ಪುಟಗಳು
▼
ಪುಟಗಳು
▼
a-z
▼
a-z
▼
23.3.17
ರಾಮ ಮನೋಹರ ಲೋಹಿಯಾ ಜಯಂತಿ
*ಇಂದು ರಾಮ ಮನೋಹರ ಲೋಹಿಯಾ ಅವರ ಜನ್ಮದಿನ*
ಜನನ ಮಾರ್ಚ್ ೨೩, ೧೯೧೦
ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯ ಅಕ್ಬರ್ ಪುರ ಎಂಬ ಹಳ್ಳಿ
ಮರಣ ಅಕ್ಟೋಬರ್ ೧೨, ೧೯೬೭
ವೃತ್ತಿ ಸ್ವತಂತ್ರ ಹೋರಾಟಗಾರರು, ಸಮಾಜವಾದಿ
ರಾಮ ಮನೋಹರ ಲೋಹಿಯಾ ದೇಶದ ಎಲ್ಲ ಕಡೆಯ ದೀನದಲಿತರ ಹೋರಾಟಗಳಲ್ಲೆಲ್ಲ ಭಾಗವಹಿಸಿದರು. ಅನ್ಯಾಯದ ವಿರುದ್ಧ ಶ್ರಮಜೀವಿಗಳ ಎಲ್ಲ ಚಳವಳಿಗಳಲ್ಲೂ ಮುಂದಾಳಾಗಿ ನಿಲ್ಲುತ್ತಿದ್ದರು. ಶ್ರೀಸಾಮಾನ್ಯರ ವಿಷಯದಲ್ಲಿ ಮರುಕವಷ್ಟೇ ಅಲ್ಲ, ಅಪಾರ ಗೌರವ. ಅವರು ಅವಿವಾಹಿತರಾಗಿದ್ದರು.
ಜನನ ಹಾಗೂ ಬಾಲ್ಯ ಸಂಪಾದಿಸಿ
ರಾಮ ಮನೋಹರ ಲೋಹಿಯಾ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತೀಯ ಸಮಾಜವಾದದ ಪ್ರಮುಖ ಚಿಂತಕ. ರಾಜಕೀಯ ನಾಯಕ. ಇವರು ಮಾರ್ಚ್ ೨೩, ೧೯೧೦ ರಂದು ಉತ್ತರ ಪ್ರದೇಶ ರಾಜ್ಯದ ಫೈಜಾಬಾದ್ ಜಿಲ್ಲೆಯ 'ಅಕ್ಬರ್ ಪುರ' ಎಂಬ ಹಳ್ಳಿಯಲ್ಲಿ ಜನಿಸಿದರು.
ಜೀವನ ಸಂಪಾದಿಸಿ
ರಾಮ ಮನೋಹರ ಲೋಹಿಯಾ ಅವರ ತಂದೆ ಹೀರಾ ಲಾಲ್, ತಾಯಿ ಚಂದ್ರಿ. ಅವರು ವೃತ್ತಿಯಿಂದ ಶಿಕ್ಷಕರಾಗಿದ್ದರು ಮತ್ತು ರಾಷ್ಟ್ರೀಯತೆಯ ಕಿಚ್ಚನ್ನು ನಂಬಿದ್ದವರು. ರಾಮ ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ಅವರ ತಾಯಿ ಚಂದ್ರಿ ತೀರಿಕೊಂಡಿದ್ದರು. ಲೋಹಿಯಾ ಅವರನ್ನು ಅವರ ತಂದೆ ಚಿಕ್ಕ ವಯಸ್ಸಿನಲ್ಲೇ ತಾವು ತೆರಳುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳಿಗೆ ಮತ್ತು ಸಮಾವೇಶಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಲೋಕಮಾನ್ಯ ಬಾಲ ಗಂಗಾಧರ ತಿಲಕರು ತೀರಿಕೊಂಡಾಗ, ಲೋಹಿಯಾ ಪುಟ್ಟ ಪ್ರತಿಭಟನೆಯನ್ನು ಮಾಡುವ ಮೂಲಕ ತಮ್ಮ ಮೊದಲ ಸ್ವಾತಂತ್ರ್ಯ ಹೋರಾಟವನ್ನು ಪ್ರಾರಂಭಿಸಿದರು.
ಯುವ ವಯಸ್ಸಿನಲ್ಲಿನ ರಾಷ್ಟ್ರಪ್ರೇಮ ಸಂಪಾದಿಸಿ
ತಂದೆ 'ಹೀರಾ ಲಾಲ್' ಅವರು ಮಹಾತ್ಮಾ ಗಾಂಧಿ ಅವರ ಅನುಯಾಯಿಯಾಗಿದ್ದರು. ಹೀಗಾಗಿ ಒಮ್ಮೆ ಲೋಹಿಯಾ ಅವರನ್ನು ತಮ್ಮೊಂದಿಗೆ ಗಾಂಧಿ ಅವರನ್ನು ಭೇಟಿ ಮಾಡಲು ಕರೆದುಕೊಂಡು ಹೋದರು. ಈ ಭೇಟಿಯೇ ಲೋಹಿಯಾ ಅವರಲ್ಲಿ ದೇಶಕ್ಕಾಗಿನ ಪ್ರೇಮ, ಬಲಿದಾನ ಮತ್ತು ಸ್ವರಾಜ್ ಚಿಂತನೆಯನ್ನು ಮೈಗೂಡಿಸಿಕೊಳ್ಳಲು ಸಹಾಯ ಮಾಡಿತು. ಲೋಹಿಯಾ ಅವರು ಗಾಂಧಿಯಿಂದ ಎಷ್ಟು ಪ್ರಭಾವಿತರಾದರೆಂದರೆ, ಮಹಾತ್ಮಾರ ತತ್ವಗಳನ್ನು ಪಾಲಿಸಲು ಪ್ರಾರಂಭಿಸಿದರು. ಲೋಹಿಯಾ ಅವರು ತಮ್ಮ ೧೦ನೇ ವಯಸ್ಸಿನಲ್ಲಿಯೇ ಸತ್ಯಾಗ್ರಹ ಚಳುವಳಿಗೆ ಸೇರ್ಪಡೆಯಾದರು.
ರಾಜಕೀಯದಲ್ಲಿ ಪ್ರವೇಶ ಸಂಪಾದಿಸಿ
ಲೋಹಿಯಾ ಅವರು ಜವಹರಲಾಲ್ ನೆಹರೂಅವರನ್ನು ೧೯೨೧ನೇ ಇಸವಿಯಲ್ಲಿ ಭೇಟಿಯಾದರು. ಕೆಲವೇ ವರ್ಷಗಳಲ್ಲಿ ಇಬ್ಬರೂ ಆಪ್ತ ಸ್ನೇಹಿತರಾದರು. ಇಷ್ಟು ಒಳ್ಳೆಯ ಸ್ನೇಹಿತರಾದರೂ ನೆಹರೂ ಅವರು ತೆಗೆದುಕೊಳ್ಳುತ್ತಿದ್ದ ಕೆಲವು ನಿರ್ಣಯಗಳು ಮತ್ತು ರಾಜಕೀಯ ನಂಬಿಕೆಗಳ ಕುರಿತು ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ೧೯೨೮ರಲ್ಲಿ ಸಿಮನ್ ಕಮೀಷನ್ನಿನ ವಿರುದ್ಧ ವಿದ್ಯಾರ್ಥಿ ಪ್ರತಿಭಟನೆಯನ್ನು ಹಮ್ಮಿಕೊಂಡರು. ಸಿಮನ್ ಕಮೀಷನ್ನು ಭಾರತಕ್ಕೆ ಸ್ವಾಮಿತ್ವ (dominion status) ನೀಡುವ ಕುರಿತು ಭಾರತೀಯ ಜನರ ಅಭಿಲಷೆಗಳನ್ನು ಕೇಳದೆ ಮುಂದೆ ಹೊರಟಿತ್ತು.
ವಿದ್ಯಾಭ್ಯಾ
ಲೋಹಿಯಾ ಅವರು ಮೆಟ್ರಿಕ್ ನಲ್ಲಿ ತಮ್ಮ ಶಾಲೆಗೇ ಮೊದಲ ಸ್ಥಾನದಲ್ಲಿ ವರ್ಗವಾಗಿ, ನಂತರ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಇಂಟರ್ ಮೀಡಿಯೇಟ್ ಕೋರ್ಸಿಗೆ ಸೇರಿದರು. ೧೯೨೯ರಲ್ಲಿ ಬಿ.ಎ. ಪದವಿಯನ್ನು ಕೋಲ್ಕತ್ತ ವಿಶ್ವವಿದ್ಯಾಲಯದಲ್ಲಿ ಮುಗಿಸಿದರು. ಇವರು ಬ್ರಿಟೀಷ್ ತತ್ವಶಾಸ್ತ್ರವನ್ನು ನಂಬುತ್ತಿರಲಿಲ್ಲ. ಹೀಗಾಗಿ ತಮ್ಮ ಅಭಿಪ್ರಾಯಗಳನ್ನು ಸಮರ್ಪಕವಾಗಿ ಮುಂದಿಡಲು ಜರ್ಮನಿಯ ಬರ್ಲಿನ್ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡರು.
ಬಹು ಬೇಗನೆ ಜರ್ಮನ್ ಭಾಷೆಯನ್ನು ಕಲಿತು, ತಮ್ಮ ಅಪ್ರತಿಮ ಸಾಧನೆಗಾಗಿ ಹಣ ಸಹಾಯವನ್ನೂ ಪಡೆದರು. ಇಲ್ಲಿ ಉಪ್ಪಿನ ಸತ್ಯಾಗ್ರಹ ಕುರಿತು ಪ್ರೌಢ ಪ್ರಬಂಧ ಬರೆದು, ಅರ್ಥಶಾಸ್ತ್ರದಲ್ಲಿ ಪಿ.ಎಚ್.ಡಿ ಗಳಿಸಿದರು. ಜರ್ಮನ್ ಭಾಷೆಯಲ್ಲೇ ಮಾರ್ಕ್ಸ್ ಮತ್ತು ಹೆಗೆಲ್ ರ ಕೃತಿಗಳನ್ನು ಅಭ್ಯಸಿಸಿ ಅವರಿಗಿಂತ ಭಿನ್ನವಾಗಿ ಚರಿತ್ರೆಯನ್ನು ಅರಿಯುವ ಅಗತ್ಯವನ್ನು ಕುರಿತು ಚಿಂತಿಸಿದರು.
ಸ್ವಾತಂತ್ರ್ಯ ಹೋರಾಟಗಾರರಾಗಿ ಸಂಪಾದಿಸಿ
೧೯೩೦ರಲ್ಲಿ ಜಿನೀವಾ ನಗರದಲ್ಲಿ ‘ಲೀಗ್ ಆಫ್ ನೇಷನ್ಸ್’ ಪ್ರೇಕ್ಷಕರ ಗ್ಯಾಲರಿಯಿಂದ ಒಂದು ದೊಡ್ಡ ಶಿಳ್ಳು ಕೇಳಿಬಂದಿತು. ಸಮಿತಿಯ ಅಧ್ಯಕ್ಷರೂ, ಸದಸ್ಯರೆಲ್ಲರೂ ಚಕಿತರಾಗಿ ಶಿಳ್ಳು ಹೊಡೆದ ವ್ಯಕ್ತಿಯತ್ತ ತಿರುಗಿದರು. ಭಾರತೀಯ ಪ್ರತಿನಿಧಿ ಬಿಕನೀರ್ ಮಹಾರಾಜ ತಾನು ಕೊಡುತ್ತಿದ್ದ ಭಾಷಣವನ್ನು ನಿಲ್ಲಿಸಿ ನಿಬ್ಬೆರಗಾಗಿ ಪ್ರೇಕ್ಷಕರ ಗ್ಯಾಲರಿ ಕಡೆ ನೋಡಿದರು. ಆತ ಭಾರತ ದೇಶದಲ್ಲಿನ ಬ್ರಿಟಿಷರ ಆಡಳಿತದ ಶ್ರೇಷ್ಠತೆಯನ್ನು ಕುರಿತು ಭಾಷಣ ಕೊಡುತ್ತಿದ್ದರು.
ಬಿಕನೀರ್ ಮಹಾರಾಜ ಲೀಗ್ ಆಫ್ ನೇಷನ್ಸ್ ಒಕ್ಕೂಟದದಲ್ಲಿ ನೀಡುತ್ತಿದ್ದ ಈ ಬುರುಡೆ ಭಾಷಣಕ್ಕೆ ವಿರೋಧ ಸೂಚಕವಾಗಿ ಶಿಳ್ಳು ಹೊಡೆದವರು ರಾಮಮನೋಹರ ಲೋಹಿಯಾ. ಅನಂತರ ಅವರನ್ನು ಬಲವಂತವಾಗಿ ಹೊರ ದಬ್ಬಲಾಯಿತು. 1932ರಲ್ಲಿ ಲೋಹಿಯಾ ಭಾರತಕ್ಕೆ ಮರಳಿ ದರು. ಆಗ ದೇಶದಾದ್ಯಂತ ಗಾಂಧೀಜಿ ಹೂಡಿದ ಸತ್ಯಾಗ್ರಹ ಹಬ್ಬಿತು. ಲೋಹಿಯಾ ಅದರಲ್ಲಿ ಸೇರಿದರು. ಸೆರೆಮನೆ ವಾಸ ಅವರಿಗೆ ಸಿಕ್ಕ ಬಹುಮಾನ. ಆಗ ಕಾಂಗ್ರೆಸಿನಲ್ಲಿದ್ದ ಹರೆಯದ ಹುಡುಗರು ಒಂದು ಆಲೋಚನೆ ಮಾಡಿದರು. ಹಿರಿಯರ ವೇಗ ಅವರಿಗೆ ಸಾಲದೆನಿಸಿತು.
