ನಿಮ್ಮ ಮೂತ್ರಪಿಂಡವನ್ನು ನೀವೇ ಶುದ್ಧೀಕರಿಸಿಕೊಳ್ಳಿ, ರಕ್ಷಿಸಿ.
-----------------------
ಅನೇಕ ವರ್ಷಗಳಿಂದ ನಮ್ಮ ಮೂತ್ರಪಿಂಡವು ನಮಗಾಗಿ, ನಮ್ಮ ದೇಹದಲ್ಲಿ ಸಂಗ್ರಹಿತವಾಗುವ ಅನಪೇಕ್ಷಿತ ಲವಣಗಳನ್ನು ಹಾಗೂ ಸೂಕ್ಷ್ಮಜೀವಿಗಳನ್ನು ತನ್ನಲ್ಲಿ ತಡೆ ಹಿಡಿದು ನಮ್ಮ ಆರೋಗ್ಯರಕ್ಷಣೆ ಮಾಡುತ್ತಿರುತ್ತದೆ. ಅಂತಹ ಅತಿ ಮುಖ್ಯ ಅಂಗ ಮೂತ್ರಪಿಂಡವನ್ನು ಅತೀ ಕಡಿಮೆ ವೆಚ್ಚದಲ್ಲಿ ನಮ್ಮಯ ಮನೆಗಳಲ್ಲೇ ಶುದ್ಧೀಕರಿಸುವ ಸರಳ ವಿಧಾನ ಹೀಗಿದೆ.
ಒಂದು ಹಸಿರಾದ, ಸ್ವಚ್ಛವಾಗಿ ತೊಳೆದ ತಾಜಾ ಕೊತ್ತಂಬರಿ ಕಟ್ಟನ್ನು ತೆಗೆದುಕೊಂಡು, ಅದನ್ನು ಚಿಕ್ಕ-ಚಿಕ್ಕ ಚೂರುಗಳನ್ನಾಗಿ ಮಾಡಿ ಒಂದು ತಪ್ಪಲೆಯಲ್ಲಿ ಹಾಕಿ ಶುದ್ಧ ನೀರಿನಲ್ಲಿ ಬಿಸಿಮಾಡಿ, ೧೦ ನಿಮಿಷ ಕುದಿಸಿ, ನಂತರ ಆರಿಸಿ. ಅದನ್ನು ಸೋಸಿ, ಸ್ವಚ್ಛವಾದ ಉತ್ತಮ ದರ್ಜೆಯ ಬಾಟಲಿ/ ಪಾತ್ರೆಯಲ್ಲಿ ಹಾಕಿ ಶೀತಕದಲ್ಲಿಡಿ.
ದಿನಂಪ್ರತಿ ಒಂದು ಲೋಟ ಈ ರೀತಿ ತಯಾರಿಸಿದ ಕೊತ್ತಂಬರಿ ಪೇಯವನ್ನು ರಾತ್ರಿ ಮಲಗುವ ಮುನ್ನ ಸೇವಿಸಿ. ನಿಮ್ಮ ಮೂತ್ರ ವಿಸರ್ಜನೆಯ ವೇಳೆಗೆ, ನಿಮ್ಮ ದೇಹದಲ್ಲಿನ ಅನಪೇಕ್ಷಿತ ಲವಣಗಳು ಹಾಗೂ ಸಂಗ್ರಹಿತ ಅಶುದ್ಧಗಳು ಹೊರಹೋಗುವದರ ಅನುಭವ ಸ್ವತಃ ನಿಮಗೇ ಆಗುತ್ತದೆ.
ಕೊತ್ತಂಬರಿ ಎಲೆಗಳು(ಸೊಪ್ಪು) ಮೂತ್ರಪಿಂಡ ಶುದ್ಧೀಕರಣಕ್ಕೆ, ಹೇಳಿ ಮಾಡಿಸಿದಂತಹ, ಅತ್ಯಂತ ನೈಸರ್ಗಿಕ ಸಸ್ಯ.
ಈ ಸುಲಭ ವಿಧಾನವನ್ನು ಎಲ್ಲರೊಂದಿಗೆ ವಿನಿಮಯ ಮಾಡಿಕೊಳ್ಳಿ.
ಕೇವಲ ಓದಿದರೆ ಮಾತ್ರ ಸಾಲದು! ನಿಮ್ಮೆಲ್ಲರಿಗೂ ಆತ್ಮೀಯರಿಗೆ ಹಾಗೂ ಬಂಧು-ಮಿತ್ರರಿಗೆ ಕಳಿಸಿ.
ಗಮನಿಸಿ:
ಇದು ನನ್ನ ಬರೆಹವಲ್ಲ.
ವಿಶ್ವ ಮೂತ್ರಪಿಂಡ ದಿನದಂದು ನನಗೆ ಆಂಗ್ಲಭಾಷೆಯಲ್ಲಿ ಬಂದಿದ್ದ ಪ್ರಸ್ತುತಿಯನ್ನು ಕನ್ನಡಕ್ಕೆ ಭಾಷಾಂತರ ಮಾಡಿ ಕಳಿಸಿದ್ದೇನೆ. ಇದರಿಂದ ಯಾರಿಗೇ ಲಾಭವಾದರೂ ಅದು ಅತ್ಯಂತ ಸಂತೋಷದ ಸಂಗತಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