20.7.16

ಯೂರಿನ್‌ನ ಬಣ್ಣದಿಂದ ತಿಳಿಯಿರಿ ನಿಮಗೆ ಯಾವ ರೋಗ ಇದೆ ಎಂದು

ಯೂರಿನ್‌ನ ಬಣ್ಣದಿಂದ ತಿಳಿಯಿರಿ ನಿಮಗೆ ಯಾವ ರೋಗ ಇದೆ ಎಂದು
Published 20-Jul-2016 00:15 IST 
   

ನಮ್ಮ ದೇಹದಲ್ಲಿ ಕಾಣಿಸಿಕೊಳ್ಳುವ ಹಲವಾರು ಸಮಸ್ಯೆಗಳನ್ನು ಯೂರಿನ್‌ನ ಬಣ್ಣದಿಂದ ಪತ್ತೆ ಹಚ್ಚಬಹುದು. ಸರಿಯಾದ ಸಮಯದಲ್ಲಿ ಅದನ್ನು ಪತ್ತೆ ಹಚ್ಚಿದರೆ ಹಲವಾರು ರೋಗಗಳಿಂದ ನೀವು ಬಚಾವಾಗುವಿರಿ. ಪ್ರಖ್ಯಾತ ವೈದ್ಯರೊಬ್ಬರು ಇಲ್ಲಿ ಯೂರಿನ್‌ನ 8 ಸಂಕೇತಗಳ ಬಗ್ಗೆ ತಿಳಿಸಿದ್ದಾರೆ. ಇದನ್ನು ಇಗ್ನೋರ್‌ ಮಾಡದೆ ಅದರ ಬಗ್ಗೆ ಗಮನ ಹರಿಸಿದರೆ ನೀವು ರೋಗದಿಂದ ಮುಕ್ತಿ ಹೊಂದಬಹುದು.

ಯೂರಿನ್‌ನ ಬಣ್ಣದಿಂದ ತಿಳಿಯಿರಿ ನಿಮಗೆ ಯಾವ ರೋಗ ಇದೆ ಎಂದು...

ಡಾರ್ಕ್‌ ಹಳದಿ ಬಣ್ಣ : ಮೂತ್ರದ ಬಣ್ಣ ಈ ರೀತಿಯಾಗಿದ್ದರೆ ಇದು ಲಿವರ್‌ ಪ್ರಾಬ್ಲಂ ಮತ್ತು ರಕ್ತ ಕಡಿಮೆ ಇರುವ ಸಂಕೇತವಾಗಿದೆ. ಹಲವಾರು ಬಾರಿ ನಾವು ಸೇವನೆ ಮಾಡುವ ಔಷಧಿಯ ಕಾರಣದಿಂದಲೂ ಮೂತ್ರದ ಬಣ್ಣ ಹಳದಿಯಾಗಿರುತ್ತದೆ.

ಡಾರ್ಕ್‌ ಕೆಂಪು : ಇದು ಮಲೇರಿಯಾ ಮತ್ತು ಕಿಡ್ನಿ ಹಾಳಾಗಿರುವ ಸಂಕೇತವಾಗಿದೆ.

ಹಾಲಿನಂತೆ ಬಿಳಿ ಬಣ್ಣ : ಮೂತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುವುದರಿಂದ ಮೂತ್ರದ ಬಣ್ಣ ಹಾಲಿನಂತೆ ಬಿಳಿಯಾಗುತ್ತದೆ. ಅಲ್ಲದೇ ಅಲರ್ಜಿ ಮತ್ತು ಕಿಡ್ನಿ ಸ್ಟೋನ್‌ ಆಗಿರುವುದರಿಂದಲೂ ಈ ಬಣ್ಣ ಬರುತ್ತದೆ.

ಕೆಂಪು ಬಣ್ಣ : ಇದು ಕಿಡ್ನಿ ಸ್ಟೋನ್‌ ಅಥವಾ ಟ್ಯೂಮರ್‌ನ ಸಂಕೇತ. ಔಷಧಿಯ ಅಡ್ಡ ಪರಿಣಾಮದಿಂದಲೂ ಹೀಗೆ ಆಗುತ್ತದೆ.

ನೀಲಿ ಬಣ್ಣ :  ಮೂತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡಿರುವುದರಿಂದ ಹೀಗೆ ಆಗುತ್ತದೆ. ಕೆಲವೊಮ್ಮೆ ನೀವು ಸೇವಿಸುವ ಆಹಾರದಲ್ಲಿ ಆರ್ಟಿಫಿಶಿಯಲ್‌ ಬಣ್ಣ ಸೇರಿಕೊಂಡಿದ್ದರೆ ಹೀಗೆ ಆಗುತ್ತದೆ.

ಕಂದು ಬಣ್ಣ : ಲಿವರ್‌ ಹಾಳಾದರೆ ಈ ಬಣ್ಣದ ಮೂತ್ರ ಬರುತ್ತದೆ.

ನೀರಿನಂತಹ ಬಣ್ಣ : ಡಯಾಬಿಟೀಸ್‌ ಅಥವಾ ಕಿಡ್ನಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಕಾಣಿಸಿಕೊಂಡರೆ ಈ ರೀತಿ ಬಣ್ಣಕ್ಕೆ ಮೂತ್ರ ಬದಲಾಗುತ್ತದೆ.

ಚಾಕಲೇಟ್‌ನಂತಹ ಬಣ್ಣ : ಕಿಡ್ನಿ ಸ್ಟೋನ್‌ ಆದರೆ ಅಥವಾ ಟ್ಯೂಮರ್‌ನಲ್ಲಿ ಸೇರಿಕೊಂಡ ರಕ್ತ ಮೂತ್ರದೊಂದಿಗೆ ಬಂದಾಗ ಈ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ.

ಕಾಮೆಂಟ್‌ಗಳಿಲ್ಲ: