ಪುಟಗಳು

TEACHERS USEFUL

16.10.16

TET - syllabus

 

ಪ್ರಾಥಮಿಕ ಶಾಲಾ ಶಿಕ್ಷಕರಾಗಲು
ಬಯಸುವವರು ಇನ್ನು ಮುಂದೆ ‘ಶಿಕ್ಷಕರ ಅರ್ಹತಾ
ಪರೀಕ್ಷೆ’ (ಟಿಇಟಿ) ಬರೆದು ನಿಗದಿತ ಅಂಕಗಳೊಡನೆ
ತೇರ್ಗಡೆಯಾಗುವುದು ಕಡ್ಡಾಯವಾಗಿದೆ. ರಾಷ್ಟ್ರೀಯ
ಶಿಕ್ಷಕರ ಶಿಕ್ಷಣ ಮಂಡಳಿ ಆದೇಶದಂತೆ ರಾಜ್ಯದಲ್ಲಿ ಟಿಇಟಿ
ನಡೆಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಪಾಸಾದವರು ಮಾತ್ರ
ಶಿಕ್ಷಕರಾಗಲು ಅರ್ಹತೆ ಪಡೆಯುತ್ತಾರೆ. ಶಿಕ್ಷಣದ ಗುಣಮಟ್ಟ
ಸುಧಾರಣೆಗೆ ಒತ್ತು ನೀಡುವುದು ಇದರ ಉದ್ದೇಶ.
ಕೇಂದ್ರೀಕೃತ ದಾಖಲಾತಿ ಘಟಕ ಈ ಟಿಇಟಿ ಪರೀಕ್ಷೆ
ನಡೆಸುತ್ತದೆ.

ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.:

ಒಟ್ಟು 150 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಇದರಲ್ಲಿ ಕನ್ನಡ
ಮತ್ತು ಆಂಗ್ಲ ಭಾಷೆ, ಶಿಶು ಮನೋವಿಜ್ಞಾನ ಮತ್ತು ವಿಕಸನ,
ಗಣಿತ ಮತ್ತು ಪರಿಸರ ಅಧ್ಯಯನ ಹೀಗೆ 5 ಭಾಗಗಳು ಇರುತ್ತವೆ.
ಪ್ರಶ್ನೆ ಪತ್ರಿಕೆಯ ಬಹು ಆಯ್ಕೆ ಮಾದರಿಯದ್ದಾಗಿರುತ್ತದೆ. ಪ್ರತಿ
ಪ್ರಶ್ನೆಗೆ ಒಂದು ಅಂಕ ನಿಗದಿ ಮಾಡಲಾಗಿದೆ.
ಅರ್ಹತಾ ಪರೀಕ್ಷೆಯು ಭಾಗ 1ರಲ್ಲಿ (ಪ್ರಾಥಮಿಕ ಶಾಲೆ) ಒಟ್ಟು
ಐದು ವಿಷಯಗಳನ್ನೊಳಗೊಂಡ ಒಂದು ಪ್ರಶ್ನೆ ಪತ್ರಿಕೆ ಇರುತ್ತದೆ.
1. ಶಿಶು ಮನೋವಿಜ್ಞಾನ ಮತ್ತು ವಿಕಸನ
2. ಭಾಷೆ: ಕನ್ನಡ / ಉರ್ದು/ಮರಾಠಿ / ತಮಿಳು / ತೆಲಗು /
ಮಲಯಾಳಂ
3. ಆಂಗ್ಲ ಭಾಷೆ
4. ಪರಿಸರ ಅಧ್ಯಯನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ)
5.
ಗಣಿತ ಪ್ರತಿ ವಿಷಯದಲ್ಲ್ಲೂ ಒಂದು ಅಂಕದ 30 ಪ್ರಶ್ನೆಗಳಿದ್ದು,
ಐದು ವಿಷಯಗಳಿಗೆ ಒಟ್ಟು 150 ಅಂಕಗಳನ್ನು ನಿಗದಿಪಡಿಸಲಾಗಿದೆ.
ಅರ್ಹತಾ ಪರೀಕ್ಷೆಯುಭಾಗ 2ರಲ್ಲಿ (ಉನ್ನತೀಕರಿಸಿದ ಪ್ರಾಥಮಿಕ
ಶಾಲೆ) ನಾಲ್ಕು ವಿಭಾಗಗಳಿರುತ್ತವೆ.
1. ಶಿಶು ಮನೋವಿಜ್ಞಾನ ಮತ್ತು ವಿಕಸನ.
2. ಭಾಷೆ: ಕನ್ನಡ / ಉರ್ದು/ಮರಾಠಿ / ತಮಿಳು / ತೆಲಗು /
ಮಲಯಾಳಂ.
3. ಆಂಗ್ಲ ಭಾಷೆ.
4. ವಿಜ್ಞಾನ ಶಿಕ್ಷಕರಿಗೆ (ಗಣಿತ ಮತ್ತು ವಿಜ್ಞಾನ), ಕಲಾ ಶಿಕ್ಷಕರಿಗೆ
ಸಮಾಜ ವಿಜ್ಞಾನದ 60 ಪ್ರಶ್ನೆಗಳಿರುತ್ತವೆ.
ಒಟ್ಟು 150 ಅಂಕಗಳು.


🌹ವಿಷಯಗಳು ಹಾಗೂ ಅಂಕಗಳು 🌹

1) ಶಿಶು ವಿಕಾಸ ಮತ್ತು ಶಿಶು ಶಿಕ್ಷಣ ಶಾಸ್ತ್ರ - 30
2 ) ಭಾಷೆ- I ಕನ್ನಡ/ 30
3 ) LANGUAGE – II ENGLISH 30
4 ) ಗಣಿತ 30
5 ) ಪರಿಸರ ಅಧ್ಯಯನ 30

ಒಟ್ಟು 150

ಸಂಕ್ಷಿಪ್ತ ಪರೀಕ್ಷಾ ಪಠ್ಯಕ್ರಮ
ಶಿಶು ವಿಕಾಸ ಮತ್ತು ಶಿಶು ಶಿಕ್ಷಣ ಶಾಸ್ತ್ರ :
ಮಗುವಿನ ಬೆಳವಣಿಗೆ: ವಿಕಾಸ, ಬೆಳವಣಿಗೆ ಮತ್ತು ಪಕ್ವತೆ, ವಿಕಾಸದ
ಸಾರ್ವತ್ರಿಕ ತತ್ವಗಳು, ವಿಕಾಸದ ಮೇಲೆ ಪ್ರಭಾವಿಸುವ
ಅಂಶಗಳು, ವಿಕಾಸದ ಆಯಾಮಗಳು, ವಿಕಾಸದ ಸಿದ್ಧಾಂತಗಳು
(ಪಿಯಾಜೆ ಮತ್ತು ಬ್ರೂನರ್), ವೈಯಕ್ತಿಕ ಭಿನ್ನತೆ, ವ್ಯಕ್ತಿತ್ವದ
ಬೆಳವಣಿಗೆ, ವಿಕಾಸಾತ್ಮಕ ಕಾರ್ಯಗಳು ಮತ್ತು ತೊಂದರೆಗಳು
ಇತರೆ
ಕಲಿಕೆ: ಕಲಿಕೆಯ ಅರ್ಥ ಮತ್ತು ಸ್ವರೂಪ, ಕಲಿಕೆಯ ಅಂಶಗಳು, ಕಲಿಕೆ
ಮತ್ತು ವ್ಯಕ್ತಿತ್ವದ ಮೇಲೆ ಅನುವಂಶಿಕತೆ ಹಾಗೂ ಪರಿಸರದ
ಪ್ರಭಾವ, ಕಲಿಕೆಯ ಆಯಾಮಗಳು, ಅಭಿಪ್ರೇರಣೆ ಮತ್ತು ಅವಧಾನ,
ಸ್ಮೃತಿ ಮತ್ತು ವಿಸ್ಮೃತಿ
ಕಲಿಕೆ, ಕಲಿವವರ ಮತ್ತು ಬೋಧನೆ ನಡುವಿನ ಸಂಬಂಧ, ವೈಯಕ್ತಿಕ
ಭಿನ್ನತೆಯಲ್ಲಿ ವಿವಿಧ ಕ್ಷೇತ್ರಗಳು, ವಿಶೇಷ ಅ.ಗತ್ಯಯುಳ್ಳ
ಮಕ್ಕಳ ಕಲಿಕಾ ಸನ್ನಿವೇಷ, ವೈಯಕ್ತಿಕ ಮತ್ತು ಸಾಮೂಹಿಕ ಕಲಿಕೆ,
ಬೋಧನೆಯು ಒಂದು ಯೋಜಿತ ಕಾರ್ಯ, ಬೋಧನೆಯ
ಹಂತಗಳು, -ಸಾಮಾನ್ಯ ಮತ್ತು ವಿಷಯಾಧಾರಿತ ಕೌಶಲಗಳು,
ತರಗತಿ ನಿರ್ವಹಣೆ, -ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ,
ಬೋಧನೆ ಮತ್ತು ಕಲಿಕೆ ಹಾಗು ಇತರೆ.
ಶಿಶು ಶಿಕ್ಷಣ ಪದ್ಧತಿ:
ಭಾಷೆಯ ವ್ಯಾಖ್ಯೆ, ಹುಟ್ಟು ಮತ್ತು ಪೂರ್ವೇತಿಹಾಸ,
ಸ್ವರೂಪ ಸ್ವಭಾವಗಳು, ಉದ್ದೇಶಗಳು, ಪ್ರಯೋಜನಗಳು,
ಧ್ವನಿಯ ಉತ್ಪತ್ತಿ, ಧ್ವನಿ ಉಚ್ಛಾರಣ ದೋಷಗಳು-ಕಾರಣಗಳು-,
ನಿವಾರಣೆ. ಮಾತೃ ಭಾಷೆ, ವ್ಯಾಖ್ಯೆ ಉದ್ದೇಶಗಳು,
ಮಹತ್ವಗಳು, ಉದ್ದೇಶಗಳು, ಪ್ರಯೋಜನಗಳು. ಭಾಷಾ
ಸೂತ್ರ, ಬೋಧನಾ ಭಾಷೆಯಾಗಿ ಮಾತೃಭಾಷೆಯ ಅಳವಡಿಕೆ-
ಸಮಸ್ಯೆಗಳ ನಿವಾರಣೆ. ಮಾತೃಭಾಷಾ ಅಧ್ಯಾಪಕನ
ಲಕ್ಷಣಗಳು.ಮಾತೃಭಾಷಾ ಬೋಧನಾ ಗುರಿಗಳು, ಜ್ಞಾನ,
ಭಾವಾವೇಷ, ಮಾನಸಿಕ ರಂಗಗಳು, ಕನಿಷ್ಠ ಸಾಮರ್ಥ್ಯಗಳು-
ಪ್ರಥಮ ಭಾಷೆ ಕನ್ನಡ ಬೋಧನೆಯ ಉದ್ದೇಶಗಳು-ಗುರಿಗಳು,
ಸ್ಪಷ್ಟಿಕರಣ. ಬೋಧನಾ ನೈಪುಣ್ಯಗಳು -ಶ್ರವಣ, ಭಾಷಣ,
ಪಠನೆ, ಬರೆಯುವಿಕೆ. ಬೋಧನಾ ವಿಧಾನಗಳು: ಕ್ರೀಡೆ,
ಮಾಂಟೆಸೊರಿ, ಕಿಂಡರ್ ಗಾರ್ಡನ್, ಡಾಲ್ಟನ್, ಚರ್ಚಾಪದ್ಧತಿ,
ಪ್ರಯೋಗಾತ್ಮಕ ಪದ್ಧತಿ, ಪರಿವೇಕ್ಷಿತ ಅಧ್ಯಯನ,
ನಾಟಕೀಕರಣ ಪದ್ದತಿಗಳು. ಭಾಷಾ ಬೋಧನಾ ಪದ್ಧತಿಗಳು:
ಪದ್ಯ, ಗದ್ಯ, ಪಠ್ಯಪುಸ್ತಕ, ಉಪ ಪಠ್ಯಪುಸ್ತಕ, ಪತ್ರ ರಚನೆ,
ಮೌಲ್ಯ ಶಿಕ್ಷಣ. ಬೋಧನೋಪಕರಣಗಳು, ವ್ಯಾಖ್ಯೆ,
ಅವಶ್ಯಕತೆ-, ಪ್ರಯೋಜನೆಗಳು, ಶ್ರವ್ಯ-ದೃಶ್ಯ ಉಪಕರಣಗಳು,
ಬೋಧನೋಪಕರಣಗಳ ಉಪಯೋಗಿಸುವಿಕೆಯಲ್ಲಿ
ತೆಗೆದುಕೊಳ್ಳಬೇಕಾದ ಜಾಗ್ರತೆಗಳು. ಯೋಜನೆಗಳ ರಚನೆ-
ಅವಶ್ಯಕತೆ, ಪ್ರಯೋಜನಗಳು, ವಾರ್ಷಿಕ ಯೋಜನೆ, ಘಟಕ
ಯೋಜನೆ, ಪಠ್ಯ ಯೋಜನೆ. ಲಿಪಿ ಹುಟ್ಟು ಪೂರ್ವೇತಿಹಾಸ-
ಕನ್ನಡ ಸಾಹಿತ್ಯ ಚರಿತ್ರೆ-ಪ್ರಾಚೀನ ಯುಗದಿಂದ ಆಧುನಿಕ
ಯುಗದವರೆಗೆ. ಮೌಲ್ಯಮಾಪನ:- ಪರಿಚಯ, ನಿರಂತರ
ಮೌಲ್ಯಮಾಪನ, ಸಾಮರ್ಥ್ಯಾಧಾರಿತ ಮೌಲ್ಯಮಾಪನ,
ಮೌಲ್ಯಮಾಪನ ಸಾಧನಗಳು, ಮನೋವೈಜ್ಞಾನಿಕ
ಪರೀಕ್ಷೆಗಳು, ಪ್ರಶ್ನೆಗಳ ಪ್ರಕಾರಗಳು, ಪ್ರಶ್ನೆಗಳ ನಿರ್ಮಾಣ,


