ಆದರ್ಶ ಶರಣೆ ಹೇಮರೆಡ್ಡಿ ಮಲ್ಲಮ್ಮ*
*🌿ಹೇಮರೆಡ್ಡಿ ಮಲ್ಲಮ್ಮ ಚರಿತ್ರೆ🌿*
ಸುಮಾರು ೫೦೦ ವರ್ಷಗಳ ಹಿಂದೆ ಶ್ರೀಶೈಲದ ಸಮೀಪ ಶರಣೆಯಾಗಿ ಜೀವಿಸಿದ್ದವಳು ಹೇಮರೆಡ್ಡಿ ಮಲ್ಲಮ್ಮ. ಜನಪದರು ಹೇಮರೆಡ್ಡಿ ಮಲ್ಲಮ್ಮನವ ಬಗ್ಗೆಯೂ ಗೀತೆಯನ್ನು ಸೃಷ್ಟಿಸಿ ಹಾ ಡಿದ್ದಾರೆ.
ರಾಂಪುರದ ನಾಗರೆಡ್ಡಿ-ಗೌರಮ್ಮರ ಸುಪುತ್ರಿ
ಹೇಮರೆಡ್ಡಿ ಮಲ್ಲಮ್ಮ ಸಿದ್ದಾಪುರದ ಸೊಸಿ
ಶ್ರೀಶೈಲ ಮಲ್ಲಿಕಾರ್ಜುನನನ್ನು ಪೂಜಿಸಿ
ಅತ್ತೆ-ನೆಗೆಣ್ಣಿಯರ ಕಾಟ ಸಹಿಸಿ
ಮಬ್ಬು ಗಂಡನ ಮಹಾದೇವನೆಂದು ಮನ್ನಿಸಿ
ಮತಿಗೇಡಿ ಮೈದುನನ ಯೋಗಿ ವೇಮನನ ಮಾಡಿ
ಮಹಾಯೋಗಿಯ ಮಹಾತಾಯಿಯಾಗಿ
ಮಲ್ಲಮಾಂಬೆ ಬೆಳಗಿದಳು ರೆಡ್ಡಿಕುಲವ.
ಇತಿವೃತ್ತ
*ಸಂತ ಶಿಶುನಾಳ ಷರೀಫರು ಹೇಮರೆಡ್ಡಿ ಮಲ್ಲಮ್ಮ ಬಗ್ಗೆ ಹೆಣೆದಿರುವ ವಿಶಿಷ್ಟ ಗೀತೆಯೆಂದರೆ-*
ಹೇಮರೆಡ್ಡಿ ಮಲ್ಲಮ್ಮ
ರೆಡ್ಡಿಕುಲಧರ್ಮ ಉದ್ಧಾರ ಮಾಡಿದೆಯಮ್ಮಾ || ಪ ||
ನಿನ್ನ ಭಕ್ತಿಭಾಗ್ಯದ ನೇಮ
ಮಲ್ಲಯ್ಯನ ಕಟ್ಟಿದ ಪ್ರೇಮ
ಶ್ರೇಷ್ಟವಾಗಿ ತೋರುವದು ರಡ್ಡಿಕುಲಧರ್ಮ
ಶ್ರೀಶೈಲ ನಿನಗಾಗಿದೆ ಕಾಯಮ ||ಅ.ಪ.||
ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ
ಗಂಡನ ಮೇಲೆ ಪ್ರೇಮ
ಹೊತ್ತಿಗಂಬಲಿ ಸಿಗಲಿಲ್ಲವಮ್ಮ
ಮಣ್ಣು ಪಾತ್ರೆ ಮಜ್ಜಿಗೆ ನೇಮ
ಮಲ್ಲಯ್ಯನು ಪಾಲುಗಾರನಮ್ಮ
ಉಂಡುಹೋದ ಉಳಿಯಲಿಲ್ಲವಮ್ಮ ||೧||
ನೀ ಬೀಸುದು ನೇಮ ದಿನ ದಿನ ಕಾಯಮ
ಕೈಯಲ್ಲಿ ಗುರುಳೆಮ್ಮ
ಬೀಸಿಹೋದ ಭಕ್ತಳಮ್ಮ
ಭಕ್ತಿಗೊಲಿದು ಬಂದನು ಜಂಗಮ
