27.7.20

ವಿದ್ಯಾಗಮ ಯೋಜನೆಯ ಕಲಿಕಾ ಕಾರ್ಯಕ್ರಮ

: *ಮುಖ್ಯಗುರುಗಳು ಹಾಗೂ  ಸಹಶಿಕ್ಷಕರುಗಳೆ ಕಾರ್ಯಪ್ರವೃತ್ತರಾಗಿ

*ವಿದ್ಯಾಗಮ ಯೋಜನೆಯ ಕಲಿಕಾ-ಕಾರ್ಯಕ್ರಮದ  ಮುಖ್ಯಾಂಶಗಳು*

💐💐💐💐💐

            ** ವಿದ್ಯಾಗಮ ಯೋಜನೆಯ ನಮೂನೆಗಳು 👈👈
            ** ವಿದ್ಯಾಗಮ ಯೋಜನೆಯ ಪರಿಚಯ 👈👈
     


*ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಎಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು*.

*ಇದರ ಉದ್ದೇಶ covid-19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವವರಿಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವದಾಗಿದೆ*
*ಈಗಾಗಲೇ ಪ್ರತಿಶಾಲೆಯಿಂದ ಮಾರ್ಗದರ್ಶಿ ಶಿಕ್ಷಕರುಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ.*

*ತಮ್ಮ ಶಾಲೆಗಳಲ್ಲಿರುವ ಮಕ್ಕಳನ್ನು ಅವರ ವಾಸಸ್ಥಳಕ್ಕನುಗುಣವಾಗಿ( habitations) 3 ಭಾಗಗಳಾಗಿಸಬೇಕು*.

1 ) 1ರಿಂದ 5ನೆ ತರಗತಿ
2 ) 6ರಿಂದ 8ನೆ ತರಗತಿ
3 ) 8ರಿಂದ 10 ನೆ ತರಗತಿ

*ಎಂಬ ಕಾಲ್ಪನಿಕ ಕೊಠಡಿಗಳಾಗಿ
ಮಾಡಿಕೊಂಡು 20ರಿಂದ25 ಮಕ್ಕಳಿಗೊಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಬೇಕು*

*ಆಯಾಯ ಗುಂಪುಗಳಿಗೆ ನಿಗದಿಪಡಿಸಿದ ಮಾರ್ಗದರ್ಶಿ ಶಿಕ್ಷಕರಿಂದ ಇಲಾಖೆ ಒದಗಿಸುವ  ಪಠ್ಯಪುಸ್ತಕಗಳನ್ನು ಕಲಿಕಾ-ಸಾಮಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಮಾರ್ಗದರ್ಶನ ನೀಡುವುದು*

 *ಈಗಾಗಲೇ ಸರ್ಕಾರ 25ರಿಂದ 30% ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದನ್ನು ಹೊರತುಪಡಿಸಿ ಉಳಿದ ಪಠ್ಯವಸ್ತುವನ್ನು ನಮ್ಮ ವಾರ್ಷಿಕ ಕಾರ್ಯಯೋಜನೆಯಂತೆ ಅನುಷ್ಠಾನಗೊಳಿಸಬೇಕು*

