ಸಂಯೋಜಿತ ಬಿಎಡ್‌ಗೆ ರಾಷ್ಟ್ರವ್ಯಾಪಿ ಸಿಇಟಿಗೆ ಚಿಂತನೆ
1 Jul, 2016
ನವದೆಹಲಿ: ವಿವಿಧ ವಿಶ್ವವಿದ್ಯಾಲಯಗಳು ಮತ್ತು ಶಿಕ್ಷಕ ತರಬೇತಿ ಸಂಸ್ಥೆಗಳು ನಡೆಸುತ್ತಿರುವ ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ ಕೋರ್ಸ್ ಪ್ರವೇಶಕ್ಕೆ ರಾಷ್ಟ್ರವ್ಯಾಪಿ ಪ್ರವೇಶ ಪರೀಕ್ಷೆ ನಡೆಸಲು ಕೇಂದ್ರ ಚಿಂತನೆ ನಡೆಸುತ್ತಿದೆ.
ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಾಲ್ಕು ವರ್ಷಗಳ ಬಿಎ–ಬಿಎಡ್ ಮತ್ತು ಬಿಎಸ್‌ಸಿ–ಬಿಎಡ್ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ‘ಪಿಯುಸಿ ನಂತರ ಅತ್ಯುತ್ತಮ ವಿದ್ಯಾರ್ಥಿಗಳು ಶಿಕ್ಷಕ ತರಬೇತಿಗೆ ಸೇರುವಂತೆ ಮಾಡಲು ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆ ನಡೆಸಬೇಕು’ ಎಂದು ಶಾಲಾ ಶಿಕ್ಷಣ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಟಿಯ ಅವರು ತಿಳಿಸಿದ್ದಾರೆ.
ರಾಜ್ಯ ಸರ್ಕಾರಗಳು ಕೂಡ ತಮ್ಮ ವ್ಯಾಪ್ತಿಯಲ್ಲಿರುವ ಶಿಕ್ಷಕ ತರಬೇತಿ ಸಂಸ್ಥೆಗಳ ಪ್ರವೇಶಕ್ಕೆ ಪ್ರವೇಶ ಪರೀಕ್ಷೆ ನಡೆಸಬೇಕು ಎಂದು ಅವರು ಕೋರಿದ್ದಾರೆ. ಈಗ ಇರುವ ಶಿಕ್ಷಕ ತರಬೇತಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಮಾನವ ಸಂಪನ್ಮೂಲ ಸಚಿವಾಲಯ ಬಯಸಿದೆ ಎಂದು ಕುಂಟಿಯ ತಿಳಿಸಿದ್ದಾರೆ.
ಮುಂದಿನ 10–20 ವರ್ಷಗಳ ಅವಧಿಯಲ್ಲಿ ಎಷ್ಟು ಶಿಕ್ಷಕರ ಅಗತ್ಯ ಇದೆ ಎಂಬುದನ್ನು ಅಂದಾಜಿಸಿ ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಶಿಕ್ಷಕ ವೃತ್ತಿಗೆ ಆಕರ್ಷಿಸಲು ಯೋಜನೆ ರೂಪಿಸಲಾಗುವುದು. ಈಗ ಶಿಕ್ಷಕ ವೃತ್ತಿಗೆ ಪ್ರತಿಭಾವಂತರು ಬರುತ್ತಿಲ್ಲ. ಪ್ರತಿಭಾವಂತರು ಈ ಕ್ಷೇತ್ರಕ್ಕೆ ಬರುವ ರೀತಿಯಲ್ಲಿ ವೃತ್ತಿಯನ್ನು ಆಕರ್ಷಕಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಮುಖ್ಯಾಂಶಗಳು
* ದೇಶದಲ್ಲಿರುವ ಒಟ್ಟು ಶಿಕ್ಷಕ ತರಬೇತಿ ಕಾಲೇಜುಗಳು: 18,839
* ಅವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಖಾಸಗಿ
* ನಾಲ್ಕು ವರ್ಷಗಳ ಸಂಯೋಜಿತ ಶಿಕ್ಷಣ ಪದವಿ ಕೋರ್ಸ್ ಕಳೆದ ವರ್ಷ ಆರಂಭ
* ಶಿಕ್ಷಣ ಕ್ಷೇತ್ರಕ್ಕೆ ಪ್ರತಿಭಾವಂತರನ್ನು ಆಕರ್ಷಿಸುವುದು ಉದ್ದೇಶ
* ರಾಜ್ಯಗಳಲ್ಲಿ ಪ್ರತ್ಯೇಕ ಶಿಕ್ಷಕರ ಕೇಡರ್ ರೂಪಿಸಲು ಸಲಹೆ
* ನಾಲ್ಕು ವರ್ಷಗಳ ಬದಲಿಗೆ ಪ್ರತಿ ವರ್ಷ ಖಾಲಿ ಹುದ್ದೆ ಭರ್ತಿಗೆ ಮನವಿ
* ಡಯೆಟ್‌ನಲ್ಲಿ ಶೇ 38 ರಷ್ಟು ಹುದ್ದೆಗಳು ಖಾಲಿ ( 15,900 ಹುದ್ದೆಗಳಲ್ಲಿ 6,083 ಖಾಲಿ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