*544 ಪಿಎಸ್‌ಐ ಹುದ್ದೆ ನೇಮಕಾತಿಗೆ ಅಧಿಸೂಚನೆ ಪ್ರಕಟ*
17 Sep, 2016
ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 544 ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ಹುದ್ದೆಗಳ ನೇಮಕಾತಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಲಾಗಿದೆ. ‘ಸಶಸ್ತ್ರ ಮೀಸಲು ಪೊಲೀಸ್ ಪಡೆಯ (ಡಿಎಆರ್,ಸಿಎಆರ್) 90, ವೈರ್‌ಲೆಸ್ ವಿಭಾಗದ 28, ಸಿವಿಲ್ ವಿಭಾಗದ 398 ಹಾಗೂ ಕೆಎಸ್‌ಆರ್‌ಪಿಯ 28 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
*ಸೆಪ್ಟೆಂಬರ್ 19ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.* ಅರ್ಜಿ ಸಲ್ಲಿಕೆ ವಿಧಾನ, ವಯೋಮಿತಿ, ವಿದ್ಯಾರ್ಹತೆ, ದೇಹದಾರ್ಢ್ಯತೆ ಹಾಗೂ ಲಿಖಿತ ಪರೀಕ್ಷೆ ಸೇರಿದಂತೆ ನೇಮಕಾತಿಗೆ ಸಂಬಂಧಪಟ್ಟ ಮಾಹಿತಿಗಾಗಿ www.ksp.gov.in ವೆಬ್‌ಸೈಟ್ ನೋಡಬಹುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
‘ನೇಮಕಾತಿ ಪ್ರಕ್ರಿಯೆಯು ಪಾರದರ್ಶಕ, ಗಣಕೀಕೃತ, ವಸ್ತುನಿಷ್ಠ, ಅರ್ಹತೆ ಹಾಗೂ ಮೀಸಲಾತಿ ಆಧಾರದಲ್ಲಿ ನಡೆಯಲಿದೆ. ಅಭ್ಯರ್ಥಿಗಳು ಪ್ರಭಾವಿಗಳ ಮೂಲಕ ಒತ್ತಡ ತಂದರೆ ಇಲಾಖೆಯ ಕಾರ್ಯನಿರ್ವಹಣೆ ಅಡಚಣೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲಾಗುವುದು. ನೇಮಕಾತಿ ಮಾಹಿತಿಗೆ 080–22943346 ಸಂಪರ್ಕಿಸಬಹುದು’ ಎಂದು ನೇಮಕಾತಿ ಮತ್ತು ತರಬೇತಿ ವಿಭಾಗದ ಎಡಿಜಿಪಿ ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