*ಮಕ್ಕಳು & ಶಿಕ್ಷಕರುಗಳ ಸಂಪರ್ಕ 3 ಕೊಠಡಿಗಳಲ್ಲಿ ವಿಂಗಡಣೆಯಾಗಿರುತ್ತದೆ*

1 )ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಸಮೇತ phone,tab,computer & etc ಇವರುಗಳ ವಾಟ್ಸಪ್ ಗುಂಪುಗಳನ್ನು ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ 9 ಗಂಟೆಯೊಳಗೆ / ಸಂಜೆ 5 ಗಂಟೆ ನಂತರ webx /zoom/Googlemeet ಬಳಸಿಕೊಂಡು online classes ಮಾಡಬೇಕು.
....
2 ) ಬ್ರಿಲಿಯಂಟ್ ಕಾಲ್ಪನಿಕ ಕೊಠಡಿ
ಇಲ್ಲಿ internet ಸಂಪರ್ಕವಿಲ್ಲದ phone ಗಳಿರುತ್ತವೆ.
ಇಂತಹ ಮಕ್ಕಳಿಗೆ SMS/voice messages ನಿಗದಿಪಡಿಸುದ ವೇಳೆಯಲ್ಲಿ ಮಕ್ಕಳಿಗೆ home assignment ಕೊಟ್ಟು feedback ಪಡೆದುಕೊಳ್ಳಬೇಕು.(call ಮಾಡಿಯಾದರು)
....
3 ) ಜೀನಿಯಸ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಆಧರಿತ ಯಾವುದೇ ಸಾಧನಗಳಿರುವುದಿಲ್ಲ.
ಇಂತಹ ಮಕ್ಕಳನ್ನು ಗುಂಪುಗಳನ್ನಾಸಿಕೊಂಡು ಕನಿಷ್ಠ ವಾರಕ್ಕೊಂದು ಭಾರಿಯಾರು ಕಡ್ಡಾಯ ಬೇಟೆಮಾಡಿ ಮಕ್ಕಳಿಗೆ ಮುಂದಿನ ವಾರದಲ್ಲಿ ಮಾಡುವ home assignment ಕೊಟ್ಟು ಮಾರ್ಗದರ್ಶನ ನೀಡಬೇಕು.

*ಮಕ್ಕಳನ್ನು ಬೇಟಿಯಾಗುವಾಗ ಸರ್ಕಾರದ SOP ಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಕಡ್ಡಾಯವಾಗಿ ಮುಖಗವಸನ್ನು(ಮಾಸ್ಕ)ಧರಿಸಿಕೊಳ್ಳಬೇಕು*

*ಪ್ರತಿ ಮಾರ್ಗದರ್ಶಿ ಶಿಕ್ಷಕರುಗಳಿಗೆ ವಾರಕ್ಕೊಮ್ಮೆ ಮಕ್ಕಳನ್ನು ಬೇಟೆಯಾಗುಂತೆ ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ*

*ಯಾವುದೇ ಕಾರಣಕ್ಕೂ ಶಿಕ್ಷಕರು ಮಗುವನ್ನು /ಮಗು ಶಿಕ್ಷಕರನ್ನು ಏಕಾಂಗಿಯಾಗಿ ಬೇಟಿಯಾಗಬಾರದು*

*ಸಮುದಾಯ/ಹಳೆವಿದ್ಯಾರ್ಥಿಗಳು/ಸ್ವಯಂ ಸೇವಕರು/ SDMC ಪದಾಧಿಕಾರಿಗಳು/ಪಾಲಕರುಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು*

 *ಶಿಕ್ಷಕರುಗಳು ತಾವು ಕೈಗೊಂಡ ಪಾಠಪ್ರವಚನಗಳ ದಾಖಲೆಗಳನ್ನುಳಿಸಿಕೊಂಡಿರಬೇಕು*

*ಮಕ್ಕಳಿಗೆ ತಾವು ನೀಡಿದ home assignment/project/science models/etc ಗಳನ್ನು ಪರಿಶೀಲಿಸಿ ರೂಪಣಾತ್ಮಕ ಮೌಲ್ಯಮಾಪನಕ್ಕೆ ಅಂಕಗಳನ್ನು ನೀಡಿ ಅದನ್ನು SATS ನಲ್ಲಿ ದಾಖಲಿಸಬೇಕು*


*ಮುಖ್ಯಶಿಕ್ಷಕರ ಗಮನಕ್ಕೆ*

 *ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ intelligent,brilliant& genius ಗುಂಪುಗಳನ್ನು ರಚಿಸಿ ಅವುಗಳ ಪಟ್ಟಿಯನ್ನು ನೀಡಬೇಕು*
[27/7 7:24 ಪೂರ್ವಾಹ್ನ] Crp Eachanal Muktum: *#ವಿದ್ಯಾಗಮ* *ನಿರಂತರ ಕಲಿಕಾ ಕಾರ್ಯಕ್ರಮ* ಬಗ್ಗೆ *ತಮ್ಮ ಹಂತದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುವ ಕುರಿತು*

*೧) ಕಾಲ್ಪನಿಕ ಕಲಿಕಾ ಕೋಣೆ:*
# ಪ್ರತಿ ಶಾಲೆಯ ೨೦-೨೫ ಮಕ್ಕಳಿಗೆ ಒಬ್ಬ *ಮಾರ್ಗದರ್ಶಿ ಶಿಕ್ಷಕರನ್ನು* ನೇಮಿಸುವುದು.
# ಮಕ್ಕಳ ಸ್ಥಳ- *ಭೌಗೋಳಿಕ ಪ್ರದೇಶ ಆಧರಿಸಿ* ಗುಂಪು‌ ಮಾಡಬೇಕು.
# ೧-೫,೬-೮,-೧೦ ತರಗತಿಗೆ ಅನುಗುಣವಾಗಿ *ನೆರೆಹೊರೆ ಗುಂಪು* ಮಾಡಬೇಕು.

# *ಕಲಿಕಾ ಸಾಮಗ್ರಿಗಳ ಸಿದ್ದತೆ & ಪೂರೈಕೆ:*, ಸರ್ಕಾರದ ಪ್ರೋತ್ಸಾಹದಾಯಕ‌ ಯೋಜನೆ ಸಾಮಗ್ರಿ ನೆರೆಹೊರೆ ತಂಡಕ್ಕೆ ನೀಡಬೇಕು.
# ತಂಡದಲ್ಲಿ ಸ್ವಕಲಿಕೆಗೆ ಅವಕಾಶ ಕಲ್ಪಿಸಿ‌, ಮಾರ್ಗದರ್ಶನ‌ ನೀಡಬೇಕು.
#ಶೇ ೨೦-೩೫ ರಷ್ಟು ಪಠ್ಯಕ್ರಮ ಕಡಿತಗೊಳಿಸಲಾಗುವುದು ಅದರಂತೆ ರಾಜ್ಯ ಹಂತದಿಂದಲೇ ಯೊಜನೆಯನ್ನು ಸಿದ್ದಪಡಿಸಿ ಅಂತರ್ಜಾಲದಲ್ಲಿ ಬಿಡಲಾಗುವುದು.
# ನೆರೆಹೊರೆ ತಂಡಕ್ಕೆ ಆಹಾರ ಧಾನ್ಯ ಬಿಡುಗಡೆ ಮಾಡಲಾಗುವುದು‌. ಪಾಲಕರೇ ಆಹಾರ ತಯಾರಿಸಿ ಮಕ್ಕಳಿಗೆ ವಿತರಿಸಬೇಕು.

