ಹಿತನುಡಿ

(ಇನ್ನೂ ಹೆಚ್ಚಿನ ಮಾಹಿತಿ ನಿಮ್ಮಲ್ಲಿ ಲಭ್ಯವಿದ್ದರೆ 8792128448 whatsapp ಸಂಖ್ಯೆ ಗೆ ಕಳುಹಿಸಿ)




ಛಲವಿದ್ದ ಮನುಷ್ಯ ಮಣ್ಣಿನ ಹೆ೦ಟೆಯಿಂದ ಕಲ್ಲಿನ ಗುಡ್ಡೆಯನ್ನು ಕರಗಿಸಿಯಾನು, ಛಲವಿಲ್ಲದವನಿಗೆ ಕಬ್ಬಿಣದ ಗುಡ್ಡೆಯನ್ನು ಕೊಟ್ಟರು ಮಣ್ಣಿನ ಹೆ೦ಟೆ ಒಡೆಯುವುದು ಅಸಾಧ್ಯ.


 *ನಮ್ಮ ಜೀವನವನ್ನು ಬದಲಾಯಿಸುವ ಸಾಧ್ಯತೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯನ್ನು ಕಾಣಲು ಬಹು ದೂರ ಹೊಗಬೇಕಿಲ್ಲ, ಕನ್ನಡಿ ಮುಂದೆ ನಿಂತರೆ ಸಾಕು*

 ಆಕಾಶದಲ್ಲಿ ಎತ್ತರದಲ್ಲಿ ಹಾರಾಡುತ್ತಿದ್ದ 
ಬಲೂನಿನ ಮೇಲೆ
 ಬರೆದಿದ್ದ ಸುಂದರ ಸಾಲುಗಳು.

ನಿನ್ನ ಹೊರಗೇನಿದೆಯೋ ಅದಲ್ಲ;

​ನಿನ್ನ ಒಳಗೇನಿದೆಯೋ ಅದು ನಿನ್ನನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.



*ತಂದೆ-ತಾಯಿಯ ಕಣ್ಣಿನಲ್ಲಿ ಎರಡೇ ಸಲ ಕಣ್ಣೀರು ಬರುವುದು..* *ಒಂದು ಮಗಳನ್ನು ದಾರೆಯೆರೆದು ಕೊಡುವಾಗ ಮತ್ತು ತನ್ನ ಸ್ವಂತ ಮಗನಿಂದಲೇ ನಿರ್ಲಕ್ಷೆಗೆ ಒಳಪಟ್ಟಾಗ...* 
*ನೆನಪಿರಲಿ ಪತ್ನಿ ನಮ್ಮ ಸ್ವಂತ ಅಯ್ಕೆಯಿಂದ ಸಿಗುತ್ತಾಳೆ..ತಂದೆ ತಾಯಿ ನಮ್ಮ ಪುಣ್ಯದಿಂದಲೇ ಸಿಗುವಂತವರು... ಅವರನ್ನು ಯಾವತ್ತು ನಿರ್ಲಕ್ಷಿಸದಿರಿ...* 

   

🌹ತಾಯಿ ನೀಡಿದ ಜನ್ಮದ ಋಣ
ತಂದೆ ನೀಡಿದ ಅನ್ನದ ಋಣ
ಅಕ್ಕ ಅಣ್ಣ ನೀಡಿದ ಪ್ರೀತಿಯ ಋಣ
ಗುರು ಹಿರಿಯರು ನೀಡಿದ ವಿದ್ಯೆಯ ಋಣ
ಎಲ್ಲಕ್ಕಿಂತ ಮುಗಿಲು ನೆಲೆಸಲು ನೆಲೆ ಒದಗಿಸಿದ ಭೂಮಿ ತಾಯಿಯ ಋಣ
ಜೀವನದ ಕೊನೆ ಕ್ಷಣದವರೆಗೂ ಮರೆಯಲಾಗದು
ಇದನ್ನು ಮರೆತು ಆಹಂ ನಿಂದ ಮೆರೆಯುವುದು ಮಾನವನ ತುಚ್ಛ ಜೀವನ




ನಗುವಿನ ಹಿಂದಿರುವ ನೋವನ್ನು, 
ಕೋಪದ ಹಿಂದಿರುವ ಕಾಳಜಿಯನ್ನು ಅರ್ಥ ಮಾಡಿಕೋಳ್ಳುವವರೇ ನಿಜವಾದ  "ಆತ್ಮಿಯರು"


_ಯಾವುದಾದರೊಂದು ಪದವು ಉಪನಿಷತ್ತುಗಳ ಮಹಾಗಣಿಯಿಂದ ಸಿಡಿಮದ್ದಿನಂತೆ ಹಾರುತ್ತಿದ್ದರೆ,_
_ಸಿಡಿಮದ್ದಿನಂತೆ ಅಜ್ಞಾನಿಗಳ ಮೇಲೆ ಸಿಡಿಯುತ್ತಿದ್ದರೆ, ಅದೇ ಅಭೀಃ ಎಂಬ ಪದ_, ✊🏻

*ಬೋಧಿಸಬೇಕಾದ ಒಂದೇ ಒಂದು ಧರ್ಮವೆಂದರೆ ಅಭೀಃ ಅಥವಾ ನಿರ್ಭೀತಿ ಎಂಬ ಧರ್ಮ.....*💪🏻 

   
     
*ಕಸಬರಿಗೆಯ ಕಡ್ಡಿಗಳನ್ನು ಒಂದುಗೂಡಿಸಿದ ಮೇಲೆಯೇ.... ಇರುವ ಎಲ್ಲ ‘ಕಸ‘ ಹೊರದೂಡಲ್ಪಡುತ್ತದೆ, ಆದರೆ ಇದೇ ಕಸಬರಿಗೆಯ ಕಡ್ಡಿಗಳನ್ನು ಬೇಪ೯ಡಿಸಿದಾಗ ಸ್ವತಃ ‘ಕಸಬರಿಗೆಯೇ‘ ಕಸವಾಗಿ ಹೋಗುತ್ತದೆ...!! ಆದ್ದರಿಂದ ಓಂದಾಗಿ ಬಾಳಿ, ಇನ್ನೊಬ್ಬರನ್ನು ಪ್ರೀತಿಸಿ, ವಿಶ್ವಾಸವಿಡಿ, ಸನ್ಮಾನಿಸಿ,ಸಹಾಯ ಮಾಡಿ. ಇದರಲ್ಲಿರುವ ಸಂತ್ರಪ್ತಿ, ಸಮಾಧಾನ ಇನ್ಯಾವುದರಲ್ಲಿಯೂ ಸಿಗದು...*
  

*ನಮ್ಮ ಜೀವನವನ್ನು ಬದಲಾಯಿಸುವ ಸಾಧ್ಯತೆಯನ್ನು ಹೊಂದಿರುವ ಒಬ್ಬ ವ್ಯಕ್ತಿಯನ್ನು ಕಾಣಲು ಬಹು ದೂರ ಹೊಗಬೇಕಿಲ್ಲ, ಕನ್ನಡಿ ಮುಂದೆ ನಿಂತರೆ ಸಾಕು*

*📖 ತಪ್ಪು ನಿಮ್ಮ ಅನುಭವಗಳನ್ನು ಹೆಚ್ಚಿಸುತ್ತದೆ, ಅನುಭವ ನಿಮ್ಮ ತಪ್ಪುಗಳನ್ನು ಕಡಿಮೆ ಮಾಡುತ್ತದೆ ನೀವು ತಪ್ಪಿನಿಂದ ಪಾಠ ಕಲಿತರೆ ಜನ ನಿಮ್ಮ ಯಶಸ್ಸು ನೋಡಿ ಪಾಠ ಕಲೀತಾರೆ*.

*📖 ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ, ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ನಮ್ಮ ಬದುಕನ್ನು ಬದಲಾಯಿಸುತ್ತೆ*.

*📖 ಒಳ್ಳೆಯ ಅವಕಾಶ ತಪ್ಪಿಹೋಯಿತೆಂದು ಯಾವತ್ತೂ ಕಣ್ಣೀರು ಹಾಕಬೇಡಿ, ಕಣ್ಣೀರು ನಿಮ್ಮ ಮುಂದಿರುವ ಅವಕಾಶವನ್ನು ಮರೆಮಾಚುತ್ತದೆ*.

*📖 ನೋವು ಬಂದಾಗ ಜೀವನ ಇಷ್ಟ ಆಗುವುದಿಲ್ಲ ನಿಜ, ಆದರೆ – ಇಷ್ಟ ಆದವರು ಜೊತೆಯಾಗಿರುವಾಗ ನೋವಲ್ಲೂ ಕೂಡಾ ಏನೋ ಒಂಥರಾ ಖುಷಿ ಇರುತ್ತದೆ*.

*📖 ತಪ್ಪಾಯಿತು ಎನ್ನಲು ಎಂದೂ ನಾಚಿಕೆ ಪಡಬೇಡ. ಯಾಕೆಂದರೆ ಹಾಗೆನ್ನುವುದರ ಅರ್ಥ ನಿನ್ನೆಗಿಂತ ಇಂದು ಬುದ್ಧಿ ಹೆಚ್ಚಾಗಿದೆ ಎಂದು*.

*📖 ಸಂತೋಷದ ಸಮಯದಲ್ಲಿ ಚಪ್ಪಾಳೆ ಹೊಡೆಯುವ ಹತ್ತು ಬೆರಳಿಗಿಂತ, ದುಃಖದ ಸಮಯದಲ್ಲಿ ಕಣ್ಣೀರು ಒರೆಸುವ ಒಂದು ಬೆರಳು ಎಷ್ಟು ಪವಿತ್ರ ಅಲ್ವಾ*.

*📖 ಜೀವನದಲ್ಲಿ ನೀನು ಗೆದ್ದರೆ ನೀನು ಯಾರೆಂದು ಎಲ್ಲರಿಗೂ ಗೊತ್ತಾಗುತ್ತದೆ. ಒಂದು ವೇಳೆ ಸೋತರೆ ನಿನ್ನವರು ಯಾರೆಂದು ನಿನಗೆ ಗೊತ್ತಾಗುತ್ತದೆ*.

*📖 ಬದುಕಿನಲ್ಲಿ ಯಾರನ್ನೂ ನಂಬಬೇಡಿ. ನಿಮ್ಮ ನೆರಳನ್ನೂ ಕೂಡಾ ಯಾಕೆಂದರೆ ಸಂಜೆಯಾಗುತ್ತಲೆ ನೆರಳು ಕೂಡಾ ನಿಮ್ಮನ್ನು ಬಿಟ್ಟು ಹೋಗುತ್ತದೆ*.

*📖 ನಂಬಿಕೆಗಿಂತ ಸಂದೇಹವೇ ಜಾಸ್ತಿಯಾದರೆ ಯಾವ ಸಂಬಂಧವೂ ಉಳಿಯಲ್ಲ. ಸಂದೇಹದ ನಡುವೆ ನಂಬಿಕೆ ಗಟ್ಟಿ ಆದರೆ ಯಾವ ಮನಸ್ಸೂ ಮುರಿಯಲ್ಲ*.

*📖 ನಾನು ನನ್ನ ಬಲಗೈಯಲ್ಲಿ ಏನು ಬೇಕಾದರೂ ಸಾಧಿಸಬಲ್ಲೆ, ಆದರೆ ನನ್ನ ಎಡಗೈಯನ್ನು ಅಮ್ಮ ಹಿಡಿದುಕೊಂಡು ಪ್ರೋತ್ಸಾಹಿಸಿದಾಗ ಮಾತ್ರ*.

*📖 ವಿಶಾಲ ಆಕಾಶವನ್ನು ಚಿಕ್ಕ ಕಣ್ಣಿನಲ್ಲೇ ನೋಡಬಹುದು. ಆದರೆ ಒಂದು ಒಳ್ಳೆ ಹೃದಯವನ್ನು ನೋಡಬೇಕಾದರೆ ನಮ್ಮ ಮನಸ್ಸು ವಿಶಾಲವಾಗಿರಬೇಕು*.

