ಮಗ್ಗಿ

ಮತ್ತೊಮ್ಮೆ ಭೇಟಿ ನೀಡಲು vktworld ಎಂದು search ಮಾಡಿ ~~~ vktworld

14.10.16

ವಾಲ್ಮೀಕಿ



                      ವಾಲ್ಮೀಕಿ’ ಭಾರತದ ಮತ್ತು ಪ್ರಪಂಚದ ಚರಿತ್ರೆಯಲ್ಲಿ ಎಂದೋ ಮಿನುಗಿದ ಧೃವತಾರೆ. ಆದಿಕವಿ, ಮಹರ್ಷಿ, ಮುನಿಪುಂಗವ, ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ‘ವಾಲ್ಮೀಕಿ’ ಒಂದು ರೀತಿಯಲ್ಲಿ ಸರ್ವತೋಮುಖಿ: ಚಿಂತಕ, ಚರಿತ್ರೆಕಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿಜ್ಞ, ತತ್ವಜ್ಞಾನಿ, ಶೋಷಿತರ ನೇತಾರ, ಕವಿಯಾಗಿ ಬಹು ವೈವಿಧ್ಯಮಯಾವಾಗಿ ಜನರ ಮನಸೂರೆಗೊಂಡಿದ್ಧಾನೆ. ಇಂಥ ಮಹಾನ್ ವ್ಯಕ್ತಿಯ ಹೆಸರು ಜಗತ್ತಿಗೆ ಪರಿಚಯವಾದದ್ದು ರಾಮಾಯಣ ಕಾವ್ಯದ ಮೂಲಕ. ಸಂಸ್ಕೃತದಲ್ಲಿ ರಾಮಾಯಣವು ಭಾರತದ ಆದಿಕಾವ್ಯ. ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಇದಕ್ಕೆ ಪ್ರಮುಕ ಸ್ಥಾನ ಲಭಿಸಿದೆ. ವಾಲ್ಮೀಕಿಯ ಮುಖೇನ ರಾಮಾಯಣವನ್ನು ರಾಮಾಯಣದ ಮುಖೇನ ಭಾರತದ ಜನಜೀವನವನ್ನು ಅರ್ಥೈಸಬೇಕಾದ ಅನಿವಾರ್ಯತೆ ಇಂದಿನದಾಗಿದೆ. ವಾಲ್ಮೀಕಿ ಮೂಲತಃ ಬೇಟೆಗಾರರ ಬುಡಕಟ್ಟಿಗೆ ಸೇರಿದ ಬೇಡ ಸಮುದಾಯದನು. ವೈದಿಕ ಮತ್ತು ಪುರೋಹಿತಶಾಹಿಗಳು ವಾಲ್ಮೀಕಿಯ ಪ್ರತಿಭೆ ಕಂಡು ಬ್ರಾಹ್ಮಣನೆಂದು ತಪ್ಪಾಗಿ ನಿರೂಪಿಸಿದ್ದಾರೆ. ಇಂಥ ಅನೇಕ ಸಂಗತಿಗಳನ್ನು ಪುನಾರಚನೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ಜೀವನ, ಕಾವ್ಯ, ವಿಶ್ವದಲ್ಲಿ ಅದು ಪಡೆದ ವಿವಿಧ ರೂಪಗಳು ಇವುಗಳನ್ನು ಹೊಸ ಬಗೆಯ ಚಿಂತನೆಗೆ ಒಳಪಡಿಸುವ ಪ್ರಯತ್ನ ಮಾಡಬೇಕಾಗಿದೆ.

ವಾಲ್ಮೀಕಿಯ ತಂದೆ ಪ್ರಚೇತಸೇನ, ವಾಲ್ಮೀಕಿ ಪೂರ್ವಾಶ್ರಮದಲ್ಲಿ ಒಬ್ಬ ಬೇಟೆಗಾರ. ಸಂಪ್ರದಾಯದಂತೆ ಈತನ ಮೊದಲ ಹೆಸರು ರತ್ನಾಕರ. ಈ ಬಗ್ಗೆ ಭಾರತದಲ್ಲಿ ವಿಭಿನ್ನ ಕಥೆಗಳಿರುವುದು ಸ್ಪಷ್ಟ. ಒಂದು ಮೂಲದ ಪ್ರಕಾರ ಕಳ್ಳತನ, ದರೋಡೆಯಲ್ಲಿ ನರತನದ ಈತನಿಗೊಮ್ಮೆ ನಾರದನಿಂದ ಪರೀಕ್ಷೆ ನಡೆಯಿತು. ನಿನ್ನ ಅಪರಾಧಕ್ಕೆ ನಿನ್ನ ಹೆಂಡತಿ – ಮಕ್ಕಳು ಭಾದ್ಯಸ್ಥರೇ (ಪಾಲುದಾರರು) ಎಂದು ತಿಳಿಸಿದ. ಅವನು ತನ್ನ ಕುಟುಂಬ ಪರಿವಾರವನ್ನು ವಿಚಾರಿಸಲಗಿ ನಿನ್ನ ಅಪರಾಧಕ್ಕೆ ನೀನೇ ಹೊಣೆ ಎಂದರು. ಇದರಿಂದ ಮನಃಪರಿವರ್ತನೆಗೊಂಡ ವಾಲ್ಮೀಕಿಗೆ ಅದರಂತೆ ಜ್ಞಾನೋದ ಯಾದ ಉತ್ತುಂಗ ಶಿಖರ ತಲುಪಿ ಮಹಾಕಾವ್ಯ ರಚಿಸಿದನೆಂದು ಹೇಳಲಾಗಿದೆ. ಮತ್ತೊಂದು ಮೂಲಕ ಪ್ರಕಾರ (ಬ್ರಾಹ್ಮಣೀಕರಿಸಿ) ವಾಲ್ಮೀಕಿ ಚ್ಯವನಮುನಿಯ ಪುತ್ರ, ಶೂದ್ರನಾದ ವಾಲ್ಮೀಕಿಯನ್ನು ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ಅರ್ಥಮಾಡಿ ಕೊಂಡರೆ ನಿಜವಾಗಿಯೂ ಆತ ಬೇಟೆಗಾರ. ಅಂದು ತಪಸ್ಸು, ಧರ್ಮ, ಸತ್ಯ, ಪ್ರಾಮಾಣಿಕತೆ ವಾಲ್ಮೀಕಿಯಲ್ಲಿದ್ದವು.

ಕಾವ್ಯ ರಚನೆ (ಬರಹ) ಬ್ರಾಹ್ಮಣರಿಗೆ ಮೀಸಲಾಗಿತ್ತು. ಹೀಗಾಗಿ ಆತ್ಮನಿಗ್ರಹ, ತಪಸ್ಸು, ದಾನ, ಅಹಿಂಸಾ ಮತ್ತು ಸತ್ಯ, ಮತ್ಸರಾರಾಹಿತ್ಯ, ಕಪಟರಾಹಿತ್ಯ, ದೀನತ್ವ, ದಯಾಗುಣ ಮತ್ತು ತಪಸ್ ಇವು ಬ್ರಾಹ್ಮಣನಲ್ಲಿರಬೇಕು. ಅವು ವಾಲ್ಮೀಕಿಯಲ್ಲಿದ್ದವು. ವಾಲ್ಮೀಕಿ ಬೇಡರೊಡನೆ ಸೇರಿಕೊಂಡು. ದಾರಿಹೋಕರ ತಲೆ ಹೊಡೆದು ಅವರಿಂದ ಕಿತ್ತುಕೊಂಡ ಹಣ. ಸಂಪತ್ತಿನಿಂದ ಬದುಕುತ್ತಿದ್ದನಂತೆ. ಒಮ್ಮೆ ಇವನು ಸಪ್ತರ್ಷಿಗಳ ಪರಿಚಯವಾಗಿ ಅವರಿಂದ ರಾಮಮಂತ್ರೋಪದೇಶವನ್ನು ಪಡೆದು. ತಪಸ್ಸು ಮಾಡುವಾಗ ಈತನ ಮೇಲೆ ಹುತ್ತ (ವಾಲ್ಮೀಕ) ಬೆಳೆದು, ಸಪ್ತರ್ಷಿಗಳಿಂದ ವಾಲ್ಮೀಕಿಯಾದನು. ತಮಸಾ ನದಿಗೆ ಸ್ನಾನ್ನಕ್ಕೆ ಹೋದ ವಾಲ್ಮೀಕಿ ಅಲ್ಲಿ ಬೇಡನೊಬ್ಬ ಕ್ರೌಂಚ ಗಂಡು – ಹೆಣ್ಣು ಪಕ್ಷಿಗಳಲ್ಲಿ ಗಂಡನ್ನು ಕೊಲ್ಲಲು ಹೆಣ್ಣು ಗಂಡಿಗಗಿ ಗೋಳಿಡುವುದನ್ನು ಕಂಡು ದುಃಖಿತನಾಗಿ ಆ ಬೇಡನಿಗೆ ಶಾಪಕೊಟ್ಟನು. ಚಿಂತಾಕ್ರಾಂತನಾದ ಇವನಿಗೆ ಬ್ರಹ್ಮನು ಆಶಿರ್ವದಿಸಿ, ರಾಮಾಯಣವನ್ನು ಬರೆಯುವಂತೆ ಹೇಳಿದಂನಂತೆ. ವಾಲ್ಮೀಕಿಯು ದೈವಾನುಗ್ರಹದಿಂದ ರಾಮಾಯಾಣ ಕಾವ್ಯವನ್ನು ರಚಿಸಿದನು. ಅಂದಿನಿಂದ ಆತನ ಬಗ್ಗೆ.

