ಪುಟಗಳು

TEACHERS USEFUL

19.7.16

ವಿದ್ಯಾರ್ಥಿ ವೇತನ

*ಪ್ರಥಮ ಪಿಯುಸಿ ವಿದ್ಯಾರ್ಥಿನಿಯ(ಅಲ್ಪಸಂಖ್ಯಾತ)ರಿಂದ 2016-17 ನೇ ಸಾಲಿನ ಮೌಲಾನಾ ಆಝಾದ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ*

ಪ್ರಥಮ ಪಿಯುಸಿಯಲ್ಲಿ ಕಲಿಯುತ್ತಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ(ಮುಸ್ಲಿಂ, ಕ್ರಿಶ್ಚಿಯನ್, ಜೈನ, ಬೌದ್ಧ, ಸಿಖ್, ಪಾರ್ಸಿ)  ವಿದ್ಯಾರ್ಥಿನಿಯರಿಗಾಗಿ ಮಾತ್ರ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

*ಅರ್ಹತೆ: ಎಸೆಸೆಲ್ಸಿ/ಕಳೆದ ತತ್ಸಮಾನ ಪರೀಕ್ಷೆಯಲ್ಲಿ ಶೇ. 55 ಕ್ಕಿಂತ ಹೆಚ್ಚು ಅಂಕ ಪಡೆದಿರಬೇಕು.*

ಆದಾಯ ಮಿತಿ: 1 ಲಕ್ಷದೊಳಗೆ ಇರಬೇಕು.

ಬೇಕಾದ ದಾಖಲೆಗಳು:
*(ಇಂಗ್ಲಿಷ್ ಅಥವಾ ಹಿಂದಿಯಲ್ಲಿರಬೇಕು)*

1. ಆದಾಯ ಪ್ರಮಾಣ ಪತ್ರ(ತಹಶೀಲ್ದಾರರಿಂದ ಪಡೆದ ದಾಖಲೆ ಇಂಗ್ಲಿಷ್ ನಲ್ಲಿರಬೇಕು ಅಥವಾ 20 ರೂ. ಗಳ ಅಫಿಡವಿಟ್ ಸಲ್ಲಿಸಬಹುದು)
2. ಎಸೆಸೆಲ್ಸಿ ಮಾರ್ಕ್ ಕಾರ್ಡ್ (ಅಂಕಪಟ್ಟಿ)
3. ಸ್ಟಡಿ ಸರ್ಟಿಫಿಕೇಟ್
4. ಪಾಸ್ ಪೋರ್ಟ್ ಸೈಝ್ ಫೋಟೋ
5. ಆಧಾರ್ ಕಾರ್ಡ್

ಎಲ್ಲಾ ದಾಖಲೆಗಳನ್ನು ಕಾಲೇಜಿನ ಪ್ರಾಂಶುಪಾಲರ ಮೂಲಕ ಅಟೆಸ್ಟೆಡ್ ಮಾಡಿರಬೇಕು.

*ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 30, 2016*

ವೆಬ್ ಸೈಟ್ ವಿಳಾಸ: *www.maef.nic.in*

ಕೆಎಸ್‌ಒಯುಗೆ ಮಾನ್ಯತೆ

ಕೆಎಸ್‌ಒಯುಗೆ ಮಾನ್ಯತೆ
Vijaya karnataka

Jul 18, 2016, 04.00 AM IST

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಮಾನ್ಯತೆ ಕಳೆದುಕೊಂಡಿದ್ದ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮತ್ತೆ ಮಾನ್ಯತೆ ಸಿಗುವ ಸಾಧ್ಯತೆಯಿದೆ. ಈ ಕುರಿತಂತೆ ಅವಶ್ಯಕ ದಾಖಲೆಗಳನ್ನು ಕೆಎಸ್‌ಯುಒ ಯುಜಿಸಿಗೆ ಸಲ್ಲಿಸಿದೆ ಎಂದು ಉನ್ನತ ಮೂಲಗಲು ತಿಳಿಸಿವೆ. ಈ ಹಿಂದೆ ಯುಜಿಸಿಯ ಅನುಮತಿಯಿಲ್ಲದೆ ನಾನಾ ಶೈಕ್ಷಣಿಕ ಒಪ್ಪಂದಗಳನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ಯುಜಿಸಿ ಮಾನ್ಯತೆ ರದ್ದು ಮತ್ತು ಅನುದಾನ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಮಾನ್ಯತೆ ಕುರಿತಂತೆ ಮನವಿ ಸಲ್ಲಿಸಿ ಅವಶ್ಯಕ ದಾಖಲೆಗಳನ್ನು ಸಲ್ಲಿಸುವಂತೆ ಯುಜಿಸಿ ನಿರ್ದೇಶನ ನೀಡಿತ್ತು. ಕೆಎಸ್‌ಯುಒದ ದೂರ ಶಿಕ್ಷಣ ಸಾಕಷ್ಟು ಜನಪ್ರಿಯವಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮಾನ್ಯತೆ ಮತ್ತೆ ನೀಡುವಂತೆ ಸಂಸ್ಥೆ ಮನವಿ ಮಾಡಿಕೊಂಡಿತ್ತು. ಇಲ್ಲವಾದರೆ ಅಂತಹ ಆಸಕ್ತ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಹಿಂದಿನ ತೀರ್ಮಾನವನ್ನು ಹಿಂತೆಗೆದುಕೊಳ್ಳುವಂತೆ ಕೋರಿಕೊಂಡಿತ್ತು.