ಪುಟಗಳು

TEACHERS USEFUL

13.12.17

GPSTR - 6 to 8 ನೇಮಕಾತಿ - 6-8 ನೇಮಕಾತಿ - gpt

*15000 ಪದವಿಧರ ಪ್ರಾಥಮಿಕ  ಶಾಲೆಯ ಶಿಕ್ಷಕರ ನೇಮಕಾತಿ ಪರೀಕ್ಷೆಯ 1:1 ತಾತ್ಕಾಲಿಕ ಆಯ್ಕೆಪಟ್ಟಿ 👇👇👇👇👇








👉 GPSTR ನೇಮಕಾತಿ ೧:೧ ಪಟ್ಟಿ ಪ್ರಕಟಣೆಯ ಕುರಿತು 



ಸಂವಿಧಾನ ದಿನ

*ಭಾರತದ ಸಂವಿಧಾನ ದಿನ*
*ನವಂಬರ್ ೨೬*


*ಭಾರತದ ಸಂವಿಧಾನ ಬಗ್ಗೆ*
*ಉದ್ದೇಶಗಳು*

*ಅಕ್ಟೋಬರ್ 12ರಂದು ಮುಂಬೈನಲ್ಲಿ ಅಂಬೇಡ್ಕರ್ ಸ್ಮಾರಕಕ್ಕೆ ಅಡಿಗಲ್ಲು ಹಾಕುವ* *ಸಮಾರಂಭದಲ್ಲಿ ಪ್ರಧಾನಿ ನರೇಂದ್ರ* *ಮೋದಿಯವರು, ನವೆಂಬರ್ 26ನ್ನು ದೇಶದ ಸಂವಿಧಾನ* *ದಿನವಾಗಿ ಆಚರಿಸಲಾಗುವುದು ಎಂದು ಘೋಷಿಸಿದ್ದರು. ಸಂವಿಧಾನ ದಿನ ಆಚರಿಸುವ ಮುಖ್ಯ* *ಉದ್ದೇಶವೆಂದರೆ, ಸಂವಿಧಾನದ ಮಹತ್ವವನ್ನು ಎಲ್ಲರಿಗೂ ತಿಳಿಸಿಕೊಡುವುದು ಹಾಗೂ ಸಂವಿಧಾನದ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಜಾಗೃತಿ ಮೂಡಿಸುವುದು. ಈ* *ದಿನದಂದು ಪ್ರತಿ ವರ್ಷ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಸಂವಿಧಾನ ಹಾಗೂ ಅಂಬೇಡ್ಕರ್ ಬಗ್ಗೆ ಬೋಧಿಸಲಾಗುವುದು *ಎಂದು ಮೋದಿ ಘೋಷಿಸಿದ್ದರು.*
*1949ರ ಆ ದಿನ* *ಸಂವಿಧಾನವನ್ನು* *ಆಂಗೀಕರಿಸಲಾಯಿತು. ಇದು 1950ರ ಜನವರಿ 26ರಂದು ಅನುಷ್ಠಾನಕ್ಕೆ ತರಲಾಯಿತು. ಇದು ಭಾರತದ ಇತಿಹಾಸದಲ್ಲಿ ಹೊಸ ಶಖೆಯನ್ನು ಆರಂಭಿಸಿತ್ತು. ಈ* *ವರ್ಷವನ್ನು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜಯಂತಿ ವರ್ಷವಾಗಿಯೂ ಆಚರಿಸಲಾಗುತ್ತಿದೆ.*
*ಭಾರತದ ಸಂವಿಧಾನ ಬಗ್ಗೆ*
*ಭಾರತದಲ್ಲಿ* *ಸಂವಿಧಾನವನ್ನು* *1949ರ ನವೆಂಬರ್* *26ರಂದು* *ಸ್ವೀಕರಿಸಲಾಯಿತು. ಇದು 1950ರ ಜನವರಿ 26ರಂದು* *ಅನುಷ್ಠಾನಕ್ಕೆ* *ಬಂತು.*