ಭಿಕ್ಷೆ ಬೇಡಿ ನಿಂತ ನೋಡಮ್ಮ
ಬಿಡದ ನಚ್ಚುನೇಗರನಮ್ಮ ||೨||
ನಿನ್ನ ಮೂಗುತಿ ಮರ್ಮ
ತಿಳಿಲಿಲ್ಲ ಹೇಮ ಬೇಡಿ ಒಯ್ದನಮ್ಮ
ಶಿಶುನಾಳ ಊರು ಗ್ರಾಮ
ಗುರುಗೋವಿಂದನ ನಾಮ
ಆತನ ಪಾದಸೇವೆ
ನಂಬಿ ನಾನು ಮಾಡಿದೆನಮ್ಮ ||೩||
*ಹುಟ್ಟು, ಜೀವನ*
ಶ್ರೀಶೈಲದ ದಕ್ಷಿಣಕ್ಕಿರುವ ವೆಲ್ಲಟೂರು ಜಿಲ್ಲೆಗೆ ಸೇರಿದ ರಾಮಪುರದ ರಾಮರೆಡ್ಡಿ-ಗೌರಮ್ಮ ದಂಪತಿಗಳಿಗೆ ಶ್ರೀಶೈಲ ಚನ್ನಮಲ್ಲಿಕಾರ್ಜುನನ ಕೃಪೆಯಿಂದ ಜನಿಸಿದ ಹೆಣ್ಣು ಮಗುವೇ ಹೇಮರೆಡ್ಡಿ ಮಲ್ಲಮ್ಮ. ಈಕೆ ಬಾಲ್ಯದಿಂದಲೂ ಶ್ರೀಶೈಲ ಚನ್ನಮಲ್ಲಿಕಾರ್ಜುನನನ್ನೇ ಆರಾಧ್ಯ ದೈವವೆಂದು ಪರಿಭಾವಿಸಿ, ಕಡೆಯಲ್ಲಿ ದೇವರನ್ನೇ ಸಾಕ್ಷಾತ್ಕರಿಸಿಕೊಂಡವಳು. "ಶಿವ ಕರೆದ ಕಾಲಕ್ಕೆ ಮ್ಯಾಲಕ ಹೋಗಾಗ, ನಾಕು ಮಂದಿ ಕಳುಸಾಕ ಬರುವಂಗ ಇರಬೇಕು" ಎನ್ನು ಈಕೆಯ ಬಾಳು ಪವಿತ್ರ ಮೌಲ್ಯಗಳ, ಆದರ್ಶದ, ಅತ್ಯಮೂಲ್ಯ ಕಣಜವಾಗಿದೆ.
*ವಿವಾಹ*
ಹೇಮರೆಡ್ಡಿ ಮಲ್ಲಮ್ಮ ಬೆಳೆದಾಗ ಅವಳನ್ನು ಸಮೀಪದ ಸಿದ್ದಾಪುರದ ಕುಮಾರಗಿರಿ ವೇಮರೆಡ್ಡಿಯ ಮಗ ಭರಮರೆಡ್ಡಿಗೆ ಮದುವೆ ಮಾಡಿಕೊಡುತ್ತಾರೆ. ಊರ ಜನರೆಲ್ಲ ಭರಮರೆಡ್ಡಿಯನ್ನು ಹುಚ್ಚನೆಂದು ಪರಿಗಣಿಸಿರುತ್ತಾರೆ. ಹೇಮರೆಡ್ಡಿ ಮಲ್ಲಮ್ಮ ಗಂಡನಲ್ಲಿದ್ದ ಮುಗ್ಧ, ಸಾಧುಸ್ವಭಾವವನ್ನು ಕಂಡು ಸಮಾಧಾನಗೊಳ್ಳುತ್ತಾಳೆ. ಪತಿಯನ್ನು ಮಹಾದೇವನಂತೆ ಉಪಚರಿಸುತ್ತಾಳೆ. ಜೀವನವಿಡಿ ಕಷ್ಟವನ್ನುಂಡರೂ, ಇತರರು ಕಷ್ಟದಲ್ಲಿರುವಾಗ, ತನ್ನ ನೋವನ್ನೆಲ್ಲ ಮರೆತು ಅವರನ್ನು ಜೋಪಾನ ಮಾಡುತ್ತಿದ್ದಳು.
