🌻🌻* ದಿನಕ್ಕೊಂದು ಕಥೆ🌻🌻 🌹ಪ್ರತ್ಯುಪಕಾರದ ಅಪೇಕ್ಷೆ*🌹
ನಾರಾಯಣಪುರದ ಗೋವಿಂದಶೆಟ್ಟಿ ಭಾರಿ ಶ್ರೀಮಂತ, ಅಷ್ಟೇ ನ್ಯಾಯವಂತ. ತನ್ನ ಸಹೋದ್ಯೋಗಿಗಳನ್ನು ಮನೆಯವರಂತೆಯೇ ನೋಡಿಕೊಳ್ಳುತ್ತಿದ್ದ. ಶ್ರೀಧರಪುರದ ಸಿದ್ದಪ್ಪಶೆಟ್ಟಿಯೂ ಆಗರ್ಭ ಶ್ರೀಮಂತನೇ. ಅವನಿಗೆ ಗೋವಿಂದಶೆಟ್ಟಿಯೊಡನೆ ವ್ಯವಹಾರದೊಂದಿಗೆ ಸ್ನೇಹವೂ ಇತ್ತು. ಇಬ್ಬರೂ ತಮ್ಮ ತಮ್ಮ ವ್ಯವಹಾರಗಳನ್ನು ಮಾಡಿಕೊಂಡು ಸುಖವಾಗಿದ್ದರು.
ಒಂದು ಬಾರಿ ಶ್ರೀಧರಪುರದ ಸಿದ್ದಪ್ಪಶೆಟ್ಟಿಗೆ ಅನೇಕ ಕಾರಣಗಳಿಂದ ವ್ಯಾಪಾರದಲ್ಲಿ ಭಾರಿ ಹಾನಿಯಾಯಿತು. ಬದುಕುವುದೇ ದುಸ್ತರವಾಯಿತು. ಆಗ ಸಿದ್ದಪ್ಪಶೆಟ್ಟಿ ನಾರಾಯಣಪುರಕ್ಕೆ ಬಂದು ಗೋವಿಂದ ಶೆಟ್ಟಿಯನ್ನು ಕಂಡ. ಸ್ನೇಹಿತನನ್ನು ಕಂಡೊಡನೆ ಗೋವಿಂದಶೆಟ್ಟಿ ಎದ್ದು ಆಲಂಗಿಸಿಕೊಂಡು, ಮನೆಗೆ ಕರೆದೊಯ್ದು ಸ್ವಾಗತ ಮಾಡಿದ. ಬಂದ ಕಾರಣವನ್ನು ತಿಳಿದ ಮೇಲೆ ಹೇಳಿದ, ‘ಗೆಳೆಯಾ, ನಿನ್ನ ಕಷ್ಟ ಸಮಯದಲ್ಲಿ ಸಮಾನಭಾಗಿ ನಾನು. ನನ್ನದೆಲ್ಲದರ ಅರ್ಧ ನಿನಗೆ ಕೊಡುತ್ತೇನೆ, ಚಿಂತೆ ಬೇಡ’ . ನಂತರ ತನ್ನಲ್ಲಿದ್ದ ಐವತ್ತು ಕೋಟಿ ಹಣದಲ್ಲಿ ಇಪ್ಪತ್ತೈದು ಕೋಟಿ ಹಣವನ್ನು ಕೊಡುವುದಲ್ಲದೇ ತನ್ನ ಸಮಸ್ತ ಆಸ್ತಿಯನ್ನು ಎರಡು ಭಾಗ ಮಾಡಿಸಿ ಒಂದು ಭಾಗವನ್ನು ಸಿದ್ದಪ್ಪಶೆಟ್ಟಿಗೆ ಕೊಟ್ಟುಬಿಟ್ಟ.
ಸಿದ್ದಪ್ಪಶೆಟ್ಟಿ ಸಂತೋಷದಿಂದ ಶ್ರೀಧರಪುರಕ್ಕೆ ಮರಳಿ ಮತ್ತೆ ತನ್ನ ವ್ಯಾಪಾರ ಪ್ರಾರಂಭಿಸಿ ಹಣ ಗಳಿಸಿದ. ಹತ್ತು ವರ್ಷಗಳು ಕಳೆದವು. ಈಗ ನಾರಾಯಣಪುರದ ಗೋವಿಂದಶೆಟ್ಟಿಗೆ ಅದೇ ಸ್ಥಿತಿ ಬಂತು. ತೀರ ನಿರ್ಗತಿಕನಾದಾಗ ಗೋವಿಂದಶೆಟ್ಟಿ ತನ್ನ ಸ್ನೇಹಿತ ಸಿದ್ದಪ್ಪಶೆಟ್ಟಿಯನ್ನು ನೆನಪಿಸಿಕೊಂಡ. ತನ್ನ ಆತ್ಮೀಯ ಗೆಳೆಯ ತನ್ನ ಕೈ ಬಿಡುವುದಿಲ್ಲವೆಂಬ ಅಪಾರ ನಂಬಿಕೆ ಅವನಿಗೆ. ತನ್ನ ಹೆಂಡತಿಯನ್ನು ಕರೆದುಕೊಂಡು ಶ್ರೀಧರಪುರಕ್ಕೆ ಬಂದ. ಹೆಂಡತಿಯನ್ನು ಧರ್ಮಶಾಲೆಯಲ್ಲಿ ಇಳಿಸಿ ‘ನೀನು ರಸ್ತೆಯಲ್ಲಿ ನಡೆದುಕೊಂಡು ಬರುವುದು ಸರಿಯಲ್ಲ. ನಾನು ಹೋಗಿ ಗೆಳೆಯನ ಜೊತೆಗೆ ಮಾತನಾಡಿದಾಗ ಅವನು ಒಂದು ಸಾರೋಟು ಕಳುಹಿಸುತ್ತಾನೆ. ನೀನು ಅದರಲ್ಲಿ ಬಾ’ ಎಂದು ಹೇಳಿ ಶೆಟ್ಟಿಯ ಮನೆಗೆ ಹೋದ. ಆಳುಗಳಿಗೆ ತಾನು ಬಂದ ವಿಷಯವನ್ನು ಸಿದ್ದಪ್ಪ ಶೆಟ್ಟಿಗೆ ಹೇಳಲು ಕೇಳಿಕೊಂಡ.
ಅವರು ಶೆಟ್ಟಿಗೆ ಹೇಳಿದಾಗ, ‘ಇದೆಲ್ಲಿಂದ ಪೀಡೆ ಬಂತಪ್ಪಾ?’ ಎಂದುಕೊಂಡು ಹೊರಗೆ ಬರದೇ ಮೂರು ತಾಸು ಗೋವಿಂದಶೆಟ್ಟಿಯನ್ನು ಮನೆಯ ಹೊರಗೇ ಕಾಯಿಸಿದ. ನಂತರ ತಾನೇ ಹೊರಗೆ ಬಂದು ಮುಖ ಗಂಟಿಕ್ಕಿಕೊಂಡು, ‘ಏನು ಬಂದೆ?’ ಎಂದು ಕೇಳಿದ. ಗೋವಿಂದಶೆಟ್ಟಿ ತನ್ನ ಕಷ್ಟಗಳನ್ನು ಹೇಳಿಕೊಂಡ ಮೇಲೆ ‘ನಿನ್ನ ಕರ್ಮಕ್ಕೆ ನಾನೇನು ಮಾಡಲಿ?’ ಎಂದ. ಆಮೇಲೆ, ‘ನನ್ನಿಂದೇನಾಗುತ್ತದೋ ಅದನ್ನು ಮಾಡುತ್ತೇನೆ. ನಿನ್ನೆಯೇ ಎರಡು ಸಾವಿರ ಚೀಲ ಅಕ್ಕಿಯ ರಾಶಿ ಮಾಡಿದ್ದೇನೆ. ಅದರ ಹೊಟ್ಟು ಬೇಕಾದಷ್ಟಿದೆ. ನನ್ನ ಒಂದು ಸೇರು ಹೊಟ್ಟು ಐದು ಕೋಟಿ ಹಣಕ್ಕೆ ಸಮ’ ಎಂದು ಸೇವಕರನ್ನು ಕರೆಸಿ ಗೋವಿಂದಶೆಟ್ಟಿಯ ಉಡಿಯಲ್ಲಿ ಐದು ಸೇರು ಹೊಟ್ಟು ಹಾಕಿ ಕಳಿಸಿದ.
ಧರ್ಮಶಾಲೆಗೆ ಹೊಟ್ಟಿನೊಂದಿಗೆ ಬಂದ ಗಂಡನನ್ನು ಕಂಡು ಶೆಟ್ಟಿಯ ಹೆಂಡತಿ ಬಹಳ ದುಃಖದಿಂದ ಅಳತೊಡಗಿದಳು. ಆಗ ಅಲ್ಲಿಗೆ ಮತ್ತೊಬ್ಬ ವ್ಯಾಪಾರಿ ಬಂದ. ಅವನು ಹಿಂದೆ ಗೋವಿಂದಶೆಟ್ಟಿಯಿಂದ ಸಹಾಯ ಪಡೆದವನು. ಓಡಿ ಬಂದು ಗೋವಿಂದಶೆಟ್ಟಿಯ ಕಾಲಿಗೆರಗಿ ವಿಷಯ ತಿಳಿದ. ಅವನ ಮಾವನೇ ಆ ರಾಜ್ಯದ ರಾಜನ ಮಂತ್ರಿ. ಗೋವಿಂದಶೆಟ್ಟಿಯನ್ನು ಮಂತ್ರಿ ರಾಜನ ಬಳಿಗೆ ಕರೆದೊಯ್ದ.