ಕಾವ್ಯಶ್ರೀಯ ಕೊಂಬೆಯನ್ನೇರಿ ರಾಮ ರಾಮ ಎಂಬ ಮಧುರಅಕ್ಷರಗಳನ್ನು ಮಧುರವಾಗಿ ಧ್ವನಿಗೈಯುವ ವಾಲ್ಮೀಕಿ ಕೋಗಿಲೆಯನ್ನುವಂದಿಸುತ್ತೇನೆ

ಎಂಬ ಶ್ಲೋಕ ಇವರ ಕಾವ್ಯಸ್ಪೂರ್ತಿಗೆ ಉದಾಹರಣೆ ಮೂಲ ಶಾಶ್ವತವಾಗಿ ಉಳಿದುಬಂತು. ಹೋಮರ್ ನಂತೆ ವಾಲ್ಮೀಕಿಯು ಜಗತ್ತಿಗೆ ಮಾದರಿಯಾಗುವಂತೆ, ಮೆಚ್ಚುವಂತೆ, ಕಾವ್ಯವನ್ನು ರಚಿಸಿದ್ದು ಸ್ಮರಣೀಯ.

ರಾಮಾಯಣ ಭಾರತ ದೇಶದ ಮೊದಲ ಕಾವ್ಯ ಇದನ್ನು ಪ್ರತಿಯೊಬ್ಬ ಭಾರತೀಯನು ಬಲ್ಲ. ವಾಲ್ಮೀಕಿಯ ಬಗ್ಗೆ ತಿಳಿಯುವುದಕ್ಕಿಂತ ರಾಮಾಯಣವನ್ನು ಓದಿದರೆ ಆತನ ಬಗ್ಗೆ ಅರ್ಥವಾಗುತ್ತದೆ. ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ರಾಮ ಏಕಪತ್ನಿ ವ್ರತಸ್ಥ. ಸೀತೆ ಪತಿವ್ರತೆ, ಕುಂಭಕರ್ಣನೆಂದರೆ ನಿದ್ದೆಯ ಮನುಷ್ಯ ರಾವಣನೆಂದರೆ ರಾಕ್ಷಸ ಎಂದು ರಾಮಾಯಣದ ಪ್ರಸಂಗಗಳ ಬಗ್ಗೆ ಆಯಾ ಪ್ರಾದೇಶಿಕತೆಗೆ ತಕ್ಕಂತೆ ಜನಮನದಲ್ಲಿ ಬೇರೆ ಬೇರೆ ಕಥೆಗಳಿವೆ. ರಾಮಾಯಣವನ್ನು ಬುಡಕಟ್ಟು ಮಹಾಕಾವ್ಯ ಎಂದು ಕೆಲವರು ಕರೆದರೆ, ಐತಿಹಾಸಿಕವಾದುದೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇನ್ನು ಕೆಲವರು ಪಾರಂಪರಿಕವಾಗಿ ಬಂದ ಮೌಖೀಕ ಮಹಾಕಾವ್ಯ (ಚರಿತ್ರೆ) ಎನ್ನುತ್ತಾರೆ. ಹೀಗೆ ಎನೆಲ್ಲಾ ಕಥಾ ಪ್ರಸಂಗಗಳು ಜೀವಂತವಾಗಿರುವುದುಂಟು.

ಇಂದಿಗೂ ರಾಮಾಯಣದ ರಚನೆಯ ಕಾಲಮಾನ ಖಚಿತವಾಗಿ ತಿಳಿದು ಬಂದಿಲ್ಲ. ಏಕವ್ಯಕ್ತಿಯಿಂದ ಮಾತ್ರ ರಚನೆಯಾದುದು ಸ್ಪಷ್ಟ. ಅವನೇ ಆದಿಕವಿ, ಮಹರ್ಷಿ ಕ್ರಿ.ಪೂ. ೯೦೦೦ರಲ್ಲಿ ಈತನ ಮಹಾಕಾವ್ಯ ರಚಿತವಾಗಿದೆ ಎಂದು ಹೇಳಿದರೆ, ಕೆಲವರು ಕ್ರಿ.ಪೂ ೫೦೦ಕ್ಕಿಂತ ಮೊದಲು ರಾಮಾಯಣ ರಚನೆಯಾಗಿರಬೇಕೆಂದು ಅಭಿಪ್ರಾಯಿಸಿದ್ದಾರೆ. ಆರ್.ಎಸ್.ಶರ್ಮ ಅವರು ಕ್ರಿ.ಶ. ೪೦೦ರ ಹೊತ್ತಿಗೆ ಎರಡು ಮಹಾಕಾವ್ಯಗಳು ಸ್ಪಷ್ಟಸ್ವರೂಪವನ್ನು ತಾಳಿದಂತಿವೆ ಎನ್ನುತ್ತಾರೆ. ರಾಮಾಯಣ ಕ್ರಿ.ಶ. ೫ – ೬ನೆಯ ಶತಮಾನಕ್ಕಿಂತ ಹಿಂದಿನದಲ್ಲ ಎಂಧು ಎಚ್.ಡಿ. ಸಂಕಾಲಿಯಾ ಅವರು ವಾದಿಸಿದ್ದಾರೆ. ಇವರ ಪ್ರಕಾರ ಮಹಾಭಾರತ ಪ್ರಾಚೀನವಾದುದು. ಇದು ಕ್ರಿ.ಪೂ. ೧೦ರಿಂದ ಕ್ರಿ.ಶ. ೪ನೆಯ ಶತಮಾನದವರೆಗಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆಯಂತೆ. ಆದಿಬುಡಕಟ್ಟುಗಳ ಕಥೆಯಾದ ಮಹಾಭಾರತದಲ್ಲಿ ೧,೦೦,೦೦೦ ಶ್ಲೋಕಗಳಿವೆ. ಕೌರವ – ಪಾಂಡವರ ಯುದ್ಧ ವೇದಕಾಲ, ವೇದೋತ್ತರ ಕಾಲವನ್ನು ಮೌರ್ಯರ ಗುಪ್ತರ ಕಾಲದ ಪರಿಸ್ಥಿತಿಯನ್ನು ಇವು ಪ್ರತಿನಿಧಿಸಿವೆ.

ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣವು ೬೦೦೦ ಶ್ಲೋಕಗಳಿಂದ ಆರಂಭ ಗೊಂಡು ೧೨,೦೦೦ಕ್ಕೆ ಏರಿ, ಕೊನೆಗೆ ೨೪,೦೦೦ ಶ್ಲೋಕಗಳ ಸ್ಪಷ್ಟರೂಪ ಪಡೆದಿವೆ. ಮಹಾಭಾರತಕ್ಕಿಂತ ಸಮಗ್ರವಾದ ಮಹಾಕಾವ್ಯವಿದು.
(ಸಂಗ್ರಹಿತ)

*******************************************

*ವಾಲ್ಮೀಕಿ:*

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ.

* *ಹಿನ್ನೆಲೆ:*

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ.

ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು.

ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು.

ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು.

ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ.

ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು.

ಹುತ್ತ (ಸಂಸ್ಕೃತದಲ್ಲಿ-ವಲ್ಮೀಕ) ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು.

* *ರಾಮಾಯಣ ರಚನೆಗೆ ಪ್ರೇರಣೆ:*

  *  ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.

ಈ ಶ್ಲೋಕದ ಅರ್ಥ ಹೀಗಿದೆ :

    ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ.
ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.
ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.
ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.

ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ.

ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು.

* *ಉತ್ತರ ರಾಮಾಯಣದಲ್ಲಿ ಒಂದು ಪಾತ್ರವಾಗಿ:*

ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತೀಳಿದು (ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು (ಮೂಲವನ್ನು ಬದಲಾಯಿಸಿ ಸೇರಿಸಿದ್ದಾನೆ-ಅಥವಾ ಜೈಮಿನಿ ಋಷಿಯು ತನ್ನ ಸಂಸ್ಕೃತದ ಜೈಮಿನಿ ಭಾರತದಲ್ಲಿ ಮೂಲವನ್ನು ಬದಲಾಯಿಸಿದ್ದಾನೆ) ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ.

ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು (ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ) ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ.

ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ.

ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ.

ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ.

* *ಮಹಾಕವಿ ಆದಿಕವಿ ವಾಲ್ಮೀಕಿಗೆ ನಮನ:*


        ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||
        ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||

    ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ , ನಮಸ್ಕರಿಸುವ ಶ್ಲೋಕವು, ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ .
    'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ.

ಕಾಮೆಂಟ್‌ಗಳಿಲ್ಲ:

ಪ್ರಚಲಿತ ಪೋಸ್ಟ್‌ಗಳು