*📖 ಜೀವನ ಒಂದು ಸುಂದರವಾದ ರಂಗೋಲಿ. ಒಂದು ಚುಕ್ಕಿ ತಪ್ಪಿದರೂ ಹಾಳಾಗುತ್ತದೆ. ಅದಕ್ಕಾಗಿ ಜೀವನದ ಪ್ರತಿ ಹೆಜ್ಜೆಯಲ್ಲೂ ಗಮನ ಇರಲಿ*.

*📖 ಬದುಕು ಟೀಚರ್‌ಗಿಂತ ತುಂಬಾ ಸ್ಟ್ರಿಕ್ಟ್. ಯಾಕೆಂದರೆ ಟೀಚರ್ ಮೊದಲು ಪಾಠ ಮಾಡಿ ನಂತರ ಪರೀಕ್ಷೆ ಮಾಡ್ತಾರೆ. ಆದರೆ ಬದುಕು ಮೊದಲು ಪರೀಕ್ಷೆ ಮಾಡಿ ನಂತರ ಪಾಠ ಕಲಿಸುತ್ತದೆ


~~~~~~~~~ಜೀವನ~~~~~~~~

® ಮೊದಲ ಬಾರಿಗೆ ಕಣ್ಣರೆಪ್ಪೆ ತೆರೆದರೆ
    ಅದು  ' ಜನನ '
    ಕೊನೆಯ ಬಾರಿಗೆ ಕಣ್ಣರೆಪ್ಪೆ
    ಮುಚ್ಚಿದರೆ  ಅದು  'ಮರಣ '
    ತೆರೆದು ಮುಚ್ಚುವ ನಡುವಣ
    ಕ್ಷಣಗಳೆ  ' ಜೀವನ '

® ನಮ್ಮ ಜನನ, ನಮ್ಮ ಆಯ್ಕೆ
    ಅಲ್ಲದ  ಘಟನೆ :
     ನಮ್ಮ ಮರಣ ನಮ್ಮ ಅಧೀನದಲ್ಲಿ
     ಇಲ್ಲದ  ಅಂತ್ಯ. ಆದರೆ~  ನಮ್ಮ
     ಜೀವನ ಮಾತ್ರ ನಾವೇ
     ರೂಪಿಸಿಕೊಳ್ಳಬಹುದಾದ ಒಂದು
     ಪಯಣ

®  ಜೀವನದಲ್ಲಿ " ಬಾಲ್ಯವೆಂದರೆ
     ಸ್ವಾಗತ  " ಭಾಷಣ"
     ಯೌವ್ವನವೆಂದರೆ ಉಪನ್ಯಾಸ;
     ವೃದ್ಧಾಪ್ಯವೆಂದರೆ
     ವಂದನಾರ್ಪಣೆ;
     ಸಾವು ಎಂದರೆ ಶಾಂತಿಮಂತ್ರ.
    ~~ ನಿರೂಪಣಾಕಾರರ ಭಾಷೆಯಲ್ಲಿ

®  ದೇವರು ನಮಗೆ  ಜೀವನವನ್ನಲ್ಲ ,
     ಜೀವವನ್ನಷ್ಟೆ  ಕೊಟ್ಟ .
     ಹೇಗೆ ಜೀವಿಸಬೇಕೆಂಬುದನ್ನು ಅವ
     ನಮಗೆ ಬಿಟ್ಟುಕೊಟ್ಟ.

®. ನೀರು ನಿಂತರೆ, ಕೊಳೆತು
      ನಾರುತ್ತದೆ.  ಹರಿದು ಹೋದರೆ
      ತೊಳೆದು  ತಿಳಿಯಾಗುತ್ತದೆ .
     ನಮ್ಮ ಜೀವನ ನಿಂತ
     ನೀರಾಗಬಾರದು;
     ಅದು ಹರಿಯುವ
      ಹೊಳೆಯಾಗಬೇಕು!

® ಜೀವನದಲ್ಲಿ ಕಷ್ಟಗಳು ನಮ್ಮನ್ನು
    ನಾಶಗೊಳಿಸಲು ಬರೋದಿಲ್ಲ.
    ಬದಲಾಗಿ
    ನಮ್ಮನ್ನು ಇನ್ನಷ್ಟು
    ಬಲಿಷ್ಟವಾಗಿಸಲು   ಬರುತ್ತಿರುತ್ತದೆ !

® ಜೀವನವೆಂಬ ಬಯಲಾಟದಲ್ಲಿ
     ಬಿದ್ದವ
     ಬಿದ್ದ. ಎದ್ದವ ಎದ್ದ.
      ಬಿದ್ದೂ ಏಳದವ
     ನೆಗೆದು ಬಿದ್ದ.

®  ಅಲೆಗಳೇ ಇಲ್ಲದ ಶಾಂತ
     ಸಮುದ್ರ.   ಸಮರ್ಥ
     ಈಜುಗಾರನನ್ನು  ಸೃಷ್ಟಿಸಲಾರದು.
     ಅಂತೆಯೇ   ಏಳುಬೀಳುಗಳಿಲ್ಲದ
     ಜೀವನ,  ಸಶಕ್ತ, ಸಮರ್ಥ
     ವ್ಯಕ್ತಿಯನ್ನೆಂದೂ ನಿರ್ಮಿಸಲಾರದು .

®. ಜೀವನವೆಂಬುದು ಒಂದು
     ಪುಸ್ತಕವಿದ್ದಂತೆ
     ಮೊದಲ ಪುಟ ಜನನವಾದರೆ ,
     ಕೊನೆಯ  ಪುಟ ಮರಣ .
     ಇವೆರಡನ್ನು  ಹೊರತುಪಡಿಸಿ,
     ನಡುವಿನ   ಹಾಳೆಗಳನ್ನು
     ನಾವೇ ಬರೆದು
     ತುಂಬಿಕೊಳ್ಳಬೇಕಾಗುತ್ತದೆ
   
®  ಜೇಬು ಖಾಲಿಯಾದಾಗ,
     ಎದುರಾಗುವ
     ಒಂದೊಂದು ತಿರುವು ಕೂಡಾ
     ಒಂದೊಂದು ಪಾಠವನ್ನು
     ಹೇಳಿಕೊಡುತ್ತದೆ .
           ಆದರೆ
     ಜೇಬು ತುಂಬಿದಾಗ
     ಎದುರಾಗುವ  ಪ್ರತಿಯೊಂದು
     ತಿರುವು ಕೂಡಾ
     ನಮ್ಮನ್ನು ದಾರಿ
     ತಪ್ಪುವಂತೆ ಮಾಡುತ್ತದೆ.
*************************************

*ನಿಮ್ಮ ಅರ್ಹತೆಯ ಬಗ್ಗೆ ಯಾರಾದರೂ ಸಂದೇಹ ಪಟ್ಟರೆ ಬೇಸರಗೊಳ್ಳದಿರಿ ,  ಬದಲಿಗೆ ಹೆಮ್ಮೆ ಪಟ್ಟುಕೊಳ್ಳಿ ಏಕೆಂದರೆ , ಜನರು ಚಿನ್ನದ ಪರಿಶುದ್ಧತೆಯ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಾರೆಯೇ ಹೊರತು ಕಬ್ಬಿಣದ ಶುದ್ದತೆಯ ಬಗ್ಗೆ ಅಲ್ಲಾ.....* 🙏🏻

***********************************

 *ನಾವು ಹೊಂದಿರುವ ಉತ್ತಮ ಸಂಬಂಧಗಳೇ ಜೀವನಕ್ಕೆ ಒಂದು ಮೌಲ್ಯ ಕೊಡುತ್ತದೆ* *ಅಂಥ ಶ್ರೇಷ್ಠವಾದ ಸಂಬಂಧಗಳ ಬೆಲೆ ಅರಿವಾಗುವುದೇ ಅದು ಮುರಿದು ಹೋದ ಬಳಿಕ* *ಹೀಗಾಗಿ ಸೌಹಾರ್ದಯುತ ಸಂಬಂಧಗಳನ್ನು ಕಾಪಾಡಲು ಪ್ರಯತ್ನಿಸಬೇಕು*......

*********************************

"ನಾನು ಎಂಬುದ ಮರೆತು
ನನ್ನಿಂದಲೇ ಎಂಬುದ ತೊರೆದು,
ನಾವು ಎಂಬುದ ನೆನೆದು