ಬೇಗ ಬೇಗ ಮುನ್ನುಗ್ಗುವ ತವಕ. ನಾಸಿಕ್ ರೋಡ್ ಸೆರೆಮನೆಯಲ್ಲಿ ಇಂಥ ಹಲವು ತರುಣರು ಒಟ್ಟಿಗೆ ಇದ್ದರು. ಅವರಿಗೆಲ್ಲ ಬಡವರಲ್ಲಿ, ರೈತರಲ್ಲಿ, ಕಾರ್ಮಿಕರಲ್ಲಿ ಬಹಳ ಅನುಕಂಪ. ಅವರ ಏಳಿಗೆಗಾಗಿ ದುಡಿಯುವ ಸಂಕಲ್ಪದಿಂದಾಗಿ ಕಾಂಗ್ರೆಸ್ಸಿನೊಳಗೆ ತರುಣರ ಒಂದು ಗುಂಪು ಕಟ್ಟಿದರು. ಇದರ ಮೂಲಪುರುಷರಲ್ಲಿ ಜಯಪ್ರಕಾಶ ನಾರಾಯಣ, ರಾಮ ಮನೋಹರ ಲೋಹಿಯಾ, ಯುಸುಫ್ ಮೆಹರಲ್ಲೀ, ಅಚ್ಯುತ ಪಟವರ್ಧನ, ಅಶೋಕ ಮೆಹತಾ, ಕಮಲಾ ಬಾಯಿ ಚಟ್ಟೋಪಾಧ್ಯಾಯ, ಆಚಾರ್ಯ ನರೇಂದ್ರ ದೇವ ಮುಂತಾದವರೆಲ್ಲ ಸೇರಿದ್ದರು.
ಶ್ರಮಜೀವಿಗಳ ರಾಜ್ಯವನ್ನು ಸ್ಥಾಪಿಸುವ ಕನಸು ಕಂಡರು. ಅದಕ್ಕಾಗಿಯೇ ಬ್ರಿಟಿಷರ ಆಡಳಿತವನ್ನು ಕೊನೆಗಾಣಿಸಬೇಕೆಂದು ಪಟ್ಟು ಹಿಡಿದರು. ‘ಕಾಂಗ್ರೆಸ್ ಸೋಷಿಯಲಿಸ್ಟ್’ ಎಂಬ ಪತ್ರಿಕೆಗೆ ಲೋಹಿಯಾ ಸಂಪಾದಕರಾದರು. ವಿದೇಶ ವ್ಯಾಸಂಗ ಮಾಡಿ ಬಂದಿದ್ದ ರಾಮ ಮನೋಹರರಿಗೆ ಅಂತರರಾಷ್ಟ್ರೀಯ ವಿಷಯಗಳು ತುಂಬ ಚೆನ್ನಾಗಿ ತಿಳಿದಿದ್ದವು. ಕಾಂಗ್ರೆಸ್, ವಿದೇಶಾಂಗ ಶಾಖೆಯೊಂದನ್ನು ಸ್ಥಾಪಿಸಿತು. ಅದರ ಮೇಲ್ವಿಚಾರಣೆ ಇವರ ಕೈಗೆ ಬಂತು.
ಜಗತ್ತಿನ ಬೇರೆಬೇರೆ ದೇಶಗಳ ಪ್ರಗತಿಪರರೊಡನೆ ಕಾಂಗ್ರೆಸ್ಸಿನ ಸಂಬಂಧ ಕಲ್ಪಿಸಿದರು. ವಿದೇಶಗಳಲ್ಲಿರುವ ಭಾರತೀಯರ ಹಿತರಕ್ಷಣೆಗೆ ಪ್ರತ್ಯೇಕ ಶಾಖೆ ರಚಿಸಿದರು. ಲೋಹಿಯಾ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಆಯ್ಕೆ ಹೊಂದಿದರು. ದೇಶದಾದ್ಯಂತ ಸಂಚರಿಸಿ ದರು. ಯುವಜನರನ್ನು ಸ್ವಾತಂತ್ಯ್ರ ಚಳುವಳಿಗೆ ಸೆಳೆದರು. 1938ರಲ್ಲಿ ರಾಜ ದ್ರೋಹದ ಆಪಾದನೆಗೆ ಗುರಿಪಡಿಸಿ ಬ್ರಿಟಿಷರು ಕಲ್ಕತ್ತೆಯಲ್ಲಿ ಇವರನ್ನು ಬಂಧಿಸಿದರು.
ಎರಡನೆಯ ಮಹಾಯುದ್ಧಕ್ಕೆ ಭಾರತವನ್ನು ಬಲಾತ್ಕಾರವಾಗಿ ಬ್ರಿಟಿಷರು ಸೆಳೆದಿದ್ದರು. ಡಾ. ಲೋಹಿಯಾ ಯುದ್ಧ ವಿರೋಧಿಯಾಗಿದ್ದರು. ಅವರು ಮಾಡಿದ ಯುದ್ಧ ವಿರೋಧಿ ಭಾಷಣಗಳಿಗಾಗಿ 1940ರಲ್ಲಿ ಅವರನ್ನು ಬ್ರಿಟಿಷ್ ಸರ್ಕಾರ ಮತ್ತೆ ಸೆರೆಮನೆಗೆ ದೂಡಿತು. 1942 ಮಹಾತ್ಮ ಗಾಂಧೀಜಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಸತ್ಯಾಗ್ರಹ ಪ್ರಾರಂಭಿಸಿದರು. ಆ ವರ್ಷ ಆಗಸ್ಟ್ ಏಳು-ಎಂಟರಂದು ಮುಂಬಯಿಯಲ್ಲಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸಭೆ ಸೇರಿತು. ಅಲ್ಲಿ ‘ಚಲೇ ಜಾವ್’ ನಿರ್ಣಯ ಅಂಗೀಕಾರವಾಯಿತು.
ಆಗಸ್ಟ್ 9 ರಂದು ಬೆಳಗಿನ ಜಾವ ಬ್ರಿಟಿಷ್ ಸರ್ಕಾರ ಗಾಂಧೀಜಿ ಮತ್ತು ಇತರ ಎಲ್ಲ ರಾಷ್ಟ್ರನಾಯಕರನ್ನು ಸೆರೆಮನೆಗೆ ಒಯ್ದಿತು. ದೇಶಕ್ಕೆ ಬಾಪೂ ಒಂದು ಮಂತ್ರ ಕೊಟ್ಟರು ‘ಮಾಡು ಇಲ್ಲ ಮಡಿ’. ಈ ಮಂತ್ರವನ್ನು ಕೇಳಿ ಇಡೀ ರಾಷ್ಟ್ರಕ್ಕೆ ರಾಷ್ಟ್ರವೇ ಪ್ರಚಂಡವಾಗಿ ಎದ್ದು ನಿಂತಿತು. ಎಷ್ಟೋ ಮಂದಿ ರಾಷ್ಟ್ರನಾಯಕರು ಸರ್ಕಾರದ ಕಣ್ಣು ತಪ್ಪಿಸಿ ತಲೆಮರೆಸಿಕೊಂಡು ಚಳುವಳಿಯನ್ನು ಸಂಘಟಿಸಿದರು. ಅವರಲ್ಲಿ ಲೋಹಿಯಾ ಅಗ್ರಗಣ್ಯರು. ಗುಪ್ತ ಆಕಾಶವಾಣಿ ಕೇಂದ್ರವೊಂದನ್ನು ಅವರು ನಡೆಸಿದರು.
ಜಯಪ್ರಕಾಶ ನಾರಾಯಣರೊಡಗೂಡಿ ಭೂಗತ ಚಳುವಳಿಯನ್ನು ಸಂಘಟಿಸಿದರು. 1944ರಲ್ಲಿ ಸರ್ಕಾರ ಲೋಹಿಯಾ ಅವರನ್ನು ಬಂಧಿಸಿತು. ಸೆರೆಮನೆಯಲ್ಲಿ ಬಗೆಬಗೆಯ ಚಿತ್ರಹಿಂಸೆಗೆ ಗುರಿಪಡಿಸಿತು. ಒಂದೊಂದು ದಿನ ಒಂದೊಂದು ತೂಕದ ಅಳತೆಯ ಕೈಕೋಳಗಳನ್ನು ತೊಡಿಸುವುದು, ಅವರನ್ನು ಅಧಿಕಾರಿಯ ಕೊಠಡಿಯಲ್ಲಿ ಕೂಡಿಸಿ ಒಂದೇ ಶಬ್ದವನ್ನು ಗಂಟೆಗಟ್ಟಲೆ ಅವರ ಮುಂದೆ ಉಚ್ಚರಿಸುವುದು. ಇಡೀ ರಾತ್ರಿ ಅವರು ಕಣ್ಣನ್ನು ಮುಚ್ಚದಂತೆ ನಿರ್ಬಂಧಿಸುವುದು.
ಅವರು ಕಣ್ಣು ಮುಚ್ಚಿದರೆ ತಲೆ ಹಿಡಿದು ಸುತ್ತಿಸುವುದು ಇಲ್ಲವೆ ಕೈಕೋಳಗಳನ್ನು ಜಗ್ಗುವುದು, ನಾಲ್ಕೈದು ರಾತ್ರಿ ಅವರು ನಿದ್ರೆ ಮಾಡದಂತೆ ಪಕ್ಕದಲ್ಲೆ ಲೋಹದ ತುಂಡಿನಿಂದ ಮೇಜನ್ನು ಕುಟ್ಟುವುದು, ಅವರ ಎದುರಿಗೆ ರಾಷ್ಟ್ರೀಯ ನಾಯಕರನ್ನು ಬಾಯಿಗೆ ಬಂದಂತೆ ಬೈಯ್ಯುವುದು-ಹೀಗೆ ವಿಧವಿಧವಾಗಿ ಅವರಿಗೆ ಹಿಂಸೆ. ಆಯಾಸಗೊಂಡಿದ್ದ ನಿಶ್ಯಕ್ತರಾಗಿದ್ದ ಲೋಹಿಯಾ, ಗಾಂಧೀಜಿಯನ್ನು ಬೈಯುತ್ತಿದ್ದ ಅಧಿಕಾರಿಗೆ ‘ಮುಚ್ಚು ಬಾಯಿ’ ಎಂದು ಗುಡುಗಿದರು. ಪೊಲೀಸಿನವನು ಎಗರಾಡಿದ. ಆದರೆ ಮತ್ತೆ ಹಾಗೆ ಮಾಡಲಿಲ್ಲ. ಕಡೆಗೆ ಕಡೆಗೆ 1946ರಲ್ಲಿ ಅವರ ಬಿಡುಗಡೆ ಆಯಿತು.
ಆ ವೇಳೆಗಾಗಲೇ ಭಾರತದ ಸ್ವಾತಂತ್ಯ್ರ ಹತ್ತಿರ ಬಂದಿತ್ತು. ಬ್ರಿಟಿಷರ ಗುಲಾಮಗಿರಿ ತಪ್ಪಿದರೂ ಪೋರ್ಚುಗೀಸರ ಗುಲಾಮಗಿರಿ ತಪ್ಪುವಂತಿರಲಿಲ್ಲ. ಗೋವೆ, ದೀವ್, ದಮನ್ ಈ ಭಾಗಗಳನ್ನು ನಾನೂರೈವತ್ತು ವರ್ಷಗಳಿಂದ ಪೋರ್ಚುಗೀಸ್ ಸಾಮ್ರಾಜ್ಯ ಶಾಹಿಗಳು ಆಳುತ್ತಿದ್ದರು. ಬ್ರಿಟಿಷರಿಗಿಂತ ಅವರ ಆಳ್ವಿಗೆ ಘೋರವಾಗಿತ್ತು. 1946ರಲ್ಲಿ ಸೆರೆಮನೆಯಿಂದ ಹೊರಬಂದ ಕೂಡಲೇ ಲೋಹಿಯಾ ಅವರ ಗಮನ ಗೋವೆಯ ಕಡೆ ತಿರುಗಿತು.
ಕರ್ನಾಟಕದ ಬೆಳಗಾವಿ ನಗರಕ್ಕೆ ಬಂದರು. ಗೋವೆಯಲ್ಲಿ ಚಳುವಳಿ ನಡೆಸಲು ಸಂಘಟನೆಗೆ ತೊಡಗಿದರು. ಗೋವೆಯನ್ನು ಪ್ರವೇಶಿಸಿದರು. ಪೋರ್ಚುಗೀಸ್ ಸರ್ಕಾರ ಅವರನ್ನು ಬಂಧಿಸಿ ಹೊರದೂಡಿತು. ಹೀಗೆ ಗೋವೆಯ ವಿಮೋಚನೆಗೆ ಲೋಹಿಯಾ ತಳಹದಿ ಹಾಕಿದರು. ಅತ್ತ ಉತ್ತರ ದ ಹಿಮಾಲಯದ ತಪ್ಪಲಲ್ಲಿ ಇರುವ ನೇಪಾಳ; ಅಲ್ಲಿ ರಾಣಾ ಮನೆತನದ ದಬ್ಬಾಳಿಕೆ. ನೇಪಾಳದ ತರುಣರು ಕಾಶಿಯಲ್ಲಿ ಕಲಿತವರು. ಅವರಿಗೆಲ್ಲ ಲೋಹಿಯಾ ರಾಜಕೀಯ ಗುರು. ನೇಪಾಳದಲ್ಲಿ ರಾಣಾಶಾಹಿಯ ಅಂತ್ಯಕ್ಕಾಗಿ ನಡೆದ ಚಳುವಳಿಗೆ ಇವರದೇ ಸ್ಫೂರ್ತಿ.