*ಭಾರತದ ಸಂವಿಧಾನವು ಟೈಪ್ ಮಾಡಿರುವುದಲ್ಲ ಅಥವಾ ಮುದ್ರಿತವೂ ಅಲ್ಲ. ಅದನ್ನು ಕೈಯಲ್ಲಿ* *ಬರೆಯಲಾಗಿದ್ದು, ಇಂಗ್ಲಿಷ್ ಮತ್ತು ಹಿಂದಿಯಲ್ಲಿದೆ.*
*ಭಾರತ ಸಂವಿಧಾನದ ಮೂಲ ಪ್ರತಿಗಳನ್ನು ವಿಶೇಷ* *ಹೀಲಿಯಂ ತುಂಬಿದ ಕವಚಗಳಲ್ಲಿ* *ಸಂರಕ್ಷಿಸಲಾಗಿದ್ದು, ಇದು ಭಾರತದ ಸಂಸತ್ ಭವನದ* *ಗ್ರಂಥಾಲಯದಲ್ಲಿದೆ.*
*ಭಾರತ ಸಂವಿಧಾನವನ್ನು ಬೇರೆ ಕಡೆಗಳಿಂದ ಪಡೆದ* *ಅಂಶಗಳ ಚೀಲ ಎಂದು* *ಕರೆಯಲಾಗುತ್ತಿದೆ.*
*ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತದ ಪರಿಕಲ್ಪನೆಗಳನ್ನು ಫ್ರಾನ್ಸ್ ಸಂವಿಧಾನದಿಂದ ಪಡೆಯಲಾಗಿದೆ.*
*ಪಂಚವಾರ್ಷಿಕ* *ಯೋಜನೆಯ ಕಲ್ಪನೆಯನ್ನು ಸೋವಿಯತ್ ಒಕ್ಕೂಟದಿಂದ ಪಡೆಯಲಾಗಿದೆ.*
*ರಾಜ್ಯ ನಿರ್ದೇಶನ ತತ್ವಗಳು ಐರ್ಲೆಂಡ್ ಸಂವಿಧಾನದ ಕೊಡುಗೆ*
*ಸುಪ್ರೀಂಕೋರ್ಟ್ ಕಾರ್ಯನಿರ್ವಹಣೆಯ ಕಾನೂನನ್ನು ಜಪಾನ್‍ನಿಂದ ಎರವಲು ಪಡೆಯಲಾಗಿದೆ.*
*ಇದು ವಿಶ್ವದ ಯಾವುದೇ* *ಸ್ವತಂತ್ರ್ಯ ದೇಶಗಳ ಅತಿ* *ಉದ್ದವಾದ* *ಸಂವಿಧಾನವಾಗಿದೆ.*
*ಭಾರತದ ಸಂವಿಧಾನದಲ್ಲಿ 448 ವಿಧಿಗಳು, 25 ಭಾಗಗಳು, 12 ಶೆಡ್ಯೂಲ್, 5 ಅನುಬಂಧಗಳು, 98* *ತಿದ್ದುಪಡಿಗಳಿವೆ.*
*ಸಂವಿಧಾನ ರಚನಾ ಸಮಿತಿಯಲ್ಲಿ 284 ಮಂದಿ* *ಸದಸ್ಯರಿದ್ದರು. ಅವರಲ್ಲಿ 15 ಮಂದಿ ಮಹಿಳೆಯರು.*
*ಇದರ ಕರಡನ್ನು 1949ರ* *ನವೆಂಬರ್‍ನಲ್ಲಿ* *ಸಲ್ಲಿಸಲಾಯಿತು. ಸಲ್ಲಿಕೆ ಬಳಿಕ ಅದನ್ನು* *ಪೂರ್ಣಗೊಳಿಸಲು *ಮೂರು ವರ್ಷ ಬೇಕಾಯಿತು.*
*ಸಂವಿಧಾನ ರಚನಾ* *ಸಮಿತಿಯಲ್ಲಿದ್ದ ಎಲ್ಲ 284 ಮಂದಿ ಸದಸ್ಯರು 1950ರ ಜನವರಿ 24ರಂದು ಈ* *ದಾಖಲೆಗೆ ಸಹಿ ಮಾಡಿದರು.*
*1950ರ ಜನವರಿ 26ರಂದು* *ಇದು ಅಸ್ತಿತ್ವಕ್ಕೆ ಬಂತು.*
*ಭಾರತದ* *ರಾಷ್ಟ್ರಲಾಂಛನವನ್ನೂ ಅದೇ ದಿನ* *ಅಳವಡಿಸಿಕೊಳ್ಳಲಾಯಿತು.*
*ಭಾರತದ ಸಂವಿಧಾನವನ್ನು ವಿಶ್ವದ ಅತ್ಯುತ್ತಮ* *ಸಂವಿಧಾನಗಳಲ್ಲೊಂದು ಎಂದು ಹೇಳಲಾಗಿದೆ.* *ಏಕೆಂದರೆ ಅದಕ್ಕೆ ಕೇವಲ 94 ತಿದ್ದುಪಡಿಗಳನ್ನು ತರಲಾಗಿದೆ.*

