯಾಟ್ರಿಕ್ ಕಿರೀಟ
* ಟಾಟಾ ಸನ್ಸ್ ಸಮೂಹ ಸಂಸ್ಥೆಯ ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿಗೆ ಕೊಕ್
* ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರಿಗೆ ಮ್ಯಾನ್ ಬೂಕರ್ ಪ್ರಶಸ್ತಿ
* ಏಷ್ಯನ್ ಚಾಂಪಿಯನ್ಸ್ ಹಾಕಿ ಟ್ರೋಫಿ ಗೆದ್ದ ಭಾರತ

*ನವೆಂಬರ್*
* ನವೆಂಬರ್ 5- ಮೊದಲ ಬಾರಿ ವನಿತಾ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ
* 100 ಕೋಟಿ ಕ್ಲಬ್ ಗೆ ಪುಲಿಮುರುಗನ್ - ₹100 ಕೋಟಿ ಕ್ಲಬ್ ಸೇರಿದ ಮೊದಲ ಮಲಯಾಳಂ ಚಿತ್ರ ಎಂಬ ಹೆಗ್ಗಳಿಕೆ
* ನವೆಂಬರ್ 8- ₹500 ಮತ್ತು ₹1000 ಮುಖಬೆಲೆಯ ನೋಟುಗಳು ರದ್ದು
* ನವೆಂಬರ್ 8 - ಅಮೆರಿಕ ಅಧ್ಯ ಕ್ಷರಾಗಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಆಯ್ಕೆ
* ನವೆಂಬರ್ 9 - ಭಾರತ- ಜಪಾನ್ ಅಣು ಒಪ್ಪಂದಕ್ಕೆ ಸಹಿ
* ನವೆಂಬರ್ 20 - ಉತ್ತರ ಪ್ರದೇಶದಲ್ಲಿ ರೈಲು ಅವಘಡ; 150ಕ್ಕಿಂತಲೂ ಹೆಚ್ಚು ಮಂದಿ ಸಾವು
* ನವೆಂಬರ್ 20 - ಚೀನಾ ಸೂಪರ್ ಸೀರಿಸ್ ಕಿರೀಟ ಗೆದ್ದ ಪಿವಿ ಸಿಂಧು
* ನವೆಂಬರ್ 21- ಐಎನ್ಎಲ್ ಚೆನ್ನೈ ಯುದ್ಧನೌಕೆ ನೌಕಾ ಸೇನೆಗೆ ಸೇರ್ಪಡೆ
*ರಣಜಿ ಕ್ರಿಕೆಟ್ ಪಂದ್ಯದಲ್ಲಿ ದೆಹಲಿಯ ರಿಷಬ್ ಪಂತ್ ಅತಿ ವೇಗದ ಶತಕ ದಾಖಲೆ (48 ಎಸೆತಗಳಲ್ಲಿ 100 ರನ್)ನಿಧನ
* ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕ ಡಾ ಎಂ ಬಾಲ ಮುರಳಿ ಕೃಷ್ಣ ವಿಧಿವಶ