ನಮ್ಮಿಂದ ಎಂಬುದ ಮನಸಿಟ್ಟು
ಎಲ್ಲರೊಳಗೊಂದಾಗಿ ಬದುಕಿದರೆ
ಅವನೇ ನಿಜವಾದ ಸಾಧಕ.
ಅದುವೇ ಬದುಕಿನ ಸಾಧನೆ"...

 ********************************                  
  *ಕಷ್ಟಗಳ ರಾಶಿಯ ಮಧ್ಯೆ ಅವಕಾಶಗಳು ಬಿದ್ದಿರುತ್ತವೆ. ಅವುಗಳನ್ನು ಹುಡುಕಿ ತೆಗೆವ ತಾಳ್ಮೆ ನಮಗಿರಬೇಕಷ್ಟೆ.....

***********************************

*"ನನ್ನವರಂತ ನನಗೆ ಯಾರೂ ಇಲ್ಲ, ನನ್ನ ಕಷ್ಟಕ್ಕಾಗುವವರು ಒಬ್ಬರೂ ಇಲ್ಲ" ಅಂತ ಬೇಸರಿಸಿಕೊಳ್ಳೋ ನೊಂದ ಮನಸುಗಳಿಗೆ ಒಂದು ಚಿಕ್ಕ ಸ್ಯಾಂಪಲ್.... ಇಲ್ಲಿ ಕೇಳಿ👇🏻*


*ಬೈಕ್ ಓಡಿಸುವಾಗ ಸ್ಟ್ಯಾಂಡ್ ಹಾಗೇ ಬಿಟ್ಟು ಕೊಂಡು ಹಗಲಿನಲ್ಲಿ ಹೆಡ್ ಲೈಟ್ ಹಾಕ್ಕೊಂಡು ಗಾಡಿ ಓಡಿಸಿ ನೋಡಿ ಅದೆಷ್ಟು ಜನ ನಮ್ಮವರು ಎದುರಾಗ್ತಾರೆ ಅಂತ ಗೊತ್ತಾಗುತ್ತೆ.....*

*ನಮ್ಮವರು , ನಮ್ಮ ಕಷ್ಟಕ್ಕೆ ಸ್ಪಂದಿಸುವವರು ನಮ್ಮ ಸುತ್ತಲೂ ಇದ್ದಾರೆ. ಅವರನ್ನು ಕಂಡುಕೊಳ್ಳುವ ಒಳಗಣ್ಣು ಬೇಕಷ್ಟೆ...!!!!

*********************************

*ಸಾವಿರ ಕಾಗೆಗಳು ಕೂಗಾಡಿದರೇನು*
*ಒಂದು ಕೋಗಿಲೆಯ ಧ್ವನಿಯನ್ನು ಸರಿದೂಗಿಸಲಾಗದು....!!*

*ಸಾವಿರ ಜನ ಕೊಂಕು ಮಾತಾಡಿದರೇನು ಒಬ್ಬ ಒಳ್ಳೆಯ ವಕ್ತಿಯ ವಕ್ತಿತ್ವವನ್ನು ವಿರೂಪಗೊಳಿಸಲಾಗದು...!!*

***********************************

*ನೋಡಲು ಕಣ್ಣಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವನು ಆ ಭಗವಂತ.*

*ಎಷ್ಟು ಜನ ಗೆಳೆಯರು ಇದ್ದರೇನು ಕಷ್ಟ ಕಾಲವೇ ತೋರಿಸುವುದು, ನಿನ್ನ ಆಪ್ತರು ಯಾರಂತ.*

*************************************

*ಇನ್ನೊಬ್ಬರ ಯೋಗ್ಯತೆಯನ್ನು ಅಳೆಯುವ ಕೆಲಸ ನಮ್ಮದಲ್ಲ. ಅದರ ಬದಲು ಇತರರ ಯೋಗ್ಯತೆಯನ್ನು ಗೌರವಿಸುತ್ತಾ, ನಮ್ಮ ವ್ಯಕ್ತಿತ್ವವನ್ನು ಎತ್ತರಿಸಿಕೊಳ್ಳೋಣ*.