*ದಾನಚಿಂತಾಮಣಿಯ ಪವಾಡಗಳು*
ಹೇಮರೆಡ್ಡಿ ಮಲ್ಲಮ್ಮಳ ಅತ್ತೆ ಆಕೆಗೆ ಉಣ್ಣುವುದಕ್ಕೆ, ಉಡುವುದಕ್ಕೆ ಸರಿಯಾಗಿ ಕೊಡದೆ, ಅವಳನ್ನು ಅಡವಿಗೆ ನೂಕಿ ಸಂಕಷ್ಟಗಳ ಸಂಕೋಲೆಗೆ ಸಿಗಿಸುವಳು. ಆದರೂ ಹೇಮರೆಡ್ಡಿ ಮಲ್ಲಮ್ಮ ನೊಂದುಕೊಳ್ಳದೆ ಕಾಡಿನಲ್ಲಿ ದನಗಳನ್ನು ಕಾಯುತ್ತಾ ಮಲ್ಲಿಕಾರ್ಜುನನ ಉಪಾಸನೆಯಲ್ಲಿ ಮಗ್ನ ಳಾಗಿರುತ್ತಿದ್ದಳು. ದಾನಚಿಂತಾಮಣಿಯಾದ ಮಲ್ಲಮ್ಮನಿಗೆ ಬುದ್ಧಿ ಕಲಿಸಲು ಅವಳ ಅತ್ತೆ ಮನೆಯ ಮುಂದೆ ಭಿಕ್ಷುಕ ಬಂದಾಗ ಸಿಟ್ಟುಗೊಂಡು ಒಲೆಯಲ್ಲಿನ ನಿಗಿನಿಗಿ ಕೆಂಡವನ್ನು ಅವಳ ಬೊಗಸೆಗೆ ಹಾಕಿ, ಬಾಗಿಲಲ್ಲಿ ನಿಂತಿದ್ದ ಭಿಕ್ಷುಕನಿಗೆ ನೀಡಲು ಹೇಳಿದಾಗ, ಮಲ್ಲಮ್ಮ ಅತ್ತೆಕೊಟ್ಟ ಕೆಂಡವನ್ನು ಸ್ವೀಕರಿಸಿ ಮನದಲ್ಲಿ ಮಲ್ಲಿಕಾರ್ಜುನನನ್ನು ನೆನೆದು ಭಿಕ್ಷಾರ್ಥಿಯ ಜೋಳಿಗೆಗೆ ಅದನ್ನೇ ನೀಡಿದಾಗ ಅದು ಧಾನ್ಯವಾಗಿ ಮಾರ್ಪಡುತ್ತದೆ. ಅಂದಿನಿಂದ ಮಲ್ಲಮ್ಮನ ಹೆಸರು ಬೆಂಕಿದಾನದ ಮಲ್ಲಮ್ಮ ಎಂದಾಯಿತು.
*ಮೈದುನನ ಮನಃಪರಿವರ್ತನೆ*
ದುಶ್ಚಟಗಳ ದಾಸನಾದ ವೇಮನ ವೇಶ್ಯಾಸ್ತ್ರೀಯೊಬ್ಬಳ ಮನದಾಸೆ ಈಡೇರಿಸಲು, ಅತ್ತಿಗೆಯಾಗಿದ್ದ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಬೇಕೆಂದು ಕೇಳುತ್ತಾನೆ. ಹೇಮರೆಡ್ಡಿ ಮಲ್ಲಮ್ಮ ಮೈದುನನಾದ ವೇಮನನಿಗೆ ಮೂಗುತಿ ಕೊಡಲು ಒಪ್ಪಿ ಕರಾರೊಂದನ್ನು ವಿಧಿಸುತ್ತಾಳೆ. ಅದೆಂದರೆ-"ವೇಮನ ಹೇಮರೆಡ್ಡಿ ಮಲ್ಲಮ್ಮನ ಮೂಗುತಿಯನ್ನು ಆ ವೇಶ್ಯಾಸ್ತ್ರೀಗೆ ಕೊಡುವಾಗ, ಆಕೆ ನಗ್ನಳಾಗಿ ಬಂದು ವೇಮನ ಕುಳಿತದ್ದ ಮಂಚವನ್ನು ಮೂರು ಸುತ್ತು ಸುತ್ತಬೇಕು. ಮೂರು ಸುತ್ತು ಹಾಕಿದ ನಂತರ ಹಿಂಬದಿಗೆ ಬಾಗಿ, ಎರಡು ಕಾಲುಗಳ ನಡುವೆ ಬಗ್ಗಿ ಕೈ ಚಾಚಿ ವೇಮನನಿಂದ ಮೂಗುತಿಯನ್ನು ಪಡೆಯಬೇಕು. ಅವಳು ಆ ಮೂಗುತಿಯನ್ನು ಪಡೆಯುವವರೆಗೂ ವೇಮನ ಆಕೆಯ ನಗ್ನಶರೀರವನ್ನು ತದೇಕ ಚಿತ್ತನಾಗಿ ನೋಡಬೇಕು". ವೇಮನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮನ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಾನೆ. ತನ್ನ ಪ್ರೇಯಸಿಯ ನಗ್ನ ಶರೀರವನ್ನು ಕಂಡೊಡನೆ ಅವನೊಳಗೆ ಭಯಂಕರವಾದ ಜಿಗುಪ್ಸೆ, ಅಸಹ್ಯಭಾವನೆ ಆವರಿಸಿ ಒಡನೆಯೇ ಗಾಭರಿಗೊಂಡು ಕಣ್ಮುಚ್ಚಿ -
ತಾಯಿಯ ಗರ್ಭದಿಂದ ತಾಂ ಬರುವ ಸಮಯದಿ
ಮೊದಲು ವಸ್ತ್ರಮಿಲ್ಲ, ತುದಿಗುಮಿಲ್ಲ
ನಡುವೆ ಬಟ್ಟೆಯುಡುವುದೇಕೆಂದು ತಿಳಿಯಿರಿ
ವಿಶ್ವತೋಭಿರಾಮ ಕೇಳುವೆ ಮಾ||
ಎಂದು ತತ್ವ್ತಜ್ಞಾನ ಹೇಳುತ್ತಾ, ತಾನು ನಗ್ನನಾಗಿ ವೈರಾಗಿಯಂತೆ ಕಾಲ್ತೆಗೆದು ಹೊರ ಹೋರಟವನು, ಮುಂದೆ ತನ್ನ ಸಾಧನೆಯಿಂದ ಮಹಾಯೋಗಿಯಾದನು.
