ಪುಟಗಳು

TEACHERS USEFUL

23.12.23

HEALTH EDUCATION - ಆರೋಗ್ಯ ಶಿಕ್ಷಣ

 ==> ಗ್ರಂಥಿಗಳು, ಕಾಯಿಲೆಗಳು & ಪರಿಹಾರ 👈👈


==> ಮಲೇರಿಯಾ ವಿರುದ್ಧ ಜಾಗೃತಿ ಮೂಡಿಸುವ ವೀಡಿಯೋ

ರೋಗಗಳು/ತೊಂದರೆಗಳು &ಪರಿಹಾರಆಹಾರ ಪದಾರ್ಥಗಳು/ಹಣ್ಣುಗಳು &ಉಪಯೋಗಆರೋಗ್ಯಕರ ಹವ್ಯಾಸಗಳು
(01) ಹೃದಯ ಸಮಸ್ಯೆಯ ಲಕ್ಷಣಗಳು(01) ಹಾಗಲಕಾಯಿ ಉಪಯೋಗ-೧(01) ತಣ್ಣೀರು ಸ್ನಾನ
(02)ಕ್ಷಯರೋಗಕ್ಕೆ ಮದ್ದು((02) ಬಾಳೇಹಣ್ಣು ಉಪಯೋಗ-೧(02) ನಡಿಗೆ
(03) ಮೊಡವೆ(03) ಎಳೆನೀರು(03) ಸೂರ್ಯ ನಮಸ್ಕಾರ
(04) ಕೂದಲು(04) ಲವಂಗ(04) Toothpaste ನ ರಾಸಾಯನಿಕದ ಪರೀಕ್ಷೆ
(05) ಕಣ್ಣಿನ ವಿಶೇಷ(05) ಎಳ್ಳು(05) ವ್ಯಾಯಾಮ
(06) ಮುಖದ ಸೌಂದರ್ಯ(06) ಶೇಂಗಾ(06) Bike riding
(07) ಉರಿಮೂತ್ರ(07) ಒಣದ್ರಾಕ್ಷಿ(07) ಏಕಾಗ್ರತೆ
(08)ಒಣಕೆಮ್ಮು(08) ಸಾಸುವೆ
(09) ಚರ್ಮದ ಆರೈಕೆ(09)ದಾಳಿಂಬೆ
(10) ಪಿತ್ತ(10)ನವಿಲು ಕೋಸು
(11)(11) ವೀಳ್ಯದ ಎಲೆ
(12)(12) ಟೊಮ್ಯಾಟೊ
(13)(13) ಸಾಸುವೆ ಎಣ್ಣೆ
(14)(14) ಸೌತೆಕಾಯಿ
(15)(15) ಜೇನು
(16)(16) ಬೀಟ್ರೂಟ್
(17)(17) ಬದನೆಕಾಯಿ
(18)(18) ತುಳಸಿ ಚಹಾ
(19)(19) ಪುದಿನಾ
(20)(20) ಏಲಕ್ಕಿ
(21)(21) ಪಾಲಕ್
(22)(22) ಉಪ್ಪು
(23)

(24)

(25)


*ಊಟ  ಮಾಡುವಾಗ ನಾವೇಕೆ ನೆಲದ ಮೇಲೆ ಕುಳಿತುಕೊಳ್ಳಬೇಕು?*

ಭಾರತದಲ್ಲಿ ನಾವು ಎಲ್ಲರ ಮನೆಯಲ್ಲಿಯೂ ಸಾಮಾನ್ಯವಾಗಿ ನೆಲದ ಮೇಲೆ ಕೂತು ಊಟ ಮಾಡುವ ಜನರನ್ನು ಕಾಣುತ್ತೇವೆ. ನಮ್ಮಲ್ಲಿ ಕೆಲವು ಜನ ಊಟ ಮಾಡಲೆಂದೆ ಡೈನಿಂಗ್ ಟೇಬಲ್,ಚೇರ್ ಮುಂತಾದವುಗಳನ್ನು ಇಟ್ಟುಕೊಂಡಿರುತ್ತಾರೆ. ಇನ್ನೂ ಕೆಲವರು ಟಿವಿ ಮುಂದೆಯೋ ಅಥವಾ ತಮ್ಮ ಹಾಸಿಗೆಯ ಮೇಲೋ ಕುಳಿತು ಊಟ ಮಾಡುವ ರೂಢಿಯನ್ನು ಇಟ್ಟುಕೊಂಡಿರುತ್ತಾರೆ. ಬಹುಶಃ ಟಿವಿ ನೋಡುತ್ತಾ ಅಥವಾ ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು ನಿಮಗೆ ಆರಾಮದಾಯಕವಾಗಿರಬಹುದು.

ಆದರೆ ಇದರಿಂದ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಉಪಯೋಗವಾಗುವುದಿಲ್ಲ. ಇದಕ್ಕಾಗಿ ನಮ್ಮ ಪೂರ್ವಿಕರು ಒಂದು ಶಿಸ್ತನ್ನೆ ಅಳವಡಿಸಿದ್ದರು. ಅವರೆಲ್ಲರು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿ ಕುಳಿತು ಆಹಾರವನ್ನು ಸೇವಿಸುತ್ತಿದ್ದರು. ಹೀಗೆ ಆಹಾರ ಸೇವಿಸಲು ಇರುವ 10 ಕಾರಣಗಳನ್ನು ನಾವಿಲ್ಲಿ ನೀಡಿದ್ದೇವೆ, ಇದನ್ನು ಅಳವಡಿಸಿಕೊಳ್ಳಿ ಇದರಿಂದ ನಿಮ್ಮ ಆರೋಗ್ಯಕ್ಕೆ ಉತ್ತಮ ಪ್ರಯೋಜನಗಳು ದೊರೆಯುತ್ತವೆ.



ಜೀರ್ಣಶಕ್ತಿಯನ್ನು ಸುಧಾರಿಸುತ್ತದೆ:

ನೀವು ನೆಲದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಊಟ ಮಾಡುವುದರಿಂದ ನಿಮಗೆ ತಿಳಿಯದಂತೆ ಒಂದು ಉಪಯೋಗ ದೊರೆಯುತ್ತದೆ. ಅದೇನೆಂದರೆ ಚಕ್ಕಳ ಮಕ್ಕಳವು ಒಂದು ಸುಖಾಸನ ಅಥವಾ ಅರ್ಧ ಪದ್ಮಾಸನ ಎಂದೇ ಹೆಸರುವಾಸಿಯಾಗಿದೆ. ಈ ಸುಖಾಸನವು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಗಮವಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ (ಇನ್ನೂ ಕೆಲವರ ಅಭಿಪ್ರಾಯದಂತೆ ನೀವು ಸುಖಾಸನದಲ್ಲಿ ಕುಳಿತ ಕೂಡಲೆ ನಿಮ್ಮ ಮೆದುಳಿಗೆ ಜೀರ್ಣ ಶಕ್ತಿಯನ್ನು ಪ್ರಚೋದಿಸುವಂತಹ ಸಂಕೇತಗಳು ತಲುಪುತ್ತವೆಯಂತೆ). ಇದರ ಜೊತೆಗೆ ನೀವು ತಟ್ಟೆಯಲ್ಲಿ ಕುಳಿತು ಊಟ ಮಾಡುವಾಗ ಆಹಾರವನ್ನು ಸೇವಿಸಲು ಸ್ವಲ್ಪ ಮುಂದೆ ಬಾಗುತ್ತೀರಿ ಮತ್ತು ಅದನ್ನು ಅಗಿಯಲು ಹಿಂದಕ್ಕೆ ಬಾಗುತ್ತೀರಿ. ಹೀಗೆ ನಿಯಮಿತವಾಗಿ ಹಿಂದೆ- ಮುಂದೆ ಬಾಗುವುದರಿಂದ ನಿಮ್ಮ ಕಿಬ್ಬೊಟ್ಟೆಯ ಭಾಗದ ಸ್ನಾಯುಗಳು ಸಕ್ರಿಯಗೊಳ್ಳುತ್ತವೆ. ಇದರಿಂದ ಹೊಟ್ಟೆಯಲ್ಲಿ ಆಮ್ಲಗಳು ಹೆಚ್ಚಾಗಿ ಸ್ರವಿಸಿ ಜೀರ್ಣಕ್ರಿಯೆ ಸರಾಗವಾಗಿ ಸಾಗುತ್ತದೆ.



ತೂಕವನ್ನು ಇಳಿಸಿಕೊಳ್ಳಲು ಸಹಕಾರಿ:

ನೀವು ಸುಖಾಸನದಲ್ಲಿ ಕುಳಿತಾಗ ಮೆದುಳು ತನ್ನಷ್ಟಕ್ಕೆ ತಾನೆ ಶಾಂತಗೊಳ್ಳುತ್ತದೆ ಮತ್ತು ಆಹಾರವನ್ನು ಸೇವಿಸಲು ಅಗತ್ಯವಾಗಿರುವ ಮನಸ್ಥಿತಿಗೆ ಬಂದು ಅದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ. ಇದಕ್ಕಿಂತ ಹೆಚ್ಚಾಗಿ ಈ ಆಸನವು ಒಮ್ಮನಿಸಿನಿಂದ ಆಹಾರವನ್ನು ಸೇವಿಸುವಂತೆ ಮಾಡಿ, ನಿಮಗೆ ಬೇಗ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇನ್ನೂ ಕುತೂಹಲದಾಯಕ ವಿಚಾರವೆಂದರೆ ಈ ಆಸನದಲ್ಲಿ ನೀವು ಕುಳಿತು ಊಟ ಮಾಡುವಾಗ, ಟೇಬಲ್ ಮೇಲೆ ಕುಳಿತು ಊಟ ಮಾಡುವುದಕ್ಕಿಂತ ಕಡಿಮೆ ಆಹಾರವನ್ನು ಸೇವಿಸುತ್ತೀರಿ. ಹೀಗೆ ನೀವು ಕಡಿಮೆ ಆಹಾರವನ್ನು ಸೇವಿಸಲು ಮತ್ತು ಆಹಾರ ಸೇವನೆಯ ಕುರಿತಾಗಿ ಆಸಕ್ತಿ ತಾಳುವುದು ಕಡಿಮೆಯಾಗುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದು ನಿಮ್ಮ ದೇಹಕ್ಕೆ ಅತ್ಯಗತ್ಯವಾಗಿ ಒಳ್ಳೆಯದು.



ನಿಮ್ಮ ದೇಹಕ್ಕೆ ಮತ್ತಷ್ಟು ನಮ್ಯತೆಯನ್ನು ಒದಗಿಸುತ್ತದೆ:

ನೀವು ಚಕ್ಕಳ ಮಕ್ಕಳ ಅಥವಾ ಪದ್ಮಾಸನದಲ್ಲಿ ಕುಳಿತಾಗ ಕಿಬ್ಬೊಟ್ಟೆಯ ಮೇಲಿನ ಮತ್ತು ಕೆಳ ಭಾಗದಲ್ಲಿ, ಸೊಂಟ, ಹೊಟ್ಟೆಯ ಸುತ್ತ ಇರುವ ಪೆಲ್ವಿಸ್ ಭಾಗದಲ್ಲಿರುವ ಎಲ್ಲಾ ಸ್ನಾಯುಗಳು ಹಿಗ್ಗುತ್ತವೆ ಮತ್ತು ಇದರಿಂದ ನಿಮಗೆ ಮುಂದೆ ಬರುವ ನೋವು ಸಹ ಕಡಿಮೆಯಾಗುತ್ತದೆ. ಇದರಿಂದ ನಿಮ್ಮ ಜೀರ್ಣಾಂಗ ವ್ಯೂಹವು ವಿಶ್ರಾಂತಿಯನ್ನು ಪಡೆದು ತನ್ನ ಸುಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಇದೆಲ್ಲದ್ದಕ್ಕಿಂತ ಹೆಚ್ಚಾಗಿ ಈ ಆಸನವು ನಿಮ್ಮ ಹೊಟ್ಟೆಯನ್ನು ಯಾವುದೇ ಕಾರಣಕ್ಕು ಕುಗ್ಗಿಸುವುದಿಲ್ಲ. ಮೇಲಾಗಿ ಇದು ನೀವು ತಿಂದ ಆಹಾರವನ್ನು ಜೀರ್ಣ ಮಾಡಲು ಸಹಕರಿಸುತ್ತದೆ.



ಊಟ ಮಾಡುವಾಗ ಸ್ಥಿರ ಪ್ರಙ್ಞೆಯನ್ನು ಒದಗಿಸುತ್ತದೆ:

ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಮನಸ್ಸು ತನ್ನ ಪ್ರಶಾಂತತೆಯನ್ನು ಕಾಪಾಡಿಕೊಂಡಿರುತ್ತದೆ. ಇದರಿಂದ ನಿಮಗೆ ಆಹಾರದಲ್ಲಿ ಏನನ್ನು ತಿನ್ನಬೇಕು ಎಂಬ ಆಯ್ಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ. ಆಗ ನೀವು ಸಹಜವಾಗಿ ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುವ ಆಹಾರವನ್ನು ಸೇವಿಸಲು ಆಧ್ಯತೆ ನೀಡುತ್ತೀರಿ. ಅಲ್ಲದೆ ಎಷ್ಟು ಪ್ರಮಾಣದಲ್ಲಿ ಸೇವಿಸಬೇಕು ಎಂಬುದರ ಕುರಿತಾಗಿ ಸಹ ನೀವು ಆಲೋಚಿಸಿ ಆಹಾರವನ್ನು ಸೇವಿಸುತ್ತೀರಿ. ಹೀಗೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ನೀವು ಸ್ಥಿತ ಪ್ರಙ್ಞೆಯನ್ನು ಕಾಯ್ದುಕೊಳ್ಳುತ್ತೀರಿ.



ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಸಮಯ ಕಳೆಯಲು ನೆರವಾಗುತ್ತದೆ:

ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ಮತ್ತೊಂದು ಉಪಯೋಗ ನಿಮಗೆ ದೊರೆಯುತ್ತದೆ. ಅದೇನೆಂದರೆ ನಿಮ್ಮ ಕುಟುಂಬದ ಜೊತೆಗೆ ಕುಳಿತು ಊಟ ಮಾಡುವ ಸುಯೋಗ. ಹೌದು ಎಂತಹ ಬೆಲೆ ಬಾಳುವ ಊಟದ ಮೇಜನ್ನು ನಿಮ್ಮ ಮನೆಯಲ್ಲಿ ಹೊಂದಿದ್ದರು, ಅದರಲ್ಲಿ ಹತ್ತು ಜನ ಕುಳಿತು ಊಟ ಮಾಡಲು ಸ್ವಲ್ಪ ಇರಿಸು ಮುರಿಸು ಉಂಟಾಗುತ್ತದೆ. ಆದರೆ ನೆಲದ ಮೇಲೆ ಕುಳಿತು ಊಟ ಮಾಡುವಾಗ ಈ ಸಮಸ್ಯೆಯು ನಿಮ್ಮನ್ನು ಕಾಡುವುದಿಲ್ಲ. ಜೊತೆಗೆ ನಿಮ್ಮ ಕುಟುಂಬ ಸದಸ್ಯರ ಸಮಸ್ಯೆಗಳನ್ನು ಮತ್ತು ಯೋಗ ಕ್ಷೇಮಗಳನ್ನು ವಿಚಾರಿಸಿಕೊಳ್ಳುವ ವೇದಿಕೆಯಾಗಿ ನಿಮ್ಮ ಊಟದ ಸಮಯ ಸದ್ವಿನಿಯೋಗವಾಗುತ್ತದೆ. ಹೀಗೆ ನಿಮ್ಮ ಕುಟುಂಬ ಸದಸ್ಯರ ಜೊತೆಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಳ್ಳಲು ಸಹ ಈ ಪದ್ಧತಿ ನಿಮ್ಮ ನೆರವಿಗೆ ಬರುತ್ತದೆ.



ನಿಮ್ಮ ನಿಲುವನ್ನು ಸುಧಾರಿಸುತ್ತದೆ:

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿಮ್ಮ ನಿಲುವು ಸಹ ಸುಧಾರಿಸುತ್ತದೆ. ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಬೆನ್ನು ಮೂಳೆಯು ನೇರವಾಗಿರುತ್ತದೆ, ಜೊತೆಗೆ ಬೆನ್ನು ಮೂಳೆಯು ಉದ್ದವಾಗಲು ಸಹ ಸಹಾಯವಾಗುತ್ತದೆ ಮತ್ತು ನಿಮ್ಮ ಭುಜಗಳನ್ನು ಹಿಂದಕ್ಕೆ ಸರಿಸಲು ಸಹ ಇದು ನೆರವಾಗುತ್ತದೆ. ಇದೆಲ್ಲದಕ್ಕಿಂತ ಮೇಲಾಗಿ ನಿಮ್ಮ ಕುಳಿತುಕೊಳ್ಳುವ ಭಂಗಿಯಿಂದ ಸಂಭವಿಸಬಹುದಾದ ಸಣ್ಣ ಪುಟ್ಟ ನೋವುಗಳು ಸಹ ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ನಿವಾರಣೆಯಾಗುತ್ತವೆ.



ನಿಮ್ಮನ್ನು ದೀರ್ಘಾಯುಷ್ಯಿಯನ್ನಾಗಿಸುತ್ತದೆ:

ಯೂರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯವರು ಪ್ರಕಟಿಸಿರುವ ಒಂದು ಅಧ್ಯಯನದ ಪ್ರಕಾರ ನೆಲದ ಮೇಲೆ ಕುಳಿತು ಊಟ ಮಾಡುವವರು ಅಂದರೆ, ಪದ್ಮಾಸನದಲ್ಲಿ ಕುಳಿತು ಊಟ ಮಾಡುವವರು, ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದ್ದಲ್ಲಿ ಅವರು ನಿಸ್ಸಂಶಯವಾಗಿ ದೀರ್ಘಾಯುಷ್ಯಿಗಳಾಗಿ ಬಾಳುತ್ತಾರಂತೆ. ಇದಕ್ಕೆ ಕಾರಣ ಅವರ ದೇಹದ ನಮ್ಯತೆಯ ಗುಣ. ಈ ಅಧ್ಯಯನದ ಪ್ರಕಾರ ಯಾವುದೇ ಸಹಾಯವಿಲ್ಲದೆ ಕುಳಿತ ಭಂಗಿಯಿಂದ ಏಳುವವರು ಮುಂದಿನ ಆರು ವರ್ಷದಲ್ಲಿ ಸಾಯುವ ಸಾಧ್ಯತೆ 6.5 ಪಟ್ಟು ಕಡಿಮೆಯಿರುತ್ತದೆಯಂತೆ.



ನಿಮ್ಮ ಮೊಣಕಾಲುಗಳು ಮತ್ತು ಮೊಣಕೈಗಳ ಸಂಧಿಗಳಲ್ಲಿ ದ್ರವಗಳನ್ನು ಸ್ಫುರಿಸಿ ಅವುಗಳ ಆರೋಗ್ಯವನ್ನು ಸುಧಾರಿಸುತ್ತದೆ.

ಪದ್ಮಾಸನ ಅಥವಾ ಸುಖಾಸನವು ನಮ್ಮ ಇಡೀ ದೇಹಕ್ಕೆ ಆರೋಗ್ಯವನ್ನು ನೀಡುವಂತಹ ಆಸನಗಳಾಗಿರುತ್ತವೆ. ಇವುಗಳಿಂದ ಕೇವಲ ನಿಮ್ಮ ಜೀರ್ಣ ಶಕ್ತಿಯು ಸುಧಾರಿಸುವುದರ ಜೊತೆಗೆ ನಿಮ್ಮ ದೇಹದ ಸ್ನಾಯುಗಳು ಮತ್ತು ಸಂಧಿಗಳನ್ನು ಆರೋಗ್ಯವನ್ನು ಸುಧಾರಿಸಿ, ಅವುಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಇದರಿಂದ ಸಂಧಿವಾತ ಮತ್ತು ಒಸ್ಟಿಯೊಪೊರೊಸಿಸ್‍ನಂತಹ ಕಾಯಿಲೆಗಳು ಬರದಂತೆ ತಡೆಯಲು ಅನುಕೂಲವಾಗುತ್ತದೆ. ಇದು ಹೇಗೆ ಸಾಧ್ಯ ಎಂದು ನಿಮಗನಿಸಬಹುದು? ನಿಯಮಿತವಾಗಿ ನಾವು ಕುಳಿತು ಏಳುವುದರಿಂದ ನಮ್ಮ ಕಾಲುಗಳಿಗೆ,ಸ್ನಾಯುಗಳಿಗೆ, ಮೊಣಕೈ ಮತ್ತು ಮೊಣಕಾಲುಗಳಿಗೆ ಅಗತ್ಯವಾದ ವ್ಯಾಯಾಮ ದೊರೆತು ಅವುಗಳಲ್ಲಿ ನಮ್ಯತೆ ಮೂಡುತ್ತದೆ. ಈ ನಮ್ಯತೆಯಿಂದ ಸಂಧಿಗಳಲ್ಲಿ ದ್ರವದ ಸರಾಗ ಚಲನೆ ಕಂಡು ಬರುತ್ತದೆ. ಹೀಗೆ ಇದು ಕಾಯಿಲೆಗಳಿಗೆ ಸಿಲುಕಿಕೊಳ್ಳುವ ಸಾಧ್ಯತೆ ತುಂಬಾ ಕಡಿಮೆಯಾಗುತ್ತದೆ. ಆಗಾಗಿ ನೆಲದ ಮೇಲೆ ಕುಳಿತು ಊಟ ಮಾಡಲು ಶುರು ಮಾಡಿ.



ಮನಸ್ಸನ್ನು ಪ್ರಶಾಂತಗೊಳಿಸುತ್ತದೆ ಮತ್ತು ಉದ್ವೇಗವನ್ನು ತಡೆಯುತ್ತದೆ:

ಆಯುರ್ವೇದದ ಪ್ರಕಾರ ಪ್ರಶಾಂತವಾದ ಮನಸ್ಥಿತಿಯಲ್ಲಿ ಊಟವನ್ನು ಸೇವಿಸುವುದರಿಂದ ಜೀರ್ಣಶಕ್ತಿಯು ಹೆಚ್ಚುತ್ತದೆಯಂತೆ. ಜೊತೆಗೆ ಇದು ಊಟದ ಸವಿಯನ್ನು ಸಹ ಹೆಚ್ಚಿಸುವ ಗುಣವನ್ನು ಹೊಂದಿದೆಯಂತೆ. ಮತ್ತೇಕೆ ತಡ ಸುಲಭವಾಗಿ ಖರ್ಚಿಲ್ಲದೆ ದೊರೆಯುವ ಈ ಕೆಲಸವನ್ನು ಮೊದಲು ಮಾಡಿ.



ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ಹೃದಯವನ್ನು ಸದೃಢಗೊಳಿಸುತ್ತದೆ:

ನೀವು ನೆಲದ ಮೇಲೆ ಕುಳಿತು ಊಟ ಮಾಡುವಾಗ ನಿಮ್ಮ ಹೃದಯದಿಂದ ರಕ್ತವು ಪಂಪ್ ಆಗಿ ಇಡೀ ದೇಹಕ್ಕೆ ಪ್ರಸಾರಗೊಳ್ಳಲು ನೆರವಾಗುತ್ತದೆ. ಜೊತೆಗೆ ಜೀರ್ಣಾಂಗ ವ್ಯೂಹವು ಸಹ ತನ್ನ ಕಾರ್ಯವನ್ನು ಸರಾಗವಾಗಿ ಮಾಡಲು ಇದರಿಂದ ಅನುಕೂಲವಾಗುತ್ತದೆ. ಆದರೆ ಡೈನಿಂಗ್ ಟೇಬಲ್ ಮುಂದೆ ಕುಳಿತು ಊಟವನ್ನು ಸೇವಿಸುವಾಗ ನಿಮಗೆ ಈ ಪ್ರಯೋಜನ ದೊರೆಯುವುದಿಲ್ಲ. ಕಾರಣ ಅಲ್ಲಿ ಕಾಲುಗಳು ನಿಮ್ಮ ಹೃದಯದಿಂದ ಕೆಳಭಾಗದಲ್ಲಿ ಇಳಿಜಾರಾಗಿ ನಿಂತಿರುತ್ತವೆ. ಆಗ ಹೃದಯದಲ್ಲಿ ಪರಿಚಲನೆಗೊಳ್ಳುವ ರಕ್ತದ ವೇಗಕ್ಕಿಂತ ಕಡಿಮೆ ವೇಗದಲ್ಲಿ ರಕ್ತವು ಕಾಲುಗಳಿಗೆ ಪ್ರಸಾರವಾಗುತ್ತಿರುತ್ತದೆ. ಅದಕ್ಕಾಗಿ ನಮ್ಮ ದೈನಂದಿನ ಜಂಜಡಯುತವಾದ ಜೀವನದ ಒತ್ತಡವನ್ನು ಎದುರಿಸಲು ನಮ್ಮ ಹೃದಯ ಮತ್ತು ಸ್ನಾಯುಗಳು ಆರೋಗ್ಯಕರವಾಗಿರಬೇಕಾದುದು ಅತ್ಯಗತ್ಯ. ಅದಕ್ಕಾಗಿ ನೆಲದ ಮೇಲೆ ಕುಳಿತು ಊಟ ಮಾಡುವುದನ್ನು ರೂಢಿಸಿಕೊಳ್ಳಿ.

#ಆರೋಗ್ಯ#ದೈಹಿಕ ಸ್ವಾಸ್ಥ್ಯ
@@@@@@@@@@@

*ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗುವ ದಶ ಲಾಭಗಳು*:

ನೀರು ನಿಮ್ಮ ಹೆಚ್ಚಿನೆಲ್ಲಾ ಸಮಸ್ಯೆಗಳಿಗೆ ಪರಿಹಾರವಾಗ ಬಲ್ಲದು. ಮುಂಜಾನೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಹಲವಾರು ರೋಗಗಳನ್ನು ಗುಣ ಪಡಿಸ ಬಹುದು ಎಂದು ತಿಳಿದಿದೆಯಾ?