*ಉದ್ದೇಶಗಳು*

*ದೇಶಾದ್ಯಂತ ವರ್ಷವಿಡೀ* *ನಡೆಯುವ 125ನೇ ಜಯಂತಿ* *ಆಚರಣೆಯ ಭಾಗವಾಗಿ ಸಂವಿಧಾನ ದಿನವನ್ನು ಆಚರಿಸಲಾಗುತ್ತಿದೆ.*
*ಸಂವಿಧಾನ ರಚನಾ ಸಮಿತಿ* *ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ ಮಹಾನ್ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಇದನ್ನು ಆಚರಿಸಲಾಗುತ್ತಿದೆ.*
*ಸಂವಿಧಾನ ದಿನಾಚರಣೆಯ ಸಮಾರಂಭ ಆಯೋಜಿಸುವ* *ಹೊಣೆಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯಕ್ಕೆ ವಹಿಸಲಾಗಿದೆ.*
*ಎಲ್ಲ ಸಿಬಿಎಸ್‍ಇ, ಕೇಮದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ,* *ಕೇಂದ್ರೀಯ ಟಿಬೇಟಿಯನ್ ಸ್ಕೂಲ್ ಅಡ್ಮಿನಿಸಟ್ರೇಷನ್ ಮತ್ತು ಕೌನ್ಸಿಲ್ ಫಾರ್ ದ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ ಹಾಗೂ ಎಲ್ಲ ರಾಜ್ಯ ಸರ್ಕಾರಗಳ* *ಆಧೀನದ ಶಾಲೆಗಳು ಮೊಟ್ಟಮೊದಲ ಸಂವಿಧಾನ ದಿನಾಚರಣೆ ಅಂಗವಾಗಿ ಈ ಕೆಳಗಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಮಾನವ* *ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಾಲಾ ಶಿಕ್ಷಣ ಹಾಗೂ* *ಸಾಕ್ಷರತಾ ಇಲಾಖೆ ಮೂಲಕ ಸೂಚನೆ ನೀಡಲಾಗಿದೆ.*
*2015ರ ನವೆಂಬರ್ 26ರಂದು ಸಂವಿಧಾನದ* *ಪೀಠಿಕೆಯನ್ನು* *ವಿದ್ಯಾರ್ಥಿಗಳು ಶಾಲಾ ಅಸೆಂಬ್ಲಿಯನ್ನು ಓದಿ ಹೇಳಬೇಕು.*
*2015ರ ನವೆಂಬರ್ 26ರಂದು ಒಂದು ಪಿರಿಯೇಡನ್ನು ಕಡ್ಡಾಯವಾಗಿ* *ಸಂವಿಧಾನದ ಪ್ರಮುಖ ಲಕ್ಷಣಗಳು ಹಾಗೂ ಅದರ *ರಚನೆ ಬಗ್ಗೆ ಅತಿಥಿ ಉಪನ್ಯಾಸಕರು ಅಥವಾ ಒಬ್ಬ ಶಿಕ್ಷಕರಿಂದ ಉಪನ್ಯಾಸ *ನೀಡಬೇಕು.*
*ಭಾರತದ ಸಂವಿಧಾನದ ಬಗ್ಗೆ ಪ್ರಬಂಧ ಸ್ಪರ್ಧೆ ಹಾಗೂ* *ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಬೇಕು.*
*ಎಲ್ಲ ಸಿಬಿಎಸ್‍ಇ ಅಧೀನದ* *ಶಾಲೆಗಳ ವಿದ್ಯಾರ್ಥಿಗಳಿಗೆ ಸಂವಿಧಾನದ ಬಗ್ಗೆ ಆನ್‍ಲೈನ್ ಪ್ರಬಂಧ ಸ್ಪರ್ಧೆಯನ್ನೂ* *ಆಯೋಜಿಸಬೇಕು.*
*ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಉನ್ನತ ಶಿಕ್ಷಣ ಸಂಸ್ಥೆಯು ಈಗಾಗಲೇ ಯುಜಿಸಿ, ಎಐಸಿಟಿಇಗೆ ಸೂಚನೆ ನೀಡಿ* *ಸಂವಿಧಾನ ದಿನದ ಆಚರಣೆಗೆ ಸೂಚನೆ ನೀಡಿದೆ.*