*ವರವನ್ನು ಕೇಳಿ ಪಡೆದ ಸಂದರ್ಭ*
ಮಲ್ಲಮ್ಮ ಇಹಲೋಕ ಯಾತ್ರೆ ಮುಗಿಸುವ ಮೊದಲು ಆಕೆಗೆ ಮಲ್ಲಿಕಾರ್ಜುನ, ಆಕೆಯ ನಿಷ್ಕಳಂಕ ಭಕ್ತಿಗೆ ಮನಸೋತು ಮಲ್ಲಮ್ಮನಿಗೆ ದರ್ಶನವಿತ್ತು ವರವೇನು ಬೇಕು ಕೇಳು ಎಂದಾಗ ಮಲ್ಲಮ್ಮ- ತನ್ನ ಬಳಗಕ್ಕೆಂದೂ ಬಡತನ ಬಾರದಿರಲಿ, ಅವರಿಗೆಂದೂ ಉಣ್ಣಲು-ಉಡಲು-ತೊಡಲು ಯಾವ ಕೊರತೆಯೂ ಆಗದಿರಲಿ, ಮಲ್ಲಿಕಾರ್ಜುನನ ಪೂಜೆ, ಜಾತ್ರೆ ಮತ್ತು ಉತ್ಸವಗಳು ನಿರಂತರ ನಡೆಯಬೇಕು ಎನ್ನುತ್ತಾಳೆ. ಮಲ್ಲಿಕಾರ್ಜುನ ಅವಳು ಬೇಡಿದಂತಹ ವರವನ್ನು ನೀಡುತ್ತಾನೆ.
*ತನ್ನ ಬಳಗದವರಿಗೆ ಬುದ್ದಿವಾದ*
ನಂತರ ಮಲ್ಲಮ್ಮ "ಸಂಪತ್ತಿಗೆ ಸೊಕ್ಕಬೇಡಿ, ಸಿರಿ ಬಂದ ಕಾಲಕ್ಕೆ ಮೈಮರೆತು ಹಿಗ್ಗದೇ, ದಾನಧರ್ಮ ಮಾಡುವುದರ ಮೂಲಕ ತನ್ನ ಬಳಗದವರು ದಾನಗುಣವನ್ನು ಬೆಳೆಸಿಕೊಳ್ಳಬೇಕು" ಎಂದು ತನ್ನ ಬಳಗದವರಿಗೆ ಬುದ್ದಿವಾದ ಹೇಳುತ್ತಳೆ
*ಶ್ರೀಶಿವಶೆರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿಯ ಶುಭಾಶಯಗಳು*
*ಆದರ್ಶ ಶರಣೆ ಹೇಮರೆಡ್ಡಿ ಮಲ್ಲಮ್ಮ*
ಸಂಸಾರದೊಳಗಿದ್ದೂ ಆಧ್ಯಾತ್ಮಿಕ ಸಾಧನೆ ಮಾಡಬಹುದೆಂಬುದಕ್ಕೆ ಹೇಮರೆಡ್ಡಿ ಮಲ್ಲಮ್ಮ ಶ್ರೇಷ್ಠ ಉದಾಹರಣೆ. ಬದುಕಿನ ಕಷ್ಟಗಳಿಗೆ ಅಂಜದೆ, ದೈವಭಕ್ತಿಯನ್ನು ಬಿಡದೆ ಬದುಕಿನುದ್ದಕ್ಕೂ ಆದರ್ಶದ ನೆರಳಲ್ಲಿ ನಡೆದ ಮಹಾಸಾಧಿ್ವ ಮಲ್ಲಮ್ಮ.
