ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

12.11.16

ಮಕ್ಕಳ ದಿನಾಚರಣೆ

ಮಕ್ಕಳ ದಿನಾಚರಣೆ

●●●ಮಕ್ಕಳ ದಿನಾಚರಣೆ●●●
ಮಕ್ಕಳ ದಿನಾಚರಣೆ ಜವಾಹರ್‌ಲಾಲ್ ನೆಹರುರವರ ಹುಟ್ಟುಹಬ್ಬದಂದು (ನವೆಂಬರ್ ೧೪ರಂದು) ಆಚರಿಸಲಾಗುತ್ತದೆ.


●ಹಿನ್ನೆಲೆ
ಜವಹಾರ್ಲಾಲ್ ನೆಹೆರುವರಿಗೆ ಮಕ್ಕಳೆಂದರೆ ಬಹಳ ಇಷ್ಟವಂತೆ.ಅವರು ಅನಾಥ ಮಕ್ಕಳು ಕೊಟ್ಟ ಗುಲಾಬಿಯನ್ನು ತಮ್ಮ ಕೋಟಿನ ಜೇಬಿಗೆ ಅಂಟಿಸಿ ಸಂತೋಷ ಪಡುತ್ತಿದ್ದರಂತೆ. ಮಕ್ಕಳ ಮೇಲಿದ್ದ ಇವರ ಅಕ್ಕರೆ, ಪ್ರೀತಿಯ ಸಂಕೇತವಾಗಿ ದೇಶದಾದ್ಯಂತ ಈ ದಿನದಂದು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಗುತ್ತದೆ. ಇವರು ಪ್ರಧಾನಿಯಾಗಿದ್ದ ಸಮಯದಲ್ಲಿ ಮಕ್ಕಳ ಅಭಿವೃದ್ಧಿಗೆ ಬಹಳಷ್ಟು ಶ್ರಮಿಸಿದ್ದರಂತೆ. ಇಂದಿನ ಮಕ್ಕಳೇ ಮುಂದಿನ ಜನಾಂಗ.


●ಆಚರಣೆ
ಸಾಧಾರಣವಾಗಿ ಹಾಡು, ಆಟಗಳನ್ನು ಕೂಡಿದ ಈ ದಿನ . ಮಕ್ಕಳ ದಿನಾಚರಣೆಯಂದು ವಿವಿಧೆಡೆ ಕಲಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.


●●ಪಂ. ಜವಾಹರಲಾಲ್ ನೆಹರು●●
ಜನನ: ನವೆಂಬರ್ ೧೪, ೧೮೮೯
ಮರಣ: ಮೇ ೨೭, ೧೯೬೪
ಹುಟ್ಟಿದೂರು: ಅಲಹಾಬಾದ್, ಉತ್ತರ ಪ್ರದೇಶ


●●ಭಾರತದ ಪ್ರಧಾನ ಮಂತ್ರಿ
ಅಧಿಕಾರ ಅವಧಿ: ಮೊಟ್ಟ ಮೊದಲ ಪ್ರಧಾನ ಮಂತ್ರಿ
ರಾಜಕೀಯ ಪಕ್ಷ: ಭಾರತ ರಾಷ್ಟ್ರೀಯ ಕಾಂಗ್ರೆಸ್
ಅಧಿಕಾರ ವಹಿಸಿಕೊಂಡಿದ್ದು: ಆಗಸ್ಟ್ ೧೫, ೧೯೪೭
ಅಧಿಕಾರ ಬಿಟ್ಟುಕೊಟ್ಟಿದ್ದು: ಮೇ ೨೭, ೧೯೬೪
ಇವರ ಉತ್ತರಾಧಿಕಾರಿ: ಗುಲ್ಜಾರಿಲಾಲ್ ನಂದ


●'ಮಹಾತ್ಮಗಾಂಧಿಯೊಂದಿಗೆ ನೆಹರು'
'ರಾಷ್ಟ್ರಕ್ಕೆ ಸಮರ್ಪಿಸಿದ ನೆಹರೂ ವಂಶದ ಮನೆ'
ಜವಾಹರಲಾಲ್ ನೆಹರು (ನವೆಂಬರ್ ೧೪, ೧೮೮೯ - ಮೇ ೨೭, ೧೯೬೪) - ಭಾರತದ ಮೊದಲ ಪ್ರಧಾನ ಮಂತ್ರಿ, ಸ್ವಾತಂತ್ರ್ಯ ಹೋರಾಟಗಾರರು. ಆಗಸ್ಟ್ ೧೫, ೧೯೪೭ ರಿಂದ ಪ್ರಾರಂಭಿಸಿ ಇವರು ಮರಣಕಾಲದವರೆಗೂ ಭಾರತದ ಪ್ರಧಾನಿಯಾಗಿದ್ದರು.


●ನೆಹರುರವರ ಸಾರ್ವಜನಿಕ ಜೀವನ೧೮೮೯-೧೯೧೮
ಪಂ, ಜವಹರಲಾಲ್ ನೆಹರು, ಆಗಿನ ಕಾಲದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಮೋತಿಲಾಲ್ ನೆಹರು ಅವರ ಮಗ. ನೆಹರೂ ಇಂಗ್ಲೆಂಡ್‌ನ ಹ್ಯಾರ್ರೊ ಸ್ಕೂಲ್ ಹಾಗು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಓದು ಮುಗಿಸಿ, ತಂದೆಯೊಂದಿಗೆ ರಾಜಕೀಯದಲ್ಲಿ ಸಕ್ರಿಯರಾದರು.
ಇಂಗ್ಲೆಂಡ್‌ನಲ್ಲಿದ್ದಾಗ ನೆಹರು ಅವರು ಫೇಬಿಯನ್ ಸಾಮಾಜಿಕ ವಿಧಾನಗಳನ್ನು ಬಹುವಾಗಿ ಮೆಚ್ಚಿದ್ದರು. ೧೯೧೬ರ ವಸಂತ ಪಂಚಮಿಯ ದಿನದಂದು ನೆಹರು ಅವರು ಕಮಲಾ ಕೌಲ್‌ರವರನ್ನು ಮದುವೆಯಾದರು.


●ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷ ೧೯೧೮-೧೯೩೭
೧೯೧೯ ರಲ್ಲಿ ಮಗಳು ಇಂದಿರಾ ಪ್ರಿಯದರ್ಶಿನಿ ಜನಿಸಿದಳು. ರಾಜಕೀಯದಲ್ಲಿ, ಮಹಾತ್ಮ ಗಾಂಧಿಯವರ ಶಿಷ್ಯನಾದ ಇವರು, ಮೊದಲ ಬಾರಿಗೆ ೧೯೨೯ ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಮೇಲೇರಿದರು. ಈ ದಿನಗಳನ್ನು ಇವರು ಬಹುವಾಗಿ ಕಾರಾಗೃಹವಾಸ ದಲ್ಲಿ ಪುಸ್ತಕಗಳು, ಪತ್ರಗಳನ್ನು ಬರೆಯುತ್ತಾ ಕಳೆದರು.


●ಕ್ವಿಟ್ ಇಂಡಿಯ ಆಂದೋಲನದಲ್ಲಿ ೧೯೩೭-೧೯೪೭
'ಭಾರತವನ್ನು ಬಿಟ್ಟು ತೊಲಗಿ' (Quit India Movement) ಪರ್ಯಾಯ ೧೯೪೨ರಲ್ಲಿ ೩೨ ತಿಂಗಳಿಗೆ ಕಾರಾಗೃಹವಾಸ ಅನುಭವಿಸಿದ ಇವರು, ಭಾರತದ ಮೊದಲ ಸರಕಾರವನ್ನು ೧೯೪೬ರಲ್ಲಿ ರಚಿಸಿದರು.


●ಭಾರತದ ಮೊಟ್ಟ ಮೊದಲ ಪ್ರಧಾನಿಯಾಗಿ ೧೯೪೭-೧೯೬೪.
ನೆಹರೂರವರು ೧೮ ವರ್ಷಗಳ ಕಾಲ ಭಾರತದ ಪ್ರಧಾನಿಯಾಗಿದ್ದರು. ಇವರು ೧೯೬೪ರ ಮೇ ೨೭ ರಂದು ನಿಧನರಾದರು. ಪಂಡಿತ ಜವಹರಲಾಲ್ ನೆಹರೂರವರು ಆಗಸ್ಟ್ ೧೪ ರ ಮಧ್ಯರಾತ್ರಿ, ಸಂಸತ್ತನ್ನುದ್ದೇಶಿಸಿ ಮಾಡಿದ 'ಎ ಟ್ರಿಸ್ಟ್ ವಿಥ್ ಡೆಸ್ಟಿನಿ ಭಾಷಣದ ಕನ್ನದ ಅನುವಾದ' :
 "ಹಿಂದೊಮ್ಮೆ ನಾವು ವಿಧಿಗೊಂದು ಮಾತಿತ್ತಿದ್ದೆವು. ಅ ಭಾಷೆಯನ್ನು ಕೇವಲ ಸಂಪೂರ್ಣವಾಗಿಯಲ್ಲದೇ ಮಹತ್ತರವಾಗಿ ಕಾರ್ಯಗತಗೊಳಿಸುವ ಸಮಯವಿಂದೊದಗಿದೆ. ಈ ನಡು ರಾತ್ರಿಯ ವಿಶೇಷ ಘಳಿಗೆಯಲ್ಲಿ, ಇಡೀ ವಿಶ್ವ ನಿದ್ರಿಸುತ್ತಿರುವಾಗ, ಭಾರತ ಸ್ವಾತಂತ್ರ್ಯವನ್ನು ಮೈದಳೆದು ಮೇಲೇಳಲಿದೆ. ಹಳೆತೆಲ್ಲವನ್ನೊದರಿ ಹೊಸತನಕ್ಕೆ ಕಾಲಿಡುವ ಮತ್ತು ಶತಮಾನಗಳಿಂದ ಶೋಷಿಸಲ್ಪಟ್ಟ ನಾಡಿನಾತ್ಮ ಧ್ವನಿದಳೆವ ಈ ಘಳಿಗೆ, ಇತಿಹಾಸದ ಅಪರೂಪದ ಮುಹೂರ್ತಗಳಲ್ಲೊಂದು. ಈ ಶುದ್ಧ ಸಮಯದಲ್ಲಿ ಭಾರತದ ಮತ್ತು ಭಾರತಾಂಬೆ ಯ ಸತ್ಪ್ರಜೆಗಳ ಸೇವೆಗಾಗಿ, ಹೆಚ್ಚೇನು ವಿಶ್ವದೊಳಿತಿಗಾಗಿ ನಮ್ಮದೆಲ್ಲವನ್ನು ಮುಡಿಪಿಡುವುದಾಗಿ ಮಾಡುವ ಪ್ರತಿಜ್ಞೆ ಅತೀ ಸಮರ್ಪಕವೆನಿಸುತ್ತದೆ."


●ನೆಹರೂ ಅವರ ಅಂತಿಮ ಕವನ/ಬಯಕೆ
ಜವಾಹರಲಾಲ್‌ ನೆಹರೂ ಮೃತರಾದಾಗ ಅವರ ಪಕ್ಕದಲ್ಲಿ ಈ ಕವನದ ಸಾಲುಗಳನ್ನು ಗೀಚಿದ ಕಾಗದದ ತುಣುಕು ದೊರಕಿತ್ತು.
ಕಾನು ಸುಂದರವಾಗಿದೆ, ದಟ್ಟ ಕತ್ತಲೆಯಿಂದ ಕೂಡಿದೆ.
ಆದರೆ, ನಾನು ಮಾತುಗಳನ್ನು ಉಳಿಸಿಕೊಳ್ಳ ಬೇಕಿದೆ.

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು