ಬೇಸಿಗೆ ಸಂಭ್ರಮ

👭 *ಸರ್ಕಾರಿ ಶಾಲೆ ಮಕ್ಕಳಿಗೆ "ಬೇಸಿಗೆ ಸಂಭ್ರಮ' ಶಿಬಿರ*

      ರಾಜ್ಯದ ಸುಮಾರು 7,049 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಬಾರಿ ಬೇಸಿಗೆ ರಜೆಯಿಲ್ಲ. ಈ ಅವಧಿಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ "ಬೇಸಿಗೆ ಸಂಭ್ರಮ' ಎಂಬ ಶಿಬಿರ ಆಯೋಜಿಸಲು ತೀರ್ಮಾನಿಸಿದೆ.*

*ಬರಗಾಲ ಪೀಡಿತ ತಾಲೂಕುಗಳ ಶಾಲೆಗಳಲ್ಲಿ ಸರ್ಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆ ಮುಂದುವರಿಸಿದ್ದು, ಇಂಥ ಶಾಲೆಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆ ತನಕ ಈ ಶಿಬಿರ ನಡೆಯಲಿದೆ. ರಾಜ್ಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಇಲಾಖೆ ನಿರ್ದೇಶಕ ಮಂಜುನಾಥ ಈ ಆದೇಶ ಮಾಡಿದ್ದಾರೆ.*

🍿 *ಏನಿದು ಸಂಭ್ರಮ?:*

*ಶಿಕ್ಷಕರು ಹಾಗೂ ಮಕ್ಕಳನ್ನು ಲಭ್ಯ ಸಂಪನ್ಮೂಲ ಬಳಸಿಕೊಂಡು ಶಿಕ್ಷಣ ಇಲಾಖೆ ಬೇಸಿಗೆ ಶಿಬಿರ ಆರಂಭಿಸುತ್ತಿದೆ. ರಾಜ್ಯದ 160 ತಾಲೂಕಿನ ಆಯ್ದ ಶಾಲೆಗಳಲ್ಲಿ ನಾಲ್ಕು ಲಕ್ಷ ಮಕ್ಕಳು ಇದರ ಪ್ರಯೊಜನ ಪಡೆಯಲಿದ್ದಾರೆ.*

*ಏ. 17ರಿಂದ ಆರಂಭವಾಗುವ ಈ ಬೇಸಿಗೆ ಸಂಭ್ರಮ ನಿರಂತರ ಐದು ವಾರಗಳ ಕಾಲ ನಡೆಯಲಿದೆ. ಶಾಲಾ ಸಮಗ್ರ ಮಾಹಿತಿ (ಡೈಸ್‌) ಮಾದರಿ ಆಧರಿಸಿ 150ಕ್ಕಿಂತ ಅಧಿಕ ದಾಖಲಾತಿ ಹೊಂದಿದ ಸರ್ಕಾರಿ ಹಿರಿಯಪ್ರಾಥಮಿಕ ಶಾಲೆಯ 6 ಹಾಗೂ 7ನೇ ವರ್ಗಕ್ಕೆ ತೇರ್ಗಡೆ ಹೊಂದಿದ ಮಕ್ಕಳಿಗೆ ಕಡ್ಡಾಯವಾಗಿ ಶಿಬಿರ ನಡೆಸಲು ಇಲಾಖೆ ಆದೇಶಿಸಿದೆ. ಮೈಸೂರಿನ ಪ್ರಥಮ ಸ್ವಯಂ ಸೇವಾ ಸಂಸ್ಥೆ ನೇತೃತ್ವದಲ್ಲಿ ರಾಜ್ಯದ ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳಿಗೆ ಪ್ರಾಥಮಿಕ ತರಬೇತಿ ನೀಡಲಾಗಿದೆ. ಗುರುತು ಮಾಡಿದ ಶಾಲಾ ಶಿಕ್ಷಕರೇ ಮಕ್ಕಳಿಗೆ ಮಾರ್ಗದರ್ಶನ ಮಾಡಲಿದ್ದಾರೆ.*

💐 *ಸ್ವಲ್ಪ ಓದು-ಸ್ವಲ್ಪ ಮೋಜು:*

*ಐದು ವಾರಗಳ ತರಬೇತಿಯನ್ನು ಐದು ಭಾಗವಾಗಿ ವಿಂಗಡಿಸಿದ್ದಾರೆ. ಪ್ರತಿ ದಿನವೂ ಐದು ಅವಧಿಯಾಗಿ ಭಾಗ ಮಾಡಿದ್ದಾರೆ. ಸ್ವಲ್ಪ ಓದು- ಸ್ವಲ್ಪ ಮೋಜು ಮಾದರಿಯಲ್ಲಿ ಪಾಠ ನಡೆಯಲಿದೆ. ಆರಂಭಿಕ ವಾರ ಕುಟುಂಬ, ಎರಡನೇ ವಾರ ನೀರು,*