*ಎಲ್ಲ ಕಾಲೇಜುಗಳು* *ಸಾಧ್ಯವಿರುವ ಕಡೆಗಳಲ್ಲೆಲ್ಲ ಭಾರತದ ಸಂಸತ್ತಿನ ಬಗ್ಗೆ 2015ರ ನವೆಂಬರ್* *26ರಂದು ಅಣಕು ಸಂಸತ್ ಅಧಿವೇಶನ ಹಾಗೂ ಚರ್ಚಾಸ್ಪರ್ಧೆಗಳನ್ನು ಆಯೋಜಿಸುವಂತೆ ಸೂಚಿಸಲಾಗಿದೆ.*
*ಲಖನೌನಲ್ಲಿರುವ ಅಂಬೇಡ್ಕರ್ ವಿಶ್ವವಿದ್ಯಾನಿಲಯದಲ್ಲಿ ರಸಪ್ರಶ್ನೆ ಸ್ಪರ್ಧೆ ನಡೆಸಲು ಸೂಚಿಸಲಾಗಿದೆ ಎಂದು ಯುಜಿಸಿ ಮಾಹಿತಿ ನೀಡಿದೆ. ಇದರಲ್ಲಿ ರಾಜ್ಯಮಟ್ಟದಲ್ಲಿ* *ಆಯ್ಕೆಯಾಗುವ ಅಭ್ಯರ್ಥಿಗಳು ರಾಷ್ಟ್ರಮಟ್ಟಕ್ಕೆ ಅರ್ಹತೆ ಪಡೆಯುತ್ತಾರೆ.*
*ಯುವಜನ ವ್ಯವಹಾರಗಳ* *ಇಲಾಖೆ ಈ ಕೆಳಗಿನ ಕಾರ್ಯಕ್ರಮಗಳನ್ನು ಆಯೋಜಿಸಲು* *ಉದ್ದೇಶಿಸಿದೆ.*
*ರಾಜೀವ್‍ಗಾಂಧಿ ರಾಷ್ಟ್ರೀಯ* *ಯುವ ಅಭಿವೃದ್ಧಿ ಸಂಸ್ಥೆಯು* *ಸಂವಿಧಾನದ ಬಗ್ಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಿದೆ.*
*ಎಲ್ಲ ಶಾಲಾ ಕಾಲೇಜುಗಳ ಎನ್‍ಎಸ್‍ಎಸ್ ಘಟಕಗಳು ಸಂವಿಧಾನದ ಬಗ್ಗೆ ಉಪನ್ಯಾಸ* *ಕಾರ್ಯಕ್ರಮಗಳನ್ನು ಆಯೋಜಿಸಲಿವೆ.*
*ನೆಹರೂ ಯುವ ಸೇವಾ* *ಕೇಂದ್ರ ಹಾಗೂ ಎನ್‍ವೈಕೆಸ್ ಯುವಕ ಮಂಡಲಿಗಳು* *ಭಾರತದ ಸಂವಿಧಾನದ ಬಗ್ಗೆ* *ಜಾಗೃತಿ* *ಮೂಡಿಸುವ *ಸಲುವಾಗಿ* *ಸಂವಿಧಾನದ ಇತಿಹಾಸವನ್ನು ತಮ್ಮ ಪ್ರದೇಶಗಳಲ್ಲಿ ವಿವರಿಸಲು ಸೂಚಿಸಲಾಗಿದೆ.*
*ಸಂವಿಧಾನದ ಪೀಠಿಕೆಯನ್ನು ಕೇಂದ್ರ ಕಚೇರಿಯಲ್ಲಿ ಮತ್ತು* *ಎಲ್ಲ ಕ್ಷೇತ್ರ ಕಚೇರಿಗಳಲ್ಲಿ *ಪ್ರದರ್ಶಿಸಲಾಗುವುದು.*
*ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತೀಯ ಶಾಲೆಗಳಿರುವ ಎಲ್ಲ* *ಕೇಂದ್ರಗಳಲ್ಲಿ ಸಂವಿಧಾನ ದಿನವನ್ನು ಆಚರಿಸುವಂತೆ ಸೂಚಿಸಿದೆ. ಅಂತೆಯೇ ಎಲ್ಲ ಮಿಷನ್‍ಗಳು ಹಾಗೂ ಸಂಸ್ಥೆಗಳು ಸಾಧ್ಯವಿರುವ ಕಡೆಗಳಲ್ಲಿ ಭಾರತದ* *ಸಂವಿಧಾನವನ್ನು ಸ್ಥಳೀಯ ಭಾಷೆಗಳಿಗೆ ಭಾಷಾಂತರ ಮಾಡಿ ಶೈಕ್ಷಣಿಕ ಹಾಗೂ ಸಂಶೋಧನಾ ಸಂಸ್ಥೆಗಳಿಗೆ ವಿತರಿಸಲು ಕ್ರಮ ಕೈಗೊಳ್ಳುವಂತೆ* *ಸೂಚಿಸಲಾಗಿದೆ. ಇದರ ಜತೆಗೆ ಸಂಸತ್ತು, ಭಾರತೀಯ ಕೇಂದ್ರಗಳಿಗೂ ಇದನ್ನು ವಿತರಿಸಲು ಸೂಚಿಸಲಾಗಿದೆ. ಉದಾಹರಣೆಗೆ ಭಾರತದ* *ಸಂವಿಧಾನವನ್ನು ಇತ್ತೀಚೆಗೆ ಅರಬ್ ಭಾಷೆಗೆ *ಅನುವಾದಿಸಲಾಗಿತ್ತು.*
*ಗೃಹ ಸಚಿವಾಲಯ ನೀಡಿರುವ ಮಾಹಿತಿಯ* *ಪ್ರಕಾರ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಹಾಗೂ ಅವುಗಳ ಸಂಸ್ಥೆಗಳು* *ಪೊಲೀಸ್-2 ವಿಭಾಗದಲ್ಲಿ ಸಂವಿಧಾನ ದಿನವನ್ನು ಆಚರಿಸಲು ಅಗತ್ಯ ಕ್ರಮ* *ಕೈಗೊಳ್ಳುವಂತೆ ಸೂಚಿಸಲಾಗಿದೆ.*

*ಕ್ರೀಡಾ ಸಚಿವಾಲಯವು ಈ ಕೆಳಗಿನ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.*
*ಎಲ್ಲ ಮುಖ್ಯ ಕಾರ್ಯದರ್ಶಿಗಳು, ಕ್ರಿಡಾ ಕಾರ್ಯದರ್ಶಿಗಳು, ಆಡಳಿತಗಾರರು ಹಾಗೂ ಸಲಹೆಗಾರರಿಗೆ ಸೂಚನೆ ನೀಡಿ, ಸಮಾನತೆಗಾಗಿ* *ಓಟವನ್ನು* *ಆಯೋಜಿಸುವಂತೆ* *ಕೇಳಿಕೊಳ್ಳಲಾಗಿದೆ.*
*ಭಾರತದ ಕ್ರೀಡಾ* *ಪ್ರಾಧಿಕಾರವು ಈ ಕೆಳಗಿನ* *ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಿಕೊಂಡಿದೆ.*
*ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಸಾಂಕೇತಿಕ ಓಟ ನಡೆಯಲಿದ್ದು, ಸಮಾನತೆಗಾಗಿ ಓಟದಲ್ಲಿ* *ಎಲ್ಲ ಸಾಯಿ ತರಬೇತುದಾರರು ಭಾಗವಹಿಸುವರು.*
*ಇದೇ ವ್ಯವಸ್ಥೆಯನ್ನು ಎಲ್ಲ ಪ್ರಾದೇಶಿಕ ಕೇಂದ್ರಗಳಲ್ಲೂ ಮಾಡಲಾಗಿದ್ದು, ಇಲ್ಲಿ* *ಸಂಘಟಿಸಿರುವ ಓಟದಲ್ಲಿ ಸಾಯಿ ತರಬೇತಿ ಪಡೆಯುತ್ತಿರುವವರು ಹಾಗೂ ಕಮ್ ಅಂಡ್ ಪ್ಲೇ* *ಯೋಜನೆಯ ತರಬೇತಿ ಪಡೆಯುತ್ತಿರುವವರು ಪಾಲ್ಗೊಳ್ಳುವರು.*
*2015ರ ಅಕ್ಟೋಬರ್ 31ರಂದು ಆಯೋಜಿಸಿದ್ದ ಏಕತೆಗಾಗಿ ಓಟದ* *ಮಾದರಿಯಲ್ಲಿ ಈ ಬಾರಿ ಸಮಾನತೆಗಾಗಿ ಓಟವನ್ನೂ ಆಯೋಜಿಸಲಾಗುವುದು.*
*ಸಂಸದೀಯ ವ್ಯವಹಾರಗಳ ಸಚಿವಾಲವು 2015ರ* *ನವೆಂಬರ್ 26ರಂದು ಸಂಸತ್ ಭವನಕ್ಕೆ ದೀಪಾಲಂಕಾರ ಮಾಡಲು ನಿರ್ಧರಿಸಿದೆ. ಇದೇ* *ಉದ್ದೇಶದಿಂದ ಆ ದಿನದಂದು ವಿಶೇಷ ಅಧಿವೇಶನ ಕರೆಯಲಾಗಿದೆ.*
*ಮೂಲ : ಯು ಸಿ ಸಿ  ಇಂಡಿಯಾ*