ಸ್ವತಂತ್ರ ಭಾರತದಲ್ಲಿ ಸಂಪಾದಿಸಿ
1947ರಲ್ಲಿ ದೇಶ ವಿಭಜನೆಯಾದ ದುರಂತ ಕಂಡು ಲೋಹಿಯಾ ಕಸಿವಿಸಿಗೊಂಡರು. 1948 ಜನವರಿ 30ರಂದು ಗಾಂಧೀಜಿಯ ಕೊಲೆ ಆಯಿತು. ದೇಶದಾದ್ಯಂತ ಕೋಮುವಾರು ವಿಷಜ್ವಾಲೆ ಆವರಿಸಿತು. ಈ ಸಂದರ್ಭದಲ್ಲಿ ಕಾಂಗ್ರೆಸಿನ ಹಿರಿಯ ನಾಯಕರು ಅನುಸರಿಸಿದ ನೀತಿ ಕಾಂಗ್ರೆಸ್ ಸಮಾಜವಾದೀ ಪಕ್ಷಕ್ಕೆ ಸರಿತೋರಲಿಲ್ಲ. ರೈತರು, ಕಾರ್ಮಿಕರು ಹಾಗೂ ಮಧ್ಯಮ ವರ್ಗದ ಶ್ರಮಜೀವಿಗಳ ಸಂಘಟನೆಗೆ ಸಮಾಜ ವಾದಿಗಳು ಸಂಕಲ್ಪ ತಳೆದರು.
ಆ ವರ್ಷ ಏಪ್ರಿಲ್ 15ರಂದು ಕಾಂಗ್ರೆಸ್ಸನ್ನು ತೊರೆದು ಸಮಾಜವಾದಿಗಳೆಲ್ಲ ಹೊರಬಂದರು. ತಮ್ಮದೇ ಆದ ಪ್ರತ್ಯೇಕ ಪಕ್ಷ ರಚಿಸಿದರು. ಅವರ ಅಗ್ರ ನಾಯಕರಲ್ಲಿ ಲೋಹಿಯಾ ಒಬ್ಬರಾದರು. ಅನಂತರ ದೇಶದಾದ್ಯಂತ ಲೋಹಿಯಾ ಸಂಚಾರ ಕೈ ಗೊಂಡರು. ಜವಾಹರಲಾಲ್ ನೆಹರೂ ಅವರ ಸರ್ಕಾರ ಅನುಸರಿಸುತ್ತಿದ್ದ ಧೋರಣೆಗಳನ್ನು ಉಗ್ರವಾಗಿ ಟೀಕಿಸಿದರು. ತಮ್ಮದೇ ಆದ ರೀತಿಯಲ್ಲಿ ಸಮಾಜವಾದೀ ಪಕ್ಷದ ನೀತಿ ನಿಲುವುಗಳನ್ನು ಪ್ರತಿಪಾದಿಸಿದರು. ದೇಶದ ಯುವಜನರ ಮನಸ್ಸನ್ನು ಸೂರೆ ಗೊಂಡರು.
*ಕನ್ನಡದ ಮಣ್ಣಿನಲ್ಲಿ*
ಕರ್ನಾಟಕಕ್ಕೂ ರಾಮ ಮನೋಹರ ಲೋಹಿಯಾ ಅವರಿಗೂ ಆತ್ಮೀಯ ಸಂಬಂಧ ಏರ್ಪಟ್ಟ ಒಂದು ಮಹತ್ವದ ಪ್ರಸಂಗ, ಸಾಗರ ತಾಲ್ಲೂಕಿನ. ಸಣ್ಣ ಹಳ್ಳಿ ಕಾಗೋಡು ಎಂಬಲ್ಲಾಯಿತು. ಆ ಊರಿನಲ್ಲಿ ಒಬ್ಬರೇ ಒಬ್ಬರು ಜಮೀನುದಾರರು. ಉಳಿದವರೆಲ್ಲ ಗೇಣಿಕಾರರು, ಒಕ್ಕಲುಗಳು. ಅವರ ಆರ್ಥಿಕ, ಸಾಮಾಜಿಕ ಸ್ಥಿತಿ ತುಂಬ ಶೋಚನೀಯವಾಗಿತ್ತು. ರೈತರು ಭೂ ಒಡೆಯರ ಎದುರು ನೆಟ್ಟಗೆ ನಿಲ್ಲಲೂ ಅಂಜುತ್ತಿದ್ದರು. ಮೊಣಕಾಲಿನಿಂದ ಮೇಲಕ್ಕೆ ಧೋತರ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನತನಕ ಉಡುವಂತಿಲ್ಲ.
ಒಡೆಯರ ಮನೆಯಲ್ಲಿ ಬಿಟ್ಟಿ ದುಡಿತ, ವಿದ್ಯೆಯ ಗಂಧವೇ ಇಲ್ಲ. ಇವೆಲ್ಲ ವಿಧಿ ವಿಲಾಸ ಎಂದು ನಂಬಿದ್ದ ಮೂಕ ಜನ. ಸ್ವಾತಂತ್ಯ್ರದ ಬಳಿಕ ಹೊಸ ಗಾಳಿ ಮಲೆನಾಡಿಗೆ ಬೀಸಿತು. ರೈತರು ಎಚ್ಚರಗೊಂಡರು. ತಾವೂ ಮನುಷ್ಯರು ಎಂಬುದನ್ನು ಕಂಡುಕೊಂಡರು. ಸಂಘ ಕಟ್ಟಿದರು. ಇದು ಭೂ ಒಡೆಯರಿಗೆ ಹಿಡಿಸಲಿಲ್ಲ. ಬಹು ಕಾಲದಿಂದ ತುಳಿದಿಟ್ಟಿದ್ದ ಜನ ತಿರುಗಿಬಿದ್ದರೆ ಹೇಗೆ? ಒಡೆಯರನ್ನು ಭಯ ಆವರಿಸಿತು. ಗೇಣಿದಾರರನ್ನು ಕಾಗೋಡಿನ ಜಮೀನುದಾರರು ಭೂಮಿಯಿಂದ ಬಿಡಿಸಿದರು. 1951ರಲ್ಲಿ ರೈತರು ಕೂಡಿ ಯೋಚಿಸಿದರು.
ಅನ್ಯಾಯವನ್ನು ಎದುರಿಸಲೇಬೇಕೆಂದು ನಿಶ್ಚಯಿಸಿದರು. ‘ರೈತ ಸಂಘ’ ಮತ್ತು ಕರ್ನಾಟಕದ ‘ಸಮಾಜವಾದೀ ಪಕ್ಷ’ ಈ ಅನ್ಯಾಯದ ವಿರುದ್ಧ ಸತ್ಯಾಗ್ರಹ ಹೂಡಿದವು. ಅನೇಕ ದಿನ ರೈತರು ಗುಂಪುಗುಂಪಾಗಿ ಗದ್ದೆಗೆ ಇಳಿದು ತಮ್ಮ ಹಕ್ಕಿನ ಸ್ಥಾಪನೆಗಾಗಿ ಹೋರಾಟ ಹೂಡಿದರು. ಸರ್ಕಾರ ಭೂ ಒಡೆಯರ ಪಕ್ಷ ವಹಿಸಿತು. ರೈತರು ಸಮಾಜವಾದಿಗಳ ನೇತೃತ್ವದಲ್ಲಿ ನೂರುಗಟ್ಟಲೆ ಸಂಖ್ಯೆಯಲ್ಲಿ ಸಾಗರ ಮತ್ತು ಶಿವಮೊಗ್ಗೆಗಳ ಸೆರೆಮನೆಗಳನ್ನು ತುಂಬಿದರು.
1951ರ ಜುಲೈ ತಿಂಗಳಲ್ಲಿ ಡಾ. ಲೋಹಿಯಾ ಅವರಿಗೆ ಈ ಸುದ್ಧಿ ತಿಳಿಯಿತು. ಕನ್ನಡ ನಾಡಿಗೆ ಅವರು ಧಾವಿಸಿ ಬಂದರು. ಬೆಂಗಳೂರಿನಿಂದ ನೆಟ್ಟಗೆ ಇಲ್ಲಿನ ನಾಯಕರೊಂದಿಗೆ ಸಾಗರಕ್ಕೆ ತೆರಳಿದರು; ಅಲ್ಲಿಂದ ಕಾಗೋಡು ಗ್ರಾಮಕ್ಕೆ. ಒಳ್ಳೆಯ ಮಳೆಗಾಲ; ಒಂದೇ ಸಮನೆ ಮಳೆ ಬೀಳುತ್ತಿತ್ತು. ಜುಲೈ 12ರ ಮಧ್ಯಾಹ್ನ. ಸ್ವಲ್ಪ ಹೊಳವಾಗಿತ್ತು. ಕಾಗೋಡಿನ ರೈತರ ನೇತೃತ್ವ ವಹಿಸಿ ಗದ್ದೆಗೆ ಇಳಿದು ಸಮಾಜವಾದೀ ಪಕ್ಷದ ಧ್ವಜ ಹಿಡಿದು ಲೋಹಿಯಾ ಸತ್ಯಾಗ್ರಹ ನಡೆಸಿದರು. ಆ ಊರಿನಲ್ಲಿ ಮೆರವಣಿಗೆ ನಡೆದಾಗ ಅತ್ಯಂತ ಸ್ತಬ್ಧ ವಾತಾವರಣ.
ಸತ್ಯಾಗ್ರಹ ಮುಗಿಸಿ ಸಾಗರದ ರೈಲ್ವೆ ನಿಲ್ದಾಣದ ವಿಶ್ರಾಂತಿ ಗೃಹಕ್ಕೆ ಲೋಹಿಯಾ ಬಂದರು. ಅಂದು ರಾತ್ರಿ ಸುಮಾರು ಹನ್ನೆರಡು ಗಂಟೆಯ ಸಮಯ. ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಗಳು ಲೋಹಿಯಾ ಅವರನ್ನು ಬಂಧಿಸಿದರು. ಸಾಗರದ ಪೊಲೀಸ್ ಲಾಕಪ್‌ನಲ್ಲಿ ಅಂದು ಇಡೀ ರಾತ್ರ ಇತರ ಬಂಧಿಗಳೊಡನೆ ಕುಳಿತೇ ಸಮಯ ಕಳೆದರು ಲೋಹಿಯಾ. ಮರುದಿನ ಶಿವಮೊಗ್ಗೆ ಜೈಲಿಗೆ ಅವರನ್ನೂ ಇತರ ನಾಯಕರನ್ನೂ ಒಯ್ದರು. ಅಲ್ಲಿ ಸಾಕಷ್ಟು ಮಂದಿ ಸತ್ಯಾಗ್ರಹಿಗಳು ತುಂಬಿದ್ದರು.
ಅಂದು ಸಂಜೆಯೇ ಲೋಹಿಯಾ ಒಬ್ಬರನ್ನೇ ಬೆಂಗಳೂರಿಗೆ ಕರೆದುಕೊಂಡು ಹೋಗಿ ಸರ್ಕಾರಿ ಅತಿಥಿ ಗೃಹದಲ್ಲಿ ಬಂಧನದಲ್ಲಿಟ್ಟರು. ಅನಂತರ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದಾಗ ಲೋಹಿಯಾ ಅವರ ಬಿಡುಗಡೆ ಆಯಿತು. ಶಿವಮೊಗ್ಗೆ ಜೈಲಿನಲ್ಲಿ ಸತ್ಯಾಗ್ರಹಿಗಳಿಗೆ ಸಾಕಷ್ಟು ಊಟ ಕೊಡುತ್ತಿರ ಲಿಲ್ಲ. ಸರ್ಕಾರ ಕೊಡುತ್ತಿದ್ದ ಆಹಾರ ಪದಾರ್ಥ ಒಂದು ಹೊತ್ತಿಗೆ ಮಾತ್ರ ಸಾಲುತ್ತಿತ್ತು. ಇನ್ನೊಂದು ಹೊತ್ತು ಹೊರಗಿನಿಂದ ಹಿತೈಷಿಗಳು ಕಳಿಸಿದ ತಿಂಡಿ ತೀರ್ಥಗಳಿಂದ ಸತ್ಯಾಗ್ರಹಿಗಳು ತೃಪ್ತರಾಗುತ್ತಿದ್ದರು.
ಲೋಹಿಯಾ ಅವರಿಗೆ ಈ ಸ್ಥಿತಿ ಕಂಡು ಬಹು ಮರುಕವಾಯಿತು. ಆದರೆ ಅವರ ಬಳಿ ಹಣ ಇರಲಿಲ್ಲ. ಅವರ ಕಿಸೆಯಲ್ಲಿದ್ದ ಹಣದ ಚೀಲದಲ್ಲಿ ಮೂವತ್ತೆರಡು ರೂಪಾಯಿಗಳಿದ್ದವು. ತಮ್ಮನ್ನು ಬೆಂಗಳೂರಿಗೆ ಒಯ್ಯಲು ಪೊಲೀಸ್ ಅಧಿಕಾರಿಗಳು ಬಂದಾಗ ಆ ಹಣದ ಚೀಲವನ್ನೇ ತಮ್ಮೊಡನೆ ಸೆರೆಯಲ್ಲಿದ್ದವರ ಕೈಯಲ್ಲಿ ಇಟ್ಟರು. ‘ಇದರಿಂದ ಎಷ್ಟು ತಿಂಡಿ ಬರುತ್ತದೋ ಅದನ್ನೆಲ್ಲ ತರಿಸಿ ಎಲ್ಲರಿಗೂ ಕೊಡು’ ಎಂದು ಹೇಳಿದರು. ಅವರ ಗೆಳಯರು ಬೇಡವೆಂದರೂ ಅವರು ಕೇಳಲೇ ಇಲ್ಲ.
