*ಶಿಕ್ಷಕ ರೇವಣಸಿದ್ಧಪ್ಪ ‘ರೇವಣಸಿದ್ಧೇಶ್ವರ’ರಾದರು..!*
ಡಿ.ಬಿ.ನಾಗರಾಜ್
ವಿಜಯಪುರ: ಮಕ್ಕಳಿಗೆ ಅಕ್ಷರ ಹೇಳಿಕೊಟ್ಟ ಗುರುವಿಗೊಂದು ಗುಡಿಯ ಕಟ್ಟಿ, ತಮ್ಮೂರಿನ ಕಂದಮ್ಮಗಳಿಗೆಲ್ಲ ಅವರದೇ ಹೆಸರಿಟ್ಟು ಸಂಭ್ರಮಿಸಿದ ಊರು ಇಂಡಿ ತಾಲ್ಲೂಕಿನ ಅಥರ್ಗಾ.
ತಮ್ಮ ನಿಸ್ವಾರ್ಥ ಸೇವೆಯಿಂದ ಗ್ರಾಮದ ಆರಾಧ್ಯ ದೈವ ಎನಿಸಿದ ಆ ಶಿಕ್ಷಕರ ಹೆಸರು ರೇವಣಸಿದ್ಧಪ್ಪ. ಅವರು ನಿಧನರಾಗಿ 92 ವರ್ಷ ಗತಿಸಿದ್ದು, ಆಗಿನಿಂದ ‘ರೇವಣಸಿದ್ಧೇಶ್ವರ’ರಾಗಿ ನಿತ್ಯ ಎರಡು ಹೊತ್ತು ಪೂಜಿಸಿಕೊಳ್ಳುತ್ತಿದ್ದಾರೆ. ಬಹುತೇಕರ ಮನೆಯ ದೇವರ ಕೋಣೆಯಲ್ಲೂ ಸ್ಥಳ ಪಡೆದಿದ್ದಾರೆ. ಊರಿನಲ್ಲಿ ಮನೆಗೊಬ್ಬನಂತೆ ‘ರೇವಣಸಿದ್ಧಪ್ಪ’ ಹೆಸರಿನ ಮಗನಿದ್ದಾನೆ. ಕೆಲ ಮನೆಗಳಲ್ಲಿ ದೊಡ್ಡ ರೇವಣಸಿದ್ಧಪ್ಪ, ಸಣ್ಣ ರೇವಣಸಿದ್ಧಪ್ಪರೂ ಇದ್ದಾರೆ. ಅದಲ್ಲದೇ ಗುರುವಿನ ಹೆಸರಲ್ಲಿ ಜಾತ್ರೆಯೂ ನಡೆಯುವುದು ಇಲ್ಲಿನ ವಿಶೇಷ.PSGadyal teacher vijayapur
ಪರವೂರಿನಿಂದ ಬಂದು ತಮ್ಮೂರಿನ ಒಳಿತಿಗಾಗಿ ಹಗಲೂ ರಾತ್ರಿ ಶ್ರಮಿಸಿದ್ದ ಶಿಕ್ಷಕ ರೇವಣಸಿದ್ಧಪ್ಪ ಮೃತಪಟ್ಟಾಗ, ಅವರನ್ನು ತಮ್ಮೂರಲ್ಲೇ ಸಮಾಧಿ ಮಾಡಿ ದೇಗುಲ ಕಟ್ಟಿದವರು ಅಥರ್ಗಾ ಗ್ರಾಮಸ್ಥರು. ಅವರ ಪಂಚಲೋಹದ ವಿಗ್ರಹ ಪ್ರತಿಷ್ಠಾಪಿಸಿ ಪೂಜಿಸಿದರು. ಗ್ರಾಮದಲ್ಲಿ ‘ರೇವಣಸಿದ್ಧೇಶ್ವರ ವೃತ್ತ’ವನ್ನೂ ನಿರ್ಮಿಸಿ, ತಮ್ಮ ಅಭಿಮಾನ ಮೆರೆದಿದ್ದಾರೆ.
ಬಹುತೇಕರ ದಿನಚರಿ ಆರಂಭವಾಗುವುದು ಈ ದೇಗುಲಕ್ಕೆ ತೆರಳಿ ದರ್ಶನ ಪಡೆದ ಬಳಿಕವೇ. ಪ್ರತಿ ವರ್ಷ ಶಿಕ್ಷಕ ದಿನಾಚರಣೆಯಂದು ವಿವಿಧೆಡೆ ವಿಶೇಷ ಸಮಾರಂಭ ಆಯೋಜಿಸಿ, ರೇವಣಸಿದ್ಧಪ್ಪ ಅವರ ಸಾರ್ಥಕ ಬದುಕನ್ನು ಸ್ಮರಿಸುತ್ತಾರೆ.
ಯಾರಿವರು ರೇವಣಸಿದ್ಧಪ್ಪ ?
ಬಸವನಬಾಗೇವಾಡಿ ತಾಲ್ಲೂಕಿನ ಮನಗೂಳಿ ಪಟ್ಟಣದ ಲಕ್ಷ್ಮೀಬಾಯಿ– ಶಿವಪ್ಪ ಅವರಸಂಗ ದಂಪತಿಯ ಮೂರನೇ ಮಗನಾಗಿ 1889ರಲ್ಲಿ ರೇವಣಸಿದ್ಧಪ್ಪ ಜನಿಸಿದರು. ಮುಲ್ಕಿ ಶಿಕ್ಷಣ ಪಡೆದ ಬಳಿಕ ಉಕ್ಕಲಿಯಲ್ಲಿ ಶಿಕ್ಷಕ ವೃತ್ತಿ ಆರಂಭಿಸಿದರು. ಒಂದೂವರೆ ವರ್ಷದ ಬಳಿಕ ಅಥರ್ಗಾಕ್ಕೆ ಬಂದು ಇಲ್ಲಿಯೇ ನೆಲೆ ನಿಂತವರು.
‘ಪರಿಸರ ಸಂರಕ್ಷಣೆ, ಸ್ವಚ್ಛತೆಯ ಪಾಠ ಹೇಳಿಕೊಟ್ಟವರು. ಸ್ವಾತಂತ್ರ್ಯ ಸಂಗ್ರಾಮದ ಕಿಡಿ ಹಚ್ಚಿದವರು. ಸಮಾಜದ ಎಲ್ಲ ಸ್ತರಗಳ ಜನರಿಗೂ ಅಕ್ಷರ ಕಲಿಸಿದವರು. ಮನೆ ಮನೆ ಬಾಗಿಲು ತಟ್ಟಿ ಮಕ್ಕಳನ್ನು ಶಾಲೆಗೆ ಕರೆ ತಂದವರು. ಹೆಣ್ಣು ಮಕ್ಕಳಿಗೂ ಶಿಕ್ಷಣ ನೀಡಿದವರು. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಅಂದಿನ ಕಾಲದಲ್ಲೇ ಕಂದೀಲಿನ ಬೆಳಕಿನಲ್ಲಿ ಮನೆ ಪಾಠ ಹೇಳಿಕೊಟ್ಟ ಪುಣ್ಯಾತ್ಮ’ ಎಂದು ರೇವಣಸಿದ್ಧಪ್ಪ ಮಾಸ್ತರರ ಪರಿಚಯ ಮುಂದಿಡುತ್ತಾರೆ ಗ್ರಾಮದ ಶಿಕ್ಷಕ ಹನುಮಂತ ಬಂಟನೂರ.
ತಮ್ಮ ಸಂಬಳವನ್ನೂ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಭರಿಸುತ್ತಿದ್ದ, ಶರಣರ ತತ್ವ ಪಾಲಕರಾಗಿದ್ದ ಅವರು ಊರವರ ಮನದಲ್ಲಿ ಗುರುವಿನ ಸ್ಥಾನ ಪಡೆದಿದ್ದರು ಎಂದೂ ಅವರು ಸ್ಮರಿಸುತ್ತಾರೆ.
ಜಾತ್ರೆ: 1925ರ ಶಿವರಾತ್ರಿ ಹಬ್ಬದಂದು ರೇವಣಸಿದ್ಧಪ್ಪ ಮಾಸ್ತರ್ ತಮ್ಮ 36ರ ಹರೆಯದಲ್ಲೇ ನಿಧನರಾದರು. ಮರು ವರ್ಷದಿಂದ ಶಿವರಾತ್ರಿ ಸಂದರ್ಭದಲ್ಲಿ ಅವರ ಹೆಸರಿನಲ್ಲಿ ಐದು ದಿನದ ಬೃಹತ್ ಜಾತ್ರೆಯೂ ಇಲ್ಲಿ ನಡೆಯುತ್ತಿದೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