ವಿದ್ಯಾರ್ಥಿವೇತನಕ್ಕೆ ಆಧಾರ್ ಕಡ್ಡಾಯ: ಯುಜಿಸಿ ಸೂಚನೆ
30 Jun, 2016
ನವದೆಹಲಿ: ವಿದ್ಯಾರ್ಥಿ ವೇತನ ಮತ್ತು ಉನ್ನತ ಶಿಕ್ಷ ಫೆಲೊಶಿಪ್ ಪಡೆಯಲು ವಿದ್ಯಾರ್ಥಿಗಳು ಆಧಾರ್ ಸಂಖ್ಯೆ ಸಲ್ಲಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ (ಎಚ್‌ಆರ್‌ಡಿ) ಸೂಚನೆಯಂತೆ, ವಿವಿಧ ಯೋಜನೆಗಳ ಅಡಿಯಲ್ಲಿ ವಿದ್ಯಾರ್ಥಿವೇತನ ಅಥವಾ ಫೆಲೊಶಿಪ್‌ಗಳನ್ನು ಪಡೆಯುತ್ತಿರುವ ವಿದ್ಯಾರ್ಥಿಗಳ ಆಧಾರ್ ಸಂಖ್ಯೆಯನ್ನು ಸಂಗ್ರಹಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಎಲ್ಲ ವಿಶ್ವವಿದ್ಯಾಲಯಗಳಿಗೆ ನಿರ್ದೇಶಿಸಿದೆ.
ಅಲ್ಲದೆ, ತನ್ನ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನೂ ತಮ್ಮ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವಂತೆಯೂ ಅದು ವಿ.ವಿ.ಗಳ ಕುಲಪತಿಗಳಿಗೆ ಸೂಚಿಸಿದೆ. ಈ ಸಂಬಂಧ ಜೂನ್ 10ರಂದು ಯುಜಿಸಿಗೆ ಪತ್ರ ಬರೆದಿರುವ ಎಚ್.ಆರ್.ಡಿ., 2016–17ನೇ ಹಣಕಾಸು ವರ್ಷದಿಂದ ಜಾರಿಗೆ ಬರುವಂತೆ ಸರ್ಕಾರದ ಎಲ್ಲ ಸಬ್ಸಿಡಿಗಳು, ವಿದ್ಯಾರ್ಥಿವೇತನ ಮತ್ತು ಫೆಲೊಶಿಪ್‌ಗಳನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡಲು ಆಧಾರ್ ಸಂಖ್ಯೆಯನ್ನು ಕಡ್ಡಾಯ ಮಾಡುವಂತೆ ಸೂಚಿಸಿರುವುದಾಗಿ ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಎಸ್. ಸಂಧು ಅವರು ಕುಲಪತಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಆಧಾರ್‌ನಿಂದ ಅರ್ಹ ಫಲಾನುಭವಿಗಳಿಗೆ ನೇರವಾಗಿ ಸಬ್ಸಿಡಿ ವರ್ಗಾವಣೆಯಾಗುವ ಮಸೂದೆಗೆ ಮಾರ್ಚ್ ತಿಂಗಳಿನಲ್ಲಿ ಸಂಸತ್ ಒಪ್ಪಿಗೆ ನೀಡಿತ್ತು.
ಪುಟಗಳು
TEACHERS USEFUL
30.6.16
ವಿದ್ಯಾರ್ಥಿವೇತನಕ್ಕೆ ಆಧಾರ್ ಕಡ್ಡಾಯ
7 ನೇ ವೇತನ ಆಯೋಗ ಜಾರಿ
ಕೇಂದ್ರ ಸರಕಾರಿ ನೌಕರರಿಗೆ ‘ಬಂಪರ್’
29 Jun, 2016
ಹೊಸದಿಲ್ಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ನಿವೃತ್ತರ ಪಿಂಚಣಿಯನ್ನು ಶೇಕಡ 24ರಷ್ಟು ಹೆಚ್ಚಳವಾಗಲಿದೆ. ಆದರೆ ಈ ದೊಡ್ಡ ವಂಚನೆಯ ಕಥೆಯ ಪ್ರಮುಖ ಹತ್ತು ಅಂಶಗಳು ಇಲ್ಲಿವೆ ನೋಡಿ.
ಕೇಂದ್ರ ಸರ್ಕಾರದ ಈ ಕ್ರಮದಿಂದ 60 ಲಕ್ಷ ಪಿಂಚಣಿದಾರರೂ ಸೇರಿದಂತೆ ಒಂದು ಕೋಟಿ ನೌಕರರಿಗೆ ಲಾಭವಾಗಲಿದೆ. 2016ರ ಜನವರಿ ಒಂದರಿಂದ ಪೂರ್ವಾನ್ವಯವಾಗುವಂತೆ ವೇತನವನ್ನು ಶೇಕಡ 23.5ರಷ್ಟು ಮತ್ತು ಪಿಂಚಣಿಯನ್ನು ಶೇಕಡ 24ರಷ್ಟು ಹೆಚ್ಚಿಸಲಾಗಿದೆ.
