ಗುಂಡ : ಪಾಪ ಹಸಿವು ಆಗ್ತಿದೆ ಅಂತ, ಮೆಣಸಿನಕಾಯಿ ಕೊಟ್ಟೆ, ಇನ್ನೊಂದು ಬೇಕು ಅಂತ ಅಳುತ್ತಿರಬೇಕು. @@@@@@@@@@@@@@@@@ 😎😥😤ಹಾಸ್ಯ ಪ್ರೇಮಿಯ ಸಾವಿನ ಪತ್ರ.😎😹😹. . ನನ್ನ ಸಾವಿಗೆ ನಾ ಕಾರಣವಲ್ಲ, ಬೇರೆ ಯಾರೆಂದು ನಾ ಹೇಳುವುದಿಲ್ಲ. ನಾ ಸತ್ತಮೇಲೆ ಯಾರು ನನಗೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಬೇಡಿ.
ಬದುಕಿರುವಾಗಲೆ ಸಿಗದ ಮಧುಶ್ರೀ, ವಿದ್ಯಾಶ್ರೀ, ದಿವ್ಯಶ್ರೀ, ಸೌಮ್ಯಶ್ರೀ,..🎭 ಇನ್ನು ನಾ ಸತ್ತಮೇಲೆ ನನಗೇಕೆಬೇಕು ಈ ಶಾಂತಿ ರೀ..😀😂😂 @@@@@@@@@@@@@@ ಗುಂಡ ತನ್ನ ಎಮ್ಮೆಯನ್ನು ಡಾಕ್ಟರ್ ಹತ್ತಿರ ಹೊಡೆದುಕೊಂಡು ಹೋದ. ಗುಂಡ - ಡಾಕ್ಟರ್ ಸಾಹೇಬರೆ ನಮ್ಮ ಎಮ್ಮೆ ಜೀಯೋ ಸಿಮ್ ತಿಂದಿದೆ ಹಾಲು ಅನಲಿಮಿಟೆಡ ಕೊಡುತಾ ಇದೆ. ಡಾಕ್ಟರ್ - ಖುಷಿಯಾಗಿರಿ. ಗುಂಡ - ಅದು ಸರಿ ಸೆಗಣಿನೂ ಅನಲಿಮಿಟೆಡ್ ಸಾಹೇಬರೆ ಅದಕ್ಕೆ ಏನಾದರೂ ಔಷಧಿ ಕೊಡಿ.
ಡಾಕ್ಟರ್ - ಮಾಚ೯ 31 ರವರೆಗೆ ವ್ಯಾಲಿಡಿಟಿ ಇದೆ ಏನು ಮಾಡೋಕೆ ಆಗಲ್ಲ. @@@@@@@@@@@@@@ ಸಂತಾ: ಈ ಕಾಲೇಜು ಉತ್ತಮವಾಗಿದೆಯೇ?
ಸೆಕ್ಯುರಿಟಿ: ನಿಜಕ್ಕೂ ಸಾರ್... ನಾನು ಇಲ್ಲೇ ಎಂಬಿಎ ಮಾಡಿದ್ದು.. ತಕ್ಷಣವೇ ಕೆಲ್ಸಾನೂ ಸಿಕ್ತು...! @@@@@@@@@@@@@@@@ ಹೆಂಡತಿ- ಏನ್ರೀ, ನಮ್ಮ ಪಕ್ಕದ ಮನೆಯವರು 50 ಇಂಚಿನ ಎಲ್. ಇ.ಡಿ. ಟಿವಿ ಕೊಂಡ್ಕೊಂಡಿದ್ದಾರೀ. ನಾವೂ ಕೊಂಡ್ಕೊಳ್ಳೋಣರೀ. ಗಂಡ- ನಿನ್ನಂತಹ ಅಂದವಾದ ಹೆಂಡತಿ ಇದ್ದಾಗ ಆ ಹಾಳು ಟಿ.ವಿ. ನೋಡ್ತಾ ಟೈಂ ವೇಸ್ಟ್ ಮಾಡ್ತಾರೇನೇ? ಹೆಂಡತಿ- ಹೋಗ್ರೀ.... ನೀವೂ..... ಸ್ವಲ್ಪ ತಡೀರಿ ನಿಮಗೆ ಪಕೋಡ ಮಾಡಿಕೊಂಡ್ಬರ್ತೀನಿ. 😜😂😝😜😜 ಹೆಂಡತಿ- ಈ ಸಾರಿ ಕೂಡ ನನ್ನ ಬರ್ತ್ ಡೇ ಮರತುಹೋದ್ರಲ್ಲ? ಗಂಡ- ಏನ್ಮಾಡ್ಲೇ, ನಿನ್ನ ಮುಖ ನೋಡ್ತಾ ಇದ್ರೆ ನಿನ್ನ ವಯಸ್ಸು ಹೆಚ್ಚಾಗ್ತಾಇದೆ ಅಂತಲೇ ಅನ್ಸೋದಿಲ್ಲ. ಹೆಃಡತಿ- ಹೌದೇನ್ರೀ? ...ನಿಜವಾಗ್ಲೂ.....ತಡೀರಿ ನಿಮಗಿಷ್ಟವಾದ ಶಾವಿಗೆ ಪಾಯಸ ತರ್ತೀನಿ.
😜😜😜😝😝😝😛 @@@@@@@@@@@@@@ ಗುರುಗಳು:-ಲೋ ಕಿಟ್ಟಿ ಅಮೇರಿಕಾ ಎಲ್ಲಿದೆಯೋ? ಕಿಟ್ಟಿ:: ಗೊತ್ತಿಲ್ಲ ಸರ್ ಗುರುಗಳು:: ಹಾಗಾದರೆ ಬೆಂಚಿನ ಮೇಲೆ ನಿಲ್ಲು, ಕಿಟ್ಟಿ:: ಬೆಂಚಿನ ಮೇಲೆ ನಿಂತರೆ ಅಮೇರಿಕಾ ಕಾಣುತ್ತಾ ಸರ್, @@@@@@@@@@@@@@@@ ಟಿ.ವಿ ನೋಡ್ತಾ ಇದ್ದ ಗಂಡ: "ಕಟ್ಬೇಡ, ಕಟ್ಬೇಡ, ಕಟ್ಬೇಡ, ಅಯ್ಯೋ ಕಟ್ಬಿಟ್ಟ" ಅಡುಗೆ ಕೋಣೆಯಿಂದ ಪತ್ನಿ: ಯಾವ ಸಿನಿಮಾರೀ ನೋಡ್ತಾ ಇರೋದು? ಗಂಡ: *ನಮ್ಮ ಮದುವೆ 💿 ಸಿ.ಡಿ*
😂😂😂 @@@@@@@@@@@@@@ ಅಜ್ಜಿ:-ಗುಂಡ ನಿಮ್ಮ ಟೀಚರ್ ಬರ್ತಾ ಇದ್ದಾರೆ ಬಚ್ಚಿಕೊ, ಗುಂಡ:-ಮೊದಲು ನೀನು ಬಚ್ಚಿಕೋ ಅಜ್ಜಿ:- ಯಾಕೆ ಗುಂಡ, ಗುಂಡು;:-ನೀನು ಸತ್ತಿದ್ದೀಯಾ ಅಂತ ನಾನು ರಜೆ ಹಾಕಿದ್ದೆ 😄😄😄😄😄😄 ಹಾಯ್ ಹುಡುಗಿಯರನ್ನು ಪ್ರಪೋಸ್ ಮಾಡೋದಕ್ಕೆ ಒಳ್ಳೆಯ ದಿನ ಯಾವುದು ಗೊತ್ತಾ? ಗೊತ್ತಿಲ್ವಾ ನಾನೇ ಹೇಳ್ತಿನಿ... ಏಪ್ರಿಲ್ 1. ಯಾಕೆ ಮೂರ್ಖರಾಗೋದಕ್ಕಾ ಅನ್ನಬೇಡಿ ಹುಡುಗಿಗೆ ಐ ಲವ್ ಯೂ ಅಂತ ಅನ್ನಿ ಹುಡುಗಿ ಒಪ್ಪಿ ಕೊಂಡರೆ ನಿಮ್ಮ ಅದೃಷ್ಟ ಒಪ್ಪಿಲ್ಲ ಅಂದರೆ ಏಪ್ರಿಲ್ ಪೂಲ್ ಅಕ್ಕ ಅಂತ ಹೇಳಿ ಬಚಾವ್ ಆಗಿ. 😀 ಶಿಷ್ಯ : ಗುರುಗಳೆ ನೀವು ಬರೆದ ಪುಸ್ತಕ ನನಗೆ ದಾರಿ ದೀಪ ಆಯಿತು ಗುರುಗಳು : ಅದು ಹೇಗೊ ಶಿಷ್ಯ : " ನೆನ್ನೆ ರಾತ್ರಿ ದಾರಿಲ್ಲಿ ಬರಬೇಕಾದರೆ ಬೀದಿ ದೀಪಗಳಿರಲಿಲ್ಲ ನಿಮ್ಮ ಪುಸ್ತಕಕ್ಕೆ ಬೆಂಕಿ ಹಚ್ಚಿ ದೀಪ ಮಾಡಿಕೊಂಡೆ " 😃😃😃😃😃😃 ದ್ವಿ ಚಕ್ರ ವಾಹನದಲ್ಲಿ ನಾಲ್ಕು ಜನ ಹುಡುಗರು ಹೋಗುತಿದ್ದರು ಅವರನ್ನ ತಡೆದ ಟ್ರಾಫಿಕ್ ಪೋಲಿಸ್ ಮೂರು ಜನ ದ್ವಿ ಚಕ್ರ ವಾಹನದಲ್ಲಿ ಚಲಿಸುವುದನ್ನ ನಿಷೇಧಿಸಲಾಗಿದೆ ಅಂತದರಲ್ಲಿ ನೀವು ನಾಲ್ಕು ಜನ ! ಭಯ ಭೀತನಾದ ಹುಡುಗ ಹಿಂದೆ ತಿರುಗಿ ನೋಡಿ ಅಯ್ಯೋ ! ನಾವು ಇದ್ದದ್ದು ಐದು ಜನ ಇನ್ನೂಬ್ಬ ಎಲ್ಲ್ ಬಿದ್ದ ನೋಡ್ರೋ...... ಲೇ.......... 😆😆😆😆😆😆😆 ತೊಂದರೆ ಗುಂಡಾ: ಡಾಕ್ಟರ್, ನನಗೆ ಉಸಿರಾಟದ ತೊಂದರೆ ಇದೆ. ಡಾಕ್ಟರ್: ಚಿಂತೆ ಮಾಡಬೇಡ. ನಾನು ನಿಲ್ಲಿಸಿ ಬಿಡ್ತೀನಿ. 😆😆😆😆😆😆 ಸಂತಾ ನಾಯಿಯನ್ನು ವಾಕಿಂಗ್ ಕರೆದುಕೊಂಡು ಹೋಗಿದ್ದ. ದಾರಿಹೋಕ: ಕತ್ತೆಯೊಂದಿಗೆ ಎಲ್ಲಿ ಹೋಗ್ತಿದ್ದೀರಿ? ಸಂತಾ: (ಕೋಪದಿಂದ) ಇದು ಕತ್ತೆ ಅಲ್ಲ.. ನಾಯಿ. ಕಣ್ಣು ಕಾಣ್ಸಲ್ವ ನಿಮ್ಗೆ? ದಾರಿಹೋಕ: ನಿಮ್ಮಲ್ಲಿ ಯಾರ್ರೀ ಕೇಳಿದ್ರು.. ನಾನು ನಾಯಿ ಜತೆ ಮಾತಾಡಿದ್ದು...! 😀😀😀😀😀😀 ಒಂದು ಬೋರ್ಡ್ ಹೀಗಿತ್ತು: ಬನಾರಸ್ ಸೀರೆ- ರೂ.10 ನೈಲಾನ್ ಸೀರೆ- ರೂ.8 ಕಾಟನ್ ಸೀರೆ- ರೂ 5 ಇದನ್ನು ನೋಡಿದ ಹೆಂಗಸೊಬ್ಬಳು, ತನ್ನ ಗಂಡನ ಬಳಿ: ರೀ, ಐನೂರು ರೂಪಾಯಿ ಕೊಡಿ. ನಾನು ಐವತ್ತು ಸೀರೆ ತಗೊಂಡು ಬರ್ತೀನಿ.. ಗಂಡ: ಲೇ, "ಇಸ್ತ್ರೀ ಅಂಗಡಿ" ಕಣೇ ಅದು!! 