*ಡಿಸೆಂಬರ್*
* ಉಸೇನ್ ಬೋಲ್ಟ್ ಅವರಿಗೆ ಅಂತರ ರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ನೀಡುವ ಶ್ರೇಷ್ಠ ಕ್ರೀಡಾಪಟು ಪುರಸ್ಕಾರ
* ವಿಶ್ವ ಚೆಸ್ ಚಾಂಪಿಯನ್ಶಿಪ್ ನಲ್ಲಿ ಮಾಗ್ನಸ್ ಕಾರ್ಲ್ಸನ್ ಗೆಲುವು
* ರಿಸೋರ್ಸ್ಸ್ಟಾಟ್ 2ಎ ಉಪಗ್ರಹ ಯಶಸ್ವಿ ಉಡಾವಣೆ
* ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟೈಮ್ ನಿಯತಕಾಲಿಕದ ವರ್ಷದ ವ್ಯಕ್ತಿಯಾಗಿ ಆಯ್ಕೆ
*ತಮಿಳುನಾಡು- ಆಂಧ್ರ ಪ್ರದೇಶ ಕರಾವಳಿಗೆ ಅಪ್ಪಳಿಸಿದ ವಾರ್ದಾ ಚಂಡ ಮಾರುತ
* ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ಮದ್ಯದ ಅಂಗಡಿಗಳಿಗೆ ನಿಷೇಧ ವಿಧಿಸಿದ ಸುಪ್ರೀಂಕೋರ್ಟ್
* ಇಂಡಿಯನ್ ಸೂಪರ್ ಲೀಗ್ ಪಂದ್ಯಾವಳಿಯಲ್ಲಿ ಅಟ್ಲೆಟಿಕೊ ಡಿ ಕೋಲ್ಕತ್ತ ಚಾಂಪಿಯನ್
* ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್ನಲ್ಲಿ ಕರುಣ್ ನಾಯರ್ ಗೆ ತ್ರಿಶತಕ ದಾಖಲೆ
* ಬೌಲರ್ ಆರ್.ಅಶ್ವಿನ್ಗೆ ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿ
ನಿಧನ
* ಡಿಸೆಂಬರ್ 5- ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನ
** ಡಿಸೆಂಬರ್ 6- ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ
* ಡಿಸೆಂಬರ್ 7- ಪತ್ರಕರ್ತ, ರಾಜಕೀಯ ವಿಶ್ಲೇಷಕ, ನಾಟಕ, ಸಿನಿಮಾ ಕಲಾವಿದ ಚೋ ರಾಮಸ್ವಾಮಿ ನಿಧನ. 

17.1.17

english - 1 - write missing letter

    A        --        C        D        --        F        ---        H        I        J        --        L        M        --- 

       O        P        --        R        S        ---        U        V        ---        X        --        Z


a        --        c        d        e        --        g        h        --        j        k        --        m        ---        o

        p        ---        r        s        ---        u        v        ---        x        --        z

3.1.17

ಸಾಮಾನ್ಯ ಜ್ಞಾನ


ಬಾಕ್ಸೈಟ್ ನಿಕ್ಷೇಪ ಹೊಂದಿರುವ ಜಿಲ್ಲೆಗಳು
A ಬೆಳಗಾವಿ.ಚಿಕ್ಕಮಗಳೂರು.ಚಿತ್ರದುಗ೯
B ಬೆಳಗಾವಿ.ವಿಜಯಪುರ.ಬಾಗಲಕೋಟೆ
C ಬೆಳಗಾವಿ. ಮೈಸೂರ.ವಿಜಯಪುರ
D ಬೆಳಗಾವಿ.ಬೆಳಗಾವಿ.ಕಲಬುಗಿ೯

A✅

ಗ್ರಾಮದ ಆಡಳಿತವನ್ನು ಸುಗಮವಾಗಿಡಲು ಬಾಬಾ೯ಲೊತಿ ಪದ್ಧತಿಯನ್ನು ಜಾರಿಗೆ ತಂದವರು

A 6ನೇ ಚಾಮರಾಜ ಒಡೆಯರು
B ಕಂಠಿeರವ ನರಸರಾಜ ಒಡೆಯರು
C ಚಿಕ್ಕ ದೇವರಾಜ ಒಡೆಯರು
D ಯಾರು ಅಲ್ಲ

C✅

ಈ ಕೆಳಗಿನ ಯಾವ ಸ್ಥಳ ಕನಾ೯ಟದಲ್ಲಿನ ಹಳೆ ಶಿಲಾಯುಗದ ನೆಲೆಯಾಗಿದೆ?

