6.11.16

ಮನೋವಿಜ್ಞಾನ

ಮನೋವಿಜ್ಞಾನ ...

1.ರೂಡಿಯ ಉದ್ದೇಶ.
ಅ.ತತ್ ಕ್ಷಣ್ ಯಶಸ್ಸು ಮತ್ತು ವಿಸ್ಮೃತಿ
ಬಿ.ಧೀರ್ಘಕಾಲಿಕ ಯಶಸ್ಸು ಮತ್ತು ನಿಧಾನಗತಿ ವಿಸ್ಮೃತಿ
ಸಿ.ತತ್ ಕ್ಷಣ್ ಯಶಸ್ಸು ಮತ್ತು ಧೀರ್ಘಕಾಲಿಕ ಉಳಿಕೆ
ಡಿ.ನಿಧಾನಗತಿಯ ಕಲಿಕೆ ಮತ್ತು ವಿಸ್ಮೃತಿ

ಸಿ##

2.ಕಲಿಕೆಯ ವಕ್ರರೇಖೆಯಲ್ಲಿ ಸಮತಲ ಹಂತ ಸೂಚಿಸುವುದು
ಎ.ನಿಧಾನ ಕಲಿಕೆಯನ್ನು
ಬಿ.ಶೀಘ್ರ ಕಲಿಕೆಯನ್ನು
ಸಿ.ಸ್ಥಗಿತ ಕಲಿಕೆಯನ್ನು
ಡಿ.ಸಾಧರಣ ಕಲಿಕೆಯನ್ನು

ಸಿ##

3.ಥಾರ್ನಡೈಕ್ ನ ಪ್ರಯೋಗದಲ್ಲಿ ಪ್ರಯತ್ನಗಳು ಹೆಚ್ಚಿದಂತೆ ದೋಷಗಳು-
ಎ.ಅಷ್ಟೆ ಇರುತ್ತವೆ
ಬಿ‌.ಸಮಾನುಪಾತದಲ್ಲಿ ಕಡಿಮೆಯಾಗುತ್ತವೆ
ಸಿ‌.ಹೆಚ್ಚುತ್ತದೆ
ಡಿ.ಕಡಿಮೆಯಾಗುತ್ತದೆ

ಡಿ##

4.ದಣಿವು ಏನನ್ನು ಸೂಚಿಸುತ್ತದೆಂದರೆ
ಎ.ದೈಹಿಕ ಶಕ್ತಿಯ ಕ್ಷೀಣಿತೆಯನ್ನು
ಬಿ‌.ಮಾನಸಿಕ ಆಯಾಸವನ್ನು
ಸಿ.ಆಸಕ್ತಿಯ ಕೊರಯೆಯನ್ನು
ಡಿ.ಅಭಿಪ್ರೇರಣೆಯ ಕೊರತೆಯನ್ನು.

ಬಿ##

5.ಬಾಹ್ಯವಾಗಿ ಅಭಿಪ್ರೇರಿಸಲ್ಪಟ್ಟ ಒಬ್ಬ ಆಟಗಾರನು ಆಡುವುದು
ಎ.ಮನರಂಜನೆಗಾಗಿ
ಬಿ.ಗಳಿಕೆಗಾಗಿ
ಸಿ.ವೈಯಕ್ತಿಕ ತೃಪ್ತಿಗಾಗಿ
ಸಿ.ಪ್ರತಿಬೆಯ ಬೆಳವಣಿಗೆಗಾಗಿ

ಬಿ##

6.ಅಂತಿಮ ಪರೀಕ್ಷೆಯ ಅಂಕಗಳು ಯಾವುದನ್ನು ಸೂಚಿಸುತ್ತವೆ?
ಎ‌.ಸಾಧನೆ
ಬಿ.ಸ್ಮರಣ ಸಾಮರ್ಥ್ಯ
ಸಿ.ಬುದ್ದಿವಂತಿಕೆ
ಡಿ.ಸೃಜನಶೀಲತೆ
ಎ##

7.ಎರೆಡು ಬೇರೆ ಬೇರೆ ಸಂಧರ್ಬಗಳಲ್ಲಿ ಒಂದೆ ಫಲಿತಾಂಶವನ್ನು ಕೊಡುವ ಒಂದು ಪರೀಕ್ಷೆಯ ಲಕ್ಷಣ-
ಎ.ಸಮಂಜಸತೆ
ಬಿ.ವಸ್ತು ನಿಷ್ಟತೆ
ಸಿ‌.ವಿಶ್ವಸನೀಯತೆ
ಶಿ.ಪ್ರಯೋಗಾರ್ಹತೆ

ಸಿ##

8.ಹತಾಶೆ ಗೆ ಕಾರಣ
ಎ.ನಿರೂಪಿತ ಗುರಿ
ಬಿ.ಉತ್ತೇಜಕಗಳು
ಸಿ.ಅಡತಡೆಗಳು
ಡಿ.ಆಕ್ರಮಣಕಾರಿ ಪ್ರವುತ್ತಿ

ಸಿ##

9.ತರಗತಿಯಲ್ಲಿ ವೈಯಕ್ತಿಕ ಭಿನ್ನತೆಗಳನ್ನು ಸಂದಿಸುವ ಅತ್ಯಂತ ಪರಿಣಾಮಕಾರಿ ಬೋಧನಾ ವಿಧಾನವೆಂದರೆ
ಎ.ಉಪನ್ಯಾಸ ಪ್ರಾತ್ಯಕ್ಶಿಕ ವಿಧಾನ
ಬಿ.ಕಾರ್ಯನೀಯೋಜತೆ ಬೋಧನೆ
ಸಿ.ಉಪನ್ಯಾಸ ವಿಧಾನ
ಡಿ.ಪ್ರಾತ್ಯಕ್ಷಕಾ ವಿಧಾನ
ಬಿ##

10.ಶೈಕ್ಷಣಿಕ ಮನೋವಿಜ್ಞಾನವು ಏನನ್ನು ಅಧ್ಯಯನ ಮಾಡುತ್ತದೆಂದರೆ.
ಎ.ಆತ್ಮ
ಬಿ.ವರ್ತನೆ
ಸಿ.ಮನಸ್ಸು
ಡಿ.ಪ್ರಜ್ಞೆ
ಬಿ##

11.ಸಾಮಾನ್ಯ ಸಂಭಾವ್ಯ ರೇಖೆ ಇರುವ ಆಕಾರ
ಎ.ಶಂಕಾಕಾರ
ಬಿ.ಗೋಳಾಕಾರ
ಸಿ.ಘಂಟಾಕಾರ
ಡಿ‌.ಅಂಡಾಕಾರ
ಸಿ##

12.ಒಂದು ಸಮೂಹದ ವ್ಯಕ್ತಿಗಳ ಪರಸ್ಪರ ಸಂಬಂಧವನ್ನು ಅಧ್ಯಯನ ಮಾಡುವ ತಾಂತ್ರಿಕತೆ
ಎ‌.ಮನೋರೋಗಾದ್ಯಯನ
ಬಿ.ಸಮಾಜಮಿತಿ
ಸಿ.ವ್ಯಕ್ತಿ ಅಧ್ಯಯನ
ಡಿ.ಸಲಹೆ

ಬಿ##

13.ಒಂದು ಕೌಶಲದ ಹೆಚ್ಚು ಉಳಿಕೆಯು ಸಾದ್ಯವಾಗುವುದು.ಕಲಿಕೆಯು
ಎ.ಸುಲಭವಾದಾಗ
ಬಿ.ಕ್ಲಿಷ್ಟವಾದಾಗ
ಸಿ.ಅತೀಯಾದ ಕಲಿಕೆಯಾದಾಗ
ಡಿ.ಎಣಿಕೆಯಿಂದಾದ

ಸಿ##

14.ಮಗುವಿನ ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವುದು

ಎ.ಉಪದೇಶ ಮತ್ತು ಶಿಸ್ತು
ಬಿ.ನಿಂದನೆ ಮತ್ತು ಶಿಕ್ಷೆ
ಸಿ.ಅತಪ್ರೀತಿ ಮತ್ತು ಮಮತೆ
ಡಿ.ಶಿಸ್ತು ಮತ್ತು ತರಬೇತಿ
ಬಿ##

15.ಸಾಮಾನ್ಯವಾಗಿ ಗರಿಷ್ಠ ಸಾಧನೆಯಾಗಬೇಕಾದರೆ,ಒತ್ತಡ ಮತ್ತು ಆತಂಕವು
ಎ.ಅತೀ ಹೆಚ್ಚಿರಬೇಕು
ಬಿ.ಅತೀ ಕಡಿಮೆ ಇರಬೇಕು
ಸಿ.ಸಾಧಾರಣವಾಗಿರಬೇಕು
ಡಿ.ಶೂನ್ಯವಾಗಿರಬೇಕು
ಸಿ##

16.ಒಂದು ತರಗತಿಯಲ್ಲಿ ವೈವಿದ್ಯಮವಾದ ಉದ್ದೀಪನಗಳು
ಎ.ವಿದ್ಯಾರ್ಥಿಗಳನ್ನು ಅಭಿಪ್ರೇರಣೆಗೊಳಿಸುತ್ತವೆ
ಬಿ.ಆಸಕ್ತಿಯನ್ನು ಮೂಡಿಸುತ್ತವೆ
ಸಿ.ಅವಧಾನವನ್ನು ಗಳಿಸುತ್ತವೆ
ಡಿ.ವಿವಿಧ ಅನುಭವಗಳನ್ನು ಒದಗಿಸುತ್ತವೆ
.ಸಿ##

17.ಒಂದು ಪಂದ್ಯದಲ್ಲಿ ಗುಂಪು ಒಂದಾಗುವಿಕೆ ಈ ಕಳಗಿನ ಯಾವುದಕ್ಕೆ ಸಹಾಯವಾಗುತ್ತದೆ
ಎ.ತಂಡದ ಜಯಕ್ಕೆ
ಬಿ.ಮುಂದಾಳತ್ವಕ್ಕೆ
ಸಿ.ಆಕ್ರಮಣ ಮನೋಭಾವಕ್ಕೆ
ಡಿ.ಸಿದ್ದತಾ ನಿಯಮ
ಎ##

18.ಯಶಸ್ಸಿಗೆ ಯಶಸ್ಸೆ ಉತ್ತರಾಧಿಕಾರಿ ಈ ಹೇಳಿಕೆಯನ್ನು ವಿವರಿಸುವ ನಿಯಮ-
ಎ.ಒಂದೇ ಎಂಬ ಭಾವನೆಯ ನಿಯಮ
ಬಿ.ಅಭ್ಯಾಸ ನಿಯಮ
ಸಿ.ಪರಿಣಾಮ ನಿಯಮ
ಡಿ.ಸಿದ್ದತಾ ನಿಯಮ~
ಸಿ##

19.ಬುದ್ದಿಶಕ್ತಿಯ ಬೆಳವಣಿಗೆಯ ಪ್ರಮಾಣವು ಅತ್ಯಂತ ವೇಗವಾಗಿರುವ ಹಂತವು
ಎ.ಬಾಲ್ಯಾವಸ್ಥೆ
ಬಿ‌.ಪ್ರೌಡಾವ್ಯಸ್ಥೆ
ಸಿ.ಕಿಶೋರಾವಸ್ಥೆ
ಡಿ.ಶೈಶವಾಸ್ಥೆ
ಎ##

20.ಪಾವ್ ಲೋವ್ ನ ಪ್ರಯೋಗದಲ್ಲಿ,ಗಂಟೆಯ ಶಬ್ದಕ್ಕೆ ನಾಯಿಯಿಂದ ಬರುವ ಪ್ರತಿಕ್ರಿಯೆ.
ಎ.ಅಂತಃ ಪ್ರೇರಣೆ
ಬಿ.ಸ್ವಾಭಾವಿಕ
ಸಿ.ತತ್ ಕ್ಷಣ
ಡಿ.ಅನುಬಂದಿತ
ಡಿ##

21.ಮಗುವಿನ ಲಿಂಗ ನಿರ್ಧಾರವಾಗುವುದು
ಎ.ತಾಯಿಯ ವರ್ಣ ತಂತುಗಳಿಂದ
ಬಿ.ತಂದೆ-ತಾಯಿಯ ವರ್ಣ ತಂತುಗಳಿಂದ
ಸಿ.ನೈಜ ಆಕಸ್ಮಿಕತೆಯಿಂದ
ಡಿ.ತಂದೆಯ ವರ್ಣ ತಂತುಗಳಿಂದ
ಡಿ##

22.ಈ ಕೆಳಗಿನ ಪರೀಕ್ಷೆಯು ವ್ಯಕ್ತಿತ್ವದ ಹಲವಾರು ಅಭಿರುಚಿಗಳನ್ನು ಮಾಪನ ಮಾಡುತ್ತದೆ
ಎ.ಅರ್.ಪಿ.ಎಮ್
ಬಿ.ಎಚ್.ಎಸ್.ಪಿ.ಕ್ಯೂ
ಸಿ.ಡಿ.ಎ.ಟಿ
ಡಿ.ಎಸ್.ವಿ.ಐ.ಬಿ

ಸಿ##

23.ಉದ್ದೀಪನವನ್ನು ನಿರಂತರವಾಗಿ ಪ್ರದರ್ಶಿಸುವುದರಿಂದ ಆಗುವ ವರ್ತನೆಯಲ್ಲಿಯ ಬದಲಾವಣೆಯನ್ನು ಈ ಕೆಳಗಿನಂತೆ ಹೆಸರಿಸಲಾಗುತ್ತದೆ
ಎ.ಅನುಬಂಧನೆ
ಬಿ.ಪುನರ್ಭಲನ
ಸಿ.ಪರಿಪಕ್ವತೆ
ಡಿ.ಪ್ರತಿಕ್ರಿಯಿಸುವುದು
ಎ##

24.ಅನುವಂಶಿಯ ಗುಣಲಕ್ಷಣಗಳ ನೈಜ ವಾಹಕಗಳೆಂದರೆ
ಎ.ವರ್ಣತಂತುಗಳು
ಬಿ.ಜೀನುಗಳು
ಸಿ.ಜೀವಕೋಶಗಳಲ್ಲಿಯ ಕೋಶಕೇಂದ್ರ
ಡಿ.ಜೀವಕೋಶಗಳಲ್ಲಿಯ ಪ್ರೋಟೋಪ್ಲಾಸ್ಮ
ಬಿ##

25.ಅನುಬಂಧನೆಯ ಕಲಿಕೆಯ ಒಂದು ವಿಧಾನವಾಗಿ ಈ ಕೆಳಗಿನ ಕಲಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ಎ.ದತ್ತಾಂಶಗಳು
ಬಿ.ಪರಿಕಲ್ಪನೆಗಳು
ಸಿ.ಮನೋಭಾವನೆಗಳು
ಡಿ.ಸಂಬಂದಗಳು

ಸಿ##

ಟಿಇಟಿಗೆ ಟಾಪ್ ಟಿಪ್ಸ್*

➡ *ಟಿಇಟಿಗೆ ಟಾಪ್ ಟಿಪ್ಸ್*

*ಶಿಕ್ಷಕರ ಅರ್ಹತಾ ಪರೀಕ್ಷೆ ಯಲ್ಲಿ (ಟಿಇಟಿ)ಯಲ್ಲಿ ಯಶಸ್ಸು ಪಡೆಯುವುದು ಹೇಗೆಂಬ ಬಗ್ಗೆ ತಜ್ಞರು ಇಲ್ಲಿ ವಿವರಿಸಿದ್ದಾರೆ*

👉🏻ಈ ಬಾರಿಯಾದರೂ ಶಿಕ್ಷಕರ ಅರ್ಹತಾ ಪರೀಕ್ಷೆ ಯಲ್ಲಿ (ಟಿಇಟಿ)ಯಶಸ್ಸು ಗಳಿಸಬೇಂದು ಪಣತೊಟ್ಟಿದ್ದೀರಾ? ಹೌದು, ಎಂದಾದರೆ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡು ಕೂರಬೇಡಿ.

ಕಣ್ಚಾಲನೆ ಮತ್ತು ಆಲೋಚನೆ ಈ ಎರಡು ಸಾಮರ್ಥ್ಯ ನಿಮ್ಮಲ್ಲಿದ್ದರೆ ಸಾಕು, ಸುಲಭವಾಗಿ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಬಹುದು.👍🏻

 ಈಗಾಗಲೇ ನಿಮಗೆ ತಿಳಿದಿರುವಂತೆ ಈ ಪರೀಕ್ಷೆಯಲ್ಲಿ ಶಿಶು👼 ಮನೋವಿಜ್ಞಾನದ ಪ್ರಕಾರಕ್ಕೆ ಹೆಚ್ಚಿನ ಮಹತ್ವವಿದೆ. ಈ ವಿಜ್ಞಾನದ ಪ್ರಕಾರವೇ ಮಕ್ಕಳಲ್ಲಿ ವಸ್ತುಗಳನ್ನು ಸಂಗ್ರಹಿಸುವ ಮನೋವೃತ್ತಿ ಕಾಣುತ್ತೇವೆ. ಹಾಗೆಯೇ ನೀವು ಕೂಡ ಕೈಗೆಟಕುವ ಟಿಇಟಿ ಪರೀಕ್ಷೆ ಶೀರ್ಷಿಕೆಯ ಪುಸ್ತಕಗಳನ್ನು ಸಂಗ್ರಹಿಸುವುದರಲ್ಲೇ ಕಾಲ ಕಳೆಯಬೇಡಿ. ಬದಲಾಗಿ ಈ ಕೇಳಗೆ ತಿಳಿಸಿರುವ ತಂತ್ರಗಳನ್ನು ಅಳವಡಿಸಿಕೊಂಡು ಯಶಸ್ಸುಗಳಿಸಿ.

👉🏻*ಭಾಷೆಗೆ ಸಂಬಂಧಿಧಿಸಿದ ಪತ್ರಿಕೆಗಳಲ್ಲಿ ಅಪರಿಚಿತ ಸನ್ನಿವೇಶದ ಯಾವುದಾದರೂ ಗದ್ಯಾಂಶ ಮತ್ತು ಪದ್ಯಾಂಶಗಳಿರುತ್ತವೆ. ಅವು ಸಾಹಿತ್ಯ, ವಿಜ್ಞಾನ ಅಥವಾ ಕಥಾ ಸಾರಾಂಶವನ್ನು ಒಳಗೊಂಡಿರುತ್ತವೆ. ಅವುಗಳನ್ನು ಓದಿ ಅರ್ಥೈಸಿಕೊಂಡು ಸಂಬಂಧಿಧಿಸಿದ ಪ್ರಶ್ನೆಗಳಿಗೆ ಉತ್ತರಿಸ ಬೇಕಾಗುತ್ತದೆ. ಆದ್ದರಿಂದ ಕಣ್ಚಾಲನೆ ಮತ್ತು ಆಲೋಚನೆಯ ಸಾಮರ್ಥ್ಯಗಳು ಬಹಳ ಮುಖ್ಯ. ಇವುಗಳನ್ನು ನೀವು ಎಷ್ಟು ವೇಗವಾಗಿ ಓದಿ ಅರ್ಥೈಸಿಕೊಳ್ಳುವಿರೋ ಅಷ್ಟು ಬೇಗ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸಬಹುದು. ಆ ಪ್ರಶ್ನೆಯಲ್ಲಿನ ಆಯ್ಕೆಗಳು ನಿಮ್ಮನ್ನು ದ್ವಂದ್ವಕ್ಕೊಳಪಡಿಸುತ್ತವೆ. ಹೀಗಾಗಿ ನಿಮ್ಮ ಗ್ರಹಿಕೆ ಸರಿಯಾಗಿರುವಂತೆ ನೋಡಿಕೊಳ್ಳಿ. ಈಗಾಗಲೇ ನಡೆದಿರುವ ಪರೀಕ್ಷೆಗಳ ಲಭ್ಯವಿರುವ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿ ಅವುಗಳಿಗೆ ಉತ್ತರಿಸುವ ಸಾಮರ್ಥ್ಯಗಳಿಸಿಕೊಳ್ಳಿ.

👉🏻 *ಒಟ್ಟು ಪ್ರಶ್ನೆಗಳು ಒಟ್ಟು ಅಂಕಗಳನ್ನು ಉತ್ತರಿಸಲು ಬೇಕಾಗುವ ಸಮಯವನ್ನು ಲೆಕ್ಕಹಾಕಿಕೊಂಡು ಇಂತಹ ಪ್ರಶ್ನೆಗಳಿಗೆ ಉತ್ತರಿಸುವ ಅಭ್ಯಾಸಮಾಡಿಕೊಳ್ಳಿ.

👉🏻*ಭಾಷೆಯ ಮೇಲೆ ಹಿಡಿತವಿದ್ದರೆ ಇಂಥಹ ಪ್ರಶ್ನೆಗಳಿಗೆ ಕಡಿಮೆ ಸಮಯದಲ್ಲಿ ಅರ್ಥೈಸಿಕೊಂಡು ಉತ್ತರಿಸಬಹುದು. ಇದರಿಂದ ಸಮಯದ ಉಳಿತಾಯವಾಗಿ ಆ ಸಮಯವನ್ನು ಕ್ಲಿಷ್ಟದ ಪ್ರಶ್ನೆಗಳಿಗೆ ಉತ್ತರಿಸಲು ಆಲೋಚಿಸುವಾಗ ಬಳಸಿಕೊಳ್ಳಬಹುದು.


👉🏻*ಭೋದನಾ ಸಾಮರ್ಥ್ಯ ಮತ್ತು ಶಿಶು ಮನೋವಿಜ್ಞಾನದಲ್ಲಿ ಶಿಕ್ಷಣ ಪದ್ಧತಿ ತರಗತಿಯ ಸನ್ನಿವೇಶ ಮಗುವಿನ ಮನೋವೃತ್ತಿ ಮಗುವಿನ ಗ್ರಹಿಕೆ ಕಲಿಕೆಯ ದೋಷಗಳನ್ನು ಪತ್ತೆಹಚ್ಚುವ ವಿಷಯಕ್ಕೆ ಸಂಬಂಧಿಧಿಸಿದ್ದಾಗಿರುತ್ತವೆ. ಇಲ್ಲಿ ನೆನಪಿಡಬೇಕಾದ ಅಂಶವೆಂದರೆ ಪ್ರಶ್ನೆಗಳ ಆಯ್ಕೆಗಳು ಅತಿ ಉದ್ದುದ್ದ ಸಾಲಿನ ಉತ್ತರಗಳಾಗಿರುತ್ತವೆ. ಇಲ್ಲಿ ನಿಮ್ಮ ತಾರ್ಕಿಕ ವಿವೇಚನೆ ಪ್ರಶ್ನೆಯನ್ನು ಗಮನವಿಟ್ಟು ಓದಿ ಸಮಸ್ಯೆಯನ್ನು ಬೇಗನೆ ಕಂಡುಕೊಳ್ಳುವುದು ನಿಮ್ಮ ಯಶಸ್ಸಿನ ಗುಟ್ಟಾಗಿರುತ್ತದೆ.

*ಭಾಷಾ ಕೌಶಲ್ಯಗಳು, ಮನೋಸಾಮರ್ಥ್ಯ ಭಾಷಾ ಬೋಧನೆಯಲ್ಲಿ ಎದುರಾಗುವ ಸವಾಲುಗಳಿಗೆ ಸಂಬಂಧಿಧಿಸಿದ ಪ್ರಶ್ನೆಗಳಾಗಿದ್ದಲ್ಲಿ ತರಗತಿಯ ಶಿಕ್ಷಕರಾಗಿ ಆಲೋಚಿಸಿದರೆ ಒಳ್ಳೆಯದು. ಆಗ ನಿಮ್ಮ ಯೋಚನಾ ಕ್ರಮ ಮತ್ತು ದೃಷ್ಟಿಕೋನದಿಂದ ಸಮರ್ಪಕವಾದ ಸರಿಯುತ್ತರವನ್ನು ಪಡೆಯಲು ಸಾಧ್ಯವಾಗುತ್ತದೆ.

 * ತೀರಾ ದ್ವಂದದ ಪ್ರಶ್ನೆಗಳಾದರೆ ತಕ್ಷಣ ಉತ್ತರ ತೋಚದಿದ್ದರೆ ಮುಂದಿನ ಪ್ರಶ್ನೆಯ ಕಡೆ ಸಾಗುವುದು ಉತ್ತಮ. ಇದರಿಂದ ಸಮಯ ಉಳಿತಾಯವಾಗಿ ಎರಡನೇ ಸರದಿಯಲ್ಲಿ ಮತ್ತೆ ಪ್ರಶ್ನೆಗಳಿಗೆ ಯೋಚಿಸುವುದಕ್ಕೆ ಅನುಕೂಲವಾಗುತ್ತದೆ.

*ಮನೋ ವಿಜ್ಞಾನದಲ್ಲಿ ಬಹುತೇಕ ಪ್ರಶ್ನೆಗಳಿಗೆ ಆಯ್ಕೆ ಮಾಡುವಾಗ ಒಂದಕ್ಕಿಂತ ಹೆಚ್ಚು ಆಯ್ಕೆಗಳು ನಿಮಗೆ ಸರಿ ಎನಿಸಬಹುದು. ಹಾಗಾಗಿ ಕೊಟ್ಟ ಆಯ್ಕೆಗಳಲ್ಲಿ ಹೆಚ್ಚು ಸಮಗ್ರತೆಯನ್ನು ಹೊಂದಿರುವ ಆಯ್ಕೆಯನ್ನು ಗುರುತಿಸಿರಿ.

 *ಕ್ಲಿಷ್ಟಕರ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನದಲ್ಲಿ ಅಧಿಕ ಸಮಯವನ್ನು ನಷ್ಟ ಮಾಡಿದರೆ ಮುಂದಿನ ಪ್ರಶ್ನೆಗಳನ್ನು ಉತ್ತರಿಸಲು ಸಮಯ ಸಿಗದೆ ಆಂತಕಕ್ಕೊಳಗಾಗಿ ಅಂಕಗಳನ್ನು ಕಳೆದುಕೊಳ್ಳಬೇಕಾದೀತು ಜೋಕೆ.

* ಟಿಇಟಿ ಪರೀಕ್ಷೆಯಲ್ಲಿ ಕೇವಲ ಶಿಶು ಮನೋವಿಜ್ಞಾನ ಮತ್ತು ಭಾಷಾ ವಿಷಯ ಮಾತ್ರ ಇರುವುದಿಲ್ಲ, ಪ್ರಶ್ನೆ ಪತ್ರಿಕೆ -1ರಲ್ಲಿ ಗಣಿತ ಮತ್ತು ಪರಿಸರ ಅಧ್ಯಯನ ಹಾಗೂ ಪ್ರಶ್ನೆ ಪತ್ರಿಕೆ-2ರಲ್ಲಿ ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳೂ ಇರುತ್ತವೆ. ಹೀಗಾಗಿ ಓದುವಾಗ ಈ ಎಲ್ಲ ವಿಷಯಗಳ ಅಧ್ಯಯನಕ್ಕೂ ಸಮಯ ಸಿಗುವಂತೆ ಟೈಮ್ ಟೇಬಲ್ ಹಾಕಿಕೊಳ್ಳಿ.

 * ಶಿಕ್ಷಣ ಇಲಾಖೆಯ ವೆಬ್ನಲ್ಲಿ ಸಿಲಬಸ್ ಏನೇನು ಎಂಬುದನ್ನು ಪ್ರಕಟಿಸಲಾಗಿದೆ, ಅದನ್ನು ನೋಡಿಕೊಂಡು ಅಭ್ಯಾಸಕ್ಕೆ ಪ್ಲಾನ್ ಮಾಡಿ.

 * ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳಿಗೆ ಸರಿಯಾದ ಉತ್ತರ ಬರೆಯುವುದು ಮುಖ್ಯ. ಇದರತ್ತ ಗಮನ ನೀಡಿ.

 * ಹಳೆಯ ಪ್ರಶ್ನೆ ಪತ್ರಿಕೆಯನ್ನು ತೆಗೆದುಕೊಂಡು ಉತ್ತರ ಬರೆಯುವಾಗ ಸಮಯವನ್ನು ನಿಗದಿಪಡಿಸಿಕೊಳ್ಳಿ. ಪರೀಕ್ಷಾ ಕೇಂದ್ರದ ವಾತಾವಣ(ಯಾವುದೇ ಅಡ್ಡಿಗಳಿಲ್ಲದಂತೆ) ರೂಪಿಸಿಕೊಂಡು, ಅಭ್ಯಾಸ ನಡೆಸಿ.

 *ನಾವು ಪ್ರಯಾಣಕ್ಕೆ ಹೊರಟಾಗ ಎಕ್ಸ್ಪ್ರೆಸ್ ರೈಲುಗಾಡಿಯನ್ನೆ ಬಯಸುವುದಿಲ್ಲವೇ ಹಾಗೆಯೆ ನಿಮ್ಮ ಬುದ್ಧಿ ಮತ್ತು ಮನಸ್ಸಿನ ವೇಗವಾದ ಗ್ರಹಿಕೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ತಂದುಕೊಡಬಲ್ಲವು.


* ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ನಿಮ್ಮಲ್ಲಿ ಆತ್ಮವಿಶ್ವಾಸವಿರಲಿ. ಯಾವುದೇ ಆತಂಕವಿಲ್ಲದೆ ಪರೀಕ್ಷೆ ಬರೆಯಿರಿ. ಏಕೆಂದರೆ ಒಬ್ಬರು ಎಷ್ಟು ಬಾರಿ ಬೇಕಾದರೂ ಈ ಪರೀಕ್ಷೆ ತೆಗೆದುಕೊಳ್ಳಬಹುದು. ಬೆಸ್ಟ್ ಆಫ್ ಲಕ್. ಇತ್ತ ಗಮನಿಸಿ

* ಈಗಾಗಲೇ ಶಿಕ್ಷಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವವರೂ ಟಿಇಟಿ ಪರೀಕ್ಷೆ ತೆಗೆದುಕೊಂಡಿರಬಹುದು. ಅವರು ಗಮನಿಸಬೇಕಾದ ವಿಷಯವೆಂದರೆ, ತಮಗಿರುವ ಅನುಭವದಿಂದಲೇ ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೇವೆ ಎಂಬ ವಿಶ್ವಾಸ ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ ಈ ಪರೀಕ್ಷೆಯಲ್ಲಿ ಅನುಭವಕ್ಕಿಂತ ವಿಷಯ ಜ್ಞಾನ ಮುಖ್ಯ.

 * ಅಭ್ಯಾಸ ನಡೆಸುವಾಗಲೇ ಟೈಮ್ ಮ್ಯಾನೇಜ್ ಮಾಡುವುದನ್ನೂ ಕಲಿತುಕೊಳ್ಳಿ. ಏಕೆಂದರೆ ಐದು ವಿಷಯಗಳಿಗೆ ಸಂಬಂಧಿಸಿದ 150 ಪ್ರಶ್ನೆಗಳಿಗೆ ಕೇವಲ 90 ನಿಮಿಷಷಲ್ಲಿ ನೀವು ಉತ್ತರ ಗುರುತಿಸಬೇಕಾಗಿರುತ್ತದೆ. ಒಂದು ವಿಷಯಕ್ಕೆ ಸಿಗುವ ಸಮಯ ಕೇವಲ 18 ನಿಮಿಷ.


 *ಟಿಇಟಿಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ, ರಾಜ್ಯದಾದ್ಯಂತ ನೂರಾರು ತರಬೇತಿ ಕೇಂದ್ರಗಳು, ಅಕಾಡೆಮಿಗಳು ಹುಟ್ಟಿಕೊಂಡಿವೆ. ಇವರ ಆಕರ್ಷಕ ಮಾತಿನ ಶೈಲಿಗೆ ಬಲಿಯಾಗದೆ, ತರಬೇತಿ ಅಗತ್ಯವೆನಿಸಿದಲ್ಲಿ, ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿರುವ ತರಬೇತಿ ಕೇಂದ್ರ ಆಯ್ದುಕೊಳ್ಳಿ. ಪುಸ್ತಕಗಳನ್ನು ಆಯ್ಕೆ ಮಾಡಿಕೊಳ್ಳುವಾಗಲೂ ಈ ಬಗ್ಗೆ ಎಚ್ಚರ ವಹಿಸಿ.

SATS LBA

👉 Click here for SATS LBA 👉 DSERT LBA ಸಂಪನ್ಮೂಲಗಳು 👉 LBA YOUTUBE TRAINING More :- SATS KARNATAKA  | SATS LBA | SATS MDM |  POST SACTIONED...