CCE

(ಸಂಗ್ರಹಿತ ಮಾಹಿತಿ)

ಸಿ ಸಿ ಇ ತರಬೇತಿಗಳಲ್ಲಿ ಪಾಲ್ಲೊಳ್ಳದ  ಶಿಕ್ಷಕರು ,ಸಾಹಿತ್ಯ ಓದದವರು,ಹೊಸದಾಗಿ ವೃತ್ತಿ ಆರಂಬಿಸಿದವ ಗಮನದಲ್ಲಿ ಇಟ್ಟುಕೊಂಡು . ಸರಳವಾಗಿ , ಸುಲಲಿತವಾಗಿ ನೇರ  ಮಾಹಿತಿ...

 CCE / ನಿ .ವಾ. ಮೌ ಎಂದರೆನು‌?
ಒಂದು ಮಗು ಶಾಲೆಗೆ / ತರಗತಿಗೆ  ಸೇರಿದ ದಿನದಿಂದ  ಪಠ್ಯಕ್ರಮ ಮತ್ತು ಪಠ್ಯದ ಹೊರತಾಗಿ  ಶಿಕ್ಷಕನು‌ ತಾನು ಇಚ್ಛಿತ ಸಾಧನ ತಂತ್ರ ಬಳಸಿಕೊಂಡು ನಿರಂತರವಾಗಿ ಕ್ರಮಬದ್ದವಾಗಿ , ವ್ಯಾಪಕವಾಗಿ ವೈಜ್ಞಾನಿಕ ವಿಶ್ಲೇಷಣೆ ಯೊಂದಿಗೆ ಸಾಮರ್ಥ ಗಳಿಕೆಯ ಮೌಲ್ಯ ಮಾಪನ ಮಾಡುವ  ಒಂದು ನಿರಂತರ ಕ್ರಮ .
8 ನೇ ತರಗತಿ ನಿರ್ವಹಣೆ  ಒಟ್ಟು ಎರಡು ಸೆಮಿಸ್ಟರ್ ‌ಗಳು
1ನೇ ಶಮ್   10+10+30=50.
2 ನೇ ಶಮ್   10+10+30=50 ಒಟ್ಟು 100% ( ಅಂಕಗಳಲ್ಲ‌)
೧)ಪಠ್ಯಪುಸ್ತಕದ ಒಟ್ಟು ಪಾಠಗಳನ್ನು ನಾಲ್ಕು ಭಾಗಗಳಾಗಿ ಮಾಡುವದು
೨) 4 ಭಾಗಗಳಿಗೆ ಕ್ರಮವಾಗಿ fa1.2.3.4 ಕರೆದುಕೊಳ್ಳುವದು
೩) fa 1 ಪಾಠಗಳಲ್ಲಿ ಒಂದು ಪಾಠ  ಭೊಧನಾಕಲಿಕೆ ಆಯ್ಕೆ ಮಾಡುವದು
೪) ಆಯ್ಕೆ ಮಾಡಿದ ಪಾಠದ ಸಾಮರ್ಥ ಅರ್ತಗ್ರಹಿಕೆಗೆ ಶಿಕ್ಷಕ ಸುಗಮಕಾರನಾಗಿ ಕಾರ್ಯ ಮಾಡುವದು . ಪಾಠಕ್ಕೆ ಸೂಕ್ತವಾದ  ಕಲಿಕಾ ಬೋಧನಾ ವಿಧ ಆಯ್ಕೆಮಾಡಿಕೊಂಡು ಎಲ್ಲ ಮಕ್ಕಳನ್ನು ಚಟುವಟಿಕೆಯಲ್ಲಿ ತೊಡಗಿಸುವದು