A ಹುಣಸಗಿ
B ಕೈದಾಳ
C ಇಂಡಿ
D ಶ್ರವಣಬೆಳಗೊಳ

A✅👌

ಪೋಚು೯ಗೀಸರನ್ನು ಎದುರಿಸಿದ ಕನ್ನಡದ ರಾಣಿ
A ಕೆಳದಿ ಚೆನ್ನಮ್ಮ
B ರಾಣಿ ಅಬ್ಬಕ್ಕ
C ಕಿತ್ತೂರು ಚನ್ನಮ್ಮ
D ಯಾರು ಅಲ್ಲ

B✅

ಈ ಕೆಳಗಿನವುಗಳಲ್ಲಿ ಕುಕಾ ಚಳುವಳಿ ಪ್ರಾರಂಭವಾದ ಪ್ರದೇಶ ಯಾವುದು?

A ಯುನೈಟೆಡ್ ಪ್ರಾಂತ್ಯಗಳು
B ಬಾಂಬೆ
C ಪಂಜಾಬ್
D ಬಂಗಾಳ

C✅

ಕ್ಯಾಮೆರಾ ಮತ್ತು ಟೆಲಿಸ್ಕೋಪಗಳಲ್ಲಿ ಉಪಯೋಗಿಸುವ ಗಾಜು ಯಾವುದು
A ಫೈರಕ್ಸ ಗ್ಲಾಸ್
B ಹಾಡ೯ ಗ್ಲಾಸ್
C ಫೋಟೊಕ್ರೋಮಿಟೆಕ್ ಗ್ಲಾಸ್
D ಆಪ್ಟಿಕಲ್ ಗ್ಲಾಸ್

D✅

ಸೈಕಲ್ ಸವಾರನು ವಕ್ರದ ಮೇಲೆ ಚಲಿಸುವಾಗ ಒಳಭಾಗಕ್ಕೆ ಬಾಗಿದರೆ ಈ ಕೆಳಗಿನವುಗಳಲ್ಲಿ ಯಾವುದಕ್ಕೆ ವಿರುದ್ಧವಾದ ಶಕ್ತಿಯನ್ನು ಉಂಟು ಮಾಡುತ್ತಾನೆ?

A ಕೇಂದ್ರಾಭಿಗಾಮಿ ಬಲ
B ಕೇಂದ್ರಾಪಗಾಮಿ ಬಲ
C ಗುರುತ್ವಾಕಷ೯ಣೆ ಬಲ
D ಚಕ್ರೀಯ ಬಲ

A✅

ಅರಬ್ಬೀ ಸಮುದ್ರಕ್ಕೆ ಸೇರುವ ನದಿಗಳು ಯಾವವು ?

A ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಅಘನಾಶಿನಿ
B ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಪಾಲಾರ್
C ವಾರಾಹಿ.ಚಕ್ರಾ.ಶರಾವತಿ.ನೇತ್ರಾವತಿ.ಕಾರಂಜಾ
D ವಾರಾಹಿ.ಚಕ್ರಾ.ಶರಾವತಿ.ಪಿನಾಕಿನಿ

A✅👌

ಕನಾ೯ಟಕ ಮೀನುಗಾರಿಕೆ ಅಭಿವೃದ್ಧಿ ನಿಗಮವನ್ನು ಯಾವ ವಷ೯ದಲ್ಲಿ ಸ್ಥಾಪನೆಯಾಯಿತು

A 1970
B 1971
C 1972
D 1974

B✅

"ತಾಯಿ ಭುವನೇಶ್ವರಿ "ಕವಿತೆಯನ್ನು ರಚಿಸಿದವರು

A ಅಂದಾನಪ್ಪ ದೊಡ್ಡಮೇಟಿ
B ಡಿ.ಎಸ್.ಕಕಿ೯
C ಆನಂದ ಕಂದ
D ಕಸ್ತೂರಿ ನಾ

A✅

ಗೋಕಾಕ ಚಳುವಳಿ ನಡೆದಾಗ.ರಾಜ್ಯದ ಮುಖ್ಯಮಂತ್ರಿ ಯಾರಾಗಿದ್ದರು?

A ಡಿ.ದೇವರಾಜ್ ಅರಸ
B ಆರ್.ಗುಂಡುರಾವ್
C ಎಸ್.ಆರ್. ಭೂಮ್ಮಯಿ
D ರಾಮಕೃಷ್ಣ ಹೆಗಡೆ

B✅

ಶರಾವತಿ ನದಿಮುಖಜದಲ್ಲಿರುವ ಬಂದರು ಯಾವುದು

A ಕುಂದಾಪೂರ ಬಂದರು
B ಭಟ್ಕಲ್ ಬಂದರು
C ಹೊನ್ನಾವರ ಬಂದರು
D ಹಂಗಾರ ಕಟ್ಟೆ ಬಂದರು

C✅💐

ಒಂದು ಕಾಯದ ತಾಪ ಸೂಚಿಸುವುದು

A ಒಂದು ಕಾಯದ ಅಣುಗಳ ಒಟ್ವು ಶಕ್ತಿಯನ್ನು
B ಒಂದು ಕಾಯದ ಅಣುಗಳ ಸರಾಸರಿ ಶಕ್ತಿಯನ್ನು
C ಕಾಯದ ಅಣುಗಳು ಒಟ್ಟು ವೇಗವನ್ನು
D ಕಾಯದ ಅಣುಗಳು ಸರಾಸ ರಿಚಲನ ಶಕ್ತಿ

D✅👌

ಭಾರಿ ಗಾತ್ರದ ಸಸ್ಯ?
A ಅರಳಿಮರ
B ಆಲದ ಮರ
C ಹೂಜಿಗಿಡ
D ದೈತ್ಯ ಸೆಕೊಯಿಮಾ

D✅

ಈ ಕೆಳಗಿನ ಯಾವುದು ಆಮ್ಲೀಯ ಸ್ವಭಾವವನ್ನು ಹೊಂದಿದೆ

A ನಿಂಬೆರಸ
B ಮಾನವನ ರಕ್ತಾ
C ಸುಣ್ಣದ ನೀರು
D ಅಂಟಾಸಿಡ್

A✅

ಮಾನವನ ಶರೀರದ ಈ ಕೆಳಕಂಡ ಎಲುಬುಗಳಲ್ಲಿ ತೋಳಿಗೆ ಸಂಬಂಧಿಸಿದ ಎಲುಬು .ಯಾವುದು

A ರೇಡಿಯಸ್
B ಸ್ಟೆನ೯ಮ್
C ಫೀಮರ್
D ಪಟಿಲ್ಲಾ

A💐👌

ಅಮೀಬಾದ ಚಲನಾ ರಚನೆಗಳು
A ಲೋಮಾಂಗ
B ಕಶಾಂಗ
C ಮಿಥ್ಯಾಪಾದ
D ಟೆಂಟಕಲ್

C✅👌

ಕ್ಲೋರೋಫಿಲ್ ಈ ಜೀವಿಯಲ್ಲಿದೆ

A ಕ್ಲಾಮಿಡೋಮೋನಾಸ್
B ಆಗರಿಕಸ್
C ಈಸ್ಟ್
D ಆಸ್ಟಜಿ೯ಲಸ್

✅A✅

ಈ ಜೀವಿಯ ಜೀವಕೋಶದಲ್ಲಿ ಕೋಶಭಿತ್ತಿ ಇಲ್ಲ

A ನಾಯಿಕೊಡೆ
B ಮಾಸ
C ಫನ೯
D ಸೊಳ್ಳೆ

D✅👌

ಭೀಜವು ಇದರಿಂದ ಬೆಳೆಯುತ್ತದೆ

A. ಅಂಡಾಶಯ
B. ಅಂಡಕ
C.ಬ್ರೂಣ
D ಬ್ರೂಣ ಸಂಚಿ

B💐👌

ಪ್ರಾಚೀನ ಭೂಮಿಯ ಮೇಲೆ ಕಾಣಿಸಿಕೊಂಡ ಮೊದಲ ಜೀವಿಗಳು ಹೀಗಿದ್ದವು
A ಸ್ವಪೋಷಕಗಳು
B ಪರಪೋಷಕಗಳು ಮತ್ತು ಅವಾಯುವಿಕೆ ಜೀವಿಗಳು
C ಪರಾವಲಂಬಿಗಳು
D ಪ್ರೋಕ್ಯಾರಿಯೋಟ್ ಮತ್ತು ಸ್ವಪೋಷಕಗಳು

