"ಕೆಲಸದ ಒತ್ತಡವನ್ನು ನಿಭಾಯಿಸಲು ಇಲ್ಲಿದೆ ಮಾರ್ಗ"
ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ತಮ್ಮ ಕೆಲಸದ ಒತ್ತಡಕ್ಕೆ ಸಿಲುಕಿ ಅದನ್ನು ನಿಭಾಯಿಸಲಾಗದೆ ತತ್ತರಿಸಿ ಹೋಗುತ್ತಾರೆ. ತಮ್ಮ ಕೆಲಸದ ಒತ್ತಡವನ್ನು ನಿಭಾಯಿಸಿಕೊಂಡು ತಮ್ಮನನ್ನು ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢವಾಗಿಸಿಕೊಳ್ಳಲು ಇಲ್ಲಿದೆ ಮಾರ್ಗ.
* ಭಯ ಮತ್ತು ಒತ್ತಡವನ್ನು ಸ್ವೀಕರಿಸಿ:
ಸಣ್ಣ ಸಣ್ಣ ವಿಷಯಗಳನ್ನು ಗಂಭೀರವೆಂದು ಪರಿಗಣಿಸಿ ಭಯ ಪಡುವುದಾಗಲೀ ಅಥವಾ ಒತ್ತಡಕ್ಕೊಳಗಾಗುವುದಾಗಲೀ ಮಾಡಬೇಡಿ ಬದಲಿಗೆ ನಿಮಗಾದ ಭಯ ಮತ್ತು ಒತ್ತಡವನ್ನು ಸಂತೋಷದಿಂದ ಸ್ವೀಕರಿಸಿ
* ಟೀಕೆಗಳನ್ನು ಸ್ವೀಕರಿಸಿ:
ನಿಮ್ಮ ಬಗ್ಗೆ ನಿಮ್ಮ ಮೇಲಧಿಕಾರಿಗಳು ಅಥವಾ ಸಹೋದ್ಯೋಗಿಗಳು ಋಣಾತ್ಮಕವಾಗಿ ಟೀಕೆ ಮಾಡಿದರೂ ಅದನ್ನು ಧನಾತ್ಮಕವಾಗಿ ಸ್ವೀಕರಿಸಿ. ಸಾಮಾನ್ಯವಾಗಿ ಯಾರಿಗೂ ಕೂಡಾ ತಮ್ಮ ಬಗೆಗಿನ ಟೀಕೆಗಳನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ಆದರೆ ಇನ್ನೊಬ್ಬರು ಮಾಡುವ ನಿಮ್ಮ ಬಗೆಗಿನ ಟೀಕೆಯೇ ನಿಮ್ಮ ಮುಂದಿನ ಹೆಜ್ಜೆ ಇಡಲು ದಾರಿ ತೋರಿಸುತ್ತದೆ ಎಂಬುದು ನೆನಪಿರಲಿ.
* ನಿಮ್ಮ ಕೆಲಸವನ್ನು ನೀವು ಮಾಡುತ್ತಿರಿ ಯಾವುದಕ್ಕೂ ಭಯಪಡಬೇಡಿ. ಇನ್ನೊಬ್ಬರು ಏನೋ ಹೇಳುತ್ತಾರೆ ಎಂದು ಇಟ್ಟ ಹೆಜ್ಜೆ ಹಿಂತೆಗೆಯದಿರಿ. ನಿಮ್ಮ ಸಾಮರ್ಥ್ಯವನ್ನು ನೀವು ಉತ್ತಮಪಡಿಸಿಕೊಳ್ಳಿ.
* ನೀವು ಬಹಳಷ್ಟು ಒತ್ತಡಕ್ಕೆ ಒಳಗಾಗಿದ್ದೀರಿ ಎಂದು ನಿಮಗೆ ಅನ್ನಿಸಿದಾಗ ನಿಮ್ಮ ಕೆಲಸದಿಂದ ಕೆಲ ಹೊತ್ತು ಬೇರೆಡೆ ತಿರುಗಿ. ನಿಮ್ಮ ಫೋನ್ ನಲ್ಲಿ ನಿಮ್ಮ ಆತ್ಮೀಯರೊಂದಿಗೆ ಮಾತನಾಡುವುದು ಅಥವಾ ಹೊರಗಡೆ ಬಂದು ಕೆಲ ನಿಮಿಷ ನಿಲ್ಲುವುದು ಹೀಗೆ ಏನಾದರೂ ಮಾಡಿ ನಿಮ್ಮ ಒತ್ತಡ ಒಂದ ಹಂತಕ್ಕೆ ಕಡಿಮೆಯಾಗುತ್ತದೆ.
* ನಿಮ್ಮ ಕೋಪವನ್ನು ಹತ್ತಿಕ್ಕಿ:
ನೀವು ಒತ್ತಡಕ್ಕೆ ಒಳಗಾದ ಸಮಯದಲ್ಲಿ ಚಿಕ್ಕ ಚಿಕ್ಕ ಕಾರಣಗಳಿಗಾಗಿ ಖಂಡಿತವಾಗಿಯೂ ಕೋಪ ಬರುತ್ತದೆ. ಆ ಸಮಯದಲ್ಲಿ ಸಂಗೀತ ಕೇಳುವುದು ಅಥವಾ ಕೆಲ ಕ್ಷಣಗಳು ವಿಶ್ರಾಂತಿ ಪಡೆಯುವುದು ಮಾಡಿ.
* ಕೆಲಸ ಮತ್ತು ವೈಯಕ್ತಿಕ ಜೀವನ ಎರಡನ್ನೂ ನಿಭಾಯಿಸಬೇಕಾದ ಅಗತ್ಯವಿದ್ದಾಗ ಮನೆಯಲ್ಲಿ ದಿನಕ್ಕೊಮ್ಮೆಯಾದರೂ ಯೋಗಾಸನ ವ್ಯಾಯಾಮಗಳನ್ನು ಮಾಡಿ. ಮತ್ತು ನಿಮ್ಮ ಕಛೇರಿಯ ಕೆಲಸದ ಕುರಿತು ಯಾವಕಾರಣಕ್ಕೂ ಮನೆಯಲ್ಲಿ ಚರ್ಚಿಸಬೇಡಿ
* ನಿಮ್ಮ ಕೆಲಸವನ್ನು ನೀವು ಪ್ರೀತಿಸಿ, ಕೆಲಸ ಮಾಡುವಾಗ ಬೇರೆಯವರ ಬಗ್ಗೆ ಯೋಚಿಸಬೇಡಿ. ನಿಮ್ಮ ಕೆಲಸದ ಕುರಿತು ಮಾತ್ರ ಯೋಚಿಸಿ. ಆಗ ಕೆಲಸವೂ ಸಾಂಗವಾಗಿ ನೆರವೇರುತ್ತದೆ ಮತ್ತು ನೀವು ಒತ್ತಡ ಅನುಭವಿಸುವುದೂ ಇರುವುದಿಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