ಕರ್ನಾಟಕದ ರೈತರ ಹೋರಾಟದಲ್ಲಿ ಮಾತ್ರವೇ ಲೋಹಿಯಾ ಭಾಗವಹಿಸಿದರೆಂದಲ್ಲ. ದೇಶದ ಎಲ್ಲ ಕಡೆಯ ದೀನದಲಿತರ ಹೋರಾಟಗಳಲ್ಲೆಲ್ಲ ಅವರು ಭಾಗವಹಿಸಿದರು. ಅನ್ಯಾಯದ ವಿರುದ್ಧ ಶ್ರಮಜೀವಿಗಳ ಎಲ್ಲ ಚಳವಳಿಗಳಲ್ಲೂ ಮುಂದಾಳಾಗಿ ನಿಲ್ಲುತ್ತಿದ್ದರು. ಶ್ರೀಸಾಮಾನ್ಯರ ವಿಷಯ ದಲ್ಲಿ ಮರುಕವಷ್ಟೇ ಅಲ್ಲ, ಅಪಾರ ಗೌರವ. ಒಮ್ಮೆ ಸಾಗರದಿಂದ ಶಿವಮೊಗ್ಗೆಗೆ ರೈಲಿನಲ್ಲಿ ಮೂರನೆಯ ದರ್ಜೆಯ ಗಾಡಿಯಲ್ಲಿ ಪಯಣ. ಅವರೊಡನೆ ಹಲವರು ಸಮಾಜವಾದೀ ಪಕ್ಷದ ಕಾರ್ಯಕರ್ತರು ಇದ್ದರು.
ಅವರಲ್ಲಿ ಕೆಲವರು ಕಾಲು ನೀಡಿ ಎದುರಿದ್ದವರನ್ನೂ ಗಮನಿಸದೆ ಕುಳಿತಿದ್ದರು. ಲೋಹಿಯಾ ಅವರಿಗೆ ಅದು ಸಹಿಸಲಿಲ್ಲ. ಏಕೆಂದರೆ ಎದುರಿನ ಸಾಲಿನಲ್ಲಿ ಅನೇಕ ರೈತರು ಕುಳಿತಿದ್ದರು. ‘ಇದು ಸಮಾಜವಾದಿಗಳಿಗೆ ಸಲ್ಲದ ನಡೆ, ನಿನ್ನ ಗೆಳೆಯರಿಗೆ ತಿಳಿಸಿ ಹೇಳು’ – ಎಂದು ತಮ್ಮ ಗೆಳೆಯರಿಗೆ ತಿಳಿಸಿದರು. ಹೀಗೆ ಸಣ್ಣ ವಿಷಯಗಳಲ್ಲಿಯೂ ಅವರು ಬಹಳ ಎಚ್ಚರದಿಂದ ಇರುತ್ತಿದ್ದರು.
1952ರಲ್ಲಿ ಮೊಟ್ಟಮೊದಲ ಬಾರಿಗೆ ದೇಶದಾದ್ಯಂತ ಮಹಾಚುನಾವಣೆ ನಡೆಯಿತು. ಎಲ್ಲ ಕಡೆಯೂ ಸಮಾಜವಾದೀ ಪಕ್ಷ ತನ್ನ ಹುರಿಯಾಳುಗಳನ್ನು ನಿಲ್ಲಿಸಿತ್ತು. ಡಾ. ಲೋಹಿಯಾ ಸ್ವತಃ ಸ್ಪರ್ಧಿಸಲಿಲ್ಲ. ಎಲ್ಲ ರಾಜ್ಯಗಳಲ್ಲೂ ಸಂಚರಿಸಿ ಪಕ್ಷದ ಪ್ರಜಾರ ಕಾರ್ಯದಲ್ಲಿ ತೊಡಗಿದರು. ಆಗ ಮೈಸೂರು ರಾಜ್ಯಕ್ಕೂ ಬಂದಿದ್ದರು. ಅನೇಕ ಸಭೆಗಳನ್ನು ಕುರಿತು ಭಾಷಣ ಮಾಡಿದರು. ಆ ಚುನಾವಣೆಯಲ್ಲಿ ಸಮಾಜವಾದಿಗಳಿಗೆ ಅಷ್ಟಾಗಿ ಗೆಲುವು ದೊರೆಯಲಿಲ್ಲ.
ಅನಂತರ ಒಂದು ವರ್ಷದೊಳಗಾಗಿ ಸಮಾಜವಾದೀ ಪಕ್ಷ ಹಾಗೂ ಆಚಾರ್ಯ ಕೃಪಲಾನಿಯವರು ಸ್ಥಾಪಿಸಿದ್ದ ಕಿಸಾನ್ ಮಜದೂರ್ ಪ್ರಜಾಪಕ್ಷಗಳೆರಡೂ ವಿಲೀನಗೊಂಡವು. ಹೊಸ ಪಕ್ಷಕ್ಕೆ ಪ್ರಜಾ ಸಮಾಜವಾದೀ ಪಕ್ಷ ಎಂದು ಹೆಸರಿಸಲಾಯಿತು. ಅದಕ್ಕೆ ಆಚಾರ್ಯ ಕೃಪಲಾನಿಯವರು ಅಧ್ಯಕ್ಷರಾದರು. ಡಾ. ರಾಮ ಮನೋಹರ ಲೋಹಿಯಾ ಪ್ರಧಾನ ಕಾರ್ಯದರ್ಶಿ ಆದರು.
ಹಿಂದೆ ಆಚಾರ್ಯ ಕೃಪಲಾನಿ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿದ್ದಾಗ ಲೋಹಿಯಾ ಕಾಂಗ್ರೆಸ್ಸಿನ ವಿದೇಶಾಂಗ ವಿಭಾಗದ ಮುಖ್ಯಸ್ಥರಾಗಿದ್ದರು. ಆಗ ಅವರು ಕೃಪಲಾನಿಯವರ ಕುಟುಂಬದ ಒಬ್ಬ ಸದಸ್ಯರೇ ಆಗಿದ್ದರು. ಅವರೊಂದಿಗೇ ವಾಸ. ಹೀಗಾಗಿ ಕೃಪಲಾನಿಯವರಿಗೆ ಲೋಹಿಯಾ ಅವರ ಬಗೆಗೆ ಅಪಾರ ವಾತ್ಸಲ್ಯ.
ಪತ್ರಿಕಾ ಸಂಪಾದಕೀಯ
ರಾಮ ಮನೋಹರ್ ಲೋಹಿಯಾ ಅವರು ಹಲವಾರು ಪತ್ರಿಕೆಗಳ ಸಂಪಾದಕರಾಗಿದ್ದರು. ಇವುಗಳಲ್ಲಿ ಪ್ರಮುಖವಾದುವೆಂದರೆ
ಮ್ಯಾನ್ ಕೈಂಡ್ (ಇಂಗ್ಲೀಷ್)
ಚೌಕಂಭಾ (ಹಿಂದಿ)
ಇಂಗ್ಲೀಷ್ ಕೃತಿಗಳು
The Cast system
Marks Gandhi and Socialism
Guilty men of India's partision
Interval during Palitics
Language
Rupees 25,000/-
A Day
Note and Comments
ಹಿಂದಿಯಲ್ಲಿ ಬರೆದ ಮುಖ್ಯ-ಕೃತಿಗಳು
ಸಮಜವಾದಿ ಅಂದೊಳನ್ ಕ ಇತಿಹಾಸ್
ಹಿಂದು ಮುಸಲ್ಮಾನ್
ಅನ್ನ ಸಮಸ್ಯೆ
ಆಝಾದ್ ಹಿಂದೂಸ್ಥಾನ್ ಕ ನಯೀ ರುಜುಹಾನ್
ನಿಧನ
ರಾಮ ಮನೋಹರ ಲೋಹಿಯಾರವರು, ಅವಿವಾಹಿತರಾಗಿದ್ದರು. ೧೯೬೭ ರ ಅಕ್ಟೋಬರ್, ೧೨ ರಂದು ಕಾಲವಶರಾದರು.

ಭಗತ್ ಸಿಂಗ್, ರಾಜಗುರು, ಸುಖದೇವ್
*ಭಗತ್ ಸಿಂಗ್, ರಾಜಗುರು, ಸುಖದೇವ್*
ಕ್ರಾಂತಿಕಾರರು ಮತ್ತು ರಾಷ್ಟ್ರಪುರುಷರು
ಭಾರತಾಂಬೆಯ ಚರಣಗಳಲ್ಲಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳ ಪಟ್ಟಿಯಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಇವರ ಹೆಸರು ಮುಂಚೂಣಿಯಲ್ಲಿ ಬರುತ್ತದೆ. ಸೌಂಡರ್ಸ್ ಎಂಬ ಆಂಗ್ಲ ಅಧಿಕಾರಿಯ ಪೀಡೆಯಿಂದ ಮುಕ್ತಿ ನೀಡಿದ ಈ ಮೂವರು, ನಗುನಗುತ ನೇಣುಗಂಬವನ್ನು ಏರಿದರು. ಈ ಮೂರು ಮಹಾನ್ ಕ್ರಾಂತಿಕಾರಿಗಳ ಬಲಿದಾನ ದಿನದ ನಿಮಿತ್ತ ಈ ವಿಶೇಷ ಲೇಖನ
ಭಾರತದ ಅಂದಿನ ಪರಿಸ್ಥಿತಿ..
೧೯೨೮ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತು. ಭಾರತದ ಮುಂದಿನ ದಿಶೆಯನ್ನು ನಿರ್ಧರಿಸುವುದು ಈ ಮಂಡಲದ ಉದ್ದೇಶವಾಗಿತ್ತು. ಭಾರತದಾದ್ಯಂತ ಈ ಮಂಡಲಕ್ಕೆ ತೀವ್ರ ವಿರೋಶ ವ್ಯಕ್ತವಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಒಂದು ನಿಷೇಧ ಯಾತ್ರೆಯು ಈ ಕಮಿಷನ್ ಅನ್ನು ಸ್ವಾಗತಿಸಿತು. 'ಸೈಮನ್ ಗೋ ಬ್ಯಾಕ್' (ಸೈಮನ್ ಹಿಂದಿರುಗು) ಎಂಬ ಕೂಗು ಎಲ್ಲೆಡೆ ಮೊಳಗಿತು! ಪರಿಸ್ಥಿತಿಯನ್ನು ನಿಯಂತ್ರಿಸಲು ಆಂಗ್ಲ ಅಧಿಕಾರಿಗಳು ನೆರೆದವರ ಮೇಲೆ ಅಮಾನುಷ ಲಾಠಿ ಪ್ರಹಾರ ಮಾಡಿಸಿದರು. ಇದರಲ್ಲಿ ಲಾಲಾ ಲಜಪತ ರಾಯ್ ಅಸುನೀಗಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು, ಲಾಲಾಜಿ ಸಾವಿಗೆ ಕಾರಣನಾದ ಆಂಗ್ಲ ಅಧಿಕಾರಿ ಸ್ಕಾಟ್ ನನ್ನು ಕೊಳ್ಳುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಹೊಂಚು ಹಾಕಿದರು. ಆದರೆ ಸ್ಕಾಟ್ ಬದಲು ಸೌಂಡರ್ಸ್ ಎಂಬ ಇನ್ನೋರ್ವ ಕ್ರೂರ ಅಧಿಕಾರಿಯು ಭಗತ್ ಸಿಂಗ್ ಹಾರಿಸಿದ ಗುಂಡಿಗೆ ಬಲಿಯಾದನು. ಆಂಗ್ಲ ಅಧಿಕಾರಿಯನ್ನು ಕೊಂದ ಈ ಮೂವರನ್ನು ಹಿಡಿಯಲು ಬ್ರಿಟಿಷ್ ಸರಕಾರ ಶತಪ್ರಯತ್ನ ಮಾಡಿತು. ಆದರೆ ಆರಕ್ಷಕರ ಕಣ್ಣು ತಪ್ಪಿಸಿ ಇವರೆಲ್ಲರೂ ಭೂಗತರಾದರು ಮತ್ತು ಇತರ ಕ್ರಾಂತಿಕಾರಿಗಳಿಗೆ ಈ ಕಾರ್ಯವನ್ನು ಮುನ್ನಡೆಸಲು ಸ್ಪೂರ್ತಿ ನೀಡಿದರು. ಮುಂದೊಂದು ದಿನ ಇವರನ್ನು ಇನ್ನೊಂದು ಪ್ರಕರಣದಲ್ಲಿ ೨೩.೩.೧೯೩೦ರಲ್ಲಿ ಗಲ್ಲಿಗೇರಿಸಲಾಯಿತು.
ಭಗತ್ ಸಿಂಗ್ ಕಿರು ಪರಿಚಯ
ಜನನ : ೨೭.೯.೧೯೦೭ ರಂದು ಪಂಜಾಬಿನ ಒಂದು ದೇಶಭಕ್ತ ಕುಟುಂಬದಲ್ಲಿ
ಬಾಲ್ಯ : ಸ್ವಾತಂತ್ರ್ಯ ಪೂರ್ವದ ಘಟನೆ. ಪಂಜಾಬಿನ ಒಂದು ಹಳ್ಳಿ. ೩ ವರ್ಷದ ಬಾಲಕನೊಬ್ಬ ತನ್ನ ತಂದೆಯೊಂದಿಗೆ ಸುತ್ತಾಡಿ ಬರಲು ಮನೆಯಿಂದ ಹೊರಟ. ಅವರೊಂದಿಗೆ ಅವನ ತಂದೆಯ ಮಿತ್ರರೊಬ್ಬರು ಇದ್ದರು. ಮೂವರೂ ಮಾತಾಡುತ್ತ ಮುಂದೆ ಮುಂದೆ ಹೋಗಿ ಅವರ ಊರಿನ ಗಡಿಯಾಚೆ ನಡೆದರು. ಊರಿನಾಚೆ ಹೊಲ ಗದ್ದೆಗಳ ಮಧ್ಯದಲ್ಲಿ ನಡೆದುಕೊಂಡು ಹೋಗುತ್ತಿದ್ದ ಹಿರಿಯರು ಬಾಲಕನ ನೆನಪಾಗಿ ತಿರುಗಿ ನೋಡಿದರು. ಅವನು ಗದ್ದೆಯೊಂದರಲ್ಲಿ ಕುಳಿತು ಏನೋ ಮಾಡುತ್ತಿದ್ದದ್ದನ್ನು ಕಂಡು ಅವನೆಡೆಗೆ ನಡೆದರು. ಬಾಲಕನ ತಂದೆ ಕುತೂಹಲದಿಂದ 'ಏನು ಮಾಡುತ್ತಿದ್ದೀಯಾ?' ಎಂದು ಕೇಳಿದರು. ಆಗ ಬಾಲಕನು 'ಈ ಹೊಲದ ತುಂಬಾ ನಾನು ಬಂದೂಕುಗಳನ್ನು ನೆಡುತ್ತೇನೆ' ಎಂದು ಮುಗ್ಧವಾಗಿ ಉತ್ತರಿಸಿದನು. ಈ ಮಾತು ಹೇಳುವಾಗ ಅವನ ಕಣ್ಣಿನಲ್ಲಿ 'ನೆಟ್ಟಿರುವ ಬಂದೂಕುಗಳು ಹೊಲದ ತುಂಬಾ ಬೆಳೆಯಲಿವೆ' ಎಂಬ ಬಲವಾದ ನಂಬಿಕೆ ಕಾಣುತ್ತಿತ್ತು! ಏಕೆ ಎಂದು ಪ್ರಶ್ನಿಸಿದಕ್ಕೆ 'ಈ ಬಂದೂಕುಗಳಿಂದ ನಾವು ಆಂಗ್ಲರನ್ನು ನಮ್ಮ ದೇಶದಿಂದ ಹೊರಗೆ ಓಡಿಸಬಹುದು' ಎಂಬ ಉತ್ತರವನ್ನು ನೀಡಿದ! ಇದನ್ನು ಕೇಳುತ್ತಿದ್ದ ಹಿರಿಯರು ಈ ಬಾಲಕನ ದೇಶಭಕ್ತಿಯ ಬಗ್ಗೆ ಆಶ್ಚರ್ಯಚಕಿತರಾದರು.
ಯುವಾವಸ್ಥೆ :ಉನ್ನತ ಶಿಕ್ಷಣ, ಸಿರಿವಂತ ಮನೆಯ ಸರ್ವ ಅನುಕೂಲಗಳು ಇವೆಲ್ಲವನ್ನೂ ತ್ಯಜಿಸಿ, ದೇಶಕ್ಕಾಗಿ ಅವಿವಾಹಿತನಾಗಿರಲು ನಿರ್ಧಿರಿಸದ ಭಗತ್ ಸಿಂಗ್, ಕ್ರಾಂತಿಕಾರಿಯಾದನು. 'ನೌಜವಾನ್ ಭಾರತ ಸಭಾ', 'ಕೀರ್ತಿ ಕಿಸಾನ್ ಪಾರ್ಟಿ' ಮತ್ತು 'ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್' ಮುಂತಾದ ಅನೇಕ ಸಂಘಟನೆಗಳನ್ನು ಸ್ಥಾಪಿಸಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೃತಿಶೀಲನಾದನು.
ಜೀವನದ ಕೆಲವು ಪ್ರಸಂಗಗಳು : ತನಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ ಎಂದು ತಿಳಿದ ನಂತರ ಭಗತ್ ತಾಯಿಗೆ ಬರೆದ ಪತ್ರದಲ್ಲಿ ಹೀಗೆ ಹೇಳುತ್ತಾನೆ – 'ಅಮ್ಮ, ಚಿಂತಿಸಬೇಡ! ಗಲ್ಲು ಆದರೇನು! ಆಂಗ್ಲ ಸರಕಾರವನ್ನು ಕಿತ್ತೊಗೆಯಲು ಒಂದೇ ವರ್ಷದಲ್ಲಿ ಪುನಃ ಜನ್ಮ ತಾಳುವೇನು!'
ಶಿವರಾಮ ಹರಿ ರಾಜಗುರು
ಜನನ : ೨೪.೮.೧೯೦೮ ರಲ್ಲಿ ಮಹಾರಾಷ್ಟ್ರದ ದೇಶಸ್ಥ ಬ್ರಾಹ್ಮಣ ಕುಟುಂಬದಲ್ಲಿ ಜನನ. ಅನೇಕ ಗ್ರಂಥಗಳ ಅಧ್ಯಯನ ಮಾಡಿದವರು. ಇವರು ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಸದಸ್ಯರಾಗಿದ್ದರು.
ರಾಜಗುರು ಜೀವನದ ಕೆಲವು ಪ್ರಸಂಗಗಳು
ಪ್ರಸಂಗ ೧ : ಒಮ್ಮೆ ಕ್ರಾಂತಿಕಾರಿಗಳು ಊಟಕ್ಕಾಗಿ ಸೇರಿದಲ್ಲಿ ರಾಜಗುರು ರೊಟ್ಟಿಯನ್ನು ತಯಾರಿಸುತ್ತಿದ್ದನು. ತಂದೂರ್ ಒಳಗೆ ಬೇಯಿಸಿದ ರೊಟ್ಟಿಗಳನ್ನು ಬರಿಗೈಯ್ಯಿಂದ ಹೊರತೆಗೆಯುತ್ತಿದ್ದ ರಾಜಗುರುನನ್ನು ನೋಡಿದ ಓರ್ವ ಕ್ರಾಂತಿಕಾರಿ ಅವನ ಪ್ರಶಂಸೆ ಮಾಡಿದನು. ಆಗ ಇನ್ನೋರ್ವ ಕ್ರಾಂತಿಕಾರಿ ತಮಾಷೆ ಮಾಡುತ್ತಾ 'ತಂದೂರ್ ಒಳಗೆ ಕೈ ಹಾಕುವುದು ದೊಡ್ಡ ಕೆಲಸವಲ್ಲ. ರಾಜಗುರು ಪೊಲೀಸರ ಅತ್ಯಾಚಾರಗಳನ್ನು ಇಷ್ಟು ಸಹಿಷ್ಣುತೆಯಿಂದ ಎದುರಿಸಿದರೆ ಮಾತ್ರ ಅದು ಪ್ರಶಂಸನೀಯ' ಎಂದನು. ಇದನ್ನು ಕೇಳಿದ ರಾಜಗುರು ಶಾಂತವಾಗಿ ಒಂದು ಬಾಣಾಲೆಯನ್ನು ಬಿಸಿ ಮಾಡಿ ತನ್ನ ಎದೆಗೆ ಒತ್ತಿಕೊಂದನು. ಚರ್ಮ ಸುಟ್ಟು ಹೋಯಿತು. ಪುನಃ ಹಾಗೆ ಮಾಡಿದನು! ನಗುತ್ತ 'ಈಗ ಹೇಳು, ನಾನು ಕಾರಾಗೃಹ ಅತ್ಯಾಚಾರಗಳನ್ನು ಸಹಿಸಲು ಸಿದ್ಧನಿದ್ದೇನೆ ಎಂಬುದಕ್ಕೆ ಏನಾದರೂ ಸಂದೇಹ ಉಂಟೆ?' ಎಂದು ಕೇಳಿದನು. ಆ ಕ್ರಾಂತಿಕಾರಿಗೆ ತನ್ನ ತಪ್ಪಿನ ಅರಿವಾಯಿತು, 'ರಾಜಗುರು, ನಿನ್ನ ಪ್ರಖರ ದೇಶಭಕ್ತಿಯ ಬಗ್ಗೆ ನನಗೆ ಕಿಂಚಿತ್ತೂ ಅನುಮಾನವಿಲ್ಲ, ನನ್ನನ್ನು ಕ್ಷಮಿಸು' ಎಂದು ಕ್ಷಮೆ ಯಾಚಿಸಿದನು.
ಪ್ರಸಂಗ ೨ : ರಾಜಗುರು ಕಾರಾಗೃಹದಲ್ಲಿದ್ದಾಗ ಅವರ ಮೇಲೆ ಅಮಾನವೀಯ ಅತ್ಯಾಚಾರಗಳು ಆದವು. ಲಾಹೋರ್ ನಲ್ಲಿ ಆಗ ತೀವ್ರ ಬೇಸಿಗೆ. ಆ ಬಿಸಿಲಿನಲ್ಲಿ ಸುತ್ತಲೂ ಬೆಂಕಿಯನ್ನು ಹಚ್ಚಿ ಅವರನ್ನು ಮಧ್ಯದಲ್ಲಿ ಕೂರಿಸಿದರು. ಮಂಜುಗಡ್ಡೆಯ 'ಹಾಸಿಗೆ'ಯ ಮೇಲೆ ಮಲಗಿಸಿದರು. ಅವಯವಗಳ ನಿಷ್ಕ್ರಿಯವಾದವು. ಯಾವುದಕ್ಕೂ ಬಗ್ಗದ ರಾಜಗುರು ತಲೆಯ ಮೇಲೆ ಮಲದ ಧಾರೆ ಕೂಡ ಎರೆದರು. ಇದೆಲ್ಲವನ್ನು ಸಹಿಸಿದ ರಾಜಗುರು ಬಾಯಿ ಬಿಡಲಿಲ್ಲ, ತನ್ನ ಸಹಕ್ರಾಂತಿಕಾರಿಗಳ ಹೆಸರನ್ನು ಹೇಳಲಿಲ್ಲ !
ಪ್ರಸಂಗ ೩ : ರಾಷ್ಟ್ರ ಕಾರ್ಯಕ್ಕಾಗಿ ಹಂಬಲಿಸುವ ರಾಜಗುರು: ನೇಣುಗಂಬವನ್ನು ಏರುವ ಮೊದಲು ಇತರ ಕ್ರಾಂತಿಕಾರಿಗಳೊಂದಿಗೆ ಮಾತನಾಡುತ್ತ ರಾಜಗುರು ಹೀಗೆ ಹೇಳಿದರು – 'ನೀವೆಲ್ಲರೂ ಇನ್ನಷ್ಟು ವರ್ಷಗಳು ಭಾರತಾಂಬೆಗಾಗಿ ಕಾರ್ಯ ಮಾಡಲಿರುವಿರಿ. ಆದರೆ ನೇಣುಗಂಬ ಏರಿದ ತಕ್ಷಣ ನಮ್ಮ ಪ್ರವಾಸ ಅಂತ್ಯಗೊಳ್ಳುತ್ತದೆ ಎಂದು ಯೋಚಿಸಿ ದುಃಖವಾಗುತ್ತಿದೆ'.
ಸುಖದೇವ್ ಥಾಪರ್
ಜನನ : ೧೫.೫.೧೯೦೭ ರಲ್ಲಿ ಪಂಜಾಬ್ ಪ್ರಾಂತ್ಯದಲ್ಲಿ ಜನನ. 'ನೌಜವಾನ್ ಭಾರತ ಸಭಾ' ಸಂಸ್ಥಾಪಕ ಮತ್ತು 'ಹಿಂದೂಸ್ಥಾನ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್'ನ ಕಾರ್ಯಕರ್ತ.
ಸುಖದೇವ ಜೀವನ : ಸುಖದೇವ್ ಮೇಲೆ ಭಗತ್ ಸಿಂಗ್ ನ ಕ್ರಾಂತಿಕಾರಿ ವಿಚಾರಗಳ ತೀವ್ರ ಪರಿಣಾಮವಾಯಿತು. ಲಾಹೋರಿನ ನ್ಯಾಷನಲ್ ಕಾಲೇಜಿನಲ್ಲಿ 'ಭಾರತದ ಗೌರವಶಾಲಿ ಇತಿಹಾಸ, ಜಗತ್ತಿನ ಕ್ರಾಂತಿಕಾರಿ ಘಟನೆಗಳ ಅಧ್ಯಯನ, ರಶ್ಶಿಯಾದಲ್ಲಿ ನಡೆದ ಕ್ರಾಂತಿ' ಇವೆಲ್ಲವುಗಳ ಅಧ್ಯಯನಕ್ಕಾಗಿ ವಿಚಾರವಾದಿಗಳನ್ನು ಸೇರಿಸಿದರು. ಸ್ವಾತಂತ್ರ್ಯ ಸಮರದಲ್ಲಿ ಸಹಭಾಗಿಯಾಗುವಂತೆ ಯುವಕರನ್ನು ಪ್ರೇರೇಪಿಸುವುದು, ಶಾಸ್ತ್ರೀಯ ಅಧ್ಯಯನ, ಕ್ರಾಂತಿಕಾರಿ ಹೋರಾಟ, ಅಸ್ಪೃಶ್ಯತೆಯ ನಿವಾರಣೆ ಇತ್ಯಾದಿ ಧ್ಯೇಯಗಳನ್ನು ಪೂರಿಸಲು 'ನೌಜವಾನ್ ಭಾರತ ಸಭಾ' ಸ್ಥಾಪಿಸಿದರು. ಕ್ರಾಂತಿಕಾರಿಗಳ ಮೇಲೆ ನಡೆಯುವ ಅತ್ಯಾಚಾರಗಳ ವಿರುದ್ಧ ೧೯೨೯ರಲ್ಲಿ ಪ್ರಾರಂಭವಾದ ಆಮರಣಾಂತ ಉಪವಾಸದಲ್ಲಿ ಸುಖದೇವ್ ಕೂಡ ಭಾಗವಹಿಸಿದರು.
ಭಾರತಾಂಬೆಯ ಚರಣಗಳಲ್ಲಿ ಲೀನ!
೨೩ ಮಾರ್ಚ, ೧೯೩೧ ರಂದು ಲಾಹೋರಿನ ಸೆಂಟ್ರಲ್ ಜೈಲ್ ನಲ್ಲಿ ಸಂಜೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಈ ಮೂವರೂ ನಗುಮುಖದಿಂದ ನೇಣುಗಂಬವನ್ನು ಏರಿದರು. ಬನ್ನಿ ಈ ಮಹಾನ್ ದೇಶಭಾಕ್ತರಿಗೆ ನಮ್ಮ ನಮನಗಳನ್ನು ಅರ್ಪಿಸೋಣ!💐💐💐💐👏🏽👏🏽👏🏽👏🏽👏🏽👏🏽

12.3.17
ಹೋಳಿ
ಹೋಳಿ
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.
ಮತ್ತೊಂದು ಪಾಠಾಂತರದ ಪ್ರಕಾರ- ಪೂರ್ವದಲ್ಲಿ ತಾರಕಾಸುರನೆಂಬ ರಾಕ್ಷಸನಿದ್ದ. ದುರಹಂಕಾರಿಯೂ ಕ್ರೂರಿಯೂ ಆದ ತಾರಕಾಸುರನು ಲೋಕಕಂಟಕನಾಗಿ ಮೆರೆಯುತ್ತಿದ್ದ. ತನಗೆ ಮರಣವು ಬಾರದಿರಲಿ, ಬಂದರೂ ಅದು ಶಿವನಿಗೆ ಜನಿಸಿದ ಏಳು ದಿನದ ಶಿಶುವಿನಿಂದ ಬರಲಿ ಅಂದು ಬ್ರಹ್ಮನಲ್ಲಿ ವರವನ್ನು ಬೇಡಿದ್ದ. ಭೋಗಸಮಾಧಿಯಲ್ಲಿದ್ದ ಶಿವ, ಪಾರ್ವತಿಯ ಜೊತೆ ಸಮಾಗಮ ಹೊಂದಲು ಸಾದ್ಯವಿರಲಿಲ್ಲ. ದೇವತೆಗಳು ನಿರುಪಾಯರಾಗಿ ಪಾರ್ವತಿಯಲ್ಲಿ ಮೋಹ ಹೊಂದುವಂತೆ ಮಾಡಲು ಕಾಮನಲ್ಲಿ ಬೇಡಿದರು. ಕಾಮ (ಮನ್ಮಥ) ಮತ್ತು ಅವನ ಪತ್ನಿ ರತಿದೇವಿ ಈ ಸತ್ಕಾರ್ಯಕ್ಕೆ ಒಪ್ಪಿದರು. ಭೋಗಸಮಾಧಿಯಲ್ಲಿದ್ದ ಶಿವನಿಗೆ ಹೂ ಬಾಣಗಳಿಂದ ಹೊಡೆದು ಸಮಾಧಿಯಿಂದ ಎಚ್ಚರಿಸಿದರು. ಇದರಿಂದ ಕುಪಿತಗೊಂಡ ಶಿವನು ತನ್ನ ಮೂರನೇ ಕಣ್ಣಿಂದ ಕಾಮನನ್ನು ಸುಟ್ಟು ಭಸ್ಮ ಮಾಡಿದನು. ರತಿದೇವಿ ದು:ಖದಿಂದ ಶಿವನಲ್ಲಿ ಪತಿಭಿಕ್ಷೆಯನ್ನು ಬೇಡಿದಳು. ಶಾಂತಗೊಂಡ ಶಿವನು ಪತ್ನಿಯೊಡನೆ ಮಾತ್ರ ಶರೀರಿಯಾಗುವಂತೆ ಕಾಮನಿಗೆ ವರ ಕೊಟ್ಟನು. ಲೋಕಕಲ್ಯಾಣಕ್ಕಾಗಿ ಮನ್ಮಥನು ಅನಂಗನಾದ. ಈ ಘಟನೆ ನಡೆದದ್ದು ಫಾಲ್ಗುಣ ಶುದ್ಧ ಪೂರ್ಣಿಮೆಯಂದು. ಆದ್ದರಿಂದ ಈ ದಿನವನ್ನು "ಕಾಮನ ಹುಣ್ಣಿಮೆ"ಯಾಗಿ ಆಚರಿಸಲ್ಪಡುತ್ತದೆ.
ನಾರದ ಪುರಾಣದಲ್ಲಿ ಮತ್ತೊಂದು ಕಥೆ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾಳ ದಹನವಾಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ.
ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಅಥವಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.
ಆಚರಣೆ ಸಂಪಾದಿಸಿ
ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು. ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು. ಉತ್ತರ ಪ್ರದೇಶದಲ್ಲಿ ಜೋಳದ ಹಿಟ್ಟಿನ ಗುಜಿಯಾ ಹಾಗೂ ಪಾಪ್ಡಿ ಜನಪ್ರಿಯವಾಗಿದೆ.
ದೆಹಲಿಯಲ್ಲಿ ಈ ದಿನದಂದು ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೇಲ್ಲ ಧರಿಸಿ ಗಣ್ಯರನ್ನೇಲ್ಲ ಕರೆದು, ಅವರ ಸಮ್ಮುಖದಲ್ಲಿ ಲಂಕೇಶನನ್ನು ಸುಡುವುದು ವಾಡಿಕೆ.
ಗ್ರಾಮೀಣ ಪ್ರದೇಶಗಳಲ್ಲಿ ಆ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ, ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಆ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಅದೇ ಅವರ ಕಾಮದಹನದ ಹಬ್ಬ.

10.3.17
ದಲಿತ ವಚನಕಾರರ ಜಯಂತಿ
*ದಲಿತ ವಚನಕಾರರ ಕುರಿತಾದ ಸಂಕ್ಷಿಪ್ತ ಮಾಹಿತಿ*👇
*ದಲಿತ ವಚನಕಾರರ ಜಯಂತಿ*
*ಮಾರ್ಚ್ 10 2017*
12ನೇ ಶತಮಾನದ ಕಲ್ಯಾಣ ಕ್ರಾಂತಿಯು ಸಮಾಜ ಪರಿವರ್ತನೆಯ ಕಾಲಘಟ್ಟವಾಗಿತ್ತು. ಬಸವಾದಿ ಶರಣರು ಹಾಗೂ ಹಲವಾರು ದಲಿತ ವಚನಕಾರರು ಸಮಾಜಕ್ಕೆ ಪೂರಕವಾದ ಮತ್ತು ಸಮಾನತೆ ಸಾರುವ ಅನೇಕ ವಚನಗಳನ್ನು ರಚಿಸಿದರು .
*ದಲಿತ ವಚನಕಾರರಾದ ಮಾದಾರ ಚೆನ್ನಯ್ಯ, ಮಾದಾರ ಧೂಳಯ್ಯ, ಡೋಹರ ಕಕ್ಕಯ್ಯಾ, ಸಮಗಾರ ಹರಳಯ್ಯ ಹಾಗೂ ಉರಿಲಿಂಗ ಪೆದ್ದಿ ಪರಿಣಾಮಕಾರಿಯಾದ ಹಲವು ವಚನಗಳನ್ನು ರಚಿಸಿದರು*
ಹಲವು ಮೂಢನಂಬಿಕೆಗಳು ಮತ್ತು ಅಸಮಾನತೆಯಿಂದ ಕೂಡಿದ್ದ ಸಮಾಜದಲ್ಲಿ ಎಲ್ಲ ವರ್ಗದ ಜನರು ಶಾಂತಿಯಿಂದ ಬದುಕಲು ನೆರವಾಗುವ ಉದ್ದೇಶದಿಂದ *ವಚನಗಳ ಮೂಲಕ ಸಮಾಜ ಸುಧಾರಣೆ ಮಾಡುವ ಕೆಲಸನವನ್ನು ವಚನಕಾರರು ಮಾಡಿದ್ದಾರೆ. ಕಾಯಕವೇ ಕೈಲಾಸ ಎಂದು ನಂಬಿದ್ದ ಅವರು, ವಚನಗಳ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸಿ, ಸಮಾನತೆ ಸಾರುವ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ*.
ರಾಜ್ಯ ಸರ್ಕಾರ ಇಂತಹ ಹಲವಾರು ಶರಣರು, ವಚನಕಾರರು ಹಾಗೂ ಸಮಾನತೆಗಾಗಿ ಶ್ರಮಿಸಿದವರಿಗೆ ಗೌರವ ನೀಡುವ ಉದ್ದೇಶದಿಂದ ಜಯಂತ್ಯುತ್ಸವ ಆಚರಣೆಗೆ ಅವಕಾಶ ಮಾಡಿಕೊಟ್ಟಿದ್ದು, ಎಲ್ಲ ಸಮುದಾಯದ ಜನರಿಗೆ ಗೌರವ ನೀಡುವ ಕ್ರಮವಾಗಿದೆ .
*ಮಾದಾರ ಚನ್ನಯ್ಯ*
ಹನ್ನೇರಡನೆಯ ಶತಮಾನದ ಶರಣರಲ್ಲಿ ಮಾದಾರ ಚೆನ್ನಯ್ಯ ಬಹು ಮುಖ್ಯನಾದ ವ್ಯಕ್ತಿ. ಸತ್ಯಶುದ್ಧ ಕಾಯಕಕ್ಕೆ ಹೆಸರಾದವನು. ಜಾತಿಯಿಂದ ಆತ ಅಂತ್ಯಜ: ಅಂದರೆ ಮಾದಿಗ ಜಾತಿಯವನು. ತಮಿಳುನಾಡಿನ ಚೋಳರಾಜನ ಅರಮನೆಯ ಲಾಯಕ್ಕೆ ಹುಲ್ಲುತರುವ ಕೆಲಸಮಾಡುತ್ತಿದ್ದ ಅನಂತರ ಆತ ಬಸವಾದಿ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾಗಿ ಕಲ್ಯಾಣಕ್ಕೆ ಬಂದನು. ಅಲ್ಲಿ ತನ್ನ ಕುಲದ ಕಾಯಕವಾದ ಚರ್ಮಗಾರಿಕೆಯನ್ನು ಮುಂದುವರಿಸಿದರು. ದೇವನಿಗೆ ಅಂಬಲಿ ಉಣಿಸಿದ ಪ್ರಸಂಗ ಅವನ ಉಜ್ವಲ ಭಕ್ತಿಗೆ ಉದಾಹರಣೆ. ಬಸವಣ್ಣನವರು ಮಾದಾರ ಚೆನ್ನಯ್ಯನನ್ನು ಹೃದಯಾಂತರಾಳದಿಂದ ಸ್ತುತಿಸಿದ್ದಾರೆ.
*ಮಾದಾರ ಚೆನ್ನಯ್ಯ ಶ್ರೇಷ್ಟವಚನಕಾರ*. ಚೆನ್ನಯ್ಯನು ತನ್ನ ವಚನಗಳಲ್ಲಿ ಯಾವುದೇ ಅಂಕಿತವನ್ನು ಬಳಸಿಕೊಂಡಿಲ್ಲ. ತನ್ನ ಕಾಯಕದಲ್ಲಿ ಬಳಸುವ ಕೈ ಉಳಿ ಅಡಿಗೂಟ ಮೊದಲಾದವನ್ನೇ ಬಳಸಿ *"ಅರಿ ನಿಜಾತ್ಮರಾಮನ ರಾಮನ"* ಎಂದಿದ್ದಾನೆ, ಅವರ ೧೦ ವಚನಗಳು ದೊರಕಿವೆ. ನಡೆದಂತೆ ನುಡಿಯುವುದು ನುಡಿದಂತೆ ನಡೆಯುವುದು ಎಂಬ ಶರಣರ ಧ್ಯೇಯ ವಾಕ್ಯಕ್ಕೆ ಒಳ್ಳೆಯ ಉದಾಹರಣೆ ಮಾದಾರ ಚೆನ್ನಯ್ಯ. ಅವನ ವಚನವೊಂದರಲ್ಲಿ ಈ ರೀತಿ ಹೇಳಿದ್ದಾನೆ:
ವೇದ ಶಾಸ್ತ್ರಕ್ಕೆ ಹಾರುವನಾಗಿ, ವೀರ ವಿತರಣಕ್ಕೆ ಕ್ಷತ್ರಿಯನಾಗಿ
ಸರ್ವವನಾರೈದು ನೋಡುವಲ್ಲಿ ವೈಶ್ಯನಾಗಿ ವ್ಯಾಪಾರದೊಳಗಾಗಿ
ಕೃಷಿಯ ಮಾಡುವುದಕ್ಕೆ ಶೂದ್ರನಾಗಿ ಇಂತೀ ಜಾತಿ ಗೋತ್ರದೊಳಗಾಗಿ
ನೀಚ, ಶ್ರೇಷ್ಠವೆಂಬ ಎರಡು ಕುಲವಲ್ಲದೆ ಹೊಲೆ ಹದಿನೆಂಟು
ಜಾತಿಯೆಂಬ ಕುಲವಿಲ್ಲ. ಬ್ರಹ್ಮವನರಿದಲ್ಲಿ ಬ್ರಾಹ್ಮಣ
ಸರ್ವ ಜೀವಹತ ಕರ್ಮಕ್ಕೊಳಗಾಗಿದ್ದಲ್ಲಿ ಸಮಗಾರ, ಈ ಉಭಯವ
ನರಿದು ಮರೆಯಲಿಲ್ಲ ಕೈಯುಳಿಗತ್ತಿ ಆಡಿಗೂಂಟಕ್ಕಡಿಯಾಗಬೇಡ
ಅರಿ ನಿಜಾತ್ಮರಾಮ ರಾಮನಾ.
ಶ್ರೇಣಿಕೃತ ಸಮಾಜವ್ಯವಸ್ಥೆಯನ್ನು ವಿಡಂಬಿಸಿ ಮತ್ತೊಂದು ವಚನದಲ್ಲಿ ಹಿಗೆಂದಿದ್ದಾನೆ:
ನಡೆನುಡಿ ಸಿದ್ಧಾಂತವಾದಲ್ಲಿ ಹೊಲೆ ಸೂತಕವಿಲ್ಲ
ನುಡಿ ಲೇಸು ನಡೆಯಧರ್ಮ
ಅದು ಬಿಡುಗದೆಯಿಲ್ಲದ ಹೊಲೆ
ಕಳವು ಪಾರದ್ವಾರಗಳಲ್ಲಿ ಹೊಲಬನರಿಯದೆ
ಕೆಟ್ಟು ನಡೆವುತ್ತ, ಮತ್ತೆ ಕುಲಜರೆಂಬ ಒಡಲವರುಂಟೆ?
ಆಚಾರವೇ ಕುಲ, ಅನಾಚಾರವೆ ಹೊಲೆ, ಇಂತೀ ಉಭಯವ
ತಿಳಿದರಿಯಬೇಕು ಕೈಯುಳಿಗತ್ತಿ, ಅಡಿಗೂಂಟಕ್ಕಡಿಯಾಗಬೇಡ ಅರಿ ನಿಜಾತ್ಮರಾಮ ರಾಮನಾ.
*ಉರಿಲಿಂಗ ಪೆದ್ದಿ*
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ' ಆಂಕಿತದಲ್ಲಿ ಈತ ರಚಿಸಿದ ೩೬೬ ವಚನಗಳು ದೊರೆತಿವೆ. ಅವುಗಳಲ್ಲಿ ಗುರುಮಹಿಮೆಗೆ ಅಗ್ರಸ್ಥಾನ ಸಂದಿದೆ. ಜೊತೆಗೆ ಲಿಂಗ-ಜಂಗಮ ತತ್ವದ ವಿಚಾರ, ಕುಲ-ಜಾತಿ ಸಮಸ್ಯೆ ನಿರೊಪಿತವಾಗಿವೆ. ವಚನಗಳ ಮಧ್ಯದಲ್ಲಿ ಬಳಸಿದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯಕ್ಕೆ ನಿದರ್ಶನವೆನಿಸಿವೆ. ಧರ್ಮ ಹಾಗೂ ಧರ್ಮದ ತತ್ವ, ಆಚರಣೆಗಳ ಪ್ರಚಾರ ಇವನ ವಚನಗಳ ಪ್ರಧಾನ ಆಶಯ. ವಚನಗಳ ನಡುವೆ ಬಳಸುವ ಯಥೇಚ್ಛ ಸಂಸ್ಕೃತ ಶ್ಲೋಕಗಳ ಆಧಾರದಿಂದ ಈತ ದೊಡ್ಡ ಜ್ಞಾನಿ ಎಂದು ಹೇಳಬಹುದು. ಹುಟ್ಟಿನಲ್ಲಿ ಅಂತ್ಯಜನಾಗಿ ಗುರುಪೀಠವನ್ನೇರಿದ ಸಂಗತಿ ಕ್ರಾಂತಿಕಾರಕವಾದುದು. ಈತನಲ್ಲಿ ಸಾಮಾಜಿಕ ವಿಡಂಬನೆ ತೀಕ್ಷ್ಣವಾಗಿದೆ. ತನಗೆ ಸರಿಕಾಣದ್ದನ್ನು ಮುಚ್ಚು ಮರೆಯಿಲ್ಲದೆ ಟೀಕಿಸಿರುವನು. ಇವನಲ್ಲಿ ವೈಚಾರಿಕತೆ ಪ್ರಧಾನವಾಗಿದೆ.
*ಡೋಹರ ಕಕ್ಕಯ್ಯ*
ಹನ್ನೆರಡನೇ ಶತಮಾನದ ಕರ್ನಾಟಕದ ಕಲ್ಯಾಣವು ಮಾನವಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲ ಕಡೆ ಹಬ್ಬಿತು. ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣಕ್ಕೆ ಬಂದು ಸೇರಿದರು. ಕಾಶ್ಮೀರದಿಂದ ಮಹದೇವ ಭೂಪಾಲ, ಅಫಘಾನಿಸ್ತಾನದಿಂದ ಮರುಳ ಶಂಕರದೇವ. ಸೌರಾಷ್ಟ್ರದಿಂದ ಆದಯ್ಯ, ಮಾಳವ ದೇಶದಿಂದ ಕಕ್ಕಯ್ಯ ಬಂದರು.
ಕಕ್ಕಯ್ಯ ಚಂಡಾಲರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು. ಚರ್ಮ ಹದ ಮಾಡುವುದು ಆತನ ವೃತ್ತಿ. ಆತ ಬಸವಣ್ಣನೇ ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾದ. ಆತ ಲಿಂಗದೀಕ್ಷೆಯನ್ನು ಹೊಂದಿ ತನ್ನ ಆಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಅಗ್ಗಳಿಕೆಗೆ ಪಾತ್ರನಾದನು. ಬಸವಣ್ಣನವರು ಕಕ್ಕಯ್ಯನ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಕಕ್ಕಯ್ಯನ ಪ್ರಸಾದಕ್ಕಾಗಿ ಹಾತೊರೆದರು.
೯೮೬
ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,
ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!
ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ
ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ
ಸಂಗನ ಬಸವಣ್ಣನ ಕರುಣದಿಂದ
ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!
ಅಭಿನವ ಮಲ್ಲಿಕಾರ್ಜುನಾ.
*ಶರಣ ಕಕ್ಕಯ್ಯ ಇಷ್ಟಲಿಂಗನಿಷ್ಟ, ಆಚಾರ ಸಂಪನ್ನ, ಜೊತೆಗೆ ಆತ ಗಣಾಚಾರಿ. ಶಿವನಿಂದೆ ಕೇಳದ ನಿಷ್ಠೆ. ಲಿಂಗವನ್ನು ಕಲ್ಲೆಂದವನನ್ನು ಶಿಕ್ಷಿಸಲೂ ಆತ ಹಿಂಜರಿಯಲಿಲ್ಲ. ಕೀಳು ಕುಲದಲ್ಲಿ ಹುಟ್ಟಿದ ತನ್ನನ್ನು ದೀಕ್ಷೆಯ ಮೂಲಕ ಪಾವನ ಮಾಡಿದ್ದನ್ನು ಆತ ಕೃತಜ್ಞತೆಯಿಂದ ನೆನೆದಿದ್ದಾನೆ*
*ಡೋಹರ ಕಕ್ಕಯ್ಯ ಅನುಭವ ಮಂಟಪದಲ್ಲಿ ಪಾಲ್ಗೊಂಡು* ಶರಣರೊಡನಾಡಿ ಅನುಭಾವ ಸಂಪನ್ನನೆನಿಸಿದನು. ಆತನು ವಚನಗಳನ್ನು ರಚಿಸಿದ್ದಾನೆ. ಆತನ ಆರು ವಚನಗಳು
*ಸಂಗ್ರಹ*
*ಮಹಾನ್ ಶರಣ ಸಮಗಾರ ಹರಳಯ್ಯ*
‘ದವನದ ಹುಣ್ಣಿಮೆ ದಿನ ಬಂತೋ,
ಧರೆ ದೇವ ಹರಳಯ್ಯ ಧರೆಗೆ ಬಂದಾನೋ’
ಜನಪದದಲ್ಲಿ ಶರಣ ಹರಳಯ್ಯನ ಜನನವನ್ನು ಈ ರೀತಿ ಪದ ಕಟ್ಟಿ ಹಾಡುತ್ತಾರೆ. ಯಾವ ವ್ಯಕ್ತಿ ಸಮಾಜಕ್ಕೆ ಜೀವನವನ್ನು ಕಾಣಿಕೆಯಾಗಿ ನೀಡುತ್ತಾನೋ ಆತನೇ ಮಹಾತ್ಮ ಎನ್ನಲಿಕ್ಕೆ ಶರಣ ಹರಳಯ್ಯ ಆದರ್ಶಪ್ರಾಯ. 12ನೇ ಶತಮಾನದಲ್ಲಿ ಬಸವಾದಿ ಶರಣರ ಸಾಲಿನಲ್ಲಿ ಅತ್ಯಂತ ಹಿರಿಯ ಮತ್ತು ಸಮರ್ಥ ಸಿದ್ಧಿಯೋಗಿ ಸಂಕಲ್ಪ ಸಾಧಕ ಶರಣನೆನಿಸಿಕೊಂಡ ಸಮಗಾರ ಹರಳಯ್ಯ ಬಸವಧರ್ಮವನ್ನು ಎತ್ತಿ ಹಿಡಿದು ಮಹಾಮಾನವತಾವಾದಿ ಶರಣಾದರು.
ಅವರು ಪಾರಪಯ್ಯ, ಹೊನ್ನಮ್ಮ ದಂಪತಿಗೆ ದವನದ ಹುಣ್ಣಿಮೆಯಂದು ವಿಜಾಪುರ ಜಿಲ್ಲೆಯ ಕಲಿಗೂಡು ಎಂಬಲ್ಲಿ ಜನಿಸಿದರು. ಆ ಮನೆತನ ಇಂದಿಗೂ ಹರಳಯ್ಯನ ಮಠ ಎಂದು ಗುರುತಿಸಲ್ಪಡುತ್ತದೆ. ಹರಳಯ್ಯನವರು ಬಾಲ್ಯದಲ್ಲಿಯೇ ಅನೇಕ ಪವಾಡಗಳನ್ನು ಮಾಡಿದ್ದಾರೆ ಬಾಯಿಂದ ಬಂದ ಮಾತು ದಿಟವಾಗುವಂಥ ಮಹಾನ್ ಚೇತನಾ ಶಕ್ತಿ ಶರಣ ಹರಳಯ್ಯನದಾಗಿತ್ತು ಎಂಬ ಸಂಗತಿ ಜನಪದ ಗೀತೆಗಳಲ್ಲಿ ಸಿಕ್ಕುತ್ತದೆ.
