ಕೆಎಸ್‌ಒಯುಗೆ ಮಾನ್ಯತೆ
Vijaya karnataka
Jul 18, 2016, 04.00 AM IST
ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಿಯಮ ಉಲ್ಲಂಘಿಸಿದ ಆರೋಪದಲ್ಲಿ ಮಾನ್ಯತೆ ಕಳೆದುಕೊಂಡಿದ್ದ ಮೈಸೂರಿನ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯಕ್ಕೆ ಮತ್ತೆ ಮಾನ್ಯತೆ ಸಿಗುವ ಸಾಧ್ಯತೆಯಿದೆ. ಈ ಕುರಿತಂತೆ ಅವಶ್ಯಕ ದಾಖಲೆಗಳನ್ನು ಕೆಎಸ್‌ಯುಒ ಯುಜಿಸಿಗೆ ಸಲ್ಲಿಸಿದೆ ಎಂದು ಉನ್ನತ ಮೂಲಗಲು ತಿಳಿಸಿವೆ. ಈ ಹಿಂದೆ ಯುಜಿಸಿಯ ಅನುಮತಿಯಿಲ್ಲದೆ ನಾನಾ ಶೈಕ್ಷಣಿಕ ಒಪ್ಪಂದಗಳನ್ನು ಮಾಡಿಕೊಂಡ ಹಿನ್ನೆಲೆಯಲ್ಲಿ ಯುಜಿಸಿ ಮಾನ್ಯತೆ ರದ್ದು ಮತ್ತು ಅನುದಾನ ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಮಾನ್ಯತೆ ಕುರಿತಂತೆ ಮನವಿ ಸಲ್ಲಿಸಿ ಅವಶ್ಯಕ ದಾಖಲೆಗಳನ್ನು ಸಲ್ಲಿಸುವಂತೆ ಯುಜಿಸಿ ನಿರ್ದೇಶನ ನೀಡಿತ್ತು. ಕೆಎಸ್‌ಯುಒದ ದೂರ ಶಿಕ್ಷಣ ಸಾಕಷ್ಟು ಜನಪ್ರಿಯವಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಮಾನ್ಯತೆ ಮತ್ತೆ ನೀಡುವಂತೆ ಸಂಸ್ಥೆ ಮನವಿ ಮಾಡಿಕೊಂಡಿತ್ತು. ಇಲ್ಲವಾದರೆ ಅಂತಹ ಆಸಕ್ತ ವಿದ್ಯಾರ್ಥಿಗಳು ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ಈ ಹಿಂದಿನ ತೀರ್ಮಾನವನ್ನು ಹಿಂತೆಗೆದುಕೊಳ್ಳುವಂತೆ ಕೋರಿಕೊಂಡಿತ್ತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಇಲ್ಲಿ ನಿಮ್ಮ ಸಲಹೆ / ಸೂಚನೆಗಳನ್ನು ಬರೆಯಿರಿ