# *ಮಕ್ಕಳ ಮತ್ತು ಮಾರ್ಗದರ್ಶಿ ಶಿಕ್ಷಕರ ಸಂಪರ್ಕದ ರೀತಿ‌ ಮೂರು ಹಂತ.*
# ನೆರೆಹೊರೆ ತಂಡಗಳಲ್ಲಿ ಲಭ್ಯವಿರುವ ತಂತ್ರಜ್ಞಾನ ಸಾಧನಗಳನ್ನಾಧರಿಸಿ ೩ ತಂಡಗಳಲ್ಲಿ ವಿಂಗಡಣೆ ಮಾಡಬಹುದು.
# *ಇಂಟೆಲೆಜೆಂಟ್ ಕೋಣೆ* (ಇಂಟರ್ನೆಟ್ ಸಹಿತ ಕಂಪ್ಯೂಟರ್,ಟ್ಯಾಬ್ ಸ್ಮಾರ್ಟ ಫೋನ್ ಲಭ್ಯಿರುವ ತಂಡ)
# *ಬ್ರಿಲಿಯೆಂಟ್ ಕೋಣೆ* (ಇಂಟರ್ನೆಟ್ ಇಲ್ಲದ ಮೊಬೈಲ್ ಇರುವ ಕೋಣೆ)
# *ಜೀನಿಯಸ್ ಕೋಣೆ*( ಯಾವುದೇ ತಂತ್ರಜ್ಞಾನ ಸಾಧನವಿಲ್ಲದ ಕೋಣೆ).
# ಈ ನೆರೆಹೊರೆ ತಂಡದ ಕೋಣೆಗಳಿಗೆ ಮಾರ್ಗದರ್ಶಿ ಶಿಕ್ಷಕರು ವಾರಕ್ಕೆ ಒಂದು ಸಲ ಕನಿಷ್ಠ ಭೇಟಿ ನೀಡಲೇಬೇಕು.
#ಈ ನೆರೆಹೊರೆ ತಂಡಗಳಿಗೆ ಸ್ವಯಂ ಸೇವಾ ಗುಂಪು ಸಿದ್ದಪಡಿಸಬೇಕು. (ಇವರು ಇದೇ ನೆರೆಹೊರೆ ಪ್ರದೇಶದ ಸ್ಥಳೀಯ ತರುಣ ವಿದ್ಯಾವಂತರು ಆಗಿರಬೇಕು).
#ತಂಡದ ಮಾರ್ಗದರ್ಶಿ ಶಿಕ್ಷಕರ ಮತ್ತು ಸ್ವಯಂ ಸೇವಾ ತಂಡದವರ ಲ್ಯಾಪ್ಟಾಪ್,ಸ್ಮಾರ್ಟ ಫೋನ್ ಬಳಸಿ ಕಲಿಕೆಯನ್ನುಂಟು ಮಾಡಬಹುದು.

# *ಮೂರು ರೀತಿಯ ಕೊಠಡಿ ಹೊರತು ಪಡಿಸಿ ಇದ್ದಲ್ಲಿ ಮಾರ್ಗದರ್ಶಿ ಶಿಕ್ಷಕರು ಮಾಡಬೇಕಾದ ಕಾರ್ಯಗಳು*
# ಕಲಿಕಾ ಅಭ್ಯಾಸದ ಹಾಳೆ ಬಳಸುವುದು.
# ಸ್ಥಳೀಯ ಕಲಿಕಾ ಸಾಮಗ್ರಿಗಳ ಮರುಬಳಕೆ ಮಾಡುವುದು‌.
# ಮಕ್ಕಳ ಮನೆಯ ಆಟಗಳ ಮೂಲಕ ಕಲಿಕೆ ಮಾಡಿಸುವುದು.
# ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಉತ್ತಮ ಹವ್ವಾಸ ಬೆಳೆಸುವುದು.
# ಓದು,ಬರಹ,ಹಾಡು,ಚಿತ್ರಕಲೆ ಗಳನ್ನು ಮಾಡಿಸಿ ಮಕ್ಕಳಲ್ಲಿ ವಿಶಿಷ್ಠ ಕೌಶಲ್ಯ ವೃದ್ದಿಸುವುದು.
# ಮನೆಯಲ್ಲಿಯ ವಸ್ತುಗಳನ್ನು ಬಳಸಿ ಸುರಕ್ಷಿತವಾದ ವಿಜ್ಞಾನ ಪ್ರಯೋಗ ಮಾಡಿಸುವುದು.
# ಪಠ್ಯಕ್ಕೆ ಪೂರಕವಾದ ಪ್ರೋಜೆಕ್ಟ ವಿದ್ಯಾರ್ಥಿಗಳಿಂದ ಮಾಡಿಸುವುದು.

# *ಭೋದನಾ ಪ್ರಕ್ರಿಯೆಯ ಸ್ವರೂಪ:*
#೧-೫ ತರಗತಿ ತಂಡಗಳಿಗೆ ಮಾರ್ಗದರ್ಶಿ ಶಿಕ್ಷಕರೇ ಎಲ್ಲ ವಿಷಯಗಳನ್ನು ಬೋಧಿಸಬೇಕು.
#೬-೧೦ತರಗತಿ ತಂಡಗಳಿಗೆ ಮಾರ್ಗದರ್ಶಿ ಶಿಕ್ಷಕರು ತಮ್ಮ ವಿಷಯ ಬೋಧಿಸಬೇಕು. ಇತರ ವಿಷಯಗಳಿಗೆ ಇತರ ವಿಷಯ ಶಿಕ್ಷಕರ ಸಮನ್ವಯ ಮಾಡಬೇಕು.
#೬-೧೦ ತರಗತಿ ತಂಡಗಳ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ಯೋಜನೆ, ಮೌಲ್ಯಮಾಪನ ಸಂಬಂಧಿಸಿದ ಶಿಕ್ಷಕರೇ ಮಾಡಬೇಕು.
# ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ಆಗಲೇಬೇಕು.
# ವಲಸೆ ಮಕ್ಕಳ ಬಗ್ಗೆಯೂ ಮಾರ್ಗದರ್ಶಿ ಶಿಕ್ಷಕರು ಕಾಳಜಿ‌ಮಾಡಬೇಕು.
# *ಮಾರ್ಗದರ್ಶಿ ಶಿಕ್ಷಕರ ಜವಾಬ್ದಾರಿಗಳು ಅತ್ಯಂತ ಅಮೂಲ್ಯವಾಗಿವೆ.*
 # ಅವೆಲ್ಲವುಗಳನ್ನು ಅತ್ಯಂತ ಉತ್ತಮ ಅನುಷ್ಠಾನ‌ ಮಾಡುವುದರ ಮೂಲಕ ಕಾಲ್ಪನಿಕ ಕಲಿಕಾ ಕೋಣೆಯ ಯಶಸ್ಸು ಅಡಗಿದೆ.
# ಭೌಗೋಳಿಕ ಪ್ರದೇಶ,ತರಗತಿ ಆಧರಿಸಿ ತಂಡಗಳನ್ನು ರಚಿಸಬೇಕ.
# ತಂಡದಲ್ಲಿ ಮೂರು ವಿದದ ವಿಭಿನ್ನ ತಂಡಗಳ ರಚನೆ ಮಾಡಬೇಕು.
#  ತಮ್ಮ‌ನೆರೆಹೊರೆ ತಂಡ ಪ್ರದೇಶದಲ್ಲಿರುವ ೬-೧೪ ವಯಸ್ಸಿನ ಮಕ್ಕಳ ದಾಖಲಾತಿ‌ ಮಾಡಬೇಕು.
# ಮಕ್ಕಳ ಕಲಿಕೆ ಬಗ್ಗೆ, ಮಕ್ಕಳ ಕೃತಿ ಸಂಪುಟ ರಚಿಸಿದ ಬಗ್ಗೆ ತಮ್ಮ ವ್ಯಾಪ್ತಿಯ ಸಿ.ಆರ್.ಪಿ.ಗೆ ಮಾಹಿತಿ ಆಗಾಗ್ಗೆ ನೀಡಬೇಕು.