ಹೆಚ್ಚಿನ ರೋಗಗಳು ಹೊಟ್ಟೆಯಿಂದಲೇ ಆರಂಭವಾಗುತ್ತದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಆಗ ನಿಮ್ಮ ಹೊಟ್ಟೆಯನ್ನು ಆರೋಗ್ಯವಾಗಿ ಇರಿಸಲು ಇದು ನೆರವಾಗಲಿದೆ. ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಯೋಚನೆಯು ಮೊದಲು ಆರಂಭವಾಗಿದ್ದು ಜಪಾನ್ ನಲ್ಲಿ. ಜಪಾನಿನಲ್ಲಿ ಜನರು ಹಲ್ಲುಜ್ಜುವ ಮೊದಲು ನಾಲ್ಕು ಲೋಟ ನೀರು ಕುಡಿದು ಇದರ ಬಳಿಕ ಅವರು ಅರ್ಧ ಗಂಟೆ ಏನೂ ತಿನ್ನುವುದಿಲ್ಲ ಅಥವಾ ಕುಡಿಯುವುದಿಲ್ಲ. ಈ ನೀರಿನ ಥೆರಪಿ ನಿಮ್ಮನ್ನು ಆರೋಗ್ಯಕರ ಹಾಗೂ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.

ಜಪಾನ್ ನ ಜನರು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಟುವಟಿಕೆ ಹಾಗೂ ದಕ್ಷತೆಯನ್ನು ಹೊಂದಿರುವರೆಂಬ ಹೆಗ್ಗಳಿಕೆಯಿದೆ.

ಬೆಳಗ್ಗೆ ಎದ್ದು ನೀರು ಕುಡಿಯುವುದರಿಂದ ಹಲವಾರು ರೀತಿಯ ಉಪಯೋಗಗಳಿವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ನೀರು ಜಾದು ಮಾಡ ಬಲ್ಲದು. ನೀವು ಊಟವಾದ ಬಳಿಕ ಬಿಸಿ ನೀರು ಕುಡಿಯಿರಿ. ಇದರಿಂದ ನೀವು ತಿಂದ ಆಹಾರದಲ್ಲಿರುವ ಎಣ್ಣೆ ಕೊಬ್ಬಾಗಿ ಪರಿವರ್ತಿತವಾಗುವುದಿಲ್ಲ. ಬೆಳಗ್ಗಿನ ಅವಧಿಯಲ್ಲಿ ಬಿಸಿನೀರು ಕುಡಿಯಲು ಪ್ರಯತ್ನಿಸಿ. ಬೆಳಗ್ಗಿನ ವೇಳೆ ಬಿಸಿ ನೀರು ಕುಡಿದರೆ ಆಗುವ ಅದ್ಭುತ ಆರೋಗ್ಯ ಲಾಭಗಳು ಇಲ್ಲಿವೆ:

🔹 *ಕರುಳಿನ ಕ್ರಿಯೆ ಸರಾಗ*: ಬೆಳಗ್ಗೆ ಎದ್ದು ನೀವು ನೀರು ಕುಡಿದ ಕೂಡಲೇ ಮಲ ವಿಸರ್ಜನೆ ಮಾಡುವ ಅಗತ್ಯತೆ ಕಾಣಿಸುತ್ತದೆ. ಇದರಿಂದ ನಿಮ್ಮ ಕರುಳಿನ ಕ್ರಿಯೆಯು  ಸದಾ ನಿಯಮಿತವಾಗುತ್ತದೆ. ನೀವು ಪ್ರತೀ ಸಲ ಮಲ ವಿಸರ್ಜನೆ ಮಾಡಿದಾಗ ದೇಹವು ತ್ಯಾಜ್ಯದಿಂದ ಮುಕ್ತಿ ಪಡೆಯುತ್ತದೆ.

*∆ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ* ಪ್ರತೀ ದಿನ ನಾವು ಆಹಾರ ಅಥವಾ ಉಸಿರಾಟದ ಮೂಲಕ ಸೇವನೆ ಮಾಡುವಂತಹ ವಿಷಕಾರಿ ಅಂಶಗಳನ್ನು ನೀರು ಹೊರ ಹಾಕುತ್ತದೆ. ನೀವು ನೀರು ಕುಡಿದು ಮೂತ್ರ ವಿಸರ್ಜನೆ ಮಾಡಿದಾಗ ದೇಹದಲ್ಲಿನ ವಿಷಕಾರಿ ಅಂಶ ಹೊರ ಹೋಗುತ್ತದೆ.

*ಹಸಿವು ಹೆಚ್ಚಿಸುತ್ತದೆ*: ಆಗಾಗ ನಾವು ನೀರು ಕುಡಿಯುವುದರಿಂದ ಮತ್ತು ನಿಮ್ಮ ಕರುಳನ್ನು ಸ್ವಚ್ಛಗೊಳಿಸುವುದರಿಂದ ದೇಹದ ಆಯಾಸ ಕಡಿಮೆಯಾಗುತ್ತದೆ. ಬೆಳಗ್ಗೆ ಬೇಗನೆ ಹಸಿವಾಗುತ್ತದೆ ಮತ್ತು ಇದರಿಂದ ಸರಿಯಾಗಿ ಉಪಹಾರ ಮಾಡ ಬಹುದು.

*ತಲೆನೋವು ನಿವಾರಿಸುತ್ತದೆ*: ನಮಗೆ ನಿರ್ಜಲೀಕರಣದಿಂದಾಗಿ ಹೆಚ್ಚಿನ ಸಲ ತಲೆನೋವು ಕಾಣಿಸಿ ಕೊಳ್ಳುತ್ತದೆ. ಬೆಳಗ್ಗೆ ನೀರು ಕುಡಿಯುವುದರಿಂದ ನಿಮ್ಮ ದೇಹವನ್ನು ನಿರ್ಜಲೀಕರಣದಿಂದ ದೂರವಿಡ ಬಹುದು.

🔹 *ಕರುಳನ್ನು ಸ್ವಚ್ಛಗೊಳಿಸುತ್ತದೆ*: ಕರುಳಿನಲ್ಲಿ ಸಂಗ್ರಹವಾಗಿರುವ ಜಿಡ್ಡನ್ನು ನೀರು ಸ್ವಚ್ಛಗೊಳಿಸುತ್ತದೆ. ಇದರಿಂದ ದೇಹವು ಪೌಷ್ಠಿಕಾಂಶಗಳನ್ನು ಬೇಗನೆ ಹೀರಿ ಕೊಳ್ಳಲು ನೆರವಾಗುತ್ತದೆ.

*ಚಯಾಪಚಯ ಕ್ರಿಯೆಗೆ ವೇಗ* : ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ಚಯಾಪಚಯ ಕ್ರಿಯೆಯು ಸುಮಾರು ಶೇ.24ರಷ್ಟು ಹೆಚ್ಚಾಗುತ್ತದೆ. ಇದರಿಂದ ನಿಮ್ಮ ಆಹಾರವು ಬೇಗನೆ ಜೀರ್ಣವಾಗಿ, ಆಹಾರ ಸಮೀಕರಿಸಿ ತೂಕ ಕಳೆದು ಕೊಳ್ಳಲು ನೆರವಾಗುತ್ತದೆ.

*ರಕ್ತ ಕಣಗಳ ಸೃಷ್ಟಿ*: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಿಮ್ಮ ದೇಹವು ಕೆಂಪುರಕ್ತದ ಕಣಗಳನ್ನು ವೇಗವಾಗಿ ಉತ್ಪತ್ತಿ ಮಾಡಲು ನೆರವಾಗುತ್ತದೆ. ಇದು ಆಮ್ಲಯುಕ್ತ ರಕ್ತವಾಗಿರುವ ಕಾರಣ ನಿಮ್ಮ ಹೆಚ್ಚು ಕ್ರಿಯಾಶೀಲವಾಗಿರುವಂತೆ ಮಾಡುತ್ತದೆ.

🔹 *ತೂಕ ಕಳೆದು ಕೊಳ್ಳಲು*: ನೀವು ತೂಕ ಕಳೆದು ಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಗ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯಿರಿ. ಇದರಿಂದ ನೀವು ವಿಷಕಾರಿ ಟ್ರಾನ್ಸ್ ಫ್ಯಾಟ್ಸ್ ನ್ನು ಹೊರ ಹಾಕಲು ನೆರವಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬಿನ ಚಯಾಪಚಯ ಕ್ರಿಯೆಯ ಮಟ್ಟ ಹೆಚ್ಚುತ್ತದೆ.

*ಹೊಳೆಯುವ ತ್ವಚ್ಛೆಗೆ*: ನಿಮ್ಮ ಕರುಳಿನ ಕ್ರಿಯೆ ಸರಿಯಾಗಿ ಇರದ ಸಂದರ್ಭದಲ್ಲಿ ಮೊಡವೆ ಸಮಸ್ಯೆ ಕಾಣಿಸಿ ಕೊಳ್ಳುತ್ತದೆ. ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗಿದ್ದರೆ ನಿಮ್ಮ ಮುಖದಲ್ಲಿ ಮೊಡವೆಗಳು ಕಡಿಮೆಯಿರುತ್ತದೆ.

 *ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ*: ನಿಮ್ಮ ದೇಹದಲ್ಲಿ ನೀರಿನ ಅಂಶವನ್ನು ಕಾಯ್ದು ಕೊಳ್ಳಲು ನೀರು ತುಂಬಾ ಮುಖ್ಯ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದಾಗ ಸೋಂಕಿನ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ..

ಇದು ಸಂಗ್ರಹ ಮಾಹಿತಿ.

@@@@@@@@@@@@@@@

ಕಿಡ್ನಿಯಲ್ಲಿ ಕಲ್ಲಿದೆಯೇ? ಇಲ್ಲಿದೆ ಪರಿಹಾರ

 ಮನುಷ್ಯನನ್ನು ಕಂಗಾಲಾಗಿಸುವ ರೋಗಗಳಲ್ಲಿ ಕಿಡ್ನಿಯಲ್ಲಿ ಕಲ್ಲಾಗುವ ರೋಗವೂ ಒಂದಾಗಿದೆ. ಇದರ ನೋವೇನೆಂಬುವುದು ಅನುಭವಿಸಿದವರಿಗೆ ಮಾತ್ರ ಗೊತ್ತು. ಇದಲ್ಲದೇ ಇದು ಮಿತಿ ಮೀರಿ ಬೆಳೆದರೆ ಬಹಳ ಕಠಿಣ ಶಸ್ತ್ರ ಚಿಕಿತ್ಸೆಗೂ ಒಳಗಾಗಬೇಕಾಗುತ್ತದೆ.

ಸರ್ಜರಿ ಲೇಸರ್ ಹಾಯಿಸುವ ಮುಖಾಂತರವೂ ಕಿಡ್ನಿಯ ಕಲ್ಲನ್ನು ವೈದ್ಯರು ತೆಗೆಯುತ್ತಾರೆ. ಆದರೆ ಇದಕ್ಕೆ ಸಾಕಷ್ಟು ಖರ್ಚುಗಳನ್ನು ಮಾಡಬೇಕಾಗುತ್ತದೆ. ಕೆಲವೊಂದು ಬಾರಿ ಶಸ್ತ್ರ ಚಿಕಿತ್ಸೆಯ ಬಳಿಕವೂ ಮತ್ತೆ ಕಿಡ್ನಿಯಲ್ಲಿ ಕಲ್ಲಾಗುವುದೂ ಇದೆ. ಇದನ್ನು ತಡೆಗಟ್ಟಲು ಮನೆಯಲ್ಲೇ ಸುಲಭೋಪಾಯವಿದೆ. ಕೇವಲ 8ರಿಂದ 10 ದಿನಗಳೊಳಗಾಗಿ ನೀವು ಪರಿಹಾರ ಕಂಡುಕೊಳ್ಳ ಬಹುದು.

ಬೇಕಾದ ವಸ್ತುಗಳು
►600 ಮಿ.ಲೀ. ಮಿನರಲ್ ವಾಟರ್

►4 ಚಮಚ ನಿಂಬೆ ರಸ

►4 ಚಮಚ ಸಕ್ಕರೆ (ಬಿಳಿ)

►1 ಚಮಚ ಅರಸಿನ ಹುಡಿ

►10 ಗ್ರಾಂ. ಅಡುಗೆ ಸೋಡ (ಪೊಟಾಸಿಯಂ ನೈಟ್ರೇಟ್)

ತಯಾರಿಸುವ ವಿಧಾನ
ಒಂದು ಪಾತ್ರೆಯನ್ನು ತೆಗೆದುಕೊಂಡು ಅದನ್ನು ಒಲೆಯ ಮೇಲಿಟ್ಟು, ಅದರಲ್ಲಿ 600 ಮಿ.ಲೀ. ಮಿನರಲ್ ನೀರು ಹಾಕಿ ಕುದಿಸಬೇಕು. ಆ ನೀರಿನಲ್ಲಿ 4 ಚಮಚ ಸಕ್ಕರೆ (ಬಿಳಿ), 4 ಚಮಚ ನಿಂಬೆ ರಸ, 1 ಚಮಚ ಅರಸಿನ ಹುಡಿ, 10 ಗ್ರಾಂ ಅಡುಗೆ ಸೋಡ (ಪೊಟಾಸಿಯಂ ನೈಟ್ರೇಟ್) ಎಲ್ಲವನ್ನೂ ಸೇರಿಸಬೇಕು. ಅದನ್ನು ಕುದಿಸಿ-ಕುದಿಸಿ ಸುಮಾರು 3೦೦ ಮಿ.ಲೀ. ಆಗಬೇಕು. ನಂತರ ಅದನ್ನು ಕೆಳಗಿಟ್ಟು ತಣ್ಣಗಾಗಿಸಬೇಕು. ಬಳಿಕ ಅದನ್ನು ಆರಿಸಿ ಒಂದು ಬಾಟಲಲ್ಲಿ ತುಂಬಿಸಬೇಕು.

ಅದನ್ನು ದಿನಾಲೂ 5೦ಗ್ರಾಂ ನ ಹಾಗೆ ಮೂರು ಸಲ ಸೇವಿಸಬೇಕು. ಇದನ್ನು ಸತತವಾಗಿ 8 ರಿಂದ 10 ದಿನಗಳ ಕಾಲ ಸೇವಿಸಿದಾಗ ನೀವು ಕಿಡ್ನಿಯ ಕಲ್ಲಿನಿಂದ ಪರಿಹಾರ ಕಾಣಲಿದ್ದೀರಿ.

ಈ ಮದ್ದು ಸೇವಿಸುವ ಸಂದರ್ಭದಲ್ಲಿ ಮಾಂಸಾಹಾರ  ಸೇವನೆಯನ್ನು ನಿಲ್ಲಿಸಬೇಕು ಮತ್ತು ಬದನೆಕಾಯಿ ಹಾಗೂ ಪೇರಳೆ ಹಣ್ಣನ್ನು ತಿನ್ನಬಾರದು. ಉಪಯುಕ್ತ ಮಾಹಿತಿ . ದಯವಿಟ್ಟು  ಎಲ್ಲರಿಗೂ ಮಾಹಿತಿಯನ್ನು ರವಾನಿಸಿ.

@@@@@@@@@@@@@@@

*🌻🌻ರಾತ್ರಿಯೆಲ್ಲ ಮಲಗಿದ್ದರೂ ಬೆಳಗ್ಗೆ ಯಾಕ್ ಆಕಳಿಕೆ ಬರುತ್ತೆ ಅಂತ ಯೋಚನೆ ಮಾಡಿದೀರಾ?*🌻🌻


ಈವತ್ತಿನ ದಿನಗಳಲ್ಲಿ ಇದು ಕಾಮನ್ ಪ್ರಾಬ್ಲಂ. ರಾತ್ರಿಯಲ್ಲಾ ಮಲಗಿದ್ದರೂ ಬೆಳಗ್ಗೆ ಆಕಳಿಸ್ತಾನೇ ಇರ್ತೀವಿ. ಯಾಕಿಂಗಾಗ್ತಿದೆ ಅಂತ ಒಂದ್ಸಲಾನಾದ್ರು ಯೋಚ್ನೆ ಮಾಡಿದ್ದೀರಾ? ಅಯ್ಯೋ ಯಾರೋ ಬೇಜಾನ್ ನೆನಸ್ಕೋತಿರ್ಬೋದು ಅಂದ್ಕೊಂಡು ಸುಮ್ನಾಗಿರ್ತೀರ. ಯಾವತ್ತೋ ಒಂದ್ ದಿನ ಈ ತರ ಆದ್ರೆ ಪರ್ವಾಗಿಲ್ಲ. ಆಗಾಗ ಆಕಳಿಸೋದು ಆಗ್ತಾನೇ ಇರುತ್ತೆ ಅಂದ್ರೆ ಯಾರ್ಗೇ ಆಗ್ಲಿ ಒಂಥರಾ ಆಗುತ್ತೆ. ತಲೆ ಚಿಟ್ ಹಿಡುಯುತ್ತೆ. ಕೆಲಸದ್ಮೇಲೆ ಗಮನ ಕೊಡೋಕಾಗಲ್ಲ. ಪದೇಪದೇ ಆಕಳಿಸೋದನ್ನ ನೀವು ಸೀರಿಯಸ್ಸಾಗಿ ತಗೊಳ್ಳೇ ಬೇಕು. ರಾತ್ರಿ ಹೊತ್ತು ಒಳ್ಳೆ ನಿದ್ದೆ ಮಾಡಿದ್ರೂ ಆಕಳಿಕೆ ಬರ್ತಾ ಇದ್ರೆ ಅದಕ್ಕೆ ಮುಖ್ಯವಾಗಿ 5 ಕಾರಣಗಳಿರ್ತಾವೆ.

1. ಮನಸ್ಸಿನ ಮೇಲೆ ತುಂಬಾ ಒತ್ತಡ ಇದ್ದರೆ ಅಥವಾ ತುಂಬ ಬೇಜಾರಾಗಿದ್ರೆ ಹೀಗಾಗುತ್ತೆ

ಕೆಲವರು ಒಳ್ಳೆ ನಿದ್ದೆ ಮಾಡಿದ್ದೀನಿ ಅಂತ ಅಂದ್ಕೊಂಡಿರ್ತಾರೆ. ಆದರೆ ಮಾನಸಿಕವಾಗಿ ತುಂಬಾ ಒತ್ತಡದಲ್ಲಿರ್ತಾರೆ. ಕೆಲವರು ಡಿಫ್ರೆಸ್ ಆಗಿರ್ತಾರೆ. ಇದ್ರಿಂದ್ಲೂ ಪದೇಪದೇ ಆಕಳಿಕೆ ಬರ್ತಿರತ್ತೆ. ಮನಸ್ಸಲ್ಲಿ ಒತ್ತಡ ಇರೋದ್ರಿಂದ ಮಲಗಿದ್ರೂ ಒಳ್ಳೆ ನಿದ್ದೆ ಬಂದಿರಲ್ಲ. ಇದ್ರಿಂದ ದೇಹ ವಿಶ್ರಾಂತಿ ಸಿಕ್ಕಿರಲ್ಲ. ಆಗ್ಲೂ ಈ ರೀತಿ ಆಕಳಿಕೆ ಬರ್ತಾನೇ ಇರುತ್ತೆ. ಆದಷ್ಟು ಮನಸ್ಸಿನ ಒತ್ತಡ, ಉದ್ವೇಗವನ್ನ ಕಡಿಮೆ ಮಾಡ್ಕೊಳ್ಳೋದೆ ಈ ಸಮಸ್ಯೆಗೆ ಪರಿಹಾರ.


2. ಜಾಸ್ತಿ ನೀರು ಕುಡೀದೆ ಇರೋದ್ರಿಂದ ದೇಹ ಡೀಹೈಡ್ರೇಟ್ ಆಗಿ ಈ ತರ ಆಗುತ್ತೆ

ನಮ್ ದೇಹದ ಮುಕ್ಕಾಲು ಭಾಗ ನೀರಿನಿಂದ್ಲೇ ಆಗಿರೋದು. ಒಂದು ಗಿಡಕ್ಕೆ ನೀರು ಹಾಕ್ಲಿಲ್ಲ ಅಂದ್ರೆ ಅದು ಹೆಂಗ್ ಒಣಗೋಗುತ್ತೋ ನಮ್ ದೇಹಾನೂ ಅಷ್ಟೇ ಸೊರಗೋಗುತ್ತೆ. ಆದ್ರಿಂದ ಡೀಹೈಡ್ರೇಟ್ ಆಗ್ದಂಗೆ ನೋಡ್ಕೊಳ್ಳಿ. ನಮ್ ದೇಹಕ್ಕೆ ಅಗತ್ಯ ಇಲ್ದೇ ಇರೋಷ್ಟು ನೀರು ಸಿಗದಿದ್ದಾಗ್ಲೂ ಈ ರೀತಿ ಆಗುತ್ತೆ. ಹಾಗಂತೇಳಿ ಕಾಫಿ, ಟೀ, ಕೋಕ್ ಅದೂಇದೂ ಅಂತ ಕುಡಿದ್ರೆ ಆರೋಗ್ಯ ಇನ್ನಷ್ಟು ಕೆಡುತ್ತೆ. ಚೆನ್ನಾಗಿ ನೀರು ಕುಡೀರಿ ಸಾಕು. ಇದ್ರಿಂದ ದೇಹದ ಅಂಗಗಳು ಚುರುಕಾಗಿ ಕೆಲಸ ಮಾಡ್ತಾವೆ. ಸುಸ್ತಾಗಲ್ಲ. ಒಳ್ಳೆ ನಿದ್ದೆ ಬರುತ್ತೆ. ಆಕಳಿಕೆ ತೂಗಡಿಕೆ ಎಂತದ್ದೂ ಬರಲ್ಲ.


3. ಹಾಳೂಮೂಳು ತಿನ್ನೋದ್ರಿಂದ್ಲೂ ಬೆಳಗ್ಗೆ ಹೊತ್ತು ಆಕಳಿಕೆ ಬರುತ್ತೆ

ನಮ್ ದೇಹಕ್ಕೆ ಬೇಕಾಗಿರೋಂತ ಪುಷ್ಟಿಕರವಾದ ಆಹಾರ ಬಿಟ್ಟು ಎಣ್ಣೆ ಜಾಸ್ತಿ ಇರೋಂತ, ಕರಿದ ಉರಿದ, ಜಂಕ್ ಫುಡ್ ತಿನ್ನೋದ್ರಿಂದ್ಲೂ ಈ ರೀತಿ ಸಮಸ್ಯೆ ಬರುತ್ತೆ. ಜಂಕ್ ಫುಡ್ ರುಚಿರುಚಿಯಾಗಿರುತ್ತೆ. ಆದರೆ ಅದ್ರಿಂದ ನಮ್ ದೇಹಕ್ಕೆ ಪೌಷ್ಟಿಕಾಂಶಗಳು ಸಿಗಲ್ಲ. ಇದ್ರಿಂದ ಸುಸ್ತಾಗೋದು, ಮಂಕ್ ಕವಿದಂಗಿರೋದು ಆಗಿ ಆಕಳಿಕೆ ಶುರುವಾಗುತ್ತೆ. ಆರೋಗ್ಯದ ದೃಷ್ಟಿಯಿಂದ ಜಂಕ್ ಫುಡ್ ಬಿಡೋದು ಒಳ್ಳೇದು. ಆಗ ಬೆಳಗ್ಗೆ ಹೊತ್ತು ಆಕಳಿಕೆ ಬರೊಲ್ಲ.



4. ಕೆಲವು ತರದ ಆರೋಗ್ಯದ ಸಮಸ್ಯೆಗಳು ಇದ್ದರೂ ಹೀಗಾಗುತ್ತೆ

ಮೇಲೆ ಹೇಳಿದ ಕಾರಣಗಳ್ಳದೆ ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ್ಲೂ ಈ ರೀತಿ ಆಗೋ ಚಾನ್ಸ್ ಇದೆ. ವಿಟಮಿನ್ ಕೊರತೆ, ರಕ್ತದ ಕೊರತೆ, ಥೈರಾಯ್ಡ್ ಪ್ರಾಬ್ಲಂ ಇನ್ನೂ ಬೇರೆ ಏನಾದ್ರೂ ಆರೋಗ್ಯ ಸಮಸ್ಯೆಗಳಿರ್ಬೋದು. ಡಾಕ್ಟರ್ ಹತ್ರ ಎಲ್ಲಾ ಪರೀಕ್ಷೆಗಳನ್ನ ಮಾಡಿಸ್ಕೊಳ್ಳೋದ್ರಿಂದ ಏನ್ ಪ್ರಾಬ್ಲಂ ಅಂತ ಗೊತ್ತಾಗುತ್ತೆ. ಹಾಗಂತ 'ಸ್ವಯಂ ವೈದ್ಯ' ಮಾಡ್ಕೊಳ್ಳೋದಕ್ಕೆ ಹೋಗ್ಬೇಡಿ. ಇದ್ದಕ್ಕಿದ್ದಂತೆ ವ್ಯಾಯಾಮ ಮಾಡೋದು, ವಾಕಿಂಗ್ ಹೋಗೋದು ಬೇಡ. ವೈದ್ಯರನ್ನ ಭೇಟಿ ಆಗೋದು ಉತ್ತಮ. ಯಾಕಂದ್ರೆ ನಿಮ್ ಆರೋಗ್ಯಾನ ಕಾಪಾಡ್ಕೊಳ್ಳೋದು ನಿಮ್ ಕೈಯಲ್ಲೇ ಇದೆ.



5. ಮೈ ಬಗ್ಗಿಸೋದು ಕಡಿಮೆ (ಅಥವಾ ಇಲ್ಲವೇ ಇಲ್ಲ) ಅಂದರೂ ಹೀಗಾಗುತ್ತೆ

ನಮ್ ದೇಹಕ್ಕೆ ವ್ಯಾಯಾಮ ಬೇಕೆ ಬೇಕು. ಇಲ್ಲಾ ಅಂದ್ರೆ ಒಳ್ಳೆ ನಿದ್ದೆ ಬರಲ್ಲ. ವ್ಯಾಯಾಮವನ್ನ ಜೀವನದಲ್ಲಿ ಒಂದು ಭಾಗ ಆಗಿರ್ಬೇಕು. ದಿನನಿತ್ಯ ಮಾಡ್ಲೇಬೇಕು. ಇಲ್ಲಾ ಅಂದ್ರೆ ದೇಹಕ್ಕೆ ಒಳ್ಳೆ ನಿದ್ದೆ ಸಿಗಲ್ಲ. ಇದ್ರಿಂದ ಬೆಳಗ್ಗೆ ಹೊತ್ತು ಆಕಳಿಸೋದು ಜಾಸ್ತಿ ಆಗುತ್ತೆ. ದಿನನಿತ್ಯ ದೈಹಿಕವಾದಂತ ವ್ಯಾಯಾಮ ಮಾಡ್ಲೇಬೇಕು. ಆಗ ಈ ಸಮಸ್ಯೆ ಇರಲ್ಲ.                    


@@@@@@@@

ಅಂಗೈಯಲ್ಲಿ ಆರೋಗ್ಯ

♦ *ಬಿಕ್ಕಳಿಕೆ ಬರುವುದೇ :* ಹುರುಳಿ ಕಷಾಯ ಸೇವಿಸಿರಿ.
♦ *ಕಫ ಬರುವುದೇ :* ಶುಂಠಿ ಕಷಾಯ ಸೇವಿಸಿರಿ.
♦ *ಹೊಟ್ಟೆಯಲ್ಲಿ ಹರಳಾದರೇ :* ಬಾಳೆದಿಂದಿನ ಪಲ್ಯ ಸೇವಿಸಿರಿ.
♦ *ಬಿಳಿ ಕೂದಲೇ :* ಮೂಗಿನಲ್ಲಿ ಬೇವಿನ ಎಣ್ಣೆ ಹಾಕಿರಿ.
♦ *ಮರೆವು ಬರುವುದೇ :* ನಿತ್ಯ ಸೇವಿಸಿ ಜೇನು.
♦ *ಕೋಪ ಬರುವುದೇ :* ಕಾಳು ಮೆಣಸು ಸೇವಿಸಿ.
♦ *ಮೂಲವ್ಯಾಧಿಯೇ :* ನಿತ್ಯ ಸೇವಿಸಿ ಎಳ್ಳು.
♦ *ಮುಪ್ಪು ಬೇಡವೇ :* ಗರಿಕೆ ರಸ ಸೇವಿಸಿ.
♦ *ನಿಶಕ್ತಿಯೇ :* ದೇಶಿ ಆಕಳ ಹಾಲು ಸೇವಿಸಿ.
♦ *ಇರುಳುಗಣ್ಣು ಇದೆಯೇ :* ತುಲಸಿ ರಸ ಕಣ್ಣಿಗೆ ಹಾಕಿ.
♦ *ಕುಳ್ಳಗಿರುವಿರೇ :* ನಿತ್ಯ ಸೇವಿಸಿ ನಿಂಬೆ ಹಣ್ಣು.
♦ *ತೆಳ್ಳಗಿರುವಿರೆ :* ನಿತ್ಯ ಸೇವಿಸಿ ಸೀತಾ ಫಲ.
♦ *ತೆಳ್ಳಗಾಗಬೇಕೇ :* ನಿತ್ಯ ಸೇವಿಸಿ ಬಿಸಿ ನೀರು.
♦ *ಹಸಿವಿಲ್ಲವೇ :* ನಿತ್ಯ ಸೇವಿಸಿ ಓಂ ಕಾಳು.
♦ *ತುಂಬಾ ಹಸಿವೇ :* ಸೇವಿಸಿ ಹಸಿ ಶೇಂಗಾ.
♦ *ಬಾಯಾರಿಕೆಯೇ :* ಸೇವಿಸಿ ತುಳಸಿ.
♦ *ಬಾಯಾರಿಕೆ ಇಲ್ಲವೇ :* ಸೇವಿಸಿ ಬೆಲ್ಲ.
♦ *ಸಕ್ಕರೆ ಕಾಯಿಲೆಯೇ :* ಬಿಡಿ ಸಕ್ಕರೆ, ಸೇವಿಸಿ ರಾಗಿ.
♦ *ರಕ್ತ ಹೀನತೆಯೇ :* ನಿತ್ಯ ಸೇವಿಸಿ ಪಾಲಕ್ ಸೊಪ್ಪು.
♦ *ತಲೆ ಸುತ್ತುವುದೇ :* ಬೆಳ್ಳುಳ್ಳಿ ಕಷಾಯ ಸೇವಿಸಿ.
♦ *ಬಂಜೆತನವೇ :* ಔದುಂಬರ ಚಕ್ಕೆ ಕಷಾಯ
♦ *ಸ್ವಪ್ನ ದೋಷವೇ :* ತುಳಸಿ ಕಷಾಯ ಸೇವಿಸಿ.
♦ *ಅಲರ್ಜಿ ಇದೆಯೇ :* ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಹೃದಯ ದೌರ್ಬಲವೇ :* ಸೋರೆಕಾಯಿ ರಸ ಸೇವಿಸಿ.
♦ *ರಕ್ತ ದೋಷವೇ :* ಕೇಸರಿ ಹಾಲು ಸೇವಿಸಿ.
♦ *ದುರ್ಗಂಧವೇ :* ಹೆಸರು ಹಿಟ್ಟು ಸ್ನಾನ ಮಾಡಿ.
♦ *ಕೋಳಿ ಜ್ವರಕ್ಕೆ :* ತುಳಸಿ,ಅಮೃತ ಬಳ್ಳಿ ಕಷಾಯ ಸೇವಿಸಿ.
♦ *ಕಾಲಲ್ಲಿ ಆಣಿ ಇದೆಯೇ :* ಉತ್ತರಾಣಿ ಸೊಪ್ಪು ಕಟ್ಟಿರಿ.
♦ *ಮೊಣಕಾಲು ನೋವು :* ನಿತ್ಯ ಮಾಡಿ ವಜ್ರಾಸನ.
♦ *ಸಂಕಟ ಆಗುವುದೇ :* ಎಳನೀರು ಸೇವಿಸಿ.
♦ *ಮಗು ಹಾಸಿಗೆಯಲ್ಲಿ ಮೂತ್ರ ಮಾಡುವುದೇ :* ನಿತ್ಯ ಕೊಡಿ ಜೇನು.
♦ *ಜಲ ಶುದ್ಧಿ : ಮಾಡಬೇಕೇ :* ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ,ಅದರಲ್ಲಿ ತುಳಸಿ ಎಲೆ ಹಾಕಿರಿ.
♦ *ವಾಂತಿಯಾಗುವುದೇ :* ಎಳನೀರು-ಜೇನು ಸೇವಿಸಿ.
♦ *ಭೇದಿ ತುಂಬಾ ಆಗುವುದೇ :* ಅನ್ನ ಮಜ್ಜಿಗೆ ಊಟ ಮಾಡಿ.
♦ *ಹಲ್ಲು ಸಡಿಲವೇ :* ದಾಳಿಂಬೆ ಸಿಪ್ಪೆಯ ಕಷಾಯ ಸೇವಿಸಿ.
♦ *ಕಾಮಾಲೆ ರೋಗವೇ :* ನಿತ್ಯ ಮೊಸರು ಸೇವಿಸಿ.
♦ *ಉಗುರು ಸುತ್ತು ಇದೆಯೇ :* ನಿಂಬೆ ಹಣ್ಣಿನ ಒಳಗೆ ಬೆರಳು ಇಡಿ.
♦ *ಎದೆ ಹಾಲಿನ ಕೊರತೆಯೇ :* ನಿತ್ಯ ಸೇವಿಸಿ ಎಳ್ಳು.
♦ *ಎಲುಬುಗಳ ನೋವೇ :* ನಿತ್ಯ ಸೇವಿಸಿ ಮೆಂತ್ಯೆ ಬೆಳ್ಳುಳ್ಳಿ.
♦ *ತುಟಿ ಸೀಳಿದಿಯೇ :* ಹಾಲಿನ ಕೆನೆ ಹಚ್ಚಿರಿ.
♦ *ಪಿತ್ತವೇ :* ಚಹಾ ಬಿಟ್ಟುಬಿಡಿ.
♦ *ಉಷ್ಣವೇ :* ಕಾಫಿ ಬಿಟ್ಟುಬಿಡಿ.
♦ *ಚಂಚಲವೇ :* ನಾಸಿಕದಲ್ಲಿ ದೇಶಿ ತುಪ್ಪ ಹಾಕಿ.
♦ *ಬಹು ಮೂತ್ರವೇ :* ದಾಲ್ಚಿನ್ನಿ ಕಷಾಯ ಸೇವಿಸಿ.
♦ *ಮೂತ್ರ ತಡೆಗೆ :* ಜೀರಿಗೆ ಕಷಾಯ ಸೇವಿಸಿ.
♦ *ಆಯಾಸವೇ :* ಅಭ್ಯಂಗ ಸ್ನಾನ ಮಾಡಿ.
♦ *ಉಗ್ಗು ತೊದಲು ಇದ್ದರೆ :* ದಿನಾಲು ಶಂಖ ಊದಿರಿ.
♦ *ಹಿಮ್ಮಡಿ ಸೀಳುವುದೇ :* ಔಡಲ ಎಣ್ಣೆ + ಸುಣ್ಣ ಕಲಸಿ ಲೇಪಿಸಿ

MURARJI | aplication / question papers

 (ಡೌನ್ ಲೋಡ್ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ )













👉ಮುರಾರ್ಜಿ ಪರೀಕ್ಷೆ ಅಧಿಕೃತ ಕೀ ಉತ್ತರಗಳು




👉ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಅರ್ಜಿ ಹಾಕುವ ದಿನಾಂಕವನ್ನು 27-01-2025 ರ ವರೆಗೆ ವಿಸ್ತರಿಸಲಾಗಿದೆ
👇👇👇







 


4th std

ಸೇತುಬಂಧ ಸಮಗ್ರವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆಪಾಠ ಯೋಜನೆಗಳು
FA 1 FA 2FA 3
FA 4
SA 1SA 2NOTESText Books 
FLNಗ್ರೇಡ್ - GRADE ಪ್ರಗತಿ ಪತ್ರಗಳುವೇಳಾಪಟ್ಟಿ

Cte


SCHOOL - ಶಾಲಾ ಉಪಯುಕ್ತ

Age calculator

No Bag day
ನಾವು ಮನುಜರುಗಣಿತ ಗಣಕ21 ದಿನಗಳ ಓದು
100 ದಿನಗಳ ಓದುFLN PROGRAMಕಲಿಕಾ ಹಬ್ಬಪ್ರೇರಣಾ ಕ್ಲಬ್
ಸಚೇತನ ಕಾರ್ಯಕ್ರಮವೀರಗಾಥಾ program20 ಅಂಶಗಳ ಕಾರ್ಯಕ್ರಮ ಜಯಂತಿಗಳು
ನಮೂನೆಗಳು ಗೋಡೆ ಬರಹಗಳುಶೈಕ್ಷಣಿಕ ಪ್ರವಾಸ  ಭಾಷಣಗಳು

ADMISSION ದಾಖಲಾತಿ SATS LOGINPOST SANCTIONEDU DICE + LOGIN
10 ಅಂಶಗಳ ಕಾರ್ಯಕ್ರಮSDMC ಸಮಗ್ರPM - SHRIಅನುದಾನ ಬಳಕೆ
SAPSDPವಿದ್ಯಾಂಜಲಿ 2.0ಗ್ರಂಥಾಲಯ ಅನುದಾನ
TOFIEಪ್ರತಿಭಾ ಕಾರಂಜಿSSP ಶಾಲಾ ಲಾಗಿನ್FIND SCHOOL

ಶೈಕ್ಷಣಿಕ ಮಾರ್ಗದರ್ಶಿವಾರ್ಷಿಕ ಪಠ್ಯ ವಿಭಜನೆಅಂದಾಜು ಪತ್ರಿಕೆತರಗತಿವಾರು ವೇಳಾಪಟ್ಟಿ
ರಸಪ್ರಶ್ನೆ ಕಾರ್ಯಕ್ರಮ govt ಸಸ್ಯ ಶ್ಯಾಮಲಾವಿದ್ಯಾ ವಾಹಿನಿ
ಶಾಲಾ ಕ್ರೋಢಿಕೃತ ವೇಳಾಪಟ್ಟಿ
ಸರಕಾರಿ ರಜೆಗಳುಶಾಲಾ ವಿದ್ಯಾರ್ಥಿ ಸಂಘಗಳುಮುಖ್ಯ ಗುರುಗಳ ಕರ್ತವ್ಯಗಳುText Books 
ಉಚಿತ ವಿದ್ಯುತ್ಗ್ರೇಡ್ - GRADEಪ್ರಗತಿ ಪತ್ರಗಳುಶಿಕ್ಷಕರ ವೇಳಾಪಟ್ಟಿ

Gjhn

General / A112 / INCOME TAX - IT RETURN

                    INCOME TAX

 INCOME TAX RETURN WEBSITE

👉INCOME TAX CALCULATER - 1 (DOWN LOAD)2023-24 (ASSESSMENT YEAR 2024-25)











=> ಆದಾಯ ತೆರಿಗೆ - 2017-18 (assessment year 2018-19) (<=click)
****************************************
********INCOME TAX - 2017-18********

>>>Income tax calculation sheet 2016-17 <== ಇಲ್ಲಿ ಕ್ಲಿಕ್ ಮಾಡಿ

>>>ಆದಾಯ ತೆರಿಗೆ -2017-18 ರ ಬಗ್ಗೆ ಸಂಪೂರ್ಣ ಮಾಹಿತಿ (<< PDF file)

>>>Tax form ತುಂಬುವಾಗ ತೆರಿಗೆ ಭರಣಾ ದಿಂದ ರಿಯಾಯಿತಿ ಪಡೆಯಲು ಇರುವ ಕಲಂಗಳು. :-


ಆದಾಯ ತೆರಿಗೆ ಕುರಿತಾದ ಸುದ್ದಿಗಳು :-

(2)💐 *ಆದಾಯದ ಮೇಲಿನ ತೆರಿಗೆ ಇಳಿಕೆ*

ನವದೆಹಲಿ: ಈ ಬಾರಿ ಬಜೆಟ್‌ನಲ್ಲಿ ವಾರ್ಷಿಕ ₹2.5 ಲಕ್ಷದಿಂದ ₹5 ಲಕ್ಷದವರೆಗಿನ  ಆದಾಯದ ಮೇಲಿನ  ತೆರಿಗೆಯನ್ನು ಶೇ 10ರಿಂದ ಶೇ 5ಕ್ಕೆ ಇಳಿಸಲಾಗಿದೆ.

ಆದರೆ ಆದಾಯ ತೆರಿಗೆ ಮಿತಿಯನ್ನು ₹ 3 ಲಕ್ಷಕ್ಕೆ ಏರಿಸಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ತೆರಿಗೆದಾರರರ  ತೆರಿಗೆ ಹೊರೆಯನ್ನು ಅರ್ಧದಷ್ಟು ತಪ್ಪಿಸಲಿರುವ ಈ ನಿರ್ಧಾರ ಮಧ್ಯಮ ವರ್ಗದವರಲ್ಲಿ ತುಸು ನೆಮ್ಮದಿ ಮೂಡಿಸಿದೆ. ₹5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ  ₹7,725 ಉಳಿತಾಯವಾಗಲಿದ್ದು, ₹5 ಲಕ್ಷಕ್ಕಿಂತ ಮೇಲಿನ ಎಲ್ಲ  ಆದಾಯ ವರ್ಗದವರಿಗೆ ಗರಿಷ್ಠ ₹12,500 ಉಳಿತಾಯವಾಗಲಿದೆ.

*ಹೆಚ್ಚುವರಿ ತೆರಿಗೆ:*

ವಾರ್ಷಿಕ ₹50 ಲಕ್ಷದಿಂದ ₹1 ಕೋಟಿ ವರೆಗಿನ  ಆದಾಯದ ಮೇಲೆ ಶೇ 10 ರಷ್ಟು  ಹೆಚ್ಚುವರಿ ತೆರಿಗೆ ವಿಧಿಸಲಾಗಿದೆ.
₹1 ಕೋಟಿಗಿಂತ ಹೆಚ್ಚು ಆದಾಯದ ಮೇಲೆ  ವಿಧಿಸಲಾಗುತ್ತಿದ್ದ  ಶೇ 15 ಹೆಚ್ಚುವರಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಯಥಾಸ್ಥಿತಿ ಕಾಪಾಡಿಕೊಳ್ಳಲಾಗಿದೆ. ತೆರಿಗೆ ದರ ವಿನಾಯ್ತಿಯಿಂದಾಗಿ ಸರ್ಕಾರದ ಬೊಕ್ಕಸದ ಮೇಲೆ ಪ್ರತಿವರ್ಷ ₹15,500 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ, ಮತ್ತೊಂದೆಡೆ ಹೆಚ್ಚುವರಿ ತೆರಿಗೆ ಸಂಗ್ರಹದಿಂದ ₹2,700 ಕೋಟಿ ವರಮಾನ ಬರಲಿದೆ.

ಹಿರಿಯ ನಾಗರಿಕರಿಗೂ ಇದೆ ಕೊಡುಗೆ: 60 ವರ್ಷಕ್ಕೂ ಹೆಚ್ಚಿನ ಹಿರಿಯ ನಾಗರಿಕರ ₹3 ಲಕ್ಷದವರೆಗೆ ಆದಾಯಕ್ಕೆ ಯಾವುದೇ ತೆರಿಗೆ ವಿಧಿಸಿಲ್ಲ.  80 ವರ್ಷ ಮೇಲಿನ ಅತ್ಯಂತ ಹಿರಿಯ ನಾಗರಿಕರ ತೆರಿಗೆ ಆದಾಯ ಮಿತಿಯನ್ನು ₹5 ಲಕ್ಷಕ್ಕೆ ಏರಿಸಲಾಗಿದೆ.

ಎರಡೂ ವಿಭಾಗದಲ್ಲಿ ₹5 ಲಕ್ಷದಿಂದ ₹10 ಲಕ್ಷದವರೆಗಿನ ಆದಾಯಕ್ಕೆ ಶೇ 20ರಷ್ಟು ತೆರಿಗೆ ವಿಧಿಸಲಾಗಿದೆ. ₹10 ಲಕ್ಷಕ್ಕೂ ಹೆಚ್ಚಿನ ಆದಾಯದ ಮೇಲಿನ ತೆರಿಗೆ ದರವನ್ನು ಶೇ 30ಕ್ಕೆ ನಿಗದಿಗೊಳಿಸಲಾಗಿದೆ.

*ತೆರಿಗೆ ವ್ಯಾಪ್ತಿ ವಿಸ್ತಾರ:*

ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಜನರನ್ನು ತರಲು ಕೇವಲ ಒಂದು ಪುಟದ ಸರಳ ಆದಾಯ ತೆರಿಗೆ ಮಾಹಿತಿ ಸಲ್ಲಿಕೆ ಅರ್ಜಿಯನ್ನು (ಐಟಿ ರಿಟರ್ನ್ಸ್‌) ಮುದ್ರಿಸುವುದಾಗಿ ಸಚಿವ ಜೇಟ್ಲಿ ತಿಳಿಸಿದ್ದಾರೆ.

‘ವಾಣಿಜ್ಯ ಆದಾಯ ಹೊರತುಪಡಿಸಿ ₹5 ಲಕ್ಷದವರೆಗೆ  ವೈಯಕ್ತಿಕ ಆದಾಯ ಹೊಂದಿರುವ ವ್ಯಕ್ತಿಗಳು ಈ ಒಂದು ಪುಟದ ಅರ್ಜಿ ತುಂಬಬೇಕಾಗುತ್ತದೆ.  ಮೊದಲ ಬಾರಿಗೆ ತೆರಿಗೆ ಮಾಹಿತಿ ಸಲ್ಲಿಸುವ ತೆರಿಗೆದಾರರಿಗೆ ಕೆಲವು ವಿನಾಯ್ತಿಗಳನ್ನು ನೀಡಲಾಗುವುದು’ ಎಂದು ಅವರು ತಿಳಿಸಿದರು.

ಹೆಚ್ಚಿನ ಜನರು ತೆರಿಗೆ ವ್ಯಾಪ್ತಿಗೆ ತರಲು ಶೇ 5ರಷ್ಟು ಅತ್ಯಂತ ಕಡಿಮೆ ತೆರಿಗೆ ದರ ನಿಗದಿ ಮಾಡಲಾಗಿದೆ. ಜನರು ತೆರಿಗೆಯಿಂದ ತಪ್ಪಿಸಿಕೊಳ್ಳುವ ಬದಲು ಅತ್ಯಂತ ಕಡಿಮೆ ಪ್ರಮಾಣದ ತೆರಿಗೆ ಪಾವತಿಸುವ ಮೂಲಕ ದೇಶ ಕಟ್ಟುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಜೇಟ್ಲಿ ಮನವಿ ಮಾಡಿದರು.

* ನೌಕರ ವರ್ಗದ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಬಜೆಟ್‌ ವಿಫಲವಾಗಿದೆ. ಪ್ರಾಮಾಣಿಕವಾಗಿ ತೆರಿಗೆ ಪಾವತಿಸು ವವರಿಗೆ ಇನ್ನೂ ಸ್ವಲ್ಪ ವಿನಾಯ್ತಿ ನೀಡಬಹುದಿತ್ತು.
–ಎಂ.ಕೆ.ನರಸಿಂಹ ಮೂರ್ತಿ, ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆ (ಐಎನ್‌ಬಿಇಎಫ್‌) ಕರ್ನಾಟಕ ಘಟಕ

*ಯಾರು ಹೆಚ್ಚು, ಯಾರು ಕಡಿಮೆ?*

* ₹3.5 ಲಕ್ಷ ಆದಾಯ ಹೊಂದಿದ ವ್ಯಕ್ತಿ ₹5,150 ಬದಲು ₹2,575 ತೆರಿಗೆ ಪಾವತಿಸಿದರೆ ಸಾಕು

* ₹5ಲಕ್ಷದಿಂದ ₹50 ಲಕ್ಷ ಆದಾಯ ಹೊಂದಿದವರ ತೆರಿಗೆಯಲ್ಲಿ ₹12,500 ಕಡಿಮೆಯಾಗಲಿದೆ
* ₹50 ರಿಂದ ₹1 ಕೋಟಿ ಆದಾಯ ಹೊಂದಿದವರು ಶೇ 10ರಷ್ಟು ಹೆಚ್ಚುವರಿ ತೆರಿಗೆ ಪಾವತಿಸಬೇಕಾಗುತ್ತದೆ
* ₹60 ಲಕ್ಷ ಆದಾಯ ಹೊಂದಿದ ವ್ಯಕ್ತಿ ₹15,91,865ರ ತೆರಿಗೆ ಬದಲಾಗಿ ₹17,36,889 ತೆರಿಗೆ ಪಾವತಿಸಬೇಕಾಗುತ್ತದೆ*

@@@@@@@@@@@@@@@@@@@@@@


(01)*ಆದಾಯ ತೆರಿಗೆ ವಿನಾಯತಿ ಪಡೆಯುವ ವಿಧಾನಗಳು*



ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಉದ್ಯೋಗ ಹಾಗೂ ಅಂತಹ ಉದ್ಯೋಗದಿಂದ ದುಡಿಮೆ ಇರುವುದು ಸಹಜ. ಇದನ್ನು  ವ್ಯಕ್ತಿಯ ಆದಾಯವೆಂದು ಪರಿಗಣಿಸಲಾಗುತ್ತಿದೆ. ತನ್ನ ಪ್ರಜೆಗಳಿಗೆ ಮೂಲ  ಸೌಕರ್ಯಗಳನ್ನು ಒದಗಿಸಲು ಕೇಂದ್ರ ಸರ್ಕಾರ ಆದಾಯ ತೆರಿಗೆ ವಿಧಿಸುತ್ತದೆ.  ಆದಾಯ ತೆರಿಗೆ ಎಂದಾಕ್ಷಣ ಬಹಳಷ್ಟು ಮಂದಿ ಬೆಚ್ಚಿಬೀಳುತ್ತಾರೆ! ‘ದುಡಿದದ್ದೆಲ್ಲಾ ಇನ್‌ಕಮ್‌ ಟ್ಯಾಕ್ಸ್‌ ಕೊಳ್ಳೇ ಹೋಯಿತು’ ಎನ್ನುವ ಉದ್ಗಾರ ಜನ ಸಾಮಾನ್ಯರಿಂದ ಕೇಳಿ ಬರುತ್ತದೆ.

ಆದಾಯ ತೆರಿಗೆ ಎನ್ನುವ ಪದದ ಅರ್ಥ ಆದಾಯವಿದ್ದವರೆಲ್ಲಾ ಆದಾಯ ತೆರಿಗೆ ಕೊಡಬೇಕು ಎಂದಲ್ಲ.  ನಿರ್ದಿಷ್ಟ ಮಟ್ಟದ ಆದಾಯ ಇರುವ ಪ್ರಜೆಗಳಿಂದ ಸರ್ಕಾರ ತೆರಿಗೆ ವಸೂಲಾತಿ ಮಾಡುತ್ತದೆ. ಇದೇ ವೇಳೆ ತೆರಿಗೆ ವಿನಾಯಿತಿ ಪಡೆಯಲು ಕೂಡಾ ಬಹಳಷ್ಟು ಉಳಿತಾಯ ಯೋಜನೆಗಳನ್ನು ಸರ್ಕಾರ ಘೋಷಿಸಿದೆ. ಈ ಪ್ರಕ್ರಿಯೆಯಲ್ಲಿ ತೆರಿಗೆ ಹೊರೆಯಿಂದಹೊರಬಂದು ಉಳಿತಾಯ ಸಾಧ್ಯವಾಗುತ್ತದೆ.  ಹೀಗೆ ಕಡ್ಡಾಯವಾಗಿ ಉಳಿಸಿದ ಹಣ ಆಪತ್ತಿನಲ್ಲಿ ಸಂಪತ್ತಾಗಿ ಪರಿಗಣಿಸುತ್ತದೆ.

ಯಾವುದೇ ಕಾರ್ಯ ಯಶಸ್ವಿಯಾಗಲು ಕಟ್ಟಡ ಕಟ್ಟುವ ಮುನ್ನ ನೀಲಿನಕ್ಷೆ (Blue Print) ತಯಾರಿಸಿ, ನಕ್ಷೆಯಲ್ಲಿ ನಮೂದಿಸಿದಂತೆ ಕಾರ್ಯ ನಿರ್ವಹಿಸುವ ಹಾಗೆ, ಆದಾಯ ತೆರಿಗೆಗೆ ಒಳಗಾಗುವ ಪ್ರತಿಯೊಬ್ಬ  ವ್ಯಕ್ತಿಯೂ ಏಪ್ರಿಲ್‌ ಒಂದರಿಂದಲೇ ತನ್ನ ಆದಾಯಕ್ಕೆ ಅನುಗುಣವಾಗಿ ಬರಬಹುದಾದ ತೆರಿಗೆಯನ್ನು ಪರಿಗಣಿಸಿ, ತೆರಿಗೆ ಉಳಿಸಲು, ಉಳಿತಾಯದ ಯೋಜನೆ ಸಿದ್ಧಪಡಿಸಿ, ಅದರಂತೆ ನಡೆದುಕೊಂಡಲ್ಲಿ ತೆರಿಗೆಯ ಭಾರ  ಹಗುರವಾಗಿ  ಆರ್ಥಿಕ ಭದ್ರ ಬುನಾದಿ ಹಾಕಿದಂತಾಗುತ್ತದೆ.

ಸೆಕ್ಷನ್‌ 87 ಆಧಾರದ ಮೇಲೆ, ವೈಯಕ್ತಿಕ ಆದಾಯ ತೆರಿಗೆಯವರಿಗೆ ಅವರ ಆದಾಯ ₹ 5 ಲಕ್ಷದೊಳಗೆ  ಇರುವಲ್ಲಿ, ₹ 2,000 ವಿನಾಯತಿ ತೆರಿಗೆಯಲ್ಲಿ ಪಡೆಯಬಹುದು. ಹೀಗೆ ವಿನಾಯ್ತಿ  ಪಡೆಯುವಾಗ ₹ 2000 ತೆರಿಗೆ ಅಥವಾ ನಿಜವಾಗಿ ಪಾವತಿಸುವ ತೆರಿಗೆ, ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಬೇಕು.

*ಸಂಬಳ ಪರಿಷ್ಕರಣೆಯಿಂದಾಗಿ ಬರುವ ಸಂಬಳ ಹಿಂಬಾಕಿಯಲ್ಲಿ ಆದಾಯ ತೆರಿಗೆ ವಿನಾಯತಿ ಪಡೆಯುವ ಸೌಲತ್ತು.
ಈ ಆರ್ಥಿಕ ವರ್ಷದಲ್ಲಿ, ಬ್ಯಾಂಕ್‌ ನೌಕರರ ಸಂಬಳ ಪರಿಷ್ಕರಣೆಯಾಗಿದ್ದು, 2012 ರಿಂದಲೇ ಸಂಬಳ ಹೆಚ್ಚಳದ ಹಿಂಬಾಕಿ (Salary Arrears) ಪಡೆದಿರುವುದನ್ನು ಇಲ್ಲಿ ಸ್ಮರಿಸಬಹುದು. ಸೆಕ್ಷನ್‌ 89(1) ಆಧಾರದ ಮೇಲೆ ಯಾವುದೇ ನೌಕರರು, ಸಂಬಳ ಪರಿಷ್ಕರಣೆಯಿಂದಾಗಿ, 3 ವರ್ಷಗಳ ತನಕ ತಮಗೆ ಬರಬೇಕಾದ, ಸಂಬಳದ ಹಿಂಬಾಕಿ ಪಡೆದಾಗ, ಕ್ರಮವಾಗಿ ಈ ಆದಾಯ ಹಿಂದಿನ ವರ್ಷಗಳಿಗೆ ಸೇರಿಸಿ, ಅಲ್ಲಿ ಬರತಕ್ಕ ತೆರಿಗೆ ಮಾತ್ರ ಕೊಡಬಹುದಾಗಿದೆ.

ಇದರಿಂದ ಒಮ್ಮೆಲೇ ಪಡೆದಿರುವ ದೊಡ್ಡ ಮೊತ್ತ ಈ ಆರ್ಥಿಕ ವರ್ಷಕ್ಕೆ ಸೇರಿಸಿ ಹೆಚ್ಚಿನ ತೆರಿಗೆ ಪಾವತಿಸುವುದನ್ನು ಕಾನೂನಿನಂತೆ ಕಡಿಮೆ ಮಾಡಿಕೊಳ್ಳಬಹುದು. ಮುಖ್ಯವಾಗಿ ಇತ್ತೀಚೆಗೆ ಸೇವೆಗೆ ಬಂದಿರುವ ನೌಕರರು, ಈ ಅವಕಾಶದಿಂದಾಗಿ, ಬಂದಿರುವ ಸಂಬಳದ ಹಿಂಬಾಕಿಗೆ ಪ್ರಾಯಶಃ ಸಂಪೂರ್ಣ ತೆರಿಗೆ ವಿನಾಯತಿ ಪಡೆಯಬಹುದಾಗಿದೆ.

15.H ಹಾಗೂ 15.G ನಮೂನೆಯ ಫಾರಂಗಳ ಉಪಯೋಗ
ಆರ್ಥಿಕ ವರ್ಷದಲ್ಲಿ, ಬ್ಯಾಂಕ್‌ ಅಂಚೆ ಕಚೇರಿ ಅಥವಾ ಇನ್ನಿತರ ಠೇವಣಿ ಮೇಲೆ, ₹ 10,000ಕ್ಕಿಂತ ಹೆಚ್ಚಿನ ಬಡ್ಡಿ ಪಡೆಯುವಲ್ಲಿ ಹಾಗೆ ಬರುವ ಬಡ್ಡಿಯ ಶೇ  10 ರಷ್ಟು ಕಡಿತ ಮಾಡಿ, ಆದಾಯ ತೆರಿಗೆ ಕಚೇರಿಗೆ, ಸೆಕ್ಷನ್‌ 194.A ಆಧಾರದ ಮೇಲೆ, ಠೇವಣಿ ಇರಿಸಿಕೊಂಡ ಸಂಸ್ಥೆ ರವಾನಿಸತಕ್ಕದ್ದು. (ಪ್ಯಾನ್‌ ಕಾರ್ಡು ಕೊಡದಿರುವಲ್ಲಿ ಶೇ  20 ಕಡಿತವಾಗುತ್ತದೆ) ಆದರೆ, ಆದಾಯ ತೆರಿಗೆಗೆ ಒಳಗಾಗದವರು, ಪ್ರತಿ ವರ್ಷ, ಏಪ್ರಿಲ್‌ ಒಂದನೇ ವಾರದೊಳಗೆ, 60 ವರ್ಷದೊಳಗಿರುವ ವ್ಯಕ್ತಿಗಳು 15G, 60 ವರ್ಷ ದಾಟಿದ ವ್ಯಕ್ತಿಗಳು 15.H ನಮೂನೆ ಫಾರಂ ದ್ವಿಪ್ರತಿಯಲ್ಲಿ ಸಲ್ಲಿಸಿದಲ್ಲಿ, ಆಯಾ ಸಂಸ್ಥೆಗಳು ಶೇ 40 ಬಡ್ಡಿಯಲ್ಲಿ ಕಡಿತ ಮಾಡುವುದಿಲ್ಲ.

ಸಂಬಳ ಪಡೆಯುವ ವ್ಯಕ್ತಿಗಳು, ಹಿಂದೂ ಅವಿಭಕ್ತ ಕುಟುಂಬ ಇವರು ಪ್ರತಿ ವರ್ಷ, 31 ಜುಲೈ ಒಳಗಾಗಿ ಆದಾಯ ತೆರಿಗೆ ರಿಟರ್ನ್‌ ಅನ್ನು, ಸಂಬಂಧಪಟ್ಟ ಆದಾಯ ತೆರಿಗೆ ಕಚೇರಿಗೆ ಸಲ್ಲಿಸಬೇಕು. ಹಾಗೆ ಸಲ್ಲಿಸದಿರುವಲ್ಲಿ ಸೆಕ್ಷನ್‌ 139(1) ಪ್ರಕಾರ ₹ 5,000 ದಂಡ ತೆರಬೇಕಾಗುತ್ತದೆ. ಆದಾಯ ತೆರಿಗೆ ರಿಟರ್ನ್‌ ಫಾರಂ ಮುಖಾಂತರವೂ ಅಥವಾ ಆನ್‌ ಲೈನ್‌ನಲ್ಲಿಯೂ ತುಂಬಬಹುದು. ಹೀಗೆ ತುಂಬುವಾಗ ‘ಪ್ಯಾನ್‌ ಕಾರ್ಡ್‌’ ಕಡ್ಡಾಯವಾಗಿ ನಮೂದಿಸಬೇಕು. ಹಣ ಮರಳಿ (ರಿಫಂಡ್‌) ಪಡೆಯುವುದಕ್ಕೆ ಬ್ಯಾಂಕ್‌ ಖಾತೆ ನಂ. IFSC Code ನಮೂದಿಸಬೇಕು.

ವೈಯಕ್ತಿಕ ಆದಾಯ ತೆರಿಗೆದಾರರು ಗಮನಿಸಬೇಕಾದ ವಿಚಾರಗಳು
*ಸೆಕ್ಷನ್‌ 80ಸಿ ಆಧಾರದ ಮೇಲೆ ಗರಿಷ್ಠ ₹ 1.50 ಲಕ್ಷ ಉಳಿಸಲು ಎಂದಿಗೂ ಮರೆಯಬಾರದು. ಇದು ಇಳಿವಯಸ್ಸಿನ  ‘ಬ್ರೆಡ್‌–ಬಟರ್‌’ ಎನ್ನುವುದನ್ನು ನೆನಪಿಡಿ.  ಪ್ರತಿ ವರ್ಷ ಹೀಗೆ ಉಳಿಸಲು ಏಪ್ರಿಲ್‌ ಒಂದರಿಂದಲೇ ಯೋಜನೆ ರೂಪಿಸಿ, ಅದರಂತೆ  ನಡೆದುಕೊಳ್ಳಿ.

*ಎಳೆ ವಯಸ್ಸಿನ ಹದಿ ಹರೆಯದ ತರುಣರಿಗೆ ಗೃಹಸಾಲ ಪಡೆದು ಸ್ಥಿರ ಆಸ್ತಿ ಮಾಡಲು ಇದು ಪರ್ವಕಾಲ. ರಿಸರ್ವ್ ಬ್ಯಾಂಕಿನ ರೆಪೊ ದರ ಕಡಿತದಿಂದಾಗಿ ಅತಿ ಕಡಿಮೆ ಬಡ್ಡಿ ದರದಲ್ಲಿ ಗೃಹಸಾಲ ದೊರೆಯುತ್ತದೆ. ಜೊತೆಗೆ ಸಾಲದ ಕಂತು (ಸೆಕ್ಷನ್‌ 80C) ಸಾಲದ ಮೇಲಿನ ಬಡ್ಡಿ (ಸೆಕ್ಷನ್‌ 24 (b), ಇದುವರೆಗೆ ಕೊಡುವ ಮನೆ ಬಾಡಿಗೆ, ಇವೆಲ್ಲವನ್ನೂ ಪರಿಗಣಿಸಿದಾಗ, ಸಾಲದ ಕಂತಿನ  (EMI) ಸಿಂಹಪಾಲು ಇಲ್ಲಿ ಬರುವ ವಿನಾಯತಿಯಿಂದಲೇ ಭರಿಸಬಹುದು.

*ಶಿಕ್ಷಣ ಸಾಲದ ಮೇಲಿನ ಬಡ್ಡಿ ಸೆಕ್ಷನ್‌ 80E ಆಧಾರದ ಮೇಲೆ, ಒಟ್ಟು ಆದಾಯದಿಂದ ಕಳೆದು ತೆರಿಗೆ ಸೌಲತ್ತು ಇರುವುದರಿಂದ, ಇದರ ಉಪಯೋಗ ಪಡೆಯಲು ಮರೆಯಬಾರದು.

ವಿ. ಸೂ.:  ಗೃಹಸಾಲ ಹಾಗೂ ಶಿಕ್ಷಣ ಸಾಲ ಇವೆರಡೂ ನಿಜವಾಗಿ ಸಾಲವಾದರೂ ಈ ಎರಡೂ ಯೋಜನೆಗಳು ದೀರ್ಘಾವಧಿ ಹೂಡಿಕೆ ಎನ್ನುವುದನ್ನು ಮರೆಯುವಂತಿಲ್ಲ.

ಗಳಿಸಿದ ಹಣದಲ್ಲಿ ಒಂದಿಷ್ಟು ಉಳಿಸಿ, ಉಳಿದುದನ್ನು ಮಾತ್ರ ಖರ್ಚು ಮಾಡುವುದು ಜಾಣರ ಲಕ್ಷಣ. ಇದರಿಂದ ಕಡ್ಡಾಯ ಉಳಿತಾಯಕ್ಕೆ ನಾಂದಿಯಾಗುತ್ತದೆ. ಜೊತೆಗೆ ಬೇಡವಾದ ಖರ್ಚಿಗೆ ಕಡಿವಾಣ ಹಾಕಿದಂತಾಗುತ್ತದೆ. ಹೀಗೆ ಉಳಿತಾಯ ಮಾಡುವಾಗ ಸೆಕ್ಷನ್‌ 80C ಆಧಾರದ ಮೇಲೆ ಗರಿಷ್ಠ ಹಣ ಉಳಿಸಿರಿ. ಇದರಿಂದ ತೆರಿಗೆ ಹೊರೆ ತಗ್ಗುತ್ತದೆ. ತೆರಿಗೆ ಉಳಿಸುವ ಸಲುವಾಗಿಯಾದರೂ, ಪ್ರಾರಂಭದಿಂದಲೂ ಕಡ್ಡಾಯವಾಗಿ ಉಳಿಸಿದ ಹಣ, ಮುಂದೆ ಮಕ್ಕಳ ವಿದ್ಯಾಭ್ಯಾಸ, ಮದುವೆ, ಮುಂಜಿ, ಹೀಗೆ ಹತ್ತು ಹಲವು ವೆಚ್ಚಗಳಿಗೆ ನೆರವಾಗುತ್ತದೆ.

*ಆದಾಯ ತೆರಿಗೆ ಮಿತಿ ಹಾಗೂ ತೆರಿಗೆ ಕೊಡಬೇಕಾದ ವಿವರ*

*ವೈಯಕ್ತಿಕ ಆದಾಯ ತೆರಿಗೆ (60 ವರ್ಷ ಒಳಗಿನ ವ್ಯಕ್ತಿಗಳು)
₹ 2.50 ಲಕ್ಷ ತನಕ ಸಂಪೂರ್ಣ ವಿನಾಯಿತಿ
₹ 2.50 ಲಕ್ಷದಿಂದ ₹ 5  ಲಕ್ಷಗಳ ತನಕ ₹ 2.50 ಲಕ್ಷ ದಾಟಿದ ಮೊತ್ತಕ್ಕೆ ಶೇ 10
₹ 5  ಲಕ್ಷದಿಂದ ₹10  ಲಕ್ಷಗಳ ತನಕ ₹25,000 + ಶೇ 20 ₹5  ಲಕ್ಷ ದಾಟಿದ ಮೊತ್ತಕ್ಕೆ
₹ 10 ಲಕ್ಷ ದಾಟಿದ  ಮೊತ್ತಕ್ಕೆ ₹1.20 ಲಕ್ಷ + ಶೇ 30 ₹10  ಲಕ್ಷ ದಾಟಿದ ಮೊತ್ತಕ್ಕೆ

*60 ವರ್ಷ ದಾಟಿದ ಮತ್ತು 80 ವರ್ಷ ಒಳಗಿನ ವ್ಯಕ್ತಿಗಳು
₹3  ಲಕ್ಷದ ತನಕ ಸಂಪೂರ್ಣ ವಿನಾಯ್ತಿ
₹3  ಲಕ್ಷದಿಂದ ₹5  ಲಕ್ಷಗಳ ತನಕ ₹3 ಲಕ್ಷ ದಾಟಿದ ಮೊತ್ತಕ್ಕೆ ಶೇ10
₹5  ಲಕ್ಷದಿಂದ ₹10  ಲಕ್ಷಗಳ ತನಕ ₹20,000 + ಶೇ 20 ₹ 5 ಲಕ್ಷ ದಾಟಿದ ಮೊತ್ತಕ್ಕೆ
₹10.00 ಲಕ್ಷ ದಾಟಿದ ಮೊತ್ತಕ್ಕೆ ₹1.20 ಲಕ್ಷ + ಶೇ 30 ₹10 ಲಕ್ಷ ದಾಟಿದ ಮೊತ್ತಕ್ಕೆ

*80 ವರ್ಷ ದಾಟಿದ ವ್ಯಕ್ತಿಗಳು
₹ 5 ಲಕ್ಷಗಳ ತನಕ ಸಂಪೂರ್ಣ ವಿನಾಯ್ತಿ
₹ 5 ಲಕ್ಷದಿಂದ – ₹ 10 ಲಕ್ಷಗಳ ತನಕ ₹5.00 ಲಕ್ಷ ದಾಟಿದ ಮೊತ್ತಕ್ಕೆ ಶೇ 20
₹ 10  ಲಕ್ಷ ದಾಟಿದ ಮೊತ್ತಕ್ಕೆ ₹1  ಲಕ್ಷ + ಶೇ 30 ₹ 10  ಲಕ್ಷ ದಾಟಿದ ಮೊತ್ತಕ್ಕೆ.

ಸರ್‌ಚಾರ್ಜ್‌
ವಾರ್ಷಿಕ ₹ 1 ಕೋಟಿ ಆದಾಯ ಇರುವವರು ಮಾತ್ರ ಆದಾಯ ತೆರಿಗೆ ಹೊರತುಪಡಿಸಿ, ಶೇ 10 ಸರ್‌ಚಾರ್ಜ್‌ ಕೊಡತಕ್ಕದ್ದು.

ಶಿಕ್ಷಣ ಸೆಸ್‌
ಆದಾಯ ತೆರಿಗೆಯ ಮೇಲೆ ಶೇ 3ರಷ್ಟು  ಶಿಕ್ಷಣ ಉಪ ಕರ ಕೊಡತಕ್ಕದ್ದು. ಈ ತೆರಿಗೆ ಎಲ್ಲಾ ವರ್ಗದವರಿಗೂ ಅನ್ವಯಿಸುತ್ತದೆ.
*
ನೌಕರಿಯಲ್ಲಿ ದೊರೆಯುವ ಸಂಬಳದ ಹೊರತಾಗಿ ಪಡೆಯುವ ಭತ್ಯೆ ಹಾಗೂ ವೆಚ್ಚಗಳಿಗಾಗಿ ಪಡೆಯುವ ಹಣ ಇವುಗಳ ವಿನಾಯತಿ
*ಸೆಕ್ಷನ್‌ 10 (10ಸಿ) ಸ್ವಯಂ ನಿವೃತ್ತಿ  (Voluntrary Retirement) ಸರ್ಕಾರ ಅಥವಾ ಸಂಸ್ಥೆ ಸ್ವಯಂ ನಿವೃತ್ತಿ ಯೋಜನೆ ಘೋಷಿಸಿದಾಗ (Rule 2BA of I.T. Rules) ಗರಿಷ್ಠ ₹ 5 ಲಕ್ಷ ತನಕ, ಇಲ್ಲಿ ಬಂದ ಮೊತ್ತಕ್ಕೆ ಆದಾಯ ತೆರಿಗೆ ವಿನಾಯತಿ ಪಡೆಯಬಹುದು.

*ಸೆಕ್ಷನ್‌ 10 (13ಎ) ಮನೆ ಬಾಡಿಗೆ ಭತ್ಯೆ ಪಡೆದಾಗ:
ಎ) ನಿಜವಾಗಿ ಸಿಕ್ಕಿರುವ ಮನೆಬಾಡಿಗೆ
ಬಿ) ಸಂಬಳದ ಶೇ 10 ರಷ್ಟು ಬಾಡಿಗೆ ಕೊಟ್ಟಾಗ
ಸಿ) ಶೇ 40 ರಷ್ಟು ಸಂಬಳ (ಮಹಾನಗರಗಳಲ್ಲಿ ಶೇ 50)
ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ.

*ಸೆಕ್ಷನ್‌ 10(ಜಿಜಿ) ಮನೆಬಾಡಿಗೆ ಭತ್ಯೆ ಪಡೆಯದೆ ಬಾಡಿಗೆ ಕೊಡುತ್ತಿರುವಲ್ಲಿ:
ಎ) ಆದಾಯದ ಶೇ 25ರಷ್ಟು
ಬಿ) ಶೇ 10 ಆದಾಯದಷ್ಟು ಬಾಡಿಗೆ ಕೊಟ್ಟಾಗ
ಸಿ) ₹ 2000 ತಿಂಗಳಿಗೆ
ಮೇಲಿನವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ಆರಿಸಿಕೊಳ್ಳಿ.

*ಸೆಕ್ಷನ್‌ 10(14)  ಕರ್ತವ್ಯಕ್ಕಾಗಿ ತಿರುಗಾಟಕ್ಕೆ ಕೊಡುವ ಭತ್ಯೆ

*ಸೆಕ್ಷನ್‌ 10(14) ಸಾರಿಗೆ ಭತ್ಯೆ: ಕನ್ವೆಯನ್ಸ ಅಲೊವೆನ್ಸ್‌ನ ಹಾಗೆ ಮನೆಯಿಂದ ಕಚೇರಿಗೆ– ಕಚೇರಿಯಿಂದ ಮನೆಗೆ ಬರಲು ಕೊಡುವ ಭತ್ಯೆ –ಗರಿಷ್ಠ ₹ 800

*ವೈದ್ಯಕೀಯ ಖರ್ಚು (ಸೆಕ್ಷನ್‌ 17(2) ಗರಿಷ್ಠ ₹ 15,000 ಉದ್ಯೋಗದಾತರು ಭರಿಸಿದಾಗ.

*ಪ್ರೊಷೇಷನ್‌ ಟ್ಯಾಕ್ಸ್‌: ಸಂಪೂರ್ಣ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

*ಸೆಕ್ಷನ್‌ 24(ಎ): ಬಾಡಿಗೆಗೆ ಬೇರೆಯವರಿಗೆ ಮನೆ ಕೊಟ್ಟಾಗ, ಒಟ್ಟು ಬಾಡಿಗೆಯ ಶೇ  30 ಕಳೆದು ತೆರಿಗೆ ಸಲ್ಲಿಸಬಹುದು. (ದುರಸ್ತ, ವಿಮೆ ತೆರಿಗೆ ಇತ್ಯಾದಿ ಬಾಡಿಗೆಯಿಂದ ಕಡಿತ ಮಾಡುವಂತಿಲ್ಲ.)

*ಸೆಕ್ಷನ್‌ 24(ಬಿ) ಗೃಹಸಾಲದ ಬಡ್ಡಿ ಗರಿಷ್ಠ ₹ 2  ಲಕ್ಷ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸಬಹುದು.

ಬಂಡವಾಳ ಲಾಭ ತೆರಿಗೆ (Capital Gain Tax)
ಕ್ಯಾಪಿಟಲ್‌ ಗೇನ್‌ ಟ್ಯಾಕ್ಸ್‌ ಸೆಕ್ಷನ್‌ 48 ಆಧಾರದ ಮೇಲೆ– ಚಿನ್ನದ ಬಾಂಡುಗಳು ಹಳ್ಳಿ ವ್ಯವಸಾಯದ ಭೂಮಿ ಹಾಗೂ ಸ್ವಂತ ಉಪಯೋಗದ ಒಡವೆಗಳಿಗೆ ಅನ್ವಯಸುವುದಿಲ್ಲ. ಸೆಕ್ಷನ್‌ 54EC ಆಧಾರದ ಮೇಲೆ ಗರಿಷ್ಠ ₹ 50  ಲಕ್ಷ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಮತ್ತು ಗ್ರಾಮೀಣ ವಿದ್ಯುದ್ದೀಕರಣ ನಿಗಮ ನ್ಯಾಷನಲ್‌ ಹೈವೇಸ್‌ ಅಥಾರಿಟಿ ಆಫ್‌ ಇಂಡಿಯಾ ಅಥವಾ ರೂರಲ್‌ ಎಲೆಕ್ಟ್ರಿಫಿಕೇಷನ್‌ ಕಾರ್ಪರೇಷನ್‌ ಇವುಗಳಲ್ಲಿ 3 ವರ್ಷಗಳ ಅವಧಿಗೆ ಇರಿಸಿ, ತೆರಿಗೆ ವಿನಾಯತಿ ಪಡೆಯಬಹುದು.

ವಿ.ಸೂ.: ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಲೆಕ್ಕ ಹಾಕುವಾಗ, ಬರುವ ಲಾಭದಲ್ಲಿ ಹಣದುಬ್ಬರ ಸೂಚ್ಯಂಕ ವೆಚ್ಚದ (Cost Inflation Index) ಕಳೆದು ತೆರಿಗೆ ಸಲ್ಲಿಸಬಹುದು. 1981–82 ಆಧಾರ ವರ್ಷ (100) ಎಂಬುದಾಗಿ ಇಟ್ಟುಕೊಂಡಲ್ಲಿ 2014–15ರಲ್ಲಿ ಇದು 1024 ಆಗಿರುತ್ತದೆ.

ADARSHA / EXAM - ಮಾದರಿ ಪ್ರಶ್ನೆ ಪತ್ರಿಕೆ