*ಪಿಯು ಹಳೇ ಪಠ್ಯದಲ್ಲಿ ಪಾಸಾಗಲು ಕೊನೇ ಅವಕಾಶ*
Udayavani..1 Oct 2016
( Venkatesh chagi )
ಬೆಂಗಳೂರು: ಪಿಯುಸಿ ಹಳೆಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಆ ಪಠ್ಯಕ್ರಮದಲ್ಲೇ ಪರೀಕ್ಷೆ ಬರೆದು ಪಾಸಾಗಲು ಇದ್ದ ಅವಕಾಶ ಭಾಗಶಃ ಈ ಶೈಕ್ಷಣಿಕ ವರ್ಷವೇ ಕೊನೆಗೊಳ್ಳಲಿದೆ.
ಯಾಕೆಂದರೆ, ಪಿಯುಸಿಯಲ್ಲಿ ಹೊಸ ಪಠ್ಯಕ್ರಮ ಪರಿಚಯಿಸಿದ ಬಳಿಕ ಹಳೆಯ ಪಠ್ಯಕ್ರಮದಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ್ದ "ವಿಶೇಷ ಅವಕಾಶ'ಗಳ ಗಡವು (ಕೆಲ ವಿಷಯಗಳಿಗೆ) 2017ರ ಮಾರ್ಚ್ಗೆ ಅಂತ್ಯಗೊಳ್ಳಲಿದೆ. ಕೊನೆಯ ಅವಕಾಶದಲ್ಲೂ ಬಾಕಿ ಉಳಿದಿರುವ ವಿಷಯಗಳನ್ನು ಪಾಸು ಮಾಡಿಕೊಳ್ಳದಿದ್ದರೆ, ಮುಂದೆ ಪಿಯುಸಿ ಪರೀಕ್ಷೆ ಬರೆಯಬೇಕಾದರೆ ಹೊಸ ಪಠ್ಯದಲ್ಲೇ ಪರೀಕ್ಷೆ ಎದುರಿಸುವುದು ಅನಿವಾರ್ಯವಾಗಲಿದೆ.
ಪದವಿಪೂರ್ವ ಶಿಕ್ಷಣ ಇಲಾಖೆ ಮಾಹಿತಿ ಪ್ರಕಾರ 2017ನೇ ಮಾರ್ಚ್ನಲ್ಲಿ ನಡೆಯುವ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಷಯಗಳಾದ ಗೃಹ ವಿಜ್ಞಾನ, ಕಂಪ್ಯೂಟರ್ ವಿಜ್ಞಾನ, ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್ ಹಾಗೂ ದ್ವಿತೀಯ ಪಿಯುಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಗಣಿತ (ಪಿಸಿಎಂಬಿ) ವಿಷಯಗಳನ್ನು ಹಳೇ ಪಠ್ಯಕ್ರಮದಲ್ಲೇ ಪಾಸು ಮಾಡಲು ಇದ್ದ ಕಾಲಾವಕಾಶ ಮುಗಿಯಲಿದೆ.
ಪಿಯುಸಿಯ ಇತರೆ ಎಲ್ಲಾ ವಿಷಯಗಳ ಪಠ್ಯಕ್ಕಿಂತ ಪ್ರಥಮ ಪಿಯುಸಿಯ ಪಿಸಿಎಂಬಿ ವಿಷಯಗಳ ಪಠ್ಯ 2012-13ನೇ ಸಾಲಿನಲ್ಲೇ ಬದಲಾಗಿದ್ದರಿಂದ ಈ ವಿಷಯಗಳಿಗೆ ಹಳೆಯ ಪಠ್ಯದಲ್ಲೇ ಪರೀಕ್ಷೆ ಬರೆಯಲು ಇದ್ದ ಅವಕಾಶ 2016ರ ವಾರ್ಷಿಕ ಪರೀಕ್ಷೆಗೆ ಅಂತ್ಯಗೊಂಡಿದೆ. ಉಳಿದಂತೆ ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ, ಭಾಷೆ ಹಾಗೂ ಇತರೆ ವಿಜ್ಞಾನ ವಿಷಯಗಳಾದ ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ 2018ರ ವಾರ್ಷಿಕ ಪರೀಕ್ಷೆ ಕೊನೆಯ ಅವಕಾಶವಾಗಿರುತ್ತದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಅ.5 ಅರ್ಜಿ ಸಲ್ಲಿಕೆಗೆ ಕಡೆಯ ದಿನ:
ಹಳೆಯ ಪಠ್ಯಕ್ರಮದಲ್ಲಿ ಪಾಸಾಗದೆ ವಿವಿಧ ವಿಷಯಗಳನ್ನು ಬಾಕಿ ಉಳಿಸಿಕೊಂಡಿರುವವರಿಗೆ ಹಳೆಯ ಪಠ್ಯದಲ್ಲೇ ಮತ್ತೆ ಅರ್ಜಿ ಸಲ್ಲಿಸಲು ಅ.5ರವರೆಗೆ ಕಾಲಾವಕಾಶ ನೀಡಲಾಗಿದೆ. ಈಗಾಗಲೇ ವಿಶೇಷ ಅವಕಾಶ ಮುಗಿದಿರುವ ಪ್ರಥಮ ಪಿಯುಸಿ ಪಿಸಿಎಂಬಿ ವಿಷಯಗಳನ್ನು ಹೊರತುಪಡಿಸಿ, ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಉಳಿದೆಲ್ಲಾ ವಿಷಯಗಳಿಗೂ ಹಳೇ ಪಠ್ಯಕ್ರಮದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