೫) ಪಾಠ ಮತ್ತು ಪಾಠದ ಹೊರತಾಗಿ ಮಗುವಿನ ಸಾಮರ್ಥ್ಯ ಅರ್ಥಗ್ರಹಿಕೆ ಜ್ಞಾನ ಅರಿಯಲು ಅಗತ್ಯ ಸಾಧನ ತಂತ್ರ ಬಳಸಿ ಮೌಲ್ಯಮಾಪನ ಮಾಡುವದು .
೬) ಪ್ರತಿ ಮಗುವನ್ನು‌ ಮೌಲ್ಯ ಮಾಪನ ಕ್ರೀಯೆಗೆ ಒಳಪಡಿಸಿ ಸಾಧನೆ ಯನ್ನು ದಾಖಲಿಕರಿಸುವದು.
೭) ಹೀಗೆ fa 1 ಗೆ ಆಯ್ಕೆ ಮಾಡಿ‌ಕೊಂಡ ಎಲ್ಲಾ ಪಾಠ ಮೌಲ್ಯಮಾಪನ ಪ್ರಕ್ರಿಯೆ ನಡೆಸುವದು
೮) fa1 ಒಟ್ಟು ಪಾಠಗಳು ಒಟ್ಟು ಅಂಕ ವನ್ನು 10% ಗೆ ಇಳಿಸುವದು ಉದಾ :- 80÷90× 10= 8.88%   A ಗ್ರೇಡ್‌
೯) ಇದೇ ರೀತಿ‌ 4 fa ಗಳನ್ನು‌ಮಾಡಿ‌ ಕೂಡಿಸುವದು 10+ 10+10+10= 40%
೧೦)  ಮೊದಲ‌ ಸಾಧನ ಪರೀಕ್ಷೆ   ಎರಡು fa ಗಳ ಪಾಠಗಳಾದರಿಸಿ ಮಾಡುವದು
* ಪರೀಕ್ಷೆ ಯು  ಲಿಖಿತ + ಮೌಖಿಕ + ತೆರೆದ ಪುಸ್ತಕ‌ ಆದರಿಸಿ ಮಾಡುವದಯ
* ಸಾಧನ ಪರೀಕ್ಷೆ  ಪ್ರಶ್ನೆ ಪತ್ರಿಕೆ ಅಂಕವು‌  ಪಾಠಗಳ ಆದರಿಸಿ ಶಿಕ್ಷಕೇ ನಿಗದಿ ಮಾಡಿಕೊಳ್ಳತಕ್ಕದಗದು .ಉದಾ :- 50/ 100 ಅಂಕಗಳು
* ಮೌಖಿಕ /ತೆರೆದ ಪುಸ್ತಕ‌ ಅಂಕಗ ಗಳು ಕೂಡಾ ಶಿಕ್ಷಕರ ವಿವೇಚನೆಗೆ ಬಿಟ್ಟದ್ದು
* ಮೊದಲ ಸಾಧನ ಪರೀಕ್ಷೆ  30% ಗೆ ಇಳಿಸಿಕೊಳ್ಳುವದು
ಉದಾ :- 50÷100× 30 = 15%
Fa1+fa2+s1=
10+10+30= 50
ಹೀಗೆ s1+s2
       50+50 = 100 %  ಗೆ ಪಡೆದ ಒಟ್ಟು  ಶೆಕಡಾ  + ಗ್ರೇಡ್