# *ಸಿಆರ್.ಪಿ. ಬಿಐ ಆರ್ ಟಿ ಗಳ ಜವಾಬ್ದಾರಿಗಳೂ ಇವೆ*: ಇವರು ತಮ್ಮ ವ್ಯಾಪ್ತಿಗೆ ಬರುವ ಎಲ್ಲ ನೆರೆಹೊರೆ ತಂಡಗಳ ಸ್ಥಾಪನೆಗೆ ಸಹಕರಿಸಬೇಕು.
# ಮಾರ್ಗದರ್ಶಿ ಶಿಕ್ಷಕರ ನೇಮಕ ಶಾಲೆಯ  ಮು.ಗು ಅವರಿಂದ ಮಾಡಿಸಬೇಕು.
# ಪಠ್ಯುಸ್ತಕ, ಮಧ್ಯಾಹ್ನ ಉಪಹಾರ ಯೋಜನೆ ಸಾಮಗ್ರಿಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವುದು.
# ಮಾರ್ಗದರ್ಶಿ ಶಿಕ್ಷಕರಿಗೆ ಮತ್ತು ವಿಷಯ ಶಿಕ್ಷಕರಿಗೆ ಶೈಕ್ಷಣಿಕ ಬೆಂಬಲ ನೀಡುವುದು.
# ಪ್ರತಿ ತಂಡದ ಮಕ್ಕಳ‌ ಕೃತಿ ಸಂಪುಟಗಳನ್ನು ಪರಿಶೀಲಿಸಿ ಮಾರ್ಗರ್ಶನ‌ ನೀಡುವುದು.
# ಕಾಲ್ಪನಿಕ ಕಲಿಕ ತಂಡಗಳು ಸರಿಯಾಗಿ ನಡೆಯುತ್ತಿರುವ ಬಗೆಗೆ ಆಗಾಗ್ಗೆ ಭೇಟಿ ನೀಡಿ ತಾಲೂಕು ಹಂತಕ್ಕೆ ವರದಿ‌ ಮಾಡಬೇಕು.

# *ಬಿಇಓರವರ ಜವಾಬ್ದಾರಿಗಳು:*
# ವಿದ್ಯಾಗಮ ಕಾರ್ಯಕ್ರಮ ಕುರಿತು ಮಾಹಿತಿ ಹಂಚಿಕೆಗೆ ಎಲ್ಲಾ ಮು.ಗು.ಗಳಿಗೆ ತರಬೇತಿ ಆಯೋಜಿಸುವುದು.
# ಶಾಲಾವಾರು *ನೆರೆಹೊರೆ* ತಂಡ ರಚನೆ‌ ಮಾಡಿಸುವುದು.
# ಮೇಲ್ವಿಚಾರಣೆಗೆ ಸಿ ಆರ್ ಪಿ‌, ಬಿ ಆರ್ ಪಿ, ಬಿಐಆರ್ ಟಿ, ಇಸಿಓ ಗಳನ್ನು‌ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
# ಪ್ರತಿ ೧೫ ದಿನಗಳಿಗೆ ಒಂದು ತಾಲೂಕು ಹಂತದಲ್ಲಿ ಸಭೆ ಕರೆದು ಪ್ರಗತಿ ಪರಿಶೀಲನೆ ಮಾಡಿ ಜಿಲ್ಲಾ ಹಂತಕ್ಕೆ ವರದಿ‌ ಮಾಡುವುದು.
# ಪ್ರತಿ ನೆರೆಹೊರೆ ತಂಡದ ಮಕ್ಕಳ ಕೃತಿ ಸಂಪುಟ ಸಿದ್ದಪಡಿಸಲು ಪ್ರೇರಣೆ ನೀಡುವುದು.
# ವಿವಿಧ ಇಲಾಖೆಗಳ ಸಹಯೋಗದೊಂದಿಗೆ ವಿದ್ಯಾಗಮ ಕಾರ್ಯಕ್ರಮ ಉತ್ತಮ ಅನುಷ್ಠಾನ ಆಗಲು ಶ್ರಮಿಸಬೇಕು.
# ನಿಗಧಿ ಆಗಿರುವಂತೆ ಅಭ್ಯಾಸ ಚಟುವಟಿಕೆಗಳು ಎಲ್ಲ ಶಿಕ್ಷಕರು ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

