14.10.16

Class / ಸಾಮಾನ್ಯ ಜ್ಞಾನ - 2 >>>ಸೌರವ್ಯೂಹ

@@@@@@ ಸೌರವ್ಯೂಹ :-------->
ಸೌರವ್ಯೂಹ
1. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ
ಅಥವಾ ಬ್ರಹ್ಮಾಂಡ' ಎನ್ನುವರು.
2. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ
ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು.
3. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ
ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು ಕರೆಯಲಾಗಿದೆ.
4. ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ
ಎನ್ನುವರು.
5. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್
ನೋವಾ' ಎನ್ನುವರು.
6. ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ.
7. ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ
ನಕ್ಷತ್ರ ಸಿರಿಯಸ್
8. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು.
9. ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು
ಕ್ಷಿರಪಥ ಅಥವಾ ಆಕಾಶ ಗಂಗೆ ಎನ್ನುವರು.
10. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ.
11. ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್
ಗ್ಯಾಲಾಕ್ಸಿ'
12. ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ
ಮೆಗೆಲ್ಲಾನಿಕ, ಸ್ಮಾಲ್ ಮೆಗೆಲ್ಲಾನಿಕ್ ಕ್ಲೌಡ
13. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು
'ಜ್ಯೋತಿರ್ವರ್ಷ' ಎನ್ನುವರು.
14. ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ
ಒಂದು ವರ್ಷದಲ್ಲಿ ದೂರದಲ್ಲಿ ಸಂಚರಿಸುವುದೋ ಅದನ್ನೇ
ಜ್ಯೋತಿರ್ವರ್ಷ ಎನ್ನುವರು.
15. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು
'ಅಸ್ಟ್ರನಾಮಿಕಲ್ ಯೂನಿಟ್' ಎನ್ನುವರು.
16. ಸೂರ್ಯನ ಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8
ಗ್ರಹಗಳು, ಉಪಗ್ರಹಗಳು, ಉಲ್ಕೆಗಳು, ದೂಮಕೇತುಗಳು
ಹಾಗೂ ಕ್ಷುದ್ರಗ್ರಹಗಳ ಪರಿವಾರವನ್ನು 'ಸೌರವ್ಯೂಹ' ಎಂದು
ಕರೆಯುವರು.
17. ಸೂರ್ಯನ ಶೇಕಡಾ 71 ರಷ್ಟು ಜಲಜನಕ 27 ರಷ್ಟು
ಹೀಲಿಯಂ ಹಾಗೂ ಉಳಿದ ಭಾಗವು ಇತರ ಅನಿಲಗಳಿಂದ ಕೂಡಿದೆ.
18. ಸೂರ್ಯನ ಮೇಲಿರುವ ಕಪ್ಪು ಕಲೆಗಳನ್ನು ಸೂರ್ಯ
ಕಲೆಗಳೆಂದು ಕರೆಯುವರು. ಇವುಗಳನ್ನು 1908 ರಲ್ಲಿ
ಹ್ಯಾಲೆಯು ಸಂಶೋದಿಸಿದನು.
19. ಸೂರ್ಯನ ಮದ್ಯ ಭಾಗವನ್ನು ಕೇಂದ್ರಗೋಳ, ಇದರ
ಸೂತ್ತಲೂ ವಿಕಿರಣವಲಯ ಹಾಗೂ ಪ್ರಚಲನ ವಲಯಗಳಿಂದ
ಸೂತ್ತುವರಿಯಲ್ಪಟ್ಟಿದೆ. ಹಾಗೂ ಅದರ ಸೂತ್ತಲೂ
ಬಳೆಯಾಕಾರದ ' ಪೋಟೋ ಸ್ಪಿಯರ ಎಂದು ಕರೆಯುವರು.
20. ಸೂರ್ಯನ ಮೇಲ್ಬಾಗದಲ್ಲಿರುವ ಸೌರ
ವಾಯುಮಂಡಲವನ್ನು ಕ್ರೋಮೊಸ್ಪಿಯರ ಎಂದು
ಕರೆಯುವರು.
21. ಗ್ರಹಗಳು ಸ್ವಯಂ ಪ್ರಕಾಶಮಾನವಲ್ಲ ಅವುಗಳು
ಸೂರ್ಯನ ಪ್ರಕಾಶವನ್ನು ಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ
ಸೂರ್ಯನ ಸೂತ್ತ ಅಂಡಾಕಾರದ ಪಥದಲ್ಲಿ ಗಡಿಯಾರದ ವಿರುದ್ದ
ದಿಕ್ಕಿಗೆ ಚಲಿಸುತ್ತವೆ.
22. ಶುಕ್ರ ಮತ್ತು ಯೂರೇನೆಸ್ ಗ್ರಹಗಳು ಮಾತ್ರ ಇತರ ಗ್ರಹಗಳ
ದಿಕ್ಕಿನಿಲ್ಲ ಚಲಿಸುತ್ತವೆ. ಗಡಿಯಾರದ ಚಲನೆಗೆ ಅನುಗುಣವಾಗಿ.
23. ಸೂರ್ಯನ ಸೂತ್ತಲೂ 8 ಗ್ರಹಗಳು ಸೂತ್ತುತ್ತವೆ. ಅವೆಂದರೆ
ಬುಧ, ಶುಕ್ರ, ಭೂಮಿ, ಮಂಗಳ, ಗುರು, ಶನಿ, ಯುರೇನಸ್ ಮತ್ತು
ನೆಪ್ಚೂನ್.
24. ಅಗಸ್ಟ 24 2006 ರಲ್ಲಿ ನಡೆದ ಅಂತರರಾಷ್ಟ್ರಿಯ ಖಗೋಳ
ವಿಜ್ಞಾನಿಗಳ ಸಮ್ಮೇಳನದಲ್ಲಿ ಪ್ಲೋಟೋ ಗ್ರಹವನ್ನು
ಗ್ರಹವಲ್ಲ ಎಂದು ತಿಮರ್ಾನಿಸಲಾಯಿತು.
25. ಬುಧ ಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ.
ಇದು ಅತೀ ಹೆಚ್ಚು ಉಷ್ಣಾಂಶದಿಂದ ಕೂಡಿದೆ.
26. ಶುಕ್ರಗ್ರಹವು ಅತ್ಯಂತ ನಿಧಾನವಾಗಿ ತನ್ನ ಅಕ್ಷದ ಸೂತ್ತ
ಸುತ್ತುತ್ತದೆ.
27. ಗುರು ಗ್ರಹವು ಅತೀ ದೊಡ್ಡದಾದ ಗ್ರಹ. ಇದು ಅತೀ
ವೇಗವಾದ ಅಕ್ಷಭ್ರಮಣವನ್ನು ಹೊಂದಿದೆ. ಇದರ ಒಂದು ದಿನ 9
ಗಂಟೆ 50 ನಿಮಿಷ ಮಾತ್ರ .
28. ಶನಿ ಗ್ರಹವು ತನ್ನ ಸೂತ್ತ ಸುಂದರವಾದ ಬಳೆಗಳನ್ನು
ಹೊಂದಿದೆ.
29. ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು
ಆಂತರಿಕ ಗ್ರಹಗಳು ಅಥವಾ ಶಿಲಾಗ್ರಹಗಳು ಎಂದು ಕರೆಯುವರು.
ಇವುಗಳ ಸಾಂದ್ರತೆ ಅತಿ ಹೆಚ್ಚು.
30. ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ ಗ್ರಹಗಳನ್ನು
ಬಾಹ್ಯ ಗ್ರಹಗಳು ಅಥವಾ ಜೋವಿಯಾನ್ ಗ್ರಹಗಳೆಂದೂ
ಕರೆಯುವರು. ಇವುಗಳ ಸಾಂದ್ರತೆ ಅತೀ ಕಡಿಮೆ.
31. ಪ್ಲೋಟೊ ಗ್ರಹವನ್ನು ಕುಬ್ಜ ಗ್ರಹವೆಂದು
ಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ ಹಾಗೂ ಸೀರಿಸ್.
32. ಬುಧ ಗ್ರಹದ ಪರಿಭ್ರಮಣ ಅವಧಿಯು ಎಲ್ಲಾ ಗ್ರಹಗಳಿಗಿಂ ಕಡಿಮೆ
88 ದಿನಗಳು.
33. ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ನಕ್ಷತ್ರದಂತೆ
ಪ್ರಜ್ವಲಿಸುತ್ತದೆ. ಇದನ್ನು ಮುಂಜಾನೆಯ ನಕ್ಷತ್ರ, ಬೆಳ್ಳಿ ಚುಕ್ಕಿ
ಎಂತಲೂ ಕರೆಯುವರು. ಇದರ ಅಕ್ಷ ಭ್ರಮಣದ ಅವಧಿಯು
ಪರಿಭ್ರಮಣ ಅವಧಿಗಿಂತ ಹೆಚ್ಚು.
34. ಭೂಮಿಯ ಏಕೈಕ ನೈಸಗರ್ಿಕ ಉಪಗ್ರಹ ಚಂದ್ರ.
35. ಮಂಗಳ ಗ್ರಹವನ್ನು 'ಕೆಂಪು ಗ್ರಹ' ಕುಜ ಅಥವಾ
ಅಂಗಾರಕವೆಂತಲೂ ಕರೆಯುವರು.
36. ಮಂಗಳ ಗ್ರಹವು ಪೊಬೊಸ್ ಮತ್ತು ಡಿಮೋಸ್ ಎಂಬ
ಎರಡು ಚಿಕ್ಕ ಉಪ ಗ್ರಹಗಳನ್ನು ಹೊಂದಿದೆ.
37. ಭಾರತವು ಮಂಗಳ ಗ್ರಹವನ್ನು ಶೋಧಿಸುವ
ಉಪಗ್ರಹವನ್ನು ನವಂಬರ 5, 2013 ರಲ್ಲಿ ಉಡಾಯಿಸಿ (ಮಾರ್ಸ
ಅಬರ್ಿಟರ್) ಉಡಾಯಿಸಿದ್ದು. ಬಾರತವು ಅಮೇರಿಕಾ, ರಷ್ಯಾ
ಮತ್ತು ಯೂರೋಪಗಳ ಒಕ್ಕೂಟದ ನಂತರ ನಾಲ್ಕನೆಯದಾಗಿದೆ.
38. ಗುರು ಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತ
ದೊಡ್ಡದು. ಇದನ್ನು ಮತ್ತು ಇದರ ಉಪ ಗ್ರಹಗಳನ್ನು
ಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು.
39. ಗುರು ಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚು ಉಪ
ಗ್ರಹಗಳನ್ನು ಹೊಂದಿದೆ, (ಗುರು-60, ಶನಿ-50, ಯೂರೇನೆಸ್-25)
40. ಗುರು ಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕು
ಉಪಗ್ರಹಗಳು- ಐಓ,ಯೂರೋಪ್,ಗ್ಯಾನಿಮೇಡ ಮತ್ತು
ಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋ ಗುರುತಿಸಿದ್ದರಿಂದ
ಇವುಗಳನ್ನು ಗ್ಯಾಲಿಲಿಯನ್ ಉಪಗ್ರಹಗಳು ಎನ್ನುವರು.
41. ಗ್ಯಾನಿಮೇಡ ಉಪಗ್ರಹವು ಸೌರ್ಯವ್ಯೂಹದ ಉಪ
ಗ್ರಹಗಳಲ್ಲಿ ಅತೀ ದೊಡ್ಡದು. ಐಓ ಉಪಗ್ರಹವು ಸೌರವ್ಯೂಹದ
ಗ್ರಹ ಹಾಗೂ ಉಪಗ್ರಹಗಳಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು
ಹೊಂದಿದೆ.
42. ಶನಿ ಗ್ರಹವು ಎರಡನೇ ದೊಡ್ಡ ಗ್ರಹ ಹಾಗೂ ಅತ್ಯಂತ
ಸುಂದರವಾದ ಗ್ರಹ. ಇದರ ಸೂತ್ತಲೂ ಮೂರು ಬಳೆಗಳಿವೆ. ಶನಿ
ಗ್ರಹದ ಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್,
ಡಿಯೋನ್, ಮತ್ತು ರಿಯಾ.
43. ಯುರೆನೇಸ್ ಗ್ರಹವು ಗಾಡ ನೀಲಿ ಬಣ್ಣವನ್ನು
ಹೊಂದಿರುವುದು ಇದರ ವಾಯುಮಂಡಲದಲ್ಲಿ ಮಿಥೇನ
ಅನಿಲವು ಅಧಿಕವಾಗಿರುವುದರಿಂದ ಈ ಬಣ್ಣಕ್ಕೆ ಮೂಲ
ಕಾರಣವಾಗಿದೆ. ಯುರೆನೇಸ್ ಗ್ರಹದ ಎಲ್ಲಾ ಉಪಗ್ರಹಗಳಿಗೆ  ಷೇಕ್ಸ್
ಪಿಯರನ ನಾಟಕದ ಪಾತ್ರಧಾರಿಗಳ ಹೆಸರನ್ನು ನೀಡಲಾಗಿದೆ.
44. ಬುಧ ಮತ್ತು ಶುಕ್ರ ಗ್ರಹಗಳು ಯಾವುದೇ
ಉಪಗ್ರಹಗಳನ್ನು ಹೊಂದಿರುವುದಿಲ್ಲ.
45. ಸೌರವ್ಯೂಹದ ಉಪಗ್ರಹಗಳಲ್ಲಿ ಗುರು ಗ್ರಹದ ಗ್ಯಾನಿಮೇಡ್
ಅತಿ ದೊಡ್ಡದು. ಶನಿ ಗ್ರಹದ ಇಯಾಪಿಟಸ್ ಅತೀ ಚಿಕ್ಕದು.
46. ಆಕಾಶದಿಂದ ರಾತ್ರಿ ವೇಳೆಯಲ್ಲಿ ವಾಯುಮಂಡಲದ ಮೂಲಕ
ಭೂಮಿಯ ಕಡೆಗೆ ಪ್ರಜ್ವಲಿಸುತ್ತಾ ಬೀಳುವ ತುಣುಕು
ವಸ್ತುಗಳಿಗೆ 'ಉಲ್ಕೆಗಳು' ಎಂದು ಕರೆಯುವರು.
47. ಉಲ್ಕೆಗಳು ಪೂರ್ಣವಾಗಿ ಉರಿದು ಹೋಗದೆ ಅವುಗಳ
ಭೂಮಿಯ ಮೇಲೆ ಬೀಳುತ್ತವೆ ಅವುಗಳನ್ನು ಉಲ್ಕಾಶಿಲೆಗಳು
ಎನ್ನುವರು. ಭೂಮಿಗೆ ತಲುಪಿರುವ ಉಲ್ಕಾಶಿಲೆಗಳಲ್ಲಿ
ನಮೀಬಿಯಾದ ಹೋಬಾವೆಸ್ಟನಲ್ಲಿರುವ ಹಾಗೂ
ಆಸ್ಟ್ರೇಲಿಯಾದ ಹೆನ್ಚುರಿ ತಗ್ಗುಗಳು.
48. ಕ್ಷುದ್ರಗಳು ಮಂಗಳು ಮತ್ತು ಗುರುಗ್ರಹಗಳ ನಡುವೆ
ಸೂರ್ಯನ ಸೂತ್ತಲೂ ಸುತ್ತುತ್ತಿವೆ. ಸೀರಿಸ್ ಸೌರವ್ಯೂಹದ
ಅತೀ ದೊಡ್ಡ ಕ್ಷುದ್ರಗ್ರಹ.
49. ಧೂಮಕೇತುಗಳು ಪ್ರಜ್ವಲಿಸುವ ತಲೆ ಹಾಗೂ ಉದ್ದವಾದ
ಬಾಲವನ್ನು ಹೊಂದಿವೆ. ಹ್ಯಾಲೆ ಧೂಮಕೇತುವು 76
ವರ್ಷಗಳಿಗೊಮ್ಮೆ ಭೂಮಿಯ ಸಮೀಪಕ್ಕೆ ಬರುತ್ತದೆ.
50. 1956 ರಲ್ಲಿ ರಷ್ಯಾದ ಲೂನಿಕ್-2 ಚಂದ್ರನನ್ನು ತಲುಪಿದ
ಮೊದಲ ಬಾಹ್ಯಾಕಾಶ ನೌಕೆ. 1969 ರಲ್ಲಿ ಆರ್ಮಸ್ಟ್ರಾಂಗ್
ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವ.
51. ಚಂದ್ರನು ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ
ಅಂಡಾಕಾರವಾಗಿ ಸೂತ್ತುತ್ತಾ ಭೂಮಿಗೆ
ಸಮೀಪಿಸುವುದನ್ನು 'ಪೆರಿಜಿ' ಅಥವಾ ಉಚ್ಚಸ್ಥಾನವೆಂದೂ
ಹಾಗೂ ಭೂಮಿಯಿಂದ ಗರಿಷ್ಠ ದೂರವಿರುವುದನ್ನು 'ಅಪೋಜಿ'
ಅಥವಾ ನೀಚಸ್ಥಾನ ಎನ್ನುವರು.
52. ಚಂದ್ರನು ಭೂಮಿಯ ಸೂತ್ತ ಪ್ರದಕ್ಷಿಣೆಯನ್ನು
ಪೂರ್ಣಗೊಳಿಸಲು ಬೇಕಾಗುವ ಅವಧಿ 29 ದಿನ 12 ಗಂಟೆ 44
ನಿಮಿಷ ಮತ್ತು 11 ಸೆಕೆಂಡ್ ಅಥವಾ 29 1/2 ದಿನ
53. ಚಂದ್ರಗ್ರಹಣವು ಹುಣ್ಣಿಮೆಯ ದಿನಗಳಲ್ಲಿ ಮಾತ್ರ
ಸಂಭವಿಸುತ್ತದೆ. ಚಂದ್ರ, ಭೂಮಿ ಮತ್ತು ಸೂರ್ಯ ಒಂದೇ
ರೇಖೆಯಲ್ಲಿದ್ದು ಭೂಮಿಯ ನೆರಳು ಚಂದ್ರನ ಮೇಲೆ
ಬಿಳುವುದರಿಂದ ಉಂಟಾಗುತ್ತದೆ. ಎಲ್ಲಾ ಹುಣ್ಣಿಮೆಯ
ದಿನಗಳಂದು ಚಂದ್ರಗ್ರಹಣವಾಗುವುದಿಲ್ಲ.
54. ಸೂರ್ಯ ಗ್ರಹಣವು ಅಮವಾಸ್ಯೆಯ ದಿನದಂದು ಮಾತ್ರ
ಸಂಭವಿಸುತ್ತದೆ. ಇದು ಮೂರು ರೀತಿಯಲ್ಲಿ ಕಂಡು ಬರುತ್ತದೆ.
1) ಪೂರ್ಣ ಸೂರ್ಯಗ್ರಹಣ 2) ಪಾಶ್ವ ಸೂರ್ಯಗ್ರಹಣ ಹಾಗೂ 3)
ಕಂಕಣ ಸೂರ್ಯಗ್ರಹಣ.
55. ಸೂರ್ಯ ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ
ಬಂದಾಗ ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ
ಬಂದಾಗ ಸೂರ್ಯಗ್ರಹಣವಾಗುತ್ತದೆ.

Gk - 03

1. ಭಾರತ ದೇಶದ ನಡುವೆ ಪ್ರಥಮವಾಗಿ ವ್ಯಾಪಾರ
ಸಂಬಂಧವನ್ನು ಸ್ಥಾಪಿಸಿದ ದೇಶ.

ಉತ್ತರ: ಪೋರ್ಚುಗಲ್.

2. 'ಹಲ್ಮಡಿ ಶಾಸನ' ಗೊತ್ತಿರುವ ಅತ್ಯಂತ ಪುರಾತನ ಕನ್ನಡ
ಶಾಸನ ಪತ್ತೆಯಾದ ಸ್ಥಳ:

ಉತ್ತರ: ಹಾಸನ ಜಿಲ್ಲೆಯ ಬೇಲೂರು ತಾಲುಕು.

3. ಆಯುರ್ವೆದ ಮೂಲತಃ ವಾಗಿ ಹುಟ್ಟಿಕೊಂಡಿದ್ದು.
ಉತ್ತರ: ಯಜುರ್ವೇದ.

4. ಸಾರ್ವಜನಿಕ ಹಣದ ರಕ್ಷಕನೆಂದು ಯಾರನ್ನು ಕರೆಯಲಾಗಿದೆ.
ಉತ್ತರ: ಭಾರತದ ಲೆಕ್ಕ ನಿಯಂತ್ರಕ & ಮಹಾಲೆಕ್ಕ ಪರಿಶೋಧಕ
(CAG)


5. ಪಾಕ್ ಜಲಸಂಧಿ ಯಾವ ಎರಡು ದೇಶಗಳನ್ನು ಸೇರಿಸುತ್ತದೆ.
ಉತ್ತರ: ಭಾರತ & ಶ್ರೀಲಂಕಾ


6. ಒಂದು ರೈಲು ಒಂದು ಕಂಬವನ್ನು 20 ಸೆಕೆಂಡುಗಳಲ್ಲಿ &
ಒಂದು 120
ಮೀಟರ್ ಉದ್ದದ ಪ್ಲಾಟ್ಪಾರಂ ಅನ್ನು 30
ಸೆಕೆಂಡುಗಳಲ್ಲಿ ಹಾದು ಹೋದಲ್ಲಿ ರೈಲಿನ ಉದ್ದ.
ಉತ್ತರ: 220 m


7. A ವ್ಯಕ್ತಿಯು B ಗಿಂತ ಎಷ್ಟು ವರ್ಷ
ಚಿಕ್ಕವನಾಗಿದ್ದಾನೆಯೋ ಅಷ್ಟೆ ವರ್ಷ C ಗಿಂತ ದೊಡ್ಡವನು. B &
C ಯವರ ವಯಸ್ಸನ್ನು ಒಟ್ಟು ಗೂಡಿಸಿದಾಗ 48 ವರ್ಷ ವಾದರೆ,
A ನ ವಯಸ್ಸು ಏನು?
ಉತ್ತರ: 24.


8. ಈ ಕೆಳಕಂಡ ಸಂಸ್ಥೆಗಳು ಗ್ರಾಹಕರಿಗೆ ಸಾಲ ಕೊಡುತ್ತವೆ.
ಉತ್ತರ: IDBI.


9. ನಾವಿಕರ ಖಾಯಿಲೆ ಈ ಕೆಳಕಂಡ ವಿಟಮಿನ್ ಕೊರತೆಯಿಂದ
ಬರುತ್ತದೆ.
ಉತ್ತರ: ವಿಟಮಿನ್ – C


10. ಡೈನೋಸಾರ್ ಎಂಬ ಪದ ಯಾರು ಮೊಟ್ಟ ಮೊದಲ ಸಲ
ಬಳಸಿದರು?
ಉತ್ತರ: ಸರ್. ರಿಚರ್ಡ್ ಓವನ್ (1841 ರಲ್ಲಿ)
11. ಮೈಸೂರು ಅರಮನೆಯ ಮುಖ್ಯ ವಿನ್ಯಾಸಕ ಯಾರು?
ಉತ್ತರ: ಹೆನ್ರಿ ಇರ್ವಿನ್.
12. ಈ ಕೆಳಗಿನ ಯಾವ
ಪುಸ್ತಕವನ್ನು ಕೃಷ್ಣದೇವರಾಯರು ಬರೆದಿರುವುದಿಲ್ಲ.
ಉತ್ತರ: ಗದುಗಿನ ಭಾರತ.
13. ಬಸವಸಾಗರ ಅಣೆಕಟ್ಟನ್ನು ಈ ಕೆಳಗಿನ ನದಿಗೆ ಅಡ್ಡಲಾಗಿ
ನಿರ್ಮಿಸಲಾಗಿದೆ.
ಉತ್ತರ: ಕೃಷ್ಣನದಿ.
14. ಯಾರನ್ನು ಭಾರತದ ಹಸಿರು ಕ್ರಾಂತಿಯ
ಪಿತಮಹಾ ಎಂದು ಕರೆಯಲಾಗುತ್ತದೆ.
ಉತ್ತರ: ಡಾ. ಎಂ.ಎಸ್.ಸ್ವಾಮಿನಾಥನ್
15. ಈ ಕೆಳಗಿನ ಯಾವ ರಾಷ್ರ್ಟೀಯ ಉಧ್ಯಾನವನ
ಹುಲಿಗಳಿಗೆ ಪ್ರಸಿದ್ದವಾಗಿದೆ.
ಉತ್ತರ: ಕಾರ್ಬೆಟ್ ರಾಷ್ರ್ಟೀಯ ಉಧ್ಯಾನವನ
(ಉತ್ತರ ಖಂಡ್ )
16. ಮಲಗಿರುವ ಬುಧ್ಧನ ಪರ್ವತ ಿರುವ ಜಿಲ್ಲೆ.
ಉತ್ತರ: ಯಾದಗಿರ್.
17. ಬೌದ್ದಧರ್ಮವು ವ್ಯಾಪಕವಾಗಿ ಪ್ರಚಾರವಾಗಲು
ಕಾರಣವಾದ
ಭಾಷೆ.
ಉತ್ತರ: ಪಾಲಿ ಭಾಷೆ.
18. ಬಹುಮನಿ ಸುಲ್ತಾನರ ಮೊದಲ ರಾಜಧಾನಿ.
ಉತ್ತರ: ಕಲಬುರ್ಗಿ. (ಗುಲ್ಬರ್ಗ)
19. ಕಳಿಂಗ ಯುದ್ದ ನಡೆದ ಅವಧಿ
ಉತ್ತರ: 262 – 261 ಕ್ರಿ. ಪೂ.
20. "ಮಾಡು ಇಲ್ಲವೆ ಮಡಿ" ಘೋಷಣೆ ಈ ಕೆಳಗಿನ ಯಾವ
ಚಳುವಳಿಗೆ ಸಂಬಂಧಿಸಿದೆ.
ಉತ್ತರ: ಕ್ವಿಟ್ ಇಂಡಿಯಾ ಚಳುವಳಿ.
21. ರೂ 2.80 ಮತ್ತು 40 ಪೈಸೆಯ ಅನುಪಾತವೇನು?
ಉತ್ತರ: 7:1.
22. ಆದರೆx:y
ಉತ್ತರ: 1:2
23. ಒಂದು ಅಳತೆಯ 40% 50 ಆದರೆ, ಅಂಕೆಯೇನು?
ಉತ್ತರ: 125.
24. ರೂ 1500 ರ 5 ವರ್ಷಕ್ಕೆ ಶೇಕಡ 6 ರಂತೆ ಸರಳ ಬಡ್ಡಿ
ಪತ್ತೆ ಮಾಡಿರಿ.
ಉತ್ತರ: 450.
25. ಒಬ್ಬ ವ್ಯಕ್ತಿಯು ಒಂದು ವಸ್ತುವನ್ನು ರೂ 50 ಕ್ಕೆ
ಕೊಂಡು ರೂ.
60 ಕ್ಕೆ ಮಾಡಿದರೆ ಅವನ ಲಾಭ.
ಉತ್ತರ: 20%
26. ಮೈಸೂರಿನಲ್ಲಿ 1935 ರಲ್ಲಿ ಮೊದಲನೆಯಾದಾಗಿ
ರೇಡಿಯೋ ಸ್ಟೇಷನ್ ಅನ್ನು ಸ್ಥಾಪಿಸಿದವರು ಯಾರು?
ಉತ್ತರ: ಡಾ. ಎಂ. ವಿ. ಗೋಪಾಲ ಸ್ವಾಮಿ.
27. ಮಂಕು ತಿಮ್ಮನ ಕಗ್ಗ ಬರೆದವರು
ಉತ್ತರ: ಡಿ.ವಿ.ಗುಂಡಪ್ಪ.
28. ಕರ್ನಾಟಕ ದಲ್ಲಿ 1842 ರಲ್ಲಿ ಪ್ರಕಟವಾದ ಮೊಟ್ಟ
ಮೊದಲ ಸಮಚಾರ ಪತ್ರಿಕೆಯ ಹೆಸರು.
ಉತ್ತರ: ಮಂಗಳೂರ್ ಸಮಾಚಾರ್.
29. ಹರಿಚ್ಚಂದ್ರ ಕಾವ್ಯ ಬರೆದ ಕವಿ.
ಉತ್ತರ: ರಾಘವಾಂಕ
30. ಒಂದು ವೇಳೆ ಎರಡು ದಾಳಗಳನ್ನು ಒಟ್ಟಿಗೆ ಎಸೆದರೆ,
ಎರಡು ದಾಳಗಳ ಒಟ್ಟು ಮೊತ್ತ 7 ಬರುವ
ಸಂಭವನೀಯತೆ ಏನು?
ಉತ್ತರ: (D)
31. ಒಂದು ಸರಳ ಲೋಲಕದ ಉದ್ದ44% ಹೆಚ್ಚಿಸಿದರೆ, ಅದರ
ಕಾಲ ___________ ಬಾರಿ ಹೆಚ್ಚಾಗುವುದು.
ಉತ್ತರ: 20 %.
32. ಹುಚ್ಚು ಹಸು ಖಾಯಿಲೆಯನ್ನು ಹೀಗೂ ಕರೆಯುತ್ತಾರೆ.
ಉತ್ತರ: ಬೊವೈನ್ ಸ್ಪಾಂಡಿಫಾರ್ಮ್ ಎನ್ಸೆಫೆಲೋಪತಿ.
33. ಗಿಡಗಳಲ್ಲಿ ನೀರು & ಲಬಣಾಂಶಗಳನ್ನು ಸಾಗಿಸುವ
ಅಂಗಾಂಶ.
ಉತ್ತರ: ಕ್ಸೈಲಂ.
34. ಆಸ್ಟಿಯೋಪೊರೋಸಿಸ್ ಖಾಯಿಲೆಯು ಈ ಲವಣಾಂಶದ
ಕೊರತೆಯಿಂದ
ಬರುತ್ತದೆ.
ಉತ್ತರ: ಕ್ಯಾಲ್ಸಿಯಂ
35. ಮಾನವನಲ್ಲಿರುವ ದೊಡ್ಡ ಮಾಂಸಖಂಡ.
ಉತ್ತರ: ಗ್ಲೂಟಿಯಸ್ ಮ್ಯಾಕ್ಸಿಮಸ್. (ನಿತಂಬ ಸ್ನಾಯು)
36. ಮಾನವನ ಒಂದು ಸಣ್ಣ ಹೆಜ್ಜೆ ಮನುಕುಲಕ್ಕೆ ಒಂದು
ದೈತ್ಯ
ನೆಗೆತ' ಈ ಹೇಳಿಕ ಯಾರದ್ದು?
ಉತ್ತರ: ನೀಲ್ ಆರ್ಮ್ ಸ್ರ್ಟಾಂಗ್. (ಮೊದಲಬಾರಿ
1969 ರಲ್ಲಿ ಚಂದ್ರನ ಮೇಲೆ ಕಾಲಿಟ್ಟಾಗ ಹೇಳಿದ ಹೇಳಿಕೆ.)
37. FM ರೇಡಿಯೋ ಕಂಪನದ ಬ್ಯಾಂಡ್
ಉತ್ತರ: 88 to 108 MHz
38. ಕರ್ನಾಟಕದ ಪ್ರಸಕ್ತ ಲೋಕಾಯುಕ್ತರು.
ಉತ್ತರ: ವೈ ಭಾಸ್ಕರ್ ರಾವ್.
39. ಹಿಮಾಚಲ ಪ್ರದೇಶವು ಪ್ರತ್ಯೇಕವಾದ ವರ್ಷ.
ಉತ್ತರ: 1971.
40. ಭಾರತದ ವಿಮಾ ನಿಯಂತ್ರಣ ಸಂಸ್ಥೆ(IRDA) ಇರುವ ಸ್ಥಳ?
ಉತ್ತರ: ಹೈದ್ರಾಬಾದ್.

@@@@@@ ಸಾಮಾನ್ಯ ಜ್ಞಾನ @@@@

 1.ಹೋಮಗಾರ್ಡ್ ಸೇವೆ ಹೊಂದಿರದ ಏಕೈಕ
ರಾಜ್ಯ ಯಾವುದು?
1. ಕೇರಳ.★★
2. ತಮಿಳುನಾಡು.
3. ಗೋವಾ.
4. ತೆಲಂಗಾಣ.

2. ರಮಾನಂದ ಸಾಗರ ನಿರ್ದೇಶಿಸಿರುವ
ರಾಮಾಯಣ ಧಾರವಾಹಿಯಲ್ಲಿ ಹನುಮಂತನ
ಪಾತ್ರ ನಿರ್ವಹಿಸಿದವರು ಯಾರೂ?
1. ವಿಜಯ ಅರೋರಾ.
2. ದಾರಾಸಿಂಗ್.★★
3. ಸಮೀರ್ ರಜ್ದಾ.
4. ಫೌಜಾಸಿಂಗ್.

3. 'ಬುದ್ದನು ನಗುತ್ತಿರುವನು' ಇದೊಂದು _
_________ ಆಗಿದೆ.
1. ಭಾರತೀಯ ಸೇನೆಯ ಒಂದು ರಹಸ್ಯ
ಕಾರ್ಯಾಚರಣೆ.
2. ಅಣುಶಕ್ತಿ ಸ್ಥಾವರ.
3. ಅಣುಶಕ್ತಿ ಪರೀಕ್ಷೆ.★★
4. ಮೇಲಿನ ಯಾವುದು ಅಲ್ಲ.
4. ಭಾರತ ತನ್ನ ಪ್ರಥಮ ಕೃತಕ ಉಪಗ್ರಹವಾದ
'ಆರ್ಯಭಟ'ವನ್ನು ರಷ್ಯಾದ
ಸಹಯೋಗದೊಂದಿಗೆ ಯಾವ ವರ್ಷ
ಉಡಾಯಿಸಲಾಯಿತು?
1. 1972.
2. 1973.
3. 1974.
4. 1975.★★

5. 1975 ರಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ
ತುರ್ತು ಪರಿಸ್ಥಿತಿ ಘೋಷಿಸಿದಾಗ ಅಂದಿನ
ರಾಷ್ಟ್ರಪತಿ ಯಾರಾಗಿದ್ದರು?
1. ಫಕ್ರುದ್ದೀನ್ ಅಲಿ ಅಹ್ಮದ್.★★
2. ಝಾಕೀರ್ ಹುಸೇನ್
3. ಬಿ.ಡಿ.ಜತ್ತಿ.
4. ವಿ.ವಿ.ಗಿರಿ.

6. ಭಾರತದಲ್ಲಿ ಬಣ್ಣದ ದೂರದರ್ಶನ
ಆರಂಭವಾದದ್ದು ಯಾವ ವರ್ಷದಲ್ಲಿ?
1. 1981.
2. 1982.★★
3. 1983.
4. 1984.

7. 'ಗೋಲ್ಡನ್ ಗರ್ಲ್' ಇದು ಯಾವ
ಕ್ರೀಡಾಪಟುವಿನ ಆತ್ಮಚರಿತ್ರೆಯಾಗಿದೆ?
1. ಕರ್ಣಂ ಮಲ್ಲೇಶ್ವರಿ.
2. ಸಾನಿಯಾ ಮಿರ್ಜಾ.
3. ಪಿ.ಟಿ. ಉಷಾ.★★
4. ಮೇರಿಕೋಮ್.
8. ಕರ್ನಾಟಕದಲ್ಲಿ ಮೊದಲಿಗೆ ದೂರದರ್ಶನ
ಆರಂಭವಾದದ್ದು ಯಾವ ನಗರದಲ್ಲಿ?
1. ಮೈಸೂರು.
2. ಬೆಳಗಾವಿ.
3. ಬೆಂಗಳೂರು
4. ಕಲಬುರಗಿ.★★


9. ಅಂತರಾಷ್ಟ್ರೀಯ ಏಕದಿನ ಪಂದ್ಯದಲ್ಲಿ
ಮೊದಲ ಬಾರಿಗೆ 6 ಏಸೆತಗಳಿಗೆ 6 ಸಿಕ್ಸರ್ ಸಿಡಿಸಿದ ಆಟಗಾರ
ಯಾರು?
1. ಯುವರಾಜ ಸಿಂಗ್.
2. ಹರ್ಷಲ್ ಗಿಬ್ಸ್.★★
3. ರವಿಶಾಸ್ತ್ರೀ.
4. ಕ್ರಿಸ್ ಗೇಯ್ಲ್.

10. ಪ್ರಪಂಚದ ಮೊದಲ ವಿಶ್ವವಿದ್ಯಾಲಯ
ಯಾವುದು?
1. ನಳಂದಾ ವಿಶ್ವವಿದ್ಯಾಲಯ.
2. ಕಂಚಿ ವಿಶ್ವವಿದ್ಯಾಲಯ.
3. ವಿಕ್ರಮಶೀಲ ವಿಶ್ವವಿದ್ಯಾಲಯ.
4. ತಕ್ಷಶೀಲ ವಿಶ್ವವಿದ್ಯಾಲಯ.★★


1. ಇತ್ತೀಚೆಗೆ ಯಾವ
ರಾಜ್ಯ ಸರ್ಕಾರವು ಅಜ್ಮದ್ ಅಲಿಖಾನ್
ಅವರ ನೇತೃತ್ವದಲ್ಲಿ ಭಾರತದ ಪ್ರಥಮ ಅಂತರಾಷ್ಟ್ರೀಯ
ಸಂಗೀತ ಸಂಸ್ಥೆಯನ್ನು ಸ್ಥಾಪಿಸಲು ಮುಂದಾಗಿದೆ ?
1. ಕೇರಳ☆
2. ಹರಿಯಾಣ
3. ಆಸ್ಸಾಂ
4. ಮಧ್ಯಪ್ರದೇಶ
♧♧♧♧♧♧♧♧♧♧

2. ಇತ್ತೀಚೆಗೆ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾದ ಕೇಂದ್ರ
ಸರ್ಕಾರದ ಮಹತ್ವಪೂರ್ಣ ಯೋಜನೆ ಯಾವುದು ?
1. MGNREGA
2. ಜನಧನ ಯೋಜನೆ☆
3. ಸ್ವಚ್ಛ ಭಾರತ ಅಭಿಯಾನ
4. ಇಂದಿರಾ ಆವಾಸ ಯೋಜನೆ
♧♧♧♧♧♧♧♧♧♧

3. ಇತ್ತೀಚೆಗೆ ಯಾವ ರಾಜ್ಯ ಸರ್ಕಾರವು ಗೂಗಲ್
ಸಹಯೋಗದಲ್ಲಿ ರಾಜ್ಯದ ಬಹುತೇಕ ಶಾಲೆಗಳಲ್ಲಿ
ಅಂತರ್ಜಾಲ ಆಧಾರಿತ ಶಿಕ್ಷಣ ನೀಡಲು ಯೋಜನೆ ರೂಪಿಸಿದೆ ?
1. ಗುಜರಾತ್
2. ಅರುಣಾಚಲ ಪ್ರದೇಶ☆
3. ಪಶ್ಚಿಮ ಬಂಗಾಳ
4. ಹಿಮಾಚಲ ಪ್ರದೇಶ
♧♧♧♧♧♧♧♧♧♧

4. ಶ್ರವಣಬೆಳಗೊಳದಲ್ಲಿ ಇಂದಿನಿಂದ ಆರಂಭಗೊಂಡಿರುವ 81
ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕ್ರಮವಾಗಿ ಕನ್ನಡ
ಧ್ವಜಾರೋಹಣ, ರಾಷ್ಟ್ರ ಧ್ವಜಾರೋಹಣ
ನೆರವೇರಿಸಿದವರು ಮತ್ತು ಸಮ್ಮೇಳನದ
ಉದ್ಘಾಟಕರನ್ನು ಗುರ್ತಿಸಿ.
1. ಪುಂಡಲೀಕ ಹಾಲಂಬಿ - ಕನ್ನಡ ಬಾವುಟ
2. ಮುಖ್ಯಮಂತ್ರಿ ಸಿದ್ಧರಾಮಯ್ಯ - ಉದ್ಘಾಟಕರು
3. ಡಾ. ಸಿದ್ಧಲಿಂಗಯ್ಯ
4. ಹೆಚ್ ಸಿ ಮಹಾದೇವಪ್ಪ - ರಾಷ್ಟ್ರ ಧ್ವಜಾರೋಹಣ
♧♧♧♧♧♧♧♧♧♧

5. ಸೌದಿ ಅರೇಬಿಯಾದ ರಾಜ ಅಬ್ದುಲ್ಲಾ ಮರಣದ ನಂತರ
ರಾಜಮನೆತನಕ್ಕೆ ಸೇರಿದ ಅತ್ಯಂತ ಹಿರಿಯ ವ್ಯಕ್ತಿ ಎಂಬ
ಹೆಗ್ಗಳಿಕೆ ಯಾರ ಹೆಸರಿಗೆ ವರ್ಗಾವಣೆಗೊಂಡಿದೆ ?
1. 2ನೇ ಎಲಿಜಬೆತ್ ರಾಣಿ☆
2. ಜಪಾನಿನ ರಾಜ
3. ಥೈಲ್ಯಾಂಡಿನ ರಾಜ
4. ರಾಣಿ ವಿಕ್ಟೋರಿಯಾ
♧♧♧♧♧♧♧♧♧♧

6. ಎಡ್ಗರ್ ಲುಂಗು ಇತ್ತೀಚೆಗೆ ಯಾವ ರಾಷ್ಟ್ರದ
ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ?
1. ಚಿಲಿ
2. ಝಾಮ್ಬಿಯಾ☆
3. ಬ್ರೆಜಿಲ್
4. ತಾಂಜಾನಿಯಾ
♧♧♧♧♧♧♧♧♧♧

7. ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮೋದಿ
ಅಂತರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ
ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ವಿಭಾಗದಲ್ಲಿ ಪ್ರಶಸ್ತಿ
ಜಯಿಸಿದವರು ಯಾರು ?
1. ಸೈನಾ ನೇಹ್ವಾಲ್ ಮತ್ತು ಪಿ ಕಶ್ಯಪ್☆
2. ಕೆರೋಲಿನಾ ಮರೀನಾ ಮತ್ತು ಪಿ ಕಶ್ಯಪ್
3. ಸೈನಾ ನೇಹ್ವಾಲ್ ಮತ್ತು ಕೆ ಶ್ರೀಕಾಂತ
4. ಕೆರೋಲಿನಾ ಮರೀನಾ ಮತ್ತು ಕೆ ಶ್ರೀಕಾಂತ
♧♧♧♧♧♧♧♧♧♧

8. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2015
ನೇ ಇಸವಿಯನ್ನು ಈ ಕೆಳಕಂಡ ಯಾವ ವರ್ಷವನ್ನಾಗಿ
ಘೋಷಿಸಿದೆ ?
1. ಅಂತರಾಷ್ಟ್ರೀಯ ಮಣ್ಣಿನ ವರ್ಷ☆
2. ಅಂತರಾಷ್ಟ್ರೀಯ ಸಾಗರ ವರ್ಷ
3. ಅಂತರಾಷ್ಟ್ರೀಯ ತರಕಾರಿ ವರ್ಷ
4. ಅಂತರಾಷ್ಟ್ರೀಯ ಆಹಾರ ವರ್ಷ
♧♧♧♧♧♧♧♧♧♧

9. ಇತ್ತೀಚೆಗೆ ಏಷ್ಯಾದ ಸಾಹಿತ್ಯ ಕ್ಷೇತ್ರದ ಅತ್ಯುನ್ನತ
ಪ್ರಶಸ್ತಿಗಳಲ್ಲಿ ಒಂದಾದ DSC ಪುರಸ್ಕಾರಕ್ಕೆ
ಪಾತ್ರರಾದವರು ಯಾರು ?
1. ಝಾಮ್ಪಾ ಲಹಿರಿ☆
2. ವಿಜಯ ಶೇಷಾದ್ರಿ
3. ಅಮಿತಾವ್ ಘೋಷ್
4. ಅರವಿಂದ್ ಅಡಿಗ
♧♧♧♧♧♧♧♧♧♧

10. ಇತ್ತೀಚೆಗೆ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ಮೂಲಕ
ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆ ಮಾಡುವ
ಸೌಲಭ್ಯವನ್ನು ಒದಗಿಸಿದ ಬ್ಯಾಂಕ್ ಯಾವುದು ?
1. HDFC ಬ್ಯಾಂಕ್
2. ಕಾರ್ಪೊರೇಶನ್ ಬ್ಯಾಂಕ್
3. ಎಕ್ಸಿಸ್ ಬ್ಯಾಂಕ್
4. ಐಸಿಐಸಿಐ ಬ್ಯಾಂಕ್☆
♧♧♧♧♧♧♧♧♧♧

11. ಇತ್ತೀಚೆಗೆ ನಿಧನರಾದ ಎಮ್ ಎಸ್ ನಾರಾಯಣ್ ಯಾವ
ಭಾಷೆಯ ನಟ ಹಾಗೂ ಹಾಸ್ಯ ಕಲಾವಿದರಾಗಿದ್ದರು ?
1. ಮಲಯಾಳಂ
2. ಕನ್ನಡ
3. ತಮಿಳು
4. ತೆಲುಗು☆
♧♧♧♧♧♧♧♧♧♧

12. ಇತ್ತೀಚೆಗೆ ಸುದ್ಧಿಯಲ್ಲಿರುವ ಚೀನಾದ ಆಗ್ನೇಯ
ಹೆಬ್ಬಾಗಿಲು ಎಂದು ಬಿಂಬಿತವಾಗಿರುವ ಯುನ್ನಾನ್
ಪ್ರಾಂತವು ಈ ಕೆಳಕಂಡ ಯಾವ ರಾಷ್ಟ್ರದೊಂದಿಗೆ ತನ್ನ
ಗಡಿಯನ್ನು ಹಂಚಿಕೊಂಡಿದೆ ?
1. ಲಾವೋಸ್
2. ಮಯನ್ಮಾರ್☆
3. ಜಪಾನ್
4. ವಿಯೆಟ್ನಾಂ
♧♧♧♧♧♧♧♧♧♧

13. ರಾಷ್ಟ್ರೀಯ ಹೆಣ್ಣು ಮಕ್ಕಳ
ದಿನಾಚರಣೆಯನ್ನು ಇತ್ತೀಚೆಗೆ ಯಾವ
ದಿನದಂದು ಆಚರಿಸಲಾಯಿತು ?
1. ಜನೆವರಿ 25
2. ಜನೆವರಿ 24☆
3. ಜನೆವರಿ 23
4. ಜನೆವರಿ 22
♧♧♧♧♧♧♧♧♧♧

14. ಇತ್ತೀಚೆಗೆ ಮುಕ್ತಾಯಗೊಂಡ ರಾಷ್ಟ್ರೀಯ
ಬಿಲಿಯರ್ಡ್ಸ್ ಮತ್ತು ಸ್ನೂಕರ್ ಚಾಂಪಿಯನ್ ಶಿಪ್ ನ ಮಹಿಳೆಯರ
ವಿಭಾಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡವ
ರು ಯಾರು ?
1. ಚೈತ್ರಾ ಮಗಿಮರಾಜ್☆
2. ವಿದ್ಯಾ ಪಿಳ್ಳೈ
3. ಅರಂಕ್ಷಾ ಸಂಚಿಸ್
4. ಮೀನಲ್ ಠಾಕು
♧♧♧♧♧♧♧♧♧♧

15. ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿಯ ಮಿಶ್ರ
ಡಬಲ್ಸ್ ನಲ್ಲಿ ಪ್ರಶಸ್ತಿ ಜಯಿಸಿದ ಜೋಡಿ_
1. ಮಹೇಶ್ ಭೂಪತಿ ಮತ್ತು ಮಾರ್ಟಿನಾ ಹಿಂಗಿಸ್
2. ಲಿಯಾಂಡರ್ ಪೇಸ್ ಮತ್ತು ಡೇನಿಯಲ್ ನೆಸ್ಟರ್
3. ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್☆
4. ಡೇನಿಯಲ್ ನೆಸ್ಟರ್ ಮತ್ತು ಸೆರೆನಾ ವಿಲಿಯಮ್ಸ್
♧♧♧♧♧♧♧♧♧♧

16. ಇತ್ತೀಚೆಗೆ ಅತ್ಯಂತ ಆರೋಗ್ಯಕರ
ಚಹಾ ಎಂದು ಪರಿಗಣಿತವಾಗಿರುವ 'ಪರ್ಪಲ್ ಟೀ'
ಯನ್ನು ಉತ್ಪಾದಿಸುವ ವಿಶ್ವದ ಏಕೈಕ ರಾಷ್ಟ್ರ
ಯಾವುದು ?
1. ಪಾಕಿಸ್ತಾನ
2. ಭಾರತ
3. ಸುಡಾನ್
4. ಕೀನ್ಯಾ☆
♧♧♧♧♧♧♧♧♧♧

17. ಇತ್ತೀಚೆಗೆ ನಿಧನರಾದ ಸುಭಾಷ್ ಘಿಸಿಂಗ್ ಈ ಕೆಳಕಂಡ
ಯಾವ ಸಂಘಟನೆಯ ಮುಖ್ಯಸ್ಥರಾಗಿದ್ದರು ?
1. ಮೀಝೋಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
2. ನಾಗಾಸ್ ನ್ಯಾಷನಲ್ ಲಿಬರೇಶನ್ ಪಾರ್ಟಿ
3. ಬೋಡೋಲ್ಯಾಂಡ್ ನ್ಯಾಷನಲ್ ಲಿಬರೇಶನ್ ಪಾರ್ಟಿ
4. ಗೋರ್ಖಾ ನ್ಯಾಷನಲ್ ಲಿಬರೇಶನ್ ಪಾರ್ಟಿ☆
♧♧♧♧♧♧♧♧♧♧

18. ಇಪ್ಪತ್ತನೆಯ ಕಾನೂನು ಆಯೋಗದ
ಮುಖ್ಯಸ್ಥರು ಯಾರು ?
1. ನ್ಯಾ. ಸದಾಶಿವಂ
2. ನ್ಯಾ. ಹೆಚ್ ಎಲ್ ದತ್ತು
3. ನ್ಯಾ. ಎ ಪಿ ಶಹಾ☆
4. ಇವರಾರೂ ಅಲ್ಲ
♧♧♧♧♧♧♧♧♧♧

19. ಇತ್ತೀಚೆಗೆ ಚುನಾವಣಾ ಆಯೋಗದ ಮುಖ್ಯಸ್ಥರಾಗಿ
ಹೆಚ್ ಎಸ್ ಬ್ರಹ್ಮ ನೇಮಕಗೊಂಡಿರುವರು.
ಚುನಾವಣಾ ಆಯೋಗದ ಮುಖ್ಯಸ್ಥರ ಅಧಿಕಾರಾವಧಿ
ಎಷ್ಟು ?
1. 4 ವರ್ಷ
2. 5 ವರ್ಷ
3. 6 ವರ್ಷ☆
4. 3 ವರ್ಷ
♧♧♧♧♧♧♧♧♧♧

20. ಅನಿವಾಸಿ ಪ್ರಜೆಗಳಿಗೆ ಮತದಾನದ ಅವಕಾಶ ನೀಡಲು ಇ-ವೋಟಿಂಗ್ ವ್ಯವಸ್ಥೆ ಕಲ್ಪಿಸಿದ ರಾಷ್ಟ್ರ ಯಾವುದು ?
1. ಪಾಕಿಸ್ತಾನ
2. ಫ್ರಾನ್ಸ್
3. ಅಮೇರಿಕಾ
4. ಭಾರತ☆

ಸಾಮಾನ್ಯ ಜ್ಞಾನ- ಸಮಾಜ

[13/10 6:12 am] : ಭಾರತದ ಭೂಗೋಳ 1
ಭಾರತದ ಭೂಗೋಳ
1. ಭಾರತವು ಏಷ್ಯಾ ಖಂಡದಲ್ಲಿದೆ.
2. ಭಾರತವು ಭೂಮಿಯ ಉತ್ತರಾರ್ದಗೊಳದಲ್ಲಿದೆ.
3. ಭಾರತದ ಉಪಖಂಡದ ದಕ್ಷಿಣದ ತುದಿ ಇಂದಿರಾ ಪಾಯಿಂಟ.
4. ಇಂದಿರಾ ಪಾಯಿಂಟ ದಿ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.
5. ಭಾರತದ ಕೇಂದ್ರ ಭಾಗದಲ್ಲಿ ಹಾದು ಹೋಗುವ ಆಕ್ಷಾಂಶ
23 1/2 ಉತ್ತರ ಅಕ್ಷಾಂಶ.
6. ಭಾರತದ ಅತ್ಯಂತ ದಕ್ಷಿಣದ ಪ್ರದೇಶ ಕನ್ಯಾಕುಮಾರಿ.
7. ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ 8 ರಾಜ್ಯಗಳ
ಮೂಲಕ ಹಾದು ಹೋಗುತ್ತದೆ. ಅವು ಗುಜರಾತ, ರಾಜಸ್ಥಾನ,
ಮದ್ಯಪ್ರದೇಶ, ಚತ್ತೀಸಗರ್, ಜಾರ್ಖಂಡ, ಪಶ್ಚಿಮ ಬಂಗಾಳ,
ತ್ರಿಪುರಾ ಮತ್ತು ಮಿಜೋರಾಂ ಮೂಲಕ ಹಾದು
ಹೋಗುತ್ತದೆ.
8. ಭಾರತದ ಆದರ್ಶ ಕಾಲವನ್ನು 82 1/2 ಡಿಗ್ರಿ ಪೂರ್ವ
ರೇಖಾಂಶವನ್ನು ಆಧರಿಸಿ ತಿಳಿಯಲಾಗುತ್ತದೆ.
9. ಭಾರತದ ಒಟ್ಟು ಭೌಗೋಳಿಕ ಕ್ಷೇತ್ರ 32,87,263 ಚ.ಲಿ.ಮೀ
(32.87 ಲಕ್ಷ)
10. ಭಾರತದ ಭೂಗಡಿ ರೇಖೆಯ ಉದ್ದ 15,200 ಕಿ ಮೀ 17
ರಾಜ್ಯಗಳು ಗಡಿಗೆ ಹೊಂದಿ ಇದ್ದು. 7 ದೇಶಗಳೊಂದಿಗೆ ಭೂ
ಗಡಿಯನ್ನು ಹೊಂದಿದೆ.
11. ಭಾರತದ ಸಮುದ್ರ ತೀರ ಪ್ರದೇಶದ ಉದ್ದ 6,100 ಕಿ ಮೀ
ಇದ್ದು. ದ್ವೀಪಗಳನ್ನು ಸೇರಿಸಿ 7,516.6 ಕಿ ಮೀ ಇದೆ.
12. ಭಾರತ ಮತ್ತು ಪಾಕಿಸ್ತಾನದ ಗಡಿ ರೇಖೆಯನ್ನು
ರ್ಯಾಡಕ್ಲೀಪ್ ಎನ್ನುವರು. ಭಾರತ ಮತ್ತು ಅಪಘಾನಿಸ್ತಾನದ
ಗಡಿ ರೇಖೆಯನ್ನು ಡ್ಯೂರಾಂಡ ಎನ್ನುವರು. ಭಾರತ ಮತ್ತು
ಚೈನಾ ಗಡಿ ರೇಖೆಯನ್ನು ಮ್ಯಾಕಮೋಹನ ಎನ್ನುವರು.
13. ಭಾರತ ಮತ್ತು ಶ್ರೀಲಂಕಾವನ್ನು ಪಾಕ್ಜಲಸಂದಿ ಮತ್ತು
ಮನ್ನಾರಖಾರಿ ಪ್ರತ್ಯೇಖಿಸುತ್ತವೆ.
14. ಭಾರತದ ಎರಡೂ ಪ್ರಮುಖ ದ್ವೀಪ ಸಮೂಹಗಳು
ಅಂಡಮಾನ ಮತ್ತು ನಿಕೋಬಾರ-ಲಕ್ಷದ್ವೀಪ ಮತ್ತು
ಮಿನಿಕಾಯ ದ್ವೀಪ ಸಮೂಹಗಳು.
15. ಸಾರ್ಕ-ಸೌತ ಏಶಿಯನ್ ಅಸೋಸಿಯೆಶನ್ ಆಪ್ ರಿಜಿನಲ್
ಕಾಪರ್ೊರೆಶನ್. ಸಪ್ತ-ದಿ ಸೌತ ಏಶಿಯನ್ ಪ್ರಿಪರೆಂಟಿಯಲ್ ಟ್ರೇಡ್
ಅಗ್ರಿಮೆಂಟ್.
16. ಇತ್ತಿಚ್ಚೆಗೆ ನಿರ್ಮಾಣಗೊಂಡ 4 ಹೊಸ ರಾಜ್ಯಗಳು. ಮದ್ಯ
ಪ್ರದೇಶವನ್ನು ವಿಭಜಿಸಿ-ಚತ್ತೀಸಗರ್, ಉತ್ತರ ಪ್ರದೇಶವನ್ನು
ವಿಭಜಿಸಿ-ಉತ್ತರಾಂಚಲ, ಬಿಹಾರವನ್ನು ವಿಭಜಿಸಿ-ಜಾರ್ಖಂಡ,
ಆಂದ್ರ ಪ್ರದೇಶವನ್ನು ವಿಭಜಿಸಿ-ತೆಲಂಗಾಣ ರಾಜ್ಯಗಳನ್ನು
ರಚನೆ ಮಾಡಲಾಗಿದೆ.
17. ಭಾರತದಲ್ಲಿ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ
ಪ್ರದೇಶಗಳಿವೆ.
18. ಭಾರತದ ಅತೀ ದೊಡ್ಡ ರಾಜ್ಯ-ರಾಜ್ಯಸ್ಥಾನ ಅತೀ ಚಿಕ್ಕ
ರಾಜ್ಯ-ಗೋವಾ.
19. ಭಾರತದ ಅತೀ ದೊಡ್ಡ ಕೇಂದ್ರಾಡಳಿತ ಪ್ರದೇಶ-
ಅಂಡಮಾನ ಮತ್ತು ನಿಕೋಬಾರ್ ಮತ್ತು ಅತೀ ಚಿಕ್ಕ
ಕೇಂದ್ರಾಡಳಿತ ಪ್ರದೇಶ-ಲಕ್ಷದ್ವೀಪ.
20. ಹೊಸದಾಗಿ ರಚನೆಯಾದ ಚತ್ತೀಸಗರ್ದ ರಾಜಧಾನಿ-
ರಾಯಪುರ, ಜಾರ್ಖಂಡ ರಾಜಧಾನಿ- ರಾಂಚಿ, ಉತ್ತರಾಂಚಲದ
ರಾಜದಾನಿ-ಡೆಹರಾಡೂನ್, ತೆಲಂಗಾಣದ ರಾಜಧಾನಿ-_______
21. ಭಾತರದ ಅತ್ಯಂತ ಪಶ್ಚಿಮದಲ್ಲಿರುವ ಪ್ರದೇಶ-ಗುಜರಾತ
ರಾಜ್ಯ ತೀರದ ಸರ್ ಕ್ರಿಕ್ ಪ್ರದೇಶ  ಮತ್ತು ಅತ್ಯಂತ
ಪೂರ್ವದಲ್ಲಿರುವ ಪ್ರದೇಶ ಅರುಣಾಚಲ ಪ್ರದೇಶದ ಪೂರ್ವ
ಲೋಹಿತ ಜಿಲ್ಲೆಯ ಗಡಿ ಪ್ರದೇಶ.
22. ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಸೂತ್ತ-ಮೂತ್ತಲಿನ
ರಾಜ್ಯಗಳ ಕೇಲವು ಜಿಲ್ಲೆಗಳ  ಭಾಗಗಳನ್ನು ಸೇರಿಸಿ
(ನ್ಯಾಶನಲ್ ಕ್ಯಾಪಿಟಲ್ ರಿಜನ್ ಎನ್ಸಿಆರ್) ರಾಷ್ಟ್ರೀಯ
ರಾಜಧಾನಿ ಪ್ರದೇಶ ಎಂದು ಕರೆಯಲಾಗಿದೆ.
23. ಆಸಿಯಾನ್-ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ.
24. ಜಿ-4 ರಾಷ್ಟ್ರಗಳು ಭಾರತ, ಬ್ರೇಜಿಲ್, ಜರ್ಮನಿ ಮತ್ತು
ಜಪಾನ್.
25. ಭಾರತ ಮತ್ತು ಶ್ರೀಲಂಕಾದ ನಡುವೆ
ನಿರ್ಮಾಣಗೊಳ್ಳುತ್ತಿರುವ ಹಡಗು ಕಾಲುವೆಯನ್ನು ಸೇತು
ಸಮುದ್ರ ಎನ್ನುವರ.
26. ಭಾರತವು ಬಾಂಗ್ಲಾದೇಶದೊಡನೆ ಅತೀ ಉದ್ದವಾದ
ಗಡಿಯನ್ನು ಹೊಂದಿದೆ.
27. ಪಾಕ್ ಆಕ್ರಮಿತ ಕಾಶ್ಮೀರದ ಗಡಿ ಪ್ರದೇದ ರೇಖೆಯನ್ನು
ನಿಯಂತ್ರಣ ರೇಖೆ ಅಥವಾ ಎಲ್ಓಸಿ (ಲೈನ್ ಆಪ್ ಕಂಟ್ರೋಲ್)
ಎನ್ನುವರು.
28. ಕಾಶ್ಮೀರದ ಪಾಕ್ ಮತ್ತು ಚೈನಾ ಆಕ್ರಮಿತ
ಪ್ರದೇಶಗಳನ್ನು ಪೋಕ ಎನ್ನುವರು.
29. ಭಾರತದ ನೆರೆಯ ದ್ವೀಪ ರಾಷ್ಟ್ರಗಳು- ಶ್ರೀಲಂಕಾ ಮತ್ತು
ಮಾಲ್ಡಿವ್ಸ್.
30. ಭಾರತದ ಉದ್ದ-3214 ಕಿ ಮೀ ಮತ್ತು ಅಗಲ-2933 ಕಿ ಮೀ.
31. ಗುಜರಾತ ರಾಜ್ಯವು ಅತೀ ಉದ್ದವಾದ ಕರಾವಳಿ ತೀರ
ಪ್ರದೇಶವನ್ನು ಹೊಂದಿದೆ.
32. ಭಾರತದ ಭೌಗೋಳಿಕ ಕೇಂದ್ರ- ಮದ್ಯಪ್ರದೇಶದ
ಜಬ್ಬಲಪುರ.
33. ಭಾರತದ ಅತೀ ದೊಡ್ಡ ಜಿಲ್ಲೆ-ಗುಜರಾತನ ಕಚ್ ಹಾಗೂ
ಕಾಶ್ಮೀರದ-ಲ್ಹೇ ಅತೀ
 ಚಿಕ್ಕ ಜಿಲ್ಲೆ-ಪಾಂಡಿಚೇರಿ
34. ಭಾರತವು 7 ರಾಷ್ಟ್ರಗಳೊಂದಿಗೆ ಭೂ ಗಡಿ ರೇಖೆಯನ್ನು
ಹಾಗೂ ಶ್ರೀಲಂಕಾ ಮತ್ತು ಮಾಲ್ಡೀವ್ಸ್ಗಳೊಂದಿಗೆ ಸಾಗರ
ವಲಯ ಗಡಿಯನ್ನು ಹೊಂದಿದೆ.