ಘಟಕ ಪರೀಕ್ಷೆಯ ತಯಾರಿಗಳು.

ಭಾಷೆ- I ಕನ್ನಡ :

 ಅಪರಿಚಿತ ಗದ್ಯ, ಪರಿಚಿತ ಗದ್ಯ , ಕವಿಗಳು, ಕಾವ್ಯಗಳು,
ಕೃತಿಗಳು. ಅಕರ್ಮಕ, ಸಕರ್ಮಕ ಕ್ರಿಯಾ ಪದಗಳು, ವಾಕ್ಯಗಳು,
ವಾಕ್ಯಪ್ರಕಾರಗಳು, ಕರ್ತರಿ, ಕರ್ಮಣಿ ವಾಕ್ಯಗಳು, ಪ್ರತ್ಯಕ್ಷ-
ಪರೋಕ್ಷ ವಾಕ್ಯಗಳು, ವಾಕ್ಯರಚನೆ. ವರ್ಣಮಾಲೆ,
ಪ್ರತ್ಯೆಯಗಳು, ವಚನಗಳು, ಲಿಂಗಗಳು, ವಿಭಕ್ತಿ
ಪ್ರತ್ಯೇಯಗಳು, ಕಾಲಗಳು, ವಿರಾಮ ಚಿಹ್ನೆಗಳು, ಸಂಧಿಗಳು,
ಸಮಾಸಗಳು, ಅಲಂಕಾರಗಳು, ತತ್ಸಮಗಳು, ವಿರುದ್ಧ ಪದಗಳು,
ಪಯಾಯ ಪದಗಳು, ನಾನಾರ್ಥಗಳು, ಗಾದೆಗಳು,
ಲೋಕೋಕ್ತಿಗಳು, ನುಡಿಮುತ್ತುಗಳು, ಸ್ವಂತವಾಕ್ಯಗಳು,
ಒಗಟುಗಳು.

III. LANGUAGE – II ENGLISH:

Parts of Speech, Tenses, Types of Sentences, Prepositions
& Articles, Degrees of Comparison, Direct and Indirect
Speech, Questions and question tags, Active & Passive
voice, Use of Phrases, Comprehension, Composition,
Vocabulary.PEDAGOGY Aspects of English, Objectives of
teaching English, Phonetics, Development of Language
skills, Approaches, Methods, Techniques of teaching
English. (a) Introduction, Definition and Types of
approaches methods and techniques of teaching English (b)
Remedial teaching, Teaching of structures and vocabulary
items, Teaching learning materials in English, Lesson
Planning, Curriculum & Textbooks, Evaluation in English
language.

ಗಣಿತ

ಸಂಖ್ಯೆಗಳು ಮತ್ತು ಮೂಲಕ್ರಿಯೆಗಳು, ಭಿನ್ನರಾಶಿ, ವಾಣಿಜ್ಯ
ಗಣಿತ, ರೇಖಾಗಣಿತ,ಅಳತೆಗಳು, ಸಂಖ್ಯಾಶಾಸ್ತ್ರ, ಅಂಕಿ
ಅಂಶಗಳು.ಶಿಶು ಶಿಕ್ಷಣ ಪದ್ಧತಿ, ಗಣಿತದ ಸ್ವರೂಪ ಮತ್ತು
ವ್ಯಾಖ್ಯೆಗಳು, ಗಣಿತ ಬೋಧನೆಯ ಗುರಿ, ಉದ್ದೇಶಗಳು
ಮತ್ತು ಮೌಲ್ಯಗಳು, ಗಣಿತ ಬೋಧನಾ ಪದ್ಧತಿಗಳು, ಗಣಿತ
ಬೋಧನೆಯಲ್ಲಿ ಪಾಠೋಪಕರಣಗಳು, ಬೋಧನೆಯ
ಯೋಜನೆಗಳು, ಗಣಿತ ಶಿಕ್ಷಕ, ಸಂಪನ್ಮೂಲಗಳ ಸದ್ಭಳಕೆ,
ಪಠ್ಯಕ್ರಮ ಮತ್ತು ಪಠ್ಯ ಪುಸ್ತಕ, ಸಮಸ್ಯೆ ಗುರುತಿಸುವಿಕೆ
ಮತ್ತು ಪರಿಹಾರ ಬೋಧನೆ.

ಪರಿಸರ ಅಧ್ಯಯನ :

ನಮ್ಮದೇಹ-ಆರೋಗ್ಯ- ಸ್ವಚ್ಛತೆ, ನನ್ನ ಕುಟುಂಬ, ಕೆಲಸ
ಮತ್ತು ಕ್ರೀಡೆ, ಕೀಟಗಳು ಮತ್ತು ಪ್ರಾಣಿಗಳು, ನಮ್ಮ ಆಹಾರ,
ವಾಸಸ್ಥಳಗಳು, ಗಾಳಿ, ನೀರು, ಭೂಮಿ ಮತ್ತು ಆಕಾಶ, ನಮ್ಮ
ದೇಶ, ನಮ್ಮ ರಾಜ್ಯ, ಭಾರತದ ಇತಿಹಾಸ ಮತ್ತು ಸಂಸ್ಕೃತಿ,
ಭಾರತದ ಸಂವಿಧಾನ, ವಿಶ್ವಸಂಸ್ಥೆ. ಶಿಶು ಶಿಕ್ಷಣ ಪದ್ಧತಿ ಪರಿಸರ
ಅಧ್ಯಯನದ ಅರ್ಥ ಮತ್ತು ವ್ಯಾಪ್ತಿ, ಪರಿಸರ ಅಧ್ಯಯನ
ಬೋಧನೆಯ ಗುರಿ–ಉದ್ದೇಶಗಳು, ವಿಜ್ಞಾನ ಮತ್ತು ಸಮಾಜ
ವಿಜ್ಞಾನದ ಸಂಬಂಧ, ಪಠ್ಯಕ್ರಮ, ನಿರ್ವಹಣೆ, ನಿರಂತರ ಮತ್ತು
ವ್ಯಾಪಕ ಮೌಲ್ಯಮಾಪನ, ಕಲಿಕಾ ಪರಿಸರ.

ಅಳತೆಯ ಸಾಧನಗಳು

👉🏿 ಅಳತೆಯ ಸಾಧನಗಳು 👈🏿


೧. ದಿಕ್ಸೂಚಿ
ಉಪಯೋಗ:- ದಿಕ್ಕುಗಳನ್ನು ತಿಳಿಯಲು ಬಳಸುತ್ತಾರೆ.

೨. ರೇಡಾಕ
ಉಪಯೋಗ:- ಹಾರಾಡುವ ವಿಮಾನದ ದಿಕ್ಕು ಮತ್ತು ಮೂಲವನ್ನು ಅಳೆಯಲು ಬಳಸುತ್ತಾರೆ.


೩. ಮೈಕ್ರೊಫೋನ್
ಉಪಯೋಗ:- ಶಬ್ದ ತರಂಗಗಳನ್ನು ವಿದ್ಯುತ್ ಸಂಕೇತಗಳನ್ನಾಗಿ ಪರಿವತಿ೯ಸಲು ಬಳಸುವರು.


೪. ಮೆಘಾಪೋನ್
ಉಪಯೋಗ:- ಶಬ್ದವನ್ನು ಅತೀ ಮೂಲಕ್ಕೆ ಒಯ್ಯಲು ಬಳಸುತ್ತಾರೆ.


೫. ಟೆಲಿಫೋನ್
ಉಪಯೋಗ:- ದೂರದಲ್ಲಿರುವ ಶಬ್ದವನ್ನು ಕೇಳಲು ಬಳಸುತ್ತಾರೆ.


೬. ಲ್ಯಾಕ್ಟೋಮೀಟರ್
ಉಪಯೋಗ:- ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುತ್ತಾರೆ.


೭. ಓಡೋಮೀಟರ್
ಉಪಯೋಗ:- ವಾಹನಗಳ ಚಲಿಸಿದ ದೂರ ಕಂಡುಹಿಡಿಯಲು ಬಳಸುತ್ತಾರೆ.

೮. ಮೈಕ್ರೋಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ಉದ್ದ ಅಳೆಯಲು ಬಳಸುತ್ತಾರೆ.


೯. ಮೈಕ್ರೋಸ್ಕೋಪ್
ಉಪಯೋಗ:- ಸೂಕ್ಷ್ಮ ವಸ್ತುಗಳಲ್ಲಿ ದೊಡ್ಡ ಪ್ರತಿಬಿಂಬವಾಗಿ ತೋರಿಸುವುದು.


೧೦. ಹೈಗ್ರೋಮೀಟರ್
ಉಪಯೋಗ:- ವಾತಾವರಣದ ಆದ್ರ೯ತೆ ಅಳೆಯಲು ಬಳಸುತ್ತಾರೆ.


೧೧. ಹೈಡ್ರೋಮೀಟರ್
ಉಪಯೋಗ:- ದ್ರವಗಳ ನಿಧಿ೯ಷ್ಟ ಗುರುತ್ವಾಕಷ೯ಣೆ & ಸಾಂದ್ರತೆ ಅಳೆಯಲು ಬಳಸುತ್ತಾರೆ.


೧೨. ಹೈಡ್ರೋಫೋನ್
ಉಪಯೋಗ:- ನೀರಿನ ಒಳಗೆ ಶಬ್ದವನ್ನು ಅಳೆಯಲು ಬಳಸುತ್ತಾರೆ.


೧೩. ಹೈಡ್ರೋಸ್ಕೋಪ್
ಉಪಯೋಗ:- ನೀರಿನ ತಳದಲ್ಲಿರುವ ವಸ್ತುಗಳನ್ನು ಗುರುತಿಸಲು ಬಳಸುತ್ತಾರೆ


೧೪. ಥಮೋ೯ಮೀಟರ್
ಉಪಯೋಗ:- ಉಷ್ಣತೆಯನ್ನು  ಅಳೆಯಲು ಬಳಸುತ್ತಾರೆ.


೧೫. ಅಲ್ಟಿಮೀಟರ್
ಉಪಯೋಗ:- ಎತ್ತರ ಅಳೆಯಲು ಬಳಸುತ್ತಾರೆ.


೧೬. ಎಲೆಕ್ಟ್ರೋಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.


೧೭. ಪ್ಯಾದೋಮೀಟರ್
ಉಪಯೋಗ:- ಸಮುದ್ರದ ಆಳ ಕಂಡುಹಿಡಿಯಲು ಬಳಸುತ್ತಾರೆ.


೧೮. ಗ್ಯಾಲ್ವನೋಮೀಟರ್
ಉಪಯೋಗ:- ಸಣ್ಣ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.


೧೯. ಮೈಕ್ರೋ ಆ್ಯಮೀಟರ್
ಉಪಯೋಗ:- ಸೂಕ್ಷ್ಮ ಪ್ರಮಾಣದ ವಿದ್ಯುತ್ ಅಳೆಯಲು ಬಳಸುತ್ತಾರೆ.


೨೦. ವೋಲ್ಟ್ ಮೀಟರ್
ಉಪಯೋಗ:- ಎರಡು ಬಿಂದುಗಳ ನಡುವಿನ ವಿಭವಾಂತರ ಅಳೆಯಲು ( ವೋಲ್ಟೇಜ್) ಬಳಸುತ್ತಾರೆ.


೨೧. ಥಮೋ೯ ಸ್ಟ್ಯಾಟ್
ಉಪಯೋಗ:- ನಿಧಿ೯ಷ್ಠ ಮಟ್ಟದ ಉಷ್ಣತೆಯನ್ನು ಅಳೆಯಲು


೨೨:- ಮ್ಯಾನೋಮೀಟರ್
ಉಪಯೋಗ:- ಅನಿಲ ಒತ್ತಡ ಅಳೆಯಲು


೨೩. ರಿಫ್ರ್ಯಾಕ್ಟೋಮೀಟರ್
ಉಪಯೋಗ:- ವಕ್ರೀಭವನ ಸುಚಾಂಕ ಅಳೆಯಲು


೨೪. ಸಿಸ್ಮೋಗ್ರಾಫ್
ಉಪಯೋಗ:- ಭೂಕಂಪನದ ತೀವ್ರತೆ ಮತ್ತು ದೂರ ಉದ್ದ ಅಳೆಯಲು


೨೫. ಫೋಟೋಮೀಟರ್
ಉಪಯೋಗ:- ಎರಡು ಬೆಳಕಿನ ಮೂಲಗಳ ಪ್ರಕಾರವನ್ನು ತುಲನೆ ಮಾಡಲು


೨೬. ಪೈರೋಮೀಟರ್
ಉಪಯೋಗ:- ಅತೀ ಹೆಚ್ಚಿನ ಉಷ್ಣತೆ ಅಳೆಯಲು


೨೭. ರೈನಗೆಜ್
ಉಪಯೋಗ:- ನಿದಿ೯ಷ್ಟ ಪ್ರದೇಶದ  ಮಳೆಯ ಪ್ರಮಾಣ ಅಳೆಯಲು .


೨೮. ಸ್ಪೀಡೋಮೀಟರ್
ಉಪಯೋಗ:- ವಾಹನಗಳು ಚಲಿಸುತ್ತಿರುವ ವೇಗವನ್ನು ಅಳೆಯಲು


೨೯. ಇಲೆಕ್ಟ್ರೋಎನಸೆಫಲೋಗ್ರಾಫಿ
ಉಪಯೋಗ:- ಮೆದುಳಿನ ವಿದ್ಯುತ್ ಪ್ರಕ್ರಿಯೆಗಳನ್ನು ಅಧ್ಯಯನ ಮಾಡಲು ಬಳಸುತ್ತಾರೆ.


೩೦. ಸ್ಪಿಗ್ಮೋಮ್ಯಾನೋಮೀಟರ್
ಉಪಯೋಗ:- ರಕ್ತದೊತ್ತಡ ಅಳೆಯಲು ಬಳಸುತ್ತಾರೆ.


೩೧. ಸ್ಪೆಕ್ಟ್ರೋಮೀಟರ್
ಉಪಯೋಗ:- ವಣ೯ ಪಂಕ್ತಿಯನ್ನು ವಿಶ್ಲೇಷಿಸಲು ಬಳಸುತ್ತಾರೆ.


೩೨. ಅಮ್ಮೀಟರ್
ಉಪಯೋಗ:- ವಿದ್ಯುತ್ ಅಳೆಯಲು ಬಳಸುತ್ತಾರೆ.


೩೩. ಆಡಿಯೋಮೀಟರ್
ಉಪಯೋಗ:- ಶಬ್ದದದ ತೀವ್ರತೆ ಅಳೆಯಲು ಬಳಸುತ್ತಾರೆ.


೩೪. ಅನಿಯೋಮೀಟರ್
ಉಪಯೋಗ:- ಗಾಳಿಯ ವೇಗವನ್ನು ಅಳೆಯಲು


೩೫. ಸ್ಪೇಥೋಸ್ಕೋಪ್
ಉಪಯೋಗ:- ಹೃದಯ ಬಡಿತ ಆಲಿಸಲು


೩೬. ಬ್ಯಾರೋಮೀಟರ್
ಉಪಯೋಗ:- ವಾತಾವರಣದ ಒತ್ತಡ ಅಳೆಯಲು


೩೭. ಡೈನಮೋ
ಉಪಯೋಗ:- ಯಾಂತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸಲು ಬಳಸುತ್ತಾರೆ.


೩೮. ಎಲೆಕ್ಟ್ರೋಕಾಡಿ೯ಯೋಗ್ರಾಫಿ
ಉಪಯೋಗ:- ಹೃದಯ ಬಡಿತವನ್ನು ಗ್ರಾಫಿಕ್ ಚಿತ್ರದ ರೂಪದಲ್ಲಿ ಪಡೆಯಲು


೩೯. ಬೈನಾಕ್ಯೂಲರ್
ಉಪಯೋಗ:- ದೂರದ ವಸ್ತುಗಳನ್ನು ಸ್ಪಷ್ಟವಾಗಿ ಕಾಣಲು ಬಳಸುತ್ತಾರೆ.


೪೦. ಕಲರಿ ಮೀಟರ್
ಉಪಯೋಗ:- ಬಣ್ಣದ ತೀವ್ರತೆ ತಿಳಿಯಲು ಬಳಸುವರು.


೪೧. ಸಿನೆಮ್ಯಾಟೋಗ್ರಾಫ್
ಉಪಯೋಗ:- ಚಲನಚಿತ್ರವನ್ನು ಪರದೆಯ ಮೇಲೆ ಮೂಡಿಸಲು ಬಳಸುವರು .


೪೨. ಕಾಡಿ೯ಯೋಗ್ರಫಿ
ಉಪಯೋಗ:- ಹೃದಯದ ಚಟುವಟಿಕೆಯನ್ನು  ಕಂಡು ಹಿಡಿಯಲು


೪೩. ಕ್ರೋನೋಮೀಟರ್
ಉಪಯೋಗ:- ಹಡಗುಗಳಲ್ಲಿ ಸರಿಯಾದ ಸಮಯವನ್ನು  ಕಂಡು ಹಿಡಿಯಲು


೪೪. ಕ್ಯಾಲಿಪರ್
ಉಪಯೋಗ:- ವಸ್ತುಗಳ ಬಾಹ್ಯಿಕ ಅಂತರಿಕ ವ್ಯಾಸಗಳನ್ನು ಅಳೆಯಲು


೪೫. ಸೋನರ್
ಉಪಯೋಗ:- ಜಲಗತ ವಸ್ತುಗಳ ಸ್ಥಾನ ದೂರ .ದಿಕ್ಕು ಜವಗಳನ್ನು ಅಳೆಯಲು


೪೬. ಉಷ್ಣಯಂತ್ರ
ಉಪಯೋಗ:- ಉಷ್ಣವನ್ನು ಯಾಂತ್ರಿಕ ಶಕ್ತಿಯನ್ನಾಗಿ ಪರಿವತಿ೯ಸಲು


೪೭. ರೋಹಿತದಶ೯ಕ
ಉಪಯೋಗ:- ಸಂಕೀರ್ಣ ಬೆಳಕಿನಿಂದ ಶುದ್ದರೋಹಿತವನ್ನು ಪಡೆಯಲು ಉಪಯೋಗಿಸುವ ವಿಧಾನ


೪೮. ಲೇಸರ್
ಉಪಯೋಗ:- ಏಕವಣಿ೯ಯ ಅತೀ ತೀವ್ರಬೆಳಕನ್ನು ಉತ್ಪಾದಿಸುವ ವಿಧಾನ


೪೯. ದ್ಯುತಿಕೋಶ
ಉಪಯೋಗ:- ಬೆಳಕಿನ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ವಿಧಾನ


೫೦. ಸೌರಕೋಶ
ಉಪಯೋಗ:- ಸೌರಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವತಿ೯ಸುವ ಸಾಧನ



೫೧. ಶುಷ್ಕಕೋಶ
ಉಪಯೋಗ:- ರಾಸಾಯನಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನು ಪರಿವತಿ೯ಸುವ ವಿಧಾನ


೫೨. ಸೆಂಟ್ರಿಪ್ಯೂಜ್
ಉಪಯೋಗ:- ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳನ್ನು ಪ್ರತ್ಯೇಕಿಸುವ ಸಾಧನ


೫೩. ಅಸಿಲೇಟರ್
ಉಪಯೋಗ:- ಅಪೇಕ್ಷಿತ ಆವೃತ್ತಿಯ ವಿದ್ಯುತ್ ಆಂದೋಲನಗಳನ್ನು ಉತ್ಪತ್ತಿ ಮಾಡುವ ಸಾಧನ


೫೪. ಎ.ಸಿ.ಡೈನಮೋ
ಉಪಯೋಗ:- ಪಯಾ೯ಯ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ


೫೫. ಡಿ.ಸಿ. ಡೈನಮೋ
ಉಪಯೋಗ:- ನೇರ ವಿದ್ಯುತ್ ಶಕ್ತಿಯನ್ನು ತಯಾರಿಸುವ ಸಾಧನ



೫೬. ಪೆರಿಸ್ಕೋಪ್
ಉಪಯೋಗ:- ನೀರಿನ ಆಳದಲ್ಲಿರುವ ಸಬ್ ಮೆರೀನ್ ನಿಂದ ಸಮುದ್ರದ ನೀರಿನ ಮೇಲಿರುವ ಹಡಗುಗಳನ್ನು ಕಂಡು ಹಿಡಿಯಲು



೫೭. ಸೈಟೋಮೀಟರ್
ಉಪಯೋಗ:- ದೇಹದಲ್ಲಿರುವ ಜೀವಕೋಶಗಳ ಸಂಖ್ಯೆಯನ್ನು ಎಣಿಕೆ ಮಾಡಲು ಬಳಸುತ್ತಾರೆ.



೫೮. ಸ್ಪೈರೋಮೀಟರ್
ಉಪಯೋಗ:- ಉಸಿರಾಡುವಾಗ ಗಾಳಿಯ ಪ್ರಮಾಣವನ್ನು  ಅಳೆಯಲು ಬಳಸುತ್ತಾರೆ.


೫೯. ಎಂಡೋಸ್ಕೋಪ್
ಉಪಯೋಗ:- ದೇಹದ ಒಳ ಅಂಗಗಳನ್ನು ಪರಿಪರಿಶೀಲನೆ ಮಾಡಲು  ಬಳಸುತ್ತಾರೆ  


೬೦. ಕ್ಯಾಥಟರ್
ಉಪಯೋಗ:- ದೇಹದ ನಾಳಗಳನ್ನು ಹಿಗ್ಗಿಸಲು ಬಳಸುತ್ತಾರೆ.




Psychology - ಮನಸ್ ಶಾಸ್ತ್ರ

ಮನಸ್ ಶಾಸ್ತ್ರ

>>ಮನುಷ್ಯರ ಮನಸಿನ ಬಗ್ಗೆ ಇರುವ ಹಳೆಯ ಮತ್ತು ಹೊಸ
ವಿವರಣೆಗಳು; ಮನುಷ್ಯರ ನಡೆನುಡಿ, ಪ್ರಾಣಿ ವರ್ತನೆಗಳನ್ನು
ವಿವರಿಸುವ ಮತ್ತು ಅಭ್ಯಾಸ ಮಾಡುವ ರೀತಿ. ಮನಸ್ಸನ್ನು
ವೈಜ್ಞಾನಿಕವಾಗಿ ಪ್ರಯೋಗಗಳ ಮೂಲಕ ತಿಳಿಯುವ
ಪದ್ಧತಿಗಳು. ಮನೋವಿಜ್ಞಾನದ ವಿವಿಧ ಅಧ್ಯಯನದ
ಕ್ಷೇತ್ರಗಳು ಮತ್ತು ಅವುಗಳ ಕೊಡುಗೆ.

>>>ಮನೋವಿಜ್ಞಾನದ
ತತ್ವಗಳ ವಿಸ್ತರಣೆಯಿಂದ ಹೊಸ ಆನ್ವಯಿಕ ಶಾಖೆಗಳ
ಉದಯವಾಗುತ್ತದೆ ಎನ್ನುವುದು.
ಮನಸ್ಸಿನ ಅಧ್ಯಯನದಲ್ಲಿ ಆಸಕ್ತಿ ಹುಟ್ಟಿದ್ದು ಯಾವಾಗ ಎಂದು
ಹೇಳುವುದು ಕಷ್ಟ. ಆದರೆ, ಮನುಷ್ಯನಿಗೆ ವಿವೇಚನೆ ಮಾಡುವ
ಸಾಮಥ್ರ್ಯ ಬಂದಾಗಿನಿಂದಲೂ ಮನಸ್ಸಿನ ಬಗ್ಗೆ
ತಿಳಿದುಕೊಳ್ಳುವ ಆಸಕ್ತಿ ಇತ್ತು ಎನ್ನುವುದನ್ನು ನಾಗರೀಕ
ಇತಿಹಾಸವನ್ನು ಅವಲೋಕಿಸಿದಾಗ ತಿಳಿದುಬರುತ್ತದೆ. ಅನಾದಿ
ಕಾಲದಿಂದಲೂ ಮನುಷ್ಯ ತನ್ನೊಳಗಿರುವ ಮನವನ್ನು
ತಿಳಿದುಕೊಳ್ಳುವ ಸಾಹಸವನ್ನು ಮಾಡಿಕೊಂಡೇ
ಬಂದಿದ್ದಾನೆ. ಹುಟ್ಟು, ಸಾವುಗಳ ಬಗ್ಗೆ ಇದ್ದಂತಹ ಭಯ,
ಆತಂಕ, ಕುತೂಹಲಗಳಿಂದಲೇ ತನ್ನ ಬಗ್ಗೆ, ತನ್ನ ಮನಸ್ಸಿನ ಬಗ್ಗೆ
ತಿಳಿವಳಿಕೆ ಪಡೆಯಲು ಪ್ರಯತ್ನಗಳನ್ನು ಮಾಡುತ್ತಲೇ
ಬಂದಿರುತ್ತಾನೆ. ನಾನೇಕೆ ನಗುತ್ತೀನಿ? ಅಳಿಸುತ್ತೀನಿ,
ಮಲಗುತ್ತೀನಿ, ಹೇದರುತ್ತೀನಿ ಎನ್ನುವಂತಹ ನೂರಾರು
ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಆಸಕ್ತಿಯೇ ಮನುಷ್ಯ
ಮನಸ್ಸಿನ ಕುತೂಹಲ ಹೆಚ್ಚಿಸಿರುವುದು. ಇಂತಹ ಕುತೂಹಲದ
ಪ್ರಶ್ನೆಗಳೇ ಮನದ ಶಾಸ್ತ್ರಕ್ಕೆ ಅಡಿಪಾಯ ಎನ್ನಬಹುದು. ನಮ್ಮ
ಪೂರ್ವಜರು ಪುಣ್ಯಕತೆ, ಪುರಾಣಗಳ ಮೂಲಕ ಮನುಷ್ಯ
ಅನುಭವಿಸುವ ನೋವು, ನಲಿವುಗಳನ್ನು ವಿವರಿಸುತ್ತಿದ್ದರು.
ಇಂದಿಗೂ ಹಾಗೆಯೇ ಅನುಸರಿಸುತ್ತಿರುವವರು ಇದ್ದಾರೆ.
ಮನುಷ್ಯರ ಮನಸ್ಸು ಎಲ್ಲರಲ್ಲಿಯೂ ಒಂದು ರೀತಿಯಲ್ಲಿ
ಇರುವುದಿಲ್ಲ ಏಕೆ? ಒಳ್ಳೆಯ ಮನಸ್ಸು, ಕೆಟ್ಟ ಮನಸ್ಸು
ಹುಟ್ಟುವುದು ಹೇಗೆ ಎನ್ನುವಂತಹ ಪ್ರಶ್ನೆಗಳೇ ಮನದ
ಶಾಸ್ತ್ರದ ಬೆಳೆವಣಿಗೆಗೆ ಕಾರಣ. ಧರ್ಮದಲ್ಲಿ ನಂಬಿಕೆ ಇರುವವರು,
ದೈವತ್ವದಲ್ಲಿ ನಂಬಿಕೆ ಇರುವವರ ಅಭಿಪ್ರಾಯಗಳು ಚರ್ಚೆ,
ವಿವಾದಗಳಿಗೆ ಅವಕಾಶ ಕಲ್ಪಿಸುವುದರೊಂದಿಗೆ ಹೊಸ ಚಿಂತನೆಗಳ
ಉದಯಿಸುವುದಕ್ಕೆ ಕಾರಣವಾಯಿತು. ತತ್ವಜ್ಞಾನ ಮತ್ತು
ಆಧ್ಯಾತ್ಮದ ಮೂಲಕ ಈ ಚಿಂತನೆಗಳು, ಅಭಿಪ್ರಾಯಗಳು
ಗಟ್ಟಿಯಾಗುವುದಕ್ಕೆ ಸಾಧ್ಯವಾಯಿತು. ಹೊಸ
ವ್ಯಾಖ್ಯಾನಗಳು ಮೂಡಿಬರುವುದಕ್ಕೂ ಈ ವಾದ
ವಿವಾದಗಳೇ ಕಾರಣ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ
ಸ್ಪಷ್ಟವಾಗಿ ತಿಳಿಯುವುದೇನೆಂದರೆ ಮನುಷ್ಯನಲ್ಲಿರುವ
ವಿವೇಚನೆ ಮತ್ತು ಭಾಷಾ ಸಾಮಥ್ರ್ಯಗಳಿಂದಲೇ ಅನೇಕ
ಶಾಸ್ತ್ರಗಳು ಜನಿಸಿತು. ಇಂತಹವುಗಳಲ್ಲಿ ಮನಸ್ಸಿನ ಶಾಸ್ತ್ರವೂ
ಒಂದು ಎನ್ನಬಹುದು.
ವಿಶ್ವದ ಅನೇಕ ಆದಿ ಸಂಸ್ಕøತಿಗಳಲ್ಲಿ, ಪುರಾತನ ವೇದಾಂತ
ಶಾಸ್ತ್ರಗಳಲ್ಲಿ ಮನಸ್ಸಿನ ಬಗ್ಗೆ ವ್ಯಾಖ್ಯಾನಗಳಿವೆ. ಭಗವಂತನ
ಶಕ್ತಿಯನ್ನೇ ಜೀವ ರಾಶಿ ಅವಲಂಬಿಸಿರುತ್ತದೆ. ಜೀವಿಯ
ಸೃಷ್ಟಿಯೂ ಸಹ ಭಗವಂತನಿಂದಲೇ ಆದದ್ದು ಎನ್ನುವಂತಹ
ವಿಚಾರಗಳು ಗಾಢವಾಗಿಯೇ ಜನಪ್ರಜ್ಞೆಯಲ್ಲಿ ಬೇರೂರಿದೆ.
ಮನುಷ್ಯ ಮನಸ್ಸಿನ ಲಕ್ಷಣಗಳು ದೇಹದ ಹೊರಗಿನ ಪ್ರಬಲ
ಶಕ್ತಿಯಿಂದಲೇ ಆದದ್ದು ಎನ್ನುವಂತಹ ನಂಬಿಕೆಗಳನ್ನು ವಿಶ್ವದ
ಅನೇಕ ಹಳೆಯ ನಾಗರೀಕತೆಗಳಲ್ಲಿ ಕಾಣಬಹುದು. ದೇಹ
ನಶಿಸಿದರೂ ಅದರೊಳಗಿರುವ ಶಕ್ತಿಯೊಂದು ನಶಿಸುವುದಿಲ್ಲ
ಎನ್ನುವ ನಂಬಿಕೆ ಪ್ರಾಚೀನ ಈಜಿಪ್ಟಿನ ನಾಗರೀಕತೆಯಲ್ಲಿ
ಕಾಣಬಹುದು. ಈ ಶಕ್ತಿಯನ್ನು ಆತ್ಮ ಎನ್ನುವುದಾಗಿಯೇ
ಗುರುತಿಸಿದ್ದರು. ಪ್ರತಿಯೊಬ್ಬರಲ್ಲೂ ಮೂರು ಆತ್ಮಗಳು
ಇರುತ್ತವೆ ಎನ್ನುವುದೇ ಅವರ ಕಲ್ಪನೆ. ಸತ್ತವರ ಆತ್ಮಕ್ಕೆ ರಕ್ಷಣೆ
ಸಿಗಲಿ ಎನ್ನುವ ಕಾರಣದಿಂದಲೇ ಪ್ರಾಚೀನ ಈಜಿಪ್ಟರು ಮೃತ
ದೇಹವನ್ನು ನೂರಾರು ವರ್ಷಗಳ ಕಾಲ ಹಾಳಾಗದಂತೆ
ಸಂರಕ್ಷಿಸುತ್ತಿದ್ದರು.
ಚೀನಾ ದೇಶದ ತತ್ವಜ್ಞಾನಿಗಳು ಮನಸ್ಸು ಮತ್ತು
ಬುದ್ಧಿಶಕ್ತಿಗಳ ಪ್ರಭಾವಗಳನ್ನು ಬಹಳ ಹಿಂದೆಯೇ
ಪ್ರಸ್ತಾಪಿಸಿರುತ್ತಾರೆ. 2000 ವರ್ಷಗಳ ಹಿಂದೆಯೇ ಮನಸ್ಸಿನ
ಕಾರ್ಯಾಚರಣೆಗಳ ಬಗ್ಗೆ ವಿವರಣೆಗಳನ್ನು ನೀಡಿದ್ದರು.
ಮನುಷ್ಯನಲ್ಲಿರುವ ದುಷ್ಟ ಗುಣಗಳು ಮತ್ತು ಒಳ್ಳೆಯ
ಗುಣಗಳ ಬಗ್ಗೆ ಚರ್ಚೆಗಳು ಹೇರಳವಾಗಿದ್ದವು. ಕಾನ್ಫುಶಿಯಸ್
(551-479 ಕ್ರಿ.ಪೂ)ನ ಪ್ರಕಾರ ಮನುಷ್ಯನೇ ಜಗತ್ತಿನ ಕೇಂದ್ರ
ಬಿಂದು. ವಾಸ್ತವ ಜಗತ್ತಿಗೆ ಆದ್ಯತೆ ನೀಡುವುದರ ಮೂಲಕ
ಮನುಷ್ಯ ಗುಣಗಳಿಗೇ ಹೆಚ್ಚು
ಪ್ರಾಶಸ್ತ್ಯವಿರಬೇಕೆಂದಿದ್ದರು. ಮನುಷ್ಯ ಸ್ವಭಾವಗಳು
ಹುಟ್ಟಿ ಗಟ್ಟಿಯಾಗುವುದು ಪರಿಸರದ ಪ್ರಭಾವದಿಂದಲೇ
ಎನ್ನುವ ವಾದ ಅವರದ್ದು. ಆದುದರಿಂದ ಆತ್ಮ, ಭಗವಂತ
ಮುಂತಾದ ನಂಬಿಕೆಗಳಿಗೆ ಮಹತ್ವ ಕೊಡಲಿಲ್ಲ.
ಭಾರತೀಯ ಸಂಸ್ಕøತಿ ಮತ್ತು ಆಚಾರ ವಿಚಾರಗಳಲ್ಲೂ ಮನಸ್ಸಿನ
ಸ್ಥಿತಿಗತಿಗಳ ಬಗ್ಗೆ ವಿಭಿನ್ನ ರೀತಿಯ ವ್ಯಾಖ್ಯಾನಗಳಿವೆ.
ಪ್ರಾಚೀನ ಉಪನಿಷತ್ಗಳಲ್ಲಿ ಮಾನಸಿಕ ಸ್ಥಿತಿಗಳ ಬಗ್ಗೆ
ಉಲ್ಲೇಖಗಳು ಹೇರಳವಾಗಿ ಕಂಡುಬರುತ್ತವೆ. ಅನುಭವಕ್ಕೂ
ಮನಸ್ಸಿಗೂ ಇರುವಂತಹ ಸಂಬಂಧ; ಅಸಾಧಾರಣವಾದ ಮಾನಸಿಕ
ಸ್ಥಿತಿ, ಅಂದರೆ ಸಾವಿನ ನಂತರ ವ್ಯಕ್ತಿಯ ಆತ್ಮಕ್ಕೆ ಏನಾಗುತ್ತದೆ
ಎನ್ನುವುದರ ಬಗ್ಗೆ ವಿವರಣೆಗಳನ್ನು ಮೈತ್ರಾಯಣೀ
ಉಪನಿಷತ್ತಿನಲ್ಲಿ ಉಲ್ಲೇಖಿಸಲಾಗಿದೆ. ಚೇತನಾಬಿಂಬಗಳಿಗೆ
ಮನವೇ ಮೂಲ ಕಾರಣವೆನ್ನುವ ಅಭಿಪ್ರಾಯವನ್ನು ಇಲ್ಲಿ
ಕಾಣಬಹುದು. ಇದರಂತೆ, ಮನುಷ್ಯ ನೋಡುವುದು,