ದಕ್ಷಿಣ ಭಾರತ ಅದರಲ್ಲೂ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ವಿಶಿಷ್ಟತೆಯನ್ನು ಮೆರೆದಿರುವ ರೆಡ್ಡಿ ಸಮುದಾಯ ತನ್ನದೇ ಆದ ಛಾಪು ಮೂಡಿಸಿದೆ. ಸಮಕಾಲೀನ ಕನ್ನಡನಾಡಿನ ರಾಜಕೀಯ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆಳೆದಿದೆ ಈ ಸಮುದಾಯ. ಆಳರಸರಾಗಿ, ಸಾಮಂತರಾಗಿ ಪ್ರಜಾಪಾಲನೆಯನ್ನು ಮಾಡಿದ ರೆಡ್ಡಿಗಳು ಕಾಲಾಂತರದಲ್ಲಿ ಕೃಷಿಯನ್ನೇ ಪ್ರಧಾನ ಕಸುಬನ್ನಾಗಿಸಿಕೊಂಡು ಅಲ್ಲಲ್ಲಿ ನೆಲೆನಿಂತರು.
ಮಹಾಸಾಧಿ್ವ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರನ್ನು ತಮ್ಮ ಆರಾಧ್ಯ ಸಾಂಸ್ಕೃತಿಕ ನಾಯಕರೆಂದು ಸ್ವೀಕರಿಸಿರುವ ರೆಡ್ಡಿ ಸಮುದಾಯಕ್ಕೆ ಮಲ್ಲಮ್ಮನ ಆದರ್ಶ ಬದುಕು, ವೇಮನರ ಸಾಹಿತ್ಯ ದಿವ್ಯಮಾದರಿಗಳಾಗಿವೆ.
ಅಕ್ಕಮಹಾದೇವಿ ಹನ್ನೆರಡನೆಯ ಶತಮಾನದ ಶ್ರೇಷ್ಠ ವಚನಕಾರ್ತಿ ಹಾಗೂ ವಿರಾಗಿ. ಶ್ರೀಶೈಲದ ಚೆನ್ನಮಲ್ಲಿಕಾರ್ಜುನ ಅಕ್ಕಮಹಾದೇವಿಯ ಆರಾಧ್ಯದೈವ. ಚೆನ್ನಮಲ್ಲಿಕಾರ್ಜುನನಲ್ಲಿಯೇ ಸರ್ವಸ್ವವನ್ನು ಕಂಡ ಈಕೆ ತನ್ನ ಆದರ್ಶಕ್ಕಾಗಿ ಸಾಮಾಜಿಕ ಮತ್ತು ರಾಜಕೀಯ ವ್ಯವಸ್ಥೆಗಳನ್ನು ಧಿಕ್ಕರಿಸಿ, ಹೆಣ್ಣುತನಕ್ಕೆ ಗೌರವವನ್ನು ತಂದುಕೊಟ್ಟು ಮಾದರಿಯಾಗಿದ್ದಾಳೆ. ಹಾಗೆಯೇ ಸಂಸಾರದಲ್ಲಿದ್ದು ಶ್ರೀಶೈಲದ ಚೆನ್ನಮಲ್ಲಿಕಾರ್ಜುನನ ಕರುಣೆಯ ಕೂಸಾಗಿ ಅರಿವಿಗಿಂತ ಆಚಾರ ದೊಡ್ಡದು ಎಂದು ಸಾಧಿಸಿದ ಹೇಮರೆಡ್ಡಿ ಮಲ್ಲಮ್ಮ ಹೆಣ್ಣು ಕುಲಕ್ಕೆ ಮಾದರಿಯಾಗಿದ್ದಾಳೆ.