*ಹೊಸ ಪಠ್ಯ ಯಾವಾಗ ಬಂತು?*
2012-13ನೇ ಸಾಲಿನಿಂದ 2014-15ರವರೆಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಎಲ್ಲಾ ವಿಷಯಗಳ ಪಠ್ಯಗಳನ್ನು ಮೂರು ಹಂತದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಬದಲಿಸಿ, ಹೊಸ ಪಠ್ಯಕ್ರಮ ಪರಿಚಯಿಸಿತ್ತು. ಬಳಿಕ ಹಳೇ ಪಠ್ಯದ ಅನುತ್ತೀರ್ಣ ವಿಷಯಗಳನ್ನು ಪಾಸು ಮಾಡಿಕೊಳ್ಳಲು ಹೊಸ ಪಠ್ಯ ಪರಿಚಯಿಸಿದ ಮುಂದಿನ ಮೂರು ವರ್ಷ (ಮೂರು ವಾರ್ಷಿಕ ಮತ್ತು ಮೂರು ಪೂರಕ ಪರೀಕ್ಷೆ ಸೇರಿ ಒಟ್ಟು ಆರು ಪರೀಕ್ಷೆ) ಕಾಲಾವಕಾಶ ನೀಡಲಾಗಿತ್ತು. ನಂತರ 2014ರಲ್ಲಿ ವಿದ್ಯಾರ್ಥಿಗಳ ಕೋರಿಕೆ ಮೇರೆಗೆ ಮತ್ತೆ ಮೂರು ವಿಶೇಷ ಅವಕಾಶಗಳನ್ನು ನೀಡಲಾಗಿತ್ತು.
ಅದರಂತೆ ಪ್ರಥಮ ಪಿಯುಸಿ ಪಿಸಿಎಂಬಿ ವಿಷಯಗಳ ಹಳೇ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ 2016ರ ವಾರ್ಷಿಕ ಪರೀಕ್ಷೆಗೆ ಪೂರ್ವ ಅವಕಾಶ ಮುಗಿದಿದೆ. ಪ್ರಥಮ ಪಿಯುಸಿ ಕಲಾ, ವಾಣಿಜ್ಯ, ಭಾಷಾ ಹಾಗೂ ಇತರೆ ವಿಜ್ಞಾನ ವಿಷಯಗಳಾದ ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಹಾಗೂ ದ್ವಿತೀಯ ಪಿಯುಸಿ ಪಿಸಿಎಂಬಿ ವಿಜ್ಞಾನ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದವರಿಗೆ ಹಳೇ ಪಠ್ಯದಲ್ಲೇ ಪರೀಕ್ಷೆ ಬರೆಯಲು 2017ರ ಮಾರ್ಚ್ ಪರೀಕ್ಷೆ ಕೊನೆಯ ಅವಕಾಶವಾಗಿದೆ.
ಇನ್ನುಳಿದ ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ, ಭಾಷೆ ಹಾಗೂ ಇತರೆ ವಿಜ್ಞಾನ ವಿಷಯಗಳಾದ ಗೃಹ ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಸಂಖ್ಯಾಶಾಸ್ತ್ರ, ಎಲೆಕ್ಟ್ರಾನಿಕ್ಸ್ ವಿಷಯಗಳಲ್ಲಿ ಹಳೆಯ ಪಠ್ಯಕ್ರಮದಲ್ಲಿ ಅನುತ್ತೀರ್ಣರಾಗಿರುವವರಿಗೆ 2018ರ ವಾರ್ಷಿಕ ಪರೀಕ್ಷೆ ಕೊನೆಯ ಅವಕಾಶವಾಗಿರುತ್ತದೆ.
ಹಳೇ ಪಠ್ಯಕ್ರಮದ ಅನುತ್ತೀರ್ಣ ವಿಷಯಗಳನ್ನು ಪಾಸು ಮಾಡಿಕೊಳ್ಳಲು ನೀಡಲಾಗಿದ್ದ ಕಾಲಾವಕಾಶವನ್ನು ಮತ್ತೆ ವಿಸ್ತರಿಸುವ ಯಾವುದೇ ಯೋಚನೆ ಇಲ್ಲ. ಇರುವ ಅವಕಾಶಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು.
- ಕೆ.ಎನ್. ರಂಗನಾಥ್, ಜಂಟಿ ನಿರ್ದೇಶಕರು, ಪಿಯು ಇಲಾಖೆ
ಲಿಂಗರಾಜು ಕೋರಾ

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