********************************

🌺ಸಮಸ್ಯೆಗಳಿಂದ ತಪ್ಪಿಸಿಕೊಂಡು* *ಬದುಕುವುದು ಜೀವನವಲ್ಲ ...!!!*
*ಸಮಸ್ಯೆಗಳೊಂದಿಗೆ ಬೆಳೆಯುವುದೇ ನಿಜವಾದ ಜೀವನ.....*

 *********************************

*ಒಳ್ಳೆಯವರು ಸಂತಸ ಕೊಡುತ್ತಾರೆ,*
*ಕೆಟ್ಟವರು ಅನುಭವ ನೀಡುತ್ತಾರೆ,*
*ದುಷ್ಟರು ಪಾಠ ಕಲಿಸುತ್ತಾರೆ,*
*ಉತ್ತಮರಾದವರು ಸವಿನೆನಪು ಕೊಡುತ್ತಾರೆ, ಅದ್ದರಿಂದ ಎಂಥ ಜನರನ್ನೂ ನಾವು ದೋಷಿಸಬಾರದು ಎಲ್ಲಾರಿಂದಲೂ ಒಂದಲ್ಲ ಒಂದು ರೀತಿಯ ಪಾಠ ಕಲಿಯಬಹುದು.*
********************************
"ನೋವುಂಡ ಹೃದಯ ಸಣ್ಣ ಮಕ್ಕಳಂತೆ. ಅದು ಅಳಬಹುದೇ
        ಹೊರತು ತನ್ನ ಭಾವನೆಗಳನು ಹಂಚಿಕೊಳ್ಳದು .ಆದ್ದರಿಂದ
        ನಿಮ್ಮನ್ನು ಪ್ರೀತಿಸುವ ಮತ್ತು ನಿಮ್ಮ ಮೇಲೆ ಕಾಳಜಿ
        ತೋರುವ ಯಾರನ್ನು ನೋಯಿಸಬೇಡಿ"

**************************************

      *🎯ನಿನ್ನ ವೈರಿಯೇ ಮನೆಬಾಗಿಲಿಗೆ*
*ಬಂದರೂ ನಗುನಗುತ ಸ್ವಾಗತಿಸು ಏಕೆಂದರೆ*
  *ತನ್ನನ್ನು ಕಡಿಯುವ ಮನುಪ್ಯರಿಗೂ ಮರ*
                  *ನೆರಳನ್ನೇ  ನೀಡುತ್ತದೆ.*

**************************************
 *ಬದುಕಿನಲ್ಲಿ 'ನಾಳೆ' ಎಂಬ ಅವಕಾಶ ಯಾವತ್ತೂ ಇರುತ್ತದೆ. ಆದರೆ 'ನಿನ್ನೆ' ಎಂಬುದರಲ್ಲೇ ನಾವು ಕಳೆದು ಹೋಗಬಾರದಷ್ಟೇ.*      
🍃 *ಜೀವನವು ಪ್ರತಿಕ್ಷಣವೂ*
*ಮೃದುತನದಿಂದಿರುವುದಿಲ್ಲ*.
" *ಕನಸು ಕಂಡವರಿಗಿಂತ* *ಕಷ್ಟ*
*ಪಟ್ಟವರಿಗೆ* " *ಬೇಗ*
         *ಅರ್ಥವಾಗುತ್ತದೆ.*
  *************************************

ಕಳೆದು ಕೊಂಡ ಜಾಗದಲ್ಲಿ ಹುಡಕಬೇಕು .   ಸೋತ ಜಾಗದಲ್ಲೆ ಗೆಲ್ಲಬೇಕು#ಅವಮಾನಿಸಿದ ಜಾಗದಲ್ಲೆ ಬೆಳೆಯಬೇಕು#ತಿರಸ್ಕರಿಸಿದವರಿಂದಲೇ ಪುರಸ್ಕರಿಸಿ ಕೊಳ್ಳಬೇಕು#