-:ಸ್ವತಂತ್ರ
ಪೂರ್ವದಲ್ಲಿ
ಧಾರ್ಮಿಕ
ಮತ್ತು
ಸಾಂಸ್ಕೃತಿಕ
ಸಂಸ್ಥೆಯ
ಉದಯಗಳು :-

ಬ್ರಹ್ಮ ಸಮಾಜ ಇದು 1828ರಲ್ಲಿ ರಾಜಾರಾಂ
ಮೋಹನ್ ರಾಯ್ ರವರಿಂದ ಸ್ಥಾಪಿಸಲ್ಪಟ್ಟಿತು ಮತ್ತು ಡೇವಿಡ್
ಹರೆಯವರ ಜೊತೆಗೂಡಿ ಹಿಂದು ಕಾಲೇಜನ್ನು ಸ್ಥಾಪಿಸಿದರು
ಮತ್ತು ವೇದಾಂತ ಕಾಲೇಜನ್ನು ಸ್ಥಾಪಿಸಿದರು,  ಮತ್ತು
ಇವರು ಮೀರತ್ ಉಲ್ ಅಕ್ಬರ್ ಎಂಬ ಪತ್ರಿಕೆಯನ್ನು
ಪ್ರಾರಂಭಿಸಿದರು
ಪ್ರಾರ್ಥನ ಸಮಾಜ ಕೇಸಬ್ ಚಂದ್ರ ಸೇನ್ ರವರಿಂದ
ಪ್ರಾರಂಭವಾಯಿತು, ಪ್ರಾರ್ಥನ ಸಭಾವು ಎಂ.ಜಿ.
ರಾನಡೆಯವರಿಂದ ಪ್ರಾರಂಭವಾಯಿತು, ಆನಂದ್ ಮೋಹನ್
ಬೋಸ್ ರಿಂದ ಸಾಧಾರಣ ಬ್ರಹ್ಮಸಮಾಜ ಸ್ಥಾಪಿತವಾಯಿತು.
ಆರ್ಯ ಸಮಾಜ ಇದು 1875ರಲ್ಲಿ ಸ್ವಾಮಿ ದಯಾನಂದ
ಸರಸ್ವತಿಯವರಿಂದ ಪ್ರಾರಂಭವಾಯಿತು ಇದರ ಧ್ಯೇಯವಾಕ್ಯ
ವೇದಗಳಿಗೆ ಹಿಂದಿರುಗಿ ಎಂದು ಮತ್ತು ಇವರು ಸಿದ್ದಿ
ಆಂದೋಲನವನ್ನು ಪ್ರಾರಂಭಿಸಿ ಇದರ ಮೂಲಕ ಹಿಂದು
ಧರ್ಮದಿಂದ ಬೇರೆಯಾದವರನ್ನು ಮತ್ತೆ ಹಿಂದು ಧರ್ಮಕ್ಕೆ
ಸೇರಿಸಿಕೊಳ್ಳವುದಾಗಿತ್ತು.
ರಾಮಕೃಷ್ಣ ಆಶ್ರಮ ಇದು 1893ರಲ್ಲಿ ವಿಶ್ವಧರ್ಮ
ಸಮ್ಮೇಳನದಲ್ಲಿ ಭಾಗವಹಿಸಿ ಬಂದ ನಂತರ ವಿವೇಕಾನಂದರು
1897 ರಲ್ಲಿ ಪ್ರಾರಂಭಿಸಿದರು
ವೇದ ಸಮಾಜ ಇದು ದಕ್ಷಿಣಭಾರತದಲ್ಲಿ ಶ್ರೀಧರಲು
ನಾಯ್ಡುರಿಂದ ಸ್ಥಾಪಿತವಾಯಿತು
ಧರ್ಮ ಸಭಾ ಇದು ರಾಧಾಕಾಂತ ದೇವರಿಂದ
ಪ್ರಾರಂಭವಾಯಿತು
ರಾಷ್ಟ್ರೀಯ ಸಾಮಾಜಿಕ ಸಭೆ ಎಂ.ಜಿ. ರಾನಡೆಯವರಿಂದ
ಪ್ರಾರಂಭವಾಯಿತು.
ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ 1915 ರಲ್ಲಿ
ಗೋಪಾಲ ಕೃಷ್ಣ ಗೋಖಲೆಯವರಿಂದ ಪ್ರಾರಂಭವಾಯಿತು
ದೇವ ಸಮಾಜ ಶಿವ ನಾರಾಯಣ್ ಅಗ್ನಿಹೋರ್ತಿಯವರಿಂದ
ಪ್ರಾರಂಭವಾಯಿತು
ಥಿಯಾಸಫಿಕಲ್ ಸೊಸೈಟಿ ಇದು 1875ರಲ್ಲಿ ಮೇಡಂ
ಬ್ಲಾವಟ್ಸ್ಕಿಯವರಿಂದ ಪ್ರಾರಂಭವಾಯಿತು ಇದು ಭಾರತದಲ್ಲಿ
ಆನಿಬೆಸೆಂಟ್ ರವರಿಂದ 1882ರಲ್ಲಿ ಪ್ರಾರಂಭವಾಯಿತು,
ಅನಿಬೆಸೆಂಟ್ ರವರು ಸೆಂಟ್ರಲ್ ಹಿಂದು ಕಾಲೇಜನ್ನು
ಪ್ರಾರಂಭಿಸಿದರು ನಂತರ ಇದು ಬನಾರಸ್ ಹಿಂದು ಕಾಲೇಜ್
ಎಂದು ಪ್ರಸಿದ್ಧಿಪಡೆಯಿತು
ಅಲಿಘರ್ ಚಳುವಳಿ ಇದು ಸಯ್ಯದ್ ಅಹಮದ್ ಖಾನ್ ರಿಂದ
ಪ್ರಾರಂಭಿಸಲ್ಪಟ್ಟು ಮುಸ್ಲಿಮರಿಗೆ ಪಾಶ್ಚಾತ್ಯ ಮತ್ತು ಉನ್ನತ
ಶಿಕ್ಷಣ ನೀಡುವುದು ಇದರ ಪ್ರಮುಖ ಗುರಿಯಾಗಿದ್ದಿತು
ಸತ್ಯ ಶೋಧಕ ಸಮಾಜ ಇದು 1873ರಲ್ಲಿ ಜ್ಯೋತಿಬಾ
ಫುಲೆಯವರಿಂದ ಪ್ರಾರಂಭವಾಗಿ ಬ್ರಾಹ್ಮಣಿಕೆಯ ವಿರುದ್ಧದ
ಧ್ವನಿಯಾಗಿ ಹಿಂದುಳಿದ ಮತ್ತು ಕೆಳವರ್ಗಗಳಿಗೆ ಶಿಕ್ಷಣ
ನೀಡುವುದರ ಜೊತೆಗೆ ಅವರ ಹಕ್ಕುಗಳನ್ನು
ಎತ್ತಿಹಿಡಿಯುವುದಾಗಿತ್ತು
ಜಸ್ಟೀಸ್ ಪಾರ್ಟಿ ಮೂಮೆಂಟ್ ಈ ಚಳುವಳಿಯು
ಟಿ.ಎಂ.ನಾಯರ್ ಮತ್ತು ಆರ್.ಟಿ.ಚೆಟ್ಟಿಯವರಿಂದ ಪ್ರಾರಂಭವಾಗಿ
ಇವರು ಸ್ಥಾಪಿಸಿದ ಸೌತ್ ಇಂಡಿಯನ್ ಲಿಬರಲ್ ಫೆಡರೇಷನ್ ಸಂಘದ
ಮೂಲಕ ಆಡಳಿತದಲ್ಲಿ ಮತ್ತು ಸಮಾಜದಲ್ಲಿ ಬ್ರಾಹ್ಮಣಿಕೆಯ
ಪ್ರಾಭಲ್ಯ ತಡೆಯುವುದಾಗಿತ್ತು
ಸೆಲ್ಫ್ ರೆಸ್ಪೆಕ್ಟ್ ಮೂಮೆಂಟ್ ಇದು ತಮಿಳುನಾಡಿನಲ್ಲಿ
1925ರಲ್ಲಿ ಇ.ವಿ.ರಾಮಸ್ವಾಮಿ ನಾಯ್ಕರ್ ರವರಿಂದ
ಪ್ರಾರಂಭವಾಯಿತು.
ಡಾ: ಅಂಬೇಡ್ಕರ್ ರವರು ಬಹಿಷ್ಕೃತ ಹಿತಕಾರಿಣಿ ಸಭಾ, ಬಹಿಷ್ಕೃತ
ಭಾರತ ಮತ್ತು ಸಮಾಜ ಸಮತಾ ಸಭ ಎಂಬ ಸಂಸ್ಥೆಯನ್ನು
ಹಿಂದುಳಿದ ವರ್ಗದವರಿಗಾಗಿ ಪ್ರಾರಂಭಿಸಿದರು, ಇವರು ಪರಿಶಿಷ್ಟ
ಜಾತಿಗಳ ಫೆಡರೇಷನ್ ಎಂಬ ರಾಜಕೀಯ ಪಾರ್ಟಿಯನ್ನು
ಸ್ಥಾಪಿಸಿದರು.
ನೀಲಿ ಬೆಳೆಗಾರರ ದಂಗೆ ಈ ದಂಗೆಯು 1860ರಲ್ಲಿ ಬಂಗಾಳದ
ನೀಲಿ ಬೆಳೆಗಾರರು ಮತ್ತು ಬ್ರಿಟೀಷ್ ಕಾರ್ಖಾನೆಗಳ ವಿರುದ್ಧ
ನೆಡೆಯಿತು ಇದರ ನೇತೃತ್ವವನ್ನು ವಹಿಸಿದವರು ದಿಗಂಬರ ಬಿಸ್ವಾಸ್
ಮತ್ತು ವಿಷ್ಣು ಬಿಸ್ವಾಸ್ ಈ ದಂಗೆಗೆ ಸಂಬಂಧ ಪಟ್ಟಂತೆ ದೀನ
ಬಂಧುಮಿತ್ರರವರು ನೀಲ ದರ್ಪಣ್ ಮಿತ್ರ ಎಂಬ ಕೃತಿ ರಚಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್:
1885ರಲ್ಲಿ ಏ.ಓ.ಹ್ಯೂಂ ರವರಿಂದ ಪ್ರಾರಂಭಿಸಲ್ಪಟ್ಟಿತು
"Safety Volve" ಎಂಬುದು ಭಾರತೀಯ ರಾಷ್ಟ್ರೀಯ
ಕಾಂಗ್ರೆಸ್ ಗೆ ಸಂಬಂಧಪಟ್ಟಿದೆ.  ಇದರ ಮೊದಲ ಸಮ್ಮೇಳನವು
ಬಾಂಬೆಯಲ್ಲಿ ಡಬ್ಲ್ಯೂ.ಸಿ.ಬ್ಯಾನರ್ಜಿಯವರ ಅಧ್ಯಕ್ಷತೆಯಲ್ಲಿ
ಲಾರ್ಡ್ ಡರ್ಫಿನ್ ವೈಸ್ರಾಯ್ ಕಾಲದಲ್ಲಿ ಆಯಿತು. ಈ
ಸಮ್ಮೇಳನಕ್ಕೆ 72 ಜನ ಪ್ರತಿನಿಧಿಗಳು ಆಗಮಿಸಿದ್ದರು. 1907ರ
ಸೂರತ್ ಅಧಿವೇಷಣದಲ್ಲಿ ಸೌಮ್ಯವಾದಿಗಳು ಮತ್ತು
ಉಗ್ರಗಾಮಿಗಳೆಂದು ಇಬ್ಬಾಗವಾಯಿತು. ಉಗ್ರಗಾಮಿಗಳ
ಗುಂಪಿನಲ್ಲಿ ಲಾಲ್, ಬಾಲ್ ಪಾಲ್ ಎಂದು ಹೆಸರಾಗಿದ್ದ ಲಾಲ
ಲಜಪತರಾಯ್, ಬಾಲಗಂಗಾಧರ ತಿಲಕ್, ಬಿಪಿನ್ ಚಂದ್ರಪಾಲ್
ಪ್ರಮುಖವಾಗಿದ್ದರು ಇವರ ಅಧ್ಯಕ್ಷತೆಯನ್ನು ಅರವಿಂದೋ
ಘೋಷ್ ವಹಿಸಿದ್ದರು. ಇದರ ಮೊದಲ ಮುಸ್ಲಿಂ ಅಧ್ಯಕ್ಷರು
ಬಹ್ರುದ್ದೀನ್ ತಯ್ಯಬ್ಜಿ. ಇದರ ಮೊದಲ ಮಹಿಳಾ ಅಧ್ಯಕ್ಷರು
ಆನಿಬೆಸೆಂಟ್. 1929ರ ಲಾಹೋರ್ ಅಧಿವೇಷಣದಲ್ಲಿ ಜವಾಹರ್
ಲಾಲ್ ನೆಹರುರವರ ಅಧ್ಯಕ್ಷತೆಯಲ್ಲಿ ಪೂರ್ಣಸ್ವರಾಜ
ಘೋಷಣೆಯನ್ನು ಕೈಗೊಳ್ಳಲಾಯಿತು. 1931ರ ಕರಾಚಿ
ಅಧಿವೇಷಣದಲ್ಲಿ ವಲ್ಲಭಬಾಯಿ ಪಾಟೀಲರ ಅಧ್ಯಕ್ಷತೆಯಲ್ಲಿ
ಮೂಲಭೂತಹಕ್ಕು ಮತ್ತು ರಾಷ್ಟ್ರೀಯ ವಿತ್ತ ಕಾರ್ಯಕ್ರಮದ
ನಿರ್ಣಯ ತೆಗೆದುಕೊಳ್ಳಲಾಯಿತು. 1938 ರ ಹರಿಪುರ
ಅಧಿವೇಷಣದಲ್ಲಿ ಸುಭಾಷ್ ಚಂದ್ರ ಬೋಸರ ಅಧ್ಯಕ್ಷತೆಯಲ್ಲಿ
ರಾಷ್ಟ್ರೀಯ ಯೋಜನಾ ಆಯೋಗ ಸ್ಥಾಪಿತವಾಯಿತು
ಮತ್ತು 1939ರಲ್ಲಿ ತ್ರಿಪುರ ಅಧಿವೇಷಣದಲ್ಲಿ ಬೋಸರು ಪುನ:
ಆಯ್ಕೆಯಾದಾಗ ಗಾಂಧೀಜಿಯವರು
ಅಸಮದಾನಗೊಂಡಿದ್ದರಿಂದ ಬೋಸರು ರಾಜಿನಾಮೆನೀಡಿದರು,
ಅವರ ಜಾಗದಲ್ಲಿ ರಾಜೇಂದ್ರ ಪ್ರಸಾದರು ಅಧ್ಯಕ್ಷತೆ
ವಹಿಸಿದ್ದರು. 1906 ಕಲ್ಕತ್ತಾ ಅಧಿವೇಷಣದಲ್ಲಿ ಸ್ವರಾಜ್ ಅಂದರೆ
ಸಂಪೂರ್ಣ ಸ್ವಸರ್ಕಾರವು ಭಾರತೀಯರ ಗುರಿಎಂದು ನಿರ್ಣಯ
ಅಂಗೀಕರಿಸಲಾಯಿತು.
ಬಂಗಾಳದ ವಿಭಜನೆ: 16-10-1905ರಂದು ಲಾರ್ಡ್ ಕರ್ಜನ್
ಕಾಲದಲ್ಲಿ ರಾಷ್ಟ್ರೀಯ ಚಳುವಳಿಯನ್ನು ಹತ್ತಿಕ್ಕಲು
ವಿಭಜಿಸಲಾಯಿತು. ನಂತರ ರಾಷ್ಟ್ರಪ್ರೇಮಿಗಳ ತೀವ್ರ
ಒತ್ತಡದಿಂದ 1911ರಲ್ಲಿ ಮತ್ತೆ ಒಂದುಗೂಡಿಸಲಾಯಿತು.
ಸ್ವದೇಶಿ ಚಳುವಳಿ: 1905ರಲ್ಲಿ ಬನಾರಸ್ ಅಧಿವೇಷಣದಲ್ಲಿ
ಮೊದಲಬಾರಿಗೆ ಕರೆನೀಡಲಾಯಿತು.  ಈ ಕರೆಯ ಪ್ರಕಾರ
ಬ್ರಿಟೀಷರ ವಸ್ತುಗಳನ್ನು ಮತ್ತು ಬಟ್ಟೆಗಳನ್ನು
ಉಪಯೋಗಿಸದಂತೆ ಮತ್ತು ಸುಡುವಂತೆ ಪ್ರತಿಜ್ಞೆ
ಕೈಗೊಳ್ಳಲಾಯಿತು.
ಮುಸ್ಲಿಂ ಲೀಗ್ ಇದು ಅಗಾಖಾನ್ ರವರ ಅಧ್ಯಕ್ಷತೆಯಲ್ಲಿ
1906ರಲ್ಲಿ ಪ್ರಾರಂಭಿಸಲಾಯಿತು.  ಇದರ ಪ್ರಕಾರ ಮುಸ್ಲಿಮರಿಗೆ
ಪ್ರತ್ಯೇಕ ಚುನಾವಣೆಗೆ ಆದೇಶಿಸಲಾಯಿತು.
ಗದ್ದಾರ್ ಪಕ್ಷ ಇದು 1913ರಲ್ಲಿ ಲಾಲ ಹರದಯಾಳ್, ತಾರಕನಾಥ್
ದಾಸ್ ಮತ್ತು ಸೋಹನ್ ಸಿಂಗರಿಂದ ಪ್ರಾರಂಭವಾಯಿತು ಇದರ
ಮುಖ್ಯಕಛೇರಿಯು ಸ್ಯಾನ್ ಫ್ರಾನ್ಸಿಸ್ಕೋದಲ್ಲಿತ್ತು.
ಹೋಂ ರೂಲ್ ಚಳುವಳಿ - ತಿಲಕರು ಮಾಂಡಲೆ ಜೈಲಿನಿಂದ
ಹಿಂತಿರುಗಿದ ನಂತರ 1916ರಲ್ಲಿ ಆನಿಬೆಸಂಟರೊಡಗೂಡಿ
ಹೋಂರೂಲ್ ಚಳುವಳಿಯನ್ನು ಸ್ಥಾಪಿಸಿದರು ಇದರ ಮುಖ್ಯ
ಉದ್ದೇಶ ಬ್ರಿಟೀಷರಿಂದ ಸಂಪೂರ್ಣ ಆಡಳಿತವನ್ನು
ಕಿತ್ತುಕೊಂಡು ದೇಶೀಯವಾಗಿ ಆಡಳಿತ ನೆಡೆಸುವುದಾಗಿತ್ತು.
ಈ ಚಳುವಳಿಯಲ್ಲಿ ತಿಲಕರು ಸ್ವರಾಜ್ಯ ನನ್ನ ಜನ್ಮಸಿದ್ದಹಕ್ಕು
ಇದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆಯನ್ನು
ಮಾಡಿದರು.
ಲಕ್ನೋ ಒಪ್ಪಂದ 1916ರಲ್ಲಿ ನೆಡೆದು ಇದು ಟರ್ಕಿಯ ರಾಜನ
ಮೇಲೆ ಬ್ರಿಟೀಷರು ಹೂಡಿದ ಯುದ್ಧದ ವಿರುದ್ಧವಾಗಿದ್ದಿತು.
ಆಗಸ್ಟ್ ಘೋಷಣೆ: 1917ರಲ್ಲಿ ಬ್ರಿಟೀಷರಿಂದ ಘೋಷಿಸಲ್ಪಟ್ಟು
ಇದರ ಪ್ರಕಾರ ಬ್ರಿಟೀಷ್ ಆಡಳಿತದಲ್ಲಿ ಭಾರತೀಯರನ್ನು ಹೆಚ್ಚಾಗಿ
ಸೇರಿಸಿಕೊಳ್ಳುವುದಾಗಿತ್ತು.
ರೌಲತ್ ಕಾಯ್ದೆ ಇದು 18-3-1919 ರಲ್ಲಿ ಜಾರಿಯಾಗಿ ಇದರ
ಪ್ರಕಾರ ಬ್ರಿಟೀಷರಿಗೆ ಅನುಮಾನ ಬಂದ ವ್ಯಕ್ತಿಯನ್ನು
ದೇಶದ್ರೋಹದ ಆಪಾದನೆಯ ಮೇಲೆ ಯಾವುದೇ
ವಿಚಾರಣೆಯಿಲ್ಲದೆ 2 ವರ್ಷಗಳವರೆಗೆ ಜೈಲಿನ ಶಿಕ್ಷೆಯನ್ನು
ನೀಡಬಹುದಾಗಿತ್ತು.  ಮುಂದೆ ಈ ಕಾಯ್ದೆಯು
ಗಾಂಧೀಜಿಯವರಿಗೆ ಅಸಹಕಾರ ಚಳುವಳಿ ನಡೆಸಲು
ಕಾರಣವಾಯಿತು.
ಜಲಿಯನ್ ವಾಲಾಬಾಗ್ ದುರಂತ ಇದು 13-4-1919ರಲ್ಲಿ ನಡೆಯಿತು
ಇದಕ್ಕೆ ಕಾರಣ ಪಂಜಾಬಿನಲ್ಲಿ ರೌಲತ್ ಕಾಯ್ದೆಯ ವಿರುದ್ಧ
ಪ್ರತಿಭಟಿಸುತಿದ್ದಾಗ ಬ್ರಿಟೀಷರು ಡಾ|| ಕಿಚ್ಲು & ಸತ್ಯಪಾಲ್
ಅವರನ್ನು ಬಂಧಿಸಿದರು ಇದರ ವಿರುದ್ಧ ಜನರು ಜಲಿಯನ್
ವಾಲಾಬಾಗ್ ನಲ್ಲಿ ಸಭೆ ಸೇರಿದಾಗ ಆ ಸಭೆಯನ್ನು ಹತ್ತಿಕ್ಕಲು
ಜನರಲ್ ಓ ಡಯರ್ ನನ್ನು ನೇಮಿಸಲಾಯಿತು ಇವನು ಆ ಜನರಿಗೆ
ಯಾವುದೇ ಆದೇಶ ನೀಡದೆ ಬೇಕಾಬೆಟ್ಟಿ
ಗುಂಡುಹಾರಿಸಿದಾಗ ಸಭೆ ಸೇರಿದ್ದ ನೂರಾರು ಜನರು
ಹತ್ಯೆಯಾದರು ಮತ್ತು ಸಾವಿರಾರು ಜನರು
ಗಾಯಾಳುಗಳಾದರು. ಈ ಘಟನೆಯ ವಿರುದ್ಧ ದೇಶಾದ್ಯಂತ
ಪ್ರತಿಭಟನೆಗಳಾದಾಗ ಬ್ರಿಟೀಷರು ಇದರ ವಿಚಾರಣೆಗಾಗಿ ಹಂಟರ್
ಆಯೋಗವನ್ನು ನೇಮಿಸಿದರು.  ಇದನ್ನು ಪ್ರತಿಭಟಿಸಿ
ರವೀಂದ್ರನಾಥ ಟ್ಯಾಗೂರರು ತಮಗೆ ನೀಡಿದ್ದ ನೈಟ್ ಹುಡ್
ಪ್ರಶಸ್ತಿಯನ್ನು ಹಿಂತಿರುಗಿಸಿದರು.
ಈ ಘಟನೆಗೆ ಪ್ರತಿಕಾರವಾಗಿ ಸರ್ದಾರ್ ಉಧಮ್ ಸಿಂಗರು
ಲಂಡನ್ನಿನಲ್ಲಿದ್ದ ಜನರಲ್ ಓ ಡಯರ್ ನನ್ನು ಹುಡುಕಿಕೊಂಡು
ಹೋಗಿ ಲಂಡನ್ನಿನಲ್ಲಿ ಹತ್ಯೆಗೈದರು.
ಕಿಲಾಫತ್ ಚಳುವಳಿ 1920 ರಲ್ಲಿ ಮೊಹಮ್ಮದ್ದ ಆಲಿ ಮತ್ತು
ಶೌಕತ್ ಆಲಿ ಅವರಿಂದ ಪ್ರಾರಂಭವಾಯಿತು.
ಅಸಹಕಾರ ಚಳುವಳಿ ಸೆಪ್ಟೆಂಬರ್ 1920 ಇದು ರೌಲತ್ ಕಾಯ್ದೆ ಮತ್ತು
ಬ್ರಿಟೀಷರ ಧೋರಣೆಯ ವಿರುದ್ಧ ಗಾಂಧೀಜಿಯವರು ಬ್ರಿಟೀಷ್
ಸರ್ಕಾರದ ವಿರುದ್ಧ ನೀಡಿದ ಕರೆಯಾಗಿತ್ತು ಇದರ ಪ್ರಕಾರ ಎಲ್ಲಾ
ಭಾರತೀಯರಿಗೆ ಬ್ರಿಟೀಷರು ನೀಡಿದ್ದ ಪದಕ ಮತ್ತು
ಬಿರುದುಗಳನ್ನು ವಾಪಸ್ ನೀಡುವುದು, ಸರ್ಕಾರದಲ್ಲಿ ಕೆಲಸ
ನಿರ್ವಹಿಸುವ ಎಲ್ಲಾ ಭಾರತೀಯರು ರಾಜಿನಾಮೆ
ನೀಡುವುದು, ಕೋರ್ಟು ಕಛೇರಿಗಳಿಗೆ ಬಹಿಷ್ಕಾರ
ಹಾಕುವುದು, ಸೇನೆಯ ಭಾರತೀಯರು ಸೇನೆ
ಬಿಟ್ಟುಬರುವುದು ಮತ್ತು ವಿದೇಶಿ ವಸ್ತುಗಳನ್ನು
ಬಹಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಯಿತು. ಮುಂದೆ ಚೌರಿ
ಚೌರ ಘಟನೆಯ ನಂತರ ಈ ಚಳುವಳಿಯನ್ನು
ಹಿಂತೆಗೆದುಕೊಳ್ಳಲಾಯಿತು.
ಚೌರಿ-ಚೌರ ಘಟನೆ 1922ರಲ್ಲಿ ಗೋರಖ್ ಪುರದ ಚೌರಿ-ಚೌರ ಎಂಬಲ್ಲಿ
ಚಳುವಳಿಯಲ್ಲಿ ಭಾಗವಹಿಸಿದ್ದವರಮೇಲೆ ಪೊಲೀಸರು
ವಿನಾಕಾರಣ ಹೊಡೆದ ಪರಿಣಾಮ ಚಳುವಳಿಗಾರರು ಅಲ್ಲಿದ್ದ
ಪೊಲೀಸರನ್ನು ಕೂಡಿಹಾಕಿ ಸುಟ್ಟುಬಿಟ್ಟರು ಇದರ
ಪರಿಣಾಮವಾಹಿ ಗಾಂಧೀಜಿಯವರು ತಮ್ಮ ಅಹಿಂಸಾ ಚಳುವಳಿಗೆ
ಧಕ್ಕೆ ಬಂದಿತೆಂದು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು
ಸ್ವರಾಜ್ ಪಕ್ಷ 1923ರಲ್ಲಿ ಮೋತಿಲಾಲ್ ನೆಹರು, ಚಿತ್ತರಂಜನ್
ದಾಸ್ ಮತ್ತು ಕೇಲ್ಕರ್ ರವರು ಬ್ರಿಟೀಷ್ ಸರ್ಕಾರದ ವಿರುದ್ಧ
ಚುನಾವಣೆಯಲ್ಲಿ ಸ್ಪರ್ದಿಸಲು ಸ್ಥಾಪಿಸಿದರು
ಸೈಮನ್ ಆಯೋಗ ಭಾರತದಲ್ಲಿ ರಾಜಕೀಯ ಪರಿಸ್ಥಿಯನ್ನು
ಅವಲೋಕಿಸಲು ಬ್ರಿಟೀಷ್ ಸರ್ಕಾರವು 1927ರಲ್ಲಿ ಜಾನ್
ಸೈಮನ್ ರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿ ಭಾರತಕ್ಕೆ
ಕಳುಹಿಸಿಕೊಟ್ಟಿತು ಆ ಆಯೋಗದಲ್ಲಿ ಭಾರತೀಯರಾರು
ಇಲ್ಲದಿದ್ದರಿಂದ ಎಲ್ಲಾ ಭಾರತೀಯರು ಇದನ್ನು
ಪ್ರತಿಭಟಿಸಿದರು.
ನೆಹರುವರದಿ 1928ರಲ್ಲಿ ಸೈಮನ್ ಆಯೋಗವನ್ನು
ಪ್ರತಿಭಟಿಸಿದನಂತರ ಭಾರತದಲ್ಲಿ ಸ್ವಂತವಾಗಿಯೇ
ಸಂವಿಧಾನವನ್ನು ರಚಿಸಲು ಮೊತಿಲಾಲ್ ನೆಹರುರವರ
ಅಧ್ಯಕ್ಷತೆಯಲ್ಲಿ ವರದಿಯನ್ನು ಸಲ್ಲಿಸಲಾಯಿತು ಈ ವರದಿಯು
ನೆಹರು ವರದಿಯೆಂದು ಪ್ರಖ್ಯಾತವಾಗಿದೆ
ಲಾಹೋರ್ ಸಮಾವೇಶ 19-12-1929 ರಲ್ಲಿ ಜವಾಹರ್ ಲಾಲ್
ನೆಹರು ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಷಣ ನೆಡೆಯಿತು. ಈ
ಸಮಾವೇಶದಲ್ಲಿ ನೆಹರುರವರು 26-1-1930ರಂದು
ಪೂರ್ಣಸ್ವರಾಜ್ಯ ಘೋಷಣೆಮಾಡಿದರು.  31-12-1929ರಂದು
ಈ ಸಮಾವೇಶದಲ್ಲಿ ಮೊದಲ ಬಾರಿಗೆ ತ್ರಿಮರ್ಣ ಧ್ವಜ
ಹಾರಿಸಲಾಯಿತು ಲಾಹೋರ್ ನ ರಾವಿ ನದಿಯ ದಡದಲ್ಲಿ ಮತ್ತು
26-1-1930ರಂದು ಸ್ವತಂತ್ರದಿನ ಎಂದು ಘೋಷಿಸಲಾಯಿತು.
ಭಾರತದ
ಹೊರಗಿನ
ಸ್ವತಂತ್ರ
ಕ್ರಾಂತಿಕಾರಿ
ಸಂಘಗಳು
ಇಂಡಿಯಾ ಹೌಸ್ - ಇದನ್ನು ಸ್ವಾಮಿ ಕೃಷ್ಣ ವರ್ಮರು
ಲಂಡನ್ನಿನಲ್ಲಿ ಸ್ಥಾಪಿಸಿದರು.
ಅಭಿನವ ಭಾರತ - ಇದನ್ನು ವಿ.ಡಿ.ಸಾವರ್ಕರ್ ರವರು 1906ರಲ್ಲಿ
ಲಂಡನ್ನಿನಲ್ಲಿ ಸ್ಥಾಪಿಸಿದರು.
ಗದ್ದರ್ ಪಾರ್ಟಿ - ಇದನ್ನು 1913ರಲ್ಲಿ ಲಾಲಾ ಹರದಯಾಳ್
ಮತ್ತು ತಾರಕ್ ನಾಥ್ ದಾಸ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ
ಸ್ಥಾಪಿಸಿದರು.
ಲೀಗ್ ಮತ್ತು ಗೌರ್ನಮೆಂಟ್ ಇಂಡಿಯನ್ ಇಂಡಿಪೆಂಡೆನ್ಸ್ -
ಇದನ್ನು 1942 ರಲ್ಲಿ ರಾಸ್ ಬಿಹಾರಿ ಬೋಸರು
ಟೋಕಿಯೋದಲ್ಲಿ ಸ್ಥಾಪಿಸಿದರು,
ಲೀಗ್ ಆಫ್ ಇಂಡಿಯನ್ ನ್ಯಾಷನಲ್ ಆರ್ಮಿ  - ಇದನ್ನು 1942ರಲ್ಲಿ
ರಾಸ್ ಬಿಹಾರಿ ಬೋಸರು ಟೋಕಿಯೋದಲ್ಲಿ ಸ್ಥಾಪಿಸಿದರು.
ಇಂಡಿಯನ್ ನ್ಯಾಷನಲ್ ಆರ್ಮಿ - ಇದು ಸುಭಾಷ್ ಚಂದ್ರ
ಭೋಸರಿಂದ ಸ್ಥಾಪಿತವಾಗಿದ್ದು ಇದರ ಪ್ರಧಾನ ಕಛೇರಿಗಳು
ರಂಗೂನ್ ಮತ್ತು ಸಿಂಗಪೂರದಲ್ಲಿತ್ತು ಇದರ ಮಹಿಳಾ ಘಟಕದ
ಹೆಸರು ಝಾನ್ಸಿ ರೆಜಿಮೆಂಟ್ ಇದರ ಕಮ್ಯಾಂಡರ್ ಲಕ್ಷ್ಮಿ ಸೆಹಗಲ್.
ಸ್ವತಂತ್ರ ಪೂರ್ವ ಭಾರತದ ಪ್ರಮುಖ
ಪತ್ರಿಕೆ ಮತ್ತು
ಸಂಪಾದಕರು
ಬಂಗಾಳಗೆಜೆಟ್- ಇದು ಭಾರತದ ಮೊದಲ ಸಮಾಚಾರ
ಪತ್ರಿಕೆಯಾಗಿದ್ದು ಇದರ ಸಂಪಾಕರು ಹಿಕಿ.
ಕೇಸರಿ ಮತ್ತು ಮರಾಠ - ಪತ್ರಿಕೆಗಳ ಸಂಪಾದಕರು
ಬಾಲಗಂಗಾಧರನಾಥ ತಿಲಕರು.
ವಂದೇ ಮಾತರಂ - ಪತ್ರಿಕೆಯ ಸಂಪಾದಕರು ಅರವಿಂದೋ
ಘೋಷ್.
ಹಿಂದು ಪತ್ರಿಕೆಯ ಸಂಪಾದಕರು ರಾಘವಾಚಾರ್ಯ &
ಅಯ್ಯರ್.
ಸೋಮ್ ಪ್ರಕಾಶ ಪತ್ರಿಕೆಯ ಸಂಪಾದಕರು ಈಶ್ವರಚಂದ್ರ
ವಿದ್ಯಾಸಾಗರ.
ಹಿಂದುಸ್ಥಾನ್ ಪತ್ರಿಕೆಯ ಸಂಪಾದಕರು ಮಾಳವೀಯ.
ಮೂಕನಾಯಕ್ ಪತ್ರಿಕೆಯ ಸಂಫಾದಕರು ಡಾ||
ಬಿ.ಆರ್.ಅಂಬೇಡ್ಕರ್.
ಅಲ್ ಹಿಲಾಲ್ ಪತ್ರಿಕೆಯ ಸಂಫಾದಕರು ಅಬ್ದುಲ್ ಕಲಾಂ ಅಜಾದ್.
ಇಂಡಿಪೆಂಡೆಂಟ್ ಪತ್ರಿಕೆಯ ಸಂಪಾದಕರು ಮೊತಿಲಾಲ್ ನೆಹರು.
ಪಂಜಾಬಿ ಪತ್ರಿಕೆಯ ಸಂಪಾದಕರು ಲಾಲ ಲಜಪತರಾಯ್.
ನ್ಯೂ ಇಂಡಿಯಾ ಪತ್ರಿಕೆಯ ಸಂಪಾದಕರು ಆನಿಬೆಸೆಂಟ್.
ಸೌಮತ್ ಕುಮಿದಿ ಮತ್ತು ಮೀರತ್ - ಉಲ್ - ಅಕ್ಬರ್ ಪತ್ರಿಕೆಯ
ಸಂಪಾದಕರು ರಾಜಾ ರಾಮ ಮೊಹನರಾಯ್.
ಇಂಡಿಯನ್ ಮಿರರ್ ಪತ್ರಿಕೆಯ ಸಂಪಾದಕರು ದೇವೇಂದ್ರನಾಥ
ಟ್ಯಾಗೂರ್.
ನವಜೀವನ, ಯಂಗ್ ಇಂಡಿಯಾ, ಹರಿಜನ ಪತ್ರಿಕೆಯ
ಸಂಪಾದಕರು ಗಾಂದೀಜಿ,
ಪ್ರಬುಧ್ಧ ಭಾರತ ಮತ್ತು ಉದ್ಬೋದನ ಪತ್ರಿಕೆಯ
ಸಂಪಾದಕರು ಸ್ವಾಮಿ ವಿವೇಕಾನಂದ.
ಪ್ರಮುಖ ಸ್ವತಂತ್ರ
ಹೋರಾಟಗಾರರ
ಲೇಖನಗಳು:
ಗುಲಾಮಗಿರಿ- ಜ್ಯೋತಿಬಾಪುಲೆ,
ಫಕ್ತೂನ್-ಖಾನ್ಅಬ್ದುಲ್ ಗಫರ್ ಖಾನ್,
ಎಕನಾಮಿಕ್ ಹಿಸ್ಟರ್ ಆಫ್ ಇಂಡಿಯಾ - ಆರ್.ಸಿ.ದತ್ತ್,
ಪಾತೇರ್ ಪಾಂಚಾಲಿ - ಬಿ.ಬಿ.ಬ್ಯಾನರ್ಜಿ,
ಎ ಗಿಫ್ಟ್ ಆಫ್ ಮನೋಥಿಸೀಸ್ - ರಾಜಾ ರಾಮ್ ಮೋಹನ್
ರಾಯ್,
ಆನಂದ ಮಠ ಮತ್ತು ಸೀತಾರಾಮ - ಬಂಕಿಮ ಚಂದ್ರ ಚಟರ್ಜಿ,
ಇಂಡಿಯನ್ ಸ್ಟ್ರಗಲ್ - ಸುಭಾಷ ಚಂದ್ರ ಭೋಸ್,
ಪಾವರ್ಟಿ ಅಂಡ್ ಅನ್ ಬ್ರಿಟೀಷ್ ರೂಲ್ ಇನ್ ಇಂಡಿಯಾ -
ದಾದಾ ಬಾಯಿ ನವರೋಜಿ,
ಅನ್ ಹ್ಯಾಪಿ ಇಂಡಿಯಾ - ಲಾಲಾ ಲಜಪತರಾಯ್,
ದಿ ಇಂಡಿಯನ್ ವಾರ್ ಆಫ್ ಇಂಡಿಪೆಂಡೆನ್ಸ್ - ವಿ.ಡಿ.ಸಾವರ್ಕರ್,
ಇಂಡಿಯಾ ಡಿವೈಡೆಡ್ - ರಾಜೇಂದ್ರ ಪ್ರಸಾದ್,
ದಿ ಡಿಸ್ಕವರಿ ಆಫ್ ಇಂಡಿಯಾ, ಗ್ಲಿಂಪ್ಸಸ್ ಆಫ್.
ಉಪ್ಪಿನ ಸತ್ಯಾಗ್ರಹ:
12-3-1930ರಂದು ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ
(ಬ್ರಿಟೀಷ್ ಆಢಳಿತದ ದೌರ್ಜನ್ಯದ ವಿರುದ್ಧ ಸಾಂಕೇತಿಕವಾಗಿ)
ಉಪ್ಪಿನ ಮೇಲೆ ವಿಧಿಸಿದ್ದ ಕರದ ವಿರುದ್ಧವಾಗಿ ಉಪ್ಪಿನ
ಸತ್ಯಾಗ್ರಹವನ್ನು ಆರಂಭಿಸಿದರು ಸುಮಾರು 78 ಜನ
ಅನುಯಾಯಿಗಳೊಡನೆ ಸಬರಮತಿ ಆಶ್ರಮದಿಂದ ದಂಡಿಯ
ಸಮುದ್ರ ತೀರದವರೆಗೆ ಸುಮಾರು 290 ದಿನಗಳ ಕಾಲ
ಪಾದಯಾತ್ರೆಮಾಡಿ 6-4-1930ರಂದು ಸ್ವತ: ಉಪ್ಪನ್ನು
ತಯಾರಿಸುವ ಮೂಲಕ ಬ್ರಿಟೀಷರ ಕಾನೂನನ್ನು ಬಹಿಷ್ಕರಿಸಿ
ನಾಗರೀಕ ಅಸಹಕಾರ ಚಳುವಳಿಗೆ ನಾಂದಿಹಾಡಿದರು.
ಮೊದಲ ದುಂಡು ಮೇಜಿನ ಸಭೆ 12-11-1930ರಂದು
ಸೈಮನ್ ಕಮಿಷನ್ನಿನ ವಿಚಾರವಾಗಿ ಲಂಡನ್ನಿನಲ್ಲಿ ನೆಡೆಯಿತು,  ಎರಡನೆ
ದುಂಡು ಮೇಜಿನ ಸಭೆ 1931 ರಲ್ಲಿ ಗಾಂಧೀಜಿಯವರು ಮತ್ತು
ರಾಮ್ಸೆ ಮ್ಯಾಕ್ ಡೊನಾಲ್ಡ್  ಉಪಸ್ಥಿಯಲ್ಲಿ ಲಂಡನ್ನಿನಲ್ಲಿ
ನೆಡೆಯಿತು ಈ ಸಭೆಯಲ್ಲಿ ಅಲ್ಪಸಂಖ್ಯಾತರಿಗೆ ಪ್ರತ್ಯೇಕ
ಚುನಾವಣೆ ನೆಡೆಸಲು ಆಗ್ರಹಿಸಲಾಯಿತು ಇದರಿಂದ ಸಭೆಯು
ಯಶಸ್ವಿಯಾಗಲಿಲ್ಲ. ಸಭೆಮುಗಿಸಿಕೊಂಡು ಬಂದ
ಗಾಂಧೀಜಿಯವರು 1932ರಲ್ಲಿ ಅಸಹಕಾರ ಚಳುವಳಿಗೆ
ಕರೆನೀಡಿದರು ಈ ಚಳುವಳಿಯು ನ್ಯಾಯಬಾಹಿರವೆಂದು
ಬ್ರಿಟೀಷರು ಗಾಂಧೀಜಿಯವರನ್ನು ಯರವಾದ ಜೈಲಿಗೆ
ಹಾಕಿದರು. ನಂತರ ಬ್ರಿಟೀಷರ ಕುಮ್ಮಕ್ಕಿನಿಂದ ದೇಶದಲ್ಲಿ
ಜನಾಂಗೀಯ ಗಲಬೆಯುಂಟಾಗಿ ಅಪಾರ ಸಾವುನೋವು
ಉಂಟಾದ್ದರಿಂದ ಗಾಂಧೀಜಿಯವರು ಯರವಾಡ ಜೈಲಿನಲ್ಲಿ
ಆಮರಣಾಂತ ಉಪವಾಸ ಕೈಗೊಂಡರು. ಮೂರನೆ
ದುಂಡುಮೇಜಿನ ಸಭೆ 1932ರಲ್ಲಿ ನೆಡಯಿತು ಇದು ಗೌರ್ನಮೆಂಟ್
ಆಫ್ ಇಂಡಿಯಾ ಆಕ್ಟ್ 1935 ಜಾರಿಯಾಗಲು ದಾರಿಯಾಯಿತು.
ಡಾ|| ಬಿ.ಆರ್. ಅಂಬೇಡ್ಕರರು ಮೂರು ದುಂಡು ಮೇಜಿನ
ಸಭೆಯಲ್ಲಿ ಭಾಗವಹಿಸಿದ ಏಕೈಕ ಸದಸ್ಯರಾಗಿದ್ದರು.
ದಾದಾಬಾಯಿ ನವರೋಜಿಯವರು ಹೌಸ್ ಆಫ್ ಕಾಮನ್ಸ್ ನ
ಸದಸ್ಯರಾದ ಮೊದಲ ಭಾರತೀಯರು,  ಖುದೈ ಖಿದ್ಮತ್ ದಾರ್
ಅಂದರ ಕೆಂಪಂಗಿ ದಳವನ್ನು ಪ್ರಾರಂಭಿಸಿದವರು ಖಾನ್ ಅಬ್ದುಲ್
ಗಫಾರ್ ಖಾನ್.
ಪ್ರಮುಖ
ಸ್ವತಂತ್ರ
ಹೋರಾಟಗಾರರ
ಘೊಷಣೆಗಳು
ಸತ್ಯಮೇವ ಜಯತೆ : ಮದನ ಮೋಹನ ಮಾಳವೀಯ,
ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು ಅದನ್ನು ಪಡೆದೇ
ತೀರುವೆ - ಬಾಲಗಂಗಾಧರ ತಿಲಕರು,
ಜೈ ಜವಾನ್ ಜೈ ಕಿಸಾನ್ ಲಾಲ್ ಬಹದ್ದೂರ್ ಶಾಸ್ತ್ರಿ,
ನೀವು ನನಗೆ ರಕ್ತಕೊಡಿ ನಾನು ನಿಮಗೆ ಸ್ವಾತಂತ್ರ
ಕೊಡುತ್ತೇನೆ,
ದಿಲ್ಲಿ ಚಲೊ ಮತ್ತು ಜೈಹಿಂದ್ - ಸುಭಾಷ್ ಚಂದ್ರ ಬೋಸ್,
ಮಾಡು ಇಲ್ಲವೇ ಮಡಿ - ಗಾಂಧೀಜಿ,
ಸೆಕ್ಯೂರ್ ದಿ ಫ್ರೀಡಂ ಆಫ್ ಇಂಡಿಯಾ ಅಟ್ ಎನಿ ಕಾಸ್ಟ್ -
ಅರವಿಂದೋ ಘೋಷ್,
ಇನ್ಕಿಲಾಬ್ ಜಿಂದಾಬಾದ್ - ಭಗತ್ ಸಿಂಗ್.
ಕ್ರಿಪ್ಸ್
ನಿಯೋಗ
ಕ್ರಿಪ್ಸ್ ನಿಯೋಗ: 1939 ರಿಂದ 1945ರ ವರೆಗೆ ನೆಡೆದ ಎರಡನೇ
ಮಹಾಯುದ್ಧದಲ್ಲಿ ಶತೃಸೈನ್ಯದ ಎದುರು ಬ್ರಿಟೀಷರ
ಪ್ರಾಬಲ್ಯ ಕಡಿಮೆಯಾದಾಗ ಬ್ರಿಟೀಷರು ತಮ್ಮ ಪರ
ಯುದ್ಧದಲ್ಲಿ ಭಾರತೀಯರು ಭಾಗವಹಿಸುವಂತೆ ಪ್ರೇರೇಪಿಸಿ
ಅದಕ್ಕೆ ಪ್ರತಿಯಾಗಿ ಯುಧ್ಧ ಮುಗಿದ ನಂತರ  ಭಾರತೀಯರಿಗೆ
ಸಂಪೂರ್ಣ ರಾಷ್ಟ್ರದ ಪ್ರಭುತ್ವವನ್ನು ನೀಡುತ್ತೇವೆ
ಎಂದು ತಿಳಿಸಿ ಆ ಒಪ್ಪಂದಕ್ಕಾಗಿ 1942ರಲ್ಲಿ ಹೌಸ್ ಆಫ್ ಕಾಮನ್ಸ್
ಅಧ್ಯಕ್ಷರಾಗಿದ್ದ ಸ್ಟಾಫರ್ಡ್ ಕ್ರಿಪ್ಸ್ ನಿಯೋಗವನ್ನು ಭಾರತಕ್ಕೆ
ಕಳುಹಿಸಿತು.  ಈ ನಿಯೋಗವು ಬ್ರಿಟೀಷರ ಅಧೀನದಲ್ಲಿ ಕೆಲವು
ಭಾಗದಲ್ಲಿ ಮಾತ್ರ ಅಂದರೆ ಮಿಲಿಟರಿ ಮುಂತಾದ ಮುಖ್ಯ
ಇಲಾಖೆಗಳು ಬ್ರಿಟೀಷರ ಅಧೀನದಲ್ಲಿದ್ದು ಕೆಲವನ್ನು ಮಾತ್ರ
ಭಾರತೀಯರಿಗೆ ಸ್ವತಂತ್ರ ನೀಡಲು ಒಪ್ಪಿತು ಮತ್ತು ಭಾರತದ
ಸಂವಿಧಾನವು ಸಂಫೂರ್ಣ ಬ್ರಟೀಷರಿಂದ
ಮಾಡಲ್ಪಟ್ಟಿರಬೇಕೆಂದು ಹೇಳಿತು ಈ ಒಪ್ಪಂದವನ್ನು
ಭಾರತೀಯರು ತೀವ್ರವಾಗಿ ವಿರೋಧಿಸಿದರು ಮತ್ತು
ಗಾಂಧೀಜಿಯವರು ಇದನ್ನು ಪೋಸ್ಟ್ ಡೇಟೆಡ್ ಚೆಕ್ ಇನ್ ಎ
ಕ್ರಾಷಿಂಗ್ ಬ್ಯಾಂಕ್ ಎಂದು ಟೀಕಿಸಿದರು ಮತ್ತು ಇದರ
ವಿರುದ್ಧವಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು
ಪ್ರಾರಂಭಿಸಿದರು.
ಕ್ವಿಟ್
ಇಂಡಿಯಾ
ಚಳುವಳಿ
ಕ್ವಿಟ್ ಇಂಡಿಯಾ ಚಳುವಳಿ : ಕ್ರಿಪ್ಸ್ ನಿಯೋಗದ ವೈಫಲ್ಯದ
ನಂತರ ಬ್ರಿಟೀಷರ ನೀತಿಗೆ ವಿರುದ್ಧವಾಗಿ 08-08-1942ರಲ್ಲಿ
ಗಾಂಧೀಜಿಯವರು ಬಾಂಬೆಯಲ್ಲಿ ಬ್ರಿಟೀಷರೆ ಭಾರತಬಿಟ್ಟು
ತೊಲಗಿ ಚಳುವಳಿಗೆ ಕರೆನೀಡಿದರು. ಈ ಚಳುವಳಿಯಲ್ಲಿ
ಗಾಂಧೀಜಿಯವರು ಮಾಡು ಇಲ್ಲವೆ ಮಡಿ ಘೋಷಣೆಮಾಡಿದರು
ಇದಕ್ಕೆ ಪ್ರತಿಯಾಗಿ ಬ್ರಿಟೀಷರು ಗಾಂಧೀಜಿಯವರನ್ನು
ಅಗಾಖಾನ್ ಅರಮನೆಯಲ್ಲಿ ಗೃಹಬಂಧನದಲ್ಲಿಟ್ಟರು ನಂತರ
ಜೆ.ಪಿ.ನಾರಾಯಣ್, ಲೋಹಿಯಾ ಮತ್ತು ಅರುಣಾ ಆಸಿಫ್
ಆಲಿಯವರು ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದರು, ಈ
ಚಳುವಳಿಯು ಕಾಂಗ್ರೆಸ್ ರೇಡಿಯೋದಲ್ಲಿ ವಾಚಕಿಯಾಗಿದ್ದ
ಉಷಾಮೆಹ್ತಾರವರಿಂದ ತೀವ್ರ ಸ್ವರೂಪ ಪಡೆಯಲು
ಸಹಕಾರಿಯಾಯಿತು. ಆದರೆ ಚಳುವಳಿಯ ನೇತೃತ್ವ
ವಹಿಸಬೇಕಾಗಿದ್ದ ನಾಯಕರಲ್ಲಿ ಹೆಚ್ಚಿನವರು
ಜೈಲಿನಲ್ಲಿದ್ದಿದ್ದರಿಂದ ನಾಯಕತ್ವದ ಕೊರತೆಯಿಂದಾಗಿ
ಚಳುವಳಿಗೆ ಹಿನ್ನೆಡೆಯಾಯಿತು.
ವೇವೆಲ್ ಪ್ಲಾನ್ 1945 ನಲ್ಲಿ,
ಕ್ಯಾಬಿನೆಟ್ ಮಿಷನ್ ಪ್ಲಾನ್ 1946ನಲ್ಲಿ,
ಮೌಂಟ್ ಬ್ಯಾಟನ್ ಪ್ಲಾನ್ 1947ರಲ್ಲಿ,
ರೆಗ್ಯುಲೇಟಿಂಗ್ ಆಕ್ಟ್ 1773ರಲ್ಲಿ,
ಪಿಟ್ಸ್ ಇಂಡಿಯಾ ಆಕ್ಟ್ 1784ರಲ್ಲಿ,
ಇಂಡಿಯನ್ ಕೌನ್ಸಿಲ್ ಆಕ್ಟ್ 1861ರಲ್ಲಿ,
ಮಾರ್ಲೆ-ಮಿಂಟೋ ಆಕ್ಟ್ 1909ರಲ್ಲಿ,
ಮಾಂಟೆಗೊ-ಚೆಲ್ಮ್ಸ್ ಫೋರ್ಡ್ ರೀಫಾರ್ಮ್ಸ್1919ರಲ್ಲಿ,
ಗೌರ್ನಮೆಂಟ್ ಆಫ್ ಇಂಡಿಯಾ ಆಕ್ಟ್ 1935ರಲ್ಲಿ,
ಶಾರದ ಆಕ್ಟ್ - 1929ರಲ್ಲಿ ಜಾರಿಯಾಯಿತು.
ಜಮೀನ್ದಾರಿ
ವ್ಯವಸ್ಥೆ ಜಮೀನ್ದಾರಿ
ವ್ಯವಸ್ಥೆಯು 1793 ಕಾರ್ನ್ವಾಲೀಸ್ ರಿಂದ
ಪ್ರಾರಂಭವಾಯಿತು.  ಇದು ಬಂಗಾಳ, ಬಿಹಾರ, ಒರಿಸ್ಸಾ
ರಾಜ್ಯಗಳಲ್ಲಿ ಮುಖ್ಯವಾಗಿ ಈ ವ್ಯವಸ್ಥೆಯು
ಜಾರಿಯಲ್ಲಿತ್ತು,
ರಾಯತ್ವಾರಿ ವ್ಯವಸ್ಥೆ ಇದು ಲಾರ್ಡ್ ಮುನ್ರೋ ಮತ್ತು
ಚಾರ್ಲ್ಸ್ ರೀಡ್ ರವರಿಂದ ಪ್ರಾರಂಭವಾಯಿತು. ಈ ವ್ಯವಸ್ಥೆಯ
ಪ್ರಕಾರ ರಿಕಾರ್ಡಿಯೋ ಸಿದ್ದಾಂತದಂತೆ ನೇರವಾಗಿ ರೈತರು
ಮತ್ತು ಸರ್ಕಾರದ ನಡುವೆ ಮಣ್ಣಿನ ಗುಣ ಮತ್ತು ಬೆಳೆಯ ವಿಧದಂತೆ
ಸುಮಾರು 30 ವರ್ಷಗಳ ಒಪ್ಪಂದದಂತೆ ಕಂದಾಯ
ನಿರ್ಧರಿಸಲಾಗುತ್ತಿತ್ತು. ಈ ವ್ಯವಸ್ಥೆಯು ಬಾಂಬೆ, ಮದ್ರಾಸ್
ಮತ್ತು ಅಸ್ಸಾಂ ರಾಜ್ಯಗಳಲ್ಲಿ ಜಾರಿಯಲ್ಲಿದ್ದಿತು
ಮಹಲ್ವಾರಿ ವ್ಯವಸ್ಥೆ ಇದು ಜಮೀನ್ದಾರಿ ವ್ಯವಸ್ಥೆಯ
ಮುಂದುವರೆದ ಭಾಗವಾಗಿದ್ದು ಕಂದಾಯವನ್ನು ಕಾಲಕಾಲಕ್ಕೆ
ತಕ್ಕಂತೆ ಪಾವತಿಸಬೇಕಾಗಿತ್ತು ಈ ವ್ಯವಸ್ಥೆಯು ಗಂಗಾ
ತೀರದ ಪ್ರದೇಶಗಳು, ಪಂಜಾಬ್ ಮತ್ತು ಪಶ್ಚಿಮ ಉತ್ತರ
ಪ್ರದೇಶ ಮುಂತಾದ ಕಡೆ ಜಾರಿಯಲ್ಲಿತ್ತು
1857 ಮಾರ್ಚ್ 29ರಂದು ಸಿಪಾಯಿದಂಗೆಯು 19ನೇ
ಇನ್ಫಾಂಟ್ರಯಲ್ಲಿದ್ದ ಮಂಗಲ್ ಪಾಂಡೆಯ ಮುಖಾಂತರ
ಪ್ರಾರಂಭವಾಯಿತು ಇದಕ್ಕೆ ಪ್ರಮುಖ ಕಾರಣಗಳು ರಾಜಕೀಯ
ಕಾರಣ, ಆರ್ಥಿಕ ಕಾರಣ, ಸೈನಿಕ ಕಾರಣ, ಧಾರ್ಮಿಕ ಕಾರಣ,
ಸಾಮಾಜಿಕ ಕಾರಣ ಮುಂತಾದವು ಈ ದಂಗೆಯಲ್ಲಿ
ಭಾಗವಹಿಸಿದ್ದ ಪ್ರಮುಖ ವ್ಯಕ್ತಿಗಳು ದೆಹಲಿಯಿಂದ ಭಕ್ತಖಾನ್,
ಕಾನ್ಪುರದಿಂದ ನಾನಾಸಹೇಬ, ಅವಧ್ ಯಿಂದ
ತಾತ್ಯಾಟೋಪಿ, ಝಾನ್ಸಿಯಿಂದ ರಾಣಿ ಲಕ್ಷೀಬಾಯಿ,
ಬಿಹಾರದಿಂದ ಕುನ್ವರ್ ಸಿಂಗ್ ಮತ್ತು ಅಮರ್ ಸಿಂಗ್, ಮಥುರದಿಂದ
ದೇವಿಸಿಂಗ್ ಮತ್ತು ಮೀರತ್ ನಿಂದ ಕದಮ್ ಸಿಂಗ್. ಈ ದಂಗೆಯು
ವಿಫಲವಾಯಿತು ಇದಕ್ಕೆ ಮುಖ್ಯ ಕಾರಣಗಳು ಭಾರತದವರೇ ಆದ
ಅನೇಕ ರಾಜರುಗಳು ಬ್ರಿಟೀಷರಿಗೆ ಸಹಾಯಮಾಡಿ ದಂಗೆ
ಹತ್ತಿಕ್ಕಲು ಕಾರಣರಾದರು, ದಂಗೆಕಾರರಲ್ಲಿ ಸರಿಯಾದ
ಸುಧಾರಿತ ಆಯುಧಗಳಿರಲಿಲ್ಲ, ಸರಿಯಾದ ನಾಯಕತ್ವದ ಕೊರತೆ,
ದಂಗೆಕಾರರಲ್ಲಿ ಸಂವಹನದ ಕೊರತೆ ಮುಂತಾದವು. ಈ ದಂಗೆಯ
ಕಾರಣದಿಂದ ಭಾರತದ ಒಕ್ಕೂಟ ಮೂಡಲು ಸಹಾಯವಾಯಿತು
ಮತ್ತು 1858ರಲ್ಲಿ ಬ್ರಿಟೀಷರಿಂದ ಗೌರ್ನಮೆಂಟ್ ಆಫ್ ಇಂಡಿಯಾ
ಕಾಯ್ದೆ ಜಾರಿಯಾಯಿತು.
1) ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ:
* ಶ್ರೀಗಂಧ ಮರ.
2) ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ:
* ಜೈಸಲ್ಮೇರ್
3) "Kurukshetra to Kargil " ಎಂಬ ಇತ್ತೀಚಿನ ಕೃತಿ ಬರೆದವರು :
* ಕುಲ್ ದೀಪ್ ಸಿಂಗ್.
4) ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ
ಸದಸ್ಯತ್ವವನ್ನು ಪಡೆದ ದೇಶ;
* ರಷ್ಯಾ.
5) ಚೀನಾ ದೇಶವನ್ನು ಆಳಿದ ಕೊನೆಯ ರಾಜವಂಶ:
* ಮಂಚು.
6) ಮೌಂಟ್ ಏವ್ಹರೇಸ್ಟ್ ಶಿಖರವನ್ನು ಏರಿದ ಪ್ರಥಮ ವಿಕಲಚೇತನ
ಮಹಿಳೆ:
* ಅರುನಿಮಾ ಸಿನ್ಹಾ.
7) ಸಿಸ್ಟೈಟಿಸ್ ಎಂಬ ಸೊಂಕು ಯಾವ ಅಂಗಾಂಗಕ್ಕೆ
ಸಂಬಂಧಿಸಿದೆ ?
* ಮೂತ್ರ ಕೋಶ.
8) UHF ಪಟ್ಟಿಯ ಆವರ್ತಾಂಕ ವ್ಯಾಪ್ತಿ:
* 300 ರಿಂದ 3000 ಮೆಗಾಹರ್ಟ್ಜ್.
9) ಜೀವಂತ ದೇಹದಲ್ಲಿನ ಅತೀ ಕಡಿಮೆ ಇರುವ ಧಾತು:
* ಮ್ಯಾಂಗನೀಸ್.
10)ಪರ್ಯಾಯ ನೋಬೆಲ್ ಎಂದು ಪರಿಗಣಿಸಲ್ಪಡುವ ಬಹುಮಾನ:
* ರೈಟ್ ಲೈವಿಲಿ ಹುಡ್ ಪ್ರಶಸ್ತಿ.
11) ವಿಶ್ವ ಮಾನಸಿಕ ಆರೊಗ್ಯ ದಿನ:
★ ಅಕ್ಟೋಬರ್ 10.
12) 'ಸಂಯುಕ್ತ ಪಾಣಿಗ್ರಹ' ಯಾವ ನೃತ್ಯ ಪದ್ಧತಿಗೆ
ಪ್ರಸಿದ್ಧವಾಗಿದೆ?
★ ಮಣಿಪುರಿ.
13) ಅತೀ ಉದ್ದವಾದ ನರತಂತು ಎಷ್ಟು ಸೆಂ.ಮೀ.
ಉದ್ದವಿರುತ್ತದೆ.?
★ 100 cm.
14) ನೀರು ಗಡುಸಾಗಲು ಮುಖ್ಯ ಕಾರಣವಾದ ಲವಣ?
★ ಸೋಡಿಯಂ ಕ್ಲೋರೈಡ್.
15) " ದಿವಾನ್ -ಈ -ಬಂದಗನ್ " ಅಥವಾ ಗುಲಾಮರ ಆಡಳಿತ
ವಿಭಾಗವನ್ನು ಸ್ಥಾಪಿಸಿದವರು?
★ ಫಿರೋಜ್ ಷಾ ತುಘಲಕ್.
16) 'ದಾಮ್' ಎಂಬ ಹೊಸ ನಾಣ್ಯವನ್ನು ಚಲಾವಣೆಗೆ
ತಂದವರು?
★ ಅಲ್ಲಾವುದ್ದೀನ್ ಖಿಲ್ಜಿ.
17) ದೆಹಲಿಯ ಸುಲ್ತಾನ ರಜಿಯಾ ಬೇಗಮ್ ಹತ್ಯೆಗೈಯಲ್ಪಟ್ಟ
ಸ್ಥಳ?
★ ಕೈತಾಲ್.
18) 'ನಡೆದಾಡುವ ಕೋಶ' ಎಂದು ಖ್ಯಾತರಾದವರು?
★ ಶಿವರಾಮ ಕಾರಂತ.
19) ಕರ್ನಾಟಕದ ಉಚ್ಚ ನ್ಯಾಯಾಲಯ ದ ಸಂಚಾರಿ ಪೀಠ
ಎಲ್ಲಿದೆ?
★ ಧಾರವಾಡ.
20) ಮಾನವನ ಕಣ್ಣಿನಲ್ಲಿರುವ ಮಸೂರ ಯಾವ ಬಗೆಯದು?
★ ದ್ವಿ-ಪೀನ.
21) ಮಾನವನ ದೇಹಕ್ಕೆ ರೋಗದ ವಿರುದ್ಧ ರಕ್ಷಣೆ ಸಿಗುವುದು?
★ ಬಿಳಿ ರಕ್ತ ಕಣಗಳಿಂದ.
22) ಮಾನವನ ದೇಹದ ಉಸಿರಾಟ ನಿಯಂತ್ರಣ ಕೇಂದ್ರ
ಯಾವುದು?
★ ಮೆಡುಲ್ಲಾ ಅಬ್ಲಾಂಗೇಟಾ (ಮಣಿ ಸಿರ ).
23) T-20 ಪಂದ್ಯಗಳಲ್ಲಿ 5548 ರನ್ ಗಳಿಸಿ ಅತೀ ಹೆಚ್ಚು ರನ್
ಗಳಿಸಿದ ವಿಶ್ವದ ಮೊದಲ ಆಟಗಾರ?
★ ಬ್ರಾಡ್ ಹಾಡ್ಜ್.
24) 2013 ರ ಮೇ ತಿಂಗಳಾಂತ್ಯದಲ್ಲಿ ಹೊಸ ಸಂವಿಧಾನ
ಅಳವಡಿಸಿಕೊಂಡ ದೇಶ?
★ ಜಿಂಬಾಬ್ವೆ.
25) ಅಗಸ್ಟ್ 9,1942 ರಂದು Quit India Movement ಗೆ
ಚಾಲನೆಯಿಟ್ಟವರು?
★ ಅರುಣಾ ಅಸಫ್ ಅಲಿ.
26) 'New India and Common Wheel' ಎಂಬ ಪತ್ರಿಕೆಗಳನ್ನು
ಹೊರಡಿಸಿದವರು?
★ ಅನಿಬೆಸಂಟ್.
27) ' ಇಂಡಿಯಾ ಡಿವೈಡೆಡ್ ' ಕೃತಿಯನ್ನು ಬರೆದವರು?
★ ಅಬ್ದುಲ್ ಕಲಾಂ ಆಜಾದ್.
28) 'ಗದ್ದರ ಪಕ್ಷ' ಎಂಬ ಕ್ರಾಂತಿಕಾರಿ ರಾಷ್ಟೀಯ ಸಂಘಟನೆಯ
ಕೇಂದ್ರ ಸ್ಥಳ?
★ ಸ್ಯಾನ್ ಫ್ರಾನ್ಸಿಸ್ಕೋ.
29) ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರ ಆಶ್ರಮದ ಹೆಸರು?
★ ಫಿನಿಕ್.
30) ಅರಬಿಂದೊ ಆಶ್ರಮ ಇರುವ ಸ್ಥಳ?
★ ಪಾಂಡಿಚೇರಿ.
31) ಭಾರತ ಸಂವಿಧಾನದ ಯಾವ ವಿಧಿಯನ್ನು'ಸಂವಿಧಾನದ ಆತ್ಮ
ಮತ್ತೂ ಹೃದಯ' ಎಂದು ಕರೆಯುತ್ತಾರೆ? .
★ 32ನೇ ವಿಧಿ.
32) ಯಾವ ತಿದ್ದುಪಡಿಯನ್ನು 'ಪುಟ್ಟ ಸಂವಿಧಾನ ' ಎಂದು
ಕರೆಯಲಾಗುತ್ತದೆ? .
★ 42ನೇ ವಿಧಿ.
33) ಮತದಾನದ ವಯಸ್ಸನ್ನು 21ರಿಂದ 18ವರ್ಷಕ್ಕೆ ಇಳಿಸಿದ
ತಿದ್ದುಪಡಿ? .
★ 61ನೇ ತಿದ್ದುಪಡಿ.
34) ಶೈಕ್ಷಣಿಕ ಸೇವೆಗೆಂದು ಉಡಾವಣೆಯಾಗಿರುವ ಭಾರತದ
ಪ್ರಥಮ ಉಪಗ್ರಹ ಯಾವುದು?
★ ಎಜುಸ್ಯಾಟ್ (EDUSAT) .
35) ರಾಜ್ಯಪಾಲರ ಆಜ್ಞೆಯ ಪರಮಾವಧಿ?
★ 6 ತಿಂಗಳು.
36) ರಕ್ಷಣಾ ನಿರ್ವಹಣಾ ಶಿಕ್ಷಣ ಸಂಸ್ಥೆ ಎಲ್ಲಿದೆ? .
★ ಸಿಕಂದರಾಬಾದ್.
37) ಸಮುದ್ರ ನೀರಿನಿಂದ ಸ್ವಚ್ಛ ನೀರನ್ನು ಪಡೆಯುವ ವಿಧಾನ?
★ ಭಟ್ಟಿ ಇಳಿಸುವಿಕೆ.
38) ಬ್ರಿಟನ್ ಆಡಳಿತದ ಭಾರತದಲ್ಲಿ ಆಂಗ್ಲ ಭಾಷೆಯ ಅಳವಡಿಕೆಗೆ
ಕಾರಣರಾದ ಗವರ್ನರ್ ಜನರಲ್? .
★ ಲಾರ್ಡ್ ವಿಲಿಯಂ ಬೆಂಟಿಂಕ್.
39) ಬ್ಯಾಕ್ಟೀರಿಯಗಳಲ್ಲಿರುವ ಕ್ರೋಮೋಸೋಮ್ ಗಳ
ಸಂಖ್ಯೆ?
★ 1.
40) ಬ್ಯಾಟರಿಗಳಲ್ಲಿ ಬಳಸಲಾಗುವ ಆಸಿಡ್?
★ ಸಲ್ಪೂರಿಕ್ ಆಸಿಡ್.
41) ಮಾಲ್ಡೀವ್ಸ್ ದೇಶದ 6ನೇ ಅಧ್ಯಕ್ಷನಾಗಿ ಪ್ರಮಾಣವಚನ
ಸ್ವೀಕರಿಸಿದವರು?
 ★ ಅಬ್ದುಲ್ಲಾ ಯಮೀನ್.
42) 2013 ನೇ ಸಾಲಿನ ಅಂತರಾಷ್ಟ್ರೀಯ ' ಇಂದಿರಾಗಾಂಧಿ
ಶಾಂತಿ, ನಿಶ್ಯಸ್ತ್ರೀಕರಣ, ಅಭಿವೃದ್ಧಿ ' ಪ್ರಶಸ್ತಿ ಪಡೆದವರು?
★ ಏಂಜೆಲಿನಾ ಮಾರ್ಕೆಲ್.
43) ಮೂಲತಃ ಭಾರತೀಯ ಉಪಖಂಡವು ಯಾವ ಅತೀ
ದೊಡ್ಡ ಜಡತ್ವ ಪರಿಮಾಣದ ಭಾಗವಾಗಿದೆ?
★ ಗೊಂಡವಾನಾ ಖಂಡ.
44) ' ವಿಶ್ವದ ಕಾಫಿ ಬಂದರು ' ?
★ ಸ್ಯಾಂಟೋಸ್.
45) ಜಲಾಂತರ್ಗಾಮಿ ಹಡಗಿನ ನಾವಿಕರು ಸಮುದ್ರದ ಮೇಲ್ಮೈ
ವಸ್ತುಗಳನ್ನು ನೋಡಲು ಬಳಸುವ ಉಪಕರಣ?
★ ಪೆರಿಸ್ಕೋಪ್.
46) ಮೋಟಾರ್ ಕಾರ್ ಚಾಲಕನ ಸುರಕ್ಷತೆಗಾಗಿ
ಉಪಯೋಗಿಸುವ ವಾಯುಚೀಲದಲ್ಲಿ ತುಂಬಿರುವ ಅನೀಲ?
★ ಸೋಡಿಯಂ ಅಝೈಡ್.
47) ಭಾರತರತ್ನ ಪುರಸ್ಕೃತ ಪ್ರೊ. ರಾವ್ ರವರು ಯಾವ
ಕ್ಷೇತ್ರದಲ್ಲಿ ಹೆಸರು ಪಡೆದಿದ್ದಾರೆ?
★ ಘನಸ್ಥಿತಿ ಮತ್ತು Material Chemistry
48) ಭಾರತರತ್ನ ಪ್ರಶಸ್ತಿಯನ್ನು ಪಡೆದ ಮೊದಲ ಕ್ರೀಡಾಪಟು?
★ ಸಚಿನ್ ತೆಂಡೂಲ್ಕರ್.
49) ಜಗತ್ತಿನ ಮೊಟ್ಟ ಮೊದಲ ಮುದ್ರಿತ ಪುಸ್ತಕ?
★ ವಜ್ರ ಸೂತ್ರ.
50) ಬಿಳಿ ಮತ್ತೂ ನೀಲಿ ನೈಲ್ ನದಿಗಳ ಸಂಗಮವಾಗುವ ಸ್ಥಳ?
★ ಸುಡಾನಿನ ಬಾರ್ಮೋಮ್.
51) ಭಾರತ ಸೇವಾದಳವು ಹೊರಡಿಸುತ್ತಿದ್ದ ಪತ್ರಿಕೆ
ಯಾವುದು?
★ ಸ್ವಯಂ ಸೇವಕ.
52) ರಾಜೇಂದ್ರ ಪ್ರಸಾದ್ ರವರ ಸಮಾಧಿ ಸ್ಥಳದ ಹೆಸರು?
★ ಮಹಾ ಪ್ರಮಾಣ್ ಘಾಟ್.
53) ಪ್ರತೀದಿನ ಒಂದು ಮಗುವನ್ನು ರಕ್ಷಿಸುವ ಕುರಿತು SACH
(Save A Child's Heart) ಯೋಜನೆ ಮೊದಲಿಗೆ
ಆರಂಭಗೊಂಡಿದ್ದು ಯಾವ ರಾಜ್ಯದಲ್ಲಿ?
★ ತಮಿಳುನಾಡು.
54) ವಿಶ್ವದ ಅತೀ ದೊಡ್ಡ ಕಡಲು ದಂಡೆ ಹೊಂದಿರುವ ದೇಶ?
★ ಜಪಾನ್.
55) ಶ್ರೀಲಂಕಾದ ಅತೀ ಎತ್ತರದ ಶಿಖರ?
★ ಪಿದುರು ತುಲಗಲ (2,499 ಮೀ)
56) ಯಾವ ವ್ಯಕ್ತಿಯ ವರದಿಯನ್ನು ' ಸಂವಿಧಾನದ ನೀಲಿ ನಕಾಶೆ
' ಎನ್ನುವರು?
★ ಮೊತಿಲಾಲ್ ನೆಹರು (1922)
57) ವಿಶ್ವದ ಅತ್ಯಂತ ಎತ್ತರದ ಕ್ರಿಕೇಟ್ ಮೈದಾನ ಎಲ್ಲಿದೆ?
★ ಬೇಲ್.
58) ವಿಶ್ವದಲ್ಲೇ ಮೊದಲಬಾರಿಗೆ ಸಾಹಿತ್ಯಕ್ಕೆ ನೋಬೆಲ್
ಪ್ರಶಸ್ತಿ ಪಡೆದ ಮಹಿಳೆ?
★ ಪರ್ಲ್ ಬಕ್.
59) ಮಹಾಭಾರತವನ್ನು ಬಂಗಾಳಿಗೆ ಅನುವಾದಿಸಿದ
ಮುಸಲ್ಮಾನ ದೊರೆ?
★ ಮೀರ್ ಜಾಫರ್.
60) ' ವಿಶ್ವದ ವಾಹನಗಳ ತಯಾರಿಕಾ ರಾಜಧಾನಿ '(Automobile
Capital of the World) ಯಾವುದು?
★ ಡೆಟ್ರಾಯಿಡ್.
61) ' ನ್ಯೂ ಮೂರ್ ಐಲೆಂಡ್ ' ಇದು ಈ ಎರಡು ದೇಶಗಳ ನಡುವಿನ
ವಿವಾದಾತ್ಮಕ ವಿಷಯ:
★ ಭಾರತ - ಬಾಂಗ್ಲಾ ದೇಶ.
62) ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದ ಮೊದಲ ದೇಶ?
★ ನ್ಯೂಜಿಲೆಂಡ್.
63) ಅತ್ಯಂತ ಹಗುರವಾದ ಲೋಹ?
★ ಲೀ.
64) ಏಷ್ಯಾದಲ್ಲೇ ಅತ್ಯಂತ ಹಳೆಯ ಷೇರು ಮಾರುಕಟ್ಟೆ?
★ ಮುಂಬೈ MSE (Mumbai Stock Exchange)
65) ಭಾರತದ ಅತೀ ದೊಡ್ಡ (SEZ-special Economic Zone)
ವಿಶೇಷ ವಿತ್ತ ವಲಯ ?
★ ಉತ್ತರ ಪ್ರದೇಶದ ನೊಯಿಡಾ.
66) ಕನ್ನಡದ ಮೂರು ಪ್ರಮುಖ ಗದ್ಯ ಕೃತಿಗಳು:
★ ೧) ಮುದ್ರಾಮಂಜೂಷ (ರಚಿಸಿದವರು - ಕೆಂಪು ನಾರಾಯಣ)
.
೨) ಚಾವುಂಡರಾಯ ಪುರಾಣ (ರಚಿಸಿದವರು -
ಚಾವುಂಡರಾಯ) .
೩) ವಡ್ಡಾರಾಧನೆ (ರಚಿಸಿದವರು -ಶಿವಕೋಟಾಚಾರ್ಯ).
67) ಕೃತಕ ಮಳೆ ಉಂಟಾಗುವಂತೆ ಮಾಡಲು ಬಳಸುವ
ರಾಸಾಯನಿಕ ವಸ್ತು?
★ ಸಿಲ್ವರ್ ಅಯೋಡೈಡ್.
68) ಗೌತಮ ಬುದ್ಧ ನ ಬಗ್ಗೆ ಭವಿಷ್ಯ ನುಡಿದ ಗುರುವಿನ ಹೆಸರು?
★ ಅಸ್ಸಿಮಾ.
69) ಗೌತಮ ಬುದ್ಧನ ಹಿಂದಿನ ಜೀವನ ಚರಿತ್ರೆಗಳನ್ನು ತಿಳಿಸುವ
ಕೃತಿ?
★ ಜಾತಕಗಳು.
70) ಗೊಹ್ಲಾ ರಾಷ್ಟ್ರೀಯ ಉದ್ಯಾನ ಎಲ್ಲಿದೆ?
★ ಹಿಮಾಚಲ ಪ್ರದೇಶದ ಕುಲು ದಲ್ಲಿದೆ.
72) ಭೂಗೋಳದ ಮೇಲೆ ಕಾಲ್ಪನಿಕವಾಗಿ ಎಳೆಯಲಾಗಿರುವ
ರೇಖಾಂಶಗಳ ಸಂಖ್ಯೆ ಎಷ್ಟು?
★ 360.
73) ನಮ್ಮ ದೇಹದ ಉಷ್ಣಾಂಶವನ್ನು ನಿಯಂತ್ರಿಸುವ ಗ್ರಂಥಿ?
★ ಹೈಪೊಥಲಾಮಸ್.
74) ಬೀಜಗಳ ಬಂಜೆತನವನ್ನು ನಿವಾರಿಸಲು ಬಳಸುವ
ರಾಸಾಯನಿಕ?
★ ಜಿಬ್ಬರಲಿಕ್ ಆಮ್ಲ.
75) UIDAI ಇದರ ವಿಸ್ತೃತ ರೂಪ:
★ The Unique Identification Authority of India. (ಭಾರತದ
ಗುರುತು ಪತ್ರ ನೀಡಿಕೆಯ ಪ್ರಾಧಿಕಾರ)
77) ಬೆಂಕಿ ಆರಿಸುವ ಯಂತ್ರಗಳಲ್ಲಿ ಉಪಯೋಗಿಸುವ ಅನಿಲ:
★ ಕಾರ್ಬನ್ ಡೈ ಆಕ್ಸೈಡ್.
78) ಆಸ್ಪತ್ರೆಗಳಲ್ಲಿ ಬಳಸುವ ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಇರುವ
ಅನಿಲಗಳೆಂದರೆ ' ಆಕ್ಸಿಜನ್ ಮತ್ತು:
★ ಹೀಲಿಯಂ.
79) ಆರ್ಕಿಟಿಕ್ ಪ್ರಾಂತ್ಯಕ್ಕೆ ಹೋದ ಪ್ರಥಮ ಭಾರತ ತಂಡದ
ನೇತೃತ್ವ ವಹಿಸಿದ್ದ ವಿಜ್ಞಾನಿ ?
★ ರಸಿಕ್ ರವೀಂದ್ರ.
80) ' ಹೈಡ್ ಕಾಯಿದೆ ' ಯಾವುದಕ್ಕೆ ಸಂಬಂಧಿಸಿದ್ದು?
★ ಭಾರತ- ಅಮೇರಿಕ ಪೌರ ಅಣು ಸಹಕಾರಕ್ಕೆ ಸಂಬಂಧಿಸಿದ್ದು.
81) ' ಅಥ್ಲಿಟ್ ಫೂಟ್ ' ಎಂಬ ರೋಗ ಯಾವುದರಿಂದ
ಹರಡುತ್ತದೆ?
★ ಫಂಗಸ್.
82) ಯಾವ ನದಿ 3 ಮಾರ್ಗಗಳಲ್ಲಿ ಬೇರ್ಪಟ್ಟು ಮತ್ತೇ ಸ್ವಲ್ಪ
ದೂರ ಕ್ರಮಿಸಿದ ನಂತರ ಬೆರೆಯುವುದರೊಂದಿಗೆ
ಶ್ರೀರಂಗಪಟ್ಟಣ, ಶಿವನ ಸಮುದ್ರ ದ್ವೀಪಗಳೇರ್ಪಟ್ಟವು?
★ ಕಾವೇರಿ ನದಿ.
83) ದೆಹಲಿಯನ್ನಾಳಿದ 8 ಮಂದಿ ಸುಲ್ತಾನರ ಆಳ್ವಿಕೆಯನ್ನು
ನೋಡಿದನು ಯಾರು?
★ ಅಮೀರ್ ಖುಸ್ರೋ.
84) ಭಾರತವನ್ನು ವಿಭಜಿಸಿದಾಗ ಭಾರತೀಯ ರಾಷ್ಟೀಯ
ಕಾಂಗ್ರೆಸ್ ಗೆ ಅಧ್ಯಕ್ಷರಾಗಿದ್ದವರು ಯಾರು?
★ ಜೆ.ಬಿ. ಕೃಪಲಾನಿ.
85) ಭಗವದ್ಗೀತೆಯನ್ನು ಮೊಟ್ಟ ಮೊದಲ ಬಾರಿಗೆ ಆಂಗ್ಲ
ಭಾಷೆಗೆ ಅನುವಾದ ಮಾಡಿದವರು?
★ ಚಾರ್ಲ್ಸ್ ವಿಲ್ಕಿನ್.
86) ದೇಶದೊಳಗಿನ ಅತಿ ಕಡಿಮೆ ಯೆರೈನ್ ಪಾರ್ಕ್ ಗಳ ಪೈಕಿ
ಒಂದಾದ ' ಭಿತರ್ ಕನಿಕಾ ರಾಷ್ಟೀಯ ಉದ್ಯಾನವನ ' ಯಾವ
ರಾಜ್ಯದಲ್ಲಿದೆ?
★ ಓರಿಸ್ಸಾ.
87) ' ಅರಕನ್ ಯೋಮ ' ಎಂಬುದು ಹಿಮಾಲಯಗಳ
ಮುಂದುವರಿದ ಭಾಗ, ಇದು ಎಲ್ಲಿದೆ?
★ ಮಯನ್ಮಾರ್.
[13/10 6:18 am] : ಸಾಮಾನ್ಯ ಜ್ಞಾನ
ಪ್ರಶ್ನೆಗಳು:
೧. ರೋಮನ್ನರ ಎರಡು ಮುಖಗಳ ಯಾವ ದೇವತೆಯ
ಹೆಸರಿನಿಂದ ಜನವರಿ ತಿಂಗಳಿಗೆ ಹೆಸರನ್ನಿಡಲಾಗಿದೆ?
೨. ಐ.ಎಫ್.ಆರ್.ಐ (IFRI)ನ ವಿಸ್ತೃತ ರೂಪವೇನು?
೩. ನವಗಿರಿನಂದ ಇದು ಯಾರ ಕಾವ್ಯನಾಮಗಿದೆ?
೪. ಭೂಮಿಗೆ ಅತಿ ಸಮೀಪದಲ್ಲಿರುವ
ಸೌರವ್ಯೂಹದಾಚೆಗಿನ ನಕ್ಷತ್ರ ಯಾವುದು?
೫. ರಣರಿಸಕ ಎಂಬ ಬಿರುದನ್ನು ಪಡೆದಿದ್ದ ಚಾಲಕ್ಯ
ದೊರೆ ಯಾರು?
೬. ಐಸ್ ಕ್ರೀಂ ಬೇಗ ಗಡ್ಡೆಕಟ್ಟಲು ಏನನ್ನು
ಬೆರೆಸುತ್ತಾರೆ?
೭. ಶಿಲೀಂಧ್ರಗಳ ಅಧ್ಯಯನಕ್ಕೆ ಆಂಗ್ಲ ಭಾಷೆಯಲ್ಲಿ
ಏನೆಂದು ಕರೆಯುತ್ತಾರೆ?
೮. ಕುತುಬ್ ಮಿನಾರ್ ಆವರಣದಲ್ಲಿರುವ ಅಲೈ
ದರ್ವಾಜ್ ಸುಂದರ ಬಾಗಿಲನ್ನು ಕಟ್ಟಿಸಿದ ಸುಲ್ತಾನ್
ಯಾರು?
೯. ಕಿಂಡರ್ ಗಾರ್ಟನ್ ಕಲ್ಪನೆ ನೀಡಿದವರು ಯಾರು?
೧೦. ಹತ್ತು ಸಾವಿರ ಚಿಮಣಿಗಳ ಕಣಿವೆ ಏಂದು
ಕರೆಯಲ್ಪಡುವ ಉತ್ತರ ಅಮೇರಿಕದ ಪ್ರಾಂತ್ಯ
ಯಾವುದು?
೧೧. ಹ್ಯೂಗಿನ್ಸ್ ಉಪಕರಣವನ್ನು ಟೈಟಾನ್
ಉಪಗ್ರಹಕ್ಕೆ ಕೊಂಡೊಯ್ದ ಕ್ಷಿಪಣಿ ನೌಕೆ ಯಾವುದು?
೧೨. ಕನ್ನಡದಲ್ಲಿ ವೈದ್ಯ ಸಾಹಿತ್ಯವನ್ನು
ಜನಪ್ರಿಯಗೊಳಿಸಿದ ಲೇಖಕಿ ಯಾರು?
೧೩. ಮನುಷ್ಯನ ದೇಹದಲ್ಲಿರುವ
ಕ್ರೋಮೋಜೋಮಗಳ ಸಂಖ್ಯೆ ಎಷ್ಷು?
೧೪. ಈಸ್ಟ್ನ್ನು ಬಳಸಿ ಮೊದಲಿಗೆ ಬ್ರೇಡ್ಡನ್ನು
ತಯಾರಿಸಿದ ದೇಶ ಯಾವುದು?
೧೫. ಹೈಕೋರ್ಟಿನ ನ್ಯಾಯಾಧೀಶರರನ್ನು
ನೇಮಿಸುವರು ಯಾರು?
೧೬. ನೆಲದ ಶುಚಿತ್ವಕ್ಕೆ ಬಳಸುವ ಫೆನಾಯಿಲ್ನ
ರಾಸಾಯನಿಕ ಹೆಸರೇನು?
೧೭. ಮೈಸೂರು ವಿಶ್ವವಿಧ್ಯಾನಿಲಯ
ಪ್ರಾಂರಭವಾದ ವರ್ಷ ಯಾವುದು?
೧೮. ಅಕಾಂಕಾಗ್ವೆ ಶಿಖರ ಯಾವ ಖಂಡದಲ್ಲಿದೆ?
೧೯. ನೆಪ್ಟೂನ್ ಗ್ರಹದ ಪತ್ತೆಗೆ ಕಾರಣವಾದ ನಿಯಮ
ಯಾವುದು?
೨೦. ತಮಿಳರು ಪ್ರಾರಂಭದಲ್ಲಿ ಬಳಸುತ್ತಿದ್ದ ಲಿಪಿ
ಯಾವುದು?
೨೧. ಥೋರಿಯಂ ಅಧಿಕವಾಗಿ ದೊರೆಯುವ ರಾಜ್ಯ
ಯಾವುದು?
೨೨. ಗಿರೀಶ ಕಾರ್ನಾಡರ ತುಘಲಕನ ಪಾತ್ರದಿಂದ
ಖ್ಯಾತರಾಗಿದ್ದ ನಟ ಯಾರು?
೨೩. ಮಾನವನ ಉಗುರುಗಳು ಯಾವುದರಿಂದ
ರೂಪಗೊಂಡಿವೆ?
೨೪. ಕೌರು ಬಾಹ್ಯಾಕಾಶ ಸಂಸ್ಥೆ ಎಲ್ಲಿದೆ?
೨೫. ಬಹುದಿನದ ಭಾರತೀಯ ಸಂಪಾದಕತ್ವದ
ಪತ್ರಿಕೆಯಾದ ಬಂಗಾಳಿ
ನಿಯತಕಾಲಿಕೆ ಸಂವದ್ ಕೌಮುದಿಯನ್ನು
ಪ್ರಾರಂಭಿಸಿದವರು ಯಾರು?
೨೬. ಪ್ರಾಚ್ಯ ಸ್ಮಾರಕಗಳ ರಕ್ಷಣಾ ಕಾಯ್ದೆಯನ್ನು
ಜಾರಿಗೆ ತಂದವರು ಯಾರು?
೨೭. ದೇವನಾಂಪ್ರಿಯ ಅಶೋಕನೆಂದು ಸೂಚಿಸುವ
ಶಾಸನ ಯಾವುದು?
೨೮. ಕನ್ನಡದಲ್ಲಿ ಗಜಾಷ್ಟಕ ಎಂಬ ಕೃತಿಯನ್ನು ರಚಿಸಿದ
ಶಿವಮಾರನಿಗೆ ಇದ್ದ ಬಿರುದು ಯಾವುದು?
೨೯. ಪ್ರಧಾನಿ ನೇತೃತ್ವದಲ್ಲಿ ಮಂತ್ರಿ
ಮಂಡಲವಿರಬೇಕೆಂದು ಯಾವ ವಿಧಿ ತಿಳಿಸುತ್ತದೆ?
೩೦. ಈ ಚಿತ್ರದಲ್ಲಿರುವವರನ್ನು ಗುರ್ತಿಸಿ.
ಉತ್ತರಗಳು
೧. ಜಾನಸ್
೨. ಇಂಡಿಯನ್ ಫಾರೆಸ್ಟ್ ರಿಸರ್ಚ್ ಇನ್ಸ್ಸ್ಟಿಟ್ಯೂಟ್
೩. ಎಂ.ರಂಗರಾಯ
೪. ಪ್ರಾಕ್ಸಿಮಾ ಸೆಂಟಾರಿ
೫. ವಿಕ್ರಮಾದಿತ್ಯ
೬. ಜಿಲೆಟಿನ್
೭. ಮೈಕೋಲಜಿ
೮. ಅಲ್ಲಾ – ಉದ್ – ದಿನ್ – ಖಿಲ್ಜಿ
೯. ಫ್ರೊಬೇಲ್
೧೦. ಆಲಾಸ್ಕ್
೧೧. ಕ್ಯಾಸಿನಿ
೧೨. ಡಾ||ಅನುಪಮಾ ನಿರಂಜನ
೧೩. ೪೬
೧೪. ಈಜಿಪ್ಟ್
೧೫. ರಾಷ್ಟ್ರಪತಿ
೧೬. ಕಾರ್ಬಾಲಿಕ್ ಆಮ್ಲ
೧೭. ೧೯೧೬
೧೮. ದಕ್ಷಿಣ ಅಮೇರಿಕಾ
೧೯. ವಿಶ್ವವ್ಯಾಪಿ ಗುರುತ್ವ ನಿಯಮ
೨೦. ಬ್ರಾಹ್ಮಿಲಿಪಿ
೨೧. ಕೇರಳ
೨೨. ಸಿ.ಆರ್.ಸಿಂಹ
೨೩. ಕೊರೋಟಿನ್ ಎಂಬ ಮೃತ ಪ್ರೋಟಿನಗಳಿಂದ
೨೪. ಫ್ರೆಂಚ್ ಗಯಾನಾ
೨೫. ಸತ್ಯನಂದ ಅಗ್ನೀಹೋತ್ರಿ
೨೬. ಕರ್ಜನ್
೨೭. ಮಸ್ಕಿ ಶಾಸನ
೨೮. ಸೈಗೊಟ್ಟ ಶಿವಕುಮಾರ
೨೯. ೭೪
೩೦. ದೇವುಡು ನರಸಿಂಹಶಾಸ್
[13/10 6:20 am] : 1. ಇಸ್ರೋ ಇತ್ತೀಚೆಗೆ ಸಿಂಗಾಪುರದ ಎಷ್ಟು
ಉಪಗ್ರಹಗಳನ್ನು ಉಡಾವಣೆ ಮಾಡಿತು?
a) 5 b) 4 c) 6 d) 7
2. ಹುರುನ್ ಇಂಡಿಯಾ ಸಂಸ್ಥೆ ಸಮೀಕ್ಷೆಯ ವರದಿ
ಪ್ರಕಾರ ಭಾರತದಲ್ಲಿ ಧಾನದಲ್ಲಿ ಮೊದಲ
ಸ್ಥಾನದಲ್ಲಿರುವವರು ಯಾರು?
a) ಅಜೀಂ ಪ್ರೇಮ್ ಜೀ. b) ನಾರಯಣ
ಮೂರ್ತಿ
c) ನಂದನ್ ನೀಲಕಣಿ d) ಕೆ. ದಿನೇಶ್.
3. ಇತ್ತೀಚೆಗೆ ಹೈಡ್ರೋಜನ್ ಬಾಂಬ್ ಅನ್ನು
ಯಶಸ್ವಿಯಾಗಿ ಪರೀಕ್ಷಿಸಿ ಜಗತ್ತನ್ನೆ
ತಲ್ಲಣಗೊಳಿಸಿದ ದೇಶ ಯಾವುದು?
a) ದಕ್ಷಿಣ ಕೋರಿಯಾ b) ಇರಾನ್
c) ಉತ್ತರ ಕೋರಿಯಾ d) ಇರಾಕ್
4. ವಿಫ್ರೋ ಕಂಪನಿಯು ಫೆಭ್ರವರಿ 1 ರಿಂದ ಜಾರಿಗೆ
ಬರುವಂತೆ ಯಾರನ್ನು ಹೊಸ ಮುಖ್ಯ
ನಿರ್ವಹಣಾಧಿಕಾರಿಯಾಗಿ (CEO) ನೇಮಿಸಿದೆ?
a) ಎಚ್. ಎಂ. ಶಿನಪ್ರಕಾಶ b) ಬಿ. ಎಂ.
ಭಾನುಮೂರ್ತಿ
c) ಎಮ್. ಬಿ. ಪರಮೇಶ್. d) ಜಿ.ಎಚ್. ಶಾಂತಿ
ಪ್ರಕಾಶ್.
5. ಭಾರತೀಯ ಸ್ವರ್ಧಾ ಆಯೋಗದ
ಅಧ್ಯಕ್ಷರನ್ನಾಗಿ ಯಾರನಮ್ನು ನೇಮಿಸಲಾಗಿದೆ?
a) ಪಿ.ಕೆ ಮೆಹ್ತಾ. b) ಡಿ.ಕೆ. ಸಿಕ್ರಿ.
c) ಎನ್. ಎಸ್. ಪರಮೇಶ್ d) ಯಾರು ಅಲ್ಲ.
6. ಭಾರತದ ಯಾವ ವಿಮಾನ ನಿಲ್ದಾಣವು
ಸಂಪೂರ್ಣ ಸೌರವಿಧ್ಯುತ್ ನಿಂದ ಕಾರ್ಯ
ನಿರ್ವಹಿಸುತ್ತದೆ.
a) ಬೆಂಗಳೂರು ವಿಮಾನ ನಿಲ್ದಾಣ b) ದೆಹಲಿ
ವಿಮಾನ ನಿಲ್ದಾಣ
c) ಕೊಚ್ಚಿ ವಿಮಾನ ನಿಲ್ದಾಣ. d)
ಮುಂಬೈ ವಿಮಾನ ನಿಲ್ದಾಣ.
7. 14 ಬನಾಲ್ ಗಳಲ್ಲಿ 50 ರನ್ ಗಳಿಸಿ ವಿಶ್ವದ ಎರಡನೇ
ಅತೀ ವೇಗದ ಅರ್ಧ ಶತಕ ದಾಖಲಿಸಿದವರು ಯಾರು?
a) ಯುವರಾಜ್ ಸಿಂಗ್ b) ಕೊಲಿನ್
ಮನ್ರೋ.
c) ಎಂ.ಎಸ್. ದೋನಿ. d) ಆರ್. ಅಶ್ವಿನ್.
*****************
ಉತ್ತರಗಳು:
1- C, 2-A 3-C 4-B 5-B 6-C 7-B
[13/10 6:21 am] : ಸಾಮಾನ್ಯ ಜ್ಞಾನ
ಪ್ರಶ್ನೆಗಳು
1. ಸಳನಿಗೆ ಹುಲಿಯನ್ನು ಕೊಲ್ಲಲು ಆಜ್ಞಾಪಿಸಿದ
ಜೈನ ಮುನಿಯ ಹೆಸರೇನು?
2. ಪಿ.ಎಮ್.ಯು.ಪಿ.ಇ.ಪಿ. ನ ವಿಸ್ತøತರೂಪವೇನು?
3. ಖಾಸಿ ಜನಾಂಗ ಭಾರತದ ಯಾವ ರಾಜ್ಯಕ್ಕೆ
ಸೇರಿದವರಾಗಿದ್ದಾರೆ?
4. ಬಾಹ್ಯಾಕಾಶದಿಂದ ಬರುವತರಾಂಗಾಂತರ
ವಿಕಿರಣಗಳ ಹೆಸರೇನು?
5. ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಇರುವ
ಪರ್ವತ ಶ್ರೇಣಿ ಯಾವುದು?
6. ಕತ್ತಲಲ್ಲಿ ವಸ್ತುಗಳನ್ನು ನೋಡಲು ಬಳಸುವ
ವಿಕಿರಣ ಯಾವುದು?
7. ಪ್ರಪಂಚದಲ್ಲಿ ಅತ್ಯಂತ ಕಡಿಮೆ ಮರಣ
ಪ್ರಮಾಣವುಳ್ಳ ರಾಷ್ಟ್ರ ಯಾವುದು?
8. ಸಂಭವಾಮಿಯುಗೇಯುಗೇ ಇದು
ಭಗವದ್ಗೀತೆಯು ಎಷ್ಟನೇ ಅಧ್ಯಾಯದಲ್ಲಿದೆ?
9. ಕೋಗಿಲೆ ಹೊರಡಿಸುವ ಸ್ವರ ಯಾವುದು?
10. ಕ್ವಿಟ್ ಇಂಡಿಯಾ ಚಳುವಳಿ ನಡೆದ ವರ್ಷ
ಯಾವುದು?
11. ಹಿಂದೂಸ್ತಾನ್ ಶಿಪ್ ಯಾರ್ಡ್ ಲಿಮಿಟೆಡ್ ಎಲ್ಲಿದೆ?
12. ಬಹಮನಿ ಅರಸರ ಕಾಲದಲ್ಲಿ ಖಗೋಳ ಮತ್ತು
ಗಣಿತದಲ್ಲಿ
ಪಂಡಿತರಾಗಿದ್ದವರು ಯಾರು?
13. ಎತ್ತರದ ಜಲಪಾತಗಳಲ್ಲೊಂದಾದ ಊಟಿಗೋರ್ಡ್
ಜಲಪಾತ ಯಾವ ರಾಷ್ಟ್ರದಲ್ಲಿದೆ?
14. ಬೆಂಗಳೂರು ವಿಶ್ವವಿದ್ಯಾಲಯದ ಧ್ಯೇಯ
ವಾಕ್ಯಜ್ಞಾನ ವಿಜ್ಞಾನ ಸಹಿತಂ
ಎಂಬುದಾಗಿದೆ ಈ ವಾಕ್ಯ ಯಾವ ಗ್ರಂಥದಲ್ಲಿ
ಬರುತ್ತದೆ?
15. ಪ್ರತಿಮಾ ಲೋಕದಲ್ಲೊಂದು ಪಯಣ ಇದು
ಯಾವ ಕಲಾವಿದರ ಕುರಿತು
ಸಾಕ್ಷ್ಯಾ ಚಿತ್ರವಾಗಿದೆ?
16. ಬ್ರಿಟನ್ನ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಎಷ್ಟು
ಕೋಣೆಗಳಿವೆ?
17. ಸಾಂಚಿ ಮ್ಯೂಸಿಯಂ ಎಲ್ಲಿದೆ?
18. 12000ಸೆ ವರೆಗಿನ ಉಷ್ಣತೆಯನ್ನು ಅಳೆಯುವ
ಸಾಧನ ಯಾವುದು?
19. ಜೀವಕೋಶದ ಮೂಲ ಘಟಕಕ್ಕೆ ಜೀವಕೋಶ
ಎಂದು ಹೆಸರಿಸಿದವರು ಯಾರು?
20. ಸಾಹಾ ಇನ್ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್
ಫಿಜಿಕ್ಸ್ ಎಲ್ಲಿದೆ?
21. ಯುರೋಪಿನ ಆಟದ ಮೈದಾನವೆಂದು ಯಾವ
ರಾಷ್ಟ್ರವನ್ನು ಕರೆಯುತ್ತಾರೆ?
22. ಹಿಂದೂಸ್ತಾನಿ ಸಂಗೀತ ಪದ್ದತಿಯಲ್ಲಿ ದರ್ಬಾರಿ
ಕಾನಡ ರಾಗವನ್ನು
ಸಾಂಪ್ರದಾಯಕವಾಗಿ ಯಾವ ಹೊತ್ತಿನಲ್ಲಿ
ಹಾಡುತ್ತಾರೆ?
23. ಯುರೇನಸ್ ಗ್ರಹವನ್ನು ಮೊಟ್ಟಮೊದಲು
ದೂರದರ್ಶಕದಲ್ಲಿ ಗುರುತಿಸಿದವರು ಯಾರು?
24. ಕೋಲ್ಕತ್ತಾ ನಗರವನ್ನು ಮೊದಲು ಯಾವ
ಹೆಸರಿನಿಂದ ಕರೆಯಲಾಗುತ್ತಿತ್ತು?
25. ಒಂಟಿಕೊಂಬಿನ ಘೆಂಡಾಮೃಗಗಳು ಹೆಚ್ಚು
ಸಂಖ್ಯೆಯಲ್ಲಿ ಇರುವ ರಾಷ್ಟ್ರೀಯ
ಅಭಯಾರಣ್ಯ ಯಾವುದು?
26. ಗಣಿತ ಶಾಸ್ತ್ರದಲ್ಲಿಯ ಸಾಧನೆಗೆ ನೀಡುವ
ಅತ್ಯುತ್ತಮ ಬಹುಮಾನ
ಯಾವುದು?
27. ಕನಸುಗಳ ಗುಟ್ಟನ್ನು ಅರಿಯುವ
ಸಿದ್ಧಾಂತವನ್ನು ನಿರೂಪಿಸಿದ
ಮನೋವಿಜ್ಞಾನಿ ಯಾರು?
28. ಗೀತಾ ನಾಡಕರ್ಣಿ ಇವರು ಯಾವಕ್ರೀಡೆಯಲ್ಲಿ
ಹೆಸರು ಮಾಡಿದ್ದಾರೆ?
29. ಸ್ಪೇನ್ ರಾಷ್ಟ್ರದ ರಾಷ್ಟ್ರೀಯ ಕ್ರೀಡೆ
ಯಾವುದು?
30. ಈ ಚಿತ್ರದಲ್ಲಿರುವವರನ್ನು ಗುರುತಿಸಿ.
ಉತ್ತರಗಳು
1. ಸುದತ್ತಾಚಾರ್ಯ
2. ಪ್ರೈಮ್ ಮಿನಿಸ್ಟರ್ ಅರ್ಬನ್ ಪಾವರ್ಟಿ ಇಂಡಿಕೇಷನ್
ಪ್ರೋಗ್ರಾಂ
3. ಮೇಘಾಲಯ
4. ಕಾಸ್ಮಿಕ್ ಕಿರಣ
5. ಸಾತ್ಪುರ ಪರ್ವತ ಶ್ರೇಣಿ
6. ರಕ್ತಾತೀತ ವಿಕಿರಣ
7. ಟೊಂಗೋ
8. ನಾಲ್ಕನೇ ಅಧ್ಯಾಯ
9. ಪಂಚಮ
10. 1942
11. ವಿಶಾಖ ಪಟ್ಟಣ
12. ಬಕ್ಷಿ ಮತ್ತು ಷರೀಫ್
13. ನಾರ್ವೆ
14. ಮಹಾಭಾರತ
15. ಕೆ.ಕೆ.ಹೆಬ್ಬಾರ್
16. 602 ಕೋಣೆಗಳು
17. ಭೋಪಾಲ್
18. ಪ್ಲಾಟಿನಂ ರೋಧ ಉಷ್ಣತಾ ಮಾಪಕ
19. ರಾಬರ್ಟ್ ಹುಕ್
20. ಕೋಲ್ಕತ್ತಾ
21. ಸ್ವಿಡ್ಜರ್ಲ್ಯಾಂಡ್
22. ಮಧ್ಯರಾತ್ರಿ
23. ವಿಲಿಯಂ ಹರ್ಷಲ್
24. ಪೋರ್ಟ್ ವಿಲಿಯಂ
25. ಕಾಜಿರಂಗ
26. ಫೀಲ್ಡ್ ಮೆಡಲ್
27. ಸಿಗ್ಮಂಡ್ ಫ್ರಾಯ್ಡ್
28. ಟೇಬಲ್ ಟೆನ್ನಿಸ್
29. ಬುಲ್ ಫೈಟಿಂಗ್
30. ಶ್ರೀ ಅರವಿಂದ ಘೋಷ (ಭಾರತೀಯ ತತ್ವಜ್ಞಾನಿ)

ವಾಲ್ಮೀಕಿ



                      ವಾಲ್ಮೀಕಿ’ ಭಾರತದ ಮತ್ತು ಪ್ರಪಂಚದ ಚರಿತ್ರೆಯಲ್ಲಿ ಎಂದೋ ಮಿನುಗಿದ ಧೃವತಾರೆ. ಆದಿಕವಿ, ಮಹರ್ಷಿ, ಮುನಿಪುಂಗವ, ತಪಸ್ವಿ ಎಂದೆಲ್ಲಾ ಖ್ಯಾತಿ ಪಡೆದಿರುವ ‘ವಾಲ್ಮೀಕಿ’ ಒಂದು ರೀತಿಯಲ್ಲಿ ಸರ್ವತೋಮುಖಿ: ಚಿಂತಕ, ಚರಿತ್ರೆಕಾರ, ಸಮಾಜ ಸುಧಾರಕ, ಶಿಕ್ಷಣ ತಜ್ಞ, ರಾಜನೀತಿಜ್ಞ, ತತ್ವಜ್ಞಾನಿ, ಶೋಷಿತರ ನೇತಾರ, ಕವಿಯಾಗಿ ಬಹು ವೈವಿಧ್ಯಮಯಾವಾಗಿ ಜನರ ಮನಸೂರೆಗೊಂಡಿದ್ಧಾನೆ. ಇಂಥ ಮಹಾನ್ ವ್ಯಕ್ತಿಯ ಹೆಸರು ಜಗತ್ತಿಗೆ ಪರಿಚಯವಾದದ್ದು ರಾಮಾಯಣ ಕಾವ್ಯದ ಮೂಲಕ. ಸಂಸ್ಕೃತದಲ್ಲಿ ರಾಮಾಯಣವು ಭಾರತದ ಆದಿಕಾವ್ಯ. ಜಗತ್ತಿನ ಮಹಾಕಾವ್ಯಗಳ ಸಾಲಿನಲ್ಲಿ ಇದಕ್ಕೆ ಪ್ರಮುಕ ಸ್ಥಾನ ಲಭಿಸಿದೆ. ವಾಲ್ಮೀಕಿಯ ಮುಖೇನ ರಾಮಾಯಣವನ್ನು ರಾಮಾಯಣದ ಮುಖೇನ ಭಾರತದ ಜನಜೀವನವನ್ನು ಅರ್ಥೈಸಬೇಕಾದ ಅನಿವಾರ್ಯತೆ ಇಂದಿನದಾಗಿದೆ. ವಾಲ್ಮೀಕಿ ಮೂಲತಃ ಬೇಟೆಗಾರರ ಬುಡಕಟ್ಟಿಗೆ ಸೇರಿದ ಬೇಡ ಸಮುದಾಯದನು. ವೈದಿಕ ಮತ್ತು ಪುರೋಹಿತಶಾಹಿಗಳು ವಾಲ್ಮೀಕಿಯ ಪ್ರತಿಭೆ ಕಂಡು ಬ್ರಾಹ್ಮಣನೆಂದು ತಪ್ಪಾಗಿ ನಿರೂಪಿಸಿದ್ದಾರೆ. ಇಂಥ ಅನೇಕ ಸಂಗತಿಗಳನ್ನು ಪುನಾರಚನೆ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಾಲ್ಮೀಕಿಯ ಜೀವನ, ಕಾವ್ಯ, ವಿಶ್ವದಲ್ಲಿ ಅದು ಪಡೆದ ವಿವಿಧ ರೂಪಗಳು ಇವುಗಳನ್ನು ಹೊಸ ಬಗೆಯ ಚಿಂತನೆಗೆ ಒಳಪಡಿಸುವ ಪ್ರಯತ್ನ ಮಾಡಬೇಕಾಗಿದೆ.

ವಾಲ್ಮೀಕಿಯ ತಂದೆ ಪ್ರಚೇತಸೇನ, ವಾಲ್ಮೀಕಿ ಪೂರ್ವಾಶ್ರಮದಲ್ಲಿ ಒಬ್ಬ ಬೇಟೆಗಾರ. ಸಂಪ್ರದಾಯದಂತೆ ಈತನ ಮೊದಲ ಹೆಸರು ರತ್ನಾಕರ. ಈ ಬಗ್ಗೆ ಭಾರತದಲ್ಲಿ ವಿಭಿನ್ನ ಕಥೆಗಳಿರುವುದು ಸ್ಪಷ್ಟ. ಒಂದು ಮೂಲದ ಪ್ರಕಾರ ಕಳ್ಳತನ, ದರೋಡೆಯಲ್ಲಿ ನರತನದ ಈತನಿಗೊಮ್ಮೆ ನಾರದನಿಂದ ಪರೀಕ್ಷೆ ನಡೆಯಿತು. ನಿನ್ನ ಅಪರಾಧಕ್ಕೆ ನಿನ್ನ ಹೆಂಡತಿ – ಮಕ್ಕಳು ಭಾದ್ಯಸ್ಥರೇ (ಪಾಲುದಾರರು) ಎಂದು ತಿಳಿಸಿದ. ಅವನು ತನ್ನ ಕುಟುಂಬ ಪರಿವಾರವನ್ನು ವಿಚಾರಿಸಲಗಿ ನಿನ್ನ ಅಪರಾಧಕ್ಕೆ ನೀನೇ ಹೊಣೆ ಎಂದರು. ಇದರಿಂದ ಮನಃಪರಿವರ್ತನೆಗೊಂಡ ವಾಲ್ಮೀಕಿಗೆ ಅದರಂತೆ ಜ್ಞಾನೋದ ಯಾದ ಉತ್ತುಂಗ ಶಿಖರ ತಲುಪಿ ಮಹಾಕಾವ್ಯ ರಚಿಸಿದನೆಂದು ಹೇಳಲಾಗಿದೆ. ಮತ್ತೊಂದು ಮೂಲಕ ಪ್ರಕಾರ (ಬ್ರಾಹ್ಮಣೀಕರಿಸಿ) ವಾಲ್ಮೀಕಿ ಚ್ಯವನಮುನಿಯ ಪುತ್ರ, ಶೂದ್ರನಾದ ವಾಲ್ಮೀಕಿಯನ್ನು ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ಅರ್ಥಮಾಡಿ ಕೊಂಡರೆ ನಿಜವಾಗಿಯೂ ಆತ ಬೇಟೆಗಾರ. ಅಂದು ತಪಸ್ಸು, ಧರ್ಮ, ಸತ್ಯ, ಪ್ರಾಮಾಣಿಕತೆ ವಾಲ್ಮೀಕಿಯಲ್ಲಿದ್ದವು.

ಕಾವ್ಯ ರಚನೆ (ಬರಹ) ಬ್ರಾಹ್ಮಣರಿಗೆ ಮೀಸಲಾಗಿತ್ತು. ಹೀಗಾಗಿ ಆತ್ಮನಿಗ್ರಹ, ತಪಸ್ಸು, ದಾನ, ಅಹಿಂಸಾ ಮತ್ತು ಸತ್ಯ, ಮತ್ಸರಾರಾಹಿತ್ಯ, ಕಪಟರಾಹಿತ್ಯ, ದೀನತ್ವ, ದಯಾಗುಣ ಮತ್ತು ತಪಸ್ ಇವು ಬ್ರಾಹ್ಮಣನಲ್ಲಿರಬೇಕು. ಅವು ವಾಲ್ಮೀಕಿಯಲ್ಲಿದ್ದವು. ವಾಲ್ಮೀಕಿ ಬೇಡರೊಡನೆ ಸೇರಿಕೊಂಡು. ದಾರಿಹೋಕರ ತಲೆ ಹೊಡೆದು ಅವರಿಂದ ಕಿತ್ತುಕೊಂಡ ಹಣ. ಸಂಪತ್ತಿನಿಂದ ಬದುಕುತ್ತಿದ್ದನಂತೆ. ಒಮ್ಮೆ ಇವನು ಸಪ್ತರ್ಷಿಗಳ ಪರಿಚಯವಾಗಿ ಅವರಿಂದ ರಾಮಮಂತ್ರೋಪದೇಶವನ್ನು ಪಡೆದು. ತಪಸ್ಸು ಮಾಡುವಾಗ ಈತನ ಮೇಲೆ ಹುತ್ತ (ವಾಲ್ಮೀಕ) ಬೆಳೆದು, ಸಪ್ತರ್ಷಿಗಳಿಂದ ವಾಲ್ಮೀಕಿಯಾದನು. ತಮಸಾ ನದಿಗೆ ಸ್ನಾನ್ನಕ್ಕೆ ಹೋದ ವಾಲ್ಮೀಕಿ ಅಲ್ಲಿ ಬೇಡನೊಬ್ಬ ಕ್ರೌಂಚ ಗಂಡು – ಹೆಣ್ಣು ಪಕ್ಷಿಗಳಲ್ಲಿ ಗಂಡನ್ನು ಕೊಲ್ಲಲು ಹೆಣ್ಣು ಗಂಡಿಗಗಿ ಗೋಳಿಡುವುದನ್ನು ಕಂಡು ದುಃಖಿತನಾಗಿ ಆ ಬೇಡನಿಗೆ ಶಾಪಕೊಟ್ಟನು. ಚಿಂತಾಕ್ರಾಂತನಾದ ಇವನಿಗೆ ಬ್ರಹ್ಮನು ಆಶಿರ್ವದಿಸಿ, ರಾಮಾಯಣವನ್ನು ಬರೆಯುವಂತೆ ಹೇಳಿದಂನಂತೆ. ವಾಲ್ಮೀಕಿಯು ದೈವಾನುಗ್ರಹದಿಂದ ರಾಮಾಯಾಣ ಕಾವ್ಯವನ್ನು ರಚಿಸಿದನು. ಅಂದಿನಿಂದ ಆತನ ಬಗ್ಗೆ.

ಕಾವ್ಯಶ್ರೀಯ ಕೊಂಬೆಯನ್ನೇರಿ ರಾಮ ರಾಮ ಎಂಬ ಮಧುರಅಕ್ಷರಗಳನ್ನು ಮಧುರವಾಗಿ ಧ್ವನಿಗೈಯುವ ವಾಲ್ಮೀಕಿ ಕೋಗಿಲೆಯನ್ನುವಂದಿಸುತ್ತೇನೆ

ಎಂಬ ಶ್ಲೋಕ ಇವರ ಕಾವ್ಯಸ್ಪೂರ್ತಿಗೆ ಉದಾಹರಣೆ ಮೂಲ ಶಾಶ್ವತವಾಗಿ ಉಳಿದುಬಂತು. ಹೋಮರ್ ನಂತೆ ವಾಲ್ಮೀಕಿಯು ಜಗತ್ತಿಗೆ ಮಾದರಿಯಾಗುವಂತೆ, ಮೆಚ್ಚುವಂತೆ, ಕಾವ್ಯವನ್ನು ರಚಿಸಿದ್ದು ಸ್ಮರಣೀಯ.

ರಾಮಾಯಣ ಭಾರತ ದೇಶದ ಮೊದಲ ಕಾವ್ಯ ಇದನ್ನು ಪ್ರತಿಯೊಬ್ಬ ಭಾರತೀಯನು ಬಲ್ಲ. ವಾಲ್ಮೀಕಿಯ ಬಗ್ಗೆ ತಿಳಿಯುವುದಕ್ಕಿಂತ ರಾಮಾಯಣವನ್ನು ಓದಿದರೆ ಆತನ ಬಗ್ಗೆ ಅರ್ಥವಾಗುತ್ತದೆ. ಭಾರತಿಯ ಸಂಸ್ಕೃತಿ ಹಿನ್ನೆಲೆಯಲ್ಲಿ ರಾಮ ಏಕಪತ್ನಿ ವ್ರತಸ್ಥ. ಸೀತೆ ಪತಿವ್ರತೆ, ಕುಂಭಕರ್ಣನೆಂದರೆ ನಿದ್ದೆಯ ಮನುಷ್ಯ ರಾವಣನೆಂದರೆ ರಾಕ್ಷಸ ಎಂದು ರಾಮಾಯಣದ ಪ್ರಸಂಗಗಳ ಬಗ್ಗೆ ಆಯಾ ಪ್ರಾದೇಶಿಕತೆಗೆ ತಕ್ಕಂತೆ ಜನಮನದಲ್ಲಿ ಬೇರೆ ಬೇರೆ ಕಥೆಗಳಿವೆ. ರಾಮಾಯಣವನ್ನು ಬುಡಕಟ್ಟು ಮಹಾಕಾವ್ಯ ಎಂದು ಕೆಲವರು ಕರೆದರೆ, ಐತಿಹಾಸಿಕವಾದುದೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಇನ್ನು ಕೆಲವರು ಪಾರಂಪರಿಕವಾಗಿ ಬಂದ ಮೌಖೀಕ ಮಹಾಕಾವ್ಯ (ಚರಿತ್ರೆ) ಎನ್ನುತ್ತಾರೆ. ಹೀಗೆ ಎನೆಲ್ಲಾ ಕಥಾ ಪ್ರಸಂಗಗಳು ಜೀವಂತವಾಗಿರುವುದುಂಟು.

ಇಂದಿಗೂ ರಾಮಾಯಣದ ರಚನೆಯ ಕಾಲಮಾನ ಖಚಿತವಾಗಿ ತಿಳಿದು ಬಂದಿಲ್ಲ. ಏಕವ್ಯಕ್ತಿಯಿಂದ ಮಾತ್ರ ರಚನೆಯಾದುದು ಸ್ಪಷ್ಟ. ಅವನೇ ಆದಿಕವಿ, ಮಹರ್ಷಿ ಕ್ರಿ.ಪೂ. ೯೦೦೦ರಲ್ಲಿ ಈತನ ಮಹಾಕಾವ್ಯ ರಚಿತವಾಗಿದೆ ಎಂದು ಹೇಳಿದರೆ, ಕೆಲವರು ಕ್ರಿ.ಪೂ ೫೦೦ಕ್ಕಿಂತ ಮೊದಲು ರಾಮಾಯಣ ರಚನೆಯಾಗಿರಬೇಕೆಂದು ಅಭಿಪ್ರಾಯಿಸಿದ್ದಾರೆ. ಆರ್.ಎಸ್.ಶರ್ಮ ಅವರು ಕ್ರಿ.ಶ. ೪೦೦ರ ಹೊತ್ತಿಗೆ ಎರಡು ಮಹಾಕಾವ್ಯಗಳು ಸ್ಪಷ್ಟಸ್ವರೂಪವನ್ನು ತಾಳಿದಂತಿವೆ ಎನ್ನುತ್ತಾರೆ. ರಾಮಾಯಣ ಕ್ರಿ.ಶ. ೫ – ೬ನೆಯ ಶತಮಾನಕ್ಕಿಂತ ಹಿಂದಿನದಲ್ಲ ಎಂಧು ಎಚ್.ಡಿ. ಸಂಕಾಲಿಯಾ ಅವರು ವಾದಿಸಿದ್ದಾರೆ. ಇವರ ಪ್ರಕಾರ ಮಹಾಭಾರತ ಪ್ರಾಚೀನವಾದುದು. ಇದು ಕ್ರಿ.ಪೂ. ೧೦ರಿಂದ ಕ್ರಿ.ಶ. ೪ನೆಯ ಶತಮಾನದವರೆಗಿನ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆಯಂತೆ. ಆದಿಬುಡಕಟ್ಟುಗಳ ಕಥೆಯಾದ ಮಹಾಭಾರತದಲ್ಲಿ ೧,೦೦,೦೦೦ ಶ್ಲೋಕಗಳಿವೆ. ಕೌರವ – ಪಾಂಡವರ ಯುದ್ಧ ವೇದಕಾಲ, ವೇದೋತ್ತರ ಕಾಲವನ್ನು ಮೌರ್ಯರ ಗುಪ್ತರ ಕಾಲದ ಪರಿಸ್ಥಿತಿಯನ್ನು ಇವು ಪ್ರತಿನಿಧಿಸಿವೆ.

ಆದಿಕವಿ ವಾಲ್ಮೀಕಿ ವಿರಚಿತ ರಾಮಾಯಣವು ೬೦೦೦ ಶ್ಲೋಕಗಳಿಂದ ಆರಂಭ ಗೊಂಡು ೧೨,೦೦೦ಕ್ಕೆ ಏರಿ, ಕೊನೆಗೆ ೨೪,೦೦೦ ಶ್ಲೋಕಗಳ ಸ್ಪಷ್ಟರೂಪ ಪಡೆದಿವೆ. ಮಹಾಭಾರತಕ್ಕಿಂತ ಸಮಗ್ರವಾದ ಮಹಾಕಾವ್ಯವಿದು.
(ಸಂಗ್ರಹಿತ)

*******************************************

*ವಾಲ್ಮೀಕಿ:*

ವಾಲ್ಮೀಕಿ ಎಂಬ ಋಷಿಯು ರಾಮಾಯಣ ಮಹಾಕಾವ್ಯದ ಕರ್ತೃ. ವಾಲ್ಮೀಕಿಯನ್ನು ಆದಿಕವಿ ಎಂದು ಕರೆಯಲಾಗಿದೆ.

* *ಹಿನ್ನೆಲೆ:*

ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ.

ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನ ಎಂಬ ಹೆಸರಿನ ಒಬ್ಬ ಡಕಾಯಿತನಾಗಿದ್ದನು.

ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತಿದ್ದನು.

ಒಮ್ಮೆ ನಾರದ ಋಷಿಯು ರತ್ನನಿಗೆ ಎದುರಾದಾಗ, ಅವನು ನಾರದನನ್ನು ದರೋಡೆ ಮಾಡಲು ಯತ್ನಿಸಿದನು.

ಆಗ ನಾರದನ ಉಪದೇಶದಿಂದ ರತ್ನನಿಗೆ ಜ್ಞಾನೋದಯವಾಯಿತೆಂದು ಹೇಳಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಪ್ರಚೇತಸಮುನಿಯ ಮಗ.

ಹೀಗಾಗಿ ಅವರಿಗೆ 'ಪ್ರಾಚೇತಸ' ಎಂಬ ಹೆಸರಿದೆ. ಪರಮಾತ್ಮನನ್ನು ಕುರಿತು ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಿದ್ದಾಗ ಅವರ ಸುತ್ತ ಹುತ್ತ ಬೆಳೆದಿತ್ತು.

ಹುತ್ತ (ಸಂಸ್ಕೃತದಲ್ಲಿ-ವಲ್ಮೀಕ) ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ 'ವಾಲ್ಮೀಕಿ' ಎಂಬ ಹೆಸರು ಬಂತು.

* *ರಾಮಾಯಣ ರಚನೆಗೆ ಪ್ರೇರಣೆ:*

  *  ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ | ಯತ್ಕ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ ||

ಇದು ರಾಮಾಯಣ ರಚನೆಗೆ ಪ್ರೇರಣೆಯಾದ ಘಟನೆ ಹಾಗೂ ಆ ಸಂದರ್ಭಕ್ಕೆ ಪ್ರತಿಕ್ರಿಯೆಯಾಗಿ ಶ್ಲೋಕ ರೂಪದಲ್ಲಿ ವಾಲ್ಮೀಕಿಯವರ ಮುಖದಿಂದ ಹೊರಹೊಮ್ಮಿದ ಮಾತುಗಳು.

ಈ ಶ್ಲೋಕದ ಅರ್ಥ ಹೀಗಿದೆ :

    ಅಕಾರಣವಾಗಿ ಹಕ್ಕಿಯನ್ನು ಕೊಂದ ಹೇ ಅನ್ಯಾಯಿ | ನಿನ್ನ ಪಾಪದ ಫಲವಾಗಿ ನೀ ಈ ಕೂಡಲೇ ಸಾಯಿ ||

ವಾಲ್ಮೀಕಿ ಮಹರ್ಷಿಗಳು ತಮಸಾ ನದೀತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚಪಕ್ಷಿ ಜೋಡಿಯನ್ನು ನೋಡುತ್ತಿದ್ದಾಗ, ಬೇಡನೊಬ್ಬನು ಬಂದು ಬಾಣ ಹೂಡಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ.
ಅದರ ಸಂಗಾತಿ ಹೆಣ್ಣುಹಕ್ಕಿಯು ಸಂಕಟದಿಂದ ಕೂಗಲಾರಂಭಿಸುತ್ತದೆ.
ಈ ಹೃದಯವಿದ್ರಾವಕ ಸನ್ನಿವೇಶವನ್ನು ನೋಡಿ, ಕರುಣೆ, ದುಃಖ, ಕೋಪದಿಂದ ಮಹರ್ಷಿಗಳು ಬೇಡನನ್ನು ಶಪಿಸುವಾಗ, ಶೋಕದಿಂದ ಮೇಲ್ಕಂಡ ವಾಕ್ಯವನ್ನು ಶ್ಲೋಕ ರೂಪದಲ್ಲಿ ಉದ್ಗರಿಸುತ್ತಾರೆ.
ಈ ಶ್ಲೋಕವು ಗದ್ಯರೂಪದಲ್ಲಿರದೆ, ಪ್ರಾಸಬದ್ಧವಾಗಿ,ಲಯ-ಛಂದಸ್ಸುಗಳಿಂದ ಕೂಡಿತ್ತು.

ಆ ವೇಳೆಗೆ ಬ್ರಹ್ಮದೇವ ಮಹರ್ಷಿಗಳ ಆಶ್ರಮಕ್ಕೆ ಬಂದು ಇದೇ ಶ್ಲೋಕರೂಪದಲ್ಲಿ ರಾಮಾಯಣ ಕಾವ್ಯ ರಚಿಸಲು ಹೇಳುತ್ತಾರೆ.

ನಾರದರು ತಮಗೆ ಸಂಗ್ರಹವಾಗಿ ಹೇಳಿದ್ದ ರಾಮನ ಕಥೆಯನ್ನು ವಾಲ್ಮೀಕಿ ಮಹರ್ಷಿಗಳು ೨೪,೦೦೦ ಶ್ಲೋಕಗಳನ್ನೊಳಗೊಂಡ ಮಹಾಗ್ರಂಥವಾಗಿ ಬರೆದರು.

* *ಉತ್ತರ ರಾಮಾಯಣದಲ್ಲಿ ಒಂದು ಪಾತ್ರವಾಗಿ:*

ರಾಮನು ಅಯೋಧ್ಯೆಯ ಕೆಲವು ಸಾಮಾನ್ಯ ಜನರು ಸೀತೆಯ ಬಗೆಗೆ ಅರೋಪ ಮಾಡುತ್ತಿರುವುದನ್ನು ಗೂಢಚಾರರ ಮೂಲಕ ತೀಳಿದು (ಅಗಸನ ಆರೋಪಣೆಗೆ ಎಂದು ಕನ್ನಡ ಜೈಮಿನಿ ಭಾರತದಲ್ಲಿ ಲಕ್ಷೀಶ ಕವಿಯು (ಮೂಲವನ್ನು ಬದಲಾಯಿಸಿ ಸೇರಿಸಿದ್ದಾನೆ-ಅಥವಾ ಜೈಮಿನಿ ಋಷಿಯು ತನ್ನ ಸಂಸ್ಕೃತದ ಜೈಮಿನಿ ಭಾರತದಲ್ಲಿ ಮೂಲವನ್ನು ಬದಲಾಯಿಸಿದ್ದಾನೆ) ನೊಂದು ತುಂಬು ಗರ್ಭಿಣಿ ಸೀತೆಯನ್ನು ಪರಿತ್ಯಾಗ ಮಾಡುತ್ತಾನೆ.

ರಾಮನ ಆಜ್ಞೆಯಂತೆ ಲಕ್ಷಣನು ಸೀತೆಯನ್ನು (ಲಕ್ಷ್ಮಣ ತನ್ನ ವಿವೇಕವನ್ನು ಉಪಯೋಗಿಸಿ ವಾಲ್ಮೀಕಿ ಮುನಿಯ ಆಶ್ರಮದ ಹತ್ತಿರ) ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ.

ಅರಣ್ಯದಲ್ಲಿ ಶೋಕತಪ್ತಳಾಗಿದ್ದ ಸೀತೆಯನ್ನು ವಾಲ್ಮೀಕಿ ಮಹರ್ಷಿಗಳು ತಮ್ಮ ಆಶ್ರಮಕ್ಕೆ ಕರೆತಂದು, ಋಷಿಪತ್ನಿಯರ ಮೂಲಕ ಆಕೆಯನ್ನು ಉಪಚರಿಸಿ, ಆದರಿಸುತ್ತಾರೆ.

ಅಲ್ಲೇ ಲವ-ಕುಶರ ಜನನವಾಗುತ್ತದೆ. ಆ ಅವಳಿ ಮಕ್ಕಳಿಗೆ ವಾಲ್ಮೀಕಿ ಮಹರ್ಷಿಗಳೇ ಗುರುಗಳು. ರಾಮಾಯಣ ಮಹಾಕಾವ್ಯದ ಗಾಯನವನ್ನು ಲವ-ಕುಶರಿಗೆ ಕಲಿಸಿಕೊಡುತ್ತಾರೆ.

ವಾಲ್ಮೀಕಿ ಮಹರ್ಷಿಗಳು ಲವ-ಕುಶರ ಸಂಗಡ ರಾಮನಲ್ಲಿಗೆ ಬಂದು ರಾಮಾಯಣವನ್ನು ಗಾನ ಮಾಡುತ್ತಾರೆ. ರಾಮನಲ್ಲಿಗೆ ಸೀತೆಯನ್ನೂ ವಾಲ್ಮೀಕಿ ಮಹರ್ಷಿಗಳೇ ಕರೆತರುತ್ತಾರೆ.

* *ಮಹಾಕವಿ ಆದಿಕವಿ ವಾಲ್ಮೀಕಿಗೆ ನಮನ:*


        ಕೂಜಂತಂ ರಾಮ ರಾಮೇತಿ | ಮಧುರ ಮಧುರಾಕ್ಷರಮ್ ||
        ಆರುಹ್ಯ ಕವಿತಾಶಾಖಾಂ | ವಂದೇ ವಾಲ್ಮೀಕಿ ಕೋಕಿಲಮ್ ||

    ಈ ಸುಂದರವಾದ ರೂಪಕಾಲಂಕಾರದಿಂದ ಕೂಡಿದ ವಾಲ್ಮೀಕಿ ಮುನಿಯನ್ನು ವಂದಿಸುವ , ನಮಸ್ಕರಿಸುವ ಶ್ಲೋಕವು, ಬುಧಕೌಶಿಕ ಮುನಿಯು ರಚಿಸಿರುವ ಶ್ರೀರಾಮರಕ್ಷಾ ಸ್ತೋತ್ರದಲ್ಲಿದೆ .
    'ಕಾವ್ಯವೆಂಬ ಮರದ ಮೇಲೆ ಕುಳಿತು, 'ರಾಮ ರಾಮಾ' ಎಂದು (ಕೂಜಂತಮ್ ಹಕ್ಕಿಯ ಇಂಪಾದ ಧ್ವನಿ) ಹಾಡುತ್ತಿರುವ ವಾಲ್ಮೀಕಿ ಎಂಬ ಕೋಗಿಲೆಗೆ ವಂದೇ-ನಮಸ್ಕಾರ.

SATS LBA

👉 Click here for SATS LBA 👉 DSERT LBA ಸಂಪನ್ಮೂಲಗಳು 👉 LBA YOUTUBE TRAINING More :- SATS KARNATAKA  | SATS LBA | SATS MDM |  POST SACTIONED...