# *ಡಯಟ್ ಪ್ರಾಂಶುಪಾಲರು ಮತ್ತು ಹಿರಿಯ,ಕಿರಿಯ ಉಪನ್ಯಾಸಕರುಗಳ ಜವಾಬ್ದಾರಿಗಳು*
# ೩ ತಂಡಗಳಿಗೆ ಮಾರ್ಗಸೂಚಿಯಂತೆ ಸಾಹಿತ್ಯ ಅಭಿವೃದ್ದಿಪಡಿಸಿ ಪ್ರತ್ಯೇಕವಾದ ತರಬೇತಿಯನ್ನು ಆರ್ ಪಿ ಗಳಿಗೆ ಮತ್ತು ಶಿಕ್ಷಕರಿಗೆ ನೀಡಬೇಕು.
#  ಹಿರಿಯ,ಕಿರಿಯ ಉಪನ್ಯಾಸಕರನ್ನು ತಾಲೂಕುಗಳಿಗೆ ನೋಡಲ್ ಅಧಿಕಾರಿಗಳೆಂದು ನೇಮಿಸಬೇಕು.
#ವಿದ್ಯಾರ್ಥಿಗಳು ಪೂರ್ಣಗೊಳಿಸಿದ ಅಭ್ಯಾಸ ಚಟುವಟಿಕೆಗಳ ಅನುಪಾಲನೆಯನ್ನು ಮುಗು,ಶಿಕ್ಷಕರ, ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿ ಕಲಿಕೆಯನ್ನು ಖಾತ್ರಿಪಡಿಸಿಕೊಳ್ಳಬೇಕು.
# ನೆರೆಹೊರೆ ತಂಡದ ಮಕ್ಕಳಿಗೆ ನೀಡಿದ ಗೃಹ ಪಾಠಗಳನ್ನು ಮಾರ್ಗದರ್ಶಿ ಶಿಕ್ಷಕರು  ತಿದ್ದುತ್ತಿರುವರೇ ಎಂಬುದನ್ನು ಅವಲೋಕಿಸಬೇಕು‌.
# ಪ್ರತಿ ೧೫ ದಿನಗಳಿಗೆ ಒಂದು ಸಲ ಜಿಲ್ಲೆಯ ಸಮಗ್ರ ಪ್ರಗತಿ ವರದಿಯನ್ನು ನಿರ್ದೇಶಕರು, ಡಿ ಎಸ್ ಇ ಆರ್ ಟಿ ಬೆಂಗಳೂರ ಇವರಿಗೆ ಕಳಿಸಬೇಕು.

# *ಜಿಲ್ಲಾ ಉಪನಿರ್ದೇಶಕರ(ಆಡಳಿತ) ಜವಾಬ್ದಾರಿಗಳು:*
#  ಜಿಲ್ಲೆಯ ಪ್ರತಿಯೊಂದು ಮಗುವಿನ ಕೃತಿ ಸಂಪುಟ ಸಿದ್ದಪಡಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು.
# ಜಿಲ್ಲೆಯ ಎಲ್ಲ ಶಾಲೆಗಳಿಗೆ ನಿಗಧಿತ ಅನುದಾನ ತಲುಉವಂತೆ ನೋಡಿಕೊಳ್ಳಬೇಕು.
# ಜಿಲ್ಲೆಯಲ್ಲಿ ಸರ್ಕಾರೇತರ ಸಂಘ ಸಂಸ್ಥೆಗಳು, ದಾನಿಗಳು, ಶಿಕ್ಷಣಾಸಕ್ತರು ಗಳನ್ನು ಗುರುತಿಸಿ  ಶಾಲೆಗಳಿಗೆ, ಮಾರ್ಗದರ್ಶಕ ಶಿಕ್ಷರಿಗೆ, ಅಗತ್ಯ ಸೇವೆ ಸೌಲಭ್ಯ ಒದಗಿಸಲು ಸಹಕಾರ ನೀಡಬೇಕು.
# ಡಿಡಿಪಿಐ ರವರು  ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಇವರನ್ನು ಸಂಪರ್ಕಿಸಿ ನಗರಾಭಿವೃದ್ದಿ ಇಲಾಖೆ, ಪಂಚಾಯತ ರಾಜ್ ಇಲಾಖೆ,‌ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂತಾದ ಇಲಾಖೆಗಳ  ಸಹಯೋಗದೊಂದಿಗೆ ಗ್ರಾಮ,ವಾರ್ಡ ಮಟ್ಟದಲ್ಲಿ *ವಿದ್ಯಾಗಮ* ಕಾರ್ಯಕ್ರಮಕ್ಕೆ ಅವಶ್ಯ ಸುರಕ್ಷತೆಯನ್ನು ವ್ಯವಸ್ಥೆ ಮಾಡಬೇಕು.
# ಜಿಲ್ಲಾ ಮಟ್ಟದಲ್ಲಿ ಈ *ವಿದ್ಯಾಗಮ* ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಚಾರ ನೀಡಿ ಸಮುದಾಯ ಸಂಘಗಳ ಸಹಕಾರ ಪಡೆಯುವುದು.
# ಡಿಡಿಪಿಐ ಕಚೇರಿಯ ಹಂತದಲ್ಲಿ ಶಿಕ್ಷಣಾಧಿಕಾರಿಗಳು , ಡಿವೈಪಿಸಿ, , ಇಓ ಮ ಉ ಯೋ ಎಸ್ ಐ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
# ಪ್ರತಿ ೧೫ ದಿನಗಳಿಗೆ ಒಂದು ಸಲ ಜಿಲ್ಲೆಯ ಸಮಗ್ರ ಕಲಿಕಾ ಪ್ರಗತಿಯನ್ನು ನಿರ್ದೇಶಕರು,ಡಿ.ಎಸ್.ಇ.ಆರ್.ಟಿ, ನಿರ್ದೇಶಕರು ಪ್ರಾಥಮಿಕ ಶಿಕ್ಷಣ, ಪ್ರೌಢ,ಶಿಕ್ಷಣ ಬೆಂಗಳೂರು ಇವರಿಗೆ ಸಲ್ಲಿಸುವುದು.

# *ಜಿಲ್ಲಾಧಿಕಾರಿಗಳ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಜವಾಬ್ದಾರಿಗಳು*
# ಈ ಮಹತ್ವಪೂರ್ಣ *ವಿದ್ಯಾಗಮ* ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವುಧ ಇಲಾಖೆಗಳ ಸಹಕಾರ ಮತ್ತು ಸಹಯೋಗ ನೀಡುವ ಮೂಲಕ ಕಾರ್ಯಕ್ರಮದ ಫಲವು ಪ್ರತಿ‌ಮಗುವಿಗೆ ತಲುಪುವಂತೆ ಕ್ರಮ ವಹಿಸುವುದು‌
# ಈ ವಿದ್ಯಾಗಮ‌ ಕಾರ್ಯಕ್ರಮದ ಪ್ರಾಮುಖ್ಯತೆಯನ್ನು ಜನಪ್ರತಿನಿಧಿಗಳಿಗೆ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಗಮನಕ್ಕೆ ತಂದು, ಎಲ್ಲರ ಸಹಕಾರ ಪಡೆದು ಕಾರ್ಯಕ್ರಮ ಯಶಸ್ವಿಗೊಳಿಸುವುದು.

ಕಾಮೆಂಟ್‌ಗಳಿಲ್ಲ:

ಶಾಲಾ ಉಪಯುಕ್ತ

SCHOOL - ಶಾಲಾ ಉಪಯುಕ್ತ
No Bag dayನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು


ADMISSION ದಾಖಲಾತಿ SATS LOGINPOST SANCTION EDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL


ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುವೇಳಾಪಟ್ಟಿ

Gjhn



MDM - ಮದ್ಯಾಹ್ನ ಬಿಸಿಯೂಟ ಯೋಜನೆ