😄😄😄😄😄😄 ದೇವರಲ್ಲಿ ಮೊರೆ ಗುಂಡ ದೇವರ ಹತ್ತಿರ : ಪರಮಾತ್ಮ , ನೀನು ಬಾಲ್ಯ ಕೊಟ್ಟೆ........ ವಾಪಸ್ ತಗೊಂಡೆ ! ಯೌವನ ಕೊಟ್ಟೆ....... ವಾಪಸ್ ತಗೊಂಡೆ ! ಐಶ್ವರ್ಯ ಕೊಟ್ಟೆ...... ವಾಪಸ್ ತಗೊಂಡೆ ! ಆದರೆ, ಹೆಂಡತಿನಾ ಕೊಟ್ಟೆ..... ಮರತೇ ಬಿಟ್ಯಾ 😆😆😆😆😆😆😆 ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು ಗುಂಡನನ್ನು ಕೇಳಿದರು ಗುಂಡಾ ಕರಡಿಯ ಮೈತುಂಬಾ ಏಕೆ ಕೂದಲು ಇರುತ್ತೇ ಹೇಳು? ಗುಂಡ ಉತ್ತರ ಕೊಟ್ಟ ಕಾಡಲ್ಲಿ ಕಟ್ಟಿಂಗ್ ಶಾಪ್ ಇರಲ್ವಲ್ಲಾ ಅದಕ್ಕೆ. 😜😜😜😜😜😜 ಸಂಸಾರ ಒಂದು ಮೋಬೈಲ್ ಗಂಡ ಸಿಮ್ ಕಾರ್ಡ್ ಹೆಂಡತಿ ಕರೆನ್ಸಿ ಮಕ್ಕಳು ಕಾಲ್ಸ್ ಗಂಡು ಮಗು ಇನ್ ಕಮಿಂಗ್ ಹೆಣ್ಣು ಮಗು ಔಟ್ ಗೋಯಿಂಗ್ ಮಕ್ಕಳು ಇಲ್ಲದಿದ್ದರೆ ಮಿಸ್ಡ್ ಕಾಲ್ಸ ಗಂಡ ಸಿಟ್ಟಾದರೆ ಲೋ ಬ್ಯಾಟರಿ ಹೆಂಡತಿ ಸಿಟ್ಟಾದರೆ ಸ್ವಿಚ್ಡ್ ಆಫ್.. 😃😃😃😃😃😃 ಹೊಟ್ಟೆ ನೋವಿನಿಂದ ಬಳಲುತ್ತಿ ರೋಗಿಯನ್ನು ಕುರಿತು ಡಾಕ್ಟರ್ ಹೇಳಿದರು ನಿಮಗೆ ಗ್ಯಾಸ್ ಇದೆಯೇ? ರೋಗಿ: ಇಲ್ಲ ಅರ್ಜಿ ಹಾಕಿದ್ದೇನೆ ಈ ತನಕ ಬಂದಿಲ್ಲ. 😜😜😜😜l
@@@@@@@@@@@@@@@@@@ 👷ಡಾಕ್ಟರ್: ಒಂದೇ ಸಲ ನಾಲ್ಕು ಹಲ್ಲು ಹೇಗೆ ಬಿದ್ದು ಹೋದವು? 🤒ರೋಗಿ: ನನ್ನ ಹೆಂಡತಿ ಮಾಡಿದ ಚಕ್ಕುಲಿ ತಿಂದು. 👷ಡಾಕ್ಟರ್: ಬೇಡ ಅನ್ನಬೇಕಿತ್ತು 🤒ರೋಗಿ: ತಿಂದಿದ್ದಕ್ಕೆ ಒಂದು ಹೋಯಿತು, ಬೇಡ ಅಂದಿದ್ದಕ್ಕೆ ಮತ್ತೆ.ಮೂರು ಹೋಯಿತು!!!!😄 : *ಗುಂಡ :* ಈ ನಾಯಿ ರೇಟು ಎಷ್ಟು ? *ಅಂಗಡಿಯವನು :* ಎರಡು ನೂರು ರೂಪಾಯಿ. *ಗುಂಡ :* ಇದು ಅಷ್ಟು ನಂಬಿಗಸ್ಥ ಪ್ರಾಣಿಯೆ? *ಅಂಗಡಿಯವನು :* ಹೌದು, ಇದನ್ನು ಹತ್ತು ಸಲ ಮಾರಿದ್ದೀನಿ. ಆದರೂ ಅದು ನನ್ನ ಹತ್ತಿರಾನೇ ಬರುತ್ತೆ! : ಟೀಚರ್ :ನಿನ್ನ ತಂದೆ ವಯಸ್ಸು ಎಸ್ಟು ಗುಂಡ:ನನ್ನಷ್ಟೇ ವಯಸ್ಸು ಸಾರ್ ಟೀಚರ್ :ಹೇಗೆ ಗುಂಡ :ನಾನು ಹುಟ್ಟಿದ ಮೇಲೆ ಅವರು ತಂದೆ ಆಗಿದ್ದು .. : ಗುಂಡ: 2012ರಲ್ಲಿ ಪ್ರಳಯ ಆಗುತ್ತೆ ಅಂತಾ ನನ್ನ ಫ್ರೆಂಡ್ 2011ರಲ್ಲೇ ಮದುವೆ ಮಾಡ್ಕೊಂಡಾ ತಿಮ್ಮ: ಆಮೇಲೆ ಏನಾಯಿತು? ಗುಂಡ: ಈಗ ಪ್ರಳಯ ಯಾವಾಗ ಆಗುತ್ತೆ ಅಂತಾ ಕಾಯ್ತಾ ಇದ್ದಾನೆ. - 😬😬😬😬😬😬😬😬😬 : "ನಿನ್ನೆ ರಾತ್ರಿ ಮಲಗಿದ್ದಾಗ ಕಾಲಿನ ಬಳಿ ತೆವಳುತ್ತಿದ್ದ ಹಾವಿನ ಬಾಲ ಹಿಡಿದು ನೆಲಕ್ಕೆ ಬಡಿದೆ" ✌ ✌ಲೈಟ್ ಹಾಕಿ💡ನೋಡಿದಾಗ ಮೊಬೈಲ್ ಚಾರ್ಜರ್ ಎರಡು ತು೦ಡು 😬😬 : ಗುಂಡ: ಕಪ್ಪೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತದೆ ಎಂದು ಎರಡು ಕಪ್ಪೆಗಳಿಗೆ ಮದುವೆ ಮಾಡಿಸಿದೆವು ಆದರೆ ಈಗ ಮಳೆ ಜಾಸ್ತಿಯಾಗಿದೆ ಅಲ್ಲ ಏನು ಮಾಡುವುದು? ಹನುಮ: ಕಪ್ಪೆಗಳಿಗೆ ಡೈವರ್ಸ್ ಕೊಡಿಸಬೇಕು.
😬😆😁😆😬😬😁😬😬😬 ತಂದೆ: ಸ್ವಾಮಿ ನನ್ನ ಮಗಳು ರಸ್ತೆಯಲ್ಲಿ ಹೋಗುವಾಗ ತಲೆ ತಗ್ಗಿಸಿ ಹೋಗುವ ಹಾಗೆ ಏನಾದರೂ ಮಾರ್ಗ ಹೇಳಿ ಸ್ವಾಮಿ. ಸ್ವಾಮಿ: ನಿನ್ನ ಮಗಳಿಗೆ ದಿನಕ್ಕೆ 500 ಎಸ್.ಎಂ.ಎಸ್. ಪ್ರೀ ಇರುವ ಸಿಮ್ ಕಾರ್ಡ್ ಕೋಡಿಸು. ತಲೆ ತಗ್ಗಿಸಿ ನಡೆಯುತ್ತಾಳೆ 😬😬😆😬😆😬😆😆😬😆 : ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ ವಾಹ್.ವಾಹ್. ದೊರದಿ0ದ ನೊಡಿದರೆ ಅವಳ ವಯಸ್ಸು ಕಮ್ಮಿ . ಸಮಿಪ ಹೊಗಿ ನೊಡಿದಾಗ ಗೊತ್ತಾಯಿತು ಅವಳು ಮುರು ಮಕ್ಕಳ ಮಮ್ಮಿ .😝😝😝 ವಾಹ್ ವ್ಹಾ . 😁😬😂😃😄😅😆 ಸ್ವಿಟ್ ಹಾರ್ಟ... ಹುಡುಗಿ: ಒಂದು ಕವನ ಹೇಳು ಪ್ಲೀಜ್... ಹುಡುಗ: ನಿನ್ನ ನೋಡಿದಾಗ ನಾ ನನ್ನ ಮರತೆ... ಹುಡುಗಿ: ವಾಹ್, ಸೂಪರ್.. ಆಮೇಲೆ? ಹುಡುಗ: ನಿನ್ನ ತಂಗಿಯನ್ನ ನೋಡಿದ್ಮೇಲೆ ನಿನ್ನನ್ನೇ ಮರೆತೆ... 😂😃😊😐😊😃😂 ಯಾವಳೋ ಗರ್ಭಿಣಿಗೆ ಅವರಮ್ಮ ಹೇಳಿದಳಂತೆ....ವಿಮಲ್ ಪಾನ್ ಮಸಾಲಾ ತಿನ್ನು..ಅದರ ಕಣಕಣದಲ್ಲೂ ಕೇಸರಿಯ ಶಕ್ತಿಯಿದೆ ಅಂತ..!! ಅದನ್ನ ಅವಳು Facebook ಲಿ ಹಾಕಿ ಸಲಹೆ ಕೇಳಿದ್ದಳು..ತಿನ್ ಬಹುದಾ ಅಂತ! ಅದಕ್ಕೆ ಒಬ್ಬ ಸಲಹೆ ಕೊಟ್ಡಿದ್ದ...ನಿಮ್ಮಮ್ಮಂಗೆ ಅಂಬುಜಾ ಸಿಮೆಂಟ್ ತಿನ್ನೋಕೆ ಹೇಳು strong ಆಗ್ತಾಳೆ ಅಂತ! 😜 ಪತ್ನಿ ಗಂಡನ ಮೇಲೆ ಸಿಟ್ಟಾಗಿ ತವರಿಗೆ ಹೋಗಿರ್ತಾಳೆ . ಪತಿ ಪೋನ್ ಮಾಡ್ತಾನೆ ಮಾವ ರಿಸಿವ್ ಮಾಡ್ತಾನೆ. ಮಾವ: ನಿನಗ್ ಎಷ್ಟ್ ಸಲ ಹೆಳೋದು "ಅವಳು ಬರೊಲ್ಲ " ಅಂತ , ಪದೆ ಪದೆ ಯಾಕ್ ಫೋನ್ ಮಾಡ್ತಿಯಾ. ಪತಿ:- ಏನಿಲ್ಲಾ ಕೆಳೋದಕ್ಕೇ ಖುಷಿ ಅನ್ಸುತ್ತೆ. 😂😂😂😂😂😂😂 ಶಾಲೆಯಲ್ಲಿ ನಡೆದ ಸಂಭಾಷಣೆ ಟೀಚರ್: ಗುಂಡ, ಗೋಲ್ ಗುಂಬಜ್ ಎಲ್ಲಿದೆ? ಗುಂಡ: ಬಿಜಾಪುರದಲ್ಲಿ ಇದೆ. ಟೀಚರ್: ಗೋಲ್ ಗುಂಬಜ್ ನ ವಿಶೇಷತೆ ಏನು? ಗುಂಡ: ಅದರಲ್ಲಿ ಒಂದು ಸಾರಿ ಹೇಳಿದರೆ, 7 ಬಾರಿ ಕೇಳುತ್ತೆ.. ಟೀಚರ್: ಗೋಲ್ ಗುಂಬಜ್ ನ ಬಿಜಾಪುರದಲ್ಲೇ ಏಕೆ ಕಟ್ಟಿಸಿದ್ದಾರೆ? ಗುಂಡ: ಸಾರ್, ಬಿಜಾಪುರದ ಜನಕ್ಕೆ ಒಂದು ಸಾರಿ ಹೇಳಿದರೆ ಅರ್ಥ ಆಗೋದಿಲ್ಲ ಸಾರ್.. ಅದಕ್ಕೆ. 😝😝😂😂😂🙆😃😃😝😝😝 ಅಪ್ಪ:ಲೋ...ಮಗನೇ ಯಾರಿಗೂ ಹೆದರಬೇಡ. ನೀನು ಸಿಂಹದಮರಿ ಕಣೋ....!!!! ಮಗ:ಹೌದಪ್ಪಾ,ಟೀಚರ್ ಹಾಗೇ ಹೇಳ್ತಾರೆ, ನೀನು ಯಾವುದೋ ಪ್ರಾಣಿಗೆ ಹುಟ್ಟಿರಬೇಕು..ಅಂತ...!!!
🙊😂😂😝😝😁😁😜 ಫೋನ್ ಮೇಲೆ ಸಂಭಾಷಣೆ ಹುಡುಗ: whatsap Download ಮಾಡಿಕೊ...? . . ಹುಡುಗಿ: ಹ್ಯಾಂಗ್ ಮಾಡಬೇಕು?? . . ಹುಡುಗ: play store ನಲ್ಲಿ ಹೋಗಿ ಅಲ್ಲಿಂದ ಮಾಡು.. . . ಹುಡುಗಿ: ನಮ್ ಗಲ್ಲಿಯಲ್ಲಿ play store ಇಲ್ಲ...ಬಸಪ್ಪನ ಜನರಲ್ ಸ್ಟೊರ್ ಆದಾ ಅಲ್ಲಿಂದ ಮಾಡ್ಲಾ....?? . ಹುಡುಗ : ಹೋಗ್ಲಿ ಬಿಡು ನೀನು ಪಾತ್ರೆ ತೊಳಿ... 😂😂😂😜😜😝 @@@@@@@@@@@@@@@@@@ ಖರೇನ..... ಭಾರತ ಬದಲಾಗೇತಿ. ಅವನವ್ನ... ಹಿತ್ತಲದಾಗ ಕಸ ಸುಟ್ರು 'ಎಷ್ಟ ಸುಟ್ರಿ'?💴 ಅಂತ ಮಂದಿ ಕೇಳಾಕತ್ತೆತಿ. @@@@@@@@@@@@@@@@@ ಇದೀಗ ಬಂದ ಸುದ್ದಿ..... ಬ್ಯಾಂಕ್ ಗೆ ಬಂದವರ ಬೆರಳಿಗೆ ಹಚ್ಚುತ್ತಿರುವ ಶಾಹಿ ಗುರುತು ಅಳಿಸಿ ಹೋಗುತ್ತಿರುವುದರಿಂದ.....ಬ್ಯಾಂಕಿಗೆ ಬರುವವರೆಲ್ಲರಿಗೆ "ಬರೆ ಎಳೆಯಲು " ತೀರ್ಮಾನಿಸಲಾಗಿದೆ. @@@@@@@@@@@@@@@@@@@@ ಕಷ್ಟಪಟ್ಟು ಒಬ್ಬ ಕಳ್ಳ ಗೋಡೆ ಹಾರಿ ಬಾಲ್ಕನಿ ಹತ್ತಿ ಟೇರೆಸ್ ಬೀಗ ಒಡೆದು ಮನೆ ಒಳಗೆ ನುಗ್ಗಿದ ಮನೆಯಲ್ಲಿ ಇರುವ ಜನರೆಲ್ಲ ಗಾಢ ನಿದ್ರೆಯಲ್ಲಿದ್ದರು ಇವನು ಒಬ್ಬೊಬ್ಬರ ಹತ್ತಿರ ಹೋಗಿ Chloroform kerchief ನ ಮೂಗಿಗೆ ಇಟ್ಟು ಅವರೆಲ್ಲ ಏಳದಂತೆ ಮಾಡಿದ ನಂತರ ತಿಜೋರಿ ಬಾಗಿಲು ಒಡೆದು ನೋಡಿದರೆ ಬರೀ 500 ಮತ್ತು 1000 ನೋಟುಗಳು ಕಳ್ಳನಿಗೆ ತುಂಬ ಕೋಪ ಬಂತು ಮಲಗಿದ್ದ ಎಲ್ಲರ ಬಳಿ ಬಂದು ಅವರ ಬೆರಳಿಗೆ ಇಂಕ್ ಮಾರ್ಕ್ ಹಚ್ಚಿ ಹೊರನಡೆದ...😂😂😂😂 @@@@@@@@@@@@@@@ ಸುಮ್ಮನೆ ನಕ್ಕುಬಿಡಿ... 😄 😄 ಗುರುವು ಶಿಷ್ಯನಿಗೆ ಕೇಳಿದ್ದು "ಪಾರ್ವತಿಯು ಶಿವನನ್ನು ಪತಿಯಾಗಿ ಯಾಕೆ ಆಯ್ಕೆ ಮಾಡಿಕೊಂಡಿದ್ದು? ಕಾರಣ ಸಹಿತವಾಗಿ ಹೇಳು?" ಎಂದು ಒಮ್ಮೆ ಕೇಳಿದರು. ಶಿಷ್ಯ 5 ಕಾರಣ ಕೊಟ್ಟು ಉತ್ತರಿಸಿದನು. 1 - ಶಿವನು ಬಟ್ಟೆ ತೊಡುವುದಿಲ್ಲ. ಆತ ದಿಗಂಬರ. ಬಟ್ಟೆಗಳನ್ನು ಒಗೆಯುವ ಕಷ್ಟ ಇರುವುದಿಲ್ಲ. 2 - ಹಣೆಯಲ್ಲಿ ಚಂದ್ರ ಇರುವುದರಿಂದ ಕರೆಂಟ್ ಹೋಗುವ ಕಷ್ಟ ಇರುವುದಿಲ್ಲ ಜೊತೆಗೆ ಬಿಲ್ ಕಟ್ಟಬೇಕಿಲ್ಲ. 3 - ಜಟೆಯಲ್ಲಿ ಸದಾ ಗಂಗೆ ಇರುವುದರಿಂದ ನೀರಿನ ಸಮಸ್ಯೆ ಇರುವುದಿಲ್ಲ. 4 - ಶಿವನು ಆಹಾರಕ್ಕಾಗಿ ಕಂದ ಮೂಲಗಳನ್ನು ತಿನ್ನುವ ಕಾರಣದಿಂದ ಅಡುಗೆ ಮಾಡಬೇಕಿಲ್ಲ. 5 - ಅತ್ತೆ ಮಾವ ಇಬ್ಬರೂ ಇಲ್ಲ, ಆದ್ದರಿಂದ ಗಲಾಟೆ ಇಲ್ಲವೇ ಇಲ್ಲ. ಹೀಗೆ ಉತ್ತರಿಸಲು, ಗುರುಗಳು ಶಿಷ್ಯನ ಕಾಲುಗಳನ್ನು ಹಿಡಿದು "ನನ್ನನ್ನು ನಿನ್ನ ಶಿಷ್ಯನನ್ನಾಗಿ ಮಾಡಿಕೋ ಹೇ ಬ್ರಹ್ಮಜ್ಞಾನಿ!" ಎಂದರು.