ಕೇಳುವುದು, ಇಚ್ಛೆ, ಸಂಕಲ್ಪ ನಾಚಿಕೆ, ಬುದ್ಧಿ ಮುಂತಾದ
ಅನೇಕ ಲಕ್ಷಣಗಳು ಮನಸ್ಸೇ ಆಗಿರುತ್ತದೆ. ಇದೇ ರೀತಿಯಲ್ಲಿ
ಬುದ್ಧಿಗೆ ನಾನಾ ಹೆಸರುಗಳು ಇರುವುದನ್ನು
ಐತರೇಯೋಪನಿಷತ್ತಿನಲ್ಲಿ ಕಾಣಬಹುದು. ಸಂಜ್ಞಾನ,
ವಿಜ್ಞಾನ, ಪ್ರಜ್ಞಾನ ಕಲ್ಪಿಸುವುದು, ತಿಳಿಯುವುದು, ಧೈರ್ಯ,
ಅಭಿಪ್ರಾಯ ಪಡುವುದು, ಇತ್ಯಾದಿ ಮಾನಸಿಕ ಸ್ಥಿತಿಗಳನ್ನು
ಪರಿಪೂರ್ಣವಾಗಿ ಉಲ್ಲೇಖಿಸಿರುವುದು ಕಂಡುಬರುತ್ತದೆ. ಆದರೆ,
ಇವುಗಳು ಆಧುನಿಕ ಮನೋವಿಜ್ಞಾನದ ಇತಿಹಾಸಕಾರರ ಕಣ್ಣಿಗೆ
ಬಿದ್ದಿಲ್ಲದಿರುವುದು ದುರದೃಷ್ಟ. ಆದುದರಿಂದ ಪ್ರಾಚೀನ
ಭಾರತೀಯ ಸಂಸ್ಕøತಿಯ ವಿಚಾರಧಾರೆಗಳತ್ತ ಮನೋವಿಜ್ಞಾನ
ಹೆಚ್ಚಾಗಿ ಕಣ್ಣು ಹಾಯಿಸಲಿಲ್ಲ. ಹೀಗಿದ್ದರೂ ಆಧುನಿಕ
ಮನೋವಿಜ್ಞಾನವು ಪರಿಶೀಲಿಸುತ್ತಿರುವ ಅನೇಕ ವಿಷಯಗಳ
ಬಗ್ಗೆ ಪ್ರಾಚೀನ ಭಾರತೀಯರ ಚಿಂತನೆಗಳು ಹೊಸ ಬೆಳಕನ್ನು
ಚೆಲ್ಲಬಲ್ಲದ್ದಾಗಿದೆ.
ಮನಸ್ಸಿನ ಬಗ್ಗೆ ಪ್ರಶ್ನೆ ಕೇಳುವುದರೊಂದಿಗೆ ಜಗತ್ತಿನ ಸೃಷ್ಟಿಯ
ಬಗ್ಗೆಯೂ ಗ್ರೀಕ್ ತತ್ವಶಾಸ್ತ್ರಜ್ಞರು ಚಿಂತನೆ ನಡೆಸಿದ್ದರು.
ವ್ಯಕ್ತಿಯೊಳಗೆ ಮನಸ್ಸು ಇದೆ, ಇದರ ಮೇಲೆ ಒಳಗಿನ ಮತ್ತು
ಹೊರಗಿನ ಶಕ್ತಿಗಳು ಪ್ರಭಾವ ಬೀರಬಲ್ಲದು ಎನ್ನುವುದನ್ನು
ವಿವರಿಸುವ ಪ್ರಯತ್ನಗಳನ್ನು ಅನಾದಿಯಿಂದಲೂ ನಡೆಸುತ್ತಲೇ
ಬಂದಿರುತ್ತಾರೆ.
ಗ್ರೀಕ್ ಚಿಂತಕರಲ್ಲಿ ಒಬ್ಬರಾದ ಅರಿಸ್ಟಾಟಲ್ (384-322) ಆಧುನಿಕ
ಮನೋವಿಜ್ಞಾನಕ್ಕೆ ತಳಹದಿ ಹಾಕಿದವರಲ್ಲಿ ಪ್ರಮುಖರು ಎಂದು
ಗುರುತಿಸಲಾಗುತ್ತದೆ. ಏಕೆಂದರೆ, ಮನುಷ್ಯನ ಹೃದಯಕ್ಕೂ
ಮನಸ್ಸಿಗೆ ಸಂಬಂಧವಿದೆ ಎನ್ನುವ ಅವರ ವಿವರಣೆಯೂ ಮನಸ್ಸಿನ
ಬಗ್ಗೆ ಆಸಕ್ತಿ ಮತ್ತು ಕುತೂಹಲಗಳು ಹೆಚ್ಚುವಂತೆ ಮಾಡಿತ್ತು.
ಇದರಿಂದಾಗಿ ಹೊಸ ಚಿಂತನೆಗಳು ಚಿಗುರುವುದೊಂದಿಗೆ
ಮನಸ್ಸಿನ ಅಧ್ಯಯನದ ಬೇರುಗಳು ಗಟ್ಟಿಯಾಗಿ ವ್ಯಾಪಿಸಿತು.
ಗ್ರೀಕ್ ಭಾಷೆಗೆ ಸೇರಿದ ‘ಸೈಕಿ’ ಮತ್ತು ‘ಲೊಗಸ್’ ಪದಗಳ
ಚೋಡಣೆಯೇ ಸೈಕಾಲಜಿ. ‘ಸೈಕಿ’ ಮತ್ತು ‘ಲಾಗೊ’ ಎಂದರೆ
ಆತ್ಮದ ಅಧ್ಯಯನ ಎಂದು ಹೇಳುವುದು ವಾಡಿಕೆ. ಇದೇ
ಅರ್ಥವನ್ನು ಇಂದಿಗೂ ಬಳಸಲಾಗುತ್ತಿದೆ. ಆದರೆ, ಕೆಲವು
ವಿದ್ವಾಂಸರುಗಳ ಪ್ರಕಾರ ಗ್ರೀಕ್ ಭಾಷೆಯಲ್ಲಿ ‘ಸೈಕಿ’ ಪದಕ್ಕೆ
ಹಲವಾರು ಅರ್ಥಗಳಿದ್ದು, ಅವುಗಳಲ್ಲಿ ಜೀವ ಎಂಬ ಅರ್ಥವು
‘ಸೈಕಿ’ಗೆ ಹತ್ತಿರವಾಗಿರುತ್ತದೆ. ಜೀವ ಇದ್ದಾಗ
ಜೀವಿಯಾಗುವುದು. ಆದುದರಿಂದ ‘ಸೈಕಿ’ ಪದವನ್ನು ಆತ್ಮಕ್ಕೆ
ಸರಿಹೊಂದಿಸುವುದು ಸೂಕ್ತವಲ್ಲ ಎನ್ನುವ ವಾದವು
ಬಲವಾಗಿತ್ತು. ಗ್ರೀಕ್ ಚಿಂತಕ ಪ್ಲೆಟೋ(ಅಂದಾಜು ಕ್ರಿ ಪೂ
428-348) ಪ್ರಕಾರ ಆತ್ಮವು ಕಾಣಿಸದಂತಹ ಒಂದು ದಿವ್ಯಶಕ್ತಿ.
ಇದು ಇತರ ಶಕ್ತಿಗಳಾದ ಗಾಳಿ, ಬೆಂಕಿಗಳಿಗಿಂತ ಭಿನ್ನವಾದದ್ದು
ಎಂದು ಪ್ರತಿಪಾದಿಸಿದ್ದರು. ಆದುದರಿಂದ ‘ಸೈಕಾಲಜಿ’ ಎನ್ನುವ
ಪದವು, ಸಾಮಾನ್ಯರಿಗೂ ತಿಳಿದಿರುವಂತೆ, ಮನಸ್ಸಿಗೆ
ಸಂಬಂಧಿಸಿದ್ದೇ ಹೊರತು ಆತ್ಮಕ್ಕಲ್ಲ ಎನ್ನುವ ವಾದವನ್ನು
ಅನೇಕ ತತ್ವಜ್ಞಾನಿಗಳು ಒಪ್ಪಿದ್ದರು. ಪ್ಲೆಟೊವಿನ ಶಿಷ್ಯ
ಅರಿಸ್ಟಾಟಲ್ ಕೂಡ ಇದನ್ನು ಸಮರ್ಥಿಸಿದ್ದರು. ‘ಸೈಕಿ’ ಯು ಸಹಜ
ರೀತಿಯ ಜೀವಶಕ್ತಿಯಾಗಿದ್ದು, ಜೀವಿಯ ಅಂಗಾಂಗಳ
ಕಾರ್ಯಾಚರಣೆಯನ್ನು ನೆರವೇರಿಸುವಂತಹದ್ದು. ಜೀವಿ ವೃದ್ಧಿ,
ವಿಕಾಸ, ಚಲನವಲನಗಳು, ವಿವೇಚನೆಯಂತಹವುಗಳು ‘ಸೈಕಿ’ಯ
ಗುಣಗಳಾಗಿರುತ್ತವೆ. ಅಂದರೆ, ಜೀವದೊಂದಿಗೆ
ದೇಹವಿರುವುದಲ್ಲದೇ ದೇಹವು ತನ್ನಷ್ಟಕ್ಕೇ ತಾನೇ
ಬದುಕಿ ಉಳಿಯುವ ಲಕ್ಷಣಗಳನ್ನು ಹೊಂದಿರುವುದು
ಎನ್ನುವುದಾಗಿ ಅವರು ವಿವರಿಸಿದ್ದರು. ದೇಹವೇ ಬೇರೆ,
ಮನಸ್ಸೇ ಬೇರೆಯಾಗಿದ್ದು ಇವೆರಡರ ಪ್ರಭಾವವು ವ್ಯಕ್ತಿ
ಕ್ರಿಯೆಗಳಿಗೆ ಕಾರಣವೆನ್ನುವ ವಾದವು ಮನುಷ್ಯ ಮನಸ್ಸಿನ
ಅಧ್ಯಯನಕ್ಕೆ ಹಾದಿಯನ್ನು ತೋರಿಸಿತು.
ಇದಾದ ಕೆಲವು ಶತಮಾನಗಳ ನಂತರವೇ ಮನೋವಿಜ್ಞಾನವೆಂಬ
ಪದದ ಬಳಕೆ ಜಾರಿಗೆ ಬಂದದ್ದು. ಜರ್ಮನಿಯ ತತ್ವಜ್ಞಾನಿ
ರೊಡಾಲ್ಫ್ ಗೊಕೆಲ್ 1590 ರ ಸಮಯದಲ್ಲಿ ಮೊದಲ ಬಾರಿಗೆ
ತಮ್ಮ ಲೇಖನ ಒಂದರಲ್ಲಿ ‘ಸೈಕಾಲಜಿ’ ಪದದ ಮೂಲಕ ಮನಸ್ಸಿಗೆ
ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿದ್ದರು. ನಂತರದ
ಶತಮಾನಗಳಲ್ಲಿ ಜರ್ಮನಿಯ ಮತ್ತೊಬ್ಬ ತತ್ವಜ್ಞಾನಿ ಕ್ರಿಶ್ಚಿಯನ್
ವೊಲ್ಪ್(1679-1754), ಫ್ರಾನ್ಸ್ನ ದಾರ್ಶನಿಕ ಮೇನ್ ಡಿ ಬಿರನ್
(1766-1824) ಹಾಗೂ ಇಂಗ್ಲೆಂಡ್ನ ಚಿಂತಕ ವಿಲಿಯಂ
ಹ್ಯಮಿಲ್ಟನ್(1788-1856) ‘ಸೈಕಾಲಜಿ’ ಪದವನ್ನು ವಿದ್ವತ್ ಸಭೆಗಳ
ಮೂಲಕ ಪ್ರಚಾರಕ್ಕೆ ತಂದರು.
ಆಧುನಿಕ ಮನೋವಿಜ್ಞಾನದ ತಾತ್ವಿಕ ಹಿನ್ನೆಲೆಯನ್ನು ಫ್ರಾನ್ಸ್
ದೇಶದ ತತ್ವಜ್ಞಾನಿ, ಗಣಿತಶಾಸ್ತ್ರಜ್ಞ ಮತ್ತು ಆಧುನಿಕ
ವಿಜ್ಞಾನದ ಪ್ರವರ್ತಕರಲ್ಲಿ ಒಬ್ಬರೆಂದು ಗುರುತಿಸಲ್ಪಡುವ ರೆನೆ
ದೆಕಾರ್ಟ್(1596-1650) ಸೃಷ್ಟಿಸಿದರು ಎನ್ನಲಾಗುತ್ತದೆ. ಇವರ
ಪ್ರಖ್ಯಾತ ಹೇಳಿಕೆ “ನಾನು ಅಲೋಚಿಸಬಲ್ಲೆ, ಆದುದರಿಂದಲೇ
ನಾನಿದ್ದೇನೆ” ಇಂಗ್ಲಿಷಿನಲ್ಲಿ “ಐ ಥಿಂಕ್ ದೇರ್ಫೊರ್ ಐ ಯಾಮ್”
ಎನ್ನುವುದನ್ನು ನಾನಾ ರೀತಿಯಲ್ಲಿ ಅರ್ಥೈಸಲ್ಪಡಲಾಗಿದೆ.
ಮನದ ಶಕ್ತಿಗಳು ಮತ್ತು ವ್ಯಕ್ತಿಯ ಇರುವಿಕೆಯ ಬಗ್ಗೆ ವಿಭಿನ್ನ
ವ್ಯಾಖ್ಯಾನಗಳಿಗೆ ಅವಕಾಶ ಕಲ್ಪಿಸುವುದರೊಂದಿಗೆ ಹೊಸ
ಅಧ್ಯಯನದ ಕ್ಷೇತ್ರಗಳು ಜನಿಸುವುದಕ್ಕೆ ಇದು
ಪ್ರೇರಕವಾಯಿತು. ವೈಜ್ಞಾನಿಕ ಮನೋವಿಜ್ಞಾನದ ಪರಂಪರೆ
ಆರಂಭವಾದದ್ದು 19 ನೇ ಶತಮಾನದಲ್ಲಿ. ಮಾನಸಿಕ
ಲಕ್ಷಣಗಳನ್ನು ಪ್ರಯೋಗದ ಮೂಲಕ ತಿಳಿದುಕೊಳ್ಳುವ
ಪ್ರಯತ್ನವನ್ನು ಜರ್ಮನಿ ಹಾಗೂ ಅಮೆರಿಕ ದೇಶಗಳಲ್ಲಿ
ಮಾಡಲಾಯಿತು. ಜರ್ಮನಿಯಲ್ಲಿ ವಿಲ್ಹೆಲಂ ಊಂಟ್(1832-1930)
ಅವರು ಮನೋಗುಣಗಳಾದ ಸಂವೇದನೆ ಮತ್ತು
ಸಂವೇಗಗಳನ್ನು ಪ್ರಯೋಗಗಳ ಮೂಲಕ ವಿವರಿಸುವ ಪ್ರಯತ್ನ
ಮಾಡಿದರು. ಇದಕ್ಕಾಗಿ ಜರ್ಮನಿಯ ಲೆಪಿಝಿಕ್ನಲ್ಲಿ 1879
ಮನೋವಿಜ್ಞಾನದ ಮೊಟ್ಟ ಮೊದಲ ಪ್ರಯೋಗಾಲಯ
ಆರಂಭಿಸಿದರು. ಅಮೆರಿಕದಲ್ಲಿಯೂ ಸಹ ಮಾನಸಿಕ ಕ್ರಿಯೆಗಳನ್ನು
ತಿಳಿಯುವುದಕ್ಕಾಗಿ ಕೆಲವು ಪ್ರಯೋಗಗಳನ್ನು
ದೇಹಶಾಸ್ತ್ರಜ್ಞ, ಮನೋವಿಜ್ಞಾನಿ, ಮತ್ತು ತತ್ವಶಾಸ್ತ್ರಗಳಲ್ಲಿ
ಪ್ರವೀಣರಾಗಿದ್ದ ವಿಲಿಯಂ ಜೇಮ್ಸ್(1842-1910) ಅವರು
ಮಾಡಿದ್ದರು.
ಕನ್ನಡ ಹಾಗೂ ಇತರ ಭಾರತೀಯ ಭಾಷೆಗಳಲ್ಲಿ
ಬಳಸಲಾಗುತ್ತಿರುವ ಮನೋವಿಜ್ಞಾನ ಅಥವಾ
ಮನಶಾಸ್ತ್ರವೆಂಬ ಪದವು ಗ್ರೀಕ್ ಮತ್ತು ಇಂಗ್ಲಿಷ್ ಭಾಷೆಯ
‘ಸೈಕಾಲಜಿ’ ಯ ಸಮಾನಾರ್ಥ ಎನ್ನುವ ರೀತಿಯಲ್ಲಿ
ಬಳಸಲಾಗುತ್ತದೆ. ಮನಸ್ಸಿನ ವ್ಯವಹಾರಗಳಲ್ಲಿ ಆಲೋಚನೆ,
ನೆನಪು, ಮರೆವು, ಕಲಿಯುವಿಕೆ, ಸಂವೇದನೆಗಳು ಮತ್ತು
ಸಂವೇಗಗಳು ಸೇರಿರುತ್ತವೆ. ಇವುಗಳ ಚಟುವಟಿಕೆಗಳಿಂದಲೇ
ವ್ಯಕ್ತಿಯು ವರ್ತಿಸಲು ಸಾಧ್ಯ. ಈ ಚಟುವಟಿಕೆ ಅಥವಾ
ಕ್ರಿಯೆಗಳಿಗೆ ಸಾಮಾಜಿಕ ಸ್ವರೂಪವೂ ಇರುತ್ತದೆ. ಆಧುನಿಕ
ಮನೋವಿಜ್ಞಾನದ ನೆಲೆಗಳು ಸಾವಿರಾರು ವರ್ಷಗಳ ಹಿಂದಿಯೇ
ಗ್ರೀಕ್ ಮತ್ತು ಇತರ ಸಂಸ್ಕøತಿಯ ತತ್ವಜ್ಞಾನಿಗಳ ವಿವರಣೆಗಳಿಗೆ
ಹತ್ತಿರವಾಗಿಯೇ ಇರುವುದರಿಂದ ಅವುಗಳ ಬಗ್ಗೆಯೂ ತಿಳಿವಳಿಕೆ
ಅಗತ್ಯ.
ಆಧುನಿಕ ಮನೋವಿಜ್ಞಾನದ ಪರಂಪರೆಯ ತಳಹದಿಯು ಗ್ರೀಕ್
ತತ್ವಜ್ಞಾನಿಗಳ ಕೊಡುಗೆಗಳಿಂದಲೇ ಆದದ್ದು. ಹಾಗೆ ನೋಡಿದರೆ
ವಿಜ್ಞಾನದ ನೆಲೆಗಳಿಗೂ ಸಹ ಗ್ರೀಕ್ ಚಿಂತನೆಗಳೇ ಪ್ರೇರಣೆ. ಈ
ಪ್ರೇರಣೆಗಳು ನಿಂತ ನೀರಾಗಿರದೆÉ, ಯಾವುದೇ ಒಂದು
ಭಾಷೆ, ತತ್ವ ಅಥವಾ ದೈವೀಶಕ್ತಿಗೆ ಸೀಮಿತಗೊಳ್ಳದೇ
ಬದಲಾಗುತ್ತಲೇ ಮುಂದುವರೆಯಿತು. ಇದರ ಪರಿಣಾಮವೇ
ನಾವು ಅನುಭವಿಸುತ್ತಿರುವ ಇಂದಿನ ವಿಜ್ಞಾನ, ತಂತ್ರಜ್ಞಾನದ
ಆವಿಷ್ಕಾರಗಳು. ಮನೋವಿಜ್ಞಾನದ ಏಳಿಗೆಯನ್ನು ವಿಜ್ಞಾನದ
ಬೆಳವಣಿಗೆಯೊಂದಿಗೆ ಹೋಲಿಸಿ ನೋಡಿದಾಗ
ಅಪಾರವೆನ್ನುವಂತಹ ಬೆಳವಣಿಗೆಗಳು ಕಂಡುಬಂದದ್ದು 20ನೇ
ಶತಮಾನದ ಆರಂಭದಿಂದಲೇ ಎನ್ನಬಹುದು. ಜರ್ಮನಿ,
ಇಂಗ್ಲೆಂಡ್, ಫ್ರಾನ್ಸ್ ಮತ್ತು ಅಮೆರಿಕ ಸಂಯುಕ್ತ
ಸಂಸ್ಥಾನಗಳಲ್ಲಿ ಮನಸ್ಸಿನ ಬಗ್ಗೆ ತಿಳಿಯುವ ಕುತೂಹಲ,
ಆಸಕ್ತಿಗಳು ವೈಜ್ಞಾನಿಕ ಮಾದರಿಗಳನ್ನು
ಅಳವಡಿಸಿಕೊಳ್ಳುವುದಕ್ಕೂ ಈ ಕಾಲಮಾನ ಪ್ರಶಸ್ತವಾಗಿತ್ತು.
ಆದುದರಿಂದ ಮನೋವಿಜ್ಞಾನದ ಹೊಸ ಚಿಂತನೆಗಳು
ಹೊರಬಂದದ್ದು ಕೇವಲ ಆಕಸ್ಮಿಕವಲ್ಲ, ಅದೊಂದು ತಾರ್ಕಿಕ
ಬೆಳವಣಿಗೆ ಎಂದೇ ಹೇಳಲಾಗುತ್ತದೆÀ.
ಆಧುನಿಕ ಮನೋವಿಜ್ಞಾನಕ್ಕೂ ಪುರಾತನ ಮನಶಾಸ್ತ್ರಕ್ಕೂ
ಅನೇಕಾನೇಕ ವ್ಯತ್ಯಾಸಗಳಿವೆ. ಈ ವ್ಯತ್ಯಾಸಗಳನ್ನು
ವಿಷಯದ ನಿರೂಪಣೆಗಳ ಮೂಲಕ ಸುಲಭವಾಗಿ
ಗುರುತಿಸಬಹುದಾಗಿದೆ. ಜ್ಞಾನದ ಚೌಕಟ್ಟುಗಳು
ವಿಸ್ತಾರಗೊಂಡಿದ್ದರ ಫಲವಾಗಿ ಹೊಸ ವಿವರಣೆಗಳು,
ಅಧ್ಯಯನದ ಕ್ರಮಗಳು ಜನಿಸಿದವು. ಪ್ರತಿಯೊಂದು ಅಧ್ಯಯನ
ಕ್ಷೇತ್ರದಲ್ಲೂ ಕ್ರಮೇಣ ಬೆಳವಣಿಗೆ ಮತ್ತು ಬದಲಾವಣೆಗಳು
ಮುಂದುವರೆಯಿತು. ಮನುಷ್ಯ ದೇಹದ ಬಗ್ಗೆ ಹೊಸ ಹೊಸ
ವಿಷಯಗಳನ್ನು ವೈಜ್ಞಾನಿಕ ಅಧ್ಯಯನಗಳು ಹೊರತಂದವು.
ಇವುಗಳ ಪರಿಣಾಮವು ಮನಸ್ಸಿನ ಅಧ್ಯಯನದ ಮೇಲೂ
ಉಂಟಾಗುತ್ತಿತ್ತು. ಮನೋವಿಜ್ಞಾನದ ಬಗ್ಗೆ ಇರುವಂತಹ
ನಿರೂಪಣೆಗಳನ್ನು ಗಮನಿಸಿದಾಗ ಇದು ಸ್ಪಷ್ಟವಾಗಿ ತಿಳಿಯುತ್ತದೆ.
ಮನೋವಿಜ್ಞಾನವು ವ್ಯಕ್ತಿ ಮನಸ್ಸಿನ ಅಧ್ಯಯನವೇ
ಆಗಿರುವುದರಿಂದ ವ್ಯಕ್ತಿ ವರ್ತನೆಗಳ ರೀತಿ, ವಿಧಿ ಮತ್ತು
ಗುರಿಗಳನ್ನು ವಿವರಿಸುವ ಪ್ರಯತ್ನವನ್ನು ಬಹಳ ಹಿಂದಿನಿಂದಲೂ
ಮಾಡಲಾಗಿದೆ. ಮನಸ್ಸಿನ ವ್ಯವಹಾರಗಳು ನೇರವಾಗಿ ಕಣ್ಣಿಗೆ
ಕಾಣಿಸದಿದ್ದರೂ ಅವುಗಳ ಪ್ರಭಾವ ಮತ್ತು ಪರಿಣಾಮಗಳು
ಗಮನಕ್ಕೆ ಬಂದೇ ಬರುತ್ತವೆ. ಕಣ್ಣಿಗೆ ಕಾಣಿಸದಂತಹ
ವ್ಯವಹಾರಗಳನ್ನು ನಿಯಂತ್ರಿಸುವರು ಯಾರು ಎನ್ನುವ
ಮೂಲ ಪ್ರಶ್ನೆಯು ಮನಶಾಸ್ತ್ರದ ನಿರೂಪಣೆಯನ್ನು ಪದೇಪದೇ
ಬದಲಾಯಿಸುವಂತೆ ಮಾಡಿದೆ.
ಮನಸ್ಸು, ಆತ್ಮ ಎನ್ನುವ ಪದಗಳ ಅರ್ಥವು ಮಾನಸಿಕ
ವ್ಯವಹಾರಗಳನ್ನು ವಿವರಿಸಬಲ್ಲದು ಎನ್ನುವ ಅಭಿಪ್ರಾಯ
ಹೊಂದಿದ್ದ ಗ್ರೀಕ್ ತತ್ವಜ್ಞಾನಿಗಳು ಮನದ ಶಾಸ್ತ್ರವನ್ನು
“ಆತ್ಮ ಅಥವಾ ಮನಸ್ಸಿನ ಅಧ್ಯಯನ” ಎಂಬುದಾಗಿ
ವಿವರಿಸಿದ್ದರು. ಈ ಮಾದರಿಯ ವಿವರಣೆಯಲ್ಲಿ ಲ್ಯಾಟಿನ್ ಮತ್ತು
ಗ್ರೀಕ್ ಭಾಷೆಗಳಲ್ಲಿರುವ ‘ಸೈಕಿ’ ಮತ್ತು ‘ಲಾಗೊಸ್’ ಪದಗಳ
ಮೂಲಾರ್ಥವೇ ಮನದ ಶಾಸ್ತ್ರದ ವಿವರಣೆಗಳಿಗೆ ಆಧಾರ.
ಆದುದರಿಂದಲೇ ಮನಃಶಾಸ್ತ್ರದ ನಿರೂಪಣೆಯನ್ನು
ಅರ್ಥಮಾಡಿಕೊಳ್ಳಲು ಗ್ರೀಕ್ ಚಿಂತಕರು ‘ಸೈಕಿ’ ಪದವನ್ನು
ಹೇಗೆ ಬಳಸಿದ್ದರು ಎನ್ನುವುದನ್ನು
ತಿಳಿದುಕೊಳ್ಳಬೇಕಾಗುತ್ತದೆ. ‘ಸೈಕಿ’ ಪದಕ್ಕೆ ಎರಡು ರೀತಿಯ
ಅರ್ಥವಿದೆ. ಒಂದು ಆತ್ಮ ,ಇನ್ನೊಂದು ಮನಸ್ಸು. ಆತ್ಮವು
ಚಿರಂತರವಾಗಿರುವ ಕೆಲವು ಮಾನವಿಕ ಗುಣಗಳನ್ನು ಹಾಗೂ
ಮಾನಸಿಕ ಕ್ರಿಯೆಗಳಾದ ಭಾವ, ಅಭಿಲಾಷೆ,
ವ್ಯಾಮೋಹಗಳೊಂದಿಗೆ ಜೀವಶಕ್ತಿಯನ್ನು ಸಂಕೇತಿಸುತ್ತದೆ
. ಜೀವಶಕ್ತಿಯ ಇರುವಿಕೆಯು ದೈಹಿಕ ಕ್ರಿಯೆಗಳ ಮೂಲಕ
ವ್ಯಕ್ತವಾಗುತ್ತದೆ. ದೇಹ ನಶಿಸಿದರು ಆತ್ಮವು ದೇಹದೊಂದಿಗೆ
ನಶಿಸುವುದಿಲ್ಲವೆಂಬ ನಂಬಿಕೆಯು ಗ್ರೀಕ್ ಚಿಂತಕರಲ್ಲಿ
ಇದ್ದಂತೆಯೇ ಮತ್ತಿತರ ಸಂಸ್ಕøತಿಯ ಚಿಂತಕರಲ್ಲೂ ಇತ್ತು,
ಇಂದಿಗೂ ಇದೆ. ವ್ಯಕ್ತಿಯ ಆಗುಹೋಗುಗಳಿಗೆ ಆತ್ಮವೇ
ಕಾರಣವೆನ್ನುವುದು ಅಂದಿದ್ದ ಅಭಿಪ್ರಾಯ. ಆದರೆ, ವ್ಯಕ್ತಿಯ
ಎಲ್ಲಾ ವರ್ತನೆಗಳಿಗೂ ಆತ್ಮವೇ ಕಾರಣವಲ್ಲ ಎಂದು ವಾದಿಸಿದ