ಹಿಂದಿನ ಏರಿಕೆಗಳಿಗೆ ಹೋಲಿಸಿದರೆ ಈ ಬಾರಿಯ ಏರಿಕೆ ಪ್ರಮಾಣ ಕಡಿಮೆ. ಆದರೂ ಸರ್ಕಾರಕ್ಕೆ ಇದು ಒಂದು ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹೊರೆಗೆ ಕಾರಣವಾಗಲಿದೆ. ಅಂದರೆ ದೇಶದ ಒಟ್ಟು ಜಿಡಿಪಿಯ ಶೇಕಡ 0.7ರಷ್ಟು ಈ ಉದ್ದೇಶಕ್ಕೆ ವ್ಯಯವಾಗಲಿದೆ. ಕಳೆದ ಏಳು ದಶಕದಲ್ಲೇ ಆಗಿರುವ ಕಡಿಮೆಏರಿಕೆ ಇದಾಗಿದೆ.
ಏಳನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಹಾಗೂ ಭತ್ಯೆ ಹೆಚ್ಚಿಸುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ.
ಪ್ರತಿ ಆರು ತಿಂಗಳಿಗೊಮ್ಮೆ ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಪರಿಷ್ಕರಣೆಯಾಗುವುದಲ್ಲದೇ ಸ್ವಾತಂತ್ರ್ಯದ ಬಳಿಕ ಪ್ರತಿ 10 ವರ್ಷಗಳಿಗೊಮ್ಮೆ ಆಕರ್ಷಕ ವೇತನ ಹೆಚ್ಚಳ ಸರ್ಕಾರಿ ನೌಕರರಿಗೆ ಸಿಗುತ್ತಿದೆ. ಹೊಸ ಯೋಜನೆಯ ಅನ್ವಯ ಸರ್ಕಾರಿ ನೌಕರರ ಗರಿಷ್ಠ ವೇತನ ಮಾಸಿಕ 2.5 ಲಕ್ಷ ರೂಪಾಯಿ ಆಗಿದ್ದು, ಇದು ಗರಿಷ್ಠ ವೇತನವಾದ 90 ಸಾವಿರಕ್ಕಿಂತ ದುಪ್ಪಟ್ಟಿಗಿಂತಲೂ ಅಧಿಕ. ಸರ್ಕಾರಿ ನೌಕರರ ಕನಿಷ್ಠ ವೇತನ ಮಾಸಿಕ 18 ಸಾವಿರ ಆಗಲಿದ್ದು, ಹಾಲಿ ಇರುವ ಕಿರಿಯ ಉದ್ಯೋಗಿಗಳಿಗೆ ನೀಡುವ 7000 ರೂಪಾಯಿಗಿಂತ ಎರಡುಪಟ್ಟಿಗಿಂತಲೂ ಅಧಿಕ. ವೇತನ ಹೆಚ್ಚಳ ಪರಿಣಾಮವಾಗಿ ಗ್ರಾಹಕರ ಖರ್ಚು ಹೆಚ್ಚಿ, ಆರ್ಥಿಕ ಪ್ರಗತಿಗೆ ಪೂರಕವಾಗುತ್ತದೆ ಎಂಬ ನಿರೀಕ್ಷೆ ಸರ್ಕಾರದ್ದು.
ಆದರೆ ಹೆಚ್ಚುವರಿ ಹಣದ ಹರಿವಿನಿಂದ ಹಣದುಬ್ಬರ ಏರಿಕೆಯಾಗುವ ಸಾಧ್ಯತೆಯನ್ನು ತಜ್ಞರು ಅಂದಾಜು ಮಾಡುತ್ತಾರೆ. ಹಣದುಬ್ಬರ ನಿಯಂತ್ರಿಸುವ ಸಲುವಾಗಿ ಬಂಡವಾಳ ಮಾರುಕಟ್ಟೆ ಮೇಲೆ ನಿಗಾ ಇಡಲು ಸರ್ಕಾರ ನಿರ್ಧರಿಸಿದೆ.