😀😜😀 @@@@@@@@@@@@@@@@@ ಮದ್ವಿ ಸಲುವಾಗಿ ಎರಡೂವರಿ ಲಕ್ಷ ವಿಡ್ರಾ ಮಾಡಬಹುದು ಅಂತ ಸರಕಾರ ರೂಲ್ ಮಾಡಿದ ಕೂಡಲೇ ಧಾರವಾಡದ ಗುಂಡ್ಯಾ ಬ್ಯಾಂಕಿಗೆ ಓಡಿದ!! ಗುಂಡ್ಯಾ: ಎರಡೂವರಿ ಲಕ್ಷ ಕೊಡ್ರಿ! ಮ್ಯಾನೇಜರು: ಯಾಕಪ್ಪ? ಯಾರ ಲಗ್ನ ಐತಿ? ಗುಂಡ್ಯಾ: ತುಳಸಿ ಲಗ್ನ ರೀ ಸರ! ಎಚ್ಚರಾ ತಪ್ಪಿ ಬಿದ್ದ ಮ್ಯಾನೇಜರಪ್ಪ ಇನ್ನೂ ಎದ್ದಿಲ್ಲ!!
😂😂😂😂😂😂😂😂 @@@@@@@@@@@@@@@
ಡಾಕ್ಟರ್ - ಹುಂ.. ಏನ್ ತಿಂಡಿ ತಿಂದಿದ್ಯವ್ವಾ?
ಹುಡ್ಗಿ- ಐ ಈಟ್ ಹಂಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ & ಕಾರ್ನ್ ಪಿಜ್ಜಾ..
ಡಾಕ್ಟರ್- ಇದು ಫೇಸ್'ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?
ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ.. 😂😂😂😂
ಹಾಸ್ಯ
ಡಾಕ್ಟರ್ : ನಮ್ಮ ಆಸ್ಪತ್ರೆಯ ಪ್ರಚಾರಕ್ಕಾಗಿ ಒಂದು ಒಳ್ಳೆಯ ಪಂಚ್ ಡೈಲಾಗ್ ಹೇಳಿ..
ಗುಂಡ : " ಕರ್ಕೊಂಡ್ ಬನ್ನಿ, ಹೊತ್ಕಂಡ್ ಹೋಗಿ, ಹಣ ನಮಗೆ, ಹೆಣ ನಿಮಗೆ " 😂😂😂😂😂
ಮಾಸ್ತರ: ರಾಮ್ಯಾ, ಹೇಳಲೇ ತತ್ತಿ ಮೊದಲ ಬಂತೋ ಏನ್ ಕೋಳಿ 🐓ಮೊದಲ ಬಂತೋ..?
ರಾಮ್ಯಾ: ಸರ್ ತತ್ತಿ ಬಂತ್ರಿ..
ಮಂಜ್ಯಾ: ಸರ ಅವಂಗ ಗೊತ್ತಿಲ್ಲರೀ, ಅಂವಾ ಅಭ್ಯಾಸ ಮಾಡಿಲ್ಲರಿ, ನಾ ಹೇಳಲೆನ್ರಿ..?
ಮಾಸ್ತರ: ಹೇಳಪಾ, ನೀನ ಹೇಳ.
ಮಂಜ್ಯಾ: ಸರ ಮೊದಲ ಬೀರ್ 🍾ಬಂತರಿ, ಆಮೇಲೆ ಶೇಂಗಾ ಬಂತರಿ, ಆಮೇಲೆ ತತ್ತಿ ಬಂತರಿ, ಆಮೇಲೆ ಕೋಳಿ ಬಂತರಿ ಲಾಸ್ಟಗೆ 850/- ಬಿಲ್ಲ್ ಬಂತರಿ ಸರಾ.. 😀😄😜😜😂😂😂
ಟೀಚೆರ್ : ಗುಂಡ " ಗಂಡ ಬೇರುಂಡ " ಎಂದರೆ ಏನು ? ವಿವರಿಸು ? ಗುಂಡ : ಅದು ತುಂಬಾ ಸುಲುಭ ಮೇಡಂ . ಹೆಂಡತಿ ಯಿಂದ ದೂರ ಕುಳಿತು ಒಬ್ಬನೇ ಊಟ ಮಾಡುವ ಗಂಡ.
: ಒಬ್ಬ ಹೆಂಗಸು 1 ಗಂಟೆಯಲ್ಲಿ 50 ಚಪಾತಿ ಮಾಡಿದರೆ, ಮೂವರು ಹೆಂಗಸರು 1 ಗಂಟೆಯಲ್ಲಿ ಎಷ್ಟು ಚಪಾತಿ ಮಾಡುತ್ತಾರೆ.?
