22.7.16

*ಶಿಕ್ಷಕರ ನೇಮಕ, ವರ್ಗಾವಣೆ ಇನ್ನು ಜಿಲ್ಲಾ ಮಟ್ಟಕ್ಕೆ ಸೀಮಿತ*

*ಶಿಕ್ಷಕರ ನೇಮಕ, ವರ್ಗಾವಣೆ ಇನ್ನು ಜಿಲ್ಲಾ ಮಟ್ಟಕ್ಕೆ ಸೀಮಿತ*

ನೂತನ ತಿದ್ದುಪಡಿ ಪ್ರಸ್ತಾವನೆ ಮುಂದಿನ ವರ್ಷ ಜಾರಿ

ನೇಮಕಗೊಂಡ ಜಿಲ್ಲೆಯಲ್ಲೇ ನಿವೃತ್ತಿ
ಅನ್ಯ ಜಿಲ್ಲೆಗಳಿಗೆ ವರ್ಗಾವಣೆ ಪಡೆಯುವುದು ಇನ್ನು ಅಸಾಧ್ಯ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಬಹುನಿರೀಕ್ಷಿತ ವರ್ಗಾವಣೆ ಕಾಯ್ದೆ ತಿದ್ದುಪಡಿ ನೆಪದಲ್ಲಿ ರಾಜ್ಯ ಸರ್ಕಾರ ಶಿಕ್ಷಕ ಸಮುದಾಯವನ್ನು ಬೆಂಕಿಯಿಂದ ಬಾಣಲಿಗೆ ದೂಡಿತೇ ಎಂಬ ಅನುಮಾನ ಮೂಡಿದೆ.
ಹಲವು ನ್ಯೂನತೆಗಳಿದ್ದ 2007ರ ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಸರ್ಕಾರ, ವರ್ಗಾವಣೆ ಮತ್ತು ನೇಮಕಾತಿ ಪ್ರಕ್ರಿಯೆಯನ್ನು ಜಿಲ್ಲಾ ಮಟ್ಟದಲ್ಲೇ ನಡೆಸಿ, ಶಿಕ್ಷಕರು ನೇಮಕಗೊಳ್ಳುವ ಜಿಲ್ಲೆಯಲ್ಲೇ ನಿವೃತ್ತಿ ಅಗಬೇಕೆಂಬ ನಿಯಮ ಜಾರಿಗೆ ತರಲು ಹೊರಟಿದೆ. ಆದರೆ, ಇದು ಅತಾರ್ಕಿಕ ಮತ್ತು ಅವೈಜ್ಞಾನಿಕ ಎಂಬುದು ಶಿಕ್ಷಕ ಸಮುದಾಯದ ಆಕ್ಷೇಪ.

ಸರ್ಕಾರದ ಈ ಪ್ರಸ್ತಾವಿತ ಹೊಸ
ತಿದ್ದುಪಡಿ 2017ನೇ ಸಾಲಿನಿಂದ ಜಾರಿಗೆ ಬರಬೇಕಿದೆ. ಹೊಸ ವರ್ಗಾವಣೆ ನೀತಿಯ ಅತಿದೊಡ್ಡ ಲೋಪವೆಂದರೆ ಶಿಕ್ಷಕರು ತಾವು ನೇಮಕವಾಗಿರುವ ಜಿಲ್ಲೆಯಿಂದ ಅದೆಂಥಾ ಗಂಭೀರ ಕಾರಣಗಳಿದ್ದರೂ ಅನ್ಯ ಜಿಲ್ಲೆಗಳಿಗೆ ವರ್ಗ ಪಡೆಯಲು ಸಾಧ್ಯವಾಗುವುದೇ ಇಲ್ಲ.
ಇದೊಂದು ರೀತಿ ಈಗಾಗಲೇ ನೊಂದಿರುವ ಶಿಕ್ಷಕರನ್ನು ಬೆಂಕಿಯಿಂದ ಬಾಣಲೆಗೆ ದೂಡುವ ಯೋಜನೆಯಂತೆ ಭಾಸವಾಗುತ್ತಿದೆ. ಒಟ್ಟಿನಲ್ಲಿ ಪರ ಊರಿಗೆ ವರ್ಗಾವಣೆ ಬಯಸುವುದಿರಲಿ, ಶಿಕ್ಷಕರಾಗುವುದೇ ತಪ್ಪು ಎಂಬ ಭಾವನೆ ಬಂದರೂ ಆಶ್ಚರ್ಯವಿಲ್ಲ. 2007ರಲ್ಲಿ ಜಾರಿಗೆ ತಂದಿದ್ದ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮದಲ್ಲೇ ಸಾಕಷ್ಟು ಗೊಂದಲಗಳಿದ್ದವು. ಇದನ್ನು ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದರು. ಈ ಹಿಂದಿನ ಕಾಯ್ದೆ ಜಾರಿಗೆ ತಂದಾಗ ನಾನು ಇರಲಿಲ್ಲ. ಹಳೇ ಕಾಯ್ದೆಗೆ ತಿದ್ದುಪಡಿ ತಂದು ಶಿಕ್ಷಕರ ಹಿತ ಕಾಯುತ್ತೇನೆ ಎಂದು ಹಲವು ಬಾರಿ ಹೇಳಿದ್ದರು. ಆದರೆ, ಇದೀಗ ಜಿಲ್ಲೆಯನ್ನೇ ಘಟಕವನ್ನಾಗಿ ಪರಿವರ್ತಿಸುವ ಮೂಲಕ ಶಿಕ್ಷಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗಲಿದೆ.
ಹೊಸ ನೀತಿಯಿಂದಾಗಿ ಶಿಕ್ಷಕ ದಂಪತಿ ಒಂದೇ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುವುದು ಸಾಧ್ಯವಾಗುವುದಿಲ್ಲ. ಉದಾಹರಣೆಗೆ ರಾಮನಗರದಲ್ಲಿ ರುವ ಶಿಕ್ಷಕನೊಬ್ಬ ಅದೇ ಜಿಲ್ಲೆಯಲ್ಲಿರುವ ಬೇರೆ ತಾಲೂಕುಗಳಿಗೆ ವರ್ಗಾವಣೆ ಪಡೆಯಬಹುದೇ ವಿನಹ ಬೇರೆ ಯಾವ ಜಿಲ್ಲೆಗೂ ಹೋಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಹುಬ್ಬಳ್ಳಿಯಲ್ಲಿ ಶಿಕ್ಷಕಿಯಾಗಿ ನೇಮಕಗೊಂಡ ಯುವತಿ ಅದೇ ಜಿಲ್ಲೆಯವರನ್ನು ಮದುವೆಯಾದರೆ ಬಚಾವ್. ಒಂದು ವೇಳೆ ಬೆಂಗಳೂರಿನ ಹುಡುಗನನ್ನು ಮದುವೆಯಾಗಬೇಕೆಂದರೆ ಕೆಲಸವನ್ನೇ ಬಿಡಬೇಕು ಇಲ್ಲವೇ, ಗಂಡನನ್ನೇ ಹುಬ್ಬಳ್ಳಿಗೆ ಕರೆಸಿಕೊಳ್ಳಬೇಕು. ಯಾಕೆಂದರೆ, ಆಕೆಗಂತೂ ವರ್ಗಾವಣೆ ಸಿಗುವುದಿಲ್ಲ. ಇಷ್ಟು ವರ್ಷ ಘಟಕದ ಒಳಗೆ ವರ್ಗ ಬಯಸಿದಲ್ಲಿ ಶೇ.5 ಮತ್ತು ಘಟಕದಿಂದ ಹೊರಗೆ ಶೇ.3 ಮೀಸಲಾತಿ ನೀಡಲಾಗುತ್ತಿತ್ತು. ಇದರಿಂದ ಕಳೆದ ವರ್ಷ 1357 ಪ್ರಾಥಮಿಕ ಮತ್ತು 404 ಪ್ರೌಢಶಾಲಾ ಶಿಕ್ಷಕರು ಘಟಕದ ಹೊರಗಿನ ವರ್ಗಾವಣೆಯ ಲಾಭ ಪಡೆದುಕೊಂಡಿದ್ದರು. ಸದ್ಯ ಜಾರಿಗೆ ತರಲು ಹೊರಟಿರುವ ಈ ಜಿಲ್ಲಾ ನಿವೃತ್ತಿ ಯೋಜನೆ 2017ರ ಸಾಲಿನಿಂದಲೇ ಅನ್ವಯವಾಗಲಿದ್ದು, ಪ್ರಸಕ್ತ ವರ್ಷ ಸದ್ಯ ಜಾರಿಯಲ್ಲಿರುವ ಕಾನೂನಿನಂತೆಯೇ ವರ್ಗಾವಣೆ ನಡೆಯಲಿದೆ.  ರಾಜ್ಯದ 13 ಜಿಲ್ಲೆ ಹೊರತುಪಡಿಸಿ 21 ಶೈಕ್ಷಣಿಕ ಜಿಲ್ಲೆಗಳಲ್ಲಿ ಶಿಕ್ಷಕರ ಕೊರತೆ ಇದೆ. ಹಾಗಾಗಿ ಈ ವರ್ಷ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಅವರಿಗೆ ಬೇಕಾದ ಕಡೆ ವರ್ಗಾವಣೆ ಮಾಡಲಾಗುವುದು. ಮುಂದಿನ ವರ್ಷದಿಂದ ಜಿಲ್ಲಾ ಮಟ್ಟದಲ್ಲಿ ಮಾತ್ರ ವರ್ಗಾವಣೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುತೀರ್ಣರಾದವರಿಗೆ ಪ್ರವೇಶ: ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಪುನಃ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಅವರು ತರಗತಿಗಳಿಂದ ಹೊರಗುಳಿದರೆ ಅನ್ಯ ಚಟುವಟಿಕೆಗಳಲ್ಲಿ ತೊಡಗುವ ಅಪಾಯ ಇರುವುದರಿಂದ ಪುನಃ ಶಾಲೆ-ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಅವಕಾಶ ನೀಡಲಾಗುವುದು. ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯಗೊಳಿಸಲಾಗಿದೆ. ಕನ್ನಡ ಮತ್ತು ಇಂಗ್ಲೀಷ್ ಪರೀಕ್ಷೆಯಲ್ಲಿ ವಿನಾಯಿತಿ ನೀಡುವ ಬಗ್ಗೆಯೂ ಚಿಂತನೆ ಇದೆ ಎಂದರು.

*ಶಾಲೆ ಮುಚ್ಚಲ್ಲ*

ರಾಜ್ಯದಲ್ಲಿ 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಇರುವ 4164 ಸಾವಿರ ಶಾಲೆಗಳಿವೆ. ಆದರೆ ಆ ಶಾಲೆಗಳನ್ನು ನಾವು ಮುಚ್ಚುವುದಿಲ್ಲ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಿಸಲಾಗುವುದು. ಪ್ರಸಕ್ತ ವರ್ಷದಲ್ಲಿ 13 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು. ಅದರ ಪೈಕಿ 10 ಸಾವಿರ ಶಿಕ್ಷಕರ ನೇಮಕಕ್ಕೆ ಅನುಮೋದನೆ ಸಿಕ್ಕಿದೆ. ಉಳಿದ 3 ಸಾವಿರ ಶಿಕ್ಷಕರನ್ನು ಸರ್ಕಾರದ ಒಪ್ಪಿಗೆ ಪಡೆದು ನೇಮಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಒಟ್ಟು 22 ಸಾವಿರ ಶಿಕ್ಷಕರ ಕೊರತೆ ಇದೆ. ಕೆಎಸ್‌ಆರ್‌ಟಿಸಿ ಮಾದರಿಯಲ್ಲಿ ನಿವೃತ್ತರಾಗುವ ಹುದ್ದೆಗಳಿಗೆ ನೇಮಕಾತಿ ನಡೆಸುವ ಪ್ರಕ್ರಿಯೆಯನ್ನು ಜಾರಿಗೆ ತರಲಾಗುವುದು ಎಂದು ಸೇಠ್ ತಿಳಿಸಿದರು.

*ಸಮವಸ್ತ*

ಮುಂದಿನ ವರ್ಷದಿಂದ ಕೈಮಗ್ಗ ಅಭಿವೃದ್ಧಿ ನಿಗಮದಿಂದಲೇ ಸಮವಸಗಳನ್ನು ಖರೀದಿ ಮಾಡಲಾಗುವುದು. ರಾಜ್ಯದ 47 ಸಾವಿರ ಶಾಲೆಗಳ ಪೈಕಿ ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿನ ಎಲ್ಲಾ ಮಕ್ಕಳಿಗೆ ಸಮವಸ ವಿತರಿಸಲಾಗಿದೆ. ಮೈಸೂರು ವಿಭಾಗದಲ್ಲಿ ಮಾತ್ರ ಸ್ವಲ್ಪ ವಿಳಂಬವಾಗಿದೆ. ಈ ತಿಂಗಳಾಂತ್ಯಕ್ಕೆ ಅಲ್ಲಿಯೂ ಸಮವಸ ವಿತರಿಸಲಾಗುವುದು ಎಂದು ಅವರು ಹೇಳಿದರು.

*ಕ್ರಿಮಿನಲ್ ಮೊಕದ್ದಮೆ*

ಸ್ಥಳೀಯ ಮುಖಂಡರೊಬ್ಬರ ಒತ್ತಡಕ್ಕೆ ಮಣಿದು ಯಮಕನಮರಡಿ ಶಾಲೆಯಲ್ಲಿ ಪಾಠ ಮಾಡಲಾಗುತ್ತಿತ್ತು. ಆ ಶಾಲೆಯ ಗೋಡೆ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆ ರೀತಿ ಒತ್ತಡ ಹಾಕಿದ ಸ್ಥಳೀಯ ಮುಖಂಡ ಯಾರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ. ಅವರು ಯಾರೇ ಆಗಿದ್ದರೂ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸೇಠ್ ತಿಳಿಸಿದರು.

ನೀವೂ ಪ್ರತಿಕ್ರಿಯಿಸಿ
ನೇಮಕಗೊಂಡ ಜಿಲ್ಲೆಯಲ್ಲೇ ನಿವೃತ್ತಿಯಾ
ಗಬೇಕೆಂಬ ಸರ್ಕಾರದ ಪ್ರಸ್ತಾವಿತ ವರ್ಗಾವಣೆ ನೀತಿ ಎಷ್ಟು ಸರಿ. ಶಿಕ್ಷಕ ಸಮುದಾಯಕ್ಕೆ ಇದರಿಂದ ಅನುಕೂಲವಾಗಲಿದೆಯೇ? ಈ ಬಗ್ಗೆ ನಿಮ್ಮ ಅಭಿಪ್ರಾಯ ನಮಗೆ ಬರೆದು ಕಳಿಸಿ.

*ಅಲ್ಲೇ ನೇಮಕ, ಅಲ್ಲೇ ನಿವೃತ್ತಿ*

ಶಿಕ್ಷಕ ದಂಪತಿಗಳ ತೊಂದರೆ ತಪ್ಪಿಸಲು ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ. ಹೊಸ ಕಾಯ್ದೆ ಪ್ರಕಾರ ಜಿಲ್ಲೆಯನ್ನು ಘಟಕ ವನ್ನಾಗಿಸಿ ನೇಮಕಾತಿ ಮತ್ತು ವರ್ಗಾವಣೆ ನಡೆಯಲಿದೆ. ಈ ಕಾಯ್ದೆ  ಜಾರಿಗೂ ಮುನ್ನ ಹಾಲಿ ಶಿಕ್ಷಕರಿಗಾಗಿ ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆಗೆ ಒಂದು ಬಾರಿ ಅವಕಾಶ ಕಲ್ಪಿಸಲಾಗುವುದು. ಆ ನಂತರ ಅವಕಾಶ ಇರುವುದಿಲ್ಲ.
| ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ

ವರ್ಗಾವಣೆ ವಿಷಯ

➡ಮೇಷ್ಟ್ರಿಗೂ ಅರ್ಥವಾಗದ ಹಳೆ ವರ್ಗಾ

ಬೆಂಗಳೂರು: ಕಳೆದ ಒಂಬತ್ತು ವರ್ಷಗಳಿಂದ ಶಿಕ್ಷಕರಿಗೂ ಅರ್ಥವಾಗದೇ ಕಗ್ಗಂಟಾಗಿ ಪರಿಣಮಿಸಿದ್ದ 2007ರ ವರ್ಗಾವಣೆ ನೀತಿಗೆ ತಿದ್ದುಪಡಿ ತಂದು ಮತ್ತಷ್ಟು ಸರಳೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಈ ವರ್ಷ ಸಾಮೂಹಿಕವಾಗಿ ಶಿಕ್ಷಕರ ವರ್ಗಾವರ್ಗಿ ನಡೆಯುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಸದ್ಯ ಶಿಕ್ಷಕರ ವರ್ಗಾವಣೆಗೆ 2007ರ ನೀತಿಯಂತೆ ಕೌನ್ಸೆಲಿಂಗ್ ಮಾದರಿಯಲ್ಲಿ ಶಿಕ್ಷಕರ ವರ್ಗಾವಣೆ ಮಾಡಲಾಗುತ್ತಿದೆ. ಆದರೆ ಈ ವರ್ಗಾವಣೆ ನೀತಿ ತಮಗೇ ಅರ್ಥವಾಗುತ್ತಿಲ್ಲ. ಇದು ಅಷ್ಟು ಕಠಿಣ ಮಾತ್ರವಲ್ಲ, ಭಾರಿ ಗೊಂದಲಗಳಿಂದಲೂ ಕೂಡಿದೆ ಎಂದು ಸ್ವತಃ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರೇ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ನಡೆಸಿದ ಸುದ್ದಿಗೋಷ್ಠಿ ನಡೆಸಿದ ಅವರು, ಮುಂದಿನ ಶೈಕ್ಷಣಿಕ ವರ್ಷದಿಂದ ವರ್ಗಾವಣೆಗಾಗಿ ಯಾರೂ ಬೆಂಗಳೂರು ಬಳಿ ಸುಳಿಯದಂತೆ ಮಾಡಲಾಗುವುದು ಎಂದರು.
ಪಾರದರ್ಶಕ ಮತ್ತು ಸರಳ ನೀತಿ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಆದರೆ ವರ್ಗಾವಣೆ ಕುರಿತಂತೆ ಗೊಂದಲ ಎದ್ದಿರುವುದು ಶಿಕ್ಷಣ ಸಚಿವ ಮತ್ತು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ವಿಭಿನ್ನ ಹೇಳಿಕೆಗಳಿಂದಾಗಿ. ವರ್ಗಾವಣೆ ಕುರಿತಂತೆಯೇ ಮಾತನಾಡಿರುವ ಕಾರ್ಯದರ್ಶಿ ಅಜಯ್ ಸೇಠ್, ಹೆಚ್ಚುವರಿ ಶಿಕ್ಷಕರ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕೌನ್ಸೆಲಿಂಗ್ ಮೂಲಕ ಮರು ನಿಯೋಜನೆ ಕಾರ್ಯ ಪ್ರಗತಿಯಲ್ಲಿದೆ. ಇದಾದ ಬಳಿಕ ಮಾರ್ಗಸೂಚಿ ಹೊರಡಿಸಿ ಕೆಲವೊಂದು ಮಾರ್ಗಸೂಚಿ ಬದಲಾವಣೆ ಮಾಡಿ, ಕೋರಿಕೆ ಸಲ್ಲಿಸುವ ಶಿಕ್ಷಕರ ವರ್ಗಾವಣೆ ಮಾಡಲಾಗುವುದು ಎಂದಷ್ಟೇ ಹೇಳಿದ್ದಾರೆ. ಇದರೊಂದಿಗೆ ಶಿಕ್ಷಕರ ವರ್ಗಾವಣೆ ಇನ್ನೂ ಅಸ್ಪಷ್ಟ ಎನ್ನುವಂತಾಗಿದೆ.

ಹೊಸ ಮಾರ್ಗಸೂಚಿ ಏನು?
ಈಗ ಇರುವ ವರ್ಗಾವಣೆ ನೀತಿಯಲ್ಲಿ ತಾಲೂಕನ್ನು ಒಂದು ಘಟಕವಾಗಿ ಪರಿಗಣಿಸಲಾಗುತ್ತಿದೆ. ತಾಲೂಕಿನ ಒಳಗೇ ವರ್ಗಾವಣೆಗೆ ಅವಕಾಶವಿದ್ದು ತಾಲೂಕಿನಿಂದ ತಾಲೂಕಿಗೂ ವರ್ಗಾವಣೆಗೆ ಅವಕಾಶವಿಲ್ಲ. ಆದರೆ ನೂತನ ಮಾರ್ಗಸೂಚಿಯಂತೆ ತಾಲೂಕು ಬದಲಾಗಿ ಇಡೀ ಜಿಲ್ಲೆಯನ್ನೇ ಒಂದು ಘಟಕವಾಗಿ ಪರಿಗಣಿಸಲಾಗುವುದು. ಈ ಕುರಿತು ಶಿಕ್ಷಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿತ್ತು. ಈ ಘಟಕ ಬದಲಾವಣೆ ಲಾಭವನ್ನು ಸಾವಿರಾರು ಶಿಕ್ಷಕರು ಪಡೆಯಬಹುದಾಗಿದೆ. ಮಾತ್ರವಲ್ಲ ಇನ್ನು ಮುಂದೆ ಜಿಲ್ಲೆಗಳ ನಡುವೆ ವರ್ಗಾವಣೆಗೂ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮಾರ್ಗಸೂಚಿ ರಚಿಸಲಾಗುವುದು.

ಎಲ್ಲ ಶಾಲೆಗಳಲ್ಲೂ ಶಿಕ್ಷಕರಿರುವಂತೆ ನೋಡಿಕೊಳ್ಳುವುದು. ಕೊಠಡಿಗೊಬ್ಬ ಶಿಕ್ಷಕ, ವಿಷಯವಾರು ಶಿಕ್ಷಕರನ್ನು ನಿಯೋಜಿಸಲುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ರುವ ಶಿಕ್ಷಕರ ಕೊರತೆ ತುಂಬಿಸಲು ಶಿಕ್ಷಕರ ನೇಮಕಾತಿ ಕೂಡಾ ನಡೆಸಲಾಗುತ್ತದೆ

ಪತಿ ಪತ್ನಿ ಪ್ರಕರಣ:
ರಾಜ್ಯದಲ್ಲಿ ಸಾಕಷ್ಟು ಪತಿ ಪತ್ನಿಯರು ಶಿಕ್ಷಕರಾಗಿದ್ದು ಇವರಲ್ಲಿ ಅನೇಕರು ಉತ್ತರ ದಕ್ಷಿಣ ಎಂಬಂತೆ ದೂರದ ಜಿಲ್ಲೆಗಳಲ್ಲಿ ಕೆಲಸ ಮಾಡುವಂತಾಗಿದೆ. 2007ರ ವರ್ಗಾವಣೆ ನೀತಿಯಂತೆ ಇವರ ವರ್ಗಾವಣೆ ಸುಲಭ ಸಾಧ್ಯವಿರಲಿಲ್ಲ. ತಾಲೂಕು ಘಟಕ ಮೊದಲಾದ ನಿಬಂಧನೆಗಳ ಜೊತೆಗೆ ಕೇವಲ ಶೇ.1ರಷ್ಟು ಮಾತ್ರ ವರ್ಗಾವಣೆ ಅವಕಾಶ ಇನ್ನು ಮುಂದೆ ರದ್ದಾಗಿ ಈ ಪ್ರಮಾಣ ಶೇ.3ಕ್ಕೇರಿಸಲು ಚಿಂತನೆ ನಡೆಸಲಾಗಿದೆ. ಆಗ ಈಗ ಇರುವ ಮೂರುಪಟ್ಟು ಶಿಕ್ಷಕರ ವರ್nಗಾವಣೆಗೆ ಅವಕಾಶವಾಗಲಿದೆ.

ರಾಜ್ಯದಲ್ಲಿ ಸುಮಾರು 25 ಸಾವಿರಕ್ಕೂ ಹೆಚ್ಚು ಶಿಕ್ಷಕರ ಪತಿ ಪತ್ನಿ ಪ್ರಕರಣಗಳಿವೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ ಬಹುತೇಕರು ಹತ್ತಿರವೂ ಅಲ್ಲದ ಜಿಲ್ಲೆಗಳಲ್ಲಿ ಶಿಕ್ಷಕರಾಗಿದ್ದು ಸಮಸ್ಯೆ ಎದುರಿಸುವಂತಾಗಿದೆ. ಇನ್ನು ಮುಂದೆ ಸರಳ ವರ್ಗಾವಣೆ ನೀತಿಯಿಂದ ಪತಿ ಪತ್ನಿಯರ ಪ್ರಕರಣಗಳನ್ನು ಆದ್ಯತೆ ಮೇಲೆ ಪರಿಗಣಿಸಿ ವರ್ಗಾವಣೆ ಮಾಡಲಾಗುವುದು ಎಂದು ಸಚಿವ ಸೇಠ್ ಹೇಳಿದ್ದಾರೆ.

2007ರ ನೀತಿ ಏನು?
2007ರ ಕಾಯಿದೆಯಂತೆ ಗ್ರಾಮೀಣ ಭಾಗಗಳಲ್ಲಿ ಶಿಕ್ಷಕರ ಕೊರತೆ ತಡೆಯುವ ನಿಟ್ಟಿನಲ್ಲಿ ಕೆಲವೊಂದು ಬಿಗಿ ನಿಯಮಾವಳಿಗಳನ್ನು ರೂಪಿಸಲಾಗಿತ್ತು. ಮೊದಲ ನೇಮಕಾತಿಯಲ್ಲೇ ಗ್ರಾಮೀಣ ಸೇವೆ ಕಡಾಯ ಮೊದಲಾದ ನಿಯಮಗಳಿದ್ದವು. 2005ಕ್ಕೂ ಮುನ್ನ ನಗರಭಾಗಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರ ಮುಂದಿನ ವರ್ಗಾವಣೆ ಗ್ರಾಮಾಂತರ ಪ್ರದೇಶಕ್ಕೆ ಕಡ್ಡಾಯವಾಗಿತ್ತು. ನೇಮಕಾತಿ ಆದ ಐದು ವರ್ಷಗಳ ಕಾಲ ನೇಮಕಾತಿ ಆದ ಗ್ರಾಮೀಣ ಪ್ರದೇಶದಿಂದ ವರ್ಗಾವಣೆ ಆಗುವಂತಿರಲಿಲ್ಲ. ಪತಿ ಪತ್ನಿ ಪ್ರಕರಣದಲ್ಲಿ ಒಂದು ಬಾರಿ ಮಾತ್ರ ವರ್ಗಾವಣೆಗೆ ಅವಕಾಶವಿತ್ತು. ಪರಸ್ಪರ ವರ್ಗಾವಣೆಗೆ ಸೇವಾವಧಿಯಲ್ಲಿ ಒಂದೇ ಬಾರಿ ಅವಕಾಶವಿತ್ತು. ಸರ್ವಶಿಕ್ಷಣ ಅಭಿಯಾನದಡಿ ನೇಮಕಗೊಂಡ ವಿಷಯವಾರು ಶಿಕ್ಷಕರಿಗೆ ವಿಷಯವಾರು ಹುದ್ದೆಗಳ ಲಭ್ಯತೆ ಆಧಾರದಲ್ಲೇ ವರ್ಗಾವಣೆ ಆಗಬೇಕಿತ್ತು.

ರಾಜ್ಯದಲ್ಲಿನ ಶಿಕ್ಷಕರ ವರ್ಗಾವಣೆಗೆ 2007ರಲ್ಲಿ ಜಾರಿಗೆ ತಂದಿರುವ ಪದ್ಧತಿ ಸಾಕಷ್ಟು ಗೊಂದಲಗಳಿಂದ ಕೂಡಿದೆ. ತಾಲೂಕು ಘಟಕ, ಜಿಲ್ಲಾ ಘ.

ವರ್ಗಾವಣೆ ಹೊಸ ಮಾರ್ಗಸೂಚಿ ಏನು?

* ತಾಲೂಕು ಘಟಕದ ಬದಲು, ಜಿಲ್ಲೆಯನ್ನೇ ಘಟಕವಾಗಿ ಪರಿಗಣನೆ
* ಜಿಲ್ಲೆ- ಜಿಲ್ಲೆಗಳ ನಡುವೆಯೂ ವರ್ಗಾವಣೆ
* ಪತಿ- ಪತ್ನಿ ಪ್ರಕರಣಗಳಿಗೆ ಹೆಚ್ಚಿನ ಆದ್ಯತೆ
* ಶೇ.1ರ ಬದಲಾಗಿ ಒಟ್ಟು ಶೇ.3 ವರ್ಗಾವಣೆ
* ನಿಯೋಜನೆ- ಮರು ನಿಯೋಜನೆಯಿಂದ ಸಾಕಷ್ಟು ವರ್ಗಾವಣೆಗೆ ಅವಕಾಶ
* ವರ್ಗಾವಣೆ ಗೊಂದಲಗಳ ನಿವಾರಣೆ

SATS LBA

👉 Click here for SATS LBA 👉 DSERT LBA ಸಂಪನ್ಮೂಲಗಳು 👉 LBA YOUTUBE TRAINING More :- SATS KARNATAKA  | SATS LBA | SATS MDM |  POST SACTIONED...