ರಾಜ ಸಿದ್ದಪ್ಪಶೆಟ್ಟಿಯನ್ನು ಕರೆಯಿಸಿ ಹಿಂದೆ ಗೋವಿಂದಶೆಟ್ಟಿ ಕೊಟ್ಟಿದ್ದನ್ನೆಲ್ಲ ಮರಳಿಸುವಂತೆ ಆಜ್ಞೆ ಮಾಡಿದ. ಆದರೆ ಗೋವಿಂದ ಶೆಟ್ಟಿ ಹೇಳಿದ, ‘ಪ್ರಭೂ, ನನಗೆ ನಾನು ಕೊಟ್ಟ ಹಣ ಬೇಡ. ನನ್ನ ವ್ಯಾಪಾರ ಪ್ರಾರಂಭಿಸುವುದಕ್ಕೆ ಸ್ವಲ್ಪ ಹಣ ಕೊಡಿಸಿದರೆ ಸಾಕು. ನಾನು ಅದನ್ನೇ ಶಕ್ತಿಯಿಂದ ಬೆಳೆಸುತ್ತೇನೆ. ಕೊಟ್ಟಿದ್ದನ್ನೆಲ್ಲ ಮರಳಿ ಪಡೆದರೆ ಅದು ಸ್ನೇಹ ಹೇಗಾದೀತು? ಅದೂ ವ್ಯಾಪಾರವೇ ಅಗುತ್ತದೆ’. ಅಂತೆಯೇ ಸ್ವಲ್ಪ ಹಣವನ್ನು ತೆಗೆದುಕೊಂಡು ನಾರಾಯಣಪುರಕ್ಕೆ ನಡೆದ.
ನೀವು ಮಾಡಿದ ಉಪಕಾರಕ್ಕೆ ಪ್ರತಿಯಾಗಿ ಯಾರಾದರೂ ಉಪಕಾರ ಮಾಡಿದರೆ ದಯವಿಟ್ಟು ಧನ್ಯವಾದ ಹೇಳಿ. ಪ್ರತ್ಯುಪಕಾರ ಅಪೇಕ್ಷಿಸಬೇಡಿ. ಹಾಗೆ ಅಪೇಕ್ಷೆ ಇಟ್ಟುಕೊಂಡರೆ ಅದು ಉಪಕಾರವಾಗದೇ ವ್ಯಾಪಾರವಾಗುತ್ತದೆ. ನಿಮ್ಮಿಂದ ಸಾಧ್ಯವಿದ್ದರೆ, ಸಾಧ್ಯವಿದ್ದಷ್ಟು ಮಟ್ಟಿಗೆ, ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ. ಅವರಿಂದ ಅಪೇಕ್ಷೆ ಎಷ್ಟು ಹೆಚ್ಚು ಮಾಡಿಕೊಳ್ಳುತ್ತೀರೋ ಅಷ್ಟು ಹೆಚ್ಚು ಕೊರಗುತ್ತೀರಿ. ನೀವು ಮಾಡಿದ್ದು, ರಾಷ್ಟ್ರಕ್ಕೆ, ಸಮಾಜಕ್ಕೆ, ಪರಿವಾರಕ್ಕೆ, ಹೆಂಡತಿಗೆ, ಮಕ್ಕಳಿಗೆ ಹೀಗೆ ಯಾರಿಗಾದರೂ ಆಗಬಹುದು. ಮಾಡಿ ಮರೆತು ಬಿಡಿ. ಪಡೆದವರು ನೆನಪಿಟ್ಟುಕೊಂಡರೆ ಭಗವಂತನಿಗೆ ಕೃತಜ್ಞತೆ ಹೇಳಿ. ಆಗ ನಿಮ್ಮ ಮನಸ್ಸಿಗೆ ನೋವಾಗುವುದಿಲ್ಲ. ಅಪೇಕ್ಷೆ ಇಲ್ಲದ ಮನಸ್ಸು ಸದಾ ಗರಿಬಿಚ್ಚಿದ ಹಕ್ಕಿಯಂತೆ ಹಗುರ. ಕೃಪೆ :ನೆಟ್.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