ಗುಂಡ : ಹೆಚ್ಚಂದ್ರೆ ಹತ್ತಿಪ್ಪತ್ತು ಮಾಡ್ಬಹುದೇನೋ ಟೀಚರ್.
ಟೀಚರ್ : ಅದು ಯಾಕೋ ಹಾಗ್ ಹೇಳ್ತಿದ್ದಿಯಾ?
ಗುಂಡು : ಮತ್ತೇನ್ ಮೇಡಂ? ಮೂವರು ಹೆಂಗ್ಸ್ರು ಸೇರಿದ್ರೆ ಹರಟೆ ಹೊಡೆಯೋಕೇ ಟೈಮ್ ಸಾಲಲ್ಲ ಅವ್ರಿಗೆ. ಇನ್ನು ಚಪಾತಿ ಬೇರೆ ಮಾಡ್ತಾರಾ..!!?
😂😂😂😂😂😂😂😂
ಅಪ್ಪ ಅಮ್ಮ ಪ್ರೀತಿಯಿಂದ ಮಗನಿಗೆ ಕಾರ್ ಕೊಡ್ಸಿದ್ರೆ "ತಂದೆ-ತಾಯಿಯ ಆಶೀರ್ವಾದ" ಅಂತ ಕಾರ್ ಹಿಂದೆ ಬರ್ಸಿರ್ತಾರೆ...
ಅದೇ ತಂದೆ ತಾಯಿಯರಿಗೆ 'ಮಗ' ಕಾರ್ ಕೊಡ್ಸಿದ್ರೆ ಹೀಗೆ ಬರೆಸಬಹುದೇ? . . . . . . . . . . ನನ್ನ ಮಗಂದ್!!!!! 😂
@@@@@@@@@@
ನಮ್ಮ ಕುಟುಂಬವೇ ಒಂದು ಅಕ್ಷರ ಮಾಲೆ ಮಗಳು ಹ್ರಸ್ವ ಮಗ ಧೀರ್ಘ ಅತ್ತೆ ಮಾವ ಒಮ್ಮೆ ತತ್ಸಮ ಮತ್ತೊಮ್ಮೆ ತದ್ಭವ ಅಜ್ಜ ಅಜ್ಜಿ ಹಳಗನ್ನಡ ಅತ್ತೆ ಸೊಸೆ ವಿರುದ್ದ ಪದಗಳು ವಾರಗಿತ್ತಿಯರೋ ಆಗಾಗ ಜೋಡಿಪದ ಆಗಾಗ ಆಲಾಪ ಮಾವನೋ... ಸಂಜ್ಙಾಸೂಚಕ ಬಂಧುಗಳೋ ತಕ್ಷಣಕ್ಕೆ ಅರ್ಥವಾಗದ ವ್ಯಾಕರಣ ಇವೆಲ್ಲದರ ಮದ್ಯೆ ನಾನು... ಅಲ್ಪಪ್ರಾಣ ನನ್ನವಳು... ಮಹಾಪ್ರಾಣ
@@@@@@@@@@
ಡುಂಡಿರಾಜರ ಹನಿಗವನ ಮಳೆ!!! 😃😃⛈🌧
😀😀ಬ್ಯಾಂಕಿನಲ್ಲಿ 😀😀 ಕ್ಯಾಶ್ ಕೌಂಟರಿನ ಚೆಲುವೆಯ ಸೌಂದರ್ಯದತ್ತ ಹರಿದು ನೋಟ, ಗಮನಿಸಲಿಲ್ಲ ಅವಳು ಕೊಟ್ಟ ಹರಿದ ನೋಟ! 😂😂😂😂
ಭಟ್ಟ್ರು : ಸುಮಾರೊರ್ಷ ಆಯ್ತಲ್ಲಾ ನಿನ್ ಮದ್ವೆಯಾಗಿ? ಎಷ್ಟ್ ಜನ ಮಕ್ಕ್ಳು?
ಸುಮತಿ : ನಾಲ್ಕೊರ್ಷ ಆಯ್ತ್ ನೋಡಿ. ಇನ್ನೂ ಮಕ್ಕ್ಳ್ ಆಗಿಲ್ಲ ಭಟ್ಟ್ರೆ. ಅದೇ ದೊಡ್ಡ ಚಿಂತೆ ನಮ್ಗೆ.😔
ಭಟ್ಟ್ರು : ಬೇಜಾರ್ ಮಾಡ್ಕೋಬೇಡ. ಮುಂದಿನ್ ವಾರ ನಂಗೆ ತಿರುಪತಿಗ್ ಹೋಗ್ಲಿಕ್ಕುಂಟು. ನಿನ್ ಹೆಸ್ರಲ್ಲಿ ದೀಪ ಹಚ್ಚಿ ಬರ್ತೇನೆ. ಎಲ್ಲಾ ಸರಿಯಾಗುತ್ತೆ.
(ಅದಾದ ಐದಾರು ವರ್ಷಗಳ ನಂತರ ಪುನಃ ಇಬ್ಬರ ಭೇಟಿ ಆಯ್ತು.)
ಭಟ್ಟ್ರು : ಸುಮತಿ ಅಲ್ವಾ? ಹೇಗಿದ್ದೀಯಮ್ಮಾ? ಎಷ್ಟ್ ಜನ ಮಕ್ಕ್ಳು ನಿಂಗೆ?
ಸುಮತಿ : ಎರ್ಡ್ ಸಲ ಅವ್ಳಿ-ಜವ್ಳಿ, ಒಂದ್ ಸಲ ತ್ರಿವಳಿ, ಮತ್ತ್ ಎರ್ಡ್ ಸಲ ಒಂದೊಂದು.. ಒಟ್ಟಿಗೆ ಒಂಬತ್ತ್ ಮಕ್ಕ್ಳ್ ಭಟ್ಟ್ರೆ.