ಸಾಮಾನ್ಯವಾಗಿ ವೇತನ ಹೆಚ್ಚಳವಾದಾಗ ನೌಕರರು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದು ಹೆಚ್ಚು. ಈ ಬಾರಿಯೂ ಅದು ನಿಜವಾದರೆ, ಬೇಡಿಕೆ ಕುಸಿದಿರುವ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಪುನಶ್ಚೇತನ ಸಿಗಲಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಏಳನೇ ವೇತನ ಆಯೋಗದ ಶಿಫಾರಸ್ಸಿಗೆ ಅಸ್ತು
ಏಳನೇ ವೇತನ ಆಯೋಗದ ಶಿಫಾರಸ್ಸುಗಳಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಆಂಗೀಕಾರ ನೀಡಿದ್ದು, ಇದರಿಂದ ಒಂದು ಕೋಟಿ ಮಂದಿ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಲಾಭ ಪಡೆಯಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ವೇತನ ಆಯೋಗ ಕಳೆದ ನವೆಂಬರ್‌ನಲ್ಲಿ ನೀಡಿದ ವರದಿಯಲ್ಲಿ ಶೇಕಡ 14.27ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. ಇದು 70 ವರ್ಷಗಳಲ್ಲೇ ಕನಿಷ್ಠ ಏರಿಕೆ. ಆರನೇ ವೇತನ ಆಯೋಗ ಶೇಕಡ 20ರಷ್ಟು ಹೆಚ್ಚಳಕ್ಕೆ ಶಿಫಾರಸ್ಸು ಮಾಡಿತ್ತು. 2008ರಲ್ಲಿ ಅದನ್ನು ಜಾರಿಗೆ ತರುವಾಗ ಸರ್ಕಾರ ಅದನ್ನು ದ್ವಿಗುಣಗೊಳಿಸಿತು.
ಈ ಶಿಫಾರಸ್ಸುಗಳ ಬಗ್ಗೆ ಅಗತ್ಯ ವಿಧಿವಿಧಾನಗಳನ್ನು ನೆರವೇರಿಸಲು ಕೇಂದ್ರ ಸರ್ಕಾರ ಸಂಪುಟ ಕಾರ್ಯದರ್ಶಿ ನೇತೃತ್ವದ ಸಮಿಯಿಯೊಂದನ್ನು ಜನವರಿಯಲ್ಲಿ ನೇಮಕ ಮಾಡಿತ್ತು. ಏಳನೇ ವೇತನ ಆಯೋಗದ ಪ್ರಯೋಜನ ಸುಮಾರು 50 ಲಕ್ಷ ಮಂದಿ ಕೇಂದ್ರ ಸರ್ಕಾರಿ ನೌಕರರು ಮತ್ತು 58 ಲಕ್ಷ ಪಿಂಚಣಿದಾರರಿಗೆ ದೊರಕಲಿದೆ.
ಹೊಸ ಯೋಜನೆಯ ಅನ್ವಯ ಸರ್ಕಾರಿ ನೌಕರರ ಗರಿಷ್ಠ ವೇತನ ಮಾಸಿಕ 2.5 ಲಕ್ಷ ರೂಪಾಯಿ ಆಗಿದ್ದು, ಇದು ಹಾಲಿ ಇರುವ ಗರಿಷ್ಠ ವೇತನವಾದ 90 ಸಾವಿರಕ್ಕಿಂತ ದುಪ್ಪಟ್ಟಿಗಿಂತಲೂ ಅಧಿಕ. ಸರ್ಕಾರಿ ನೌಕರರ ಕನಿಷ್ಠ ವೇತನ ಮಾಸಿಕ 18 ಸಾವಿರ ಆಗಲಿದ್ದು, ಹಾಲಿ ಇರುವ ಕಿರಿಯ ಉದ್ಯೋಗಿಗಳಿಗೆ ನೀಡುವ 7000 ರೂಪಾಯಿಗಿಂತ ಎರಡುಪಟ್ಟಿಗಿಂತಲೂ ಅಧಿಕ. 2016ರ ಜನವರಿ ಒಂದರಿಂದ ಪೂರ್ವಾನ್ವಯವಾಗುವಂತೆ ವೇತನವನ್ನು ಶೇಕಡ 23.5ರಷ್ಟು ಮತ್ತು ಪಿಂಚಣಿಯನ್ನು ಶೇಕಡ 24ರಷ್ಟು ಹೆಚ್ಚಿಸಲಾಗಿದೆ. ಇದರಿಂದ ಸರ್ಕಾರಕ್ಕೆ 1.02 ಲಕ್ಷ ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ. ಇದು ಒಟ್ಟು ಜಿಡಿಪಿಯ ಶೇಕಡ 0.7ರಷ್ಟು.
2006-17ನೇ ಸಾಲಿನ ಬಜೆಟ್‌ನಲ್ಲಿ ಏಳನೇ ಹಣಕಾಸು ಆಯೋಗದ ಶಿಫಾರಸ್ಸು ಅನುಷ್ಠಾನಕ್ಕೆ ಹಣ ನಿಗದಿಪಡಿಸಿಲ್ಲ. ಆದ್ದರಿಂದ ಹತ್ತು ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಅನಿವಾರ್ಯವಾಗಿರುವುದರಿಂದ ಇತರ ಸಚಿವಾಲಯಗಳ ಅನುದಾನದಲ್ಲಿ ಪರಿಷ್ಕರಣೆ ಮಾಡಿ, ಈ ಉದ್ದೇಶಕ್ಕೆ ನೀಡಲಾಗುವುದು ಎಂದು ಸರ್ಕಾರ ಪ್ರಕಟಿಸಿದೆ.