🌻🌻ದಿನಕ್ಕೊಂದು ಮಾತು🌻🌻
💐ದೃಢತೆ ಮತ್ತು ವಿಶಿಷ್ಟತೆ ನಮ್ಮದಾಗಿರಲಿ💐
ಒಂದು ಉತ್ತಮ ರಸ್ತೆ ಒಬ್ಬ ಉತ್ತಮ ಚಾಲಕನನ್ನು ಸೃಷ್ಟಿಸಲು ಸಾಧ್ಯವಿಲ್ಲವೋ, ಒಂದು ತಿಳಿ ಆಕಾಶ ಹೇಗೆ ಉತ್ತಮ ಪೈಲಟ್‌ನನ್ನು ನಿರೂಪಿಸಲು ಸಾಧ್ಯವಿಲ್ಲವೋ ಹಾಗೆಯೇ ಜೀವನ ದಲ್ಲಿ ಕಷ್ಟ, ಸೋಲು,ಅವಮಾನ ಇಲ್ಲದಿದ್ದರೆ ನಾವು ಅತ್ಯುತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವೇ ಇಲ್ಲ. ಬದುಕು ಅನುಭವಿಸಲೆಂದೇ ಇರುವಂಥದ್ದು. ಆದರೆ ಅರಿವು ಮತ್ತು ಇತರರ ಅನುಭವದ ಸಾರವನ್ನು ಜೊತೆಗಿಟ್ಟುಕೊಂಡಾಗಲೇ ಜೀವನದಲ್ಲಿಸಂತೃಪ್ತಿಯೆಡೆಗೆ ಸಾಗಬಹುದು.
ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಯಾವುದೂ ಶಾಶ್ವತವಲ್ಲ ಎನ್ನುವ ನಿತ್ಯಸತ್ಯ ವಿರಕ್ತಿಗೆ ಪೂರಕವಾಗಬಾರದು. ಬದಲಿಗೆ ಅದು ಇರುವಾಗ ಅದನ್ನು ಒಳ್ಳೆಯ ರೀತಿಯಿಂದ ಬಳಸಿ ಕೊಳ್ಳುವುದು ನಮ್ಮ ಗುರಿಯಾಗಬೇಕು. ನಮ್ಮ ಮಧ್ಯೆ ಸಾವಿರ ಜನ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಲೇ ಇರುತ್ತಾರೆ. ಆದರೆ ನಮ್ಮ ಜೀವನವನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎನ್ನುವುದು ಮುಖ್ಯ. ಆತ್ಮವಿಶ್ವಾಸ ಇದ್ದಲ್ಲಿ ಎಲ್ಲವನ್ನೂ ಮೆಟ್ಟಿ ನಿಲ್ಲಬಹುದು. ಕೆಲವರು ಪ್ರಶ್ನೆ ಹಾಕಬಹುದು ಬರಿಯ ಆತ್ಮವಿಶ್ವಾಸ ಇದ್ರೆ ಸಾಕಾ? ಎಂದು. ನಿಜ ಆತ್ಮವಿಶ್ವಾಸದಿಂದ ಎಲ್ಲವೂ ಆಗುವುದಿಲ್ಲ. ಆದರೆ ಮಳೆ ಬಂದಾಗ ಕೊಡೆ ಯಿಂದ ಮಳೆಯನ್ನು ನಿಲ್ಲಿಸಲು ಆಗದೇ ಇರಬಹುದು ಆದರೆ ಕೊಡೆಯಿಂದ ನಮ್ಮನ್ನ ರಕ್ಷಿಸಿಕೊಳ್ಳಬಹುದು ಅಲ್ವ.
ಬಹಳ ಸಲ ನಾವು ನಮ್ಮ ಬಗ್ಗೆ ಯೋಚಿಸುವ ಬದಲು ಬೇರೆಯವರು ನಮ್ಮ ಬಗ್ಗೆ ಏನು ಅಭಿಪ್ರಾಯ ಹೊಂದಿದ್ದಾರೆ ಅವರು ನನ್ನ ಬಗ್ಗೆ ಏನು ಅಂದುಕೊಂಡು ಬಿಟ್ಟರೋ ಎನ್ನುವ ಗೊಂದಲದಲ್ಲೇ ಸಾಕಷ್ಟು ಬದುಕನ್ನು ಕಳೆದುಬಿಡುತ್ತೇವೆ. ಆದರೆ ನಮ್ಮ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ ಎನ್ನುವುದರ ಅರಿವು ನಮಗೇ ಇರುವುದಿಲ್ಲ.! ನಮ್ಮನ್ನು ಪ್ರೀತಿಸುವವರು ದ್ವೇಷಿಸುವವರು ಸಾವಿರ ಮಂದಿ ಇರಬಹುದು. ಆದರೆ ನಮಗೆ ನಾವು ಅರ್ಥವಾದಷ್ಟು ಬೇರೆಯವರಿಗೆ ಅರ್ಥ ಆಗಿರುವುದಿಲ್ಲ. ಹಾಗಾಗಿ ನಮಗೆ ನಾವೇ ನಮ್ಮ ಬೆಸ್ಟ್ ಫ್ರೆಂಡ್! ಹುಡುಕಿ ಪಡೆಯುವ ಖುಷಿ ದೇವರು ನನಗೆ ಏನನ್ನೂ ಕೊಟ್ಟಿಲ್ಲ ಎಂದುಕೊಳ್ಳುವುದಕ್ಕಿಂತ ಮೂರ್ಖತನ ಮತ್ತೊಂದಿಲ್ಲ.
ದೇವರು ಕೊಟ್ಟಿರುವುದನ್ನು ನಾನು ಎಷ್ಟರ ಮಟ್ಟಿಗೆ ಉಪಯೋಗಿಸಿಕೊಂಡಿದ್ದೇನೆ ಎಂದು ಅರಿತಿದ್ದೇವಾ? ಇಲ್ಲ. ನನ್ನ ಜೊತೆ ಇದ್ದವರಲ್ಲ ಏನೆಲ್ಲಾ ಸಾಧನೆ ಮಾಡಿಬಿಟ್ರು, ನಾನು ಮಾತ್ರ ಮೂಲೆ ಗುಂಪಾಗಿಬಿಟ್ಟೆ ಅನ್ನೋದಕ್ಕಿಂತ ಐ ಆ್ಯಮ್ ದಿ ಬೆಸ್ಟ್; ಐ ಕ್ಯಾನ್ ಡೂ ಇಟ್ ಅಂತ ಯಾಕೆ ಅಂದುಕೊಳ್ಳಲ್ಲ..? ಒಬ್ಬ ಹುಡುಗ ತನ್ನ ಶಾಲಾ ಜೀವನದಲ್ಲಿ ಓದುತ್ತಿರುವಾಗ ಶಿಕ್ಷಕರು ಹೀ ಹಿಸ್ ನಾಟ್ ವರ್ತಿ ಇವನಿಂದ ಏನೂ ಸಾಧ್ಯವಿಲ್ಲ ಅಂದಾಗ ಆತ ಸುಮ್ಮನಾಗಲಿಲ್ಲ. ಸೋಲು ತಾನೇ? ಅದೇನ್ ಮಹಾ ಎಂದುಕೊಂಡಾತನೇ ಇವತ್ತು ಎಲ್ಲರಿಗೂ ಬೆಳಕನ್ನ ನೀಡಿರುವ ಒಬ್ಬ ಪ್ರಸಿದ್ಧ ವಿಜ್ಞಾನಿ! ಸಾಧ್ಯವಾದ್ರೆ ಅವರು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ. ಹಾಗಂತ ನಾನು ಅಹಂಕಾರದಿಂದ ಹೇಳುತ್ತಿರುವುದಲ್ಲ.
ಹಾಗೆ ಹುಡುಕಿ ತಿಳಿಯುವುದರಲ್ಲಿಯೂ ಇರುವ ಖುಷಿ ಸಿಗಲಿ ಎನ್ನುವುದೇ ಕಾರಣ. ಕೊನೆಯದಾಗಿ ಒಂದು ಸಲ ಇವತ್ತಿನ ದಿನ ಸಾಧನೆಯ ಶಿಖರದಲ್ಲಿರುವವರನ್ನು ನೆನಪಿಸಿಕೊಳ್ಳಿ. ಅವರಿಗೇನು ಆ ಸ್ಥಾನ ಸುಲಭವಾಗಿ ಸಿಕ್ಕಿ ಬಿಟ್ಟಿದೆ ಎಂದರೆ ಸುಳ್ಳಾದೀತು. ಅವರು ನಿಮಗೆ ಇಷ್ಟವೋ ಇಲ್ಲವೋ ಎರಡನೆಯ ಮಾತು. ಇತರರ ಮಾತಿನಲ್ಲಿ ಅವರ ಬಗ್ಗೆ ತಿಳಿದಿರುವುದಕ್ಕಿಂತ ಹೆಚ್ಚಾಗಿ ಅವರ ಕುರಿತು ಅಧಿಕೃತ ಮಾಹಿತಿಗಳನ್ನು ಕಲೆಹಾಕಿ ಓದಿ. ಅವರು ಬದುಕಲ್ಲಿ ಪಟ್ಟ ಪಾಡು ಅಥವಾ ಅವರ ಜೀವನದ ಯಶೋಗಾಥೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅರ್ಥವಾದಾಗ ನಮ್ಮ ದಾರಿ ಸುಗಮವೆನಿಸುತ್ತದೆ.
ಕೃಪೆ:ಪಲ್ಲವಿಗೌಡ, ಟಿವಿ ನಿರೂಪಕಿ
************************
💐ನಾಲಗೆ ನಮ್ಮ ವಾಚ್‌ಮನ್, ಯಜಮಾನನಲ್ಲ💐
ಇತ್ತೀಚೆಗೆ ಓಶೋ ಬರೆದ From Medication to Meditation ಎಂಬ ಕೃತಿಯನ್ನು ಓದುತ್ತಿದ್ದೆ. ನಮ್ಮ ಶರೀರ, ರೋಗ, ಔಷಧ, ಆಹಾರ ಮುಂತಾದ ಸಂಗತಿಗಳ ಬಗ್ಗೆ ಓಶೋ ಬಹಳ ಮನೋಜ್ಞವಾಗಿ ಬರೆದಿದ್ದಾರೆ. ಈ ಕೃತಿಯನ್ನು ಓದಿದ್ದೇ ಆದರೆ ನೀವು ನಿಮ್ಮ ದೇಹವನ್ನು ಮತ್ತಷ್ಟು ಪ್ರೀತಿಸುತ್ತೀರಿ. ಪ್ರತಿ ತುತ್ತು ತಿನ್ನುವಾಗಲೂ ಯೋಚಿಸುತ್ತೀರಿ. ಓಶೋ ಒಂದೆಡೆ ಹೀಗೆ ಬರೆಯುತ್ತಾರೆ- ಯಾವಾಗಲೂ ನಾಲಗೆ ನಿಮ್ಮನ್ನು ನಿಯಂತ್ರಿಸಬಾರದು. ಅದಕ್ಕೆ ಹೊಟ್ಟೆಯ ಪರಿಸ್ಥಿತಿ, ದೇಹದ ಸ್ಥಿತಿಯ ಬಗ್ಗೆ ಏನೂ ಗೊತ್ತಿಲ್ಲ. ನಾಲಗೆಗೆ ಒಂದು ನಿರ್ದಿಷ್ಟ ಉದ್ದೇಶವಿದೆ. ಸಹಜವಾಗಿ ಅದು ಆಹಾರದ ರುಚಿಯನ್ನು ತೀರ್ಮಾನಿಸಬೇಕು. ರುಚಿಯನ್ನು ಆಧರಿಸಿ ಇದು ಈ ದೇಹಕ್ಕೆ ಬೇಕೇ ಬೇಡವೇ ಎಂದು ನಿರ್ಧರಿಸಲು ಸಹಕರಿಸಬೇಕು. ಅದು ಬಾಗಿಲಲ್ಲಿ ಕುಳಿತ ಕಾವಲು ಕಾಯುವವನಿದ್ದಂತೆ. ಆದರೆ ಅದೇ ಮನೆಯ ಯಜಮಾನನಾಗಬಾರದು. ಮನೆ ಬಾಗಿಲು ಕಾಯುವ ವಾಚ್‌ಮನ್ ತಾನೇ ಮನೆಯ ಒಡೆಯನೆಂಬಂತೆ ವರ್ತಿಸಿದರೆ ಎಲ್ಲವೂ ಗೊಂದಲದ ಗೂಡಾಗುತ್ತದೆ.
ನಮ್ಮ ಜಾಹೀರಾತುದಾರರಿಗೆ, ಈ ನಾಲಗೆಯನ್ನು ಹೇಗೆ ಮೋಸ ಮಾಡಬೇಕೆಂಬುದು ಚೆನ್ನಾಗಿ ಗೊತ್ತು. ಮೂಗನ್ನೂ ಮೋಸಗೊಳಿಸಬಹುದು. ಅವೆರಡೂ ಈ ದೇಹದ ಯಜಮಾನರಲ್ಲ. ನಿಮಗೆ ತಿಳಿಯದಿರಬಹುದು. ಪ್ರಪಂಚದಲ್ಲಿ ಈ ಕುರಿತು ಸಾಕಷ್ಟು ಸಂಶೋಧನೆಗಳಾಗಿವೆ. ನಿಮ್ಮ ಕಣ್ಣು, ಮೂಗು ಎರಡನ್ನೂ ಮುಚ್ಚಿ ನಿಮಗೆ ಈರುಳ್ಳಿಯ ತುಂಡನ್ನು ತಿನ್ನಿಸಿದರೆ, ನೀವು ತಿನ್ನುತ್ತಿರುವುದು ಈರುಳ್ಳಿಯೋ, ಆಪಲ್ಲೋ ಎಂದು ಗುರುತಿಸಲಾರಿರಿ. ಏಕೆಂದರೆ ರುಚಿಯ ಅರ್ಧ ಭಾಗ ಅರಿವಾಗುವುದು ಮೂಗಿನಿಂದ, ಇನ್ನರ್ಧ ಭಾಗ ಬರುವುದು ನಾಲಗೆಯಿಂದ. ಆದ್ದರಿಂದಲೇ ಇವೆರಡೂ ನಮ್ಮ ಆಹಾರ ಸೇವನೆಯನ್ನು ನಿಯಂತ್ರಿಸಲಾರಂಭಿಸಿವೆ. ಈಗ ಅದು ಅವರಿಗೆ ತಿಳಿದಿದೆ. ಈ ಕಾರಣದಿಂದಲೇ ಆಹಾರದಲ್ಲಿ ಒಂದು ವಿಶಿಷ್ಟ ಬಗೆಯ ರಾಸಾಯನ ಬಳಸಿ ನಾಲಗೆಗೆ ರುಚಿ ಹತ್ತಿಸಬೇಕು. ಹೀಗೆ ನಾಲಗೆ ಮತ್ತು ಮೂಗನ್ನು ಬಲೆಗೆ ಬೀಳಿಸಿಕೊಂಡು ದೇಹಕ್ಕೆ ಏನನ್ನು ಬೇಕಾದರೂ ತುರುಕಬಹುದು.
ಕೃಪೆ: ಅಂತರ್ಜಾಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