ಚಿಂತಕರು ಮನಸ್ಸಿನ ಆಳವನ್ನು ಅಧ್ಯಯನ ಮಾಡಲು ಆತ್ಮದ
ಕ್ರಿಯೆಗಳ ಅಗತ್ಯವಿಲ್ಲವೆಂದು ವಾದಿಸಿದ್ದರು. ಹಾಗೆÀಯೇ
ಮನುಷ್ಯ ಲಕ್ಷಣಗಳನೇಕವು ವ್ಯಕ್ತಿಗತವಾದದ್ದೇ
ಆದುದರಿಂದ ಆತ್ಮದ ಪ್ರೇರಣೆಯ ಮೂಲಕ ತಿಳಿಯುವ
ಅಗತ್ಯವಿಲ್ಲ ಎನ್ನುವ ಅಭಿಪ್ರಾಯವು ಮನಸ್ಸಿನ ಅಧ್ಯಯನಕ್ಕೆ
ಹೆಚ್ಚು ಉತ್ತೇಜನ ನೀಡಿತ್ತು. ಮನಸ್ಸಿನ ಚಟುವಟಿಕೆಗಳು
ಅಥವಾ ಕ್ರಿಯೆಗಳನ್ನು ನಿಖರವಾಗಿ ಆತ್ಮದ ವಿವರಣೆಗಳು
ನೀಡದಿದ್ದ ಕಾರಣ ಅವುಗಳನ್ನು ಅಧ್ಯಯನ ವಸ್ತುವನ್ನಾಗಿ
ಪರಿಗಣಿಸಲು ಸಾಧ್ಯವಿಲ್ಲ. ಆದುದರಿಂದ ‘ಸೈಕಾಲಜಿ’ ಪದದ
ಅರ್ಥವನ್ನು ಆತ್ಮದ ಅಧ್ಯಯನ ಎನ್ನುವುದರ ಬದಲಿಗೆ ಮನಸ್ಸಿನ
ಅಧ್ಯಯನ ಎಂಬುದಾಗಿಯೂ ನೋಡಬಹುದು ಎನ್ನುವ
ಚಿಂತನೆಗೆ ಮನ್ನಣೆ ದೊರಕಿತು.
ನಮ್ಮ ದಿನನಿತ್ಯದ ಭಾಷೆಯಲ್ಲಿ ‘ನನಗೆ ತರಗತಿ ಬರೋಕೆ ಮನಸೇ
ಇಲ್ಲ’, ‘ಈಗ ನನ್ನ ಮನಸ್ಸು ಕೆಟ್ಟೋಗಿದೆ’ ‘ಅವನÀ ಮೇಲೆ
ಮನಸಾಗಿದೆ’, “ಮನಸ್ಸಿದ್ದರೇ ಮಾರ್ಗ” ಮುಂತಾದ ವಾಕ್ಯಗಳು
ವ್ಯಕ್ತಿಯ ಮನಸ್ಸಿನಲ್ಲಿ ಆಗುತ್ತಿರುವ ಕ್ರಿಯೆಗಳನ್ನು
ಸೂಚಿಸುತ್ತವೆ. ಆದರೆ ಇವುಗಳೇ ಮನಸ್ಸು ಅಲ್ಲ ಎನ್ನುತ್ತಾರೆ
ಮನೋವಿಜ್ಞಾನಿಗಳು. ಮನಸ್ಸು ಎನ್ನುವ ಪದವನ್ನು
ಆಲೋಚನೆ, ಅಭಿಲಾಷೆ, ಸಾಧನೆಗಳಂತಹ ಚಟುವಟಿಕೆಗಳನ್ನು
ಸೂಚಿಸಲು ಬಳಸುವುದು ಸಾಮಾನ್ಯ. ಇದೊಂದು ರೀತಿಯ
ಸಂಪರ್ಕ ವಿಧಾನವೆನ್ನಲೂಬಹುದು. ಏಕೆಂದರೆ, ನಮ್ಮ
ಮನಸ್ಸಿನಲ್ಲಿರುವುದನ್ನು ಇತರರಿಗೆ ತಿಳಿಪಡಿಸಬೇಕಾದರೆ ಈ
ಮಾದರಿಯ ನುಡಿಗಳು ಬೇಕಾಗುತ್ತದೆ. ಆದರೆ,
ತತ್ವಶಾಸ್ತ್ರಜ್ಞರು ಮತ್ತು ಮನೋವಿಜ್ಞಾನಿಗಳು ಈ
ರೀತಿಯಿಂದ ಮನಸ್ಸನ್ನು ನೋಡುವುದಿಲ್ಲ. ಮನಸ್ಸಿನ ಮೂಲ
ಮತ್ತು ಅವುಗಳ ಗುರಿ ಏನೆಂಬುದನ್ನು ತಿಳಿಯುವ ಉದ್ದೇಶ
ಅವರದ್ದಾಗಿರುತ್ತದೆ.
ಮನಸ್ಸಿನ ಬಗ್ಗೆ ವಿವರಣೆಗಳನ್ನು ನೀಡಿದವರಲ್ಲಿ ತತ್ವಶಾಸ್ತ್ರಜ್ಞರು
ಮೊದಲಿಗರು ಎನ್ನಬಹುದು. ಮನಸ್ಸು ವ್ಯಕ್ತಿಯಲ್ಲಿರುವ
ಒಂದು ಸಶಕ್ತ ಸ್ಥಿತಿಯೆಂದು ಗ್ರೀಕ್ ಮತ್ತು ಇತರ ಪುರಾತನ
ತತ್ವಶಾಸ್ತ್ರದ ಪ್ರಕಾರಗಳು ಹೇಳುತ್ತವೆÉ. ಮನಸ್ಸು ಚೇತನ,
ಅಚೇತನ ಸ್ಥಿತಿಗಳನ್ನೊಳಗೊಂಡಿರುತ್ತದೆ. ಮನಸ್ಸಿನ
ಕಾರ್ಯಾಚರಣೆ ಎಂಬುದಾಗಿ ಇವುಗಳನ್ನು ಪÀರಿಗಣಿಸಬೇಕು
ಎನ್ನುವುದೇ ತತ್ವವಾದಿಗಳ ವಾದ. ಚೇತನವೂ ಮನಸ್ಸಿನ
ಒಂದು ಸ್ಥಿತಿಯಾಗಿರುತ್ತದೆ. ಇದಕ್ಕೆ ವಿಶಿಷ್ಟವಾದ ಅನೇಕ
ಲಕ್ಷಣಗಳು ಇರುತ್ತವೆ. ಚೇತನವನ್ನು ಪ್ರಜ್ಞೆ ಎಂದೂ ಸಹ
ಕರೆಯುತ್ತಾರೆ. ವ್ಯಕ್ತಿಯ ಆಲೋಚನೆ, ಗೋಚರಾನುಭವ
ಅಥವಾ ಪ್ರತ್ಯಕ್ಷಾನುಭವ, ಸ್ಮøತಿ ಅಥವಾ ನೆನಪು ಮತ್ತು
ಮರೆವು, ಸಂವೇಗಗಳು, ಕಲ್ಪನೆ ಮತ್ತು ಸಂಕಲ್ಪಗಳೆಲ್ಲವು
ಚೇತನ ಕ್ರಿಯೆಯ ರೂಪಗಳು. ತಮ್ಮದೇ ಆದ ವಿಭಿನ್ನ ಲಕ್ಷಣಗಳ
ಮೂಲಕ ಅವು ವ್ಯಕ್ತಗೊಳ್ಳುತ್ತವೆ .
ಸಾಮಾನ್ಯವಾಗಿ, ಮನಸ್ಸು ಎಂದರೆ ಆಲೋಚನೆ ಮತ್ತು
ವಿವೇಚನಾ ಕ್ರಿಯೆಗಳೆಂದೇ ಅರ್ಥೈಸಲಾದರೂ ಮನಸ್ಸು
ಒಂದು ಆಗೋಚರ ಶಕ್ತಿ ಎನ್ನುವುದನ್ನು ತತ್ವಶಾಸ್ತ್ರಜ್ಞರು
ಮತ್ತು ಮನೋವಿಜ್ಞಾನಿಗಳು ಒಪ್ಪುತ್ತಾರೆ. ಈ ಶಕ್ತಿಯು
ವ್ಯಕ್ತಿಯ ಕ್ರಿಯೆಗಳನ್ನು ನಿರ್ವಹಿಸುವ ಬಲವನ್ನು ಪಡೆದಿರುತ್ತದೆ.
ಹಿಂದೂ, ಗ್ರೀಕ್ ತತ್ವಶಾಸ್ತ್ರಗಳು ಮನಸ್ಸನ್ನು
ವಿವರಿಸುವಂತೆಯೇ ಬುದ್ಧ, ಪ್ಲೆಟೋ, ಅರಿಸ್ಟಾಟಲ್, ಮತ್ತು
ಇಸ್ಲಾಂ ಧರ್ಮಶಾಸ್ತ್ರಜ್ಞರು ದೈವವಾದದ ನೆಲೆಗಳಿಂದಲೇ
ಮನಸ್ಸÀನ್ನು ವಿವರಿಸಿರುತ್ತಾರೆ. ಈ ವಾದಗಳಲ್ಲಿ ಪ್ರಮುಖವಾದ
ವಿಷಯವೆಂದರೆ ಮನಸ್ಸು ಮತ್ತು ಆತ್ಮದ ನಡುವೆ ಇರುವ
ಸಂಬಂಧ. ಮನುಷ್ಯ ಮನಸ್ಸನ್ನು ಆಧ್ಯಾತ್ಮ, ದೈವ ಶಕ್ತಿ
ಮತ್ತು ಭಕ್ತಿಯ ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳÀಬೇಕು ಮತ್ತು
, ಮನಸ್ಸು ಉತ್ತಮ ಬೌದ್ಧಿಕ ಕ್ರಿಯೆಗಳಾದ ಆಲೋಚನೆ ಮತ್ತು
ಸ್ಮøತಿಗೆ ಮಾತ್ರ ಅನ್ವಯಿಸುತ್ತದೆ. ನೋವು, ನಲಿವು, ಪ್ರೀತಿ,
ವ್ಯಾಮೋಹಗಳೆಲ್ಲವು ಉತ್ತಮವಲ್ಲವಾದದರಿಂದ ಅವುಗಳು
ಮನಸ್ಸಿಗೆ ಸಂಬಂಧಿಸಿದ ಕ್ರಿಯೆಗಳೆಂದು ಹೇಳಲಾಗದೆಂದು ಈ
ಶಾಸ್ತ್ರಗಳು ಪ್ರತಿಪಾದಿಸುತ್ತವೆ. ಮನಸ್ಸಿನ ಚೌಕಟ್ಟಿನಲ್ಲಿ ಈ ಎರಡು
ಕ್ರಿಯೆಗಳು ಇರುವುದರಿಂದ ಅವುಗಳು ಸಹ ಮನಸ್ಸಿನ ಅವಿಭಾಜ್ಯ
ಗುಣವೆಂದು ಹೇಳುವುದರ ಮೂಲಕ ಮನಸ್ಸು ಕೇವಲ ಉತ್ತಮ
ಅಥವಾ ಬೌದ್ಧಿಕ ಕ್ರಿಯೆಗಳಿಗೆ ಮಾತ್ರ
ಸೀಮಿತವಾಗಿರುವುದಿಲ್ಲವೆಂದು ಅನೇಕ ತತ್ವಜ್ಞಾನಿಗಳು ಈ
ವಾದವನ್ನು ವಿರೋಧಿಸಿದ್ದರು.
ಮನಶಾಸ್ತ್ರದ ನಿರೂಪಣೆಗಳು ಮನಸ್ಸಿನ ವಿದ್ಯಮಾನಗಳೇ
ಆಗಿರುವುದರಿಂದ ‘ಆತ್ಮ’, ‘ಮನಸ್ಸು’ ಗಳ ಮೂಲಕ ಸಮರ್ಪಕವಾಗಿ
ಮನಸ್ಸಿನ ಸ್ಥಿತಿಗತಿಗಳನ್ನು ವಿವರಿಸಲು ಸಾಧ್ಯವಾಗಿಲ್ಲ. ಇದರ
ಬದಲಿಗೆ ಚೇತನ ಅಥವಾ ಪ್ರಜ್ಞೆಯ ಮೂಲಕ ಮಾನಸಿಕ
ಕ್ರಿಯೆಗಳನ್ನು ಸಂಪೂರ್ಣವಾಗಿ ವಿವರಿಸಬಹದು ಎನ್ನುವ
ವಾದವು ಮನಶಾಸ್ತ್ರದ ಹೊಸದೊಂದು ನಿರೂಪಣೆಗೆ ಅವಕಾಶ
ಕಲ್ಪಿಸಿತು. 19ನೇಯ ಶತಮಾನದ ಅನೇಕ ಮನಶಾಸ್ತ್ರಜ್ಞರು
ಚೇತನದ ಸ್ಥಿತಿಗಳ ಮೂಲಕ ಮನಸ್ಸನ್ನು ತಿಳಿಯಬಹುದು
ಎನ್ನುವುದಾಗಿ ಪ್ರತಿಪಾದಿಸಿದ್ದರು.
ಮನೋವಿಜ್ಞಾನಿಗಳ ಭಾಷೆಯಲ್ಲಿ ಚೇತನವನ್ನು ಒಂದು ವಿಶಿಷ್ಟ
ರೀತಿಯ ಅರಿವು ಎಂದು ಹೇಳಲಾಗುತ್ತದೆ. ವ್ಯಕ್ತಿಯು
ಎದುರಿಸುವ ಅಥವಾ ಅನುಭವಿಸುವ ಪ್ರತಿಯೊಂದು ಮಾನಸಿಕ
ಸ್ಥಿತಿಯನ್ನು ಪ್ರಜ್ಞೆ ಎಂದು ಗುರುತಿಸಲಾಗುತ್ತದೆ.
ಉದಾಹರಣೆಗೆ ಹೇಳುವುದಾದರೆ, ಬಿಸಿಯ ಅನುಭವವು ತಣ್ಣನೆಯ
ಅನುಭವಕ್ಕಿಂತ ಬೇರೆ ಎನ್ನುವುದು ಗೊತ್ತಾಗಬೇಕಾದರೆ
ಪ್ರಜ್ಞೆಯ ಕಾರ್ಯಾಚರಣೆ ನೆರವೇರಲೇ ಬೇಕು. ಈ
ಕಾರ್ಯಚರಣೆಯು ಸಪ್ಟವಾಗಿ ಗೊತ್ತಾದಾಗ ಅರಿವು
ಉಂಟಾಗಿದೆ ಎನ್ನಬಹುದು.