A💐👌

ಮೂಳೆಗಳಲ್ಲಿರುವ ಪ್ರಮುಖ ಸಂಯುಕ್ತದಲ್ಲಿ ಈ ಧತುವಿದೆ

A ಸೋಡಿಯಂ
B ಕಬ್ಬಿಣ
C ಕ್ಯಾಲ್ಸಿಯಂ
D ರಂಜಕ

C✅

"ಗೇಮ್ಸ್ ಗೋಸ್ ಆನ್" ಯಾರ ಕೃತಿ?

A ಅಲನ್ ಮೆಕ್ ಗಿಲ್ವರಿ
B ಜೇಮ್ಸ್ ಲೈಹ ಹಂಟ್
C ಅರುಣ್ ಕೊಲಾಟ್ಕರ್
D ನಿಸ್ಟಿಮ್ ಎಜೇಕೀಲ್

A✅💐☝️

RBI ನ ನೂತನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿ ನೇಮಕಗೊಂಡವರು ಯಾರ?

A  ಕೆ.ಕೆ.ಮಲ್ಹೋತ್ರಾ
B ಎಂ.ರಾಜೇಶ್ವರರಾವ
C ಅರಿಂದಮ್ ಕುಮಾರ್
D ಗ್ರೀಶ ಬಿಂದ್ರಾ

B✅

ನಮ್ಮ ದೇಶದಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಜಾಗ್ರತಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
A ನವಂಬರ್ 8
B ನವಂಬರ್ 7
C ನವಂಬರ್ 5
D ನವಂಬರ್ 6

B✅👌

ರಕ್ಷಣ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಒಂದು ಜಂಟಿ ಅತ್ಯಾಧುನಿಕ ತಂತ್ರಜ್ಞನ ಕೇಂದ್ರವನ್ನ ಸ್ಥಾಪಿಸಲು ಯಾವ .ಐಐಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A ಐಐಟಿ ಬಾಂಬೆ
B ಐಐಟಿ ಖರಗಪುರ
C ಐಐಟಿ ಇಂದೂರ
D ಐಐಟಿ ದೆಹಲಿ

D✅👌💐

ಇತ್ತೀಚಿಗೆ ನಿಧನರಾದ ಕಾಲೊ೯ಸ್ ಆಲ್ಬೆಟೊ೯ ಅವರು ಯಾವ ದೇಶದ ಪುಟಬಾಲ್ ದಂತಕಥೆಯಾಗಿದ್ದರು?
 Aಜಮ೯ನಿ
B ಬ್ರೆಜಿಲ್
 C ಇಟಲಿ
D ಫ್ರಾನ್ಸ್

B✅👌

ಹವಾಮಾನ ಬದಲಾವಣೆ ಮೇಲಿನ ವಿಶ್ವ ಸಂಸ್ಥೆಯ 22ನೇ ಕಾಯ೯ಚೌಕಟ್ಟು ಅಧಿವೇಶನ ಎಲ್ಲಿ ನಡೆಯಿತು?

A ಭಾರತ
B ಮೊರೊಕ್ಕ
C ನೇಪಾಳ
D ಪ್ಯಾಲೆಸ್ತಿನ್

B✅👌

2016 ರ ಯಾರೋಪಿನ ಗೋಲ್ಡ್ ನ್ ಬಾಯ್ ಪ್ರಶಸ್ತಿಗೆ ಯಾರ ಹೆಸರನ್ನು ಸೂಚಿಸಲಾಗಿದೆ?

A ರಹೀಮ್ ಸ್ಟೆಲಿರ್ಲಿಂಗ್
B ಆಂಥೋನಿ ಮಾಷ೯ಲ್
C ರಿನಾಟೋ ಸ್ಯಾಂಚೆಸ್
D ಮಾರ್ಕಸ್ ರ್ಯಾಷ್ ಫೋಡ್೯

C✅

ನಮ್ಮ ದೇಶದಲ್ಲಿ ಸೈಬರ್ ಸೆಕ್ಯೂರಿಟಿ ಎಂಗೇಜಮೆಂಟ್ ಸೆಂಟರ್ ಅನ್ನು ಆರಂಭಿಸಿದ ತಂತ್ರಜ್ಞಾನ ಕ್ಷೇತ್ರದ ದ್ಯಿತ್ಯ ಕಂಪನಿ ಯಾವುದು?

A ಇನ್ಫೋಸಿಸ್
B ವಿಪ್ರೋ
C ರಿಲಾಯನ್ಸ್
D ಮೈಕ್ರೊಸಾಫ್ಟ್

D✅👌

"ದಿ ಬ್ಯಾಂಗ್ ಸೆಲ್ಲರ್" ಯಾರ ಕೃತಿ
A ಮಾಯಾ ಕಲ್ಯಾಣಕರ್
B ಅನಿಲ್ ಕುಮಾರ್
C ಎಂ.ಎಂ. ಮಣಿ
D ಬ್ರಿಜೇಶ್ ಗುಲಾಟಿ

A✅

ಭಾರತದ ಸಾಂಸ್ಕೃತಿಕ ಇತಿಹಾಸಕ್ಕೆ ಸಂಬಂಧಪಟ್ಟಂತೆ ವೃತ್ತಾಂಶಗಳನ್ನು ನೆನಪಿಸುವುದು.ಮಂಶಾವಳಿ ಇತಿಹಾಸವನ್ನು ಹೇಳುವುದು ಹಾಗೂ ಕಥೆ ಹೇಳುವವರು ಯಾರು?


A ಶ್ರಮಣ
B ಪರಿವ್ರಾಜಕ
C ಅಗ್ರಹಾರಿಕಾ
D ಮಾಗಧ

D✅💐

ಮಧ್ಯಕಾಲೀನ ಭಾರತದ ಆಥಿ೯ಕ ಇತಿಹಾಸಕ್ಕೆ ಸಂಬಂಧಪಟ್ಟಂತೆ 'ಆರಘಟ್ಟ 'ಎಂಬ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ?

A ಜೀತದಾಳು
B ಸೇನಾ ಅಧಿಕಾರಿಗಳಿಗೆ ಭೂಮಿಯನ್ನು ಅನುದಾನ ಕೊಟ್ಟ

ದ್ದು
C ಭೂಮಿಯನ್ನು ಹದಗೊಳಿಸುವಲ್ಲಿ / ನೀರಾವರಿಯಲ್ಲಿ ಜಲಚಕ್ರಗಳನ್ನು ಬಳಸಿದ್ದು.
D ಪಾಳು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವತಿ೯ಸಿದ್ದು.

C✅

ಕೆಳಗಿನವುಗಳಲ್ಲಿ ಸರಿಯಾದ ಹೊಂದಾಣಿಕೆ ಯಾವುದು



 ಪ್ರಸಿದ್ಧ ಸ್ಥಳಗಳು                        ಪ್ರದೇಶ

1) ಭೋಧ ಗಯಾ                        ಭಾಗೆಲ್ ಖಂಡ 2)ಖಜುರಾಹೋ                         ಬುಂದೇಲ್ ಖಂಡ
3) ಶಿರಡಿ                                    ವಿದಭ೯
4) ನಾಸಿಕ್                                 ಮಾಳವಾ
5) ತಿರುಪತಿ                               ರಾಯಲ್ ಸೀಮಾ


ಸಂಕೇತಗಳು

A) 1, 2, ಮತ್ತು 4 ಸರಿ
B) 2,3,4,ಮತ್ತು 5 ಸರಿ
C) 2 ಮತ್ತು 5 ಸರಿ
D) 1,3,4, ಮತ್ತು 5 ಸರಿ

C✅

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