********
9ನೇ ತರಗತಿ
FA1+ FA2+FA3+FA4 + SA2
10+10+10+10(40) +60= 100%
೧)ಸೆಮಿಸ್ಟರ್ ಇರುವದಿಲ್ಲ
೨)ಪಠ್ಯ ಪುಸ್ತಕದ ಪಾಠ ೪ ಭಾಗ ಗಳಾಗಿ  ವಿಂಗಡಣೆ ಮಾಡುವದು
೩) Fa1 (10%) ನ ಎಲ್ಲಾ ಪಾಠಗಳು   ಬೋಧನಾ ಕಲಿಕಾ ಪ್ರಕ್ರೀಯೆಗೆ ಒಳಪಡಿಸಿ ೧೦% ಇಳಿಸಿಕೊಳ್ಳುವದು
೩FA1,2,3,4  ಒಟ್ಟು  CCA ಗೆ ಅಳವಡಿಸಿ ಕೊಂಡು 8ನೇ ತರಗತಿ ಯಂತೆ  ಮೌಲ್ಯಮಾಪನ ಕ್ರೀಯೆಗೆ ಒಳಪಡಿಸುವದು
೪) sa1 ಸಾಧನ ಪರೀಕ್ಷೆ  ಅರ್ದ ಪಠ್ಯ ಕ್ಕೆ ಮಾಡಿಕೊಳ್ಳುವದು .   ಪರೀಕ್ಷೆ ಅಂಕಗಳು ಶಿಕ್ಷಕರು ತಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿಮಾಡಿಕೊಂಡು  ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ಕೊಳ್ಳುವದು . ಮಗು ಪಡೆದ ಅಂಕ ಯಾವುದೇ cce ದಾಖಲೆ ಗೆ ಪರಿಗಣಿಸುವಂತಿಲ್ಲ .ಡಮ್ಮಿ‌ಯಾಗಿ ಉಳಿಯುವವು
**
*SA2 60%*
೪ fa ಗಳ ಒಳಗೊಂಡಂತೆ ಒಟ್ಟು ಪಾಠಗಳಿಗೆ ವಾರ್ಷಿಕ ಪರಿಕ್ಷೆ ಮಾಡುವದು ಪ್ರಶ್ನೆ ಪತ್ರಿಕೆ 90/ಅಂಕ ಕ್ಕೆ ನಿಗದಿ  ಉಳಿದ ೧೦ ಅಂಕ ಮೌಖಿಕ & ತೆರದ ಪುಸ್ತಕ  ಕ್ಕೆ  ಒಟ್ಟು 100 ಅಂಕಗಳು
* ಮಗು 100 ಅಂಕಕ್ಕೆ ಪಡೆದ ಅಂಕ ಗಳನ್ನು ೬೦ % ಇಳಿಸುವದು
ಉದಾ :- 70÷100×60 =ರ 42 %
FA+SA2 = 100%
40+60 =100