📚📚#ಶಿಕ್ಷಣ_ಸಾಲ💰💰
ಒಂದೇ ಅರ್ಜಿ ಸಾಕು...!
ದಯವಿಟ್ಟು ಶೇರ್ ಮಾಡಿ ಜಾಗೃತಿ ಮೂಡಿಸಿ
ಬ್ಯಾಂಕ್‌ಗಳಲ್ಲಿ ಶೈಕ್ಷಣಿಕ ಸಾಲ ಪಡೆಯಲು ವಿದ್ಯಾರ್ಥಿಗಳು ಹಲವಾರು ಬ್ಯಾಂಕ್‌ಗೆ ಭೇಟಿ ನೀಡಿ ಮಾಹಿತಿ ಪಡೆದು ಅರ್ಜಿ ಸಲ್ಲಿಸುವ ರಗಳೆಯಿಂದ ಮುಕ್ತ ನೀಡಲು ಕೇಂದ್ರ ಸರ್ಕಾರ ‘ವಿದ್ಯಾ ಲಕ್ಷ್ಮೀ’ ಯೋಜನೆ ಜಾರಿಗೆ ತಂದಿದೆ. ಸಾಲ ಪಡೆಯಲಿಚ್ಛಿಸುವ ವಿದ್ಯಾರ್ಥಿ ಈ ಲಿಂಕ್‌ಗೆ https://www.vidyalakshmi.co.in/students/ ಭೇಟಿ ನೀಡಿ ಮೊದಲಿಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ಆನಂತರ ಸಾಲದ ಅರ್ಜಿ ಭರ್ತಿ ಮಾಡಿದರೆ ಆ ಅರ್ಜಿಯು ವಿದ್ಯಾಲಕ್ಷ್ಮೀ ಯೋಜನೆಯಡಿ ನೋಂದಾಯಿಸಿಕೊಂಡಿರುವ ಬ್ಯಾಂಕ್‌ಗಳಿಗೆ ತಲುಪಲಿದೆ. ಆನಂತರ ಬ್ಯಾಂಕ್ ನೀಡುವ ಬಡ್ಡಿಯ ವಿವರದೊಂದಿಗೆ ಯಾವ ಬ್ಯಾಂಕ್‌ನಲ್ಲಿ ಸಾಲ ತೆಗೆದುಕೊಳ್ಳಬೇಕೆಂಬುದನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ 39 ಬ್ಯಾಂಕ್‌ಗಳು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದು, 62 ವಿವಿಧ ಯೋಜನೆಗಳಲ್ಲಿ ಸಾಲ ದೊರೆಯಲಿದೆ. ವಿದ್ಯಾರ್ಥಿಗಳು ವಿದ್ಯಾಲಕ್ಷ್ಮೀ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಯ ಸ್ಥಿತಿ ಪರಿಶೀಲನೆ ಕೂಡ ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