ಇಂದು ಹೈ.ಕ ವಿಮೋಚನಾ ದಿನಾಚರಣೆ: ಸರ್ದಾರ ಪಟೇಲ್ ಸ್ಮರಣೆ
ಗುಲ್ಬರ್ಗಾ: ಆಂಗ್ಲರ ಕಪಿಮುಷ್ಠಿಯಿಂದ ಭಾರತಾಂಬೆಯನ್ನು ರಕ್ಷಿಸಿ, ದೇಶವನ್ನು ಸರ್ವ ಸ್ವತಂತ್ರಗೊಳಿಸುವಲ್ಲಿ ರಾಷ್ಟ್ರಪಿತ, ಮಹಾತ್ಮ ಗಾಂಧೀಯವರ ಉಪವಾಸ ಸತ್ಯಾಗ್ರಹ, ಅಹಿಂಸಾತ್ಮಕ ಹೋರಾಟದಂತೆಯೇ ದೇಶದೊಳಗೆ ತಮ್ಮದೇ ಹಿಡಿತ ಸಾಧಿಸಿದ್ದರವನ್ನು ಮೆಟ್ಟಿನಿಂತು ವಿಮೋಚನೆಗೊಳಿಸಿದ ಕೀರ್ತಿ ಅಂದಿನ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯ್ ಅವರಿಗೆ ಸಲ್ಲುತ್ತದೆ.
ಅಂತೆಯೇ ಭಾರತ ಸರ್ಕಾರದ ವಿರುದ್ಧ ಬಂಡೆದ್ದು, ತಮ್ಮ ರಾಜ್ಯ ಸ್ವಾತಂತ್ರ್ಯವಾಗಿರುತ್ತದೆ. ಭಾರತದ ಒಕ್ಕೂಟಕ್ಕೆ ಸೇರಿಸುವುದಿಲ್ಲ ಎಂದು ಹೈದ್ರಾಬಾದ್‌ನ ನಿಜಾಮ ಆಸೀಫ್ ಜಾಹಿ ಮನೆತನದ ಮೀರ್ ಉಸ್ಮಾನ್ ಅಲಿಖಾನ್ ಜಂಗ್ ಬಹದ್ದೂರ್ ಘೋಷಿಸಿದ್ದನು. ಬಹದ್ದೂರ್‌ನ ಈ ಘೋಷಣೆ ದಕ್ಷಿಣ ಭಾರತದಲ್ಲಿ ಆಂತರಿಕ ಯುದ್ಧಕ್ಕೆ ನಾಂದಿಹಾಡಿತ್ತು. ಆಗ ಭಾರತದ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ, ಅಂದಿನ ಉಪ ಪ್ರಧಾನಿ ಸರ್ಧಾರ್ ವಲ್ಲಭಭಾಯ್ ಪಟೇಲ್ ಇಚ್ಛಾಶಕ್ತಿ ಹಾಗೂ ಕೆಚ್ಚೆದೆಯಿಂದ ನಿಜಾಮ್ ಆಡಳಿತದಿಂದ ಹೈದ್ರಾಬಾದ್ ಕರ್ನಾಟಕವನ್ನು ವಿಮೋಚನೆಗೊಳಿಸಿದರು.
ಹೈದ್ರಾಬಾದ್ ನಿಜಾಮನಿಂದ ತಾನು ಸ್ವತಂತ್ರವಾಗಿ ಉಳಿಯಬೇಕೆಂಬ ಘೋಷಣೆ ಹೊರಬಿದ್ದ ಬೆನ್ನಲ್ಲೇ ಕಂಗಾಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರರು ಮೊತ್ತೊಂದು ಸ್ವಾತಂತ್ರ್ಯ ಸಂಗ್ರಾಮ ನಡೆಸಬೇಕಾಯಿತು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಆಗಸ್ಟ್ 15, 1947 ರಂದು ಆದರೆ, ಹೈದ್ರಾಬಾದ್ ಪ್ರಾಂತಕ್ಕೆ ಸ್ವಾತಂತ್ರ್ಯ ಹೋರಾಟಕ್ಕೆ ಜಯ ದೊರಕಿದ್ದು 1948 ಸೆಪ್ಟಂಬರ್ 17 ರಂದು. ಅಂದರೆ 13 ತಿಂಗಳಗಳ ಬಳಿಕ. ಈ ಸಂಧರ್ಭದಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದ ಜನತೆ ನರಕಮಯ ಜೀವನ ಸಾಗಿಸಬೇಕಾಯಿತು. ಇದೇ ಸಂಧರ್ಭದಲ್ಲಿ ಉಕ್ಕಿನ ಮನುಷ್ಯ ಎಂದೇ ಖ್ಯಾತರಾಗಿದ್ದ ಸರ್ಧಾರ್ ವಲ್ಲಭಭಾಯ್ ಪಟೇಲರು, ಸೇನಾ ಕಾರ್ಯಾಚರಣೆ ಮೂಲಕ ಎದುರಾಳಿಗಳನ್ನು ಬಗ್ಗು ಬಡಿದರು. ಬಳಿಕ ನಿಜಾಮ್ ಸರ್ಕಾರಕ್ಕೆ ಶರಣಾದನು. ಆಗ ಹೈದ್ರಾಬಾದ್ ಪ್ರಾಂತ್ಯವನ್ನು ಭಾರತದ ಒಕ್ಕೂಟದಲ್ಲಿ ವಿಲೀನಗೊಳಿಸಲಾಯಿತು. ಅಂದು ಸೆ. 17 -1948. ಈ ಪ್ರಾಂತ್ಯದ ಜನತೆಗೆ ಅದು ಮಹತ್ವದ ದಿನವಾಗಿ ಪರಿಣಮಿಸಿತು.
ಹೈದ್ರಾಬಾದ್ ಕರ್ನಾಟಕದ ಜನತೆ ಇಂದು ಸ್ವತಂತ್ರವಾಗಿ ಉಸಿರಾಡಲು ಕಾರಣ ಪಟೇಲರು. ಹೀಗಾಗಿ ಅವರಿಗೆ ಹೈದ್ರಾಬಾದ್ ಕರ್ನಾಟಕದ ಗಾಂಧಿ ಎಂದೂ ಕೂಡ ಕರೆಯಲಾಗುತ್ತಿದೆ.
ಇಂತಹ ಮಹತ್ವದ ದಿನದ ಸ್ಮರಣೆಗೆ ಸರ್ದಾರಜಿ ಅವರನ್ನು ದಿಸೆಯಲ್ಲಿ ಕರ್ನಾಟಕದ ಆಡಳಿತದ ಚುಕ್ಕಾಣಿ ಹಿಡಿದಿದ್ದ ಸರ್ಕಾರದ ಪ್ರತಿನಿಧಿಗಳು 1998 ರಲ್ಲಿ ಹೈದ್ರಾಬಾದ್ ವಿಮೋಚನಾ ಸುವರ್ಣ ಮಹೋತ್ಸವ ಆಚರಣೆಯಂದು ಹೈದ್ರಾಬಾದ್ ಕರ್ನಾಟಕದ ಕೇಂದ್ರ ಸ್ಥಾನ ಕಲ್ಬುರ್ಗಿಯಲ್ಲಿ ಸರ್ದಾರ್ ವಲ್ಲಭಬಾಯಿ ಪಟೇಲ್ ಪ್ರತಿಮೆ ಸ್ಥಾಪಿಸಿದರು. ಅಂದಿನಿಂದ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಸರ್ಕಾರ ವಿಷಯದ ಕುರಿತು ಆದೇಶ ಹೊರಡಿಸಿ, ಪ್ರತಿ ವರ್ಷವು ಸೆ.17 ರಂದು ಹ್ಯದ್ರಾಬಾದ್ ಕರ್ನಾಟಕದ ಎಲ್ಲೆಡೆ ವಿಮೋಚನಾ ದಿನವನ್ನು ಸರ್ಕಾರದ ವತಿಯಿಂದಲೇ ಸ್ವಾತಂತ್ರ್ಯೊತ್ಸವವನ್ನು ಧ್ವಜಾರೋಹಣದೊಂದಿಗೆ ಆಚರಿಸುವಂತೆ ಸೂಚಿಸಿದ್ದರು.
ಕಳೆದ 15 ವರ್ಷಗಳಿಂದ ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿ, ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೂಡ ಸಂಭ್ರಮದಿಂದ ವಿಮೋಚನಾ ದಿನವನ್ನು ಆಚರಿಸುತ್ತಿದ್ದಾರೆ. ಜೊತೆಗೆ ದೇಶದ ಉಕ್ಕಿನ ಮನುಷ್ಯ ವಲ್ಲಭಭಾಯ್ ಪಟೇಲ ಅವರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ.
ನಾವೆಲ್ಲ ಉಕ್ಕಿನ ಮನುಷ್ಯ ಸರದಾರ ವಲ್ಲಭಾಯಿ ಪಟೇಲರನ್ನು ಸ್ಮರಿಸೋಣ ೧೭/೦೯/೨೦೧೬

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