**************************************
           ಗಳಿಸಿದ ಧನ ಚಿರವಲ್ಲ,
          ಪಡೆದ ಅಧಿಕಾರ ಸ್ಥಿರವಲ್ಲ,
          ಏರಿದ ಅಂತಸ್ತು ಶಾಶ್ವತವಲ್ಲ,
          ಸಂತಸ ಸಂಭ್ರಮಗಳೂ,
          ಸಕಲವೂ ನಸ್ವರ.
**************************************
          ಮಾಡಿದ ಸತ್ಕಾರ್ಯ,
          ಮೆರೆದ ಔದಾರ್ಯ,
          ಆನಂದಿಸಿ, ಅನುಭವಿಸಿದ
          ನೆನಪುಗಳ ಮಾಧುರ್ಯ
          ಎಂದಿಗೂ ಅಜರಾಮರ.
**************************************            
                   
ಮರಗಳು ಎಂದೂ ಉದುರಿದ ಹೂಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ.
ಮತ್ತೆ ಹೊಸ ಹೂಗಳನ್ನು ಬಿಡುವದರಲ್ಲೇ ಮಗ್ನವಾಗಿರುತ್ತವೆ.
ಬದುಕಿನಲ್ಲೂ ನಾವು ಕಳೆದುಕೊಂಡಿರುವುದೇನು ಮುಖ್ಯವಲ್ಲ.
ಮತ್ತೆ ಹೇಗೆ ಬೆಳೆಯಬಲ್ಲೆವು
ಎನ್ನುವುದು ಮುಖ್ಯ.
**************************************
 ಸಮಸ್ಯೆಗಳಿಂದ ತಪ್ಪಿಸಿಕೊಂಡು ಬದುಕುವುದು ಜೀವನವಲ್ಲ ...!!!
ಸಮಸ್ಯೆಗಳೊಂದಿಗೆ ಬೆಳೆಯುವುದೇ ನಿಜವಾದ ಜೀವನ.....
**************************************

*ನೋಡಲು ಕಣ್ಣಿದೆ ಎಂದು ಖುಷಿ ಪಡುವ ಮುನ್ನವೇ ಕಂಬನಿಯ ಪರಿಚಯ ಮಾಡುವನು ಆ ಭಗವಂತ.*
*ಎಷ್ಟು ಜನ ಗೆಳೆಯರು ಇದ್ದರೇನು ಕಷ್ಟ ಕಾಲವೇ ತೋರಿಸುವುದು, ನಿನ್ನ ಆಪ್ತರು ಯಾರಂತ.*

3 ಕಾಮೆಂಟ್‌ಗಳು:

Unknown ಹೇಳಿದರು...

ಕಾಯಕ ನಮ್ಮ ನಾಯಕ ಎಂದು ಜೀವನ ಮಾಡಿದರೆ ಅದೇ ಸ್ವರ್ಗ

shivaraj.gs16@gmail.com ಹೇಳಿದರು...

ಅತ್ಯುತ್ತಮ ಸಂದೇಶ ಸಂಗ್ರಹಿಸಿದ ತಮಗೆ ಪ್ರಣಾಮಗಳು..ಬ್ಲಾಗ್ ತುಂಬಾ ಉತ್ತಮ ವಿಚಾರಗಳ ಆಗರವಾಗಿದೆ...ಶುಭವಾಗಲಿ..---ಮೇಘನಶಿವರಾಜ್

Unknown ಹೇಳಿದರು...

ಅದ್ಬುತ ನುಡಿಗಳು ಸರ್