22.3.18

05 ಮಾರ್ಚ್ 22 : ಇಂದು ವಿಶ್ವ ಜಲ ದಿನ

🌹 *ಮಾರ್ಚ್ 22 : ಇಂದು ವಿಶ್ವ ಜಲ ದಿನ*

 *ಜೀವ ಜಲ*

ಜಲ’ ಇದು ಪ್ರತಿಯೊಂದು ಜೀವಿಯ ಜೀವನಕ್ಕೆ ಪ್ರಮುಖವಾಗಿದೆ. ಇದು ಜೀವಿತಾವಧಿಯ ಒಂದು ಪ್ರಮುಖ ಭಾಗವೆಂದರೂ ತಪ್ಪಗಲಾರದು. ಮನುಷ್ಯನು ಊಟ ತಿಂಡಿ ಹಾಗೂ ನಿದ್ರೆಯಿಲ್ಲದೇ ಜೀವಿಸಬಲ್ಲ. ಆದರೆ ಬದುಕಿನ ಅವಿಭಾಜ್ಯ ಅಂಗವಾದ ಗಾಳಿ ಮತ್ತು ನೀರಿಲ್ಲದೇ ಬದುಕುವುದು ಕಷ್ಟಸಾಧ್ಯ. ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವಾದ್ಯಂತ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.

ನಮ್ಮ ಬಹುತೇಕ ನಾಗರಿಕತೆಗಳು ಹುಟ್ಟಿಕೊಂಡಿದ್ದೇ ನದಿ ದಂಡೆಯಲ್ಲೇ. ನೀರು ಇದ್ದ ಕಡೆ ಜೀವಸಂಕುಲಗಳ ಬೆಳವಣಿಗೆಯಾಗುತ್ತದೆ. ನೀರಿಲ್ಲದೆ ಕಡೆ ಬರಡು ಮನೆ ಮಾಡಿರುತ್ತದೆ. ನೀರಿನ ಬಹುಉಪಯೋಗವನ್ನು ಅರಿತೇ ಜನರು ನೀರಿಗೆ ಪವಿತ್ರ ಸ್ಥಾನವನ್ನು ನೀಡಿದ್ದಾರೆ. ಅದರಲ್ಲೂ ಭಾರತ ದೇಶದಲ್ಲಿ ನೀರನ್ನು ದೇವಿ ಸ್ವರೂಪಿಯಾದ ಜಲದೇವತೆ ಎಂದು ಪೂಜಿಸಲಾಗುತ್ತದೆ. ಜಲ ಮೂಲಗಳಾದ ನದಿ, ಕೆರೆ, ಸಮುದ್ರಗಳಿಗೆ ಭಾರತೀಯರು ಪೂಜೆ ಸಲ್ಲಿಸುತ್ತಾರೆ.

🌹ಅಂತರ್ಜಲ ಕುಸಿತ ಕಾರಣವೇನು ಗೊತ್ತಾ..?

ವಿಶ್ವದಲ್ಲಿ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ, ಪರಿಸರ ಮಾಲಿನ್ಯ ಹೀಗೆ ಮತ್ತಿತರ ಕಾರಣಗಳಿಂದ ಈಗಾಗಲೇ ನೀರಿನ ಅಭಾವ ಕಂಡುಬಂದಿದೆ. ಅರಣ್ಯ ನಾಶವೇ ನೀರಿನ ಅಭಾವಕ್ಕೆ ಪ್ರಮುಖ ಕಾರಣವಾಗಿದೆ. ಕಾಡುಗಳನ್ನು ಕಡಿಯುವುದರಿಂದ ಮಳೆ ಕಡಿಮೆಯಾಗುತ್ತಿದ್ದು, ಇದರಿಂದ ಭೂಮಿಯಲ್ಲಿ ನೀರಿನ ಅಂಶವೂ ಕಡಿಮೆಯಾಗುತ್ತದೆ. ಅರಣ್ಯ ನಾಶವಾಗಿ ಭೂಮಿ ಬಂಜರಾಗುತ್ತಾ, ಮೇಲ್ಮಣ್ಣು ಕೊಚ್ಚಿ ಹೋದಾಗ ನೀರು ಇಂಗುವ ಸಾಮಥ್ರ್ಯವೂ ಕಡಿಮೆಯಾಗುತ್ತದೆ. ಪಕ್ಕಪಕ್ಕದಲ್ಲೇ ಕೊಳವೆ ಬಾವಿ ಕೊರೆಯುವುದು ಕೂಡ ನೀರಿನ ಅಭಾವಕ್ಕೆ ಕಾರಣವಾಗಿದೆ. ಇದರಿಂದ ಮರಗಳನ್ನು ಬೆಳೆಸಿ ನೀರಿನ ಅಭಾವಕ್ಕೆ ಕೊನೆಗಾಣಿಸಬಹುದಾಗಿದೆ.

ವಿಶ್ವಸಂಸ್ಥೆಯಲ್ಲಿ ಕೈಗೊಂಡ ನಿರ್ಧಾರ
1993ರಲ್ಲಿ ಬ್ರೆಜಿಲ್ ನ ರಿಯೋ ಡಿಜನೈರೋದಲ್ಲಿ ನಡೆದ ವಿಶ್ವಸಂಸ್ಥೆಯ ಪರಿಸರ ಮತ್ತು ಅಭಿವೃದ್ಧಿ ಸಮಾವೇಶದಲ್ಲಿ ಜಲ ಸಂರಕ್ಷಣೆಯ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಈ ತೀರ್ಮಾನದಂತೆ ಅಂದಿನಿಂದ ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವ ಜಲದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

 *ಜಲ ದಿನದ ಘೋಷಣೆಗಳು:*

ಪ್ರತಿ ವರ್ಷ ವಿಶ್ವ ಸಂಸ್ಥೆಯಲ್ಲಿ ವಿಶ್ವ ಜಲ ದಿನದಂದು ಘೋಷಣೆಗಳನ್ನು ಘೋಷಿಸಲಾಗುತ್ತದೆ. ಘೋಷಣೆಗಳ ವಿವರ ಈ ರೀತಿಯಿದೆ:
1994- ಎಲ್ಲರ ಚಿತ್ತ ಜಲಸಂಪನ್ಮೂಲ ದತ್ತ
1995- ಮಹಿಳೆ ಮತ್ತು ನೀರು
1996- ಬಾಯಾರಿದ ನಗರಗಳಿಗೆ ನೀರು
1997- ಜಗತ್ತಿನಲ್ಲಿರುವ ನೀರು ಸಾಲುತ್ತದೆಯೇ?
1998- ಅಂತರ್ಜಲ ಗುಪ್ತ ಸಂಪನ್ಮೂಲ
1999- ಕೆಳಸ್ತರದಲ್ಲಿ ಬದುಕುವವರಿಗೂ ನೀರು
2000- 21ನೇ ಶತಮಾನದಲ್ಲಿ ಜಲ, ನೆಲ
2001- ಉತ್ತಮ ಆರೋಗ್ಯಕ್ಕೊಂದು ಯಶಸ್ವೀ ನೀರಿನ ಸೂತ್ರ
2002- ಅಭಿವೃದ್ಧಿಯ ಪಥದತ್ತ ನೀರು
2003- ಭವಿಷ್ಯದ ಉಳಿವಿಗಾಗಿ ನೀರು
2004- ನೀರು ಮತ್ತು ಪ್ರವಾಹ
2005- ಬದುಕಿಗೆ ನೀರು ಆಧಾರ
2006- ಸಂಪ್ರದಾಯ ಮತ್ತು ನೀರು
2007- ಜಲ ಕ್ಷಾಮದ ನಿರ್ವಹಣೆ
2008- ಉತ್ತಮ ಒಳಚರಂಡಿ ವ್ಯವಸ್ಥೆ
2009- ಶುದ್ಧ ನೀರು ಮತ್ತು ಅಚ್ಚುಕಟ್ಟಾದ ಚರಂಡಿ
2010- ಆರೋಗ್ಯಕ್ಕಾಗಿ ಸ್ವಚ್ಛ ನೀರು
2005-2015- ನೀರಿನ ಜಾಗೃತ ವರ್ಷ

🌹 *ಮಾರ್ಚ್ 22 : ಇಂದು ವಿಶ್ವ ಜಲ ದಿನ*

ಪ್ರತಿ ವರ್ಷ ಮಾರ್ಚ್ 22ರಂದು ವಿಶ್ವದಾದ್ಯಂತ ‘ವಿಶ್ವ ಜಲ ದಿನ’ ಎಂದು ಆಚರಿಸಿ ನೀರಿನ ಬಳಕೆ ಮತ್ತು ಉಳಿಕೆಯ ಬಗ್ಗೆ ಜನರಲ್ಲಿ ಜಾಗೃತಿ ಮಾಡಿಸಲಾಗುತ್ತದೆ. 1993ರ ಮಾರ್ಚ್ 22ರಂದು ಈ ಆಚರಣೆಯನ್ನು ಜಾರಿಗೆ ತರಲಾಯಿತು. ಪ್ರತಿ ವರ್ಷ ಯಾವುದಾದರೊಂದು ಧ್ಯೇಯವಾಕ್ಯವಿಟ್ಟುಕೊಂಡು ‘ಸಿಹಿ ನೀರಿನ’ ಉಳಿಕೆಯ ಬಗ್ಗೆ ಜಾಗೃತಿ ಮಾಡಿಸಲಾಗುತ್ತಿದೆ. ಇದರ ಜೊತೆಗೆ ನೀರಿನ ಬಳಕೆ, ಸ್ವಚ್ಚತೆ ಮತ್ತು ರೋಗ ನಿಯಂತ್ರಣದ ಬಗ್ಗೆಯೂ ಎಚ್ಚರಿಕೆ ಮೂಡಿಸುವ ಪ್ರಯತ್ನವನ್ನು ಮಾಡಲಾಗುತ್ತದೆ. 2016ರಲ್ಲಿ “ಪ್ರತಿ ಹನಿಯೂ ಅತ್ಯವಶ್ಯಕ” ಎಂಬ ಧ್ಯೇಯ ವಾಕ್ಯವಿಟ್ಟುಕೊಂಡು ವಿಶ್ವ ಜಲದಿನ ಆಚರಿಸಲಾಗಿತ್ತು. 2017ರಲ್ಲಿ ನೀರು ಯಾಕಾಗಿ ಪೋಲು ಮಾಡುತ್ತೀರಿ ? ಎಂಬ ಧ್ಯೇಯ ವಾಕ್ಯವಿಟ್ಟುಕೊಂಡು ಆಚರಣೆ ಮಾಡಲಾಗುತ್ತಿದೆ.

ನೀರು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗ. ನಮ್ಮ ದೇಹದ ಆರೋಗ್ಯಕ್ಕೆ ಉತ್ತಮ ಗಾಳಿ, ಬೆಳಕು ಹೇಗೆ ಮುಖ್ಯವೋ ಅದೇ ರೀತಿ ಶುದ್ಧ ನೀರು ಕೂಡಾ ಅತೀ ಅವಶ್ಯಕ. ಭೂಮಂಡಲದ ಮೂರಂಶದ ಎರಡಷ್ಟು ನೀರಿನಿಂದಲೇ ತುಂಬಿದ್ದರೂ, ಉಪಯೋಗಿಸ ಬಹುದಾದ ಸಿಹಿ ನೀರಿನ ಅಂಶ ಬಹಳ ಕಡಿಮೆ ಇದೆ. ಬೆಳೆಯುತ್ತಿರುವ ಜನಸಂಖ್ಯೆ, ಕೈಗಾರೀಕೀರಣ, ಅರಣ್ಯ ಸಂಪತ್ತಿನ ನಾಶ, ಕಡಿಮೆಯಾಗುತ್ತಿರುವ ಮಳೆ, ಮನುಷ್ಯನ ದುರಾಸೆಗಳಿಂದಾಗಿ ಭೂಮಿಯಲ್ಲಿನ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಮನುಷ್ಯರು “ನೀರನ್ನು ಉಳಿಸುವ” ಪ್ರಾಮಾಣಿಕ ಪ್ರಯತ್ನ ಮಾಡದೇ, ನೀರನ್ನು ಪೋಲು ಮಾಡುವುದನ್ನೇ ಹವ್ಯಾಸವಾಗಿ ಮಾಡಿಕೊಂಡಿರುವ ಕಾರಣದಿಂದಲೇ ಬಡ ಮತ್ತು ಮಧ್ಯಮ ವರ್ಗದ ಜನರು ಸ್ವಚ್ಚ ಸಿಹಿ ನೀರಿನ ಸೌಲಭ್ಯದಿಂದ ವಂಚಿತರಾಗುವುದು ಬಹಳ ದೌರ್ಭಾಗ್ಯದ ವಿಚಾರ. ನೀರು ಪ್ರತಿಯೊಬ್ಬ ಮನುಷ್ಯನಿಗೂ ಅತೀ ಅವಶ್ಯಕ. ಶುದ್ಧ ನೀರಿನ ಲಭ್ಯತೆ ಪ್ರತೀ ನಾಗರೀಕರ ಹಕ್ಕು ಆಗಿರುತ್ತದೆ. ಇಂದಿನ ದಿನದಲ್ಲಿ ವಿಶ್ವದಲ್ಲಿ ಸುಮಾರು 665 ಮಿಲಿಯನ್ ಮಂದಿ ಶುದ್ಧ ನೀರಿನ ಅಲಭ್ಯತೆಯಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಅಂಕಿಯ ಅಂಶಗಳಿಂದ ತಿಳಿದು ಬಂದಿದೆ. ಶುದ್ದ ನೀರಿಗಾಗಿ ಜನರು ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಇಲ್ಲವೆ ಹತ್ತಾರು ಮೈಲಿ ನಡೆಯ ಬೇಕಾದ ಅನಿವಾರ್ಯತೆ ಬಂದಿದೆ. ಪ್ರತಿಯೊಬ್ಬ ಮನುಷ್ಯನೂ ನೀರನ್ನು ಹಿತ ಮಿತವಾಗಿ ಬಳಸಿ ಇತರರಿಗೂ ಸಿಗುವಂತೆ ಮಾಡಬೇಕು. ಜಾಗತಿಕವಾಗಿ ನಮ್ಮ ಮನೆಗಳಲ್ಲಿ, ಕಾರ್ಖಾನೆಗಳಲ್ಲಿ, ಕೈಗಾರಿಕೆಗಳಿಗಾಗಿ ಬಳಸಿದ ನೀರು ಪುನರ್ ಬಳಕೆಯಾಗದೆ ಅದೂ ಶುದ್ಧೀಕರಣಗೊಳ್ಳದೆ, ನೇರವಾಗಿ ಭೂಗರ್ಭದಲ್ಲಿ ಸೇರಿ ಹೋಗುತ್ತದೆ. ನಾವು ಇಂದು ‘ಕಲುಷಿತ ನೀರು’ ಅಥವಾ ವೇಸ್ಟ್ ವಾಟರ್ ಎಂದು ಏನು ಕರೆಯುತ್ತೇವೆಯೋ ಅದನ್ನು ನಿಜವಾಗಿಯೂ ಪುನಃ ಬಳಸಿದಲ್ಲಿ ಪೋಲಾಗುವ ನೀರು ಮತ್ತು ನೀರಿನಲ್ಲಿರುವ ಪೋಷಕಾಂಶಗಳನ್ನು ಪುನರ್ ಬಳಸಿದಲ್ಲಿ ಬಹಳ ಉಪಯೋಗವಾಗಬಹುದು. ಜನರಲ್ಲಿ ನೀರನ್ನು ಪುನಃ ಬಳಸಬೇಕೆಂಬ ಅರಿವನ್ನು ಮೂಡಿಸುವ ಪ್ರಾಮಾಣಿಕ ಪ್ರಯತ್ನವಾಗಲೇಬೇಕು. ನೀರು ಪೋಲಾಗದಂತೆ ಮಾಡುವುದರ ಜೊತೆಗೆ, ಆದಷ್ಟು ಪರಿಸರ ನಾಶ, ಪರಿಸರ ಮಾಲಿನ್ಯವಾಗದಂತೆ ನೋಡಿಕೊಂಡು ಅಂತರ್ಜಲದ ಮಟ್ಟ ಕುಸಿಯದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿಯೂ ನಮ್ಮ ಮೇಲಿದೆ. ಜಾಗತಿಕವಾಗಿ ಶೇಕಡಾ 80ರಷ್ಟು ಉತ್ಪನ್ನವಾಗುವ ಕಲುಷಿತ ನೀರು ಅಥವಾ ವೇಸ್ಟ್ ವಾಟರ್ ಪುನರ್ ಬಳಕೆಯಾಗದೇ ನೇರವಾಗಿ ಭೂಗರ್ಭವನ್ನು ಸೇರುತ್ತದೆ. ಇದು ನಿಜವಾಗಿಯೂ ಬಹಳ ನೋವಿನ ಮತ್ತು ಆತಂಕಕಾರಿ ವಿಚಾರ ಇದೇ ರೀತಿ ನೀರಿನ ದುರ್ಬಳಕೆ ಮತ್ತು ಪುನರ್ ಬಳಕೆ ಮಾಡದಿದ್ದಲ್ಲಿ ಮುಂದೊಂದು ದಿನ ಹನಿ ಹನಿ ನೀರಿಗೂ ಹಾಹಾಕಾರ ಹಾಕುವ ದಿನಗಳು ದೂರವಿಲ್ಲ. ಜಾಗತಿಕವಾಗಿ 1.8 ಬಿಲಿಯನ್ ಮಂದಿ ಬಳಸುವ ನೀರು ಮಲ ಮೂತ್ರಗಳಿಂದ ಕಲುಷಿತವಾಗಿದ್ದು ಅವರಿಗೆ ಕಾಲೇರಾ, ಟೈಪಾಯಿಡ್, ಹೆಪಟೈಟಿಸ್ ಬರುವ ಸಾಧ್ಯತೆ ಹೆಚ್ಚಿದೆ. ಕಲುಷಿತ ನೀರು, ಸ್ವಚ್ಚತೆಯ ನಾಶ ಮತ್ತು ಕೊಳಚೆ ಪ್ರದೇಶಗಳ ಹೆಚ್ಚಳದಿಂದಾಗಿ ಪ್ರತಿ ವರ್ಷ 8,50,000 ಮಂದಿ ವಿಶ್ವದಾದ್ಯಂತ ಸಾವಿಗೀಡಾಗುತ್ತಾರೆ.

ನೀರಿನ ಪುನರ್ ಬಳಕೆ ಮಾಡುವುದರಿಂದ ನೀರು ಪೋಲಾಗುವುದು ತಪ್ಪಿಸುವುದರ ಜೊತೆಗೆ ನೀರಿನಲ್ಲಿ ಪೋಲಾಗುವ ಅವಶ್ಯಕ ಖನಿಜಗಳು, ಪೋಷಕಾಂಶಗಳು ಮತ್ತು ಇನ್ನಿತರ ಪುನರ್ ಬಳಕೆ ಮಾಡುವ ವಸ್ತುಗಳನ್ನು ಪೋಲಾಗದಂತೆ ಮಾಡಿ ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅವೈಜ್ಞಾನಿಕವಾಗಿ ಅನಗತ್ಯವಾಗಿ ಎಲ್ಲೆಂದರಲ್ಲಿ ಕೊಳವೆ ಬಾವಿ ತೋಡುವುದನ್ನು ನಿರ್ಭಂಧಿಸಬೇಕು. ಹೀಗೆ ಮಾಡುವುದರಿಂದ ಅಂತರ್ಜಲ ಕುಸಿಯುವ ಸಾಧ್ಯತೆ ಹೆಚ್ಚಿರುತ್ತದೆ. ಜಲ ಮರು ಪೂರಣ ಪ್ರಕ್ರಿಯೆಗೆ ಹೆಚ್ಚು ಒತ್ತು ನೀಡಬೇಕು ಪಾಳು ಬಿದ್ದ ಕೊಳವೆ ಬಾವಿಗಳ ಸುತ್ತ ಹತ್ತಡಿ ಉದ್ದ ಅಗಲ ಮತ್ತು ಆಳವಿರುವ ಗುಂಡಿ ತೆಗೆದು ಅದರ ತಳಭಾಗದಲ್ಲಿ ದೊಡ್ಡ ಕಲ್ಲುಗಳನ್ನು ಹಾಕಬೇಕು. ಅದರ ಮೇಲೆ ಪುನಃ ಸಣ್ಣ ಗಾತ್ರದ ಜಲ್ಲಿ ಕಲ್ಲುಗಳನ್ನು ಹಾಕಿ ಅದರ ಮೇಲೆ ಮರುಳು ಹಾಕಿ ಗುಂಡಿಯನ್ನು ಸಮತಟ್ಟು ಮಾಡಬೇಕು. ಈ ಗುಂಡಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿಯುವಂತೆ ಮಾಡಿ, ನೀರು ಭೂಮಿಗೆ ಪುನಃ ಸೇರುವಂತೆ ಮಾಡಬೇಕು. ಹೀಗೆ ನೀರನ್ನು ನೆಲದಲ್ಲಿ ಹಿಡಿದಿಡುವ ಪ್ರಕ್ರಿಯೆಗೆ ಜಲಪೂರಣ ಎನ್ನುತ್ತಾರೆ. ಹೀಗೆ ಮಾಡುವುದರಿಂದ ಬತ್ತಿಹೋದ ಬರಡು ಕೊಳವೆ ಬಾವಿಗಳಿಗೆ ಪುನರ್ ಜನ್ಮ ಬಂದು ಭೂಮಿಯಲ್ಲಿ ನೀರಿನ ಸೆಲೆ ಹುಟ್ಟಿಕೊಳ್ಳುತ್ತದೆ. ಅದೇ ರೀತಿ ಮಳೆಗಾಲದಲ್ಲಿ ಇಂಗು ಗುಂಡಿಗಳ ಮುಖಾಂತರ ಭೂಮಿಯಲ್ಲಿ ನೀರು ಇಂಗುವಂತೆ ಮಾಡತಕ್ಕದ್ದು. ಮಳೆಗಾಲದಲ್ಲಿ ಬೀಳುವ ನೀರು ಸಮುದ್ರಕ್ಕೆ ಸೇರಿ ಪೋಲಾಗುವುದರ ಬದಲು ಭೂಮಿಯಲ್ಲಿ ನೀರು ಇಂಗುವಂತೆ ಮಾಡಿದಲ್ಲಿ ಅಂತರ್ಜಲದ ಮಟ್ಟ ಏರುವ ಎಲ್ಲಾ ಸಾಧ್ಯತೆಗಳು ಇದೆ. ಹೀಗೆ ಜಲ ಮರು ಪೂರಣ, ಇಂಗು ಗುಂಡಿಗಳ ಮೂಲಕ ನೀರನ್ನು ಭೂಮಿಗೆ ಇಂಗುವಂತೆ ಮಾಡಿ, ಜೀವ ಸಂಕುಲಕ್ಕೆ ಅತೀ ಅಗತ್ಯವಾದ ಅಮೂಲ್ಯ ಜಲಸಂಪತನ್ನು ಉಳಿಸಿ ಮುಂದಿನ ಪೀಳಿಗೆಗೂ ಕಾಪಾಡುವ ಗುರುತರ ಜವಾಬ್ದಾರಿಯನ್ನು ನಾವೆಲ್ಲರೂ ಪ್ರಾಮಾಣಿಕವಾಗಿ ಮಾಡಲೇ ಬೇಕಾಗಿದೆ. ಇಲ್ಲವಾದಲ್ಲಿ ಭೂಮಿ ಬರಡಾಗಿ, ಕೃಷಿಭೂಮಿ ಫಲವತ್ತತೆ ಕಳೆದುಕೊಂಡು ಬಂಜರು ಭೂಮಿಯಾಗಿ ಮಾರ್ಪಾಡಾಗಿ, ಭೂಮಂಡಲದ ತಾಪಮಾನ ಏರಿ ಜೀವ ಸಂಕುಲಗಳು ನಾಶವಾಗಿ ಭೂಮಿ ಬದುಕಲು ಅಯೋಗ್ಯವಾಗುವ ಎಲ್ಲ ಸಾಧ್ಯತೆ ಇದೆ.

ಇದೇ ರೀತಿ ಅರಣ್ಯ ಪ್ರದೇಶಗಳನ್ನು ಒತ್ತುವರಿಮಾಡಿಕೊಂಡು ಗಿಡಮರಗಳನ್ನು ಕತ್ತರಿಸಿ ರೆಸಾರ್ಟ್ ಮಾಡಿ, ಕಾಂಕ್ರೀಟ್ ಕಟ್ಟಡ ನಿರ್ಮಿಸಿಕೊಂಡು ಜಲ ಮೂಲ ಬರಿದುಮಾಡಿ ಅರಣ್ಯ ಸಂಪತ್ತನ್ನು ಲೂಟಿ ಮಾಡುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಗಣಿಗಾರಿಕೆಯ ನೆಪದಲ್ಲಿ ಅತ್ಯಮೂಲ್ಯ ಅರಣ್ಯ ಸಂಪತ್ತು ಕೊಳ್ಳೆ ಹೊಡೆದು ಭೂಮಿಯನ್ನು ಬರಡು ಮಾಡಿ ಭೂತಾಯಿಯ ಒಡಲನ್ನು ಬಂಜೆಯಾಗಿಸುವ ಪ್ರಯತ್ನ ಪ್ರತಿ ನಿತ್ಯ ನಡೆಯುತ್ತಿದೆ. ಭೂಮಂಡಲದ ಮೇಲೆ ಅರಣ್ಯ ಪ್ರದೇಶದ ಪ್ರಮಾಣ ಶೇಕಡಾ 30 ಇದ್ದು ಸುಮಾರು 60 ಸಾವಿರಕ್ಕೂ ಅಧಿಕ ವೈವಿಧ್ಯಮಯ ಜಾತಿಯ ಮರಗಳಿವೆ. ವಿಪರ್ಯಾಸವೆಂದರೆ ಪ್ರತಿವರ್ಷ ಅಭಿವೃದ್ಧಿ ಮತ್ತು ಜಾಗತೀಕರಣದ ನೆಪದಲ್ಲಿ 35 ಬಿಲಿಯನ್ ಎಕರೆ ಅರಣ್ಯ ನಾಶವಾಗುತ್ತಿದೆ ಮತ್ತು ಜಲ ಮೂಲ ಬರಿದಾಗುತ್ತಿದೆ ಮತ್ತು ಜಾಗತಿಕ ತಾಪಮಾನಏರುತ್ತಿದೆ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಮುಂದೊಂದು ದಿನ ಹನಿಹನಿ ನೀರಿಗೂ ಜಗಳವಾಡಬೇಕಾಗಬಹುದು.

ಕೊನೆ ಮಾತು

ನೀರು ಪ್ರತಿ ಮನುಷ್ಯನ ಮೂಲಭೂತ ಅವಶ್ಯಕತೆಯಾಗಿರುತ್ತದೆ. ನೀರಿಲ್ಲದೆ ಬದುಕುವುದು ಬಹಳ ಕಷ್ಟ. ದೈನಂದಿನ ಚಟುವಟಿಕೆಗಳಿಗೆ ಕುಡಿಯಲು, ಸ್ನಾನ ಮಾಡಲು, ಪರಿಸರ ಸ್ವಚ್ಚ ಮಾಡಲು ಹೀಗೆ ಹತ್ತು ಹಲವು ಕಾರ್ಯಗಳಿಗೆ ನೀರು ಅತೀ ಅವಶ್ಯಕ ಅಮೇರಿಕಾ, ಯುರೋಪ್ ಮುಂತಾದ ಮುಂದುವರಿದ ರಾಷ್ಟ್ರಗಳಲ್ಲಿ ಪ್ರತಿ ವ್ಯಕ್ತಿ ದಿನವೊಂದರಲ್ಲಿ 100 ರಿಂದ 250 ಲೀಟರುಗಳಷ್ಟು ನೀರು ಬಳಸುತ್ತಾರೆ. ಇದು ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ವಾಸಿಸುವ ವ್ಯಕ್ತಿಗಳು ಬಳಸುವ ನೀರಿನ ಪ್ರಮಾಣಕ್ಕಿಂತ 10 ಪಟ್ಟು ಜಾಸ್ತಿಯಾಗಿರುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ನೀರು ಪೋಲಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿ ಬಾರಿ ನೀರು ಬಳಸುವಾಗಲೂ ನಾವು ನೀರು ಪೋಲಾಗುವುದನ್ನು ತಡೆಯುವ ಪ್ರಮಾಣಿಕ ಪ್ರಯತ್ನ ಮಾಡಲೇಬೇಕು. ಅನಗತ್ಯವಾಗಿ ನೀರಿನ ನಳ್ಳಿಯನ್ನು ಗಂಟೆಗಟ್ಟಲೆ ಬಿಡುವುದು. ಅತಿಯಾಗಿ ಶವರ್ ಬಳಸುವುದು. ಅನಗತ್ಯವಾಗಿ ಅತಿಯಾಗಿ ನೀರು ಬಳಸುವುದು, ಟಾಯ್ಲೇಟ್‍ಗಳಲ್ಲಿ ಅನಗತ್ಯವಾಗಿ ನೀರು ಪ್ಲಷ್‍ಮಾಡಿ ಪೋಲು ಮಾಡುವುದು ಮುಂತಾದವುಗಳಿಗೆ ಪ್ರಯತ್ನ ಪೂರ್ವಕವಾಗಿ ಕಡಿವಾಣ ಹಾಕಲೇಬೇಕು. ನಾವು ಉಳಿಸುವ ಒಂದೊಂದು ಹನಿ ನೀರು ಕೂಡಾ ಇನ್ನೊಬ್ಬರ ಜೀವ ಉಳಿಸಬಹುದು. ಬದಲಾಗುತ್ತಿರುವ ಜೀವನ ಶೈಲಿ ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನದ ಏರಿಕೆ, ಕೈಗಾರಿಕೀಕರಣ, ಕಲುಷಿತ ವಾತಾವರಣ ಅರಣ್ಯ ಸಂಪತ್ತುಗಳ ನಾಶ ಇವೆಲ್ಲವೂ ಮೇಳೈಸಿ ಭೂಮಿಯಲ್ಲಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ.

04 ವಚನ ಬ್ರಹ್ಮ ದೇವರ ದಾಸಿಮಯ್ಯನವರು

✍🌹 *ವಚನ ಬ್ರಹ್ಮ ದೇವರ ದಾಸಿಮಯ್ಯನವರು*


🌹🌹 *ಇಂದು ದೇವರ ದಾಸಿಮಯ್ಯ ಜಯಂತಿ*

_ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ. ಸುಳಿದು ಬೀಸುವ ವಾಯು ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ, ​ರಾಮನಾಥ._

👉 *ದೇವಾಂಗ ಜನಾಂಗದಲ್ಲಿ ಮೊಟ್ಟ ಮೊದಲು ಪ್ರಸಿದ್ಧವಾದವರು ದೇವರ ದಾಸಿಮಯ್ಯ.*

*ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು ರಾಮನಾಥ ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ.*

*ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.*

*ಇವರು ದೇವಾಂಗ/ ದೇವ ಬ್ರಾಹ್ಮಣ ದವರಿಗೆ ಕುಲಗುರುವಾಗಿರುತ್ತಾರೆ, ಇದನ್ನು ಈಗಿನ ಎಲ್ಲಾ ದೇವಾಂಗ ಜನಾಂಗದವರು ತಮ್ಮ ಪೀಳಿಗೆಗಳಿಗೆ ತಿಳಿಸಿ ಹೇಳಬೇಕು. ಅವರ ಬಗ್ಗೆ ತಿಳಿಸಕೊಡಬೇಕು.*

*ಅನೇಕ ಪವಾಡಗಳನ್ನು ಮಾಡಿದ ಇವರು, ಪವಾಡವೊಂದೆ ಅಲ್ಲ, ಮನುಷ್ಯನ/ನಮ್ಮ ಜೀವನದಲ್ಲಿ ದೇವರ ಸ್ಮರಣೆಯೂ ಹಾಗೂ ಜೀವನದಲ್ಲಿ ಸಾಧನೆಯೂ ಅಷ್ಟೇ ಪ್ರಮುಖವೆಂದು ನಂಬಿ ಭಕ್ತಿ ಸಾಧನೆಯಲ್ಲಿಯೇ ಬಹಳ ಹೆಸರನ್ನು ಪಡೆದವರು, ಒಂದು ರೀತಿಯಲ್ಲಿ ಎಲ್ಲರಿಗೂ ಶಿಕ್ಷಕರಾಗಿದ್ದರು. ಅನೇಕ ಮಹಾನ್ ವ್ಯಕ್ತಿಗಳನ್ನು ತಮ್ಮ ಭಕ್ತಿಯ ವಾದದಿಂದ ಸೋಲಿಸಿ, ಆಗಿನ ಕಾಲದಲ್ಲಿಯೇ ಪ್ರಸಿದ್ಧಿ ಪಡೆದು ಹೆಸರಾದವರು. ಶಿವನ ದರ್ಶನದಿಂದ ವರವನ್ನು ಪಡೆದ ಇವರು ಸರಳ, ಸಜ್ಜನಿಕೆಯ ಸ್ವಭಾವದವರಾಗಿದ್ದು, ಎಲ್ಲರಲ್ಲಿಯೂ ಭಕ್ತಿಯ ಸಿಂಚನವನ್ನು ಸಿಂಪಡಿಸಿದರು. ಇವರ ಪತ್ನಿ ದುಗ್ಗಳೆಯೂ ಸಹ ಸತಿ ಶಿರೋಮಣಿಯಾಗಿ ಮಹಾ ಪ್ರತಿವ್ರತೆಯಾಗಿದ್ದು ತಮ್ಮ ಗಂಡನ ಜೊತೆಯಲ್ಲಿ ಆಕೆ ಕೂಡ ಭಕ್ತಿಯಲ್ಲಿ,ಸಂಸಾರದಲ್ಲಿ ಹೆಸರು ಮಾಡಿದವರು. ಇವರುಗಳ ಬಗ್ಗೆ ಹೆಚ್ಚಿಗೆ ಎಲ್ಲೂ ಪ್ರಚಾರಗಳಾಗಲಿ, ಪುಸ್ತಕಗಳಾಗಲಿ ಜಾಸ್ತಿ ಪ್ರಚಲಿತದಲ್ಲಿ ಇಲ್ಲದಿರುವುದೇ ನಮ್ಮ ದುರಾದೃಷ್ಠ. ಆಗಾಗಿ ಹೆಚ್ಚು ಬೆಳಕಿಗೆ ಬರಲಿಲ್ಲ, ಇವರ ಬಗ್ಗೆ ತಿಳಿದುಕೊಳ್ಳಲು. ಮುಂದಾದರು ಇಂತಹ ಮಹಾಸಾಧ್ವಿಗಳು ನಮ್ಮ ನಾಡಲ್ಲಿ ಇದ್ದರು ಎನ್ನುವುದಕ್ಕೆ ಕುರುಹುಗಳನ್ನು ಉಳಿಸುವುದು ನಮ್ಮ ಕರ್ತವ್ಯವಾಗಿದೆ. ಇತಿಹಾಸದಲ್ಲಿ,ಪುರಾಣದಲ್ಲಿ ಇವರ ಬಗ್ಗೆ ತಿಳಿಯಲು ಎಲ್ಲರು ಶ್ರಮಿಸಬೇಕು. ದೇವರ ದಾಸಿಮಯ್ಯನವರು ಶತ-ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ಧ ಶರಣರಿಗಿಂತಲೂ, ಮೊದಲು ಬಂದಂತಹ ಮೊಟ್ಟ ಮೊದಲ ವಚನಕಾರರಾಗಿದ್ದಾರೆ. ಇವರೇ ವಚನಗಳಿಗೆ ತಳಹದಿ ನೀಡಿದವರು. ವಚನಗಳನ್ನು ತಮ್ಮ ಸಾಮಾಜಿಕ ಜೀವನದಲ್ಲಿಯೇ ಕಂಡುಕೊಂಡು ರಚಿಸಿದರು. ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು.*

👉 *ದೇವರ ದಾಸಿಮಯ್ಯನವರು ಶತ-ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಪ್ರಸಿದ್ಧ ಶರಣರಿಗಿಂತಲೂ, ಅಂದರೆ 10ನೇ ಶತಮಾನದಲ್ಲಿ ಬರುವ ಇವರು ಮೊಟ್ಟ ಮೊದಲ ವಚನಕಾರರಾಗಿದ್ದಾರೆ. ಇವರೇ ವಚನಗಳಿಗೆ ತಳಹದಿ ನೀಡಿದವರು. ಜೇಡರ/ದೇವರ ದಾಸಿಮಯ್ಯ ಓರ್ವ ಆದ್ಯ ವಚನಗಳನ್ನು ತಮ್ಮ ಸಾಮಾಜಿಕ ಜೀವನದಲ್ಲಿಯೇ ಕಂಡುಕೊಂಡು ರಚಿಸಿದರು. ದೇವರ ದಾಸಿಮಯ್ಯನವರ ವಚನಗಳನ್ನು ರಚಿಸಿರುವವರಲ್ಲಿ ಮೊದಲಿಗರಾದರೂ ಸಹ ಅವರ ವಚನಗಳು ಯಾರಿಗೂ ತಿಳಿದಿಲ್ಲ. ನಂತರ ಬಂದ ಎಲ್ಲಾ ಶರಣರೂ,ಸಾಧು ಸಂತರೂ ರಚಿಸಿದ ವಚನಗಳು ಬಳಕೆಗೆ ಮತ್ತು ಬೆಳಕಿಗೂ ಬ೦ದವು. ದಾಸಿಮಯ್ಯನವರನ್ನು  ದೇವರದಾಸಿಮಯ್ಯ, ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂಬ ಹೆಸರಿನಿಂದ ಕರೆಯಲ್ಪಡುತ್ತಾರೆ. ಅವರು ರಾಮನಾಥ ಎಂಬ ದೇವರಲ್ಲಿ ಅಪಾರವಾದ ಭಕ್ತಿಯನ್ನು ಇಟ್ಟು ಕೊಂಡಿದ್ದರು. "ರಾಮನಾಥ" ಎನ್ನುವ ಹೆಸರಲ್ಲಿಯೇ ವಚನಗಳನ್ನು ರಚಿಸಿದರು.*

*ಇವರ ಪತ್ನಿ ದುಗ್ಗಳೆ. ಇಬ್ಬರದೂ ಅನ್ಯೋನ್ಯವಾದ ದಾಂಪತ್ಯ ಜೀವನ. ಸೀರೆ ನೇಯುತ್ತಾ ತಮ್ಮ ಪ್ರಾಪಂಚಿಕ ಜೀವನದಲ್ಲಿ ಸಂಸಾರ ಸಾಗಿಸುತ್ತಾ, ಭಕ್ತಿ ಮಾರ್ಗವೇ ಉನ್ನತ ಎಂದು ಸಾರಿದವರು. ಸೀರೆ ನೇಯುವ ಕೆಲಸದಿಂದ ಜೀವನ ಸಾಗಿಸುತ್ತಿದ್ದ ಇವರು "ರಾಮನಾಥ" ಎನ್ನುವ ನಾಮಂಕಿತವನ್ನು ಕೊಟ್ಟು ಅನೇಕ ವಚನಗಳನ್ನು ರಚಿಸಿದ್ದಾರೆ. ತುಂಬಾ ಉಪಯುಕ್ತ ಮತ್ತು ತಮ್ಮ ದಿನನಿತ್ಯದ ಜೀವನಕ್ಕೆ ಸಂಭಂದಿಸಿದ ವಿಷಯಗಳ ಬಗ್ಗೆಯೆ ರಚಿಸಿದ ದೇವರ ದಾಸಿಮಯ್ಯ ಅವರ ವಚನಗಳು ತುಂಬಾ ಸರಳವಾಗಿ ಮನೆಸೂರೆಗೊಳ್ಳುತ್ತವೆ.ಇನ್ನು ದೇವಾಂಗ ದಾಸಿಮಯ್ಯರ ಕೃತಿ ಪರಿಚಯಕ್ಕೆ ಬಂದರೆ, ರಾಮನಾಥ ಎಂಬ ನಾಮಾಂಕಿತದಿಂದ ಅನೇಕ ವಚನಗಳನ್ನು ರಚಿಸಿದ್ದಾರೆ. ದೇವಲರು, ಶತಮಾನಗಳಿಂದ ಬಂದಂತಹ ದಕ್ಷಿಣ ಭಾರತದಲ್ಲಿ ಹೆಸರಾದ ಶರಣರಿಗಿಂತಲೂ (ಬಸವಣ್ಣ ಮತ್ತು ಅಕ್ಕಮಹಾದೇವಿಯವರಿಗೂ) ಮುಂಚಿತವಾಗಿದ್ದಂತಹ ಮೊಟ್ಟ ಮೊದಲ ವಚನಕಾರರು.*

*ದಾಸಿಮಯ್ಯನವರ ವಚನಗಳು ಅರ್ಥೈಸಿಕೊಳ್ಳಲು ಬಹಳ ಸರಳವಾಗಿದ್ದು, ಸಮಾಜಕ್ಕೆ ವಿಶೇಷವಾದ ಧಾರ್ಮಿಕ ಪ್ರಜ್ಞೆಯ ಸ್ಪೂರ್ತಿಯ ಚಿಲುಮೆಯಾಗಿವೆ. ಆದರೆ ವಿಷಾದದ ಸಂಗತಿಯೆಂದರೆ ಇವರ ಬಗ್ಗೆ ಹೆಚ್ಚಿಗೆ ಪ್ರಚಾರಗಳಾಗಲಿಲ್ಲ. ತಡವಾಗಿಯಾದರೂ ಈಗೀಗ ಕೆಲವು ಬುದ್ಧಿಜೀವಿಗಳು ದೇವಲರ ವಚನಗಳನ್ನು ಹೊರತರುತ್ತಿದ್ದಾರೆ. ಅವರ ಉಪಲಬ್ಧ ವಚನಗಳಲ್ಲಿ ಉತ್ಕಟವಾದ ವೀರಶೈವ ನಿಷ್ಠೆ, ನಿಷ್ಠುರವಾದ ಸ್ಪಷ್ಟ ವಾಕ್ಯತೆ, ಮಾರ್ಮಿಕವಾದ ಸಂಕ್ಷಿಪ್ತ ಶೈಲಿ, ಔಚಿತ್ಯಪೂರ್ಣವಾದ ದೃಷ್ಟಾಂತಗಳ ಸಂಪತ್ತಿಯ ಗುಣಗಳು ಎದ್ದು ಕಾಣುತ್ತವೆ. ದೇವರ ದಾಸಿಮಯ್ಯನವರು ವಿಶ್ವದ ಪ್ರಥಮ ವಚನಕಾರ. ಅವರು ರಾಮನಾಥ ಎಂಬ ಹೆಸರಲ್ಲಿಯೇ 176 ವಚನಗಳನ್ನು ರಚಿಸಿದ್ದಾರೆ.*

✍ *ದೇವಾಂಗ ಕುಲಗುರು ಪ್ರಥಮ ವಚನಕಾರ ದೇವರ ದಾಸಿಮಯ್ಯನವರ ವಚನಗಳು​*


1 *ಮರನೊಳಗಣ ಮಂದಾಗ್ನಿಯ ಉರಿಯದಂತಿರಿಸಿದೆ ನೊರೆವಾಲೊಳಗೆ ತುಪ್ಪವ ಕಂಪಿಲ್ಲದಂತಿರಿಸಿದೆ ಶರೀರದೊಳಗಾತ್ಮನನಾರು ಕಾಣದಂತಿರಿಸಿದೆ ನೀ ಬೆರಸುವ ಭೇದಕ್ಕೆ ಬೆರಗಾದೆನಯ್ಯ!ರಾಮನಾಥ.​*

2​​ *ಎತ್ತು ನಿಮ್ಮ ದಾನ; ಬಿತ್ತು ನಿಮ್ಮ ದಾನ. ಸುತ್ತಿ ಹರಿವ ಸಾಗರವೆಲ್ಲ ನಿಮ್ಮ ದಾನ. ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ಹೇಳ? ರಾಮನಾಥ.​​*

SATS LBA

👉 Click here for SATS LBA 👉 DSERT LBA ಸಂಪನ್ಮೂಲಗಳು 👉 LBA YOUTUBE TRAINING More :- SATS KARNATAKA  | SATS LBA | SATS MDM |  POST SACTIONED...