ಚೇತನವು ವ್ಯಕ್ತಿಗತ ಸ್ಥಿತಿಯಾಗಿದ್ದು ಸದಾ
ಜಾಗೃತವಾಗಿರುವಂತಹದ್ದು. ಈ ಸ್ಥಿತಿಯು ನಿದ್ರೆಯಲ್ಲಿದ್ದಾಗು
ಚುರುಕಾಗಿರದು; ನಿದ್ರಾ ಸ್ಥಿತಿಗಳೆಲ್ಲವು ಅಚೇತನ
ಸ್ಥಿತಿಗಳಾಗಿರುತ್ತವೆ. ಕೆಲವು ಆಧುನಿಕ ನರ ಮತ್ತು ಮಿದುಳಿನ
ತಜ್ಞರು ಚೇತನ ಅಥವಾ ಪ್ರಜ್ಞೆಯ ಸ್ಥಿತಿಯನ್ನು ಜೈವಿಕ ಕ್ರಿಯೆ
ಎಂದೇ ಅಭಿಪ್ರಾಯ ಪಡುತ್ತಾರೆ. ಅಂದರೆ, ನರ ಮತ್ತು ಮಿದುಳಿನ
ಚಟುವಟಿಕೆಗಳ ಮೂಲಕ ಮಾತ್ರ ಚೇತನದ ಸ್ಥಿತಿಗಳು
ಉಂಟಾಗುವುದು ಎನ್ನುವುದು. ವ್ಯಕ್ತಿಯ ಮಾನಸಿಕ
ಕ್ರಿಯೆಗಳು ಚೇತನಾ ಸ್ಥಿತಿಯಲ್ಲಿ ಉಂಟಾಗುವ ಅನುಭವಗಳೇ
ಆಗುವುದರಿಂದ ಪ್ರಜ್ಞೆಯ ಅಧ್ಯಯನವೇ ಮನದ ಶಾಸ್ತ್ರ
ಎನ್ನವುದು ಕೆಲ ಮನೋವಿಜ್ಞಾನಿಗಳ ವಾದ.