*ಮೂರನೇ ವಾರ ಆಹಾರ, ನಾಲ್ಕನೇ ವಾರ ಆರೋಗ್ಯ ಮತ್ತು ನೈರ್ಮಲ್ಯ ಹಾಗೂ ಕೊನೆಯ ವಾರ ಪರಿಸರ ಪಾಠ ಜರುಗಲಿದೆ. ಪ್ರತಿ ದಿನದ ಮೊದಲ ಅವಧಿ ಓದು ಬರಹ, ಎರಡನೇ ಅವಧಿ ನಿತ್ಯ ಜೀವನಕ್ಕೆ ಸಂಬಂಧಿಸಿ, ಮೂರನೇ ಅವಧಿ ಬಾ ಸಮಸ್ಯೆ ಬಿಡಿಸು, ನಾಲ್ಕನೇ ಅವಧಿ ಮಾಡಿ ಕಲಿ ಪ್ರಯೋಗ, ಕೊನೆಯ ಅವಧಿ ಕ್ವಿಕ್‌ ಮ್ಯಾಥ್ಸ್ ಎಂದು ವಿಂಗಡಿಸಲಾಗಿದೆ.*


*ಪ್ರತಿ ವಾರದ ಆರನೇ ದಿನ ಮುಕ್ತ ದಿನಎಂದು ಗುರುತು ಮಾಡಿದ್ದು, ಹಾಡು,ಆಟ, ಕಥೆ ಹೇಳುವುದು*

*ಭಾಷಣ, ನೃತ್ಯ ಪ್ರದರ್ಶನ, ಚಿತ್ರಕಲೆ, ನಾಟಕ ಇತ್ಯಾದಿ ಸೇರಿವೆ.*

🌺 *ಇಲಾಖೆ ಜವಾಬ್ದಾರಿ ಏನು?:*

*ಬೋಧನೆ ಹಾಗೂ ಕಲಿಕೋಪಕರಣ ಇಲಾಖೆ ಬಿಸಿಯೂಟಕ್ಕೆ ಅಗತ್ಯ ಪಡಿತರ ಹಾಗೂ ಅಡುಗೆ ಸಿಬ್ಬಂದಿ ಗೌರವಧನ ಪೂರೈಸಲಿದೆ. ಶಿಕ್ಷಕರಿಗೆ ಗಳಿಕೆ ರಜೆ ಸೌಲಭ್ಯ ಕೂಡ ಇದೆ. ಸರ್ಕಾರಿ ರಜಾ ದಿನವಿದ್ದರೆ ಬಿಡುವಿರುತ್ತದೆ.ಇದಕ್ಕೆ ಸಂಬಂಧಿಧಿಸಿ ಇಲಾಖೆ ಮೊಬೈಲ್‌ ಆ್ಯಪ್‌ಕೂಡ ಸಿದ್ಧಗೊಳಿಸಿದೆ. ಇಲಾಖೆಯೇ ಪಠ್ಯ ವಿಷಯಗಳನ್ನು ಒದಗಿಸುತ್ತದೆ. ಜಿಲ್ಲಾಮಟ್ಟದಲ್ಲಿ ಏಪ್ರಿಲ್‌ ಮೊದಲ ವಾರದೊಳಗೆ ತರಬೇತಿ ಕೂಡ ನೀಡಲಾಗುತ್ತಿದೆ.*

🌹 *ಬೇಸಿಗೆ ಸಂಭ್ರಮ-2017ರ ಕಿರು ಪರಿಚಯ* 🌹
 💐 *SUMMER-CAMP 2017*💐

*(01).* ಡೈಸ್ ಮಾಹಿತಿ ಆಧರಿಸಿ 150ಕ್ಕಿಂತ ಹೆಚ್ಚು ದಾಖಲಾತಿ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಾತ್ರ ಕಡ್ಡಾಯವಾಗಿ ಅನುಷ್ಠಾನ.

*(02).* ಸನ್-2017-18ನೆಯ ಸಾಲಿಗೆ 6ನೆಯ & 7ನೆಯ ವರ್ಗಕ್ಕೆ ಅರ್ಹರಿರುವ ಮಕ್ಕಳು ಮಾತ್ರ ಅರ್ಹರು.