ಭಟ್ಟ್ರು : ನೋಡಿದ್ದ್ಯಾ. ? ನಾ ಹೇಳ್ಲಿಲ್ವಾ - ಆ ತಿಮ್ಮಪ್ಪ ಕಣ್ಣ್ ಬಿಟ್ಟ್ರೆ ಎಲ್ಲಾ ಸರಿ ಆಗುತ್ತೆ ಅಂತ. ಅದ್ಸರಿ. ನಿನ್ ಗಂಡ ಎಲ್ಲಿ?
ಸುಮತಿ : ಅವ್ರಾ.? ತಿರುಪತಿಗೆ ಹೋಗಿದ್ದಾರೆ ಭಟ್ಟ್ರೆ.
ಭಟ್ಟ್ರು : ಅದೇನು.!?
ಸುಮತಿ : ನೀವ್ ಅಲ್ಲಿ ದೀಪ ಹಚ್ಚಿ ಬಂದಿದ್ದೀರಲ್ವಾ, ಅದ್ನ ಆರ್ಸೋಕ್ ಹೋಗಿದ್ದಾರೆ.
.😃😜😝😂😂
ಹುಡುಗ: ಮಸ್ತ ಡ್ರೆಸ್ ಹಾಕಿ ಅಲಾ ಹುಡುಗಿ: ಥ್ಯಾಂಕ್ಸ್ ಹುಡುಗ: ಲಿಫ್ಟಿಕ್ ಅಂತೂ ಬಾರಿ ಐತಿ ಹುಡುಗಿ: ಥ್ಯಾಂಕ್ಸ್ ಹುಡುಗ: ಮೇಕಪ್ ಅಂತು ಖತರನಾಕ ಹುಡುಗಿ: ಥ್ಯಾಂಕ್ಸ್ *ಅಣ್ಣಾ* ಹುಡುಗ: ಆದರೂ ಎನ್ ಬಿಡವಾ ಚಂದ ಕಾಣವಲ್ಲಿ.
😂😂😂😂😂😂
ಒಬ್ಬ ಇನ್ನೊಬ್ಬನಿಗೆ ಹೇಳುತ್ತಾನೆ ಏನು ಹೇಳಲಿ ಗೆಳೆಯ ನಿನ್ನೆ ರಾತ್ರಿ ತಡವಾಗಿ ಮನೆಗೆ ಹೋಗಿದ್ದೆ, ಹೋಗಿ ಎಷ್ಟು ಬಾಗಿಲು ಬಡಿದರೂ ನನ್ನ ಹೆಂಡತಿ ಬಾಗಿಲು ತಗಿಲಿಲ್ಲ . ಮುಂಜಾನೆ ವರೇಗೂ ಹೊರಗೆ ಮಲ್ಕೋಂಡೆ!
ಇನ್ನೊಬ್ಬ - ಮತ್ತೆ ಮುಂಜಾನೆ ಎದ್ದು ನಿನ್ನ ಹೆಂಡತಿ ಗೆ ಬಯ್ಯಬೇಕಲ್ವಾ?
ಒಬ್ಬ - ಎಲ್ಲಿ ಬೈತಿಯಾ ನಾನು ರಾತ್ರಿ ಸಾರಾಯಿ ಕುಡಿದಿದ್ದೆ. ನಸೆಯಲ್ಲಿ ಗೊತ್ತಾಗಿಲ್ಲ . ಬೆಳಿಗ್ಗೆ ಎದ್ದಮೇಲೆ ಗೊತ್ತಾಯಿತು ನನ್ನ ಹೆಂಡತಿ ತವರುಮನೆಗೆ ಹೋಗಿದ್ದಾಳೆ ಮನೆ ಕೀ ನನ್ನ ಹತ್ತಿರ ನೇ ಇತ್ತು ಅಂತ. .....
@@@@@@@@@@@@
ಹೆಂಡತಿ : ಏನ್ರೀ ನೀವೂ ಇದೀರಾ.ಏನು ಪ್ರಯೋಜನ ? ಪಕ್ಕದ್ಮನೆ ಆತನ್ನ ನೋಡಿ, ಅವರ ಹೆಂಡತಿಯನ್ನ ಹೂಗಳಲ್ಲಿ ಮುಳುಗಿಸಿ ನೋಡ್ಕೊಳ್ತಾನೆ..! ಗಂಡ : ಸರಿ, ನೀನೂ ಚೆನ್ನಾಗಿ ಹೇಳ್ತೀಯ. ಆತನದು ಹುವ್ವಿನ ವ್ಯಾಪಾರ. ನಂದು ……..ಮೆಣಸಿನ ಪುಡಿ ವ್ಯಾಪಾರ. ಮುಳುಗಿಸಲಾ..??
@@@@@@@@
ಹೆಂಡತಿ: ರೀ, ಯಾಕ್ರೀ ಅವಾಗವಾಗ ನನ್ನ ಮುಖದ ಮೇಲೆ ನೀರು ಚಿಮುಕಿಸುತ್ತೀರ???
ಗಂಡ: ನಿಮ್ಮ ಅಪ್ಪ ನಿನ್ನ ಹೂವಿನ ತರ ನೋಡ್ಕೊಳಕ್ಕೆ ಹೇಳಿದರೆ ಕಣೆ... ಅದಕ್ಕೆ!! 😜😜😜
<![if !supportTabStrip]>
var c_rgszClr=new Array(8);
c_rgszClr[0]="window";
c_rgszClr[1]="buttonface";
c_rgszClr[2]="windowframe";
c_rgszClr[3]="windowtext";
c_rgszClr[4]="threedlightshadow";
c_rgszClr[5]="threedhighlight";
c_rgszClr[6]="threeddarkshadow";
c_rgszClr[7]="threedshadow";
var g_iShCur;
var g_rglTabX=new Array(c_lTabs);
function fnGetIEVer()
{
var ua=window.navigator.userAgent
var msie=ua.indexOf("MSIE")
if (msie>0 && window.navigator.platform=="Win32")
return parseInt(ua.substring(msie+5,ua.indexOf(".", msie)));
else
return 0;
}
function fnBuildFrameset()
{
var szHTML="";
with (document) {
open("text/html","replace");
write(szHTML);
close();
}
fnBuildTabStrip();
}
function fnBuildTabStrip()
{
var szHTML=
""+
"