ಹೇಮರೆಡ್ಡಿ ಮಲ್ಲಮ್ಮ ಶ್ರೀಶೈಲದ ಮಲ್ಲಿಕಾರ್ಜುನನ ದೈವಿಕ ಪರಿಸರದ ವೆಲ್ಲಟೂರು ಜಿಲ್ಲೆಯ ರಾಮಾಪುರದಲ್ಲಿ ಕ್ರಿ. ಶ 1424ರಲ್ಲಿ ಜನಿಸಿದರು. ತಾಯಿ ಗೌರಮ್ಮ, ತಂದೆ ನಾಗರೆಡ್ಡಿ ದೈವಸಂಪನ್ನರು. ಅಕ್ಕಮಹಾದೇವಿಯಂತೆ ದೈವಭಕ್ತಳಾಗಿ ಬೆಳೆದ ಮಲ್ಲಮ್ಮನಿಗೆ ಮಲ್ಲಿಕಾರ್ಜುನನ ಆಧ್ಯಾತ್ಮಿಕ ಸೆಳೆತ ಬಾಲ್ಯಸಹಜವಾಗಿ ಬಂದಿತು. ಮಲ್ಲಮ್ಮ ಹರೆಯಕ್ಕೆ ಬಂದಾಗ, ಅದೇ ಪರಿಸರದ ಸಿದ್ಧಾಪುರದ ರಾಜಪರಿವಾರ, ಕೃಷಿಯನ್ನು ಅವಲಂಬಿಸಿದ ಕುಮಾರಗಿರಿ ವೇಮರೆಡ್ಡಿ ಮತ್ತು ಪದ್ಮಾವತಿಯವರ ಐದು ಮಕ್ಕಳಲ್ಲಿ ಮೂರನೇ ಮಗ ಭರಮರೆಡ್ಡಿಯೊಂದಿಗೆ 1444ರಲ್ಲಿ ವಿವಾಹವಾಯಿತು. ಈಕೆಯ ಜನ್ಮನಾಮ ನರಸಾಂಬೆ ಎಂಬುದನ್ನು ವಿದ್ವಾಂಸರು ಪತ್ತೆಹಚ್ಚಿದ್ದಾರೆ. ಆದರೆ ಮಲ್ಲಯ್ಯನ ಕರುಣೆಯಿಂದ ಹುಟ್ಟಿದ ಈಕೆ ಮಲ್ಲಮ್ಮಳೆಂದೆ ಪ್ರಸಿದ್ಧಿಯಾಗುತ್ತಾಳೆ. ]ೕಶೈಲ ಪ್ರದೇಶವನ್ನು ಆಳುತ್ತಿದ್ದ ಕೊಂಡವೀಡು ರಾಜವಂಶಸ್ಥರ ಹೇಮರಡ್ಡಿ ಮನೆಯ ಸೊಸೆಯಾದ ಕಾರಣ ಹೇಮರಡ್ಡಿ ಮಲ್ಲಮ್ಮ ಎಂದು ಪ್ರಖ್ಯಾತಳಾದಳು. ಲೌಕಿಕ ವ್ಯವಹಾರಜ್ಞಾನವಿಲ್ಲದ ಗಂಡ, ಸಾತ್ವಿಕ ಸ್ವರೂಪಿ ಮಾವ ಮನೆಯಲ್ಲಿದ್ದರೂ ಅತ್ತೆ ಮತ್ತು ನೆಗೆಣ್ಣಿಯರಿಂದ ಅನೇಕ ರೀತಿಯ ಕಷ್ಟಕಾರ್ಪಣ್ಯಗಳನ್ನು ಮಲ್ಲಮ್ಮ ಅನುಭವಿಸಬೇಕಾಯಿತು. ತ್ರಿಕಾಲ ಮಲ್ಲಿಕಾರ್ಜುನನ ಧ್ಯಾನದಲ್ಲಿರುತ್ತ, ಅತ್ತೆಮನೆಯವರು ನೀಡಿದ ಕೆಲಸಗಳನ್ನು ಮಾಡಿದ ಮಲ್ಲಮ್ಮ, ಅನೇಕ ಆಪಾದನೆಗಳನ್ನು ಎದುರಿಸಬೇಕಾಯಿತು; ದೈವದ ಪರೀಕ್ಷೆಗೊಳಗಾಗಬೇಕಾಯಿತು. ಇಷ್ಟಾದರೂ, ತನ್ನ ಅತ್ತೆ ನೆಗೆಣ್ಣಿಯರ ಮನಃಪರಿವರ್ತನೆಯೊಂದಿಗೆ, ಮೈದುನ ವೇಮನ ಯೋಗಿ ವೇಮನರಾಗಿ ಪರಿವರ್ತನೆಯಾಗಲು ಕಾರಣವಾಗಿದ್ದು ಮಲ್ಲಮ್ಮನ ದೈವಸಂಪನ್ನ ಕರುಣೆ ಮತ್ತು ತಾಯ್ತನದ ಗುಣಗಳು.
ನಿಸ್ವಾರ್ಥ ಭಕ್ತಿ, ಜಂಗಮ ಪ್ರೇಮ, ದಾಸೋಹ ಗುಣ, ಸರ್ವರಲಿ ಪ್ರೀತಿ ಆದರ ತೋರುವ ಗುಣಗಳು ಅತ್ತೆ-ನೆಗೆಣ್ಣಿಯರಿಗೆ ಆಪತ್ತಾಗಿ ಕಷ್ಟ ಪರಂಪರೆಗೆ ಸಿಲುಕುವ ಹೇಮರೆಡ್ಡಿ ಮಲ್ಲಮ್ಮ ಮಲ್ಲಿಕಾರ್ಜುನನ ಅನುಗ್ರಹದಿಂದ ಎಲ್ಲ ಕಷ್ಟಗಳಿಂದ ಬಿಡುಗಡೆ ಹೊಂದಿ ಆದರ್ಶ ಶರಣೆಯಾಗಿ ರೂಪುಗೊಂಡಳು.
ಬದುಕಿನ ಆದರ್ಶಗಳು: ಹೇಮರೆಡ್ಡಿ ಮಲ್ಲಮ್ಮ ಅಕ್ಕಮಹಾದೇವಿಯಂತೆ ವಚನಗಳ ರಚನೆಮಾಡಲಿಲ್ಲ; ಮೀರಾಳಂತೆ ಭಜನ್ಗಳನ್ನು ಬರೆಯಲಿಲ್ಲ. ಹೇಮರೆಡ್ಡಿ ಮಲ್ಲಮ್ಮನಿಗೆ ಬದುಕೇ ಆದರ್ಶ. ಸಂಸಾರದೊಳಗಿದ್ದರೂ ಆಧ್ಯಾತ್ಮಿಕ ಸಾಧನೆಯಿಂದ ಆತ್ಮೋನ್ನತಿಯನ್ನು ಪಡೆದು ದೈವತ್ವದ ಪಟ್ಟಕ್ಕೇರಿ ಶ್ರೀಶೈಲ ಮಲ್ಲಿಕಾರ್ಜುನನ ಕರುಣೆಯ ಕೂಸಾದರು. ಸತ್ಯ ಪ್ರಾಮಾಣಿಕತೆಗೆ ಮಾದರಿಯಾದ ಹೇಮರೆಡ್ಡಿ ಮಲ್ಲಮ್ಮ ಕಷ್ಟಕರ ಸನ್ನಿವೇಶಗಳ ನಡುವೆಯೂ ಬದುಕಿನುದ್ದಕ್ಕೂ ಆ ಆದರ್ಶಗಳನ್ನು ಅನುಸರಿಸಿದರು.
ನಿನ್ನ ಕಷ್ಟ ದುಃಖ ಹೇಳಲಾರೆನಮ್ಮ
ಗಂಡನ ಮೇಲೆ ಪ್ರೇಮ
ಹೊತ್ತಿಗಂಬಲೆ ಸಿಗಲಿಲ್ಲವಮ್ಮ
ಮಣ್ಣು ಪಾತ್ರೆ ಮಜ್ಜಿಗೆ ನೇಮ
ಮಲ್ಲಯ್ಯನು ಪಾಲುಗಾರನಮ್ಮ
ಉಂಡುಹೋದ ಉಳಿಯಲಿಲ್ಲವಮ್ಮ
ನೀಬೀಸುದು ದಿನದಿನ ಕಾಯಮ ||
(ಶಿಶುನಾಳ ಶರೀಫ ಶಿವಯೋಗಿ – ಹೇಮರೆಡ್ಡಿ ಮಲ್ಲಮ್ಮ)
ಕಾಯಕ ತತ್ಪರತೆ ಹೇಮರೆಡ್ಡಿ ಮಲ್ಲಮ್ಮನ ಮತ್ತೊಂದು ದೊಡ್ಡಗುಣ. ಕಾಯಕದಲ್ಲಿ ಕೈಲಾಸವನ್ನು ಕಾಣುತ ಶರಣತತ್ತ್ವವನ್ನು ಪಾಲಿಸುತ್ತ, ಕಾಯಕದೊಳು ನಿರತನಾದೊಡೆ ಗುರುದರ್ಶನವಾದರೂ ಮರೆಯಬೇಕು ಎಂಬ ಆಯ್ದಕ್ಕಿ ಲಕ್ಕಮ್ಮನ ವಚನಗಳನ್ನು ಚಾಚೂ ತಪ್ಪದೇ ಅನುಸರಿಸಿದ ಆದರ್ಶಜೀವಿ.
ದಾನಗುಣ, ದಾಸೋಹ ತತ್ಪರತೆ ಹಾಗೂ ನಿಸ್ವಾರ್ಥ ಭಕ್ತಿಗೆ ಹೆಸರಾದ ಹೇಮರೆಡ್ಡಿ ಮಲ್ಲಮ್ಮ ತನ್ನವರಿಂದ ತಿರಸ್ಕರಿಸಲ್ಪಟ್ಟು, ಗುಡಿಸಲಿಲ್ಲದ್ದರೂ ಬಂದ ಜಂಗಮರಿಗೆ ಪ್ರಸಾದವನ್ನಿಕ್ಕುವ ಗುಣದವರು. ಸಾಕ್ಷಾತ್ ಮಲ್ಲಿಕಾರ್ಜುನನೇ ಪರೀಕ್ಷಾರ್ಥವಾಗಿ ಬಂದಾಗ ತನ್ನಲ್ಲಿರುವುದೆಲ್ಲವನ್ನು ಉಣ್ಣಲಿಕ್ಕಿದ ಮಹಾತಾಯಿ ಮಲ್ಲಮ್ಮ ಜಂಗಮ ಸೇವೆಯೇ ಪರದೈವ ಸೇವೆಯೆಂದು ಬದುಕಿದವರು. ಇಂದಿನ ಕಾಲಘಟ್ಟದಲ್ಲಿ ಕುಟುಂಬದೊಳಗೆ ಸಹ ಪರಸ್ಪರ ನಂಬಿಕೆ, ವಿಶ್ವಾಸ, ಕ್ಷಮಿಸುವ ಗುಣಗಳು ಕ್ಷೀಣಿಸಿವೆ. ಆದರೆ ಹೇಮರೆಡ್ಡಿ ಮಲ್ಲಮ್ಮ ಕುಟುಂಬದವರು ತನಗೆ ಏನೆಲ್ಲ ಕಷ್ಟಗಳನ್ನು ನೀಡಿದರೂ ಅವರಿಗೆ ಕೇಡನ್ನು ಬಯಸದ ಕ್ಷಮಾಶೀಲೆ; ಜೀವದಯಾಪರರಾದ ಮಲ್ಲಮ್ಮ ಸಕಲ ಜೀವರಾಶಿಗಳಲ್ಲಿ ಲೇಸನ್ನೇ ಬಯಸುವ ಗುಣಾಧಿಕ್ಯವುಳ್ಳವರು. ಮಲ್ಲಮ್ಮನ ಕುರಿತು ಹಲವು ಪುರಾಣ, ಪುಣ್ಯಕತೆಗಳಿವೆ. ಅಲ್ಲಿ ಆಕೆಯ ಬಗ್ಗೆ ಹಲವು ಪವಾಡದ ಪ್ರಸ್ತಾಪ ಬರುತ್ತದೆ. ಮಲ್ಲಯ್ಯನ ಕೃಪೆಯಿಂದ ನೂರಾರು ಜನರ ರೋಗ-ರುಜಿನಗಳನ್ನು ವಾಸಿ ಮಾಡುವ ಮಲ್ಲಮ್ಮ ಸಾಮಾನ್ಯರ ದೃಷ್ಠಿಯಲ್ಲಿ ದೈವತ್ವ ಪಡೆದುಕೊಳ್ಳುತ್ತಾಳೆ.
ಹೇಮರೆಡ್ಡಿ ಮಲ್ಲಮ್ಮನಿಗೆ ಜೀವಿತಾವಧಿಯ ಕೊನೆಯಲ್ಲಿ ಶ್ರೀಶೈಲ ಮಲ್ಲಿಕಾರ್ಜುನನ ದಿವ್ಯದರ್ಶನವಾಗುತ್ತದೆ. ಆಗ ಮಲ್ಲಿಕಾರ್ಜುನನು ಮಲ್ಲಮ್ಮಳ ಕೊನೆಯ ಆಸೆಯನ್ನು ಕೇಳಿದಾಗ, ತನಗಾಗಿ ಏನನ್ನೂ ಕೇಳದ ಆಕೆ, ತನ್ನ ಬಂಧುಬಳಗಕ್ಕೆ ಬಡತನವು ಸಮೀಪ ಸುಳಿಯಬಾರದು; ರೆಡ್ಡಿ ಜನಾಂಗವು ದಾನಗುಣವನ್ನು ಮೈಗೂಡಿಸಿಕೊಂಡು ಆಪತ್ಕಾಲದಲ್ಲಿರುವವರಿಗೆ, ದೀನ ದಲಿತರಿಗೆ ಸಹಾಯ ಮಾಡಬೇಕು; ತಮ್ಮಲ್ಲಿರುವ ಸಂಪತ್ತನ್ನು ಸಮಾಜೋಪಯೋಗಿ ಸತ್ಕಾರ್ಯಕ್ಕಾಗಿ ವಿನಿಯೋಗಿಸಬೇಕು; ದುರ್ವ್ಯಸನಗಳಿಗಾಗಿ ಹಾಳು ಮಾಡಬಾರದು; ಹಣ, ಅಧಿಕಾರ ಸಿಕ್ಕಾಗ ಸೊಕ್ಕಿನಿಂದ ವರ್ತಿಸಬಾರದು ಎಂದು ಕೇಳುತ್ತಾಳೆ. ಹೇಮರೆಡ್ಡಿ ಮಲ್ಲಮ್ಮ ತೋರಿದ ಆದರ್ಶದ ಬೆಳಕಿನಲ್ಲಿ ಮುನ್ನಡೆಯುವುದೇ ಆ ಮಹಾಶರಣೆಗೆ ನಾವು ಸಲ್ಲಿಸಬಹುದಾದ ಗೌರವ.
(ಲೇಖಕರು ಸಹಾಯಕ ಪ್ರಾಧ್ಯಾಪಕರು)