ಬಸವಕಲ್ಯಾಣ ಸೇರುವ ಪೂರ್ವದಲ್ಲಿಯೇ ಹರಳಯ್ಯ ಸಾತ್ವಿಕ ಶರಣರಾಗಿದ್ದರು. ಇಡೀ ಬಡಾವಣೆಗೆ ಬೆಂಕಿ ಹತ್ತಿ ಉರಿಯುತ್ತಿರುವಾಗ ಮಳೆ ತರಿಸಿದ್ದರು, ತನ್ನ ಪ್ರದೇಶದ ರಾಜನಿಗೆ ಹಾವು ಕಚ್ಚಿದಾಗ ತಮ್ಮ ಶಕ್ತಿಯಿಂದ ಬದುಕುಳಿಯುವಂತೆ ಮಾಡಿದ್ದರು ಎಂಬ ಅನೇಕ ಪವಾಡ ಕಥೆಗಳಿವೆ. ಲೋಕ ಕಲ್ಯಾಣಕ್ಕಾಗಿ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ಹಲವೆಡೆ ಸಂಚಾರ ಮಾಡಿ ಅವರು ಸ್ಥಾಪಿಸಿದ 34 ಕೇಂದ್ರಗಳು ಇಂದು ಪವಾಡ ಕ್ಷೇತ್ರಗಳಾಗಿವೆ. ಹರಳ ಪೂಜೆಯ ಫಲವಾಗಿ ಜನಿಸಿದ ಶರಣನೇ ಹರಳಯ್ಯ ಎಂದು
*ಸಂಗ್ರಹ*
*ದಲಿತ ವಚನಕಾರರ ಜಯಂತಿ ಮಾರ್ಚ್ 10-2017*
ಆ ಮಹಾನ ವಚನಕಾರರ
ಕುರಿತಾದ ಸಂಕ್ಷಿಪ್ತ ಮಾಹಿತಿ👆🏼👆🏼👆🏼🙏🏼🙏🏼

8.3.17
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
✍🏻 *ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ*🌹🌹
_ಪ್ರತಿ ವರ್ಷ ಮಾರ್ಚಿ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ._
✍🏻 *ಪೀಠಿಕೆ*
*ವಿಶ್ವದಾದ್ಯಂತ ಅನೇಕ ದೇಶಗಳಲ್ಲಿ "ಅಂತರಾಷ್ಟ್ರೀಯ ಮಹಿಳೆಯರ ದಿನ" ವನ್ನ ಆಚರಿಸುತ್ತಾರೆ. ಮಹಿಳೆಯರು ಒಂದೇ ಕ್ಷೇತ್ರಕ್ಕೆ ಮಿಸಲಿರದೇ , ಅದು ರಾಷ್ತ್ಟ್ರೀಯ, ಜನಾಂಗೀಯ, ಭಾಷಾವಾರು, ಸಾಂಸ್ಕ್ರತಿಕ, ಆರ್ಥಿಕ ಅಥವಾ ರಾಜಕೀಯ ಕ್ಷೇತ್ರವಾಗಲಿ, ಎಲ್ಲಾದರಲ್ಲು ತಮ್ಮದೆ ಆದ ಛಾಪನ್ನ ಮೂಡಿಸಿದ್ದಾರೆ. ಮಹಿಳೆಯರ ಈ ಪ್ರಗತಿಯನ್ನ ಗುರುತಿಸಿ ಈ ದಿನವನ್ನು ಅವರಿಗೆ ಅರ್ಪಿಸಲಾಗಿದೆ. ೧೯೭೫ರ "ಅಂತರಾಷ್ಟ್ರೀಯ ಮಹಿಳೆಯರ ದಿನ"ದ ಸಮಯದಲ್ಲಿ, ಮಾರ್ಚ್ ೮ ರಂದು ಸಂಯುಕ್ತ ರಾಷ್ಟ್ರಗಳು ಮಹಿಳಾ ದಿನವನ್ನ ಆಚರಿಸಲು ಆರಂಭಿಸಿದವು.ಎರಡು ವರ್ಷದ ನಂತರ,೧೯೭೭ ರಲ್ಲಿ, "ದಿ ಜನರಲ್ ಅಸ್ಸೆಂಬ್ಲಿ" ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಯನ್ನು ಆಯಾ ದೇಶದ ಸದಸ್ಯರು ಗಮನಿಸಿ ತಮ್ಮ ದೇಶದ ಐತಿಹಾಸಿಕ ಮತ್ತು ರಾಷ್ಟ್ರೀಯ ಸಂಪ್ರದಾಯಕ್ಕೆ ತಕ್ಕಂತೆ ಅಳವಡಿಸಿಕೊಳ್ಳುವಂತೆ ಕರೆ ನೀಡಿತು. ಹೀಗೆ ಕರೆನೀಡುವಾಗ ಮಹಿಳೆಯ ಪಾತ್ರ ಹಾಗು ಅವರ ಮೇಲೆ ನಡೆಯುತ್ತಿರುವ ಪಕ್ಷಪಾತವನ್ನು ಗಮನಿಸಿ ಅವರಿಗೆ ಸ್ಪರ್ಧಿಸುವ ಪೂರ್ತಿ ಅವಕಾಶವನ್ನು ನೀಡುವಂತೆ ಘೋಷಿಸಿತು.*
🙏 *ಇತಿಹಾಸ*🙏
*"ಅಂತರಾಷ್ಟ್ರೀಯ ಮಹಿಳೆಯರ ದಿನ" ಮೊದಲ ಬಾರಿಗೆ ಹೊರಹೊಮ್ಮಿದ್ದು ಕೂಲಿ ಚಳುವಳಿ(ಲೇಬರ್ ಮೊವ್ಮೆಂಟ್ಸ್) ಚಟುವಟಿಕೆ ಉತ್ತರ ಅಮೆರಿಕಮತ್ತು ಯೂರೋಪ್ ಪ್ರದೇಶಗಳಲ್ಲಿ ನಡೆದಾಗ. ೧೯೦೯: ಸಂಯುಕ್ತ ಸಂಸ್ಥಾನಗಳಲ್ಲಿ ಮೊದಲ "ಅಂತ ರಾಷ್ಟ್ರೀಯ ಮಹಿಳೆಯರ ದಿನ"ಫೆಬ್ರವರಿ ೨೮ ರಂದು ಕಂಡು ಬಂತು.ಅಮೇರಿಕಾದ ಸಾಮಾಜವಾದಿ ಪಕ್ಷ ಈ ದಿನವನ್ನ ಕೆಲಸದ ಪರಿಸ್ಥಿತಿಯನ್ನ ವಿರೋಧಿಸಿ ನ್ಯುಯಾರ್ಕ್ ನಗರದಲ್ಲಿ ನಡೆದ "ಸರ್ಕಾರಿ ಕಾರ್ಮಿಕರ ಚಳುವಳಿ" ಯಲ್ಲಿ ಪ್ರತಿಭಟಿಸಿದ ಮಹಿಳೆಯರಿಗೆ ಅರ್ಪಿಸಲಾರಿತು. ೧೯೧೦: ಅಂತರಾಷ್ಟ್ರೀಯ ಸಮಾಜವಾದಿ ಕೊಪೆಂಹಗೆನ್ ನಲ್ಲಿ ನಡೆದ ಚರ್ಚೆಯಲ್ಲಿ ಅದಿಷ್ಟಿತಗೊಳಿಸಲಾಯಿತು. ಈ ಪ್ರಸ್ಥಾಪವನ್ನು ಅವಿರೋಧವಾಗಿ ೧೦೦ ಮಹಿಳೆಯರು ೧೭ ದೇಶಗಳಿಂದ ಸಹಕರಿಸಿದರು, ಇದು ಫಿನ್ನಿಷ್ ಪಾರ್ಲಿಮೆಂಟ್ ಗೆ ಆಯ್ಕೆಯಾದ ಮೊದಲ ಮೂವರು ಮಹಿಳೆಯರನ್ನೂ ಸಹ ಒಳಗೊಂಡಿತ್ತು.೧೯೧೧: ಕೊಪೆಂಹಗೆನ್ ನ ಮೊದಲ ಹೆಜ್ಜೆಯ ಫಲಿತಾಂಶವಾಗಿ, ಅಂತರಾಷ್ಟ್ರೀಯ ಮಹಿಳೆಯರ ದಿನವನ್ನ ಮೊದಲ ಬಾರಿಗೆ ಮಾರ್ಚ್ ೧೯ ರಂದು ಆಸ್ಟ್ರೇಲಿಯ,ಡೆನ್ಮಾರ್ಕ್, ಜರ್ಮನಿ ಮತ್ತು ಸ್ವಿಡ್ಜರ್ಲ್ಯಾಂಡ್ ದೇಶಗಳು ಗುರುತಿಸಿದವು. ಅಂದು ಒಂದು ಮಿಲಿಯನ್ ಗಿಂತಲು ಹೆಚ್ಹು ಮಹಿಳೆಯರು ಹಾಗು ಪುರುಷರು ಈ ಚಳುವಳಿಯಲ್ಲಿ ಭಾಗವಹಿಸಿದರು.*
*ಇದಲ್ಲದೇ ಮತಚಲಾಯಿಸುವ ಹಕ್ಕು, ಸಾರ್ವಜನಿಕ ಕಛೇರಿ, ಮಹಿಳೆಯರಿಗೆ ಕೆಲಸ ಮಾಡುವ ಹಕ್ಕು ಹಾಗು ಉದ್ಯೋಗ ತರಬೇತಿಯನ್ನ ಜಾರಿಗೆ ತರಲು ಬೇಡಿಕೆಯಿಟ್ಟಿದ್ದಲ್ಲದೇ ಕೆಲಸದಲ್ಲಿನ ತಾರತಮ್ಯವನ್ನ ವಿರೋಧಿಸಿ ಪ್ರತಿಭಟಿಸಿದರು. ೧೯೧೩-೧೯೧೪ : ಅಂತರಾಷ್ಟ್ರೀಯ ಮಹಿಳೆಯರ ದಿನದ ಆಚರಣೆ "೧ನೇ ವಿಶ್ವ ಯುದ್ಧ"ವನ್ನ ತಡೆಗಟ್ಟುವ ಯಾಂತ್ರಿಕ ಕೌಶಲ್ಯವಾಗಿ ಮಾರ್ಪಟ್ಟಿತು.ಇದೇ ವೇಳೆಯಲ್ಲಿ ಶಾಂತಿ ಚಳುವಳಿಯ ಅಂಗವಾಗಿ ರಷ್ಯಾದ ಮಹಿಳೆಯರು ಫೆಬ್ರವರಿಯ ಕೊನೆಯವಾರದಲ್ಲಿ ವಿಶ್ವ ಮಹಿಳಾ ದಿನವನ್ನ ಆಚರಿಸಿ ಗಮನಸೆಳೆದರು. ಅತ್ತ ಯುರೋಪಿನಲ್ಲಿ ಅದೇ ಸಾಲಿನ ಮಾರ್ಚಿ ೮ ರಂದು ಮಹಿಳೆಯರು ಯುದ್ಧನೀತಿಯನ್ನ ವಿರೋಧಿಸಿ, ಐಕ್ಯಮತ ವನ್ನ ಸಹಕರಿಸಿ ಬ್ರುಹತ್ ಚಳುವಳಿ ನಡೆಸಿದರು.೧೯೧೭: ಮತ್ತೆ ಯುದ್ಧ ನೀತಿಯನ್ನ ವಿರೋಧಿಸಿ ರಷ್ಯಾದ ಮಹಿಳೆಯರು ಊಟ ಮತ್ತು ಶಾಂತಿ ಚಳುವಳಿಯನ್ನ ನಡೆಸಿದರು.*
*ನಾಲ್ಕು ವಾರಗಳ ನಂತರ ರಾಜ ಮನೆತನದ ಆಳ್ವಿಕೆಯನ್ನು ನಿಲ್ಲಿಸಿ ಮತಚಲಾಯಿಸುವ ಅಧಿಕಾರವನ್ನ ಸರ್ಕಾರ ನೀಡಿತು. ಅಂದಿನ ದಿನಗಳಲ್ಲಿ ಮಹಿಳಾ ದಿನಾಚರಣೆ ಮುಂದುವರೆದ ಮತ್ತು ಮುಂದುವರೆಯುತ್ತಿರುವ ದೇಶಗಳಲ್ಲಿ ಹೊಸ ಆಯಮವನ್ನ ಪಡೆಯಿತು.*
*ಬೆಳೆಯುತ್ತಿದ್ದ ಅಂತರಾಷ್ಟ್ರೀಯ ಮಹಿಳಾ ಚಳುವಳಿ, ಅವುಗಳ ಸಾಮರ್ಥ್ಯವನ್ನ ಹೆಚ್ಹಿಸಿದ ನಾಲ್ಕು "ಜಾಗತಿಕ ಸಂಯುಕ್ತ ರಾಷ್ಟ್ರೀಯ ಮಹಿಳಾ ಸಮಾಲೋಚನೆ", ಮಹಿಳಾ ಹಕ್ಕು, ರಾಜಕೀಯ ಹಾಗು ಆರ್ಥಿಕ ಕ್ಷೆತ್ರಗಳಲ್ಲಿ ಭಾಗವಹಿಸುವ ಹಕ್ಕನ್ನ ಪಡೆಯಲು ಪೋಷಿಸಿದವು. ದಿನಕಳೆದಂತೆ ಅಂತರಾಷ್ಟ್ರೀಯ ಮಹಿಳೆಯರ ದಿನ ಬೆಳವಣಿಗೆಯ ಪ್ರತಿಬಿಂಬದ ಜೊತೆಗೆ ಸಾಧರಣ ಮಹಿಳೆಯ ಧೀರತನ ಮತ್ತು ಧೃಡತೆ ದೇಶ ಹಾಗು ಸಮುದಾಯದ ಇತಿಹಾಸದಲ್ಲಿ ವಹಿಸಿದ ಅಸಾಧಾರಣ ಪಾತ್ರವನ್ನ ಬಿಂಬಿಸುತ್ತಾ ಬದಲಾವಣೆಯ ಕರೆಯನ್ನ ನೀಡುತ್ತದೆ.*
*ಸಂಯುಕ್ತ ರಾಷ್ರಗಳು ಮತ್ತು ಲಿಂಗ ಸಮಾನತೆ*
*೧೯೪೫ ರಲ್ಲಿ ಸಹಿ ಮಾಡಿದ ಸಂಯುಕ್ತ ರಾಷ್ಟ್ರಗಳ ಅಂತರಾಷ್ಟ್ರೀಯ "ಲಿಂಗ ಸಮಾನತಾ ತತ್ವ" ಅಂಗೀಕಾರಕ್ಕೆ ಬಂತು.ಅಲ್ಲಿಯ ನಂತರ ವಿಶ್ವವ್ಯಾಪ್ಯ ಒಪ್ಪಂದ ನೀತಿ, ನಿರ್ದಿಷ್ಟಮಾನ, ಮಹಿಳಾಭಿವ್ರುದ್ದಿ ಕಾರ್ಯಕ್ರಮ ಹಾಗು ಯೋಜನೆಗಳು ಕಾರ್ಯರೂಪಕ್ಕೆ ಬಂದವು. ಕೆಲವರ್ಷಗಳ ನಂತರ ಸಂಯುಕ್ತ ರಾಷ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನ ಅಬಿನಂಧಿಸಿ ಮಹಿಳೆಯರು ಭಾಗವಹಿಸುವುದನ್ನ ಪ್ರೋತ್ಸಾಹಿಸಿದವು. ಮಹಿಳೆಯರನ್ನ ಪ್ರಭಲಗೊಳಿಸುವ ಸಂಯುಕ್ತ ರಾಷ್ರಗಳ ಕಾರ್ಯ ವಿಶ್ವದಾದ್ಯಂತ ಮುಂದುವರೆಯಿತು.*