*(03).* ಇದು ನಿರಂತರವಾಗಿ ಐದು ವಾರಗಳವರೆಗೆ ನಡೆಯುವ ಕಾರ್ಯಕ್ರಮ.

*(04).* ಈ ಐದು ವಾರಕ್ಕೆ ಮಕ್ಕಳಿಗೆ ಬೋಧಿಸಬೇಕಾದ ಪಠ್ಯಕ್ರಮವು *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುತ್ತದೆ. ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು.

ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದಲ್ಲಿ ಉಸ್ತುವಾರಿ ಶಿಕ್ಷಕರು ಬೋಧಿಸಲು ಬಳಸುವ ಐದು ವಾರದ ಪಠ್ಯಕ್ರಮದ ಕಿರು ಪರಿಚಯ ಈ ಕೆಳಗಿನಂತಿರುತ್ತದೆ...
*ಮೊದಲ ವಾರ*
-ಕುಟುಂಬ

*ಎರಡನೆಯ ವಾರ*
-ನೀರು

*ಮೂರನೆಯ ವಾರ*
-ಆಹಾರ

*ನಾಲ್ಕನೆಯ ವಾರ*
-ಆರೋಗ್ಯ & ನೈರ್ಮಲ್ಯ

*ಐದನೆಯ ವಾರ*
-ಪರಿಸರ.

ಈ ಮೇಲಿನ ಐದು ವಾರದ ಪಠ್ಯಕ್ರಮದಲ್ಲಿ ಆಯಾ ವಾರಕ್ಕೆ ನಿಗದಿಪಡಿಸಿದ ವಿಷಯ ವಸ್ತುಗಳನ್ನು ವಾರದ ಆರು ದಿನಗಳಂದು ಪ್ರತಿದಿನ ಈ ಕೆಳಗೆ ನಮೂದಿಸಿದ ಐದು ಹಂತದ ಚಟುವಟಿಕೆಗಳಂತೆ ಬೋಧಿಸುವುದು...

*ಮೊದಲನೆಯ ಅವಧಿಯ ಚಟುವಟಿಕೆ*
-ಓದು-ಬರಹ

*ಎರಡನೆಯ ಅವಧಿಯ ಚಟುವಟಿಕೆ*
-ನಿತ್ಯಜೀವನಕ್ಕೆ ಸಂಬಂಧೀಕರಿಸುವುದು

*ಮೂರನೆಯ ಅವಧಿಯ ಚಟುವಟಿಕೆ*
-ಬಾ ಸಮಸ್ಯೆ ಬಿಡಿಸು

*ನಾಲ್ಕನೆಯ ಅವಧಿಯ ಚಟುವಟಿಕೆ*
-ಮಾಡಿಕಲಿ(ಪ್ರಯೋಗ)

*ಐದನೆಯ ಅವಧಿಯ ಚಟುವಟಿಕೆ*
-ಅಭ್ಯಾಸ ಚಟುವಟಿಕೆ

ಹೀಗೆ ವಾರದ ಐದು ದಿನಗಳವರೆಗೆ ಕಲಿಕಾ-ಬೋಧನಾ ಕಾರ್ಯ ಸಾಗುವುದು ಆದರೇ ಪ್ರತಿ ವಾರದ *ಆರನೆಯ ದಿನ*ವನ್ನು *ಕಲಿಕಾ ಮುಕ್ತ ದಿನ*ವಾಗಿ ಕಲಿಕಾ-ಬೋಧನಾ ಪ್ರಕ್ರಿಯೆಯಲ್ಲಿ ತೋಡಗಿಸುವುದು.

* ವಾರದ ಐದು ದಿನ  *ಸ್ವಲ್ಪ ಓದು-ಸ್ವಲ್ಪ ಮೋಜು* ಎಂಬ ಶಿರೋನಾಮೆಯಡಿಯಲ್ಲಿ ಸಿದ್ಧವಾಗಿರುವ ಈ ಪಠ್ಯಕ್ರಮವನ್ನೇ ಉಸ್ತುವಾರಿ ಶಿಕ್ಷಕರು ಬೋಧಿಸಬೇಕು. ಆದರೆ ಆರನೇ ದಿನವು *ಕಲಿಕಾ ಮುಕ್ತ ದಿನ*ವಾಗಿ ಕೆಲಸ ಮಾಡುತ್ತದೆ.
👉🏻 *ಕಲಿಕಾ ಮುಕ್ತ ದಿನ :-* ಅಂದರೆ ಮಕ್ಕಳಲ್ಲಿ ಹುದುಗಿರುವ ಸೃಜನಶೀಲ ಸಾಮರ್ಥ್ಯಗಳಾದ...
*-ಹಾಡು*
*-ಆಟ*
*-ಕಥೆ ಹೇಳುವುದು*
*-ಭಾಷಣ*
*-ನೃತ್ಯ ಪ್ರದರ್ಶನ*
*-ಚಿತ್ರಕಲೆ*
*-ನಾಟಕ* ಇತ್ಯಾದಿ... ಇತ್ಯಾದಿ ಈ ಕಲಿಕಾ ಮುಕ್ತ ದಿನದಂದು ಆಯಾ ವಾರಕ್ಕೆ ನಿಗದಪಡಿಸಿದ ಪಠ್ಯಕ್ರಮದ ವಿಷಯದಡಿಯಲ್ಲಿ ಮಕ್ಕಳಿಗೆ ಸೃಜನಶೀಲ ಚಟುವಟಿಕೆಗಳನ್ನು ಮಾಡಿಸುವುದು.

*(05).* ಬೋಧನೆ & ಕಲಿಕೆಗೆ ಅನುಕೂಲವಾಗಲು *ಕಲಿಕೋಪಕರಣ*ಗಳನ್ನು ಸರಬರಾಜು ಸಹ ಮಾಡಲಾಗುವುದು.

*(06).* ಮಕ್ಕಳ ಸಂಖ್ಯೆಗಳಿಗನುಗುಣವಾಗಿ ಉಸ್ತುವಾರಿ ಶಿಕ್ಷಕರ & ಬಿಸಿಯೂಟ ಸಿಬ್ಬಂದಿಯವರ ನೇಮಕ ಮಾಡಿಕೊಳ್ಳುವ ಜವಾಬ್ದಾರಿ ಶಾಲಾ ಮುಖ್ಯಗುರುಗಳದ್ದು.

*(07).* ನೇಮಕಗೊಂಡ ಶಾಲಾ ಅಡುಗೆ ಸಿಬ್ಬಂದಿಯವರಿಗೆ ಮುಂಗಡ ಅಡುಗೆ ಸಂಭಾವನೆ ಜಮೆ.

*(08).* ಬೇಸಿಗೆ ಸಂಭ್ರಮ-2017ರ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ನೌಕರರಿಗೆ ಸರಕಾರಿ ನಿಯಮಾನುಸಾರ *EL* ವ್ಯವಸ್ಥೆಯೂ ಇರುತ್ತದೆ.

*(09).* ಈ ಶಿಬಿರವು ಪ್ರತಿದಿನ ಮುಂಜಾನೆ 10ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಕಾರ್ಯ ನಿರ್ವಹಿಸುವುದು.

*(10).* ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮವು ಸರಕಾರಿ ರಜಾ ದಿನಗಳಂದು ರಜೆ ಇರುತ್ತದೆ.

*(11).* ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮವು ಆಯ್ಕೆಯಾದ ಎಲ್ಲಾ ಶಾಲೆಗಳಲ್ಲಿ *17.04.2017ರಂದು ಪ್ರಾರಂಭ*ವಾಗಬೇಕು.

*(12).* ಮುಂಬರುವ  (04.04.2017ರ) ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಈ ಬೇಸಿಗೆ ಸಂಭ್ರಮ-2017ರ ಕಾರ್ಯಕ್ರಮದ ಕುರಿತು ವ್ಯಾಪಕ ಪ್ರಚಾರ ಮಾಡಿ, ಈ ಕಾರ್ಯಕ್ರಮದ ಕುರಿತಾಗಿ ಅರಿವು ಮೂಡಿಸುವುದು & ಯಶಸ್ಸು ಮಾಡುವುದು.

*(13).* ಸದರಿ ಯೋಜನೆಯಲ್ಲಿ ನಿಗದಿತ ಮಾಹಿತಿಗಳ ಸರಬರಾಜಿಗಾಗಿ ಒಂದು ವಿಶೇಷ *ಮೋಬೈಲ್ ಆಪ್* ಬಿಡುಗಡೆ, ಇದರ ಮಾಲಕವೇ ಮುಖ್ಯಗುರುಗಳು ಆಹಾರ-ಧಾನ್ಯಗಳ ಬೇಡಿಕೆ ಕಳಿಸಬಹುದು & ವಿವಿಧ ಹಂತದ ಮೇಲಾಧಿಕಾರಿಗಳು ಸಹ ಸಂದರ್ಶನ ವರದಿಯನ್ನು ಕೂಡ ಕಳಿಸಬಹುದು.
SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

ಪ್ರಚಲಿತ ಪೋಸ್ಟ್‌ಗಳು

Random Posts

ಪ್ರಚಲಿತ ಪೋಸ್ಟ್‌ಗಳು